Tag: kg Bopaiah

  • ವಿಶ್ವನಾಥ್ ಒಬ್ಬ ಕೃತಜ್ಞತೆ ಇಲ್ಲದ ಕೃತಘ್ನ; ಮೆದುಳು, ನಾಲಿಗೆಗೆ ಕಂಟ್ರೋಲ್ ತಪ್ಪಿದೆ: ಕೆ.ಜಿ ಬೋಪಯ್ಯ

    ವಿಶ್ವನಾಥ್ ಒಬ್ಬ ಕೃತಜ್ಞತೆ ಇಲ್ಲದ ಕೃತಘ್ನ; ಮೆದುಳು, ನಾಲಿಗೆಗೆ ಕಂಟ್ರೋಲ್ ತಪ್ಪಿದೆ: ಕೆ.ಜಿ ಬೋಪಯ್ಯ

    ಮಡಿಕೇರಿ: ವಿಶ್ವನಾಥ್ ಒಬ್ಬ ಕೃತಜ್ಞತೆ ಇಲ್ಲದ ಕೃತಘ್ನ. ಅವರ ಮೆದುಳು ಮತ್ತು ನಾಲಿಗೆಗೆ ಕಂಟ್ರೋಲ್ ತಪ್ಪಿದೆ ಎಂದು ಬಿಜೆಪಿ ಎಂಎಲ್‌ಸಿ ಹೆಚ್ ವಿಶ್ವನಾಥ್ (H Vishwanath) ವಿರುದ್ಧ ವಿರಾಜಪೇಟೆ ಶಾಸಕ ಕೆ.ಜಿ ಬೋಪಯ್ಯ (KG Bopaiah) ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ವೋಟರ್ ಐಡಿ ಪ್ರಕರಣ ಮುಚ್ಚಿ ಹಾಕಲು ಬಿಜೆಪಿ (BJP) ಶಾರೀಕ್ ಪ್ರಕರಣ ಬಳಸಿಕೊಂಡಿದೆ ಎಂಬ ಡಿಕೆಶಿ (DK Shivakumar) ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದ ವಿಶ್ವನಾಥ್ ವಿರುದ್ಧ ಮಡಿಕೇರಿಯಲ್ಲಿ ಮಾತಾನಾಡಿದ ಬೋಪಯ್ಯ, ಯಾವುದೋ ಕಾರಣಕ್ಕೆ ತಲೆ ಕೆಟ್ಟವರನ್ನು ಸರಿಮಾಡಬಹುದು. ಪೂರ್ತಿ ತಲೆ ಕೆಟ್ಟಿರದಿದ್ದರೂ ತಲೆ ಕೆಟ್ಟವರಂತೆ ಬಾಯಿಗೆ ಬಂದಂತೆ ಮಾತನಾಡುತ್ತಾರೆ. ಅಂತಹ ವ್ಯಕ್ತಿತ್ವ ಹೊಂದಿರುವವರು ವಿಶ್ವನಾಥ್. ಈ ತಲೆ ಕೆಟ್ಟವರ ಬಗ್ಗೆ ಏನು ಮಾತನಾಡುವುದು? ಅಂಥವರನ್ನು ನೆಗ್ಲೆಟ್ ಮಾಡಬೇಕು ಎಂದು ಬೋಪಯ್ಯ ಹೇಳಿಕೆ ನೀಡಿದರು.

    ಹೆಚ್ ವಿಶ್ವನಾಥ್ ಅವರು ಪಾರ್ಲಿಮೆಂಟ್ ಸದಸ್ಯರಾಗಿದ್ದವರು. ಬಿಜೆಪಿಯಿಂದ ಎಲ್ಲವನ್ನೂ ಅನುಭವಿಸಿ ಇದೀಗ ಕೆಟ್ಟದಾಗಿ ಮಾತನಾಡುತ್ತಿದ್ದಾರೆ. ವಿಶ್ವನಾಥ್ ಒಬ್ಬ ಕೃತಜ್ಞತೆ ಇಲ್ಲದ ಕೃತಘ್ನ. ಅವರ ಮೆದುಳು ಮತ್ತು ನಾಲಿಗೆಗೆ ಕಂಟ್ರೋಲ್ ತಪ್ಪಿದೆ ಎಂದು ವಿಶ್ವನಾಥ್ ವಿರುದ್ಧ ಬೋಪಯ್ಯ ಖಾರವಾಗಿ ಪ್ರತಿಕ್ರಿಯಿಸಿದರು. ಇದನ್ನೂ ಓದಿ: ಅಮಾಯಕ ಅವಾರ್ಡ್ ತೆಗೆದುಕೊಳ್ಳಲು ನಾನು ಸಿದ್ಧನಿದ್ದೇನೆ: ಅಶೋಕ್‍ಗೆ ಆಹ್ವಾನ ನೀಡಿದ ಡಿಕೆಶಿ

    ಚುನಾವಣೆ ಎದುರಿಸಲು ಬಿಜೆಪಿಯಿಂದ 15 ಕೋಟಿ ರೂ. ವಿಶ್ವನಾಥ್ ಅವರಿಗೆ ನೀಡಲಾಗಿತ್ತು ಎಂದು ಶ್ರೀನಿವಾಸ್ ಪ್ರಸಾದ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಯಾವ ದೃಷ್ಟಿಯಿಂದ ಹೇಳಿದರು ಎಂಬುದು ನನಗೆ ಗೊತ್ತಿಲ್ಲ. ಶ್ರೀನಿವಾಸ್ ಪ್ರಸಾದ್ ಅವರು ತುಂಬ ಹಿರಿಯರಿದ್ದಾರೆ. ಅವರು ತುಂಬಾ ತೂಕದ ಮಾತುಗಳನ್ನು ಆಡುತ್ತಾರೆ. ಅವರು ಏಕಾಏಕಿ ಆ ರೀತಿಯ ಹೇಳಿಕೆ ಕೊಡುವವರಲ್ಲ. ಶ್ರೀನಿವಾಸ್ ಪ್ರಸಾದ್ ಒಬ್ಬ ಸಜ್ಜನರು ಎಂದು ತಿಳಿಸಿದರು. ಇದನ್ನೂ ಓದಿ: ಮೀಸಲಾತಿ ಕೊಡದಿದ್ದರೆ ಅಧಿವೇಶನದಲ್ಲೇ ಸುವರ್ಣ ಸೌಧಕ್ಕೆ ಮುತ್ತಿಗೆ – ಸರ್ಕಾರಕ್ಕೆ ಮೃತ್ಯುಂಜಯ ಸ್ವಾಮೀಜಿ ಎಚ್ಚರಿಕೆ

    Live Tv
    [brid partner=56869869 player=32851 video=960834 autoplay=true]

  • ಏಪ್ರಿಲ್ 23 ಅಥವಾ ಮೇ ಮೊದಲ ವಾರದಲ್ಲಿ ರಾಜ್ಯ ಚುನಾವಣೆ: ಶಾಸಕ ಕೆ.ಜಿ ಬೋಪಯ್ಯ

    ಏಪ್ರಿಲ್ 23 ಅಥವಾ ಮೇ ಮೊದಲ ವಾರದಲ್ಲಿ ರಾಜ್ಯ ಚುನಾವಣೆ: ಶಾಸಕ ಕೆ.ಜಿ ಬೋಪಯ್ಯ

    ಮಡಿಕೇರಿ: ಏಪ್ರಿಲ್ 23 ಅಥವಾ ಮೇ ಮೊದಲ ವಾರದಲ್ಲಿ ಕರ್ನಾಟಕ ಚುನಾವಣೆ (Karnataka Election) ನಡೆಯುತ್ತದೆ ಎಂದು ರಾಜ್ಯ ಚುನಾವಣೆ ಬಗ್ಗೆ ಮಾಜಿ ಸ್ಪೀಕರ್, ವಿರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ (KG Bopaiah) ಸುಳಿವು ನೀಡಿದರು.

    ಗುಜರಾತ್ ಚುನಾವಣೆ (Gujarat Election) ಮುಗಿದ ಬಳಿಕ ಕರ್ನಾಟಕದಲ್ಲಿ ಚುನಾವಣೆ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ನಡುವೆ ರಾಜ್ಯ ಚುನಾವಣೆ ಬಗ್ಗೆ ಮಡಿಕೇರಿಯಲ್ಲಿ (Madikeri) ‌ಮಾತನಾಡಿದ ಅವರು‌, ಏಪ್ರಿಲ್ 23 ಅಥವಾ ಮೇ ಮೊದಲ ವಾರದಲ್ಲಿ ಎಲೆಕ್ಷನ್ ಇದೆ. ನಮಗೆ ಮೊದಲೇ ಗೊತ್ತಿತ್ತು. ಹೀಗಾಗಿ ಕೊಡಗು ಜಿಲ್ಲೆಯಲ್ಲೂ ಚುನಾವಣೆಗೆ ಸಿದ್ಧತೆ ಮಾಡಿಕೊಂಡಿದ್ದೇವೆ. ಪಕ್ಷ ಚುನಾವಣೆಗೆ ಕಾರ್ಯಕರ್ತರು ಸೇರಿದಂತೆ ಎಲ್ಲರೂ ಸನ್ನದ್ಧವಾಗಿದ್ದೇವೆ ಎಂದು ತಿಳಿಸಿದರು. ಇದನ್ನೂ ಓದಿ: ಭಾರತದ ಪ್ರಥಮ 3ಡಿ ಬಯೋಪ್ರಿಂಟಿಂಗ್‌ ಉತ್ಕೃಷ್ಟತಾ ಕೇಂದ್ರಕ್ಕೆ ಸಚಿವ ಅಶ್ವಥ್‌ ನಾರಾಯಣ ಚಾಲನೆ

    ಗುಜರಾತ್ (Gujarat ) ಮಾದರಿಯಲ್ಲಿ ರಾಜ್ಯದಲ್ಲೂ ಹೊಸ ಮುಖಗಳಿಗೆ ಆದ್ಯತೆ ನೀಡುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು ಅದು ಪಕ್ಷದ ನಿರ್ಧಾರ ಇದರ ಬಗ್ಗೆ ಹೆಚ್ಚು ಮಾತಾನಾಡುವುದಿಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ಡಿಕೆಶಿ ಆ್ಯಕ್ಟಿವ್ ಇದ್ದಾರೆ, ರಾತ್ರಿ-ಹಗಲು ಪಕ್ಷಕ್ಕಾಗಿ ಕೆಲಸ ಮಾಡ್ತಿದ್ದಾರೆ: ಸತೀಶ್ ಜಾರಕಿಹೊಳಿ

    Live Tv
    [brid partner=56869869 player=32851 video=960834 autoplay=true]

  • ಕೊಡಗಿನಲ್ಲೂ ಉಗ್ರ ಚಟುವಟಿಕೆಗಳಿಲ್ಲ ಎಂದು ಹೇಳುವಂತಿಲ್ಲ ಈ ಬಗ್ಗೆ ಮಾಹಿತಿ ಇದೆ: ಕೆ.ಜಿ ಬೋಪಯ್ಯ ಸ್ಫೋಟಕ ಹೇಳಿಕೆ

    ಕೊಡಗಿನಲ್ಲೂ ಉಗ್ರ ಚಟುವಟಿಕೆಗಳಿಲ್ಲ ಎಂದು ಹೇಳುವಂತಿಲ್ಲ ಈ ಬಗ್ಗೆ ಮಾಹಿತಿ ಇದೆ: ಕೆ.ಜಿ ಬೋಪಯ್ಯ ಸ್ಫೋಟಕ ಹೇಳಿಕೆ

    ಮಡಿಕೇರಿ: ಮಂಗಳೂರು (Mangaluru) ಕುಕ್ಕರ್ ಬಾಂಬ್ ಸ್ಫೋಟವಾದ ಬಳಿಕ ರಾಜ್ಯದ ಕೆಲವು ಜಿಲ್ಲೆಗಳಲ್ಲೂ ಸರ್ಕಾರ ಹೈ ಅಲರ್ಟ್ ಮಾಡಿದೆ. ಈ ಬೆನ್ನಲ್ಲೇ ಇದೀಗಾ ಕೊಡಗಿನಲ್ಲೂ ಉಗ್ರ ಚಟುವಟಿಕೆಗಳಿಲ್ಲ ಎಂದು ಹೇಳುವಂತಿಲ್ಲ ಅದರ ಬಗ್ಗೆ ಮಾಹಿತಿ ಕೂಡ ಇದೆ‌ ಎಂದು ವಿರಾಜಪೇಟೆ ಶಾಸಕ ಕೆ.ಜಿ ಬೋಪಯ್ಯ (K.G Bopaiah) ಸ್ಫೋಟಕ ಹೇಳಿಕೆ ನೀಡಿದ್ದಾರೆ.

    ಮಡಿಕೇರಿಯಲ್ಲಿ (Madikeri) ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಉಗ್ರಚಟುವಟಿಕೆಗಳಿಗೆ ಕೊಡಗಿನಲ್ಲಿ ಅದರದ್ದೇ ಪ್ರತ್ಯೇಕ ಪ್ರದೇಶಗಳಿವೆ. ಮಡಿಕೇರಿ ತಾಲೂಕು, ಸುತ್ತಮುತ್ತ ಮತ್ತು ವಿರಾಜಪೇಟೆ ತಾಲೂಕಿನಲ್ಲೂ ಇವೆ. ಈ ಕುರಿತು ಪೊಲೀಸ್ ಇಲಾಖೆ ಎಚ್ಚರ ವಹಿಸಿದೆ ಎಂದು ತಿಳಿಸಿದ ಅವರು ಕೊಡಗಿನ ಹರಿಹರ ಸುಬ್ರಹ್ಮಣ್ಯ ದೇವಾಲಯದಲ್ಲಿ ಅನ್ಯಧರ್ಮೀಯರಿಗೆ ವ್ಯಾಪಾರಕ್ಕೆ ನಿರ್ಬಂಧ ಮಾಡಲಾದ ಹಿನ್ನೆಲೆ ಇತ್ತೀಚಿನ ದಿನಗಳಲ್ಲಿ ದೇಶದ್ರೋಹಿ ಕೆಲಸಗಳಲ್ಲಿ ಒಂದು ವರ್ಗದ ಜನ ತೊಡಗಿದ್ದಾರೆ. ಅನ್ಯಕೋಮಿನ ಜನರು ಆ ಕೆಲಸದಲ್ಲಿ ಭಾಗಿಯಾಗುತ್ತಿದ್ದಾರೆ. ಎಲ್ಲಾ ಕಡೆ ಪ್ರಾಣ ಹಾನಿ ಕೆಲಸದಲ್ಲಿ ಭಾಗಿಯಾಗುತ್ತಿದ್ದಾರೆ. ಹೀಗಾಗಿ ಹಿಂದೂಗಳೇ ಜಾಗೃತಿ ಆಗುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಪದವಿ ಕಾಲೇಜು, ವಿಶ್ವವಿದ್ಯಾಲಯಗಳಲ್ಲಿ ಧ್ಯಾನ – ಯುಜಿಸಿಯಿಂದ ಪತ್ರ

    ದೇಶದಲ್ಲಿ ಅನ್ಯಕೋಮಿನ ಜನರು ಶಾಂತಿ ಸುವ್ಯವಸ್ಥೆ ಹಾಳು ಮಾಡುತ್ತಿದ್ದಾರೆ. ಕೊಡಗಿನಲ್ಲಿ ಮುಂಜಾಗೃತಾ ಕ್ರಮ ಕೈಗೊಳ್ಳಬೇಕಾಗಿದೆ. ಮುಂದಿನ ದಿನಗಳಲ್ಲಿ ಕೊಡಗು ಜಿಲ್ಲೆಯ ಎಲ್ಲೆಡೆ ಊರಿನಲ್ಲಿ ಜಾತ್ರೆ ವಾರ್ಷಿಕೋತ್ಸವಗಳು ನಡೆಯುತ್ತವೆ. ಮತ್ತೊಂದೆಡೆ ಕುಕ್ಕರ್‌ಗಳಲ್ಲಿ ಬಾಂಬ್ ಇಟ್ಟು ಬ್ಲಾಸ್ಟ್ ಮಾಡುತ್ತಿದ್ದಾರೆ. ಹೀಗಾಗಿ ಜನರೇ ಜಾಗೃತರಾಗಿ ಅನ್ಯಕೋಮಿನ ಜನರಿಗೆ ವ್ಯಾಪಾರಕ್ಕೆ ಅವಕಾಶ ನೀಡುತ್ತಿಲ್ಲ. ಅದನ್ನು ನಾನು ಸ್ವಾಗತ ಮಾಡುತ್ತೇನೆ. ಇದು ಎಲ್ಲಾ ಕಡೆ ಆಗಬೇಕಾಗಿದೆ. ಅನ್ಯಕೋಮಿನವರು ಈ ಬಗ್ಗೆ ಎಚ್ಚೆತ್ತುಕೊಳ್ಳಬೇಕು. ಅನ್ಯಕೋಮಿನ ಯುವಕರು ಉಗ್ರತರಬೇತಿಗಳಿಗೆ ಹೋಗಿ ಬರುವವರನ್ನು ಜಿಲ್ಲೆಗೆ ಬರಲು ಬಿಡಬೇಡಿ ಎಂದು ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಮಧ್ಯದ ಬೆರಳು ತೋರಿಸಿದ ಬೈಕ್ ಸವಾರನಿಗೆ ಮನಬಂದಂತೆ ಥಳಿಸಿದ BMTC ಚಾಲಕ ಅಮಾನತು

    Live Tv
    [brid partner=56869869 player=32851 video=960834 autoplay=true]

  • ಮೊಟ್ಟೆ ಎಸೆದ ಪ್ರಕರಣ : ಸಂಪತ್ ಯಾರು ಅಂತ ನಮಗೆ ಗೊತ್ತಿಲ್ಲ: ಕೆ.ಜಿ. ಬೋಪಯ್ಯ

    ಮೊಟ್ಟೆ ಎಸೆದ ಪ್ರಕರಣ : ಸಂಪತ್ ಯಾರು ಅಂತ ನಮಗೆ ಗೊತ್ತಿಲ್ಲ: ಕೆ.ಜಿ. ಬೋಪಯ್ಯ

    ಮಡಿಕೇರಿ: ಸಂಪತ್ ಬಿಜೆಪಿ ಕಾರ್ಯಕರ್ತನಲ್ಲ. ಬಿಜೆಪಿ ಕಾರ್ಯಕರ್ತರಿಗೂ ಮೊಟ್ಟೆ ಎಸೆದಿದ್ದಕ್ಕೂ ಸಂಬಂಧವಿಲ್ಲ ಎಂದು ಶಾಸಕ ಕೆ.ಜಿ. ಬೋಪಯ್ಯ ಹೇಳಿದ್ದಾರೆ.

    ಸಿದ್ದರಾಮಯ್ಯ ಕಾರಿನ ಮೇಲೆ ಮೊಟ್ಟೆ ಎಸೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿದ ಅವರು, ಬಿಜೆಪಿ ಕಾರ್ಯಕರ್ತರು ಇಷ್ಟು ಕೀಳು ಮಟ್ಟಕ್ಕೆ ಇಳಿಯುವುದಿಲ್ಲ. ಸಿದ್ದರಾಮಯ್ಯನವರ ಸ್ಥಾನ ಮಾನ ನಮಗೂ ತಿಳಿದಿದೆ. ಅವರು ವಿರೋಧ ಪಕ್ಷದ ನಾಯಕರು, ಅವರನ್ನು ಶ್ಯಾಡೋ ಚೀಫ್ ಮಿನಿಸ್ಟರ್ ಅಂತ ಕೂಡ ಕರೆಯುತ್ತೇವೆ. ಅವರಿಗೆ ಪ್ರೋಟೋಕಾಲ್ ಇದೆ. ಅಂತಹ ದೊಡ್ಡ ವ್ಯಕ್ತಿ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ. ಸಿದ್ದರಾಮಯ್ಯ ಅವರ ಕಾರಿನ ಮೇಲೆ ಮೊಟ್ಟೆ ಎಸೆದಿದ್ದು ಬಿಜೆಪಿ ಕಾರ್ಯಕರ್ತರಲ್ಲ ಎಂದು ಹತ್ತು ಬಾರಿ ಬೇಕಾದರೂ ಹೇಳುತ್ತೇನೆ ಎಂದಿದ್ದಾರೆ.

    ಶಾಸಕ ಅಪ್ಪಚ್ಚು ರಂಜನ್ ಜೊತೆಗಿರುವ ಸಂಪತ್ ಫೋಟೋ ವೈರಲ್ ಆಗುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿಯ ಎಲ್ಲಾ ಮೆಂಬರ್ ಶಿಪ್ ಡಿಜಿಟಲ್ ಆಗಿದೆ. ಅದರಲ್ಲಿ ಸಂಪತ್ ಹೆಸರಿಲ್ಲ ಎಂದು ನಮ್ಮ ಜಿಲ್ಲಾಧ್ಯಕ್ಷರು ಪರಿಶೀಲನೆ ನಡೆಸಿ ತಿಳಿಸಿದ್ದಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯ ಮೇಲೆ ಮೊಟ್ಟೆ ಎಸೆತ ಪ್ರಕರಣ – ತಡರಾತ್ರಿ ಬಿಜೆಪಿಯ 9 ಮಂದಿ ಬಂಧನ, ಬಿಡುಗಡೆ

    ಸಿದ್ದರಾಮಯ್ಯ ಅವರಿಗೆ ಕಪ್ಪು ಬಾವುಟ ತೋರಿಸಿ ಪ್ರತಿಭಟನೆ ನಡೆಸಿದ್ದು, ಬಿಜೆಪಿ ಕಾರ್ಯಕರ್ತರೇ, ಆದರೆ ಅದರ ಮಧ್ಯೆ ಯಾರೋ ಬಂದು ಮೊಟ್ಟೆ ಎಸೆದಿರುವುದಕ್ಕೂ, ಬಿಜೆಪಿಗೂ ಯಾವುದೇ ಸಂಬಂಧವಿಲ್ಲ. ಯಾವ ಬಿಜೆಪಿ ಕಾರ್ಯಕರ್ತರು ಹಾಗೇ ಮಾಡುವುದಿಲ್ಲ ಎಂದು ಸ್ಪಷ್ಟನೇ ನೀಡಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯ ಮೇಲೆ ಮೊಟ್ಟೆ ಎಸೆದಿದ್ದು ಅಪ್ಪಚ್ಚು ರಂಜನ್ ಆಪ್ತ!

    ಕೊಡಗು ಜಿಲ್ಲೆಯ ಮಳೆಹಾನಿ ಪ್ರದೇಶಗಳಿಗೆ ಭೇಟಿ ನೀಡಿದ್ದ ಸಿದ್ದರಾಮಯ್ಯ ಅವರ ಕಾರಿನ ಮೇಲೆ ಶಾಸಕ ಅಪ್ಪಚ್ಚು ರಂಜನ್ ಆಪ್ತ ಹಾಗೂ ಬಿಜೆಪಿ ಕಾರ್ಯಕರ್ತ ಸಂಪತ್ ಮೊಟ್ಟೆ ಎಸೆದಿದ್ದನು. ಈ ಪ್ರಕರಣ ಎಕ್ಸ್‍ಕ್ಲೂಸಿವ್ ದೃಶ್ಯ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ. ಸೋಮವಾರಪೇಟೆಯ ಲೋಡರ್ಸ್ ಕಾಲೋನಿಯ ಸಂಪತ್ ಕಳೆದ ಎರಡು ವರ್ಷಗಳಿಂದ ಬಿಜೆಪಿಯಲ್ಲಿದ್ದಾನಂತೆ. ಸಣ್ಣಪುಟ್ಟ ಕಾಮಗಾರಿಗಳ ಗುತ್ತಿಗೆ ಕೆಲಸ ಮಾಡುತ್ತಿದ್ದ ಸಂಪತ್ ಅನ್ನು ಇದೀಗ ಪೊಲೀಸರು ಬಂಧಿಸಿದ್ದಾರೆ.

