Tag: keshava krupa

  • ಅಮಿತ್ ಶಾ ಮುಂದೆ ಆರ್‍ಎಸ್‍ಎಸ್ ಮುಖಂಡರ ದೂರಿನ ಸುರಿಮಳೆ

    ಅಮಿತ್ ಶಾ ಮುಂದೆ ಆರ್‍ಎಸ್‍ಎಸ್ ಮುಖಂಡರ ದೂರಿನ ಸುರಿಮಳೆ

    ಬೆಂಗಳೂರು: ರಾಜ್ಯ ಬಿಜೆಪಿ ನಾಯಕರ ವಿರುದ್ಧ ಆರ್‍ಎಸ್‍ಎಸ್ ನಾಯಕರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ವಿರುದ್ಧ ದೂರನ್ನು ಹೇಳಿದ್ದಾರೆ.

    ಕೇಶವ ಕೃಪಾದಲ್ಲಿ ನಡೆದ ಸಭೆಯಲ್ಲಿ ಸಂಘ ಮತ್ತು ಬಿಜೆಪಿ ನಡುವೆ ಸಮನ್ವಯತೆ ಇಲ್ಲದಾಗಿದೆ. ಆರ್‍ಎಸ್‍ಎಸ್ ಕಾರ್ಯಕರ್ತರ ಕೊಲೆ ಪ್ರಕರಣದಲ್ಲಿ ಸರಿಯಾಗಿ ಪ್ರತಿಭಟನೆ ನಡೆಸಲಿಲ್ಲ. ಅವರ ಕುಟುಂಬಗಳಿಗೆ ಸೂಕ್ತ ಪರಿಹಾರವನ್ನ ಬಿಜೆಪಿ ನೀಡಿಲ್ಲ ಎಂದು ನಾಯಕರು ದೂರನ್ನು ಹೇಳಿದ್ದಾರೆ.

    ಸಂಘ ಪರಿವಾರದವರ ಪ್ರತಿ ಸಂಕಷ್ಟದಲ್ಲೂ ಬಿಜೆಪಿ ಇರಬೇಕು. ರಾಜ್ಯ ಸರ್ಕಾರದ ವಿರುದ್ಧ ಹೋರಾಡಲು ಸಂಘವನ್ನು ಪರಿಗಣಿಸಬೇಕು. ನೊಂದ ಆರ್‍ಎಸ್‍ಎಸ್ ಕಾರ್ಯಕರ್ತ ಕುಟುಂಬಗಳಿಗೆ ಪರಿಹಾರ ನೀಡಲು ನಿಧಿಯನ್ನು ಸ್ಥಾಪಿಸಲು ಈ ವೇಳೆ ನಾಯಕರು ಮನವಿ ಮಾಡಿದರು ಎಂದು ಮೂಲಗಳು ಪಬ್ಲಿಕ್ ಟಿವಿಗೆ ತಿಳಿಸಿವೆ.

    ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪರ ಏಕಪಕ್ಷೀಯ ತೀರ್ಮಾನಗಳ ಬಗ್ಗೆಯೂ ಸಭೆಯಲ್ಲಿ ಪ್ರಸ್ತಾಪ ನಡೆದಿದೆ. ಆರ್‍ಎಸ್‍ಎಸ್ ಮತ್ತು ಬಿಜೆಪಿ ನಡುವೆ ಹೊಂದಾಣಿಕೆ ಇಲ್ಲದ್ದಕ್ಕೆ ಬೇಸರ ವ್ಯಕ್ತಪಡಿಸಿದ ಅಮಿತ್ ಶಾ ಆರ್‍ಎಸ್ ಎಸ್ ಮುಖಂಡರ ಜೊತೆ ಸಮನ್ವಯತೆ ಕಾಯ್ದುಕೊಳ್ಳುವಂತೆ ಬಿಎಸ್‍ವೈಗೆ ಸೂಚಿಸಿದ್ದಾರೆ.

    ಚುನಾವಣೆ ಹತ್ತಿರ ಇರುವಾಗ ಪರಸ್ಪರ ವೈಮನಸ್ಯಗಳನ್ನು ದೂರ ಮಾಡಿಕೊಳ್ಳಬೇಕು. ಆರ್‍ಎಸ್‍ಎಸ್ ಸಲಹೆಗಳನ್ನು ಪಾಲಿಸಬೇಕು ಎಂದು ಬಿಜೆಪಿ ನಾಯಕರಿಗೆ ಶಾ ಸೂಚಿಸಿದ್ದಾರೆ.

    ರಾಜಕೀಯ ವಿದ್ಯಮಾನಗಳ ವಿಚಾರದಲ್ಲಿ ರಾಜ್ಯ ಬಿಜೆಪಿ ನಡೆ ಬಗ್ಗೆ ಆರ್‍ಎಸ್‍ಎಸ್ ಮುಖಂಡರಿಂದ ಮುಖಂಡರಿಂದ ಅಭಿಪ್ರಾಯ ಪಡೆದ ಅಮಿತ್ ಶಾ, ಮೂಲ ಬಿಜೆಪಿಗರು ಮತ್ತು ವಲಸಿಗ ಬಿಜೆಪಿ ನಾಯಕರ ನಡುವಿನ ಸಂಘರ್ಷದ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಸಿದ್ದಾರೆ ಎಂದು ಮೂಲಗಳು ಮಾಹಿತಿ ನೀಡಿವೆ.

    ಇದನ್ನೂ ಓದಿ: ರಾಜ್ಯ ನಾಯಕರು ಸುಸ್ತು: ಮಧ್ಯರಾತ್ರಿಯ ಕೋರ್ ಕಮಿಟಿ ಸಭೆ ಬರ್ಖಾಸ್ತು

    https://twitter.com/ShobhaBJP/status/896936332001370112

    https://twitter.com/ShobhaBJP/status/896684217953730560

    https://twitter.com/ShobhaBJP/status/896671486605316096