Tag: Keral

  • ಕೇರಳವನ್ನು ಪ್ರಶ್ನಿಸಬೇಕೇ ಹೊರತು ಕೇಂದ್ರವನ್ನಲ್ಲ: ಸಿದ್ದುಗೆ ಬಿಜೆಪಿ ತಿರುಗೇಟು

    ಕೇರಳವನ್ನು ಪ್ರಶ್ನಿಸಬೇಕೇ ಹೊರತು ಕೇಂದ್ರವನ್ನಲ್ಲ: ಸಿದ್ದುಗೆ ಬಿಜೆಪಿ ತಿರುಗೇಟು

    ಬೆಂಗಳೂರು: ಗಣರಾಜ್ಯೋತ್ಸವದ ಸ್ಥಬ್ಧ ಚಿತ್ರದ ವಿಚಾರದಲ್ಲಿ ಕೇರಳ ಸರ್ಕಾರ ಮಾಡಿದ ತಪ್ಪಿಗೆ ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ಅವರು ಪ್ರಶ್ನಿಸಬೇಕಿರುವುದು ಕೇರಳದ ಸಿಪಿಐಎಂ ಪಕ್ಷವನ್ನೇ ಹೊರತು ಕೇಂದ್ರವನ್ನಲ್ಲ ಎಂದು ಕರ್ನಾಟಕ ಬಿಜೆಪಿ ತಿರುಗೇಟು ನೀಡಿದೆ.

    ಭಾನುವಾರ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಟ್ವೀಟ್ ಮಾಡಿ ಗಣರಾಜ್ಯೋತ್ಸವ ಪರೇಡ್‍ನಲ್ಲಿ ಸಮಾಜ ಸುಧಾರಕ ನಾರಾಯಣ ಗುರುಗಳ ಸ್ತಬ್ಧಚಿತ್ರಕ್ಕೆ ಅವಕಾಶ ನಿರಾಕರಿಸಿರುವುದು ತಳಸಮುದಾಯದ ಮಹಾಪುರುಷರ ಬಗ್ಗೆ ಕೇಂದ್ರ ಸರ್ಕಾರಕ್ಕೆ ಇರುವ ಪೂರ್ವಗ್ರಹ ಮತ್ತು ತಿರಸ್ಕಾರಕ್ಕೆ ಸಾಕ್ಷಿ. ಶತಮಾನದ ಹಿಂದೆಯೇ ಅಸ್ಪøಶ್ಯತೆ ಮತ್ತು ಪುರೋಹಿತಷಾಹಿ ವ್ಯವಸ್ಥೆ ವಿರುದ್ಧ ಸಿಡಿದೆದ್ದು, ಹಿಂದೂ ಧರ್ಮದ ಸುಧಾರಣೆಗೆ ತಮ್ಮನ್ನು ಅರ್ಪಿಸಿಕೊಂಡಿದ್ದ ನಾರಾಯಣ ಗುರುಗಳಿಗೆ ಅವಮಾನಿಸಿರುವ ಕೇಂದ್ರ ಸರ್ಕಾರಕ್ಕೆ ಹಿಂದೂ ಧರ್ಮದ ಬಗ್ಗೆ ಮಾತನಾಡುವ ಯಾವ ನೈತಿಕತೆ ಇದೆ ಎಂದು ಬಿಜೆಪಿ ವಿರುದ್ಧ ಕಿಡಿಕಾರಿದ್ದರು.

    ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಡಿರುವ ಟ್ವೀಟ್‍ಗೆ ಬಿಜೆಪಿ ತಿರುಗೇಟು ನೀಡಿದ್ದು, ಗಣರಾಜೋತ್ಸವ ಪರೇಡ್‍ನಲ್ಲಿ ಪ್ರದರ್ಶನಗೊಳ್ಳಲಿರುವ ಟ್ಯಾಬ್ಲೊ ವಿಚಾರವಾಗಿ ಕೇರಳದ ಸ್ಥಬ್ಧ ಚಿತ್ರವನ್ನು ಯಾಕೆ ತೆಗೆದು ಹಾಕಿದೆ ಎನ್ನುವುದಕ್ಕೆ ಪ್ರತಿಕ್ರಿಯೆ ನೀಡಿದೆ.

