Tag: Ketan Kakkad

  • ಧರ್ಮದ ವಿಚಾರಕ್ಕೆ ಬಂದ ಪಕ್ಕದ ಮನೆಯವರಿಗೆ ಸಲ್ಮಾನ್ ಕ್ಲಾಸ್

    ಧರ್ಮದ ವಿಚಾರಕ್ಕೆ ಬಂದ ಪಕ್ಕದ ಮನೆಯವರಿಗೆ ಸಲ್ಮಾನ್ ಕ್ಲಾಸ್

    ಮುಂಬೈ: ಆಸ್ತಿ ವಿಚಾರಕ್ಕೆ ಧರ್ಮವನ್ನು ಎಳೆತಂದ ಪಕ್ಕದ ಮನೆ ಅವರನ್ನು ಬಾಲಿವುಡ್ ನಟ ಸಲ್ಮಾನ್ ಖಾನ್ ತರಾಟೆಗೆ ತೆಗೆದುಕೊಂಡಿದ್ದಾರೆ.

    ಸಲ್ಮಾನ್ ಖಾನ್ ಅವರು ಪನ್ವೆಲ್‍ನಲ್ಲಿ ಫಾರ್ಮ್‍ಹೌಸ್ ಹೊಂದಿದ್ದಾರೆ. ಅರ್ಪಿತಾ ಹೆಸರಿನಲ್ಲಿರುವ ಈ ಫಾರ್ಮ್‍ಹೌಸ್‍ನಲ್ಲಿ ಸಲ್ಮಾನ್ ಖಾನ್ ಪ್ರತಿ ವರ್ಷ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಾರೆ. ಇದು ಸಲ್ಮಾನ್ ಖಾನ್ ಅವರ ನೆಚ್ಚಿನ ಸ್ಥಳವಾಗಿದ್ದು, ಬಿಡುವಿನ ಸಮಯದಲ್ಲಿ ಇಲ್ಲಿಯೇ ಕಾಲ ಕಳೆಯುತ್ತಾರೆ. ಸಲ್ಮಾನ್ ಖಾನ್ ಅವರ ಫಾರ್ಮ್‍ಹೌಸ್ ಪಕ್ಕದಲ್ಲಿ ಕೇತನ್ ಕಕ್ಕಡ್ ಅವರು ಆಸ್ತಿ ಹೊಂದಿದ್ದಾರೆ. ಅವರಿಗೂ ಸಲ್ಮಾನ್ ಖಾನ್ ಅವರಿಗೂ ಆಗಾಗ ಜಗಳಗಳು ನಡೆಯುತ್ತಲೆ ಇರುತ್ತದೆ. ಆದರೆ ಈ ಬಾರಿ ಜಗಳದ ವೇಳೆ ಕೇತನ್ ಅವರು ಸಲ್ಮಾನ್ ಖಾನ್ ಅವರ ಧರ್ಮದ ವಿಚಾರವನ್ನು ಎಳೆ ತಂದಿದ್ದು, ಈ ವಿಚಾರವಾಗಿ ಸಲ್ಮಾನ್ ಕೇತನ್ ವಿರುದ್ಧ ಗುಡುಗಿದ್ದಾರೆ. ಇದನ್ನೂ ಓದಿ: ಕೊಲ್ಲಲು ಬಂದವ್ರ ಕಣ್ಣಿಗೆ ಖಾರದ ಪುಡಿ ಎರಚಿ ಪತಿಯನ್ನು ಬಚಾವ್ ಮಾಡಿದ್ಲು!

    ಸಲ್ಮಾನ್ ಖಾನ್ ಅವರೊಂದಿಗಿನ ಜಗಳದ ವಿಚಾರವಾಗಿ ಇತ್ತೀಚೆಗಷ್ಟೇ ಕೇತನ್ ಅವರು ಯೂಟ್ಯೂಬ್‍ನಲ್ಲಿ ಸಂದರ್ಶನವೊಂದನ್ನು ನೀಡಿದ್ದರು. ಈ ವೇಳೆ ಸಲ್ಮಾನ್ ವಿರುದ್ಧ ಕೇತನ್ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಸಲ್ಮಾನ್ ಹಾಗೂ ಅವರ ಕುಟುಂಬದ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ್ದರಿಂದ ಕೇತನ್ ವಿರುದ್ಧ ಇದೀಗ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ ಮತ್ತು ಫೇಸ್‍ಬುಕ್, ಟ್ವಿಟ್ಟರ್, ಯೂಟ್ಯೂಬ್, ಗೂಗಲ್ ಮುಂತಾದ ಕಡೆಗಳಲ್ಲಿ ತಮ್ಮ ಬಗ್ಗೆ ಇರುವ ಮಾನಹಾನಿಕಾರಕ ಮಾಹಿತಿಯನ್ನು ತೆಗೆದು ಹಾಕಲು ಸೂಚನೆ ನೀಡಬೇಕು ಎಂದು ಸಲ್ಮಾನ್ ಖಾನ್ ಕೋರ್ಟ್‍ಗೆ ಮನವಿ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಕೋವಿನ್ ಖಾಸಗಿ ಮಾಹಿತಿ ಸೋರಿಕೆ ಆಗಿಲ್ಲ: ಕೇಂದ್ರ

    salman khan

    ಆಸ್ತಿ ವಿವಾದದಲ್ಲಿ ನನ್ನ ಪ್ರತಿಷ್ಠೆಗೆ ಧಕ್ಕೆಯನ್ನುಂಟು ಮಾಡುತ್ತಿದ್ದಾರೆ. ಈ ವಿಚಾರದಲ್ಲಿ ನನ್ನ ಧರ್ಮವನ್ನು ಎಳೆದು ತರುತ್ತಿರುವುದು ಏಕೆ ಎಂದು ಪ್ರಶ್ನಿಸಿದ್ದಾರೆ. ನನ್ನ ತಾಯಿ ಹಿಂದೂ, ನನ್ನ ತಂದೆ ಮುಸ್ಲಿಂ, ನನ್ನ ಸಹೋದರರು ಹಿಂದೂಗಳನ್ನು ಮದುವೆಯಾಗಿದ್ದಾರೆ. ಹಾಗಾಗಿ ನಾವು ನಮ್ಮ ಮನೆಯಲ್ಲಿ ಎಲ್ಲಾ ಹಬ್ಬಗಳನ್ನು ಆಚರಿಸುತ್ತೇವೆ ಎಂದು ಸಲ್ಮಾನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.