Tag: Kerala Lottery

  • ಬೈಕ್ ಮೆಕಾನಿಕ್ ರಾತ್ರೋರಾತ್ರಿ ಕೋಟ್ಯಧಿಪತಿ – 25 ಕೋಟಿ ಬಹುಮಾನ ಗೆದ್ದ ಮಂಡ್ಯದ ಗಂಡು

    ಬೈಕ್ ಮೆಕಾನಿಕ್ ರಾತ್ರೋರಾತ್ರಿ ಕೋಟ್ಯಧಿಪತಿ – 25 ಕೋಟಿ ಬಹುಮಾನ ಗೆದ್ದ ಮಂಡ್ಯದ ಗಂಡು

    ಮಂಡ್ಯ: ಅದೃಷ್ಟ ಅನ್ನೋದು ಯಾರಿಗೆ, ಯಾವಾಗ, ಯಾವ ರೂಪದಲ್ಲಿ ಖುಲಾಯಿಸುತ್ತದೆಯೋ ಗೊತ್ತಿಲ್ಲ. ಅದೇ ರೀತಿ ಮಂಡ್ಯದ ಮೆಕಾನಿಕ್‌ಗೆ ಅದೃಷ್ಟ ಖುಲಾಯಿಸಿದ್ದು, ರಾತ್ರೋ ರಾತ್ರಿ ಕೋಟ್ಯಧಿಪತಿ ಆಗಿದ್ದಾರೆ.

    ಮಂಡ್ಯದ (Mandya) ಅಲ್ತಾಫ್ ಪಾಷಾ ಎಂಬವರು ಲಾಟರಿಯಲ್ಲಿ‌ 25 ಕೋಟಿ ರೂ. ಬಹುಮಾನ ಗೆದ್ದಿದ್ದಾರೆ. ಅಲ್ತಾಫ್‌ ಮಂಡ್ಯ ಜಿಲ್ಲೆಯ ಪಾಂಡವಪುರ ಪಟ್ಟಣದ ನಿವಾಸಿ. ವೃತ್ತಿಯಲ್ಲಿ ಬೈಕ್ ಮೆಕಾನಿಕ್ ಆಗಿರುವ ಅಲ್ತಾಫ್, ಎರಡು ದಿನಗಳ ಹಿಂದೆಯಷ್ಟೇ ವಯನಾಡಿನಲ್ಲಿರುವ (Wayanad)  ತಮ್ಮ ಸಂಬಂಧಿಕರ ಮನೆಗೆ ತೆರಳಿದ್ದರು.

    ಈ ವೇಳೆ ‌ಪರಿಚಯಸ್ಥರ ಮೂಲಕ ಕೇರಳದ ತಿರುವೋಣಂ ಲಾಟರಿ (Thiruvonam Bumper Lottery) ಟಿಕೆಟ್‌ ಖರೀದಿ ಮಾಡಿದ್ದರು. ಇದೀಗ ಅಲ್ತಾಫ್ ಪಾಷಾ ಅವರು 25 ಕೋಟಿ ರೂ. ‌ಗೆದ್ದಿದ್ದಾರೆ. ತಾನು ಖರೀದಿ ಮಾಡಿದ ಲಾಟರಿ ಟಿಕೆಟ್‌ಗೆ ಬಹುಮಾನ ಬಂದಿರುವ ವಿಚಾರ ತಿಳಿಯುತ್ತಿದ್ದಂತೆ ಹಣ ತರಲು ಕೇರಳಕ್ಕೆ ದೌಡು ಕಿತ್ತಿದ್ದಾರೆ. ಇದನ್ನೂ ಓದಿ: ದಸರಾ ಜಂಬೂಸವಾರಿ ಮೆರವಣಿಗೆಗೆ ಪೊಲೀಸ್ ಇಲಾಖೆ ಬಿಗಿ ಭದ್ರತೆ: ಕಮಿಷನರ್ ಸೀಮಾ ಲಾಟ್ಕರ್

    ಬುಧವಾರ (ಅ.9) ಈ ವರ್ಷದ ತಿರುವೋಣಂ ಬಂಪರ್ ಡ್ರಾ ನಡೆಯಿತು. 360 ಕೋಟಿ ಮೌಲ್ಯದ 71 ಲಕ್ಷ ಟಿಕೆಟ್‌ಗಳು ಮಾರಾಟವಾಗಿದ್ದವು. ಹಾಗಾಗಿ ವಿವಿಧ ಹಂತದ ಬಹುಮಾನಕ್ಕೆ 50 ಕೋಟಿ ರೂ. ನಿಗದಿಪಡಿಸಲಾಗಿತ್ತು. ಓಣಂ ಬಂಪರ್‌ನಲ್ಲಿ 25 ಕೋಟಿ ರೂ. ಮೊದಲ ಬಹುಮಾನ ಗೆದ್ದ ಅದೃಷ್ಟವಂತರು ಯಾರೆಂಬ ಪ್ರಶ್ನೆಗೆ ಮಲಯಾಳಿಗಳು ಉತ್ತರ ಹುಡುಕುತ್ತಿದ್ದರು. ಕೊನೆಗೆ ಕಾದು ನೋಡುತ್ತಿದ್ದವರಿಗೆ ಶಾಕ್‌ ನೀಡಿದಂತೆ ಕರ್ನಾಟಕ ಮಂಡ್ಯ ಜಿಲ್ಲೆಯ ಪಾಂಡವಪುರ ಮೂಲದ ಅಲ್ತಾಫ್ ಎಂಬುದು ಗೊತ್ತಾಗಿದೆ. ಇದನ್ನೂ ಓದಿ: ದಸರಾ ವಿಶೇಷ| ಅರಸೀಕೆರೆ-ಮೈಸೂರು ನಡುವೆ ಮೂರು ದಿನ ಸಂಚರಿಸಲಿದೆ ಡೆಮು ರೈಲು

  • ಸಾಲ ಮಾಡಿ ಲಾಟರಿ ಟಿಕೆಟ್ ಖರೀದಿಸಿದ ಪೌರಕಾರ್ಮಿಕ ಮಹಿಳೆಯರಿಗೆ 10 ಕೋಟಿ ರೂ. ಬಂಪರ್

    ಸಾಲ ಮಾಡಿ ಲಾಟರಿ ಟಿಕೆಟ್ ಖರೀದಿಸಿದ ಪೌರಕಾರ್ಮಿಕ ಮಹಿಳೆಯರಿಗೆ 10 ಕೋಟಿ ರೂ. ಬಂಪರ್

    ತಿರುವನಂತಪುರಂ: 250 ರೂ. ಸಾಲ ಪಡೆದು ಲಾಟರಿ ಟಿಕೆಟ್ ಖರೀದಿಸಿದ ಕೇರಳದ (Kerala) 11 ಪೌರಕಾರ್ಮಿಕ ಮಹಿಳೆಯರ ಅದೃಷ್ಟ ಖುಲಾಯಿಸಿದೆ. ಕೇರಳ ಲಾಟರಿ ಇಲಾಖೆ  (Kerala Lottery) ನಡೆಸುವ ಡ್ರಾನಲ್ಲಿ 10 ಕೋಟಿ ರೂ. ಬಹುಮಾನ ಈ ಮಹಿಳೆಯರ ಪಾಲಾಗಿದೆ.

    ಈ ಬಗ್ಗೆ ಪ್ರತಿಕ್ರಿಯಿಸಿರುವ ಮಹಿಳೆಯರು (Women), ನಾವೆಲ್ಲರೂ ಮೊದಲು ಹಣವನ್ನು ಒಟ್ಟುಗೂಡಿಸಿ ಲಾಟರಿ ಟಿಕೆಟ್‍ಗಳನ್ನು ಖರೀದಿಸಿದ್ದೆವು. ಇದೇ ಮೊದಲ ಬಾರಿಗೆ ನಾವು ಗೆದ್ದಿದ್ದೇವೆ. ಬಹುಮಾನ ಗೆಲ್ಲುತ್ತೇವೆ ಎಂದು ಕನಸಲ್ಲೂ ಊಹಿಸಿರಲಿಲ್ಲ ಎಂದಿದ್ದಾರೆ. ಇದನ್ನೂ ಓದಿ: ಮನೆ ಬಾಗಿಲು ಮುರಿದು ಬಂದೂಕು ಕದ್ದ ಕಳ್ಳರು

    ನಮ್ಮ ಟಿಕೆಟ್‍ಗೆ ಬಹುಮಾನ ಬಂದಿರುವುದು ತಿಳಿದಾಗ ಖುಷಿಯಾಯಿತು. ನಮಗೆ ವೇತನ ಹೊರತುಪಡಿಸಿ ಯಾವುದೇ ಆದಾಯ ಮೂಲಗಳಿಲ್ಲ. ನಾವೆಲ್ಲರೂ ಜೀವನದಲ್ಲಿ ಕಷ್ಟಗಳನ್ನು ಎದುರಿಸುತ್ತಿದ್ದೇವೆ. ನಮ್ಮ ಸಮಸ್ಯೆಗಳನ್ನು ಪರಿಹರಿಸಲು ಈ ಹಣ ಸಹಕಾರವಾಗಲಿದೆ ಎಂದು ಮತ್ತೋರ್ವ ಮಹಿಳೆ ತಿಳಿಸಿದ್ದಾರೆ.

    ನಗರಸಭೆಯ ಹರಿತ ಕರ್ಮ ಸೇನೆ (Haritha Karma Sena) ಒಕ್ಕೂಟದ ಅಧ್ಯಕ್ಷೆ ಶೀಜಾ ಮಾತನಾಡಿ, ಈ ಬಾರಿ ಅತ್ಯಂತ ಅರ್ಹರಿಗೆ ಅದೃಷ್ಟ ಒಲಿದು ಬಂದಿದೆ. ಎಲ್ಲಾ ವಿಜೇತರು ಶ್ರಮಜೀವಿಗಳಾಗಿದ್ದಾರೆ. ಅವರೆಲ್ಲ ಹೆಚ್ಚಾಗಿ ಸಾಲದಲ್ಲಿದ್ದಾರೆ. ಅಲ್ಲದೇ ಮದುವೆಗೆ ಬಂದಿರುವ ಹೆಣ್ಣುಮಕ್ಕಳಿದ್ದಾರೆ. ಕೆಲವರು ಅವರ ಕುಟುಂಬಸ್ಥರ ಚಿಕಿತ್ಸಾ ವೆಚ್ಚಕ್ಕೆ ಹಣ ಹೊಂದಿಸಬೇಕಿದೆ. ಅವರ ಮನೆಗಳು ಭದ್ರವಾಗಿಲ್ಲ. ಅಂಥವರಿಗೆ ಈ ಲಾಟರಿ ಒಲಿದಿರುವುದು ಖುಷಿ ನೀಡಿದೆ ಎಂದಿದ್ದಾರೆ.

    ಲಾಟರಿ ವಿಜೇತ ಮಹಿಳೆಯರನ್ನು ಭೇಟಿ ಮಾಡಿ ಹಲವಾರು ಜನ ಅಭಿನಂದಿಸಿದ್ದಾರೆ. ಶ್ರಮಜೀವಿಗಳಿಗೆ ಒಲಿದ ಅದೃಷ್ಟಕ್ಕೆ ಖುಷಿಪಟ್ಟಿದ್ದಾರೆ. ಇದನ್ನೂ ಓದಿ: ಬಸವಸಾಗರ ಜಲಾಶಯ ಭರ್ತಿ – ಕೃಷ್ಣಾ ನದಿಗೆ 1.80 ಲಕ್ಷ ಕ್ಯೂಸೆಕ್ ನೀರು ರಿಲೀಸ್

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕೇರಳ ಲಾಟರಿ ಮಾರಾಟ ಮಾಡುತ್ತಿದ್ದ ಆರೋಪಿ ಅರೆಸ್ಟ್

    ಕೇರಳ ಲಾಟರಿ ಮಾರಾಟ ಮಾಡುತ್ತಿದ್ದ ಆರೋಪಿ ಅರೆಸ್ಟ್

    ಚಾಮರಾಜನಗರ: ರಾಜ್ಯದಲ್ಲಿ ಲಾಟರಿ ಮಾರಾಟ ನಿಷೇಧವಿದ್ದರೂ ಗಡಿ ಜಿಲ್ಲೆಯಲ್ಲಿ ಅಕ್ರಮವಾಗಿ ಕೇರಳ ಲಾಟರಿ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ರಾಮಾಪುರ ಪೊಲೀಸರು ಬಂಧಿಸಿದ್ದಾರೆ.

    ಮೈಸೂರಿನ ಇಲವಾಲ ನಿವಾಸಿ ಶ್ರೀನಿವಾಸರಾವ್ ಬಂಧಿತ ಆರೋಪಿ. ಈತ ಮೈಸೂರಿನಿಂದ ಆಗಾಗ್ಗೆ ಹನೂರು, ರಾಮಾಪುರ, ಅಜ್ಜೀಪುರಕ್ಕೆ ಬಂದು ಕೇರಳ ಲಾಟರಿಗಳನ್ನು ಮಾರಾಟ ಮಾಡಿ ತೆರಳುತ್ತಿದ್ದ. ಈ ಕುರಿತು ಖಚಿತ ಮಾಹಿತಿ ಮೇರೆಗೆ ಆರೋಪಿಯನ್ನು ರಾಮಾಪುರ ಪೊಲೀಸರು ಬಂಧಿಸಿದ್ದಾರೆ. ಬಂಧಿತನಿಂದ 160 ಲಾಟರಿ ಟಿಕೆಟ್‍ಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ. ಇದನ್ನೂ ಓದಿ: ಚಾಮರಾಜನಗರದಲ್ಲಿ ಕೂಲಿ ಕಾರ್ಮಿಕರೇ ಲಾಟರಿ ದಂಧೆಕೋರರ ಟಾರ್ಗೆಟ್ 

    ಜಿಲ್ಲಾದ್ಯಂತ ಕೇರಳ ಲಾಟರಿ ದಂಧೆ?
    ಕೇರಳ ಲಾಟರಿ ಜಿಲ್ಲಾದ್ಯಂತ ಹರಡಿದೆ ಎನ್ನುವುದಕ್ಕೆ ರಾಮಾಪುರದ ಅಕ್ರಮ ಲಾಟರಿ ಮಾರಾಟ ಪತ್ತೆ ಹಚ್ಚಿರುವುದು ಸಾಕ್ಷಿಯಾಗಿದೆ. ಕೆಲ ದಿನಗಳ ಹಿಂದೆಯಷ್ಟೇ ಗುಂಡ್ಲುಪೇಟೆಯಲ್ಲಿ 900 ಟಿಕೆಟ್‍ನೊಂದಿಗೆ ಲಾಟರಿ ಮಾರಾಟಗಾರನನ್ನು ಪೊಲೀಸರು ಬಂಧಿಸಿದ್ದರು.

    ರಾಜ್ಯದಲ್ಲಿ ಲಾಟರಿ ನಿಷೇಧ ಮಾಡಿರುವುದರಿಂದ ಅಕ್ರಮ ದಂಧೆ ಕೋರರು ಗಡಿ ಜಿಲ್ಲೆಗಳನ್ನು ಟಾರ್ಗೆಟ್ ಮಾಡಿ ಕೇರಳ ಹಾಗೂ ತಮಿಳುನಾಡು ಲಾಟರಿ ಟಿಕೆಟ್‍ಗಳನ್ನು ಕದ್ದು ಮುಚ್ಚಿ ಮಾರಾಟ ಮಾಡುತ್ತಿದ್ದಾರೆ. ಕೂಲಿ ಮಾಡುವ ಬಡವರೇ ದಂಧೆ ಕೋರರ ಟಾರ್ಗೆಟ್ ಮಾಡಿದ್ದಾರೆ. ದಂಧೆಗೆ ಸಿಲುಕಿರುವ ಅಮಾಯಕರು ಹಣ ಕಳೆದುಕೊಳ್ಳುತ್ತಿದ್ದಾರೆ. ಇದನ್ನೂ ಓದಿ: ಕೇರಳ ಲಾಟರಿ ಮಾರಾಟ – ಕೊಡಗಿನಲ್ಲಿ ಆರೋಪಿ ಬಂಧನ 

  • ಲಾಟರಿ ಬಂಪರ್ – ಒಂದೇ ದಿನದಲ್ಲಿ ಕೋಟ್ಯಧಿಪತಿಯಾದ ಸುಳ್ಯದ ವ್ಯಕ್ತಿ!

    ಲಾಟರಿ ಬಂಪರ್ – ಒಂದೇ ದಿನದಲ್ಲಿ ಕೋಟ್ಯಧಿಪತಿಯಾದ ಸುಳ್ಯದ ವ್ಯಕ್ತಿ!

    ಮಂಗಳೂರು: ದಕ್ಷಿಣ ಕನ್ನಡದ ಸುಳ್ಯ ಮೂಲದ ಸಣ್ಣ ಹೋಟೆಲ್ ನಡೆಸುವ ವ್ಯಕ್ತಿಯೊಬ್ಬರು ಒಂದೇ ದಿನದಲ್ಲಿ ಕೋಟ್ಯಧಿಪತಿಯಾಗಿದ್ದಾರೆ. ಕೇರಳ ರಾಜ್ಯ ಸರ್ಕಾರ ಪ್ರಾಯೋಜಿತ ಲಾಟರಿಯಲ್ಲಿ ಸುಳ್ಯದ ಸುಧಾಮ ಮಣಿಯಾಣಿ ಅವರಿಗೆ  4 ಕೋಟಿ ರೂ. ಬಂಪರ್ ಬಹುಮಾನ ಲಭಿಸಿದೆ.

