ಕೆಜಿಎಫ್ (KGF) ಖ್ಯಾತಿಯ ಛಾಯಾಗ್ರಾಹಕ ಭುವನ್ ಗೌಡಗೆ (Bhvan Gowda) ಕಂಕಣ ಬಲ ಕೂಡಿಬಂದಿದೆ. ನಿಖಿತಾ ಹೆಸರಿನ ಹುಡುಗಿ ಜೊತೆ ಭುವನ್ ಮದುವೆ ನಡೆದಿದೆ. ಬೆಂಗಳೂರು ಹೊರವಲಯದ ಖಾಸಗಿ ರೆಸಾರ್ಟ್‌ನಲ್ಲಿ ಮದುವೆ ನಡೆದಿದ್ದು ಯಶ್ (Yash), ಶ್ರೀಲೀಲಾ, ಶ್ರೀನಿಧಿ ಶೆಟ್ಟಿ, ಗರುಡ ರಾಮ್, ಪ್ರಶಾಂತ್ ನೀಲ್ ಹಾಗೂ ನಟಿ ಆಶಾ ಭಟ್ ಸೇರಿದಂತೆ ಹಲವು ನಟ, ನಟಿಯರು ಮದುವೆಯಲ್ಲಿ ಉಪಸ್ಥಿತರಿದ್ರು.
ಪ್ರಶಾಂತ್ ನೀಲ್ ಗರಡಿಯಲ್ಲಿ ಹೆಸರು ಮಾಡಿರುವ ಭುವನ್ ಗೌಡ ಸ್ಟಿಲ್ ಫೋಟೋಗ್ರಾಫರ್ ಆಗಿ ಸಿನಿಮಾ ಇಂಡಸ್ಟ್ರಿಗೆ ಕಾಲಿಟ್ಟವರು. ಇದೀಗ ವೃತ್ತಿಯ ಮಧ್ಯೆ ವೈಯಕ್ತಿಕ ಬದುಕಿಗೂ ಸಮಯ ಕೊಟ್ಟು ಮದುವೆಯಾಗಿದ್ದಾರೆ. ಕೆಲವೇ ಕೆಲವು ಆಪ್ತರನ್ನ ಭುವನ್ ಆಹ್ವಾನಿಸಿದ್ದರು ಎಂದು ಕೇಳಿಬಂದಿದೆ. ಪ್ರಾಥಮಿಕ ಮೂಲಗಳ ಪ್ರಕಾರ ಭುವನ್ ಕೈಹಿಡಿದ ಹುಡುಗಿ ಸಿನಿಮಾ ಇಂಡಸ್ಟ್ರಿಗೆ ಸಂಬಂಧಿಸಿದವರಲ್ಲ.
ಉಗ್ರಂ ಚಿತ್ರದ ಮೂಲಕ ಪೂರ್ಣ ಪ್ರಮಾಣದ ಛಾಯಾಗ್ರಾಹಕರಾದ ಭುವನ್ ಗೌಡ ಮೊದಲ ಚಿತ್ರದಲ್ಲೇ ಸೈ ಎನ್ನಿಸಿಕೊಂಡ್ರು. ಬಳಿಕ ಕೆಜಿಎಫ್ ಸರಣಿ ಚಿತ್ರದ ಮೂಲಕ ವಿಶ್ವಮಟ್ಟದಲ್ಲಿ ಹೆಸರು ಮಾಡಿದ್ದಾರೆ. ಬಳಿಕ ಸಲಾರ್ ಇದೀಗ ಜೂ.ಎನ್‌ಟಿಆರ್ ಡ್ರಾö್ಯಗನ್ ಚಿತ್ರಕ್ಕೂ ಇವರೇ ಛಾಯಾಗ್ರಾಹಕರು.
ಕೋಲಾರ: ಸೇತುವೆ (Bridge) ಮೇಲಿಂದ ಕಾರೊಂದು (Car) ಕೆಳಗೆ ಬಿದ್ದ ಪರಿಣಾಮ ಓರ್ವ ಸಾವನ್ನಪ್ಪಿದ್ದು, ನಾಲ್ವರು ಗಂಭೀರ ಗಾಯಗೊಂಡಿರುವ ಘಟನೆ ಕೋಲಾರ (Kolar) ಜಿಲ್ಲೆ ಕೆಜಿಎಫ್‌ನ (KGF) ಕೃಷ್ಣಾವರಂ ಬಳಿ ನಡೆದಿದೆ.
ಕರ್ಣ (48) ಮೃತ ವ್ಯಕ್ತಿ. ಫೋರ್ಡ್ ಇಕೋಸ್ಪೋರ್ಟ್ ಕಾರು ಸೇತುವೆ ಮೇಲಿಂದ ಬಿದ್ದು ಘಟನೆ ಸಂಭವಿಸಿದೆ. ಘಟನೆಯಲ್ಲಿ ಉಳಿದ ನಾಲ್ವರಿಗೆ ಗಂಭೀರ ಗಾಯಗಳಾಗಿದ್ದು, ಕೆಜಿಎಫ್ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇದನ್ನೂ ಓದಿ: `ಶಕ್ತಿ’ ಚಂಡಮಾರುತ ಎಫೆಕ್ಟ್ – ಗಡಿಜಿಲ್ಲೆ ಬೀದರ್‌ನಲ್ಲಿ ವರುಣನ ಅಬ್ಬರ ಜೋರು
ಬೆಂಗಳೂರು: ಮಾರಕಾಸ್ತ್ರ ಹಿಡಿದು ಯಶ್ ರೀತಿ ಬಿಲ್ಡಪ್ ಕೊಟ್ಟು ಡೂಪ್ಲಿಕೇಟ್ `ಕೆಜಿಎಫ್’ (KGF) ಲೋಕವನ್ನು ಸೃಷ್ಟಿಸಿ ವೈರಲ್ ಮಾಡಿದ್ದ ರೀಲ್ಸ್ ಸ್ಟಾರ್ ಶ್ರೀನಿವಾಸ್‌ಗೆ ಸಿಸಿಬಿ (CCB) ಶಾಕ್ ನೀಡಿದೆ.
