Tag: kerla

  • ಬೆನ್ನಟ್ಟಿಕೊಂಡು ಬಂದ ಬೀದಿ ನಾಯಿಗಳು- ಬಾಲಕರು ಗ್ರೇಟ್ ಎಸ್ಕೇಪ್

    ಬೆನ್ನಟ್ಟಿಕೊಂಡು ಬಂದ ಬೀದಿ ನಾಯಿಗಳು- ಬಾಲಕರು ಗ್ರೇಟ್ ಎಸ್ಕೇಪ್

    ತಿರುವನಂತಪುರಂ: ಕೇರಳ (Kerala) ದಲ್ಲಿ ಶ್ವಾನಗಳ ಹಾವಳಿ ದಿನದಿಂದ ಹೆಚ್ಚಾಗುತ್ತಿದೆ. ಬೀದಿನಾಯಿಗಳ ಅಟ್ಟಹಾಸದಿಂದ ಕೆಲವರು ಸಾವನ್ನಪ್ಪಿದ್ದರೆ, ಇನ್ನೂ ಕೆಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಇದೀಗ ಬೀದಿ ನಾಯಿ (Stray Dogs) ಗಳು ಇಬ್ಬರು ಬಾಲಕರನ್ನು ಅಟ್ಟಿಸಿಕೊಂಡು ಬಂದ ವೀಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ.

    ಸದ್ಯ ಕಣ್ಣೂರಿನಲ್ಲಿ ನಡೆದಿರುವ ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಬಾಲಕರು ಬೀದಿ ನಾಯಿಗಳ ದಾಳಿಯಿಂದ ಗ್ರೇಟ್ ಎಸ್ಕೇಪ್ ಆಗಿದ್ದು, ನಿಟ್ಟುಸಿರುಬಿಡುವಂತಾಗಿದೆ. ಇದನ್ನೂ ಓದಿ: 86 ವರ್ಷಗಳ ನಂತರ ಮತ್ತೆ ಕಾಂಗರೂ ದಾಳಿಗೆ ವ್ಯಕ್ತಿ ಬಲಿ

    ವೀಡಿಯೋದಲ್ಲೇನಿದೆ..?: 4-5 ಬೀದಿನಾಯಿಗಳು ಇಬ್ಬರು ಬಾಲಕರನ್ನು ಬೆನ್ನಟ್ಟಿವೆ. ಅಂತೆಯೇ ಅವುಗಳಿಂದ ತಪ್ಪಿಸಿಕೊಂಡು ಓಡಿ ಬಂದ ಬಾಲಕರು, ಮನೆಯ ಗೇಟಿನೊಳಗೆ ಬಂದು ಗೇಟ್ ಹಾಕಿಕೊಳ್ಳುತ್ತಾರೆ. ಈ ಮೂಲಕ ಭಾರೀ ಅನಾಹುತದಿಂದ ಕೂದಲೆಳೆಯ ಅಂತರದಲ್ಲಿ ಬಾಲಕರು ಬಚಾವಾಗಿದ್ದನ್ನು ಗಮನಿಸಬಹುದಾಗಿದೆ.

    ಕೇರಳದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗುತ್ತಿದೆ ಎಂದು ಇತ್ತೀಚೆಗಷ್ಟೇ ಸುಪ್ರೀಂ ಕೋರ್ಟ್ (Supreme Court) ನಲ್ಲಿ ಅರ್ಜಿ ವಿಚಾರಣೆ ನಡೆದಿತ್ತು. ಈ ವೇಳೆ ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ಜೆ.ಕೆ. ಮಹೇಶ್ವರಿ ಅವರನ್ನು ಒಳಗೊಂಡ ಪೀಠ ಬೀದಿ ನಾಯಿಗಳಿಗೆ ಆಹಾರ ಹಾಕಿದವರೇ ಅದರಿಂದ ಹಾನಿಯಾದವರಿಗೆ ಚಿಕಿತ್ಸೆ ವೆಚ್ಚವಬನ್ನು ಭರಿಸಬೇಕು ಎಂದು ಆದೇಶಿಸಿತ್ತು.

