Tag: KG Village

  • ‘ಫೈರ್’ ಸಂಪತ್ ‘ರಾಜ್’ ಬಂಧನವಾಗಿದ್ದೇಗೆ?

    ‘ಫೈರ್’ ಸಂಪತ್ ‘ರಾಜ್’ ಬಂಧನವಾಗಿದ್ದೇಗೆ?

    ಬೆಂಗಳೂರು: ಕಳೆದ ಒಂದು ತಿಂಗಳಿನಿಂದ ಎಸ್ಕೇಪ್ ಆಗಿದ್ದ ಮಾಜಿ ಮೇಯರ್ ಸಂಪತ್ ರಾಜ್ ನನ್ನು ಬಂಧಿಸುವಲ್ಲಿ ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ.

    ಇಂದು ಪೊಲೀಸರು ಸಂಪತ್ ರಾಜ್ ಗೆಳೆಯ ಕಾಂಟ್ರಾಕ್ಟರ್ ರಿಯಾಜುದ್ದೀನ್ ಎಂಬಾತನನ್ನ ಬಂಧಿಸಿದ್ದರು. ರಿಯಾಜುದ್ದೀನ್ ನೀಡಿದ ಮಾಹಿತಿ ಆಧಾರದ ಮೇಲೆ ಸಂಪತ್ ರಾಜ್ ಬಂಧನವಾಗಿದೆ. ಕೊರೊನಾ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ಸಂಪತ್ ರಾಜ್ ಗುಣಮುಖವಾದ ಬಳಿಕ ಎಸ್ಪೇಕ್ ಆಗಿ ನಾಗರಹೊಳೆಯ ಫಾರ್ಮ್ ನಲ್ಲಿ ಆಶ್ರಯ ಪಡೆದಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.

    ರಿಯಾಜುದ್ದೀನ್ ತನ್ನ ಕಾರಿನಲ್ಲಿಯೇ ಸಂಪತ್ ರಾಜ್ ನನ್ನು ಕರೆದುಕೊಂಡು ತನ್ನ ಆಪ್ತರ ಬಳಿ ಬಿಟ್ಟಿದ್ದನು. ರಿಯಾಜುದ್ದೀನ್ ಶಿಷ್ಯರ ಚಲನವಲನ ಮೇಲೆಯೂ ಸಿಸಿಬಿ ತಂಡ ಕಣ್ಣಿಟ್ಟಿತ್ತು. ರಿಯಾಜುದ್ದೀನ್ ಶಿಷ್ಯರು ಸಂಪತ್ ರಾಜ್ ಜೊತೆ ನೇರ ಸಂಪರ್ಕ ಹೊಂದಿದ್ದರು ಎನ್ನಲಾಗಿದೆ.

    ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಮನೆಗೆ ಬೆಂಕಿ ಹಾಕಿದ ವೇಳೆ ಸಂಪತ್ ರಾಜ್ ಕೂಗಳತೆ ದೂರದಲ್ಲಿಯೇ ಇದ್ದಾರೆ ಎಂದು ಪೊಲೀಸ್ ಮೂಲಗಳಿಂದ ತಿಳಿದುಯ ಬಂದಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಪತ್ ರಾಜ್ ಸಿಸಿಬಿ ವಿಚಾರಣೆಗ ಎದುರಿಸಿದ ಬಳಿಕ ಆಸ್ಪತ್ರೆಗೆ ದಾಖಲಾಗಿದ್ದರಿಂದ ಬಂಧನ ವಿಳಂಬವಾಗಿತ್ತು.

  • ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆ ಪ್ರಕರಣ- ಮಾಜಿ ಮೇಯರ್ ಸಂಪತ್ ರಾಜ್ ನಾಪತ್ತೆ

    ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆ ಪ್ರಕರಣ- ಮಾಜಿ ಮೇಯರ್ ಸಂಪತ್ ರಾಜ್ ನಾಪತ್ತೆ