    ನಿತೀಶ್ ಹೋಟೆಲ್ ಮಾಲೀಕ ಸುಧಾಮ ಮಣಿಯಾಣಿ ಖರೀದಿಸಿದ್ದ ಎಸ್‍ಬಿ 131399 ನಂಬರಿನ ಲಾಟರಿ ಟಿಕೆಟ್‍ಗೆ ಮೊದಲ ಬಹುಮಾನ ಸಿಕ್ಕಿದೆ. ಮಾಹಿತಿ ಸಿಕ್ಕಿದ ಬಳಿಕ ಅವರು ಕೇರಳ ಲಾಟರಿಯ ವೆಬ್‍ಸೈಟ್‍ನಲ್ಲಿ ಟಿಕೆಟ್ ನಂಬರ್ ಚೆಕ್ ಮಾಡಿದ್ದು, ಬಹುಮಾನ ಬಂದಿರುವುದನ್ನು ಖಚಿತಪಡಿಸಿಕೊಂಡಿದ್ದಾರೆ.

    ಕಳೆದ ನಾಲ್ಕು ವರ್ಷಗಳಿಂದ ಕಾಸರಗೋಡು ಕಡೆಗೆ ಹೋದಾಗ ಒಂದು ಕೇರಳ ರಾಜ್ಯ ಲಾಟರಿ ಟಿಕೆಟ್ ಪಡೆಯುವ ಅಭ್ಯಾಸವನ್ನು ಸುಧಾಮ ಬೆಳೆಸಿಕೊಂಡಿದ್ದರು. ಆದರೆ ಇದೂವರೆಗೆ ಅವರು ಖರೀದಿಸಿದ ಯಾವುದೇ ಲಾಟರಿಗೆ ಬಹುಮಾನ ಸಿಕ್ಕಿರಲಿಲ್ಲ. ಫೆಬ್ರವರಿ ಕೊನೆಯಲ್ಲಿ ಪತ್ನಿಯ ಮನೆಯಾದ ಕಾಸರಗೋಡಿನ ಮಲ್ಲಕ್ಕೆ ಹೋಗಿದ್ದರು. ಅಲ್ಲಿಂದ ಮರಳಿ ಸುಳ್ಯಕ್ಕೆ ಬರುವಾಗ ಮುಳ್ಳೇರಿಯಾದಲ್ಲಿ 450 ರೂ. ನೀಡಿ 150 ರೂ. ಮುಖಬೆಲೆಯ ಸಮ್ಮರ್ ಬಂಪರ್ ಮೂರು ಟಿಕೆಟ್ ಖರೀದಿ ಮಾಡಿದ್ದರು. ಖರೀದಿ ಮಾಡಿದ ಒಂದು ಟಿಕೆಟ್‍ಗೆ ಬಂಪರ್ ಬಹುಮಾನ ಸಿಕ್ಕಿದೆ.

    ಸುಳ್ಯ ಕಾಂತಮಂಗಲ ಬೂಡುಮಕ್ಕಿಯ ಅಚ್ಚುತ ಮಣಿಯಾಣಿ-ಸರಸ್ವತಿ ದಂಪತಿ ಪುತ್ರ ಸುಧಾಮ ಕಳೆದ 19 ವರ್ಷಗಳಿಂದ ಸುಳ್ಯ ನಗರದಲ್ಲಿ ಹೋಟೆಲ್ ನಡೆಸುತ್ತಿದ್ದಾರೆ. ಸುಳ್ಯಕ್ಕೆ ಬರುವ ಮೊದಲು ಗಡಿಪ್ರದೇಶವಾದ ಅಡ್ಯನಡ್ಕದಲ್ಲಿ ಐದು ವರ್ಷ ಹೋಟೆಲ್ ನಡೆಸಿದ್ದರು.

    ಬಹುಮಾನ ಸಿಕ್ಕಿದ ಬಳಿಕವೂ ಸುಧಾಮ ಅವರು ಎಂದಿನಂತೆ ಹೋಟೆಲ್ ನಲ್ಲಿ ಕೆಲಸ ಮಾಡುತ್ತಿದ್ದಾರೆ. ಬಹುಮಾನವಾಗಿ ಸಿಕ್ಕಿದ ಹಣದಲ್ಲಿ ಏನು ಮಾಡುತ್ತೀರಿ ಎಂದು ಕೇಳಿದ್ದಕ್ಕೆ, ಸದ್ಯಕ್ಕೆ ಏನು ಯೋಚನೆ ಮಾಡಿಲ್ಲ. ಮೂವರು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುತ್ತೇನೆ ಎಂದು ಪ್ರತಿಕ್ರಿಯಿಸಿದ್ದಾರೆ.