ರೀಲ್ಸ್ ಸ್ಟಾರ್ ಶ್ರೀನಿವಾಸ್ ರಾಜ್ ಎಂಬಾತನಿಗೆ ಸಿಸಿಬಿ ಪೊಲೀಸರು ಶಾಕ್ ಕೊಟ್ಟಿದ್ದಾರೆ. ಹಿಂದೆ ಮುಂದೆ ಜನರನ್ನು ಇಟ್ಟುಕೊಂಡು ಹೀರೋ ರೀತಿಯಲ್ಲೇ ಪೋಸ್ ಕೊಟ್ಟು ರೀಲ್ಸ್ ಮಾಡಿದ್ದ. ರಾಕಿಂಗ್ ಸ್ಟಾರ್ ಯಶ್ ಸ್ಟೈಲ್‌ನ್ನು ಕಾಪಿ ಮಾಡಿ, ಚಾಕು, ಚೂರಿ ಮತ್ತು ಗನ್ ಹಿಡಿದುಕೊಂಡು ಸಾಮಾಜಿಕ ಜಾಲತಾಣದಲ್ಲಿ ಭಯ ಹುಟ್ಟಿಸುವ ರೀತಿಯಲ್ಲಿ ವಿಡಿಯೋ ಹರಿಬಿಟ್ಟಿದ್ದ.ಇದನ್ನೂ ಓದಿ: ನಿಮ್ಮ ಮಾಹಿತಿ ಸುರಕ್ಷಿತವಾಗಿರಲ್ಲ: ಜಾತಿಗಣತಿ ಬಹಿಷ್ಕಾರಕ್ಕೆ ತೇಜಸ್ವಿ ಸೂರ್ಯ ಕರೆ
ಈ ವಿಡಿಯೋ ಪೊಲೀಸ್ ಸೋಷಿಯಲ್ ಮೀಡಿಯಾ ಮಾನಿಟರಿಂಗ್ ಸೆಲ್‌ನ ಕಣ್ಣಿಗೆ ಬಿದ್ದಿದ್ದು, ಸಿಸಿಬಿ ಪೊಲೀಸರು ಶ್ರೀನಿವಾಸ್ ಕರೆತಂದು ವಿಚಾರಣೆ ನಡೆಸಿದ್ದಾರೆ. ವಿಚಾರಣೆ ವೇಳೆ ಇದೆಲ್ಲ ಡೂಪ್ಲಿಕೇಟ್ ವೆಪನ್ಸ್ ಎಂದು ಮಾಹಿತಿ ನೀಡಿದ್ದಾನೆ.
ಕೋಲಾರ: ಕೆಜಿಎಫ್ ಎಸ್ಪಿ ಫೇಸ್ಬುಕ್ ಹಾಗೂ ಇನ್ಸ್ಟಾಗ್ರಾಂ ಖಾತೆ ನಕಲು ಮಾಡಿರುವ ಘಟನೆ ನಡೆದಿದೆ.
ಕೆಜಿಎಫ್ ಜಿಲ್ಲಾ ಪೊಲೀಸ್ ಎಸ್ಪಿ ಶಿವಾಂಶು ರಜಪೂತ್ ಅವರ ಭಾವಚಿತ್ರ ಇರುವ ಜಿಲ್ಲಾ ಪೊಲೀಸ್ ಅಧಿಕೃತ ಇನ್ಸ್ಟಾಗ್ರಾಂ ಖಾತೆಯನ್ನು ನಕಲು ಮಾಡಿದ್ದಾರೆ. ನಕಲಿ ಖಾತೆಯನ್ನು ಎಸ್ಪಿ-ಕೆಜಿಎಫ್ ಹೆಸರಿನಲ್ಲಿ ತೆರೆದಿರುವ ದುಷ್ಕರ್ಮಿಗಳು ಪೊಲೀಸ್ ಅಧಿಕಾರಿಯನ್ನೂ ಬಿಟ್ಟಿಲ್ಲ.
ಸದ್ಯ ನಕಲಿ ಖಾತೆಯನ್ನು 119 ಮಂದಿ ಫಾಲೋ ಮಾಡುತ್ತಿದ್ದು, ಈಗಾಗಲೇ 22 ಫಾಲೋವರ್ಸ್ ಇದ್ದಾರೆ. ಈ ಖಾತೆಯನ್ನು ಬ್ಲ್ಯಾಕ್ ಮಾಡಬೇಕು. ಯಾರೂ ಸಹ ಈ ಖಾತೆಯನ್ನು ಫಾಲೋ ಮಾಡಬಾರದೆಂದು ಕೆಜಿಎಫ್ ಪೊಲೀಸರು ಮನವಿ ಮಾಡಿದ್ದು, ಎಸ್ಪಿ ತಮ್ಮ ಇನ್ಸ್ಟಾ ಖಾತೆಯಲ್ಲಿ ಈ ಕುರಿತು ಹೇಳಿಕೊಂಡಿದ್ದಾರೆ.
ಈಚೆಗೆ ಮನೆ ಮನೆಗೆ ಪೊಲೀಸ್ ಎಂಬ ಕಾರ್ಯಕ್ರಮ ಇಲಾಖೆ ಹಮ್ಮಿಕೊಂಡಿದ್ದು, ಕಾರ್ಯಕ್ರಮದ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವ ಇಲಾಖೆಗೆ ಫೇಕ್ ಕಾಟ ಶುರುವಾಗಿದೆ. ಸದ್ಯ ಐಪಿಎಸ್ ಸೇರಿದಂತೆ ಪೊಲೀಸ್ ಅಧಿಕಾರಿಗಳನ್ನೂ ಬಿಡದೇ ಕಳ್ಳರು ಕೈಚಳಕ ತೋರುತ್ತಿದ್ದಾರೆ.
ಕೆಜಿಎಫ್ (KGF) ಸೇರಿದಂತೆ ಸಾಕಷ್ಟು ಹಿಟ್ ಸಿನಿಮಾಗಳ ನಟ ಹರೀಶ್ ರಾಯ್ (Harish Rai) ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಕ್ಯಾನ್ಸರ್ ಅನ್ನೋ ಮಹಾಮಾರಿ ಅವರನ್ನ ಕಿತ್ತು ತಿನ್ನುತ್ತಿದೆ. ಕೆಜಿಎಫ್ ಸಿನಿಮಾದ ಶೂಟಿಂಗ್ ವೇಳೆ ಕಾಣಿಸಿಕೊಂಡ ಕ್ಯಾನ್ಸರ್ ಮಹಾಮಾರಿ ಹರೀಶ್ ರಾಯ್ ಕಲಾ ಬದುಕಿಗೆ ಕುತ್ತು ತಂದಿದೆ. ಒಂದುಕಡೆ ಸಿನಿಮಾಗಳಿಲ್ಲದೇ ಮನೆಯ ಜವಾಬ್ದಾರಿ ನಿಭಾಯಿಸಲಾಗುತ್ತಿಲ್ಲ. ಮತ್ತೊಂದೆಡೆ ದುಬಾರಿ ಚಿಕಿತ್ಸೆಗಾಗಿ ವೈದ್ಯರು ಹೈಟ್ರಿಟ್ಮೆಂಟ್‌ಗಾಗಿ ಸಲಹೆ ನೀಡಿದ್ದಾರೆ. ಮುಂದಿನ ಹಂತದ ಚಿಕಿತ್ಸೆಗಾಗಿ ಹರೀಶ್ ರಾಯ್‌ಗೆ 70-80 ಲಕ್ಷ ರೂಪಾಯಿ ಹಣ ಹೊಂದಿಸಬೇಕಾದ ಅನಿವಾರ್ಯತೆ ಎದುರಾಗಿದೆ.
ಹರೀಶ್ ರಾಯ್ `ಪಬ್ಲಿಕ್ ಟಿವಿ’ ಮೂಲಕ ಕನ್ನಡ ಚಿತ್ರರಂಗದ ಕಲಾವಿದರಿಗೆ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯವರಿಗೆ ಹಾಗೂ ಸಮಸ್ತ ಕರುನಾಡಿನ ಜನರನ್ನ ಕೈಮುಗಿದು ಕೇಳಿಕೊಂಡಿದ್ದಾರೆ. ಹರೀಶ್ ರಾಯ್ ಅವರಿಗೆ ವೈದ್ಯರು ಸಲಹೆ ನೀಡಿರುವ ಪ್ರಕಾರ ಒಂದು ಇಂಜೆಕ್ಷನ್‌ಗೆ 3.55 ಲಕ್ಷ ರೂ. ವೆಚ್ಚ ತಗುಲಲಿದೆಯಂತೆ. ಈ ಚಿಕಿತ್ಸೆ ಶುರು ಮಾಡಿದ ಮೇಲೆ 21 ದಿನಗಳಿಗೊಂದರಂತೆ ಇಂಜೆಕ್ಷನ್ ನೀಡಬೇಕಾಗುತ್ತೆ. 63 ದಿನಗಳಲ್ಲಿ ಮೂರು ಇಂಜೆಕ್ಷನ್ ನೀಡಬೇಕು. ಅಲ್ಲಿಗೆ ಒಂದು ಸೈಕಲ್ ಕಂಪ್ಲೀಟ್ ಆಗುತ್ತಂತೆ. ಅಂದರೆ ಅಲ್ಲಿಗೆ 10.65,000 ರೂ. ಹಣ ಬೇಕಾಗುತ್ತೆ. ಹೀಗೆ 6 ರಿಂದ 7 ಸೈಕಲ್ ಕಂಪ್ಲೀಟ್ ಮಾಡ್ಬೇಕು. ಅಂದರೆ ಅಲ್ಲಿಗೆ 70-80 ಲಕ್ಷ ಹಣ ಕೇವಲ ಇಂಜೆಕ್ಷನ್‌ಗೆ ಬೇಕಾಗುತ್ತದೆಯಂತೆ. ಸಹಾಯ ಹಸ್ತ ಚಾಚುವರಿಗೆ ಇಲ್ಲಿ ಬ್ಯಾಂಕ್ ಡಿಟೇಲ್ಸ್ ನೀಡಲಾಗಿದೆ.ಇದನ್ನೂ ಓದಿ: ಕೊಪ್ಪಳದಲ್ಲಿ ಗಮನ ಸೆಳೆಯುತ್ತಿದೆ ಜೋಕಾಲಿ ಗಣೇಶ