     

    Live Tv
    [brid partner=56869869 player=32851 video=960834 autoplay=true]

  • ಕಾಂಗ್ರೆಸ್ ಕಡೆಯವರೇ ಮೊಟ್ಟೆ ಎಸೆದಿರಬಹುದು: ಕೆ.ಜಿ ಬೋಪಯ್ಯ ಹೊಸ ವಾದ

    ಕಾಂಗ್ರೆಸ್ ಕಡೆಯವರೇ ಮೊಟ್ಟೆ ಎಸೆದಿರಬಹುದು: ಕೆ.ಜಿ ಬೋಪಯ್ಯ ಹೊಸ ವಾದ

    ಮಡಿಕೇರಿ: ಹಿಂದೂ ಸಂಘಟನೆ, ಬಿಜೆಪಿ ಕಾರ್ಯಕರ್ತರು ಮೊಟ್ಟೆ ಎಸೆದಿಲ್ಲ. ಬೇಕು ಬೇಕು ಅಂತ ಕಾಂಗ್ರೆಸ್ ಕಡೆಯವರೇ ಮೊಟ್ಟೆ ಎಸೆದುಕೊಂಡಿರಬಹುದು ಎಂದು ಮಾಜಿ ಸ್ಪೀಕರ್ ಕೆ.ಜಿ ಬೋಪಯ್ಯ ಹೇಳಿದ್ದಾರೆ.

    ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅದು ಸಿದ್ದರಾಮಯ್ಯ ವಿರುದ್ಧ ಸಹಜವಾದ ಕೊಡಗಿನ ಜನರ ಆಕ್ರೋಶವಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯ ಅಡಿಯಲ್ಲಿ ಬಿಜೆಪಿ ಹಾಗೂ ಹಿಂದೂಪರ ಸಂಘಟನೆ ಪ್ರತಿಭಟನೆ ಮಾಡಿದೆ. ಮೊಟ್ಟೆ ಎಸೆದ ಪ್ರಕರಣಕ್ಕೂ ಬಿಜೆಪಿಗೂ ಸಂಘ ಪರಿವಾರಕ್ಕೂ ಯಾವುದೇ ಸಂಬಂಧವಿಲ್ಲ. ಸುಖಾಸುಮ್ಮನೆ ನಮ್ಮ ಕಾರ್ಯಕರ್ತರ ಮೇಲೆ ಕೇಸು ಮಾಡಿಸೋದನ್ನೂ ಸಹಿಸಲ್ಲ ಎಂದು ಹೇಳಿದರು. ಇದನ್ನೂ ಓದಿ: ಕೊಡಗು ಎಸ್‍ಪಿಗೆ ಯಾವ ರೋಗ ಬಂದಿತ್ತು: ಸಿದ್ದರಾಮಯ್ಯ ವಾಗ್ದಾಳಿ

    ಹಿಂದೂ ಸಂಘಟನೆ, ಬಿಜೆಪಿ ಕಾರ್ಯಕರ್ತರು ಮೊಟ್ಟೆ ಎಸೆದಿಲ್ಲ. ಬೇಕು ಬೇಕು ಅಂತ ಅವರೇ, ಕಾಂಗ್ರೆಸ್ ಕಡೆಯವರೇ ಮೊಟ್ಟೆ ಎಸೆದುಕೊಂಡಿರಬಹುದು. ಮುಖ್ಯಮಂತ್ರಿ ಪೈಪೋಟಿಯಲ್ಲಿ ಅವರ ಕಡೆಯವರೇ ಮೊಟ್ಟೆ ಹೊಡೆಸಿದ್ರೋ ಏನೋ. ಸಾವರ್ಕರ್ ಫೋಟೋ ಮುಸಲ್ಮಾನ ಮೆಜಾರಿಟಿ ಇರುವೆಡೆ ಹಾಕಿದ್ಯಾಕೆ ಅಂದಿದ್ದು..? ಟಿಪ್ಪು ಫೋಟೋ ಸ್ವಾತಂತ್ರ್ಯ ಅಮೃತ ಮಹೋತ್ಸವದಲ್ಲಿ ಹಾಕಿ ಅಂತ ಸಿದ್ದರಾಮಯ್ಯ ಹೇಳಿರುವುದು ಕೊಡಗಿನ ಜನ ಹಾಗೂ ಬಿಜೆಪಿ ಕಾರ್ಯಕರ್ತರನ್ನ ಕೆರಳಿಸಿದೆ ಎಂದು ವಿವರಿಸಿದರು. ಇದನ್ನೂ ಓದಿ: ಮಹಾತ್ಮ ಗಾಂಧಿ ಕೊಂದವರು, ನನ್ನನ್ನ ಬಿಡ್ತಾರಾ: ಸಿದ್ದರಾಮಯ್ಯ

    ಸಿದ್ದರಾಮಯ್ಯ ಕೊಡಗಿಗೆ ಬಂದಾಗ ಎಲ್ಲೂ ಪೊಲೀಸ್ ವೈಫಲ್ಯತೆ ಆಗಿಲ್ಲ. ಕೊಡಗಿನಲ್ಲಿ ಕೊಡವರ ಮೇಲೆ ಟಿಪ್ಪು ನಡೆಸಿದ ದೌರ್ಜನ್ಯವನ್ನು ಕೊಡಗಿನ ಜನ ಮರೆತಿಲ್ಲ. ಟಿಪ್ಪು ಸ್ವಾತಂತ್ರ್ಯ ಹೋರಾಟಗಾರ ಅಲ್ಲ ಅಂತ ನ್ಯಾಯಾಲಯವೇ ಹೇಳಿದೆ. ಕೊಡಗಿನ ಕಾಂಗ್ರೆಸ್‍ನವರು ಟಿಪ್ಪು ಬಗ್ಗೆ ತಮ್ಮ ನಿಲುವನ್ನ ಸ್ಪಷ್ಟಪಡಿಸಲಿ. ತಾಕತ್ತಿದ್ದರೆ ಟಿಪ್ಪು ಜಯಂತಿ ಮಾಡುತ್ತೇವೆ ಅಂತ ಚುನಾವಣಾ ಪ್ರಣಾಳಿಕೆಯಲ್ಲಿ ಕಾಂಗ್ರೆಸ್ ಹೇಳಲಿ. ಸಿದ್ದರಾಮಯ್ಯರೇ ಸವಾಲು ಹಾಕೋದು ಬಿಟ್ಟುಬಿಡಿ ಅದೆಲ್ಲಾ ಕೊಡಗಿನಲ್ಲಿ ನಡೆಯೊಲ್ಲ. 26 ರಂದು ಬರುತ್ತೇನೆ ಅನ್ನೋದನ್ನ ನಾವೂ ಕೂಡ ಸವಾಲಾಗಿ ಸ್ವೀಕರಿಸುತ್ತೇವೆ ಎಂದು ಸಿದ್ದರಾಮಯ್ಯಗೆ ಬೋಪಯ್ಯ ಸವಾಲೆಸೆದರು.

    Live Tv
    [brid partner=56869869 player=32851 video=960834 autoplay=true]

  • ತಿಲಕ ಇಟ್ಟುಕೊಂಡಿದ್ದಕ್ಕೇ ಚಾಕು ಇರಿತ – ಶಿವಮೊಗ್ಗ ಪ್ರಕರಣಕ್ಕೆ ಟ್ವಿಸ್ಟ್

    ತಿಲಕ ಇಟ್ಟುಕೊಂಡಿದ್ದಕ್ಕೇ ಚಾಕು ಇರಿತ – ಶಿವಮೊಗ್ಗ ಪ್ರಕರಣಕ್ಕೆ ಟ್ವಿಸ್ಟ್

    ಶಿವಮೊಗ್ಗ: ಸಾವರ್ಕರ್ ಫೋಟೋ ವಿವಾದದಿಂದ ಶಿವಮೊಗ್ಗ ಜಿಲ್ಲೆಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ಇದೀಗ ಪ್ರೇಮ್‌ಸಿಂಗ್ ಸ್ನೇಹಿತನ ಸ್ಫೋಟಕ ಹೇಳಿಕೆಯಿಂದಾಗಿ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ.

