Tag: kerebete film

  • ‘ಮಾರ್ಟಿನ್’ ನಿರ್ದೇಶಕನ ಸಿನಿಮಾದಲ್ಲಿ ಚಿಕ್ಕಣ್ಣ

    ‘ಮಾರ್ಟಿನ್’ ನಿರ್ದೇಶಕನ ಸಿನಿಮಾದಲ್ಲಿ ಚಿಕ್ಕಣ್ಣ

    ‘ಉಪಾಧ್ಯಕ್ಷ’ ನಟ ಚಿಕ್ಕಣ್ಣ (Chikkanna) ಮತ್ತೆ ಹೀರೋ ಆಗಿ ಬರುತ್ತಿದ್ದಾರೆ. ಕಾಮಿಡಿ ಪಾತ್ರಗಳ ಮೂಲಕ ಸೈ ಎನಿಸಿಕೊಂಡಿದ್ದ ಚಿಕ್ಕಣ್ಣ ನಾಯಕ ನಟನಾಗಿ ಕೂಡ ಗಮನ ಸೆಳೆದಿದ್ದಾರೆ. ಹೀರೋ ಆಗಿ 2ನೇ ಸಿನಿಮಾ ಮಾಡಲು ಮುಂದಾಗಿದ್ದಾರೆ. ‘ಮಾರ್ಟಿನ್’ (Martin) ಡೈರೆಕ್ಟರ್ ಎ.ಪಿ ಅರ್ಜುನ್ (A.P Arjun) ಜೊತೆ ಕೈಜೋಡಿಸಿದ್ದಾರೆ.

    ಉಮಾಪತಿ ಶ್ರೀನಿವಾಸ್ ನಿರ್ಮಾಣದ ‘ಉಪಾಧ್ಯಕ್ಷ’ ಸಿನಿಮಾದಲ್ಲಿ ನಾಯಕನಾಗಿ ಚಿಕ್ಕಣ್ಣ ನಟಿಸಿದ್ದರು. ಮಲೈಕಾ ವಸುಪಾಲ್ ಜೊತೆ ಚಿಕ್ಕಣ್ಣ ಡ್ಯುಯೇಟ್ ಹಾಡಿದ್ದರು. ಈ ಚಿತ್ರದ ಯಶಸ್ಸಿನ ಬೆನ್ನಲ್ಲೇ ಮತ್ತೊಂದು ಬಂಪರ್ ಚಾನ್ಸ್ ಗಿಟ್ಟಿಸಿಕೊಂಡಿದ್ದಾರೆ. ಇದನ್ನೂ ಓದಿ:ಲೋಕಸಭಾ ಚುನಾವಣೆಯಲ್ಲಿ ಗೆದ್ದು ಬೀಗಿದ ಸಿನಿಮಾ ತಾರೆಯರು ಯಾರು?

    ಕಿಸ್, ಮಾರ್ಟಿನ್ ಸಿನಿಮಾ ನಿರ್ದೇಶಕ ಎ.ಪಿ ಅರ್ಜುನ್ ಹೊಸ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ‘ಕೆರೆಬೇಟೆ’ ನಿರ್ದೇಶಕ ರಾಜಗುರು ಚಿಕ್ಕಣ್ಣಗೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಮೂವರ ಕಾಂಬಿನೇಷನ್ ಸಿನಿಮಾ ಬಗ್ಗೆ ಅಧಿಕೃತ ಘೋಷಣೆ ಆಗಬೇಕಿದೆ. ಸದ್ಯ ಈ ನ್ಯೂಸ್‌ ಕೇಳಿ ಫ್ಯಾನ್ಸ್‌ ಥ್ರಿಲ್‌ ಆಗಿದ್ದಾರೆ.

  • ಸೆಲೆಬ್ರಿಟಿಗಳ ಬೆಂಬಲದೊಂದಿಗೆ ಕಳೆಗಟ್ಟಿಕೊಂಡ ಕೆರೆಬೇಟೆ!

    ಸೆಲೆಬ್ರಿಟಿಗಳ ಬೆಂಬಲದೊಂದಿಗೆ ಕಳೆಗಟ್ಟಿಕೊಂಡ ಕೆರೆಬೇಟೆ!

    ನ್ನಡ ಚಿತ್ರರಂಗದಲ್ಲೀಗ ಎಲ್ಲ ರೀತಿಯಲ್ಲಿಯೂ ಚೆಂದಗೆ ಮೂಡಿ ಬಂದಿರುವ ಸಿನಿಮಾಗಳನ್ನು ಉಳಿಸಿಕೊಳ್ಳಲೂ ಹೋರಾಟ ನಡೆಸುವಂಥಾ ಸ್ಥಿತಿಯೊಂದು ಚಾಲ್ತಿಯಲ್ಲಿದೆ. ನೋಡಿದವರೆಲ್ಲ ಸದಭಿಪ್ರಾಯ ವ್ಯಕ್ತಪಡಿಸಿದರೂ ಕೂಡಾ ವಾರದಿಂದ ವಾರವನ್ನು ದಾಟಿಕೊಳ್ಳುವುದೇ ಕಷ್ಟವೆಂಬ ಈ ವಾತಾವರಣದಲ್ಲಿ ‘ಕೆರೆಬೇಟೆ’ (Kerebete) ಚಿತ್ರಕ್ಕೆ ಇದೀಗ ಚಿತ್ರರಂಗವೇ ಸಾಥ್ ಕೊಟ್ಟಂತಾಗಿದೆ. ಗೌರಿಶಂಕರ್ (Gowrishankar) ನಾಯಕನಾಗಿ ನಟಿಸಿರುವ ಈ ಚಿತ್ರ, ಆರಂಭದಿಂದಲೂ ನೆಲಮೂಲದ ಕಥೆಯೊಂದಿಗೆ ಸುದ್ದಿ ಕೇಂದ್ರದಲ್ಲಿತ್ತು. ಹಾಗೆ ಹರಳುಗಟ್ಟಿಕೊಂಡಿದ್ದ ನಿರೀಕ್ಷೆಗಳಿಗೆ ತಕ್ಕುದಾಗಿ ಮೂಡಿ ಬಂದಿದ್ದ ‘ಕೆರೆಬೇಟೆ’ಗೆ ನಾನಾ ಸವಾಲುಗಳು ಎದುರಾಗಿದ್ದವು. ಇದೀಗ ಅದೆಲ್ಲವನ್ನೂ ಸಮರ್ಥವಾಗಿ ದಾಟಿಕೊಂಡಿರುವ ಈ ಸಿನಿಮಾ ಎರಡನೇ ವಾರದ ಹೊತ್ತಿಗೆಲ್ಲ ಭರ್ಜರಿ ಪ್ರದರ್ಶನದತ್ತ ದಾಪುಗಾಲಿಡುತ್ತಿದೆ.

    ರಾಜ್ ಗುರು ಬಿ ನಿರ್ದೇಶನದಲ್ಲಿ ಮೂಡಿ ಬಂದಿರುವ ಚೊಚ್ಚಲ ಚಿತ್ರವಾದ ‘ಕೆರೆಬೇಟೆ’ ಇಂದಿಗೆ ಚೇತರಿಸಿಕೊಂಡು, ಮುನ್ನುಗ್ಗುತ್ತಿರೋದರ ಹಿಂದೆ ನಟ ನಟಿಯರ ಬೆಂಬಲವಿದೆ. ಒಂದೊಳ್ಳೆ ಕಂಟೆಂಟು ಹೊಂದಿದ್ದರೂ, ಕನ್ನಡದ ಮಟ್ಟಿಗೆ ಅಪರೂಪದ್ದೆಂಬಂಥಾ ಕಥೆಯನ್ನೊಳಗೊಂಡಿದ್ದರೂ ಕೊಂಚ ಹಿನ್ನಡೆ ಕಂಡಾಗ ಚಿತ್ರರಂಗದ ಮಂದಿ ಈ ಸಿನಿಮಾವನ್ನು ಗೆಲ್ಲಿಸುವ ಪಣತೊಟ್ಟಂತೆ ಅಖಾಡಕ್ಕಿಳಿದಿದ್ದರು. ತಮ್ಮ ಸಿನಿಮಾದ ಬ್ಯುಸಿಯ ನಡುವೆಯೂ ಧ್ರುವ ಸರ್ಜಾ (Dhruva Sarja) ‘ಕೆರೆಬೇಟೆ’ಯ ಬಗ್ಗೆ ಒಳ್ಳೆಯ ಮಾತುಗಳನ್ನಾಡಿ, ಚಿತ್ರಮಂದಿರಗಳಿಗೆ ಬಂದು ನೋಡುವಂತೆ ಬಿನ್ನವಿಸಿಕೊಂಡಿದ್ದರು. ನಂತರದಲ್ಲಿ ಖುದ್ದು ಧ್ರುವ ಸರ್ಜಾ ಅವರೇ ಕೆರೆಬೇಟೆಯನ್ನು ವೀಕ್ಷಿಸಿ ಥ್ರಿಲ್ ಆಗಿದ್ದರಲ್ಲದೇ, ಒಳ್ಳೆಯ ಅಭಿಪ್ರಾಯ ಹಂಚಿಕೊಂಡಿದ್ದರು.

    ಆ ನಂತರದಲ್ಲಿ ಡಾರ್ಲಿಂಗ್ ಕೃಷ್ಣ (Darling Krishna), ಮಿಲನಾ (Milana) ದಂಪತಿ ಕೆರೆಬೇಟೆಯನ್ನು ನೋಡಿ ಖುಷಿಗೊಂಡಿದ್ದರು. ಆ ನಂತರ ಅಜೇಯ್ ರಾವ್, ಚೈತ್ರಾ ಆಚಾರ್, ಚೇತನ್ ಅಹಿಂಸಾ ಮುಂತಾದವರೂ ಕೆರೆಬೇಟೆಯನ್ನು ನೋಡಿ ಮುದಗೊಂಡಿದ್ದಾರೆ. ಅವರೆಲ್ಲರೂ ತಮ್ಮದೇ ಆದ ರೀತಿಯಲ್ಲಿ ಈ ಬಗ್ಗೆ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಈ ಕ್ಷಣಕ್ಕೂ ನಟ ನಟಿಯರನೇಕರು ಈ ಸಿನಿಮಾವನ್ನು ವೀಕ್ಷಿಸುಜತ್ತಿದ್ದಾರೆ. ವಿಶೇಷವೆಂದರೆ, ಹೀಗೆ ಸಿನಿಮಾ ನೋಡಿ ಸದಭಿಪ್ರಾಯ ಹಂಚಿಕೊಳ್ಳುತ್ತಾ ಕೆರೆಬೇಟೆಯನ್ನು ಗೆಲ್ಲಿಸಲು ಸೆಲೆಬ್ರಿಟಿಗಳು ಟೊಂಕ ಕಟ್ಟಿ ನಿಂತ ಬೆನ್ನಲ್ಲೇ, ಪ್ರೇಕ್ಷಕರೂ ಕೂಡಾ ‘ಕೆರೆಬೇಟೆ’ (Kerebete) ನೋಡಲು ಮುನ್ನುಗ್ಗುತ್ತಿದ್ದಾರೆ.

    ಎರಡನೇ ವಾರದ ಹೊತ್ತಿಗೆಲ್ಲ ಕೆರೆಬೇಟೆಯ ಪ್ರದರ್ಶನ ರೋಮಾಂಚಕವಾಗಿಯೇ ಚೇತರಿಕೆ ಕಾಣುತ್ತಿದೆ. ಯಾವುದ್ಯಾವುದೋ ಪ್ರೇರಣೆಯಿಂದ ಈ ಸಿನಿಮಾ ನೋಡಿದವರೆಲ್ಲ ಬೇಷರತ್ತಾಗಿ ಮೆಚ್ಚಿಕೊಂಡಿದ್ದಾರೆ. ಈಗಂತೂ ಮೆಲ್ಲಗೆ ಬಾಯಿಂದ ಬಾಯಿಗೆ ಕೆರೆಬೇಟೆಯ ಆಂತರ್ಯದ ಖದರ್ ಹಬ್ಬಿಕೊಳ್ಳುತ್ತಿದೆ. ಹೀಗೆ ಪ್ರೇಕ್ಷಕರ ವಲಯದಲ್ಲಿ ಹಬ್ಬಿಕೊಳ್ಳುವ ಒಳ್ಳೆ ಮಾತುಗಳು ಯಾವುದೇ ಸಿನಿಮಾಗಳ ಪಾಲಿಗೆ ಗೆಲುವಿನ ನಿಖರ ಸೂಚನೆ. ಸದ್ಯದ ಮಟ್ಟಿಗೆ ‘ಕೆರೆಬೇಟೆ’ ಚಿತ್ರದ ಸುತ್ತ ಅಂಥಾದ್ದೊಂದು ಪಾಸಿಟಿವ್ ವಾತಾವರಣ ಹಬ್ಬಿಕೊಂಡಿದೆ. ಇದರಿಂದಾಗಿ ಗೌರಿಶಂಕರ್, ನಿರ್ದೇಶಕ ರಾಜ್ ಗುರು, ನಿರ್ಮಾಪಕ ಜೈಶಂಕರ್ ಪಟೇಲ್ ಸೇರಿದಂತೆ ಒಂದಿಡೀ ಚಿತ್ರತಂಡದ ಶ್ರಮ ಸಾರ್ಥಕಗೊಂಡಂತಾಗಿದೆ. ಸಾಲು ಸಾಲಾಗಿ ಎದುರಾದ ಸವಾಲುಗಳನ್ನೆಲ್ಲ ಎದೆಗುಂದದೆ ಎದುರಿಸಿದ ಫಲವಾಗಿಯೇ ಇದೀಗ ಚಿತ್ರಮಂದಿರ ತುಂಬಿಕೊಳ್ಳುತ್ತಿದೆ.

    ಸಾಮಾಜಿಕ ಜಾಲತಾಣಗಳಲ್ಲಿಯೂ ಕೂಡಾ ತಾನೇ ತಾನಾಗಿ ಕೆರೆಬೇಟೆಯ ಬಗ್ಗೆ ಚೆಂದದ ಅಭಿಪ್ರಾಯ, ವಿಮರ್ಶೆಗಳು ಹರಿದಾಡುತ್ತಿವೆ. ಇದೆಲ್ಲವೂ ಕೂಡಾ ಸದ್ಯದ ಮಟ್ಟಿಗೆ ಒಳಿತಿನ ಮುನ್ಸೂಚನೆಯಾಗಿ ಕಾಣಿಸುತ್ತಿದೆ. ಅಷ್ಟಕ್ಕೂ ಇಂಥಾ ಸಿನಿಮಾಗಳನ್ನು ಗೆಲ್ಲಿಸಿಕೊಳ್ಳುವ ಜರೂರತ್ತಿದೆ. ಭಿನ್ನ ಪ್ರಯತ್ನಗಳನ್ನು ಸದಾ ಬೆಂಬಲಿಸುವ ಪ್ರೇಕ್ಷಕರ ಕೃಪೆಯೂ ಇಂಥಾ ಸಿನಿಮಾಗಳತ್ತ ಹರಿಯಬೇಕಿದೆ. ಕೆರೆಬೇಟೆ ಎಂಬುದು ಮಲೆನಾಡು ಸೀಮೆಯ ನೆಲದ ಘಮಲಿನ ಚಿತ್ರ. ಮೇಕಿಂಗ್ ಸೇರಿದಂತೆ ಎಲ್ಲದರಲ್ಲಿಯೂ ಮೇಲ್ಮಟ್ಟದಲ್ಲಿರುವ ಕೆರೆಬೇಟೆ, ಎಲ್ಲ ವರ್ಗದ ಪ್ರೇಕ್ಷಕರಿಗೂ ಪಥ್ಯವಾಗಬಲ್ಲ ಚಿತ್ರ. ಇಂಥಾ ಸಿನಿಮಾವನ್ನು ದೊಡ್ಡ ಮಟ್ಟದಲ್ಲಿ ಗೆಲ್ಲಿಸೋದು ಚಿತ್ರರಂಗದ ಭವಿಷ್ಯದ ದೃಷ್ಟಿಯಿಂದಲೂ ತರ್ತುನ ಸಂಗತಿ ಎಂಬ ಅಭಿಪ್ರಾಯ ಎಲ್ಲ ದಿಕ್ಕುಗಳಿಂದಲೂ ಹೊಮ್ಮುತ್ತಿದೆ.

