Tag: Kengeri Police

  • ಜಾತ್ರೆಯಲ್ಲಿ ಲವ್‌… ಓಯೋ ರೂಮಲ್ಲಿ ಕೆಲಸ ಮುಗಿದ್ಮೇಲೆ ಆಂಟಿಯನ್ನ ಇರಿದು ಕೊಂದ ಟೆಕ್ಕಿ

    ಜಾತ್ರೆಯಲ್ಲಿ ಲವ್‌… ಓಯೋ ರೂಮಲ್ಲಿ ಕೆಲಸ ಮುಗಿದ್ಮೇಲೆ ಆಂಟಿಯನ್ನ ಇರಿದು ಕೊಂದ ಟೆಕ್ಕಿ

    – ನನಗೆ ಸಿಕ್ಕವಳು ಬೇರೆ ಯಾರಿಗೂ ಸಿಗಬಾರ್ದು ಅಂತ ಸೈಕೋ ವರ್ತನೆ
    – ಅಂದಕ್ಕೂ ಐಶ್ವರ್ಯಕ್ಕೂ ಕಡಿಮೆಯಿಲ್ಲದ ಸುಂದ್ರಿ ಟೆಕ್ಕಿ ಪ್ರೀತಿ ಆಸೆಗೆ ಬಿದ್ದು ಹೆಣವಾದ್ಲು

    ಬೆಂಗಳೂರು: ಸೌಂದರ್ಯದ ಖನಿ ಅವಳು… ರೂಪ ಲಾವಣ್ಯದಲ್ಲಾಗಲಿ.. ಅಂದ – ಐಶ್ವರ್ಯದಲ್ಲಾಗಲಿ ಯಾರಿಗೇನು ಕಡಿಮೆ ಇರಲಿಲ್ಲ. ಗಂಡ ಇಬ್ಬರು ಹೆಣ್ಣುಮಕ್ಕಳಿದ್ದ ಸುಂದರ ಸಂಸಾರದಲ್ಲಿ ಯುವಕನೊಂದಿಗೆ ಪ್ರೇಮ, ದೈಹಿಕ ಸಂಪರ್ಕ ಬೆಳೆಸಿ ಕೊನೆಗೆ ಪ್ರಿಯಕರನಿಂದಲೇ (Lover) ಮಂಚದ ಮೇಲೆ ಹೆಣವಾದಳು ಸುಂದ್ರಿ.. ಏನಿದು ಥ್ರಿಲ್ಲಿಂಗ್‌ ಸ್ಟೋರಿ ಅಂತೀರಾ ಮುಂದೆ ಓದಿ…

    ಹೌದು… ಬೆಂಗಳೂರಿನ (Bengaluru) ಪೂರ್ಣ ಪ್ರಜ್ಞಾ ಲೇಔಟ್‌ನಲ್ಲಿ ಓಯೋ ರೂಮಿನಲ್ಲಿ ಹತ್ಯೆಗೀಡಾದ ಗೃಹಿಣಿ ಹರಿಣಿ ವಯಸ್ಸು 35 ಆದ್ರೂ ನೋಡೋಕೆ ರೂಪವತಿ. ಮನೆ ಕಡೆಯೂ ಸಾಕಷ್ಟು ಸ್ಥಿತಿವಂತರಾಗಿದ್ರು. ಕೋಟಿ ಕೋಟಿ ಆಸ್ತಿ ಇರೋ ಈ ಹರಿಣಿಗೆ ಊರ ಜಾತ್ರೆಯಲ್ಲಿ 25 ವರ್ಷದ ಟೆಕ್ಕಿ ಯಶಸ್ ಪರಿಚಯವಾಗಿದ್ದ. ಇದೇ ವೇಳೆ ಇಬ್ಬರ ಪರಿಚಯ ಸ್ನೇಹಕ್ಕೆ ತಿರುಗಿತ್ತು. ಜಾತ್ರೆಯಲ್ಲೇ ನಂಬರ್‌ ಎಕ್ಸ್‌ಚೇಂಜ್‌ ಮಾಡಿಕೊಂಡು ಚಾಟಿಂಗ್‌, ಡೇಟಿಂಗ್‌ ಶುರು ಮಾಡಿದ್ರು. ಇವರಿಬ್ಬರ ಪ್ರೀತಿ (Love) ಮಂಚದವರೆಗೂ ತಲುಪಿತ್ತು. ಹೆಮ್ಮಿಗೆಪುರದ ಹರಿಣಿಯ ಗಂಡ ಸ್ಥಳೀಯ ಜಮಿನ್ದಾರ. ಹಣಕಾಸಿಗೆ ಕೊರತೆ ಇರ್ಲಿಲ್ಲ. ಇಬ್ಬರು ಹೆಣ್ಣು ಮಕ್ಕಳನ್ನ ಓದಿಸಿಕೊಂಡು ಹೆಂಡತಿಯನ್ನ ಚೆನ್ನಾಗಿ ನೋಡಿಕೊಂಡಿದ್ದನಂತೆ. ಇತ್ತಿಚೇಗೆ ದೊಡ್ಡ ಮನೆ ಕಟ್ಟಲು ಪಾಯ ಪೂಜೆ ಸಹ ಮಾಡಿದ್ರಂತೆ.  ಇದನ್ನೂ ಓದಿ: ಹೆಂಡತಿ ಮಾತು ಕೇಳಿ ನನ್ನ ಮಗ ಹನಿಮೂನ್‌ಗೆ 10 ಲಕ್ಷ ಮೌಲ್ಯ‌ದ ಆಭರಣ ಹಾಕ್ಕೊಂಡು ಹೋಗಿದ್ದ: ಸೊಸೆಯ ಪ್ಲ್ಯಾನ್‌ ಬಗ್ಗೆ ಬಿಚ್ಚಿಟ್ಟ ಅತ್ತೆ

    ಸಿಕ್ಕ ಕೂಡಲೇ ಮುಗಿಸಿಬಿಡಬೇಕೆಂದು ಸ್ಕೆಚ್‌
    ಹೀಗಿರುವಾಗಲೇ ಪತ್ನಿ ಹರಿಣಿ ಹಾಗೂ ಯಶಸ್ ನಡುವಿನ ಅನೈತಿಕ ಸಂಬಂಧ ಗಂಡನಿಗೆ ಗೊತ್ತಾಗಿದೆ. ಗಂಡ ಪತ್ನಿಗೆ ಬುದ್ಧಿ ಹೇಳಿ ಹರಿಣಿಯ ಫೋನ್‌ ಕೂಡ ಕಿತ್ಕೊಂಡು ಮನೆಯಲ್ಲೇ ಕೂಡಿ ಹಾಕಿದ್ದರಂತೆ ಪತಿ ದಾಸೇಗೌಡ. ಇದಾದ ನಂತರ ಪತ್ನಿ ಸರಿ ಹೋಗ್ತಾಳೆ ಅಂತ ಹೊರಗಡೆ ಬಿಟ್ಟಿದ್ದಾನೆ. ಈ ವೇಳೆ ಹರಿಣಿ ತನ್ನ ಬಾಯ್‌ಫ್ರೆಂಡ್‌ ಯಶಸ್‌ನ ಮತ್ತೆ ಸಂಪರ್ಕಿಸಿದ್ದಾಳೆ. ಇತ್ತ ಹರಿಣಿ ಸಂಪರ್ಕಕ್ಕೆ ಸಿಗದೇ ಹುಚ್ಚನಂತಾಗಿದ್ದ ಯಶಸ್, ಹರಿಣಿ ಸಿಕ್ಕರೇ ಸಾಯಿಸಲು ನಿರ್ಧಾರ ಮಾಡಿದ್ನಂತೆ. ಕೊಲೆ ಮಾಡೋ ಉದ್ದೇಶದಿಂದ ಚಾಕು ಕೂಡ ಖರೀದಿ ಮಾಡಿದ್ನಂತೆ.  ಇದನ್ನೂ ಓದಿ: Bengaluru | ಅನೈತಿಕ ಸಂಬಂಧ ಆರೋಪ – ಮಹಿಳೆ ದೇಹ ಬೆತ್ತಲೆಗೊಳಿಸಿ ಹತ್ಯೆಗೈದ ಪಾಗಲ್‌ ಪ್ರೇಮಿ

    ಎಲ್ಲಾ ಮುಗಿದ್ಮೇಲೆ ಸೈಕೋ ವರ್ತನೆ ತಾಳಿದ್ದ ಟೆಕ್ಕಿ
    ಇದೇ ಸಮಯಕ್ಕೆ ಹರಿಣಿ ಯಶಸ್‌ಗೆ ಕಾಲ್ ಮಾಡಿದ್ದು ಇಬ್ಬರು ಓಯೋ ರೂಮ್‌ನಲ್ಲಿ ಸೇರೋದಾಗಿ ಮಾತು ಕತೆ ನಡೆಸಿದ್ದಾರೆ. ಸುಬ್ರಹ್ಮಣ್ಯಪುರ ಠಾಣಾ ವ್ಯಾಪ್ತಿಯ ಓಯೊ ರೂಂ ನಲ್ಲಿ (Oyo Room) ಕಳೆದ ಶುಕ್ರವಾರ ಇಬ್ಬರೂ ಸೇರಿದ್ದಾರೆ. ಲೈಗಿಂಕ ಸಂಪರ್ಕ ಮುಗಿಸಿದ ಬಳಿಕ ಯಶಸ್‌ ಸೈಕೋ ವರ್ತನೆ ತಾಳಿದ್ದಾನೆ. ನನಗೆ ಸಿಕ್ಕವಳು ಬೇರೆ ಯಾರಿಗೂ ಸಿಗಬಾರದು ಅಂತ ಮೊದಲೇ ಪ್ಲಾನ್ ಮಾಡಿದಂತೆ ಚಾಕುನಿಂದ ಬರ್ಬರವಾಗಿ ಇರಿದು ಕೊಂದೇಬಿಟ್ಟಿದ್ದಾನೆ. ನಂತರ ಟೆಕ್ಕಿ ತಾನೂ ಕೂಡ ಎದೆಗೆ ಚಾಕು ಚುಚ್ಚಿಕೊಂಡು ಆತ್ಮಹತ್ಯೆಗೆ ಪ್ರಯತ್ನ ಮಾಡಿದ್ದಾನೆ. ಆದ್ರೆ ನೋವಾಯ್ತು ಅಂತ ಚಾಕು ಅಲ್ಲೆ ಬಿಟ್ಟು ನೇರವಾಗಿ ಕೆಂಗೇರಿ ಠಾಣೆಗೆ ಹೋಗಿ ಕೊಲೆ ವಿಚಾರ ಹೇಳಿದ್ದಾನೆ.

    ಕೊನೆಗೆ ಕೆಂಗೇರಿ ಪೊಲೀಸ್ರು ಕೊಲೆ ನಡೆದ ಸ್ಥಳ ಸುಬ್ರಹ್ಮಣ್ಯಪುರ ಠಾಣಾವ್ಯಾಪ್ತಿಗೆ ಬರೋದಾಗಿ ಟೆಕ್ಕಿ ಯಶಸ್‌ನ ಪೊಲೀಸರಿಗೆ ಒಪ್ಪಿಸಿದ್ದಾರೆ. ಇದನ್ನೂ ಓದಿ: ಹನಿಮೂನ್‌ ಮರ್ಡರ್‌ | ನನ್ನ ಮಗಳು 100% ಮುಗ್ಧೆ – CBI ತನಿಖೆಗಾಗಿ ಅಮಿತ್ ಶಾಗೆ ಮನವಿ ಮಾಡ್ತೇನೆ: ಸೋನಮ್‌ ತಂದೆ

  • Bengaluru | ಅನೈತಿಕ ಸಂಬಂಧ ಆರೋಪ – ಮಹಿಳೆ ದೇಹ ಬೆತ್ತಲೆಗೊಳಿಸಿ ಹತ್ಯೆಗೈದ ಪಾಗಲ್‌ ಪ್ರೇಮಿ

    Bengaluru | ಅನೈತಿಕ ಸಂಬಂಧ ಆರೋಪ – ಮಹಿಳೆ ದೇಹ ಬೆತ್ತಲೆಗೊಳಿಸಿ ಹತ್ಯೆಗೈದ ಪಾಗಲ್‌ ಪ್ರೇಮಿ

    – ಆಂಟಿ ಸಿಗದೇ ತಲೆ ಕೆಡಿಸಿಕೊಂಡು ಹುಚ್ಚನಂತಾಗಿದ್ದ ಪ್ರೇಮಿ
    – ತಾನೂ ಆತ್ಮಹತ್ಯೆಗೆ ಯತ್ನಿಸಿದ್ದ ಸಾಫ್ಟ್‌ವೇರ್‌ ಎಂಜಿನಿಯರ್‌

    ಬೆಂಗಳೂರು: ಅನೈತಿಕ ಸಂಬಂಧಕ್ಕೆ ಬಿದ್ದು ವಿವಾಹಿತ ಮಹಿಳೆಯೊಬ್ಬಳು (Married Women) ಭೀಕರ ಹತ್ಯೆಗೀಡಾಗಿರುವ ಘಟನೆ ಬೆಂಗಳೂರಿನ ಸುಬ್ರಹ್ಮಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕೊಲೆ ಆರೋಪಿ ಸಹ ಬಂಧನವಾಗಿದ್ದು, ಪೊಲೀಸ್‌ ತನಿಖೆ ವೇಳೆ ಆರೋಪಿಯ ವಿಕೃತಿ, ಕ್ರೌರ್ಯ ಬಯಲಾಗಿದೆ.

    ಹರಿಣಿ (36) ಕೊಲೆಯಾದ ಪ್ರಿಯತಮೆ, ಟೆಕ್ಕಿ ಯಶಸ್ (25) ಕೊಲೆ ಆರೋಪಿ. ಬಹಳ ದಿನಗಳಿಂದ ಪ್ರಿಯತಮೆಯನ್ನ (Lovers) ಮೀಟ್‌ ಮಾಡದೇ ತಲೆ ಕೆಡಿಸಿಕೊಂಡಿದ್ದ ಟೆಕ್ಕಿ ಆಕೆ ಸಿಗುತ್ತಿದ್ದಂತೆ ಮುಗಿಸಿಬಿಡಬೇಕೆಂದು ಪ್ಲ್ಯಾನ್‌ ಮಾಡಿಕೊಂಡಿದ್ದ. ಅದರಂತೆ ಪೂರ್ಣ ಪ್ರಜ್ಞಾ ಲೇಔಟ್‌ನಲ್ಲಿ ಓಯೋ ರೂಮಿಗೆ (Oyo Room) ಕರೆದೊಯ್ದು, ಹರಿಣಿಗೆ ಬರೋಬ್ಬರಿ 17 ಬಾರಿ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಆಕೆಯ ದೇಹವನ್ನ ಬೆತ್ತಲೆಗೊಳಿಸಿ ಹರಿಣಿಯ ಕತ್ತು, ಎದೆ ಭಾಗ, ಹೊಟ್ಟೆ ಸೇರಿ ದೇಹದ ಹಲವು ಭಾಗಗಳಿಗೆ ಇರಿದಿದ್ದಾನೆ.

