Tag: kerala

  • ಬೋಟ್ ಹತ್ತಲು ಬೆನ್ನನ್ನೇ ಮೆಟ್ಟಿಲಾಗಿಸಿದ ಮೀನುಗಾರ!

    ಬೋಟ್ ಹತ್ತಲು ಬೆನ್ನನ್ನೇ ಮೆಟ್ಟಿಲಾಗಿಸಿದ ಮೀನುಗಾರ!

    ತಿರುವನಂತಪುರಂ: ಮಹಾಮಳೆ ಕರ್ನಾಟಕದ ಹಾಗೂ ಕೇರಳ ಜನತೆಯನ್ನು ತಲ್ಲಣಗೊಳಿಸಿದ್ದು, ಅನೇಕರು ವಿವಿಧ ರೀತಿಯ ಸಹಾಯಕ್ಕೆ ನಿಂತಿದ್ದಾರೆ. ಮೀನುಗಾರನೊಬ್ಬ ಬೆನ್ನನ್ನೇ ಮೆಟ್ಟಿಲು ಮಾಡಿಕೊಂಡ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಮೀನುಗಾರ ಕೆ.ಪಿ.ಜೈಸಾಲ್ ಮಲಪ್ಪುರಂ ಜಿಲ್ಲೆಯ ವೆಂಗರಾದಲ್ಲಿ ಸಂತ್ರಸ್ತರ ರಕ್ಷಣೆಗೆ ಮುಂದಾಗಿದ್ದು, ಮಹಿಳೆಯರಿಗೆ ಬೋಟ್ ಹತ್ತಲು ಸಾಧ್ಯವಾಗಲಿಲ್ಲ. ಇರಿಂದಾಗಿ ಜೈಸಾಲ್ ಬೋಟ್ ಪಕ್ಕದಲ್ಲಿಯೇ ಮಂಡಿ ಹಾಗೂ ಎರಡು ಕೈಗಳನ್ನು ನೆಲಕ್ಕೆ ಊರಿ ಬೆನ್ನನ್ನು ಮೆಟ್ಟಿಲಿನಂತೆ ಮಾಡಿ ಬೋಟ್ ಹತ್ತಲು ಮಹಿಳೆಯರಿಗೆ ಸಹಾಯ ಮಾಡಿದರು.

    ಜೈಸಾಲ್ ಅವರ ಸಹಾಯದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಮಹಾಮಳೆಗೆ ದೇವರನಾಡಲ್ಲಿ 380 ಮಂದಿ ಪ್ರಾಣ ಕಳೆದುಕೊಂಡಿದ್ದು, ಸುಮಾರು 3.14 ಲಕ್ಷ ಜನರನ್ನು ನಿರಾಶ್ರಿತರ ಶಿಬಿರದಲ್ಲಿ ಇರಿಸಲಾಗಿದೆ.

    ಪ್ರಧಾನಿ ನರೇಂದ್ರ ಮೋದಿ ಕೇರಳದ ಪ್ರವಾಹ ಪೀಡಿತ ಪ್ರದೇಶಗಳ ವೈಮಾನಿಕ ಸಮೀಕ್ಷೆ ನಡೆಸಿ, ರಾಜ್ಯಕ್ಕೆ 500 ಕೋಟಿ ರೂ. ಪರಿಹಾರ ಘೋಷಣೆ ಮಾಡಿದ್ದಾರೆ. ಪ್ರವಾಹದಲ್ಲಿ ಮೃತ ಕುಟುಂಬಸ್ಥರಿಗೆ 2 ಲಕ್ಷ ರೂ. ಮತ್ತು ಗಾಯಾಳುಗಳಿಗೆ 50 ಸಾವಿರ ರೂ. ಪರಿಹಾರವನ್ನು ಪ್ರಧಾನ ಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಯಿಂದ ನೀಡಲಾಗುವುದು ಎಂದು ತಿಳಿಸಿದ್ದಾರೆ. ಅಷ್ಟೇ ಅಲ್ಲದೇ ಕರ್ನಾಟಕ ಸೇರಿದಂತೆ ವಿವಿಧ ಭಾಗಗಳಿಂದ ಕೇರಳ ಸಂತ್ರಸ್ತರಿಗೆ ಪರಿಹಾರ ಧನ ಹರಿದು ಬರುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕೇರಳ ಪ್ರವಾಹ ಪರಿಹಾರ ನಿಧಿಗೆ ಕಾಂಗ್ರೆಸ್ ಶಾಸಕ ಹಾಗೂ ಸಂಸದರಿಂದ ಒಂದು ತಿಂಗಳ ಸಂಬಳ ದೇಣಿಗೆ

    ಕೇರಳ ಪ್ರವಾಹ ಪರಿಹಾರ ನಿಧಿಗೆ ಕಾಂಗ್ರೆಸ್ ಶಾಸಕ ಹಾಗೂ ಸಂಸದರಿಂದ ಒಂದು ತಿಂಗಳ ಸಂಬಳ ದೇಣಿಗೆ

    ನವದೆಹಲಿ: ದೇಶದ ಎಲ್ಲಾ ಕಾಂಗ್ರೆಸ್ ಶಾಸಕರು ಹಾಗೂ ಸಂಸದರ ಒಂದು ತಿಂಗಳ ವೇತನವನ್ನು ಕೇರಳ ಪ್ರವಾಹ ಪರಿಹಾರ ನಿಧಿಗೆ ನೀಡಲು ಮುಂದಾಗಿದ್ದಾರೆ.

    ಕಂಡು ಕೇಳರಿಯದ ಪ್ರವಾಹದಿಂದಾಗಿ ಕೇರಳ ತತ್ತರಿಸಿ ಹೋಗಿದ್ದು, ಬಹುತೇಕ ನಿವಾಸಿಗಳು ಸಂತ್ರಸ್ತರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಕೇರಳ ಪ್ರವಾಹ ಪರಿಹಾರ ನಿಧಿಗೆ ದೇಣಿಗೆ ನೀಡಲು ಕಾಂಗ್ರೆಸ್ ಮುಂದಾಗಿದ್ದು, ತನ್ನೆಲ್ಲಾ ಶಾಸಕರು ಹಾಗೂ ಸಂಸದರ ಒಂದು ತಿಂಗಳ ವೇತನವನ್ನು ಪರಿಹಾರವಾಗಿ ನೀಡುವಂತೆ ಖುದ್ದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರು ಸೂಚನೆ ನೀಡಿದ್ದಾರೆ.

    ಕೇರಳ ಪ್ರವಾಹ ಕುರಿತು ಶನಿವಾರ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆದ ಕಾಂಗ್ರೆಸ್ ಸಾಮಾನ್ಯ ಸಭೆಯಲ್ಲಿ ಪಕ್ಷದ ಕಾರ್ಯದರ್ಶಿಗಳು, ರಾಜ್ಯ ಉಸ್ತುವಾರಿ ನಾಯಕರುಗಳು, ರಾಜ್ಯ ಘಟಕದ ಅಧ್ಯಕ್ಷರು ಹಾಗೂ ಶಾಸಕಾಂಗ ನಾಯಕರುಗಳೊಂದಿಗೆ ಚರ್ಚಿಸಿ ಈ ನಿರ್ಧಾರ ತೆಗೆದುಕೊಂಡಿದೆ. ಈ ವೇಳೆ ಪ್ರತಿಕ್ರಿಯಿಸಿದ ರಾಹುಲ್ ಗಾಂಧಿಯವರು, ಕೇಂದ್ರ ಸರ್ಕಾರ ಕೂಡಲೇ ಕೇರಳ ರಾಜ್ಯವನ್ನು ‘ರಾಷ್ಟ್ರೀಯ ವಿಪತ್ತು ರಾಜ್ಯ’ವೆಂದು ಘೋಷಿಸಲು ಆಗ್ರಹಿಸಿದ್ದಾರೆ.

    ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ನ ಮುಖ್ಯ ವಕ್ತಾರ ರಣದೀಪ್ ಸಿಂಗ್ ಸುರ್ಜಿವಾಲಾ, ಕೇರಳದ ಪ್ರವಾಹದಿಂದಾಗಿ ಇಲ್ಲಿಯವರೆಗೂ 180 ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ. ಅಲ್ಲದೇ ಸುಮಾರು 3 ಸಾವಿರಕ್ಕೂ ಹೆಚ್ಚಿನ ಮೌಲ್ಯದ ಆಸ್ತಿ-ಪಾಸ್ತಿ ನಷ್ಟ ಉಂಟಾಗಿದೆ. ಈ ಕುರಿತು ಕೇಂದ್ರ ಸರ್ಕಾರ ಕೇರಳಕ್ಕೆ ಅಗತ್ಯ ನೆರವು ನೀಡಲು ಮುಂದಾಗಬೇಕು. ಮೋದಿ ಸರ್ಕಾರವು ಪರಿಹಾರ ನೀಡುವ ವಿಚಾರದಲ್ಲಿ ತಾರತಮ್ಯ ಧೋರಣೆಯನ್ನು ಮಾಡದೇ, ಕೇರಳ, ಕರ್ನಾಟಕ ಹಾಗೂ ಮತ್ತಿತರ ಪ್ರವಾಹ ಪೀಡಿತ ರಾಜ್ಯಗಳಿಗೆ ಅಗತ್ಯ ನೆರವು ನೀಡುವಂತೆ ಒತ್ತಾಯಿಸಿದ್ದಾರೆ.

    ಎಐಸಿಸಿ ಮೂಲಕ ಕೇರಳ ರಾಜ್ಯಕ್ಕೆ ಪರಿಹಾರ ನೀಡುವ ಸಲುವಾಗಿ ಎಲ್ಲಾ ಲೋಕಸಭೆ, ರಾಜ್ಯಸಭೆ ಸದಸ್ಯರು, ಶಾಸಕರು, ವಿಧಾನಪರಿಷತ್ ಸದಸ್ಯರುಗಳ ಒಂದು ತಿಂಗಳ ವೇತನ ನೀಡುವಂತೆ ಸೂಚಿಸಲಾಗಿದ್ದು, ಪಂಜಾಬ್ ಹಾಗೂ ಕರ್ನಾಟಕ ರಾಜ್ಯ ಸರ್ಕಾರಗಳು ಈಗಾಗಲೇ ಈಗಾಗಲೇ 10 ಕೋಟಿ ರೂಪಾಯಿ ಪರಿಹಾರವನ್ನು ಬಿಡುಗಡೆಮಾಡಿದೆ ಎಂದು ತಿಳಿಸಿದ್ದಾರೆ.

    ಕೇರಳ ಹೊರತು ಪಡಿಸಿ ಕರ್ನಾಟಕದ ಕೆಲವು ಭಾಗಗಳಲ್ಲೂ ಪ್ರವಾಹ ಪರಿಸ್ಥಿತಿ ಎದುರಾಗಿದ್ದು, ಈ ಕುರಿತು ಬೇಕಾಗುವ ಅಗತ್ಯ ನೆರವುಗಳನ್ನು ನೀಡಲು ರಾಜ್ಯ ನಾಯಕರುಗಳಿಗೆ ಸೂಚನೆ ನೀಡಲಾಗಿದೆ. ಕೇರಳ ರಾಜ್ಯಕ್ಕೆ ಪರಿಹಾರ ಸಾಮಾಗ್ರಿಗಳನ್ನು ಸಾಗಿಸುವ ಸಲುವಾಗಿ ಪಾಂಡಿಚೇರಿ ಹೊರತು ಪಡಿಸಿ ಕರ್ನಾಟಕ ಹಾಗೂ ತಮಿನಾಡು ಸೇರಿದಂತೆ ಎಲ್ಲಾ ರಾಜ್ಯಗಳಲ್ಲಿ ವಿಶೇಷ ಪರಿಹಾರ ಸಮಿತಿಯನ್ನು ರಚಿಸಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕೇರಳ, ಕೊಡಗು ಜಲಪ್ರಳಯ: ಕೊಲ್ಲೂರು ದೇವಸ್ಥಾನದಿಂದ 1.25 ಕೋಟಿ ರೂ. ಪರಿಹಾರ ಘೋಷಣೆ

    ಕೇರಳ, ಕೊಡಗು ಜಲಪ್ರಳಯ: ಕೊಲ್ಲೂರು ದೇವಸ್ಥಾನದಿಂದ 1.25 ಕೋಟಿ ರೂ. ಪರಿಹಾರ ಘೋಷಣೆ

    ಉಡುಪಿ: ಕೇರಳ ರಾಜ್ಯದ ಮತ್ತು ಕೊಡಗು ಜಿಲ್ಲೆಯ ಜಲಪ್ರಳಯಕ್ಕೆ ಉಡುಪಿಯ ಕೊಲ್ಲೂರು ದೇವಸ್ಥಾನ ಪರಿಹಾರ ದೇಣಿಗೆ ನೀಡಿದೆ. ದೇವಸ್ಥಾನದ ಆಡಳಿತ ವ್ಯವಸ್ಥಾಪನಾ ಮಂಡಳಿ ಸಭೆ ನಡೆಸಿ ಈ ತೀರ್ಮಾನ ಕೈಗೊಂಡಿದೆ.

    ಕೇರಳ ರಾಜ್ಯಕ್ಕೆ 1 ಕೋಟಿ ರೂಪಾಯಿ ಮತ್ತು ಕೊಡಗು ಜಿಲ್ಲೆಗೆ 25 ಲಕ್ಷ ರೂಪಾಯಿ ನೀಡಲು ನಿರ್ಧರಿಸಿದೆ. ಕೊಡಗು ಜಿಲ್ಲೆಯ ನೆರೆ ಪೀಡಿತ ಪ್ರದೇಶಕ್ಕೆ 25 ಲಕ್ಷ ರೂಪಾಯಿಯನ್ನು ಅಲ್ಲಿನ ಜಿಲ್ಲಾಧಿಕಾರಿಗಳ ಪರಿಹಾರ ನಿಧಿಗೆ ದೇವಸ್ಥಾನದ ಆಡಳಿತ ಮಂಡಳಿ ನೀಡಲಿದೆ. ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಸಿಎಂ ಪರಿಹಾರ ನಿಧಿಗೆ ನೇರವಾಗಿ 1 ಕೋಟಿ ರೂಪಾಯಿಯನ್ನು ದೇವಸ್ಥಾನ ಜಮಾ ಮಾಡುತ್ತದೆ.

