ಮಂಡ್ಯ: ಕೆರಗೋಡಿನ (Keragodu) ಅರ್ಜುನ ಸ್ತಂಭದ ಮೇಲೆ ಹೊಸ ರಾಷ್ಟ್ರ ಧ್ವಜವನ್ನು ಹಾರಿಸಿದರೂ ಸಹ ಗ್ರಾಮಸ್ಥರು ಮತ್ತೆ ಜಿಲ್ಲಾಡಳಿತದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 108 ಅಡಿಯ ಅರ್ಜುನ ಸ್ತಂಭಕ್ಕೆ ಮತ್ತೆ ಹಳೆಯ ಧ್ವಜದ ಅಳತೆಯ ಧ್ವಜವನ್ನೇ ಹಾರಿಸಿದ್ದಾರೆ ಎಂದು ಗ್ರಾಮಸ್ಥರು ಆಕ್ರೋಶ ಹೊರ ಹಾಕಿದ್ದಾರೆ.
ಜ.26ರ ಗಣರಾಜ್ಯೋತ್ಸವದಂದು ಕೆರಗೋಡಿನ ಅರ್ಜುನ ಸ್ತಂಭದಲ್ಲಿ ಇದ್ದ ಹನುಮ ಧ್ವಜವನ್ನು ಇಳಿಸಿ 20 ಅಡಿ ಅಗಲ, 30 ಅಡಿ ಉದ್ದದ ಬೃಹತ್ ರಾಷ್ಟ್ರ ಧ್ವಜವನ್ನು ಗ್ರಾಮಸ್ಥರು ಹಾರಿಸಿದ್ದರು. ಈ ವೇಳೆ ಸ್ವಚ್ಛಂದವಾಗಿ ತ್ರಿವರ್ಣ ಧ್ವಜ ಹಾರಾಡುತ್ತಿತ್ತು. ಇದಾದ ಬಳಿಕ ಜ.27ರಂದು ಮತ್ತೆ ಗ್ರಾಮಸ್ಥರ ಹನುಮ ಧ್ವಜವನ್ನು ಹಾರಿಸಿದ್ದರು. ನಂತರ ಜ.28 ರಂದು ಜಿಲ್ಲಾಡಳಿತ ಹನುಮ ಧ್ವಜ ಇಳಿಸಿ ಸಣ್ಣದಾದ ಧ್ವಜವನ್ನು ಹಾರಿಸಿತ್ತು. ಈ ಧ್ವಜ ಹಾರುತ್ತಿರಲಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದರು. ಇದೀಗ ಅದೇ ಅಳತೆಯ ಧ್ವಜ ಹಾರಿಸಿದ್ದಾರೆ ಎಂಬುದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಇದನ್ನೂ ಓದಿ: ಕೆರಗೋಡು ವಿವಾದಿತ ಅರ್ಜುನ ಸ್ತಂಭದಲ್ಲಿ ನೂತನ ಧ್ವಜಾರೋಹಣ
ಇಷ್ಟು ದೊಡ್ಡ ಧ್ವಜ ಸ್ತಂಭದಲ್ಲಿ ಚಿಕ್ಕ ರಾಷ್ಟ್ರಧ್ವಜವನ್ನು ಜಿಲ್ಲಾಡಳಿತ ಹಾರಿಸಿದೆ. ಈ ಬಗ್ಗೆ ಅಧಿಕಾರಿಗಳಿಗೂ ದೊಡ್ಡ ರಾಷ್ಟ್ರ ಧ್ವಜಕ್ಕೆ ಮನವಿ ಮಾಡಿದ್ದೇವೆ. ಅತುರಾತುರದಲ್ಲಿ ಹೊಸ ಧ್ವಜ ಹಾರಿಸಿದ್ದಾರೆ. ಇನ್ನೂ ನಮ್ಮ ಧ್ವಜ ಹೋರಾಟ ಇಲ್ಲಿಗೆ ನಿಲ್ಲಲ್ಲ. ಜೂ.4ರ ನಂತರ ಹೋರಾಟ ತೀವ್ರವಾಗಲಿದೆ. ಹೋರಾಟದ ಪರಿಣಾಮ ಸರ್ಕಾರ ಎದುರಿಸಲಿದೆ. ಮತ್ತೆ ಅರ್ಜುನ ಸ್ತಂಭದಲ್ಲಿ ಹನುಮ ಧ್ವಜ ಹಾರಾಡಬೇಕು. ರಾಷ್ಟ್ರೀಯ ಹಬ್ಬದ ಸಂಧರ್ಭದಲ್ಲಿ ರಾಷ್ಟ್ರ ಧ್ವಜ ಹಾರಾಡಲು ಅಭ್ಯಂತರವಿಲ್ಲ. ಅರ್ಜುನ ಸ್ತಂಭ ನಿರ್ಮಾಣದ ಉದ್ದೇಶ ಹನುಮ ಧ್ವಜ ಹಾರಿಸುವುದು. ಹಾಗಾಗಿ ಮತ್ತೆ ಅರ್ಜುನ ಸ್ತಂಭದಲ್ಲಿ ಹನುಮ ಧ್ವಜ ಹಾರಾಡಬೇಕೆಂದು ಕೆರಗೋಡು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿ ಪೂರ್ವ ಮುಂಗಾರಿನ ಅಬ್ಬರ – 5 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್
ಮಂಡ್ಯ: ಇಲ್ಲಿನ (Mandya) ಕೆರಗೋಡಿನ (Keragodu) ವಿವಾದಿತ ಅರ್ಜುನ ಸ್ತಂಭದಲ್ಲಿ ಹಾರಿಸಲಾಗಿದ್ದ ತ್ರಿವರ್ಣ ಧ್ವಜವನ್ನು ಇಂದು ಬೆಳ್ಳಂ ಬೆಳಗ್ಗೆ ಮಂಡ್ಯ ಜಿಲ್ಲಾಡಳಿತ ಪೊಲೀಸರ ಭದ್ರತೆಯಲ್ಲಿ ಇಳಿಸಿ ಹೊಸ ತ್ರಿವರ್ಣ ಧ್ವಜವನ್ನು ಹಾರಿಸಿದೆ.
ಜ.28 ರಂದು ಕೆರಗೋಡಿನ ಅರ್ಜುನ ಸ್ತಂಭದಲ್ಲಿದ್ದ ಹನುಮ ಧ್ವಜವನ್ನು ( Keragodu Hanuman Flag Controversy) ಕೆಳಗಿಳಿಸಿ ಆತುರಾತುವಾಗಿ ರಾಷ್ಟ್ರ ಧ್ವಜವನ್ನು ಹಾರಿಸಿತ್ತು. ಈ ವೇಳೆ ಗ್ರಾಮದಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿತ್ತು. ಕೆರಗೋಡಿನ ಗ್ರಾಮಸ್ಥರ ತೀವ್ರ ವಿರೋಧದ ನಡುವೆ ಮಂಡ್ಯ ಜಿಲ್ಲಾಡಳಿತ ಅಂದು ರಾಷ್ಟ್ರ ಧ್ವಜವನ್ನು ಹಾರಿಸಲಾಗಿತ್ತು. ಈ ವೇಳೆ 108 ಅಡಿಯ ಅರ್ಜುನ ಸ್ತಂಭಕ್ಕೆ ಚಿಕ್ಕದಾದ ಧ್ವಜವನ್ನು ಜಿಲ್ಲಾಡಳಿತ ಹಾರಿಸಿತ್ತು. ಇದನ್ನೂ ಓದಿ: ರಾಜ್ಯದಲ್ಲಿ ಪೂರ್ವ ಮುಂಗಾರಿನ ಅಬ್ಬರ – 5 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್
ಇದಾದ ಬಳಿಕ ಕೆರಗೋಡು ಗ್ರಾಮಸ್ಥರು 108 ಅಡಿಯ ಸ್ತಂಭಕ್ಕೆ ಚಿಕ್ಕದಾದ ಧ್ವಜ ಹಾಕುವ ಮೂಲಕ ಜಿಲ್ಲಾಡಳಿತ ತ್ರಿವರ್ಣ ಧ್ವಜಕ್ಕೆ ಅವಮಾನ ಮಾಡುತ್ತಿದೆ ಎಂದು ಆಕ್ರೋಶ ಹೊರ ಹಾಕಿದ್ದರು. ಇದಾದ ಬೆನ್ನಲ್ಲೇ ಇಂದು (ಮೇ.21) ಜಿಲ್ಲಾಡಳಿತ ಮಳೆ ಹಾಗೂ ಬಿಸಿಲಿಗೆ ಧ್ವಜ ಬಣ್ಣ ಕಡಿಮೆ ಆಗಿದೆ ಮತ್ತು ಒಂದು ಗಂಟಿನಿಂದ ಧ್ವಜ ಹಾರಾಡುತ್ತಿಲ್ಲ ಎಂಬ ಕಾರಣ ಹೇಳಿ ಹೊಸ ಧ್ವಜ ಹಾರಿಸಿದೆ.
ಮಂಡ್ಯ: ಇಲ್ಲಿನ ಕೆರಗೋಡು ಗ್ರಾಮದಲ್ಲಿ ಹನುಮ ಧ್ವಜದ ಪರ ಪ್ರತಿಭಟನೆ ನಡೆಸಿದ್ದ ಹಿಂದೂ ಕಾರ್ಯಕರ್ತರ ವಿರುದ್ಧ ರೌಡಿಶೀಟರ್ ಯಾಕೆ ತೆಗೆಯಬಾರದು ಎಂದು ಸಮಜಾಯಿಸಿ ಕೊಡುವಂತೆ ಪೊಲೀಸರು ನೋಟಿಸ್ ಹೊರಡಿಸಿದ್ದಾರೆ.
ಪ್ರತಿಭಟನೆ ಸಂಬಂಧ ಈಗಾಗಲೇ ಹಲವರ ವಿರುದ್ಧ ಪೊಲೀಸರು ಎಫ್‍ಐಆರ್ ದಾಖಲಿಸಿದ್ದಾರೆ. ಇದೀಗ ಈ ಪೈಕಿ ವಿಹೆಚ್‍ಪಿಯ ಮೈಸೂರು ಭಾಗದ ಸಹಕಾರ್ಯದರ್ಶಿ ಚಿಕ್ಕಬಳ್ಳಿ ಬಾಲು ಸೇರಿದಂತೆ ಕಾರ್ತಿಕ್ ಹಾಗೂ ಹರೀಶ್ ಎಂಬವರಿಗೆ ನೋಟಿಸ್ ಕಳುಹಿಸಲಾಗಿದೆ. ಈ ನೋಟಿಸ್ ವಿರುದ್ಧ ಹಿಂದೂ ಕಾರ್ಯಕರ್ತರು ಕೆರಗೋಡಿನ ಧ್ವಜ ಸ್ತಂಭಕ್ಕೆ ಪೂಜೆ ಮಾಡಿ ಬಳಿಕ ಪೊಲೀಸ್ ಠಾಣೆವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರತಿಭಟನೆ ವೇಳೆ, ಹಿಂದೂ ಕಾರ್ಯಕರ್ತರಿಗೆ ಪೊಲೀಸರು ಕಿರುಕುಳ ಕೊಡುತ್ತಿದ್ದಾರೆ ಎಂದು ಆರೋಪಿಸಿದರು. ಬಳಿಕ ಡಿವೈಎಸ್‍ಪಿಗೆ ಮನವಿ ಸಲ್ಲಿಸಿ ಕೆರಗೋಡು ಠಾಣೆಯ ಎಸ್‍ಐ ಹಾಗೂ ಪಿಎಸ್‍ಐ ಮೇಲೆ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದರು. ಡಿವೈಎಸ್‍ಪಿ ಈ ಬಗ್ಗೆ ಕ್ರಮಕೈಗೊಳ್ಳುವ ಭರವಸೆ ನೀಡಿದ ಮೇಲೆ ಪ್ರತಿಭಟನೆ ಕೈ ಬಿಡಲಾಯಿತು.
ಏನಿದು ಪ್ರಕರಣ?: ಕೆರಗೋಡಿನಲ್ಲಿ ರಾಷ್ಟ್ರಧ್ವಜ ಹಾರಿಸಲು ಅನುಮತಿ ಪಡೆದು, ಹನುಮ ಧ್ವಜ ಹಾರಿಸಿದ್ದರು. ಬಳಿಕ 108 ಅಡಿ ಧ್ವಜಸ್ತಂಭದಲ್ಲಿದ್ದ ಹನುಮ ಧ್ವಜವನ್ನು ಪೊಲೀಸರು ಕೆಳಗಿಳಿಸಿದ್ದರು. ಇದರ ವಿರುದ್ಧ ಹಿಂದೂ ಕಾರ್ಯಕರ್ತರು ಪೊಲೀಸರು ಹಾಗೂ ಜಿಲ್ಲಾಡಳಿತದ ವಿರುದ್ಧ ಪ್ರತಿಭಟಿಸಿದ್ದರು. ಈ ವೇಳೆ ಕೆಲವೆಡೆ ಅಹಿತಕರ ಘಟನೆಗಳು ನಡೆದಿದ್ದವು.
ಮಂಡ್ಯ: ರಾಮನವಮಿಯಂದು (Rama Navami) ದೋಸ್ತಿ ಪಕ್ಷದ ಲೋಕಸಭಾ ಅಭ್ಯರ್ಥಿ ಹೆಚ್‌ಡಿ ಕುಮಾರಸ್ವಾಮಿ (HD Kumaraswamy) ಕೆರಗೋಡು ಗ್ರಾಮಕ್ಕೆ ಭೇಟಿ ನೀಡಿ ಗ್ರಾಮಸ್ಥರ ಜೊತೆ ಮಾತನಾಡಿದ್ದಾರೆ.
ಹನುಮ ಧ್ವಜ (Hanuma Dhwaja) ತೆರವು ಮಾಡಿದ್ದಕ್ಕೆ ಕೆರಗೋಡು (Keragodu) ದೇಶಾದ್ಯಂತ ಸುದ್ದಿಯಾಗಿತ್ತು. ಇಂದು ಕುಮಾರಸ್ವಾಮಿ ಕೇಸರಿ ಶಾಲು ಧರಿಸಿ ಗ್ರಾಮಕ್ಕೆ ಭೇಟಿ ನೀಡಿದ ಅವರು ಹನುಮ ದೇವಸ್ಥಾನಕ್ಕೆ (Hanuma Temple) ಪೂಜೆ ಸಲ್ಲಿಸಿ ಜನರ ಸಮಸ್ಯೆ ಆಲಿಸಿದರು. ಇದನ್ನೂ ಓದಿ: ಲೋಕಸಭೆ ಚುನಾವಣೆಗಳು ಭಾರತದಲ್ಲಿ ನಡೆದಿದ್ದೆಷ್ಟು ದಿನ?
ಹೆಚ್‌ಡಿಕೆ ಭಾಷಣದ ವೇಳೆ ಗ್ರಾಮಸ್ಥರು ನೋವು ಹೇಳಿಕೊಂಡರು. ಒಬ್ಬೊಬ್ಬರ ಮೇಲೆ ಹತ್ತತ್ತು ಕೇಸ್ ದಾಖಲಿಸಲಾಗಿದೆ. ದಯವಿಟ್ಟು ಪ್ರಕರಣಗಳನ್ನು ತೆಗೆಯಬೇಕು ಎಂದು ಮನವಿ ಮಾಡಿದರು. ಈ ವೇಳೆ ಕೇಸ್ ತೆಗೆಸುವ ಜವಬ್ದಾರಿ ನನ್ನದು. ಕೆರಗೋಡು ಗ್ರಾಮಸ್ಥರ ಭಾವನೆಗಳನ್ನ ಗೌರವಿಸಿ, ಸರ್ಕಾರದಿಂದಲೇ ಆದೇಶ ಮಾಡಿಸುತ್ತೇನೆ ಎಂದು ಹೆಚ್‌ಡಿಕೆ ಭರವಸೆ ನೀಡಿದರು.
ಮಂಡ್ಯ: ಇಲ್ಲಿನ ಕೆರಗೋಡು (Keragodu) ಹನುಮಧ್ವಜ (Hanuma Flag) ತೆರವು ಪ್ರಕರಣ ಅಯೋಧ್ಯೆಯ ಅಂಗಳದಲ್ಲಿ ಸದ್ದು ಮಾಡಿದೆ. ಹಿಂದೂ ಕಾರ್ಯಕರ್ತರು ಅಯೋಧ್ಯೆಯ ಬಾಲರಾಮನ ದರ್ಶನ ಪಡೆದು, ಮತ್ತೆ ಹನುಮಧ್ವಜ ಹಾರಿಸುತ್ತೇವೆ ಎಂದು ದೇವಾಲಯದ ಆವರಣದಲ್ಲಿ ಘೋಷಣೆ ಕೂಗಿದ್ದಾರೆ.
ಹನುಮಧ್ವಜ ವಿವಾದದ ಬಳಿಕ ಕೆರಗೋಡು ಗ್ರಾಮಸ್ಥರು ಹಾಗೂ ಹಿಂದೂ ಕಾರ್ಯಕರ್ತರು ಅಯೋಧ್ಯೆ ಪ್ರವಾಸಕ್ಕೆ ತೆರಳಿದ್ದಾರೆ. ಈ ವೇಳೆ ಶ್ರೀರಾಮನ ದರ್ಶನ ಪಡೆದ ಗ್ರಾಮಸ್ಥರು ಶ್ರೀರಾಮನ ಸನ್ನಿಧಿಯಲ್ಲಿ ನಿಂತು ಹನುಮಧ್ವಜ ಹಾರಿಸುವ ಘೋಷಣೆ ಕೂಗಿದ್ದಾರೆ. ಈ ಮೂಲಕ ಕೆರಗೋಡಿನಲ್ಲಿ ಮತ್ತೆ ಹನುಮಧ್ವಜ ಹಾರಿಸಲು ಗ್ರಾಮಸ್ಥರು ಪಣ ತೊಟ್ಟಿದ್ದಾರೆ. ಇದನ್ನೂ ಓದಿ: ರಾಮನಗರ ವಕೀಲರ ಹೋರಾಟಕ್ಕೆ ಕೊನೆಗೂ ಮಣಿದ ಸರ್ಕಾರ – ಐಜೂರು ಠಾಣೆಯ ಪಿಎಸ್ಐ ಅಮಾನತು
ರಾಷ್ಟ್ರಧ್ವಜ ಹಾರಿಸಲು ಅನುಮತಿ ಪಡೆದು 108 ಅಡಿ ಎತ್ತರದಲ್ಲಿ ಹನುಮಧ್ವಜ ಹಾರಿಸಿದ್ದಕ್ಕೆ ಆ ಧ್ವಜವನ್ನು ಪೊಲೀಸರು ಕೆಳಗಿಳಿಸಿದ್ದರು. ಹನುಮಧ್ವಜ ಇಳಿಸಿದ್ದಕ್ಕೆ ಗ್ರಾಮದಲ್ಲಿ ಪ್ರತಿಭಟನೆ ಸಹ ನಡೆದಿತ್ತು. ಹನುಮಧ್ವಜ ಹಾರಿಸಲು ಅವಕಾಶ ನೀಡಬೇಕು ಎಂದು ಗ್ರಾಮಸ್ಥರು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದರು.
ಇದೇ ವಿಚಾರವಾಗಿ ಬಿಜೆಪಿ (BJP) ಹಾಗೂ ಜೆಡಿಎಸ್ (JDS) ನಾಯಕರು ಕಾಂಗ್ರೆಸ್ (Congress) ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದರು. ಹಿಂದೂ ಸಂಘಟನೆಗಳು ಮಂಡ್ಯ (Mandya) ಬಂದ್ ಸಹ ಮಾಡಿ ಜಿಲ್ಲಾಡಳಿತಕ್ಕೆ ಎಚ್ಚರಿಕೆಯ ಸಂದೇಶ ರವಾನಿಸಿದ್ದರು. ಇದೀಗ ಮತ್ತೆ ಕೆರಗೋಡು ಗ್ರಾಮಸ್ಥರು ರಾಮನ ಸನ್ನಿಧಿಯಲ್ಲಿ ನಿಂತು ಕೆರಗೋಡಲ್ಲಿ ಹನುಮ ಧ್ವಜ ಹಾರಿಸುವ ಪಣ ತೊಟ್ಟಿದ್ದಾರೆ. ಇದನ್ನೂ ಓದಿ: ಸುಪ್ರೀಂ ಕೋರ್ಟ್ ಖ್ಯಾತ ವಕೀಲ ಫಾಲಿ ನಾರಿಮನ್ ನಿಧನ
– ನಾನು ಹೋಗಿ ಪರಿಸ್ಥಿತಿ ಕಂಟ್ರೋಲ್ ಮಾಡೋಕೆ ಆಗಲ್ಲ
– ಇದರಲ್ಲಿ ಮಂಡ್ಯ ಶಾಸಕರು ರಾಜಕಾರಣ ಮಾಡಿದ್ದಾರೆ
ನವದೆಹಲಿ: ಮಂಡ್ಯದ ಕೆರಗೋಡಿನಲ್ಲಿ (Keragodu Mandya) ನಡೆದ ಹನುಮ ಧ್ವಜ ಗಲಾಟೆ ಬಗ್ಗೆ ಸಂಸದೆ ಸುಮಲತಾ ಅಂಬರೀಶ್ (Sumalatha Ambareesh) ಅವರು ಕೊನೆಗೂ ಮೌನ ಮುರಿದಿದ್ದು ಬೇಸರ ವ್ಯಕ್ತಪಡಿಸಿದ್ದಾರೆ.
ಈ ಸಂಬಂಧ ದೆಹಲಿಯಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ಕೆರಗೋಡಲ್ಲಿ ನಡೆದ ಘಟನೆ ನೋಡಿ ಬೇಸರ ಆಗಿದೆ. ನಾನು ಈಗ ಆ ಸ್ಥಳಕ್ಕೆ ಹೋದ್ರೆ ಅದು ರಾಜಕೀಯ ಆಗುತ್ತೆ. ಹೀಗಾಗಿ ನಾನು ಅಲ್ಲಿ ಹೋಗಿ ಪರಿಸ್ಥಿತಿ ಕಂಟ್ರೋಲ್ ಮಾಡೋಕೆ ಆಗಲ್ಲ. ನಾನು ಬೇಕು ಅಂತಲೇ ಆ ಸ್ಥಳಕ್ಕೆ ಹೋಗಿಲ್ಲ ಎಂದು ಸ್ಪಷ್ಟಪಡಿಸಿದರು. ಅಲ್ಲದೇ ಕೆರಗೋಡು ಜನರೇ ಯಾವ ರೀತಿ ಹೋರಾಟ ಮಾಡ್ತಿದ್ದಾರೆ ಅನ್ನೋದು ನೋವಿನ ವಿಚಾರ. ಇಷ್ಟರ ಮಟ್ಟಿಗೆ ಆಗುವಂತಹ ಅಗತ್ಯವೇ ಇರಲಿಲ್ಲ. ಒಬ್ಬರು ಮಾಡಿದ್ದ ತಪ್ಪಿಗೆ ಇಡೀ ಸರ್ಕಾರ ಬಂದು ಸಮರ್ಥನೆ ಮಾಡುವ ಪರಿಸ್ಥಿತಿಗೆ ಬಂದಿದೆ ಎಂದರು.
ಗ್ರಾಮಸ್ಥರಿಗೆ ಎಲ್ಲರೂ ಸಹಕಾರ ಕೊಟ್ಟಿದ್ದಕ್ಕೆ ಆ ಧ್ವಜವನ್ನ ಹಾರಿಸೋಕೆ ಸಾಧ್ಯ ಆಗಿದೆ. ಆ ಧ್ವಜ ಹಾರಿಸಿ 6 ದಿನಗಳ ಕಾಲ ಯಾರಿಗೂ ಏನು ಸಮಸ್ಯೆ ಇರಲಿಲ್ಲ. ಯಾವ ಅಧಿಕಾರಿ ಬಂದಿಲ್ಲ, ಯಾರಿಗೂ ನೋವಾಗಿಲ್ಲ ಅಥವಾ ಗಲಭೆನೂ ಆಗಿಲ್ಲ. ಹೀಗಿರುವಾಗ ರಾತ್ರಿ 3 ಗಂಟೆ ಹೊತ್ತಲ್ಲಿ ಏಕಾಏಕಿ ಬಂದು ಈ ರೀತಿ ಮಾಡಿದ್ದಾರೆ. ಯಾರ ಸೂಚನೆ ಮೇರೆಗೆ ಬಂದು ಈ ರೀತಿ ಮಾಡಿದ್ದಾರೋ ಅಂತ ಗೊತ್ತಾಗಬೇಕಿದೆ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಹನುಮಧ್ವಜ ತೆರವು ಖಂಡಿಸಿ ಪ್ರತಿಭಟಿಸಿದ್ದ ಹಿಂದೂ ಕಾರ್ಯಕರ್ತರ ವಿರುದ್ಧ ಎಫ್‌ಐಆರ್
ಜನರನ್ನ ವಿಶ್ವಾಸಕ್ಕೆ ಪಡೆದು ಮಾಡಿದ್ರೆ ಕೆರಗೋಡಲ್ಲಿ ಈ ರೀತಿ ಬೆಂಕಿ ಉರಿತಾ ಇರಲಿಲ್ಲ. ಅಲ್ಲಿ ನಡೆದಿರೋ ಪ್ರತಿಭಟನೆಯಲ್ಲಿ ಒಬ್ಬರ ಕಣ್ಣು ಹೋಯ್ತು, ಅದನ್ನ ಯಾರು ವಾಪಸ್ ತಂದು ಕೊಡೋಕೆ ಆಗುತ್ತೆ..?. ಈ ಪರಿಸ್ಥಿತಿಯಲ್ಲಿ ಅಲ್ಲಿ ಪೊಲೀಸರು ಬರಬೇಕು. ಬೇರೆಯವರು ಎಲ್ಲಾ ಬರ್ತಿದ್ದಾರೆ ಪ್ರತಿಭಟನೆ ಸಹ ಮಾಡುತ್ತಿದ್ದಾರೆ. ಆದರೆ ನಾನು ಎಂಪಿ ಆಗಿ ಬೇರೆ ಸ್ಟ್ಯಾಂಡ್ ತೆಗೆದುಕೊಳ್ಳಬೇಕಾಗುತ್ತದೆ. ನಾನು ಪ್ರತಿಭಟನೆಯಲ್ಲಿ ಭಾಗವಹಿಸೋಕೇ ಆಗಲ್ಲ, ಆದ್ರೆ ಜನರ ಭಾವನೆ ಜೊತೆ ನಾನು ಇರುತ್ತೇನೆ ಎಂದರು.
ಮಂಡ್ಯ ಶಾಸಕರ ವಿರುದ್ಧ ಕಿಡಿ: ಸರ್ಕಾರ ಈ ರೀತಿ ಮಾಡಿದೆ ಅಂತ ನಾನು ಹೇಳೋಕೆ ಇಷ್ಟ ಪಡಲ್ಲ. ಮಂಡ್ಯ ಶಾಸಕರು ಇದರಲ್ಲಿ ಶಾಮೀಲು ಆಗಿದ್ದಾರೆ ಅನ್ನೋದು ನಿಜ. ಅಲ್ಲಿನ ಗ್ರಾಮಸ್ಥರು ಸಹ ಇದೇ ಮಾತನ್ನು ಹೇಳುತ್ತಿದ್ದಾರೆ. ಆ ಕಾರ್ಯಕ್ರಮಕ್ಕೆ ಮಂಡ್ಯ ಶಾಸಕರು ಕರೆದಿಲ್ಲ ಅಂತ ಈ ರೀತಿ ಮಾಡಿದ್ದಾರೆ. ಒಟ್ಟಿನಲ್ಲಿ ಮಂಡ್ಯ ಶಾಸಕರು ಇದರಲ್ಲಿ ರಾಜಕಾರಣ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಒಬ್ಬರ ಅಹಂ, ಪ್ರತಿಷ್ಠೆಯಿಂದಾಗಿ ಇಷ್ಟೆಲ್ಲ ಆಗಿದೆ. ಸರ್ಕಾರಕ್ಕೂ ಗೊತ್ತಿರಬೇಕು ಯಾರದ್ದು ತಪ್ಪು ಅಂತ. ಇಡೀ ಸರ್ಕಾರವನ್ನ ನಾನು ಬ್ಲೇಮ್ ಮಾಡಲ್ಲ. ಆದ್ರೆ ಸ್ಥಳೀಯ MLA ಇಲ್ಲಿ ಎಡವಿದ್ದಾರೆ ಅನ್ನೋದು ಸ್ಪಷ್ಟ. ಈಗ ಅವರು ಅದನ್ನ ಕವರ್ ಮಾಡೋಕೆ ಪ್ರತ್ಯಾರೋಪ ಮಾಡುತ್ತಿದ್ದಾರೆ. ಈಗ ಶಾಂತಿ ನೆಲೆಸುವತ್ತ ಕೆಲಸ ಮಾಡಬೇಕು ಎಂದು ಸುಮಲತಾ ಹೇಳಿದರು.
ಬೆಂಗಳೂರು: ಹನುಮಧ್ವಜ (Hanuma Flag) ಬಳಿಕ ಇದೀಗ ಹಸಿರು ಬಾವುಟ ತೆರವು ವಿವಾದವಾಗಿದೆ. ಮಂಡ್ಯದ ಕೆರಗೋಡು (Keragodu Mandya) ಬಳಿಕ ಬೆಂಗಳೂರಿನ ಶಿವಾಜಿನಗರಕ್ಕೂ ಧ್ವಜ ಗಲಾಟೆ ಕಾಲಿಟ್ಟಿದೆ.
ಶಿವಾಜಿನಗರದ (Shivajinagar) ಚಾಂದಿನಿ ಚೌಕ್‍ನ ಬಳಿಯಲ್ಲಿ ಬಿಬಿಎಂಪಿ ಅಳವಡಿಕೆ ಮಾಡಿರುವ ವಿದ್ಯುತ್ ಕಂಬದಲ್ಲಿ ಹಸಿರು ಧ್ವಜವನ್ನು ಹಾರಿಸಲಾಗಿತ್ತು. ಇದರ ಫೋಟೋ ತೆಗೆದು ಸೋಶಿಯಲ್ ಮೀಡಿಯಾದಲ್ಲಿ ಪ್ರಶ್ನೆ ಮಾಡುವ ಕೆಲಸ ಶುರು ಮಾಡಿದ್ರು. ಬೆಂಗಳೂರು ಪೊಲೀಸರಿಗೆ ಟ್ಯಾಗ್ ಮಾಡಿದ್ದ ಜನರು ಪ್ರಶ್ನೆ ಮಾಡ್ತಾ ಇದ್ರು. ಈ ಬಗ್ಗೆ ಯತ್ನಾಳ್ ಟ್ವೀಟ್ ಮಾಡಿದ್ರು.
ಮಾನ್ಯ @CPBlr@DCPEASTBCP ಅವರೇ, ಈ ರೀತಿ ಶತ್ರು ದೇಶದ ಬಣ್ಣವನ್ನು ಹೋಲುವ ಹಸಿರು ಧ್ವಜವನ್ನು ಸಾರ್ವಜನಿಕ ಪ್ರದೇಶದಲ್ಲಿ ಹಾರಿಸುವುದು ನಮ್ಮ flag code ಗೆ ವಿರುದ್ದವಾದದ್ದಲ್ಲವೇ ? ಈ ಕೂಡಲೇ, ಇದನ್ನು ತೆಗೆದು ಇಲ್ಲಿ ರಾಷ್ಟ್ರಧ್ವಜವನ್ನು ಹಾರಿಸಿ. ಶಿವಾಜಿನಗರ ಇರುವುದು ಭಾರತದಲ್ಲಿ, ಪಾಕಿಸ್ತಾನದಲ್ಲಲ್ಲ https://t.co/Ln6mx86Erd
— Basanagouda R Patil (Yatnal) (@BasanagoudaBJP) January 30, 2024
ಇದರಿಂದ ಎಚ್ಚೆತ್ತ ಪೊಲೀಸರು ಸ್ಥಳಕ್ಕೆ ತಕ್ಷಣವೇ ದೌಡಾಯಿಸಿದ್ರು. ಬಳಿಕ ಸ್ಥಳೀಯರನ್ನು ಬಳಸಿಕೊಂಡು ಹಸಿರು ಧ್ವಜ ತೆರವು ಮಾಡೋ ಕೆಲಸ ಮಾಡಿದರು. ನಂತರ ಅದೇ ಜಾಗದಲ್ಲಿ ರಾಷ್ಟ್ರಧ್ವಜವನ್ನು ಹಾರಿಸಿದರು. ಅಷ್ಟೇ ಅಲ್ಲದೇ ಚಾಂದಿನಿ ಚೌಕ್ ನ ಸರ್ಕಲ್ ಗೆ ಪೂರ ತ್ರಿವರ್ಣ ಧ್ವಜ ಹಾರಿಸಿದ್ರು. ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರಿವಹಿಸಿದ್ದಾರೆ.
ಈ ಬಗ್ಗೆ ಸ್ಥಳೀಯ ಅಕ್ಮಲ್ ಎಂಬವರು ಪ್ರತಿಕ್ರಿಯೆ ನೀಡಿದ್ದು, ಕಳೆದ 30 ವರ್ಷಗಳಿಂದ ದರ್ಗಾದ ಬಾವುಟ ಹಾಕಲಾಗಿತ್ತು. ಪೊಲೀಸರು ಬಾವುಟ ಹಾಕಿರುವ ಬಗ್ಗೆ ಮಾಹಿತಿ ಕೇಳಿದ್ರು. ಬಳಿಕ ನೀವೇ ಬಾವುಟವನ್ನ ತೆರವುಗೊಳಿಸುವಂತೆ ಸೂಚಿಸಿದ್ರು. ಪೊಲೀಸರ ಸೂಚನೆಯಂತೆ ಹಸಿರು ಬಾವುಟ ತೆರವುಗೊಳಿಸಿ ರಾಷ್ಟ್ರೀಯ ಬಾವುಟವನ್ನ ಹಾಕಲಾಗಿದೆ ಎಂದಿದ್ದಾರೆ. ಇದನ್ನೂ ಓದಿ: ಆಂಜನೇಯನ ತಂಟೆಗೆ ಬರ್ಬೇಡಿ, ಹುಷಾರ್- ಸಿಎಂಗೆ ಆರ್ ಅಶೋಕ್ ಎಚ್ಚರಿಕೆ
ಘಟನೆ ಬಗ್ಗೆ ಸರ್ಕಾರದ ವಿರುದ್ಧ ಎಂಎಲ್‍ಸಿ ರವಿಕುಮಾರ್ ಕಿಡಿಕಾರಿದ್ದು, ಹನುಮ ಧ್ವಜ ತೆಗೆಸಿದ್ರಿ. ಇದಕ್ಕೆ ಹೇಗೆ ಅನುಮತಿ ಕೊಟ್ಟಿರಿ. ಇದು ಮುಲ್ಲಾ, ಮೌಲ್ವಿ ಸರ್ಕಾರ ಎಂದು ಟೀಕಿಸಿದ್ರು. ನಮ್ಮ ರಾಜ್ಯದ ಮಂಡ್ಯ ಜಿಲ್ಲೆ ಕೆರೆಗೋಡಿನಲ್ಲಿ ಹನುಮಧ್ವಜ ಇಳಿಸಿರೋದನ್ನ ಬಿಜೆಪಿ ಖಂಡಿಸಲಿದೆ. ಹಿಂದೂ ದೇವಸ್ಥಾನಗಳ ಹಣ ಬೇಕು, ಹಿಂದೂ ಎಂಎಲ್‍ಎ ಬೇಕು, ಹಿಂದೂ ಎಂಪಿ ಬೇಕು. ಆದರೆ ಹಿಂದೂ ದೇವರ ಧ್ವಜ ಹಾರಿಸೋದು ಬೇಡ ಅಂತಾರೆ. ಈ ಹಿನ್ನೆಲೆ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ 12 ಪ್ರಶ್ನೆ ಕೇಳ್ತಿದ್ದೀವಿ ಎಂದರು.
ಬೆಂಗಳೂರು: ಸಿಎಂ ಸಿದ್ದರಾಮಯ್ಯ (siddaramaiah) ಅವರೇ ಮಂಡ್ಯದ (Mandya) ಕೆರಗೋಡು ಹನುಮಧ್ವಜ ತಂಟೆಗೆ ಬರಬೇಡಿ ಎಂದು ವಿಪಕ್ಷ ನಾಯಕ ಆರ್.ಅಶೋಕ್ (R.Ashok) ಅವರು ಸಿಎಂ ಸಿದ್ದರಾಮಯ್ಯಗೆ ಟಾಂಗ್ ಕೊಟ್ಟಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ (Doddaballapura) ನಗರದಲ್ಲಿ ನಡೆದ ಬೃಹತ್ ಪ್ರತಿಭಟನೆಯಲ್ಲಿ ಭಾಗವಹಿಸಿ ಮಂಡ್ಯದ ಕೆರಗೋಡು ಹುನಮಧ್ವಜ ವಿಚಾರಕ್ಕೆ ಪ್ರತಿಕ್ರಿಯಿಸಿದರು. ಆಂಜನೇಯನಿಗೆ ಬೆಂಕಿ ಹಚ್ಚಿದ ರಾವಣನ ಕಥೆ ಏನಾಯ್ತು ಲಂಕಾ ದಹನವಾಯ್ತು. ಅದೇ ರೀತಿ ಸಿದ್ದರಾಮಯ್ಯನವರೇ ಹನುಮನ ತಂಟೆಗೆ ಬರಬೇಡಿ, ಸುಟ್ಟು ಹೋಗ್ತೀರಾ ಹುಷಾರ್ ಎಂದು ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಸರ್ಕಾರಕ್ಕೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಹನುಮಧ್ವಜ ತೆರವು ಖಂಡಿಸಿ ಪ್ರತಿಭಟಿಸಿದ್ದ ಹಿಂದೂ ಕಾರ್ಯಕರ್ತರ ವಿರುದ್ಧ ಎಫ್ಐಆರ್
ಸಿದ್ದರಾಮಯ್ಯ ಎದೆಯಲ್ಲಿ ಟಿಪ್ಪು ಸುಲ್ತಾನ್ ಇದ್ದಾರೆ. ಆದರೆ ಬಾಯಲ್ಲಿ ಮಾತ್ರ ರಾಮ ಅಂತೀರಾ. ಹೃದಯದಿಂದ ರಾಮ ಅನ್ನಬೇಕು. ಎದೆ ಸೀಳಿದರೆ ಟಿಪ್ಪು ಸುಲ್ತಾನ್ ಕಾಣಿಸುತ್ತಾನೆ. ಮೂರು ರಾಜ್ಯಗಳಲ್ಲಿ ಅಧಿಕಾರ ಕಳೆದುಕೊಂಡಿದ್ದಾರೆ ಹಾಗಾಗಿ ಅವರು ಪ್ರಚಾರ ಮಾಡಲಿ ಎಂದು ವ್ಯಂಗ್ಯವಾಡಿದ್ದಾರೆ. ಇದನ್ನೂ ಓದಿ: ಜನವರಿ ತಿಂಗಳ ಹುಂಡಿ ಎಣಿಕೆ- ರಾಯರ ಮಠದಲ್ಲಿ 4 ಕೋಟಿ 15 ಲಕ್ಷ ರೂ. ಸಂಗ್ರಹ
– ಕುಮಾರಣ್ಣ ಬೇಕಿದ್ರೆ ನೀವು ಬಿಜೆಪಿ ಸೇರಿಕೊಳ್ಳಿ – ಕೇಸರಿ ಶಾಲು ಹಾಕಿಕೊಂಡು ನಿಮ್ಮ ಪಕ್ಷಕ್ಕೆ ಅಂತಿಮ ಯಾತ್ರೆ ಮಾಡಿದ್ದೀರಿ – ಮಂಡ್ಯದ ಜನರನ್ನು ಧರ್ಮದ ಹೆಸರು ಹೇಳಿ ನಂಬಿಸಬಹುದು ಅನ್ನೋದು ನಿಮ್ಮ ಭ್ರಮೆ ಎಂದ ಸಚಿವ
ಮಂಡ್ಯ: ಮಾಜಿ ಪ್ರಧಾನಿಯವರ ಮಗನಾದ ಕುಮಾರಸ್ವಾಮಿ (KumaraSwamy) ಅವರು ಜಿಲ್ಲೆಗೆ ಬಂದು ಶಾಂತಿ ಕದಡುವ ನಿರ್ಧಾರ ಮಾಡಿರೋದು ಸರಿಯಲ್ಲ ಎಂದು ಉಸ್ತುವಾರಿ ಸಚಿವ ಚಲುವರಾಯಸ್ವಾಮಿ (Chaluvaraya Swamy) ಕಿಡಿಕಾರಿದ್ದಾರೆ.
ಶಾಸಕ ಗಣಿಗ ರವಿಕುಮಾರ್ (Ganiga Ravikumar) , ಶಾಸಕ ದರ್ಶನ್ ಪುಟ್ಟಣ್ಣಯ್ಯ (Dharshan Puttannaiah) ಜೊತೆಗೂಡಿ ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಮಾಜಿ ಸಿಎಂ ಹೆಚ್‌ಡಿಕೆಗೆ ಮಂಡ್ಯ ಎಲ್ಲಾ ರೀತಿಯ ಶಕ್ತಿ ನೀಡಿದೆ. ಈ ಜಿಲ್ಲೆಯ ಜನರು ಅವರಿಗೆ ಸ್ವಂತ ಜಿಲ್ಲೆಗಿಂತ ಹೆಚ್ಚಿನ ಪ್ರೀತಿ, ಮಹತ್ವ ಕೊಟ್ಟಿದ್ದರು. ಆದರೂ ಅವರು ಇಲ್ಲಿನ ಜನರ ನೆಮ್ಮದಿ ಹಾಳು ಮಾಡುವ ಅವಶ್ಯಕತೆ ಇತ್ತಾ? ನಮ್ಮ ಯುವಕರ ನೆಮ್ಮದಿ ಹಾಳು ಮಾಡುವ ಕೆಲಸ ಮಾಡ್ತಿದ್ದಾರೆ. ಮಂಡ್ಯ ಜಿಲ್ಲೆ ಬಗ್ಗೆ ನಿಮಗೆ ಯಾಕಿಷ್ಟು ದ್ವೇಷ. ನನ್ನ ಮೇಲೆ ಅಥವಾ ಸ್ಥಳೀಯ ಶಾಸಕರ ಮೇಲೆ ದ್ವೇಷ ಮಾಡಿ. ಆದರೆ ಜಿಲ್ಲೆಯ ಜನತೆ ಮೇಲೆ ದ್ವೇಷ ಮಾಡಿ ಗಲಭೆ ಮಾಡಿಸಬೇಡಿ ಎಂದಿದ್ದಾರೆ. ಇದನ್ನೂ ಓದಿ: ಕುಮಾರಸ್ವಾಮಿ ತಪ್ಪು ಮಾಡಿದ್ರೆ ನೇಣಿಗೆ ಹಾಕಿ: ಕೆರಗೋಡು ಕೇಸ್ ತನಿಖೆಗೆ ಆಗ್ರಹಿಸಿ ಹೆಚ್‌ಡಿಕೆ ಸವಾಲು
ನಮ್ಮ ಜಿಲ್ಲೆಯ ಜನ ಸ್ವಾಭಿಮಾನ, ಗೌರವದಲ್ಲಿ ರಾಜ್ಯದಲ್ಲೇ ಮಾದರಿ ಆಗಿದ್ದಾರೆ. ಇಂತಹ ಜಿಲ್ಲೆಯಲ್ಲಿ ಬಂದು ಜನರಿಗೆ ಅವಮಾನ ಮಾಡಬೇಡಿ ಎಂದಿದ್ದಾರೆ. ಕುಮಾರಸ್ವಾಮಿ ಸಿಎಂ ಮಾಡಲು ಈ ಜಿಲ್ಲೆ ಜನರ ಆಶೀರ್ವಾದ ಕಾರಣ. ಬಾವುಟದ ವಿಚಾರದಲ್ಲಿ ಇವತ್ತು ಪ್ರತಿಭಟನೆ, ಪಾದಯಾತ್ರೆ ಮಾಡ್ತಿದ್ದಾರೆ. ಸಕ್ಕರೆ ಕಾರ್ಖಾನೆ ವಿಚಾರದಲ್ಲಿ ಯಾಕೆ ಇಂತಹ ನಿರ್ಧಾರ ಮಾಡಲಿಲ್ಲ. ಜಿಲ್ಲೆಯ ಅಭಿವೃದ್ಧಿ ಬಗ್ಗೆ ಯಾಕೆ ಇಷ್ಟೊಂದು ಆಸಕ್ತಿ ಇಲ್ಲ. ಮಂಡ್ಯ ಜಿಲ್ಲೆಗೆ ಅವರ ಕೊಡುಗೆ ಏನು ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಕಾನೂನು ವಿರುದ್ಧ ಯಾರೇ ನಡೆದುಕೊಂಡರು ಅವರ ವಿರುದ್ಧ ಕ್ರಮ: ಪರಮೇಶ್ವರ್
ಜಯಪ್ರಕಾಶ್ ನಾರಾಯಣ್, ಮಾಜಿ ಪ್ರಧಾನಿ ಹೆಚ್‌ಡಿಕೆ ಜಾತ್ಯತೀತವಾಗಿ ಜೆಡಿಎಸ್ ಪಕ್ಷ ಕಟ್ಟಿದ್ರು. ಆದರೆ ನೀವು ನಿನ್ನೆ ಕೇಸರಿ ಶಾಲು ಹಾಕಿಕೊಂಡು ನಿಮ್ಮ ಪಕ್ಷಕ್ಕೆ ಅಂತಿಮ ಯಾತ್ರೆ ಮಾಡಿದ್ದೀರಿ. ಹಸಿರು ಶಾಲು ಹಾಕಿಕೊಂಡು ರೈತರ ಪರವಾಗಿ ಹೋರಾಟ ಮಾಡ್ತಿದ್ರಿ. ಆದ್ರೆ ಇದೀಗ ರಾಷ್ಟ್ರಧ್ವಜ ಹೋರಾಟ ಮಾಡ್ತಿದ್ದೀರಿ. ಅಂದರೆ ನಿಮ್ಮ ಉದ್ದೇಶ ರಾಷ್ಟ್ರಧ್ವಜವನ್ನು ಕೆಳಗೆ ಇಳಿಸೋದಾ? ನಿಮ್ಮ ಹೋರಾಟ ರಾಷ್ಟ್ರ ದ್ವಜ ವಿರುದ್ಧವೇ? ತ್ರಿವರ್ಣ ಧ್ವಜವನ್ನು ಕೆಳಗೆ ಇಳಿಸುವ ಸಲುವಾಗಿಯೇ ಹೋರಾಟ ಮಾಡ್ತಿದ್ದೀರಿ. ನಿಮ್ಮ ವೈಯಕ್ತಿಕ ಹಿತಾಸಕ್ತಿಗೆ ದೇಶದ ಧ್ವಜಕ್ಕೆ ಅಪಮಾನ ಮಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ದಸರಾ ಆನೆ ಕ್ಯಾಪ್ಟನ್ ಅರ್ಜುನನ ವೀರಮರಣದ ಕೊನೇ ಕ್ಷಣದ ರೋಚಕ ವೀಡಿಯೋ ವೈರಲ್
ಕುಮಾರಸ್ವಾಮಿ ಒಂದು ವೇಳೆ ಅಧಿಕಾರದಲ್ಲಿದ್ರೆ ಏನು ಮಾಡ್ತಿದ್ರಿ? ರಾಷ್ಟ್ರಧ್ವಜ ತೆಗೆದು ಬೇರೆ ಧ್ವಜ ಹಾಕಲು ಅನುಮತಿ ಕೊಡ್ತಿದ್ರಾ? ಶಾಂತಿ ಕಾಪಾಡುವ ನಿಟ್ಟಿನಲ್ಲಿ ಜಿಲ್ಲಾಡಳಿತ ತೆಗೆದುಕೊಂಡಿರೋ ನಿರ್ಧಾರ ಸರಿಯಾಗಿದೆ. ಆದರೆ ನಿನ್ನೆ ಪಾದಯಾತ್ರೆ ಮಾಡಿ ಜನರ ನೆಮ್ಮದಿ ಕೆಡಿಸಿದ್ದೀರಿ. ಇದನ್ನ ಈ ಜಿಲ್ಲೆಯ ಜನ ಕ್ಷಮಿಸಲ್ಲ. ಈ ಜಿಲ್ಲೆಯ ಜನರನ್ನ ಧರ್ಮದ ಹೆಸರು ಹೇಳಿ ನಂಬಿಸಬಹುದು ಅನ್ನೋದು ನಿಮ್ಮ ಭ್ರಮೆ ಎಂದು ಬಿಜೆಪಿ ಹಾಗೂ ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಲಕ್ಷ್ಮಣ ಸವದಿ ಬಿಜೆಪಿಗೆ ಬಂದ್ರೆ ಪಕ್ಷಕ್ಕೆ ಹೆಚ್ಚಿನ ಶಕ್ತಿ ಬರುತ್ತೆ: ರಮೇಶ್ ಕತ್ತಿ
ಕೆರಗೋಡು ಹನುಮಧ್ವಜ ವಿವಾದ ವಿಚಾರ ಕುರಿತು ಮಾತನಾಡಿದ ಅವರು, ಕೆರಗೋಡು ಗ್ರಾಮದಲ್ಲಿ ರಾಷ್ಟ್ರಧ್ವಜ, ಕನ್ನಡ ಧ್ವಜ ಹಾರಿಸಲು ಅನುಮತಿ ಪಡೆದು ಗ್ರಾಮಸ್ಥರು ಮುಚ್ಚಳಿಕೆ ಬರೆದುಕೊಟ್ಟಿದ್ದಾರೆ. ಷರತ್ತುಗಳಿಗೆ ಒಪ್ಪಿಕೊಂಡು ಧ್ವಜಸ್ತಂಭ ಹಾಕಿದ್ದಾರೆ. ಆದರೆ ಷರತ್ತುಗಳ ಮೀರಿ ಇವರು ಹನುಮಧ್ವಜ ಹಾಕಿದ್ದಾರೆ. ಅದಕ್ಕಾಗಿ ಹನುಮಧ್ವಜ ಇಳಿಸಿ ರಾಷ್ಟ್ರಧ್ವಜ ಹಾಕಲಾಗಿದೆ. ಆದರೆ ಇಲ್ಲಿ ಯಾಕೆ ಇಷ್ಟೊಂದು ಗೊಂದಲ ಮಾಡಿದ್ದಾರೋ ಗೊತ್ತಿಲ್ಲ. ಇಲ್ಲಿನ ಜನರ ನೆಮ್ಮದಿ ಹಾಳು ಮಾಡೋದಕ್ಕೆ ಹೆಚ್‌ಡಿಕೆ, ಆರ್.ಅಶೋಕ್, ಸಿ.ಟಿ.ರವಿ ಮುಂದಾಗಿದ್ದಾರೆ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಅಂಬೇಡ್ಕರ್ ನಾಮಫಲಕ ವಿಚಾರ – ಎರಡು ಗುಂಪುಗಳ ನಡುವೆ ಘರ್ಷಣೆ
ಜಿಲ್ಲೆಯ ಸಮಸ್ಯೆಗಳ ಬಗ್ಗೆ ಹೆಚ್‌ಡಿಕೆ ಗಮನಹರಿಸಿಲ್ಲ, ಹೋರಾಟ ಮಾಡಿಲ್ಲ. ಜಿಲ್ಲೆಯ ನೀರಾವರಿ ಯೋಜನೆ ಬಗ್ಗೆ ತಲೆ ಕೆಡಿಸಿಕೊಂಡಿರಲಿಲ್ಲ. ನಿನ್ನೆ ಬಂದು ರಾಷ್ಟ್ರಧ್ವಜ ಹಾಕಿರೋದಕ್ಕೆ ಹೋರಾಟ ಮಾಡಿದ್ದೀರಿ. ಬಿಜೆಪಿ ನಾಯಕರ ಜೊತೆ ಸೇರಿ ರಾಷ್ಟ್ರಧ್ವಜ ವಿರುದ್ಧ ಪ್ರತಿಭಟನೆ ನಡೆಸಿದ್ದೀರಿ. ಕುಮಾರಣ್ಣ ನಿಮಗೆ ತಾಳ್ಮೆ ಇರಲಿ. ಸೋತಿದ್ದೀನಿ ಅನ್ನುವ ನಿರಾಸೆಗೆ ಏನೇನೋ ಮಾಡಬೇಡಿ ಎಂದು ಎಚ್ಚರಿಕೆ ನೀಡಿದ್ದಾರೆ. ಈ ಜಿಲ್ಲೆಯ ಜನ ನಿಮಗೆ ಹೆಚ್ಚಿನ ಪ್ರೀತಿ ಕೊಟ್ಟಿದ್ದಾರೆ. ಹೊರಗಿನಿಂದ ಬಂದು ಇಲ್ಲಿ ಅಧಿಕಾರ ಅನುಭವಿಸಿದ್ದೀರಿ. ಹಾಗಾಗಿ ಇಲ್ಲಿಯ ಜನಕ್ಕೆ ಅನ್ಯಾಯ ಮಾಡಬೇಡಿ. ಬೇಕಿದ್ರೆ ನೀವು ಬಿಜೆಪಿ ಸೇರ್ಪಡೆ ಆಗಿಬಿಡಿ. ಕೇಸರಿ ಬಟ್ಟೆ ಹಾಕಿಕೊಂಡು ಬಿಜೆಪಿ ಸೇರಿಕೊಳ್ಳಿ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಗೋಸುಂಬೆ ಉರುಫ್ ಊಸರವಳ್ಳಿ ಕಾಂಗ್ರೆಸ್ ಪಕ್ಷಕ್ಕೆ ಒಳಗೊಂದು ಹೊರಗೊಂದು ವೇಷ: ಜೆಡಿಎಸ್ ವಾಗ್ದಾಳಿ
ಇವರ ಸುಳ್ಳು ಪ್ರಚೋದನೆಗೆ ಯಾರೂ ಕಿವಿಗೊಡಬೇಡಿ. ನಿಮ್ಮ ಕಷ್ಟ-ಸುಖಕ್ಕೆ ನಾವು ಜೊತೆಯಾಗಿ ಇರುತ್ತೀವಿ. ಮುಂದಿನ ನಾಲ್ಕು ವರ್ಷ ಅಭಿವೃದ್ಧಿಗೆ ಹೆಚ್ಚು ಗಮನ ಕೊಡುತ್ತೇವೆ. ಕಾವೇರಿ ವಿಚಾರ, ಸಕ್ಕರೆ ಕಾರ್ಖಾನೆ ವಿಚಾರದಲ್ಲಿ ಸೂಕ್ತ ನಿರ್ಧಾರ ಮಾಡ್ತಿದ್ದೀವಿ. ಇಂತಹ ಅಪಪ್ರಚಾರ, ಪ್ರಚೋದನೆಗೆ ಕಿವಿಗೊಡಬೇಡಿ ಎಂದು ಮಂಡ್ಯದ ಜನತೆಗೆ ಸಚಿವ ಚಲುವರಾಯಸ್ವಾಮಿ ಮನವಿ ಮಾಡಿದ್ದಾರೆ. ಇದನ್ನೂ ಓದಿ: ED ಕೈಗೆ ಸಿಗದ ಜಾರ್ಖಂಡ್ ಸಿಎಂ – ಹೇಮಂತ್ ಸೊರೆನ್ BMW ಕಾರು ವಶಕ್ಕೆ
ಬೆಂಗಳೂರು: ಕಾನೂನು ವಿರುದ್ಧ ಯಾರೇ ನಡೆದುಕೊಂಡರೂ ಅವರ ವಿರುದ್ಧ ಸರ್ಕಾರ ಕ್ರಮ ತೆಗೆದುಕೊಳ್ಳುತ್ತದೆ ಎಂದು ಗೃಹ ಸಚಿವ ಪರಮೇಶ್ವರ್ (G Parameshwar) ಮಂಡ್ಯ (Mandya) ಕೆರಗೋಡು (Keragodu) ಘಟನೆಗೆ ಪೊಲೀಸರು ತೆಗೆದುಕೊಂಡ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ.
ಕೆರಗೋಡಿನಲ್ಲಿ ಪೊಲೀಸರು ಲಾಠಿ ಚಾರ್ಜ್ ಮಾಡಿದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಕೆರಗೋಡಿನಲ್ಲಿ ಧ್ವಜ ಹಾರಿಸಲು ಅನುಮತಿ ಕೇಳಿದ್ದರು. ರಾಷ್ಟ್ರಧ್ವಜ, ನಾಡ ಧ್ವಜ ಹಾರಿಸಲು ಅನುಮತಿ ಕೇಳಿದ್ರು. ಅದಕ್ಕೆ ಅನುಮತಿ ಪಂಚಾಯತ್ ಅವರೇ ಕೊಟ್ಟಿದ್ದಾರೆ. ಪಂಚಾಯತ್ ಅವರು ಅನುಮತಿ ಕೊಡುವಾಗ ಕೆಲವು ಕಂಡೀಷನ್ ಹಾಕಿ ಕೊಟ್ಟಿದ್ದಾರೆ. ಬೇರೆ ಧ್ವಜ ಹಾಕಬಾರದು ಎಂದು ಪಂಚಾಯತ್ ಹೇಳಿ, ಮುಚ್ಚಳಿಕೆ ಬರೆಸಿಕೊಂಡು ಅನುಮತಿ ಕೊಟ್ಟಿದ್ದಾರೆ. ಮುಚ್ಚಳಿಕೆಯಲ್ಲಿ ಅವರು ಬೇರೆ ಯಾವುದೇ ಧ್ವಜ ಹಾಕೋದಿಲ್ಲ ಎಂದು ಬರೆದು ಕೊಟ್ಟಿದ್ದಾರೆ. ರಾಷ್ಟ್ರ ಮತ್ತು ನಾಡ ಧ್ವಜ ಬಿಟ್ಟು ಯಾವುದೇ ರಾಜಕೀಯ ಧ್ವಜ ಹಾಕೋದಿಲ್ಲ, ಧರ್ಮದ ಧ್ವಜ ಹಾಕೋದಿಲ್ಲ ಎಂದು ಮುಚ್ಚಳಿಕೆ ಬರೆದುಕೊಟ್ಟಿದ್ದಾರೆ. ಅದಾದ ಮೇಲೂ ಹೋಗಿ ಹನುಮಾನ್ ಧ್ವಜ ಹಾರಿಸಿದ್ದಾರೆ. ಇದು ಸರಿಯಲ್ಲ ಎಂದರು. ಇದನ್ನೂ ಓದಿ: ಲಕ್ಷ್ಮಣ ಸವದಿ ಬಿಜೆಪಿಗೆ ಬಂದ್ರೆ ಪಕ್ಷಕ್ಕೆ ಹೆಚ್ಚಿನ ಶಕ್ತಿ ಬರುತ್ತೆ: ರಮೇಶ್ ಕತ್ತಿ
ಹನುಮ ನಮಗೆಲ್ಲರಿಗೂ ದೇವರು. ಹನುಮನ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡೋದು, ನಡೆದುಕೊಳ್ಳೋದು ಇಲ್ಲ. ಅವರಿಗೆ ಹೇಗೆ ದೇವರೋ ನಮಗೂ ದೇವರೇ. ಆದರೆ ಕಾನೂನು ಈ ದೇಶದಲ್ಲಿ ಎಲ್ಲರಿಗೂ ಒಂದೇ. ಕಾನೂನು ಪಾಲನೆ ಮಾಡಬೇಕು. ಸರ್ಕಾರಿ ಜಾಗದಲ್ಲಿ ಹೋಗಿ ಧಾರ್ಮಿಕ ಧ್ವಜ ಹಾಕಿದ್ರೆ ಹೇಗೆ? ಬೇರೆಯವರು ಕೂಡಾ ಅಂಬೇಡ್ಕರ್ ಧ್ವಜ ಬೇರೆ ಬೇರೆ ಧ್ವಜ ಹಾಕ್ತೀವಿ ಎಂದು ಮನವಿ ಮಾಡಿದ್ದಾರೆ. ಸರ್ಕಾರ ಆಗಿ ನಾವು ಏನು ಮಾಡಬಹುದು? ಶಾಂತಿ ಕಾಪಾಡಿ ಎಂದು ಹೇಳಬಹುದು. ನಿಮ್ಮ ಜಾಗದಲ್ಲಿ ಹನುಮಧ್ವಜ ಹಾಕೋಕೆ ಯಾರು ತಡೆಯಲ್ಲ. ದೇವಸ್ಥಾನ, ನಿಮ್ಮ ಮನೆ ಬಳಿ ಧ್ವಜ ಹಾಕಲು ಯಾರು ತಡೆಯೋದಿಲ್ಲ. ಆದರೆ ಸಾರ್ವಜನಿಕ ಸ್ಥಳ, ಸರ್ಕಾರಿ ಜಾಗದಲ್ಲಿ ಹಾಕಿದ್ದು ತಪ್ಪು. ತಪ್ಪು ಇವರೇ ಮಾಡಿ ಇವರೇ ಸರ್ಕಾರವನ್ನು ದೂಷಣೆ ಮಾಡೋದು, ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡೋದು ಸರಿಯಲ್ಲ. ಹೀಗಾಗಿ ಕಾನೂನು ಪ್ರಕಾರ ಏನು ಕ್ರಮ ಮಾಡಬೇಕೋ ಅದನ್ನು ಮಾಡುತ್ತೇವೆ ಎಂದು ಹೇಳಿದರು. ಇದನ್ನೂ ಓದಿ: ಅಂಬೇಡ್ಕರ್ ನಾಮಫಲಕ ವಿಚಾರ – ಎರಡು ಗುಂಪುಗಳ ನಡುವೆ ಘರ್ಷಣೆ
ಬಿಜೆಪಿ-ಜೆಡಿಎಸ್ ರಾಜ್ಯಮಟ್ಟದ ಪ್ರತಿಭಟನೆ ಮಾಡುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಅವರು ರಾಜ್ಯ ಮಟ್ಟದಲ್ಲಿ ಪ್ರತಿಭಟನೆ ಮಾಡಲಿ. ಸರ್ಕಾರ ವೀಕ್ ಆಗಿಲ್ಲ. ನಾವು ಅದನ್ನು ಹ್ಯಾಂಡಲ್ ಮಾಡುತ್ತೇವೆ. ಬಿಜೆಪಿ-ಜೆಡಿಎಸ್ ಅವರು ಏನು ಬೇಕಾದರೂ ಮಾಡಿಕೊಳ್ಳಲಿ. ಅದು ಕಾನೂನು ಒಳಗೆ ಇದ್ದರೆ ನಾವು ಅವರನ್ನು ಮಾತನಾಡಿಸಲು ಹೋಗಲ್ಲ. ಕಾನೂನು ಬಿಟ್ಟು ಕೆಲಸ ಮಾಡಿದರೆ ಸರ್ಕಾರ ಕ್ರಮ ತೆಗೆದುಕೊಳ್ಳುತ್ತದೆ ಎಂದು ಎಚ್ಚರಿಕೆ ಕೊಟ್ಟರು. ಇದನ್ನೂ ಓದಿ: ಗೋಸುಂಬೆ ಉರುಫ್ ಊಸರವಳ್ಳಿ ಕಾಂಗ್ರೆಸ್ ಪಕ್ಷಕ್ಕೆ ಒಳಗೊಂದು ಹೊರಗೊಂದು ವೇಷ: ಜೆಡಿಎಸ್ ವಾಗ್ದಾಳಿ