Tag: kerala

  • ಕೊಡಗಿನಲ್ಲಿ 22ರವರೆಗೆ ಭಾರೀ ಮಳೆ ಸಾಧ್ಯತೆ- ಎಚ್ಚರಿಕೆಯಿಂದಿರುವಂತೆ ಜಿಲ್ಲಾಡಳಿತ ಮನವಿ

    ಕೊಡಗಿನಲ್ಲಿ 22ರವರೆಗೆ ಭಾರೀ ಮಳೆ ಸಾಧ್ಯತೆ- ಎಚ್ಚರಿಕೆಯಿಂದಿರುವಂತೆ ಜಿಲ್ಲಾಡಳಿತ ಮನವಿ

    ಕೊಡಗು/ ರಾಯಚೂರು: ಜಿಲ್ಲೆಯಲ್ಲಿ ಗುರುವಾರದಿಂದ ಜುಲೈ 22ರವರೆಗೆ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದ್ದು, ಜಿಲ್ಲೆಯಾದ್ಯಂತ 5 ದಿನ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.

    ಸದ್ಯ ರಾಜ್ಯದ ಬಹುತೇಕ ಕಡೆಯಲ್ಲಿ ಮುಂಗಾರು ಚುರುಕುಗೊಂಡಿದ್ದು, ಕೊಡಗಿನಲ್ಲಿ ಕೂಡ ಉತ್ತಮ ಮಳೆಯಾಗುತ್ತಿದೆ. ಆದ್ರೆ ಜುಲೈ 22ರವರೆಗೆ ಕೊಡಗು ಜಿಲ್ಲೆಯಲ್ಲಿ ಮಳೆರಾಯನ ಆರ್ಭಟ ಜೋರಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಹೀಗಾಗಿ ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲಾಡಳಿತ ಆರೆಂಜ್ ಅಲರ್ಟ್ ಘೋಷಿಸಿದ್ದು, ಜಿಲ್ಲೆಗೆ ಬರುವ ಪ್ರವಾಸಿಗರು ಹಾಗೂ ಸಾರ್ವಜನಿಕರು ಎಚ್ಚರಿಕೆಯಿಂದಿರುವಂತೆ ಮನವಿ ಮಾಡಿದೆ.

    ಬಿಸಿಲುನಾಡು ರಾಯಚೂರಿನಲ್ಲಿ ಕೂಡ ಮಳೆ ಆರಂಭವಾಗಿದ್ದು, ಮಳೆ ಇಲ್ಲದೆ ಕೆಂಗೆಟ್ಟಿದ್ದ ಜನರಿಗೆ ಮೊಗದಲ್ಲಿ ಮಂದಹಾಸ ಮೂಡಿಸಿದೆ. ಮಳೆಯಿಲ್ಲದೆ ಬಿತ್ತನೆ ಮಾಡದೇ ರೈತರು ಕಂಗಾಲಾಗಿ ಕುಳಿತಿದ್ದರು. ಸದ್ಯ ಉತ್ತಮ ಮಳೆಯಾದ ಹಿನ್ನೆಲೆ ಜಿಲ್ಲೆಯಲ್ಲಿ ಕೃಷಿ ಚಟುವಟಿಕೆ ಆರಂಭಕ್ಕೆ ಸಿದ್ದತೆ ನಡೆಸಲಾಗುತ್ತಿದ್ದು, ಜಿಲ್ಲೆಯಾದ್ಯಂತ ಇನ್ನೂ ಉತ್ತಮ ಮಳೆಯಾಗುವ ನಿರೀಕ್ಷೆಯಿದೆ. ಹಾಗೆಯೇ ಕರ್ನಾಟಕ ಕರಾವಳಿ ಮತ್ತು ರಾಜ್ಯದ ದಕ್ಷಿಣ ಒಳನಾಡಿನ ಹಲವೆಡೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟಿದೆ.

    ಒಂದೆಡೆ ಮುಂಗಾರು ಕೊರತೆ ಎದುರಿಸುತ್ತಿರುವ ಕೇರಳದಲ್ಲಿ ಮುಂದಿನ ದಿನಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದ್ದು, ಪ್ರಮುಖವಾಗಿ 6 ಜಿಲ್ಲೆಗಳಲ್ಲಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ. ಇನ್ನೊಂದೆಡೆ ಈಶಾನ್ಯ ರಾಜ್ಯಗಳಲ್ಲಿ ಪ್ರವಾಹ ಮುಂದುವರೆದಿದ್ದು, ಅಸ್ಸಾಂ ಮತ್ತು ಬಿಹಾರದಲ್ಲಿ ಒಟ್ಟು ಈವರೆಗೆ 55 ಮಂದಿ ಮೃತಪಟ್ಟಿದ್ದಾರೆ.

    ಅಸ್ಸಾಂನ 33ರಲ್ಲಿ 31 ಜಿಲ್ಲೆಗಳಲ್ಲಿ ಪ್ರವಾಹ ವ್ಯಾಪಿಸಿದ್ದು, 43 ಲಕ್ಷಕ್ಕೂ ಹೆಚ್ಚು ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮೇಘಾಲಯ, ಮಣಿಪುರ, ಮಿಜೋರಾಂನಲ್ಲಿಯೂ ಪ್ರವಾಹ ಸ್ಥಿತಿ ಉಂಟಾಗಿದೆ. ದೆಹಲಿ, ಹರಿಯಾಣದಲ್ಲೂ ಭಾರೀ ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ದೇಶದ ಉತ್ತರ ಭಾಗದಲ್ಲಿಯೂ ಮಳೆರಾಯನ ಅಬ್ಬರ ಮುಂದುವರಿದಿದ್ದು, ಹಲವೆಡೆ ಪ್ರವಾಹ ಸೃಷ್ಟಿಯಾಗಿದೆ.

  • ಕೇರಳದ ಕಸಾಯಿಖಾನೆಗೆ ಸಾಗಿಸುತ್ತಿದ್ದ ಗೋವುಗಳ ರಕ್ಷಣೆ-ಇಬ್ಬರ ಬಂಧನ

    ಕೇರಳದ ಕಸಾಯಿಖಾನೆಗೆ ಸಾಗಿಸುತ್ತಿದ್ದ ಗೋವುಗಳ ರಕ್ಷಣೆ-ಇಬ್ಬರ ಬಂಧನ

    ರಾಮನಗರ: ಕೇರಳದ ಕಸಾಯಿಖಾನೆಗೆ ಸಾಗಿಸುತ್ತಿದ್ದ 20ಕ್ಕೂ ಹೆಚ್ಚು ಗೋವುಗಳನ್ನು ಸಾರ್ವಜನಿಕರೇ ರಕ್ಷಣೆ ಮಾಡಿರುವ ಘಟನೆ ಚನ್ನಪಟ್ಟಣದ ಸುಣ್ಣಘಟ್ಟ ಬಳಿ ನಡೆದಿದೆ.

    ಇಂದು ಚನ್ನಪಟ್ಟಣದ ಸಾತನೂರು-ಹಲಗೂರು ರಸ್ತೆಯಲ್ಲಿ ಟೆಂಪೋದಲ್ಲಿ ಸಾಗಿಸುತ್ತಿದ್ದ ವೇಳೆ ಸಾರ್ವಜನಿಕರು ವಾಹನವನ್ನು ತಡೆದು ನಿಲ್ಲಿಸಿದ್ದಾರೆ. ಬಳಿಕ ಟೆಂಪೋವನ್ನು ಪರಿಶೀಲನೆ ನಡೆಸಲಾಗಿದ್ದು, 20ಕ್ಕೂ ಹೆಚ್ಚು ಗೋವುಗಳನ್ನು ಹಗ್ಗಗಳಿಂದ ಕಟ್ಟಿ, ಚೀಲದಲ್ಲಿ ಕಟ್ಟಿ ಹಾಕಿದ್ದು ಕಂಡುಬಂದಿದೆ.