    ಉಡುಪಿಯ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಕೇರಳದಿಂದ ಅತೀ ಹೆಚ್ಚು ಭಕ್ತರು ಆಗಮಿಸುತ್ತಾರೆ. ವರ್ಷವಿಡೀ ಕೊಲ್ಲೂರು ಕ್ಷೇತ್ರದಲ್ಲಿ ಶೇಕಡಾ 85 ರಷ್ಟು ಕೇರಳಿಗರೇ ಇರುತ್ತಾರೆ. ಅಲ್ಲಿನ ಜನರ ಮತ್ತು ಕರ್ನಾಟಕದ ಕೊಡವರ ಕಷ್ಟದಲ್ಲಿ ಭಾಗಿಯಾಗುವ ಉದ್ದೇಶದಿಂದ ಕೊಲ್ಲೂರು ವ್ಯವಸ್ಥಾಪನಾ ಮಂಡಳಿ ಈ ನಿರ್ಧಾರ ಕೈಗೊಳ್ಳಲಾಗಿದೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ದೇವಸ್ಥಾನದ ಆಡಳಿತ ಮೊಕ್ತೇಸರ ಹರೀಶ್ ಶೆಟ್ಟಿ, ಕೇರಳ, ಕೊಡಗಿನ ಜನ ಕಷ್ಟದಲ್ಲಿದ್ದಾರೆ. ಕಷ್ಟದಲ್ಲಿ ಇರುವವರ ಸಹಾಯಕ್ಕೆ ನಿಲ್ಲುವುದು ನಮ್ಮ ಜವಾಬ್ದಾರಿ. ತಾಯಿ ಮೂಕಾಂಬಿಕೆಯ ಪ್ರೇರಣೆಯಂತೆ ಈ ಪರಿಹಾರ ಮೊತ್ತವನ್ನು ಘೋಷಣೆ ಮಾಡಲಾಗಿದೆ. ಮೊತ್ತವನ್ನು ಶೀಘ್ರ ತಲುಪಿಸುವ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಸಾಕು ನಾಯಿಗಳನ್ನು ಬಿಟ್ಟು ಬರಲ್ಲ- ರಕ್ಷಣಾ ಸಿಬ್ಬಂದಿಯನ್ನು ವಾಪಾಸ್ ಕಳುಹಿಸಿದ ಮಹಿಳೆ

    ಸಾಕು ನಾಯಿಗಳನ್ನು ಬಿಟ್ಟು ಬರಲ್ಲ- ರಕ್ಷಣಾ ಸಿಬ್ಬಂದಿಯನ್ನು ವಾಪಾಸ್ ಕಳುಹಿಸಿದ ಮಹಿಳೆ

    ತಿರುವನಂತಪುರ: ದೇವರನಾಡು ಕೇರಳದಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ಥಗೊಂಡಿದೆ. ಕೇರಳದ ತ್ರಿಶೂರ್ ಜಿಲ್ಲೆಯಲ್ಲಿ ಪ್ರವಾಹದಲ್ಲಿ ಸಿಲುಕಿದ್ದ ಮಹಿಳೆಯೊಬ್ಬರು ರಕ್ಷಣೆಗೆ ಬಂದಿದ್ದ ಸಿಬ್ಬಂದಿಯನ್ನು ನಾನು ನನ್ನ ಸಾಕು ನಾಯಿಗಳನ್ನು ಬಿಟ್ಟು ಬರಲ್ಲ ಎಂದು ವಾಪಾಸ್ಸು ಕಳುಹಿಸಿದ್ದಾರೆ.

    ಸುನಿತಾ ಎಂಬವರು ಪ್ರವಾಹದಲ್ಲಿ ಸಿಲುಕಿದ್ದರು. ರಕ್ಷಣಾ ಸಿಬ್ಬಂದಿ ಸುನಿತಾರನ್ನು ರಕ್ಷಿಸಲು ತೆರಳಿದ್ದಾಗ, ಮಹಿಳೆ ತನ್ನ 25 ನಾಯಿಗಳೊಂದಿಗೆ ಬರುತ್ತೇನೆ ಅಂತಾ ಹೇಳಿದ್ದಾರೆ. ರಕ್ಷಣಾ ಸಿಬ್ಬಂದಿ ನಾಯಿಗಳ ರಕ್ಷಣೆಗೆ ಹಿಂದೇಟು ಹಾಕಿದ್ದಾರೆ. ನನ್ನ ನಾಯಿಗಳಿಗೆ ರಕ್ಷಣೆ ಕೊಡದಿದ್ದರೆ ನನಗೆ ನಿಮ್ಮ ಸಹಾಯ ಬೇಡ ಎಂದು ಎಲ್ಲರನ್ನು ವಾಪಾಸ್ಸು ಕಳುಸಿದ್ದರು ಎಂದು ರಕ್ಷಣಾ ಸಿಬ್ಬಂದಿ ತಿಳಿಸಿದ್ದಾರೆ.

    ನಾವು ಮಹಿಳೆಯ ಮನೆಗೆ ತೆರಳಿದಾಗ ಹಾಸಿಗೆಯ ಮೇಲೆ ಎಲ್ಲ ನಾಯಿಗಳು ಮದುರಿಕೊಂಡು ಮಲಗಿದ್ದವು. ಮನೆಯ ಎಲ್ಲ ಕಡೆಯಲ್ಲೂ ನೀರು ತುಂಬಿಕೊಂಡಿತ್ತು. ಕೊನೆಗೆ ನಾಯಿಗಳನ್ನು ರಕ್ಷಿಸಲು ಒಪ್ಪಿದಾಗ ಮಹಿಳೆ ನಮ್ಮ ಜೊತೆ ಬರಲು ಸಿದ್ಧರಾದರು ಎಂದು ಇಂಟರ್ ನ್ಯಾಷನಲ್ ಹ್ಯೂಮನ್ ಸೊಸೈಟಿಯ ಸಲ್ಲಿ ವರ್ಮಾ ಹೇಳಿದ್ದಾರೆ.

    ಸದ್ಯ ಸುನಿತಾ, ಅವರ ಪತಿ, ಸಾಕು ನಾಯಿಗಳನ್ನು ಪ್ರವಾಹ ಪೀಡಿತ ಸ್ಥಳದಿಂದ ಸ್ಥಳಾಂತರಿಸಲಾಗಿದೆ. ಅತಿ ಹೆಚ್ಚು ಹಾನಿಗೊಳಗಾದ ತ್ರಿಶೂರ್ ಜಿಲ್ಲೆಯಲ್ಲಿಯೇ ಸುನಿಯಾ ಸಿಲುಕಿಕೊಂಡಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    ಪ್ರಧಾನಿ ನರೇಂದ್ರ ಮೋದಿ ಇಂದು ಕೇರಳದ ಪ್ರವಾಹ ಪೀಡಿತ ಪ್ರದೇಶಗಳ ವೈಮಾನಿಕ ಸಮೀಕ್ಷೆ ನಡೆಸಿ, ರಾಜ್ಯಕ್ಕೆ 500 ಕೋಟಿ ಪರಿಹಾರ ಘೋಷಣೆ ಮಾಡಿದ್ದಾರೆ. ಪ್ರವಾಹದಲ್ಲಿ ಮೃತ ಕುಟುಂಬಸ್ಥರಿಗೆ 2 ಲಕ್ಷ ರೂ. ಮತ್ತು ಗಾಯಾಳುಗಳಿಗೆ 50 ಸಾವಿರ ರೂಪಾಯಿ ಪರಿಹಾರವನ್ನು ಪ್ರಧಾನ ಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಯಿಂದ ನೀಡಲಾಗುವುದು ಎಂದು ತಿಳಿಸಿದ್ದಾರೆ. ಇದೇ ವೇಳೆ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ರಾಜ್ಯಪಾಲ ಪಿ. ಸತಾಶಿವಂ ಹಾಗು ಕೇಂದ್ರ ಪ್ರವಾಸ ಮಂತ್ರಿ ಕೆ.ಜೆ.ಆಲ್ಫೋನ್ಸ್ ರಿಂದ ನೆರೆಗೆ ಸಂಬಂಧಿಸಿದ ಮಾಹಿತಿಯನ್ನು ಪಡೆದುಕೊಂಡಿದ್ದಾರೆ.