    ಟ್ವೀಟ್‍ನಲ್ಲಿ ಏನಿದೆ?: ಮೊಸರಿನಲ್ಲೂ ಕಲ್ಲು ಹುಡುಕುವ ಜಾಯಮಾನ ಇಬ್ಬರು ಮಾಜಿ ಮುಖ್ಯಮಂತ್ರಿಗಳಿಗೆ ಹೊಸತೇನಲ್ಲ. ಆದರೂ ಸೂಕ್ಷ್ಮ ವಿಚಾರಗಳಲ್ಲಿ ರಾಜಕೀಯ ಮಾಡುವುದು ಸರಿಯಲ್ಲ. ಸ್ತಬ್ಧ ಚಿತ್ರದ ವಿಚಾರದಲ್ಲಿ ಕೇಂದ್ರ ಸರ್ಕಾರ ಸೂಕ್ತ ಮಾರ್ಗದರ್ಶಿ ಸೂತ್ರವನ್ನು ಕೇರಳ ಸರ್ಕಾರಕ್ಕೆ ಕಳುಹಿಸಿತ್ತು. ಈ ಶಿಷ್ಟಾಚಾರವನ್ನು ಉಲ್ಲಂಘಿಸಿದ ಕೇರಳ ಸರ್ಕಾರದ ರಾಜಕೀಯ ಕುತಂತ್ರದಿಂದ ಈಗ ವಿವಾದ ಸೃಷ್ಟಿಯಾಗಿದೆ. ಇದನ್ನೂ ಓದಿ: ಸಿಎಂ ಬೊಮ್ಮಾಯಿಗೆ ಕೊರೊನಾ ನೆಗೆಟಿವ್

    ಮಾಜಿ ಮುಖ್ಯಮಂತ್ರಿಗಳಿಬ್ಬರು ಸತ್ಯದ ಪರವಾಗಿ ನಿಲ್ಲುವವರಾದರೆ ಈ ವಿಚಾರದಲ್ಲಿ ಮೋದಿಯವರನ್ನು ಬೆಂಬಲಿಸಬೇಕಲ್ಲವೇ? ಪ್ರಧಾನಿ ಮೋದಿ ಅವರು ನಾರಾಯಣ ಗುರುಗಳ ವಿಚಾರದಲ್ಲಿ ಅಪಾರ ಗೌರವ ಹೊಂದಿದ್ದಾರೆ. ಶ್ರೀಗಳ ಐಕ್ಯ ಸ್ಥಳಕ್ಕೂ ಭೇಟಿ ನೀಡಿದ್ದಾರೆ. ತಮ್ಮ ಭಾಷಣದಲ್ಲಿ ನಾರಾಯಣ ಗುರುಗಳ ಸಾಧನೆಯನ್ನು ಪ್ರಸ್ತಾಪಿಸಿದ್ದಾರೆ. ಈ ಮಹಾನ್ ದಾರ್ಶನಿಕನ ಬಗ್ಗೆ ಪ್ರಧಾನಿ ಹೊಂದಿರುವ ಗೌರವವನ್ನು ಪ್ರಶ್ನಿಸುವುದು ಸಿದ್ದರಾಮಯ್ಯ ಅವರಿಗೆ ಶೋಭೆ ತರದು ಎಂದು ಬಿಜೆಪಿ ಟ್ವೀಟ್ ಮಾಡಿದೆ. ಇದನ್ನೂ ಓದಿ: ಟ್ಯಾಬ್ಲೊ ವಿಚಾರದಲ್ಲಿ ದಕ್ಷಿಣ ಭಾರತಕ್ಕೆ ಅನ್ಯಾಯ – ಸಿಡಿದೆದ್ದ ರಾಜ್ಯಗಳು

  • ಟಿಕೆಟ್ ಪಡೆಯದ ಪ್ರಯಾಣಿಕನಿಗೆ ಗೂಸಾ ಕೊಟ್ಟ ಪೊಲೀಸ್ ಅಧಿಕಾರಿ ವೀಡಿಯೋ ವೈರಲ್

    ಟಿಕೆಟ್ ಪಡೆಯದ ಪ್ರಯಾಣಿಕನಿಗೆ ಗೂಸಾ ಕೊಟ್ಟ ಪೊಲೀಸ್ ಅಧಿಕಾರಿ ವೀಡಿಯೋ ವೈರಲ್

    ತಿರುವನಂತಪುರಂ: ರೈಲಿನಲ್ಲಿ ಟಿಕೆಟ್ ಇಲ್ಲದೇ ಪ್ರಯಾಣಿಸುತ್ತಿದ್ದ ವ್ಯಕ್ತಿಗೆ ಪೊಲೀಸ್ ಅಧಿಕಾರಿಯೊಬ್ಬರು ಮನಬಂದಂತೆ ಥಳಿಸಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ವೈರಲ್ ವೀಡಿಯೋ ನೋಡಿದ ನೆಟ್ಟಿಗರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸ್ ಅಧಿಕಾರಿಯ ಅಮಾನತಿಗೆ ಕಾರಣವಾಗಿದೆ. ಈ ವೀಡಿಯೋ 20 ಸೆಕೆಂಡ್‍ಗಳಿದ್ದು, ಇದರಲ್ಲಿ ಪೊಲೀಸ್ ಅಧಿಕಾರಿಯೊಬ್ಬರು ಪ್ರಯಾಣಿಕನೊಬ್ಬರಿಗೆ ಕಾಲಿನಲ್ಲಿ ಒದೆಯುತ್ತಿದ್ದಾರೆ. ಪ್ರಯಾಣಿಕನ ಕೈಯನ್ನು ಕಟ್ಟಿ ಹಾಕಲಾಗಿದೆ. ಆತನ ಅಸಹಾಯಕ ಸ್ಥಿತಿಯಲ್ಲಿ ಕುಳಿತಿದ್ದಾನೆ. ಆತನಿಗೆ ಆ ಪೊಲೀಸ್ ಅಧಿಕಾರಿ ಮನಬಂದಂತೆ ಥಳಿಸುತ್ತಿದ್ದಾರೆ.

    ಮಾವಲಿ ಎಕ್ಸ್‍ಪ್ರೆಸ್‍ನಲ್ಲಿ ಈ ಘಟನೆ ನಡೆದಿದೆ. ಟಿಕೆಟ್ ಪರಿಶೀಲಿಸಲು ಪೊಲೀಸರು ರೈಲನ್ನು ಹತ್ತುತ್ತಾರೆ. ಆಗ ವ್ಯಕ್ತಿಯು ಟಿಕೆಟ್‍ನ್ನು ತೋರಿಸಲು ಸಾಧ್ಯವಾಗದೇ ಪರಿತಪಿಸುತ್ತಾನೆ. ಆತ ಕುಡಿದಿದ್ದಾನೆ ಎಂದುಕೊಂಡ ಪೊಲೀಸರು ಆತನಿಗೆ ಹೊಡೆದಿದ್ದಾರೆ. ಇದನ್ನೂ ಓದಿ: ಸೊಸೆಯನ್ನು ಕೊಡಲಿಯಿಂದ ಕೊಚ್ಚಿ ಕೊಂದು ಮಾವ ಎಸ್ಕೇಪ್

    ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಘಟನೆ ಕುರಿತು ನೆಟ್ಟಿಗರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಘಟನೆಯಲ್ಲಿ ಪೊಲೀಸ್ ಮನಬಂದಂತೆ ಥಳಿಸುತ್ತಿದ್ದರೂ, ಅವರನ್ನು ತಡೆಯದೇ ನೋಡುತ್ತಿದ್ದ ಟಿಟಿಯನ್ನು ಅಮಾನತು ಮಾಡಲು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಆರ್‌ಬಿಐ ಪರಿಶೀಲನೆ ವೇಳೆ ನಕಲಿ ನೋಟುಗಳು ಪತ್ತೆ

