Tag: kerala

  • ಬಸ್ ಮೇಲೆಲ್ಲಾ ನೀಲಿ ಚಿತ್ರಗಳ ತಾರೆಯರ ಫೋಟೋ!

    ಬಸ್ ಮೇಲೆಲ್ಲಾ ನೀಲಿ ಚಿತ್ರಗಳ ತಾರೆಯರ ಫೋಟೋ!

    ತಿರುವನಂತಪುರ: ಸಾಮಾನ್ಯವಾಗಿ ಜನರು ತಮ್ಮ ಬಸ್ ಅಥವಾ ವಾಹನದ ಮೇಲೆ ತಮ್ಮ ನೆಚ್ಚಿನ ನಟ-ನಟಿ ಮತ್ತು ದೇವರ ಫೋಟೋವನ್ನು ಹಾಕಿಸುತ್ತಾರೆ. ಆದರೆ ಇಲ್ಲೊಬ್ಬ ಬಸ್ ಮಾಲೀಕ ತನ್ನ ಬಸ್ ಮೇಲೆ ನೀಲಿ ಸಿನಿಮಾಗಳ ತಾರೆಯರ ಫೋಟೋಗಳನ್ನು ಹಾಕಿಸಿದ್ದಾರೆ.

    ಕೇರಳದ ಚಿಕ್ಕೋಸ್ ಎಂಬ ಖಾಸಗಿ ಬಸ್ ಮಾಲೀಕರೊಬ್ಬರು ಈ ರೀತಿ ನೀಲಿ ಚಿತ್ರಗಳ ತಾರೆಯರ ಫೋಟೋಗಳನ್ನು ಪೇಂಟ್ ಮಾಡಿಸಿದ್ದಾರೆ. ನೀಲಿ ಚಿತ್ರ ತಾರೆಯರಾದ ಸನ್ನಿ ಲಿಯೋನ್, ಮಿಯಾ ಖಲೀಫಾ, ಜೊನಿ ಸಿನ್ಸ್, ಜೊರ್ಡಿ ಎಲ್ ನಿನಿ ಮತ್ತು ಕಾಟ್ರ್ನಿ ಕೇನ್ ತಾರೆಯರ ಚಿತ್ರಗಳನ್ನು ಪೇಂಟ್ ಮಾಡಿಸಿದ್ದಾರೆ.

    ಪ್ರಯಾಣಿಕರನ್ನು ಆಕರ್ಷಿಸುವ ಸಲುವಾಗಿ ಬಸ್ ಮೇಲೆ ಈ ರೀತಿಯ ಫೋಟೋ ಹಾಕಿಸಿದ್ದಾರೆ. ಈ ರೀತಿ ಆಕರ್ಷಕವಾಗಿರುವ ಬಸ್ ಫೋಟೋವನ್ನು ಟ್ವೀಟ್ಟರ್ ನಲ್ಲಿ `ಕೇರಳದ  ಈ ಬಸ್ಸಿನಲ್ಲಿ ನಿಮಗೆ ಗಂಭೀರವಾಗಿ ಇರಲು ಸಾಧ್ಯವಿಲ್ಲ’ ಎಂದು ಬರೆದು ಟ್ವಿಟ್ಟಿಗರೊಬ್ಬರು ಪೋಸ್ಟ್ ಮಾಡಿದ್ದಾರೆ.

    ಬಸ್ ಮೇಲೆ ಮಾತ್ರವಲ್ಲದೇ ಬಸ್ ಒಳಗೆ ಕೂಡ ಡಿಜೆ ಸೌಂಡ್ ಸಿಸ್ಟಮ್ ಗಳು ಮತ್ತು ಲೇಸರ್ ಲೈಟಿಂಗ್ ಗಳನ್ನು ಅಳವಡಿಸಿದ್ದಾರೆ. ಈ ಬಸ್ ಸಿದ್ಧಪಡಿಸಲು ಸುಮಾರು 4ರಿಂದ 5 ಲಕ್ಷ ರೂ. ಖರ್ಚಾಗಿದ್ದು, ಈ ರೀತಿಯ 8 ಬಸ್ಸುಗಳನ್ನು ಚಿಕ್ಕೋಸ್ ಹೊಂದಿದೆ” ಎಂದು ಬಸ್ ಪ್ರಯಾಣಿಕರು ಹೇಳಿದ್ದಾರೆ.

    ಈ ಬಸ್ ಇದೀಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಟ್ವೀಟ್ ನಲ್ಲಿ ಈ ಪೋಸ್ಟ್ ಹಾಕುತ್ತಿದ್ದಂತೆ ಅನೇಕ ಟ್ವಿಟ್ಟಿಗರು ಪರ- ವಿರೋಧವಾದ ರೀಟ್ವೀಟ್ ಮಾಡಿದ್ದಾರೆ. ಕೆಲವು ಬೇರೆ ಬೇರೆ ರೀತಿ ಪೇಂಟ್ ಮಾಡಿಸಿರುವ ಬಸ್ ಗಳ ಫೋಟೋ ಹಾಕಿ ಪ್ರತಿಕ್ರಿಯಿಸಿದ್ದಾರೆ.

    ಚಿಕ್ಕೋಸ್ ಟೂರ್ಸ್ ಆಂಡ್ ಟ್ರಾವೆಲ್ಸ್ ಹೆಸರಿನಲ್ಲಿರುವ ಸಂಸ್ಥೆ ತನ್ನದೇ ಆದ ಯೂ ಟ್ಯೂಬ್ ಖಾತೆಯನ್ನು ಹೊಂದಿದ್ದು, ಬಸ್ ವಿಡಿಯೋಗಳನ್ನು ಅಪ್ಲೋಡ್ ಮಾಡಿಕೊಂಡಿದೆ.

  • ಬಿಂದಿ ಧರಿಸಿದ್ದಕ್ಕೆ ಮದರಸಾದಿಂದ್ಲೇ ಹೊರಹಾಕಿದ ಆಡಳಿತ ಮಂಡಳಿ!

    ಬಿಂದಿ ಧರಿಸಿದ್ದಕ್ಕೆ ಮದರಸಾದಿಂದ್ಲೇ ಹೊರಹಾಕಿದ ಆಡಳಿತ ಮಂಡಳಿ!

    ತಿರುವನಂತಪುರಂ: 5ನೇ ತರಗತಿ ಓದುತ್ತಿದ್ದ ಬಾಲಕಿ ಬಿಂದಿ ಧರಿಸಿದ್ದಕ್ಕೆ ಮದರಸಾದಿಂದಲೇ ಹೊರ ಹಾಕಿದ ಘಟನೆ ಉತ್ತರ ಕೇರಾಳ ರಾಜ್ಯದಲ್ಲಿ ನಡೆದಿದೆ.

