Tag: kerala

  • ಎಬಿವಿಪಿ ಕಾರ್ಯಕರ್ತನ ಕಗ್ಗೊಲೆ- ಎಸ್‍ಡಿಪಿಐ ಸಂಘಟನೆಯ ನಾಲ್ವರ ಬಂಧನ

    ಎಬಿವಿಪಿ ಕಾರ್ಯಕರ್ತನ ಕಗ್ಗೊಲೆ- ಎಸ್‍ಡಿಪಿಐ ಸಂಘಟನೆಯ ನಾಲ್ವರ ಬಂಧನ

    ತಿರುವನಂತಪುರಂ: ಕೇರಳದಲ್ಲಿ ಎಬಿವಿಪಿ ಕಾರ್ಯಕರ್ತರೊಬ್ಬರನ್ನು ಕೊಲೆಗೈದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನಾಲ್ವರು ಆರೋಪಿಗಳನ್ನು ಶುಕ್ರವಾರ ಬಂಧಿಸಿದ್ದಾರೆ.

    ಬಂಧಿತರನ್ನು ಮೊಹಮ್ಮದ್, ಮಿನಿಕ್ಕೊಲದ ಸಲೀಂ, ನೀವೆಲಿ ಅಮೀರ್ ಹಾಗೂ ಶಾಹಿನ್ ಎಂದು ಗುರುತಿಸಲಾಗಿದೆ. ಇವರೆಲ್ಲರೂ ಎಸ್‍ಡಿಪಿಐ ಸದಸ್ಯರು ಎನ್ನಲಾಗಿದೆ.

    ಏನಿದು ಘಟನೆ?: ಎಬಿವಿಪಿ ಕಾರ್ಯಕರ್ತ ಹಾಗೂ ಆರ್‍ಎಸ್‍ಎಸ್ ನ ಮುಖ್ಯ ಶಿಕ್ಷಕ್ ಆಗಿದ್ದ ಶ್ಯಾಮ್ ಪ್ರಸಾದ್ ಅವರ ಮೇಲೆ ಶುಕ್ರವಾರ ಸಂಜೆ ಕನ್ನಾವಂ ಸಮೀಪದ ಕೊಮ್ಮೇರಿ ಎಂಬಲ್ಲಿ ತಂಡವೊಂದು ದಾಳಿ ಮಾಡಿತ್ತು. ಕೂಡಲೇ ಶ್ಯಾಮ್ ಪ್ರಸಾದ್ ತಪ್ಪಿಸಿಕೊಂಡು ಅಲ್ಲೆ ಇದ್ದ ಮನೆಯೊಂದಕ್ಕೆ ನುಗ್ಗಲು ಯತ್ನಿಸಿದ್ದರು. ಆದ್ರೆ ಆ ಮನೆಗೆ ಬೀಗ ಜಡಿದಿದ್ದರಿಂದ ಶ್ಯಾಮ್ ಅವರಿಗೆ ತಪ್ಪಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ಪರಿಣಾಮ ದುಷ್ಕರ್ಮಿಗಳ ಕೈಗೆ ಸಿಲುಕಿ ಬರ್ಬರವಾಗಿ ಕೊಲೆಯಾಗಿ ಹೋಗಿದ್ದರು ಎಂದು ವರದಿಯಾಗಿದೆ.

    ಘಟನೆಯ ಬಳಿಕ ದುಷ್ಕರ್ಮಿಗಳು ವಾಯ್‍ನಾಡಿಗೆ ಪರಾರಿಯಾಗಿದ್ದರು. ಕೊಲೆ ಸಂಬಂಧ ಪೆರಾವೂರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಆರೋಪಿಗಳಿಗಾಗಿ ಬಲೆ ಬೀಸಿದ್ದರು. ಸದ್ಯ ಆರೋಪಿಗಳನ್ನು ವಾಯ್‍ನಾಡಿನಲ್ಲಿ ಬಂಧಿಸಲಾಗಿದ್ದು, ಪೆರಾವೂರ್ ಪೊಲೀಸರಿಗೆ ಹಸ್ತಾಂತರಿಸಲಾಗಿದೆ.

    ಬಿಜೆಪಿ ಪ್ರತಿಭಟನೆ: ಎಬಿವಿಪಿ ಕಾರ್ಯಕರ್ತನ ಹತ್ಯೆಗೆ ಸಂಬಂಧಿಸಿದಂತೆ ಬಿಜೆಪಿ ಶನಿವಾರ ಪ್ರತಿಭಟನೆ ನಡೆಸಿತ್ತು. 12 ಗಂಟೆ ನಡೆಸಿದ ಹರತಾಳದಲ್ಲಿ ವಾಹನಗಳಿಗೆ ವಿನಾಯಿತಿ ನೀಡಲಾಗಿತ್ತು. ಅಲ್ಲದೇ ಬಹುತೇಕ ಅಂಗಡಿ-ಮುಂಗಟ್ಟುಗಳನ್ನು ಬಂದ್ ಮಾಡಲಾಗಿತ್ತು.

    ಶನಿವಾರ ಸಂಜೆ ಮೃತನ ಅಂತ್ಯಸಂಸ್ಕಾರ ನಡೆದಿದೆ. ಅದಕ್ಕೂ ಮೊದಲು ಮರಣೋತ್ತರ ಪರೀಕ್ಷೆಯ ಬಳಿಕ ಅಂತಿಮ ದರ್ಶನಕ್ಕಾಗಿ ಮೃತನ ಪಾರ್ಥೀವ ಶರೀರವನ್ನು ಪರಿಯರಮ್ ಮೆಡಿಕಲ್ ಕಾಲೇಜಿನಲ್ಲಿ ಇಡಲಾಗಿತ್ತು. ಈ ವೇಳೆ ಸಾವಿರಾರು ಮಂದಿ ಭಾಗವಹಿಸಿ ಅಂತಿಮ ದರ್ಶನ ಪಡೆದ್ರು. ಬಳಿಕ ಶ್ಯಾಮ್ ಪ್ರಸಾದ್ ಮನೆಯಲ್ಲಿ ಅಂತ್ಯ ಸಂಸ್ಕಾರ ನಡೆಯಿತು.

  • 14 ವರ್ಷದ ಮಗನನ್ನು ಕೊಲೆ ಮಾಡಿ ಪೀಸ್ ಪೀಸ್ ಮಾಡಿ ಸುಟ್ಟಳು ನಿರ್ದಯಿ ತಾಯಿ!