    ಈ ಕುರಿತು ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಪ್ರೇಮ್ ಸಿಂಗ್ ಸ್ನೇಹಿತ ಉತ್ತಮ್ ಭಾಟಿ, ಪ್ರೇಮ್‌ಸಿಂಗ್ ಕೈಗೆ ರಾಕಿ, ಹಣೆಗೆ ತಿಲಕ ಇಟ್ಟುಕೊಂಡಿದ್ದಕ್ಕೆ ಚಾಕು ಇರಿದಿದ್ದಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಸಾವರ್ಕರ್ ಪೋಸ್ಟರ್ ವಿವಾದ – ನಾಲ್ವರು ಅರೆಸ್ಟ್

    ಅಮೀರ್ ಅಹಮ್ಮದ್ ಸರ್ಕಲ್ ನಲ್ಲಿ ನಡೆದ ಗಲಾಟೆ ಬಗ್ಗೆ ನಮಗೆ ಮಾಹಿತಿ ಇರಲಿಲ್ಲ. ಪೊಲೀಸರು 144 ಸೆಕ್ಷನ್ ಇದೆ ಎಂದು ಹೇಳಿದಾಗ ನಾವು ಅಂಗಡಿ ಬಂದ್ ಮಾಡಿದೆವು. ಇದೇ ವೇಳೆ ಏಕಾಏಕಿ ಗುಂಪಿನಲ್ಲಿ ಬಂದ ಹತ್ತು ಜನರು ಪ್ರೇಮ್ ಸಿಂಗ್ ಮೇಲೆ ಹಲ್ಲೆ ನಡೆಸಿ, ಚಾಕು ಇರಿದಿದ್ದಾರೆ. ಕೈಗೆ ರಾಕಿ ಕಟ್ಟಿಕೊಂಡಿದ್ದಕ್ಕೆ, ಹಣೆಗೆ ತಿಲಕ ಇಟ್ಟಿದ್ದಕ್ಕೇ ಚಾಕು ಇರಿದಿದ್ದಾರೆ ಎಂದು ಉತ್ತಮ್ ಹೇಳಿದ್ದಾರೆ. ಇದನ್ನೂ ಓದಿ: ಶಿವಮೊಗ್ಗದಲ್ಲಿ ಬೆಳ್ಳಂಬೆಳಗ್ಗೆ ಗುಂಡಿನ ಸದ್ದು- ಪೊಲೀಸರಿಗೂ ಚಾಕು ಇರಿಯಲು ಮುಂದಾದ ಕಿಡಿಗೇಡಿ

    ಮುಬಾರಕ್ ಅರೆಸ್ಟ್: ಭದ್ರಾವತಿಯಲ್ಲಿ ಬಜರಂಗದಳ ಕಾರ್ಯಕರ್ತ ಸುನೀಲ್ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಬಾರಕ್‌ನನ್ನು ಪೊಲೀಸರು ಬಂಧಿಸಿದ್ದು, ತನಿಖೆ ಕೈಗೊಂಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಗನ್ ಹಿಡಿಯೋದು ನಮ್ಮ ಜನ್ಮಸಿದ್ಧ ಹಕ್ಕು, ಅದನ್ನ ಕೇಳೋಕೆ ಇವನ್ಯಾರು: ಸಿದ್ದು ವಿರುದ್ಧ ಬೋಪಯ್ಯ ಕಿಡಿ

    ಗನ್ ಹಿಡಿಯೋದು ನಮ್ಮ ಜನ್ಮಸಿದ್ಧ ಹಕ್ಕು, ಅದನ್ನ ಕೇಳೋಕೆ ಇವನ್ಯಾರು: ಸಿದ್ದು ವಿರುದ್ಧ ಬೋಪಯ್ಯ ಕಿಡಿ

    ಮಡಿಕೇರಿ: ಗನ್ ಹಿಡಿಯೋದು ನಮ್ಮ ಜನ್ಮಸಿದ್ಧ ಹಕ್ಕು, ಅದನ್ನ ಕೇಳೋಕೆ ಇವನ್ಯಾರು ಎಂದು ಏಕವಚನದಲ್ಲೇ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ವಿರಾಜಪೇಟೆ ಶಾಸಕ ಕೆ.ಜಿ.ಬೋಪಯ್ಯ ತಿರುಗೇಟು ಕೊಟ್ಟರು.

    ಕೊಡಗಿನ ಪೊನ್ನಂಪೇಟೆಯ ಸಾಯಿ ಶಂಕರ ಶಾಲೆಯಲ್ಲಿ ಸಂಘ ಪರಿವಾರದ ತ್ರಿಶೂಲ ದೀಕ್ಷೆ, ಶಸ್ತ್ರಾಸ್ತ್ರ ತರಬೇತಿ ಪ್ರಕರಣಕ್ಕೆ ಸಂಬಂಧಿಸಿದಂತೆ, ಈಗಾಗಲೇ ಕೊಡಗಿನ ಶಾಸಕರು ಸಂಘ ಪರಿವಾರದವರ ಮೇಲೆ ಪೊನ್ನಂಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಆಗಿದೆ. ಈ ನಿಟ್ಟಿನಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಶಾಸಕರು, ಶಿಬಿರದಲ್ಲಿ ಭಾಗವಹಿಸುವವರನ್ನು ಬಂಧಿಸಿ ವಿಚಾರಣೆ ನಡೆಸಬೇಕು ಎಂಬ ಹೇಳಿಕೆ ನೀಡಿದ್ದರು. ಈ ಕುರಿತು ಕೆ.ಜಿ.ಬೋಪಯ್ಯ ಅವರು ಮಾಧ್ಯಮಗಳೊಂದಿಗೆ ಮಾತನಾಡಿದ್ದು, ಭಜರಂಗದಳ ಶಿಬಿರದಲ್ಲಿ ಶಾಸಕರು ಭಾಗವಹಿಸಬಾರದು ಅಂತ ಕಾನೂನಿದ್ಯಾ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಭೂ ವಿವಾದದ ತೀರ್ಪು 108 ವರ್ಷದ ಬಳಿಕ ಪ್ರಕಟ

    ನಮ್ಮ ಪರಿವಾರದ ಕಾರ್ಯಕ್ರಮ ನಡೆಯುವಾಗ ಭೇಟಿ ಕೊಡೋದು ನನ್ನ ಕರ್ತವ್ಯ. ಗನ್ ಹಿಡಿಯೋದು ನಮ್ಮ ಜನ್ಮಸಿದ್ಧ ಹಕ್ಕು, ಅದನ್ನ ಕೇಳೋಕೆ ಇವನ್ಯಾರು ಸಿದ್ದರಾಮಯ್ಯ? ಎಂದು ಏಕವಚನದಲ್ಲೇ ಮಾತನಾಡಿದರು. ವಿಶ್ವ ಹಿಂದೂ ಪರಿಷತ್, ಭಜರಂಗದಳ ಪ್ರತೀ ವರ್ಷ ಅಭ್ಯಾಸ ವರ್ಗ ರಾಜ್ಯದ ವಿವಿಧೆಡೆಗಳಲ್ಲಿ ಮಾಡ್ತಾರೆ. ಈ ವರ್ಷ ಕೊಡಗಿನಲ್ಲಿ ಕಾರ್ಯಕ್ರಮ ಮಾಡಿದ್ದಾರೆ ಅಷ್ಟೇ ಎಂದರು.

    ಏನಾದ್ರೂ ತ್ರಿಶೂಲ ಬ್ಯಾನ್ ಆಗಿದೆಯಾ? ಸಿದ್ದರಾಮಯ್ಯರ ಚರಿತ್ರೆ ಎಲ್ಲರಿಗೂ ಗೊತ್ತಿದೆ. ಅಲ್ಪಸಂಖ್ಯಾತರನ್ನು ಹೇಗೆ ಓಲೈಸಲಿ ಎನ್ನುವ ಮೂಲಕವೇ ಸಿದ್ದರಾಮಯ್ಯ ದಿನಚರಿ ಶುರುವಾಗುತ್ತೆ. ಸಿದ್ದರಾಮಯ್ಯ ನಮಗೆ ಸಂವಿಧಾನದ ಬದ್ಧತೆ ಬಗ್ಗೆ ಹೇಳಿ ಕೊಡುವ ಅಗತ್ಯವಿಲ್ಲ. ಈ ಹಿಂದೆ ಇವರದೇ ಶಾಸಕ ಓರ್ವ ದಲಿತನ ಮನೆಗೆ ಡಿಜೆ ಹಳ್ಳಿ-ಕೆಜೆ ಹಳ್ಳಿಯಲ್ಲಿ ಬೆಂಕಿ ಹಾಕಿದಾಗ ಸಂವಿಧಾನ ಎಲ್ಲೋಗಿತ್ತು? ಹುಬ್ಬಳ್ಳಿಯಲ್ಲಿ ಪೊಲೀಸ್ ಠಾಣೆ ಮೇಲೆ ದಾಳಿ ಮಾಡಿದಾಗ ಸಂವಿಧಾನ ಇರಲಿಲ್ವಾ? ಎಂದು ಆಕ್ರೋಶಗೊಂಡರು.

    ಸಿದ್ದರಾಮಯ್ಯ ಸಂವಿಧಾನವನ್ನ ಮೊದಲು ಸರಿಯಾಗಿ ಓದಬೇಕು. ಶಿಬಿರದಲ್ಲಿ ಏರ್ ಗನ್ ಬಳಸಲು ಲೈಸನ್ಸ್ ಬೇಕಿಲ್ಲ. ಸೆಲ್ಫ್ ಡಿಫೆನ್ಸ್ ಬೇಕಲ್ವಾ? ಶಾಲೆಯಲ್ಲಿ ಅಭ್ಯಾಸ ಮಾಡಿದ್ದಾರೆ ಎಂಬುದು ಹೌದು. ಆದರೆ ಅದು ಖಾಸಗಿ ಶಾಲೆ. ಸುಮ್ಮನೆ ಸಿದ್ದರಾಮಯ್ಯ ಬಾಯಿಗೆ ಬಂದಂಗೆ ಮಾತಾಡಿದ್ರೆ ಚೆನ್ನಾಗಿರಲ್ಲ. ನಮಗೂ ಮಾತಾಡೋಕೆ ಬರುತ್ತೆ. ಹಿಂದೂ ಸಮಾಜದ ರಕ್ಷಣೆಗೆ ಅಭ್ಯಾಸ ಮಾಡಿದ್ರೆ ಅದರಲ್ಲಿ ತಪ್ಪೇನಿದೆ? ಎಲ್ಲೂ ಕಾನೂನು ಉಲ್ಲಂಘನೆ ಮಾಡಿಲ್ಲ. ಈ ಅಭ್ಯಾಸ ಮಾಡಿರುವುದು ಯುವಕರು ಸ್ವಯಂ ರಕ್ಷಣೆ ಪಡೆಯುವುದಕ್ಕೆ. ಮುಂದಿನ ದಿನಗಳಲ್ಲಿ ರಕ್ಷಣೆ ಅವಶ್ಯಕತೆ ಇದೆ ಎಂದು ತಿಳಿಸಿದರು.

    ಎಸ್‍ಡಿಪಿಐ ಅವರು ರಾಜ್ಯಪಾಲರಿಗೆ ದೂರು ನೀಡಿದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಎಸ್‍ಡಿಪಿಐ ಅವರು ಹಾದಿ-ಬೀದಿಯಲ್ಲಿ ಹೋಗೋರಿಗೆಲ್ಲ ಕೌಂಟರ್ ಕೊಡಲ್ಲ. ಎಸ್‍ಡಿಪಿಐ, ಪಿಎಫ್‍ಐ ಈ ದೇಶಕ್ಕೆ ಮಾರಕ. ಅವುಗಳನ್ನ ಬ್ಯಾನ್ ಮಾಡಬೇಕು. ಎಸ್‍ಡಿಪಿಐ ಪ್ರಕರಣ ದಾಖಲು ಮಾಡಿದ್ರೆ, ಮಾಡಲಿ. ಎದುರಿಸುವ ಶಕ್ತಿ ನನಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದನ್ನೂ ಓದಿ:  ಕಾಂಗ್ರೆಸ್ ಹಿರಿಯ ನಾಯಕ ಪಿ.ಚಿದಂಬರಂಗೆ ಬೆಳ್ಳಂಬೆಳಗ್ಗೆ ಶಾಕ್ – ಮನೆ ಸೇರಿ 7 ಕಡೆ ಸಿಬಿಐ ದಾಳಿ

  • ಶಾಲೆ ಆವರಣದಲ್ಲೇ ಭಜರಂಗದಳ ಕಾರ್ಯಕರ್ತರಿಗೆ ತ್ರಿಶೂಲ ದೀಕ್ಷೆ, ಶಸ್ತ್ರಾಸ್ತ್ರ ತರಬೇತಿ

    ಶಾಲೆ ಆವರಣದಲ್ಲೇ ಭಜರಂಗದಳ ಕಾರ್ಯಕರ್ತರಿಗೆ ತ್ರಿಶೂಲ ದೀಕ್ಷೆ, ಶಸ್ತ್ರಾಸ್ತ್ರ ತರಬೇತಿ

    ಮಡಿಕೇರಿ: ರಾಜ್ಯದಲ್ಲಿ ಹಿಜಬ್, ಆಜಾನ್ ಹಾಗೂ ದೇವಸ್ಥಾನ ವಿಚಾರಕ್ಕೆ ಸಂಬಂಧಿಸಿದಂತೆ ದಿನವೂ ಹಿಂದೂ ಮುಸ್ಲಿಮರ ನಡುವೆ ಧರ್ಮಯುದ್ಧ ನಡೆಯುತ್ತಿದೆ. ಆದರೂ ಯಾವುದೇ ಕೋಮುಗಲಭೆಗೆ ಅವಕಾಶ ನೀಡುವುದಿಲ್ಲ ಎಂದು ಸಬೂಬು ಹೇಳುತ್ತಿರುವ ಸರ್ಕಾರ ಇದೀಗ ಮತ್ತೊಂದು ವಿವಾದಕ್ಕೆ ದಾರಿಮಾಡಿಕೊಟ್ಟಂತಿದೆ.

    ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ಸಾಯಿ ಶಂಕರ ಶಾಲೆಯಲ್ಲಿ ಬಜರಂಗದಳ ದಳದಿಂದ ನೂರಾರು ಯುವಕರಿಗೆ ಶಸ್ತ್ರಾಸ್ತ್ರ ತರಬೇತಿ ನೀಡಿರುವುದು ಬೆಳಕಿಗೆ ಬಂದಿದೆ. ಇದನ್ನೂ ಓದಿ: ಇಂದಿನಿಂದ ಶಾಲೆ ಆರಂಭ – ಈ ವರ್ಷವೂ ಮಕ್ಕಳಿಗಿಲ್ಲ ಸೈಕಲ್ ಭಾಗ್ಯ

    MDK

    ಇದರಿಂದ ಶಾಲೆಯ ಆವರಣದಲ್ಲಿ ಹಿಜಬ್‌ಗೆ ಅವಕಾಶ ಇಲ್ಲವೆಂದಿದ್ದ ಸರ್ಕಾರ ಇದೀಗ ಸಂಘ ಪರಿವಾರದಿಂದ ಶಸ್ತ್ರಾಸ್ತ್ರ ತರಬೇತಿಗೆ ಅವಕಾಶ ನೀಡಿದ್ದು ಹೇಗೆ? ಎಂಬ ಅನುಮಾನ ಶುರುವಾಗಿದೆ. ಈ ಕುರಿತ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಸಾರ್ವಜನಿಕ ವಲಯದಲ್ಲಿ ಆಕ್ಷೇಪ ವ್ಯಕ್ತವಾಗುತ್ತಿದೆ. 

