Tag: kesari shalu

  • ಹಿಜಬ್-ಕೇಸರಿ ವಿವಾದ ಬೆನ್ನಲ್ಲೇ ಶುರುವಾಯ್ತು ಸಿಂಧೂರ ಚಳವಳಿ

    ಹಿಜಬ್-ಕೇಸರಿ ವಿವಾದ ಬೆನ್ನಲ್ಲೇ ಶುರುವಾಯ್ತು ಸಿಂಧೂರ ಚಳವಳಿ

    ಕಲಬುರಗಿ: ಹಿಜಬ್, ಕೇಸರಿ ವಿವಾದದ ಜೊತೆಗೆ ಇದೀಗ ಬಿಂದಿ ಚರ್ಚೆ ಪ್ರಾರಂಭವಾಗಿದೆ. ಬಿಂದಿ ಹಾಕಿಕೊಂಡು ಶಾಲೆಗೆ ಬರುತ್ತಾರೆ ಎಂಬ ಮುಸ್ಲಿಂ ವಿದ್ಯಾರ್ಥಿನಿಯರ ಪ್ರಶ್ನೆಗೆ ಆಕ್ರೋಶ ವ್ಯಕ್ತಪಡಿಸಿ ಕಲಬುರಗಿಯಲ್ಲಿ ಸಿಂಧೂರ ಚಳವಳಿ ಪ್ರಾರಂಭವಾಗಿದೆ.

    ನಗರದ ಐತಿಹಾಸಿಕ ಶ್ರೀ ಶರಣಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಹಿಂದೂಪರ ಸಂಘಟನೆಯ ಮಹಿಳೆಯರಿಂದ ಸಿಂಧೂರ ಚಳವಳಿ ಆರಂಭವಾಗಿದೆ. ಬಿಜೆಪಿ ಮುಖಂಡರಾದ ಹಿಂದೂ ಪರ ಸಂಘಟನೆಯ ಕಾರ್ಯಕರ್ತೆ ದಿವ್ಯಾ ಹಾಗರಗಿ ನೇತೃತ್ವದಲ್ಲಿ ಸಿಂಧೂರ ಚಳವಳಿ ಆರಂಭವಾಗಿದ್ದು, ಹಿಂದೂ ಸಂಸ್ಕೃತಿಯ ಪ್ರಕಾರ ಮಹಿಳೆಯರಿಗೆ ಕೇಸರಿ ಶಾಲು ಹಾಕಿ, ಅರಿಸಿಣ-ಕುಂಕುಮ ಹಚ್ಚಿ, ಬಳೆ ಕೊಟ್ಟು, ಹೂವು ನೀಡಿ ಸಿಂಧೂರ ಚಳವಳಿಗೆ ಚಾಲನೆ ನೀಡಲಾಗಿದೆ.

    ಈ ಸಂದರ್ಭದಲ್ಲಿ ಮಾತನಾಡಿದ ಹಿಂದೂ ಸಂಘಟನೆಯ ಕಾರ್ಯಕರ್ತೆ ದಿವ್ಯಾ ಹಾಗರಗಿ, ಸಿಂಧೂರ ಹಚ್ಚಿಕೊಳ್ಳುವುದು ನಮ್ಮ ಧರ್ಮದ ಸಂಸ್ಕೃತಿ ಆಗಿದೆ. ಹಿಂದೂ ಧರ್ಮದ ಸಂಸ್ಕೃತಿ-ಪರಂಪರೆಯಂತೆ ನಾವು ನಡೆಯುತ್ತೇವೆ ಎಂದ ಅವರು, ಹಿಜಬ್ ಪ್ರಕರಣವು ನ್ಯಾಯಲಯದ ಅಂಗಳದಲ್ಲಿ ಇರುವುದರಿಂದ ಮಧ್ಯಂತರ ಆದೇಶವನ್ನು ಪಾಲನೆ ಮಾಡುತ್ತಿದ್ದು, ಎಲ್ಲರೂ ತೀರ್ಪು ಪಾಲನೆ ಮಾಡಬೇಕು ಎಂದು ನುಡಿದರು. ಇದನ್ನೂ ಓದಿ: ಹಿಜಬ್ ಆಯ್ಕೆಯಲ್ಲ, ನಾವು ಪ್ರೀತಿಸುವ ದೇವರು ವಿಧಿಸಿರುವ ಶಿಷ್ಟಾಚಾರ: ಝೈರಾ ವಾಸಿಮ್