  • ಕೇರಳ, ಕೊಡಗಿನಲ್ಲಿ ಭಾರೀ ಮಳೆ-ಮಂಡ್ಯ, ಮೈಸೂರು, ಚಾಮರಾಜನಗರದಲ್ಲಿ ಪ್ರವಾಹ

    ಕೇರಳ, ಕೊಡಗಿನಲ್ಲಿ ಭಾರೀ ಮಳೆ-ಮಂಡ್ಯ, ಮೈಸೂರು, ಚಾಮರಾಜನಗರದಲ್ಲಿ ಪ್ರವಾಹ

    ಬೆಂಗಳೂರು: ಕೇರಳ, ಕೊಡಗಿನಲ್ಲಿ ಸುರಿಯುತ್ತಿರುವ ಮಳೆ ಮೈಸೂರಿನಲ್ಲಿ ನೆರೆ ಸೃಷ್ಟಿಸಿದೆ. ಕಬಿನಿ, ಕೆಆರ್‍ಎಸ್‍ಗೆ ನೀರಿನ ಹರಿವು ಹೆಚ್ಚಾಗಿದ್ದು, ಮಂಡ್ಯ, ಮೈಸೂರು, ಚಾಮರಾಜನಗರದಲ್ಲಿ ಪ್ರವಾಹ ಉಂಟಾಗಿದೆ. ಮಡಿಕೇರಿಯಲ್ಲಿ ವರುಣ ಅಬ್ಬರಿಸುತ್ತಿರೋದ ನೇರ ಪರಿಣಾಮ ಮೈಸೂರು, ಮಂಡ್ಯ ಮತ್ತು ಚಾಮರಾಜನಗರ ಜಿಲ್ಲೆ ಮೇಲಾಗಿದೆ. ತುಂಬಿ ತುಳುಕುತ್ತಿರೋ ಕೆಆರ್‍ಎಸ್ ಮತ್ತು ಕಬಿನಿ ಜಲಾಶಯಗಳಿಂದ 2 ಲಕ್ಷಕ್ಕೂ ಹೆಚ್ಚು ಕ್ಯೂಸೆಕ್ ನೀರು ಹೊರಬಿಡಲಾಗ್ತಿದೆ. ಪರಿಣಾಮ ಎಲ್ಲೆಲ್ಲೂ ಪ್ರವಾಹ ಸ್ಥಿತಿ ಏರ್ಪಟ್ಟಿದೆ.

    ಕಪಿಲಾ ನದಿ ಪ್ರವಾಹಕ್ಕೆ ದಕ್ಷಿಣ ಕಾಶಿ ನಂಜನಗೂಡು ಕ್ಷೇತ್ರ ನಲುಗಿ ಹೋಗಿದೆ. ಹಲವು ದೇವಸ್ಥಾನಗಳು ಈಗಾಗಲೇ ಮುಳುಗಿ ಹೋಗಿವೆ. ಭಕ್ತರ ಪರದಾಟ ಮುಂದುವರೆದಿದೆ. ಪ್ರವಾಹ ಪೀಡಿತ ಪ್ರದೇಶಗಳಿಗೆ ಸಚಿವರಾದ ಜಿಟಿ ದೇವೇಗೌಡ, ಆರ್ ವಿ ದೇಶಪಾಂಡೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕಬಿನಿ ಅಬ್ಬರಕ್ಕೆ ನಂಜನಗೂಡು ರಾಷ್ಟ್ರೀಯ ಹೆದ್ದಾರಿ ಮುಳುಗಡೆಯಾಗಿದೆ. ಮೈಸೂರಿನಿಂದ ತಮಿಳುನಾಡು, ಕೇರಳ, ಚಾಮರಾಜನಗರ ಹಾಗೂ ಗುಂಡ್ಲುಪೇಟೆಗೆ ಸಂಪರ್ಕ ಕಲ್ಪಿಸುವ ಮಾರ್ಗ ಬಂದ್ ಆಗಿದೆ. ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಪರ್ಯಾಯ ರಸ್ತೆಯೂ ಸಹ ಮುಳುಗುವ ಭೀತಿಯಲ್ಲಿದೆ.

    ಕೆಆರ್‍ಎಸ್ ಜಲಾಶಯನಿಂದ ಅಪಾರ ನೀರು ಹೊರಬಿಡಲಾಗ್ತಿರೋ ಕಾರಣ ಶ್ರೀರಂಗಪಟ್ಟಣದ ಮೇಳಾಪುರ ಗ್ರಾಮದಲ್ಲಿರುವ ವಿದ್ಯುತ್ ವಿತರಣಾ ಕೇಂದ್ರ ಜಲಾವೃತವಾಗಿದೆ. ಸುತ್ತಮುತ್ತಲ ಗ್ರಾಮಗಳಲ್ಲಿ ಕತ್ತಲು ಆವರಿಸಿದೆ. ವೆಲ್ಲೆಸ್ಲಿ ಸೇತುವೆ ಮುಳುಗುವ ಭೀತಿಯಲ್ಲಿದ್ದು, ಸೇತುವೆ ಮೇಲೆ ಯಾರೂ ಓಡಾಡದಂತೆ ತಡೆಗೋಡೆ ನಿರ್ಮಿಸಲಾಗಿದೆ.

    ಕೊಳ್ಳೇಗಾಲ ತಾಲೂಕಿನ ಕಾವೇರಿ ಕೊಳ್ಳದ ಹತ್ತಾರು ಗ್ರಾಮಗಳು ಜಲಾವೃತವಾಗಿವೆ. ಪ್ರಾಣ ಉಳಿಸಿಕೊಳ್ಳುವ ಸಲುವಾಗಿ ಜನತೆ ಜಾನುವಾರ ಸಮೇತ ಗ್ರಾಮಗಳನ್ನ ತೊರೆಯುತ್ತಿದ್ದಾರೆ. ಆದರೆ ದಾಸನಪುರದಿಂದ ಬೇರೆ ಕಡೆ ಹೋಗಲು ವೃದ್ಧ ದಂಪತಿ ನಿರಾಕರಿಸುತ್ತಿದ್ದಾರೆ. ಎಲ್ಲೆಲ್ಲೂ ಆತಂಕ ಆವರಿಸಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • 1.5 ಲಕ್ಷರೂ. ದೇಣಿಗೆ ನೀಡಿದ್ಳು ಮೀನು ಮಾರಿ ಟ್ರೋಲಾಗಿದ್ದ ಕೇರಳ ಯುವತಿ!

    1.5 ಲಕ್ಷರೂ. ದೇಣಿಗೆ ನೀಡಿದ್ಳು ಮೀನು ಮಾರಿ ಟ್ರೋಲಾಗಿದ್ದ ಕೇರಳ ಯುವತಿ!

    ತಿರುವನಂತಪುರಂ: ಕಳೆದ ಕೆಲ ದಿನಗಳ ಹಿಂದೆ ಕಾಲೇಜು ಶಿಕ್ಷಣ ಪಡೆಯಲು ಮೀನು ಮಾರಾಟ ಮಾಡಿ ಟ್ರೋಲ್ ಆಗಿದ್ದ ಹಾನನ್ ಹಮೀದ್ ಎಂಬ ಯುವತಿ ಕೇರಳ ಪ್ರವಾಹ ಸಂತ್ರಸ್ತ ನಿಧಿಗೆ 1.5 ಲಕ್ಷ ರೂ. ದೇಣಿಗೆ ನೀಡಿದ್ದಾರೆ.

    ಈ ಕುರಿತು ಪ್ರತಿಕ್ರಿಯೆ ನೀಡಿರುವ ಹಾನನ್ ಹಮೀದ್, ಜನರು ತನಗಾಗಿ ನೀಡಿದನ್ನು ದೇಣಿಗೆಯಾಗಿ ನೀಡಿದ್ದೇನೆ. ನನಗೆ ಸಹಾಯ ಮಾಡಿದ ಹಲವು ಮಂದಿ ಸದ್ಯ ಸಂಕಷ್ಟದಲ್ಲಿದ್ದು. ಅವರ ಸಹಾಯವನ್ನು ಹಿಂದಿರುಗಿಸುವ ಅಗತ್ಯವಿದೆ. ನನ್ನಿಂದ ಇದನ್ನಷ್ಟೇ ಮಾಡಲು ಸಾಧ್ಯ ಎಂದು ಹೇಳಿದ್ದಾರೆ.

    ನಾನು ಈ ಹಣವನ್ನು ನೇರ ಸಿಎಂ ಅವರ ನಿಧಿಗೆ ವರ್ಗಾಹಿಸುತ್ತಿದ್ದೆ. ಆದರೆ ಸದ್ಯ ಮೊಬೈಲ್ ಹಾಗೂ ಬ್ಯಾಕಿಂಗ್ ಸೇವೆ ಲಭ್ಯವಿಲ್ಲ. ಅದ್ದರಿಂದ ನೇರ ಸಿಎಂ ಬಳಿ ತೆರಳಿ ಚೆಕ್ ನೀಡಲಿದ್ದೆನೆ. ನಾನಿರುವ ಪ್ರದೇಶದಲ್ಲಿ ಓಡಾಟ ನಡೆಸಲು ಸಾಧ್ಯವಾದ ಸ್ಥಿತಿ ನಿರ್ಮಾಣವಾಗಿದೆ. ಹಲವರ ಮನೆ ಕೊಚ್ಚಿ ಹೋಗಿದೆ, ಆದರೆ ನನಗೆ ಆ ಸಮಸ್ಯೆ ಇಲ್ಲ. ಏಕೆಂದರೆ ಪ್ರವಾಹದಲ್ಲಿ ಕೊಚ್ಚಿ ಹೋಗಲು ತಮಗೆ ಮನೆಯೇ ಇಲ್ಲ ಎಂದು ಹೇಳಿದ್ದಾರೆ.

    ಅಂದಹಾಗೇ ಕಳೆದ ಆಗಸ್ಟ್ ತಿಂಗಳಿನಲ್ಲಿ ಕಾಲೇಜು ಸಮವಸ್ತ್ರ ಧರಿಸಿ ಮೀನು ಮಾರಾಟ ಮಾಡುತ್ತಿದ್ದರಿಂದ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಆಗಿದ್ದರು. ಬಳಿಕ ಶಿಕ್ಷಣಕ್ಕೆ ನೆರವು ಮಂದಿ ಮುಂದೇ ಬಂದು ಸಹಾಯದ ಅಸ್ತ ಚಾಚಿದ್ದರು. ಬಡ ಕುಟುಂಬ ಯುವತಿಯಾಗಿರುವ ಹಮೀದ್ ತನ್ನ ತಾಯಿ ಹಾಗೂ ತಮ್ಮನ ಜೊತೆ ಜೀವನ ನಿರ್ವಹಣೆ ಹಾಗೂ ಶಿಕ್ಷಣಕ್ಕಾಗಿ ಕಾಲೇಜು ಮುಗಿದ ಬಳಿಕ ಸಣ್ಣ ಸಣ್ಣ ಕೆಲಸ ಮಾಡುತ್ತಾ ಹಣ ಗಳಿಸಿ ತಾಯಿಗೆ ನೆರವಾಗುತ್ತಿದ್ದರು. ಈ ವೇಳೆ ಅವರ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

     

  • ಮಗಳ ನಿಶ್ಚಿತಾರ್ಥ ನಿಲ್ಲಿಸಿ ಪ್ರವಾಹ ಪೀಡಿತರಿಗೆ ಹಣ ನೀಡಿದ ಪತ್ರಕರ್ತ

    ಮಗಳ ನಿಶ್ಚಿತಾರ್ಥ ನಿಲ್ಲಿಸಿ ಪ್ರವಾಹ ಪೀಡಿತರಿಗೆ ಹಣ ನೀಡಿದ ಪತ್ರಕರ್ತ

    ತಿರುವನಂತಪುರ: ಕಳೆದ 15 ದಿನಗಳಿಂದ ಕೇರಳದಲ್ಲಿ ಅತಿವೃಷ್ಟಿಯಿಂದಾಗಿ ಜನಜೀವನ ನರಕದಂತಾಗಿದ್ದು, ದೇಶಾದ್ಯಂತ ಕೇರಳದ ಸಹಾಯಕಕ್ಕೆ ಮುಂದಾಗುತ್ತಿದ್ದಾರೆ. ಕೇರಳದಲ್ಲಿ ಖಾಸಗಿ ಪತ್ರಿಕೆಯ ಪತ್ರಕರ್ತರೊಬ್ಬರು ತಮ್ಮ ಮಗಳ ನಿಶ್ಚಿತಾರ್ಥವನ್ನು ನಿಲ್ಲಿಸಿ, ಕಾರ್ಯಕ್ರಮಕ್ಕೆ ಖರ್ಚು ಮಾಡಲು ಇರಿಸಿದ್ದ ಎಲ್ಲ ಹಣವನ್ನು ಕೇರಳದ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

    ಮನೋಜ್ ಎಂಬವರೇ ಮಗಳ ನಿಶ್ಚಿತಾರ್ಥ ನಿಲ್ಲಿಸಿದ ಪತ್ರಕರ್ತ. ಇದೇ ಭಾನುವಾರ ಕನ್ನೂರಿನಲ್ಲಿ ಮಗಳು ದೇವಿ ಮತ್ತು ಗೋಕುಲ್ ಜೊತೆ ನಿಶ್ಚಿ ತಾರ್ಥವನ್ನು ಗುರು ಹಿರಿಯರ ಸಮ್ಮುಖದಲ್ಲಿ ನಿಶ್ಚಯಿಸಲಾಗಿತ್ತು. ಹಲವು ದಿನಗಳಿಂದ ನಮ್ಮ ರಾಜ್ಯದಲ್ಲಿಯೇ ಪ್ರವಾಹ ಉಂಟಾಗಿ ಜನರು ತೊಂದರೆಯಲ್ಲಿದ್ದಾರೆ. ಈ ಸಂದರ್ಭದಲ್ಲಿ ನಾವು ಸಂತೋಷದಿಂದ ಕಾರ್ಯಕ್ರಮ ಮಾಡೋದು ಸರಿ ಅಲ್ಲ. ಹಾಗಾಗಿ ಅಳಿಯನ ಕುಟುಂಬಸ್ಥರ ಜೊತೆ ಮಾತನಾಡಿ ಅದ್ಧೂರಿ ನಿಶ್ಚಿತಾರ್ಥವನ್ನು ಕ್ಯಾನ್ಸಲ್ ಮಾಡಿದ್ದೇವೆ. ಭಾನುವಾರ ಕೇವಲ ಉಂಗುರವನ್ನು ಬದಲಾಯಿಸಲಾಗುವುದು ಎಂದು ಮನೋಜ್ ತಮ್ಮ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ.

    ಎರಡು ಕುಟುಂಬಸ್ಥರು ಚರ್ಚಿಸಿ ಈ ನಿರ್ಣಯ ತೆಗೆದುಕೊಂಡಿದ್ದು, ನಿಶ್ಚಿತಾರ್ಥಕ್ಕೆ ಮೀಸಲಿರಿಸಿದ್ದ ಹಣವನ್ನ ಕೇರಳ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಲಿದ್ದೇವೆ ಎಂದು ಮಂಜು ಸ್ಪಷ್ಟಪಡಿಸಿದ್ದಾರೆ.

    ಕೇರಳ ದುರಂತ ಪರಿಸ್ಥಿತಿಯನ್ನು ಎದುರಿಸುತ್ತಿದ್ದು, ಈಗಾಗಲೇ ಮೃತಪಟ್ಟವರ ಸಂಖ್ಯೆ 167 ಕ್ಕೆ ಏರಿಕೆಯಾಗಿದೆ ಎಂದು ಸಿಎಂ ಪಿಣರಾಯಿ ವಿಜಯನ್ ಹೇಳಿದ್ದಾರೆ. ಪರಿಸ್ಥಿತಿಯನ್ನು ಸುಧಾರಿಸಲು ಭಾರತೀಯ ಕೋಸ್ಟ್ ಗಾರ್ಡ್ ನ ನಾಲ್ಕು ಹಡಗುಗಳನ್ನು ಕೊಚ್ಚಿನ್ ಗೆ ಕಳುಹಿಸಲಾಗಿದ್ದು, ಈಗಾಗಲೇ ಪ್ರವಾಹ ಪೀಡಿತ ಹಳ್ಳಿಗಳಿಗೆ 24 ತಂಡಗಳು ಕಾರ್ಯಚರಣೆ ಮಾಡುತ್ತಿವೆ. ಐಸಿಜಿ 1,764 ಜನರನ್ನು ರಕ್ಷಿಸಿದ್ದು, 4,688 ಜನರಿಗೆ ಸುರಕ್ಷಿತ ಸ್ಥಳಕ್ಕೆ ತಲುಪಿಸಿದೆ.

    ಶನಿವಾರ ಕಾಸರಗೋಡು ಎರ್ನಾಕುಲಂ ಮತ್ತು ಇಡುಕ್ಕಿ ಒಳಗೊಂಡಂತೆ ಇತರ 13 ಜಿಲ್ಲೆಗಳಿಗೂ ಎಚ್ಚರಿಕೆಯನ್ನು ಸೂಚಿಸಲಾಗಿದೆ. ಶುಕ್ರವಾರ ಬೆಳಗ್ಗೆ 5 ಘಟಕದ ರಾಷ್ಟ್ರೀಯ ವಿಪತ್ತು ಪಡೆ ತಿರುವನಂತಪುರಂ ತಲುಪಿದ್ದು, ಕಾರ್ಯಾಚರಣೆಯಲ್ಲಿ ತೊಡಗಿದೆ. ಇಂದು ಕೂಡ 35 ಸದಸ್ಯರ ತಂಡ ತಲುಪುವ ನೀರಿಕ್ಷೆ ಇದೆ. ಇದೀಗ ಐಸಿಜಿ ಪಡೆಯನ್ನು ವಂಡಿಪೆರಿಯರ್ ನಿಂದ ಮಂಜುಮಾಲಾ ಹಳ್ಳಿಗೆ ಸ್ಥಳಾಂತರಿಸಲಾಗಿದ್ದು, ಅಲ್ಲಿ 16 ಮಂದಿಯನ್ನು ರಕ್ಷಿಸಲಾಗಿದೆ. ಹಾಗೂ ಅವರಿಗೆ ಸೇವಿಸಲು ಆಹಾರ ಪದಾರ್ಥಗಳನ್ನು ನೀಡಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕೇರಳ ಪ್ರವಾಹಕ್ಕೆ ಬಲಿಯಾದವರ ಸಂಖ್ಯೆ 167ಕ್ಕೆ ಏರಿಕೆ: ಭೇಟಿ ನೀಡಲಿದ್ದಾರೆ ಮೋದಿ

    ಕೇರಳ ಪ್ರವಾಹಕ್ಕೆ ಬಲಿಯಾದವರ ಸಂಖ್ಯೆ 167ಕ್ಕೆ ಏರಿಕೆ: ಭೇಟಿ ನೀಡಲಿದ್ದಾರೆ ಮೋದಿ

    ತಿರುವನಂತಪುರಂ: ಕೇರಳದಲ್ಲಿ ಭಾರೀ ಮಳೆಯಿಂದಾಗಿ ಮೃತಪಟ್ಟವರ ಸಂಖ್ಯೆ 167ಕ್ಕೆ ಏರಿಕೆಯಾಗಿದ್ದು, ಪ್ರಧಾನಿ ಮೋದಿ ಈ ಬಗ್ಗೆ ಕೇರಳದ ಸಿಎಂ ಪಿಣರಾಯಿ ವಿಜಯನ್ ಅವರ ಬಳಿ ದೂರವಾಣಿ ಕರೆ ಮಾಡಿ ಮಾಹಿತಿ ಪಡೆದುಕೊಂಡಿದ್ದಾರೆ.

    ಕೇರಳ ಮುಖ್ಯಮಂತ್ರಿ ಜೊತೆ ನೆರೆ ವಿಚಾರದ ಬಗ್ಗೆ ಮಾತನಾಡಿದ್ದೇನೆ. ಅಲ್ಲದೇ ನಾನೇ ಬಂದು ಅಲ್ಲಿನ ಪರಿಸ್ಥಿತಿಗಳನ್ನು ಪರೀಶಿಲಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.

    ಕೇರಳ ದುರಂತ ಪರಿಸ್ಥಿತಿಯನ್ನು ಎದುರಿಸುತ್ತಿದ್ದು, ಈಗಾಗಲೇ ಮೃತಪಟ್ಟವರ ಸಂಖ್ಯೆ 167 ಕ್ಕೆ ಏರಿಕೆಯಾಗಿದೆ ಎಂದು ಸಿಎಂ ಹೇಳಿದ್ದಾರೆ. ಸುಧಾರಿಸಲು ಭಾರತೀಯ ಕೋಸ್ಟ್ ಗಾರ್ಡ್‍ನ ನಾಲ್ಕು ಹಡಗುಗಳನ್ನು ಕೊಚ್ಚಿನ್ ಗೆ ಕಳುಹಿಸಲಾಗಿದ್ದು, ಈಗಾಗಲೇ ಪ್ರವಾಹ ಪೀಡಿತ ಹಳ್ಳಿಗಳಿಗೆ 24 ತಂಡಗಳು ಕಾರ್ಯಚರಣೆ ಮಾಡುತ್ತಿವೆ. ಐಸಿಜಿ 1,764 ಜನರನ್ನು ರಕ್ಷಿಸಿದ್ದು, 4,688 ಜನರಿಗೆ ಸುರಕ್ಷಿತ ಸ್ಥಳಕ್ಕೆ ತಲುಪಿಸಿದೆ.