    ಕೂಡಲೇ ಟೆಂಪೋದಲ್ಲಿದ್ದವರನ್ನು ಸಾರ್ವಜನಿಕರು ಪ್ರಶ್ನಿಸಿದ್ದು, ಯಾವುದಕ್ಕೂ ಉತ್ತರಿಸಿಲ್ಲ. ಸ್ಥಳಕ್ಕೆ ಭೇಟಿ ನೀಡಿದ ಚನ್ನಪಟ್ಟಣ ಗ್ರಾಮಾಂತರ ಪೊಲೀಸರು ಗೋವುಗಳನ್ನು ಕೇರಳಕ್ಕೆ ಕಸಾಯಿಖಾನೆಗೆ ಸಾಗಾಟ ಮಾಡುತ್ತಿದ್ದ ಅಲೀಮ್ ಹಾಗೂ ಅಬ್ಬಾಸ್ ಎಂಬವರನ್ನು ಬಂಧಿಸಿದ್ದಾರೆ. ಟೆಂಪೋ ಚಾಲಕ ಅಯಾಜ್ ಎಂಬಾತ ಪರಾರಿಯಾಗಿದ್ದಾನೆ. ಘಟನೆ ಸಂಬಂಧ ಚನ್ನಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ರಕ್ಷಿಸಿದ ಗೋವುಗಳನ್ನು ರಾಮನಗರದಲ್ಲಿನ ಗೋವು ಸಂರಕ್ಷಣಾ ಕೇಂದ್ರಕ್ಕೆ ರವಾನಿಸಲಾಗಿದೆ.

  • ಆರೋಗ್ಯಕರ ರಾಜ್ಯಗಳ ಪಟ್ಟಿ ಬಿಡುಗಡೆ- ಕೇರಳ ಫಸ್ಟ್, ಉತ್ತರ ಪ್ರದೇಶ ಲಾಸ್ಟ್

    ಆರೋಗ್ಯಕರ ರಾಜ್ಯಗಳ ಪಟ್ಟಿ ಬಿಡುಗಡೆ- ಕೇರಳ ಫಸ್ಟ್, ಉತ್ತರ ಪ್ರದೇಶ ಲಾಸ್ಟ್

    -8ನೇ ಸ್ಥಾನದಲ್ಲಿ ಕರ್ನಾಟಕ

    ನವದೆಹಲಿ: ದೇಶದಲ್ಲಿ ಆರೋಗ್ಯಕರ ರಾಜ್ಯಗಳ ಪಟ್ಟಿ ಬಿಡುಗಡೆಯಾಗಿದ್ದು, ಅದರಲ್ಲಿ ಕೇರಳ ಮೊದಲ ಸ್ಥಾನ ಪಡೆದುಕೊಂಡರೆ ಕರ್ನಾಟಕ 8 ನೇ ಸ್ಥಾನದಲ್ಲಿದೆ.

    ಮಂಗಳವಾರ ನೀತಿ ಆಯೋಗವು ದೇಶದ ಆರೋಗ್ಯಕರ ರಾಜ್ಯಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಕೇರಳ ಟಾಪರ್ ಆದರೆ ಕರ್ನಾಟಕ 8ನೇ ಸ್ಥಾನದಲ್ಲಿದೆ. ಉತ್ತರ ಪ್ರದೇಶಕ್ಕೆ ಕೊನೆಯ ಸ್ಥಾನ ಸಿಕ್ಕಿದೆ.

    23 ಮಾನದಂಡಗಳನ್ನು ಗಣನೆಗೆ ತೆಗೆದುಕೊಂಡು ಈ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಈ ಆಧಾರದ ಮೇಲೆ ತಯಾರು ಮಾಡಿದ್ದ ‘ಆರೋಗ್ಯಕರ ರಾಜ್ಯಗಳು ಮತ್ತು ಪ್ರಗತಿಶೀಲ ಭಾರತ’ “Healthy States, Progressive India” ಎಂಬ ವರದಿಯನ್ನು ನೀತಿ ಆಯೋಗದ ಉಪಾಧ್ಯಕ್ಷ ಡಾ. ರಾಜೀವ್ ಕುಮಾರ್ ಬಿಡುಗಡೆ ಮಾಡಿದರು. ಈ ವರದಿಯ ಪ್ರಕಾರ ಆರೋಗ್ಯ ಸೂಚ್ಯಂಕದಲ್ಲಿ ಬಿಹಾರ ಹಾಗೂ ಉತ್ತರ ಪ್ರದೇಶ ತೀರಾ ಹಿಂದುಳಿದಿದೆ ಎಂದು ಹೇಳಿದೆ.

    ಕೇರಳದ ನಂತರದ ಸ್ಥಾನದಲ್ಲಿ ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರ ಎರಡು ಮತ್ತು ಮೂರನೇ ಸ್ಥಾನದಲ್ಲಿದ್ದು, ಉತ್ತಮ ಆರೋಗ್ಯ ಮಟ್ಟವನ್ನು ಕಾಪಾಡಿಕೊಂಡು ಬಂದಿವೆ. ಇವುಗಳನ್ನು ಬಿಟ್ಟರೆ ಹರಿಯಾಣ, ರಾಜಸ್ಥಾನ ಮತ್ತು ಜಾರ್ಖಂಡ್ ಆರೋಗ್ಯ ಗುಣಮಟ್ಟದಲ್ಲಿ ಸುಧಾರಣೆ ಆಗಿದೆ. ಆದರೆ ಛತ್ತೀಸ್‍ಗಢ ಅತಿ ಕಡಿಮೆ ಗುಣಮಟ್ಟ ಸಾಧಿಸಿರುವ ರಾಜ್ಯವಾಗಿದೆ.

    2018ರ ಫೆಬ್ರವರಿಯಲ್ಲಿ ಬಿಡುಗಡೆಯಾಗಿದ್ದ ಮೊದಲ ಹಂತದ ಆರೋಗ್ಯ ಸೂಚ್ಯಂಕಕ್ಕಾಗಿ 2014-15 ರಿಂದ 2015-16ರ ಅವಧಿಯ ನಿರ್ವಹಣೆಯನ್ನು ಪರಿಗಣಿಸಲಾಗಿತ್ತು. ಎರಡನೇ ಹಂತದ ಆರೋಗ್ಯ ಸೂಚ್ಯಂಕಕ್ಕಾಗಿ 2015-16 ರಿಂದ 2017-18ರ ಅವಧಿಯ ನಿರ್ವಹಣೆಯನ್ನು ಗಣನೆಗೆ ತೆಗೆದುಕೊಳ್ಳಲಾಗಿದೆ.

    ಮೊದಲ ಹತ್ತು ಆರೋಗ್ಯಕರ ರಾಜ್ಯಗಳು
    1. ಕೇರಳ
    2. ಆಂಧ್ರ ಪ್ರದೇಶ
    3. ಮಹಾರಾಷ್ಟ್ರ
    4. ಗುಜರಾತ್
    5. ಪಂಜಾಬ್
    6. ಹಿಮಾಚಲ ಪ್ರದೇಶ
    7. ಜಮ್ಮು -ಕಾಶ್ಮೀರ
    8. ಕರ್ನಾಟಕ
    9. ತಮಿಳುನಾಡು
    10. ತೆಲಂಗಾಣ

  • ಮದ್ವೆಯಾದ 4 ತಿಂಗಳಿಗೆ ಮಗುವಿಗೆ ಜನ್ಮ ನೀಡಿದ ಶಿಕ್ಷಕಿ

    ಮದ್ವೆಯಾದ 4 ತಿಂಗಳಿಗೆ ಮಗುವಿಗೆ ಜನ್ಮ ನೀಡಿದ ಶಿಕ್ಷಕಿ

    – ಮತ್ತೆ ಕೆಲಸಕ್ಕೆ ಹಾಜರಾಗದಂತೆ ಶಾಲಾ ಮಂಡಳಿ ಸೂಚನೆ

    ತಿರುವನಂತಪುರಂ: ಪ್ರಾಥಮಿಕ ಪಾಠ ಶಾಲೆಯ ಶಿಕ್ಷಕಿ ಮದುವೆಯಾದ 4 ತಿಂಗಳಿಗೆ ಮಗುವಿಗೆ ಜನ್ಮ ನೀಡಿದ್ದು, ಈ ಕಾರಣವನ್ನೇ ನೀಡಿ ಶಾಲಾ ಮಂಡಳಿ ಶಿಕ್ಷಕಿಯನ್ನ ಕೆಲಸಕ್ಕೆ ಹಾಜರಾಗದಂತೆ ತಿಳಿಸಿದೆ.

    ಮದುವೆಯಾದ 4 ತಿಂಗಳಿಗೆ ಹೆರಿಗೆ ರಜೆಯನ್ನು ಹೇಗೆ ನೀಡಲಾಗುತ್ತದೆ ಎಂದು ಶಾಲೆಯಿಂದ ಶಿಕ್ಷಕಿಯನ್ನು ಅಮಾನತು ಮಾಡಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆ ಸದ್ಯ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

    ಏನಿದು ಪ್ರಕರಣ:
    ಶಾಲಾ ಶಿಕ್ಷಕಿಗೆ ಈಗಾಗಲೇ ಮದುವೆಯಾಗಿದ್ದು, ಪತಿಯೊಂದಿಗೆ ವೈಮನಸ್ಸು ಉಂಟಾದ ಹಿನ್ನೆಲೆಯಲ್ಲಿ ವಿಚ್ಛೇದನ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೆ ಈ ಪ್ರಕ್ರಿಯೆ ತಡವಾಗಿ ನಡೆಯುತ್ತಿದ್ದ ಕಾರಣ ಶಿಕ್ಷಕಿ ಮತ್ತೊಬ್ಬ ಪುರುಷನೊಂದಿಗೆ ಲೀವಿಂಗ್ ಟುಗೇದರ್ ನಲ್ಲಿ ಇದ್ದರು. ಆ ಬಳಿಕ ಮೊದಲ ಪತಿಯಿಂದ ವಿಚ್ಛೇದನ ಪಡೆದ ಶಿಕ್ಷಕಿ ತಾನು ಲೀವಿಂಗ್ ಟುಗೇದರ್ ಸಂಬಂಧದಲ್ಲಿದ್ದ ಪುರುಷನನ್ನು ಮದುವೆಯಾಗಿದ್ದು, ಮದುವೆಯಾದ ನಾಲ್ಕು ತಿಂಗಳ ಬಳಿಕ ಮಗುವಿಗೆ ಜನ್ಮ ನೀಡಿದ್ದಾರೆ.

    ಸದ್ಯ ಪೊಲೀಸರಿಗೆ ದೂರು ನೀಡಿರುವ ಶಿಕ್ಷಕಿ, ತನ್ನ ವೈಯಕ್ತಿಕ ಜೀವನದ ಬಗ್ಗೆ ಪ್ರಶ್ನೆ ಮಾಡಲು ಶಾಲಾ ಆಡಳಿತ ಮಂಡಳಿ ಹಾಗೂ ಪೋಷಕರಿಗೆ ಯಾವುದೇ ಹಕ್ಕಿಲ್ಲ. ಆದ್ದರಿಂದ ತಮಗೇ ಪುನಃ ಶಾಲೆಯಲ್ಲಿ ಕೆಲಸಕ್ಕೆ ಹಾಜರಾಲು ಅವಕಾಶ ನೀಡಬೇಕೆಂದು ಕೋರಿದ್ದಾರೆ. ಶಿಕ್ಷಕಿಯ ದೂರು ಪಡೆದಿರುವ ಪೊಲೀಸರು ಸದ್ಯ ಪ್ರಕರಣದ ಬಗ್ಗೆ ವಿಚಾರಣೆ ನಡೆಸುತ್ತಿದ್ದಾರೆ.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]

  • ಮಹಿಳಾ ಪೊಲೀಸ್ ಅಧಿಕಾರಿಯ ಹತ್ಯೆ ಮಾಡಿದ್ದ ಆರೋಪಿಯೂ ಸಾವು

    ಮಹಿಳಾ ಪೊಲೀಸ್ ಅಧಿಕಾರಿಯ ಹತ್ಯೆ ಮಾಡಿದ್ದ ಆರೋಪಿಯೂ ಸಾವು

    ತಿರುವನಂತಪುರಂ: ಕೇರಳದ ಮಹಿಳಾ ಪೊಲೀಸ್ ಅಧಿಕಾರಿ ಸೌಮ್ಯಾ ಪುಷ್ಪಕರಣ್ ಅವರನ್ನು ಹತ್ಯೆ ಮಾಡಿದ್ದ ಆರೋಪಿಯೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ.

    ಅಜಾಝ್(34) ಮೃತ ಆರೋಪಿ. ಈತ ಪೊಲೀಸ್ ಪೇದೆಯಾಗಿದ್ದನು. ಜೂನ್ 15 ರಂದು ವಲ್ಲಿಕುನ್ನಂ ಪೊಲೀಸ್ ಠಾಣೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಮಹಿಳಾ ಪೊಲೀಸ್ ಅಧಿಕಾರಿ ಸೌಮ್ಯ ಪುಷ್ಕರನ್ ಕೆಲಸ ಮುಗಿಸಿ ಮನೆಗೆ ಬರುವಾಗ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಿದ್ದನು.

    ಈ ಘಟನೆ ವೇಳೆ ಆರೋಪಿಗೂ ಬೆಂಕಿ ತಗುಲಿದ್ದು, ಶೇ.50 ರಷ್ಟು ಭಾಗ ಆತನ ದೇಹವೂ ಸುಟ್ಟುಹೋಗಿತ್ತು. ತಕ್ಷಣವೇ ಸ್ಥಳೀಯರು ಆತನನ್ನು ಅಲಪ್ಪುಳ ವೈದ್ಯಕೀಯ ಕಾಲೇಜಿಗೆ ದಾಖಲಿಸಿ, ಐಸಿಯುನಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅಜಾಝ್ ಬುಧವಾರ ಸಂಜೆ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

    ಕೊಲೆ:
    ಸೌಮ್ಯಾ ಅವರು ಜೂನ್ 15 ಶನಿವಾರ ಕೆಲಸ ಮುಗಿಸಿ ಬೈಕ್‍ನಲ್ಲಿ ಮನೆಗೆ ಹೋಗುತ್ತಿದ್ದರು. ಈ ವೇಳೆ ಕಾರಿನಲ್ಲಿ ಬಂದ ಅಜಾಝ್ ಸೌಮ್ಯಾ ಬೈಕ್‍ಗೆ ಗುದ್ದಿ ಕೆಳಗೆ ಬೀಳಿಸಿದ್ದ. ಅಜಾಝ್ ತನ್ನನ್ನು ಕೊಲೆ ಮಾಡಲು ಬಂದಿದ್ದಾನೆ ಎಂದು ಅರಿತ ಸೌಮ್ಯಾ ಓಡಲು ಆರಂಭಿಸಿದ್ದರು. ತಕ್ಷಣವೇ ಹಿಂಬಾಲಿಸಿದ ಆರೋಪಿ, ಚಾಕುನಿಂದ ಇರಿದು, ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದನು. ಗಂಭೀರವಾಗಿ ಗಾಯಗೊಂಡಿದ್ದ ಸೌಮ್ಯಾ ಸ್ಥಳದಲ್ಲಿಯೇ ಮೃತಪಟ್ಟಿದ್ದರು.

    ಮೂರು ವರ್ಷದ ಸ್ನೇಹ:
    ಸೌಮ್ಯಾ ಅಜಾಝ್‍ನನ್ನು ತಿಸ್ಸೂರ್ ಪೊಲೀಸ್ ಅಕಾಡೆಮಿಯಲ್ಲಿ ತರಬೇತಿಯ ಸಂದರ್ಭದಲ್ಲಿ ಭೇಟಿಯಾಗಿದ್ದರು. ನಂತರ ಫೇಸ್‍ಬುಕ್‍ನಲ್ಲಿ ಗೆಳೆತನವಾಗಿತ್ತು. ಈ ಮೂಲಕ ಇಬ್ಬರ ಮಧ್ಯೆ ಕಳೆದ ಮೂರು ವರ್ಷಗಳಿಂದ ಸ್ನೇಹವಿತ್ತು. ಅಜಾಝ್ ಸ್ನೇಹದ ಬಗ್ಗೆ ಸೌಮ್ಯಾರ ತಾಯಿ ಇಂದಿರಾಗೆ ಮಾತ್ರ ಗೊತ್ತಿತ್ತು. ಅಷ್ಟೇ ಅಲ್ಲದೆ ಅವರಿಬ್ಬರ ಮಧ್ಯೆ ಹಣಕಾಸಿನ ವ್ಯವಹಾರ ಕೂಡ ನಡೆದಿದ್ದವು ಎಂದು ಸಬ್‌ ಇನ್ಸ್‌ಪೆಕ್ಟರ್‌ ಮಾಹಿತಿ ನೀಡಿದ್ದರು.