    ಮುಂಬರುವ ದಿನಗಳಲ್ಲಿ ಸಿಂಧೂರ ಚಳವಳಿಯೂ ಸಿಂದಗಿ ಅಂಬಾಬಾಯಿ ದೇವಸ್ಥಾನ, ಕೋರಂಟಿ ದೇವಸ್ಥಾನ ಸೇರಿದಂತೆ ವಿವಿಧ ದೇವಸ್ಥಾನಗಳಲ್ಲಿ ಮಹಿಳೆಯರಿಗೆ ಅರಿಸಿಣ, ಕುಂಕುಮ ಕೊಡುವ ಮೂಲಕ ನಡೆಯಲಿದೆ ಎಂದು ಮಾಹಿತಿ ನೀಡಿದರು. ಇದನ್ನೂ ಓದಿ: ದಾವುದ್ ಅಲ್ಲ, ದಾವುದ್ ಅಪ್ಪ ಬಂದ್ರು ಕೂಡ ಏನು ಮಾಡಲು ಆಗಲ್ಲ: ಪ್ರಮೋದ್ ಮುತಾಲಿಕ್

    ಈ ಸಂದರ್ಭದಲ್ಲಿ ಭಾಗೀರಥಿ ಗುನ್ನಾಪುರ, ಸವಿತಾ ಪಾಟೀಲ್, ಸಿದ್ದಮ್ಮಾ, ಇಂದಿರಾ ಸೇರಿದಂತೆ ಅನೇಕ ಹಿಂದೂ ಪರ ಸಂಘಟನೆಯ ಮುಖಂಡರು, ಬಿಜೆಪಿ ಕಾರ್ಯಕರ್ತೆಯರು ಭಾಗವಹಿಸಿದ್ದರು.

  • ಇಸ್ಲಾಮಿಕ್ ಸಮವಸ್ತ್ರ ಪದ್ಧತಿಯನ್ನು ಶಾಲೆಯಲ್ಲಿ ತರಲು ಪ್ರಯತ್ನ: ಹಿಂದೂ ಮಹಾಸಭಾ ಕಿಡಿ

    ಇಸ್ಲಾಮಿಕ್ ಸಮವಸ್ತ್ರ ಪದ್ಧತಿಯನ್ನು ಶಾಲೆಯಲ್ಲಿ ತರಲು ಪ್ರಯತ್ನ: ಹಿಂದೂ ಮಹಾಸಭಾ ಕಿಡಿ

    ಬೆಂಗಳೂರು: ಕೋರ್ಟ್ ತೀರ್ಪು ಬರುವ ತನಕ ಯಾವುದೇ ಧಾರ್ಮಿಕ ಉಡುಪು ಧರಿಸುವಂತಿಲ್ಲ ಎಂದು ಮಧ್ಯಂತರ ಆದೇಶ ನೀಡಿದ್ದರೂ, ಅದನ್ನು ಮೀರಿ ಅಲ್ಪ ಸಂಖ್ಯಾತರು ಹಿಜಾಬ್ ಜೊತೆಗೆ ಬುರ್ಕಾ ಧರಿಸಿ ಬರುತ್ತಿದ್ದಾರೆ ಎಂದು ಅಖಿಲ ಭಾರತ ಹಿಂದೂ ಮಹಾಸಭಾದ ವಕ್ತಾರ ಮೋಹನ್ ಗೌಡ ಕಿಡಿಕಾರಿದರು.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋರ್ಟ್ ಮಧ್ಯಂತರ ಆದೇಶ ಬಂದ ನಂತರದಿಂದ ಹಿಂದೂ ವಿದ್ಯಾರ್ಥಿಗಳು ಕೇಸರಿ ಶಾಲು ಬಿಟ್ಟು ತರಗತಿಗೆ ಹಾಜರಾಗಿದ್ದಾರೆ. ಕುಶಾಲನಗರ ಸೇರಿದಂತೆ ಹಲವು ಕಡೆ ಹಿಂದೂ ವಿದ್ಯಾರ್ಥಿಗಳ ಮೇಲೆ ಹಲ್ಲೆ ಮಾಡುತ್ತಿದ್ದಾರೆ. ಜೊತೆಗೆ ಕಾನೂನು ಚೌಕಟ್ಟು ಮೀರಿ ಮುಸ್ಲಿಂ ವಿದ್ಯಾರ್ಥಿಗಳು ವರ್ತಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