    ಕೊಡಗಿನ ಪೊನ್ನಂಪೇಟೆ ಸಾಯಿ ಶಂಕರ ಶಾಲೆಯಲ್ಲಿ ಕಳೆದ ವಾರ ಮುಕ್ತಾಯವಾದ ಶೌರ್ಯ ಪ್ರಶಿಕ್ಷಣ ವರ್ಗದಲ್ಲಿ ಬಜರಂಗದಳದ ಕಾರ್ಯಕರ್ತರಿಗೆ ಶಸ್ತ್ರಾಸ್ತ್ರ ತರಬೇತಿ ನೀಡಲಾಗಿದೆ. ಶಾಲಾ ಆವರಣದಲ್ಲೇ ಸುಮಾರು 8 ದಿನಗಳ ಕಾಲ ಶೌರ್ಯ ಪ್ರಶಿಕ್ಷಣ ವರ್ಗದ ತರಬೇತಿ ನಡೆದಿದೆ. ಈ ತರಬೇತಿ ಶಿಬಿರ ನಡೆದ 8 ದಿನಗಳ ಅವಧಿಯಲ್ಲಿ ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್, ವಿರಾಜಪೇಟೆ ಶಾಸಕ ಕೆ.ಜಿ.ಬೋಪಯ್ಯ ಹಾಗೂ ಜಿಲ್ಲೆಯ ಕೆಲ ಮುಖಂಡರೂ ಪಾಲ್ಗೊಂಡಿದ್ದರು ಎಂದು ಮೂಲಗಳು ಖಚಿತ ಪಡಿಸಿವೆ. ಇದನ್ನೂ ಓದಿ: ಮೇನಲ್ಲೂ ಕೆಆರ್‌ಎಸ್‍ನಲ್ಲಿದೆ 100 ಅಡಿ ನೀರು – ಕೇರಳದಲ್ಲಿ ಭಾರೀ ಮಳೆ

    ರಾಜ್ಯದ ವಿವಿಧೆಡೆಯಿಂದ ಬಂದಿದ್ದ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳ ಕಾರ್ಯಕರ್ತರು ತರಬೇತಿ ಪಡೆದುಕೊಂಡಿದ್ದಾರೆ. ಶಾಲಾ ಆವರಣದಲ್ಲಿ ಬಂದೂಕು ಹಿಡಿದು ತರಬೇತಿ ಪಡೆಯುತ್ತಿರುವುದು ಹಾಗೂ ಸಂಸ್ಥೆಯ ಸಭಾಂಗಣದಲ್ಲಿ ತ್ರಿಶೂಲ ಹಿಡಿದು ದೀಕ್ಷೆ ಪಡೆಯುತ್ತಿರುವ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

    ಈ ಕುರಿತು ಟ್ವೀಟ್ ಮೂಲಕ ಆಕ್ಷೇಪ ವ್ಯಕ್ತಪಡಿಸಿರುವ ಎಸ್‌ಡಿಪಿಐ ರಾಜ್ಯ ಕಾರ್ಯದರ್ಶಿ ಅಫ್ಸರ್ ಕೊಡ್ಲಿಪೇಟೆ ಅವರು, ಶಿಕ್ಷಣ ಸಚಿವ ಬಿ.ಸಿ.ನಾಗೇಶ್, ಕೊಡಗು ಪೊಲೀಸ್ ವರಿಷ್ಠಾಧಿಕಾರಿ ಸೇರಿದಂತೆ ಪ್ರಮುಖರಿಗೆ ಟ್ಯಾಗ್ ಮಾಡಿ, ತನಿಖೆ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.

  • ಸಾಮರಸ್ಯ ಬೇಕು ಅಂದ್ರೆ ಆಜಾನ್ ಸೌಂಡ್ ಕಡಿಮೆ ಮಾಡಿ: ಕೆ.ಜಿ ಬೋಪಯ್ಯ

    ಸಾಮರಸ್ಯ ಬೇಕು ಅಂದ್ರೆ ಆಜಾನ್ ಸೌಂಡ್ ಕಡಿಮೆ ಮಾಡಿ: ಕೆ.ಜಿ ಬೋಪಯ್ಯ

    ಮಡಿಕೇರಿ: ರಾಜ್ಯದಲ್ಲಿ ಸಾಮರಸ್ಯ ಬೇಕು ಅಂದ್ರೆ ಆಜಾನ್ ಸೌಂಡ್ ಕಡಿಮೆ ಮಾಡಿ ಎಂದು ಮಸೀದಿಗಳಿಗೆ ವಿರಾಜಪೇಟೆ ಶಾಸಕ ಕೆ.ಜಿ ಬೋಪಯ್ಯ ಎಚ್ಚರಿಕೆ ನೀಡಿದ್ದಾರೆ.

    ಮಡಿಕೇರಿಯಲ್ಲಿ ಮಾತಾನಾಡಿದ ಅವರು, ಈ ಹಿಂದೆಯೇ ಮಸೀದಿ ಆಗಲಿ, ಮಂದಿರ ಆಗಲಿ ಮೈಕ್ ಬಳಸದಂತೆ ಸುಪ್ರೀಂಕೋರ್ಟ್ ಹೇಳಿದೆ. ಆದರೆ ಇದುವರೆಗೆ ಆ ಕಾನೂನನ್ನು ಯಾರು ಪಾಲನೆ ಮಾಡಿಲ್ಲ. ಈಗ ಅಂತಿಮ ಸಮಯ ಅಂತ ಬಂದಿದೆ .ಹೀಗಾಗಿ ಕಾನೂನು ಮುಂದಿನ ದಿನಗಳಲ್ಲಿ ಅದರ ಕೆಲಸ ಮಾಡುತ್ತದೆ ಎಂದರು.  ಇದನ್ನೂ ಓದಿ: ಧರ್ಮ ಸಂಸತ್‍ನಲ್ಲಿ ದ್ವೇಷ ಭಾಷಣ – ದೆಹಲಿ ಪೊಲೀಸ್ ಸಲ್ಲಿಸಿದ್ದ ಅಫಿಡವಿಟ್‍ಗೆ ಸುಪ್ರೀಂ ಅಸಮಾಧಾನ

    mosque-loudspeakers

    ಈಗಾಗಲೇ ಅಜಾನ್ ಶಬ್ಧದಿಂದ ಹಾರ್ಟ್ ಪೇಷೆಂಟ್ಸ್ ಸಾಯುವಂತಾಗಿದೆ. ಬೆಳಗ್ಗೆ ಐದು ಗಂಟೆ ಆಗಿತ್ತೆಂದರೆ ಮತ್ತೆ ಮಲಗುವಂತಿಲ್ಲ ಎನ್ನುವಂತಾಗಿದೆ. ಮಸೀದಿಗಳಲ್ಲಿ ಎಷ್ಟು ಎತ್ತರಲ್ಲಿ ಮೈಕ್ ಕಟ್ಟಬೇಕು ಎಂಬ ಹಠಕ್ಕೆ ಬಿದ್ದು ಕಟ್ಟುತ್ತಿದ್ದಾರೆ. ಈಗಾಲದರೂ ಸಾಮರಸ್ಯ ಬೇಕು ಎನ್ನುವವರು ಮೈಕ್ ಸೌಂಡ್ ಕಡಿಮೆ ಮಾಡಿ ಎಂದು ಶಾಸಕ ಹೇಳಿದ್ದಾರೆ.

     

  • ತಲಕಾವೇರಿಯಲ್ಲಿ ತೀರ್ಥೋದ್ಭವ- ಭಕ್ತರ ದರ್ಶನಕ್ಕೆ ಸಕಲ ಸಿದ್ಧತೆ

    ತಲಕಾವೇರಿಯಲ್ಲಿ ತೀರ್ಥೋದ್ಭವ- ಭಕ್ತರ ದರ್ಶನಕ್ಕೆ ಸಕಲ ಸಿದ್ಧತೆ

    ಮಡಿಕೇರಿ: ಕರುನಾಡ ಜೀವನದಿ ಕಾವೇರಿಯ ಪವಿತ್ರ ತೀರ್ಥೋದ್ಭವಕ್ಕೆ ದಿನಗಣನೆ ಆರಂಭವಾಗಿದೆ. ತಲಕಾವೇರಿಯಲ್ಲಿ ಇದೇ ಅಕ್ಟೋಬರ್ 17ರಂದು ಭಾನುವಾರ ಮಧ್ಯಾಹ್ನ 1ಗಂಟೆ 11 ನಿಮಿಷಕ್ಕೆ ಸಲ್ಲುವ ಮಕರ ಲಗ್ನದಲ್ಲಿ ಕಾವೇರಿಯು ತೀರ್ಥರೂಪಿಣಿಯಾಗಿ ಭಕ್ತರಿಗೆ ಒಲಿಯಲಿದ್ದಾಳೆ.

