Tag: KGF-2

  • ರಾಜಸ್ಥಾನದಲ್ಲಿ ರೊಮ್ಯಾಂಟಿಕ್ ಆಗಿ ಪ್ರೇಮಿಗಳ ದಿನ ಆಚರಿಸಿದ ಯಶ್- ರಾಧಿಕಾ

    ರಾಜಸ್ಥಾನದಲ್ಲಿ ರೊಮ್ಯಾಂಟಿಕ್ ಆಗಿ ಪ್ರೇಮಿಗಳ ದಿನ ಆಚರಿಸಿದ ಯಶ್- ರಾಧಿಕಾ

    ಸ್ಯಾಂಡಲ್‌ವುಡ್‌ನ (Sandalwood) ಸ್ಟಾರ್ ಜೋಡಿ ರಾಕಿಂಗ್ ಸ್ಟಾರ್ ಯಶ್- ರಾಧಿಕಾ ಪಂಡಿತ್ (Radhika Pandit) ಇದೀಗ ರಾಜಸ್ಥಾನದ ಜೈಪುರದಲ್ಲಿ ಪ್ರೇಮಿಗಳ ದಿನವನ್ನು ಅದ್ದೂರಿಯಾಗಿ ಆಚರಿಸಿದ್ದಾರೆ. ವ್ಯಾಲೆಂಟೈನ್ ದಿನದ ಯಶ್ (Yash) ಜೊತೆಗಿನ ಸ್ಪೆಷಲ್ ಫೋಟೋವನ್ನ ರಾಧಿಕಾ ಪಂಡಿತ್ ಶೇರ್ ಮಾಡಿದ್ದಾರೆ.

    ಚಂದನವನದ ಚೆಂದದ ಜೋಡಿಗಳಲ್ಲಿ ಯಶ್ ಮತ್ತು ರಾಧಿಕಾ ಪಂಡಿತ್ ಕೂಡ ಒಬ್ಬರು. ಇಬ್ಬರೂ ಪ್ರೀತಿಸಿ ಮದುವೆಯಾದವರು. ಈ ಕ್ಯೂಟ್ ಕಪಲ್ ಅನೇಕರಿಗೆ ಸ್ಪೂರ್ತಿ. ಈ ಸುಂದರ ಸ್ಟಾರ್ ಕಪಲ್ ಅಷ್ಟೇ ಸುಂದರವಾಗಿ ಪ್ರೇಮಿಗಳ ದಿನವನ್ನು ಸಂಭ್ರಮಿಸಿದ್ದಾರೆ. ಯಶ್ ಮತ್ತು ರಾಧಿಕಾ ಇಬ್ಬರೂ ಪ್ರೇಮಿಗಳ ದಿನಕ್ಕೆ ರಾಜಸ್ಥಾನಕ್ಕೆ ತೆರಳಿದ್ದಾರೆ. ಇಬ್ಬರು ಖಾಸಗಿ ಜೆಟ್‌ನಲ್ಲಿ ರಾಜಸ್ಥಾನಕ್ಕೆ ಹಾರಿದ್ದು, ಜೈಪುರದಲ್ಲಿ ವ್ಯಾಲೆಂಟೈನ್ ಡೇ (Valentines Day) ಆಚರಿಸಿದ್ದಾರೆ. ಪ್ರೇಮಿಗಳ ದಿನದ ಸೆಲೆಬ್ರೇಷನ್ (Celebration) ಫೋಟೋ ಕೂಡ ಸಖತ್ ವೈರಲ್ ಆಗುತ್ತಿದೆ.

     

    View this post on Instagram

     

    A post shared by YASH BOSS FAN’S (@yashfansnetwork)

    ವಿಶೇಷ ದಿನವನ್ನು ರಾಜಸ್ಥಾನದಲ್ಲಿ ಕಳೆದ ಫೋಟೋವನ್ನು ರಾಧಿಕಾ ಪಂಡಿತ್ ಶೇರ್ ಮಾಡಿ ಪ್ರೇಮಿಗಳ ದಿನಾಚರಣೆಯ ಶುಭಾಶಯ ತಿಳಿಸಿದ್ದಾರೆ. ಪತಿ ಯಶ್ ಜೊತೆಗಿನ ರೊಮ್ಯಾಂಟಿಕ್ ಫೋಟೋ ಪೋಸ್ಟ್ ಮಾಡಿ, `ಪ್ರೀತಿಯು ದೊಡ್ಡ ಪ್ರತಿಧ್ವನಿಯನ್ನು ಹೊಂದಿದೆ. ಪ್ರೇಮಿಗಳ ದಿನದ ಶುಭಾಶಯಗಳು’ ಎಂದು ಹೇಳಿದ್ದಾರೆ. ಜೈಪುರದ ರಾಯಲ್ ಅರಮನೆಯಲ್ಲಿ ಈ ಜೋಡಿ ವ್ಯಾಲೆಂಟೈನ್ ಡೇಯನ್ನ ಆಚರಿಸಿದ್ದಾರೆ. ಇದನ್ನೂ ಓದಿ:ದಾದಾ ಸಾಹೇಬ್ ಫಾಲ್ಕೆ ಚಿತ್ರೋದ್ಯಮದ ಪ್ರಶಸ್ತಿಗೆ ಭಾಜನರಾದ ರಿಷಬ್ ಶೆಟ್ಟಿ

     

    View this post on Instagram

     

    A post shared by Radhika Pandit (@iamradhikapandit)

    ಈ ಕ್ಯೂಟ್ ಆಗಿರುವ ಫೋಟೋಗೆ ಭರ್ಜರಿ ಕಾಮೆಂಟ್ ಮಾಡಿದ್ದಾರೆ. ಯಶ್-ರಾಧಿಕಾ ರೊಮ್ಯಾಂಟಿಕ್ ಫೋಟೋ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ. ನೆಚ್ಚಿನ ಜೋಡಿಗೆ ಶುಭಹಾರೈಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಯಶ್ ಜೊತೆ ಸಿನಿಮಾ ಮಾಡುವ ಬಗ್ಗೆ ಅಪ್‌ಡೇಟ್ ಕೊಟ್ಟ ನಿರ್ಮಾಪಕ ಉಮಾಪತಿ

    ಯಶ್ ಜೊತೆ ಸಿನಿಮಾ ಮಾಡುವ ಬಗ್ಗೆ ಅಪ್‌ಡೇಟ್ ಕೊಟ್ಟ ನಿರ್ಮಾಪಕ ಉಮಾಪತಿ

    ಸ್ಯಾಂಡಲ್‌ವುಡ್ (Sandalwood) ನಿರ್ಮಾಪಕ ಉಮಾಪತಿ ಶ್ರೀನಿವಾಸ್‌ ಗೌಡ (Umapathy Srinivas Gowda) ಇದೀಗ ಸಿನಿಮಾ ಮತ್ತು ರಾಜಕೀಯ (Politics) ಎರಡರಲ್ಲೂ ಬ್ಯುಸಿಯಾಗಿದ್ದಾರೆ. `ಉಪಾಧ್ಯಕ್ಷ’ ಚಿತ್ರಕ್ಕೆ ನಿರ್ಮಾಣ ಮಾಡುವ ಮೂಲಕ ಉಮಾಪತಿ ಸುದ್ದಿಯಲ್ಲಿದ್ದಾರೆ. ಇದೀಗ `ಕೆಜಿಎಫ್ 2′ (KGF 2)ಸ್ಟಾರ್ ಯಶ್ (Yash) ಜೊತೆ ಸಿನಿಮಾ ಮಾಡುವುದಾಗಿ ನಿರ್ಮಾಪಕ ಉಮಾಪತಿ ಬಿಗ್ ಅಪ್‌ಡೇಟ್ ನೀಡಿದ್ದಾರೆ.

    ಹೆಬ್ಬುಲಿ, ರಾಬರ್ಟ್, ಮದಗಜ ಅಂತಹ ಸಿನಿಮಾಗಳನ್ನ ನಿರ್ಮಾಣ ಮಾಡಿರುವ ಉಮಾಪತಿ ಅವರು ರಾಜಕೀಯಕ್ಕೆ (Politics) ಎಂಟ್ರಿ ಕೊಡಲು ರೆಡಿಯಾಗಿದ್ದಾರೆ. ಸಿನಿಮಾ ಜೊತೆ ಉಮಾಪತಿ ಅವರು ಚುನಾವಣೆ ಕಣಕ್ಕೆ ಇಳಿಯಲಿದ್ದಾರೆ ಎಂಬ ಮಾಹಿತಿಯಿದೆ. ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದು, ಬೊಮ್ಮನಹಳ್ಳಿ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಾರೆ ಅನ್ನೋ ಮಾತು ಕೇಳಿ ಬರುತ್ತಿದೆ. ಸಂದರ್ಶನವೊಂದರಲ್ಲಿ ಸಿನಿಮಾ, ರಾಜಕೀಯ ಹಲವು ವಿಚಾರಗಳ ಬಗ್ಗೆ ಉಮಾಪತಿ ಮಾತನಾಡಿದ್ದಾರೆ. ಇದನ್ನೂ ಓದಿ: ಆಸ್ಕರ್ ವೇದಿಕೆಯಲ್ಲಿ `ನಾಟು ನಾಟು’ ಸಾಂಗ್ ಹಾಡಲಿದ್ದಾರೆ ಎಂ.ಎಂ ಕ್ಷೀರವಾಣಿ

    ನಿರ್ಮಾಪಕ ಉಮಾಪತಿ (Producer Umapathy) ಅವರು ರಾಕಿ ಭಾಯ್ ಯಶ್ ಜೊತೆ ಸಿನಿಮಾ ಮಾಡುತ್ತಾರಾ? ಯಾವಾಗ ಸಿನಿಮಾ ಮಾಡುತ್ತಾರೆ ಎಂದು ಎದುರಾದ ಪ್ರಶ್ನೆಗೆ ಉತ್ತರ ನೀಡಿದ್ದಾರೆ. 100% ಸತ್ಯ. ಯಶ್ (Yash) ಅವರೇ ಕನ್ನಡ ನಿರ್ಮಾಪಕರಿಗೆ (Producer) ಪ್ರಾಮುಖ್ಯತೆ ಕೊಡುವುದಾಗಿ ತಿಳಿಸಿದ್ದರು. ಆ ಬಗ್ಗೆ ಅವರಿಗೆ ಬಹಳ ಅಭಿಮಾನವಿದೆ. ನನ್ನ ಬಗ್ಗೆ ವಿಶೇಷವಾದ ಪ್ರೀತಿಯೂ ಇದೆ. ಗೌರವವೂ ಇದೆ. ಹಾಗಾಗಿ ಖಂಡಿತವಾಗಿಯೂ ಒಟ್ಟಿಗೆ ಸಿನಿಮಾ ಮಾಡುತ್ತೇವೆ ಎಂದು ತಿಳಿಸಿದ್ದರು.

    `ಕೆಜಿಎಫ್ 2′ ನಂತರ ಯಶ್ ಜೊತೆಗಿನ ಸಿನಿಮಾ ಅಪ್‌ಡೇಟ್ ಸಿಗದೇ ಬೇಸರದಲ್ಲಿದ್ದ ಅಭಿಮಾನಿಗಳಿಗೆ, ಉಮಾಪತಿ ಜೊತೆಗಿನ ಸಿನಿಮಾ ಸುದ್ದಿ ಕೇಳಿ ಥ್ರಿಲ್ ಆಗಿದ್ದಾರೆ. ಮುಂದಿನ ದಿನಗಳಲ್ಲಿ ಇವರಿಬ್ಬರು ಒಟ್ಟಿಗೆ ಸಿನಿಮಾ ಮಾಡುತ್ತಾರಾ ಎಂಬುದರ ಬಗ್ಗೆ ಯಶ್‌ ಕಡೆಯಿಂದ ಅಧಿಕೃತ ಅಪ್‌ಡೇಟ್‌ ಸಿಗುವವರೆಗೂ ಕಾದುನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡ ಯಶ್, ಅಸಲಿ ಕಾರಣವೇನು?

    ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡ ಯಶ್, ಅಸಲಿ ಕಾರಣವೇನು?

    `ಕೆಜಿಎಫ್ 2′ (KGF 2) ಸೂಪರ್ ಸಕ್ಸಸ್ ನಂತರ ನ್ಯಾಷನಲ್ ಸ್ಟಾರ್ ಯಶ್ (Yash) ಮುಂದಿನ ನಡೆ ಮೇಲೆ ಎಲ್ಲರಿಗೂ ಕುತೂಹಲವಿದೆ. ಸದ್ಯ ಮುಂಬೈ (Mumbai) ಮಹಾನಗರಿಗೆ ಯಶ್ ಎಂಟ್ರಿ ಕೊಟ್ಟಿದ್ದಾರೆ. ರಾಕಿಂಗ್ ಸ್ಟಾರ್ ಎಂಟ್ರಿ ಹಲವು ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ.

    ರಾಕಿಬಾಯ್ ಆಗಿ ಕೆಜಿಎಫ್, ಕೆಜಿಎಫ್ 2 (KGF 2) ಮೂಲಕ ಸಕ್ಸಸ್ ಕಂಡಿರುವ ಸೂಪರ್ ಸ್ಟಾರ್ ಯಶ್ ಮುಂದಿನ ಸಿನಿಮಾ ಎಂಬುದೇ ಈಗ ಅಭಿಮಾನಿಗಳಿಗೆ ಯಕ್ಷ ಪ್ರಶ್ನೆಯಾಗಿದೆ. ಯಶ್ ಕಡೆಯಿಂದ ಯಾವುದೇ ಅಪ್‌ಡೇಟ್ ಸಿಗದೇ ನಿರಾಶರಾಗಿದ್ದಾರೆ. ಹೀಗಿರುವಾಗ ಮುಂಬೈಗೆ ಯಶ್ ಹಾರಿದ್ದಾರೆ.

     

    View this post on Instagram

     

    A post shared by Viral Bhayani (@viralbhayani)

    ಮುಂಬೈ ಎಂಟ್ರಿ ನೀಡಿರುವ ಯಶ್, ಬಾಲಿವುಡ್ ಸಿನಿಮಾ ಮಾಡ್ತಾರಾ ಅಥವಾ ಹೊಸ ಸಿನಿಮಾ ಬಗ್ಗೆ ಚರ್ಚೆ ಮಾಡಲು ಬಂದ್ರಾ ಹೀಗೆ ಹಲವು ಪ್ರಶ್ನೆಗಳಿಗೆ ಈಗ ಉತ್ತರ ಸಿಕ್ಕಿದೆ. ಜಾಹಿರಾತುವೊಂದರಲ್ಲಿ ನಟಿಸಲು ಯಶ್ ಮುಂಬೈಗೆ ಬಂದಿದ್ದಾರೆ. ಹೊಸ ಬ್ರ್ಯಾಂಡ್‌ನ ಪ್ರಮೋಟ್ ಮಾಡಲು ಸಾಥ್ ನೀಡ್ತಿದ್ದಾರೆ. ಇದನ್ನೂ ಓದಿ: ಪುನೀತ್ ರಾಜ್ ಕುಮಾರ್ ರಸ್ತೆ ಇಂದು ಉದ್ಘಾಟನೆ

    ಯಶ್ ತಮ್ಮ ಮುಂದಿನ ಸಿನಿಮಾಗಾಗಿ ತೆರೆಮರೆಯಲ್ಲಿ ಭರ್ಜರಿ ತಯಾರಿ ನಡೆಸುತ್ತಿದ್ದಾರೆ. ಸದ್ಯದಲ್ಲೇ ಈ ಕುರಿತು ಮಾಹಿತಿ ನೀಡಲಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಅಪ್ಪನಿಗಿಂತ ನಾನೇ ಸ್ಟ್ರಾಂಗ್, ಯಶ್ ಜೊತೆ ಮಗನ ತುಂಟಾಟದ ವೀಡಿಯೋ ವೈರಲ್

    ಅಪ್ಪನಿಗಿಂತ ನಾನೇ ಸ್ಟ್ರಾಂಗ್, ಯಶ್ ಜೊತೆ ಮಗನ ತುಂಟಾಟದ ವೀಡಿಯೋ ವೈರಲ್

    ಪ್ಯಾನ್ ಇಂಡಿಯಾ ಸ್ಟಾರ್ ಯಶ್ `ಕೆಜಿಎಫ್ 2′ (Kgf 2)ಯಶಸ್ಸಿನ ನಂತರ ಅವರ ಮುಂದಿನ ಸಿನಿಮಾಗಾಗಿ ಅಭಿಮಾನಿಗಳು ಕಾಯ್ತಿದ್ದಾರೆ. ಇದರ ನಡುವೆ ಮುದ್ದು ಯಥರ್ವ್ ಜೊತೆ ಸಮಯ ಕಳೆದ್ದಿದ್ದಾರೆ. ಅಪ್ಪನಿಗಿಂತ ನಾನೇ ಗಟ್ಟಿ ಎಂದು ಹೇಳಿರುವ ಯಶ್ ಜೊತೆಗಿನ ಯಥರ್ವ್ ತುಂಟಾಟದ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡ್ತಿದೆ.

    `ಕೆಜಿಎಫ್ 2′ ನಂತರ ಹೊಸ ಕಥೆ, ಪ್ರಾಜೆಕ್ಟ್‌ನತ್ತ ಯಶ್ (Yash) ಬ್ಯುಸಿಯಾಗಿದ್ದಾರೆ. ಇದರ ನಡುವೆ ಮಗನ ಜೊತೆಗಿನ ತುಂಟಾಟದ ವೀಡಿಯೋವನ್ನ ಯಶ್ ಶೇರ್ ಮಾಡಿದ್ದಾರೆ. ಮಗನ ಜೊತೆ ರಾಕಿಬಾಯ್ ಸಮಯ ಕಳೆದಿದ್ದಾರೆ. ಇದನ್ನೂ ಓದಿ:ಮಗಳ ಜೊತೆಗಿನ ಮುದ್ದಾದ ಫೋಟೋ ಹಂಚಿಕೊಂಡ ನಟಿ ಬಿಪಾಶಾ ಬಸು

    ಯಶ್ ಅವರ ತೋಳನ್ನು ಮುಟ್ಟುವ ಯಥರ್ವ್ (Yatharva) ತುಂಬ ಸಾಫ್ಟ್ ಆಗಿದೆ ಎನ್ನುತ್ತಾನೆ. ತನ್ನ ತೋಳು ತೋರಿಸಿ ತುಂಬ ಗಟ್ಟಿಯಾಗಿದೆ ಎನ್ನುತ್ತಾನೆ. ಮಗನ ಈ ಮಾತು ಕೇಳಿ ಯಶ್‌ಗೆ ಅಚ್ಚರಿ. ಸೂಪರ್ ಮಗನೆ, ನೀನೇ ಎಲ್ಲರಿಗಿಂತ ಸ್ಟ್ರಾಂಗ್ ಎಂದು ಅವರು ಪುತ್ರನ ಬೆನ್ನು ತಟ್ಟುತ್ತಾರೆ. ಅಪ್ಪ-ಮಗನ ಈ ವಿಡಿಯೋಗೆ ಫ್ಯಾನ್ಸ್ ಬಗೆಬಗೆಯಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ. ಈ ಕ್ಯೂಟ್ ವೀಡಿಯೋ ಎಲ್ಲಡೆ ಸದ್ದು ಮಾಡ್ತಿದೆ.

     

    View this post on Instagram

     

    A post shared by Yash (@thenameisyash)

    ಯಶ್ ನಟಿಸಿರುವ ಕೆಜಿಎಫ್, ಕೆಜಿಎಫ್ 2 ಎರಡು ಭಾಗಗಳು ಸೂಪರ್ ಹಿಟ್ ಆಗಿದೆ. ಯಶ್ ಮುಂದಿನ ನಡೆ ಮೇಲೆ ಎಲ್ಲರ ಕಣ್ಣಿದೆ. ಆದಷ್ಟು ಸಿನಿಮಾ ಅಧಿಕೃತ ಅಪ್‌ಡೇಟ್ ಕೊಡಲಿ ಅಂತಾ ಕಾಯ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ರಾಕಿಂಗ್ ಸ್ಟಾರ್ ಮನೆ ಮುಂದೆ ಜನಸಾಗರ: ಯಶ್‌ ಜೊತೆಗೆ ಸೆಲ್ಫಿಗಾಗಿ ಮುಗಿಬಿದ್ದ ಫ್ಯಾನ್ಸ್