    Live Tv
    [brid partner=56869869 player=32851 video=960834 autoplay=true]

  • ಬೃಹತ್ ಮರಕ್ಕೆ ಗುದ್ದಿದ ಬಸ್ – ಚಾಲಕ ಸಾವು, 25ಕ್ಕೂ ಹೆಚ್ಚು ಮಂದಿಗೆ ಗಾಯ

    ಬೃಹತ್ ಮರಕ್ಕೆ ಗುದ್ದಿದ ಬಸ್ – ಚಾಲಕ ಸಾವು, 25ಕ್ಕೂ ಹೆಚ್ಚು ಮಂದಿಗೆ ಗಾಯ

    – ಬ್ರೇಕ್ ತೆಗೆದುಕೊಂಡ ಕೆಲವೇ ಕ್ಷಣಗಳಲ್ಲಿ ದುರಂತ

    ತಿರುವನಂತಪುರಂ: ಕೆಎಸ್‌ಆರ್‌ಟಿಸಿ ಬಸ್ಸೊಂದು ಬೃಹತ್ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಚಾಲಕ ಮೃತಪಟ್ಟು, 25ಕ್ಕೂ ಹೆಚ್ಚು ಮಂದಿಗೆ ಗಾಯಗಳಾದ ಘಟನೆ ಕೊಚ್ಚಿಯ ಚಕ್ಕರಪರಂಬು ಬಳಿ ಇಂದು ಮುಂಜಾನೆ ನಡೆದಿದೆ.

    ಮೃತ ಚಾಲಕನನ್ನು ಅರುಣ್ ಕುಮಾರ್ ಎಂದು ಗುರುತಿಸಲಾಗಿದ್ದು, ಇವರು ತಿರುವನಂತಪುರಂ ನಿವಾಸಿ. ಬಸ್ ತಿರುವನಂತಪುರಂನಿಂದ ಕೋಯಿಕ್ಕೋಡ್ ಕಡೆ ತೆರಳುತ್ತಿತ್ತು ಎಂದು ಕೆಎಸ್‌ಆರ್‌ಟಿಸಿ ಮೂಲಗಳು ತಿಳಿಸಿವೆ.

    ವೈಟಿಲ್ಲಾ ಸಾರಿಗೆ ಕೇಂದ್ರದಿಂದ 2 ಕಿ.ಮೀ ದೂರದಲ್ಲಿ ಈ ಅಪಘಾತ ಸಂಭವಿಸಿದೆ. ದುರಂತಕ್ಕೂ ಮುನ್ನ 5-10 ನಿಮಿಷಗಳ ಕಾಲ ಬ್ರೇಕ್ ತೆಗೆದುಕೊಳ್ಳಲಾಗಿತ್ತು. ಹೀಗೆ ಬ್ರೇಕ್ ತೆಗೆದುಕೊಂಡ ಬಳಿಕ ಚಲಿಸಿದ ಬಸ್ ಚಾಲಕನ ನಿಯಂತ್ರಣ ತಪ್ಪಿ ದೊಡ್ಡ ಮರವೊಂದಕ್ಕೆ ಗುದ್ದಿದೆ. ಡಿಕ್ಕಿಯ ರಭಸಕ್ಕೆ ಬಸ್ಸಿನ ಮುಂದಿನ ಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ.

    ಕೆಲ ದಿನಗಳ ಹಿಂದೆಯಷ್ಟೇ ಇಂಥದ್ದೇ ಒಂದು ಘಟನೆ ದೆಹಲಿ- ಜೈಪುರ ಹೆದ್ದಾರಿಯಲ್ಲಿ ನಡೆದಿತ್ತು. ಚಲಿಸುತ್ತಿದ್ದ ಬಸ್ಸಿನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದು, ಮೂವರು ದಾರುಣವಾಗಿ ಮೃತಪಟ್ಟಿದ್ದರು.