    ಹಿಜಾಬ್ ವಿವಾದದ ಹಿಂದೆ ಮತೀಯ ಶಕ್ತಿಗಳು ಕೆಲಸ ಮಾಡುತ್ತಿವೆ. ಇಸ್ಲಾಮಿಕ್‍ನ ಸಮವಸ್ತ್ರ ಪದ್ಧತಿಯನ್ನು ಶಾಲೆಯಲ್ಲಿ ತರಲು ಪ್ರಯತ್ನ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು. ಇದನ್ನೂ ಓದಿ:  ವಜಾ ಮಾಡೋದಾದ್ರೆ ಕಾಂಗ್ರೆಸ್‍ನವರನ್ನೇ ಮಾಡಬೇಕು: ಆರ್ ಅಶೋಕ್

    ಹಿಜಬ್ ವಿವಾದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿ ಆಗುತ್ತಿದೆ. ನ್ಯಾಯಾಲಯದ ಆದೇಶಕ್ಕೆ ಬೆಲೆ ನೀಡುತ್ತಿಲ್ಲ. ಶಿಕ್ಷಕಿ ಶಶಿಕಲಾ ಮುಸ್ಲಿಂ ಪೋಷಕರ ಗಲಾಟೆಯಿಂದ ತನ್ನ ಕೆಲಸವನ್ನೆ ಕಳೆದುಕೊಂಡರು. ಇದೇ ರೀತಿ ಹಿಂದೂ ಕಾರ್ಯಕರ್ತರ ಮೇಲೆ ಹಲ್ಲೆ ಆಗುತ್ತಿದೆ ಜೊತೆಗೆ ಬೆದರಿಕೆ ಕರೆಗಳು ಬರುತ್ತಿವೆ. ಹಿಂದೂ ವಿದ್ಯಾರ್ಥಿಗಳಿಗೆ ರಕ್ಷಣೆ ಬೇಕಿದೆ. ಈ ಸಂಬಂಧ ಗೃಹ ಸಚಿವರ ಗಮನಕ್ಕೆ ತಂದಿದ್ದೆವೆ ಎಂದರು. ಇದನ್ನೂ ಓದಿ: ಹಿಜಬ್ ವಿವಾದ – ರಾಮನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ರಜೆ ಘೋಷಣೆ

  • ಕೇಸರಿ ಶಾಲು, ಹಿಜಬ್ ಧರಿಸುವಂತಿಲ್ಲ : ಹೈಕೋರ್ಟ್ ಮಧ್ಯಂತರ ಆದೇಶದಲ್ಲಿ ಏನಿದೆ?

    ಕೇಸರಿ ಶಾಲು, ಹಿಜಬ್ ಧರಿಸುವಂತಿಲ್ಲ : ಹೈಕೋರ್ಟ್ ಮಧ್ಯಂತರ ಆದೇಶದಲ್ಲಿ ಏನಿದೆ?

    ಬೆಂಗಳೂರು: ವಿದ್ಯಾರ್ಥಿಗಳು ತರಗತಿಗಳಲ್ಲಿ ಹಿಜಬ್, ಕೇಸರಿ ಶಾಲು ಧರಿಸದಂತೆ ಕರ್ನಾಟಕ ಹೈಕೋರ್ಟ್ ಮಧ್ಯಂತರ ಆದೇಶ ಪ್ರಕಟಿಸಿದೆ.