    ಶನಿವಾರ ಕಾಸರಗೋಡು ಎರ್ನಾಕುಲಂ ಮತ್ತು ಇಡುಕ್ಕಿ ಒಳಗೊಂಡಂತೆ ಇತರ 13 ಜಿಲ್ಲೆಗಳಿಗೂ ಎಚ್ಚರಿಕೆಯನ್ನು ಸೂಚಿಸಲಾಗಿದೆ. ಶುಕ್ರವಾರ ಬೆಳಗ್ಗೆ 5 ಘಟಕದ ರಾಷ್ಟ್ರೀಯ ವಿಪತ್ತು ಪಡೆ ತಿರುವನಂತಪುರಂ ತಲುಪಿದ್ದು, ಕಾರ್ಯಾಚರಣೆಯಲ್ಲಿ ತೊಡಗಿದೆ. ಇಂದು ಕೂಡ 35 ಸದಸ್ಯರ ತಂಡ ತಲುಪುವ ನೀರಿಕ್ಷೆ ಇದೆ. ಇದೀಗ ಐಸಿಜಿ ಪಡೆಯನ್ನು ವಂಡಿಪೆರಿಯರ್ ನಿಂದ ಮಂಜುಮಾಲಾ ಹಳ್ಳಿಗೆ ಸ್ಥಳಾಂತರಿಸಲಾಗಿದ್ದು, ಅಲ್ಲಿ 16 ಮಂದಿಯನ್ನು ರಕ್ಷಿಸಲಾಗಿದೆ. ಹಾಗೂ ಅವರಿಗೆ ಸೇವಿಸಲು ಆಹಾರ ಪದಾರ್ಥಗಳನ್ನು ನೀಡಿದ್ದಾರೆ.

    ಕೊಚ್ಚಿನ್‍ನ ವಿಮಾನ ನಿಲ್ದಾಣದಲ್ಲಿ ನೀರಿನ ಮಟ್ಟ ಹೆಚ್ಚಾಗಿರುವುದರಿಂದ ಸ್ಥಳದಲ್ಲಿ ಕಾರ್ಯಾಚರಣೆ ಸ್ಥಗಿತ ಮಾಡಲಾಗಿದೆ. ಕೇಂದ್ರ ವಿಮಾನಯಾನ ಖಾತೆಯ ಸಚಿವ ಸುರೇಶ್ ಪ್ರಭು ಟ್ವೀಟ್ ಮಾಡಿ, ವಿಮಾನಯಾನ ಕಂಪೆನಿಗಳ ಜೊತೆ ಮಾತನಾಡಿದ್ದೇವೆ. ನೆರೆ ಸಂಬಂಧಿಸಿದಂತೆ ರಕ್ಷಣಾ ಕಾರ್ಯಕ್ಕೆ ತಲುಪಬೇಕಾಗಿರುವ ಸಾಮಾಗ್ರಿಗಳನ್ನು ಉಚಿತವಾಗಿ ತೆಗೆದುಕೊಂಡು ಹೋಗುತ್ತಿರುವುದಕ್ಕೆ ವಿಮಾನಯಾನ ಕಂಪೆನಿಗಳಿಗೆ ಧನ್ಯವಾದವನ್ನು ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ತಡೆಗೋಡೆ ಸಮೇತ ಕುಸಿದು ಬಿದ್ದ ರಸ್ತೆ: ಮಡಿಕೇರಿ-ಕೇರಳ ಸಂಪರ್ಕ ಕಟ್

    ತಡೆಗೋಡೆ ಸಮೇತ ಕುಸಿದು ಬಿದ್ದ ರಸ್ತೆ: ಮಡಿಕೇರಿ-ಕೇರಳ ಸಂಪರ್ಕ ಕಟ್

    ಮಡಿಕೇರಿ: ಕೊಡಗಿನಲ್ಲಿ ಬಿರುಗಾಳಿ ಸಹಿತ ಭಾರೀ ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಈ ಮಧ್ಯೆ ಕೊಡಗು ಅಂತಾರಾಜ್ಯಕ್ಕೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿ 89 ಯನ್ನು ಬಂದ್ ಮಾಡಲಾಗಿದೆ.

    ವಿರಾಜಪೇಟೆ ತಾಲೂಕಿನ ಗೊಣಿಕೊಪ್ಪ, ಶ್ರಿಮಂಗಲ ಕ್ಯಾಲಿಕಟ್ ಸಂಪರ್ಕ ಕಲ್ಪಿಸುವ ರಸ್ತೆಯ ಪೊಕಳತೊಡು ಎಂಬಲ್ಲಿ ತಡೆಗೋಡೆ ಸಮೇತ ರಸ್ತೆ ಕುಸಿದು ಬಿದ್ದಿದೆ. ಈ ಹಿನ್ನೆಲೆಯಲ್ಲಿ ಇದೀಗ ಸ್ಥಳೀಯ ನಿವಾಸಿಗಳಲ್ಲಿನ ಆತಂಕ ಮತ್ತಷ್ಟು ಹೆಚ್ಚಿದೆ.

    ಜಿಲ್ಲೆಯ ವಿವಿಧ ಭಾಗಗಳಿಗೆ ತೆರಳುವ ಬಸ್ ಸಂಚಾರ ಅಸ್ತವ್ಯಸ್ತವಾಗಿದೆ. ಮೊಬೈಲ್ ನೆಟವರ್ಕ್ ಇಲ್ಲದೆ ಗರುವಾರದಿಂದ ಮನೆಯರನ್ನು ಸಂಪರ್ಕಿಸಲು ಸಾಧ್ಯವಾಗದೇ ಜನರ ಪರದಾಡುತ್ತಿದ್ದಾರೆ. ಇದನ್ನೂ ಓದಿ: ಮಹಾಮಳೆಗೆ ಧರೆ ಕುಸಿತ – ಹತ್ತಾರು ಗ್ರಾಮಗಳ ಸಂಪರ್ಕ ಕಟ್

    ಮಹಾಮಳೆಯಿಂದ ಅಪಾಯದಲ್ಲಿ ಸಿಲುಕಿರುವವರ ರಕ್ಷಣಾ ಕಾರ್ಯ ಸೇನಾ ಪಡೆಯ ಎರಡು ತುಕಡಿಯ ಸಹಾಯದಿಂದ ಇಂದು ನಡೆಯುತ್ತಿದೆ. ಈಗಾಗಲೇ ಮಳೆಯಲ್ಲಿ ನಿರಾಶ್ರಿತರಾದವರಿಗೆ 10 ಗಂಜಿಕೇಂದ್ರಗಳನ್ನು ತೆರೆಯಲಾಗಿದ್ದು, ಹೆಲಿಕಾಪ್ಟರ್ ಮೂಲಕ ಕಾರ್ಯಾಚರಣೆ ನಡೆಸಿ ಗುಡ್ಡದಲ್ಲಿ ಸಿಲುಕಿಕೊಂಡವರ ರಕ್ಷಣೆಗೆ ಪ್ರಯತ್ನಿಸಲಾಗುತ್ತಿದೆ. ಕೊಡಗಿನಲ್ಲಿ ಕುಸಿದು ಬಿದ್ದು ರಸ್ತೆ ಸಂಪರ್ಕ ಕಡಿತಕ್ಕೆ ಕಾರಣವಾಗಿರುವ ರಸ್ತೆಗಳ ದುರಸ್ತಿಗಾಗಿ ಲೋಕೋಪಯೋಗಿ ಇಲಾಖೆಯ ಉಪವಿಭಾಗೀಯ ಕಚೇರಿಯನ್ನೇ ಮಡಿಕೇರಿಯಲ್ಲಿ ಇಂದಿನಿಂದ ತೆರೆಯಲಾಗುತ್ತಿದೆ.

