Tag: Kerala Story

  • ಕೇರಳ ಸ್ಟೋರಿ ಸಿನಿಮಾ ನೋಡಿದ್ರೆ ಮತಾಂತರ ನಿಷೇಧ ಕಾಯ್ದೆಯನ್ನ ತಿದ್ದುಪಡಿ ಮಾಡಲ್ಲ: ಈಶ್ವರಪ್ಪ

    ಕೇರಳ ಸ್ಟೋರಿ ಸಿನಿಮಾ ನೋಡಿದ್ರೆ ಮತಾಂತರ ನಿಷೇಧ ಕಾಯ್ದೆಯನ್ನ ತಿದ್ದುಪಡಿ ಮಾಡಲ್ಲ: ಈಶ್ವರಪ್ಪ

    ಬೆಂಗಳೂರು: ದಿ ಕೇರಳ ಸ್ಟೋರಿ (Kerala Story) ಸಿನಿಮಾ ನೋಡಿದ್ರೆ ಕಾಂಗ್ರೆಸ್ ಸರ್ಕಾರ ಖಂಡಿತಾ ಮತಾಂತರ ನಿಷೇಧ ಕಾಯ್ದೆಯನ್ನ ತಿದ್ದುಪಡಿ ಮಾಡಲ್ಲ ಎಂದು ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ (KS Eshwarappa) ಗುಡುಗಿದ್ದಾರೆ.

    ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ (Yediyurappa) ಅವರ ನೇತೃತ್ವದಲ್ಲಿ ಇಲ್ಲಿನ ಫ್ರೀಡಂ ಪಾರ್ಕ್‌ನಲ್ಲಿ ಕಾಂಗ್ರೆಸ್ ಗ್ಯಾರಂಟಿ ವಿರೋಧಿ ನಡೆಯುತ್ತಿರುವ ಪ್ರತಿಭಟನೆಯನ್ನುದ್ದೇಶಿಸಿ ಅವರು ಮಾತನಾಡಿದ್ದಾರೆ. ಇದನ್ನೂ ಓದಿ: 5 ಭಾಗ್ಯಗಳನ್ನು ಘೋಷಣೆ ಮಾಡಿ ಕಾಂಗ್ರೆಸ್ ಸುಳ್ಳು ಹೇಳಿದೆ: ಕಟೀಲ್

    ಬೇಕಿದ್ರೆ ಕಾಂಗ್ರೆಸ್ ಮಂತ್ರಿಗಳು ಬರಲಿ. ನಾನೇ ಕರೆದುಕೊಂಡು ಹೋಗಿ ಇಡೀ ಮಂತ್ರಿ ಮಂಡಲಕ್ಕೆ ಕೇರಳ ಸ್ಟೋರಿ ಸಿನಿಮಾವನ್ನ ಉಚಿತವಾಗಿ ತೋರಿಸ್ತೀನಿ ಬನ್ನಿ. ಕಾಂಗ್ರೆಸ್‌ನವರು ಈ ಸಿನಿಮಾ ನೋಡಿದ್ರೆ ಮತಾಂತರ ನಿಷೇಧ ಕಾಯ್ದೆಯನ್ನ ತಿದ್ದುಪಡಿ ಮಾಡಲ್ಲ ಎಂದಿದ್ದಾರೆ. ಇದನ್ನೂ ಓದಿ: ಕರ್ನಾಟಕ, ಮಹಾರಾಷ್ಟ್ರದಂತೆ ಬಿಜೆಪಿ ವಿರೋಧ ಪಕ್ಷಗಳ ಸರ್ಕಾರ ಉರುಳಿಸುತ್ತಿದೆ: ಕಪಿಲ್‌ ಸಿಬಲ್‌ ಆರೋಪ

    ಅಲ್ಲದೇ ಗೋ ಹತ್ಯೆ ನಿಷೇಧ ಕಾಯ್ದೆ ರದ್ದು ಮಾಡಿ ನೋಡೋಣ ಅಂತಾ ಸವಾಲ್ ಹಾಕಿದ್ದಾರೆ. ಗೋವು ತಾಯಿ ಸಮಾನ, ಮೊದಲು ನಿಮ್ಮ ಮನೆಗೆ ಹೋಗಿ ನಿಮ್ಮ ತಾಯಿ, ಅಕ್ಕ-ತಂಗಿಗೆ ಕೇಳಿ. ಗೋ ಹತ್ಯೆ ನಿಷೇಧ ಮಾಡ್ತೀವಿ ಅಂದ್ರೆ ನಿಮ್ಮನ್ನ ಮನೆಬಿಟ್ಟು ಓಡಿಸ್ತಾರೆ. ಮೋಸ ಮಾಡಿದ ಸರ್ಕಾರ ಬಹಳ ದಿನ ಇರಲ್ಲ ಅನ್ನೋದಕ್ಕೆ ಮಹಾರಾಷ್ಟ್ರ ಸಾಕ್ಷಿ. ಮಹಾರಾಷ್ಟ್ರದಂತೆಯೇ ಕರ್ನಾಟಕದಲ್ಲಿಯೂ ಆಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ.

    ವಿದ್ಯುತ್ ದರವನ್ನ ಹಿಗ್ಗಾಮುಗ್ಗ ಏರಿಕೆ ಮಾಡಿದ್ದಾರೆ. ಈ ಹಿಂದೆ ಕೆಇಆರ್‌ಸಿ ವಿದ್ಯುತ್ ದರ ಏರಿಕೆ ಮಾಡಿದಾಗ ನಾವು ಅದಕ್ಕೆ ಒಪ್ಪಿರಲಿಲ್ಲ. ಆದ್ರೆ ಕಾಂಗ್ರೆಸ್ ಅಧಿಕಾರಕ್ಕೆ ಬಂದ ತಕ್ಷಣ ದರ ಏರಿಕೆ ಮಾಡಿದೆ. ಗೃಹಲಕ್ಷಿö್ಮ ಕೊಡ್ತೀವಿ ಅಂತಾ ಹೇಳಿ ಈಗ ಸರ್ವರ್ ಹ್ಯಾಕ್ ಆಗಿದೆ ಅಂತಾ ಹೇಳ್ತಾರೆ. ಕಾಂಗ್ರೆಸ್ ಸಚಿವರು ಎಷ್ಟು ಸುಳ್ಳು ಹೇಳ್ತಾರೆ ಅನ್ನೋದು ಇದರಲ್ಲೇ ಗೊತ್ತಾಗ್ತಿದೆ. ಕರ್ನಾಟಕ ರಾಜಕೀಯದಲ್ಲೂ ಮಹಾರಾಷ್ಟç ಸರ್ಕಾರದಂತೆ ತಲ್ಲಣ ಸೃಷ್ಟಿಯಾಗುತ್ತೆ. ಇನ್ನು ಮೂರು ತಿಂಗಳೂ ಸಿದ್ದರಾಮಯ್ಯ ಸರ್ಕಾರ ಉಳಿಯಲ್ಲ. ಅಲ್ಲದೇ ಮುಂದಿನ ಲೋಕಸಭಾ ಚುನಾವಣೆಯಲ್ಲೂ ಬಿಜೆಪಿ 28 ಕ್ಷೇತ್ರಗಳಲ್ಲಿ ವಿಜಯ ಸಾಧಿಸಲಿದೆ ಎಂದು ಭವಿಷ್ಯ ನುಡಿದಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕೇರಳ ಸ್ಟೋರಿ ನಿಷೇಧ – ಮಮತಾ ಸರ್ಕಾರದ ಆದೇಶಕ್ಕೆ ಸುಪ್ರೀಂ ತಡೆ

    ಕೇರಳ ಸ್ಟೋರಿ ನಿಷೇಧ – ಮಮತಾ ಸರ್ಕಾರದ ಆದೇಶಕ್ಕೆ ಸುಪ್ರೀಂ ತಡೆ

    ನವದೆಹಲಿ: ಕೇರಳ ಸ್ಟೋರಿ (Kerala Story) ಚಿತ್ರದ ಪ್ರದರ್ಶನಕ್ಕೆ ನಿಷೇಧ ಹೇರಿರುವ ಪಶ್ಚಿಮ ಬಂಗಾಳ (West Bengal) ಸರ್ಕಾರದ ನಿರ್ಧಾರಕ್ಕೆ ಸುಪ್ರೀಂ ಕೋರ್ಟ್ (Supreme Court) ಗುರುವಾರ ತಡೆ ನೀಡಿದೆ.

    ಭಾರತದ ಮುಖ್ಯ ನ್ಯಾಯಮೂರ್ತಿ (CJI) ಡಿವೈ ಚಂದ್ರಚೂಡ್ (DY Chandrachud), ನ್ಯಾಯಮೂರ್ತಿ ಪಿ.ಎಸ್ ನರಸಿಂಹ ಮತ್ತು ಜೆಬಿ ಪಾರ್ದಿವಾಲಾ ಅವರಿದ್ದ ಪೀಠವು ಈ ಆದೇಶ ನೀಡಿದೆ. ಚಿತ್ರಮಂದಿರಗಳಿಗೆ ಭದ್ರತೆ ಒದಗಿಸುವಂತೆ ತಮಿಳುನಾಡು (Tamil Nadu) ರಾಜ್ಯಕ್ಕೆ ಸೂಚಿಸಿದೆ. ವಿಚಾರಣೆ ನಡೆಸುವಾಗ ಪ್ರತಿ ಚಿತ್ರಮಂದಿರಕ್ಕೆ ಸಾಕಷ್ಟು ಭದ್ರತೆಯನ್ನು ಒದಗಿಸಬೇಕು. ಅಲ್ಲದೆ ಚಲನಚಿತ್ರ ನೋಡುವವರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಅಗತ್ಯವಾದ ವ್ಯವಸ್ಥೆಯನ್ನು ಮಾಡಬೇಕೆಂದು ನ್ಯಾಯಾಲಯ ನಿರ್ದೇಶಿಸಿದೆ. ಇದನ್ನೂ ಓದಿ: ಜಲ್ಲಿಕಟ್ಟುಗೆ ಸುಪ್ರೀಂ ಅನುಮತಿ – ಕಂಬಳಕ್ಕೂ ಗ್ರೀನ್ ಸಿಗ್ನಲ್

    ಚಲನಚಿತ್ರವು ಘಟನೆಗಳ ಕಾಲ್ಪನಿಕ ಆವೃತ್ತಿಯಾಗಿದೆ. 32 ಸಾವಿರ ಮಹಿಳೆಯರ ಮತಾಂತರದ ಅಂಕಿಅಂಶವನ್ನು ಖಚಿತಪಡಿಸಲು ಯಾವುದೇ ಅಧಿಕೃತ ದತ್ತಾಂಶಗಳಿಲ್ಲ ಎಂದು ಚಿತ್ರದ ವಿರುದ್ಧ ವಾದಿಸಲಾಗಿದೆ. ಇದನ್ನು ಸ್ಪಷ್ಟವಾಗಿ ಹೇಳುವ ಅಥವಾ ನಿರಾಕರಣೆಯ ಸ್ಪಷ್ಟತೆಯನ್ನು ಖಚಿತಪಡಿಸಬೇಕು ಎಂದು ನಿರ್ಮಾಪಕರಿಗೆ ನಿರ್ದೇಶನ ನೀಡಿದೆ.

    ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್ (CBFC) ಪ್ರಮಾಣೀಕರಣಕ್ಕೆ ಸಂಬಂಧಿಸಿದ ಅರ್ಜಿಯನ್ನು ನ್ಯಾಯಾಲಯದ ಬೇಸಿಗೆ ರಜೆಯ ನಂತರ ವಿಚಾರಣೆ ನಡೆಸಲಿದೆ. ಅದಕ್ಕಾಗಿ ನ್ಯಾಯಾಲಯವು ಮೊದಲು ಚಲನಚಿತ್ರವನ್ನು ನೋಡಬೇಕಾಗುತ್ತದೆ ಎಂದು ಆದೇಶದಲ್ಲಿ ಹೇಳಿದೆ.

    ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರ ಮೇ 8 ರಂದು ಪಶ್ಚಿಮ ಬಂಗಾಳ ಸಿನಿಮಾಗಳ ನಿಯಂತ್ರಣ ಕಾಯಿದೆಯ ಸೆಕ್ಷನ್ 4 ಹಾಗೂ ಸೆಕ್ಷನ್ 6 (1) ರ ಅಡಿಯಲ್ಲಿ ರಾಜ್ಯದ ಶಾಂತಿ ಕಾಪಾಡುವ ಕಾರಣ ನೀಡಿ ಚಿತ್ರ ಪ್ರದರ್ಶನಕ್ಕೆ ನಿಷೇಧ ಹೇರಿತ್ತು. ಅಲ್ಲದೆ ತಮಿಳುನಾಡು ಸರ್ಕಾರ ಚಿತ್ರ ನಿಷೇಧಕ್ಕೆ ತಯಾರಿ ನಡೆಸಿತ್ತು. ಈ ಎರಡು ಸರ್ಕಾರಗಳ ನಿರ್ಧಾರವನ್ನು ಪ್ರಶ್ನಿಸಿ ಚಿತ್ರದ ನಿರ್ಮಾಪಕರು ಸುಪ್ರೀಂಗೆ ಮನವಿ ಸಲ್ಲಿಸಿದ್ದರು. ಅಲ್ಲದೆ ಮೂಲಭೂತ ಹಕ್ಕಾದ ವಾಕ್ ಸ್ವಾತಂತ್ರ್ಯಕ್ಕೆ ಧಕ್ಕೆ ತರುವ ನಿರ್ಧಾರ ಇದಾಗಿದೆ. ಈ ನಿರ್ಧಾರದಿಂದಾಗಿ ಚಿತ್ರದ ಹಣ ಗಳಿಕೆಯಲ್ಲಿ ಕುಸಿತ ಕಂಡಿದೆ. ಚಿತ್ರವನ್ನು ಪೈರಸಿ ಮಾಡಲು ಇದು ಕಾರಣವಾಗುತ್ತಿದೆ ಎಂದು ಆರೋಪಿಸಿದ್ದರು.

    ಮೇ 2 ರಂದು ಕೇರಳ ಹೈಕೋರ್ಟ್ ಇಂತಹ ಸಿನಿಮಾಗಳ ವಿರುದ್ಧದ ಅರ್ಜಿಗಳು ಅನಗತ್ಯ ಪ್ರಚಾರವನ್ನು ನೀಡುತ್ತವೆ ಎಂದು ಹೇಳಿತ್ತು. ಸಿನಿಮಾವನ್ನು ನಿಷೇಧಿಸುವಂತೆ ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ಮದ್ರಾಸ್ ಹೈಕೋರ್ಟ್ ಮೇ 4ರಂದು ತಿರಸ್ಕರಿಸಿತ್ತು. ಬಳಿಕ ಅಗತ್ಯ ಮೂಲಭೂತ ಹಕ್ಕಿಗೆ ಧಕ್ಕೆಯಾಗುತ್ತಿದೆ ಎಂದು ನಿರ್ಮಾಪಕರು ಮನವಿ ಮಾಡಿಕೊಂಡ ನಂತರ ಸುಪ್ರೀಂ ವಿಚಾರಣೆಗೆ ಒಪ್ಪಿಕೊಂಡಿತ್ತು. ಇದನ್ನೂ ಓದಿ: ಮಾಡೆಲ್ ಹೇರ್‌ಸ್ಟೈಲ್‌ ಹಾಳು ಮಾಡಿದ್ದಕ್ಕೆ 2 ಕೋಟಿ ಪರಿಹಾರ – ಆದೇಶಕ್ಕೆ ಸುಪ್ರೀಂ ತಡೆ