Tag: KFD disease

  • ಮಲೆನಾಡಿಗರನ್ನೂ ಬಿಟ್ಟೂ ಬಿಡದೇ ಕಾಡ್ತಿದೆ ಮಂಗನ ಕಾಯಿಲೆ – ವರ್ಷದ ಮೊದಲ ಕೇಸ್‌ ಪತ್ತೆ, ಹೆಚ್ಚಿದ ಆತಂಕ

    ಮಲೆನಾಡಿಗರನ್ನೂ ಬಿಟ್ಟೂ ಬಿಡದೇ ಕಾಡ್ತಿದೆ ಮಂಗನ ಕಾಯಿಲೆ – ವರ್ಷದ ಮೊದಲ ಕೇಸ್‌ ಪತ್ತೆ, ಹೆಚ್ಚಿದ ಆತಂಕ

    ಶಿವಮೊಗ್ಗ: ಮಲೆನಾಡಿಗರನ್ನು ಮಂಗನ ಕಾಯಿಲೆ (Monkeypox) ಬಿಟ್ಟು ಬಿಡದೇ ಕಾಡುತ್ತಿದೆ. 1957ರಲ್ಲಿ ಶಿವಮೊಗ್ಗ ಜಿಲ್ಲೆಯ ಕ್ಯಾಸನೂರಿನಲ್ಲಿ ಮೊದಲ ಬಾರಿಗೆ ಈ ಮಂಗನ ಕಾಯಿಲೆ ಕಂಡುಬಂದಿತ್ತು. ಹೀಗಾಗಿಯೇ ಈ ರೋಗಕ್ಕೆ ‘ಕ್ಯಾಸನೂರು ಡಿಸೀಸ್ ಫಾರೆಸ್ಟ್’ (KFD) ಅಂತಾ ಕರೆಯುತ್ತಾರೆ. ಕೆಎಫ್‍ಡಿ ರೋಗಕ್ಕೆ ಇದುವರೆಗೆ ನೂರಾರು ಮಂದಿ ಬಲಿಯಾಗಿದ್ದಾರೆ.

    2021ರ ವರ್ಷದಲ್ಲಿಯೂ ಈ ರೋಗಕ್ಕೆ 23 ಮಂದಿ ಬಲಿಯಾಗಿದ್ದರು. 2023ರಲ್ಲಿ ವರ್ಷದ ಮೊದಲ ಕೇಸ್‌ ಪತ್ತೆಯಾಗಿದ್ದು, ಮತ್ತೆ ಸಾರ್ವಜನಿಕರಲ್ಲಿ ಆತಂಕ ಹುಟ್ಟಿಸಿದೆ. ಶಿವಮೊಗ್ಗ (Shivamogga) ಜಿಲ್ಲೆಯಲ್ಲಿ ಮಂಗನ ಕಾಯಿಲೆ (ಕೆಎಫ್‌ಡಿ) ಮೊದಲ ಪ್ರಕರಣ ಈ ವರ್ಷದಲ್ಲಿ ಪತ್ತೆಯಾಗಿದ್ದು, ಆರೋಗ್ಯ ಇಲಾಖೆಯೂ ಮುನ್ನೆಚ್ಚರಿಕಾ ಕ್ರಮಗಳನ್ನ ಕೈಗೊಳ್ಳಲು ಮುಂದಾಗಿದೆ. ಇದನ್ನೂ ಓದಿ: ಮಹಿಳೆ ಅರೆಬೆತ್ತಲೆ ಪ್ರಕರಣ – ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಬಿಜೆಪಿ ನಾಯಕರಿಗೆ ಹೈಕಮಾಂಡ್‌ ಸೂಚನೆ

    ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಶೇಡ್ಗಾರ್ ಬಳಿಯ ಅತ್ತಿಸರ ಗ್ರಾಮದ 53 ವರ್ಷದ ಮಹಿಳೆಯ RTPCR ಪರೀಕ್ಷೆಯಲ್ಲಿ ಪಾಸಿಟಿವ್ ಬಂದಿದೆ. ಪಾಸಿಟಿವ್‌ ಕಾಣಿಸಿಕೊಂಡಿರುವ ಮಹಿಳೆಯ ಆರೋಗ್ಯ (Women Health) ಸ್ಥಿರವಾಗಿದ್ದು, ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಅತ್ತಿಸರ ಗ್ರಾಮವು ಕಾಡಂಚಿನ ಗ್ರಾಮವಾಗಿದ್ದು ಈ ಹಿಂದೆಯು ಈಭಾಗದಲ್ಲಿ ಕೆಎಫ್‌ಡಿ ಪ್ರಕರಣಗಳು ಪತ್ತೆಯಾದ ಉದಾಹರಣೆಗಳಿವೆ. ಇದನ್ನೂ ಓದಿ: ಕರಾವಳಿಯಲ್ಲಿ ಮತ್ತೆ ಧರ್ಮ ದಂಗಲ್- ಕುಕ್ಕೆಯಲ್ಲಿ ಅನ್ಯಮತೀಯರ ವ್ಯಾಪಾರಕ್ಕೆ ಬಹಿಷ್ಕಾರ