    7 ದಿನಗಳಲ್ಲಿ ರಸ್ತೆ ದುರಸ್ತಿ ಕಾರ್ಯಕ್ಕೆ ಎಲ್ಲಾ ರೀತಿಯ ಕ್ರಮ ಕೈಗೊಂಡು ಈಗಾಗಲೇ ಸಂಪರ್ಕ ಕಳೆದುಕೊಂಡ ರಸ್ತೆಗಳ ದುರಸ್ತಿ ನಡೆಸಲಾಗುವುದು. ಸಂಚಾರಕ್ಕೆ ಲೋಕೋಪಯೋಗಿ ಇಲಾಖೆ ವತಿಯಿಂದ ಆದ್ಯತೆಯಂತೆ ಕ್ರಮ ಕೈಗೊಳ್ಳಲಾಗುತ್ತದೆ. ಮಳೆ ಕಡಮೆಯಾದ ಕೂಡಲೇ ಹಾಳಾಗಿರುವ ರಸ್ತೆಗಳು, ಗ್ರಾಮೀಣ ಪ್ರದೇಶಗಳಲ್ಲಿ ಕಂಡು ಬಂದಿರುವ ಸಮಸ್ಯೆಗಳಿಗೆ ಪರಿಹಾರವಾಗಿ ಕಾರ್ಯಾಚರಣೆ ಕೈಗೊಳ್ಳಲಾಗುತ್ತದೆ.

    ಈಗಾಗಲೇ ಸ್ಥಳೀಯರ ನೆರವಿನಿಂದ ಸಂತ್ರಸ್ತರನ್ನು ಮಡಿಕೇರಿಗೆ ಸ್ಥಳಾಂತರಿಸಲಾಗಿದೆ. ನೀರು ಹರಿವು ಹೆಚ್ಚಾಗಿರುವ ಕಡೆಗಳಿಗೆ ತೆರಳಲು ಅಸಾಧ್ಯವಾಗಿರುವ ಸ್ಥಳಗಳಿಗೆ ಹೆಲಿಕಾಪ್ಟರ್ ಮೂಲಕ ರಕ್ಷಣೆ ಮಾಡಬೇಕಿದೆ ಅದರೆ ಹವಾಮಾನ ವೈಪರೀತ್ಯದಿಂದ ಹೆಲಿಕಾಪ್ಟರ್ ಅ ಸ್ಥಳಗಳಿಗೆ ತಲುಪಲು ಕಷ್ಟಕರವಾಗುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕೇರಳದಲ್ಲಿ ಮುಂದುವರಿದ ಮಳೆಯ ರೌದ್ರನರ್ತನ: ಮೃತರ ಸಂಖ್ಯೆ 97ಕ್ಕೆ ಏರಿಕೆ

    ಕೇರಳದಲ್ಲಿ ಮುಂದುವರಿದ ಮಳೆಯ ರೌದ್ರನರ್ತನ: ಮೃತರ ಸಂಖ್ಯೆ 97ಕ್ಕೆ ಏರಿಕೆ

    ತಿರುವನಂತಪುರ: ರಾಜ್ಯದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಬಹುತೇಕ ಎಲ್ಲಾ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಮಳೆಯಿಂದಾಗಿ ರಾಜ್ಯಾದ್ಯಂತ ಮೃತಪಟ್ಟವರ ಸಂಖ್ಯೆ 97ಕ್ಕೆ ಏರಿಕೆಯಾಗಿದೆ.

    ಗುರುವಾರ ಸುರಿದ ಮಳೆಯಿಂದಾಗಿ ರಾಜ್ಯಾದ್ಯಂತ 30 ಮಂದಿ ಮೃತಪಟ್ಟಿದ್ದು, ಇಲ್ಲಿಯವರೆಗೂ ಸುಮಾರು 97 ಮಂದಿ ಮಹಾಮಳೆಗೆ ಆಹುತಿಯಾಗಿದ್ದಾರೆ. ವರದಿಗಳ ಪ್ರಕಾರ ಅಧಿಕೃತವಾಗಿ ಸಾವನ್ನಪ್ಪಿರುವವರ ಸಂಖ್ಯೆ 97 ಆಗಿದೆ. ಆದರೆ ಅನಧಿಕೃತ ಮಾಹಿತಿಗಳ ಪ್ರಕಾರ ಸಾವಿನ ಸಂಖ್ಯೆ ಇನ್ನೂ ಜಾಸ್ತಿಯಾಗಿರುವ ಶಂಕೆ ವ್ಯಕ್ತವಾಗಿದೆ.

    ರಾಜ್ಯದಲ್ಲಿ ಕಂಡು ಕೇಳರಿಯದ ಮಳೆ ಸುರಿಯುತ್ತಿದ್ದು, ರಾಜ್ಯದ ಬಹುತೇಕ ನದಿಗಳು ತುಂಬಿದ ಪರಿಣಾಮ 26 ಜಲಾಶಯಗಳ ಪೈಕಿ 25 ಜಲಾಶಯಗಳಿಂದ ಭಾರೀ ಪ್ರಮಾಣ ನೀರನ್ನು ಹೊರಕ್ಕೆ ಬಿಡಲಾಗಿದೆ. ಸುರಿಯುತ್ತಿರುವ ಮಳೆಯಿಂದಾಗಿ ಕೊಚ್ಚಿ ಅಂತರಾಷ್ಟ್ರೀಯ ನಿಲ್ದಾಣವನ್ನು ಆಗಸ್ಟ್ 26ರವರೆಗೆ ಸಂಪೂರ್ಣ ಬಂದ್ ಮಾಡಲಾಗಿದೆ. ಅಲ್ಲದೇ ದಕ್ಷಿಣ ರೈಲ್ವೇ ಹಾಗೂ ಕೊಚ್ಚಿ ಮೆಟ್ರೋ ಸಂಚಾರವು ಸಹ ತಾತ್ಕಾಲಿಕವಾಗಿ ಬಂದ್ ಆಗಿದೆ. ಈ ಮಧ್ಯೆ ರಾಜ್ಯದಲ್ಲಿ ಓಣಂ ಹಾಗೂ ಪ್ರವಾಹದ ಕಾರಣದಿಂದ ಆಗಸ್ಟ್ 26ರವರೆಗೆ ಎಲ್ಲಾ ಶಾಲಾ-ಕಾಲೇಜುಗಳಿಗೆ ಸರ್ಕಾರ ರಜೆ ಘೋಷಣೆ ಮಾಡಿದೆ.

    ಗುರುವಾರದಿಂದಲೂ ಸರಾಸರಿ ಮಳೆಗಿಂತ ಸುಮಾರು 10 ಪಟ್ಟು ಮಳೆಯ ಪ್ರಮಾಣ ಹೆಚ್ಚಾಗಿದ್ದು, ಶುಕ್ರವಾರವೂ ಸಹ ಭಾರೀ ಮಳೆ ಸುರಿಯುತ್ತದೆಂದು ಹವಾಮಾನ ಇಲಾಖೆ ಸೂಚನೆ ನೀಡಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv