Tag: Kerala HighCourt

  • ಐಟಿ ಉದ್ಯೋಗಿ ಕಿಡ್ನ್ಯಾಪ್‌ ಕೇಸ್ – 3ನೇ ಆರೋಪಿ ನಟಿ ಲಕ್ಷ್ಮಿ ಮೆನನ್‌ ಬಂಧನಕ್ಕೆ ಕೋರ್ಟ್‌ ತಡೆ

    ಐಟಿ ಉದ್ಯೋಗಿ ಕಿಡ್ನ್ಯಾಪ್‌ ಕೇಸ್ – 3ನೇ ಆರೋಪಿ ನಟಿ ಲಕ್ಷ್ಮಿ ಮೆನನ್‌ ಬಂಧನಕ್ಕೆ ಕೋರ್ಟ್‌ ತಡೆ

    ತಿರುವನಂತಪುರಂ: ಕೇರಳದ (Kerala) ಕೊಚ್ಚಿಯಲ್ಲಿ ನಡೆದ ಐಟಿ ಉದ್ಯೋಗಿಯ ಕಿಡ್ನ್ಯಾಪ್‌ ಪ್ರಕರಣದಲ್ಲಿ ಖ್ಯಾತ ನಟಿ ಲಕ್ಷ್ಮಿ ಮೆನನ್‌ ಅವ‌ರ ಹೆಸರು ಕೇಳಿಬಂದಿದೆ. ಸದ್ಯ ಪ್ರಕರಣದ ಮೂರನೇ ಆರೋಪಿಯಾಗಿರುವ ಲಕ್ಷ್ಮಿ ಮೆನನ್‌ (Lakshmi Menon) ನಿರೀಕ್ಷಣಾ ಜಾಮೀನು ಪಡೆದು ಬಂಧನ ಭೀತಿಯಿಂದ ಪಾರಾಗಿದ್ದಾರೆ.

    ಲಕ್ಷ್ಮಿ ಮೆನನ್ ತಲೆಮರೆಸಿಕೊಂಡಿದ್ದಾರೆ ಎಂದು ಹೇಳಲಾಗಿತ್ತು. ನಟಿಯ ಜೊತೆಗಿದ್ದ ಮಿಥುನ್, ಅನೀಶ್ ಹಾಗೂ ಓರ್ವ ಮಹಿಳಾ ಸ್ನೇಹಿತೆಯನ್ನು ಈಗಾಗಲೇ ಪೊಲೀಸರು (Kerala Police) ಬಂಧಿಸಿದ್ದಾರೆ. ಅಲುವಾ ಮೂಲದ ಐಟಿ ಕಂಪನಿ ಉದ್ಯೋಗಿಯೊಬ್ಬರು ತನ್ನನ್ನು ಅಪಹರಿಸಿ (Techie Kidnap Case), ಥಳಿಸಿದ್ದಾರೆ ಎಂದು ಆರೋಪಿಸಿ ದೂರು ದಾಖಲಿಸಿದ ಬಳಿಕ ಈ ಪ್ರಕರಣ ಬೆಳಕಿಗೆ ಬಂದಿದೆ. ಇದನ್ನೂ ಓದಿ: ಏಕಾಂಗಿ ನಿರೂಪಣೆ ಬಳಿಕ ಹೊಸ ಮನ್ವಂತರಕ್ಕೆ ಕಾಲಿಟ್ಟ ಆ್ಯಂಕರ್ ಅನುಶ್ರೀ

    ನಟಿ ಲಕ್ಷ್ಮಿ ಮೆನನ್‌ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ ನಂತರ ನ್ಯಾಯಮೂರ್ತಿ ಬೆಚು ಕುರಿಯನ್ ಥಾಮಸ್ ನೇತೃತ್ವದ ಪೀಠವು ನಟಿಯ ಬಂಧನಕ್ಕೆ ಸೆ.17ರಂದಿ ವಿಚಾರಣೆ ಮುಂದೂಡಿದೆ. ಇದನ್ನೂ ಓದಿ: ಅನುಶ್ರೀ ಕಲ್ಯಾಣದಲ್ಲಿ ರಾರಾಜಿಸಿದ ಅಪ್ಪು ಫೋಟೋ

    ನಿರೀಕ್ಷಣಾ ಜಾಮೀನು ಅರ್ಜಿಯಲ್ಲಿ
    ಕೋರ್ಟ್‌ಗೆ ಸಲ್ಲಿಸಿದ ನಿರೀಕ್ಷಿಣಾ ಜಾಮೀನು ಅರ್ಜಿಯಲ್ಲಿ ದೂರುದಾರ ಬಾರ್‌ನಲ್ಲಿ ತಮ್ಮನ್ನು ಅವಾಚ್ಯ ಶದ್ಧಗಳಿಂದ ನಿಂದಿಸಿ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ. ಬಾರ್‌ನಿಂದ ಹೊರಬಂದ ನಂತರ ದೂರುದಾರರು ಕಾರಿನಲ್ಲಿ ತಮ್ಮನ್ನ ಹಿಂಬಾಲಿಸಿ ಬಿಯ‌ರ್ ಬಾಟಲಿಯಿಂದ ಹಲ್ಲೆ ನಡೆಸಿದ್ದಾನೆ. ಐಟಿ ಉದ್ಯೋಗಿ ಸಲ್ಲಿಸಿರುವ ದೂರಿನ ವಿಷಯವು ಕಟ್ಟುಕಥೆಯಾಗಿದೆ. ಅಪರಾಧಕ್ಕೂ, ನನಗೂ ಯಾವ್ದೇ ಸಂಬಂಧವಿಲ್ಲ. ನನ್ನ ಹೆಸರು, ಖ್ಯಾತಿಗೆ ಕಳಂಕ ತರುವ ಉದ್ದೇಶದಿಂದ ಈ ರೀತಿ ದೂರು ಕೊಟ್ಟಿದ್ದಾರೆಂದು ಅರ್ಜಿಯಲ್ಲಿ ಹೇಳಿದ್ದಾರೆ. ಇದನ್ನೂ ಓದಿ: 1,000 ಡ್ಯಾನ್ಸರ್ಸ್ ಜೊತೆ ಮೈಸೂರಲ್ಲಿ ರಾಮ್ ಚರಣ್ ಸಿನಿಮಾ ಶೂಟಿಂಗ್

    ಏನಿದು ಪ್ರಕರಣ? ದೂರುದಾರ ಹೇಳಿದ್ದೇನು?
    ದೂರುದಾರರಾದ ಅಲಿಯಾರ್ ಶಾ ಸಲೀಂ ಪ್ರಕಾರ, ಕೆಲವು ದಿನಗಳ ಹಿಂದೆ ಬಾರ್‌ನಲ್ಲಿ ಯಾವುದೋ ಒಂದು ವಿಚಾರಕ್ಕೆ ಲಕ್ಷ್ಮಿ ಮೆನನ್‌ ಅವರ ಗ್ಯಾಂಗ್, ಅಲಿಯಾರ್ ಮತ್ತು ಅವರ ಸ್ನೇಹಿತನೊಂದಿಗೆ ತಗಾದೆ ತೆಗೆದು, ಜೋರಾಗಿ ಜಗಳವಾಡಿದೆ. ಇದಾದ ಬಳಿಕ ಅಲಿಯಾರ್ ಅವರನ್ನ ಹಿಂಬಾಲಿಸಿ ಹೋಗಿ, ಅವರ ಕಾರನ್ನು ಎರ್ನಾಕುಲಂ ನಾರ್ತ್ ಓವರ್‌ಬ್ರಿಡ್ಜ್ ಸಮೀಪದಲ್ಲಿ ನಟಿಯ ಗ್ಯಾಂಗ್ ತಡೆದಿದೆ. ಈ ವೇಳೆ ಆರೋಪಿಗಳಾದ ಲಕ್ಷ್ಮಿ ಮೆನನ್, ಮಿಥುನ್, ಅನೀಶ್ ಮತ್ತು ಸೋನಾಮೋಲ್ ಸೇರಿದಂತೆ ಒಂದು ಗ್ಯಾಂಗ್, ದೂರುದಾರ ಅಲಿಯಾರ್‌ರನ್ನು ಕಾರಿನಿಂದ ಬಲವಂತವಾಗಿ ಎಳೆದು, ಮತ್ತೊಂದು ವಾಹನದಲ್ಲಿ ಕರೆದೊಯ್ದು, ದೈಹಿಕವಾಗಿ ಹಲ್ಲೆ ಮಾಡಿ, ಗಂಭೀರ ಬೆದರಿಕೆ ಹಾಕಿದ್ದಾರೆ. ಇದಾದ ನಂತರ, ಅಲಿಯಾ‌ರ್ ಅವರನ್ನು ಅಲುವಾ-ಪರವೂರ್ ಜಂಕ್ಷನ್‌ನಲ್ಲಿ ಬಿಟ್ಟು ಅಲ್ಲಿಂದ ಪರಾರಿಯಾದರು ಎಂದು ಅಲಿಯಾ‌ರ್ ಅವರು ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ ಬಳಿಕ ನಟಿ ಕೂಡ ಗ್ಯಾಂಗ್‌ನಲ್ಲಿದ್ದರು ಎಂಬುದನ್ನು ಪೊಲೀಸರು ಖಚಿತಪಡಿಸಿಕೊಂಡಿದ್ದಾರೆ. ದೂರಿನ ಆಧಾರದ ಮೇಲೆ ಲಕ್ಷ್ಮಿ ಮನನ್‌ ಅವರನ್ನ ಪ್ರಕರಣದ 3ನೇ ಆರೋಪಿಯಾಗಿ ಹೆಸರಿಸಲಾಗಿದೆ. ಬಾರ್‌ನಲ್ಲಿ ನಡೆದ ಜಗಳವೇ ಅಪಹರಣ ಮತ್ತು ಥಳಿತಕ್ಕೆ ಕಾರಣ ಎಂದು ತಿಳಿದುಬಂದಿದೆ.

    ಘಟನೆ ಬಳಿಕ ಮೂವರು ಆರೋಪಿಗಳನ್ನ ಬಂಧಿಸಲಾಗಿದೆ. ಆದ್ರೆ ಲಕ್ಷ್ಮಿ ಮೆನನ್‌ ಈವರೆಗೆ ನಾಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ. ತನಿಖೆ ಪ್ರಗತಿಯಲ್ಲಿದೆ.

    ತಮಿಳು, ಮಲಯಾಳಂ ಚಿತ್ರಗಳಲ್ಲಿ ಖ್ಯಾತಿ ಪಡೆದಿದ್ದ ಲಕ್ಷ್ಮಿ ಮೆನನ್‌, ಸುಂದರ ಪಾಂಡಿಯನ್, ರೆಕ್ಕಾ, ‘ಚಂದ್ರಮುಖಿ 2 ವೇದಾಲಂ, ಕೊಂಬನ್, ಪಾಂಡ್ಯನಾಡು ಮೊದಲಾದ ಹಿಟ್‌ ಸಿನಿಮಾಗಳಲ್ಲಿ ನಟಿಸಿದ್ದಾರೆ.

  • PFI ನಿಂದ 5.06 ಕೋಟಿ ಪರಿಹಾರ ಕೇಳಿದ KSRTC

    PFI ನಿಂದ 5.06 ಕೋಟಿ ಪರಿಹಾರ ಕೇಳಿದ KSRTC

    ತಿರುವನಂತಪುರಂ: ರಾಷ್ಟ್ರೀಯ ತನಿಖಾ ದಳ (NIA) ದಾಳಿ ವಿರೋಧಿಸಿ ಪಿಎಫ್‌ಐ (PFI) ಸಂಘಟನೆಯ ಕಾರ್ಯಕರ್ತರು ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ಬಸ್ಸುಗಳ ಮೇಲೆ ಕಲ್ಲು ತೂರಾಟ ನಡೆಸಿದ್ದರು. ಇದರಿಂದ ಭಾರೀ ನಷ್ಟವಾಗಿದ್ದು ಕೇರಳ ಸಾರಿಗೆ ಸಂಸ್ಥೆಯು ಪಿಎಫ್‌ಐನಿಂದ 5.06 ಕೋಟಿ ಪರಿಹಾರ ಕೇಳಿ ಹೈಕೋರ್ಟ್‌ಗೆ (Kerala HighCourt) ಅರ್ಜಿ ಸಲ್ಲಿಸಿದೆ.

    ಕಳೆದ ಸೆಪ್ಟೆಂಬರ್‌ 23ರಂದು ಎನ್‌ಐಎ 15 ರಾಜ್ಯಗಳಲ್ಲಿ 93 ಕಡೆ ನಡೆಸಿದ ದಾಳಿಯಲ್ಲಿ ನೂರಾರು ಪಿಎಫ್‌ಐ (PFI) ಕಾರ್ಯಕರ್ತರನ್ನು ವಶಕ್ಕೆ ಪಡೆದು, ಹಲವರನ್ನು ಬಂಧಿಸುವ ಕೆಲಸ ಮಾಡಿತ್ತು. ಇದನ್ನು ಖಂಡಿಸಿದ ಪಿಎಫ್‌ಐ ಕಾರ್ಯಕರ್ತರು ಹಿಂಸಾತ್ಮಕ ಪ್ರತಿಭಟನೆಗೆ ಮುಂದಾಗಿ ತಿರುವನಂತಪುರಂ, ಕೊಲ್ಲಂ, ಕೋಝಿಕ್ಕೋಡ್, ವಯನಾಡ್ ಮತ್ತು ಅಲಪ್ಪುಳ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗಳ ಮೇಲೆ ಕಲ್ಲು ತೂರಾಟ ನಡೆಸಿ ಸಾಕಷ್ಟು ಬಸ್‌ಗಳನ್ನ ಜಖಂಗೊಳಿಸಿದ್ದರು.

    70ಕ್ಕೂ ಹೆಚ್ಚು ಬಸ್‌ಗಳು (BUS) ಜಖಂ:
    ಪಿಎಫ್‌ಐ ಕಾರ್ಯಕರ್ತರು ನಡೆಸಿದ 12 ಗಂಟೆಗಳ ಪ್ರತಿಭಟನೆಯಲ್ಲಿ 70ಕ್ಕೂ ಹೆಚ್ಚು ಬಸ್ಸುಗಳು ಹಾನಿಯಾಗಿವೆ. ಅಲ್ಲದೇ ಬಸ್‌ ಚಾಲಕರು, ಪ್ರಯಾಣಿಕರೂ ಗಾಯಗೊಂಡಿದ್ದಾರೆ ಸಾರಿಗೆ ಸಚಿವ ಎ. ರಾಜು ಹೇಳಿದ್ದಾರೆ. ಇದನ್ನೂ ಓದಿ: ಕೇರಳದಲ್ಲಿ ಭಾರೀ ಹಿಂಸಾಚಾರ – PFI ವಿರುದ್ಧ ಹೈಕೋರ್ಟ್‌ನಿಂದ ಸ್ವಯಂಪ್ರೇರಿತ ಕೇಸ್‌

    ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ಗಳು, ಟ್ರಕ್‌ಗಳು ಮತ್ತು ಖಾಸಗಿ ವಾಹನಗಳ ಮೇಲೆ ಮುಂಜಾನೆ ಕಲ್ಲು ತೂರಾಟ ನಡೆದಿತ್ತು. ಕಲ್ಲು ತೂರಾಟದಿಂದ ಹಲವು ಬಸ್ ಚಾಲಕರು ಗಾಯಗೊಂಡಿದ್ದರು. ಕಣ್ಣೂರಿನಲ್ಲಿ ದ್ವಿಚಕ್ರ ವಾಹನದ ಮೇಲೆ ಕಚ್ಚಾ ಬಾಂಬ್ ಎಸೆಯಲಾಗಿತ್ತು. ಕೊಲ್ಲಂನಲ್ಲಿ ಪ್ರತಿಭಟನಾಕಾರರನ್ನು ಚದುರಿಸಲು ಯತ್ನಿಸುವ ಸಮಯದಲ್ಲಿ ಇಬ್ಬರು ಪೊಲೀಸರಿಗೆ ಬೈಕ್ ಡಿಕ್ಕಿ ಹೊಡೆದಿತ್ತು. ಇದನ್ನೂ ಓದಿ: NIA ಮಿಡ್‌ನೈಟ್ ಆಪರೇಷನ್- ಬೆಂಗ್ಳೂರಿನಲ್ಲಿ ಶಂಕಿತ ಉಗ್ರ ಯಾಸಿರ್ ಅರೆಸ್ಟ್

    ಯಾವುದೇ ಅನುಮತಿ ಪಡೆಯದೇ ಬಂದ್‌ ಕರೆ ಕೊಟ್ಟ ಹಿನ್ನೆಲೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ ಕೇರಳ ಹೈಕೋರ್ಟ್‌ ಪಿಎಫ್‌ಐ ನಾಯಕರ ವಿರುದ್ಧ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿತು. ಮುಷ್ಕರ ಬೆಂಬಲಿಸದ ನಾಗರಿಕರು, ಸಾರ್ವಜನಿಕ ಮತ್ತು ಖಾಸಗಿ ಆಸ್ತಿಗೆ ಧಕ್ಕೆಯಾಗದಂತೆ ಎಚ್ಚರಿಕೆ ವಹಿಸಲು ಸರ್ಕಾರಕ್ಕೆ ಸೂಚನೆ ನೀಡಿತ್ತು.

    Live Tv
    [brid partner=56869869 player=32851 video=960834 autoplay=true]

  • ಲೈಂಗಿಕ ಸಂಬಂಧ ಮದುವೆಯಲ್ಲಿ ಅಂತ್ಯವಾಗದ ಮಾತ್ರಕ್ಕೆ ಅತ್ಯಾಚಾರ ಆಗುವುದಿಲ್ಲ: ಹೈಕೋರ್ಟ್

    ಲೈಂಗಿಕ ಸಂಬಂಧ ಮದುವೆಯಲ್ಲಿ ಅಂತ್ಯವಾಗದ ಮಾತ್ರಕ್ಕೆ ಅತ್ಯಾಚಾರ ಆಗುವುದಿಲ್ಲ: ಹೈಕೋರ್ಟ್

    ತಿರುವನಂತಪುರಂ: ಪರಸ್ಪರ ಸಮ್ಮತಿಯೊಂದಿಗೆ ಹೊಂದಿರುವ ಲೈಂಗಿಕ ಸಂಬಂಧ ಮದುವೆಯಲ್ಲಿ ಅಂತ್ಯಗೊಂಡಿಲ್ಲ ಎಂಬ ಮಾತ್ರಕ್ಕೆ ಅದು ಅತ್ಯಾಚಾರವೆಂದು (ಐಪಿಸಿ ಸೆಕ್ಷನ್ 376 ಅಡಿಯಲ್ಲಿ) ಸಾಬೀತು ಮಾಡಲು ಆಗುವುದಿಲ್ಲ ಎಂದು ಕೇರಳ ಹೈಕೋರ್ಟ್ ಹೇಳಿದೆ.

    court order law

    ಮೋಸದಿಂದ ಅಥವಾ ದಿಕ್ಕುತಪ್ಪಿಸಿ ಲೈಂಗಿಕ ಕ್ರಿಯೆ ನಡೆಸದ ಹೊರತು ಇಬ್ಬರು ವಯಸ್ಕರ ನಡುವಿನ ಲೈಂಗಿಕ ಸಂಬಂಧ ಐಪಿಸಿ ಸೆಕ್ಷನ್ 376ರ ಅಡಿ ಅತ್ಯಾಚಾರಕ್ಕೆ ಸಮನಾಗಿರುವುದಿಲ್ಲ. ಇಬ್ಬರ ಲೈಂಗಿಕ ಸಂಬಂಧಕ್ಕೆ ಮದುವೆಯ ಅಂಕಿತ ಬೀಳದಿದ್ದರೂ ಲೈಂಗಿಕ ಸಮ್ಮತಿಗೆ ಧಕ್ಕೆ ತರುವ ಯಾವುದೇ ಅಂಶ ಇರದಿದ್ದಾಗ ಅದು ಅತ್ಯಾಚಾರ ಆಗುವುದಿಲ್ಲ. ಇಬ್ಬರು ಶಾರೀರಿಕ ಸಂಬಂಧದಲ್ಲಿ ತೊಡಗಿದ್ದರೂ ನಂತರ ಮದುವೆಗೆ ಒಪ್ಪದಿದ್ದರೆ ಅಥವಾ ಸಂಬಂಧ ಮುಂದುವರಿಸುವುದು ವಿಫಲವಾದರೆ ಆ ಅಂಶಗಳು ಅತ್ಯಾಚಾರ ಆರೋಪ ನಿಗದಿಗೆ ಒಪ್ಪುವಂತಹದ್ದಾಗಿರುವುದಿಲ್ಲ ಎಂದು ನ್ಯಾಯಮೂರ್ತಿ ಬೆಚು ಕುರಿಯನ್ ಥಾಮಸ್ ಅವರಿದ್ದ ಪೀಠ ಹೇಳಿದೆ. ಇದನ್ನೂ ಓದಿ: ʻಸೀತಾ ರಾಮಂʼ ಚಿತ್ರದ ಲುಕ್‌ ಮೂಲಕ ಈದ್‌ ಹಬ್ಬಕ್ಕೆ ಫ್ಯಾನ್ಸ್‌ಗೆ ಶುಭಕೋರಿದ ರಶ್ಮಿಕಾ

    ಅತ್ಯಾಚಾರವಾಗಿದೆ ಎಂಬುದನ್ನು ಸಾಬೀತು ಮಾಡಬೇಕಾದರೆ ಮದುವೆಯಾಗುವ ಭರವಸೆಯನ್ನು ಉದ್ದೇಶಪೂರ್ವಕವಾಗಿ ಸುಳ್ಳಾಗಿಸಿರಬೇಕು ಮತ್ತು ಅಂತಹ (ಸುಳ್ಳು) ಭರವಸೆಗೆ ಮಹಿಳೆ ಒಪ್ಪಿಗೆ ಸೂಚಿಸಿರಬೇಕು ಎಂದು ಪೀಠ ಪ್ರತಿಪಾದಿಸಿದೆ.

    ಮದುವೆಯಾಗುವ ಭರವಸೆ ಪಾಲಿಸಲು ವಿಫಲರಾದ ಕಾರಣಕ್ಕಾಗಿ ಪುರುಷ ಮತ್ತು ಮಹಿಳೆಯ ನಡುವಿನ ದೈಹಿಕ ಸಂಬಂಧವನ್ನು ಅತ್ಯಾಚಾರವಾಗಿ ಪರಿವರ್ತಿಸಬೇಕಾದರೆ ಪುರುಷನ ಭರವಸೆ ಮೇಲೆ ಲೈಂಗಿಕ ಕ್ರಿಯೆಯಲ್ಲಿ ತೊಡಗಲು ಮಹಿಳೆ ನಿರ್ಧರಿಸಿರಬೇಕು. ಮದುವೆ ಕುರಿತ ಸುಳ್ಳು ಭರವಸೆಯನ್ನು ಸಾಬೀತುಪಡಿಸಲು ಭರವಸೆ ನೀಡಿದವನಿಗೆ ಲೈಂಗಿಕ ಕ್ರಿಯೆಯ ಸಂದರ್ಭದಲ್ಲಿ ತನ್ನ ಮಾತನ್ನು ಎತ್ತಿ ಹಿಡಿಯುವ ಉದ್ದೇಶ ಇರಬಾರದು. ಶಾರೀರಿಕ ಮಿಲನ ಮತ್ತು ಮದುವೆಯ ಭರವಸೆಯ ನಡುವೆ ನೇರ ಸಂಬಂಧ ಇರಬೇಕು ಆದೇಶಿಸಲಾಗಿದೆ. ಇದನ್ನೂ ಓದಿ: ಪೌರ ಕಾರ್ಮಿಕರು ರಜೆ ಹಾಕಿದ್ರೆ ಸಂಬಳವೇ ಕಟ್- ರೆಸ್ಟ್‌ಲೆಸ್ ವರ್ಕರ್ಸ್‍ಗೆ ಇದೆಂಥಾ ಅನ್ಯಾಯ..?