    ಈ ಬಾರಿ ಕಾವೇರಿ ತೀರ್ಥೊದ್ಭವ ವೀಕ್ಷಿಸಲು ಎಲ್ಲರಿಗೂ ಮುಕ್ತ ಅವಕಾಶ ನೀಡಲಾಗುತ್ತದೆ. ಅದರೆ ಕೋವಿಡ್ ಪಾಸಿಟಿವ್ ರೇಟ್ ಏರಿಳಿತ ಅಗುತ್ತಿರುವುದರಿಂದ ಜನ ದಟ್ಟಣೆ ನಿಯಂತ್ರಣದಲ್ಲಿ ಇರಬೇಕಾಗುತ್ತದೆ ಎಂದು ವಿರಾಜಪೇಟೆ ಶಾಸಕ ಕೆ.ಜಿ.ಬೋಪಯ್ಯ ತಿಳಿಸಿದ್ದಾರೆ. ಇದನ್ನೂ ಓದಿ: ಬಿಎಂಟಿಸಿ ಟು ಪಿಎ ಜರ್ನಿ – ಸಾವಿರ ಲೆಕ್ಕದಲ್ಲಿ ಸಂಬಳ ಪಡೆಯುತ್ತಿದ್ದವ ಕೋಟಿ ಕುಬೇರನಾದ ಕಥೆ ಓದಿ

    ಇಂದು ಕಾವೇರಿ ತೀರ್ಥೊದ್ಭವ ಸಂಬಂಧಿಸಿದಂತೆ ನಡೆದ ಸಭೆಯಲ್ಲಿ ಮಾತನಾಡಿದ ಅವರು, ತೀರ್ಥೂದ್ಭವ ಸಂದರ್ಭ ಸ್ಥಳೀಯರು ಆದಷ್ಟು ಮುನ್ನೆಚ್ಚರಿಕೆ ವಹಿಸಬೇಕು. ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಸ್ವಯಂನಿಯಂತ್ರಣ ಮಾಡಿಕೊಂಡು ಕಾವೇರಿ ದರ್ಶನ ಮಾಡಬೇಕು. ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ಸ್ನಾನಕ್ಕೆ ಅವಕಾಶ ಇರುತ್ತದೆ. ತಲಕಾವೇರಿ ಕುಂಡಿಕೆ ಬಳಿ ಸ್ನಾನ ಮಾಡಲು ಅವಕಾಶ ಇಲ್ಲ. ಅಲ್ಲದೆ ಈ ಬಾರಿ ತಲಕಾವೇರಿಯಲ್ಲಿ ಭಕ್ತರಿಗೆ ಊಟದ ವ್ಯವಸ್ಥೆ ಇರುವುದಿಲ್ಲ. ಕೇವಲ ಸ್ವಯಂ ಸೇವಕರು ಪೊಲೀಸ್ ಹಾಗೂ ವಿವಿಧ ಇಲಾಖೆಯ ಸಿಬ್ಬಂದಿಗೆ ಮಾತ್ರ ಊಟ ವ್ಯವಸ್ಥೆಯನ್ನು ಕೊಡಗು ಏಕೀಕರಣ ರಂಗದ ಪ್ರಮುಖರು ಮಾಡಲ್ಲಿದ್ದಾರೆ ಎಂದು ತಿಳಿಸಿದರು.

    ಕೊಡಗಿನ ಧಾರ್ಮಿಕ ಕ್ಷೇತ್ರಗಳಿಗೆ ಬರುವ ಪ್ರವಾಸಿಗರು ವಸ್ತ್ರ ಸಂಹಿತೆ ನಿಯಮ ಪಾಲಿಸಬೇಕು. ಜಿಲ್ಲೆಯಲ್ಲಿರುವ ಹೋಮ್ ಸ್ಟೇ ಹೋಟೆಲ್ ರೇಸಾರ್ಟ್ ಮಾಲೀಕರು. ಬರುವ ಪ್ರವಾಸಿಗರಿಗೆ ಸರಿಯಾಗಿ ಮನವರಿಕೆ ಮಾಡಿ ಧಾರ್ಮಿಕ ಕ್ಷೇತ್ರಗಳಿಗೆ ಕಳುಹಿಸಬೇಕು. ಕೆಲ ಪ್ರವಾಸಿಗರು ಮದ್ಯಪಾನ ಮಾಡಿ, ತುಂಡು ಉಡುಗೆ ತೊಟ್ಟು ಬರುತ್ತಿದ್ದಾರೆ. ಕೊಡಗಿನ ತಲಕಾವೇರಿ, ಭಂಗಡೇಶ್ವರ, ಇರ್ಪು ರಾಮೇಶ್ವರ, ಪಾಡಿ ಇಗ್ಗುತಪ್ಪ, ಮಡಿಕೇರಿ ಓಂಕಾರೇಶ್ವರ ದೇವಾಲಯಗಳಿಗೆ ಹೋಗಬೇಕಾದರೆ ಸರಿಯಾದ ರೀತಿಯಲ್ಲಿ ವಸ್ತ್ರಗಳನ್ನು ಧರಿಸಿಕೊಂಡು ಹೋಗಬೇಕು. ಮದ್ಯಪಾನ ಮಾಡಿ ಬರುವವರಿಗೆ ಸ್ಥಳದಲ್ಲೇ ದಂಡ ಹಾಕುವ ವ್ಯವಸ್ಥೆ ಅಗಬೇಕು ಎಂದು ಶಾಸಕ ಬೋಪಯ್ಯ ತಿಳಿಸಿದ್ದಾರೆ. ಇದನ್ನೂ ಓದಿ: ಬಿಎಸ್‍ವೈ ಆಪ್ತನ ಮನೆ ಮೇಲೆ ಐಟಿ ರೇಡ್

    ಕೊರೊನಾ ಹಿನ್ನೆಲೆ ಪವಿತ್ರ ತೀರ್ಥೋದ್ಭವ ಕ್ಷೇತ್ರ ತಲಕಾವೇರಿಯಲ್ಲಿ ಈ ಬಾರಿ ಸರಳ ರೀತಿಯಲ್ಲಿ ಸಿದ್ಧತೆಗಳು ನಡೆಯುತ್ತಿವೆ. ವರ್ಷಕ್ಕೊಮ್ಮೆ ಘಟಿಸುವ ಈ ವಿಸ್ಮಯವನ್ನು ಕಣ್ತುಂಬಿಕೊಳ್ಳಲು ದೇಶದ ವಿವಿಧೆಡೆಗಳಿಂದ ಸಹಸ್ರಾರು ಸಂಖ್ಯೆಯ ಭಕ್ತರು ಆಗಮಿಸುತ್ತಿದ್ದರು. ಆದರೆ ಕೊರಾನಾ ಹಿನ್ನೆಲೆಯಲ್ಲಿ ಹೆಚ್ಚು ಭಕ್ತರ ಆಗಮನಕ್ಕೆ ದೇವಾಲಯ ಅಡಳಿತ ಮಂಡಳಿ ಹಾಗೂ ಜಿಲ್ಲಾಡಳಿತ ತಡೆಯೊಡ್ಡಿದ್ದು, ಕಡಿಮೆ ಭಕ್ತರು ಆಗಮಿಸುವಂತೆ ಕೋರಿದೆ.

    ಈ ಬಾರಿ ತೀರ್ಥೋದ್ಭವ ವೀಕ್ಷಣಗೆ ಎಲ್ಲರಿಗೂ ಮುಕ್ತ ಅವಕಾಶ ಇದೆ. ಆದರೆ ಜನರೇ ಸ್ವಯಂಪ್ರೇರಿತವಾಗಿ ರಕ್ಷಣೆ ಮಾಡಿಕೊಳ್ಳುವ ಅಗತ್ಯ ಇರುವುದರಿಂದ ಈ ಬಾರಿ ಕಡಿಮೆ ಭಕ್ತರು ತೀರ್ಥೊದ್ಭವ ಸಂದರ್ಭದಲ್ಲಿ ಭಾಗವಹಿಸಬೇಕು. ಈ ಬಾರಿ ಕಾವೇರಿಯ ಕುಡಿಕೆ ಬಳಿ ಸ್ನಾನಕ್ಕೆ ಅವಕಾಶ ಇರುವುದಿಲ್ಲ. ಕೇವಲ ತೀರ್ಥ ಸ್ವೀಕರಿಸಿ ಹೋಗುವುದಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.