Tag: KGF 1

  • ಮತ್ತೆ ರಾಕಿ ಭಾಯ್ ಅಬ್ಬರ- ‘ಕೆಜಿಎಫ್ ಚಾಪ್ಟರ್ 1’ ಮರು ಬಿಡುಗಡೆ

    ಮತ್ತೆ ರಾಕಿ ಭಾಯ್ ಅಬ್ಬರ- ‘ಕೆಜಿಎಫ್ ಚಾಪ್ಟರ್ 1’ ಮರು ಬಿಡುಗಡೆ

    ನ್ಯಾಷನಲ್ ಸ್ಟಾರ್ ಯಶ್ (Yash) ನಟಿಸಿ, ಪ್ರಶಾಂತ್ ನೀಲ್ (Prashanth Neel) ನಿರ್ದೇಶಿಸಿದ ‘ಕೆಜಿಎಫ್ 1’ (KGF Chapter 1) ಚಿತ್ರ ರೀ ರಿಲೀಸ್ ಆಗಿದೆ. ಮತ್ತೊಮ್ಮೆ ರಾಕಿ ಭಾಯ್ ಆಗಿ ಯಶ್ (Yash) ಅಬ್ಬರಿಸುತ್ತಿದ್ದಾರೆ. ಆದರೆ ಕರ್ನಾಟಕದಲ್ಲಿ ಅಲ್ಲ, ಬದಲಿದೆ ತೆಲುಗು ರಾಜ್ಯಗಳಲ್ಲಿ ಸಿನಿಮಾ ತೆರೆ ಕಂಡಿದೆ. ಇದನ್ನೂ ಓದಿ:ರಶ್ಮಿಕಾ ಫ್ಯಾನ್ಸ್‌ಗೆ ಸಿಹಿಸುದ್ದಿ- ವರ್ಷಾಂತ್ಯಕ್ಕೆ ಒಂದೇ ದಿನ ಎರಡೆರಡು ಸಿನಿಮಾ ರಿಲೀಸ್

    ಜೂನ್ 21ರಂದು ಯಶ್ ನಟನೆಯ ಬ್ಲಾಕ್ ಬಸ್ಟರ್ ಕೆಜಿಎಫ್ 1 ಸಿನಿಮಾ ಮಗದೊಮ್ಮೆ ರಿಲೀಸ್ ಆಗಿ ಮೆಚ್ಚುಗೆ ಪಡೆಯುತ್ತಿದೆ. ಹೈದರಾಬಾದ್‌ನ ಸುದರ್ಶನ್ ಚಿತ್ರಮಂದಿರದಲ್ಲಿ ‘ಕೆಜಿಎಫ್ 1’ ತೆಲುಗು ವರ್ಷನ್ ಎರಡು ಶೋಗಳನ್ನು ಪ್ರದರ್ಶಿಸಲಾಗುತ್ತಿದೆ. ಇನ್ನೂ ಬೇರೆ ನಗರಗಳಲ್ಲಿಯೂ ಸಿನಿಮಾ ರಿಲೀಸ್ ಆಗಿದೆ.

    ‘ಕೆಜಿಎಫ್’ ರೀ ರಿಲೀಸ್‌ಗೂ ತೆಲುಗು ಪ್ರೇಕ್ಷಕರಿಂದ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ತಮ್ಮದೇ ನೆಲದ ಸ್ಟಾರ್ ನಟನ ಸಿನಿಮಾ ಎಂಬಂತೆಯೇ ಮತ್ತೊಮ್ಮೆ ಅದ್ಧೂರಿಯಾಗಿ ಸ್ವಾಗತಿಸಿದ್ದಾರೆ. ಚಿತ್ರ ಉತ್ತಮ ಗಳಿಕೆ ಕಾಣ್ತಿದೆ.


    2018ರಲ್ಲಿ ತೆರೆಕಂಡ ‘ಕೆಜಿಎಫ್’ (KGF) ಸಿನಿಮಾದಲ್ಲಿ ಯಶ್‌ಗೆ ನಾಯಕಿಯಾಗಿ ಶ್ರೀನಿಧಿ ಶೆಟ್ಟಿ (Srinidhi Shetty) ನಟಿಸಿದ್ದರು. ಯಶ್ ತಾಯಿಯ ಪಾತ್ರದಲ್ಲಿ ಅರ್ಚನಾ ಜೀವತುಂಬಿದ್ದರು. ಈ ಚಿತ್ರವನ್ನು ಹೊಂಬಾಳೆ ಸಂಸ್ಥೆ ನಿರ್ಮಾಣ ಮಾಡಿತ್ತು.

  • ಶ್ರೀನಿಧಿ ಬ್ಯೂಟಿಗೆ ರಕ್ಷಿತ್ ಫಿದಾ, ಶೆಟ್ರೆ ಏನ್ ವಿಷ್ಯ ಎಂದು ಕಾಲೆಳೆದ ಫ್ಯಾನ್ಸ್

    ಶ್ರೀನಿಧಿ ಬ್ಯೂಟಿಗೆ ರಕ್ಷಿತ್ ಫಿದಾ, ಶೆಟ್ರೆ ಏನ್ ವಿಷ್ಯ ಎಂದು ಕಾಲೆಳೆದ ಫ್ಯಾನ್ಸ್

    `ಕೆಜಿಎಫ್ 2′ (KGF 2) ಬ್ಯೂಟಿ ರೀನಾ ಅಲಿಯಾಸ್ ಶ್ರೀನಿಧಿ ಶೆಟ್ಟಿ (Srinidhi Shetty), ಪ್ಯಾನ್ ಇಂಡಿಯಾ ಸ್ಟಾರ್ ನಾಯಕಿಯಾಗಿ ಮಿಂಚಿದ ಮೇಲೆ ಕರಾವಳಿ ನಟಿಗೆ ಡಿಮ್ಯಾಂಡ್ ಜಾಸ್ತಿಯಾಗಿದೆ. ಇನ್ನೂ ಬಿಡುವಿದ್ದಾಗ ಆಗಾಗ ಚೆಂದದ ಫೋಟೋಗಳನ್ನ ನಟಿ ಶೇರ್ ಮಾಡ್ತಾರೆ. ಈ ಬಾರಿ ಕೂಡ ಕ್ಯೂಟ್ ಫೋಟೋವೊಂದನ್ನ ಸೋಷಿಯಲ್ ಮೀಡಿಯಾದಲ್ಲಿ ಶ್ರೀನಿಧಿ ಪೋಸ್ಟ್ ಮಾಡಿದ್ದರು. ಶೆಟ್ರ ಲುಕ್‌ಗೆ ರಕ್ಷಿತ್ ಫಿದಾ ಆಗಿದ್ದಾರೆ. ಇದನ್ನೂ ಓದಿ: ಡಿವೋರ್ಸ್‌ ಬಳಿಕ ಐಟಂ ಡ್ಯಾನ್ಸ್‌ ಮಾಡಬೇಡ ಎಂದಿದ್ರು: ನಟಿ ಸಮಂತಾ

    ಸಿನಿಮಾ ಜಗತ್ತಿನಲ್ಲಿ ಸೆನ್ಸೇಷನ್ ಕ್ರಿಯೆಟ್ ಮಾಡಿದ ಸಿನಿಮಾ ಕೆಜಿಎಫ್ 1, ಕೆಜಿಎಫ್2 ಚಿತ್ರದಲ್ಲಿ ನಟಿಸಿರುವ ಶ್ರೀನಿಧಿ ಶೆಟ್ಟಿ, ಆಗಾಗ ಹೊಸ ಫೋಟೋಶೂಟ್‌ನಿಂದ ನಟಿ ಮಿಂಚ್ತಿರುತ್ತಾರೆ. ಮಾರ್ಚ್ 28ರಂದು ಶ್ರೀನಿಧಿ, ನೇರಳೆ ಬಣ್ಣದ ಡ್ರೆಸ್ ಧರಿಸಿರುವ ಸೆಲ್ಫಿ ಫೋಟೋವೊಂದನ್ನ ಹಂಚಿಕೊಂಡಿದ್ದಾರೆ. ಬಳಿಕ `ಹಾಗೆ ಸುಮ್ಮನೆ’ ಎಂದು ಅಡಿಬರಹ ನೀಡಿದ್ದಾರೆ. ಈ ಪೋಸ್ಟ್ ನೋಡಿ ನಟ ರಕ್ಷಿತ್ ಶೆಟ್ಟಿ, ನಟಿಯ ಕಾಲೆಳೆದಿದ್ದಾರೆ.

    ನಟಿ ಶ್ರೀನಿಧಿ ಶೆಟ್ಟಿ ಪೋಸ್ಟ್ ನೋಡಿ ರಕ್ಷಿತ್ ಶೆಟ್ಟಿ (Rakshit Shetty), `ಆಯ್ತು ಶೆಟ್ರೆ ಗೊತ್ತಾಯ್ತು’ ಎಂದು ತುಳುವಿನಲ್ಲಿ ಕಾಮೆಂಟ್ ಮಾಡಿದ್ದಾರೆ. ಬಳಿಕ ಹೌದಾ.. ಗೊತ್ತಾಯ್ತಾ ಶೆಟ್ರೆ, ಯಾರಿಗೂ ಹೇಳಬೇಡಿ ಎಂದು ರಕ್ಷಿತ್‌ಗೆ ಶ್ರೀನಿಧಿ ರಿಪ್ಲೈ ಕೊಟ್ಟಿದ್ದಾರೆ. ಇಬ್ಬರ ತುಳು ಸಂಭಾಷನಣೆ ನೋಡಿ ಫ್ಯಾನ್ಸ್ ಖುಷಿಪಟ್ಟಿದ್ದಾರೆ. ಜೊತೆಗೆ ಏನ್ ಶೆಟ್ರೆ ಸಮಾಚಾರ ಎಂದು ಫ್ಯಾನ್ಸ್ ಕಾಲೆಳೆದಿದ್ದಾರೆ.

  • ‘ಕಬ್ಜ’ ಮೊದಲ ದಿನದ ಕಲೆಕ್ಷನ್ 50 ಕೋಟಿ: ‘ಕಾಂತಾರ’, ‘ಕೆಜಿಎಫ್ 1’ ದಾಖಲೆ ಉಡಿಸ್

    ‘ಕಬ್ಜ’ ಮೊದಲ ದಿನದ ಕಲೆಕ್ಷನ್ 50 ಕೋಟಿ: ‘ಕಾಂತಾರ’, ‘ಕೆಜಿಎಫ್ 1’ ದಾಖಲೆ ಉಡಿಸ್

    ನ್ನಡದ ಮತ್ತೊಂದು ಸಿನಿಮಾ ಭಾರತೀಯ ಸಿನಿಮಾ ರಂಗದಲ್ಲಿ ಹೊಸ ಇತಿಹಾಸ ಬರೆದಿದೆ. ಆರ್.ಚಂದ್ರು ನಿರ್ದೇಶನದ ‘ಕಬ್ಜ’ (Kabzaa) ಸಿನಿಮಾದ ಮೊದಲ ದಿನದ ಕಲೆಕ್ಷನ್ ಕಾಂತಾರ ಮತ್ತು ಕೆಜಿಎಫ್ 1 ಚಿತ್ರಕ್ಕಿಂತ ಹೆಚ್ಚು ಗಳಿಕೆ ಮಾಡಿದೆ. ಗಾಂಧಿನಗರದ ಲೆಕ್ಕಾಚಾರದ ಪ್ರಕಾರ ಮೊದಲ ದಿನದ ಕಲೆಕ್ಷನ್ (Collection) ಬರೋಬ್ಬರಿ 50 ಕೋಟಿ ಎಂದು ಅಂದಾಜಿಸಲಾಗಿದೆ. ಇದು ಭಾರತೀಯ ಸಿನಿಮಾ ರಂಗದಲ್ಲಿ ಮತ್ತೊಂದು ದಾಖಲೆ ಸೃಷ್ಟಿಸಿದೆ.

    ಕೇವಲ ಭಾರತದಲ್ಲಿ ಮಾತ್ರವಲ್ಲ ವಿದೇಶದಿಂದಲೂ ಹಣ ಹರಿದು ಬಂದಿದ್ದು, ಹತ್ತು ಕೋಟಿಗೂ ಹೆಚ್ಚು ಗಳಿಕೆಯನ್ನು ಕಬ್ಜ ಮಾಡಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ನಿನ್ನೆ ಬಿಡುಗಡೆಯಾದಾಗ  ಕೆಲವು ಕಡೆ ಫಸ್ಟ್ ಶೋಗೆ ಪ್ರತಿಕ್ರಿಯೆ ಭಾರೀ ಪ್ರಮಾಣದಲ್ಲಿ ಇಲ್ಲವೆಂದು ಹೇಳಲಾಗಿತ್ತು. ಆದರೆ, ಸಂಜೆ ಅಷ್ಟೊತ್ತಿಗೆ ಅಷ್ಟೂ ಶೋಗಳು ಹೌಸ್ ಫುಲ್ ಪ್ರದರ್ಶನ ಕಂಡಿವೆ. ಮಧ್ಯಾಹ್ನದಿಂದ ಥಿಯೇಟರ್ ಸಂಖ್ಯೆ ಹಾಗೂ ಶೋಗಳ ಸಂಖ್ಯೆ ಕೂಡ ಹೆಚ್ಚಳವಾಗಿದೆ. ಇದನ್ನೂ ಓದಿ: `ನಾಟು ನಾಟು’ ಹಾಡಿಗೆ ಸ್ಟೆಪ್ ಹಾಕಿದ ಕಿಂಗ್ ಕೊಹ್ಲಿ – ವಿರಾಟ್ ಡಾನ್ಸ್‌ಗೆ ಅಭಿಮಾನಿಗಳು ಫಿದಾ

    ಸಿನಿಮಾ ಬಗ್ಗೆಯೂ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಸಿನಿಮಾ ವಿಮರ್ಶಕರು ನಿರ್ದೇಶಕ ಆರ್.ಚಂದ್ರು ಅವರನ್ನು ಹಾಡಿಹೊಗಳಿದ್ದಾರೆ. ಚಂದ್ರು ಹೀಗೂ ಸಿನಿಮಾ ಮಾಡುವುದಕ್ಕೆ ಸಾಧ್ಯವಾ? ಎಂದು ಬಣ್ಣಿಸಿದ್ದಾರೆ. ಅದರಲ್ಲೂ ಸಿನಿಮಾದ ಸೆಕೆಂಡ್ ಆಫ್ ಬಗ್ಗೆ ಪ್ರಂಶಸೆ ವ್ಯಕ್ತ ಪಡಿಸಿದ್ದಾರೆ. ಸುದೀಪ್ ಮತ್ತು ಶಿವರಾಜ್ ಕುಮಾರ್ ಮಾಡಿದ ಪಾತ್ರಗಳ ಬಗ್ಗೆ ಮತ್ತಷ್ಟು ಕುತೂಹಲ ಮೂಡಿಸುವಂತೆ ಬರೆದಿದ್ದಾರೆ.

    ಉಪೇಂದ್ರ (Upendra) ಸ್ವತಃ ನಿರ್ದೇಶಕರಾಗಿದ್ದರೂ ಮೇಕಿಂಗ್ ಬಗ್ಗೆ ಮಾತನಾಡುತ್ತಾ, ಭಾರತೀಯ ಸಿನಿಮಾ ರಂಗಕ್ಕೆ ಮತ್ತೊಬ್ಬ ಅದ್ಭುತ ನಿರ್ದೇಶಕ ಸಿಕ್ಕಿದ್ದಾರೆ ಎಂದು ಮಾಧ್ಯಮಗಳ ಮುಂದೆಯೇ ಆರ್.ಚಂದ್ರು ಅವರನ್ನು ಹೊಗಳಿದ್ದಾರೆ. ಬಾಲಿವುಡ್ ನಲ್ಲೂ ಕಬ್ಜ ಸಿನಿಮಾಗೆ ಅತ್ಯುತ್ತಮ ಪ್ರತಿಕ್ರಿಯೆ ಸಿಕ್ಕಿದ್ದು, ಅನುಪಮ್ ಖೇರ್ ಸೇರಿದಂತೆ ಅನೇಕ ಬಾಲಿವುಡ್ ಸಿಲೆಬ್ರಿಟಿಗಳು ಕನ್ನಡ ಸಿನಿಮಾವನ್ನು ಮೆಚ್ಚಿ ಮಾತನಾಡಿದ್ದಾರೆ. ನಿರ್ದೇಶಕ ಚಂದ್ರು ಅವರನ್ನು ಬಾಲಿವುಡ್ ಗೆ ಸ್ವಾಗತ ಎಂದು ಆಹ್ವಾನಿಸಿದ್ದಾರೆ.