    – ಈ ಹಿಂದೆ ಸಂಪತ್ ರಾಜ್ ವಿಚಾರಣೆ ನಡೆಸಿದ್ದ ಪೊಲೀಸರು

    ಬೆಂಗಳೂರು: ಶಾಸಕರ ಮನೆ ಹಾಗೂ ಪೊಲೀಸ್ ಠಾಣೆ ಧ್ವಂಸಗೊಳಿಸಿದ್ದ ಡಿಜೆ ಹಳ್ಳಿ, ಕೆಜಿ ಹಳ್ಳಿ ಪ್ರಕಣದ ಕುರಿತು ಪೊಲೀಸರು ತೀವ್ರ ತನಿಖೆ ನಡೆಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹಿಂದೆ ಮಾಜಿ ಮೇಯರ್ ಸಂಪತ್ ರಾಜ್ ಅವರನ್ನೂ ವಿಚಾರಣೆ ನಡೆಸಿದ್ದರು. ಆದರೆ ಇದೀಗ ಇದ್ದಕ್ಕಿಂತೆ ಸಂಪತ್ ರಾಜ್ ಕಾಣೆಯಾಗಿದ್ದಾರೆ.

    ತೀವ್ರ ಸಂಚಲನ ಸೃಷ್ಟಿಸಿದ್ದ ಡಿಜೆ ಹಳ್ಳಿ ಹಾಗೂ ಕೆಜಿ ಹಳ್ಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ. ಹೀಗಾಗಿ ಪ್ರಕರಣಕ್ಕೆ ಮಹತ್ವದ ತಿರುವುಸಿಕ್ಕಿದೆ ಎನ್ನಲಾಗಿದ್ದು, ಇದೇ ವೇಳೆ ಸಂಪತ್‍ರಾಜ್ ನಾಪತ್ತೆಯಾಗಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

    ಸಂಪತ್‍ರಾಜ್‍ಗಾಗಿ ಸಿಸಿಬಿ ಪೊಲೀಸರ ಹುಡುಕಾಟ ನಡೆಸಿದ್ದಾರೆ. ಆದರೆ ಬುಧವಾರ ನೋಟಿಸ್ ಕೊಡಲು ತೆರಳಿದ್ದಾಗ ಕಳೆದ 1 ವಾರದಿಂದ ಮನೆಯಲ್ಲಿ ಇಲ್ಲದಿರುವುದರ ಬಗ್ಗೆ ಮಾಹಿತಿ ಲಭ್ಯವಾಗಿದೆ. ಹೀಗಾಗಿ ನಾಳೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದಾರೆ. ಪ್ರಕರಣದಲ್ಲಿ ಸಂಪತ್ ರಾಜ್ ಭಾಗಿಯಾಗಿರುವ ಕುರಿತು ಮಹತ್ವದ ಸಾಕ್ಷ್ಯ ಸಿಕ್ಕಿದೆ ಎನ್ನಲಾಗಿದ್ದು, ಅರೆಸ್ಟ್ ಆಗ್ತಾರಾ ಕಾಂಗ್ರೆಸ್ ಮುಖಂಡ ಸಂಪತ್ ರಾಜ್ ಎಂಬ ಪ್ರಶ್ನೆ ಇದೀಗ ಮೂಡಿದೆ.

    ಸಂಪತ್ ರಾಜ್ ವಿರುದ್ಧ ಸ್ಫೋಟಕ ಸಾಕ್ಷ್ಯ ಸಿಕ್ಕಿದ್ದು, ಬೆಂಕಿ ಹಚ್ಚುವ ಸಂದರ್ಭದಲ್ಲಿ ಅಖಂಡ ಶ್ರೀನಿವಾಸಮೂರ್ತಿ ಮನೆಯಿಂದ 100 ಮೀಟರ್ ದೂರದಲ್ಲಿದ್ದರು. ಸಂತೋಷ್ ಮನೆಯಲ್ಲಿ ಆಶ್ರಯ ಪಡೆದಿದ್ದರು. ಆಗಸ್ಟ್ 4ರಂದು ಸಭೆ ನಡೆಸಿದ್ದ ಬಗ್ಗೆ ತಾಂತ್ರಿಕ ಮಾಹಿತಿ ಬಹಿರಂಗವಾಗಿದೆ. ಈ ಹಿನ್ನೆಲೆಯಲ್ಲಿ ಸಂಪತ್ ರಾಜ್‍ಗೆ ಇದೀಗ ಸಂಕಷ್ಟ ಶುರುವಾಗಿದೆ. ಪೊಲೀಸರ ಭಯದಿಂದ ಸಂಪತ್ ರಾಜ್ ಮನೆಗೆ ಸೇರದೆ ಎಸ್ಕೇಪ್ ಆಗುತ್ತಿದ್ದಾರೆ ಎನ್ನಲಾಗಿದೆ. ಅಲ್ಲದೆ ಇನ್ನೂ ಅಚ್ಚರಿ ಎಂಬಂತೆ ಕಾರು ಬಿಟ್ಟು ಆಟೋದಲ್ಲಿ ಓಡಾಡುತ್ತಿದ್ದಾರೆ ಎನ್ನಲಾಗಿದೆ.

  • ಬೆಂಗಳೂರು ಗಲಭೆ – ಕಾಂಗ್ರೆಸ್ ಶೋಧಿಸಿದ ‘ಸತ್ಯ’ ಏನು?

    ಬೆಂಗಳೂರು ಗಲಭೆ – ಕಾಂಗ್ರೆಸ್ ಶೋಧಿಸಿದ ‘ಸತ್ಯ’ ಏನು?

    ಬೆಂಗಳೂರು: ರಾಜಧಾನಿಯಲ್ಲಿ ನಡೆದ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮಾಜಿ ಡಿಸಿಎಂ ಜಿ.ಪರಮೇಶ್ವರ್ ನೇತೃತ್ವದಲ್ಲಿ ಸತ್ಯಶೋಧನಾ ಸಮಿತಿ ರಚಿಸಿತ್ತು. ಈ ಸಮಿತಿಯ ವರದಿ ಇನ್ನೆರಡು ದಿನಗಳಲ್ಲಿ ಕೆಪಿಸಿಸಿಯ ಕೈ ಸೇರಲಿದೆ.

    ಇಡೀ ಘಟನೆ ಕಾಂಗ್ರೆಸ್ ಮೂವರು ನಾಯಕರ ವಿರುದ್ಧ ಸುತ್ತುತ್ತಿದೆ. ಪಕ್ಷದ ಮುಖಂಡರ ಒಳಜಗಳದಿಂದ ಈ ಗಲಾಟೆಯ ಇಷ್ಟು ದೊಡ್ಡಮಟ್ಟದ ರೂಪ ಪಡೆದುಕೊಂಡಿರುವ ಬಗ್ಗೆ ಸತ್ಯ ಶೋಧನ ಸಮಿತಿ ನೀಡಿದ ವರದಿಯಲ್ಲಿದೆ ಎಂಬುವುದು ತಿಳಿದು ಬಂದಿದೆ.

    ಕಾಂಗ್ರೆಸ್ ಶೋಧಿಸಿದ ‘ಸತ್ಯ’: ಬೆಂಗಳೂರು ಗಲಭೆಗೆ ಕಾಂಗ್ರೆಸ್ ನಾಯಕರ ನಡುವಿನ ಒಳ ಜಗಳವೇ ಕಾರಣವಾಗಿದೆ. ವಿಧಾನಸಭಾ ಚುನಾವಣೆ ಮೇಲೆ ಕಣ್ಣಿಟ್ಟ ಮೂವರು ನಾಯಕರ ವರ್ತನೆಯಿಂದಾಗಿ ಈ ಪ್ರಮಾಣದ ಗಲಾಟೆ ನಡೆದಿದೆ. ಬಿಬಿಎಂಪಿ ಚುನಾವಣೆ ಮೇಲೆ ಕಣ್ಣಿಟ್ಟ ಕಾಂಗ್ರೆಸ್ ಕಾರ್ಪೊರೇಟರ್ ಗಳು ಕ್ಷೇತ್ರದಲ್ಲಿ ತಮ್ಮದೇ ಹಿಡಿತ ಇರಬೇಕು ಎಂದು ಪರಸ್ಪರ ಕತ್ತಿ ಮಸೆದಿದ್ದಾರೆ. ಒಬ್ಬರ ವಿರುದ್ದ ಒಬ್ಬರು ಹಗೆ ಸಾಧಿಸಿ ಎರಡನೇ ಹಂತದ ನಾಯಕರನ್ನ ಎತ್ತಿ ಕಟ್ಟಿದ್ದು ಈ ಗಲಭೆಗೆ ಕಾರಣ ಸಮಿತಿ ನೀಡಿದ ವರದಿಯಲ್ಲಿದೆ ಎನ್ನಲಾಗಿದೆ.

    ಶಾಸಕರ ಸಂಬಂಧಿ ಧಾರ್ಮಿಕ ಭಾವನೆ ಕೆರಳಿಸುವ ಪೋಸ್ಟರ್ ಹಾಕಿದ್ದರೂ ಅದನ್ನು ಸರಿಪಡಿಸುವ ಪ್ರಯತ್ನ ಮಾಡದಿರುವುದು. ತಮ್ಮ ಮೇಲೆ ನೇರ ಆರೋಪ ಬರಬಾರದು ಅನ್ನೋ ಕಾರಣಕ್ಕೆ ಬೇರೆ ಬೇರೆ ಸಂಘಟನೆಗಳ ಮೂಲಕ ಗಲಭೆಗೆ ಕುಮ್ಮಕ್ಕು ನೀಡಿರುವ ಸಾಧ್ಯತೆಗಳಿವೆ.

    ಸಂಪತ್‍ರಾಜ್ ವಿರುದ್ಧ ಕೈ ಆರೋಪಪಟ್ಟಿ: ಮಾಜಿ ಮೇಯರ್ ಸಂಪತ್‍ರಾಜ್ ವಿರುದ್ಧ ಇಡೀ ಘಟನೆಯ ಪ್ರಮುಖ ಆರೋಪ ಕೇಳಿ ಬಂದಿದೆ. ಸಂಪತ್ ರಾಜ್ ಕಳೆದ ವಿಧಾನಭಾ ಚುನಾವಣೆಯಲ್ಲಿ ಪುಲಿಕೇಶಿನಗರದ ಟಿಕೆಟ್ ಕೇಳಿದ್ದರು. ಆದರೆ ಒಲ್ಲದ ಮನಸ್ಸಿನಿಂದ ಸಿ.ವಿ.ರಾಮನ್ ನಗರದಿಂದ ಚುನಾವಣೆಗೆ ಸ್ಪರ್ಧಿಸಿ ಸೋತಿದ್ದರು. ಚುನಾವಣೆ ಸೋತ ನಂತರ ಪುಲಿಕೇಶಿನಗರ ವಿಧಾನಸಭಾ ಕ್ಷೇತ್ರದಲ್ಲೆ ಸಂಪತ್‍ರಾಜ್ ಓಡಾಟ ನಡೆಸಿದ್ದರು.

    ಸಂಪತ್ ರಾಜ್ ಮುಂದಿನ ಚುನಾವಣೆಗೆ ಪುಲಿಕೇಶಿನಗರ ಟಿಕೆಟ್ ನನಗೆ ಎಂದು ಹೇಳಿಕೊಂಡು ಓಡಾಟ ನಡೆಸಿದ್ದಾರೆ ಎನ್ನಲಾಗಿದೆ. ಮೇಯರ್ ಆಗಿದ್ದ ನಾನು ನಿಮ್ಮ ಮಾತು ಯಾಕೆ ಕೇಳಬೇಕು ಎಂದು ಶಾಸಕ ಅಖಂಡ ಶ್ರೀನಿವಾಸಮೂರ್ತಿಗೆ ಸೆಡ್ಡು ಹೊಡೆದಿದ್ದರಂತೆ. ತಮ್ಮ ಜೊತೆಗೆ ಕ್ಷೇತ್ರದ ಉಳಿದ ನಾಲ್ವರು ಕಾಂಗ್ರೆಸ್ ಕಾರ್ಪೋರೇಟರ್ ಗಳನ್ನ ಕಟ್ಟಿಕೊಂಡು ಅಖಂಡ ವಿರುದ್ಧ ರಾಜಕಾರಣ ಮಾಡಿದ್ದರು. ಗಲಭೆಗೆ ಕಾರಣವಾದ ದಿನ ಪ್ರಚೋದನೆ ನೀಡಿರುವ ಬಗ್ಗೆ ಪೊಲೀಸರಿಗೆ ಸಂಪತ್ ರಾಜ್ ಬಗ್ಗೆ ಪ್ರಬಲವಾದ ಅನುಮಾನ ವ್ಯಕ್ತವಾಗಿದೆ. ಒಂದು ವೇಳೆ ಪ್ರಕರಣದಲ್ಲಿ ಸಂಪತ್‍ರಾಜ್ ಕೈವಾಡ ಸಾಬೀತಾದರೆ ಕ್ರಮ ಕೈಗೊಳ್ಳಬಹುದು ಎಂದು ಸತ್ಯ ಶೋಧನೆ ವರದಿಯಲ್ಲಿದೆ ಎಂದು ತಿಳಿದು ಬಂದಿದೆ.