    14 ವರ್ಷದ ಮಗನನ್ನು ಕೊಲೆ ಮಾಡಿ ಪೀಸ್ ಪೀಸ್ ಮಾಡಿ ಸುಟ್ಟಳು ನಿರ್ದಯಿ ತಾಯಿ!

    ತಿರುವಂತನಪುರಂ: ತಾಯಿಯೇ ತನ್ನ 14 ವರ್ಷದ ಮಗನನ್ನು ಕೊಲೆ ಮಾಡಿ ಕತ್ತರಿಸಿ ಪೀಸ್ ಪೀಸ್ ಮಾಡಿ ಸುಟ್ಟು ಹಾಕಿರುವ ಮನಕಲಕುವಂತಹ ಘಟನೆ ಕೇರಳದ ಕೊಲ್ಲಂನಲ್ಲಿ ನಡೆದಿದೆ.

    ಆರೋಪಿ 45 ವರ್ಷದ ಜಯಮೊಲ್ ಮಗನನ್ನೇ ಕೊಂದ ನಿರ್ದಯಿ ತಾಯಿ. 14 ವರ್ಷದ ಜೀತುಜಾಬ್ ತಾಯಿಂದಲೇ ಕೊಲೆಯಾದ ನತದೃಷ್ಟ ಮಗ. ಗುರುವಾರ ಆರೋಪಿ ಜಯಮೊಲ್‍ಳನ್ನು ಪೊಲೀಸರು ಬಂಧಿಸಿದ್ದಾರೆ.

    ಆರೋಪಿ ಜಯಮೊಲ್ ಬಂಧಿಸಿ ವಿಚಾರಣೆ ಮಾಡಿದಾಗ ಯಾವುದೋ ಕಾರಣಕ್ಕೆ ಮಗ ಜೀತುಜಾಬ್ ತಾಯಿಯನ್ನು ಪೀಡಿಸಿದ್ದಾನೆ. ಇದರಿಂದ ಕೋಪಗೊಂಡ ತಾಯಿ ಅವನನ್ನು ಅಡುಗೆ ಮನೆಯೊಳಗೆ ತಳ್ಳಿ ಶಲ್ಯದಿಂದ ಕತ್ತು ಬಿಗಿದು ಕೊಲೆ ಮಾಡಿದ್ದಾಳೆ. ನಂತರ ತಾನು ಮಾಡಿದ ಅಪರಾಧವನ್ನು ಮುಚ್ಚಿಡಲು ಮೃತ ದೇಹವನ್ನು ಕತ್ತರಿಸಿ ಬಾಳೆ ತೋಟದಲ್ಲಿ ಸುಟ್ಟು ಹಾಕಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

    ಆರೋಪಿ ತನ್ನ ಕೃತ್ಯ ಮುಚ್ಚಿ ಹಾಕಲು ಮೂರು ದಿನಗಳ ಹಿಂದೆ ಜಯಮೊಲ್ ಜೀತುಜಾಬ್ ನಾಪತ್ತೆಯಾಗಿದ್ದಾನೆ ಎಂದು ಸ್ಥಳೀಯ ಪೊಲೀಸ್ ಠಾಣೆಗೆ ಹೋಗಿ ನೀಡುವ ನಾಟಕ ಮಾಡಿದ್ದಾಳೆ. ಪೊಲೀಸರು ದೂರು ದಾಖಲಿಸಿಕೊಂಡು ಜೀತುಜಾಬ್ ಪತ್ತೆಗಾಗಿ ಕಾರ್ಯಾಚರಣೆ ನಡೆಸಿದ್ದಾರೆ. ಮೂರು ದಿನಗಳ ನಂತರ ಪಕ್ಕದ ಬಾಳೆ ತೋಟದಲ್ಲಿ ಅರೆಬೆಂದ ಸ್ಥಿತಿಯಲ್ಲಿ ಬಾಲಕನ ಶವ ಪತ್ತೆಯಾಗಿದೆ.

    ಆರೋಪಿ ಕೈ ಕೂಡ ಸುಟ್ಟಿದ್ದರಿಂದ ಪೊಲೀಸರು ಅನುಮಾನಗೊಂಡ ಆಕೆಯನ್ನು ವಿಚಾರಣೆ ನಡೆಸಿದ್ದಾರೆ. ಆಗ ತನ್ನ ಕೃತ್ಯವನ್ನು ಆರೋಪಿ ಒಪ್ಪಿಕೊಂಡಿದ್ದಾಳೆ. ಆರೋಪಿ ಜಯಮೊಲ್ ಮಾನಸಿಕ ಅಸ್ವಸ್ಥೆ ಎಂದು ಪತಿ ಜಾಬ್ ವಿ.ಜಾನ್ ತಿಳಿಸಿದ್ದಾರೆ.

    ಬಾಲಕನ ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಈ ಘಟನೆ ಬಗ್ಗೆ ಎಲ್ಲಾ ಮೂಲಗಳಿಂದಲೂ ತನಿಖೆ ಮುಂದುವರೆದಿದೆ ಎಂದು ಕೊಲ್ಲಂ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.

  • ಚಪ್ಪಲಿಯಲ್ಲಿ ಕ್ಯಾಮೆರಾ ಇಟ್ಕೊಂಡು ಮಹಿಳೆಯರ ಫೋಟೋ ತೆಗೆಯುತ್ತಿದ್ದ ವಿಕೃತಕಾಮಿ ಅರೆಸ್ಟ್

    ಚಪ್ಪಲಿಯಲ್ಲಿ ಕ್ಯಾಮೆರಾ ಇಟ್ಕೊಂಡು ಮಹಿಳೆಯರ ಫೋಟೋ ತೆಗೆಯುತ್ತಿದ್ದ ವಿಕೃತಕಾಮಿ ಅರೆಸ್ಟ್

    ತಿರುವಂತನಪುರಂ: ತನ್ನ ಪಾದರಕ್ಷೆಯಲ್ಲಿ ಮೊಬೈಲ್ ಕ್ಯಾಮೆರಾ ಇಟ್ಟುಕೊಂಡು ಮಹಿಳೆಯರ ಫೋಟೋ ತೆಗೆಯುತ್ತಿದ್ದ ಕಾಮುಕನೊಬ್ಬನನ್ನು ಪೊಲೀಸರ ಅತಿಥಿಯಾಗಿದ್ದಾನೆ.

    ಕೇರಳದ ಬಿಜು ಬಂಧಿತ ಆರೋಪಿ. ಈತ ತ್ರಿಶೂರ್ ಜಿಲ್ಲೆಯಲ್ಲಿ ನಡೆಯುತ್ತಿದ್ದ ಕಲೋಲ್‍ಸವಂ(ರಾಜ್ಯ ಕಲಾ ಹಬ್ಬ) ಕಾರ್ಯಕ್ರಮದಲ್ಲಿ ಮಹಿಳೆಯರ ಫೋಟೋ ತೆಗೆಯಲು ಯತ್ನಿಸುತ್ತಿದ್ದಾಗಲೇ ಸಿಕ್ಕಿಬಿದ್ದಿದ್ದಾನೆ.

    ಪಾದರಕ್ಷೆಯಲ್ಲಿ ಕ್ಯಾಮೆರಾ ಹೀಗಿತ್ತು:
    ಪಾದರಕ್ಷೆಯಲ್ಲಿ ಒಂದು ಸಣ್ಣ ರಂಧ್ರ ಮಾಡಿದ್ದ. ಈ ರಂಧ್ರಕ್ಕೆ ಕ್ಯಾಮೆರಾ ಬರುವಂತೆ ಫೋನನ್ನು ಜೋಡಿಸಿದ್ದ. ಈ ಮೂಲಕ ಆತ ಮಹಿಳೆಯರ ಫೋಟೋ, ವಿಡಿಯೋಗಳನ್ನು ಸೆರೆ ಹಿಡಿಯುತ್ತಿದ್ದ. ಒಂದು ವೇಳೆ ಬೇರೆಯವರು ತನ್ನ ಪಾದರಕ್ಷೆಯ ಮೇಲೆ ಕಾಲಿಟ್ಟರೆ ಫೋನಿಗೆ ಹಾನಿ ಆಗಬಾರದೆಂದು ಮುಂಜಾಗೃತವಾಗಿ ವಿಶೇಷ ಸ್ಟೀಲ್ ಕವರ್ ಕೂಡಾ ಅಳವಡಿಸಿಕೊಂಡಿದ್ದ.

    ಬಿಜು ಫೋನ್ ಹಾಕಿದ ಪಾದರಕ್ಷೆ ಹಾಕಿಕೊಂಡು ಜನಸಮೂಹದ ಮಧ್ಯೆ ಹೋಗುತ್ತಿದ್ದ. ಅಲ್ಲಿ ಹುಡುಗಿಯರು ಮತ್ತು ಮಹಿಳೆಯರ ಕೆಳಗಿನಿಂದ ಫೋಟೋಗಳನ್ನು ತೆಗೆದುಕೊಳುತ್ತಿದ್ದ. ಅಥವಾ ಜನಸಂದಣಿ ಇರುವ ಕಡೆ ಪಾದರಕ್ಷೆಗಳನ್ನ ಬಿಟ್ಟು, ದೂರದಲ್ಲಿ ನಿಂತು ನೋಡುತ್ತಿದ್ದ. ಒಂದು ವೇಳೆ ಫೋನ್ ಬ್ಯಾಟರಿ ಖಾಲಿಯಾದ್ರೂ ತನ್ನ ಈ ಕೆಲಸಕ್ಕೆ ಅಡ್ಡಿಯಾಗಬಾರದೆಂದು ಎರಡನೇ ಫೋನ್ ಬಳಸುತ್ತಿದ್ದ.

    ಸಿಕ್ಕಿಬಿದ್ದಿದ್ದು ಹೇಗೆ?
    ಕೆಲ ದಿನದ ಹಿಂದೆ ಪೊಲೀಸರು ಬಿಜು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ನಿಧನವಾಗಿ ಕಾಲುಗಳನ್ನೇ ನೋಡುತ್ತಾ ಮುಂದಕ್ಕೆ ಹೋಗುತ್ತಿರುವುದನ್ನು ಗಮನಿಸಿದ್ದಾರೆ. ಇದರಿಂದ ಅನುಮಾನುಗೊಂಡು ಪೊಲೀಸರು ವಿಚಾರಣೆ ನಡೆಸಿದಾಗ ಈತನ ಖತರ್ನಾಕ್ ಕೆಲಸ ಬಯಲಾಗಿದೆ.

    ಆದ್ರೆ ಈ ರೀತಿಯ ಘಟನೆ ನಡೆದಿರೋದು ಇದೇ ಮೊದಲೇನಲ್ಲ. 2015 ರಲ್ಲಿ, ಶೂನಲ್ಲಿ ಕ್ಯಾಮೆರಾವನ್ನು ಬಳಸಿಕೊಂಡು ಮಹಿಳೆಯರ ಫೋಟೋಗಳನ್ನು ತೆಗೆದುಕೊಳ್ಳುತ್ತಿದ್ದ ವಕೀಲನನ್ನ ದೆಹಲಿಯಲ್ಲಿ ಬಂಧಿಸಲಾಗಿತ್ತು. ಇಂಗ್ಲೆಂಡಿನ ಉದ್ಯಮಿಯೊಬ್ಬ ಇದೇ ರೀತಿಯ ಆರೋಪದ ಮೇಲೆ ಬಂಧಿತನಾಗಿದ್ದ. 2014 ರಲ್ಲಿ ಜಪಾನ್ ನಲ್ಲೂ ಫೋಟೋಗಳನ್ನು ತೆಗೆದುಕೊಳ್ಳಲು ‘ಶೂ ಕ್ಯಾಮೆರಾ’ ವನ್ನು ವಿನ್ಯಾಸಗೊಳಿಸಿದ್ದ ಪ್ರಕರಣ ಬಯಲಾಗಿತ್ತು.

     

  • ತಾಯಿ ಸಾವಿನ ಸುದ್ದಿ ಕೇಳಿ ದುಬೈನಲ್ಲಿ ಸಾವನ್ನಪ್ಪಿದ ಮಗ

    ತಾಯಿ ಸಾವಿನ ಸುದ್ದಿ ಕೇಳಿ ದುಬೈನಲ್ಲಿ ಸಾವನ್ನಪ್ಪಿದ ಮಗ

    ದುಬೈ: ತಾಯಿನ ಸಾವಿನ ಸುದ್ದಿ ಕೇಳಿದ ಮಗ ಹೃದಯಾಘಾತವಾಗಿ ಸಾವನ್ನಪ್ಪಿರುವ ಘಟನೆ ದುಬೈನಲ್ಲಿ ನಡೆದಿದೆ.

    ಭಾರತೀಯ ಮೂಲದ ಅನಿಲ್ ಕುಮಾರ್ ಗೋಪಿನಾಥನ್ ಎಂಬವರೆ ಸಾವನ್ನಪ್ಪಿದ ದುರ್ದೈವಿಯಾಗಿದ್ದು, ಡಿಸೆಂಬರ್ 21 ರಂದು ಘಟನೆ ನಡೆದಿದೆ. ಅನಿಲ್ ಮೂಲತಃ ಕೇರಳದ ಕೊಲ್ಲಂ ಜಿಲ್ಲೆಯಾವರಾಗಿದ್ದು, ಅವರ ತಾಯಿ ಕೌಸಲ್ಯ ಅವರು ಮೃತಪಟ್ಟ ಸುದ್ದಿ ಕೇಳಿ ತಮ್ಮ ರೂಮ್ ನಲ್ಲಿ ಕುಸಿದು ಬಿದ್ದಿದ್ದು, ಸ್ನೇಹಿತರು ಅವರನ್ನು ಆಸ್ಪತ್ರೆಗೆ ದಾಖಲಿಸಲು ಪ್ರಯತ್ನಿಸಿದರು ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾರೆ.

    ಅನಿಲ್ ಕಳೆದ 20 ವರ್ಷಗಳಿಂದ ದುಬೈನ ಉಮ್ ಅಲ್ ಕ್ವೈನ್ ನಗರದಲ್ಲಿನ ಟೈಲರಿಂಗ್ ಶಾಪ್‍ನಲ್ಲಿ ಕಾರ್ಯನಿವಹಿಸುತ್ತಿದ್ದರು. ಅನಿಲ್ ಸಹೋದರ ತಮ್ಮ ತಾಯಿ ಕೌಸಲ್ಯ ಅವರು ಸಾವನ್ನಪ್ಪಿರುವ ಬಗ್ಗೆ ತಿಳಿಸಿದ್ದು, ಈ ಸುದ್ದಿ ಕೇಳಿ ಅನಿಲ್ ಭಾರತಕ್ಕೆ ಬರಲು ಬೇಕಾದ ಸಿದ್ಧತೆ ನಡೆಸಿದ್ದರು ಎಂದು ಮೂಲಗಳು ತಿಳಿಸಿವೆ.

    ಮೃತ ಅನಿಲ್ ಅವರ ದೇಹವನ್ನು ಭಾರತಕ್ಕೆ ತರಲು ಕೆಲವು ಕಾನೂನು ಕ್ರಮಗಳ ಅಗತ್ಯವಿದೆ ಎಂದು ಅಧಿಕಾರಿಗಳು ತಿಳಿಸಿದ್ದು, ಇಂದು ರಾತ್ರಿ ಅಥವಾ ಸೋಮವಾರ ಅನಿಲ್ ಮೃತ ದೇಹವು ಸ್ವಗ್ರಾಮವನ್ನು ಸೇರಲಿದೆ ಎಂದು ಹೇಳಲಾಗಿದೆ.

  • ಪೊಲೀಸರ ಕಣ್ತಪ್ಪಿಸಿ ಈಜಲು ನೀರಿಗಿಳಿದ ಮಂಗ್ಳೂರು ಕಾಲೇಜು ವಿದ್ಯಾರ್ಥಿ ಸಾವು

    ಪೊಲೀಸರ ಕಣ್ತಪ್ಪಿಸಿ ಈಜಲು ನೀರಿಗಿಳಿದ ಮಂಗ್ಳೂರು ಕಾಲೇಜು ವಿದ್ಯಾರ್ಥಿ ಸಾವು

    ಮಂಡ್ಯ: ನಿಷೇಧದ ನಡುವೆಯೂ ಪೊಲೀಸರ ಕಣ್ಣುತಪ್ಪಿಸಿ ಈಜಲು ನೀರಿಗಿಳಿದ ಕಾಲೇಜು ವಿದ್ಯಾರ್ಥಿ ಸಾವನ್ನಪ್ಪಿರುವ ಘಟನೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಬಲಮುರಿಯಲ್ಲಿ ನಡೆದಿದೆ.

    19 ವರ್ಷದ ಮಹಮದ್ ಸಾಹಿಲ್ ಮೃತ ದುರ್ದೈವಿ. ಹೊಸ ವರ್ಷಾಚರಣೆಯ ಸಂದರ್ಭದಲ್ಲಿ ನೀರಿಗಿಳಿದು ಸಾಯುವವರ ಸಂಖ್ಯೆ ಹೆಚ್ಚಾಗಿದ್ದು, ಅದನ್ನು ತಪ್ಪಿಸಲು ಬಲಮುರಿಗೆ ಇಂದು ಮತ್ತು ನಾಳೆ ಸಾರ್ವಜನಿಕರ ಪ್ರವೇಶ ನಿಷೇಧಿಸಲಾಗಿತ್ತು.

    ಮಂಗಳೂರಿನ ಶ್ರೀನಿವಾಸ್ ಕಾಲೇಜಿನಲ್ಲಿ ಬಿ.ಫಾರ್ಮ್ ಓದುತ್ತಿರೋ ಕೇರಳ ಮೂಲದ ಮಹಮದ್ ಸುಹೇಲ್, ತನ್ನ 15 ಜನ ಸ್ನೇಹಿತರೊಂದಿಗೆ ಇಂದು ಬಲಮುರಿಗೆ ಬಂದಿದ್ರು. ಬಲಮುರಿಗೆ ಪ್ರವೇಶ ನಿಷೇಧವಿದ್ರೂ, ಪೊಲೀಸರ ಕಣ್ಣುತಪ್ಪಿಸಿ ನೀರಿಗಿಳಿದಿದ್ದಾರೆ. ಈ ವೇಳೆ ನೀರಿನ ಸೆಳೆತಕ್ಕೆ ಸಿಕ್ಕಿ ಸಾವನ್ನಪ್ಪಿದ್ದಾರೆ.

    ಸದ್ಯ ಪೊಲೀಸರು ಮೃತದೇಹಕ್ಕಾಗಿ ಹುಡುಕಾಟ ನಡೆಸಿದ್ದಾರೆ. ಜೊತೆಗೆ ಯಾವುದೇ ಕಾರಣಕ್ಕೂ ನಿಷೇಧಿತ ಪ್ರದೇಶಕ್ಕೆ ಆಗಮಿಸಿ ಪ್ರಾಣ ಕಳೆದುಕೊಳ್ಳದಂತೆ ಪೊಲೀಸರು ಮನವಿ ಮಾಡುತ್ತಿದ್ದಾರೆ.