ಈ ಇಂಜೆಕ್ಷನ್ ತುಂಬಾ ದುಬಾರಿಯಾಗಿದ್ದು, ಇದಕ್ಕಾಗಿ ಲಕ್ಷಾಂತರ ರೂಪಾಯಿ ಹಣಬೇಕು ಹೀಗಾಗಿ ಹರೀಶ್ ರಾಯ್ ಸಹಾಯ ಹಸ್ತ ಚಾಚಿದ್ದಾರೆ. ಬಾಲಿವುಡ್‌ನ ನಟ ಸಂಜಯ್ ದತ್ ಅವರಿಗೆ ಕ್ಯಾನ್ಸರ್ ಬಂದ ವೇಳೆ ಅವರಿಗೂ ಈ ಇಂಜೆಕ್ಷನ್ ಕೊಡಲಾಗಿತ್ತು, ಅವರು ಗುಣಮುಖರಾಗಿದ್ದಾರೆ. ಅದೇ ಹೋಪ್ ನನ್ನಲ್ಲೂ ಇದೆ. ಇದಕ್ಕೆ ನಮ್ಮ ಚಿತ್ರರಂಗ, ಕಲಾವಿದರು, ತಂತ್ರಜ್ಞರು, ನಿರ್ಮಾಪಕ, ನಿರ್ದೇಶಕರು, ಫಿಲ್ಮ್ ಚೇಂಬರ್ ಹಾಗೂ ಸಮಸ್ತ ಕರುನಾಡಿನ ಸಿನಿಮಾ ಅಭಿಮಾನಿಗಳು ಮನಸ್ಸು ಮಾಡಬೇಕು. ಈ ಕಾಯಿಲೆಯನ್ನ ಮೆಟ್ಟಿ ನಿಲ್ಲಲು ನನಗೆ ಧೈರ್ಯವಿದೆ ಆದ್ರೆ ಹಣವಿಲ್ಲ. ಹೀಗಾಗಿ ತಾವೆಲ್ಲರೂ ಸಹಾಯ ಮಾಡಿದ್ರೆ ನಾನು ಮತ್ತೆ ಮೊದಲಿನಂತೆ ಆಗುತ್ತೇನೆ ಎಂದು ʻಪಬ್ಲಿಕ್ ಟಿವಿʼ ಮೂಲಕ ಹರೀಶ್ ರಾಯ್ ಕೇಳಿಕೊಂಡಿದ್ದಾರೆ.
ಮತ್ತೆ ಮೊದಲಿನಂತೆ ಆರೋಗ್ಯವಾಗಿ ಮರಳಿ ಇಂಡಸ್ಟ್ರಿಯಲ್ಲಿ ತೊಡಗಿಸಿಕೊಳ್ಳಬೇಕು. ನನಗೆ ಸಿನಿಮಾ ಇಂಡಸ್ಟ್ರಿನೇ ಎಲ್ಲಾ. ಅದು ಬಿಟ್ಟು ಬೇರೆ ಕೆಲಸ ಗೊತ್ತಿಲ್ಲ. ನಾನಿನ್ನು ಕಲಾ ಸರಸ್ವತಿಯ ಸೇವೆ ಮಾಡಬೇಕು. ಅದಕ್ಕಾಗಿ ಗುಣಮುಖರಾಗಿ ಬಂದ ಬಳಿಕ ನಿರ್ದೇಶಕರುಗಳ ಮನೆ ಬಾಗಿಲಿಗೆ ಹೋಗಿ ಅವಕಾಶ ಕೊಡಿ ಎಂದು ಕೇಳಿಕೊಳ್ಳುತ್ತೇನೆ. ನಟರನ್ನ ಭೇಟಿ ಮಾಡಿ ಅವಕಾಶಗಳನ್ನ ಕೊಡುವಂತೆ ಕೇಳುತ್ತೇನೆ ಎಂದು ಹೇಳಿದ್ದಾರೆ. ಈ ಹಿಂದೆ ಮೂರುಗಳ ಹಿಂದೆ ಕ್ಯಾನ್ಸರ್ ಟ್ರೀಟ್ಮೆಂಟ್‌ಗಾಗಿ ನಟ ಯಶ್, ದರ್ಶನ್ ಹಾಗು ದುನಿಯಾ ವಿಜಯ್ ಸಹಾಯ ಮಾಡಿರುವ ಬಗ್ಗೆ ನೆನೆದಿದ್ದಾರೆ.ಇದನ್ನೂ ಓದಿ: ರಾಹುಲ್ ರ‍್ಯಾಲಿಯಲ್ಲಿ ಮೋದಿಯನ್ನು ನಿಂದಿಸಿದವ ಅರೆಸ್ಟ್
ಕೋಲಾರ: ಇಂದು 4ನೇ ಶ್ರಾವಣ ಶನಿವಾರ (Shravan Saturday) ಹಿನ್ನೆಲೆ ಕೋಲಾರ (Kolar) ಜಿಲ್ಲೆಯ ವೆಂಕಟೇಶ್ವರ ಸ್ವಾಮಿ ದೇವಾಲಯಗಳಲ್ಲಿ ಜನ ಸಾಗರವೇ ಹರಿದು ಬಂದಿತ್ತು.