  • 54 ದಿನದ ಮಗಳನ್ನು ಬೆಡ್‍ನಿಂದ ನೆಲಕ್ಕೆ ಬಿಸಾಕಿದ ತಂದೆ- ಪುಟ್ಟ ಕಂದಮ್ಮನ ಸ್ಥಿತಿ ಗಂಭೀರ

    54 ದಿನದ ಮಗಳನ್ನು ಬೆಡ್‍ನಿಂದ ನೆಲಕ್ಕೆ ಬಿಸಾಕಿದ ತಂದೆ- ಪುಟ್ಟ ಕಂದಮ್ಮನ ಸ್ಥಿತಿ ಗಂಭೀರ

    – ಮೆದುಳಿನಲ್ಲಿ ರಕ್ತಸ್ರಾವ, ಜಜ್ಜಿ ಹೋದವು ಕಾಲುಗಳು

    ತಿರುವನಂತಪುರಂ: ತಂದೆಯೇ 54 ದಿನದ ತನ್ನ ಪುಟ್ಟ ಕಂದಮ್ಮನನ್ನು ಕೊಲೆ ಮಾಡಲು ಯತ್ನಿಸಿರುವ ಅಮಾನವೀಯ ಘಟನೆಯೊಂದು ಕೇರಳದ ಜೊಸೆಪುರಂನ ಅಂಗಮಾಲಿ ಎಂಬಲ್ಲಿ ನಡೆದಿದೆ.

    ತಂದೆ ತನ್ನ ಮಗಳನ್ನು ಬೆಡ್‍ನಿಂದ ನೆಲಕ್ಕೆ ಬಿಸಾಕಿದ ಪರಿಣಾಮ ಮಗುವಿನ ಸ್ಥಿತಿ ಗಂಭೀರವಾಗಿದೆ. ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಹೆಣ್ಣು ಮಗುವಿಗೆ ಇಂದು ಸರ್ಜರಿ ನಡೆಯಲಿದೆ.

    ತಂದೆಯ ಕೃತ್ಯದಿಂದ ತಲೆಗೆ ಗಂಭೀರ ಗಾಯಗಳಾಗಿದ್ದು, ಮೆದುಳಿನಲ್ಲಿ ರಕ್ತಸ್ರಾವವಾಗಿದೆ. ಕಾಲುಗಳು ಕೂಡ ಜಜ್ಜಿ ಹೋಗಿವೆ. ಸದ್ಯ ಮೆದುಳಿನಲ್ಲಿ ಆಗುತ್ತಿರುವ ರಕ್ತಸ್ರಾವ ನಿಯಂತ್ರಣಕ್ಕಾಗಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಡಾ. ಸೋಜನ್ ಅವರು ತಿಳಿಸಿದ್ದಾರೆ.

    ಮಗುವಿನ ಪೋಷಕರು ಆಸ್ಪತ್ರೆಗೆ ಕರೆತಂದಾಗ ಆಕೆ ಪ್ರಜ್ಞಾಹೀನಳಾಗಿದ್ದಳು. ಅಲ್ಲದೆ ಮಗು ಮಂಚದಿಂದ ಕೆಳಗೆ ಬಿದ್ದು ಗಾಯಗಳಾಗಿವೆ ಎಂದು ಮೊದಲು ಹೇಳಿದ್ದಾರೆ. ಆದರೆ ಪೋಷಕರ ಮಾತು ಕೇಳಿ ಶಂಕೆ ವ್ಯಕ್ತಪಡಿಸಿದ ವೈದ್ಯರು, ಇಬ್ಬರನ್ನು ಮತ್ತಷ್ಟು ಪ್ರಶ್ನಿಸಿದ್ದಾರೆ. ಈ ವೇಳೆ ಅವರು, ಸೊಳ್ಳೆ ಬ್ಯಾಟ್ ಬಳಸುವ ವೇಳೆ ಆಕಸ್ಮಿಕವಾಗಿ ಮಗುವಿನ ಮೇಲೆ ಗಾಯಗಳಾಗಿವೆ ಎಂದು ಸುಳ್ಳು ಹೇಳಿದ್ದಾರೆ. ಪೋಷಕರ ಹೇಳಿಕೆಯಿಂದ ಮತ್ತಷ್ಟು ಶಂಕೆ ವ್ಯಕ್ತಪಡಿಸಿದ ಆಸ್ಪತ್ರೆಯ ಅಧಿಕಾರಿಗಳು ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

    ಪೊಲೀಸರಿಗೆ ಮಾಹಿತಿ ನೀಡಿ 2 ಗಂಟೆಯೊಳಗೆ ಪುಥೆನ್ ಕುರಿಶ್ ಪೊಲೀಸರು, ಮಗುವಿನ ಪೋಷಕರ ವಿರುದ್ಧ ಕ್ರಮ ಕೈಗೊಂಡಿದ್ದಾರೆ.

    ನಡೆದಿದ್ದೇನು?
    ಅಂಗಮಾಲಿ ನಿವಾಸಿ ಶೈಜು ಥೋಮಸ್(40) ತನ್ನ 54 ದಿನಗಳನ್ನು ಕೊಲೆ ಮಾಡಲು ಯತ್ನಿಸಿದ್ದಾನೆ. ತನ್ನ ಮಗುವಲ್ಲ ಎಂದು ಶಂಕೆ ವ್ಯಕ್ತಪಡಿಸಿ ಹಾಗೂ ಹೆಣ್ಣು ಮಗುವೆಂಬ ಕಾರಣಕ್ಕೆ ಈ ಕೃತ್ಯ ಎಸಗಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

    ಈ ಘಟನೆ ಗುರುವಾರ ಮುಂಜಾನೆ 4 ಗಂಟೆ ಸುಮಾರಿಗೆ ನಡೆದಿದ್ದು, ಮಗು ಜೋರಾಗಿ ಅಳುತ್ತಿದ್ದರಿಂದ ಸಿಟ್ಟುಗೊಂಡು ಮಗುವನ್ನು ಬೆಡ್ ನಿಂದ ಬಿಸಾಕಿದ್ದಾನೆ. ಅಲ್ಲದೆ ಅಳುತ್ತಿದ್ದ ಮಗುವನ್ನು ಸಮಾಧಾನ ಪಡಿಸುತ್ತಿದ್ದ ತಾಯಿಯ ಕೈಯಿಂದ ಬಲವಂತವಾಗಿ ಮಗುವನ್ನು ಎಳೆದು, ಪುಟ್ಟ ಕಂದಮ್ಮನ ತಲೆಗೆ ತನ್ನ ಕೈಯಿಂದ ಎರಡು ಬಾರಿ ಹೊಡೆದಿದ್ದಾನೆ ಎಂಬುದಾಗಿ ವರದಿಯಾಗಿದೆ.

    ಶೈಜು ಪತ್ನಿ ಮೂಲತಃ ನೇಪಾಳದವರು. ಫೇಸ್ ಬುಕ್ ಮೂಲಕ ಪರಿಚಯವಾಗಿ ಇಬ್ಬರೂ ಕಳೆದ ವರ್ಷವಷ್ಟೇ ಮದುವೆ ಮಾಡಿಕೊಂಡಿದ್ದರು. ಕಳೆದ 10 ತಿಂಗಳ ಹಿಂದೆ ಜೊಸೆಪುರಂನ ಅಂಗಮಾಲಿ ಎಂಬಲ್ಲಿ ದಂಪತಿ ವಾಸವಾಗಿದ್ದರು. ರಾತ್ರಿ ಮಲಗಿದ್ದ ಸಂದರ್ಭದಲ್ಲಿ ಮಗು ಅತ್ತಿದ್ದರಿಂದಲೇ ಸಿಟ್ಟುಗೊಂಡು ಈ ಕೃತ್ಯ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ತನಿಖೆ ಮುಂದುವರಿಸಿದ್ದಾರೆ.