    ಘಟನೆ ಸಂಬಂಧ ಕೆಆರ್ ಎಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

     

  • ಈ ಗ್ರಾಮದ ಜನರಿಗೆ ಶೌಚಾಲಯ ಕಟ್ಟಿಸಿ ಮಾದರಿಯಾದ ನಟಿ ತ್ರಿಶಾ!

    ಈ ಗ್ರಾಮದ ಜನರಿಗೆ ಶೌಚಾಲಯ ಕಟ್ಟಿಸಿ ಮಾದರಿಯಾದ ನಟಿ ತ್ರಿಶಾ!

    ಕಂಚಿಪುರಂ: ಗ್ರಾಮದ ಜನರಿಗೆ ಶೌಚಾಲಯ ಕಟ್ಟಿಸಿ ಕೊಡುವ ಮೂಲಕ ದಕ್ಷಿಣ ಭಾರತದ ಫೇಮಸ್ ನಟಿ ತ್ರಿಶಾ ಇತರ ನಟ-ನಟಿಯರಿಗೆ ಮಾದರಿಯಾಗಿದ್ದಾರೆ.

    ಕಂಚಿಪುರಂ ಜಿಲ್ಲೆಯ ನೆಮಾಲಿ ಗ್ರಾಮದ ಜನರು ಶೌಚಾಲಯವಿಲ್ಲದೇ ಪರದಾಡುತ್ತಿದ್ದರು. ಹೀಗಾಗಿ ಸ್ವಚ್ಛ ಭಾರತ ಅಭಿಯಾನದ ಮೂಲಕ ನಟಿ ಸ್ವತಃ ತಾವೇ ನಿಂತು ಶೌಚಾಲಯ ಕಟ್ಟಿಸಿಕೊಟ್ಟಿದ್ದಾರೆ. ಹೀಗಾಗಿ ಆ ಭಾಗದ ಗ್ರಾಮದ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

    ನಟಿ ಶೌಚಾಲಯ ನಿರ್ಮಾಣ ಮಾಡಲೆಂದು ಇಟ್ಟಿಗೆಗಳನ್ನು ಜೋಡಿಸಿ ಅದರ ಮಧ್ಯೆ ಸಿಮೆಂಟ್ ಹಾಕುತ್ತಿರೋ ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ತಮಿಳು ನಟಿ ತ್ರಿಶಾ ಅವರು ನವೆಂಬರ್ ತಿಂಗಳಿನಿಂದ ಯುನಿಸೆಫ್ (ಯುನೈಟೆಡ್ ನೇಷನ್ಸ್ ಚಿಲ್ಡ್ರನ್ಸ್ ಫಂಡ್) ಜೊತೆ ಸೇರಿಕೊಂಡು ಈ ಕೆಲಸಗಳನ್ನು ಮಾಡುತ್ತಿದ್ದಾರೆ. ಅಲ್ಲದೇ ಅವರು ರಕ್ತಹೀನತೆ, ಬಾಲ್ಯ ವಿವಾಹ, ಬಾಲಕಾರ್ಮಿಕ ಹಾಗೂ ಮಕ್ಕಳ ಮೇಲಿನ ದೌರ್ಜನ್ಯ ಮುಂತಾದವುಗಳ ಕುರಿತು ತಮಿಳುನಾಡು ಮತ್ತು ಕೇರಳದಲ್ಲಿ ಜಾಗೃತಿ ಮೂಡಿಸುವ ಕೆಲಸಗಳನ್ನೂ ಕೂಡ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ಚಿತ್ರರಂಗದ ಸ್ಟಾರ್ ಗಳು ಮತ್ತು ಸೆಲೆಬ್ರಿಟಿಗಳು ಇಂತಹ ಕೆಲಸಗಳನ್ನು ಮಾಡುತ್ತಿರುವುದು ತುಂಬಾ ಅಪರೂಪವಾಗಿದೆ. ಹೀಗಾಗಿ ತ್ರಿಶಾ ಅವರ ಈ ಪರಿಶ್ರಮಕ್ಕೆ ಜನ ಬೆಂಬಲ ಸೂಚಿಸಿದ್ದಾರೆ.

  • ಶಾಲೆಯಲ್ಲಿ ವಿದ್ಯಾರ್ಥಿನಿಯನ್ನು ಕೆಲ ಸೆಕೆಂಡ್ ತಬ್ಬಿಕೊಂಡಿದ್ದಕ್ಕೆ ವಿದ್ಯಾರ್ಥಿ ಸಸ್ಪೆಂಡ್!

    ಶಾಲೆಯಲ್ಲಿ ವಿದ್ಯಾರ್ಥಿನಿಯನ್ನು ಕೆಲ ಸೆಕೆಂಡ್ ತಬ್ಬಿಕೊಂಡಿದ್ದಕ್ಕೆ ವಿದ್ಯಾರ್ಥಿ ಸಸ್ಪೆಂಡ್!

    ತಿರುವನಂತಪುರಂ: ಸ್ಪರ್ಧೆಯಲ್ಲಿ ಗೆದ್ದಿದ್ದಕ್ಕೆ ವಿದ್ಯಾರ್ಥಿಯೊಬ್ಬ ವಿದ್ಯಾರ್ಥಿನಿಯನ್ನು ಶಾಲೆಯಲ್ಲಿ ತಬ್ಬಿಕೊಂಡಿದ್ದಕ್ಕೆ ಮುಖ್ಯಶಿಕ್ಷಕಿ ಪರೀಕ್ಷೆಯನ್ನು ಬರೆಯಲು ಅನುಮತಿ ನೀಡದೇ ಆತನನ್ನು ಅಮಾನತು ಮಾಡಿದ ಘಟನೆ ಕೇರಳದ ತಿರುವನಂತಪುರಂನಲ್ಲಿ ನಡೆದಿದೆ.

    ವಿದ್ಯಾರ್ಥಿನಿಯನ್ನು ಶಾಲೆಯಲ್ಲಿ ತಬ್ಬಿಕೊಂಡಿದ್ದಕ್ಕೆ ವಿದ್ಯಾರ್ಥಿಯನ್ನು 5 ತಿಂಗಳ ಹಿಂದೆಯೇ ಶಾಲೆಯಿಂದ ಹೊರಹಾಕಲಾಗಿದೆ ಎಂದು ಸೆಂಟ್. ಥಾಮಸ್ ಸೆಂಟ್ರಲ್ ಶಾಲೆಯ ಮುಖ್ಯ ಶಿಕ್ಷಕಿ ತಿಳಿಸಿದ್ದಾರೆ.

    ಶಾಲೆಯ ಮೆಟ್ಟಿಲ ಹತ್ತಿರ ವಿದ್ಯಾರ್ಥಿ ಹುಡುಗಿಯನ್ನು ತಬ್ಬಿಕೊಂಡಿದ್ದನು. ಸ್ಪರ್ಧೆಯಲ್ಲಿ ಗೆದ್ದಿದ್ದಕ್ಕೆ ಆಕೆಯನ್ನು ಶುಭ ಕೋರಲು ನಾನು ತಬ್ಬಿಕೊಂಡಿದೆ ಎಂದು ವಿದ್ಯಾರ್ಥಿ ಹೇಳಿದ್ದಾನೆ. ಆದರೆ ಆತ ಶುಭ ಕೋರಲು ತಬ್ಬಿಕೊಂಡ ಎಂದರೆ 2 ಸೆಕೆಂಡ್ ಗಳಲ್ಲಿ ಮುಗಿಬೇಕಿತ್ತು. ಆದರೆ 5 ನಿಮಿಷಕ್ಕಿಂತ ಹೆಚ್ಚು ಕಾಲ ಆತ ವಿದ್ಯಾರ್ಥಿನಿಯನ್ನು ತಬ್ಬಿಕೊಂಡಿದ್ದನು. ನಂತರ ಶಿಕ್ಷಕರು ಅವರ ಮೇಲೆ ರೇಗಿದ್ದಕ್ಕೆ ಅವರು ದೂರ ಹೋದರು. ಅಷ್ಟೇ ಅಲ್ಲದೇ ಇವರಿಬ್ಬರು ಸಲುಗೆಯಿಂದ ಇರೋ ಫೋಟೋಗಳು 100ಕ್ಕಿಂತ ಹೆಚ್ಚು ಲೈಕ್ಸ್ ಪಡೆದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದವು ಎಂದು ಶಾಲಾ ಮುಖ್ಯಶಿಕ್ಷಕಿ ಸೆಬಸ್ಟಿಯನ್ ಟಿ ಜೋಸೆಫ್ ತಿಳಿಸಿದ್ದಾರೆ.

    ನಾನು ನನ್ನ ಪರೀಕ್ಷೆ ಬರೆಯಲು ಸಾಧ್ಯವಾಗುತ್ತಿಲ್ಲ ಎಂದು ನನಗೆ ನಂಬಲಿಕ್ಕೆ ಆಗುತ್ತಿಲ್ಲ. ನನ್ನ ಅಜ್ಜಿ ಮುಂದೆಯೇ ಅವರು ನನಗೆ ಕೆಟ್ಟದಾಗಿ ಕರೆಯುತ್ತಾರೆ. ಅಷ್ಟೇ ಅಲ್ಲದೇ ನಾನೊಬ್ಬ ರೇಪಿಸ್ಟ್, ಕ್ರಿಮಿನಲ್ ಎನ್ನುವಂತೆ ನನ್ನ ಜೊತೆ ವರ್ತಿಸಿದ್ದಾರೆ. ನಾನು ನನ್ನ ಬೋರ್ಡ್ ಪರೀಕ್ಷೆ ಬರೆಯಬೇಕು. ಸಾಮಾಜಿಕ ಜಾಲತಾಣದಲ್ಲಿ ನಾನು ಫೋಟೋ ಅಪ್ಲೋಡ್ ಮಾಡಿದ್ದೆ. ಅದನ್ನು ಉಳಿದವರು ಶೇರ್ ಮಾಡಿದ್ದಾರೆ ಎಂದು ವಿದ್ಯಾರ್ಥಿ ಮಾಧ್ಯಮಕ್ಕೆ ತಿಳಿಸಿದ್ದಾನೆ.

    ನಾನು ಸ್ಪರ್ಧೆಯಲ್ಲಿ ಭಾಗವಹಿಸಿದ ಮೇಲೆ ಆತ ನನ್ನನ್ನು ತಬ್ಬಿಕೊಂಡಿದ್ದು ನನಗೆ ಯಾವುದೇ ಅಭ್ಯಂತರವಿರಲಿಲ್ಲ. ಆದರೆ ಕೆಲವು ಸೆಕೆಂಡ್ ಗಳ ಕಾಲ ಆತ ನನ್ನನ್ನು ತಬ್ಬಿಕೊಂಡಿದ್ದನು. ಆದರೆ ಶಾಲೆಯವರು ಆತ 5 ನಿಮಿಷಕ್ಕಿಂತ ಹೆಚ್ಚು ಹೊತ್ತು ತಬ್ಬಿಕೊಂಡಿದ್ದನು ಎಂದು ಹೇಳುತ್ತಿದ್ದಾರೆ. ಶಾಲೆಯ ಶಿಕ್ಷಕರು ನಮ್ಮನ್ನು ಕೀಳು ದೃಷ್ಟಿಯಿಂದ ನೋಡುತ್ತಿದ್ದಾರೆ. ಅಷ್ಟೇ ಅಲ್ಲದೇ ನಮ್ಮ ಕುಟುಂಬದವರಿಗೂ ಅಸಭ್ಯವಾಗಿ ಬೈಯುತ್ತಾರೆ. ಅಷ್ಟೇ ಅಲ್ಲದೇ ನಮಗೆ ಕಿರುಕುಳ ಕೂಡ ನೀಡಿದ್ದಾರೆ ಎಂದು ವಿದ್ಯಾರ್ಥಿನಿ ತಿಳಿಸಿದ್ದಾಳೆ.

  • ಬ್ರಿಡ್ಜ್ ಮೇಲಿಂದ ನದಿಗೆ ಉರುಳಿಬಿದ್ದ ಬಸ್- ಮೂವರ ಸಾವು

    ಬ್ರಿಡ್ಜ್ ಮೇಲಿಂದ ನದಿಗೆ ಉರುಳಿಬಿದ್ದ ಬಸ್- ಮೂವರ ಸಾವು

    ತಿರುವನಂತಪುರಂ: ಬಸ್‍ವೊಂದು ಬ್ರಿಡ್ಜ್ ಮೇಲಿಂದ ನದಿಗೆ ಉರುಳಿದ ಪರಿಣಾಮ ಮೂವರು ಸಾವನ್ನಪ್ಪಿರುವ ದಾರುಣ ಘಟನೆ ಕೇರಳದ ಕಣ್ಣೂರಿನಲ್ಲಿ ನಡೆದಿದೆ.