  • ನಾಯಕಿಯ ಅಮ್ಮನ ಕಣ್ಣಲ್ಲಿ ಕಳೆಗಟ್ಟಿದ ಕೆರೆಬೇಟೆ!

    ನಾಯಕಿಯ ಅಮ್ಮನ ಕಣ್ಣಲ್ಲಿ ಕಳೆಗಟ್ಟಿದ ಕೆರೆಬೇಟೆ!

    ನಮನ ಸಿನಿಮಾಸ್ ಬ್ಯಾನರಿನಡಿಯಲ್ಲಿ ಜೈಶಂಕರ್ ನಿರ್ಮಾಣ ಮಾಡಿರುವ, ಗೌರಿಶಂಕರ್ (Gowri Shankar) ನಾಯಕನಾಗಿ ನಟಿಸಿರುವ ‘ಕೆರೆಬೇಟೆ’ (Kerebete Film) ಚಿತ್ರ ಈ ವಾರ ಬಿಡುಗಡೆಗೊಳ್ಳಲಿದೆ. ಬಿಡುಗಡೆಗೆ ದಿನಗಣನೆ ಆರಂಭವಾಗಿರುವ ಈ ಹೊತ್ತಿನಲ್ಲಿ ಕೆರೆಬೇಟೆಯ ಸುತ್ತ ನಾನಾ ತೆರನಾದ ಕುತೂಹಲಗಳು, ಚರ್ಚೆಗಳು ಮೂಡಿಕೊಂಡಿವೆ. ಅದರಲ್ಲಿಯೂ ಇದರೊಳಗಿನ ಪಾತ್ರಗಳ ಬಗ್ಗೆಯೂ ಪ್ರೇಕ್ಷಕರ ಆಕರ್ಷಿತರಾಗಿದ್ದಾರೆ. ಒಂದಷ್ಟು ಪಳಗಿದ ಕಲಾವಿದರ ಜೊತೆಜೊತೆಗೇ ಹೊಸಾ ಪ್ರತಿಭೆಗಳು ಕೂಡಾ ಕೆರೆಬೇಟೆಯ ತಾರಾಬಳದಲ್ಲಿ ಸೇರಿಕೊಂಡಿದ್ದಾರೆ. ಈಗಾಗಲೇ ‘ವೇದ’ (Vedha) ಸೇರಿದಂತೆ ಒಂದಷ್ಟು ಸಿನಿಮಾಗಳಲ್ಲಿ ನಟಿಸಿರುವ ಆಶಾ ಸುಜಯ್ (Asha Sujay) ಇಲ್ಲಿ ನಾಯಕಿಯ ಪಾತ್ರದಲ್ಲಿ ನಟಿಸಿದ್ದಾರೆ.

    ಇವರ ಪಾತ್ರದ ಸಣ್ಣ ಝಲಕ್ಕೊಂದು ಟ್ರೈಲರ್‌ನಲ್ಲಿ ಸುಳಿದಿದೆ. ದಶಕಗಳಿಗೂ ಹೆಚ್ಚು ಕಾಲದಿಂದ ಸಿನಿಮಾ ರಂಗದಲ್ಲಿ ಸಕ್ರಿಯರಾಗಿರುವವರು ಆಶಾ. ಅವರಿಗೆ ಕೆರೆ ಬೇಟೆಯ ಮೂಲಕ ಬಹುಕಾಲದಿಂದ ಹಂಬಲಿಸುತ್ತಿದ್ದ, ಸಿನಿಮಾದುದ್ದಕ್ಕೂ ಪ್ರಾಧಾನ್ಯತೆ ಇರುವ ಪಾತ್ರ ಸಿಕ್ಕಿದೆ. ಅವರಿಲ್ಲಿ ನಾಯಕಿಯ ಅಮ್ಮನ ಪಾತ್ರವನ್ನು ಆವಾಹಿಸಿಕೊಂಡಿದ್ದಾರೆ. ಊರಿಗೇ ಪ್ರತಿಷ್ಠಿತವಾಗಿರುವ, ದೊಡ್ಡ ಮನೆಯ ಜವಾಬ್ದಾರಿಯುತ ಗೃಹಿಣಿಯಾಗಿ ಆಶಾ ಕಾಣಿಸಿಕೊಂಡಿದ್ದಾರೆ. ಪ್ರೀತಿಯಿಂದ ಸಾಕಿದ ಮಗಳನ್ನೇ ಸರ್ವಸ್ವ ಅಂದುಕೊಂಡಿರುವ ಅಮ್ಮನಾಗಿ, ಆ ನಂತರದ ಹಠಾತ್ ಸನ್ನಿವೇಶಗಳನ್ನು ಕಂಡು ಮರುಗುವ ಭಾವನಾತ್ಮಕ ಪಾತ್ರಕ್ಕೆ ಜೀವ ತುಂಬಿದ ತುಂಬು ಖುಷಿ ಆಶಾರಲ್ಲಿದೆ. ಇದನ್ನೂ ಓದಿ:ಕೆರೆಬೇಟೆಗಿಳಿದ ಗೋಪಾಲ ದೇಶಪಾಂಡೆಗೆ ಮಲೆನಾಡ ಮೋಹ!

    ಕೇವಲ ಕಥೆ ಮಾತ್ರವಲ್ಲದೇ ತಾಂತ್ರಿಕವಾಗಿಯೂ ಶ್ರೀಮಂತಿಕೆ ಹೊಂದಿರುವ ಕೆರೆಬೇಟೆಯಲ್ಲಿ ಗಗನ್ ಬದೇರಿಯಾ ಸಂಗೀತ, ಕೀರ್ತನ್ ಪೂಜಾರಿ ಛಾಯಾಗ್ರಹಣ, ಜ್ಞಾನೇಶ್-ಯುವರತ್ನ ಸಂಕಲನ, ಕಂಬಿ ರಾಜು ನೃತ್ಯ ನಿರ್ದೇಶನ ಮತ್ತು ಗೋಪಾಲ್ ದೇಶಪಾಂಡೆ, ಹರಿಣಿ, ಸಂಪತ್ ಕುಮಾರ್, ರಘು ರಾಜಾನಂದ, ರಾಮ್ ದಾಸ್, ರಾಕೇಶ್ ಪೂಜಾರಿ, ಚಿಲ್ಲರ್ ಮಂಜು, ಗೌತಮ್ ರಾಜ್, ವರ್ಧನ್ ತೀರ್ಥಹಳ್ಳಿ, ರಣಧೀರ್ ಗೌಡ, ಶೇಖರ್ ಕೆ, ದೇವಿಪ್ರಕಾಶ್, ಆಶಾ ಸುಜಯ್, ವಿದ್ಯಾ, ಕಿರಣ್ ರಾವ್, ಗೀತಾ ಮೈಸೂರು ಮುಂತಾದವರ ತಾರಾಗಣವಿದೆ. ಅಂದಹಾಗೆ, ಕೆರೆಬೇಟೆ ಚಿತ್ರ ಇದೇ ಮಾರ್ಚ್ 15ರಂದು ರಾಜ್ಯಾದ್ಯಂತ ತೆರೆಗಾಣಲಿದೆ.

  • ಕೆರೆಬೇಟೆಯ ಕೋ ಡೈರೆಕ್ಟರ್ ಶೇಖರ್ ರೇಷನ್ ಅಂಗ್ಡಿ ಓನರ್!

    ಕೆರೆಬೇಟೆಯ ಕೋ ಡೈರೆಕ್ಟರ್ ಶೇಖರ್ ರೇಷನ್ ಅಂಗ್ಡಿ ಓನರ್!

    ‘ಗೌರಿಶಂಕರ್’ (Gowri Shankar) ನಾಯಕನಾಗಿ ನಟಿಸಿರುವ ‘ಕೆರೆಬೇಟೆ’ (Kerebete Film) ಚಿತ್ರ ಈ ವಾರ ರಾಜ್ಯಾದ್ಯಂತ ತೆರೆಗಾಣಲಿದೆ. ಯಾವುದೇ ಹೈಪುಗಳಿಲ್ಲದೆ, ಸಾಂಗು, ಟೀಸರ್‌ಗಳ ಮೂಲಕವೇ ‘ಕೆರೆಬೇಟೆ’ ಹುಟ್ಟು ಹಾಕಿರುವ ನಿರೀಕ್ಷೆ ಸಕಾರಾತ್ಮಕ ಬೆಳವಣಿಗೆಯಂತೆಯೇ ಭಾಸವಾಗುತ್ತದೆ. ಅಪ್ಪಟ ಮಲೆನಾಡಿನ ಕಥೆ, ಅಲ್ಲಿಯದ್ದೇ ಭಾಷಾ ಸೊಗಡಿನೊಂದಿಗೆ, ರಗಡ್ ಶೈಲಿಯಲ್ಲಿ ಮೂಡಿ ಬಂದಿರೋ ಈ ಸಿನಿಮಾ, ಪ್ರತಿಭಾನ್ವಿತ ತಾಂತ್ರಿಕ ವರ್ಗ, ಆಯಾ ಪಾತ್ರಗಳಿಗೆ ಒಪ್ಪುವಂಥಾ ಕಲಾವಿದರ ಬಳಗದೊಂದಿಗೆ ಕಳೆಗಟ್ಟಿಕೊಂಡಿದೆ. ಬೇರೆಲ್ಲ ಅಂಶಗಳದ್ದು ಒಂದು ತೂಕವಾದರೆ, ಇಲ್ಲಿನ ಪಾತ್ರಗಳಿಗೆ ಕಲಾವಿದರ ತಲಾಶು ನಡೆಸಿದ್ದು ಮತ್ತೊಂದು ತೆರನಾದ ಸಾಹಸವಾಗಿ ದಾಖಲಾಗುತ್ತೆ.

    ನಿರ್ದೇಶಕ ರಾಜಗುರು ಮತ್ತು ನಾಯಕ ನಟ ಗೌರಿಶಂಕರ್ (Gowri Shankar) ಇಲ್ಲಿನ ಪ್ರತೀ ಪಾತ್ರಗಳಿಗೂ ಅಳೇದೂ ತೂಗಿ, ಆ ಪಾತ್ರವೇ ಆಗಿಬಿಡುವಂಥಾ ಕಲಾವಿದರನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಕೆಲವರಿಗೆಲ್ಲ ತರಬೇತಿಯನ್ನೂ ಕೊಡಿಸಿ ಸಜ್ಜುಗೊಳಿಸಿದ್ದಾರೆ. ಮಾಲೆನಾಡಿನ ಭಾಷೆಯ ಸೊಗಡು ಗೊತ್ತಿರುವ ಸ್ಥಳೀಯರೇ ಒಂದಷ್ಟು ಮಂದಿಗೂ ಅವಕಾಶ ಮಾಡಿ ಕೊಡಲಾಗಿದೆ. ಇದರ ಭಾಗವಾಗಿಯೇ ಕೆರೆಬೇಟೆಯ ನಿರ್ದೇಶನ ವಿಭಾಗದಲ್ಲಿ ಮನಕಾರ್ಯನಿರ್ವಹಿಸಿದ್ದ ಶೇಖರ್ ಕರಡಿಮನೆ ಕೂಡಾ ಒಂದು ಪಾತ್ರದಲ್ಲಿ ನಟಿಸಿದ್ದಾರೆ. ಇದನ್ನೂ ಓದಿ:ಕೆರೆಬೇಟೆಗಿಳಿದ ಗೋಪಾಲ ದೇಶಪಾಂಡೆಗೆ ಮಲೆನಾಡ ಮೋಹ!

    ಶೇಖರ್ ಕರಡಿಮನೆ (Shekar Karadimane) ತೀರ್ಥಹಳ್ಳಿ ಮೂಲದವರು. ಎರಡು ದಶಕಗಳಷ್ಟು ಕಾಲ ಸಿನಿಮಾ ರಂಗದ ನಿರ್ದೇಶನ ವಿಭಾಗದಲ್ಲಿ ಸಕ್ರಿಯರಾಗಿರುವ ಶೇಖರ್, ಈಗಾಗಲೇ ಹಲವಾರು ಸಿನಿಮಾಗಳ ಭಾಗವಾಗಿದ್ದಾರೆ. ಅದೇ ಅನುಭವದ ಆಧಾರದಲ್ಲಿ ಅವರು ಕೆರೆಬೇಟೆ ಚಿತ್ರದ ಕೋ ಡೈರೆಕ್ಟರ್ ಆಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಈ ನಡುವೆ ನಾಯಕಿಯ ಮಾವನ ಪಾತ್ರವನ್ನು ಯಾವ ಕಲಾವಿದರು ಮಾಡಬೇಕೆಂಬ ಚರ್ಚೆ ಶುರುವಾದಾಗ, ಆ ಅವಕಾಶ ಶೇಖರ್ ಪಾಲಾಗಿದೆ. ಹಳ್ಳಿಯಲ್ಲಿ ಕಿರಾಣಿ ಅಂಗಡಿ ಇಟ್ಟುಕೊಂಡಿರೋ ದಯಾನಂದನ ಪಾತ್ರಕ್ಕೆ ಶೇಖರ್ ಜೀವ ತುಂಬಿದ್ದಾರೆ. ಈಗಾಗಲೇ ಮಹೇಶ್ ಬಾಬುರಂಥಾ ನಿರ್ದೇಶಕರೊಂದಿಗೆ ಕಾರ್ಯನಿರ್ವಹಿಸಿರುವ, ಹಲವಾರು ಹಿಟ್ ಸಿನಿಮಾಗಳ ಭಾಗವಾಗಿರುವ ಶೇಖರ್, ಈ ಮೂಲಕ ನಟನೆಗಿಳಿದಿದ್ದಾರೆ. ಆ ಪಾತ್ರವೂ ಕೂಡಾ ಕೆರೆಬೇಟೆಯ ಒಟ್ಟಾರೆ ಆಕರ್ಷಣೆಗಳಲ್ಲೊಂದು.

    ಜೈಶಂಕರ್ ಜನಮನ ಸಿನಿಮಾಸ್ ಬ್ಯಾನರಿನಡಿಯಲ್ಲಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಕೇವಲ ಕಥೆ ಮಾತ್ರವಲ್ಲದೇ ತಾಂತ್ರಿಕವಾಗಿಯೂ ಶ್ರೀಮಂತಿಕೆ ಹೊಂದಿರುವ ಕೆರೆಬೇಟೆಯಲ್ಲಿ ಗಗನ್ ಬದೇರಿಯಾ ಸಂಗೀತ, ಕೀರ್ತನ್ ಪೂಜಾರಿ ಛಾಯಾಗ್ರಹಣ, ಜ್ಞಾನೇಶ್-ಯುವರತ್ನ ಸಂಕಲನ, ಕಂಬಿ ರಾಜು ನೃತ್ಯ ನಿರ್ದೇಶನ ಮತ್ತು ಗೋಪಾಲ್ ದೇಶಪಾಂಡೆ, ಹರಿಣಿ, ಸಂಪತ್ ಕುಮಾರ್, ರಘು ರಾಜಾನಂದ, ರಾಮ್ ದಾಸ್, ರಾಕೇಶ್ ಪೂಜಾರಿ, ಚಿಲ್ಲರ್ ಮಂಜು, ಗೌತಮ್ ರಾಜ್, ವರ್ಧನ್ ತೀರ್ಥಹಳ್ಳಿ, ರಣಧೀರ್ ಗೌಡ, ಶೇಖರ್ ಕೆ, ದೇವಿಪ್ರಕಾಶ್, ಆಶಾ ಸುಜಯ್, ವಿದ್ಯಾ, ಕಿರಣ್ ರಾವ್, ಗೀತಾ ಮೈಸೂರು ಮುಂತಾದವರ ತಾರಾಗಣವಿದೆ. ಅಂದಹಾಗೆ, ಕೆರೆಬೇಟೆ ಚಿತ್ರ ಇದೇ ಮಾರ್ಚ್ 15ರಂದು ರಾಜ್ಯಾದ್ಯಂತ ತೆರೆಗಾಣಲಿದೆ.

  • ಕೆರೆಬೇಟೆಗಿಳಿದ ಗೋಪಾಲ ದೇಶಪಾಂಡೆಗೆ ಮಲೆನಾಡ ಮೋಹ!

    ಕೆರೆಬೇಟೆಗಿಳಿದ ಗೋಪಾಲ ದೇಶಪಾಂಡೆಗೆ ಮಲೆನಾಡ ಮೋಹ!

    ಯಾವ ಪಾತ್ರವೇ ಸಿಕ್ಕರೂ ಅದರ ಆಳಕ್ಕಿಳಿದು, ಪಾತ್ರವೇ ತಾನಾಗಿ ಬಿಡುವ ತನ್ಮಯತೆ ಹೊಂದಿರೋ ಅಪರೂಪದ ನಟನರ ಸಾಲಿನಲ್ಲಿ ಗೋಪಾಲ ದೇಶಪಾಂಡೆ ಅವರಿಗೆ ವಿಶೇಷ ಸ್ಥಾನವಿದೆ. ಸದಾ ಹೊಸತನದ ಪಾತ್ರಗಳಿಗಾಗಿ ಹಂಬಲಿಸುವ ಅವರನ್ನು ಅಪರೂಪದ ಪಾತ್ರಗಳೇ ಅರಸಿ ಬರುತ್ತಿವೆ. ಈ ವಾರ ಬಿಡುಗಡೆಗೊಳ್ಳುತ್ತಿರುವ ‘ಕೆರೆಬೇಟೆ’ (Kerebete) ಚಿತ್ರದಲ್ಲಿಯೂ ಗೋಪಾಲ ದೇಶಪಾಂಡೆಗೆ (Gopal Deshpande) ಒಂದೊಳ್ಳೆ ಪಾತ್ರವೇ ಸಿಕ್ಕಿದೆ. ಮಲೆನಾಡು ವಾತಾವರಣವನ್ನು ಅತೀವವಾಗಿ ಇಷ್ಟಪಡುವ, ಆ ವಾತಾವರಣದ ಬಗೆಗೊಂದು ಮೋಹ ಬೆಳೆಸಿಕೊಂಡಿರುವ ಅವರಿಗೆ ಆ ಭಾಗದ ಕಥೆಯಲ್ಲಿ ಪಾತ್ರವಾಗುವ ಅವಕಾಶ ಸಿಕ್ಕಿರೋದರಿಂದ ಥ್ರಿಲ್ ಆಗಿದ್ದಾರೆ.

    ಗೋಪಾಲ್ ದೇಶಪಾಂಡೆ ಮಲೆನಾಡು ಸೀಮೆಯ ಕಥೆ ಹೊಂದಿರೋ ಸಿನಿಮಾದಲ್ಲಿ ಪಾತ್ರ ಮಾಡಬೇಕೆಂಬ ಆಸೆ ಇಟ್ಟುಕೊಂಡಿದ್ದರಂತೆ. ಹಲವಾರು ವರ್ಷಗಳ ನಂತರ ಇದೀಗ ‘ಕೆರೆಬೇಟೆ’ಯ ಮೂಲಕ ಅದು ಕೈಗೂಡಿದೆ. ಆರಂಭದಲ್ಲಿ ನಿರ್ದೇಶಕರು ಈ ಕಥೆ ಹೇಳಿದಾಗಲೇ ಗೋಪಾಲ್ ಖುಷಿಗೊಂಡಿದ್ದರಂತೆ. ಸಾಮಾನ್ಯವಾಗಿ ಇಂಥಾ ಗ್ರಾಮ್ಯ ಸೊಗಡಿನ ಕಥೆಗಳು ದೃಷ್ಯರೂಪ ಧರಿಸುವ ಪ್ರಕ್ರಿಯೆ ಮಜವಾಗಿರುತ್ತದೆ. ಅದರ ಬಗ್ಗೆ ಅತೀವ ಆಸಕ್ತಿ ಹೊಂದಿದ್ದ ಗೋಪಾಲ ದೇಶಪಾಂಡೆ, ಒಂದು ಪಾತ್ರವಾಗಿ ಮಾತ್ರವಲ್ಲದೇ, ಸಾಮಾನ್ಯ ಪ್ರೇಕ್ಷಕನಾಗಿಯೂ ಅದನ್ನು ಸಂಭ್ರಮಿಸಿದ್ದಾರಂತೆ.

    ಒಟ್ಟಾರೆ ಕಥೆ, ಸಿನಿಮಾ ಮೂಡಿ ಬಂದಿರುವ ರೀತಿ, ನಿರ್ದೇಶನದ ಚಾಕಚಕ್ಯತೆ, ನಾಯಕನಾಗಿ ‘ಗೌರಿಶಂಕರ್’ (Gowri Shankar) ನಟಿಸಿರುವ ಪರಿಯೆಲ್ಲವೂ ಗೋಪಾಲರನ್ನು ಖುಷಿಗೊಳಿಸಿದೆ. ಅಂದಹಾಗೆ, ಅವರಿಲ್ಲಿ ನಾಯಕಿಯ ತಂದೆಯ ಪಾತ್ರವನ್ನು ನಿರ್ವಹಿಸಿದ್ದಾರೆ. ಸಾಮಾನ್ಯವಾಗಿ, ಪ್ರತೀ ತಂದೆಯೂ ತನ್ನ ಮಗಳನ್ನು ಕಣ್ಣಲ್ಲಿ ಕಣ್ಣಿಟ್ಟು ಸಾಕುತ್ತಾನೆ, ಕೂದಲು ಕೊಂಕದಂತೆ ನೋಡಿಕೊಳ್ಳುತ್ತಾನೆ. ಅಂಥಾ ಮಮತೆ ಹೊಂದಿರುವ ಆ ಪಾತ್ರವಾಗಿ, ಇಡೀ ಕಥೆಯ ಕೇಂದ್ರಬಿಂದುವಾಗಿ ಒಂದೊಳ್ಳು ಅನುಭವವನ್ನು ಅವರು ತಮ್ಮದಾಗಿಸಿಕೊಂಡಿದ್ದಾರೆ. ಮಲೆನಾಡು ಮೋಹಿಯಾದ ಗೋಪಾಲ ದೇಶಪಾಂಡೆ ಮಲೆನಾಡ ಮಡಿಲಲ್ಲಿಯೇ ನಡೆದ ಚಿತ್ರೀಕರಣದ ಪ್ರತೀ ಕ್ಷಣವನ್ನೂ ಆನಂದಿಸಿದ್ದಾರೆ.

    ಇದೆಲ್ಲದರೊಂದಿಗೆ ‘ಕೆರೆಬೇಟೆ’ ಎಲ್ಲರಿಗೂ ಹಿಡಿಸುತ್ತೆ, ದೊಡ್ಡ ಮಟ್ಟದಲ್ಲಿ ಗೆಲುವು ದಾಖಲಿಸುತ್ತದೆ ಎಂಬ ಗಾಢ ನಂಬಿಕೆಯೂ ಅವರಲ್ಲಿದೆ. ಜೈಶಂಕರ್ ಜನಮನ ಸಿನಿಮಾಸ್ ಬ್ಯಾನರಿನಡಿಯಲ್ಲಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಕೇವಲ ಕಥೆ ಮಾತ್ರವಲ್ಲದೇ ತಾಂತ್ರಿಕವಾಗಿಯೂ ಶ್ರೀಮಂತಿಕೆ ಹೊಂದಿರುವ ಕೆರೆಬೇಟೆಯಲ್ಲಿ ಗಗನ್ ಬದೇರಿಯಾ ಸಂಗೀತ, ಕೀರ್ತನ್ ಪೂಜಾರಿ ಛಾಯಾಗ್ರಹಣ, ಜ್ಞಾನೇಶ್-ಯುವರತ್ನ ಸಂಕಲನ, ಕಂಬಿ ರಾಜು ನೃತ್ಯ ನಿರ್ದೇಶನ ಮತ್ತು ಗೋಪಾಲ್ ದೇಶಪಾಂಡೆ, ಹರಿಣಿ, ಸಂಪತ್ ಕುಮಾರ್, ರಘು ರಾಜಾನಂದ, ರಾಮ್ ದಾಸ್, ರಾಕೇಶ್ ಪೂಜಾರಿ, ಚಿಲ್ಲರ್ ಮಂಜು, ಗೌತಮ್ ರಾಜ್, ವರ್ಧನ್ ತೀರ್ಥಹಳ್ಳಿ, ರಣಧೀರ್ ಗೌಡ, ಶೇಖರ್ ಕೆ, ದೇವಿಪ್ರಕಾಶ್, ಆಶಾ ಸುಜಯ್, ವಿದ್ಯಾ, ಕಿರಣ್ ರಾವ್, ಗೀತಾ ಮೈಸೂರು ಮುಂತಾದವರ ತಾರಾಗಣವಿದೆ. ಅಂದಹಾಗೆ, ‘ಕೆರೆಬೇಟೆ’ ಚಿತ್ರ ಇದೇ ಮಾರ್ಚ್ 15ರಂದು ರಾಜ್ಯಾದ್ಯಂತ ತೆರೆಗಾಣಲಿದೆ.