    ಕಿರು ಚಲನಚಿತ್ರದಲ್ಲಿ 10 ವರ್ಷದ ಬಾಲಕಿ ಬಿಂದಿ ಧರಿಸಿ ಅಭಿನಯಿಸಿದ್ದಕ್ಕಾಗಿ, 5 ನೇ ತರಗತಿಯ ವಿದ್ಯಾರ್ಥಿನಿಯನ್ನು ಮದರಾಸದ ಆಡಳಿತ ಮಂಡಳಿ ಶಾಲೆಯಿಂದಲೇ ಹೊರಹಾಕಿದೆ.

    ಬಾಲಕಿಯನ್ನು ಮದರಸಾದಿಂದ ಹೊರಹಾಕಿದ ಹಿನ್ನೆಲೆಯಲ್ಲಿ ಆಕೆಯ ತಂದೆ ಉಮ್ಮರ್ ಮಲಾಯಿಲ್ ರವರು ಘಟನೆ ಕುರಿತು ತಮ್ಮ ಫೇಸ್ಬುಕ್ ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದರು. ಸಾಮಾಜಿಕ ಜಾಲತಾಣದವರು ಬಾಲಕಿಯ ತಂದೆಗೆ ಬೆಂಬಲ ಸೂಚಿಸಿ, ಮದರಾಸ ಆಡಳಿತ ಮಂಡಳಿಯ ನಿರ್ಧಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಫೇಸ್ಬುಕ್ ಪೋಸ್ಟ್ ಸಾಕಷ್ಟು ವೈರಲ್ ಆಗಿದೆ. ಅವರು ಹಾಕಿದ್ದ ಪೋಸ್ಟನ್ನು ಸುಮಾರು 7,500 ಮಂದಿ ಲೈಕ್ ಮಾಡಿ 2,700 ಕ್ಕೂ ಹೆಚ್ಚು ಮಂದಿ ಶೇರ್ ಮಾಡಿದ್ದರು.

    https://www.facebook.com/permalink.php?story_fbid=2009935685987809&id=100009141911364

    ಉಮ್ಮರ್ ರವರು ತಮ್ಮ ಫೇಸ್ಬುಕ್‍ನಲ್ಲಿ `ನನ್ನ ಮಗಳು ಪಠ್ಯಕ್ರಮ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಉತ್ತಮ ಕೌಶಲ್ಯತೆಯನ್ನು ಹೊಂದಿದ್ದಾಳೆ. ಆಕೆ ನೃತ್ಯ, ಹಾಡುಗಾರಿಕೆ ಹಾಗೂ ಅಭಿನಯದಲ್ಲಿ ಆಸಕ್ತಿ ಹೊಂದಿದ್ದು, ಅನೇಕ ಸ್ಪರ್ಧೆಗಳಲ್ಲಿ ಸಹ ಸ್ಪರ್ಧಿಸಿ ಮದರಸಾಗೆ ಹೆಸರು ತಂದಿದ್ದಾಳೆ. ಅವಳ ನಿಷ್ಕಲ್ಮಶ ಪ್ರತಿಭೆಗೆ ಮದರಾಸವು ಅವಮಾನ ಮಾಡಿದೆ. ಆಕೆ ಮಾಡಿದ ತಪ್ಪಾದರೂ ಏನು?’ ಕೇವಲ ಗಂಧದ ಬಿಂದಿ ಧರಿಸಿದ್ದಕ್ಕೆ ಆಡಳಿತ ಮಂಡಳಿ ಮದರಾಸದಿಂದಲೇ ಹೊರಹಾಕಿದೆ ಎಂದು ಮಲಿಯಾಳಂ ಭಾಷೆಯಲ್ಲಿ ಪೋಸ್ಟ್ ಮಾಡಿದ್ದರು.

    ಘಟನೆ ಸಂಬಂಧ ಪ್ರತಿಕ್ರಿಯಿಸಿ ಮದರಸಾ ಆಡಳಿತ ಮಂಡಳಿಯು ಬಿಂದಿ ಧರಿಸಿವುದು ಇಸ್ಲಾಂನಲ್ಲಿ ನಿಷಿದ್ಧವಾಗಿದೆ. ಆದ್ದರಿಂದ ಬಾಲಕಿಯನ್ನು ಶಾಲೆಯಿಂದ ಹೊರಹಾಕಲಾಗಿದೆ ಎಂದು ಸ್ಪಷ್ಟನೆ ನೀಡಿದೆ.

  • ವಿರೋಧದ ನಡುವೆಯೂ ಕಾವೇರಿ ಪ್ರಾಧಿಕಾರದ ಸಭೆ

    ವಿರೋಧದ ನಡುವೆಯೂ ಕಾವೇರಿ ಪ್ರಾಧಿಕಾರದ ಸಭೆ

    ಬೆಂಗಳೂರು: ಕರ್ನಾಟಕದ ವಿರೋಧದ ನಡುವೆಯೂ ಇಂದು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಮೊದಲ ಸಭೆ ನಡೆಯಲಿದ್ದು, ತಮಿಳುನಾಡಿಗೆ ಜುಲೈ ತಿಂಗಳಲ್ಲಿ ಬೇಕಾಗಿರುವ ನೀರು ಬಿಡುಗಡೆ ಸಂಬಂಧ ಕಾವೇರಿ ನೀರು ನಿಯಂತ್ರಣ ಸಮಿತಿಗೆ ನಿರ್ದೇಶನಗಳನ್ನು ನೀಡಲಿದೆ. ನೀರು ನಿರ್ವಹಣಾ ಪ್ರಾಧಿಕಾರ ರಚನೆಯಾದ ಬಳಿಕ ಮೊದಲ ಬಾರಿ ನವದೆಹಲಿಯ ಶ್ರಮ ಶಕ್ತಿ ಭವನದಲ್ಲಿ ಎಲ್ಲ ಸದಸ್ಯರು ಸಭೆ ಸೇರಲಿದ್ದಾರೆ.

    ದೆಹಲಿಯ ಶ್ರಮ ಶಕ್ತಿ ಭವನದಲ್ಲಿ ಬೆಳಗ್ಗೆ 11 ಗಂಟೆಗೆ ಕೇಂದ್ರ ಜಲ ಸಂಪನ್ಮೂಲ ಇಲಾಖೆ ಕಾರ್ಯದರ್ಶಿ ಮಸೂದ್ ಹುಸೈನ್ ಅಧ್ಯಕ್ಷತೆಯಲ್ಲಿ ಆರಂಭವಾಗೋ ಸಭೆಯಲ್ಲಿ ಕರ್ನಾಟಕ, ತಮಿಳುನಾಡು, ಕೇರಳ, ಪುದುಚೇರಿಯ ಪ್ರತಿನಿಧಿಗಳು ಭಾಗವಹಿಸ್ತಾರೆ. ಕರ್ನಾಟಕದ ಪರ ಜಲಸಂಪನ್ಮೂಲ ಇಲಾಖೆ ಕಾರ್ಯದರ್ಶಿ ರಾಕೇಶ್ ಸಿಂಗ್ ಪಾಲ್ಗೊಳ್ಳಲಿದ್ದಾರೆ.