    ಇಂದು ಬೆಳಗ್ಗೆ 6 ಗಂಟೆ ಸುಮಾರಿಗೆ ಇಲ್ಲಿನ ಪೆರಿಂಗತೂರ್‍ನ ಮಯ್ಯಾಜಿ ನದಿಗೆ ಬಸ್ ಉರುಳಿ ಬಿದ್ದಿದೆ. ಬಸ್‍ನ ಕ್ಲೀನರ್ ಹಾಗೂ ಒಬ್ಬ ಮಹಿಳೆ ಸೇರಿದಂತೆ ಮೂವರು ಸಾವನ್ನಪ್ಪಿದ್ದಾರೆ. ಮತ್ತೋರ್ವ ವ್ಯಕ್ತಿಯ ಗುರುತು ಇನ್ನೂ ಪತ್ತೆಯಾಗಿಲ್ಲ. ಗಾಯಗೊಂಡಿದ್ದ ಬಸ್ ಚಾಲಕನನ್ನು ರಕ್ಷಣೆ ಮಾಡಲಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.

    ಬಸ್ ಬೆಂಗಳೂರಿನಿಂದ ತಲಸ್ಸೆರಿಗೆ ಬರುತ್ತಿದ್ದ ವೇಳೆ ಪೆರಿಂಗತೂರ್ ಬ್ರಿಡ್ಜ್ ಮೇಲಿಂದ ತಡೆಗೋಡೆ ಡಿಕ್ಕಿ ಹೊಡೆದು ನದಿಗೆ ಬಿದ್ದಿದೆ. ಘಟನೆ ನಡೆದ ವೇಳೆ ಬಸ್ಸಿನಲ್ಲಿ ಇಬ್ಬರು ಪ್ರಯಾಣಿಕರು ಮಾತ್ರ ಇದ್ದರು ಎಂದು ವರದಿಯಾಗಿದೆ. ಅಗ್ನಿಶಾಮಕ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ಮುಂದುವರೆಸಿದ್ದಾರೆ.

    ಮೊದಲಿಗೆ ರಕ್ಷಣಾ ಕಾರ್ಯಾಚರಣೆ ವಿಳಂಬವಾಗಿದ್ದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ರು. ನಂತರ ಪೊಲೀಸರು ಪರಿಸ್ಥಿತಿ ನಿಯಂತ್ರಿಸಬೇಕಾಯಿತು. ಅಪಘಾತದಿಂದಾಗ ರಸ್ತೆಯಲ್ಲಿ ಕೆಲಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು.

  • ತಾಯಿಯೇ 8 ದಿನದ ಹಸುಗೂಸನ್ನ ಟವಲ್‍ನಿಂದ ಸುತ್ತಿ ಕೊಂದ್ಳು! ಕಾರಣ ಕೇಳಿದ್ರೆ ಶಾಕ್ ಆಗ್ತೀರಾ!

    ತಾಯಿಯೇ 8 ದಿನದ ಹಸುಗೂಸನ್ನ ಟವಲ್‍ನಿಂದ ಸುತ್ತಿ ಕೊಂದ್ಳು! ಕಾರಣ ಕೇಳಿದ್ರೆ ಶಾಕ್ ಆಗ್ತೀರಾ!

    ತಿರುವಂತನಪುರಂ: ತಾಯಿಯೇ ದೇವರು ಎಂಬ ಮಾತಿದೆ. ಅಂತಹ ತಾಯಿಯೇ ತನ್ನ ಹಸುಗೂಸನ್ನು ಟವಲ್‍ನಿಂದ ಕತ್ತನ್ನು ಸುತ್ತಿ ಕೊಲೆ ಮಾಡಿರುವ ಘಟನೆ ಕೇರಳದ ಕಟ್ಟಪಣ ಸಮೀಪದ ಮುರಿಕ್ಕಟ್ಟುಕುಡಿ ಗ್ರಾಮದಲ್ಲಿ ನಡೆದಿದೆ.

    ಮುರಿಕ್ಕಟ್ಟುಕುಡಿಯ ಕಂಡತಿಂಕರ ಬಿನು ಎಂಬಾತನ ಪತ್ನಿ ಸಂಧ್ಯಾ (28) ಈ ಕೃತ್ಯವನ್ನು ಮಾಡಿದ್ದಾಳೆ. ಸದ್ಯಕ್ಕೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಆರೋಪಿ ಮಗುವಿನ ಕುತ್ತಿಗೆಯನ್ನು ಟವಲ್‍ನಿಂದ ಸುತ್ತಿ ಕೊಲೆ ಮಾಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

    ಕೊಲೆಗೆ ಕಾರಣವೇನು?: ಮಗು ನನ್ನ ಬಣ್ಣ ಹಾಗೂ ಗಂಡನ ಮುಖ ಲಕ್ಷಣವನ್ನು ಹೊಂದಿಲ್ಲವೆಂದು ನಾನೇ ಕೊಂದಿದ್ದೇನೆ ಎಂದು ಆರೋಪಿ ಸಂಧ್ಯಾ ಒಪ್ಪಿಕೊಂಡಿದ್ದಾಳೆ. ಮಗುವನ್ನ ಮನೆಯ ಒಳಗಡೆ ಕೊಂದು, ನಂತರ ಪತಿಗೆ ಮಗು ಚಲನವಲನ ಮಾಡುತ್ತಿಲ್ಲ ಎಂದು ತಿಳಿಸಿದ್ದಾಳೆ.

    ಈ ವೇಳೆ ಆತಂಕಗೊಂಡ ಪತಿ ಕೂಡಲೆ ಮನೆಗೆ ಬಂದು ಮಗುವನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ಯುದಿದ್ದಾರೆ. ವೈದ್ಯರು ಮಗುವನ್ನು ಪರೀಕ್ಷಿಸುವ ವೇಳೆ ಮಗುವಿನ ಕುತ್ತಿಗೆ ಮೇಲಿನ ಗುರುತುಗಳು ಕಂಡು ಬಂದಿದೆ. ವೈದ್ಯರು ಅನುಮಾನಗೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಂತರ ಈ ಪ್ರಕರಣ ಬೆಳಕಿಗೆ ಬಂದಿದೆ.

    ಈ ದಂಪತಿಗೆ ಮದುವೆಯಾಗಿ 10 ವರ್ಷಗಳಾಗಿದ್ದು, ಇವರಿಗೆ 9 ವರ್ಷದ ಮಗುವೂ ಕೂಡ ಇದೆ. ಪೊಲೀಸರು ಸಂಧ್ಯಾಳ ವಿರುದ್ಧ ಕೊಲೆ ಪ್ರಕರಣವನ್ನು ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ.

     

  • ಅಮ್ಮನ ಪರ ಮಾತಾಡ್ತಾಳೆಂದು 18 ವರ್ಷದ ಮಗಳನ್ನೇ ಕತ್ತುಹಿಸುಕಿ ಕೊಂದ!

    ಅಮ್ಮನ ಪರ ಮಾತಾಡ್ತಾಳೆಂದು 18 ವರ್ಷದ ಮಗಳನ್ನೇ ಕತ್ತುಹಿಸುಕಿ ಕೊಂದ!

    ಮಲಪ್ಪುರಂ: ತನ್ನ ಜೊತೆ ಅಮ್ಮನ ಪರ ಮಾತನಾಡುತ್ತಾಳೆ ಎಂದು ಸಿಟ್ಟುಗೊಂಡ ಪಾಪಿ ತಂದೆಯೊಬ್ಬ 18 ವರ್ಷದ ಮಗಳನ್ನೇ ಕತ್ತು ಹಿಸುಕಿ ಕೊಲೆಗೈದ ಆಘಾತಕಾರಿ ಘಟನೆಯೊಂದು ನಡೆದಿದೆ.

    ಈ ಘಟನೆ ಪೆರುವಲ್ಲುರ್ ಸಮೀಪದ ತೆನ್ಹಿಪ್ಪಲಮ್ ಜಿಲ್ಲೆಯಲ್ಲಿ ಬುಧವಾರ ರಾತ್ರಿ ನಡೆದಿದ್ದು, ಇಂದು ಆರೋಪಿ ತಂದೆ 46 ವರ್ಷದ ಶಶಿ ಪೊಲೀಸ್ ಠಾಣೆಗೆ ಶಾರಣಾದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ.

    ಏನಿದು ಪ್ರಕರಣ?: ಅಕ್ರಮ ಸಂಬಂಧದ ಬಗ್ಗೆ ತಾಯಿ ಮತ್ತು ತಂದೆ ಮಧ್ಯೆ ಮಾತಿಗೆ ಮಾತು ಬೆಳೆಯುತ್ತಿದ್ದ ಸಂದರ್ಭದಲ್ಲಿ ಮಗಳು ಶಾಲು ಇವರಿಬ್ಬರ ಮಧ್ಯೆ ಬಂದು ತಾಯಿ ಪರ ವಹಿಸಿ ಮಾತನಾಡಿದ್ದಾಳೆ. ಇದರಿಂದ ಸಿಟ್ಟುಗೊಂಡ ತಂದೆ ಬುಧವಾರ ಮಧ್ಯರಾತ್ರಿ ಕಿರುಚಾಡದಂತೆ ಬಾತ್ ಟವಲ್ ನನ್ನು ಆಕೆಯ ಮುಖಕ್ಕೆ ಹಾಕಿ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಬಳಿಕ ಇಡೀ ರಾತ್ರಿ ಶವದ ಜೊತೆ ಕಳೆದಿದ್ದಾನೆ. ಬೆಳಗ್ಗೆಯಾಗುತ್ತಿದ್ದಂತೆಯೇ ಆರೋಪಿ ತಂದೆ ನೇರವಾಗಿ ತೆನ್ಹಿಪ್ಪಲಮ್ ಪೊಲೀಸ್ ಠಾನೆಗೆ ಬಂದು ಶರಣಾಗಿದ್ದಾನೆ.

    ಮೃತ ಶಾಲು ತಾಯಿ ಶೈಲಜಾ ಪೆರಿಂಥಾಲ್ಮಣ್ಣಾದಲ್ಲಿರುವ ತಮ್ಮ ಸಂಬಂಧಿಕರ ಮನೆಗೆ ತೆರಳಿದ್ದರು. ಈ ವೇಳೆ ಆರೋಪಿ ತಂದೆ ಈ ಕೃತ್ಯ ಎಸಗಿದ್ದಾನೆ ಎಂದು ವರದಿಯಾಗಿದೆ. ಸದ್ಯ ಬಂಧಿತ ಶಶಿಯನ್ನು ಇಂದು ಪರಪ್ಪನಂಗಡಿಯಲ್ಲಿರೋ ಕೋರ್ಟ್ ಗೆ ಹಾಜರು ಪಡಿಸಲಾಗಿದೆ.

    ಬಂಧಿತ ಆರೋಪಿಗೆ ಆತನ ಪತ್ನಿಗೆ ಅಕ್ರಮ ಸಂಬಂಧವಿರೋ ಶಂಕೆ ವ್ಯಕ್ತವಾಗಿದ್ದು, ಪ್ರತೀ ಬಾರಿ ಈ ವಿಚಾರಕ್ಕೆ ಸಂಬಂಧಿಸಿದಂತೆ ಅವರಿಬ್ಬರ ಮಧ್ಯೆ ಮಾತಿನ ಚಕಮಕಿ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ಮಗಳು ಅಮ್ಮನ ಪರ ವಹಿಸಿ ಮಾತನಾಡುತ್ತಿದ್ದಳು. ಇದರಿಂದ ಆತನಿಗೆ ಮಗಳು ಶಾಲು ಮೇಲೆಯೂ ಸಂಶಯ ವ್ಯಕ್ತವಾಗಿ ಈ ಕೃತ್ಯ ಎಸಗಿದ್ದಾನೆ ಅಂತ ತಿರುರಂಗಡಿ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಹಾಗೂ ತನಿಖಾಧಿಕಾರಿ ಇ. ಸುನಿಲ್ ಕುಮಾರ್ ಮಾಧ್ಯಮಕ್ಕೆ ತಿಳಿಸಿದ್ದಾರೆ.

    ಕಳೆದ ವರ್ಷವಷ್ಟೇ ಪೆರುವಲ್ಲರ್ ನ ಪ್ರೌಢಶಾಲೆಯಲ್ಲಿ ತನ್ನ ಓದು ಮುಗಿಸಿದ್ದ ಶಾಲು ಸದ್ಯ ಪಿಎಸ್‍ಸಿ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದಳು.