Tag: kerala

  • ಕೊರೊನಾ ಜಿಹಾದಿಗಳಿಗೆ ಜೀವಾವಧಿ ಶಿಕ್ಷೆಯಾಗಲಿ: ಕರಂದ್ಲಾಜೆ

    ಕೊರೊನಾ ಜಿಹಾದಿಗಳಿಗೆ ಜೀವಾವಧಿ ಶಿಕ್ಷೆಯಾಗಲಿ: ಕರಂದ್ಲಾಜೆ

    – ಕೇರಳಿಗರನ್ನು ಒಳಗೆ ಬಿಡಲ್ಲ

    ಉಡುಪಿ: ದೇಶದಲ್ಲಿ ಕೊರೊನಾ ಜಿಹಾದ್ ನಡೆಯುತ್ತಿದೆ. ಸರ್ಕಾರಕ್ಕೆ ವೈದ್ಯರಿಗೆ ಸಹಕಾರ ನೀಡದವರಿಗೆ ಜೀವಾವಧಿ ಶಿಕ್ಷೆ ವಿಧಿಸಬೇಕು ಎಂದು ಸಂಸದೆ ಶೋಭಾ ಕರಂದ್ಲಾಜೆ ಒತ್ತಾಯಿಸಿದ್ದಾರೆ.

    ಉಡುಪಿಯಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಕೊರೊನಾ ರೋಗಿ ವೈದ್ಯರನ್ನು ತಬ್ಬಿಕೊಳ್ಳುತ್ತಾರೆ. ನರ್ಸ್ ಗಳಿಗೆ ರೋಗ ಹಬ್ಬಿಸುವ ಧಮ್ಕಿ ಹಾಕಿದ್ದಾರೆ. ಇದು ಭಯೋತ್ಪಾದನೆಯ ಮುಂದುವರಿದ ಭಾಗ. ಕ್ವಾರಂಟೈನ್‍ನಲ್ಲಿ ಇರುವ ಜಿಹಾದಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಬೇಕು. ಕಠಿಣವಾದ ಕಾನೂನು ದೇಶದಲ್ಲಿ ಜಾರಿಗೆ ಬರಬೇಕು ಎಂದು ಆಗ್ರಹಿಸಿದ್ದಾರೆ.

    ಕೊರೊನಾ ವಿಚಾರದಲ್ಲಿ ನಾನು ರಾಜಕೀಯ ಮಾಡುತ್ತಿಲ್ಲ. ಕೊರೊನಾ ಹಬ್ಬಿಸುವ ದುರ್ಬುದ್ಧಿಯವರನ್ನು ಜನತೆಯ ಮುಂದೆ ತೆರೆದಿಡುತ್ತಿದ್ದೇನೆ ಎಂದು ಮಾಜಿ ಸಚಿವ ಯುಟಿ ಖಾದರ್ ಗೆ ತಿರುಗೇಟು ನೀಡಿದರು. ಸಾಧಿಕ್ ನಗರದ ಆಶಾ ಕಾರ್ಯಕರ್ತೆಯ ಮನೆಗೆ ಭೇಟಿ ಕೊಟ್ಟಿದ್ದೇನೆ. ಆಕೆಯ ಸ್ಥಿತಿ ಕಂಡು ನನಗೆ ದುಃಖ ಆಯಿತು ಎಂದರು.

    ಕೇರಳ ಕೊರೊನಾ ರೆಡ್ ಜೋನ್ ಏರಿಯಾ ಆಗಿದೆ. ಕಾಸರಗೋಡು ಇಡೀ ದೇಶದ ರೆಡ್ ಜೋನ್ ಏರಿಯಾ. ಕೇರಳದವರು ನಮ್ಮ ರಾಜ್ಯದಲ್ಲಿ ಕೊರೋನಾ ಹಬ್ಬಿಸುವುದನ್ನು ನಾವು ಸಹಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.

    ಕಾಸರಗೋಡಿಗೆ ಚಿಕ್ಕಮಗಳೂರಿನಿಂದ ತರಕಾರಿ ರವಾನೆ ಮಾಡಿದ್ದೇವೆ. ಮಾನವೀಯತೆ ವಿಚಾರದಲ್ಲಿ ನಾವು ಹಿಂದೆ ಮುಂದೆ ನೋಡುವುದಿಲ್ಲ. ಅಗತ್ಯ ಸೇವೆ ಮತ್ತು ವೈದ್ಯಕೀಯ ಸೇವೆ ನೀಡಲು ಸಿದ್ಧವಿದೆ. ವೈದ್ಯರು, ನರ್ಸ್‍ಗಳು ಅಲ್ಲಿಗೆ ಕಳುಹಿಸುತ್ತೇವೆ. ಆದರೆ ಕೇರಳ ಕಾಸರಗೋಡಿನ ಜನ ಕರ್ನಾಟಕಕ್ಕೆ ಬರಬಾರದು. ನಾವು ಯಾವುದೇ ಕಾರಣಕ್ಕೂ ಇದನ್ನು ಸಹಿಸುವುದಿಲ್ಲ ಎಂದು ಹೇಳಿದರು. ಇಲ್ಲಿನ ವಾಹನ ಹೋಗುವ ಬರುವ ಸಂದರ್ಭದಲ್ಲಿ ಕ್ರಿಮಿನಾಶಕ ಸಿಂಪಡಣೆ ಆಗತ್ಯ ಎಂದು ತಿಳಿಸಿದರು.

  • ಕೊರೊನಾ ವಿರುದ್ಧ ಹೋರಾಡಿ ಗೆದ್ದ ದೇಶದ 93-88 ವರ್ಷದ ವೃದ್ಧ ದಂಪತಿ

    ಕೊರೊನಾ ವಿರುದ್ಧ ಹೋರಾಡಿ ಗೆದ್ದ ದೇಶದ 93-88 ವರ್ಷದ ವೃದ್ಧ ದಂಪತಿ

    ತಿರುವನಂತಪುರಂ: ವಿಶ್ವಾದಂತ್ಯ ಕೊರೊನಾ ವೈರಸ್‍ಗೆ ಬಲಿಯಾದವರಲ್ಲಿ ವೃದ್ಧರ ಸಂಖ್ಯೆಯೇ ಹೆಚ್ಚಾಗಿದೆ. ಆದರೆ ಪವಾಡ ರೀತಿ ಕೇರಳದ ವೃದ್ಧ ದಂಪತಿ ಕೊರೊನಾ ವಿರುದ್ಧ ಹೋರಾಡಿ ಸಾವು ಗೆದ್ದಿದ್ದಾರೆ.