    ಶನಿವಾರ ಸಿಎಂ ಕುಮಾರಸ್ವಾಮಿ ನೇತೃತ್ವದಲ್ಲಿ ನಡೆದಿದ್ದ ಸರ್ವಪಕ್ಷ ಸಭೆಯಲ್ಲಿ ಪ್ರಾಧಿಕಾರ ರಚನೆ ಸ್ವರೂಪ ಪ್ರಶ್ನಿಸಿ ಸುಪ್ರೀಂಕೋರ್ಟ್‍ಗೆ ಅರ್ಜಿ ಹಾಕಲು ನಿರ್ಧರಿಸಲಾಗಿತ್ತು. ಕಾವೇರಿ ಕೊಳ್ಳದಲ್ಲಿ ಮುಂಗಾರು ಮಳೆಯಿಂದಾಗಿ ಬಹುತೇಕ ಡ್ಯಾಂ ಗಳು ಭರ್ತಿ ಹಂತಕ್ಕೆ ಬಂದಿವೆ. ಈ ಸಂಬಂಧ ಚರ್ಚೆ ನಡೆಯಲಿದ್ದು, ತಮಿಳುನಾಡಿಗೆ ಜುಲೈ ಬಳಿಕ ಬಿಡಬೇಕಾದ ನೀರಿನ ಪ್ರಮಾಣ ಕುರಿತು ಚರ್ಚೆ ನಡೆಯಲಿದೆ.

    ಪ್ರಾಧಿಕಾರದ ಸಭೆಯಲ್ಲಿ ಏನೆಲ್ಲಾ ಚರ್ಚೆ ಆಗಬಹುದು..?
    1. ಜುಲೈನಲ್ಲಿ ಕರ್ನಾಟಕದಿಂದ ಬಿಡುಗಡೆಯಾಗಬೇಕಿರುವ ನೀರಿನ ಪ್ರಮಾಣದ ಬಗ್ಗೆ ನಿಯಂತ್ರಣ ಸಮಿತಿಗೆ ನಿರ್ದೇಶನ.
    2. ಪ್ರತಿ 10 ದಿನಕ್ಕೊಮ್ಮೆ ತಿಂಗಳಲ್ಲಿ 3 ಬಾರಿ ಕರ್ನಾಟಕದಿಂದ ಬಿಡಬೇಕಿರುವ ನೀರಿನ ಪ್ರಮಾಣದ ಬಗ್ಗೆ ಮಾರ್ಗಸೂಚಿ.
    3. ಸುಪ್ರೀಂಕೋರ್ಟ್ ಆದೇಶದಂತೆ ತಮಿಳುನಾಡಿಗೆ ಜುಲೈನಲ್ಲಿ ಹರಿಯಬೇಕಿರುವ ನೀರು 34 ಟಿಎಂಸಿ.
    4. ಕಾವೇರಿಕೊಳ್ಳದ ಡ್ಯಾಂಗಳಲ್ಲಿರುವ ನೀರಿನ ಸಂಗ್ರಹ, ಒಳಹರಿವಿನ ಪ್ರಮಾಣದ ಮಾಹಿತಿ ಪ್ರಸ್ತಾಪ.
    5. ನಾಲ್ಕು ರಾಜ್ಯಗಳಲ್ಲಿ ಜೂನ್ 1ರಿಂದ ಜೂನ್ 30ರವರೆಗಿನ ಮಳೆಯ ಪ್ರಮಾಣದ ಬಗ್ಗೆ ಅಂಕಿ ಅಂಶ.
    6. ಒಳಹರಿವು, ಹೊರಹರಿವು, ಡ್ಯಾಂಗಳಲ್ಲಿ ಸಂಗ್ರಹ, ಮಳೆ ಪ್ರಮಾಣ, ಬೇಸಾಯ ಪ್ರದೇಶ.
    7. ಗೃಹ ಬಳಕೆ ಮತ್ತು ಕೈಗಾರಿಕೆ ಬಳಕೆಗೆ ಬೇಕಾಗಿರುವ ನೀರಿನ ಪ್ರಮಾಣದ ಮಾಹಿತಿ ಸಂಗ್ರಹದ ಸ್ವರೂಪದ ಬಗ್ಗೆ ನಿರ್ಧಾರ.
    8. ಡ್ಯಾಂಗಳಿಂದ ನಾಲೆಗಳಿಗೆ ಇನ್ನೂ ನೀರು ಬಿಟ್ಟಿಲ್ಲ, ಎಷ್ಟು ನೀರು ಬಿಡಬೇಕೆಂಬ ಬಗ್ಗೆ ಚರ್ಚೆ.
    9. ಕರ್ನಾಟಕ ಹೆಚ್ಚುವರಿ ನೀರನ್ನಷ್ಟೇ ಬಿಟ್ಟಿದೆ, ತನಗೆ ಬರಬೇಕಿದ್ದ ಪಾಲನ್ನು ಬಿಟ್ಟಿಲ್ಲ.
    10. ಹೀಗಾಗಿ ತಕ್ಷಣವೇ ತನ್ನ ಪಾಲಿನ ನೀರು ಬಿಡುವಂತೆ ತಮಿಳುನಾಡು ವಾದ ಸಾಧ್ಯತೆ.
    11. ಪ್ರಾಧಿಕಾರ ರಚನೆಯಲ್ಲಾದ ಲೋಪದ ಬಗ್ಗೆ ಕರ್ನಾಟಕದಿಂದ ವಾದ ಸಾಧ್ಯತೆ.

  • ಅರ್ಜೆಂಟೀನಾ ಸೋತಿದ್ದಕ್ಕೆ ಕೇರಳದ ಮೆಸ್ಸಿ ಅಭಿಮಾನಿ ಆತ್ಮಹತ್ಯೆ!

    ಅರ್ಜೆಂಟೀನಾ ಸೋತಿದ್ದಕ್ಕೆ ಕೇರಳದ ಮೆಸ್ಸಿ ಅಭಿಮಾನಿ ಆತ್ಮಹತ್ಯೆ!

    ತಿರುವನಂತಪುರಂ: ತನ್ನ ಮೆಚ್ಚಿನ ಆಟಗಾರನ ತಂಡ ಸೋತಿದ್ದಕ್ಕೆ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಕೇರಳದ ಕೊಟ್ಟಾಯಂನಲ್ಲಿ ನಡೆದಿದೆ.

    ಕೇರಳದ ಕೊಟ್ಟಾಯಂನ ದಿನು ಜೋಸೆಫ್ (30) ಆತ್ಮಹತ್ಯೆ ಮಾಡಿಕೊಂಡ ಯುವಕ. ಅರ್ಜೆಂಟೀನಾ ತಂಡದ ನಾಯಕ ಲಿಯೊನೆಲ್ ಮೆಸ್ಸಿ ದಿನು ಜೋಸೆಫ್‍ನ ಮೆಚ್ಚಿನ ಆಟಗಾರ. ಅಲ್ಲದೇ ದಿನು ಅರ್ಜೆಂಟೀನಾ ತಂಡವನ್ನು ಅಷ್ಟೇ ಬೆಂಬಲಿಸುತ್ತಿದ್ದ.

    2018ರ ಫಿಫಾ ಕಪ್ ಪಂದ್ಯ ಪ್ರಾರಂಭವಾಗಿದ್ದು, ಫುಟ್ ಬಾಲ್ ಪ್ರಿಯರಿಗೆ ದಿನವೂ ಹಬ್ಬ. ಆದರೆ ಜೂನ್ 22ರಂದು ಅರ್ಜೆಂಟೀನಾ ಕ್ರೊವೇಷ್ಯಾ ಎದುರು 3-0 ಗೋಲುಗಳ ಅಂತರಲ್ಲಿ ಸೋತಿತ್ತು. ಇದರಿಂದಾಗಿ ಅರ್ಜೆಂಟೀನಾ ಫಿಫಾ ಕಪ್ 2018ರ ಪಂದ್ಯದಿಂದ ಹೊರ ಬಿಳ್ಳುವ ಸಾಧ್ಯತೆ ಇದೆ ಎನ್ನುವುದನ್ನು ಅರಿತ ದಿನು ಜೋಸೆಫ್ ಆಘಾತಕ್ಕೆ ಒಳಗಾಗಿದ್ದ. ಅಂದು ರಾತ್ರಿ ಮನೆ ಬಿಟ್ಟ ದಿನು ಮತ್ತೆ ಮನೆಯ ಕಡೆಗೆ ಬಂದಿರಲಿಲ್ಲ. ಇದರಿಂದಾಗಿ ದಿನು ಪತ್ತೆಗಾಗಿ ಪೊಲೀಸರು ಹಾಗೂ ಮನೆಯ ಸದಸ್ಯರು ಹುಡುಕಾಟ ಪ್ರಾರಂಭಿಸಿದ್ದರು. ಆದರೆ ಭಾನುವಾರ ದಿನು ಮೃತ ದೇಹ ಸೇತುವೆ ಬಳಿ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ.

  • ತಿರುಪತಿ ತಿರುಮಲ ಬಂಗಾರದ ರಹಸ್ಯ ಬಯಲು – ಪ್ರಾಂಗಣದ ಕೆಳಗೆ ಇದೆ ನಿಧಿಯ ಕೋಣೆ!

    ತಿರುಪತಿ ತಿರುಮಲ ಬಂಗಾರದ ರಹಸ್ಯ ಬಯಲು – ಪ್ರಾಂಗಣದ ಕೆಳಗೆ ಇದೆ ನಿಧಿಯ ಕೋಣೆ!

    ಅಮರಾವತಿ: ಕಲಿಯುಗದ ವೈಕುಂಠ ತಿರುಪತಿ ದೇವಸ್ಥಾನದ ನೆಲಮಾಳಿಗೆಯಲ್ಲಿ ಅಪಾರ ಪ್ರಮಾಣದ ಸಂಪತ್ತಿರುವ ರಹಸ್ಯ ಕೋಣೆಯೊಂದಿದೆ ಎನ್ನಲಾಗುತ್ತಿದೆ.

    ಕೇರಳದ ಅನಂತ ಪದ್ಮನಾಭ ದೇವಾಲಯದ ನೆಲಮಾಳಿಗೆಯಲ್ಲಿ ಅಪಾರ ಪ್ರಮಾಣದ ಚಿನ್ನಾಭರಣ ಪತ್ತೆಯಾಗಿ ದೇಶಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಆದರೆ ಇತ್ತೀಚೆಗೆ ತಿರುಪತಿ ತಿರುಮಲದಲ್ಲಿಯ ನೆಲಮಾಳಿಗೆಯಲ್ಲಿ ಅದನ್ನೂ ಮೀರಿಸುವಷ್ಟು ಸಂಪತ್ತಿರುವ ಕೋಣೆಯಿಂದ ಎಂಬ ಮಾತುಗಳು ಕೇಳಿಬರುತ್ತಿದೆ.

    ಈಗ ಇಂಥದೊಂದು ರಹಸ್ಯ ಬೆಳಕಿಗೆ ಬರಲು ಕಾರಣವಾಗಿದ್ದು, ಟಿಟಿಡಿಯ ಮಾಜಿ ಪ್ರಧಾನ ಅರ್ಚಕ ಹಾಗೂ ಆಗಮ ಶಾಸ್ತ್ರಜ್ಞ ರಮಣ ದೀಕ್ಷತುಲು ಅವರ ಆರೋಪ. ದೇವಸ್ಥಾನದ ಸಿಬ್ಬಂದಿ ಪ್ರಸಾದ ತಯಾರಿಸುವ ಕೋಣೆಯನ್ನು ದೇವಸ್ಥಾನದ ಆಡಳಿತ ಮಂಡಳಿಯ ಅನುಮತಿಯಿಲ್ಲದೇ ದುರಸ್ತಿ ಮಾಡಿದ್ದಾರೆ. ಆದರೆ ಅಲ್ಲಿ ಭೂಮಿಯನ್ನು ಅಗೆದಿರುವ ಕುರುಹುಗಳು ಪತ್ತೆಯಾಗಿವೆ.

    ಇದನ್ನು ವಿಚಾರಿಸಿದಾಗ ಕೋಣೆಯಲ್ಲಿ ಕಲ್ಲಿನ ಹಾಸನ್ನು ಬದಲಿಸಬೇಕಿತ್ತು ಎಂದು ಸಿಬ್ಬಂದಿ ಹೇಳಿದ್ದಾರೆ. ಆದರೆ 5ರಿಂದ 6 ಕಲ್ಲುಗಳನ್ನು ಬದಲಾಯಿಸಲು ನೆಲ ಅಗೆಯುವ ಅವಶ್ಯಕತೆ ಏನಿತ್ತು? 25 ದಿನಗಳ ಕಾಲ ಆ ಕೋಣೆಯನ್ನು ದೇವಸ್ಥಾನದ ಆಡಳಿತ ಮಂಡಳಿ ಪೂರ್ವಾನುಮತಿಯಿಲ್ಲದೇ ಮುಚ್ಚಿದ್ದೇಕೆ? ಎಂಬುದು ರಮಣ ದೀಕ್ಷತುಲು ಅವರ ಪ್ರಶ್ನೆಯಾಗಿದೆ. ಈ ವಿಚಾರ ಇದೀಗ ರಹಸ್ಯ ಸಂಪತ್ತಿನ ಕುರಿತ ಚರ್ಚೆಗೆ ಎಡೆಮಾಡಿಕೊಟ್ಟಿದೆ.

    ಪುಸ್ತಕವೊಂದರಲ್ಲಿದೆ ಈ ಸಂಪತ್ತಿನ ಉಲ್ಲೇಖ:
    ಈ ರಹಸ್ಯ ಸಂಪತ್ತನ್ನು ಕುರಿತಂತೆ ಲೇಖಕರೊಬ್ಬರು 18ನೇ ಶತಮಾನದಲ್ಲಿಯೇ ಉಲ್ಲೇಖ ನೀಡಿದ್ದರು. ಲೇಖಕ ವಿ ಎನ್ ಶ್ರೀನಿವಾಸ್ ಎಂಬವರು ತಮ್ಮ ಸವಾಲ್-ಇ-ಜವಾಬ್ ಎಂಬ ಕೃತಿಯಲ್ಲಿ ತಿರುಪತಿ ತಿರುಮಲದ ರಹಸ್ಯ ಸಂಪತ್ತಿನ ಕುರಿತಂತೆ ಉಲ್ಲೇಖಿಸಿದ್ದಾರೆ.

    200 ಪುಟಗಳ ಇವರ ಕೃತಿಯ 13 ಮತ್ತು 14 ನೇ ಸಾಲುಗಳಲ್ಲಿ ಈ ಸಂಪತ್ತನ್ನು ಕುರಿತಂತೆ 6 ಸಾಲುಗಳಲ್ಲಿ ಹೇಳಲಾಗಿದೆ. ಪ್ರದಕ್ಷಿಣೆ ಪ್ರಾಂಗಣದ ಕೆಳಗೆ ರಹಸ್ಯ ಕೋಣೆಯೊಂದಿದೆ. ಅದರಲ್ಲಿ ಅಪಾರ ಪ್ರಮಾಣದ ಸಂಪತ್ತಿದೆ. ಭಕ್ತರು ಅದರ ಮೇಲೆಯೇ ನಡೆದಾಡುತ್ತಿದ್ದಾರೆ. ಈ ಕೋಣೆಗೆ ಸಾರ್ವಜನಿಕರ ಪ್ರವೇಶ ನಿಷಿದ್ಧ ಎಂದು ಉಲ್ಲೇಖಿಸಿದ್ದಾರೆ.

    ಹೀಗಾಗಿ ಆ ರಹಸ್ಯ ಕೋಣೆಯ ಕುರಿತು ಈಗ ಸಾಕಷ್ಟು ಚರ್ಚೆಗಳು ಹುಟ್ಟಿಕೊಂಡಿವೆ. ಆದರೆ ಈ ರಹಸ್ಯ ಕೋಣೆಯ ಇರುವಿಕೆ ಕುರಿತಂತೆ ಮಾಜಿ ಪ್ರಧಾನ ಅರ್ಚಕ ರಮಣ ದೀಕ್ಷಿತಲು ಪ್ರಶ್ನೆಗೆ ದೇವಸ್ಥಾನದ ಆಡಳಿತ ಮಂಡಳಿ ಮಾತ್ರ ಯಾವುದೇ ಪ್ರತಿಕ್ರಿಯೆ ನೀಡಲು ಮುಂದಾಗಿಲ್ಲ.

  • ಪೊಳಲಿ ಕೊಡಿಮರ ವಿಚಾರದಲ್ಲಿ ನನ್ನ ವಿರುದ್ಧ ಅಪಪ್ರಚಾರ -ರಮಾನಾಥ ರೈ

    ಪೊಳಲಿ ಕೊಡಿಮರ ವಿಚಾರದಲ್ಲಿ ನನ್ನ ವಿರುದ್ಧ ಅಪಪ್ರಚಾರ -ರಮಾನಾಥ ರೈ

    ಮಂಗಳೂರು: ತಾಲೂಕಿನ ಪೊಳಲಿ ದೇವಸ್ಥಾನ ಕೊಡಿ ಮರ ಕಡಿದ ವಿಚಾರದಲ್ಲಿ ತಮ್ಮ ಹೆಸರನ್ನು ಅಪಪ್ರಚಾರ ಮಾಡಲಾಗುತ್ತಿದೆ ಎಂದು ಮಾಜಿ ಸಚಿವ ರಮಾನಾಥ ರೈ ಕಣ್ಣೀರಿಟ್ಟಿದ್ದಾರೆ.

    ದೇವಸ್ಥಾನದ ಧ್ವಜ ಸ್ಥಂಭ ನಿರ್ಮಾಣಕ್ಕಾಗಿ ಮರವೊಂದನ್ನು ಕೊಡಗಿನ ಸಂಪಾಜೆ ಅರಣ್ಯ ಪ್ರದೇಶದಿಂದ ಕಡಿದು ತರಲಾಗಿತ್ತು. ಅಷ್ಟಕ್ಕೂ ಈ ಮರವನ್ನು ಬಂಟ್ವಾಳದ ಬಿಲ್ಲವ ಜನಾಂಗದವರು ದೇವಸ್ಥಾನಕ್ಕೆ ದೇಣಿಗೆಯಾಗಿ ನೀಡಿದ್ದರು. ಆ ಮರವನ್ನು ಕಡಿದಿದ್ದಕ್ಕೆ ಅರಣ್ಯ ಇಲಾಖೆ ದೇವಸ್ಥಾನದ ಆಡಳಿತ ಮಂಡಳಿಗೆ 21 ಲಕ್ಷ ರೂಪಾಯಿ ಮರದ ಮೊತ್ತವಾಗಿ ಪಾವತಿಸುವಂತೆ ಹೇಳಿತ್ತು. ಸರಕಾರ ಕೊನೆಗೆ ದೇವಸ್ಥಾನಕ್ಕೆ ರಿಯಾಯಿತಿ ನೀಡಿ 10 ಲಕ್ಷ 70 ಸಾವಿರ ರೂ ಪಾವತಿಸುವಂತೆ ಹೇಳಿತು.

    ರಮಾನಾಥ ರೈ ಈ ಪೊಳಲಿ ರಾಜೇಶ್ವರಿ ದೇವಸ್ಥಾನದ ಆಡಳಿತ ಮಂಡಳಿಯ ಗೌರವಾಧ್ಯಕ್ಷರಾಗಿದ್ದರು. ಅರಣ್ಯ ಇಲಾಖೆಯೇ ಅವರ ಕೈಯ್ಯಲ್ಲಿತ್ತು. ಅರಣ್ಯ ಸಚಿವರಾಗಿದ್ದರೂ ದೇವಸ್ಥಾನ ಅರಣ್ಯ ಇಲಾಖೆಗೆ ಹಣ ಕಟ್ಟಬೇಕಾಯಿತು ಅಂತಾ ಆರೋಪಗಳು ಕೇಳಿಬಂದಿತ್ತು. ಈ ಆರೋಪದಿಂದ ನೊಂದ ರೈ ಪೊಳಲಿ ರಾಜೇಶ್ವರಿ ದೇವಸ್ಥಾನದಲ್ಲಿ ಕಣ್ಣೀರಿಟ್ಟಿದ್ದಾರೆ.

    ಈ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ರಮಾನಾಥ ರೈ ಈ ವಿಚಾರದಲ್ಲಿ ನನ್ನ ಪಾತ್ರವೇನೂ ಇಲ್ಲ. ಈ ವಿಚಾರದಲ್ಲಿ ಹಿಂದೂಪರ ಸಂಘಟನೆಗಳ ಕಾರ್ಯಕರ್ತರ ಕೈವಾಡವಿದೆ. ಸುಮ್ಮನೇ ನನ್ನ ಮೇಲೆ ಇಲ್ಲಸಲ್ಲದ ಆರೋಪ ಮಾಡಲಾಗುತ್ತಿದೆ ಎಂದು ಕಣ್ಣೀರಿಟ್ಟಿದ್ದಾರೆ.

    ರಮಾನಾಥ ರೈ ಈ ಹಿಂದೆ ಕೇರಳದ ಕಾನತ್ತೂರು ದೇವಸ್ಥಾನಕ್ಕೂ ಕೂಡಾ ಭೇಟಿ ನೀಡಿದ್ದರು. ಮಂಗಳೂರಿನಲ್ಲಿ ನಡೆದ ಕೋಮುಗಲಭೆ ಹಾಗೂ ಶರತ್ ಮಡಿವಾಳ ಹತ್ಯೆ ಪ್ರಕರದಲ್ಲಿ ತಮ್ಮ ಹೆಸರನ್ನು ಅಪಪ್ರಚಾರ ಮಾಡಲಾಗುತ್ತಿದೆ. ತಾವು ತಪ್ಪು ಮಾಡಿದ್ದರೆ ಶಿಕ್ಷೆಯಾಗಲಿ. ಇಲ್ಲವಾದರೆ ತಮ್ಮ ಹೆಸರನ್ನು ಅಪಪ್ರಚಾರ ಮಾಡುತ್ತಿರುವವರನ್ನು ಕರೆಸಿ ವಿಚಾರಿಸಲಿ ಎಂದು ದೈವಸ್ಥಾನದಲ್ಲಿ ರೈ ವಿನಂತಿ ಮಾಡಿಕೊಂಡಿದ್ದರು.

  • ಹಳ್ಳಕ್ಕೆ ಬಿದ್ದ ಸ್ಕೂಲ್ ವ್ಯಾನ್- ಪ್ರಾಣವನ್ನೂ ಲೆಕ್ಕಿಸದೆ ಮಕ್ಕಳ ಜೀವ ಉಳಿಸಿ, ದಾದಿ ದುರ್ಮರಣ!

    ಹಳ್ಳಕ್ಕೆ ಬಿದ್ದ ಸ್ಕೂಲ್ ವ್ಯಾನ್- ಪ್ರಾಣವನ್ನೂ ಲೆಕ್ಕಿಸದೆ ಮಕ್ಕಳ ಜೀವ ಉಳಿಸಿ, ದಾದಿ ದುರ್ಮರಣ!

    ತಿರುವಂತನಪುರಂ: ರಸ್ತೆ ಅಪಘಾತದಲ್ಲಿ ದಾದಿಯೊಬ್ಬರು ತನ್ನ ಪ್ರಾಣವನ್ನು ಲೆಕ್ಕಿಸದೇ ಐದು ಮಕ್ಕಳ ಜೀವವನ್ನು ಉಳಿಸಿ ಬಳಿಕ ಮೃತಪಟ್ಟಿರುವ ಘಟನೆ ಕೇರಳದಲ್ಲಿ ನಡೆದಿದೆ.

    ಕೇರಳದ ಮರಡು ಬಳಿಯ ಕಟ್ಟಿತ್ತರದಲ್ಲಿ ಈ ಘಟನೆ ನಡೆದಿದೆ. 35 ವರ್ಷದ ಲತಾ ಉಣ್ಣಿ, ಐದು ಮಕ್ಕಳ ಪ್ರಾಣ ಉಳಿಸಿ ಮೃತಪಟ್ಟ ದಾದಿ. ಸೋಮವಾರ ಸ್ಕೂಲ್ ವ್ಯಾನ್ `ಕಿಡ್ಜ್ ವರ್ಲ್ಡ್’ ಶಾಲೆಯಿಂದ ಎಂಟು ವಿದ್ಯಾರ್ಥಿಗಳನ್ನು ಹತ್ತಿಸಿಕೊಂಡು ಹೊರಟಿತ್ತು.

    ಸುಮಾರು 3.45 ರ ವೇಳೆಗೆ ಕಟ್ಟಿತ್ತರ ರಸ್ತೆಯಲ್ಲಿ ವ್ಯಾನಿನ ಹಿಂಬದಿ ಚಕ್ರವು ಕೆಸರಿನಲ್ಲಿ ಸಿಲುಕಿದೆ. ನಂತರ ನಿಧಾನವಾಗಿ ಚಾಲಕ ತಿರುವು ತೆಗೆದುಕೊಳ್ಳಲು ಪ್ರಯತ್ನಿಸಿದ್ದಾನೆ. ಆಗ ವ್ಯಾನ್ ಕೊಳದಲ್ಲಿ ಬಿದ್ದಿದೆ. ಪರಿಣಾಮ ಎಲ್ಲಾ ಮಕ್ಕಳು ನೀರಿನಲ್ಲಿ ಮುಳುಗಿದ್ದರು. ಲತಾ ಉಣ್ಣಿ ಅವರು ಕಿಟಿಕಿಯಲ್ಲಿ ಸಿಲುಕಿಕೊಂಡಿದ್ದರು. ಕೊನೆಗೆ ನಾನು ಸಾಯುವ ಮುನ್ನ ಮಕ್ಕಳನ್ನು ಉಳಿಸೋಣ ಎಂದು ನಿರ್ಧಾರ ಮಾಡಿದ್ದು, ಅವರು ಒಬ್ಬರಂತೆ ಐದು ಮಕ್ಕಳನ್ನು ಕಿಟಿಕಿಯಿಂದ ಹೊರಗೆ ತಳ್ಳಿ ಅವರ ಜೀವವನ್ನು ಕಾಪಾಡಿದ್ದಾರೆ.

    ಅಲ್ಲೇ ಇದ್ದ ಸ್ಥಳೀಯರು ಗಮನಿಸಿ ಘಟನೆ ನಡೆದ ಸ್ಥಳಕ್ಕೆ ದೌಡಾಯಿಸಿ ಆ ಮಕ್ಕಳನ್ನು ಕಾಪಾಡಿದ್ದಾರೆ. ಈ ವೇಳೆ ಅವರು ಕಿಟಕಿಯಲ್ಲಿ ಸಿಲುಕಿಕೊಂಡಿದ್ದು, ಪ್ರಜ್ಞಾಹೀನರಾಗಿದ್ದರು. ತಕ್ಷಣ ಅವರನ್ನು ಸಮೀಪದ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಎಲ್ಲಾ ದೃಶ್ಯಗಳು ಸಮೀಪದ ಮನೆಯೊಂದರ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

    ಅಪಘಾತದಲ್ಲಿ ಗಾಯಗೊಂಡಿದ್ದ ವಾಹನ ಚಾಲಕ ಅನಲ್ಕುಮಾರ್ ನನ್ನು ಐಸಿಯುನಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಅಪಘಾತದಲ್ಲಿ ರಕ್ಷಿಸಿದ ಐದು ಮಕ್ಕಳು ಸುರಕ್ಷಿತರಾಗಿದ್ದು, ಅವರ ಪೋಷಕರು ಬಂದು ಕರೆದುಕೊಂಡು ಹೋಗುವವರೆಗೂ ಸಮೀಪದ ಒಂದು ಮನೆಯಲ್ಲಿ ಮಕ್ಕಳನ್ನು ಇರಿಸಲಾಗಿತ್ತು. ಆದರೆ ಈ ಘಟನೆಯಿಂದ 4 ವರ್ಷದ ವಿದ್ಯಾ ಲಕ್ಷ್ಮೀ ಮತ್ತು ಆದಿತ್ಯ ಎಸ್. ನಾಯರ್ ಸೇರಿದಂತೆ ಲತಾ ಉಣ್ಣಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

    ಲತಾ ಉಣ್ಣಿಗೆ ಇಬ್ಬರು ಅವಳಿ ಹೆಣ್ಣು ಮಕ್ಕಳಿದ್ದು, ಅವರ ಪತಿ ಕೆಎಲ್ ಅವರು ದೈನಂದಿನ ವೇತನ ಕಾರ್ಮಿಕರಾಗಿದ್ದಾರೆ. ಇವರು ಐದು ವರ್ಷಗಳಿಂದ `ಕಿಡ್ಜ್ ವರ್ಲ್ಡ್’ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದರು.

  • ಟಿಂಬರ್ ಕೆಲಸಕ್ಕಾಗಿ ಆನೆಗಳನ್ನ ಹೊತ್ತೊಯ್ಯುತ್ತಿದ್ದ ಲಾರಿ ಸಹಿತ ಮಾವುತ ವಶಕ್ಕೆ!

    ಟಿಂಬರ್ ಕೆಲಸಕ್ಕಾಗಿ ಆನೆಗಳನ್ನ ಹೊತ್ತೊಯ್ಯುತ್ತಿದ್ದ ಲಾರಿ ಸಹಿತ ಮಾವುತ ವಶಕ್ಕೆ!

    ಚಿಕ್ಕಮಗಳೂರು: ಟಿಂಬರ್ ಕೆಲಸಕ್ಕಾಗಿ ಕೇರಳದಿಂದ ಚಿಕ್ಕಮಗಳೂರಿಗೆ ಲಾರಿಯಲ್ಲಿ ಸಾಗಿಸುತ್ತಿದ್ದ ಆನೆಗಳನ್ನು ಅರಣ್ಯ ಇಲಾಖೆ ಸಿಬ್ಬಂದಿ ವಶಪಡಿಸಿಕೊಂಡಿದ್ದಾರೆ.

    ಇಲ್ಲಿನ ಸೀತಾಳಯ್ಯನ ಗಿರಿ ಮಂಜುನಾಥ ಕಾಫಿ ತೋಟದಲ್ಲಿ ಸಿಬ್ಬಂದಿ ವಶಕ್ಕೆ ಪಡೆದಿದ್ದಾರೆ. ಲಾರಿಯಲ್ಲಿ ಆನೆಗಳನ್ನು ಸಾಗಿಸುತ್ತಿದ್ದ ವಿಚಾರವನ್ನು ಪರಿಸರವಾದಿ ಗಿರೀಶ್ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ಗಿರೀಶ್ ಅವರು ಮಾಹಿತಿ ಪಡೆದ ವಲಯ ಅರಣ್ಯಾಧಿಕಾರಿ(ಆರ್.ಎಫ್.ಓ) ಶಿಲ್ಪಾ ನೇತೃತ್ವದ ತಂಡ ದಾಳಿ ನಡೆಸಿದ್ದು, ಲಾರಿಗಳನ್ನು ವಶಕ್ಕೆ ಪಡೆದಿದ್ದಾರೆ.

    ಕಾಡು ಪ್ರಾಣಿಗಳನ್ನು ಯಾವುದೇ ಕೆಲಸಕ್ಕೆ ಬಳಸಬಾರದು ಎಂಬ ನಿಯಮದ ಹಿನ್ನೆಲೆ ಆನೆಗಳನ್ನು ವಶಕ್ಕೆ ಪಡೆಯಲಾಗಿದ್ದು, ತೋಟದ ಮಾಲೀಕರಿಂದ ನಿಯಮ ಬಾಹಿರ ಕೃತ್ಯ ನಡೆದಿದೆ. ಮಾವುತ ಹಾಗೂ ಲಾರಿ ಚಾಲಕ ವಿರುದ್ಧ ಪ್ರಕರಣ ದಾಖಲಾಗಿದೆ.

  • ನಿಪಾ ವೈರಸ್ ಭೀತಿಗೆ ಬಿಬಿಎಂಪಿಯಿಂದ `ವರಹಾ’ ಆಪರೇಷನ್!

    ನಿಪಾ ವೈರಸ್ ಭೀತಿಗೆ ಬಿಬಿಎಂಪಿಯಿಂದ `ವರಹಾ’ ಆಪರೇಷನ್!

    ಬೆಂಗಳೂರು: ಕೇರಳದಲ್ಲಿ ಹತ್ತಾರು ಮಂದಿಯನ್ನ ಬಲಿ ಪಡೆದಿರುವ ನಿಪಾ ವೈರಸ್ ಭೀತಿ ಇದೀಗ ಬೆಂಗಳೂರಿನಲ್ಲೂ ಶುರುವಾಗಿದೆ. ಹಂದಿಗಳಿಂದಲೂ ವೈರಸ್ ಹರಡುತ್ತೆ ಎನ್ನುವ ಕಾರಣಕ್ಕೆ ಆಪರೇಷನ್ ವರಹಾ ಕಾರ್ಯಾಚರಣೆಗೆ ಬಿಬಿಎಂಪಿ ಚಾಲನೆ ನೀಡಿದ್ದು, ಸಿಬ್ಬಂದಿ ಹಂದಿ ಹಿಡಿಯೋದ್ರಲ್ಲಿ ಬ್ಯುಸಿಯಾಗಿದ್ದಾರೆ.

    ಬೆಂಗಳೂರು ನಗರದಿಂದ 5 ಕಿಲೋ ಮೀಟರ್ ಹೊರಗೆ ಮಾತ್ರ ಹಂದಿ ಸಾಕಾಣಿಕೆಗೆ ಅವಕಾಶವಿದೆ. ಆದರೆ, ನಗರದಲ್ಲೇ ಎಗ್ಗಿಲ್ಲದೆ ಅಕ್ರಮವಾಗಿ ಹಂದಿ ಸಾಕಾಣಿಕೆ ಮಾಡಲಾಗುತ್ತಿದೆ. ಹಂದಿ ಕಾಟಕ್ಕೆ ಬೇಸತ್ತ ನಾಗರಿಕರು ಬಿಬಿಎಂಪಿಗೆ ದೂರು ನೀಡುತ್ತಿದ್ದಾರೆ. ಹಾಗೇ ಹಂದಿಯಿಂದ ನಿಪಾ ವೈರಸ್ ಹರಡುವ ಭೀತಿಯಿಂದ ಬಿಬಿಎಂಪಿ ಹಂದಿ ಹಿಡಿಯುವ ಕಾರ್ಯಾಚರಣೆ ಕೈಗೊಂಡಿದೆ.

    ನಗರದ ಪ್ರಮುಖ ಸ್ಥಳಗಳು ಸೇರಿದಂತೆ ಈ ತನಕ 50ಕ್ಕೂ ಹೆಚ್ಚು ಹಂದಿಗಳನ್ನು ಟೆಂಡರ್ ಪಡೆದವರು ಹಿಡಿದು ಸಾಗಿಸಿದ್ದಾರೆ. ಇನ್ನು ಟೆಂಡರ್‍ದಾರರಿಗೆ ಹಣ ನೀಡುವ ಬದಲು ಹಂದಿ ಮಾರಾಟ ಮಾಡಲು ಪಾಲಿಕೆ ಅವಕಾಶ ನೀಡಿದೆ. ಇಂದು ಸಹ ಬಿಬಿಎಂಪಿ ಯಲಹಂಕ, ಬ್ಯಾಟರಾಯನಪುರ, ಮಹಾದೇವ ಪುರ ಭಾಗಗಳಲ್ಲಿ ವರಹ ಕಾರ್ಯಚಾರಣೆ ನಡೆಸಿತ್ತು.

    ಆಪರೇಷನ್ ವರಾಹ ಇನ್ನೂ 10 ರಿಂದ 15 ದಿನಗಳ ಕಾಲ ನಡೆಯಲಿದ್ದು, ಇದರಿಂದ ಜನಸಾಮಾನ್ಯರಿಗೆ ಅನುಕೂಲವಾಗುತ್ತೆ ಅಂತ ಬಿಬಿಎಂಪಿ ಹೇಳುತ್ತಿದೆ.

  • ಕೇರಳದ ಹಣ್ಣು ತರಕಾರಿ ಆಮದು ನಿಲ್ಲಿಸಿದ ಯುಎಇ

    ಕೇರಳದ ಹಣ್ಣು ತರಕಾರಿ ಆಮದು ನಿಲ್ಲಿಸಿದ ಯುಎಇ

    ಅಬುಧಾಬಿ: ಕೇರಳದ ಹಣ್ಣು ಮತ್ತು ತರಕಾರಿಗಳ ಆಮದು ಮೇಲೆ ಯುನೈಟೆಡ್ ಅರಬ್ ಎಮಿರೈಟರ್ಸ್ (ಯುಎಇ) ನಿಷೇಧ ಹೇರಿದೆ.

    ಮೇ 29ರಿಂದ ಆಮದನ್ನು ನಿಲ್ಲಿಸಿದ್ದು, ನಿಪಾ ವೈರಾಣು ತಮ್ಮ ದೇಶಕ್ಕೂ ಕಾಲಿಡಬಹುದು ಎಂದು ಜಾಗೃತಿ ವಹಿಸಿರುವ ಯುಎಇ ಈ ನಿರ್ಧಾರಕ್ಕೆ ಮುಂದಾಗಿದೆ. ಇಲ್ಲಿನ ಹವಾಮಾನ ಬದಲಾವಣೆ ಮತ್ತು ಪರಿಸರ ಸಚಿವಾಲಯವು ಕೇರಳದ ಹಣ್ಣು ಹಾಗೂ ತರಕಾರಿಗಳ ಮೇಲೆ ಸಂಪೂರ್ಣ ನಿಷೇಧ ಹೇರಬೇಕು ಎಂಬ ಆದೇಶ ಹೊರಡಿಸಿದೆ. ಇದನ್ನು ಓದಿ:  ನಿಪಾ ವೈರಸ್ ಬಾವಲಿಗಳಿಂದ ಬರಲ್ಲ -ವರದಿಯಲ್ಲಿ ಸಾಬೀತು

    ನಿಪಾ ತಮ್ಮ ದೇಶಕ್ಕೆ ಬಾರದಂತೆ ತಡೆಯಲು ಮುಂದಾಗಿರುವ ಸಚಿವಾಲಯವು ಸ್ಥಳೀಯ ಅಧಿಕಾರಿಗಳಿಗೆ ಹಾಗೂ ಅಬುಧಾಬಿ ಫುಡ್ ಕಂಟ್ರೋಲ್ ಅಥಾರಿಟಿ, ದುಬೈ ಪುರಸಭೆ ಸೇರಿದಂತೆ ಶಾರ್ಜಾ, ಅಜ್ಮಾನ್, ಉಮ್ ಅಲ್ ಕ್ವೈನ್, ರಸ್ ಅಲ್ ಖೈಮಾ ಮತ್ತು ಫ್ಯೂಜೈರಾ ಪ್ರದೇಶದಲ್ಲಿ ಕೇರಳದಿಂದ ಆಮದಾಗುವ ತರಕಾರಿ ಹಾಗೂ ಹಣ್ಣುಗಳನ್ನು ನಿಷೇಧಿಸಬೇಕು ಎಂದು ಆದೇಶ ನೀಡಲಾಗಿದೆ.

    ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಟಿಓ) ವೆಬ್‍ಸೈಟ್‍ನಲ್ಲಿ ನಿಪಾ ವೈರಸ್ ಮಾಹಿತಿಯ ಕುರಿತು ಪ್ರಕಟಿಸಲಾಗಿದೆ. ಇದರಿಂದಾಗಿ ಯುಎಇಗೆ ಕೇರಳದ ತರಕಾರಿ ಹಾಗೂ ಹಣ್ಣುಗಳನ್ನು ಆಮದು ಮಾಡಿಕೊಳ್ಳಲು ಹಿಂದೇಟು ಹಾಕಿದೆ.