    ತನ್ನ ಸಹೋದ್ಯೋಗಿ ಹಾಗೂ ವಕೀಲೆಯೊಬ್ಬರು ನೀಡಿದ್ದ ಲೈಂಗಿಕ ದೌರ್ಜನ್ಯದ ದೂರಿನಡಿ ಬಂಧಿತರಾಗಿರುವ ಕೇಂದ್ರ ಸರ್ಕಾರದ ವಕೀಲ ಕೇರಳದ ನವನೀತ್ ಎನ್.ನಾಥ್ ಅವರ ಪ್ರಕರಣದ ಕುರಿತು ವಿಚಾರಣೆ ನಡೆಯಿತು. ವಾದ-ಪ್ರತಿವಾದಗಳನ್ನು ಆಲಿಸಿದ ನ್ಯಾಯಾಲಯವು ಕೆಲ ಷರತ್ತುಗಳನ್ನು ವಿಧಿಸುವ ಮೂಲಕ ಜಾಮೀನು ನೀಡಿತು.

    ನವನೀತ್ ಅವರ ಪರವಾಗಿ ಹಿರಿಯ ವಕೀಲ ರಮೇಶ್ ಚಂದರ್ ಮತ್ತು ನ್ಯಾಯವಾದಿ ಸಿ.ಪಿ.ಉದಯಭಾನು, ದೂರುದಾರರ ಪರವಾಗಿ ವಕೀಲ ಜಾನ್ ಎಸ್.ರಾಲ್ಫ್ ಮತ್ತು ಪಬ್ಲಿಕ್ ಪ್ರಾಸಿಕ್ಯೂಟರ್ ಕೆ.ಎ.ನೌಷಾದ್ ವಾದ ಮಂಡಿಸಿದರು.

    Live Tv
    [brid partner=56869869 player=32851 video=960834 autoplay=true]

  • ಆರೋಗ್ಯ ಕಾರ್ಯಕರ್ತರ ಕರ್ತವ್ಯಕ್ಕೆ ಅಡ್ಡಿಪಡಿಸುವುದು ಘೋರ, ಜಾಮೀನು ರಹಿತ ಅಪರಾಧ – ಹೈಕೋರ್ಟ್

    ಆರೋಗ್ಯ ಕಾರ್ಯಕರ್ತರ ಕರ್ತವ್ಯಕ್ಕೆ ಅಡ್ಡಿಪಡಿಸುವುದು ಘೋರ, ಜಾಮೀನು ರಹಿತ ಅಪರಾಧ – ಹೈಕೋರ್ಟ್

    ತಿರುವನಂತಪುರಂ: ದೈಹಿಕವಾಗಿ ಯಾವುದೇ ರೀತಿಯಿಂದ ಹಲ್ಲೆ ನಡೆಸದಿದ್ದರೂ ಆರೋಗ್ಯ ಕಾರ್ಯಕರ್ತರ ಕರ್ತವ್ಯಕ್ಕೆ ಅಡ್ಡಿಪಡಿಸಿದರೆ ಅದು ಘೋರ ಹಾಗೂ ಜಾಮೀನು ರಹಿತ ಅಪರಾಧವಾಗುತ್ತದೆ ಎಂದು ಕೇರಳ ಹೈಕೋರ್ಟ್ ಹೇಳಿದೆ.

    ಹಲ್ಲೆ ನಡೆಸದೇ ಇದ್ದರೂ ಕೇರಳ ಆರೋಗ್ಯ ಸೇವಾ ಸಿಬ್ಬಂದಿ ಮತ್ತು ಆರೋಗ್ಯ ಸೇವಾ ಸಂಸ್ಥೆಗಳ (ಹಿಂಸಾಚಾರ ಮತ್ತು ಆಸ್ತಿ ಹಾನಿ ತಡೆ) ಕಾಯ್ದೆ ಅಡಿಯಲ್ಲಿ ಗಂಭೀರ ಜಾಮೀನು ರಹಿತ ಅಪರಾಧವಾಗುತ್ತದೆ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ. ಇದನ್ನೂ ಓದಿ: ಯುವತಿ ಸ್ನೇಹಿತೆಯಾದ ಮಾತ್ರಕ್ಕೆ ಲೈಂಗಿಕ ಸಂಬಂಧಕ್ಕೆ ಒಪ್ಪಿಗೆಯಿದೆ ಎಂದರ್ಥವಲ್ಲ – ಹೈಕೋರ್ಟ್

    ಸಾಂದರ್ಭಿಕ ಚಿತ್ರ

    ವೈದ್ಯೆಯೊಬ್ಬರಿಗೆ ಬೆದರಿಕೆಯೊಡ್ಡಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ಆರೋಪಿಯೊಬ್ಬ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬೆಚು ಕುರಿಯನ್ ಥಾಮಸ್ ಅವರಿದ್ದ ಏಕ ಸದಸ್ಯ ಪೀಠವು ಈ ಆದೇಶ ನೀಡಿದ್ದು ಅರ್ಜಿದಾರರಿಗೆ ಜಾಮೀನು ನಿರಾಕರಿಸಿದೆ. ಆರೋಗ್ಯ ಸೇವೆ ಒದಗಿಸುವವರ ವಿರುದ್ಧದ ಎಲ್ಲಾ ರೀತಿಯ ಹಿಂಸಾಚಾರ ತಡೆಯುವುದು ಶಾಸನದ ಉದ್ದೇಶವಾಗಿದೆ ಎಂದು ಒತ್ತಿ ಹೇಳಿದೆ. ಇದನ್ನೂ ಓದಿ: ಪ್ರವಾದಿಗಾಗಿ ಒಂದು ಕೊಲೆ ಮಾಡೋಕಾಗಲ್ವೆ? – ಉದಯಪುರ ಹತ್ಯೆಯ ಮಾಸ್ಟರ್‌ಮೈಂಡ್ ವೀಡಿಯೋ ವೈರಲ್

    ಸಾಂದರ್ಭಿಕ ಚಿತ್ರ

    ಕಾಯ್ದೆಯಲ್ಲಿರುವ ಹಿಂಸೆ ಪದಕ್ಕೆ ಸಾಕಷ್ಟು ವ್ಯಾಪಕತೆ ಇದೆ. ಕಾಯ್ದೆ ರೂಪಿಸಿರುವ ಶಾಸಕಾಂಗದ ಉದ್ದೇಶ ನಿಸ್ಸಂದೇಹವಾಗಿ ಆರೋಗ್ಯ ಸೇವೆ ಸಲ್ಲಿಸುತ್ತಿರುವ ವ್ಯಕ್ತಿಗೆ ಯಾವುದೇ ಬೆದರಿಕೆ ಅಥವಾ ಅಡ್ಡಿ ಉಂಟು ಮಾಡುವುದನ್ನು ತಡೆಯಬೇಕು ಎಂಬುದಾಗಿದೆ ಎಂದು ನ್ಯಾಯಾಲಯ ತಿಳಿಸಿದೆ. ಈ ಹಿನ್ನೆಲೆಯಲ್ಲಿ ಆರೋಪಿಗೆ ನಿರೀಕ್ಷಣಾ ಜಾಮೀನು ನೀಡಲು ಕೋರ್ಟ್ ನಿರಾಕರಿಸಿದೆ.

    ಆರೋಪಿ ವಿರುದ್ಧ IPC ಸೆಕ್ಷನ್ 341 (ಅಕ್ರಮ ಪ್ರತಿಬಂಧಕ್ಕಾಗಿ ದಂಡನೆ), ಸೆಕ್ಷನ್ 353 (ಸಾರ್ವಜನಿಕ ಸೇವಕರ ಕರ್ತವ್ಯವನ್ನು ತಡೆಯಲು ಹಲ್ಲೆ ಮಾಡುವುದು), ಸೆಕ್ಷನ್ 506 (ಕ್ರಿಮಿನಲ್ ಅಪರಾಧಕ್ಕಾಗಿ ದಂಡನೆ) ಹಾಗೂ ಸೆಕ್ಷನ್ 3 ಮತ್ತು 4(1) ಆರೋಗ್ಯ ಆರೈಕೆ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.

    ಅರ್ಜಿದಾರರ ಪರ ವಕೀಲ ಆರ್.ಶ್ರೀಹರಿ ವಾದ ಮಂಡಿಸಿದರು. ಸರ್ಕಾರದ ಪರ ಪಬ್ಲಿಕ್ ಪ್ರಾಸಿಕ್ಯೂಟರ್ ಕೆ.ಎ.ನೌಶಾದ್ ಪ್ರತಿವಾದಿಯಾಗಿದ್ದರು.

    Live Tv