    ನಿನ್ನೆ ವಿಚಾರಣೆ ವೇಳೆ ಹೇಳಲಾಗಿದ್ದ ಮೌಖಿಕ ಆದೇಶ ಇವತ್ತು ಕರ್ನಾಟಕ ಹೈಕೋರ್ಟ್ ವೆಬ್‍ಸೈಟ್‍ನಲ್ಲಿ ಪ್ರಕಟ ಆಗಿದೆ. ಮುಖ್ಯ ನ್ಯಾಯಮೂರ್ತಿ ಋತುರಾಜ್ ಅವಸ್ಥಿ, ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್ ಮತ್ತು ಜೆ ಎಂ ಖಾಜಿ ಅವರಿದ್ದ ಪೀಠ  ಆದೇಶ ಪ್ರಕಟಿಸಿದೆ. ಇದನ್ನೂ ಓದಿ: ಹಿಜಬ್- ಕೇಸರಿ ಶಾಲು ವಿವಾದ- ಹೋರಾಟಕ್ಕಾಗಿಯೇ ವಿದ್ಯಾರ್ಥಿಗಳು ಟ್ವಿಟ್ಟರ್ ಖಾತೆ ಓಪನ್..!

    ಹೈಕೋರ್ಟ್ ಆದೇಶದಲ್ಲಿ ಏನಿದೆ?: ಮೊದಲಿಗೆ, ವಿಶೇಷವಾಗಿ ಈ ಪ್ರಕರಣ ಈ ಕೋರ್ಟ್‍ನಲ್ಲಿ ವಿಚಾರಣೆಯಲ್ಲಿರುವಾಗ ಮತ್ತು ಸಂವಿಧಾನಿಕ ಪ್ರಾಮುಖ್ಯತೆಯ ವಿಷಯಗಳು ಮತ್ತು ವೈಯಕ್ತಿಕ ಕಾನೂನುಗಳ ಬಗ್ಗೆ ಗಂಭೀರ ಚರ್ಚೆ ನಡೆಯುತ್ತಿರುವಾಗ ಕಳೆದ ಕೆಲವು ದಿನಗಳಿಂದ ನಡೆಯುತ್ತಿರುವ ಪ್ರತಿಭಟನೆ ಮತ್ತು ಶಿಕ್ಷಣ ಸಂಸ್ಥೆಗಳು ಮುಚ್ಚಿರುವುದು ನಮಗೆ ನೋವು ತಂದಿದೆ.

    ನಮ್ಮದು ಬಹು ಸಂಸ್ಕೃತಿ, ಧರ್ಮ, ಭಾಷೆಗಳ ದೇಶ. ಯಾವುದೇ ಒಂದು ಧರ್ಮದೊಂದಿಗೆ ನಮ್ಮ ರಾಷ್ಟ್ರ ಗುರುತಿಸಿಕೊಂಡಿಲ್ಲ. ಜ್ಯಾತ್ಯಾತೀತ ರಾಷ್ಟ್ರವಾಗಿ, ಪ್ರತಿಯೊಬ್ಬರಿಗೂ ಆತನ ಆಯ್ಕೆಯ ನಂಬಿಕೆಯನ್ನು ಆಚರಿಸಲು ಹಕ್ಕಿದೆ ನಿಜ. ಇಂತಹ ಹಕ್ಕುಗಳ ಮೇಲೆ ಭಾರತದ ಸಂವಿಧಾನ ತಾರ್ಕಿಕ ನಿರ್ಬಂಧಗಳನ್ನು ಹೇರಿದೆ. ಸಂವಿಧಾನಿಕವಾಗಿ ತರಗತಿಯೊಳಗೆ ಹಿಜಬ್ ಧರಿಸುವುದು ಇಸ್ಲಾಂನ ಅವಿಭಾಜ್ಯ ಅಂಗವೇ ಎಂಬ ಬಗ್ಗೆ ಆಳವಾದ ಪರಿಶೀಲನೆ ಆಗಬೇಕಿದೆ. ಅದಕ್ಕಾಗಿ ಸುಪ್ರೀಂಕೋರ್ಟ್‍ನ ಮತ್ತು ಇತರೆ ಹೈಕೋರ್ಟ್‍ಗಳ ಆದೇಶವನ್ನು ಬಳಸಿಕೊಳ್ಳಲಾಗುತ್ತಿದೆ.