    6-7 ದಶಕ ಸಮೀಪಿಸಿದೆ: ಈ ಮಂಗನ ಕಾಯಿಲೆಗೆ ಇದುವರೆಗೆ ಯಾವುದೇ ಲಸಿಕೆ ಇಲ್ಲ. ಕೇವಲ ಬೂಸ್ಟರ್ ಡೋಸ್ ಹಾಗೂ ಮುನ್ನೆಚ್ಚರಿಕೆ ಕ್ರಮಗಳೇ ಇದಕ್ಕೆ ಸೂಕ್ತ ಮದ್ದು. ಈ ಕಾಯಿಲೆ ಪತ್ತೆಯಾಗಿ 6-7 ದಶಕಗಳೇ ಸಮೀಸುತ್ತಿದ್ದರೂ ಇದುವರೆಗೂ ಯಾವುದೇ ಸರ್ಕಾರಗಳು ಆಗಲಿ, ವಿಜ್ಞಾನಿಗಳಾಗಲಿ ಇದಕ್ಕೆ ಲಸಿಕೆ ಕಂಡುಹಿಡಿಯಲು ಮುಂದಾಗಿಲ್ಲ. ಈ ರೋಗ ಸಾಮಾನ್ಯವಾಗಿ ಜನವರಿಯಿಂದ ಜೂನ್‍ವರೆಗೆ ಮಾತ್ರ ಕಾಣಿಸಿಕೊಳ್ಳುತ್ತದೆ. ಈ ಅವಧಿಯಲ್ಲಿ ಸ್ವಲ್ಪ ಮುನ್ನೆಚ್ಚರಿಕೆ ವಹಿಸಿದರೆ ಬಚಾವ್ ಆಗಬಹುದು ಎಂದು ಹೇಳುತ್ತಾರೆ ಆರೋಗ್ಯ ಇಲಾಖೆಯ ಅಧಿಕಾರಿಗಳು.

  • ಒಂದೇ ತಿಂಗಳಲ್ಲಿ ಎರಡನೇ ಮಂಗನ ಕಾಯಿಲೆ ಪ್ರಕರಣ ಪತ್ತೆ

    ಒಂದೇ ತಿಂಗಳಲ್ಲಿ ಎರಡನೇ ಮಂಗನ ಕಾಯಿಲೆ ಪ್ರಕರಣ ಪತ್ತೆ

    ಶಿವಮೊಗ್ಗ: ನಗರದಲ್ಲಿ ಒಂದೇ ತಿಂಗಳಲ್ಲಿ ಎರಡನೇ ಮಂಗನ ಕಾಯಿಲೆ ಪ್ರಕರಣ ಪತ್ತೆಯಾಗಿದೆ.

    ಶಿಕ್ಷರೊಬ್ಬರಿಗೆ ಕಾಣಿಸಿಕೊಂಡ ಮಂಗನ ಕಾಯಿಲೆ. ಮಂಗನ ಕಾಯಿಲೆ ಪತ್ತೆಯಾದ ಶಿಕ್ಷಕರಿಗೆ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅವರು ಕಳೆದೊಂದು ವಾರದಿಂದ ಜ್ವರದಿಂದ ಬಳಲುತ್ತಿದ್ದು, ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅಲ್ಲಿ ವೈದ್ಯರು ರಕ್ತದ ಮಾದರಿಯನ್ನು ಕೆಎಫ್‍ಡಿ ಲ್ಯಾಬ್‍ಗೆ ಕಳುಹಿಸಿದ್ದರು. ಇದನ್ನೂ ಓದಿ: ಸೂಪರ್ ಮಾರ್ಕೆಟ್‍ನಲ್ಲಿ ವೈನ್‍ಸ್ಟೋರ್ – ಮಹಾರಾಷ್ಟ್ರ ಸರ್ಕಾರದಿಂದ ಅನುಮತಿ

    ಶಿಕ್ಷಕರು ಕೆಎಫ್‍ಡಿ ಸೋಂಕು ಪತ್ತೆಯಾದ ಹಿನ್ನೆಲೆಯಾದ ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕಳೆದ 15 ದಿನದ ಹಿಂದೆ ತೀರ್ಥಹಳ್ಳಿಯ ಮಹಿಳೆಯೊಬ್ಬರಲ್ಲಿ ಮಂಗನ ಕಾಯಿಲೆ ಪತ್ತೆಯಾಗಿತ್ತು. ಇದನ್ನೂ ಓದಿ: ಕೇರಳದ ಬಾಲಿಕಾ ಗೃಹದಿಂದ 6 ಹುಡುಗಿಯರು ನಾಪತ್ತೆ – ಒಬ್ಬಳು ಬೆಂಗ್ಳೂರಿನಲ್ಲಿ ಪತ್ತೆ

  • ಉತ್ತರ ಕನ್ನಡದಲ್ಲಿ ಮಂಗನಕಾಯಿಲೆ ಉಲ್ಬಣ- ಒಂದೇ ದಿನ 5 ಪ್ರಕರಣ ಪತ್ತೆ

    ಉತ್ತರ ಕನ್ನಡದಲ್ಲಿ ಮಂಗನಕಾಯಿಲೆ ಉಲ್ಬಣ- ಒಂದೇ ದಿನ 5 ಪ್ರಕರಣ ಪತ್ತೆ

    ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಸೊಂಕಿನ ಸಂಖ್ಯೆಯಂತೆಯೇ ಮಂಗನಕಾಯಿಲೆಯ ಅಟ್ಟಹಾಸ ಮುಂದುವರಿದಿದ್ದು, ಸಿದ್ದಾಪುರ ತಾಲೂಕಿನಲ್ಲಿ ಇಂದು ಕೂಡ 5 ಪ್ರಕರಣ ಕಾಣಿಸಿಕೊಳ್ಳುವುದರೊಂದಿಗೆ ಜನರ ಆತಂಕವನ್ನು ಇನ್ನಷ್ಟು ಹೆಚ್ಚಿಸಿದೆ.

    ರವಿವಾರ ಒಂದೇ ದಿನ ಸಿದ್ದಾಪುರ ತಾಲೂಕು ವ್ಯಾಪ್ತಿಯಲ್ಲಿ 4 ಕೆ.ಎಫ್.ಡಿ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದವು. ಇದು ಮುಂದುವರಿದು ಇಂದು ಕೂಡ ಒಂದೇ ದಿನ 5 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಕೋರ್ಲಕೈ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲೇ ಈ 5 ಪ್ರಕರಣಗಳು ಪತ್ತೆಯಾಗಿದ್ದು ಅಲ್ಲಿನ ಜನರು ಮತ್ತಷ್ಟು ಆತಂಕ ಪಡುವಂತೆ ಮಾಡಿದೆ.

    ಇದರೊಂದಿಗೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕು ವ್ಯಾಪ್ತಿಯಲ್ಲೇ 32 ಕೆ.ಎಫ್.ಡಿ ಪ್ರಕರಣಗಳು ದೃಢಪಟ್ಟಿವೆ. ಕೋರ್ಲಕೈ ಆರೋಗ್ಯ ಕೇಂದ್ರಕ್ಕೆ ಬೆಳಗಾವಿ ಜಂಟಿ ನಿರ್ದೇಶಕರು ಭೇಟಿ ನೀಡಿದ್ದು, ಪರಿಸ್ಥಿತಿಯ ಅವಲೋಕನ ನಡೆಸಿದ್ದಾರೆ. ಸಂಜೆ ರಾಜ್ಯ ಆರೋಗ್ಯ ಮಹಾನಿರ್ದೇಶಕರ ಜೊತೆ ವಿಡಿಯೋ ಸಂವಾದ ನಡೆಯಲಿದ್ದು, ಮಂಗನಕಾಯಿಲೆಯ ಪರಿಸ್ಥಿತಿಗಳ ಬಗ್ಗೆ ಜಂಟಿ ನಿರ್ದೇಶಕರು ವರದಿ ಸಲ್ಲಿಸೋ ಸಾಧ್ಯತೆಯಿದೆ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.