  • ಬಿಜೆಪಿ ಪ್ರಚೋದನೆ ಕೊಡೋ ಕೆಲಸ ಮಾಡ್ತಿದೆ: ಡಿಕೆಶಿ

    ಬಿಜೆಪಿ ಪ್ರಚೋದನೆ ಕೊಡೋ ಕೆಲಸ ಮಾಡ್ತಿದೆ: ಡಿಕೆಶಿ

    – ನವೀನ್ ಲೋಕಸಭೆಯಲ್ಲಿ ಬಿಜೆಪಿಗೆ ಮತ ಹಾಕಿದ್ದ
    – ನವೀನ್‍ಗೆ ಬಿಜೆಪಿ ಜೊತೆ ಸಂಪರ್ಕವಿದೆ

    ಬೆಂಗಳೂರು: ಬಿಜೆಪಿ ಪ್ರತಿಹಂತದಲ್ಲೂ ಹೇಳಿಕೆ ಕೊಡುತ್ತಿದೆ. ಆದರೆ ಏನೇನು ಪ್ರಚೋದನೆ ಬೇಕೋ ಎಲ್ಲವನ್ನು ಮಾಡುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಗಂಭೀರ ಆರೋಪ ಮಾಡಿದ್ದಾರೆ.

    ಬೆಂಗಳೂರು ಗಲಭೆಯ ಬಗ್ಗೆ ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್, ಫೇಸ್‍ಬುಕ್‍ನಲ್ಲಿ ಅವಹೇಳಕಾರಿ ಪೋಸ್ಟ್ ಮಾಡಿದ ತಕ್ಷಣ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದಾರೆ. ಆಗ ಪೊಲೀಸರು ಸರಿಯಾದ ಸಮಯಕ್ಕೆ ಕ್ರಮ ಕೈಗೊಂಡಿದ್ದರೆ ಈ ರೀತಿ ಅನಾಹುತ ಆಗುತ್ತಿರಲಿಲ್ಲ. ದೂರು ಕೊಡಲು ಬಂದಾಗಲೇ ತಕ್ಷಣ ಕ್ರಮ ತೆಗೆದುಕೊಳ್ಳಬೇಕಿತ್ತು. ಯಾರು ಏನೇ ಮಾಡಿದ್ದರೂ ತಪ್ಪು, ಫೇಸ್‍ಬುಕ್‍ನಲ್ಲಿ ಪೋಸ್ಟ್ ಹಾಕಿದವರದ್ದು, ಮನೆಗೆ ಬೆಂಕಿ ಹಚ್ಚಿದವರದ್ದು ತಪ್ಪು ಇದೆ. ನಾವು ಯಾರ ಬೆಂಬಲಕ್ಕೂ ಇಲ್ಲ. ಆದರೆ ಅಮಾಯಕರ ಆಸ್ತಿ-ಪಾಸ್ತಿ ಹಾಳಾಗಿದೆ. ಹೀಗಾಗಿ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.

    ಬಿಜೆಪಿ ಪ್ರತಿಹಂತದಲ್ಲೂ ಹೇಳಿಕೆ ಕೊಡುತ್ತಿದೆ. ಇದಕ್ಕೆ ಸೀಮೆಎಣ್ಣೆ, ತುಪ್ಪ ಹಾಕುತ್ತಿದೆ. ಆದರೆ ಯಾರು ನೀರು ಹಾಕಲು ಪ್ರಯತ್ನ ಮಾಡುತ್ತಿಲ್ಲ. ನಾನು ಯಾರ ಹೆಸರು ಹೇಳಲ್ಲ. ಆದರೆ ಏನೇನು ಪ್ರಚೋದನೆ ಬೇಕೋ ಎಲ್ಲವನ್ನು ಮಾಡುತ್ತಿದೆ. ನವೀನ್ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಮತ ಹಾಕಿದ್ದೇನೆ ಅಂತ ಫೇಸ್‍ಬುಕ್‍ನಲ್ಲಿ ಹೇಳಿಕೊಂಡಿದ್ದ. ಹೀಗಾಗಿ ನವೀನ್ ಸಂಪರ್ಕ ಬಿಜೆಪಿ ಜೊತೆಯಿದೆ ಎಂದು ನವೀನ್ ಫೇಸ್‍ಬುಕ್ ಪೋಸ್ಟನ್ನು ಡಿಕೆಶಿ ಪ್ರದರ್ಶಿಸಿದರು.

    ಶಾಸಕರ ಜೊತೆ ನಾನು ಮಂಗಳವಾರ ರಾತ್ರಿ 9 ಗಂಟೆಯವರೆಗೂ ಇದ್ವಿ. ಅವರೇನಾದರೂ ಬೇರೆ ಕಡೆ ಶಿಫ್ಟ್ ಆಗಿಲ್ಲ ಎಂದರೆ ಅವರ ಪ್ರಾಣಕ್ಕೆ ಅಪಾಯವಿತ್ತು. ನಮ್ಮ ಇಬ್ಬರು ಶಾಸಕರು ಅವರ ಜೊತೆ ಹೋಗಿದ್ದಾರೆ. ನಾನು ಕೂಡ ಸಂಪರ್ಕದಲ್ಲಿದ್ದೇನೆ. ರಾತ್ರಿನೂ ಮಾತನಾಡಿದ್ದೇನೆ ಎಂದರು.

    ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿರುವುದು ಅಮಾನವೀಯ ಘಟನೆ, ಯಾರೇ ಮಾಡಿದರೂ ನಾವು ಇದನ್ನು ಖಂಡಿಸುತ್ತೇವೆ. ಕಾನೂನನ್ನ ಯಾರೂ ಕೂಡ ಕೈಗೆ ತೆಗೆದುಕೊಳ್ಳಬಾರದು. ಈ ರೀತಿ ಮಾಡಿದವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಡಿಕೆಶಿ ಹೇಳಿದರು.

    ಕೆಜಿ ಹಳ್ಳಿಯಲ್ಲಿ ನಡೆದ ಘಟನೆ ಹಿಂದೆ ಸಂಚು ಇದೆ. ಹೀಗಾಗಿ ಘಟನೆ ಬಗ್ಗೆ ಪರಿಶೀಲನೆಗೆ ನಮ್ಮ ನಾಯಕರ ತಂಡ ಹೋಗುತ್ತಿದೆ. ಮುಖ್ಯಮಂತ್ರಿಗಳ ದಿಟ್ಟ ಹೇಳಿಕೆಯನ್ನು ನಾನು ಸ್ವಾಗತಿಸುತ್ತೇನೆ. ಆದರೆ ಅವರ ಪಕ್ಷದ ಶಾಸಕರು ಪ್ರಚೋದನಕಾರಿ ಹೇಳಿಕೆ ಕೊಡುತ್ತಿದ್ದಾರೆ. ಬಿಜೆಪಿಯವರು ಇಂತಹ ಸಂದರ್ಭದಲ್ಲಿ ಪ್ರಚೋದನಕಾರಿ ಹೇಳಿಕೆ ಕೊಡದಂತೆ ಸಿಎಂ ತಡೆಯಲಿ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.

  • ಬಹುತೇಕ ಪೊಲೀಸ್ ಅಧಿಕಾರಿಗಳ ಗಾಡಿಗಳು ಪುಡಿ ಪುಡಿ

    ಬಹುತೇಕ ಪೊಲೀಸ್ ಅಧಿಕಾರಿಗಳ ಗಾಡಿಗಳು ಪುಡಿ ಪುಡಿ

    ಬೆಂಗಳೂರು: ಕೆಜಿ ಹಳ್ಳಿ ಗಲಭೆ ಪ್ರಕರಣದ ಕಿಡಿಗೇಡಿಗಳ ದಾಂಧಲೆಗೆ ಡಿಜೆ ಹಳ್ಳಿ ಪೊಲೀಸ್ ಠಾಣೆ ಸಂಪೂರ್ಣವಾಗಿ ಬೆಂಕಿಗಾಹುತಿಯಾಗಿದೆ.

    ಪೊಲೀಸ್ ಠಾಣೆಯ ಪೊಲೀಸರ ಕಾರುಗಳು ಮತ್ತು 50ಕ್ಕೂ ಹೆಚ್ಚು ಬೈಕ್‍ಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿವೆ. ಅಲ್ಲದೇ ಪೊಲೀಸ್ ಠಾಣೆಯ ಪೀಠೋಪಕರಣಗಳು ಮತ್ತು ಕಿಟಕಿ ಗಾಜುಗಳು ಪುಡಿ ಪುಡಿಯಾಗಿವೆ. ಬಹುತೇಕ ಪೊಲೀಸ್ ಅಧಿಕಾರಿಗಳ ಗಾಡಿಗಳನ್ನು ಸುಟ್ಟು ಹಾಕಿದ್ದಾರೆ.

    ಮೊದಲಿಗೆ ಗಲಭೆಯ ಸ್ಪಾಟ್‍ಗೆ ಹೋಗೋಕೆ ಹೋದ ಡಿಜಿ ಹಳ್ಳಿ ಇನ್ಸ್‌ಪೆಕ್ಟರ್ ಗಾಡಿಯನ್ನ ಪುಡಿ ಪುಡಿ ಮಾಡಿದ್ದಾರೆ. ಆ ಬಳಿಕ ಕೆಜಿ ಹಳ್ಳಿ ಇನ್ಸ್‌ಪೆಕ್ಟರ್ ಗಾಡಿಯನ್ನು ಹೊಡೆದು ಹಾಕಿದ್ದಾರೆ. ಇತ್ತ ಸ್ಪಾಟ್‍ಗೆ ಬರುತ್ತಿದ್ದ ಬಾಣಸವಾಡಿ ಎಸಿಪಿ ಜೀಪನ್ನು ಸಹ ಪುಡಿ ಪುಡಿ ಮಾಡಿದ್ದಾರೆ. ಎಸಿಪಿ ನಂತರ ಡಿಸಿಪಿ ಪೂರ್ವ ವಿಭಾಗದ ಶರಣಪ್ಪರ ಕಾರು ಕೂಡ ಪುಡಿ ಪುಡಿ ಆಗಿದೆ.

    ಹೆಚ್ಚಿನ ಪೋರ್ಸ್ ಸ್ಪಾಟ್‍ಗೆ ಬರುವಂತೆ ಸೂಚಿಸಿದ್ದ ಹಿನ್ನೆಲೆಯಲ್ಲಿ ಸ್ಪಾಟ್‍ಗೆ ಬರುತ್ತಿದ್ದ ಈಶಾನ್ಯ ವಿಭಾಗ ಡಿಸಿಪಿ ಭೀಮಾಶಂಕರ್ ಗುಳೇದ್ ಕಾರು ಜಖಂ ಮಾಡಿದ್ದಾರೆ. ಬಳಿಕ ಸ್ಪಾಟ್‍ಗೆ ಬಂದ ಕೆಎಸ್‌ಆರ್‌ಪಿ ಗರುಡ ಪಡೆ, ಫೈರ್ ವಾಹನಗಳಿಗೂ ಕಲ್ಲು ತೂರಿ ಜಖಂ ಮಾಡಿದ್ದಾರೆ.

    ದುಷ್ಕರ್ಮಿಗಳು ದಾಂಧಲೆ ನಡೆಸಿದ ಎಲ್ಲಾ ಕಡೆಗಳಲ್ಲೂ ಸಿಸಿಟಿವಿಗಳನ್ನ ಧ್ವಂಸ ಮಾಡಿದ್ದಾರೆ. ಇತ್ತ ಕಾವಲ್ ಬೈರಸಂದ್ರದ ಪ್ರತಿರಸ್ತೆಯಲ್ಲೂ ನೀರವ ಮೌನ ಆವರಿಸಿದೆ. ಇದರಿಂದ ಭಯಗೊಂಡ ಸ್ಥಳೀಯರು ಮನೆಯಿಂದ ಹೊರಬರೋಕೆ ಹಿಂದೇಟು ಹಾಕುತ್ತಿದ್ದಾರೆ.

    ಗಲಭೆಗೆ ಕಾರಣವಾಗಿದ್ದ ಆರೋಪಿ ನವೀನ್ ಮತ್ತು 110 ಆರೋಪಿಗಳನ್ನು ಈಗಾಗಲೇ ಬಂಧಿಸಿದ್ದೀವಿ. ದಯಮಾಡಿ ಶಾಂತಿಯನ್ನು ಕಾಪಾಡಿ ಎಂದು ಪೊಲೀಸ್ ಕಮಿಷನರ್ ಕಮಲ್ ಪಂಥ್ ಬೆಂಗಳೂರಿನ ಜನತೆಯಲ್ಲಿ ಮನವಿ ಮಾಡಿಕೊಂಡಿದ್ದಾರೆ.