    POLICE JEEP

    ಘಟನೆ ಸಂಬಂಧಿಸಿ ವಿರೋಧ ಪಕ್ಷಗಳು ತೀವ್ರ ಟೀಕೆಯನ್ನು ವ್ಯಕ್ತಪಡಿಸಿದ್ದಾರೆ. ಪೊಲೀಸರು ಕ್ರಿಮಿನಲ್‍ಗಳನ್ನು ಬಂಧಿಸುವುದರ ಬದಲು ಸಾಮಾನ್ಯ ಜನರಿಗೆ ತೊಂದರೆ ನೀಡುತ್ತಿದ್ದಾರೆ. ಪ್ರಯಾಣಿಕನ ಮೇಲೆ ನಡೆದ ಹಲ್ಲೆಯನ್ನು ಕಾನೂನು ಬದ್ಧವಾಗಿ ಇತ್ಯರ್ಥ ಮಾಡಬೇಕು ಎಂದು ಒತ್ತಾಯಿಸಿದ್ದಾರೆ. ಈ ಬಗ್ಗೆ ರಾಜ್ಯ ಸರ್ಕಾರ ತನಿಖೆ ಕೈಗೊಂಡಿದೆ.

  • 14 ವರ್ಷದ ಮಗನನ್ನೇ ಲೈಂಗಿಕವಾಗಿ ಬಳಸಿಕೊಂಡ ತಾಯಿ ಅರೆಸ್ಟ್

    14 ವರ್ಷದ ಮಗನನ್ನೇ ಲೈಂಗಿಕವಾಗಿ ಬಳಸಿಕೊಂಡ ತಾಯಿ ಅರೆಸ್ಟ್

    – ಕೇರಳದಲ್ಲಿ ಮೊದಲ ಪ್ರಕರಣ
    – ಪತ್ನಿಯ ವಿರುದ್ಧ ಪತಿ ದೂರು

    ತಿರುವನಂತಪುರ: ತಾಯಿ ತನ್ನ 14 ವರ್ಷದ ಮಗನನ್ನೇ ಲೈಂಗಿಕವಾಗಿ ಬಳಸಿಕೊಂಡ ಎಂಬ ಆರೋಪದಡಿ ಮಹಿಳೆಯನ್ನು ಪೊಲೀಸರು ಬಂಧಿಸಿರುವ ಘಟನೆ ವರದಿಯಾಗಿದೆ.

    ಕೇರಳದ ತಿರುವನಂತಪುರಂ ಜಿಲ್ಲೆಯ ಕಡಕ್ಕವೂರ್ ನಲ್ಲಿ 14 ವರ್ಷದ ಮಗನನ್ನು ತಾಯಿ ಲೈಂಗಿಕವಾಗಿ ಬಳಸಿಕೊಂಡಿದ್ದರು. ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆಯಡಿ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ನಂತರ ಮಾತಾನಾಡಿದ ಪೊಲೀಸ್ ಅಧಿಕಾರಿ ಇದೂ ಕೇರಳ ರಾಜ್ಯದಲ್ಲಿ ನಡೆದ ಮೊದಲ ಘಟನೆಯಾಗಿದೆ ಎಂದರು.

    ಬಾಲಕನ ತಾಯಿ ತಮ್ಮ ಮಗನನ್ನು ಕೆಲ ಸಮಯಗಳಿಂದ ಲೈಂಗಿಕವಾಗಿ ದುರುಪಯೋಗ ಪಡಿಸಿಕೊಳುತ್ತಿದ್ದಾಳೆಂದು ತಂದೆಯಿಂದಲೇ ದೂರು ದಾಖಲಾಗಿತ್ತು. ಪ್ರಕರಣವನ್ನ ಮಕ್ಕಳ ಕಲ್ಯಾಣ ಆಯೋಗಕ್ಕೆ ರವಾನಿಸಲಾಗಿದೆ. 35 ವರ್ಷದ ಮಹಿಳೆ ತನ್ನ ಮಗನನ್ನು ದುರುಪಯೋಗ ಪಡಿಸಿರುವುದನ್ನು ಬಾಲಕನ ತಂದೆ ದೃಢಪಡಿಸಿದ ನಂತರ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ಮಹಿಳೆಯನ್ನು ಬಂಧಿಸಿದ್ದಾರೆ. ನಂತರ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ನ್ಯಾಯಾಲಯದ ಸೂಚನೆಯಂತೆ ಮಹಿಳೆಯನ್ನು ತಿರುವನಂತಪುರದ ಮಹಿಳಾ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ ಎಂದು ತಿಳಿಸಿದರು.