ಕೋಲಾರ ಜಿಲ್ಲೆ ಕೆಜಿಎಫ್ (KGF) ತಾಲೂಕು ಬಂಗಾರ ತಿರುಪತಿ ದೇವಾಲಯ (Bangaru Tirupati Temple), ಮಾಲೂರು ತಾಲೂಕು ಚಿಕ್ಕ ತಿರುಪತಿ ದೇವಾಲಯದಲ್ಲೂ (Chikka Tirupati Temple) ಜನರ ದಂಡು ಹೆಚ್ಚಾಗಿತ್ತು. ಇತಿಹಾಸ ಪ್ರಸಿದ್ಧ ಬಂಗಾರ ತಿರುಪತಿ ನೇತ್ರ ವೆಂಕಟರಮಣ ಸ್ವಾಮಿ ಹಾಗೂ ಚಿಕ್ಕ ತಿರುಪತಿಯ ಪ್ರಸನ್ನ ವೆಂಕರಮಣ ಸ್ವಾಮಿ ದರ್ಶನಕ್ಕೆ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು. ಇಂದು ಮುಂಜಾನೆಯಿಂದ ಶ್ರದ್ಧಾ ಭಕ್ತಿಯಿಂದ ದೇವರಿಗೆ ವಿಶೇಷ ಪೂಜೆ ಪುನಸ್ಕಾರಗಳನ್ನ ಮಾಡಲಾಯಿತು. ಇದನ್ನೂ ಓದಿ: ಚಿರತೆಯ ಬೋನಿನ ಬಾಗಿಲು ತೆರೆದು ಅಧಿಕಾರಿಗಳ ಯಡವಟ್ಟು – ಸ್ಥಳೀಯರ ಆಕ್ರೋಶ
ಶ್ರಾವಣ ಮಾಸದ ಪ್ರಯುಕ್ತ ಭಕ್ತರಿಂದ ವೆಂಕಟೇಶ್ವರ ಸ್ವಾಮಿಗೆ ವಿಶೇಷ ಪೂಜೆ, ವಿಶೇಷ ಹರಕೆ ತೀರಿಸಿದರು. ಶ್ರಾವಣ ಶನಿವಾರ ಹಿನ್ನೆಲೆ ದೇವಾಲಯದಿಂದ ಭಕ್ತರಿಗೆ ಪ್ರಸಾದ, ನೀರಿನ ವ್ಯವಸ್ಥೆ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನ ಮಾಡಲಾಗಿತ್ತು. ಇನ್ನೂ ಕೋಲಾರ ನಗರದ ಪೇಟೆ ವೆಂಕಟರಮಸ್ವಾಮಿ ದೇವಾಲಯಕ್ಕೂ ಭಕ್ತ ಸಾಗರ ಹರಿದು ಬಂದಿತ್ತು. ಬೆಳಗ್ಗೆಯಿಂದಲೇ ದೇವರ ದರ್ಶನ ಪಡೆಯಲು ಭಕ್ತ ಗಣ ಆಗಮಿಸಿತ್ತು. ಇದನ್ನೂ ಓದಿ: ಕೆಎನ್ ರಾಜಣ್ಣರನ್ನು ವಜಾಗೊಳಿಸಿದಕ್ಕೆ ಸಿದ್ದಗಂಗಾ ಶ್ರೀ ಬೇಸರ
ಕೋಲಾರ ನಗರದ ಶಾರದ ಚಿತ್ರಮಂದಿರ ಬಳಿಯಿರುವ ಪೇಟೆ ವೆಂಕಟರಮಣಸ್ವಾಮಿ ದೇವಾಲಯ, 4ನೇ ಶನಿವಾರದ ಪ್ರಯುಕ್ತ ದೇವರಿಗೆ ವಿಶೇಷ ಅಲಂಕಾರ ಮಾಡಲಾಗಿದ್ದು, ದೇವಾಲಯದಲ್ಲಿ ಭಕ್ತರಿಂದ ಗೋವಿಂದ ನಾಮಸ್ಮರಣೆ ಮಾಡಲಾಯಿತು. ವಿಶೇಷವಾಗಿ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಎಸ್‌ಎನ್ ಸುಬ್ಬಾರೆಡ್ಡಿ, ಮಾಲೂರು ಮಾಜಿ ಶಾಸಕ ಮಂಜುನಾಥಗೌಡ ದೇವರ ದರ್ಶನ ಪಡೆದರು. ಇದನ್ನೂ ಓದಿ: ಸ್ಯಾಂಡಲ್‌ವುಡ್ ನಟನ ಬಾಳಲ್ಲಿ ಬಿರುಗಾಳಿ – ನಟ ಅಜಯ್ ರಾವ್ ಪತ್ನಿಯಿಂದ ವಿಚ್ಛೇದನಕ್ಕೆ ಅರ್ಜಿ
ಕೋಲಾರ: ದೇಶ ವಿರೋಧಿ ಚಟುವಟಿಕೆಯಲ್ಲಿ (Anti-National Activity) ತೊಡಗಿದ ಹಾಗೂ ಕೆಲವೊಂದು ಉಗ್ರವಾದಿ ಸಂಘಟನೆಗಳ ಕುರಿತ ಪೋಸ್ಟ್‌ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡ ಆರೋಪದಡಿಯಲ್ಲಿ ಓರ್ವ ಅಪ್ರಾಪ್ತ ಬಾಲಕನನ್ನು (Minor Boy) ಆಂತರಿಕ ಭದ್ರತಾ ಅಧಿಕಾರಿಗಳು (Internal Security Officers) ಮತ್ತು ಕೇಂದ್ರ ಗುಪ್ತಚರ ಇಲಾಖೆ (Central Intelligence Agency) ಅಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಕೋಲಾರ (Kolar) ಜಿಲ್ಲೆ ಕೆಜಿಎಫ್ (KGF) ತಾಲೂಕು ಬೇತಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಸುಮಾರು 15 ವರ್ಷದ ಬಾಲಕನೊಬ್ಬ ಕೆಲವೊಂದು ಉಗ್ರಗಾಮಿ ಸಂಘಟನೆಗೆ ಸಂಬಂಧಿಸಿದಂತೆ ಕೆಲವೊಂದು ಪೋಸ್ಟ್‌ಗಳನ್ನು ಹಂಚಿಕೊಂಡಿದ್ದ. ಅಲ್ಲದೆ ಪದೇ ಪದೇ ಉಗ್ರಗಾಮಿ ಸಂಘಟನೆಯ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಹುಡುಕಾಡುತ್ತಿದ್ದ ಹಿನ್ನೆಲೆ ಅಧಿಕಾರಿಗಳು ಆತನನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಒಂದು ಇಡೀ ದಿನ ಆತನನ್ನು ವಿಚಾರಣೆ ನಡೆಸಿ ನಂತರ ಆತನನ್ನು ಬೇತಮಂಗಲ ಪೊಲೀಸರ ವಶಕ್ಕೆ ನೀಡಲಾಗಿದೆ. ಇದನ್ನೂ ಓದಿ: ಭಾರೀ ಗಾಳಿ ಸಹಿತ ಮಳೆ – ಮನೆ ಕುಸಿದು ಕಾರ್ಮಿಕ ಮಹಿಳೆ ಸಾವು
ಇನ್ನು ಈ ಬಾಲಕ ಮೂಲತಃ ಆಂದ್ರದ ಮುಸ್ಲಿಂ ಕುಟುಂಬಕ್ಕೆ ಸೇರಿದ್ದ. ಕಳೆದ ಹಲವು ವರ್ಷಗಳ ಹಿಂದೆಯೇ ಆಂದ್ರದ ರಾಮಕುಪ್ಪಂ ತೊರೆದು ಬೆಂಗಳೂರಿನ ಮೇಡಹಳ್ಳಿ ಕೆಲಸ ಮಾಡಿಕೊಂಡಿದ್ದ ಕುಟುಂಬ ಇತ್ತೀಚೆಗೆ ಕೋಲಾರ ಜಿಲ್ಲೆ ಕೆಜಿಎಫ್ ತಾಲೂಕು ಬೇತಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯ ದ್ಯಾವರಹಳ್ಳಿ ಗ್ರಾಮದ ಬಳಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು ಎಂದು ತಿಳಿದು ಬಂದಿದೆ. ಮೇಡಹಳ್ಳಿ ಬಳಿ ಚಿಕನ್ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದ ಬಾಲಕ ಕಳೆದ 20 ದಿನಗಳ ಹಿಂದಷ್ಟೇ ಬೇತಮಂಗಲ ಬಳಿ ಚಿಕನ್ ಅಂಗಡಿಯಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದ. ಸದ್ಯ ಈತನ ಚಲನವಲನಗಳ ಮೇಲೆ ಕಣ್ಣಿಟ್ಟಿದ್ದ ಆಂತರಿಕ ಭದ್ರತಾ ಅಧಿಕಾರಿಗಳು ಹಾಗೂ ಕೇಂದ್ರ ಗುಪ್ತಚರ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಇದನ್ನೂ ಓದಿ: ಸೋನ್‌ಪ್ರಯಾಗ್ ಬಳಿ ಭೂಕುಸಿತ – ಕೇದಾರನಾಥ ಯಾತ್ರೆ ತಾತ್ಕಾಲಿಕ ಸ್ಥಗಿತ
ಸದ್ಯ ಈತನ ವಿರುದ್ಧ ಬೇತಮಂಗಲ ಪೊಲೀಸ್ ಠಾಣೆಯಲ್ಲಿ ದೇಶದ್ರೋಹ ಹಾಗೂ ದೇಶ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ ಆರೋಪದಡಿ ಪ್ರಕರಣ ದಾಖಲಿಸಿಕೊಂಡು ಆರೋಪಿ ಬಾಲಕನ್ನು ವಶಕ್ಕೆ ಪಡೆದು ಕೆಜಿಎಫ್ ಬಾಲ ಮಂದಿರದಲ್ಲಿ ಇರಿಸಲಾಗಿದೆ. ಘಟನೆ ಸಂಬಂಧ ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ. ಇದನ್ನೂ ಓದಿ: ಬಾಗಲಕೋಟೆ | ಬೈಕ್ ತಪ್ಪಿಸಲು ಹೋಗಿ ಕಾರಿನ ಮೇಲೆ ಲಾರಿ ಪಲ್ಟಿ – ಇಬ್ಬರು ದುರ್ಮರಣ
ಕೋಲಾರ: ಕೆಜಿಎಫ್‍ನಲ್ಲಿ (KGF) ಚಿನ್ನದ ಗಣಿಗಾರಿಕೆಗೆ (Gold Mining) ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ. ಸೈನೈಡ್ ದಿಬ್ಬಗಳಲ್ಲಿ ಚಿನ್ನ, ಪಲ್ಲಾಡಿಯಂ, ರೋಡಿಯಂ ಖನಿಜ ದಿಬ್ಬಗಳಲ್ಲಿರುವ ಖನಿಜ ಸಂಪತ್ತನ್ನು ಹೊರ ತೆಗೆಯಲು ಗ್ರೀನ್ ಸಿಗ್ನಲ್ ನೀಡಲಾಗಿದೆ.
36,000 ಕೋಟಿ ರೂ. ಮೌಲ್ಯದ ಖನಿಜ ಸಂಪತ್ತು ಇರುವ ಬಗ್ಗೆ ಮಾಹಿತಿ ಇದೆ. ಈಗಾಗಲೆ ಚಿನ್ನದ ಅದಿರಿನ ತ್ಯಾಜ್ಯಗಳಲ್ಲಿರುವ ಮಣ್ಣಿನ ಪರೀಕ್ಷೆ ನಡೆದಿದೆ ಎಂದು ಕೇಂದ್ರ ಕಲ್ಲಿದ್ದಲು ಮತ್ತು ಗಣಿ ಸಚಿವಾಲಯ ಮಾಹಿತಿ ನೀಡಿದೆ.
ಟಾಲಿವುಡ್‌ನಿಂದ ಧಮಾಕೇದಾರ್ ಸುದ್ದಿಯೊಂದು ಬಂದಿದೆ. ಅದುವೇ ಅಲ್ಲು ಅರ್ಜುನ್ (Allu Arjun) ಹಾಗೂ ಪ್ರಶಾಂತ್ ನೀಲ್ (Prashanth Neel) ಸೂಪರ್ ಕಾಂಬೋ ಸುದ್ದಿ.
ಹೌದು. ಅಲ್ಲು ಅರ್ಜುನ್ ಮುಂದಿನ ಚಿತ್ರಕ್ಕೆ ಪ್ರಶಾಂತ್ ನೀಲ್ ನಿರ್ದೇಶನ ಮಾಡುತ್ತಾರೆ ಎನ್ನಲಾದ ಸುದ್ದಿ ವೈರಲ್ ಆಗಿದೆ. ಪ್ರಸ್ತುತ ಪ್ರಶಾಂತ್ ನೀಲ್ ಜೂ.ಎನ್‌ಟಿಆರ್ (Jr ntr) ಚಿತ್ರವನ್ನ ನಿರ್ದೇಶನ ಮಾಡುತ್ತಿದ್ದಾರೆ. ಇನ್ನು ಅಲ್ಲು ಅರ್ಜುನ್ ಅಟ್ಲಿ ಚಿತ್ರಕ್ಕೆ ಡೇಟ್ಸ್ ಕೊಟ್ಟಿದ್ದಾರೆ. ಇಬ್ಬರ ವಿಭಿನ್ನ ಚಿತ್ರಗಳು ಮುಗಿದ ಬಳಿಕ ಪ್ರಶಾಂತ್ ನೀಲ್ ಜೊತೆಗೆ ಕೈಜೋಡಿಸಲಿದ್ದಾರೆ ಎನ್ನಲಾಗುತ್ತಿದ್ದು ಈ ಚಿತ್ರಕ್ಕೆ `ರಾವಣಂ’ ಎಂಬ ಶೀರ್ಷಿಕೆ ಇಡಲಾಗುತ್ತೆ ಅನ್ನೋದು ಇಂಟ್ರೆಸ್ಟಿಂಗ್ ವಿಚಾರ. ಇದನ್ನೂ ಓದಿ: ಭದ್ರತೆಗೆ ಹೊಸ ಬುಲೆಟ್ ಪ್ರೂಫ್ ಕಾರು ಖರೀದಿಸಿದ ಸಲ್ಮಾನ್ ಖಾನ್
ಕೆಜಿಎಫ್ ಚಿತ್ರದ ಮೂಲಕ ಸ್ಟಾರ್ ಡೈರೆಕ್ಟರ್ ಆಗಿರುವ ಪ್ರಶಾಂತ್ ನೀಲ್ ಹಾಗೂ ಪುಷ್ಪ-2 (Pushpa 2) ಮೂಲಕ ಇಂಟರ್‌ನ್ಯಾಶನಲ್ ಸ್ಟಾರ್ ಆಗಿರುವ ಅಲ್ಲು ಅರ್ಜುನ್ ಬಿಗ್ ಬಜೆಟ್ ಸಿನಿಮಾ ಮೇಕರ್ಸ್ ಎಂದು ಹೆಸರು ಮಾಡಿದವರು. ಇಬ್ಬರು ಒಂದೇ ಚಿತ್ರಕ್ಕಾಗಿ ಕೈಜೋಡಿಸದ್ರೆ ಆ ಸಿನಿಮಾ ಇನ್ನಿಲ್ಲದ ನಿರೀಕ್ಷೆ ಹುಟ್ಟಿಸೋದ್ರಲ್ಲಿ ಅನುಮಾನವೇ ಇಲ್ಲ. ಅಂದಹಾಗೆ ಈ ಸಿನಿಮಾವನ್ನ ಬಿಗ್ ಬಜೆಟ್‌ನಲ್ಲಿ ಟಾಲಿವುಡ್ ಖ್ಯಾತ ನಿರ್ಮಾಪಕ ದಿಲ್‌ರಾಜು ನಿರ್ಮಿಸಲಿದ್ದಾರೆ. ಸಿನಿಮಾ ಶುರುವಾಗೋದು ಇನ್ನೂ ಎರಡು ವರ್ಷದ ಬಳಿಕ ಎನ್ನಲಾಗುತ್ತಿದೆ. ಇದನ್ನೂ ಓದಿ: ವಿಜಯ್ ಜೊತೆ ಲವ್ ವದಂತಿಗೆ ತ್ರಿಷಾ ಕೆಂಡ – ಹೊಲಸು ಮನಸ್ಥಿತಿಯ ಜನ ಎಂದ ನಟಿ
ಸಿನಿಮಾ ಆರಂಭಕ್ಕೂ ಮುನ್ನವೇ ಅಲ್ಲು ನೀಲ್ ಕಾಂಬಿನೇಶನ್ ಚಿತ್ರದ ಶೀರ್ಷಿಕೆ ರಿವೀಲ್ ಆಗಿರುವುದು ವಿಶೇಷ. ಸಾಮಾನ್ಯವಾಗಿ ಬಿಗ್‌ಸ್ಟಾರ್‌ಗಳ ಚಿತ್ರಕ್ಕೆ ಆರಂಭದಲ್ಲೇ ಟೈಟಲ್ ರಿವೀಲ್ ಮಾಡೋದಿಲ್ಲ. ಕಾನ್ಸೆಪ್ಟ್ ಪ್ರಕಾರ ಮಾಡಲಾಗುತ್ತೆ. ಹೀಗಾಗಿ ಶೀರ್ಷಿಕೆ ವಿಚಾರಕ್ಕೆ ಗೊಂದಲ ಇದೆ. ಹಿಂದೆ ಸಂದರ್ಶನವೊಂದರಲ್ಲಿ ಪ್ರಶಾಂತ್ ನೀಲ್ ತಾವು ಚಿತ್ರ ಮಾಡಬೇಕೆನ್ನುವ ಹೀರೋ ಜೊತೆ ಲವ್ ಆದ್ರೆ ಮಾತ್ರ ಅವರ ಜೊತೆ ಸಿನಿಮಾ ಮಾಡ್ತೀನಿ ಎಂದಿದ್ರು. ಇದನ್ನೂ ಓದಿ: ಸುದೀಪ್ `ಬಿಲ್ಲ ರಂಗ ಬಾಷ’ ಸೆಟ್ ರಿವೀಲ್!
ಕೋಲಾರ: ಜಮೀನು ವಿವಾದ (Land Dispute) ಹಿನ್ನೆಲೆ ಅಣ್ಣ ತಮ್ಮನನ್ನು ಹೊಡೆದು ಕೊಲೆ ಮಾಡಿರುವ ಘಟನೆ ಕೋಲಾರದಲ್ಲಿ (Kolar) ನಡೆದಿದೆ.
ಕೋಲಾರ ಜಿಲ್ಲೆಯ ಕೆಜಿಎಫ್ (KGF) ತಾಲೂಕು ಎನ್‌ಜಿ ಹುಲ್ಕರು ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ತಂದೆ ಆಸ್ತಿಯಲ್ಲಿ ನಾಲ್ಕು ಗುಂಟೆ ಪಾಲು ಬೇಕೆಂದು ಮೂವರು ಅಣ್ಣ ತಮ್ಮಂದಿರು ನ್ಯಾಯಾಲಯದ ಮೊರೆ ಹೋಗಿದ್ದರು. ಜಮೀನು ವಿವಾದ ಸದ್ಯ ನ್ಯಾಯಾಲಯದಲ್ಲಿ ಬಾಕಿ ಇದ್ದು, ಸದರಿ ಜಮೀನಿನಲ್ಲಿ ತಮ್ಮ ರಮೇಶ್ ಶೆಡ್ ನಿರ್ಮಿಸಲು ತಯಾರಿ ನಡೆಸುತ್ತಿದ್ದ ಎನ್ನಲಾಗಿದೆ. ಇದನ್ನೂ ಓದಿ: ಹುಬ್ಬಳ್ಳಿ | ಪ್ರೀತಿಸಿ ಮದುವೆಯಾಗಿದ್ದ ಯುವತಿಯನ್ನು ಪತಿ ಮನೆಯಿಂದ ಹೊತ್ತೊಯ್ದ ಪೋಷಕರು
ಈ ಬಗ್ಗೆ ವಿಚಾರ ತಿಳಿದ ಸೀನಪ್ಪ (ಶ್ರೀನಿವಾಸ್) ಮತ್ತು ಸಂಪಂಗಿ ಇಬ್ಬರೂ ರಮೇಶ್ ಬಳಿ ತಕರಾರು ತೆಗೆದಿದ್ದಾರೆ. ಸೀನಪ್ಪ ಮತ್ತು ರಮೇಶ್ ನಡುವೆ ಮಾತಿನ ಚಕಮಕಿ ನಡೆದು ಕೋಪಾವೇಶದಲ್ಲಿ ಸೀನಪ್ಪ ಪಕ್ಕದಲ್ಲಿದ್ದ ದೊಣ್ಣೆಯನ್ನು ತೆಗೆದು ರಮೇಶ್‌ಗೆ ಬಲವಾಗಿ ಹೊಡೆದ ಪರಿಣಾಮ ರಮೇಶ್ ಸ್ಥಳದಲ್ಲೆ ಮೃತಪಟ್ಟಿದ್ದಾನೆ. ಘಟನೆ ನಡೆಯುವಾಗ ಅಕ್ಕಪಕ್ಕದ ಜನರೂ ಗುಂಪುಗೂಡಿದ್ದು, ತಮ್ಮ ಮೃತನಾದ ಎಂದು ತಿಳಿಯುತ್ತಿದ್ದಂತೆ ಭಯದಿಂದ ಸೀನಪ್ಪ ಮತ್ತು ಸಂಪಂಗಿ ಸ್ಥಳದಿಂದ ಪರಾರಿಯಾಗಿದ್ದಾರೆ. ಇದನ್ನೂ ಓದಿ: Ahmedabad Tragedy | ಡಿಎನ್‌ಎ ಮ್ಯಾಚ್ – 3 ದಿನಗಳ ಬಳಿಕ ವಿಜಯ್ ರೂಪಾನಿ ಮೃತದೇಹದ ಗುರುತು ಪತ್ತೆ