    ಕೊರೊನಾ ಪಾಸಿಟಿವ್ ಆಗಿದ್ದ ಕೇರಳದ ಕೊಟ್ಟಾಯಂ ದಂಪತಿ, 93 ವರ್ಷದ ಥಾಮಸ್ ಮತ್ತು 88 ವರ್ಷದ ಥ್ರೆಸ್ಯಮ್ಮ ಅವರು ಗುಣಮುಖರಾಗಿದ್ದಾರೆ. ಹೀಗಾಗಿ ಅವರನ್ನು ಶುಕ್ರವಾರ ವೈದ್ಯಕೀಯ ಕಾಲೇಜು ಕೊಟ್ಟಾಯಂನಿಂದ ಡಿಸ್ಚಾರ್ಜ್ ಮಾಡಲಾಗಿದೆ.

    ಇಟಲಿಯಿಂದ ಮರಳಿದ್ದ ತಮ್ಮ ಮಗ ಮತ್ತು ಕುಟುಂಬದ ಸದಸ್ಯರೊಂದಿಗೆ ಸಂಪರ್ಕಕ್ಕೆ ಬಂದ ನಂತರ ದಂಪತಿ ಸೋಂಕಿಗೆ ಒಳಗಾಗಿದ್ದರು. ದಂಪತಿ ಒಂದೆರಡು ದಿನಗಳ ಹಿಂದೆಯೇ ಗುಣಮುಖರಾಗಿದ್ದರು. ಆದಾಗ್ಯೂ ಆಸ್ಪತ್ರೆಯ ಅಧಿಕಾರಿಗಳು ಕೆಲವು ಪರೀಕ್ಷೆಗಳಿಗೆ ಉಳಿಸಿಕೊಂಡಿದ್ದರು. ಶುಕ್ರವಾರ ಸಭೆ ನಡೆಸಿದ ಆಸ್ಪತ್ರೆಯ ವೈದ್ಯಕೀಯ ಮಂಡಳಿಯು ದಂಪತಿಯನ್ನು ಡಿಸ್ಚಾರ್ಜ್ ಮಾಡುವ ನಿರ್ಧಾರ ಕೈಗೊಂಡಿತು.

    ವೃದ್ಧ ದಂಪತಿ ತಮಗೆ ಚಿಕಿತ್ಸೆ ನೀಡಿದ ವೈದ್ಯರಿಗೆ ಧನ್ಯವಾದ ತಿಳಿಸಿ ಆಂಬುಲೆನ್ಸ್ ಮೂಲಕ ಮತ್ತ ಮನೆ ತೆರಳಿದರು. ಇದಕ್ಕೂ ಮುನ್ನ ದಂಪತಿಯೊಂದಿಗೆ ವೃದ್ಯರು ಫೋಟೋ ಕ್ಲಿಕ್ಕಿಸಿಕೊಂಡು ಖುಷಿ ವ್ಯಕ್ತಪಡಿಸಿದರು.

  • ಮಂಗಳವಾರದವರೆಗೂ ಕರ್ನಾಟಕ-ಕೇರಳ ಗಡಿ ಬಂದ್ ತೆರವಿಲ್ಲ: ಸುಪ್ರೀಂ

    ಮಂಗಳವಾರದವರೆಗೂ ಕರ್ನಾಟಕ-ಕೇರಳ ಗಡಿ ಬಂದ್ ತೆರವಿಲ್ಲ: ಸುಪ್ರೀಂ

    – ಮಾತುಕತೆ ಮೂಲಕವೇ ಸಮಸ್ಯೆ ಇತ್ಯರ್ಥವಾಗಲಿ

    ನವದೆಹಲಿ: ಕರ್ನಾಟಕ- ಕೇರಳ ಗಡಿ ಬಂದ್ ವಿವಾದವನ್ನು ಕೇಂದ್ರ ಆರೋಗ್ಯ ಇಲಾಖೆ ಕಾರ್ಯದರ್ಶಿ ಜೊತೆಗೆ ಎರಡು ರಾಜ್ಯದ ಮುಖ್ಯ ಕಾರ್ಯದರ್ಶಿಗಳು ಮಾತುಕತೆ ನಡೆಸಿ ಬಗೆಹರಿಸಿಕೊಳ್ಳುವಂತೆ ಸುಪ್ರೀಂಕೋರ್ಟ್ ಎರಡು ರಾಜ್ಯ ಸರ್ಕಾರಗಳಿಗೆ ಸಲಹೆ ನೀಡಿದೆ.

    ಲಾಕ್‍ಡೌನ್ ಹಿನ್ನೆಲೆ ಹಾಗೂ ಕೊರೊನಾ ಸೋಂಕು ಹರಡಂತೆ ತಡೆಯುವ ನಿಟ್ಟಿನಲ್ಲಿ ಮುಚ್ಚಲ್ಪಟ್ಟಿರುವ ಕೇರಳ -ಕರ್ನಾಟಕ ಗಡಿಯನ್ನು ತೆರವುಗೊಳಿಸುವಂತೆ ಕೇರಳ ಹೈಕೋರ್ಟ್ ನೀಡಿತ್ತು. ಈ ಆದೇಶವನ್ನು ಪ್ರಶ್ನಿಸಿ ಕರ್ನಾಟಕ ರಾಜ್ಯ ಸರ್ಕಾರವು ಸಲ್ಲಿಸಿದ್ದ ಅರ್ಜಿಯನ್ನು ಇಂದು ಸುಪ್ರೀಂಕೋರ್ಟ್ ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆಸಿತು. ಇದನ್ನೂ ಓದಿ: ಮಂಗ್ಳೂರು-ಕಾಸರಗೋಡು ಗಡಿ ದಿಗ್ಬಂಧನ ತೆರವುಗೊಳಿಸಿ: ಕೇಂದ್ರಕ್ಕೆ ಕೇರಳ ಹೈಕೋರ್ಟ್ ನಿರ್ದೇಶನ

    ರಾಜ್ಯ ಸರ್ಕಾರದ ಪರ ವಾದ ಮಂಡಿಸಿದ ಅಡ್ವಕೇಟ್ ಜನರಲ್ ಉದಯ್ ಹೊಳ್ಳ, ಕೊರೊನಾ ವೈರಸ್ ಭೀತಿ ಹಿನ್ನೆಲೆ ಕರ್ನಾಟಕವು ಕೇರಳ ಗಡಿ ಬಂದ್ ಮಾಡಿದೆ. ಜೊತೆಗೆ ಕೇಂದ್ರ ಸರ್ಕಾರದ ನಿರ್ದೇಶನ ಮೇರೆಗೆ ಗಡಿ ಬಂದ್ ಮಾಡಲಾಗಿದೆ. ಗಡಿ ತೆರವುಗೊಳಿಸುವುದರಿಂದ ವಾಹನಗಳ ಸಂಚಾರ ಆರಂಭವಾಗುವ ಸಾಧ್ಯತೆ ಇದೆ. ಈ ವೇಳೆ ಸೋಂಕಿತರ ಸಂಚರಿಸಲು ಆರಂಭಿಸಿದರೆ ವೈರಸ್ ಹರಡುವ ಭೀತಿ ಇದೆ. ಹೀಗಾಗಿ ಗಡಿ ತೆರವು ಸಾಧ್ಯವಿಲ್ಲ ಎಂದರು.

    ಆದರೆ ಗಡಿ ಬಂದ್ ನಿಂದ ಕೇರಳಕ್ಕೆ ಸಂಕಷ್ಟ ಎದುರಾಗಲಿದೆ. ತುರ್ತು ಆರೋಗ್ಯ ಸೇವೆಗಳಿಗೆ ತೊಂದರೆ ಆಗಲಿದೆ. ವೈದ್ಯಕೀಯ ಸಾಮಗ್ರಿಗಳನ್ನು ಹೊತ್ತು ಬರುವ ಟ್ರಕ್‍ಗಳ ಸಂಚಾರಕ್ಕೆ ಗಡಿಯಲ್ಲಿ ತೊಂದರೆಯಾಗಲಿದ್ದು, ಆಂಬುಲೆನ್ಸ್ ಮತ್ತು ಮೂಲ ಅವಶ್ಯಕತೆ ವಸ್ತುಗಳನ್ನು ಸಾಗಿರುವ ವಾಹನಗಳ ಸಂಚಾರಕ್ಕೆ ತೊಂದರೆ ಆಗಲಿದೆ ಎಂದು ಕೇರಳ ವಾದ ಮಂಡಿಸಿತು.

    ಎರಡು ಬದಿಯ ವಾದ ಆಲಿಸಿದ ಸುಪ್ರೀಂಕೋರ್ಟ್, ಕೇಂದ್ರ ಸರ್ಕಾರ, ಕರ್ನಾಟಕ ಮತ್ತು ಕೇರಳ ರಾಜ್ಯ ಸರ್ಕಾರಗಳಿಗೆ ಮತ್ತಷ್ಟು ಮಾಹಿತಿ ಕೋರಿ ನೋಟಿಸ್ ನೀಡಿ ಎಪ್ರೀಲ್ ಏಳಕ್ಕೆ ವಿಚಾರಣೆ ಮುಂದೂಡಿಕೆ ಮಾಡಿತು. ಈ ವೇಳೆ ಏಪ್ರಿಲ್ 7ರವರೆಗೂ ಗಡಿ ತೆರವು ಮಾಡಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್ ಹೇಳಿತು.

    ಆರೋಗ್ಯ ಸಂಬಂಧಿ ತುರ್ತು ಪರಿಸ್ಥಿತಿಗಳಿದ್ದರೇ ಎರಡು ಸರ್ಕಾರದ ಕಾರ್ಯದರ್ಶಿಗಳ ಮಾತುಕತೆ ಮೇಲೆ ಕ್ರಮ ತೆಗೆದುಕೊಳ್ಳಬಹುದು ಮತ್ತು ಕೇಂದ್ರ ಆರೋಗ್ಯ ಇಲಾಖೆಯ ಕಾರ್ಯದರ್ಶಿ ಜೊತೆಗೆ ಮಾತುಕತೆ ಮೂಲಕವೂ ಸಮಸ್ಯೆ ಬಗೆಹರಿಸಿಕೊಳ್ಳಬಹುದು ಎಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿದೆ.

  • ತಮಿಳುನಾಡಿನಲ್ಲಿ ಇಂದು ಒಂದೇ ದಿನ 102 ಕೊರೊನಾ ಪ್ರಕರಣಗಳು ಪತ್ತೆ

    ತಮಿಳುನಾಡಿನಲ್ಲಿ ಇಂದು ಒಂದೇ ದಿನ 102 ಕೊರೊನಾ ಪ್ರಕರಣಗಳು ಪತ್ತೆ

    – ದೆಹಲಿಗೆ ಹೋಗಿದ್ದ 364 ಜನರಿಗೆ ಕೊರೊನಾ ಸೋಂಕು

    ಚೆನ್ನೈ: ತಮಿಳುನಾಡಿನಲ್ಲಿ ಇಂದು ಒಂದೇ ದಿನ 102 ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗಿವೆ ಎಂದು ತಮಿಳುನಾಡಿನ ಹೆಲ್ತ್ ಸೆಕ್ರಟರಿ ಬೀಲಾ ರಾಜೇಶ್ ಅವರು ಮಾಹಿತಿ ನೀಡಿದ್ದಾರೆ.

    ಇಂದು ಕೊರೊನಾ ವಿಚಾರವಾಗಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ ಬೀಲಾ ರಾಜೇಶ್, ಇಂದು ಒಂದೇ ದಿನ ತಮಿಳುನಾಡಿನಲ್ಲಿ ಹೊಸ 102 ಕೊರೊನಾ ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ. ಈ ಮೂಲಕ ತಮಿಳುನಾಡಿನಲ್ಲಿ ಕೊರೊನಾ ಸೋಂಕಿತ ಸಂಖ್ಯೆ 411 ಏರಿಕೆಯಾಗಿದೆ ಎಂದು ತಿಳಿಸಿದ್ದಾರೆ.

    ಇಂದು ತಮಿಳುನಾಡಿನಲ್ಲಿ 102 ಕೊರೊನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. ಅವುಗಳಲ್ಲಿ 100 ಜನರು ದೆಹಲಿಯಲ್ಲಿ ನಡೆದ ತಬ್ಲಿಘಿ ಜಮಾತ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ನಮ್ಮ ರಾಜ್ಯದಲ್ಲಿ ಒಟ್ಟು ಕೊರೊನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ 411 ಆಗಿದ್ದು, ಅವುಗಳಲ್ಲಿ 364 ಸೋಂಕಿತರು ದೆಹಲಿಯ ಜಮಾತ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ರಾಜ್ಯದ ಒಟ್ಟು 1,200 ಜನರನ್ನು ಪತ್ತೆ ಮಾಡಲಾಗಿದೆ. ಇವರೆಲ್ಲರನ್ನೂ ಕ್ಯಾರಂಟೈನ್ ನಲ್ಲಿ ಇರಿಸಲಾಗಿದೆ ಎಂದು ಬೀಲಾ ರಾಜೇಶ್ ಹೇಳಿದ್ದಾರೆ.

    ಇದಕ್ಕೂ ಮುನ್ನ ಮಾತನಾಡಿದ್ದ ತಮಿಳುನಾಡಿನ ಆರೋಗ್ಯ ಸಚಿವ ಸಿ ವಿಜಯಬಾಸ್ಕರ್, ನಮ್ಮ ರಾಜ್ಯದಲ್ಲಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಏಳು ಜನರು ಸೇರಿದಂತೆ ಕೊರೊನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ 411 ತಲುಪಿದೆ. 1,580 ಕೊರೊನಾ ವೈರಸ್ ಸೋಂಕಿತ ಮತ್ತು ಶಂಕಿತ ಜನರನ್ನು ರಾಜ್ಯದ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದ್ದಾರೆ. ಅವರಿಗೆ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಹೇಳಿದ್ದರು.

    ಇನ್ನೂ ಕೇರಳದಲ್ಲಿ ಇಂದು 9 ಕೊರೊನಾ ವೈರಸ್ ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ. ಇದರಲ್ಲಿ ಕಾಸರಗೋಡಿನಿಂದ 7 ಮತ್ತು ಕಣ್ಣೂರು ಮತ್ತು ತ್ರಿಶೂರ್ನಲ್ಲಿ ತಲಾ 1 ಪ್ರಕರಣಗಳು ದಾಖಲಾಗಿವೆ. ಇವುಗಳಲ್ಲಿ ದೆಹಲಿಯ ನಿಜಾಮುದ್ದೀನ್‍ನಲ್ಲಿ ನಡೆದ ಜಮಾತ್ ಕಾರ್ಯಕ್ರಮದಲ್ಲಿ 3 ಜನರು ಭಾಗವಹಿಸಿದ್ದಾರೆ. ರಾಜ್ಯದಲ್ಲಿ ಒಟ್ಟು ಕೊರೊನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ 295ಕ್ಕೇರಿದೆ ಎಂದು ಕೇರಳ ಸಿಎಂ ಪಿಣರಾಯಿ ವಿಜಯನ್ ತಿಳಿಸಿದ್ದಾರೆ.

  • ಭಾರತದಲ್ಲಿ ಕೊರೊನಾ ರಣಕೇಕೆ – ದೇಶಾದ್ಯಂತ 2,301 ಮಂದಿಗೆ ಸೋಂಕು, 56 ಬಲಿ

    ಭಾರತದಲ್ಲಿ ಕೊರೊನಾ ರಣಕೇಕೆ – ದೇಶಾದ್ಯಂತ 2,301 ಮಂದಿಗೆ ಸೋಂಕು, 56 ಬಲಿ

    ನವದೆಹಲಿ: ಎಲ್ಲೆಡೆ ಅಟ್ಟಹಾಸ ಮೆರೆಯುತ್ತಿರುವ ಕೊರೊನಾ ವೈರಸ್‍ಗೆ ಇಡೀ ವಿಶ್ವವೇ ತತ್ತರಿಸಿ ಹೋಗಿದೆ. ಇತ್ತ ಭಾರತದಲ್ಲೂ ಕೊರೊನಾ ವೈರಸ್ ಹರಡುವಿಕೆ ದಿನೇ ದಿನೇ ಹೆಚ್ಚಾಗುತ್ತಿದ್ದು, ಈವರೆಗೆ ಕೋವಿಡ್-19 ಸೋಂಕಿಗೆ 2,301 ಮಂದಿ ತುತ್ತಾಗಿದ್ದಾರೆ. ಅಲ್ಲದೇ 56 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ.

    ವಿಶ್ವಾದ್ಯಂತ ರಣಕೇಕೆ ಹಾಕುತ್ತಿರುವ ಸೋಂಕಿಗೆ ಈವರೆಗೆ ಸುಮಾರು 10,16,330 ಮಂದಿ ತುತ್ತಾಗಿದ್ದಾರೆ. ಕೊರೊನಾ ವೈರಸ್‍ನಿಂದ 53,238 ಮಂದಿ ಸಾವನ್ನಪ್ಪಿದ್ದರೆ, 2,13,132 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ ಎಂದು ವರದಿಯಾಗಿದೆ.

    ಗುರುವಾರದವರೆಗಿನ ವರದಿ ಪ್ರಕಾರ, ಮಹಾರಾಷ್ಟ್ರವನ್ನು ಭಾರತದಲ್ಲಿಯೇ ಅತಿ ಹೆಚ್ಚು ಕೊರೊನಾ ಸೋಂಕು ವರದಿಯಾದ ರಾಜ್ಯ ಎನ್ನಲಾಗಿದೆ. ಯಾಕೆಂದರೆ ಇಲ್ಲಿ 335 ಮಂದಿಗೆ ಕೊರೊನಾ ಸೋಂಕು ತಗುಲಿದ್ದು, 13 ಮಂದಿ ಸಾವನ್ನಪ್ಪಿದ್ದಾರೆ. ಈ ಹಿನ್ನೆಲೆ ಮಹಾರಾಷ್ಟ್ರ ಸರ್ಕಾರ 30 ಸರ್ಕಾರಿ ಆಸ್ಪತ್ರೆಗಳನ್ನು ಕೋವಿಡ್-19 ಚಿಕಿತ್ಸೆಗಾಗಿಯೇ ಮೀಸಲಿಟ್ಟಿದ್ದು, ಈ ಎಲ್ಲಾ ಆಸ್ಪತ್ರೆಗಳು ಸೇರಿ ಸುಮಾರು 2,305 ಬೆಡ್‍ಗಳ ಸೌಲಭ್ಯ ಲಭ್ಯವಿದೆ.

    ಹೆಚ್ಚು ಕೊರೊನಾ ಸೋಂಕು ವರದಿಯಾಗಿರುವ ರಾಜ್ಯಗಳ ಪಟ್ಟಿಯಲ್ಲಿ ಕೇರಳ ಎರಡನೇ ಸ್ಥಾನದಲ್ಲಿದೆ. ಕೇರಳದಲ್ಲಿ 265 ಮಂದಿಗೆ ಸೋಂಕು ತಗುಲಿದ್ದು, ಇಬ್ಬರು ಸಾವನ್ನಪ್ಪಿದ್ದಾರೆ. ಆ ಬಳಿಕ ತಮಿಳುನಾಡಿನಲ್ಲಿ 234 ಸೋಂಕಿತ ಪ್ರಕರಣ ವರದಿಯಾಗಿದ್ದು, ಒಬ್ಬರು ಕೊರೊನಾಗೆ ಬಲಿಯಾಗಿದ್ದಾರೆ. ಇತ್ತ ದೆಹಲಿಯಲ್ಲಿ 219 ಮಂದಿ ಕೊರೊನಾ ವೈರಸ್ ಸೋಂಕಿಗೆ ತುತ್ತಾಗಿದ್ದು, ಇಬ್ಬರು ಸಾವನ್ನಪ್ಪಿದ್ದಾರೆ. ಕರ್ನಾಟಕದಲ್ಲಿ 125 ಮಂದಿಗೆ ಸೋಂಕು ತಗುಲಿದ್ದು, ಮೂವರು ಮೃತಪಟ್ಟಿದ್ದಾರೆ.

    ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್‍ನಲ್ಲಿ(ಐಸಿಎಂಆರ್) ಸಾಂಕ್ರಾಮಿಕ ರೋಗಶಾಸ್ತ್ರ ಮತ್ತು ಸಾಂಕ್ರಾಮಿಕ ರೋಗಗಳ ವಿಭಾಗದ ಮುಖ್ಯಸ್ಥ ರಾಮನ್ ಆರ್.ಜಿ ಅವರು ಪ್ರತಿಕ್ರಿಯಿಸಿ, ಭಾರತದಲ್ಲಿ ಬುಧವಾರದವರೆಗೆ ಸುಮಾರು 47,951 ಮಂದಿಗೆ ಕೋವಿಡ್-19 ಪರೀಕ್ಷೆ ಮಾಡಲಾಗಿದೆ ಎಂದು ತಿಳಿಸಿದ್ದರು.

    ಭಾರತದಲ್ಲಿ ಕೆಲ ಸ್ಥಳಗಳನ್ನು ಕೊರೊನಾ ವೈರಸ್ ಸೋಂಕಿನ ಹಾಟ್‍ಸ್ಪಾಟ್ ಎಂದು ಗುರುತಿಸಲಾಗಿದೆ. ದೆಹಲಿಯ ದಿಲ್ಶಾದ್ ಗಾರ್ಡನ್ ಹಾಗೂ ನಿಜಾಮುದ್ದೀನ್, ಉತ್ತರ ಪ್ರದೇಶದ ಮೀರತ್ ಹಾಗೂ ನೋಯ್ಡಾ, ರಾಜಸ್ಥಾನದ ಭಿಲ್ವಾರ, ಅಹಮದಾಬಾದ್, ಕೇರಳದ ಕಾಸರಗೋಡು ಹಾಗೂ ಪಥನಂತಿಟ್ಟ, ಮುಂಬೈ ಹಾಗೂ ಪುಣೆ ನಗರಗಳಲ್ಲಿ ಹೆಚ್ಚು ಕೊರೊನಾ ಸೋಂಕಿನ ಪ್ರಕರಣಗಳು ವರದಿಯಾಗಿದೆ.

    ಜಮಾತ್‍ನಲ್ಲಿ ನಡೆದ ತಬ್ಲಿಘಿ ಸಮಾವೇಶದಲ್ಲಿ ಭಾಗಿಯಾಗಿದ್ದ 9 ಸಾವಿರ ಕಾರ್ಯಕರ್ತರನ್ನು ನಾವು ಗುರುತಿಸಿ, ಅವರ ವಿವರಗಳನ್ನು ಪಡೆದಿದ್ದೇವೆ. ಅವರಲ್ಲಿ 1,306 ಮಂದಿ ವಿದೇಶಿಗರಿದ್ದಾರೆ. ಎಲ್ಲರನ್ನೂ ಹೋಂ ಕ್ವಾರಂಟೈನ್ ಆಗಿರಲು ಸೂಚಿಸಿದ್ದೇವೆ ಎಂದು ಕೇಂದ್ರ ಗೃಹ ಸಚಿವಾಲಯದ ಜಂಟಿ ಕಾರ್ಯದರ್ಶಿ ಮಾಹಿತಿ ನೀಡಿದ್ದಾರೆ.

  • ಯಾವುದೇ ಕಾರಣಕ್ಕೂ ಕೇರಳ ಗಡಿ ಓಪನ್ ಮಾಡಲ್ಲ: ನಳಿನ್

    ಯಾವುದೇ ಕಾರಣಕ್ಕೂ ಕೇರಳ ಗಡಿ ಓಪನ್ ಮಾಡಲ್ಲ: ನಳಿನ್

    ಮಂಗಳೂರು: ಯಾವುದೇ ಕಾರಣಕ್ಕೂ ಕೇರಳ ಗಡಿ ಓಪನ್ ಮಾಡೋದಿಲ್ಲ. ಈ ಬಗ್ಗೆ ಚರ್ಚೆಯಾಗ್ತಿದೆ. ಆದರೆ ಜನರಿಗೆ ಆತಂಕ ಬೇಡ ಎಂದು ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.

    ನಮ್ಮ ಜಿಲ್ಲೆಯ ಜನರ ಸಹಕಾರದಿಂದ ನಾವು ಕೊರೊನಾ ನಿಯಂತ್ರಿಸಲು ಯಶಸ್ವಿಯಾಗಿದ್ದೇವೆ. ಕೇರಳ ರಾಜ್ಯದಲ್ಲಿ ಸೋಂಕಿತರು ಹೆಚ್ಚಾಗಿರುವುದರಿಂದ ನಮ್ಮ ಜಿಲ್ಲೆಯ ಸುರಕ್ಷತೆ ಮುಖ್ಯ. ಆದ್ದರಿಂದ ಹೊರ ರಾಜ್ಯದವರಿಗೆ ಪ್ರವೇಶ ನೀಡಲ್ಲ ಎಂದು ಸಂಸದರು ಎಚ್ಚರಿಕೆ ನೀಡಿದ್ದಾರೆ.

    ಕೊರೊನಾ ಸೋಂಕು ನಿಯಂತ್ರಿಸಲು ಕಠಿಣ ಕ್ರಮ ಅನುಸರಿಸಬೇಕಾಗುತ್ತೆ. ಇಂದು ಬೆಳಗ್ಗೆ 7 ರಿಂದ ಮಧ್ಯಾಹ್ನ 12ರ ವರೆಗೂ ಮಾರುಕಟ್ಟೆಗಳು ಓಪನ್ ಇರುತ್ತೆ. ಆದರೆ ಈ ಅವಕಾಶವನ್ನು ಜನರು ದುರುಪಯೋಗಪಡಿಸಿಕೊಳ್ಳಬೇಡಿ. ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಹಾಗೂ ಸರ್ಕಾರದ ನಿಯಾಮವಳಿಗಳನ್ನ ಕಠಿಣವಾಗಿ ಸ್ವಯಂ ಪಾಲಿಸಿ ಎಂದು ಮನವಿ ಮಾಡಿಕೊಂಡಿದ್ದಾರೆ.

  • ಅಂತರ್‌ರಾಜ್ಯ ಹೆದ್ದಾರಿಯನ್ನು ಓಪನ್ ಮಾಡಲು ಸಾಧ್ಯವೇ ಇಲ್ಲ: ಸೋಮಣ್ಣ

    ಅಂತರ್‌ರಾಜ್ಯ ಹೆದ್ದಾರಿಯನ್ನು ಓಪನ್ ಮಾಡಲು ಸಾಧ್ಯವೇ ಇಲ್ಲ: ಸೋಮಣ್ಣ

    ಮಡಿಕೇರಿ: ಕೇರಳ ರಾಜ್ಯದ ಕಾಸರಗೋಡು ಹಾಗೂ ಕಣ್ಣೂರು ಜಿಲ್ಲೆಗಳಲ್ಲಿ ಕೊರೊನಾ ಸೋಂಕಿತರು ಹೆಚ್ಚಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಹೀಗಾಗಿ ಕೇರಳದೊಂದಿಗೆ ಗಡಿ ಹಂಚಿಕೊಂಡಿರುವ ಕೊಡಗು ಮತ್ತು ಕೇರಳ ನಡುವಿನ ರಸ್ತೆಗಳ ಸಂಚಾರವನ್ನು ರೀಓಪನ್ ಮಾಡುವುದು ಸದ್ಯಕ್ಕೆ ಸಾಧ್ಯವೇ ಇಲ್ಲ ಎಂದು ಕೊಡಗು ಉಸ್ತುವಾರಿ ಸಚಿವ ವಿ. ಸೋಮಣ್ಣ ಸ್ಪಷ್ಟಪಡಿಸಿದ್ದಾರೆ.

    ಕೊರೊನಾ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಮಡಿಕೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇರಳ, ಅಗತ್ಯ ವಸ್ತುಗಳಿಗೆ ಕೊಡಗಿನೊಂದಿಗೆ ಸಂಪರ್ಕವಿರುವ ರಸ್ತೆಗಳ ಮೂಲಕ ವ್ಯವಹರಿಸುವುದು ತೀರಾ ಕಡಿಮೆ. ಮೊದಲಿನಿಂದಲೂ ಗುಂಡ್ಲುಪೇಟೆ ಮೂಲಕವೇ ಹತ್ತಿರವಿರುವುದರಿಂದ ಅದೇ ಮಾರ್ಗದ ಮೂಲಕ ವ್ಯವಹರಿಸಿದ್ದಾರೆ. ಹೀಗಾಗಿ ಕೊಡಗು ಮತ್ತು ಕೇರಳ ನಡುವಿನ ರಸ್ತೆ ಸಂಪರ್ಕ ಬಂದ್ ಮಾಡಿರುವ ಜಿಲ್ಲಾಧಿಕಾರಿಯ ಕ್ರಮ ಸರಿಯಾಗಿಯೇ ಇದೆ ಎಂದು ತಿಳಿಸಿದರು.

    ರಾಜ್ಯದಲ್ಲಿ ಪ್ರಕರಣಗಳು ಹೆಚ್ಚುತ್ತಿರುವ ಸಂದರ್ಭದಲ್ಲಿ ಕೊಡಗಿನಲ್ಲಿ ಮಾತ್ರ ಕೊರೊನಾ ನಿಯಂತ್ರಣದಲ್ಲಿ ಇದೆ. ಕೇರಳದ ಕಾಸರಗೋಡು ಮತ್ತು ಕಣ್ಣೂರಿನಲ್ಲಿ ಅತೀ ಹೆಚ್ಚು ಕೊರೊನಾ ಸೋಂಕಿತರು ಇರುವುದರಿಂದ ಕೊಡಗಿಗೂ ಇದರ ಎಫೆಕ್ಟ್ ಆಗಬಹುದು. ಈ ದೃಷ್ಟಿಯಿಂದ ಅಂತರ್ ರಾಜ್ಯ ಹೆದ್ದಾರಿ ಬಂದ್ ಓಪನ್ ಮಾಡಲು ಸಾಧ್ಯವಿಲ್ಲ ಎಂದಿದ್ದಾರೆ.

  • ಕೊರೊನಾ ವೈರಸ್‍ಗೆ ಕೇರಳದಲ್ಲಿ 2ನೇ ಬಲಿ

    ಕೊರೊನಾ ವೈರಸ್‍ಗೆ ಕೇರಳದಲ್ಲಿ 2ನೇ ಬಲಿ

    ತಿರುವನಂತಪುರ: ಚೀನಾದಲ್ಲಿ ಮರಣ ಮೃದಂಗ ಬಾರಿಸುವ ಕೊರೊನಾ ವೈರಸ್ ಭಾರತದಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಇಂದು ಕೇರಳದಲ್ಲಿ ಕೋವಿಡ್ 19ಗೆ 2ನೇ ಬಲಿಯಾಗಿದೆ.

    ಕೇರಳದ ತಿರುವನಂತಪುರಂ ಆಸ್ಪತ್ರೆಯಲ್ಲಿ ಕೊರೋನಾ ಸೋಂಕಿನಿಂದ ಚಿಕಿತ್ಸೆ ಪಡೆಯುತ್ತಿದ್ದ 68 ವರ್ಷದ ವೃದ್ಧ ಇಂದು ಮೃತಪಟ್ಟಿದ್ದಾರೆ. ಸದ್ಯ ಕೇರಳದಲ್ಲಿ ಒಟ್ಟು 234 ಮಂದಿಗೆ ಸೋಂಕು ತಗುಲಿದೆ. ಭಾರತದಲ್ಲಿ ಸೋಂಕಿತರ ಸಂಖ್ಯೆ 1347ಕ್ಕೆ ಏರಿಕೆಯಾಗಿದೆ.


    ಮಾರ್ಚ್ 28ರಂದು ಕೊಚ್ಚಿಯ ಕಲಾಮಸ್ಸೆರಿ ವೈದ್ಯಕೀಯ ಕಾಲೇಜಿನ ಆಸ್ಪತ್ರೆಯಲ್ಲಿ ದಾಖಲಾಗಿದ್ದ 69 ವರ್ಷದ ವೃದ್ಧ ಮೃತಪಟ್ಟಿದ್ದರು. ಕೊಚ್ಚಿಯ ಚುಲ್ಲಿಕಲ್ ನಿವಾಸಿ ವೃದ್ಧ ಮಾರ್ಚ್ 16ರಂದು ದುಬೈನಿಂದ ಮರಳಿದ್ದರು. ಅವರೊಂದಿಗೆ ಸಂಪರ್ಕ ಹೊಂದಿದ್ದ ಪತ್ನಿ ಹಾಗೂ ಚಾಲಕನಿಗೂ ಸೋಂಕು ತಗುಲಿದ್ದು, ಅವರನ್ನು ಕೂಡ ಕಲಾಮಸ್ಸೆರಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ಕೊಡಲಾಗುತ್ತಿದೆ.

    ಕೇರಳಕ್ಕೆ ಕರ್ನಾಟಕದ ಗಡಿ ಬಂದ್ ಮಾಡಿರೋದಕ್ಕೆ ಕಾಸರಗೊಡಿನ ಸಂಸದ ರಾಜಮೋಹನ್, ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆ. ತುರ್ತು ಮತ್ತು ಅಗತ್ಯ ಸೇವೆಗಳಿಗೆ ಗಡಿ ತೆರೆಯಲು ನಿರ್ದೇಶನ ನೀಡಬೇಕೆಂದು ಕೋರಿದ್ದಾರೆ.

  • ಕುಡುಕರ ಆತ್ಮಹತ್ಯೆಯಿಂದ ಎಚ್ಚೆತ್ತ ಸರ್ಕಾರ

    ಕುಡುಕರ ಆತ್ಮಹತ್ಯೆಯಿಂದ ಎಚ್ಚೆತ್ತ ಸರ್ಕಾರ

    -ಆನ್‍ಲೈನ್ ಮೂಲಕ ಮದ್ಯ ಮಾರಾಟಕ್ಕೆ ಚಿಂತನೆ

    ತಿರುವನಂತಪುರ: ಕುಡುಕರ ಆತ್ಮಹತ್ಯೆಯಿಂದ ಎಚ್ಚತ್ತಿರುವ ಕೇರಳ ಸರ್ಕಾರ ಆನ್‍ಲೈನ್ ಮೂಲಕ ಮದ್ಯ ಮಾರಾಟ ಮಾಡಲು ಚಿಂತನೆ ನಡೆಸಿದೆ.

    ಮದ್ಯ ಸಿಗದ ಹಿನ್ನೆಲೆಯಲ್ಲಿ ಮಾನಸಿಕ ಖಿನ್ನತೆಗೆ ಒಳಗಾದವರು ಮತ್ತು ಆತ್ಮಹತ್ಯೆಗೆ ಯತ್ನಿಸಿದವರಿಗೆ ಸರ್ಕಾರದಿಂದ ಉಚಿತ ಚಿಕಿತ್ಸೆ ನೀಡಲಾಗುವುದು. ಕುಡಿತ ಚಟಕ್ಕೆ ಒಳಗಾದವರಿಗೆ ವ್ಯಸನ ಮುಕ್ತ ಕೇಂದ್ರಗಳಲ್ಲಿ ಅಬಕಾರಿ ಇಲಾಖೆಯಿಂದ ಚಿಕಿತ್ಸೆ ನೀಡಲಾಗುವವುದು ಎಂದು ಕೇರಳ ಸಿಎಂ ಪಿಣರಾಯಿ ವಿಜಯನ್ ತಿಳಿಸಿದ್ದಾರೆ.

    ಮದ್ಯದ ಸಂಗ್ರಹಣೆ ಇಲ್ಲದ ಕಾರಣ ಆನ್‍ಲೈನ್ ಮಾರಾಟದಿಂದ ಈ ಸಮಸ್ಯೆ ಪರಿಹಾರವಾಗಬಹುದು ಎಂದು ಸಿಎಂ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕೊರೊನಾ ಲಾಕ್‍ಡೌನ್ ಹಿನ್ನೆಲೆಯಲ್ಲಿ ಮದ್ಯ ಸಿಗದೇ ಕುಡುಕರು ಮಾನಸಿಕ ಖಿನ್ನತೆಗೊಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಕೆಲವರು ಆತ್ಮಹತ್ಯೆಗೆ ಯತ್ನಿಸಿರುವ ಪ್ರಕರಣಗಳು ಬೆಳಕಿಗೆ ಬಂದಿದ್ದವು.

    ಕರ್ನಾಟಕದಲ್ಲಿಯೂ ಕುಡುಕರ ಅತ್ಮಹತ್ಯೆ:
    ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಬ್ಬರು, ಬೀದರ್, ಹುಬ್ಬಳ್ಳಿಯಲ್ಲಿ ಒಬ್ಬರು ಮದ್ಯ ಸಿಗದಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತುಮಕೂರಿನಲ್ಲೊಬ್ಬ ಕತ್ತು ಕೊಯ್ದುಕೊಂಡು ಆಸ್ಪತ್ರೆ ಸೇರಿದ್ದಾನೆ. ಎಣ್ಣೆಗಾಗಿ ಒಟ್ಟು ನಾಲ್ಕು ಸಾವಿನ ಪ್ರಕರಣಗಳು ದಾಖಲಾಗಿವೆ. ಬಾಗಲಕೋಟೆಯಲ್ಲಿ ಎಣ್ಣೆ ಬೇಕು ಅಂತ ಊರೆಲ್ಲಾ ಅಲೆದು ಸುಸ್ತಾಗಿ, ಕೊನೆಗೆ ಅಂಗಡಿವೊಂದರ ಶೆಟರ್ ತೆಗೆಯುವ ಸಾಹಸಕ್ಕೆ ಕುಡುಕನೊಬ್ಬ ಮುಂದಾಗಿದ್ದನು. ಅದು ಸಾಧ್ಯವಾಗದೆ ಕೋಲಿನಿಂದ ಗೋಡೆಗೆ ಹೊಡೆದು ಆಕ್ರೋಶ ಹೊರಹಾಕಿದ್ದಾನೆ.

    ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್‍ನ ಮಂಜುನಾಥ್ ಎಂಬಾತ, ಆರಡಿ ದೂರ ನಿಂತು ಎಣ್ಣೆ ಖರೀದಿಸುತ್ತೇವೆ. ಬೆಳಗ್ಗೆ 9 ರಿಂದ 12ರವರೆಗೆ ಎಂಎಸ್‍ಐಎಲ್ ಓಪನ್ ಮಾಡಿ ಅಂತ ಸಿಎಂ ಹಾಗೂ ಅಬಕಾರಿ ಸಚಿವರಿಗೆ ವಾಟ್ಸಾಪ್ ಮೂಲಕ ಮನವಿ ಮಾಡಿದ್ದಾರೆ. ಮೈಸೂರಿನ ಧನಗಳ್ಳಿಯ ಡಿ.ಸಾಲುಂಡಿ ಗ್ರಾಮದ ಕೃಷಿ, ಕೂಲಿ ಕಾರ್ಮಿಕರು, ಮದ್ಯದಂಗಡಿ ತೆರೆಯುವಂತೆ ಪ್ರತಿಭಟನೆ ನಡೆಸಿದ್ದಾರೆ. ಎಣ್ಣೆ ಇಲ್ಲದೇ ನಾವು ಕೆಲಸ ಮಾಡಕಾಗಲ್ಲ ಅಂತ ಅಳಲು ತೋಡಿಕೊಂಡಿದ್ದಾರೆ.

  • ಬುಡಕಟ್ಟು ಕುಟುಂಬಗಳಿಗಾಗಿ ಹೆಗಲ ಮೇಲೆ ಅಕ್ಕಿ ಹೊತ್ತು ಸಾಗಿದ ಶಾಸಕ

    ಬುಡಕಟ್ಟು ಕುಟುಂಬಗಳಿಗಾಗಿ ಹೆಗಲ ಮೇಲೆ ಅಕ್ಕಿ ಹೊತ್ತು ಸಾಗಿದ ಶಾಸಕ

    ತಿರುವಂತಪುರಂ: ಬುಡಕಟ್ಟು ಕುಟುಂಬಗಳಿಗೆ ದಿನನಿತ್ಯದ ಸಮಾಗ್ರಿಗಳನ್ನು ನೀಡಲು ಕೇರಳದ ಶಾಸಕ ಕೆ.ಯು ಜೆನೀಶ್ ಕುಮಾರ್ ಅವರು ಹೆಗಲ ಮೇಲೆ ಅಕ್ಕಿ ಹೊತ್ತುಕೊಂಡು ಹೋಗಿದ್ದಾರೆ.

    ಜಿಲ್ಲೆಯ ಜಿಲ್ಲಾಧಿಕಾರಿ ಮತ್ತು ಇತರ ಅಧಿಕಾರಿಗಳು ಜೊತೆ ಸೇರಿಕೊಂಡ ಕೇರಳದ ಕೊನ್ನಿ ವಿಧಾನ ಸಭಾ ಕ್ಷೇತ್ರದ ಎಂಎಲ್‍ಎ ಜೆನೀಸ್, ಗೋಣಿ ಚೀಲ ಹೆಗಲ ಮೇಲೆ ಹೊತ್ತುಕೊಂಡು ಹೋಗುತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಜೊತೆಗೆ ಕಮ್ಯೂನಿಸ್ಟ್ ಪಕ್ಷದ ಶಾಸಕನ ಕೆಲಸಕ್ಕೆ ಎಲ್ಲಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

    ಕೊನ್ನಿ ವಿಧಾನಸಭಾ ಕ್ಷೇತ್ರದ ಅರುವಾಪುಲಂ ಪಂಚಾಯಿತಿಯ 5ನೇ ವಾರ್ಡ್‍ನ ಅರಣ್ಯದೊಳಗೆ 37 ಬುಡಕಟ್ಟು ಕುಟುಂಬಗಳಿವೆ. ಅಲ್ಲಿಗೆ ಹೋಗಬೇಕು ಎಂದರೆ ಅಚೆಂಕೋವಿಲ್ ನದಿಯನ್ನು ದಾಟಿ ಈ ಪ್ರದೇಶಕ್ಕೆ ಹೋಗಬೇಕು. ಸದ್ಯ ಕೊರೊನಾ ಭೀತಿಯಿಂದ ದೇಶ ಲಾಕ್‍ಡೌನ್ ಆದ ಕಾರಣ ನಿತ್ಯದ ದಿನ ಬಳಕೆಗೆ ಔಷಧ ಇತರ ಸಾಮಾಗ್ರಿಗಳು ನಗರಗಳಲ್ಲಿ ಸಿಗುತ್ತಿಲ್ಲ. ಇದರಿಂದ ಅಲ್ಲಿನ ಜನ ದಿನಬಳಕೆ ವಸ್ತಗಳಿಲ್ಲದೇ ಪರಾದಡುತ್ತಿದ್ದರು.

    ಬುಡಕಟ್ಟು ಜನಾಂಗದ ಕಷ್ಟವನ್ನು ಕೇಳಿ ತಿಳುದುಕೊಂಡ ಶಾಸಕರು. ಅವರಿಗೆ ಬೇಕಾದ ಸಾಮಾಗ್ರಿಗಳನ್ನು ತಲುಪಿಸಲು ಮುಂದೆ ಬಂದಿದ್ದಾರೆ. ಅವರ ಜೊತೆ ಜಿಲ್ಲಾಧಿಕಾರಿಗಳ ಮತ್ತು ಕೆಲ ಸ್ವಯಂ ಸೇವಕರ ತಂಡವನ್ನು ಸೇರಿಸಿಕೊಂಡು ದಿನಸಿ ಸಾಮಾಗ್ರಿಗಳನ್ನು ಹೊತ್ತುಕೊಂಡು ಹೋಗಿ ಕುಟುಂಬಕ್ಕೆ ತಲುಪಿಸಿದ್ದಾರೆ. ಜೊತೆಗೆ ಅಲ್ಲಿಗೆ ವೈದ್ಯರನ್ನು ಕರೆದುಕೊಂಡು ಹೋಗಿ ಜನರ ಆರೋಗ್ಯ ತಪಾಸಣೆಯನ್ನು ಮಾಡಿಸಿದ್ದಾರೆ.

    ಹತ್ತು ಕಿಲೋಗ್ರಾಂ ಅಕ್ಕಿ, ಒಂದು ಕಿಲೋ ತೆಂಗಿನ ಎಣ್ಣೆ, ಸಕ್ಕರೆ, ಕಾಫಿ ಪುಡಿ, ಚಹಾ, ಉಪ್ಪು, ಸಾಬೂನು ಮತ್ತು ತರಕಾರಿಗಳನ್ನು ಬುಡಕಟ್ಟು ಜನಾಂಗದ 37 ಕುಟುಂಬಗಳಿಗೆ ವಿತರಿಸಲಾಗಿದೆ. ಜೊತೆಗೆ ವೈದ್ಯಕೀಯ ತಂಡವನ್ನು ಸಂಪೂರ್ಣ ಜನರನ್ನು ತಪಾಸಣೆ ನಡೆಸುವವರೆಗೂ ಅಲ್ಲೇ ಇದ್ದು, ನಂತರ ಶಾಸಕರು ಮತ್ತು ಜಿಲ್ಲಾಧಿಕಾರಿಗಳು ವಾಪಸ್ ಬಂದಿದ್ದಾರೆ.