  • ಮದ್ವೆಯಾದ 10 ದಿನದಲ್ಲೇ ಸಾವನ್ನಪ್ಪಿದ ನವ ದಂಪತಿ

    ಮದ್ವೆಯಾದ 10 ದಿನದಲ್ಲೇ ಸಾವನ್ನಪ್ಪಿದ ನವ ದಂಪತಿ

    – ಬೈಕ್‍ನಿಂದ ಕೆಳಗೆ ಬಿದ್ದವರ ಮೇಲೆ ಹರಿದ ಲಾರಿ

    ತಿರುವನಂತಪುರ: ಮದುವೆಯಾದ 10 ದಿನದಲ್ಲಿ ನವದಂಪತಿ ಅಪಘಾತದಲ್ಲಿ ಸಾವನ್ನಪ್ಪಿರುವ ಘಟನೆ ಕೇರಳದ ಮಲ್ಲಪುರಂನಲ್ಲಿ ನಡೆದಿದೆ. ಶನಿವಾರ ನಡೆದ ಅಪಘಾತದಲ್ಲಿ ನವಜೋಡಿ ಜೀವನ ದುರಂತದಲ್ಲಿ ಅಂತ್ಯವಾಗಿದೆ.

    ಸಲಾಹುದ್ದೀನ್ (25) ಮತ್ತು ಫಾತಿಮಾ ಜಮುನಾ (19) ಅಪಘಾತದಲ್ಲಿ ಮೃತ ದಂಪತಿ. ಪಶ್ಚಿಮ ಕನ್ನಮಂಗಳದ ನಿವಾಸಿಯಾಗಿದ್ದ ಜೋಡಿ ಶನಿವಾರ ರಾಯಲ್ ಎನ್‍ಫೀಲ್ಡ್ ಬೈಕ್ ನಲ್ಲಿ ಸಂಬಂಧಿಕರ ಮನೆಯಿಂದ ಹಿಂದಿರುಗುವ ವೇಳೆ ಅಪಘಾತ ಸಂಭವಿಸಿದೆ.

    ಚೆಲೆಂಬ್ರ ಪಂಚಾಯ್ತಿ ಬಳಿ ಸಲಾಹುದ್ದೀನ್ ವಾಹನವೊಂದನ್ನು ಓವರ ಟೇಕ್ ಮಾಡಲಯ ಯತ್ನಿಸಿದ್ದಾರೆ. ಈ ವೇಳೆ ನಿಯಂತ್ರಣ ಕಳೆದುಕೊಂಡು ಸಲಾಹುದ್ದೀನ್ ಮತ್ತು ಫಾತಿಮಾ ರಸ್ತೆಯ ಮೇಲೆ ಬಿದ್ದಿದ್ದಾರೆ. ಎದುರಿನಿಂದ ಬರುತ್ತಿದ್ದ ಲಾರಿ ಇಬ್ಬರ ಮೇಲೆ ಹರಿದ ಪರಿಣಾಮ ತೀವ್ರ ರಕ್ತಸ್ರಾವವಾಗಿದ್ದ ಸಲಾಹುದ್ದೀನ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇನ್ನು ಫಾತಿಮಾ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾರೆ. ಈ ಸಂಬಂಧ ತನ್ಹಿಪಾಲಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಮದ್ವೆ ಪ್ರಸ್ತಾಪ ತಡೆಯುತ್ತಿದ್ದ ವ್ಯಕ್ತಿಯ ಅಂಗಡಿ ಧ್ವಂಸಗೊಳಿಸಿದ ಯುವಕ

    ಮದ್ವೆ ಪ್ರಸ್ತಾಪ ತಡೆಯುತ್ತಿದ್ದ ವ್ಯಕ್ತಿಯ ಅಂಗಡಿ ಧ್ವಂಸಗೊಳಿಸಿದ ಯುವಕ

    – ವೀಡಿಯೋ ವೈರಲ್, ಯುವಕನ ಬಂಧನ

    ತಿರುವನಂತಪುರ: ಮದುವೆ ಪ್ರಸ್ತಾಪ ತಡೆದಿದ್ದಕ್ಕೆ ಕೋಪಗೊಂಡ ಯುವಕ ಅಂಗಡಿಯನ್ನ ಧ್ವಂಸಗೊಳಿಸಿರುವ ಘಟನೆ ಕೇರಳದ ಕನ್ನೂರು ಜಿಲ್ಲೆಯ ಚೆರೂಪುಜಾ ಎಂಬಲ್ಲಿ ನಡೆದಿದೆ.

    30 ವರ್ಷದ ಅಲ್ಬಮಿನ್ ನೆರೆಮನೆ ವ್ಯಕ್ತಿಯ ಅಂಗಡಿಯನ್ನ ಜೆಸಿಬಿ ಮೂಲಕ ಧ್ವಂಸಗೊಳಿಸಿದ್ದಾನೆ. ಅಂಗಡಿ ಮಾಲೀಕ ನೀಡಿದ ದೂರಿನ ಅನ್ವಯ ಪೊಲೀಸರು ಯುವಕನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ. ಅಂಗಡಿ ಧ್ವಂಸಕ್ಕೂ ಮುನ್ನ ಫೇಸ್‍ಬುಕ್ ನಲ್ಲಿ ಅಲ್ಬಮಿನ್ ವೀಡಿಯೋ ಶೇರ್ ಮಾಡಿಕೊಂಡಿದ್ದನು.

    ವೀಡಿಯೋದಲ್ಲಿ ಏನಿದೆ?: ಈ ಅಂಗಡಿಯಲ್ಲಿ ಕಾನೂನುಬಾಹಿರ ಚಟುವಟಿಕೆಗಳು ನಡೆಯುತ್ತಿವೆ. ಜೂಜಾಟ ಮತ್ತು ಮದ್ಯ ಮಾರಾಟ ಸೇರಿದಂತೆ ಚಟುವಟಿಕೆಗಳನ್ನ ಅಂಗಡಿಯಲ್ಲಿ ನಡೆಯುತ್ತಿದ್ದು, ಯುವಕರು ಇದರಿಂದ ಬೇಸತ್ತಿದ್ದಾರೆ. ನಾವು ಪೊಲೀಸ್, ಗ್ರಾಮಸ್ಥರು ಮತ್ತು ಅಧಿಕಾರಿಗಳಿಗೆ ತಿಳಿಸಿದ್ರೂ ಸಕಾರಾತ್ಮಕ ಉತ್ತರ ಸಿಗಲಿಲ್ಲ. ಈ ಹಿನ್ನೆಲೆ ಅಂಗಡಿಯನ್ನ ಧ್ವಂಸಗೊಳಿಸುತ್ತೇನೆ ಎಂದು ಹೇಳಿದ್ದಾನೆ.

    ಯುವಕ ಅಂಗಡಿಗೆ ಹಾನಿ ಮಾಡಿದ್ದು ತಪ್ಪು. ಅಂಗಡಿಯಲ್ಲಿ ಕಾನೂನುಬಾಹಿರ ಚಟುವಟಿಕೆಗಳು ನಡೆಯುತ್ತಿದ್ದವು ಎಂದು ಬಂಧಿತ ಯುವಕ ಆರೋಪಿಸಿದ್ದಾನೆ. ಆದ್ರೆ ಅಂಗಡಿ ಮಾಲೀಕ ಅಲ್ಬಮಿನ್ ಗೆ ಬರುತ್ತಿದ್ದ ಮದುವೆ ಪ್ರಸ್ತಾಪಗಳನ್ನು ತಡೆಯುತ್ತಿದ್ದರಿಂದ ಅಲ್ಬಮಿನ್ ಈ ರೀತಿ ಮಾಡಿದ್ದಾನೆ ಎಂದು ತಿಳಿದು ಬಂದಿದೆ. ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಎಲ್ಲ ಆಯಾಮದಲ್ಲಿಯೂ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

     

  • ಅಮೇಥಿ ಜೊತೆ ಕೇರಳದ ವಯನಾಡಿನಲ್ಲೂ ರಾಹುಲ್ ಸ್ಪರ್ಧೆ ಅಧಿಕೃತ

    ಅಮೇಥಿ ಜೊತೆ ಕೇರಳದ ವಯನಾಡಿನಲ್ಲೂ ರಾಹುಲ್ ಸ್ಪರ್ಧೆ ಅಧಿಕೃತ

    ನವದೆಹಲಿ: ಕೇರಳದ ವಯನಾಡು ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸ್ಪರ್ಧೆ ಮಾಡುವುದು ಖಚಿತವಾಗಿದೆ.

    ನವದೆಹಲಿಯ ಕೇಂದ್ರ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ಹಿರಿಯ ನಾಯಕ ಎ.ಕೆ.ಆಂಟನಿ, ಉತ್ತರ ಪ್ರದೇಶದ ಅಮೇಥಿ ಜೊತೆ ಕೇರಳದ ವಯನಾಡ್ ಕ್ಷೇತ್ರದಿಂದ ರಾಹುಲ್ ಕಣಕ್ಕೆ ಇಳಿಯಲಿದ್ದಾರೆ ಎಂದು ತಿಳಿಸಿದರು.

    ದಕ್ಷಿಣ ಭಾರತದಲ್ಲಿ ಪಕ್ಷದ ಸಂಘಟನೆಯ ಉದ್ದೇಶದಿಂದ ಕಾಂಗ್ರೆಸ್ ನಾಯಕರಾದ ರಣ್‍ದೀಪ್ ಸುರ್ಜೆವಾಲಾ ಸಮ್ಮುಖದಲ್ಲಿ ಈ ನಿರ್ಣಯವನ್ನು ತೆಗೆದುಕೊಳ್ಳಲಾಗಿದೆ. ಬಿಜೆಪಿ ದಕ್ಷಿಣ ಭಾರತದ ರಾಜ್ಯಗಳ ಮೇಲಿನ ಮಲತಾಯಿ ಧೋರಣೆಯ ವಿರುದ್ಧ ಧ್ವನಿ ಎತ್ತಲು ರಾಹುಲ್ ಗಾಂಧಿ ವಯನಾಡು ಕ್ಷೇತ್ರದಿಂದ ಸ್ಪರ್ಧೆ ಮಾಡಲಿದ್ದಾರೆ ಎಂದು ತಿಳಿಸಿದರು.