    ತಾನೂ ಆತ್ಮಹತ್ಯೆಗೆ ಯತ್ನ
    ಹರಿಣಿಯನ್ನ ಬೆತ್ತಲೆಗೊಳಿಸಿ ಭೀಕರವಾಗಿ ಹತ್ಯೆಗೈದಿದ್ದ ಆರೋಪಿ ಯಶಸ್ ಕೊಲೆ ಮಾಡಿದ ಬಳಿಕ ಮನೆಗೆ ತೆರಳಿ ತಾನೂ ಆತ್ಮಹತ್ಯೆಗೆ ಯತ್ನಿಸಿದ್ದ. ಕೈ ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ. ಬಳಿಕ ತಾನೇ ಕೆಂಗೇರಿ ಪೊಲೀಸ್‌ (Kengeri Police) ಠಾಣೆಗೆ ಹೋಗಿ ಶರಣಾಗಿದ್ದಾನೆ. ಆದ್ರೆ ಕೆಂಗೇರಿ ಪೊಲೀಸರು ನಮ್ಮ ಠಾಣೆ ವ್ಯಾಪ್ತಿಗೆ ಬರಲ್ಲ ಅಂತ ಹೇಳಿ, ಆರೋಪಿಯನ್ನ ಕರೆತಂದು ಸುಬ್ರಮಣ್ಯಪುರ ಪೊಲೀಸರಿಗೆ (Subramanyapura Police) ಒಪ್ಪಿಸಿದ್ದಾರೆ.

    ಆಂಟಿ-ಯುವಕನ ಲವ್‌ಸ್ಟೋರಿ – ಕೊಲೆಯಲ್ಲಿ ಅಂತ್ಯ
    ಕೆಂಗೇರಿ ಮೂಲದ ಹರಿಣಿ, ದಾಸೇಗೌಡ ಎಂಬವರ ಪತ್ನಿ. ಕೆಲ ತಿಂಗಳ ಹಿಂದೆ ಏರಿಯಾದಲ್ಲಿ ಜಾತ್ರೆ ಇತ್ತು, ಗೃಹಿಣಿ ಹರಿಣಿ ಇದ್ದ ಏರಿಯಾಗೆ ಜಾತ್ರೆಗೆ ಹೋಗಿದ್ದ ಟೆಕ್ಕಿ ಯಶಸ್, ಅಲ್ಲದೇ ಆಕೆಯನ್ನ ಪರಿಚಯ ಮಾಡಿಕೊಂಡಿದ್ದ. ಕೊನೆಗೆ ಇಬ್ಬರು ಫೋನ್‌ ನಂಬರ್‌ ಕೂಡ ಪರಸ್ಪರ ಪಡೆದುಕೊಂಡಿದ್ರು. ಬಳಿಕ ಇಬ್ಬರ ನಡುವೆ ಸ್ನೇಹ ಬೆಳೆದು ಚಾಟಿಂಗ್‌, ಡೇಟಿಂಗ್‌ ಶುರು ಮಾಡಿಕೊಂಡಿದ್ರು. ಹೀಗಾಗಿ ಇಬ್ಬರ ನಡುವೆ ಅನೈತಿಕ ಸಂಬಂಧ ಇತ್ತಂತೆ.

    ಕ್ರಮೇಣ ಹರಿಣಿ ಗಂಡ ದಾಸೇಗೌಡನಿಗೆ ಪತ್ನಿಯ ಅನೈತಿಕ ಸಂಬಂಧದ ಗೊತ್ತಾಗಿತ್ತು. ನಂತರ ಹೆಂಡ್ತಿಯ ಫೋನ್ ಕಿತ್ಕೊಂಡು ಮನೆಯಲ್ಲೇ ಕೂಡಿ ಹಾಕಿದ್ದ. ಕೆಲ ತಿಂಗಳ ಬಳಿಕ ಮತ್ತೆ ಹೊರ ಬಂದಿದ್ದ ಹರಿಣಿ, ತನ್ನ ಬಾಯ್ ಫ್ರೆಂಡ್ ಯಶಸ್‌ನ ಸಂಪರ್ಕಿಸಿದ್ಲು. ಇತ್ತ ಹರಿಣಿ ಸಂಪರ್ಕಕ್ಕೆ ಸಿಗದೇ ಹುಚ್ಚನಂತೆ ಆಗಿದ್ದ ಯಶಸ್, ಸಿಕ್ಕ ಕೂಡಲೇ ಮುಗಿಸಿಬಿಡಬೇಕೆಂದು ನಿರ್ಧಾರ ಮಾಡಿಕೊಂಡಿದ್ದ. ಹೀಗಾಗಿ ಚಾಕು ಕೂಡ ಖರೀದಿಸಿ ಇಟ್ಟಿದ್ದ. ಮತ್ತೆ ಹರಿಣಿಯನ್ನು ಮೀಟ್ ಮಾಡಿ ಮಾತುಕತೆ ಮಾಡಿಕೊಂಡು ಓಯೋ ರೂಮ್‌ಗೆ ಕರೆದೊಯ್ದ ಯಶಸ್‌, ಅವಳು ಬೇರೆ ಯಾರಿಗೂ ಸಿಗಬಾರ್ದು ಅಂತ ಇರಿದು ಕೊಂಡಿದ್ದಾನೆ.

    ಯಶಸ್‌ ಶುಕ್ರವಾರ ಕೊಲೆ ಮಾಡಿ ಪರಾರಿಯಾಗಿದ್ದ. ನಂತರ ಸುಬ್ರಹ್ಮಣ್ಯಪುರ ಇನ್ಸ್‌ಪೆಕ್ಟರ್‌ ರಾಜು ನೇತೃತ್ವದ ತಂಡ ಭೇಟಿ ನೀಡಿ ಪರಿಶೀಲಿಸಿತ್ತು. ಬಳಿಕ ಎಫ್‌ಎಸ್‌ಎಲ್‌ ತಂಡ ಕರೆಸಿ ಎಲ್ಲಾ ಸಾಕ್ಷ್ಯ ಸಂಗ್ರಹಿಸಿದ ಬಳಿಕ ಆರೋಪಿಯನ್ನ ಬಂಧಿಸಲಾಗಿದೆ. ವಿಚಾರಣೆ ವೇಳೆ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ. ನನಗೂ ಆಕೆಗೂ ಅನೈತಿಕ ಸಂಬಂಧ ಇತ್ತು. ನನ್ನನ್ನ ಅವಾಯ್ಡ್‌ ಮಾಡ್ತಾ ಇದ್ಲು, ಹೀಗಾಗಿ ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಇಂದು ಮಧ್ಯಾಹ್ನ 3 ಗಂಟೆಗೆ ಕೋರ್ಟ್‌ಗೆ ಹಾಜರು ಪಡಿಸಲಿದ್ದಾರೆ .

  • ಬೆಂಗಳೂರಲ್ಲಿ ರಸ್ತೆ ದಾಟುವಾಗ ಬೆನ್ಜ್ ಕಾರು ಡಿಕ್ಕಿಯಾಗಿ ಟೆಕ್ಕಿ ಸಾವು

    ಬೆಂಗಳೂರಲ್ಲಿ ರಸ್ತೆ ದಾಟುವಾಗ ಬೆನ್ಜ್ ಕಾರು ಡಿಕ್ಕಿಯಾಗಿ ಟೆಕ್ಕಿ ಸಾವು

    ಬೆಂಗಳೂರು: ರಸ್ತೆ ದಾಟುವಾಗ ಬೆನ್ಜ್ ಕಾರು ಡಿಕ್ಕಿಯಾಗಿ ಟೆಕ್ಕಿ ಸಂಧ್ಯಾ ಸಾವಾಗಿರುವ ಘಟನೆ ಬೆಂಗಳೂರಿನಲ್ಲಿ (Bengaluru) ನಡೆದಿದೆ.

    ಈ ಬಗ್ಗೆ ಪಶ್ಚಿಮ ವಿಭಾಗದ ಸಂಚಾರ ಡಿಸಿಪಿ ಅನಿತ ಹದ್ದನವರ್ ಮಾತನಾಡಿ, ರಸ್ತೆ ದಾಟಲು ನಿಂತಿದ್ದ ಸಂಧ್ಯಾ ಎನ್ನುವವರಿಗೆ ಬೆನ್ಜ್ ಕಾರು ಡಿಕ್ಕಿಯಾಗಿ ಸಾವನ್ನಪ್ಪಿದ್ದಾರೆ. ಡಿಕ್ಕಿಯಾದ ತಕ್ಷಣ ಸಂಧ್ಯಾರನ್ನು ಬಿಜಿಎಸ್ ಆಸ್ಪತ್ರೆಗೆ ಕರೆದೊಯ್ಯುಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗಿದೆ ಸಾವನ್ನಪ್ಪಿದ್ದಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಬೆಳಗಾವಿ| ತಹಶೀಲ್ದಾರ್‌ ಕಚೇರಿಯಲ್ಲೇ ಸಿಬ್ಬಂದಿ ಆತ್ಮಹತ್ಯೆ

    ಆಕ್ಸಿಡೆಂಟ್ ಮಾಡಿ ಎಸ್ಕೇಪ್ ಆಗಲು ಚಾಲಕ ಧನುಷ್ ಯತ್ನಿಸಿದ್ದ. ಸಾರ್ವಜನಿಕರು ಚಾಲಕನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದು, ಆತನನ್ನು ಕೆಂಗೇರಿ (Kengeri) ಸಂಚಾರಿ ಪೊಲೀಸರು ಬಂಧಿಸಿದ್ದಾರೆ. ಧನುಷ್ ತಂದೆ ಎಲ್‌ಬಿ ಟ್ರಾವೆಲ್ಸ್ ನಡೆಸುತ್ತಿದ್ದು, ಕಾರು ಎಲ್‌ಬಿ ಟ್ರಾವೆಲ್ಸ್ ಹೆಸರಿನಲ್ಲಿ ನಮೂದಾಗಿದೆ. ಕಾರು ಬೆಂಗಳೂರಿನಿಂದ ಮೈಸೂರು ಕಡೆಗೆ ಹೋಗುತ್ತಿತ್ತು. ಮಹಿಳೆಗೆ ಕಾರು ಡಿಕ್ಕಿಯಾದ ನಂತರ ದ್ವಿಚಕ್ರ ವಾಹನ ಸವಾರನಿಗೂ ಡಿಕ್ಕಿ ಹೊಡೆದಿದ್ದು, ಚಾಲಕ ಸೈಯ್ಯದ್ ಸ್ಥಳೀಯ ಆಸ್ಪತ್ರೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಇದನ್ನೂ ಓದಿ: ದೇವಸ್ಥಾನದಲ್ಲಿ ಕ್ಷಮೆಯಾಚಿಸಿ ಇಲ್ಲವೇ 5 ಕೋಟಿ ಕೊಡಿ: ಸಲ್ಮಾನ್‌ ಖಾನ್‌ಗೆ ಮತ್ತೊಂದು ಬೆದರಿಕೆ

    ನಾಗರಬಾವಿ ನಿವಾಸಿಯಾಗಿರುವ ಧನುಷ್, ಖಾಸಗಿ ಕಾಲೇಜ್‌ನಲ್ಲಿ ಬಿಇ 5 ನೇ ತ್ರೈಮಾಸಿಕ ವಿದ್ಯಾರ್ಥಿಯಾಗಿದ್ದಾನೆ. ಧನುಷ್ ಸೇರಿ ಮೂರು ಜನ ಸ್ನೇಹಿತರು ಪಾರ್ಟಿ ಮುಗಿಸಿ ಮನೆಗೆ ತೆರಳುವ ವೇಳೆ ಈ ಘಟನೆ ಸಂಭವಿಸಿದೆ. ಅಪಘಾತ ವೇಳೆ ಪೊಲೀಸರು ಡಿಡಿ ಪರಿಶೀಲನೆ ಮಾಡಿದ್ದು, ಅದರಲ್ಲಿ ಮದ್ಯ ಸೇವನೆ ಮಾಡಿರುವುದು ಪತ್ತೆಯಾಗಿದೆ. ಆ ಹಿನ್ನೆಲೆ ಕಾರು ಚಾಲಕನನ್ನು ಪೊಲೀಸರು ವಿಕ್ಟೋರಿಯಾ ಆಸ್ಪತ್ರೆ ಕರೆದೊಯ್ದು ರಕ್ತ ಮಾದರಿ ಸಂಗ್ರಹಿಸಿದ್ದಾರೆ. ಇದನ್ನೂ ಓದಿ: ಮಂಡ್ಯದಲ್ಲಿ ಹಿಂದೂಗಳ ಸ್ಮಶಾನ ಈಗ ವಕ್ಫ್ ಆಸ್ತಿ

    ಕೆಲಸ ಮುಗಿಸಿ ಮನೆಗೆ ಹೊರಟಿದ್ದ ವೇಳೆ ಟೆಕ್ಕಿ ಸಂಧ್ಯಾಗೆ ಅಪಘಾತದಿಂದ ಸಾವು ಸಂಭವಿಸಿದೆ. ಶನಿವಾರ ರಾತ್ರಿ 9 ಗಂಟೆ ಆದ್ದರಿಂದ ಕುಡಿದು ಅತಿ ವೇಗವಾಗಿ ವಾಹನ ಚಾಲನೆ ಮಾಡಿದ್ದೇ ದುರಂತಕ್ಕೆ ಕಾರಣವಾಗಿದೆ. ಸದ್ಯ ಪ್ರಕರಣ ದಾಖಲು ಮಾಡಿಕೊಂಡಿರುವ ಕೆಂಗೇರಿ ಸಂಚಾರಿ ಪೊಲೀಸರಿಂದ ತನಿಖೆ ಮುಂದುವರೆದಿದೆ. ಇದನ್ನೂ ಓದಿ: Dehli | ಚಾಲಕನ ನಿಯಂತ್ರಣ ತಪ್ಪಿ ಬಸ್ ಡಿಕ್ಕಿ- ಕಾನ್ಸ್ಟೇಬಲ್ ಸೇರಿ ಇಬ್ಬರು ಸಾವು

  • ಅಭಿಮಾನ್‌ ಸ್ಟುಡಿಯೋದಲ್ಲಿರೋ ವಿಷ್ಣು ಸ್ಮಾರಕಕ್ಕೆ ಪೂಜೆ ಸಲ್ಲಿಸದಂತೆ ತಡೆ – ಪ್ರತಿಭಟನೆಗೆ ವಿಷ್ಣು ಫ್ಯಾನ್ಸ್‌ ನಿರ್ಧಾರ

    ಅಭಿಮಾನ್‌ ಸ್ಟುಡಿಯೋದಲ್ಲಿರೋ ವಿಷ್ಣು ಸ್ಮಾರಕಕ್ಕೆ ಪೂಜೆ ಸಲ್ಲಿಸದಂತೆ ತಡೆ – ಪ್ರತಿಭಟನೆಗೆ ವಿಷ್ಣು ಫ್ಯಾನ್ಸ್‌ ನಿರ್ಧಾರ

    – ಹುಟ್ಟು ಹಬ್ಬದ ದಿನವೇ ಸ್ಟೂಡಿಯೋ ಮಾಲೀಕರು-ವಿಷ್ಣು ಫ್ಯಾನ್ಸ್‌ನಡುವೆ ಶೀತಲ ಸಮರ

    ಬೆಂಗಳೂರು: ಅಭಿಮಾನ್‌ ಸ್ಟುಡಿಯೋದಲ್ಲಿರೋ ವಿಷ್ಣು ಸ್ಮಾರಕಕ್ಕೆ (Abhiman Studio Vishnuvardhan Memorial) ಪೂಜೆ ಸಲ್ಲಿಸದಂತೆ ನಟ ಬಾಲಣ್ಣ ಅವರ ಮಕ್ಕಳಿಂದ ತಡೆಯೊಡ್ಡಿದ ಹಿನ್ನೆಲೆ ಅಭಿಮಾನ್‌ ಸ್ಟುಡಿಯೋ ಮುಂದೆ ದಿ. ಡಾ.ವಿಷ್ಣುವರ್ಧನ್‌ ಅಭಿಮಾನಿಗಳು ಪ್ರತಿಭಟನೆಗೆ ಮುಂದಾಗಿದ್ದಾರೆ.

    ದಿ. ಡಾ.ವಿಷ್ಣುವರ್ಧನ್ ಅವರ 74ನೇ ಜನ್ಮದಿನದ ಅಂಗವಾಗಿ ಸಾವಿರಾರು ಅಭಿಮಾನಿಗಳು (Vishnu Fans) ಬೆಂಗಳೂರಿನ ಅಭಿಮಾನ್‌ ಸ್ಟುಡಿಯೋ ಸ್ಮಾರಕಕ್ಕೆ ಪೂಜೆ ಸಲ್ಲಿಸಲು ಆಗಮಿಸಿದ್ದಾರೆ. ದೂರದೂರುಗಳಿಂದ ಬೆಳ್ಳಂಬೆಳಗ್ಗೆಯೇ ಬಂದು ಸಾಲುಗಟ್ಟಿ ನಿಂತಿದ್ದಾರೆ. ಆದ್ರೆ ವಿಷ್ಣು ಸ್ಮಾರಕಕ್ಕೆ ಪೂಜೆ ಸಲ್ಲಿಸದಂತೆ ನಟ ಬಾಲಣ್ಣ ಅವರ ಮಕ್ಕಳು ತಡೆಯೊಡ್ಡಿದ್ದಾರೆ. ಸ್ಟುಡಿಯೋ ಗೇಟ್‌ ಬೀಗ ಹಾಕಿ ಸ್ಮಾರಕ ಮೈಸೂರಿನಲ್ಲಿ ಆಗಿರುವುದರಿಂದ ಅಲ್ಲಿಗೇ ಹೋಗಿ ಪೂಜೆ ಮಾಡುವಂತೆ ಖಾರವಾಗಿ ಹೇಳಿದ್ದಾರೆ. ಇದರಿಂದ ಆಕ್ರೋಶಗೊಂಡ ಅಭಿಮಾನಿಗಳು ಸ್ಮಾರಕದ ಗೇಟ್‌ ಬಳಿ ಪ್ರತಿಭಟನೆಗೆ ನಿರ್ಧರಿಸಿದ್ದಾರೆ. ಇದನ್ನೂ ಓದಿ: ಹಾಳಾಗುತ್ತಿದೆ ಯುವಜನತೆಯ ಆರೋಗ್ಯ – 60 ಅಲ್ಲ 30 ರಲ್ಲೇ ಬೈಪಾಸ್‌ ಸರ್ಜರಿ 

    ವಿಷ್ಣುವರ್ಧನ್ ಹೆಸರಿನಲ್ಲಿ ಅಭಿಮಾನಿ ಸ್ಟುಡಿಯೋದಲ್ಲಿ ಯಾವುದೇ ಕಾರ್ಯಕ್ರಮ, ಸಂಭ್ರಮಾಚಾರಣೆ ಮಾಡದಂತೆ ನಟ ಬಾಲಣ್ಣ ಅವರ ಮಕ್ಕಳು ಕೋರ್ಟಿನಿಂದ ತಡೆಯಾಜ್ಞೆ ತಂದಿದ್ದಾರೆ. ಆದ್ರೆ ಅಭಿಮಾನಿಗಳು ಪೂಜೆ ಸಲ್ಲಿಸೋಕೆ ಜಿಲ್ಲಾಧಿಕಾರಿ ಅನುಮತಿ ನೀಡಿದ್ದಾರೆ. ಇದರ ಹೊರತಾಗಿಯೂ ಕೋರ್ಟ್ ತಡೆಯಾಜ್ಞೆ ನೆಪ ಹೇಳಿ ಕೆಂಗೇರಿ ಪೋಲಿಸರು ಅನುಮತಿಗೆ ನಿರಾಕರಿಸಿದ್ದಾರೆ. ಇದನ್ನೂ ಓದಿ: PUBLiC TV Impact | ಮೆಟ್ರೋ ನಿಲ್ದಾಣದಲ್ಲಿ ಆರೈಕೆ ಕೇಂದ್ರ ಸ್ಥಾಪಿಸುವಂತೆ BMRCLಗೆ ಮಹಿಳಾ ಆಯೋಗ ಪತ್ರ

    ಇದರಿಂದ ಅಸಮಾಧಾನಗೊಂಡ ನೂರಾರು ಸಂಖ್ಯೆಯ ವಿಷ್ಣುವರ್ಧನ್‌ ಅಭಿಮಾನಿಗಳು ಅಭಿಮಾನ್‌ ಸ್ಟುಡಿಯೋ ಗೇಟ್‌ ಬಳಿಯೇ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ. ಇದರಿಂದ ಹುಟ್ಟು ಹಬ್ಬದ ದಿನವೇ ಅಭಿಮಾನ್ ಸ್ಟೂಡಿಯೋ ಮಾಲೀಕರು ಮತ್ತು ವಿಷ್ಣು ಫ್ಯಾನ್ಸ್‌ನಡುವೆ ಶೀತಲ ಸಮರ ಮುಂದುವರಿದಿದೆ. ಇದನ್ನೂ ಓದಿ: ಜಮ್ಮು-ಕಾಶ್ಮೀರ: ದಶಕದ ಮೊದಲ ವಿಧಾನಸಭಾ ಚುನಾವಣೆಗೆ ಇಂದು ಮತದಾನ

  • Bengaluru | ಪ್ರೀತಿಸಿ ಮದ್ವೆಯಾದ ಪತ್ನಿಗೆ ಚಿತ್ರಹಿಂಸೆ ಕೊಟ್ಟು ಕೊಂದ ಪಾಪಿ ಪತಿ!

    Bengaluru | ಪ್ರೀತಿಸಿ ಮದ್ವೆಯಾದ ಪತ್ನಿಗೆ ಚಿತ್ರಹಿಂಸೆ ಕೊಟ್ಟು ಕೊಂದ ಪಾಪಿ ಪತಿ!

    ಬೆಂಗಳೂರು: ಮೂರು ವರ್ಷಗಳ ಹಿಂದೆಯಷ್ಟೇ ಪ್ರೀತಿಸಿ (Love) ಮದುವೆಯಾಗಿದ್ದ ಪತ್ನಿಯನ್ನು ಪತಿಯೇ ಚಿತ್ರಹಿಂಸೆ ಕೊಟ್ಟು ಕೊಂದಿರುವ ಘಟನೆ ಕೆಂಗೇರಿಯ (Kengeri) ವಿಶ್ವೇಶ್ವರಯ್ಯ ಬಡಾವಣೆಯಲ್ಲಿ ನಡೆದಿದೆ.

    ನವ್ಯಾ (25) ಕೊಲೆಯಾದ ಮಹಿಳೆ, ಕಿರಣ್ ಕೊಲೆ ಮಾಡಿದ ಪಾಪಿ ಪತಿ. ಪತ್ನಿಯ ಶೀಲ ಶಂಕಿಸಿ ಕೊಲೆ ಮಾಡಿದ್ದಾನೆ. ಬುಧವಾರ (ಆ.28) ಮಧ್ಯಾಹ್ನ 1:30 ರಿಂದ 3 ಗಂಟೆ ಸಮಯದಲ್ಲಿ ಕೊಲೆ ನಡೆದಿರುವುದಾಗಿ ಪೊಲೀಸರು (Kengeri Police) ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಹೆಂಡತಿ ಕೊಂದು ದೃಶ್ಯ ಸಿನಿಮಾ ಮಾದರಿಯಲ್ಲಿ ಹೂತಿಟ್ಟ; ಸ್ನೇಹಿತನ ಹೆಂಡತಿ ಕೊಲೆಯಲ್ಲಿ ಭಾಗಿಯಾಗಿ ಹಳೇ ಕೇಸಲ್ಲೂ ತಗ್ಲಾಕೊಂಡ ಖತರ್ನಾಕ್

    ಭದ್ರಾವತಿ ಮೂಲದ ನವ್ಯಾ, ಚಿಕ್ಕಬಳ್ಳಾಪುರ ಮೂಲದ ಕಿರಣ್‌ ಕಳೆದ ಮೂರು ವರ್ಷಗಳ ಹಿಂದೆಯಷ್ಟೇ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. ನವ್ಯಾ ಸಿನಿಮಾ ರಂಗದಲ್ಲಿ ಕೊರಿಯೋಗ್ರಾಫರ್‌ ಆಗಿ ಕೆಲಸ ಮಾಡುತ್ತಿದ್ದರು. ಪತಿ ಕಿರಣ್‌ ಕ್ಯಾಬ್ ಚಾಲಕನಾಗಿದ್ದ. ಇದನ್ನೂ ಓದಿ: ದೀಪಿಕಾ ಪಡುಕೋಣೆ ಜೊತೆ ಕಾರು ಓಡಿಸೋ ಪೈಪೋಟಿಗಿಳಿದ ಸಾಹಸಗಳ ಬಗ್ಗೆ ವಿವರಿಸಿದ ಕಂಗನಾ

    ಇತ್ತೀಚೆಗೆ ಪತಿ ಕಿರಣ್‌, ನವ್ಯಾ ಜೊತೆಗೆ ಆಗಾಗ್ಗೆ ಜಗಳ ತೆಗೆಯುತ್ತಿದ್ದ, ಶೀಲ ಶಂಕಿಸಿ ಗಲಾಟೆ ಮಾಡ್ತಿದ್ದ. ಬುಧವಾರ ಮಧ್ಯಾಹ್ನದ ವೇಳೆ ಇದೇ ವಿಚಾರಕ್ಕೆ ಗಲಾಟೆ ಮಾಡಿರುವ ಕಿರಣ್‌, ನಂತರ ನವ್ಯಾಳನ್ನ ಕುರ್ಚಿಗೆ ಕಟ್ಟಿಹಾಕಿ ಚಿತ್ರಹಿಂಸೆ ಕೊಟ್ಟು ಕೊಲೆ ಮಾಡಿದ್ದಾನೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: 12 ನೂತನ ಕೈಗಾರಿಕಾ ಸ್ಮಾರ್ಟ್ ಸಿಟಿ, 10 ಲಕ್ಷ ಹೊಸ ಉದ್ಯೋಗ ಸೃಷ್ಟಿ: ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ನಿರ್ಣಯ

    ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಕೆಂಗೇರಿ ಪೊಲೀಸರು ಕೊಲೆ ಮಾಡಿ ಎಸ್ಕೇಪಾಗಿದ್ದ ಕಿರಣ್‌ನನ್ನ ಬಂಧಿಸಿ ಠಾಣೆಗೆ ಕರೆತಂದಿದ್ದಾರೆ. ಬಳಿಕ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

  • ಶ್ರಾವಣ ಆದ್ಮೇಲೆ ಬಾಳು ಕೊಡ್ತೀನಿ ಅಂತ ಹೇಳಿ ಆಂಟಿಗೆ ವಂಚನೆ – ಪ್ರಜ್ವಲ್‌ ವಿರುದ್ಧ ದೂರು

    ಶ್ರಾವಣ ಆದ್ಮೇಲೆ ಬಾಳು ಕೊಡ್ತೀನಿ ಅಂತ ಹೇಳಿ ಆಂಟಿಗೆ ವಂಚನೆ – ಪ್ರಜ್ವಲ್‌ ವಿರುದ್ಧ ದೂರು

    – 2 ಮಕ್ಕಳ ತಾಯಿಯೊಂದಿಗೆ ಯುವಕನ ಪ್ರೇಮ್‌ ಕಹಾನಿ

    ಬೆಂಗಳೂರು: ಪ್ರೀತಿಯೊಂದು (Love) ಸುಂದರ ಅನುಭವ. ಅದನ್ನು ಅನುಭವಿಸಬೇಕೇ ಹೊರತು ಹೇಳಿಕೊಳ್ಳಲಾಗುವುದಿಲ್ಲ. ಅದಕ್ಕಾಗಿ ಕೆಲವರು ಪ್ರೀತಿಯೆಂಬುದೇ ಮಾಯೆ ಎನ್ನುತ್ತಾರೆ. ಕೆಲವರಿಗೆ ಹೇಳಿಕೊಳ್ಳಲು ಸಂಕೋಚ, ಹೇಳಿಕೊಂಡರೇ ಇದ್ದ ಸಂಬಂಧವೂ ಬಿಟ್ಟುಹೋಗುತ್ತದೆ ಅನ್ನೋ ಆತಂಕ. ಆದರೀಗ ಅದೆಲ್ಲದಕ್ಕೂ ಆನ್‌ಲೈನ್ ತಂತ್ರಜ್ಞಾನ ದಾರಿಮಾಡಿಕೊಟ್ಟಿದೆ. ಆದ್ರೆ ಇದರಿಂದ ಅನುಕೂಲ ಆಗುವುದಕ್ಕಿಂತ ಅನಾನುಕೂಲಕ್ಕೆ ದಾರಿ ಮಾಡಿಕೊಳ್ಳುತ್ತಿರುವುದೇ ಹೆಚ್ಚು ಅನ್ನೋದಕ್ಕೆ ಬೆಂಗಳೂರಿನಲ್ಲಿ (Bengaluru) ನಡೆದಿರುವ ಆಂಟಿ ಲವ್‌ ಪ್ರಕರಣವೊಂದು ಸಾಕ್ಷಿಯಾಗಿದೆ.

    ಈ ಆಷಾಢ ಕಳೆದು ಶ್ರಾವಣ ಬಂದ್ರೆ ಮದುವೆ ಆಗೇ ಆಗ್ತೀನಿ, ಶ್ರಾವಣ ಬರಲಿ ನಿನಗೆ ಬಾಳು ಕೊಡ್ತಿನಿ ಎಂದು ರೀಲ್ಸ್ ರಾಣಿಯನ್ನ ನಂಬಿಸಿ ವಂಚನೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಗಂಡನಿಂದ ದೂರವಿದ್ದ 2 ಮಕ್ಕಳ ತಾಯಿಯನ್ನ ನಂಬಿಸಿ ಮೋಸ ಮಾಡಿರುವ ಘಟನೆ ನಡೆದಿದ್ದು, ಆರೋಪಿ ಪ್ರಜ್ವಲ್‌ ಎಂಬಾತನ ವಿರುದ್ಧ ಕೆಂಗೇರಿ ಪೊಲೀಸ್‌ ಠಾಣೆಯಲ್ಲಿ (Kengeri Police Station) ದೂರು ದಾಖಲಾಗಿದೆ. ಇದನ್ನೂ ಓದಿ: ಒಂದು ಲಕ್ಷಕ್ಕೂ ಹೆಚ್ಚು ಕಾರ್ಯಕರ್ತರು ಬೃಹತ್ ಪ್ರತಿಭಟನಾ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ: ವಿಜಯೇಂದ್ರ

    ಆಂಟಿಯೊಂದಿಗೆ ಪ್ರೇಮ್‌ ಕಹಾನಿಯೇ ಥ್ರಿಲ್ಲಿಂಗ್‌!
    ತನ್ನ ಗಂಡ ಹಲ್ಲೆ ಮಾಡುತ್ತಿದ್ದ ಅಂತ 13 ವರ್ಷಗಳ ಹಿಂದೆಯೇ ಗಂಡನನ್ನು ಬಿಟ್ಟಿದ್ದ ಮಹಿಳೆ ತವರು ಮನೆಯಿಂದಲೂ ದೂರವಾಗಿ ಪ್ರತ್ಯೇಕವಾಗಿ ವಾಸಿಸುತ್ತಿದ್ದಳು. 8 ತಿಂಗಳ ಹಿಂದೆಯಷ್ಟೇ ಬೆಂಗಳೂರಿಗೆ ಬಂದು, ಜೀವನೋಪಾಯಕ್ಕಾಗಿ ಪೆಟ್ರೋಲ್‌ ಬಂಕ್‌ನಲ್ಲಿ ಕೆಲಸ ಮಾಡಿಕೊಂಡಿದ್ದಳು. ಹೇಗೋ ಜೀವನ ನಡೆಯುತ್ತಿತ್ತು. ಇದಾದ ಸ್ವಲ್ಪ ದಿನಗಳಲ್ಲೇ ಬೇಸರ ಕಳೆಯಲು ರೀಲ್ಸ್‌ ಮಾಡುತ್ತಿದ್ದಳು. ಈ ವೇಳೆ ವಂಚಕ ಪ್ರಜ್ವಲ್‌ನ ಪರಿಚಯವಾಗಿದೆ. ಇದನ್ನೂ ಓದಿ: ವಿನೇಶ್ ಫೋಗಟ್‌ಗೆ ಮಧ್ಯಸ್ಥ ಮಂಡಳಿ ರಿಲೀಫ್ ನೀಡುತ್ತಾ? – ಒಲಿಂಪಿಕ್ಸ್ ಮುಗಿಯೋ ಮುನ್ನ ಸಿಎಎಸ್‌ನಿಂದ ತೀರ್ಪು

    ಮಹಿಳೆ ಮಾಡ್ತಿದ್ದ ಪ್ರತಿ ರೀಲ್ಸ್‌ಗೂ ಪ್ರಜ್ವಲ್‌ ಹಾರ್ಟ್‌ ಎಮೋಜಿಯೊಂದಿಗೆ ಕಾಮೆಂಟ್‌ ಮಾಡ್ತಿದ್ದ. ಇದೇ ವೇಳೆ ಇಬ್ಬರಿಗೂ ಪರಿಚಯವಾಗಿ ಕೊನೆಗೆ ಇಬ್ಬರ ನಡುವಿನ ಸ್ನೇಹ ಪ್ರೀತಿಗೆ ತಿರುಗಿತ್ತು. ಆಕೆಗೆ ಮದ್ವೆ ಆಗಿರುವುದು ಗೊತ್ತಿದ್ದರೂ ತಾನು ಬಾಳು ಕೊಡ್ತೀನಿ ಎಂದಿದ್ದ ಯುವಕ, ತನ್ನ ತಾಯಿ ಬಳಿಯೂ ಮದುವೆ ವಿಚಾರ ಪ್ರಸ್ತಾಪ ಮಾಡಿದ್ದನಂತೆ. ಮಹಿಳೆಗೆ ನಾನು ನೋಡಲು ಚೆನ್ನಾಗಿಲ್ಲ ನಿಂಗೆ ಮದ್ವೆಯಾಗಿದ್ದರೂ ಪರ್ವಾಗಿಲ್ಲ ನಾನು ಬಾಳು ಕೊಡ್ತಿನಿ ಎಂದು ಸಹ ಹೇಳಿದ್ದಾನೆ. ಶ್ರಾವಣ ಮಾಸದ ಬಳಿಕ ಮದ್ವೆಯಾಗ್ತೀನಿ ಅಂತ ಹೇಳಿದ್ದಾನೆ. ಅಲ್ಲದೇ ಆಕೆಯೊಂದಿಗೆ 3 ತಿಂಗಳು ಗುಟ್ಟಾಗಿ ಸಂಸಾರ ಕೂಡ ಮಾದಿದ್ದಾನೆ. ಮಕ್ಕಳನ್ನೂ ಚೆನ್ನಾಗಿ ನೋಡಿಕೊಂಡಿದ್ದಾನೆ. ಎಲ್ಲವೂ ಚೆನ್ನಾಗಿಯೇ ಇತ್ತು ಎನ್ನುವಾಗ ಪ್ರಜ್ವಲ್‌ ಆಕೆಯಿಂದ ದೂರವಾಗಲು ಬಯಸಿದ್ದಾನೆ.

    ನೀನು ನನಗೆ ಬೇಡ, ಹೋಗಿ ನಿನ್ನ ಹಳೇ ಗಂಡನ್ನ ಕರ್ಕೊಂಡು ಬಾ, ನಿನ್ನ ಮೇಲೆ ಅನುಮಾನ ಇದೆ ಅಂತ ಹೇಳಿದ್ದಾನೆ. ಸದ್ಯ ಪ್ರಜ್ವಲ್‌ ಬೇಕೇ ಬೇಕು ಅಂತ ಪಟ್ಟು ಹಿಡಿರುವ ಮಹಿಳೆ ಆತ ಮದುವೆಯಾಗಲಿಲ್ಲ ಅಂದ್ರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಅಳಲು ತೋಡಿಕೊಂಡಿದ್ದಾರೆ. ಈ ಸಂಬಂಧ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಸಂಬಂಧ ತನಿಖೆ ಮುಂದುವರಿದಿದೆ. ಇದನ್ನೂ ಓದಿ: ದತ್ತಪೀಠಕ್ಕೆ ಡ್ರೆಸ್ ಕೋಡ್ ತನ್ನಿ- ಜಿಲ್ಲಾಡಳಿತಕ್ಕೆ ಶಾಖಾದ್ರಿ ಕುಟುಂಬ ಮನವಿ

  • ಅಕ್ಕ ಊರಿಗೆ ತೆರಳಿದ್ದಾಗ ನಕಲಿ ಕೀ ಬಳಸಿ ಹಣ, ಚಿನ್ನಾಭರಣ ಕದ್ದ ತಂಗಿ!

    ಅಕ್ಕ ಊರಿಗೆ ತೆರಳಿದ್ದಾಗ ನಕಲಿ ಕೀ ಬಳಸಿ ಹಣ, ಚಿನ್ನಾಭರಣ ಕದ್ದ ತಂಗಿ!

    ಬೆಂಗಳೂರು: ತನ್ನ ಅಕ್ಕನ ಮನೆಯಲ್ಲೇ ಹಣ (Money) ಹಾಗೂ ಚಿನ್ನಾಭರಣ ಕದ್ದಿದ್ದ ಆರೋಪಿ ತಂಗಿಯನ್ನು ಕೆಂಗೇರಿ (Kengeri) ಪೊಲೀಸರು ಬಂಧಿಸಿದ್ದಾರೆ.

    ಬಂಧಿತ ಆರೋಪಿಯನ್ನು ಉಮಾ ಎಂದು ಗುರುತಿಸಲಾಗಿದೆ. ಆರೋಪಿ ತನ್ನ ಅಕ್ಕ ಊರಿಗೆ ತೆರಳಿದ್ದ ವೇಳೆ ನಕಲಿ ಕೀ ಬಳಸಿ 52 ಲಕ್ಷ ರೂ. ನಗದು ಹಾಗೂ 180 ಗ್ರಾಂ ಚಿನ್ನಾಭರಣ ಕಳ್ಳತನ ಮಾಡಿದ್ದಳು. ಬಂಧಿತ ಆರೋಪಿಯಿಂದ 65 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ಲಕ್ಷಾಂತರ ರೂ. ಹಣವನ್ನು ವಶಕ್ಕೆ ಪಡೆಯಲಾಗಿದೆ. ಇದನ್ನೂ ಓದಿ: ಮಳೆಗೆ ಕಾರಿನ ಮೇಲೆ ಮರ ಬಿದ್ದು ಯುವಕ ಸಾವು

    ಆರೋಪಿಯ ಅಕ್ಕ ಏ.24 ರಂದು ಊರಿಗೆ ತೆರಳಿದ್ದರು. ಊರಿಗೆ ತೆರಳುವ ಮುನ್ನ ಸಂಬಂಧಿಯೊಬ್ಬರ ಮನೆಗೆ ಮನೆಯ ಕೀ ಕೊಟ್ಟು ತೆರಳಿದ್ದರು. ರಾತ್ರಿ ವೇಳೆ ಅವರು ಕಾವಲಿಗೆ ಎಂದು ಮನೆಗೆ ತೆರಳಿದ್ದಾಗ ಕಳ್ಳತನ ಆಗಿರುವುದು ಬೆಳಕಿಗೆ ಬಂದಿತ್ತು.

    ಮನೆಯನ್ನು ಪರಿಶೀಲಿಸಿದಾಗ 182 ಗ್ರಾಂ ಚಿನ್ನಾಭರಣ ಹಾಗೂ 52 ಲಕ್ಷ ರೂ. ನಗದು ಕಳ್ಳತನ ಆಗಿರುವುದು ತಿಳಿದು ಬಂದಿತ್ತು. ಈ ಸಂಬಂಧ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿ 6 ದಿನಗಳ ಕಾಲ ಕಸ್ಟಡಿಗೆ ಪಡೆದಿದ್ದಾರೆ. ಇದನ್ನೂ ಓದಿ: Jharkhand: 35 ಕೋಟಿಗೂ ಅಧಿಕ ಹಣ ಜಪ್ತಿ – ಇಡಿಯಿಂದ ಕಾಂಗ್ರೆಸ್‌ ಸಚಿವರ ಆಪ್ತ ಕಾರ್ಯದರ್ಶಿ, ಮನೆಕೆಲಸದವನ ಬಂಧನ!

  • ಬೆಂಗ್ಳೂರಿನ ನಾಡಕಚೇರಿಗೆ ಬೆಂಕಿ – ನೂರಾರು ದಾಖಲೆಗಳು ಭಸ್ಮ

    ಬೆಂಗ್ಳೂರಿನ ನಾಡಕಚೇರಿಗೆ ಬೆಂಕಿ – ನೂರಾರು ದಾಖಲೆಗಳು ಭಸ್ಮ

    ಬೆಂಗಳೂರು: ಇಲ್ಲಿನ ಕೆಂಗೇರಿ ಉಪನಗರದ ನಾಡಕಚೇರಿಗೆ (Nadakacheri) ಬೆಂಕಿ ಬಿದ್ದಿದ್ದು, ನೂರಾರು ದಾಖಲೆಗಳು ಸುಟ್ಟು ಕರಕಲಾಗಿವೆ. ತಕ್ಷಣವೇ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ಸಿಬ್ಬಂದಿ ಸಂಪೂರ್ಣವಾಗಿ ಬೆಂಕಿ ನಂದಿಸಿದ್ದಾರೆ.

    ಏನಿದು ಬೆಂಕಿ ದುರಂತ?
    ಕೆಂಗೇರಿ ಉಪನಗರದ ನಾಡಕಚೇರಿ ಆವರಣದ ಪ್ರವೇಶ ದ್ವಾರದ ಬಳಿಯೇ ಬೆಂಕಿ ಕಾಣಿಸಿಕೊಂಡಿದೆ. ಬಳಿಕ ಇಡೀ ಕಚೇರಿಗೆ ಆವರಿಸಿದೆ. ಬೆಂಕಿ ತೀವ್ರವಾಗಿ ವ್ಯಾಪಿಸಿದ ಹಿನ್ನೆಲೆಯಲ್ಲಿ ನೂರಾರು ದಾಖಲೆಗಳು ಸುಟ್ಟು ಕರಕಲಾಗಿದೆ. ಇದನ್ನೂ ಓದಿ: ಅಧಿಕಾರಕ್ಕಾಗಿ ದೇವರ ಮೊರೆ ಹೋದ ದಳಪತಿ- ಆದಿಚುಂಚನಗಿರಿ ಕ್ಷೇತ್ರಕ್ಕೆ ಹೆಚ್‍ಡಿಕೆ ಭೇಟಿ

    ಘಟನೆ ಬಳಿಕ ನಾಡಕಚೇರಿ ಸಿಬ್ಬಂದಿ ದೂರು ನೀಡಿದ್ದು, ಕೆಂಗೇರಿ ಪೊಲೀಸ್ ಠಾಣೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಬಳಿಕ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. ಇದನ್ನೂ ಓದಿ: ಓಲ್ಡ್ ಮೈಸೂರೇ ಮೋದಿ ಟಾರ್ಗೆಟ್- ಒಂದೇ ದಿನ 4 ಜಿಲ್ಲೆಗಳಲ್ಲಿ ನಮೋ ಮಿಂಚಿನ ಸಂಚಾರ

    ಕಂಪ್ಯೂಟರ್ ರೂಂ ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಪ್ರಮುಖ ದಾಖಲೆಗಳನ್ನ ನಾಶಪಡಿಸುವ ಉದ್ದೇಶದಿಂದ ಕಿಡಿಗೇಡಿಗಳು ಬೆಂಕಿ ಹಾಕಿರುವ ಶಂಕೆ ವ್ಯಕ್ತವಾಗಿದೆ.