    ರಾಕಿಂಗ್ ಸ್ಟಾರ್ ಮನೆ ಮುಂದೆ ಜನಸಾಗರ: ಯಶ್‌ ಜೊತೆಗೆ ಸೆಲ್ಫಿಗಾಗಿ ಮುಗಿಬಿದ್ದ ಫ್ಯಾನ್ಸ್

    ರಾಕಿಂಗ್ ಸ್ಟಾರ್ ಯಶ್ (Rocking Star Yash) ಈಗ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಬೆಳೆದಿದ್ದಾರೆ. ಕನ್ನಡ ಮಾತ್ರವಲ್ಲದೇ ಪರಭಾಷೆಗಳಲ್ಲೂ ಯಶ್‌ಗೆ ಫ್ಯಾನ್ಸ್ ಇದ್ದಾರೆ. ಈ ಬಾರಿ ತಮ್ಮ ಹುಟ್ಟುಹಬ್ಬಕ್ಕೆ ಯಶ್ ಬ್ರೇಕ್ ಹಾಕಿದ್ದ ಬೆನ್ನಲ್ಲೇ ಈಗ ರಾಕಿ ಬಾಯ್ ಅವರನ್ನ ನೋಡಲು ಮನೆ ಮುಂದೆ ಸಾವಿರಾರು ಅಭಿಮಾನಿಗಳು ಜಮಾಯಿಸಿದ್ದಾರೆ.

    `ಕೆಜಿಎಫ್ 2′ (Kgf 2) ಸೂಪರ್ ಸಕ್ಸಸ್ ನಂತರ ಯಶ್ ಸಿನಿಮಾಗಾಗಿ ಅಭಿಮಾನಿಗಳು ಎದುರು ನೋಡ್ತಿದ್ದಾರೆ. ಹೀಗಿರುವಾಗ ನೆಚ್ಚಿನ ನಟನನ್ನು ನೋಡಲು ಬೇರೇ ಬೇರೇ ರಾಜ್ಯಗಳಿಂದ ಅಭಿಮಾನಿಗಳು ಯಶ್ ಮನೆ ಮುಂದೆ ಬೀಡು ಬಿಟ್ಟಿದ್ದಾರೆ. ಕಿಲೋ ಮೀಟರ್ ಉದ್ದದ ಸಾಲಿನಲ್ಲಿ ಯಶ್‌ಗಾಗಿ ಕಾದಿದ್ದಾರೆ. ಈ ಕುರಿತ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇದನ್ನೂ ಓದಿ: ಅನಾರೋಗ್ಯದ ಬಳಿಕ ಮಾಸ್ ಲುಕ್‌ನಲ್ಲಿ ಎಂಟ್ರಿ ಕೊಟ್ಟ ಸಮಂತಾ

    ನಟ ಯಶ್ ಅವರು ಬೆಂಗಳೂರಿನ ಗಾಲ್ಫ್ ರಸ್ತೆಯಲ್ಲಿ (Golf Road) ಮನೆಯನ್ನು ಹೊಂದಿದ್ದಾರೆ. ಯಶ್ ಮನೆ ಬಳಿ ಸಾವಿರಾರು ಜನ ಜಮಾಯಿಸಿ ರಾಕಿ ಬಾಯ್ ಜೊತೆ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಅನೇಕರು ಅವರ ಭಾವಚಿತ್ರವನ್ನು ಪೇಂಟ್ ಮಾಡಿ ತಂದಿದ್ದಾರೆ. ಯಶ್ ತಮ್ಮ ಹುಟ್ಟುಹಬ್ಬಕ್ಕೆ ಸಿಗದೇ ಇರುವ ಕಾರಣ, ಈಗ ನಟನನ್ನು ಭೇಟಿಯಾಗಬೇಕು ಎಂದು ಬಿಹಾರ. ಉತ್ತರ ಪ್ರದೇಶದಿಂದ ಸೇರಿದಂತೆ ಹಲವು ಕಡೆಯಿಂದ ಬಂದು ನಟನ ಮನೆಗೆ ಭೇಟಿ ನೀಡಿದ್ದಾರೆ. ಯಶ್ ಕೂಡ ಅಭಿಮಾನಿಗಳ (Fans) ಆಸೆಯಂತೆ ಅವರನ್ನ ಭೇಟಿಯಾಗಿ ಫೋಟೋಗೆ ಪೋಸ್ ನೀಡಿದ್ದಾರೆ.

     

    View this post on Instagram

     

    A post shared by Yash™ (@yash_kingdom_forever)

    `ಕೆಜಿಎಫ್ 2′ ಬಳಿಕ ಯಶ್ 19ನೇ ಸಿನಿಮಾಗೆ ಕೆವಿಎನ್ (Kvn) ಸಂಸ್ಥೆ ಬಂಡವಾಳ ಹೂಡಲಿದೆ ಎನ್ನಲಾಗುತ್ತಿದೆ. ಇನ್ನೂ ಅಧಿಕೃತ ಅಪ್‌ಡೇಟ್‌ ಸಿಗುವವರೆಗೂ ಕಾದುನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಯಶ್ ಮುಂದಿಟ್ಟುಕೊಂಡು ಶಾರುಖ್ ಗೆ ಟಾಂಗ್ ಕೊಟ್ಟ ರಾಮ್ ಗೋಪಾಲ್ ವರ್ಮಾ

    ಯಶ್ ಮುಂದಿಟ್ಟುಕೊಂಡು ಶಾರುಖ್ ಗೆ ಟಾಂಗ್ ಕೊಟ್ಟ ರಾಮ್ ಗೋಪಾಲ್ ವರ್ಮಾ

    ಬಾಲಿವುಡ್ ಬಾದ್ ಷಾ ಶಾರುಖ್ ಖಾನ್ (Shah Rukh Khan) ನಟನೆಯ ‘ಪಠಾಣ್’ (Pathan) ಸಿನಿಮಾ ಬಾಕ್ಸ್ ಆಫೀಸಿನಲ್ಲಿ ಧೂಳ್ ಎಬ್ಬಿಸಿದೆ. ಸಿನಿಮಾ ರಿಲೀಸ್ ಆಗಿ ಒಂದೇ ವಾರಕ್ಕೆ ಐನೂರು ಕೋಟಿ ರೂಪಾಯಿ ಗಳಿಕೆ ಮಾಡಿದೆ. ಬಾಲಿವುಡ್ ಗೆ ಒಂದು ರೀತಿಯಲ್ಲಿ ಜೀವ ತುಂಬಿದ ಸಿನಿಮಾ ಕೂಡ ಇದಾಗಿದೆ. ಪಠಾಣ್ ವಿಷಯದಲ್ಲಿ ಬಾಲಿವುಡ್ ಸಂಭ್ರಮದಲ್ಲಿದ್ದರೆ, ದಕ್ಷಿಣದ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ (Ram Gopal Verma) ವ್ಯಂಗ್ಯವಾಡಿದ್ದಾರೆ. ತಮ್ಮ ಮಾತಿನಲ್ಲಿ ಕೆಜಿಎಫ್ 2 ಚಿತ್ರವನ್ನು ಎಳೆತಂದಿದ್ದಾರೆ.

    ಪಠಾಣ್ ಗಳಿಕೆಯ ವಿಚಾರದಲ್ಲಿ ಕೆಜಿಎಫ್ 2 (KGF 2) ಸಿನಿಮಾವನ್ನು ಹಿಂದಿಕ್ಕಿದೆ ಎಂದು ಬಣ್ಣಿಸಲಾಗಿತ್ತು. ಕೆಜಿಎಫ್ 2 ಚಿತ್ರಕ್ಕಿಂತಲೂ ಪಠಾಣ್ ಹಿಂದಿಯಲ್ಲಿ ಹೆಚ್ಚು ಹಣ ಗಳಿಕೆ ಮಾಡಿದೆ ಎಂದು ಸಿನಿ ಪಂಡಿತರು ಲೆಕ್ಕಾಚಾರ ಹಾಕಿದ್ದರು. ಆದರೆ, ಈ ಲೆಕ್ಕಾಚಾರ ವರ್ಮಾಗೆ ಸರಿ ಬಂದಂತೆ ಕಾಣುತ್ತಿಲ್ಲ. ಹಾಗಾಗಿಯೇ ಶಾರುಖ್ ಮತ್ತು ಯಶ್ ಗೆ (Yash) ಹೋಲಿಕೆ ಮಾಡಿ, ಪಠಾಣ್ ಚಿತ್ರಕ್ಕೆ ಟಾಂಗ್ ಕೊಟ್ಟಿದ್ದಾರೆ. ಇದನ್ನೂ ಓದಿ: ಟಾಲಿವುಡ್ ನಟ ನಾನಿಗೆ ಮೃಣಾಲ್ ಠಾಕೂರ್ ನಾಯಕಿ

    ಶಾರುಖ್ ಖಾನ್ ಬಾಲಿವುಡ್ ನಲ್ಲಿ ಬೇರೂರಿರುವ ನಟ. ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಸಾಕಷ್ಟು ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಆದರೆ, ಯಶ್ ಬಾಲಿವುಡ್ ಗೆ ಏನೂ ಅಲ್ಲ. ಹೊಸಬ. ಬಾಲಿವುಡ್ ಗೆ ಪರಿಚಯವೇ ಇಲ್ಲದ ಯಶ್ ಐನೂರು ಕೋಟಿ ಗಳಿಕೆ ಮಾಡಿದ್ದಾರೆ. ಹಾಗಾಗಿ ಶಾರುಖ್ ಗೆಲುವು ನನಗೆ ಗೆಲುವು ಅನಿಸುವುದಿಲ್ಲ ಎಂದು ಅವರು ಹೇಳಿದ್ದಾರೆ. ನನಗೆ ಅದೊಂದು ಗೆಲುವೂ ಅನಿಸುವುದಿಲ್ಲ ಎಂದು ಬರೆದುಕೊಂಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಬಾಲಿವುಡ್‌ನತ್ತ ಯಶ್, ರಾವಣನಾಗಿ ಅಬ್ಬರಿಸುತ್ತಾರಾ ರಾಕಿಂಗ್ ಸ್ಟಾರ್?

    ಬಾಲಿವುಡ್‌ನತ್ತ ಯಶ್, ರಾವಣನಾಗಿ ಅಬ್ಬರಿಸುತ್ತಾರಾ ರಾಕಿಂಗ್ ಸ್ಟಾರ್?

    `ಕೆಜಿಎಫ್ 2′ (Kgf 2) ಯಶಸ್ಸಿನ ಬಳಿಕ ಯಶ್ ಏನ್ಮಾಡ್ತಿದ್ದಾರೆ ಎಂದು ಅಭಿಮಾನಿಗಳು ಕಾದು ಕುಳಿತಿರುವ ಬೆನ್ನಲ್ಲೇ ಸ್ಯಾಂಡಲ್‌ವುಡ್‌ನಿಂದ ಬಾಲಿವುಡ್‌ವರೆಗೂ ಯಶ್ ಮುಂದಿನ ಸಿನಿಮಾ ಬಗ್ಗೆ ಚರ್ಚೆಯಾಗುತ್ತಿದೆ. ಹೀಗಿರುವಾಗ ಬಾಲಿವುಡ್‌ನಿಂದ ರಾಕಿಂಗ್ ಸ್ಟಾರ್‌ಗೆ ಬಿಗ್ ಆಫರ್‌ವೊಂದು ಬಂದಿದೆ.

    ಬಾಲಿವುಡ್‌ನಲ್ಲಿ (Bollywood) ರಾಮಾಯಣ ಆಧರಿಸಿ ಸಿನಿಮಾ ಮಾಡಲು ತೆರೆಮರೆಯಲ್ಲಿ ತಯಾರಿ ನಡೆಯುತ್ತಿದೆ. ಈ ಚಿತ್ರದಲ್ಲಿ ರಾಮನಾಗಿ ರಣ್‌ಬೀರ್ ಕಪೂರ್ (Ranbir Kapoor) ಫೈನಲ್ ಆಗಿದ್ರೆ ರಾವಣನಾಗಿ ಹೃತಿಕ್ ರೋಷನ್ ಫಿಕ್ಸ್ ಆಗಿತ್ತು. ಆದರೆ ಹೃತಿಕ್ ಚಿತ್ರತಂಡದಿಂದ ಹೊರಬಂದಿದ್ದಾರೆ. ಅವರ ಬದಲು ಈಗ ಯಶ್‌ಗೆ (Yash) ರಾವಣನ ರೋಲ್ ಮಾಡಲು ಬುಲಾವ್ ನೀಡಿದ್ದಾರೆ.

    ರಾವಣ ನೆಗೆಟಿವ್ ಶೇಡ್ ಇರುವ ಪಾತ್ರವಾಗಿರುವ ಕಾರಣ, ಚಿತ್ರಕ್ಕೆ ಹೃತಿಕ್ ರೋಷನ್ ನೋ ಎಂದಿದ್ದಾರೆ. ಈಗ ರಾವಣನ ಪಾತ್ರಕ್ಕೆ ಯಶ್ ಅವರಿಗೆ ಆಫರ್ ನೀಡಲಾಗಿದೆ. ಈ ಹಿಂದೆ `ವಿಕ್ರಮ್ ವೇದ’ ಸಿನಿಮಾದಲ್ಲಿ ಹೃತಿಕ್ ನೆಗೆಟಿವ್ ಶೇಡ್‌ನಲ್ಲಿ ನಟಿಸಿದ್ದರು. ಈಗ ಮತ್ತೆ ಇಂತಹದ್ದೇ ಪಾತ್ರ ಬೇಡ ಎಂದು ನಟ ನೋ ಹೇಳಿದ್ದಾರೆ. ಹಾಗಾಗಿ `ಕೆಜಿಎಫ್ 2′ ಸ್ಟಾರ್‌ಗೆ ಈ ಆಫರ್ ನೀಡಲಾಗಿದೆ. ಇದನ್ನೂ ಓದಿ: `ಸಾಕ್ಷಾತ್ಕಾರ’ ನಟಿ ಜಮುನಾ ಬಯೋಪಿಕ್‌ನಲ್ಲಿ ತಮನ್ನಾ ಭಾಟಿಯಾ

    ಈಗಾಗಲೇ ಈ ಸಿನಿಮಾ, ಪಾತ್ರದ ಬಗ್ಗೆ ಯಶ್ ಜೊತೆ ಒಂದು ಸುತ್ತಿನ ಮಾತುಕತೆ ನಡೆದಿದ್ದು, ರಾವಣನಾಗಿ ಅಬ್ಬರಿಸಲು ಯಶ್ ಗ್ರೀನ್ ಸಿಗ್ನಲ್ ನೀಡುತ್ತಾರಾ ಎಂಬುದನ್ನ ಕಾದುನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಪ್ಯಾನ್ ಇಂಡಿಯಾ ಸ್ಟಾರ್ ನಟಿ ಶ್ರೀನಿಧಿ ಶೆಟ್ಟಿ ಸಂಭಾವನೆ ಕೇಳಿದ್ರೆ ಶಾಕ್ ಆಗ್ತೀರಾ

    ಪ್ಯಾನ್ ಇಂಡಿಯಾ ಸ್ಟಾರ್ ನಟಿ ಶ್ರೀನಿಧಿ ಶೆಟ್ಟಿ ಸಂಭಾವನೆ ಕೇಳಿದ್ರೆ ಶಾಕ್ ಆಗ್ತೀರಾ

    `ಕೆಜಿಎಫ್’ (Kgf) ಮತ್ತು `ಕೆಜಿಎಫ್ 2′ ಸಕ್ಸಸ್ ನಂತರ ಶ್ರೀನಿಧಿ ಶೆಟ್ಟಿ (SrinidhI Shetty) ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಮಿಂಚ್ತಿದ್ದಾರೆ. ಹೀಗಿರುವಾಗ ಮಂಗಳೂರು ಬ್ಯೂಟಿ ಶ್ರೀನಿಧಿ ತಮ್ಮ ಸಂಭಾವನೆಯನ್ನ ಹೆಚ್ಚಿಸಿಕೊಂಡಿದ್ದಾರೆ.

    ಮಾಡೆಲ್ ಆಗಿದ್ದವರು ಶ್ರೀನಿಧಿ ಶೆಟ್ಟಿ, ಪ್ರಶಾಂತ್ ನೀಲ್ ನಿರ್ದೇಶನದ `ಕೆಜಿಎಫ್’ ಮೂಲಕ ಯಶ್‌ಗೆ (Yash) ನಾಯಕಿಯಾಗಿ ಎಂಟ್ರಿ ಕೊಟ್ಟರು. ರೀನಾ ಆಗಿ ಸೈ ಎನಿಸಿಕೊಂಡರು. ಬಳಿಕ `ಕೆಜಿಎಫ್ ಪಾರ್ಟ್ 2’ನಲ್ಲೂ (Kgf 2) ಅಚ್ಚುಕಟ್ಟಾಗಿ ನಟಿಸಿದ್ದರು. ಈ ಸಿನಿಮಾದಿಂದ ಪ್ಯಾನ್ ಇಂಡಿಯಾ ಸ್ಟಾರ್ ನಟಿಯಾಗಿ ಮಿಂಚಿದ್ದರು ಕೂಡ ಸಿನಿಮಾ ಸೆಲೆಕ್ಷನ್ ವಿಷ್ಯದಲ್ಲಿ ಸಖತ್ ಚ್ಯೂಸಿಯಾದರು.

    ಇತ್ತೀಚೆಗೆ ತಮಿಳು ನಟ ವಿಕ್ರಮ್ (Vikram) ನಟನೆಯ `ಕೋಬ್ರಾ’ದಲ್ಲಿ  (Cobra) ನಟಿಸಿದ್ದರು. ಈ ನಟಿಗೆ ಬೇಡಿಕೆ ಹೆಚ್ಚಾಗುತ್ತಿದ್ದಂತೆ ತನ್ನ ಸಂಭಾವನೆಯನ್ನ ಕೂಡ ಹೆಚ್ಚಿಸಿಕೊಂಡಿದ್ದಾರೆ. ಶ್ರೀನಿಧಿ ಶೆಟ್ಟಿ ತಮ್ಮ ಮುಂಬರುವ ಚಿತ್ರಗಳಿಗೆ 5 ಕೋಟಿ ರೂ. ಡಿಮ್ಯಾಂಡ್ ಮಾಡ್ತಿದ್ದಾರಂತೆ. ಈ ಸುದ್ದಿ ಕೇಳಿ ನಿರ್ಮಾಪಕರು ದಂಗಾಗಿದ್ದಾರೆ. ಇದನ್ನೂ ಓದಿ: ಬಿಗ್ ಬಾಸ್ ನಂದು- ಜಶ್ವಂತ್ ಬ್ರೇಕಪ್‌ಗೆ ಕಾರಣವಾದ್ರಾ ಸಾನ್ಯ ಅಯ್ಯರ್?

    ಶ್ರೀನಿಧಿ ಇದೀಗ ಹೊಸ ಕಥೆಗಳನ್ನ ಕೇಳ್ತಿದ್ದಾರೆ. ಸೂಕ್ತ ಕಥೆಯ ಮೂಲಕ ನಟಿ ಬೆಳ್ಳಿತೆರೆಯಲ್ಲಿ ಮಿಂಚಲಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಹೋರಾಡುತ್ತಾ ಸತ್ತರೆ ನನಗೇನೂ ಬೇಸರವಿಲ್ಲ : ನಟ ಯಶ್

    ಹೋರಾಡುತ್ತಾ ಸತ್ತರೆ ನನಗೇನೂ ಬೇಸರವಿಲ್ಲ : ನಟ ಯಶ್

    ಮ್ಮ ವಿರುದ್ಧ ಬಾಯಿಗೆ ಬಂದಂತೆ ಮಾತನಾಡುತ್ತಿರುವ ಜನರಿಗೆ ಯಶ್ ಖಡಕ್ಕೆ ಉತ್ತರವನ್ನೇ ಕೊಟ್ಟಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು ಕೆಲವರು ನನ್ನ ವಿರುದ್ಧ ತಮಗೆ ತೋಚಿದಂತೆ ಮಾತನಾಡುತ್ತಿದ್ದಾರೆ. ಆ ಕುರಿತು ನನಗೇನೂ ಬೇಸರವಿಲ್ಲ. ಗೆಲುವನ್ನು ನಿಭಾಯಿಸುವುದಕ್ಕಿಂತ, ಹೊಸ ಹೊಸ ಗೆಲುವನ್ನು ಕಾಣುವುದು ನನಗಿಷ್ಟ. ಹೋರಾಡುತ್ತ ಮೃತಪಟ್ಟರೆ ನನಗೇನೂ ಬೇಸರವಿಲ್ಲ, ನಾನು ಹೋರಾಟದಲ್ಲೇ ಇದ್ದೀನಲ್ಲ ಅದು ಮುಖ್ಯವಾಗಬೇಕು’ ಎಂದಿದ್ದಾರೆ.

    ಕೆಜಿಎಫ್ 2 ಸಿನಿಮಾದ ನಂತರ ಅವರ ಮುಂದೆ ಹಲವಾರು ಪ್ರಶ್ನೆಗಳು ಎದುರಾದವಂತೆ. ಆ ಕುರಿತು ಅವರು ಮಾತನಾಡಿದ್ದಾರೆ. ಕೆಜಿಎಫ್ ಗೆಲುವಿನ ನಂತರ ಯಾಕೆ ನೀವು ಮತ್ತೆ ಸಿನಿಮಾ ಮಾಡುತ್ತಿಲ್ಲ. ಆ ಗೆಲುವನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸಿಕೊಳ್ಳಬೇಕಿತ್ತು ಅಲ್ಲವಾ? ಕೆಜಿಎಫ್ 3 ಮಾಡದೇ ನಿಮಗೆ ವಿಧಿಯಿಲ್ಲ ಈ ರೀತಿಯ ಮಾತುಗಳನ್ನು ಆಡಿದ್ದಾರಂತೆ. ಆದರೆ, ಈ ಎಲ್ಲ ಪ್ರಶ್ನೆಗಳಿಗೂ ಮುಂದಿನ ದಿನಗಳಲ್ಲಿ ಉತ್ತರ ಸಿಗುವಂತೆ ಮಾಡುವೆ ಎಂದು ಯಶ್ ಹೇಳಿಕೊಂಡಿದ್ದಾರೆ.

    ಯಶ್ ಮುಂದಿನ ಸಿನಿಮಾ ಯಾವುದು ಎನ್ನುವುದರ ಕುರಿತು ಹಲವು ತಿಂಗಳಿಂದ ಚರ್ಚೆ ಮಾಡಲಾಗುತ್ತಿದೆ. ಆದರೆ, ಈ ಕುರಿತು ಅವರು ಯಾವುದೇ ರೀತಿಯ ಕ್ಲ್ಯಾರಿಟಿ ನೀಡಿಲ್ಲ. ಇತ್ತೀಚೆಗೆ ಬರುತ್ತಿರುವ ಸುದ್ದಿಗಳ ಪ್ರಕಾರ ಕೆವಿಎನ್ ಪ್ರೊಡಕ್ಷನ್ ನಿರ್ಮಾಣದ ಸಿನಿಮಾದಲ್ಲಿ ಯಶ್ ನಟಿಸಲಿದ್ದಾರಂತೆ. ಇದೊಂದು ಭಾರೀ ಬಜೆಟ್ ಸಿನಿಮಾವಾಗಿದ್ದು, ನಾಲ್ಕು ನೂರು ಕೋಟಿ ರೂಪಾಯಿ ವೆಚ್ಚದಲ್ಲಿ ಚಿತ್ರ ನಿರ್ಮಾಣವಾಗಲಿದೆಯಂತೆ. ಇದನ್ನೂ ಓದಿ:ಅಬ್ಬಬ್ಬಾ ಎನಿಸುವಷ್ಟಿದೆ ಸಮಂತಾ ಧರಿಸಿದ್ದ ಈ ಸೀರೆಯ ಬೆಲೆ?

    ಮೊನ್ನೆಯಷ್ಟೇ ತಮ್ಮ ಹೊಸ ಸಿನಿಮಾದ ಅಪ್ ಡೇಟ್ ಅನ್ನು ಅತೀ ಶೀಘ್ರದಲ್ಲೇ ನೀಡುವುದಾಗಿ ಯಶ್ ತಿಳಿಸಿದ್ದಾರೆ. ಹುಟ್ಟು ಹಬ್ಬದಂದು ಕೆಲವು ಮಾಹಿತಿಗಳನ್ನು ನೀಡಿರುವ ಅವರು, ದೊಡ್ಡ ಮಟ್ಟದಲ್ಲಿ ಪ್ಲ್ಯಾನ್ ಮಾಡಲಾಗುತ್ತಿದೆ. ನಿಮಗೆ ದೊಡ್ಡ ಸುದ್ದಿಯನ್ನೇ ನೀಡುತ್ತೇನೆ ಎಂದು ಅವರು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದರು. ಆ ದೊಡ್ಡ ಸುದ್ದಿಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ‘ಕೆಜಿಎಫ್ 2’ ಬಗ್ಗೆ ನಾನು ಮಾತನಾಡಿದ್ದೇ  ಬೇರೆ, ಚರ್ಚೆ ಆಗಿದ್ದೇ ಬೇರೆ: ನಟ ಕಿಶೋರ್

    ‘ಕೆಜಿಎಫ್ 2’ ಬಗ್ಗೆ ನಾನು ಮಾತನಾಡಿದ್ದೇ ಬೇರೆ, ಚರ್ಚೆ ಆಗಿದ್ದೇ ಬೇರೆ: ನಟ ಕಿಶೋರ್

    ತಾವು ಕೆಜಿಎಫ್ 2 ಸಿನಿಮಾ ಬಗ್ಗೆ ಆಡಿದ ಮಾತನ್ನು ತಪ್ಪಾಗಿ ಗ್ರಹಿಸಲಾಗಿದೆ ಎಂದು ನಟ ಕಿಶೋರ್ ಅಭಿಪ್ರಾಯ ಪಟ್ಟಿದ್ದಾರೆ. ಈ ಕುರಿತು ಅವರು ಸೋಷಿಯಲ್ ಮೀಡಿಯಾದಲ್ಲಿ ಸುದೀರ್ಘವಾಗಿ ಬರೆದುಕೊಂಡಿದ್ದಾರೆ. ತಾವು ಆಡದ ಪದಗಳನ್ನು ಬಳಸಿ ತಪ್ಪಾಗಿ ಗ್ರಹಿಸುವಂತೆ ಮಾಡಲಾಗಿದೆ. ನಾನು ಕೆಲವು ಮಾತುಗಳನ್ನು ಆಡಿರಲೇ ಇಲ್ಲ, ಅದನ್ನು ಬೇರೆ ರೀತಿಯಲ್ಲಿ ತಲುಪಿಸುವ ಪ್ರಯತ್ನ ಆಗಿದೆ. ಇದಕ್ಕೆ ನನ್ನ ವಿಷಾದವಿದೆ ಎಂದು ಕಿಶೋರ್ ಬರೆದುಕೊಂಡಿದ್ದಾರೆ.

    ರಶ್ಮಿಕಾ ವಿಷಯದ ಚರ್ಚೆಯಲ್ಲಿ ಆಯ್ಕೆಯ ಸ್ವಾತಂತ್ರ್ಯದ ಮಾತುಗಳ ನಡುವೆ ಹೇಗ ಸುಳಿದ ಮಾತುಗಳಲ್ಲಿ ಯಾರ ಮನಸ್ಸನ್ನೂ ನೋಯಿಸುವ ಉದ್ದೇಶವಿರಲಿಲ್ಲ. ಮೈಂಡ್ ಲೆಸ್ ನನ್ನ ಪದವಲ್ಲ. ಚರ್ಚಿಸಲು, ಚಿಂತಿಸಲು ನಿಜವಾದ ಸಮಸ್ಯೆಗಳು ಹಲವಿರುವಾಗ ನನ್ನ ಲೋಕಾಭಿರಾಮದ ಯಾವುದೇ ಮಾತು ಚರ್ಚೆಗೆ ಗ್ರಾಸವಾಗುವುದೋ, ಜನರ ಸಮಯ ಹಾಳು ಮಾಡುವುದೋ ನನ್ನ ಮಟ್ಟಿಗೆ ಅಕ್ಷಮ್ಯ. ಆದರೂ ಅದಕ್ಕಾಗಿ ಕ್ಷಮೆ ಇರಲಿ ಎಂದು ನಟ ಕಿಶೋರ್ ಪ್ರತಿಕ್ರಿಯಿಸಿದ್ದಾರೆ.

    ಕಿಶೋರ್ ದಿನಕ್ಕೊಂದು ಆಡುತ್ತಿರುವ ಮಾತುಗಳು ಭಾರತೀಯ ಸಿನಿಮಾ ರಂಗದಲ್ಲಿ ಸಾಕಷ್ಟು ಚರ್ಚೆಯನ್ನು ಹುಟ್ಟು ಹಾಕುತ್ತಿವೆ. ಕಾಂತಾರ ಸಿನಿಮಾದಿಂದ ಶುರುವಾದ ಅವರ ಮಾತುಗಳು, ಕೆಜಿಎಫ್ 2 ಅನ್ನೂ ಸೇರಿಸಿಕೊಂಡವು. ಇದೀಗ ಬಾಲಿವುಡ್ ನಲ್ಲಿ ನಡೆಯುತ್ತಿರುವ ಬಾಯ್ಕಾಟ್ ಕುರಿತಾಗಿಯೂ ಅವರು ಬರೆದುಕೊಂಡಿದ್ದಾರೆ. ಬಾಲಿವುಡ್ ಅನ್ನು ನಾವು ರಕ್ಷಿಸಬೇಕು. ಇಡೀ ದೇಶವೇ ಬಾಲಿವುಡ್ ಪರ ನಿಲ್ಲಬೇಕು ಎಂದು ಅವರು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಬಾಲಿವುಡ್ ನಿರ್ದೇಶಕ ರೋಹಿತ್ ಶೆಟ್ಟಿಗೆ ಶೂಟಿಂಗ್‌ ವೇಳೆ ಅಪಘಾತ: ಆಸ್ಪತ್ರೆಗೆ ದಾಖಲು

    ನಾನಾ ಕಾರಣಗಳಿಂದಾಗಿ ಕಳೆದ ಮೂರ್ನಾಲ್ಕು ವರ್ಷಗಳಿಂದ ಬಾಲಿವುಡ್ ಅನ್ನು ತೆಗಳುವ ವಾತಾವರಣ ಭಾರತದಲ್ಲಿ ಉಂಟಾಗಿದೆ. ಅನೇಕ ಸಿನಿಮಾಗಳು ಬಾಯ್ಕಾಟ್ ಬಿಸಿಗೆ ಬೆಂದು ಹೋದವು. ಅನೇಕ ಕಲಾವಿದರು ವೈಯಕ್ತಿಕ ನಿಂದನೆಗೆ ಗುರಿಯಾದರು. ಹಲವಾರು ನಿರ್ದೇಶಕರು ಹಾಗೂ ತಂತ್ರಜ್ಞರು ಕೂಡ ನಿಂದನೆಗೆ ಒಳಗಾದರು. ಅದರಲ್ಲೂ ಶಾರುಖ್ ಖಾನ್, ಸಲ್ಮಾನ್ ಖಾನ್ ರೀತಿಯ ಖಾನ್ ಖಾಂದಾನ್ ಗಳನ್ನೂ ಒಟ್ಟಾಗಿಸಿ ಸೇರಿಸಿ ಮಂಗಳಾರತಿ ಮಾಡಲಾಯಿತು. ಈ ಕಡೆ ದೀಪಿಕಾ ಪಡುಕೋಣೆ, ಕಂಗನಾ ರಣಾವತ್ ಕೂಡ ಬೈಯಿಸಿಕೊಳ್ಳುವುದನ್ನು ಬಿಡಲಿಲ್ಲ.

    ಇದೆಲ್ಲವನ್ನೂ ಕಂಡಿರುವ ಕಿಶೋರ್, ಇನ್ಸ್ಟಾದಲ್ಲಿ ಸುದೀರ್ಘ ಬರಹವೊಂದನ್ನು ಪೋಸ್ಟ್ ಮಾಡಿದ್ದಾರೆ. ಆ ಬರಹದಲ್ಲಿ ‘ಇಡೀ ದೇಶದ ಚಿತ್ರರಂಗ ಒಕ್ಕೊರಲಿನಿಂದ ಬಾಲಿವುಡ್ ನ ವಿರುದ್ಧ ನಡೆಯುತ್ತಿರುವ ಬಾಯ್ಕಾಟ್ ಟ್ರೆಂಡನ್ನು, ಮತಾಂಧ ಗೂಂಡಾಗಿರಿಯನ್ನು, ದ್ವೇಷದ ರಾಜಕೀಯವನ್ನು ಖಂಡಿಸಿ ಬಾಲಿವುಡ್ ನ ಪರವಾಗಿ ನಿಲ್ಲುವ ಕಾಲ ಬಂದಿದೆ. ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವದಲ್ಲಿ ಒಂದು ವ್ಯಾಪಾರ ಅಥವಾ ಉದ್ಯಮದ ಸುರಕ್ಷತೆಯನ್ನು ಖಚಿತಪಡಿಸಲು ಸಾಧ್ಯವಾಗದಿರುವುದು ಸರ್ಕಾರಗಳ ವೈಫಲ್ಯಕ್ಕೆ ಸಾಕ್ಷಿ. ಇಷ್ಟಾದರೂ ಚಿತ್ರರಂಗದವರು ಮಾತನಾಡದೇ ಕೂತಿರುವ ಹೆದರಿಕೆಯ ವಾತಾವರಣ ಸೃಷ್ಟಿಯಾಗಿರುವುದು, ಕಾನೂನು ಸುವ್ಯವಸ್ಥೆಯ ಜವಾಬ್ದಾರಿ ಹೊತ್ತ ಸರ್ಕಾರಿ ಅಧಿಕಾರಿಗಳಿಗೆ ನಾಚಿಕೆಗೇಡಿನ ಸಂಗತಿ. ಇದು ಸಮಾಜವನ್ನು ವಿಷಪೂರಿತಗೊಳಿಸುವ ಸ್ಪಷ್ಟ ಕಾನೂನು ಉಲ್ಲಂಘನೆಯಾಗಿದ್ದು, ಇದನ್ನು ತಡೆಯಬೇಕಿದೆ, ಶಿಕ್ಷಿಸಬೇಕಾಗಿದೆ. ದ್ವೇಷದ ಈ ಬೆಂಕಿ ಸ್ಥಳೀಯ ಚಿತ್ರೋದ್ಯಮಗಳಿಗೂ ವ್ಯಾಪಿಸುವ ಮುನ್ನ’ ಎಂದು ಹೇಳಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k