Tag: KGF-2

  • ಫ್ಯಾನ್ಸ್‌ ಪಕ್ಕ 2 ಗಂಟೆ ನಿಂತ ಯಶ್ ನಡೆಗೆ ಅಭಿಮಾನಿಗಳಿಂದ ಬಹುಪರಾಕ್

    ಫ್ಯಾನ್ಸ್‌ ಪಕ್ಕ 2 ಗಂಟೆ ನಿಂತ ಯಶ್ ನಡೆಗೆ ಅಭಿಮಾನಿಗಳಿಂದ ಬಹುಪರಾಕ್

    ನ್ಯಾಷನಲ್ ಸ್ಟಾರ್ ಯಶ್‌ಗೆ (Yash) ಅಪಾರ ಅಭಿಮಾನಿಗಳಿದ್ದಾರೆ. `ಕೆಜಿಎಫ್ 2′ (Kgf 2)  ಕ್ಲಿಕ್ ಆದ್ಮೇಲೆ ರಾಕಿ ಭಾಯ್‌ನ ಅಧಿಕ ಮಂದಿ ಫಾಲೋವ್ ಮಾಡುತ್ತಾರೆ. ಇತ್ತೀಚಿಗೆ ಯಶ್, ಎರಡು ಗಂಟೆ ನಿಂತು ಅಭಿಮಾನಿಗಳಿಗೆ ಫೋಟೋ ಕ್ಲಿಕ್ಕಿಸಲು ಅವಕಾಶ ಕೊಟ್ಟಿದ್ದಾರೆ. ಯಶ್ ತಾಳ್ಮೆಗೆ ನೆಟ್ಟಿಗರು ಭೇಷ್ ಎನ್ನುತ್ತಿದ್ದಾರೆ.

    ತಮ್ಮ ನೆಚ್ಚಿನ ಸ್ಟಾರ್‌ಗಳ ಜೊತೆ ಫೋಟೋ ತೆಗೆಸಿಕೊಳ್ಳುವುದು ಯಾವ ಅಭಿಮಾನಿಗೆ ಆಸೆ ಇರುವುದಿಲ್ಲ ಹೇಳಿ. ಇದೀಗ ಯಶ್ ಜೊತೆ ಫೋಟೋ ಕ್ಲಿಕ್ಕಿಸಿಕೊಳ್ಳಲು ಅಪಾರ ಅಭಿಮಾನಿಗಳು ಮುಗಿಬಿದ್ದಿದ್ದಾರೆ. ʻನಮ್ಮ ಹುಡುಗರು ಅಲ್ವಾʼ ಎಂದು ಎರಡು ಗಂಟೆ ನಿಂತು ಪ್ರತಿಯೊಬ್ಬರಿಗೂ ಫೋಟೋ ಕೊಟ್ಟಿದ್ದಾರೆ. ಪ್ರೀತಿಯಿಂದ ಫೋಟೋಗೆ ಯಶ್ ಪೋಸ್ ಕೊಟ್ಟಿದ್ದಾರೆ. ಇದನ್ನೂ ಓದಿ: ಟಿಕ್‌ಟಾಕ್ ಸ್ಟಾರ್ ಖಾಬಿ ಜೊತೆ ಸೋನು ಸೂದ್ ರೀಲ್ಸ್

    ಇತ್ತೀಚೆಗೆ ಬೆಂಗಳೂರಿನ ಅಂಬೇಡ್ಕರ್ ಭವನದಲ್ಲಿ ವಿಶೇಷ ಸಂವಾದ ಕಾರ್ಯಕ್ರಮ ಆಯೋಜನೆಗೊಂಡಿತ್ತು. ಯಶ್ ಕೂಡ ಭಾಗವಹಿಸಿದ್ದರು. ಬಹುದಿನಗಳ ನಂತರ ಯಶ್ ಅಭಿಮಾನಿಗಳ ಮುಂದೆ ಬಂದಿದ್ದರು. ಹಾಗಾಗಿ ಅಲ್ಲಿರುವವರಿಗೆ ಯಶ್ ಜೊತೆ ಫೋಟೋ ತೆಗೆಸಿಕೊಳ್ಳುವ ಆಸೆ ಪ್ರತಿಯೊಬ್ಬರಿಗೂ ಇತ್ತು. ಈ ಸಂದರ್ಶನದ ಬಳಿಕ ಸುಮಾರು 700ಕ್ಕೂ ಹೆಚ್ಚು ಅಭಿಮಾನಿಗಳಿಗೆ ಯಶ್, 2 ಗಂಟೆ ನಿಂತು ಫೋಟೋ ಕೊಟ್ಟರು. ನಗುತ್ತಲೇ ಪ್ರೀತಿಯಿಂದ ಫೋಟೋಗೆ ರಾಕಿ ಭಾಯ್ ಪೋಸ್ ನೀಡಿರೋದು ಫ್ಯಾನ್ಸ್ ಖುಷಿ ಕೊಟ್ಟಿದೆ. ಯಶ್‌ನ ಈ ನಡೆಯಿಂದ ಫ್ಯಾನ್ಸ್ ದಿಲ್ ಖುಷ್ ಆಗಿದ್ದಾರೆ.

    `ಕೆಜಿಎಫ್ 2′ (Kgf 2) ಸಕ್ಸಸ್ ನಂತರ ಇಡೀ ದೇಶವೇ ಯಶ್ ಮುಂದಿನ ಸಿನಿಮಾಗಾಗಿ ಕಾಯ್ತಿದ್ದಾರೆ. ಯಶ್ ಮುಂದಿನ ಚಿತ್ರಕ್ಕಾಗಿ ಎದುರು ನೋಡ್ತಿದ್ದಾರೆ. ಜ.7ರಂದು ಯಶ್ ಹುಟ್ಟುಹಬ್ಬವಾಗಿದ್ದು, ಅಂದು ಸಿನಿಮಾ ಬಗ್ಗೆ ಅಪ್‌ಡೇಟ್ ಸಿಗಲಿದೆ ಎಂದು ಫ್ಯಾನ್ಸ್ ಕಾಯ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಬಾಲಿವುಡ್ ನಿರ್ದೇಶಕರನ್ನು ಕಿತ್ತಾಡುವಂತೆ ಮಾಡಿದ ‘ಕಾಂತಾರ’, ‘ಕೆಜಿಎಫ್’

    ಬಾಲಿವುಡ್ ನಿರ್ದೇಶಕರನ್ನು ಕಿತ್ತಾಡುವಂತೆ ಮಾಡಿದ ‘ಕಾಂತಾರ’, ‘ಕೆಜಿಎಫ್’

    ನ್ನಡದ ಸೂಪರ್ ಹಿಟ್ ಎರಡು ಚಿತ್ರಗಳು ಬಾಲಿವುಡ್ ನ ನಿರ್ದೇಶಕರನ್ನು ಕಿತ್ತಾಡುವಂತೆ ಮಾಡಿವೆ. ಕೆಜಿಎಫ್ 2 ಮತ್ತು ಕಾಂತಾರ ಚಿತ್ರಗಳು ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದ ಹೊತ್ತಿನಲ್ಲಿ ಬಾಲಿವುಡ್ ಖ್ಯಾತ ನಿರ್ದೇಶಕರಾದ ಅನುರಾಗ್ ಕಶ್ಯಪ್ ಮತ್ತು ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಬಿಡುವಿಲ್ಲದಂತೆ ಸೋಷಿಯಲ್ ಮೀಡಿಯಾ ಮೂಲಕ ಒಬ್ಬರಿಗೊಬ್ಬರು ಕೆಸರೆರೆಚಿಕೊಳ್ಳುತ್ತಿದ್ದಾರೆ. ಒಬ್ಬರಿಗೊಬ್ಬರು ಆರೋಪ ಪ್ರತ್ಯಾರೋಪ ಮಾಡುತ್ತಿದ್ದಾರೆ.

    ಸಂವಾದ ಕಾರ್ಯಕ್ರಮವೊಂದರಲ್ಲಿ ಅನುರಾಗ್ ಕಶ್ಯಪ್ ದಕ್ಷಿಣದ ಸಿನಿಮಾಗಳ ಗೆಲುವಿನ ಬಗ್ಗೆ ಮಾತನಾಡಿದ್ದಾರೆ. ಕೆಜಿಎಫ್ 2 ಮತ್ತು ಕಾಂತಾರ ರೀತಿಯ ಚಿತ್ರಗಳು ಸಿನಿಮಾ ರಂಗವನ್ನು ಮುಗಿಸಲಿವೆ ಎನ್ನುವಂತೆ ಹೇಳಿಕೆ ನೀಡಿದ್ದರು. ಬಾಲಿವುಡ್ ಸದ್ಯ ಹಿಂದುಳಿಯುವುದಕ್ಕೆ ಕಾರಣ ಇಂಥದ್ದೇ ಚಿತ್ರಗಳು ಎಂದು ಹೇಳಿದ್ದರು. ಈ ಮಾತಿಗೆ ಅನೇಕರು ವಿರೋಧ ವ್ಯಕ್ತಪಡಿಸಿದ್ದರು. ಅದರಂತೆ ದಿ ಕಾಶ್ಮೀರ್ ಫೈಲ್ಸ್ ಸಿನಿಮಾದ ನಿರ್ದೇಶಕರು ಕೂಡ ಅನುರಾಗ್ ಮಾತಿಗೆ ಗರಂ ಆಗಿದ್ದರು. ಇದನ್ನೂ ಓದಿ: ದೀಪಿಕಾ ದಾಸ್‌ಗೆ ಚಿನ್ನದ ಚೈನ್, ಮನಸ್ಸು ಆಫರ್ ಮಾಡಿದ ಗುರೂಜಿ

    ಅನುರಾಗ್ ಮಾತನ್ನು ನಾನು ಒಪ್ಪುವುದಿಲ್ಲ. ಅವರು ಈ ರೀತಿಯಲ್ಲಿ ಮಾತನಾಡಬಾರದಿತ್ತು. ಮಾತನಾಡುವವರು ಸಿನಿಮಾ ಮಾಡಿ ತೋರಿಸಲಿ ಎಂದು ಸೋಷಿಯಲ್ ಮೀಡಿಯಾದಲ್ಲಿ ಬರೆದಿದ್ದರು. ಇದಕ್ಕೆ ತಿರುಗೇಟು ಕೊಟ್ಟಿದ್ದ ಅನುರಾಗ್, ದಿ ಕಾಶ್ಮೀರ್ ಫೈಲ್ಸ್ ನಿಮ್ಮಂತೆಯೇ ಸುಳ್ಳು ಹೇಳುತ್ತಿದೆ. ಅಲ್ಲಿರುವುದು ಎಲ್ಲವೂ ಸುಳ್ಳು ಎಂದು ಹೇಳುವ ಮೂಲಕ ಉರಿವ ಬೆಂಕಿಗೆ ತುಪ್ಪ ಸುರಿದಿದ್ದರು. ಈ ಬರಹ ವಿವೇಕ್ ಅಗ್ನಿಹೋತ್ರಿಯನ್ನು ಕೆಣುಕುವಂತೆ ಮಾಡಿತ್ತು.

    ದಿ ಕಾಶ್ಮೀರ್ ಫೈಲ್ಸ್ ಬಗ್ಗೆ ಕಾಮೆಂಟ್ ಮಾಡಿದ್ದ ಅನುರಾಗ್ ಕಶ್ಯಪ್ ಗೆ ಮತ್ತೆ ತಿರುಗೇಟು ನೀಡಿರುವ ವಿವೇಕ್, ‘ನಾನು ಮಾಡಿದ ಸಿನಿಮಾದಲ್ಲಿ ಯಾವುದು ತಪ್ಪು, ಯಾವುದನ್ನು ಸುಳ್ಳು ಹೇಳಿದ್ದೇನೆ ಅಂತ ಸಾಬೀತು ಪಡಿಸಿ. ನಾನು ಸುಳ್ಳು ಹೇಳಿದ್ದೇನೆ, ನನ್ನ ಸಂಶೋಧನೆ ತಪ್ಪು ಅಂತ ಸಾಬೀತು ಮಾಡಿದರೆ, ನಾನು ಈ ರೀತಿಯ ಚಿತ್ರಗಳನ್ನೇ ಮಾಡುವುದಿಲ್ಲ’ ಎಂದು ಮತ್ತೆ ಬರೆದಿದ್ದಾರೆ.  ಅನುರಾಗ್ ಹೇಳಿದ ಮಾತು, ಇದೀಗ ವೈಯಕ್ತಿಕವಾಗಿ ತಿರುಗಿಕೊಂಡು ದಿನಕ್ಕೊಂದು ತಿರುವುದು ಪಡೆದುಕೊಳ್ಳುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ಮಾಜಿ ಸಚಿವ ನಾರಾ ಲೋಕೇಶ್ ಭೇಟಿಯಾದ ನಟ ಯಶ್

    ಮಾಜಿ ಸಚಿವ ನಾರಾ ಲೋಕೇಶ್ ಭೇಟಿಯಾದ ನಟ ಯಶ್

    `ಕೆಜಿಎಫ್ 2′ (Kgf 2) ಸೂಪರ್ ಸಕ್ಸಸ್ ನಂತರ ಯಶ್ (Yash) ಮುಂದಿನ ಸಿನಿಮಾ ಬಗ್ಗೆ ಅಭಿಮಾನಿಗಳು ತಲೆ ಕೆಡಿಸಿಕೊಂಡಿದ್ದಾರೆ. ಯಶ್ ಇದೀಗ ಎಲ್ಲೇ ಹೋದರು, ಬಂದರು ಸದಾ ಸುದ್ದಿಯಲ್ಲಿರುತ್ತಾರೆ. ಇತ್ತೀಚೆಗೆ ಹೈದರಾಬಾದ್‌ನಲ್ಲಿ ನಟ ಯಶ್ ಮಾಜಿ ಸಚಿವ ನಾರಾ ಲೋಕೇಶ್ (Nara Lokesh) ಅವರನ್ನ ಭೇಟಿಯಾಗಿದ್ದಾರೆ. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ.

    `ಕೆಜಿಎಫ್ 2′ ಸಿನಿಮಾ ಬಂದು 7 ತಿಂಗಳು ಕಳೆದರು ಕೂಡ ಯಶ್ ಸೈಲೆಂಟ್ ಆಗಿರೋದು, ಮುಂದಿನ ಚಿತ್ರದ ಬಗ್ಗೆ ಯಾವುದೇ ಅಪ್‌ಡೇಟ್‌ ಸಿಗದೇ ಇರೋದು ನೆಟ್ಟಿಗರಿಗೆ ಕುತೂಹಲ ಮೂಡಿಸಿದೆ. ಅವರ ಮುಂದಿನ ನಡೆಯ ಬಗ್ಗೆ ಫ್ಯಾನ್ಸ್ ಮತ್ತಷ್ಟು ಕ್ಯೂರಿಯಸ್ ಆಗಿದ್ದಾರೆ. ಈಗ ಆಂಧ್ರ ಮಾಜಿ ಸಿಎಂ ಚಂದ್ರ ಬಾಬು ನಾಯ್ಡು ಅವರ ಪುತ್ರ ಮಾಜಿ ಸಚಿವ ನಾರಾ ಲೋಕೇಶ್ ಅವರನ್ನ ಯಶ್ ಭೇಟಿಯಾಗಿರೋದು ರಾಜಕೀಯ ರಂಗ ಮತ್ತು ಸಿನಿಮಾರಂಗದಲ್ಲಿ ಹಾಟ್ ಟಾಪಿಕ್ ಆಗಿದೆ. ಇದನ್ನೂ ಓದಿ: IMDB 2022ರ ಜನಪ್ರಿಯ ಭಾರತೀಯ ಸಿನಿಮಾ ಪಟ್ಟಿಯಲ್ಲಿ ಕನ್ನಡದ ಟಾಪ್‌ 3 ಚಿತ್ರಗಳು

    ಹೈದರಾಬಾದ್‌ಗೆ ಯಶ್ ಭೇಟಿ ನೀಡಿದ್ದು, ಹೋಟೆಲ್‌ವೊಂದರಲ್ಲಿ ಕೆಲ ಸಮಯ ಇಬ್ಬರು ಮಾತುಕತೆ ನಡೆಸಿದ್ದಾರೆ. ನಾರಾ ಲೋಕೇಶ್‌ ಜೊತೆಗಿನ ಯಶ್‌ ಭೇಟಿಗೆ ಕಾರಣ ಏನು? ಯಾವ ವಿಚಾರಗಳನ್ನ ಮಾತನಾಡಿದ್ದರು ಎನ್ನುವ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ. ಸದ್ಯ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ.

    Live Tv
    [brid partner=56869869 player=32851 video=960834 autoplay=true]

  • IMDB 2022ರ ಜನಪ್ರಿಯ ಭಾರತೀಯ ಸಿನಿಮಾ ಪಟ್ಟಿಯಲ್ಲಿ ಕನ್ನಡದ ಟಾಪ್‌ 3 ಚಿತ್ರಗಳು

    IMDB 2022ರ ಜನಪ್ರಿಯ ಭಾರತೀಯ ಸಿನಿಮಾ ಪಟ್ಟಿಯಲ್ಲಿ ಕನ್ನಡದ ಟಾಪ್‌ 3 ಚಿತ್ರಗಳು

    ಭಾರತೀಯ ಸಿನಿಮಾ ರಂಗದಲ್ಲಿ ಕನ್ನಡದ ಬ್ಲಾಕ್ ಬಸ್ಟರ್ ಸಿನಿಮಾಗಳಿಗೆ ವಿಶೇಷ ಮನ್ನಣೆ ನೀಡಲಾಗಿದೆ. ಈ ಬಾರಿ ಬಿಡುಗಡೆಯಾದ IMDB 2022ರ ಅತ್ಯಂತ ಜನಪ್ರಿಯ ಭಾರತೀಯ ಚಿತ್ರ ಪಟ್ಟಿಯಲ್ಲಿ ಕನ್ನಡದ ಚಿತ್ರಗಳು ಸೇರಿಕೊಂಡಿದೆ.

    ಪ್ರತಿ ವರ್ಷದಂತೆ ಈ ವರ್ಷವು ಕೂಡ IMDB ಅತ್ಯಂತ ಜನಪ್ರಿಯ ಭಾರತೀಯ ಚಿತ್ರಗಳ ಪಟ್ಟಿಯನ್ನು ಪ್ರಕಟಿಸಿದೆ. ವಿಶೇಷವೆಂದರೆ, ಈ ಬಾರಿ 10 ಚಿತ್ರಗಳ ಪಟ್ಟಿಯಲ್ಲಿ ಕನ್ನಡದ ಮೂರು ಚಿತ್ರಗಳಿರೋದು ವಿಶೇಷ. ಐಎಮ್‌ಡಿಬಿ 2022ರ ಪಟ್ಟಿ ಅನೌನ್ಸ್ ಆಗಿದ್ದು, 10 ಚಿತ್ರಗಳ ಲಿಸ್ಟ್‌ನಲ್ಲಿ ʻಕೆಜಿಎಫ್ 2ʼಗೆ (Kgf 2) ಮೂರನೇ ಸ್ಥಾನದಲ್ಲಿದ್ದರೆ, `ಕಾಂತಾರ’ (kantara) 5ನೇ ಸ್ಥಾನದಲ್ಲಿದೆ. `777 ಚಾರ್ಲಿ’ (777 Charlie) 10ನೇ ಸ್ಥಾನದಲ್ಲಿದೆ. ನಂಬರ್ ಒನ್ ಸ್ಥಾನದಲ್ಲಿ ರಾಜಮೌಳಿ ನಿರ್ದೇಶನದ `ಆರ್‌ಆರ್‌ಆರ್’ (Rrr) ಚಿತ್ರವಿದೆ. ಇದನ್ನೂ ಓದಿ: ದೀಪಿಕಾ ದಾಸ್‌ಗೆ ಚಿನ್ನದ ಚೈನ್, ಮನಸ್ಸು ಆಫರ್ ಮಾಡಿದ ಗುರೂಜಿ

    ಇನ್ನೂ ಯಶ್‌ (Yash) ನಟನೆಯ ಕನ್ನಡದ ಕೆಜಿಎಫ್‌ 2, ರಿಷಬ್‌ (Rishab Shetty) ನಟನೆಯ ʻಕಾಂತಾರʼ ಮತ್ತು ರಕ್ಷಿತ್‌ ಶೆಟ್ಟಿ (Rakshith Shetty) ನಟನೆ ʻ777 ಚಾರ್ಲಿʼ ಸಿನಿಮಾಗಳು ಗಲ್ಲಾಪಟ್ಟಿಗೆಯಲ್ಲಿ ಕೋಟಿ ಕೋಟಿ ಕಲೆಕ್ಷನ್‌ ಮಾಡಿ, ಕಮಾಲ್‌ ಮಾಡಿತ್ತು.

    IMDB 2022ರ 10 ಅತ್ಯಂತ ಜನಪ್ರಿಯ ಭಾರತೀಯ ಚಿತ್ರಗಳ ಪಟ್ಟಿ ಹೀಗಿದೆ.

    1. ಆರ್‌ಆರ್‌ಆರ್
    2. ದಿ ಕಾಶ್ಮೀರ್ ಫೈಲ್ಸ್
    3. ಕೆಜಿಎಫ್ 2
    4. ವಿಕ್ರಂ
    5. ಕಾಂತಾರ
    6. ರಾಕೆಟ್ರಿ: ದಿ ನಂಬಿ ಎಫೆಕ್ಟ್
    7. ಮೇಜರ್
    8. ಸೀತಾರಾಮಂ
    9. ಪೊನ್ನಿಯನ್ ಸೆಲ್ವನ್: ಪಾರ್ಟ್ 1
    10. 777 ಚಾರ್ಲಿ

    Live Tv
    [brid partner=56869869 player=32851 video=960834 autoplay=true]

  • ಬಾಲಿವುಡ್ ಸೋಲಿಗೆ ‘ಕೆಜಿಎಫ್ 2’ ಉದಾಹರಣೆ ಕೊಟ್ಟ ನಿರ್ದೇಶಕ ಅನುರಾಗ್ ಕಶ್ಯಪ್

    ಬಾಲಿವುಡ್ ಸೋಲಿಗೆ ‘ಕೆಜಿಎಫ್ 2’ ಉದಾಹರಣೆ ಕೊಟ್ಟ ನಿರ್ದೇಶಕ ಅನುರಾಗ್ ಕಶ್ಯಪ್

    ಬಾಲಿವುಡ್ ಖ್ಯಾತ ನಿರ್ದೇಶಕ ಅನುರಾಗ್ ಕಶ್ಯಪ್, ಬಾಲಿವುಡ್ ಸೋಲಿಗೆ ತಮ್ಮದೇ ಆದ ಕಾರಣಗಳನ್ನು ನೀಡಿದ್ದಾರೆ. ಅದು ಕನ್ನಡದ ಸೂಪರ್ ಹಿಟ್ ಸಿನಿಮಾ ಕೆಜಿಎಫ್ 2 ಅನ್ನು ಉದಾಹರಣೆಯಾಗಿ ನೀಡಿದ್ದಾರೆ. ಸಂವಾದವೊಂದರಲ್ಲಿ ಮಾತನಾಡಿದ ಅನುರಾಗ್, ಬಾಲಿವುಡ್ ಅನುಕರಣೆಯಿಂದಾಗಿ ಹೀನಾಯವಾಗಿ ಸೋತಿದೆ. ಬರುತ್ತಿರುವ ಸಿನಿಮಾಗಳು ನೆಲಕಚ್ಚುತ್ತಿವೆ. ಅದನ್ನು ಮಾಡಬಾರದು ಎಂದು ಅವರು ಹೇಳಿದ್ದಾರೆ.

    ಕಾಂತಾರ ಮತ್ತು ಪುಷ್ಪ ಸಿನಿಮಾಗಳು ತಮ್ಮ ತಮ್ಮ ನೆಲದ ಕಥೆಯನ್ನು ಹೇಳಿದವು. ಹಾಗಾಗಿ ಗೆದ್ದವು. ಆದರೆ, ಕೆಜಿಎಫ್ 2 ಹಾಗಲ್ಲ. ಅದನ್ನು ಅನುಕರಿಸಲು ಹೋದರೆ ಸೋಲು ಗ್ಯಾರಂಟಿ ಎಂದು ಅವರು ಹೇಳಿದ್ದಾರೆ. ಮರಾಠಿ ಚಿತ್ರರಂಗದ ಉದಾಹರಣೆಯನ್ನೂ ನೀಡಿರುವ ಅವರು, ಸೈರಾಟ್ ಸಿನಿಮಾ ಮರಾಠಿ ಸಿನಿಮಾ ರಂಗದಲ್ಲಿ ಹೊಸ ಸಂಚಲನವನ್ನೇ ಉಂಟು ಮಾಡಿತು. ಕಡಿಮೆ ಬಜೆಟ್ ನಲ್ಲಿ ತಗೆದು ಸಿನಿಮಾ, ಬಾಕ್ಸ್ ಆಫೀಸಿನಲ್ಲಿ ಹಿಟ್ ಆಯಿತು. ಆ ಸಿನಿಮಾವನ್ನೇ ಮಾದರಿಯಾಗಿಟ್ಟುಕೊಂಡು ಚಿತ್ರ ಮಾಡಿದರು. ಮುಂದೆ ಏನಾಯಿತು ಎಂದು ಯೋಚಿಸಿ ಅಂದಿದ್ದಾರೆ. ಇದನ್ನೂ ಓದಿ: ‘ಸೀತಾ ಸರ್ಕಲ್ ಶ್ರೀ ಕೃಷ್ಣನ್ ಮನೆ’ ಸಿನಿಮಾ ಫಸ್ಟ್ ಲುಕ್ ರಿಲೀಸ್

    ಬಾಲಿವುಡ್ ಸಿನಿಮಾ ರಂಗ ಕೂಡ ಗೆದ್ದ ಎತ್ತಿನ ಬಾಲ ಹಿಡಿಯುತ್ತದೆ. ಒಂದು ಸಿನಿಮಾ ಗೆದ್ದರೆ ಅದೇ ಮಾದರಿಯ ಚಿತ್ರಗಳನ್ನು ಮಾಡುತ್ತದೆ. ಆದರೆ, ಆ ಫಾರ್ಮುಲಾ ಇತ್ತೀಚಿನ ದಿನಗಳಲ್ಲಿ ಕೆಲಸ ಮಾಡುತ್ತಿಲ್ಲ. ಹಾಗಾಗಿ ಬಾಲಿವುಡ್ ಸಿನಿಮಾಗಳು ಸೋಲುತ್ತಿವೆ. ಸ್ವಂತಿಕೆಯ ಮತ್ತು ತಮ್ಮದೇ ನೆಲದ ಕಥೆಯನ್ನು ಮಾಡಿದರೆ ಚಿತ್ರಗಳು ಗೆಲ್ಲುತ್ತವೆ ಎಂದು ಅನುರಾಗ್ ಕಶ್ಯಪ್ ಹೇಳಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ನಿಮ್ಮ ಜೊತೆಗಿನ ನನ್ನ ಜೀವನ ಮ್ಯಾಜಿಕಲ್: ಯಶ್‌ಗೆ ರಾಧಿಕಾ ಅನಿವರ್ಸರಿ ವಿಶ್

    ನಿಮ್ಮ ಜೊತೆಗಿನ ನನ್ನ ಜೀವನ ಮ್ಯಾಜಿಕಲ್: ಯಶ್‌ಗೆ ರಾಧಿಕಾ ಅನಿವರ್ಸರಿ ವಿಶ್

    ಚಿತ್ರರಂಗದ ದಿ ಬೆಸ್ಟ್ ಕಪಲ್ ಅಂದ್ರೆ ಯಶ್ (Yash) ಮತ್ತು ರಾಧಿಕಾ ಪಂಡಿತ್,(Radhika Pandit) ತಮ್ಮ ದಾಂಪತ್ಯ ಜೀವನವು ಆರು ವರ್ಷಗಳನ್ನ ಪೂರೈಸಿರುವ ಖುಷಿಯಲ್ಲಿ ಯಶ್ ಜೊತೆಗಿನ ವೈವಾಹಿಕ ಜೀವನದ ಬಗ್ಗೆ ರಾಧಿಕಾ ಪಂಡಿತ್ ಪ್ರೀತಿಯಿಂದ ಪತಿಗೆ ವಿಶ್ ಮಾಡಿದ್ದಾರೆ. ಈ ಕುರಿತ ಪೋಸ್ಟ್ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡ್ತಿದೆ.

    ಸೀರಿಯಲ್ ಟು ಸಿನಿಮಾವೆರೆಗೂ ಜೊತೆಯಾಗಿದ್ದ ಜೋಡಿ ಯಶ್ ಮತ್ತು ರಾಧಿಕಾ, ಪ್ರೀತಿಸಿ 2016ರಲ್ಲಿ ಗುರುಹಿರಿಯರ ಸಮ್ಮುಖದಲ್ಲಿ ಮದುವೆಯಾಗಿದ್ದರು. ಈಗ ಯಶ್, ರಾಧಿಕಾ ಪ್ರೀತಿಯ ಪಯಣಕ್ಕೆ 6 ವರ್ಷಗಳ ಸಂಭ್ರಮವಾಗಿದ್ದು, ಪತಿ ಯಶ್ ಪ್ರೀತಿಯಿಂದ ವಾರ್ಷಿಕೋತ್ಸವಕ್ಕೆ ಶುಭಹಾರೈಸಿದ್ದಾರೆ. ಇದನ್ನೂ ಓದಿ: ಕರ್ನಾಟಕದ ಹುಡುಗಿಯ ಜೊತೆ ಸಲ್ಮಾನ್ ಖಾನ್‌ಗೆ ಪ್ಯಾರ್

     

    View this post on Instagram

     

    A post shared by Radhika Pandit (@iamradhikapandit)

    ಇದು ನಾವು.. ಸ್ವಲ್ಪ ಫಿಲ್ಮಿ, ಸ್ವಲ್ಪ ಪ್ಲೇಫುಲ್, ಸ್ವಲ್ಪ ಧಾರ್ಮಿಕ, ಸ್ವಲ್ಪ ಸೀರಿಯಸ್ ಅದರೆ ತುಂಬಾ ರಿಯಲ್. ಈ 6 ವರ್ಷವನ್ನು ಬ್ಯೂಟಿಫುಲ್ ಮಾಡಿದಕ್ಕೆ ಥ್ಯಾಂಕ್ಸ್. ನಿಮ್ಮ ಜೊತೆ ನನ್ನ ಜೀವನ ಮ್ಯಾಜಿಕಲ್ ಮತ್ತು ರಿಯಲ್. ಹ್ಯಾಪಿ ಅನಿವರ್ಸರಿ ಲವ್ ಯು ಎಂದು ರಾಧಿಕಾ(Radhika Pandit) ಬರೆದುಕೊಂಡಿದ್ದಾರೆ. ನಟಿಯ ಪೋಸ್ಟ್‌ಗೆ ಫ್ಯಾನ್ಸ್‌ ಶುಭಹಾರೈಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ‘ಕೆಜಿಎಫ್’ ತಾತಾ ಖ್ಯಾತಿಯ ಕೃಷ್ಣ ಜಿ ರಾವ್ ನಿಧನ

    ‘ಕೆಜಿಎಫ್’ ತಾತಾ ಖ್ಯಾತಿಯ ಕೃಷ್ಣ ಜಿ ರಾವ್ ನಿಧನ

    ಶ್ ನಟನೆಯ ಕೆಜಿಎಫ್ ಸಿನಿಮಾದಲ್ಲಿ ಪುಟ್ಟ ಪಾತ್ರವಾದರೂ, ಜನರು ಗುರುತಿಸುವಂತಹ ನಟನೆ ಮಾಡಿದ್ದ ಕೃಷ್ಣ ಜಿ ರಾವ್ ನಿಧನರಾಗಿದ್ದಾರೆ. ಉಸಿರಾಟದ ತೊಂದರೆ ಕಾರಣದಿಂದಾಗಿ ಮೊನ್ನೆಯಷ್ಟೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ನಿಧನ ಹೊಂದಿದ್ದಾರೆ ಎಂದು ಅವರ ಕುಟುಂಬಸ್ಥರು ತಿಳಿಸಿದ್ದಾರೆ.

    ತೀವ್ರ ಉಸಿರಾಟದ ತೊಂದರೆಯಿಂದಾಗಿ ಐದು ದಿನಗಳ ಹಿಂದೆಯಷ್ಟೇ ಅವರನ್ನು ಬೆಂಗಳೂರಿನ ಸೀತಾ ಸರ್ಕಲ್ ಬಳಿ ಇರುವ ವಿನಾಯಕ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಐದು ದಿನಗಳಿಂದ ವೈದ್ಯರು ಕೂಡ ಸತತ ಪ್ರಯತ್ನದಲ್ಲಿದ್ದರು. ಇಂದು (ಡಿ.7) ಚಿಕಿತ್ಸೆ ಫಲಿಸದೇ ಕೃಷ್ಣ ಅವರು ಬಾರದ ಲೋಕಕ್ಕೆ ಹೋಗಿದ್ದಾರೆ. ಇದನ್ನೂ ಓದಿ: ನಟಿ ಅಶು ರೆಡ್ಡಿ ಕಾಲು ಹಿಡಿದ ರಾಮ್ ಗೋಪಾಲ್ ವರ್ಮಾ: ನೆಟ್ಟಿಗರು ಶಾಕ್

    ಕೃಷ್ಣ ಜಿ ರಾವ್ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದರೂ, ಕೆಜಿಎಫ್ ತಾತಾ ಎಂದೇ ಫೇಮಸ್ ಆಗಿದ್ದರು. ಶಂಕರ್ ನಾಗ್ ಕಾಲದಿಂದಲೂ ಇವರು ಸಿನಿಮಾಗಳಲ್ಲಿ ನಟಿಸಿದ್ದಾರೆ. ಹಲವಾರು ಚಿತ್ರಗಳಲ್ಲಿ ಇವರು ನಟಿಸಿದ್ದರೂ, ಜನರು ಗುರುತಿಸುವಂತೆ ಮಾಡಿದ್ದು ಕೆಜಿಎಫ್ ಎನ್ನುವುದು ವಿಶೇಷ. ಈ ಸಿನಿಮಾದ ನಂತರ ಅವರು ಅನೇಕ ಸಿನಿಮಾಗಳನ್ನು ಒಪ್ಪಿಕೊಂಡಿದ್ದರು. ಇವರ ಮುಖ್ಯ ಭೂಮಿಕೆಯ ಸಿನಿಮಾವೊಂದು ಬಿಡುಗಡೆಗೂ ಸಿದ್ಧವಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಯಶ್ ಮುಂದಿನ ಸಿನಿಮಾ, ಐರಾ ಪ್ರೊಡಕ್ಷನ್ ಹೌಸ್ ಬಗ್ಗೆ ಕೊನೆಗೂ ಸಿಕ್ತು ಗುಡ್ ನ್ಯೂಸ್

    ಯಶ್ ಮುಂದಿನ ಸಿನಿಮಾ, ಐರಾ ಪ್ರೊಡಕ್ಷನ್ ಹೌಸ್ ಬಗ್ಗೆ ಕೊನೆಗೂ ಸಿಕ್ತು ಗುಡ್ ನ್ಯೂಸ್

    ನ್ಯಾಷನಲ್ ಸ್ಟಾರ್ ಯಶ್ (Yash) ನಟನೆಯ `ಕೆಜಿಎಫ್ 2′ (Kgf 2) ಸಕ್ಸಸ್ ನಂತರ ಮುಂದೇನು ಮಾಡ್ತಾರೆ ಎಂಬುದೇ ಅಭಿಮಾನಿಗಳಿಗೆ ಪ್ರಶ್ನೆಯಾಗಿತ್ತು. ಅದಕ್ಕೆ ಪೂರಕವೆಂಬಂತೆ ಮಗಳು ಐರಾ ಹೆಸರಿನಲ್ಲಿ ಯಶ್‌, ಪ್ರೊಡಕ್ಷನ್ ಹೌಸ್ ಮಾಡುತ್ತಾರೆ ಎಂದು ಸಿಕ್ಕಾಪಟ್ಟೆ ಸುದ್ದಿಯಾಗಿತ್ತು. ಈ ಸುದ್ದಿ ನಿಜನಾ ಎಂಬುದಕ್ಕೆ ಇದೀಗ ಸ್ಪಷ್ಟನೆ ಸಿಕ್ಕಿದೆ.

    `ಕೆಜಿಎಫ್ 2′ ಕೋಟಿ ಕೋಟಿ  ಕಲೆಕ್ಷನ್ ಮಾಡಿ, ಹಿಸ್ಟರಿ ಕ್ರಿಯೇಟ್ ಮಾಡಿತ್ತು. ಯಶ್ ಮುಂದಿನ ಸಿನಿಮಾಗೆ ಕಾತರದಿಂದ ಕಾಯ್ತಿರುವ ಸಂದರ್ಭದಲ್ಲಿ ಐರಾ ನಿರ್ಮಾಣ ಸಂಸ್ಥೆ (Ayra Production House) ಬಗ್ಗೆ ಭಾರೀ ಚರ್ಚೆಯಾಗಿತ್ತು. ಇದೀಗ ಈ ವಿಚಾರಕ್ಕೆ ಉತ್ತರ ಸಿಕ್ಕಿದೆ. ನಿನ್ನೆಯಷ್ಟೇ ಐರಾ ಐದನೇ ವರ್ಷಕ್ಕೆ ಕಾಲಿಟ್ಟಿದ್ದಾಳೆ. ಈ ಸಂದರ್ಭದಲ್ಲೂ ಈ ಕುರಿತು ಯಾವುದೇ ಘೋಷಣೆ ಆಗಿಲ್ಲ. ಇದು ಸುಳ್ಳು ಅನ್ನೋದು ಅಭಿಮಾನಿಗಳಿಗೂ ಖಚಿತವಾಗಿದೆ. ಇದನ್ನೂ ಓದಿ: ಹರಿಪ್ರಿಯಾ- ವಸಿಷ್ಠ ಸಿಂಹ ಎಂಗೇಜ್‌ಮೆಂಟ್‌ ಫೋಟೋಸ್‌ ಔಟ್

    ನಟ ಯಶ್‌ಗೆ ಐರಾ ಪ್ರೊಡಕ್ಷನ್ ಹೌಸ್ ಮಾಡುವ ಬಗ್ಗೆ ಯಾವುದೇ ಪ್ಲ್ಯಾನ್ ಇಲ್ಲ. ಹೊಸ ಬಗೆಯ ಕಥೆ, ಪಾತ್ರದ ತಯಾರಿಯಲ್ಲಿದ್ದಾರೆ. ಜನವರಿ 8ಕ್ಕೆ ಯಶ್ ಹುಟ್ಟುಹಬ್ಬವಾಗಿದ್ದು, ಅದರ ತಯಾರಿಯಲ್ಲಿ ಯಶ್ ತಂಡ ಬ್ಯುಸಿಯಾಗಿದ್ದಾರೆ. ಕೊರೊನಾ ನಿಮಿತ್ತ ಯಶ್ ಹುಟ್ಟುಹಬ್ಬಕ್ಕೆ ಬ್ರೇಕ್ ಹಾಕಲಾಗಿತ್ತು. ಇದೀಗ 2023ಕ್ಕೆ ರಾಕಿ ಭಾಯ್ ಬರ್ತ್‌ಡೇಯನ್ನು ಅದ್ದೂರಿಯಾಗಿ ಮಾಡಬೇಕು ಎಂಬ ನಿಟ್ಟಿನಲ್ಲಿ ಯಶ್ ಟೀಮ್ ತೆರೆಮರೆಯಲ್ಲಿ ಭರ್ಜರಿ ತಯಾರಿ ನಡೆಸುತ್ತಿದ್ದಾರೆ.

    ಯಶ್ ಹುಟ್ಟುಹಬ್ಬದಂದು ತಮ್ಮ ಮುಂದಿನ ಸಿನಿಮಾ ಬಗ್ಗೆ ಗುಡ್ ನ್ಯೂಸ್ ಕೊಡುತ್ತಾರಾ ಎಂಬುದನ್ನ ಕಾದುನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]

  • `ಕೆಜಿಎಫ್’ ತಾತ ಕೃಷ್ಣ ಜಿ. ರಾವ್ ಆರೋಗ್ಯದಲ್ಲಿ ಏರುಪೇರು: ಆಸ್ಪತ್ರೆಗೆ ದಾಖಲು

    `ಕೆಜಿಎಫ್’ ತಾತ ಕೃಷ್ಣ ಜಿ. ರಾವ್ ಆರೋಗ್ಯದಲ್ಲಿ ಏರುಪೇರು: ಆಸ್ಪತ್ರೆಗೆ ದಾಖಲು

    ಚಿತ್ರರಂಗದಲ್ಲಿ ದಾಖಲೆ ಬರೆದ ಸಿನಿಮಾ `ಕೆಜಿಎಫ್’ನಲ್ಲಿ(Kgf) ತಾತ ಪಾತ್ರ ಮಾಡಿದ್ದ ಕೃಷ್ಣ ಜಿ.ರಾವ್ (Krishna G. Rao) ಏಕಾಏಕಿ ಅನಾರೋಗ್ಯ ಉಂಟಾಗಿದೆ. ಕೆಜಿಎಫ್ ಚಾಪ್ಟರ್ ಒನ್ ಮತ್ತು ಕೆಜಿಎಫ್ ಚಾಪ್ಟರ್ 2ನಲ್ಲಿ ನಟಿಸಿದ್ದ ತಾತನ ಆರೋಗ್ಯ ಏರುಪೇರಾಗಿದೆ.

    ಕನ್ನಡ ಚಿತ್ರರಂಗದ ಹಿರಿಯ ನಟ ಕೃಷ್ಣ ಜಿ. ರಾವ್ ಆರೋಗ್ಯದಲ್ಲಿ ಸಮಸ್ಯೆ ಉಂಟಾಗಿದೆ. ಯಶ್ (Yash) ನಟನೆಯ ಕೆಜಿಎಫ್‌ನಲ್ಲಿ (Kgf) ವೃದ್ಧನ ಪಾತ್ರ ಮಾಡಿ ಅಪಾರ ಜನಪ್ರಿಯತೆ ಗಳಿಸಿದ್ದ ಕೃಷ್ಣ ಅವರಿಗೆ ಅನಾರೋಗ್ಯದಿಂದ ಬಳಲುತ್ತಿದ್ದು, ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಸದ್ಯ ಅವರಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇದನ್ನೂ ಓದಿ: ಅಭಿಷೇಕ್ ಅಂಬರೀಶ್ ನಿಶ್ಚಿತಾರ್ಥ: ತಾಂಬೂಲ ಬದಲಿಸಿಕೊಂಡ ಕುಟುಂಬ

    ಆದಷ್ಟು ಬೇಗ ಆರೋಗ್ಯದಲ್ಲಿ ಚೇತರಿಕೆ ಕಾಣಲಿ ಎಂದು ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಡಬ್ಬಿಂಗ್ ಸಿನಿಮಾದಿಂದ ತೆಲುಗು ಚಿತ್ರೋದ್ಯಮಕ್ಕೆ ಹಾನಿ: ಒಟ್ಟಾದ ನಿರ್ಮಾಪಕರು

    ಡಬ್ಬಿಂಗ್ ಸಿನಿಮಾದಿಂದ ತೆಲುಗು ಚಿತ್ರೋದ್ಯಮಕ್ಕೆ ಹಾನಿ: ಒಟ್ಟಾದ ನಿರ್ಮಾಪಕರು

    ರಭಾಷೆಯ ಚಿತ್ರಗಳು ತೆಲುಗಿಗೆ ಡಬ್ ಆಗಿ ಬಂದು ಮೂಲ ತೆಲುಗು ಸಿನಿಮಾಗಳಿಗೆ ತೊಂದರೆ ಮಾಡುತ್ತಿವೆ ಎಂದು ಅಲ್ಲಿನ ನಿರ್ಮಾಪಕರು ದೂರಿದ್ದಾರೆ. ಈ ಕಾರಣದಿಂದಾಗಿಯೇ ಅವರು ಮಹತ್ವದ ನಿರ್ಣಯವೊಂದನ್ನು ತಗೆದುಕೊಂಡಿದ್ದು, ಹಬ್ಬಗಳಲ್ಲಿ ಹೆಚ್ಚೆಚ್ಚು ತೆಲುಗು ಸಿನಿಮಾಗಳಿಗೆ ಚಿತ್ರಮಂದಿರ ಮೀಸಲಿಡಬೇಕು ಎಂದು ಒತ್ತಾಯಿಸಿದ್ದಾರೆ. ಅಲ್ಲದೇ, ಡಬ್ಬಿಂಗ್ ಸಿನಿಮಾಗಳಿಗೆ ಕಡಿವಾಣ ಹಾಕುವಂತಹ ಕೆಲಸಗಳು ಆಗಬೇಕು ಎಂದು ಹೇಳಿದ್ದಾರೆ.

    ಡಬ್ಬಿಂಗ್ ಸಿನಿಮಾಗಳಿಂದ ಮೂಲ ತೆಲುಗು ಚಿತ್ರಗಳಿಗೆ ಹಾನಿ ಆಗುತ್ತಿರುವುದನ್ನು ಗಮನಿಸಿ ಇಂಥದ್ದೊಂದು ತೀರ್ಮಾನ ತಗೆದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ದೊಡ್ಡ ಹಬ್ಬಗಳಲ್ಲಿ ಈ ಬಾರಿ ತೆಲುಗಿಗಿಂತ ಬೇರೆ ಭಾಷೆ ಚಿತ್ರಗಳೇ ಬಾಕ್ಸ್ ಆಫೀಸಿನಲ್ಲಿ ಸದ್ದು ಮಾಡಿದ್ದು, ಅಲ್ಲಿನ ನಿರ್ಮಾಪಕರಿಗೆ ನಿದ್ದೆಗೆಡಿಸಿದೆ. ಅಲ್ಲದೇ, ಕೆಲವರು ಬೇರೆ ಭಾಷೆಯ ಸಿನಿಮಾಗಳಿಗೆ ಮಣೆ ಹಾಕುತ್ತಿರುವುದರಿಂದ ತೆಲುಗು ಸಿನಿಮಾಗಳಿಗೆ ಅನ್ಯಾಯವಾಗುತ್ತಿದೆ ಎಂದು ದೂರಿದ್ದಾರೆ. ಇದನ್ನೂ ಓದಿ:ದೊಡ್ಮನೆಯಲ್ಲಿ ರಂಪಾಟ: ಕೈ ಕೈ ಮಿಲಾಯಿಸಿದ ಸಂಬರ್ಗಿ-ಗೊಬ್ಬರಗಾಲ

    ನಿರ್ಮಾಪಕರೆಲ್ಲ ಒಟ್ಟಾಗಿ ತೆಲುಗು ಚಿತ್ರೋದ್ಯಮವನ್ನು ಉಳಿಸುವ ನಿಟ್ಟಿನಲ್ಲಿ ಹಲವು ಮೀಟಿಂಗ್ ಗಳನ್ನು ಮಾಡಿದ್ದು, ಅದರಲ್ಲಿ ಕೆಲ ನಿರ್ಣಯಗಳನ್ನೂ ತಗೆದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಅದರಲ್ಲೂ ದೊಡ್ಡ ಹಬ್ಬಗಳಲ್ಲಿ ಚಿತ್ರಮಂದಿರಗಳು ತೆಲುಗು ಸಿನಿಮಾಗೇ ಮೀಸಲಿಡಬೇಕು. ಆ ವೇಳೆಯಲ್ಲಿ ಆದಷ್ಟು ಡಬ್ಬಿಂಗ್ ಸಿನಿಮಾಗಳನ್ನು ದೂರಿಡಬೇಕು ಎನ್ನುವುದು ಅಲ್ಲಿನ ನಿರ್ಮಾಪಕರ ಆಗ್ರಹ ಕೂಡ ಆಗಿದೆಯಂತೆ.

    ತೆಲುಗು ನಿರ್ಮಾಪಕರು ಅಂಥದ್ದೊಂದು ನಿರ್ಧಾರ ತಗೆದುಕೊಳ್ಳಲು ನೇರವಾಗಿ ಕೆಜಿಎಫ್ 2, ಕಾಂತಾರ ಸಿನಿಮಾ  ಕಾರಣ ಎನ್ನವ ಚರ್ಚೆಯೂ ಆಗುತ್ತಿದೆ. ಆಂಧ್ರ ಮತ್ತು ತೆಲಂಗಾಣದಲ್ಲಿ ಈ ಎರಡೂ ಚಿತ್ರಗಳು ಬಾಕ್ಸ್ ಆಫೀಸಿನಲ್ಲಿ ಕೋಟಿ ಕೋಟಿ ಬಾಚಿದ್ದರಿಂದ ನಿರ್ಮಾಪಕರು ಒಟ್ಟಾಗಿ, ಚರ್ಚಿಸಿ ಇಂಥದ್ದೊಂದು ತೀರ್ಮಾನ ತಗೆದುಕೊಳ್ಳಲು ಒಂದಾಗಿದ್ದಾರೆ ಎನ್ನುವ ಮಾತು ಹರಿದಾಡುತ್ತಿದೆ.

    Live Tv
    [brid partner=56869869 player=32851 video=960834 autoplay=true]