    ಸೌಮ್ಯಾ ಅವರ ಪತಿ ವಿದೇಶದಲ್ಲಿ ಕೆಲಸ ಮಾಡುತ್ತಿದ್ದರಿಂದ ತಾಯಿ ಹಾಗೂ ಮೂವರು ಮಕ್ಕಳ ಜೊತೆಗೆ ವಾಸಿಸುತ್ತಿದ್ದರು. ಹೀಗಾಗಿ ಸೌಮ್ಯಾ ತಾಯಿಯೊಂದಿಗೆ ತನ್ನ ಜೀವನದ ಎಲ್ಲಾ ವಿಚಾರಗಳನ್ನು ಹೇಳಿಕೊಳ್ಳುತ್ತಿದ್ದಳು. ಈ ಮಧ್ಯೆ ಅಜಾಝ್ ಸೌಮ್ಯಾರನ್ನು ವಿವಾಹವಾಗಬೇಕೆಂದು ಆಸೆಪಟ್ಟು, ಪತಿ ಮತ್ತು ಮಕ್ಕಳನ್ನು ಬಿಟ್ಟು ಬರುವಂತೆ ಪೀಡಿಸುತ್ತಿದ್ದ. ಈ ಸ್ನೇಹ ತನ್ನ ಜೀವನಕ್ಕೆ ಮುಳುವಾಗುತ್ತದೆ ಎಂದು ಅರಿತ ಸೌಮ್ಯಾ ಅವರು ಅಜಾಝ್‍ನಿಂದ ದೂರವಿರಲು ಯತ್ನಿಸಿದ್ದರು ಎಂದು ಸೈಜು ಇಬ್ರಾಹಿಂ ಹೇಳಿದ್ದರು.

    ವಾಟ್ಸಪ್ ನಂಬರ್ ಬ್ಲಾಕ್:
    ಅಜಾಝ್ ಮಾತ್ರ ಸೌಮ್ಯಾರನ್ನು ಮದುವೆಯಾಗಲೇಬೇಕು ಎಂದು ನಿರ್ಧರಿಸಿದ್ದ. ಈ ವಿಚಾರವಾಗಿ ಇಬ್ಬರ ಮಧ್ಯೆ ಮನಸ್ತಾಪ ಉಂಟಾಗಿ ಸೌಮ್ಯಾ ಅಜಾಝ್‍ನ ವಾಟ್ಸಪ್ ನಂಬರ್ ಅನ್ನು ಬ್ಲಾಕ್ ಮಾಡಿದ್ದರು. ಅಷ್ಟೇ ಅಲ್ಲದೆ ಆತನ ಮೊಬೈಲ್ ಕರೆಗಳನ್ನು ನಿರಾಕರಿಸಿದ್ದರು. ಇದರಿಂದ ಕೋಪಗೊಂಡ ಅಜಾಝ್ ಕೊಲೆ ಮಾಡಿ ಬೆಂಕಿ ಹಚ್ಚಿದ್ದನು. ಬಳಿಕ ಆತನು ಕೂಡ ಆತ್ಮಹತ್ಯೆಗೆ ಯತ್ನಿಸಿದ್ದ ಎಂದು ಸೈಜು ಇಬ್ರಾಹಿಂ ಹೇಳಿದ್ದಾರೆ.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]

  • ಪ್ರಮಾಣ ವಚನ ಸ್ವೀಕಾರ ಬಳಿಕ ಸಹಿ ಮಾಡೋದನ್ನ ಮರೆತ ರಾಹುಲ್

    ಪ್ರಮಾಣ ವಚನ ಸ್ವೀಕಾರ ಬಳಿಕ ಸಹಿ ಮಾಡೋದನ್ನ ಮರೆತ ರಾಹುಲ್

    ನವದೆಹಲಿ: 4ನೇ ಬಾರಿಗೆ ಸಂಸದರಾಗಿ ಆಯ್ಕೆಯಾಗಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಇಂದು ಸದನದಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡಿದರು. ಆದರೆ ಈ ವೇಳೆ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಸಹಿ ಮಾಡದೆ ಮುಂದೆ ಸಾಗಿದ ಘಟನೆ ನಡೆಯಿತು.

    17ನೇ ಲೋಕಸಭೆಯ ಮೊದಲ ಸಂಸತ್ ಅಧಿವೇಶನ ಇಂದು ಆರಂಭವಾಯಿತು. ಸಂಸತ್‍ಗೆ ರಾಹುಲ್ ತಡವಾಗಿ ಆಗಮಿಸಿದ್ದರು. ಇದಕ್ಕೂ ಮುನ್ನ ಹಲವು ನಾಯಕರು ರಾಹುಲ್ ಸಂಸತ್‍ಗೆ ಆಗಮಿಸದೆ ಅಗೌರವ ತೋರಿದ್ದಾರೆ ಎಂದು ಆರೋಪಿಸಿದ್ದರು.

    ಸಂಸತ್ ಆಗಮಿಸಿದ ರಾಹುಲ್ ಪ್ರಮಾಣ ವಚನ ಸ್ವೀಕರಿಸಿ ಮುಂದೇ ಸಾಗಿದರು. ಈ ಹಂತದಲ್ಲಿ ರಾಜ್‍ನಾಥ್ ಸಿಂಗ್ ಅವರು ರಾಹುಲ್‍ಗೆ ಸಹಿ ಮಾಡುವಂತೆ ತಿಳಿಸಿದರು. ಪುನಃ ಮರಳಿದ ರಾಹುಲ್ ಸಹಿ ಮಾಡಿ ಸ್ಪೀಕರ್ ಬಳಿ ತೆರಳಿ ಶುಭ ಕೋರಿದರು. ಬಳಿಕ ಪಕ್ಷದ ಮುಖಂಡ ಬಳಿ ತೆರಳಿ ಶುಭ ಕೋರಿದರು. ಈ ಸಂದರ್ಭದಲ್ಲಿ ಸೋನಿಯಾ ಗಾಂಧಿ ಅವರು ಕೂಡ ಸಂಸತ್ ನಲ್ಲಿ ಹಾಜರಿದ್ದರು.

    ಪ್ರಮಾಣ ವಚನ ಸ್ವೀಕರಿಸುವ ಮುನ್ನ ಟ್ವೀಟ್ ಮಾಡಿದ್ದ ರಾಹುಲ್ ಗಾಂಧಿ, 4ನೇ ಬಾರಿಗೆ ಲೋಕಸಭಾ ಸಂಸತ್ ಸದಸ್ಯರಾಗಿ ಇಂದಿನಿಂದ ಕಾರ್ಯಾರಂಭ ಮಾಡುತ್ತಿದ್ದು, ಕೇರಳ ವಯಾನಾಡು ಜನತೆಗೆ ಧನ್ಯವಾದ. ಪ್ರಮಾಣ ವಚನ ಸ್ವೀಕರಿಸುವ ಮೂಲಕ ಹೊಸ ಇನ್ನಿಂಗ್ಸ್ ಶುರು ಮಾಡುತ್ತಿದ್ದೇನೆ. ಭಾರತದ ಸಂವಿಧಾನದಲ್ಲಿ ನಿಷ್ಠೆ ಮತ್ತು ನಂಬಿಕೆಯನ್ನು ಹೊಂದಿರುತ್ತೇನೆ ಎಂದು ತಿಳಿಸಿದ್ದರು.

