Tag: Kerala CM

  • Wayanad landslides | ಸಂತ್ರಸ್ತರಿಗೆ 15 ಕೋಟಿ, 300 ಮನೆ ನೆರವು ನೀಡಲು ಮುಂದಾದ ಬೆಂಗ್ಳೂರು ಮೂಲದ ಆರೋಪಿ

    Wayanad landslides | ಸಂತ್ರಸ್ತರಿಗೆ 15 ಕೋಟಿ, 300 ಮನೆ ನೆರವು ನೀಡಲು ಮುಂದಾದ ಬೆಂಗ್ಳೂರು ಮೂಲದ ಆರೋಪಿ

    ನವದೆಹಲಿ: ಸುಮಾರು 200 ಕೋಟಿ ರೂ. ವಂಚನೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ಬೆಂಗಳೂರು ಮೂಲದ ವಂಚಕ ಸುಕೇಶ್ ಚಂದ್ರಶೇಖರನ್ (Sukesh Chandrasekhar) ವಯನಾಡಿನಲ್ಲಿ ಭೂಕುಸಿತದಿಂದ ಮನೆ ಕಳೆದುಕೊಂಡ ಸಂತ್ರಸ್ತರಿಗೆ ನೆರವು ನೀಡಲು ಮುಂದಾಗಿದ್ದಾನೆ. ಸಂತ್ರಸ್ತರಿಗೆ 15 ಕೋಟಿ ರೂ. ದೇಣಿಗೆ ಹಾಗೂ 300 ಮನೆಗಳನ್ನು ನಿರ್ಮಿಸಿಕೊಡುವುದಾಗಿ ಕೇರಳ ಸಿಎಂ ಪಿಣರಾಯಿ ವಿಜಯನ್‌ಗೆ (Pinarayi Vijayan) ಪತ್ರ ಬರೆದಿದ್ದಾನೆ.

    Wayanad landslides

    ಸದ್ಯ ಮಂಡೋಲಿ ಜೈಲಿನಲ್ಲಿರುವ ಸುಕೇಶ್ ಪತ್ರ ಬರೆದು, ವಯನಾಡಿನ ಭೂಕುಸಿತ (Wayanad landslides) ದುರಂತ ಕಂಡು ತುಂಬಾ ನೋವಾಗಿದೆ. ಆದ್ದರಿಂದ ಪರಿಹಾರ ನಿಧಿಗೆ ನೀಡಬೇಕಂತಿರುವ 15 ಕೋಟಿ ರೂ. ಹಣವನ್ನು ಸ್ವೀಕರಿಸಬೇಕೆಂದು ಮನವಿ ಮಾಡಿಕೊಳ್ಳುತ್ತೇನೆ. ಇಂತಹ ಸಂಕಷ್ಟದ ಸಮಯದಲ್ಲಿ ಸಹಾಯ ಮಾಡಲು ಬಯಸುತ್ತೇನೆ. ಆ ಹಣವನ್ನು ಹೊರತುಪಡಿಸಿ ನಾನು ಸಂತ್ರಸ್ತರಿಗೆ ತುರ್ತು ಅಗತ್ಯತೆಯ ನೆಲೆಯಲ್ಲಿ 300 ಮನೆಗಳನ್ನು ನಿರ್ಮಿಸಿಕೊಡಲು ನಿರ್ಧರಿಸಿದ್ದೇನೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾನೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: ನಾಗರ ಪಂಚಮಿ ವಿಶೇಷ: ಜನಮೇಜಯ ಸರ್ಪಯಾಗಕ್ಕೆ ಮುಂದಾಗಿದ್ದು ಯಾಕೆ?