    ನಮ್ಮದು ನಾಗರಿಕ ಸಮಾಜವಾಗಿ ಯಾವುದೇ ವ್ಯಕ್ತಿ ಧರ್ಮ, ಸಂಸ್ಕøತಿ ಅಥವಾ ಇತರೆ ಹೆಸರಲ್ಲಿ ಸಾರ್ವಜನಿಕ ಶಾಂತಿ ಮತ್ತು ಸೌಹಾರ್ದತೆಗೆ ಭಂಗ ತರಲು ಅನುಮತಿ ಇಲ್ಲ. ಮುಗಿಯದ ಪ್ರತಿಭಟನೆಗಳು ಮತ್ತು ಅನಿರ್ದಿಷ್ಟವಾಗಿ ಶಿಕ್ಷಣ ಸಂಸ್ಥೆಗಳನ್ನು ಮುಚ್ಚಿರುವುದು ಒಳ್ಳೆಯದಲ್ಲ. ತುರ್ತು ಆಧಾರದಲ್ಲಿ ಈ ವಿಷಯಗಳ ವಿಚಾರಣೆ ಮುಂದುವರಿಯಲಿದೆ. ಪ್ರತಿಭಟನೆಗಳ ಮುಂದುವರಿಕೆ ಮತ್ತು ಶಿಕ್ಷಣ ಸಂಸ್ಥೆಗಳನ್ನು ಮುಚ್ಚುವುದರ ಬದಲು ತರಗತಿಗಳಿಗೆ ಮರುಳುವುದರಿಂದ ವಿದ್ಯಾರ್ಥಿಗಳ ಹಿತಾಸಕ್ತಿಗೆ ಒಳ್ಳೆಯದು. ಶೈಕ್ಷಣಿಕ ವರ್ಷ ಶೀಘ್ರವೇ ಅಂತ್ಯವಾಗಲಿದೆ. ಸಂಬಂಧಪಟ್ಟವರು ಮತ್ತು ಸಾರ್ವಜನಿಕರು ಶಾಂತಿ ಮತ್ತು ಸೌಹಾರ್ದತೆಯನ್ನು ಆಶಿಸುತ್ತೇವೆ ಮತ್ತು ನಂಬುತ್ತೇವೆ. ಇದನ್ನೂ ಓದಿ: ಹಿಜಬ್ ನಿಷೇಧಕ್ಕೆ ತಡೆ ಕೋರಿ ಅರ್ಜಿ ವಿಚಾರಣೆ ನಡೆಸಲು ನಿರಾಕರಿಸಿದ ಸುಪ್ರೀಂಕೋರ್ಟ್

    ಮೇಲ್ಕಾಣಿಸಿದ ಈ ಹಿನ್ನೆಲೆಯಲ್ಲಿ ಸರ್ಕಾರ ಮತ್ತು ಸಂಬಂಧಪಟ್ಟವರಿಗೆ ಆದಷ್ಟು ಬೇಗ ಶಿಕ್ಷಣ ಸಂಸ್ಥೆಗಳನ್ನು ತೆರೆಯುವಂತೆಯೂ ಮತ್ತು ವಿದ್ಯಾರ್ಥಿಗಳಿಗೆ ತರಗತಿಗಳಿಗೆ ಮರಳಲು ಅವಕಾಶ ಮಾಡಿಕೊಡುವಂತೆಯೂ ಕೋರುತ್ತೇವೆ. ಈ ಅರ್ಜಿಗಳ ವಿಚಾರಣೆ ಬಾಕಿ ಇರಿಸಿ, ಎಲ್ಲ ವಿದ್ಯಾರ್ಥಿಗಳು ಅವರವರ ಧರ್ಮ ಅಥವಾ ನಂಬಿಕೆ ಕೇಸರಿ ಶಾಲು, ಹಿಜಬ್, ಧರ್ಮ ಧ್ವಜಗಳು ಅಥವಾ ಇತರೆಗಳನ್ನು ತರಗತಿಯೊಳಗೆ ಮುಂದಿನ ಆದೇಶದವರೆಗೂ ಧರಿಸದಂತೆ ನಿರ್ಬಂಧಿಸುತ್ತಿದ್ದೇವೆ. ಈ ಆದೇಶ ಕಾಲೇಜು ಅಭಿವೃದ್ಧಿ ಸಮಿತಿ ವಿದ್ಯಾರ್ಥಿ ವಸ್ತ್ರ ಸಂಹಿತೆ, ಸಮವಸ್ತ್ರ ನಿಗದಿಪಡಿಸಿರುವ ಶಿಕ್ಷಣ ಸಂಸ್ಥೆಗಳಿಗೆ ಅನ್ವಯ ಆಗಲಿದೆ.