    ರಾಹುಲ್ ಗಾಂಧಿಯವರ ಸ್ಪರ್ಧೆ ಕುರಿತು ಟ್ವಿಟ್ಟರ್ ನಲ್ಲಿ ಪ್ರತಿಕ್ರಿಯಿಸಿದ್ದ ಕೇಂದ್ರ ಸಚಿವೆ ಸ್ಮೃತಿ ಇರಾನಿ, ಅಮೇಥಿಯ ಜನರು ನಿಮ್ಮನ್ನು ತಿರಸ್ಕರಿಸಿದ್ದು, ಇಲ್ಲಿಯ ಸಿಂಹಾಸನ ಖಾಲಿ ಮಾಡಿ ಎಂದು ಭಾಗ್ ರಾಹುಲ್ ಭಾಗ್ ಎಂದು ವ್ಯಂಗ್ಯ ಮಾಡಿದ್ದರು. ಸ್ಮೃತಿ ಇರಾನಿಯವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಎ.ಕೆ.ಆಂಟನಿ, 2014ರಲ್ಲಿ ಪ್ರಧಾನಿ ನರೇಂದ್ರ ಮೋದಿ ಗುಜರಾತ್ ಮತ್ತು ವಾರಣಾಸಿ ಕ್ಷೇತ್ರಗಳಿಂದ ಸ್ಪರ್ಧೆ ಮಾಡಿದ್ದರು. ಹಾಗಾದ್ರೆ ಅಂದು ಮೋದಿ ಅವರಿಗೆ ಗುಜರಾತಿನಲ್ಲಿ ಸೋಲಿನ ಭೀತಿ ಕಾಣಿಸಿತ್ತಾ? ಎರಡು ಕ್ಷೇತ್ರಗಳಲ್ಲಿ ಗೆಲುವಿನ ಬಳಿಕ ಗುಜರಾತ್ ಕ್ಷೇತ್ರವನ್ನು ತೊರೆದರು. ಸ್ಮೃತಿ  ಇರಾನಿ ಅವರನ್ನು ದೆಹಲಿಯ ಚಾಂದಿನಿ ಚೌಕ್ ಮತ್ತು ಅಮೇಥಿಯ ಕ್ಷೇತ್ರದ ಜನರು ತಿರಸ್ಕರಿಸಿದ್ದಾರೆ. ಇದೀಗ ಮತ್ತೊಮ್ಮೆ ಸ್ಮೃತಿ  ಇರಾನಿ ಸೋಲು ಕಾಣಲು ಸಿದ್ಧರಾಗಿರಿ ಎಂದು ಹೇಳುವ ಮೂಲಕ ರಾಹುಲ್ ಗಾಂಧಿ ಎರಡೂ ಕ್ಷೇತ್ರಗಳಲ್ಲಿ ಗೆಲವು ಕಾಣುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ರಾಹುಲ್ ಗಾಂಧಿ ಮಾರ್ಚ್ ನಲ್ಲಿ ಕೇರಳಕ್ಕೆ ಭೇಟಿ ನೀಡಿದ್ದಾಗ ಬೇಡಿಕೆ ಇಟ್ಟಿದ್ದೆವು. ಇತ್ತ ಕಾಂಗ್ರೆಸ್‍ನ ವಯನಾಡು ಜಿಲ್ಲಾಧ್ಯಕ್ಷರೊಂದಿಗೆ ಮಾತನಾಡಿದ್ದು, ಅವರು ಕೂಡ ರಾಹುಲ್ ಗಾಂಧಿ ಅವರ ಸ್ಪರ್ಧೆಗೆ ಒಲವು ವ್ಯಕ್ತಪಡಿಸಿದ್ದರು ಎಂದು ಕೇರಳದ ಕಾಂಗ್ರೆಸ್ ಮುಖಂಡ ಚೆನ್ನಿತಾಲಾ ಹೇಳಿದ್ದರು.

    ಅಮೇಥಿ ನನ್ನ ಕರ್ಮಭೂಮಿ. ನಾನು ಎಂದೆಂದಿಗೂ ಅದೇ ಕ್ಷೇತ್ರದಿಂದ ಸ್ಪರ್ಧಿಸುತ್ತೇನೆ ಎಂದು ರಾಹುಲ್ ಗಾಂಧಿ ಯಾವಾಗಲೂ ಹೇಳುತ್ತಾರೆ. ಕೇರಳದ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ರಾಹುಲ್ ಗಾಂಧಿ ಅವರನ್ನು ವಯನಾಡು ಕ್ಷೇತ್ರದಿಂದ ಸ್ಪರ್ಧಿಸುಂತೆ ಮನವಿ ಮಾಡಿಕೊಂಡಿದ್ದಾರೆ. ಇದನ್ನು ರಾಹುಲ್ ಗಾಂಧಿ ಅವರು ಸಕಾರಾತ್ಮಕವಾಗಿ ಪರಿಗಣಿಸಲಿದ್ದಾರೆ ಎಂದು ಕಾಂಗ್ರೆಸ್ ವಕ್ತಾರ ರಣದೀಪ್ ಸಿಂಗ್ ಸುರ್ಜೇವಾಲಾ ತಿಳಿಸಿದ್ದರು.

    ಕೇರಳದ ಕಾಂಗ್ರೆಸ್ ನಾಯಕ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಉಮ್ಮನ್ ಚಾಂಡಿ ಹಾಗೂ ವಿಪಕ್ಷ ನಾಯಕ ರಮೇಶ್ ಚೆನ್ನಿತಾಲಾ ಅವರು ವಯನಾಡ್ ಕ್ಷೇತ್ರದಿಂದ ಸ್ಪರ್ಧಿಸುವಂತೆ ರಾಹುಲ್ ಗಾಂಧಿ ಅವರಿಗೆ ಒತ್ತಾಯಿಸಿದ್ದರು.