    ರಾಹುಲ್ ಗಾಂಧಿ ಅವರು ಈ ಬಾರಿ 2 ಕ್ಷೇತ್ರಗಳಿಂದ ಸಂಸತ್ ಚುನಾವಣೆಯಲ್ಲಿ ಸ್ಪರ್ಧಿಸಿ ಅಮೇಥಿಯಲ್ಲಿ ಸ್ಮೃತಿ ಇರಾನಿ ವಿರುದ್ಧ ಸೋಲುಂಡು, ಕೇರಳ ವಯನಾಡಿಯಲ್ಲಿ ಗೆಲುವು ಪಡೆದಿದ್ದರು.

  • ವಾಟ್ಸಪ್ ನಂಬರ್ ಬ್ಲಾಕ್ ಮಾಡಿ, ಕರೆ ಸ್ವೀಕರಿಸದ್ದಕ್ಕೆ ಗೆಳತಿಗೆ ಬೆಂಕಿ ಹಚ್ಚಿ ಕೊಂದ

    ವಾಟ್ಸಪ್ ನಂಬರ್ ಬ್ಲಾಕ್ ಮಾಡಿ, ಕರೆ ಸ್ವೀಕರಿಸದ್ದಕ್ಕೆ ಗೆಳತಿಗೆ ಬೆಂಕಿ ಹಚ್ಚಿ ಕೊಂದ

    – ಕೇರಳ ಮಹಿಳಾ ಪೊಲೀಸ್ ಅಧಿಕಾರಿ ಕೊಲೆಯ ಸತ್ಯ ಬಿಚ್ಚಿಟ್ಟ ಆರೋಪಿ
    – ಮದುವೆ ಆಗುವಂತೆ ಪೀಡಿಸುತ್ತಿದ್ದ ಹಂತಕ

    ತಿರುವನಂತಪುರಂ: ಕೇರಳದ ಮಹಿಳಾ ಪೊಲೀಸ್ ಅಧಿಕಾರಿ ಸೌಮ್ಯಾ ಪುಷ್ಪಕರಣ್ ಅವರನ್ನು ಹತ್ಯೆ ಮಾಡಿದ್ದ ಆರೋಪಿ ನಿಜವಾದ ಕಾರಣವನ್ನು ಬಾಯಿಬಿಟ್ಟಿದ್ದಾನೆ.

    ಆರೋಪಿ ಅಜಾಝ್‍ನನ್ನು ಬಂಧಿಸಿ ತೀವ್ರ ವಿಚಾರಣೆಗೆ ಒಳಪಡಿಸಲಾಗಿತ್ತು. ಈ ವೇಳೆ ಸೌಮ್ಯಾ ಪುಷ್ಪಕರಣ್ ಅವರನ್ನು ಕೊಂದು ತಾನು ಆತ್ಮಹತ್ಯೆ ಮಾಡಿಕೊಳ್ಳಲು ಅಜಾಝ್ ನಿರ್ಧರಿಸಿದ್ದ ಎಂಬ ಮಾಹಿತಿ ಅಭ್ಯವಾಗಿದೆ ಎಂದು ವಲ್ಲಿಕುನ್ನಂ ಪೊಲೀಸ್ ಠಾಣೆ ಸಬ್ ಇನ್‍ಸ್ಪೆಕ್ಟರ್ ಸೈಜು ಇಬ್ರಾಹಿಂ ತಿಳಿಸಿದ್ದಾರೆ.

    ಮೂರು ವರ್ಷದ ಸ್ನೇಹ:
    ಸೌಮ್ಯಾ ಅಜಾಝ್‍ನನ್ನು ತಿಸ್ಸೂರ್ ಪೊಲೀಸ್ ಅಕಾಡೆಮಿಯಲ್ಲಿ ತರಬೇತಿಯ ಸಂದರ್ಭದಲ್ಲಿ ಭೇಟಿಯಾಗಿದ್ದರು. ನಂತರ ಫೇಸ್‍ಬುಕ್‍ನಲ್ಲಿ ಗೆಳೆತನವಾಗಿತ್ತು. ಈ ಮೂಲಕ ಇಬ್ಬರ ಮಧ್ಯೆ ಕಳೆದ ಮೂರು ವರ್ಷಗಳಿಂದ ಸ್ನೇಹವಿತ್ತು. ಅಜಾಝ್ ಸ್ನೇಹದ ಬಗ್ಗೆ ಸೌಮ್ಯಾರ ತಾಯಿ ಇಂದಿರಾಗೆ ಮಾತ್ರ ಗೊತ್ತಿತ್ತು. ಅಷ್ಟೇ ಅಲ್ಲದೆ ಅವರಿಬ್ಬರ ಮಧ್ಯೆ ಹಣಕಾಸಿನ ವ್ಯವಹಾರ ಕೂಡ ನಡೆದಿದ್ದವು ಎಂದು ಸಬ್ ಇನ್‍ಸ್ಪೆಕ್ಟರ್ ಮಾಹಿತಿ ನೀಡಿದ್ದಾರೆ.

    ಸೌಮ್ಯಾ ಅವರ ಪತಿ ವಿದೇಶದಲ್ಲಿ ಕೆಲಸ ಮಾಡುತ್ತಿದ್ದರಿಂದ ತಾಯಿ ಹಾಗೂ ಮೂವರು ಮಕ್ಕಳ ಜೊತೆಗೆ ವಾಸಿಸುತ್ತಿದ್ದರು. ಹೀಗಾಗಿ ಸೌಮ್ಯಾ ತಾಯಿಯೊಂದಿಗೆ ತನ್ನ ಜೀವನದ ಎಲ್ಲಾ ವಿಚಾರಗಳನ್ನು ಹೇಳಿಕೊಳ್ಳುತ್ತಿದ್ದಳು. ಈ ಮಧ್ಯೆ ಅಜಾಝ್ ಸೌಮ್ಯಾರನ್ನು ವಿವಾಹವಾಗಬೇಕೆಂದು ಆಸೆಪಟ್ಟು, ಪತಿ ಮತ್ತು ಮಕ್ಕಳನ್ನು ಬಿಟ್ಟು ಬರುವಂತೆ ಪೀಡಿಸುತ್ತಿದ್ದ. ಈ ಸ್ನೇಹ ತನ್ನ ಜೀವನಕ್ಕೆ ಮುಳುವಾಗುತ್ತದೆ ಎಂದು ಅರಿತ ಸೌಮ್ಯಾ ಅವರು ಅಜಾಝ್‍ನಿಂದ ದೂರವಿರಲು ಯತ್ನಿಸಿದ್ದರು ಎಂದು ಸೈಜು ಇಬ್ರಾಹಿಂ ಹೇಳಿದ್ದಾರೆ.

    ವಾಟ್ಸಪ್ ನಂಬರ್ ಬ್ಲಾಕ್:
    ಅಜಾಝ್ ಮಾತ್ರ ಸೌಮ್ಯಾರನ್ನು ಮದುವೆಯಾಗಲೇಬೇಕು ಎಂದು ನಿರ್ಧರಿಸಿದ್ದ. ಈ ವಿಚಾರವಾಗಿ ಇಬ್ಬರ ಮಧ್ಯೆ ಮನಸ್ತಾಪ ಉಂಟಾಗಿ ಸೌಮ್ಯಾ ಅಜಾಝ್‍ನ ವಾಟ್ಸಪ್ ನಂಬರ್ ಅನ್ನು ಬ್ಲಾಕ್ ಮಾಡಿದ್ದರು. ಅಷ್ಟೇ ಅಲ್ಲದೆ ಆತನ ಮೊಬೈಲ್ ಕರೆಗಳನ್ನು ನಿರಾಕರಿಸಿದ್ದರು. ಇದರಿಂದ ಕೋಪಗೊಂಡ ಅಜಾಝ್ ಕೊಲೆ ಮಾಡಿ ಬೆಂಕಿ ಹಚ್ಚಿದ್ದ. ಬಳಿಕ ಆತನು ಕೂಡ ಆತ್ಮಹತ್ಯೆಗೆ ಯತ್ನಿಸಿದ್ದ ಎಂದು ಸೈಜು ಇಬ್ರಾಹಿಂ ಹೇಳಿದ್ದಾರೆ.

    ತನಿಖೆಯ ಪ್ರಕಾರ ಅಜಾಜ್ ಸೌಮ್ಯಾರನ್ನು ಉದ್ದೇಶ ಪೂರ್ವಕವಾಗಿಯೇ ಕೊಲೆ ಮಾಡಿದ್ದಾನೆ. ಕರ್ತವ್ಯನಿರತ ಪೊಲೀಸ್ ಅಧಿಕಾರಿಯಾಗಿ ಅಪರಾಧಗಳ ಪರಿಣಾಮವನ್ನು ಚೆನ್ನಾಗಿ ಬಲ್ಲವನಾಗಿದ್ದ. ಯಾವುದೋ ಮಾರುಕಟ್ಟೆಯಿಂದ ಹರಿತವಾದ ಚಾಕುವೊಂದನ್ನು ಖರೀದಿಸಿದ್ದು, ಕೃತ್ಯಕ್ಕೆ ಬಳಸಿದ್ದಾನೆ ಎಂದರು.

    ಸೌಮ್ಯ ತಾಯಿ ಕಣ್ಣೀರು:
    ಮಾಧ್ಯಮಗಳೊಂದಿಗೆ ಮಾತನಾಡಿದ ಸೌಮ್ಯಾರ ತಾಯಿ, ಈ ಹಿಂದೆಯೂ ಅಜಾಝ್ ಇದೇ ರೀತಿ ಮಾಡಿದ್ದ. ಒಂದು ಬಾರಿ ಆಕೆಯ ಮೇಲೆ ಪೆಟ್ರೋಲ್ ಸುರಿದು, ಬೆನ್ನಿಗೆ ಶೂನಿಂದ ಅಮಾನುಷವಾಗಿ ಹೊಡೆದಿದ್ದ. ಇದಾದ ಬಳಿಕ ನಾನು ಅವನೊಂದಿಗೆ ಮಾತನಾಡುವುದಾಗಿ ತಿಳಿಸಿದ್ದೆ. ಆದರೆ ನನ್ನನ್ನು ತಡೆದಿದ್ದ ಸೌಮ್ಯಾ, ನಾವು ಸುಮ್ಮನಿದ್ದರೆ ಅಜಾಝ್ ತನ್ನಪಾಡಿಗೆ ತಾನು ಇರುತ್ತಾನೆ ಎಂದು ಹೇಳಿದ್ದಳು. ಈಗ ಮಗಳು ಆತನ ನೀಚನ ಕೃತ್ಯಕ್ಕೆ ಬಲಿಯಾಗಿದ್ದಾಳೆ ಎಂದು ಕಣ್ಣೀರು ಹಾಕಿದರು.

    ಸೌಮ್ಯಾರ ತಂದೆ ಹಾಸಿಗೆ ಹಿಡಿದಿದ್ದರಿಂದ ತಾಯಿ ಇಂದಿರಾ ಮಕ್ಕಳನ್ನು ಬಟ್ಟೆ ಹೊಲಿದು ಸಾಕಿದ್ದರು. ಸೌಮ್ಯಾರ ಗಂಡ ವಿದೇಶದಲ್ಲಿ ಕೆಲಸಮಾಡುತ್ತಿದ್ದು, ಆಕೆಗೆ 10 ವರ್ಷ ಮತ್ತು 7 ವರ್ಷದ ಗಂಡು ಮಕ್ಕಳು ಮತ್ತು 4 ವರ್ಷದ ಹೆಣ್ಣು ಮಗುವಿದೆ. ದೊಡ್ಡ ಮಕ್ಕಳು ತಮ್ಮ ತಾಯಿಯ ಸಾವಿನ ಸುದ್ದಿಯಿಂದ ಆಘಾತಕಾರಿ ಸ್ಥಿತಿಯಲ್ಲಿದ್ದು, ಚಿಕ್ಕ ಮಗುವಿಗೆ ಏನಾಗಿದೆ ಎಂಬುದು ಸಹ ತಿಳಿದಿಲ್ಲ ಎಂದು ಸಬ್ ಇನ್‍ಸ್ಪೆಕ್ಟರ್ ಸೈಜು ಇಬ್ರಾಹಿಂ ಭಾವುಕರಾದರು.

    ಈ ಹಿಂದೆ ಆಗಿದ್ದೇನು?:
    ಸೌಮ್ಯಾ ಅವರು ಶನಿವಾರ ಕೆಲಸ ಮುಗಿಸಿ ಬೈಕ್‍ನಲ್ಲಿ ಮನೆಗೆ ಹೋಗುತ್ತಿದ್ದರು. ಈ ವೇಳೆ ಕಾರಿನಲ್ಲಿ ಬಂದ ಅಜಾಝ್ ಸೌಮ್ಯಾ ಅವರ ಬೈಕ್‍ಗೆ ಗುದ್ದಿ ಕೆಳಗೆ ಬೀಳಿಸಿದ್ದ. ಅಜಾಝ್ ತನ್ನನ್ನು ಕೊಲೆ ಮಾಡಲು ಬಂದಿದ್ದಾನೆ ಎಂದು ಅರಿತ ಸೌಮ್ಯಾ ಓಡಲು ಆರಂಭಿಸಿದ್ದರು. ತಕ್ಷಣವೇ ಹಿಂಬಾಲಿಸಿದ ಆರೋಪಿ, ಚಾಕುನಿಂದ ಇರಿದು, ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದ. ಗಂಭೀರವಾಗಿ ಗಾಯಗೊಂಡಿದ್ದ ಸೌಮ್ಯಾ ಸ್ಥಳದಲ್ಲಿಯೇ ಮೃತಪಟ್ಟಿದ್ದರು.

    ಸೌಮ್ಯಾರನ್ನು ಕೊಲೆ ಮಾಡಿ ಆತ್ಮಹತ್ಯೆಗೆ ಯತ್ನಿಸಿದ್ದ ಆರೋಪಿ ಅಜಾಝ್ ಬೆಂಕಿ ಹಚ್ಚಿಕೊಂಡಿದ್ದ. ಆದರೆ ಬದುಕಿ ಉಳಿದಿದ್ದ ಆತನ ದೇಹದ ಮೇಲೆ ಶೇ. 50 ರಷ್ಟು ಸುಟ್ಟ ಗಾಯಗಳಾಗಿದ್ದವು. ತಕ್ಷಣವೇ ಆತನನ್ನು ಅಲಪ್ಪುಳ ವೈದ್ಯಕೀಯ ಕಾಲೇಜಿಗೆ ದಾಖಲಿಸಿ, ಐಸಿಯುನಲ್ಲಿ ಇರಿಸಿ ಚಿಕಿತ್ಸೆ ಕೊಡಿಸಲಾಗಿತ್ತು.

  • ಸ್ಕೂಟಿಗೆ ಡಿಕ್ಕಿ ಹೊಡೆದು ಬೀಳಿಸಿ, ಚಾಕುವಿನಿಂದ ಇರಿದು ಬೆಂಕಿ ಹಚ್ಚಿ ಕೊಲೆಗೈದ

    ಸ್ಕೂಟಿಗೆ ಡಿಕ್ಕಿ ಹೊಡೆದು ಬೀಳಿಸಿ, ಚಾಕುವಿನಿಂದ ಇರಿದು ಬೆಂಕಿ ಹಚ್ಚಿ ಕೊಲೆಗೈದ

    ತಿರುವನಂತಪುರಂ: ಮಹಿಳಾ ಪೊಲೀಸ್ ಅಧಿಕಾರಿಗೆ ಓರ್ವ ಟ್ರಾಫಿಕ್ ಪೊಲೀಸ್ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಕೊಲೆಗೈದ ಘಟನೆ ಕೇರಳದಲ್ಲಿ ಇಂದು ನಡೆದಿದೆ.

    ಸೌಮ್ಯಾ ಪುಷ್ಪಕರಣ್ (34) ಮೃತ ಮಹಿಳಾ ಪೊಲೀಸ್ ಅಧಿಕಾರಿ. ಅಜಾಝ್ ಕೃತ್ಯ ಎಸಗಿದ ಟ್ರಾಫಿಕ್ ಪೊಲೀಸ್. ಘಟನೆಯಲ್ಲಿ ಅಜಾಝ್ ಕೂಡ ಗಂಭೀರವಾಗಿ ಗಾಯಗೊಂಡಿದ್ದಾನೆ.

    ಸೌಮ್ಯಾ ಪುಷ್ಪಕರಣ್ ಅಲಪ್ಪುಳ ಜಿಲ್ಲೆಯ ವಲ್ಲಿಕುನ್ನಂ ಪೊಲೀಸ್ ಠಾಣೆಯ ಸಿಪಿಓ (Civil Police Officer) ಆಗಿದ್ದರು. ಆರೋಪಿ ಅಜಾಝ್ ಅಲುವಾ ಟ್ರಾಫಿಕ್ ಪೊಲೀಸ್ ಠಾಣೆಯ ಸಿಬ್ಬಂದಿ. ಆದರೆ ಕೊಲೆಗೆ ಕಾರಣ ತಿಳಿದು ಬಂದಿಲ್ಲ.

    ಆಗಿದ್ದೇನು?:
    ಸೌಮ್ಯಾ ಅವರು ಕೆಲಸ ಮುಗಿಸಿ ಬೈಕ್‍ನಲ್ಲಿ ಇಂದು ಮಧ್ಯಾಹ್ನ 3:30ಕ್ಕೆ ಮನೆಗೆ ಹೋಗುತ್ತಿದ್ದರು. ಈ ವೇಳೆ ಕಾರಿನಲ್ಲಿ ಬಂದ ಅಜಾಝ್ ಸೌಮ್ಯಾ ಅವರ ಬೈಕ್‍ಗೆ ಗುದ್ದಿ ಕೆಳಗೆ ಬೀಳಿಸಿದ್ದಾನೆ. ಅಜಾಝ್ ವರ್ತನೆ ಕೊಲೆ ಮಾಡಲು ಬಂದಿದ್ದಾನೆ ಎಂದು ಅರಿತ ಸೌಮ್ಯಾ ಓಡಲು ಆರಂಭಿಸಿದ್ದಾರೆ. ತಕ್ಷಣವೇ ಹಿಂಬಾಲಿಸಿದ ಆರೋಪಿ, ಚಾಕುನಿಂದ ಇರಿದು, ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾನೆ. ಗಂಭೀರವಾಗಿ ಗಾಯಗೊಂಡಿದ್ದ ಸೌಮ್ಯಾ ಅವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

    ಈ ಘಟನೆಯಲ್ಲಿ ಅಜಾಝ್‍ಗೂ ಬೆಂಕಿ ತಗುಲಿದ್ದು, ಆತನ ದೇಹದ ಮೇಲೆ ಶೇ. 50 ರಷ್ಟು ಸುಟ್ಟ ಗಾಯಗಳಾಗಿವೆ. ಗಂಭೀರವಾಗಿ ಗಾಯಗೊಂಡಿರುವ ಆರೋಪಿಯನ್ನು ಅಲಪ್ಪುಳ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿದ್ದು, ಐಸಿಯುನಲ್ಲಿ ಇರಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

    ಸೌಮ್ಯಾ ಅವರು ಪತಿ ಸಂಜೀವ್, ಮೂವರು ಮಕ್ಕಳನ್ನು ಅಗಲಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸಲಾಗುತ್ತದೆ ಎಂದು ಅಲಪ್ಪುಳ ಜಿಲ್ಲಾ ಪೊಲೀಸ್ ಮುಖ್ಯಸ್ಥ ಕೆ.ಎಂ.ಟಾಮಿ ತಿಳಿಸಿದ್ದಾರೆ.

  • ತಾಯಿಯ ಪುನರ್ ವಿವಾಹದ ಬಗ್ಗೆ ಮಗನ ಭಾವನಾತ್ಮಕ ಪೋಸ್ಟ್ – ನೆಟ್ಟಿಗರಿಂದ ಶ್ಲಾಘನೆ

    ತಾಯಿಯ ಪುನರ್ ವಿವಾಹದ ಬಗ್ಗೆ ಮಗನ ಭಾವನಾತ್ಮಕ ಪೋಸ್ಟ್ – ನೆಟ್ಟಿಗರಿಂದ ಶ್ಲಾಘನೆ

    ತಿರುವನಂತಪುರಂ: ಕೇರಳದ ಕೊಲ್ಲಂ ಜಿಲ್ಲೆಯಲ್ಲಿ ಮಗನೊಬ್ಬ ತನ್ನ ತಾಯಿ ಪುನರ್ ವಿವಾಹ ಆಗಿದ್ದಕ್ಕೆ ಶುಭಾಶಯವನ್ನು ಕೋರಿ ಫೇಸ್‍ಬುಕ್‍ನಲ್ಲಿ ಪೋಸ್ಟ್ ಮಾಡಿದ್ದಾನೆ. ಇದೀಗ ಆ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

    ಗೋಕುಲ್ ಶ್ರೀಧರ್ ತಾಯಿಯ ಪುನರ್ ವಿವಾಹಕ್ಕೆ ಶುಭಾಶಯ ಕೋರಿ ಪೋಸ್ಟ್ ಮಾಡಿದ್ದಾನೆ. ಶ್ರೀಧರ್ ಕೊಲ್ಲಂನಲ್ಲಿ ಎಂಜಿನಿಯರ್ ವ್ಯಾಸಂಗ ಮಾಡುತ್ತಿದ್ದಾನೆ. ತಾಯಿಯ ತ್ಯಾಗದ ಬಗ್ಗೆ ನೆನಪಿಸಿಕೊಂಡು ಬರೆದು ಫೇಸ್‍ಬುಕ್‍ನಲ್ಲಿ ಪೋಸ್ಟ್ ಮಾಡಿದ್ದಾನೆ.

    ಶ್ರೀಧರ್ ‘ಇದು ನನ್ನ ತಾಯಿಯ ವಿವಾಹವಾಗಿದ್ದು’ ಎಂದು ಮಲೆಯಾಳಂ ಭಾಷೆಯಲ್ಲಿ ಬರೆದಿದ್ದು, ಜೊತೆಗೆ ತನ್ನ ತಾಯಿಯ ಫೋಟೋವನ್ನು ಹಂಚಿಕೊಂಡಿದ್ದಾನೆ.

    ಪೋಸ್ಟ್ ನಲ್ಲಿ ಏನಿದೆ?
    ನನ್ನನ್ನು ಹೆತ್ತು, ನನಗಾಗಿ ಬದುಕು ನಡೆಸಿಕೊಂಡು ಬಂದು, ನನ್ನ ಯಶಸ್ಸಿಗಾಗಿ ತನ್ನ ಜೀವನವನ್ನೇ ಮುಡಿಪಾಗಿಟ್ಟರು. ನನ್ನ ತಾಯಿಯ ಮೊದಲನೇ ಮದುವೆಯಿಂದ ಸಾಕಷ್ಟು ನೋವು ಅನುಭವಿಸಿದ್ದಾರೆ ಎಂದು ಹೇಳಿಕೊಂಡಿದ್ದಾನೆ. ಅದರಲ್ಲಿ ಒಂದು ಘಟನೆಯನ್ನು ನೆನಪಿಸಿಕೊಂಡು “ಒಮ್ಮೆ ಪತಿಯಿಂದ ಹೊಡೆಸಿಕೊಂಡು ತಲೆಯಿಂದ ರಕ್ತ ಸೋರುತ್ತಿದ್ದನ್ನು ನೋಡಿದೆ. ಆಗ ನಾನು ಯಾಕೆ ಇಷ್ಟು ಕಷ್ಟವನ್ನು ಸಹಿಸಿಕೊಳ್ಳುತ್ತಿದ್ದೀಯಾ? ಎಂದು ಪ್ರಶ್ನೆ ಮಾಡಿದ್ದೆ. ಅದಕ್ಕೆ ಅಮ್ಮ ನಿನಗಾಗಿ ನಾನು ಬದುಕುತ್ತಿದ್ದೇನೆ. ಹೀಗಾಗಿ ನಿನಗಾಗಿ ನಾನು ಇದೆಲ್ಲವನ್ನು ಸಹಿಸಿಕೊಳ್ಳುತ್ತಿರುವುದು ಎಂದು ಹೇಳಿದ್ದರು ಎಂದು ಪೋಸ್ಟ್ ನಲ್ಲಿ ತಿಳಿಸಿದ್ದಾನೆ.

    ಕೊನೆಗೆ ನನ್ನ ತಾಯಿ ಮೊದಲನೆ ಪತಿಯನ್ನು ಬಿಟ್ಟು ನನ್ನ ಕೈಯನ್ನು ಹಿಡಿದು ಆ ಮನೆಯಿಂದ ಹೊರಬಂದರು. ಆಗ ನಾನು ತಾಯಿಗೆ ಪುನರ್ ವಿವಾಹವನ್ನು ಮಾಡಬೇಕು ಎಂದು ನಿರ್ಧರಿಸಿದ್ದೆ. ಆಗ ನಾನು 10ನೇ ತರಗತಿಯಲ್ಲಿ ಓದುತ್ತಿದ್ದೆ. ನನ್ನ ತಾಯಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದರು. ಅಮ್ಮ ನನಗಾಗಿ ಅವರ ಕಸುಗಳೆಲ್ಲವನ್ನು ತ್ಯಾಗ ಮಾಡಿದ್ದರು. ನಂತರ ಅಮ್ಮ ಕೆಲಸ ಬಿಟ್ಟರು. ಈಗ ನಾನು ಕೆಲಸದ ನೆಪದಲ್ಲಿ ದೂರ ಹೋದರೆ ಅಮ್ಮ ಒಬ್ಬಂಟಿಯಾಗುತ್ತಾರೆಂದು ಪುನರ್ ವಿವಾಹದ ಬಗ್ಗೆ ತಾಯಿಗೆ ಹೇಳಿದೆ.

    https://www.facebook.com/gokul.sreedar/posts/2056174421177935

    ಮೊದಲಿಗೆ ಅವರು ಒಪ್ಪಲಿಲ್ಲ. ಅಮ್ಮನ ಸಹೋದ್ಯೋಗಿಗಳ ಕಡೆಯಿಂದಲೇ ಪುನರ್ ವಿವಾಹ ಸಂಬಂಧ ಬಂದಿತ್ತು. ನಂತರ ನಾನು ಬಲವಂತ ಮಾಡಿ ಒಪ್ಪಿಸಿದೆ. ಈಗ ಅಮ್ಮ ಮರು ಮದುವೆಯಾಗಿ ಸಂತೋಷದಿಂದ ಇದ್ದಾರೆ ಎಂದು ಬರೆದಿದ್ದಾನೆ.

    ಶ್ರೀಧರ್ ಈ ಪೋಸ್ಟ್ ಮಾಡಿದ ಬಳಿಕ ಇದುವರೆಗೂ 37,000 ಜನರು ಲೈಕ್ಸ್ ಮಾಡಿದ್ದು, 4.1 ಸಾವಿರ ಮಂದಿ ಶೇರ್ ಮಾಡಿದ್ದಾರೆ. ಅಷ್ಟೇ ಅಲ್ಲದೇ 3.3 ಸಾವಿರ ಜನರು ಕಮೆಂಟ್ಸ್ ಮೂಲಕ ಶುಭಕೋರಿದ್ದಾರೆ. ಜೊತೆಗೆ ಮಗನ ಕಾರ್ಯವನ್ನು ಶ್ಲಾಘಿಸಿದ್ದಾರೆ.

  • ಐಎಂಎ ಮನ್ಸೂರ್‌ಗೆ ಭಯೋತ್ಪಾದಕರ ಜೊತೆ ನಂಟಿದೆ – ಶೋಭಾ ಕರಂದ್ಲಾಜೆ ಗಂಭೀರ ಆರೋಪ

    ಐಎಂಎ ಮನ್ಸೂರ್‌ಗೆ ಭಯೋತ್ಪಾದಕರ ಜೊತೆ ನಂಟಿದೆ – ಶೋಭಾ ಕರಂದ್ಲಾಜೆ ಗಂಭೀರ ಆರೋಪ

    ಬೆಂಗಳೂರು: ಐಎಂಎ ಮಾಲೀಕ ಮನ್ಸೂರ್ ಪರಾರಿ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಅವರು ಹೊಸ ಬಾಂಬ್ ಸಿಡಿಸಿದ್ದು, ಮೊಹಮದ್ ಮನ್ಸೂರ್ ಗೆ ಭಯೋತ್ಪಾದಕರೊಂದಿಗೆ ನಂಟಿದೆ ಎಂಬ ಅನುಮಾನ ಇದ್ದು, ಈ ಕುರಿತು ಸಮಗ್ರ ತನಿಖೆ ನಡೆಯಬೇಕಿದೆ ಎಂದು ಆಗ್ರಹಿಸಿದ್ದಾರೆ.

    ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಐಎಂಎ ಸಂಸ್ಥೆಗೆ ಪಿಎಫ್‍ಐ ಸಂಘಟನೆಯ ನಂಟಿರುವ ಸಂಶಯ ಇದ್ದು, ಪಿಎಫ್‍ಐ ಸಂಘಟನೆಗೆ ಐಎಂಎ ಮೂಲಕ ಹಣಕಾಸು ನೆರವು ನೀಡಿರುವ ಆರೋಪ ಇದೆ. ಇಂತಹ ಸಂಸ್ಥೆ ಜನರಿಗೆ ಮೋಸ ಮಾಡಿದ್ದು, ಜನರಿಗೆ ವಂಚಿಸಿ ಬಹುಕೋಟಿ ಹಣ ಲೂಟಿ ಮಾಡಿದ್ದಾರೆ ಎಂದರು.

    ಐಎಂಎ ಪ್ರಕರಣದಲ್ಲಿ ಕಾಂಗ್ರೆಸ್ ಪಕ್ಷದ ರೋಷನ್ ಬೇಗ್, ಜಮೀರ್ ಅಹಮದ್ ಹೆಸರು ಕೇಳಿ ಬರುತ್ತಿದೆ. ಆದ ಕಾರಣ ಸರ್ಕಾರ ಈ ಕಾಂಗ್ರೆಸ್ ಮುಖಂಡರ ಆಸ್ತಿ ಜಪ್ತಿ ಮಾಡಿ ಮೋಸ ಹೋದ ಬಡ ಜನರಿಗೆ ನೀಡಬೇಕು. ಅಲ್ಲದೇ ಪ್ರಕರಣವನ್ನು ಸಿಬಿಐ ಮತ್ತು ಇಡಿ ತನಿಖೆಗೆ ವಹಿಸಬೇಕಿದೆ ಎಂದು ಆಗ್ರಹಿಸಿದರು.

    ಭಯೋತ್ಪಾದಕ ಕೆಲಸಗಳಿಗೆ ನೆರವು ನೀಡಿರುವ ಬಗ್ಗೆಯೂ ತನಿಖೆ ನಡೆಯಬೇಕಿದ್ದು, ರಾಷ್ಟ್ರೀಯ ಭದ್ರತೆ ದೃಷ್ಟಿಯಿಂದ ಇದು ಅಗತ್ಯವಾಗಿದೆ. ಒಂದು ವರ್ಷದ ಹಿಂದೆಯೇ ಕೇರಳದ ನಮ್ಮ ಕಾರ್ಯಕರ್ತರೊಬ್ಬರು ಈ ಬಗ್ಗೆ ಮಾಹಿತಿ ನೀಡಿದ್ದರು. ಆ ವೇಳೆಯೇ ನನ್ನ ಸಂಪರ್ಕದಲ್ಲಿದ್ದ ಹಲವು ಮಂದಿಗೆ ಈ ಸಂಸ್ಥೆಯಲ್ಲಿ ಹಣ ಹೂಡಿಕೆ ಮಾಡದಂತೆ ಹೇಳಿದ್ದೆ. ಆದರೆ ಸದ್ಯ ಬಡ ಜನರಿಗೆ ಮೋಸ ಆಗಿದ್ದು, ಸಮಗ್ರ ತನಿಖೆ ಅಗತ್ಯವಿದೆ ಎಂದರು.