    ಇದು ಚಂದ್ರಶೇಖರ್ ಬರೆದಿರುವ ಪತ್ರ ಎಂದು ಆತನ ಪರ ವಕೀಲ ಅನಂತ್ ಮಲಿಕ್ ಅವರು ಖಚಿತಪಡಿಸಿದ್ದಾರೆ. ಕಾನೂನುಬದ್ಧ ವ್ಯವಹಾರ ಖಾತೆಗಳಿಂದಲೇ ಈ ಹಣ ನೀಡುವುದಾಗಿ ತಿಳಿಸಿರುವ ಸುಕೇಶ್ ಚಂದ್ರಶೇಖರ್, ರಾಜ್ಯ ಸರ್ಕಾರವು ಈ ಪ್ರಸ್ತಾಪವನ್ನು ಸ್ವೀಕರಿಸಬೇಕು ಮತ್ತು ಭೂಕುಸಿತ ದುರಂತಲ್ಲಿ ಸಂತ್ರಸ್ತರ ಕಲ್ಯಾಣ ಮತ್ತು ಪುನರ್ವಸತಿಗಾಗಿ ಈ ಹಣವನ್ನು ಬಳಸಿಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ. ಸದ್ಯ ಸುಕೇಶ್ ಚಂದ್ರಶೇಖರ್ ಪತ್ರಕ್ಕೆ ಕೇರಳ ಸರ್ಕಾರ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇದನ್ನೂ ಓದಿ: EXCLUSIVE: ನಿಜವಾಗಿಯೂ ನಮ್ಮ ಬಳಿ ಮೈಸೂರಲ್ಲಿ ಒಂದೇ ಒಂದು ಸೈಟ್‌ ಇದೆಯಷ್ಟೆ: ಸಿದ್ದರಾಮಯ್ಯ

    ಕಳೆದ ಜುಲೈ 30ರ ತಡರಾತ್ರಿ ವಯನಾಡಿನ ಚುರಲ್ಮಲ ಹಾಗೂ ಮುಂಡಕ್ಕೈ ಪ್ರದೇಶಗಳಲ್ಲಿ ಉಂಟಾದ ಭೂಕುಸಿತದಿಂದ ನೂರಾರು ಮಂದಿ ಮನೆ ಕಳೆದುಕೊಂಡಿದ್ದಾರೆ. 300ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು, 200ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ. ಏತನ್ಮಧ್ಯೆ, ಭೂಕುಸಿತ ಪೀಡಿತ ಚೂರಲ್ಮಲ ಮತ್ತು ಮುಂಡಕ್ಕೈ ಪ್ರದೇಶಗಳಲ್ಲಿ ನಾಪತ್ತೆಯಾದವರ ಹುಡುಕಾಟವು ಮುಂದುವರಿದಿದೆ. ಸೇನೆ ಮತ್ತು ನೌಕಾಪಡೆ ಸೇರಿದಂತೆ ವಿವಿಧ ಪಡೆಗಳ 1,026 ಸಿಬ್ಬಂದಿ, 500ಕ್ಕೂ ಹೆಚ್ಚು ಸ್ವಯಂಸೇವಕರು ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ. ಅಲ್ಲದೇ ಕರ್ನಾಟಕ ಸರ್ಕಾರ ಈಗಾಗಲೇ ವಯನಾಡು ಸಂಸತ್ರಸ್ತರಿಗೆ 100 ಮನೆಗಳನ್ನು ನಿರ್ಮಿಸಿಕೊಡುವುದಾಗಿ ಘೋಷಣೆ ಮಾಡಿದೆ.

  • ಅಕ್ರಮ ಹಣ ಸಾಗಣೆ ಪ್ರಕರಣದಲ್ಲಿ ಕೇರಳ ಸಿಎಂ ಭಾಗಿ – ಸ್ವಪ್ನಾ ಸುರೇಶ್ ಆರೋಪ

    ಅಕ್ರಮ ಹಣ ಸಾಗಣೆ ಪ್ರಕರಣದಲ್ಲಿ ಕೇರಳ ಸಿಎಂ ಭಾಗಿ – ಸ್ವಪ್ನಾ ಸುರೇಶ್ ಆರೋಪ

    ತಿರುವನಂತಪುರಂ: ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು 2016ರಲ್ಲಿ ದುಬೈಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಅಕ್ರಮವಾಗಿ ಹಣ ಸಾಗಣೆ ಮಾಡಿದ್ದಾರೆ ಎಂದು ತಿರುವನಂತಪುರಂ ಚಿನ್ನ ಕಳ್ಳಸಾಗಣೆ ಪ್ರಕರಣದ ಪ್ರಮುಖ ಆರೋಪಿ ಸ್ವಪ್ನಾ ಸುರೇಶ್ ಆರೋಪಿಸಿದ್ದಾರೆ.

    2020ರ ತಿರುವನಂತಪುರಂ ಚಿನ್ನ ಕಳ್ಳಸಾಗಣೆ ಪ್ರಕರಣದ ಪ್ರಮುಖ ಆರೋಪಿ ಸ್ವಪ್ನಾ ಸುರೇಶ್ ಕೊಚ್ಚಿಯ ನ್ಯಾಯಾಂಗ ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್‌  ನ್ಯಾಯಾಲಯದ ಮುಂದೆ ಈ ರೀತಿಯ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಇದನ್ನೂ ಓದಿ: ಗಾಂಧೀಜಿಯನ್ನು ಕೊಂದ ಶಕ್ತಿಗಳೇ ಇಂದು ಧರ್ಮದ ಹೆಸರಲ್ಲಿ ಹತ್ಯೆ ಮಾಡುತ್ತಿವೆ: ಪಿಣರಾಯಿ ವಿಜಯನ್

    ಜಾರಿ ನಿರ್ದೇಶನಾಲಯ (ಇಡಿ) ತನಿಖೆ ನಡೆಸುತ್ತಿರುವ ಚಿನ್ನದ ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಆರ್‌ಪಿಸಿಯ ಸೆಕ್ಷನ್ 164ರ ಅಡಿಯಲ್ಲಿ ತನ್ನ ಹೇಳಿಕೆಯನ್ನು ದಾಖಲಿಸಲು ಸ್ವಪ್ನಾ ಮನಿ ಲ್ಯಾಂಡರಿಂಗ್ ತಡೆ ಕಾಯ್ದೆ (ಪಿಎಂಎಲ್‌ಎ) ವಿಶೇಷ ನ್ಯಾಯಾಲಯವನ್ನು ಸಂಪರ್ಕಿಸಿದ್ದರು. ವಿಶೇಷ ನ್ಯಾಯಾಲಯವು ಆಕೆಯ ಹೇಳಿಕೆಯನ್ನು ದಾಖಲಿಸುವ ಸಲುವಾಗಿ ಎರ್ನಾಕುಲಂ ಮುಖ್ಯ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ನಿಯೋಜಿಸಿತು.

    ನ್ಯಾಯಾಲಯದಲ್ಲಿ ಗೌಪ್ಯ ಹೇಳಿಕೆ ನೀಡಿದ ಬಳಿಕ ಮಾಧ್ಯಮಗಳ ಮುಂದೆ ಮಾಹಿತಿ ಬಹಿರಂಗಪಡಿಸಿದ್ದಾರೆ. ಅಕ್ರಮ ಹಣ ಸಾಗಣೆಯಲ್ಲಿ ಮುಖ್ಯಮಂತ್ರಿ, ಅವರ ಪತ್ನಿ, ಪುತ್ರಿ ಹಾಗೂ ಮಾಜಿ ಪ್ರಧಾನ ಕಾರ್ಯದರ್ಶಿ ಎಂ.ಶಿವಶಂಕರ್ ಸೇರಿದಂತೆ ಹಲವರು ಭಾಗಿಯಾಗಿದ್ದಾರೆ. ಶಿವಶಂಕರ್ ಪ್ರಮುಖ ಪಾತ್ರ ವಹಿಸಿದ್ದರು ಎಂಬುದಾಗಿ ಆಕೆ ಹೇಳಿದ್ದಾರೆ. ಇದನ್ನೂ ಓದಿ: ಬಿಜೆಪಿ ಮಾಜಿ ವಕ್ತಾರೆ ನೂಪುರ್ ಶರ್ಮಾಗೆ ಮುಂಬೈ ಪೊಲೀಸರಿಂದ ಸಮನ್ಸ್

    ನಾನು ಆ ಸಂರ್ಭದಲ್ಲಿ ತಿರುವನಂತರಪುರಂನಲ್ಲಿರುವ ಯುಎಇ ಕನ್ಸುಲೇಟ್‌ನಲ್ಲಿ ಕೆಲಸ ಮಾಡುತ್ತಿದೆ. ಈ ಹಿಂದೆ ಸಿಎಂಗೆ ಕಾರ್ಯದರ್ಶಿಯಾಗಿದ್ದ ಎಂ.ಶಿವಶಂಕರ್ ಮುಖ್ಯಮಂತ್ರಿಗಳಿಗೆ ಆದಷ್ಟು ಬೇಗ ಬ್ಯಾಗ್‌ವೊಂದನ್ನು ತಲುಪಿಸಬೇಕು ಎಂದು ಹೇಳಿ, ನೇರವಾಗಿ ಲಗೇಜ್ ಕ್ಲಿಯರೆನ್ಸ್ಗೆ ಕರೆದರು. ನಂತರ ಬ್ಯಾಗನ್ನು ಕನ್ಸುಲೇಟ್‌ನಲ್ಲಿರುವ ಯಂತ್ರದಲ್ಲಿ ಸ್ಕ್ಯಾನ್ ಮಾಡಲಾಯಿತು. ಈ ವೇಳೆ ಬ್ಯಾಗ್‌ನಲ್ಲಿ ಹಣ ಇರುವುದು ನನ್ನ ಗಮನಕ್ಕೆ ಬಂದಿತು ಎಂದು ಆರೋಪಿ ಸ್ವಪ್ನಾ ಸುರೇಶ್ ಹೇಳಿದ್ದಾರೆ.

    ಇಷ್ಟೇ ಅಲ್ಲದೆ ಶಿವಶಂಕರ್ ಸೂಚನೆಯಂತೆ ಹಲವು ಬಾರಿ ಸಿಎಂ ಅವರ ಅಧಿಕೃತ ನಿವಾಸ ಕ್ಲಿಪ್‌ಹೌಸ್‌ಗೆ ಬಿರಿಯಾನಿ ಪಾತ್ರೆಗಳನ್ನು ಹಸ್ತಾಂತರಿಸಲಾಗಿದೆ. ಆದರೆ ಅದರಲ್ಲಿ ಬಿರಿಯಾನಿ ಮಾತ್ರವಲ್ಲದೆ ಕೆಲ ಲೋಹದ ವಸ್ತುಗಳೂ ಇದ್ದವೆಂದು ಆಕೆ ಆರೋಪಿಸಿದ್ದಾರೆ.

  • ದಾವಣಗೆರೆಯಲ್ಲಿ ಕೇರಳ ಸಿಎಂ ಪ್ರತಿಕೃತಿ ದಹನ

    ದಾವಣಗೆರೆಯಲ್ಲಿ ಕೇರಳ ಸಿಎಂ ಪ್ರತಿಕೃತಿ ದಹನ

    ದಾವಣಗೆರೆ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಕೇರಳ ಪ್ರವಾಸ ಕೈಗೊಂಡಿದ್ದ ಸಂದರ್ಭದಲ್ಲಿ ಕೆಲ ಸಂಘಟನೆಗಳು ಮತ್ತು ರಾಜಕಾರಣಿಗಳು ಅವರ ವಾಹನಕ್ಕೆ ಅಡ್ಡಗಟ್ಟಿ ಕಪ್ಪುಬಾವುಟ ತೋರಿಸಿ ಉದ್ದಟತನ ಮೆರದಿದ್ದವು.

    ಇದನ್ನು ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ಬಣ) ಕಾರ್ಯಕರ್ತರು ದಾವಣಗೆರೆಯ ಜಯದೇವ ವೃತ್ತದಲ್ಲಿಂದು ಪ್ರತಿಭಟನೆ ನಡೆಸಿದರು. ಕೇರಳ ಸರ್ಕಾರ ಈ ಕೂಡಲೇ ಕ್ಷಮೆ ಯಾಚಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಕೇರಳದಿಂದ ಬರುವ ವ್ಯಕ್ತಿಯಾಗಲಿ ಅಥವಾ ಸರಕನ್ನಾಗಲಿ ಯಾವುದಕ್ಕೂ ಅವಕಾಶ ಮಾಡಿಕೊಡುವುದಿಲ್ಲ, ಕೇರಳ ಸರ್ಕಾರ ಕ್ಷಮೆಯಾಚಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುವುದಾಗಿ ಪ್ರತಿಭಟನಾಕಾರರು ಎಚ್ಚರಿಸಿದರು.

    ಕೇರಳದಲ್ಲಿ ಕನ್ನಡಿಗರ ಸ್ವಾಭಿಮಾನ ಕೆಣಕುವ ದುಸ್ಸಾಹಸಕ್ಕೆ ಕೈಹಾಕಿದ್ದಾರೆ. ಎಲ್ಲಾ ರಾಜ್ಯಗಳಲ್ಲಿ ಪದೇ ಪದೇ ಕನ್ನಡಿಗರ ಮೇಲೆ ಹಲ್ಲೆ ಆಗುತ್ತಿರುವುದು ಖಂಡನೀಯ. ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಅವಮಾನ ಮಾಡಿರುವುದು ಇಡೀ ರಾಜ್ಯಕ್ಕೆ ಅವಮಾನ ಮಾಡಿದಂತೆ ಆಗಿದೆ. ಶಾಂತಿಪ್ರಿಯರಾಗಿರುವ ಕನ್ನಡಿಗರು ತಾಳ್ಮೆಯಿಂದ ವರ್ತಿಸಿದ್ದಾರೆ. ಆದರೆ ಇದು ಒಂದು ವ್ಯವಸ್ಥಿತ ಸಂಚು. ಇದಕ್ಕೆ ಕೇರಳ ಸರ್ಕಾರವೇ ಕುಮ್ಮಕ್ಕು ನೀಡಿದೆ ಎಂದು ಆರೋಪಿಸಿದರು.

    ಭಾಷಾ ದ್ವೇಷಕ್ಕೆ ಮುನ್ನುಡಿ ಬರೆದಿರುವ ಕೇರಳ ಸರ್ಕಾರ ಮುಂದಿನ ದಿನಗಳಲ್ಲಿ ದೊಡ್ಡ ಬೆಲೆ ತೆರಬೇಕಾಗುತ್ತದೆ. ಸಂಬಂಧಪಟ್ಟ ಅಧಿಕಾರಿಗಳನ್ನು ಸೇವೆಯಿಂದ ವಜಾಗೊಳಿಸಬೇಕು ಎಂದರು. ಕೇರಳ ಸರ್ಕಾರ ಈ ಕೂಡಲೇ ಮುಖ್ಯಮಂತ್ರಿ ಯಡಿಯೂರಪ್ಪ ಬಳಿ ಕ್ಷಮೆಯಾಚಿಸಬೇಕೆಂದು ಪ್ರತಿಭಟನಾಕರರು ಒತ್ತಾಯಿಸಿದರು. ಈ ವೇಳೆ ಪ್ರತಿಭಟನಾಕರು ಜಯದೇವ ವೃತ್ತದಿಂದ ಮೆರವಣಿಗೆಯ ಮೂಲಕ ಉಪವಿಭಾಗಾಧಿಕಾರಿ ಕಚೇರಿಗೆ ತೆರಳಿ ಉಪವಿಭಾಗಾಧಿಕಾರಿ ಮುಖಾಂತರ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.

  • ವಯನಾಡಿನಲ್ಲಿ ಸೋಲಿಸುತ್ತೇವೆ – ಕೇರಳದಲ್ಲಿ ರಾಹುಲ್ ಸ್ಪರ್ಧೆಗೆ ಸಿಪಿಎಂ ಭಾರೀ ವಿರೋಧ

    ವಯನಾಡಿನಲ್ಲಿ ಸೋಲಿಸುತ್ತೇವೆ – ಕೇರಳದಲ್ಲಿ ರಾಹುಲ್ ಸ್ಪರ್ಧೆಗೆ ಸಿಪಿಎಂ ಭಾರೀ ವಿರೋಧ

    ನವದೆಹಲಿ: ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಕೇರಳದ ವಯನಾಡುವಿನಿಂದ ಸ್ಪರ್ಧಿಸುತ್ತಿರುವುದಕ್ಕೆ ಭಾರತೀಯ ಕಮ್ಯುನಿಸ್ಟ್ ಪಾರ್ಟಿ ಮಾಕ್ರ್ಸಿಸ್ಟ್(ಸಿಪಿಎಂ) ಬಲವಾಗಿ ವಿರೋಧಿಸಿದೆ.

    ಸಿಪಿಎಂ ನೇತೃತ್ವದ ಎಲ್‍ಡಿಎಫ್ ಈಗಾಗಲೇ ವಯನಾಡುವಿನಲ್ಲಿ ಭಾರತೀಯ ಕಮ್ಯುನಿಸ್ಟ್ ಪಾರ್ಟಿಯ(ಸಿಪಿಐ) ಪಿ.ಪಿ ಸುನೀರ್‍ರನ್ನು ಲೋಕಸಮರಕ್ಕೆ ಕಣಕ್ಕಿಳಿಸಲಾಗಿದೆ. ಆದ್ರೆ ಈಗ ರಾಹುಲ್ ಗಾಂಧಿ ಈ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂಬ ವಿಷಯ ತಿಳಿಯುತ್ತಿದ್ದಂತೆ ಸಿಪಿಎಂ ನಾಯಕರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಹಿರಿಯ ನಾಯಕ ಪ್ರಕಾಶ್ ಕಾರಟ್ ಅವರು ಈ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿ, ರಾಹುಲ್ ಗಾಂಧಿಯನ್ನು ವಯನಾಡುವಿನಲ್ಲಿ ಸೋಲುವಂತೆ ಮಾಡುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಪ್ರಕಾಶ್ ಕಾರಟ್ ಅವರು, ಕಾಂಗ್ರೆಸ್ ತಮ್ಮ ಸಾಮಥ್ರ್ಯವನ್ನು ಪ್ರದರ್ಶಿಸಲು ರಾಹುಲ್ ಅವರನ್ನು ವಯನಾಡುವಿನಿಂದ ಕಣಕ್ಕಿಳಿಸಿದೆ. ಬಿಜೆಪಿಯನ್ನು ಸೋಲಿಸಲು ನಾವು ಒಂದಾದರೆ ಕೇರಳದಲ್ಲಿ ನಮ್ಮ ವಿರುದ್ಧವೇ ರಾಹುಲ್ ಸ್ಪರ್ಧೆ ಮಾಡುತ್ತಿದ್ದಾರೆ. ಕೇರಳದಲ್ಲಿ ಬಿಜೆಪಿ ವಿರುದ್ಧವಾಗಿ ಲೆಫ್ಟ್ ಡೆಮಾಕ್ರಟಿಕ್ ಫ್ರಂಟ್(ಎಲ್‍ಡಿಎಫ್) ಕೆಲಸ ಮಾಡುತ್ತಿದೆ. ಹೀಗಾಗಿ ಕಾಂಗ್ರೆಸ್ ರಾಹುಲ್ ಗಾಂಧಿಯನ್ನು ಕೇರಳದಲ್ಲಿ ಸಿಪಿಎಂ ವಿರುದ್ಧ ನಿಲ್ಲಿಸುತ್ತಿದೆ ಎಂಬುದು ಸ್ಪಷ್ಟವಾಗುತ್ತಿದೆ. ಕಾಂಗ್ರೆಸ್ಸಿನ ಈ ನಿರ್ಧಾರವನ್ನು ನಾವು ವಿರೋಧಿಸುತ್ತೆವೆ. ಅಲ್ಲದೇ ರಾಹುಲ್‍ರನ್ನು ಈ ಚುನಾವಣೆಯಲ್ಲಿ ಸೋಲಿಸಲು ಶ್ರಮಿಸುತ್ತೇವೆ ಎಂದು ಕಿಡಿಕಾರಿದ್ದಾರೆ.

    ಇದರ ಜೊತೆಗೆ ಕೇರಳ ಸಿಎಂ ಪಿಣರಾಯಿ ವಿಜಯನ್ ಅವರು ಕೂಡ ಕಾಂಗ್ರೆಸ್ ನಿರ್ಧಾರವನ್ನು ಖಂಡಿಸಿದ್ದಾರೆ. ಕೇರಳದಲ್ಲಿ ರಾಹುಲ್ ಗಾಂಧಿ ಸ್ಪರ್ಧಿಸಿದರೆ ಅದು ಬಿಜೆಪಿ ವಿರುದ್ಧ ಆಗಲ್ಲ ಸಿಪಿಎಂ ವಿರುದ್ಧವಾಗಿದೆ. ಕೇರಳದಲ್ಲಿ ಕಾಂಗ್ರೆಸ್ಸನ್ನು ಸಿಪಿಎಂ ಮಣಿಸೋದು ಖಚಿತ ಎಂದು ಹೇಳಿದರು.

    ಕಳೆದ 2014ರ ಲೋಕಸಭಾ ಚುನಾವಣೆಯಲ್ಲಿ ವಯನಾಡುವಿನಲ್ಲಿ ಕಾಂಗ್ರೆಸ್ಸಿನಿಂದ ಎಂ.ಐ ಶಹನಾವಸ್ ಸ್ಪರ್ಧಿಸಿ 3,77,035 ಮತಗಳನ್ನು ಪಡೆದಿದ್ದರು. ಸಿಪಿಐನ ಸತ್ಯನ್ ವೋಕೆರಿ 3,56,165 ಮತಗಳನ್ನು ಗಳಿಸಿದ್ದರು. ಹಾಗೆಯೇ ಬಿಜೆಪಿಯ ಪಿ.ಆರ್ ರಸ್‍ಮಿಲ್‍ನಾಥ್ ಸ್ಪರ್ಧಿಸಿ 80,752 ಮತಗಳನ್ನು ಪಡೆದಿದ್ದರು. 2018ರ ನವೆಂಬರ್ 21 ರಂದು ಶಹನಾವಸ್ ಚೆನ್ನೈ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು.