Tag: kengal hanumanthaiah

  • ಮೈಸೂರು ರಾಜ್ಯ ʻಕರ್ನಾಟಕʼವಾಗಿದ್ದು ಹೇಗೆ? – ನಾಮಕರಣದ ಕಥೆ ನಿಮಗೆ ಗೊತ್ತೇ?

    ಮೈಸೂರು ರಾಜ್ಯ ʻಕರ್ನಾಟಕʼವಾಗಿದ್ದು ಹೇಗೆ? – ನಾಮಕರಣದ ಕಥೆ ನಿಮಗೆ ಗೊತ್ತೇ?

    ಪ್ರತಿ ವರ್ಷ ನವೆಂಬರ್ 1 ರಂದು ಕನ್ನಡ ರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸುವುದು ಮತ್ತು ಯುವ ಪೀಳಿಗೆಗೆ ಕನ್ನಡ ನಾಡಿನ ಇತಿಹಾಸ, ಸಂಸ್ಕೃತ, ಕಲೆ, ಭಾಷೆ ಬಗ್ಗೆ ಅರಿವು ಮೂಡಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಅದರಂತೆ ಕರ್ನಾಟಕದ ಇತಿಹಾಸ ತಿಳಿಯುವುದೂ ಅಷ್ಟೇ ಮುಖ್ಯವಾಗಿದೆ.

    ರಾಜ್ಯ ಉದಯಿಸಿ 17 ವರ್ಷಗಳವರೆಗೂ ʻಮೈಸೂರುʼ ಎಂಬ ಹೆಸರೇ ಇತ್ತು. ಬಳಿಕ ಮೈಸೂರು ರಾಜ್ಯಕ್ಕೆ 1973ರ ನವೆಂಬರ್ 1ರಂದು ʻಕರ್ನಾಟಕ’ ಎಂದು ನಾಮಕರಣ ಮಾಡಲಾಯಿತು. ʻಮೈಸೂರು’ ‘ಬದಲಾಗಿ ʻಕರ್ನಾಟಕʼ ಎಂದು ಮರುನಾಮಕರಣ ಮಾಡಿದ್ದೇಕೆ? ರಾಜ್ಯದ ಮೂಲ ಹೆಸರು ಬದಲಿಸುವ ಪ್ರಯತ್ನಗಳು ಏಕೆ ನಡೆದವು? ಇದೊಂದು ಚೆಂದದ ಕುತೂಹಲ. ಇದರ ಸಂಕ್ಷಿಪ್ತ ಹಿನ್ನೆಲೆ ತಿಳಿಯುವ ಕುತೂಹಲ ನಿಮಗಿದ್ದರೆ ಮುಂದೆ ಓದಿ….

    ಚಳವಳಿಗಾರರೂ ಆಗಿದ್ದ ಅಂದಾನಪ್ಪ ದೊಡ್ಡಮೇಟಿ ಅವರು ವಿಧಾನಸಭಾ ಸದಸ್ಯರೆಲ್ಲರೂ ʻಕರ್ನಾಟಕ’ ಎಂಬ ಹೆಸರು ಕುರಿತು ಚರ್ಚಿಸಲೆಂದೇ ಕೃತಿಯೊಂದನ್ನು ರಚಿಸಿ ಹಂಚಿದರು. 1957ರ ಸೆ.30ರಂದು ಈ ಕುರಿತು ಸದನದಲ್ಲಿ ಚರ್ಚೆಯಾಯಿತು. ಪ್ರತಿಪಕ್ಷದ ಉಪನಾಯಕರಾಗಿದ್ದ ಎಂ. ರಾಮಪ್ಪನವರು ʻಕರ್ನಾಟಕ’ ನಾಮಕರಣಗೊಳ್ಳಬೇಕೆಂದು ಎರಡು ಬಾರಿ ಗೊತ್ತುವಳಿ ಮಂಡಿಸಿದ್ದರೂ ಅನಿರ್ದಿಷ್ಟಕಾಲ ಮುಂದೂಡಲ್ಪಟ್ಟಿತು. ಶಾಸಕರಾದ ಬಸವನಗೌಡ ಮತ್ತು ಆ‌ರ್.ಎಸ್ ಪಾಟೀಲ್ ಅವರೂ ಸದನದಲ್ಲಿ ಪ್ರಸ್ತಾಪಿಸಿದ್ದರು. ಅಂದಾನಪ್ಪನವರು, ʻಕರ್ನಾಟಕʼ ನಾಮಕರಣಗೊಳ್ಳದೇ ತಾವು ವಿರಮಿಸುವುದಿಲ್ಲ, ಎನ್ನುವ ಮಟ್ಟಿಗೆ ಮತ್ತೆಮತ್ತೆ ನಾಮಕರಣದ ವಿಚಾರವನ್ನು ಸದನದಲ್ಲಿ ಮುನ್ನೆಲೆಗೆ ತಂದರು. ಇದನ್ನೂ ಓದಿ: ಕರ್ನಾಟಕ ಏಕೀಕರಣದ ಏಕೈಕ ಹುತಾತ್ಮ ಯಾರೆಂದು ಗೊತ್ತೆ?

    ನಂತರದಲ್ಲಿ ಜನರಿಂದ ಒತ್ತಡ ತೀವ್ರಗೊಂಡಾಗ ದೇವರಾಜ ಅರಸು ಅವರು ಜುಲೈ 27, 1972ರಂದು ʻಕರ್ನಾಟಕ’ ನಾಮಕರಣದ ನಿರ್ಣಯವನ್ನು ವಿಧಾನಸಭೆಯಲ್ಲಿ ಮಂಡಿಸಿ, ಅಂದೇ ಒಪ್ಪಿಗೆ ಪಡೆದರು. ಅದೇ ತಿಂಗಳ 31ರಂದು ವಿಧಾನ ಪರಿಷತ್ತಿನಲ್ಲಿ ಒಪ್ಪಿಗೆ ದೊರೆಯಿತು. ವಿಧೇಯಕವು 1973ರ ಜುಲೈ 30ರಂದು ಲೋಕಸಭೆಯಲ್ಲಿ, ಆಗಸ್ಟ್ 8ರಂದು ರಾಜ್ಯಸಭೆಯಲ್ಲಿ ಅಂಗೀಕಾರಗೊಂಡು, ಅ.8ರಂದು ರಾಷ್ಟ್ರಪತಿ ವಿ.ವಿ.ಗಿರಿ ಅಂಕಿತದೊಂದಿಗೆ ಮೈಸೂರು ರಾಜ್ಯ ʻಕರ್ನಾಟಕ’ ವಾಯಿತು. ನವೆಂಬರ್ 1, 1973ರಂದು ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆದ 17ನೇ ರಾಜ್ಯೋತ್ಸವವೇ ಕರ್ನಾಟಕ ನಾಮಕರಣೋತ್ಸವ. ಅರಸು ಅವರು ಕಾರ್ಯಕ್ರಮ ಉದ್ಘಾಟಿಸಿ, ʻಇದು ನಾಡಿನ ಜನತೆಯ ಆಸೆ, ಆಕಾಂಕ್ಷೆಗಳ ಪ್ರತೀಕ. ಕನ್ನಡ ಭಾವಬಂಧನದ ಸಂಕೇತʼ ಎಂದು ನುಡಿದಿದ್ದರು.

    ರಾಜ್ಯನಿರ್ಮಾಣ ದಿನಾಚರಣೆ ನಡೆದಿದ್ದೆಲ್ಲಿ?
    ಕೆಂಗಲ್‌ ಹನುಮಂತರಾಯರ ಆಶಯದಂತೆ ಏಕೀಕರಣಗೊಂಡ ಕರ್ನಾಟಕವು ವಿಶಾಲ ʻಮೈಸೂರು ರಾಜ್ಯ’ ಎಂಬ ಹೆಸರಿನಿಂದ ನ.1, 1956ರಂದು ಅಸ್ತಿತ್ವಕ್ಕೆ ಬಂತು. ಅಂದು ಕನ್ನಡಿಗರ ಸಾಂಸ್ಕೃತಿಕ ರಾಜಧಾನಿ ಹಂಪಿಯಲ್ಲಿ ಉತ್ತರ ಕರ್ನಾಟಕದ ಜನರು ʻರಾಜ್ಯ ನಿರ್ಮಾಣದ ದಿನ’ವನ್ನಾಗಿ ಆಚರಿಸಿದರು. ʻಕನ್ನಡ ಕುಲಪುರೋಹಿತ’ ಆಲೂರು ವೆಂಕಟರಾಯರು ಈ ಉತ್ಸವದ ಪೌರೋಹಿತ್ಯ ವಹಿಸಿದ್ದು ವಿಶೇಷವಾಗಿತ್ತು.

    ಮೊದಲ ಮುಖ್ಯಮಂತ್ರಿ ಎಸ್. ನಿಜಲಿಂಗಪ್ಪ:
    ಏಕೀಕರಣದ ರೂವಾರಿಗಳಾದ ಎಸ್‌. ನಿಜಲಿಂಗಪ್ಪನವರು 10 ದಿನಗಳ ಮೊದಲು ವಿಶಾಲ ಮೈಸೂರು ಕಾಂಗ್ರೆಸ್ ಶಾಸಕಾಂಗ ಪಕ್ಷದ ಅವಿರೋಧ ನಾಯಕರಾಗಿ ಆಯ್ಕೆಯಾದರು. ಏಕೀಕರಣದ ದಿನದಂದೇ ಮುಖ್ಯಮಂತ್ರಿಗಳಾಗಿ ಅಧಿಕಾರ ವಹಿಸಿಕೊಳ್ಳುವ ಮೂಲಕ ವಿಶಾಲ ಮೈಸೂರು ರಾಜ್ಯದ ಮೊದಲ ಮುಖ್ಯಮಂತ್ರಿಗಳಾದರು. ಈವರೆಗೆ ರಾಜ್ಯದಲ್ಲಿ ಐದು ವರ್ಷ ಪೂರ್ಣಾವಧಿ ಪೂರೈಸಿದ ಮೂವರು ಮುಖ್ಯಮಂತ್ರಿಗಳಲ್ಲಿ ಇವರು ಮೊದಲಿಗರು.

  • ಕರ್ನಾಟಕ ಏಕೀಕರಣದ ಏಕೈಕ ಹುತಾತ್ಮ ಯಾರೆಂದು ಗೊತ್ತೆ?

    ಕರ್ನಾಟಕ ಏಕೀಕರಣದ ಏಕೈಕ ಹುತಾತ್ಮ ಯಾರೆಂದು ಗೊತ್ತೆ?

    ಕರ್ನಾಟಕ ಏಕೀಕರಣ ಚಳವಳಿಯಲ್ಲಿ ಬಳ್ಳಾರಿ ಸೀಮೆಯ ಮೇರು ಹೆಸರು ರಂಜಾನ್ ಸಾಬ್. ಏಕಕಾಲಕ್ಕೆ ಸಾವಿರಾರು ಜನರನ್ನು ಸೇರಿಸುವ ಛಾತಿ ಅವರಿಗಿತ್ತು. ಬಳ್ಳಾರಿಯನ್ನು ಕರ್ನಾಟಕದಲ್ಲಿ ಉಳಿಸಿಕೊಳ್ಳಲೇಬೇಕೆಂಬ ಜಿದ್ದಿನೊಂದಿಗೆ 1952ರಲ್ಲಿ ನಡೆದ ಚಳವಳಿಯಲ್ಲಿ ಕೋ. ಚನ್ನಬಸಪ್ಪ ಅವರೊಂದಿಗೆ ಮುಂಚೂಣಿಯಲ್ಲಿ ಇದ್ದವರು ರಂಜಾನ್ ಸಾಬ್.

    ಏಕೀಕರಣ ಚಳವಳಿ ಸಂದರ್ಭದಲ್ಲಿ ನಡೆದ ಘರ್ಷಣೆಯಿಂದಾಗಿ ಒಟ್ಟು 1,400 ಜನ ಜೈಲು ಸೇರಬೇಕಾಯಿತು. ಆಂಧ್ರ ಸ್ಥಾಪನೆ ಬಳಿಕ 1953, ಅ.1ರಂದು ಬಳ್ಳಾರಿಯಲ್ಲಿ ಆಯೋಜಿಸಿದ್ದ ಸಂಭ್ರಮಾಚರಣೆ ಕಾರ್ಯಕ್ರಮ, ಕರ್ನಾಟಕ ವಿರೋಧಿಗಳ ಕೆಂಗಣ್ಣಿಗೆ ಗುರಿ ಆಗಿತ್ತು. ಅಂದು ಸಂಜೆ ಸಮಾರಂಭದ ಪೆಂಡಾಲ್ ಕಾಯುವ ಕೆಲಸ ರಂಜಾನ್ ಸಾಬ್ ಅವರದ್ದಾಗಿತ್ತು. ಇದನ್ನೂ ಓದಿ: ‘ಪಬ್ಲಿಕ್‌ ಟಿವಿ’ ಹಿರಿಯ ವರದಿಗಾರ ಸುಖ್‌ಪಾಲ್‌ ಪೊಳಲಿಗೆ ದ.ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ

    ರಾತ್ರಿ 2.30ರ ಸುಮಾರಿಗೆ ಪೆಂಡಾಲ್‌ನಲ್ಲೇ ನಿದ್ದೆಗೆ ಜಾರಿದ್ದ ಅವರ ಮೇಲೆ ಆಸಿಡ್ ಬಲ್ಬ್‌ ಎಸೆಯಲಾಯಿತು. ತೀವ್ರ ಗಾಯಗೊಂಡ ಸ್ಥಿತಿಯಲ್ಲೂ ಅವರು ದಾಳಿಮಾಡಿದವರ ವಿರುದ್ಧ ತಿರುಗಿ ಬಿದ್ದರು. ಆದರೆ, ತೀವ್ರ ರಕ್ತಸ್ರಾವದ ಹಿನ್ನೆಲೆ ಗೋಶ್ ಆಸ್ಪತ್ರೆಯಲ್ಲಿ ಕೊನೆಯುಸಿರುಳೆದರು. ಅಂದು ಸಂಜೆ 4 ಗಂಟೆಗೆ ಸಭಾ ಮಂಟಪದಲ್ಲಿ ಅಂದಿನ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯ ಅವರು, ʻಕನ್ನಡ ನಾಡಿಗಾಗಿ, ಭಾಷೆಗಾಗಿ, ಕಲೆಗಾಗಿ ದುಡಿದು ಏಕೀಕರಣ ಹೋರಾಟದಲ್ಲಿ ಹುತಾತ್ಮರಾದ ಏಕೈಕ ವ್ಯಕ್ತಿ ರಂಜಾನ್ ಸಾಬ್ʼ ಎಂದು ಹಾಡಿ ಹೊಗಳಿದ್ದೇ ಸಾಕ್ಷಿ. ಈ ಘಟನೆ ಇಂದಿಗೂ ಕಣ್ಣಿಗೆ ಕಟ್ಟಿದಂತಿದೆ. ಕನ್ನಡ ರಾಜ್ಯೋತ್ಸವದ ಆಚರಣೆ ಸಂದರ್ಭದಲ್ಲಿ ಈ ವಿಷಯ ನೆನಪಿನಲ್ಲಿಟ್ಟುಕೊಳ್ಳಬೇಕಾದದ್ದು ಪ್ರತಿಯೊಬ್ಬ ಕನ್ನಡಿಗನ ಕರ್ತವ್ಯ ಎಂದರೆ ತಪ್ಪಾಗಲಾರದು. ಇದನ್ನೂ ಓದಿ: ಅಮೆರಿಕಾ ಚುನಾವಣೆಯಲ್ಲಿ ಈಗ ʼಕಸʼ ಪಾಲಿಟಿಕ್ಸ್ – ಕಸದ ಲಾರಿ ಚಲಾಯಿಸಿ ಬೈಡನ್‌ಗೆ ಟ್ರಂಪ್ ಟಾಂಗ್

  • ಎಸ್.ನಿಜಲಿಂಗಪ್ಪ, ಕೆಂಗಲ್ ಹನುಮಂತಯ್ಯ ಜೀವನ ಪಠ್ಯಕ್ಕೆ ಸೇರ್ಪಡೆಗೆ ವಿ.ಸೋಮಣ್ಣ ಮನವಿ

    ಎಸ್.ನಿಜಲಿಂಗಪ್ಪ, ಕೆಂಗಲ್ ಹನುಮಂತಯ್ಯ ಜೀವನ ಪಠ್ಯಕ್ಕೆ ಸೇರ್ಪಡೆಗೆ ವಿ.ಸೋಮಣ್ಣ ಮನವಿ

    – ಅಧ್ಯಯನ ಪೀಠ ಆರಂಭಿಸಲು ಒತ್ತಾಯ

    ನವದೆಹಲಿ: ಭಾರತದ ಸ್ವಾತಂತ್ರ್ಯ ಚಳುವಳಿಯಲ್ಲಿ ಪ್ರಮುಖ ಪಾತ್ರ ವಹಿಸುವುದರೊಂದಿಗೆ ಕರ್ನಾಟಕದ ಏಕೀಕೃತ ಚಳುವಳಿಯಲ್ಲೂ ಮುಖಂಡತ್ವವನ್ನು ವಹಿಸಿದ್ದ ರಾಜ್ಯದ ಮಾಜಿ ಮುಖ್ಯಮಂತ್ರಿಗಳಾದ ಎಸ್.ನಿಜಲಿಂಗಪ್ಪ ಮತ್ತು ಕೆಂಗಲ್ ಹನುಮಂತಯ್ಯನವರ ಸೇವೆ ಅವಿಸ್ಮರಣೀಯವಾದದ್ದು. ಈ ಹಿನ್ನೆಲೆ ಅವರ ಹೆಸರಿನಲ್ಲಿ ಅಧ್ಯಯನ ಪೀಠ ಸ್ಥಾಪಿಸಬೇಕು ಮತ್ತು ಶಾಲಾ ಪಠ್ಯದಲ್ಲಿ ಅವರ ಬದುಕು ಸೇರ್ಪಡೆಯಾಗಬೇಕು ಎಂದು ಕೇಂದ್ರ ಸಚಿವ ವಿ.ಸೋಮಣ್ಣ ಒತ್ತಾಯಿಸಿದ್ದಾರೆ.

    ಈ ಬಗ್ಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಪತ್ರ ಬರೆದ ಅವರು, ಭಾರತದ ಸ್ವಾತಂತ್ರ್ಯ ಚಳುವಳಿ ಮತ್ತು ಕರ್ನಾಟಕ ಏಕೀಕರಣ ಚಳುವಳಿಯ ಸಂದರ್ಭದಲ್ಲಿ ಜನರಲ್ಲಿ ಅರಿವು ಮತ್ತು ಹೋರಾಟದ ಕಿಚ್ಚನ್ನು ಮೂಡಿಸುವುದರೊಂದಿಗೆ ಹರಿದು ಹಂಚಿ ಹೋಗಿದ್ದ ಕನ್ನಡ ಪ್ರದೇಶಗಳು ಒಂದಾಗಬೇಕೆಂಬ ಅವರ ದೃಢ ಸಂಕಲ್ಪದಿಂದ 1956 ನವೆಂಬರ್ 1ರಂದು ಮೈಸೂರು ರಾಜ್ಯ ಅಸ್ತಿತ್ವಕ್ಕೆ ಬಂದಿತು. ಇದನ್ನೂ ಓದಿ: ಬೈರತಿ ಸುರೇಶ್ ದುರ್ಯೋಧನ, ದುಶ್ಯಾಸನ ಇದ್ದಂತೆ: ಏಕವಚನದಲ್ಲೇ ಹೆಚ್.ವಿಶ್ವನಾಥ್ ವಾಗ್ದಾಳಿ

    ಮುಖ್ಯಮಂತ್ರಿಗಳಾಗಿ ರಾಜ್ಯದ ಅಭಿವೃದ್ಧಿಗೆ ಅವರು ನೀಡಿದ ಹತ್ತಾರು ಜನಪರ ಯೋಜನೆಗಳು, ಅಭಿವೃದ್ಧಿಪರ ಚಿಂತನೆಗಳು ಅನುಷ್ಠಾನಗೊಂಡಿವೆ. ಕನ್ನಡ ನಾಡಿನ ಬಗ್ಗೆ ಅವರಿಗಿದ್ದ ದೂರದೃಷ್ಟಿಯ ಚಿಂತನೆಯ ಫಲವಾಗಿ ಇಂದು ಕರ್ನಾಟಕ ರಾಜ್ಯ ಪ್ರಗತಿಪಥದಲ್ಲಿ ಮುನ್ನಡೆಯುತ್ತಿದ್ದು, ಇವುಗಳು ರಾಜ್ಯದ ಚರಿತ್ರೆಯಲ್ಲಿ ಐತಿಹಾಸಿಕ ಮೈಲುಗಲ್ಲಾಗಿದೆ. ಕನ್ನಡಿಗರು ಹಾಗೂ ಮುಂದಿನ ಪೀಳಿಗೆ ಸದಾ ಈ ಮಹನೀಯರನ್ನು ನೆನಪಿಸಿಕೊಳ್ಳುವ ಕಾರ್ಯವನ್ನು ಕರ್ನಾಟಕ ಸರ್ಕಾರದಿಂದ ನಡೆಯಬೇಕಿದೆ.

    ಈ ಹಿನ್ನೆಲೆ ರಾಜ್ಯದ ಪ್ರೌಢಶಾಲೆಯ ವಿದ್ಯಾರ್ಥಿಗಳಿಗಾಗಿ ಪಠ್ಯಪುಸ್ತಕಗಳಲ್ಲಿ ಎಸ್. ನಿಜಲಿಂಗಪ್ಪ ಮತ್ತು ಕೆಂಗಲ್ ಹನುಮಂತಯ್ಯನವರ ಜೀವನ-ಬದುಕು ರಾಜ್ಯದ ಅಭಿವೃದ್ಧಿಗೆ ಅವರು ಕೈಗೊಂಡ ಸೇವಾಕಾರ್ಯಗಳನ್ನು ಪರಿಚಯಿಸಬೇಕು. ಎಸ್.ನಿಜಲಿಂಗಪ್ಪ ಮತ್ತು ಕೆಂಗಲ್ ಹನುಮಂತಯ್ಯನವರ ಜನ್ಮದಿನಾಚರಣೆಯನ್ನು ಕರ್ನಾಟಕ ಸರ್ಕಾರದಿಂದ ಆಚರಿಸಬೇಕು. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕೆಂಗಲ್ ಹನುಮಂತಯ್ಯ ಹಾಗೂ ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಎಸ್.ನಿಜಲಿಂಗಪ್ಪ ಅವರ ಹೆಸರಿನಲ್ಲಿ ಅಧ್ಯಯನ ಪೀಠ ಸ್ಥಾಪಿಸಬೇಕು ಎಂದು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಜಿಂದಾಲ್‌ಗೆ ಭೂ ಮಾರಾಟ ಪ್ರಕರಣ: ಕಾಂಗ್ರೆಸ್ಸಿಗರಿಗೂ, ಹೈಕಮಾಂಡಿಗೂ ಸಂದಾಯ ಆಗಿರಬಹುದು – ಸಿ.ಟಿ ರವಿ

  • ಕೆಂಗಲ್ ಹನುಮಂತಯ್ಯ ದಕ್ಷ ಆಡಳಿತಗಾರ: ಸಿದ್ದರಾಮಯ್ಯ

    ಕೆಂಗಲ್ ಹನುಮಂತಯ್ಯ ದಕ್ಷ ಆಡಳಿತಗಾರ: ಸಿದ್ದರಾಮಯ್ಯ

    ಬೆಂಗಳೂರು: ಕೆಂಗಲ್ ಹನುಮಂತಯ್ಯನವರು (Kengal Hanumanthaiah) ದಕ್ಷ ಆಡಳಿತಗಾರ, ಕರ್ನಾಟಕವನ್ನು ಅತ್ಯಂತ ದಕ್ಷತೆಯಿಂದ ಸುಮಾರು ನಾಲ್ಕೂವರೆ ವರ್ಷ ಆಳಿದವರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಹೇಳಿದ್ದಾರೆ.

    ವಿಧಾನಸೌಧದಲ್ಲಿ ಮಾಜಿ ಸಿಎಂ ದಿ.ಕೆಂಗಲ್ ಹನುಮಂತಯ್ಯ ಅವರ ಜನ್ಮದಿನಾಚಾರಣೆ ಅಂಗವಾಗಿ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು. ಈ ವೇಳೆ ಕೆಂಗಲ್ ಹನುಮಂತಯ್ಯನವರ ಜನ್ಮ ದಿನದಂದು ಅವರ ಸ್ಮರಣೆ ಮಾಡಿ ಗೌರವ ಸಲ್ಲಿಸಿದ್ದೇವೆ. ರಾಮನಗರ ಜಿಲ್ಲೆಯವರಾದ ಅವರು ಸಂವಿಧಾನ ಜಾರಿಯಾದ ನಂತರ ಮುಖ್ಯಮಂತ್ರಿಯಾದವರು. ಅವರ ಕಾಲದಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಗೆದ್ದು ಶಾಸಕಾಂಗ ಪಕ್ಷದ ನಾಯಕರಾಗಿ ಮುಖ್ಯ ಮಂತ್ರಿಯಾದವರು. ವಿಧಾನಸೌಧ ಕಟ್ಟಿಸಿದ್ದು ಅವರು. ದುರ್ದೈವ, ಅದನ್ನು ಅವರು ಉದ್ಘಾಟಿಸಲು ಬಿಡಲಿಲ್ಲ ಎಂದಿದ್ದಾರೆ. ಇದನ್ನೂ ಓದಿ: ಅಯೋಧ್ಯೆಗೆ ವೀಕೆಂಡ್‌ನಲ್ಲಿ ಭಕ್ತಸಾಗರ- VIP ಗೇಟ್ ತೆರೆದ ಆಡಳಿತ ಮಂಡಳಿ

    ವಿಧಾನಸೌಧದ ಪೂರ್ವದಿಕ್ಕಿನಲ್ಲಿ ಸರ್ಕಾರಿ ಕೆಲಸ ದೇವರ ಕೆಲಸ ಎಂದು ಬರೆಸಿದ್ದು, ಜನಸೇವೆಯೇ ಜನಾರ್ದನ ಸೇವೆ ಎಂದು ಅದರ ಅರ್ಥವಾಗಿದೆ. ಅವರು ಬದ್ಧತೆ, ನಿಷ್ಠುರತೆಯಿಂದ ಸರ್ಕಾರದ ಕೆಲಸ ಮಾಡಿದ್ದರು. ಹಳೇ ಮೈಸೂರು ಭಾಗದವರಾದರೂ ವಿಶಾಲ ಕರ್ನಾಟಕವಾಗಬೇಕೆಂದು ಕರ್ನಾಟಕ ಏಕೀಕರಣದಲ್ಲಿ ಭಾಗವಹಿಸಿದ್ದರು. ಅವರ ತತ್ವ ಆದರ್ಶಗಳು, ಆಡಳಿತ ನಮಗೆ ಮಾದರಿ ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: ಲೋಕಸಭಾ ಚುನಾವಣೆಗೆ ಮುನ್ನ ಸಿಎಎ ಜಾರಿ: ಅಮಿತ್‌ ಶಾ ಘೋಷಣೆ

  • ರಾಜ್ಯಕ್ಕೆ ನಾಲ್ಕು ಮುಖ್ಯಮಂತ್ರಿಗಳನ್ನು ಕೊಟ್ಟ ರಾಮನಗರ ರಾಜಕೀಯ ಘಟಾನುಘಟಿಗಳ ತವರು

    ರಾಜ್ಯಕ್ಕೆ ನಾಲ್ಕು ಮುಖ್ಯಮಂತ್ರಿಗಳನ್ನು ಕೊಟ್ಟ ರಾಮನಗರ ರಾಜಕೀಯ ಘಟಾನುಘಟಿಗಳ ತವರು

    ರಾಮನಗರ: ರಾಜ್ಯಕ್ಕೆ ನಾಲ್ಕು ಮಂದಿ ಮುಖ್ಯಮಂತ್ರಿಗಳನ್ನು (Chief Minister) ಕೊಟ್ಟ ಹೆಗ್ಗಳಿಕೆಗೆ ರಾಮನಗರ (Ramanagara) ಜಿಲ್ಲೆ ಪಾತ್ರವಾಗಿದೆ. ರಾಜಕೀಯ (Politics) ಘಟನಾವಳಿಗಳ ತವರಾಗಿರುವ ರಾಮನಗರದ ರಾಜಕೀಯ ಇತಿಹಾಸವೇ ರೋಚಕ.

    ರಾಜ್ಯದ ಎರಡನೇ ಮುಖ್ಯಮಂತ್ರಿ ಹಾಗೂ ಮೊದಲ ಚುನಾಯಿತ ಮುಖ್ಯಮಂತ್ರಿ ಎಂದೇ ಹೆಸರುವಾಸಿಯಾಗಿರುವ ವಿಧಾನಸೌಧದ ನಿರ್ಮಾತೃ ಕೆಂಗಲ್ ಹನುಮಂತಯ್ಯ (Kengal Hanumanthaiah) ಸ್ಪರ್ಧೆ ಮಾಡಿದ್ದು ಇದೇ ರಾಮನಗರ ಕ್ಷೇತ್ರದಲ್ಲಿ. 1952ರ ವಿಧಾನಸಭಾ ಚುನಾವಣೆಯಲ್ಲಿ ರಾಮನಗರ ಕ್ಷೇತ್ರದಿಂದ ಆಯ್ಕೆಯಾಗಿದ್ದ ಕೆಂಗಲ್ ಹನುಮಂತಯ್ಯ, ಅಂದಿನ ಮೈಸೂರು (Mysuru) ಸರ್ಕಾರದ ಮುಖ್ಯಮಂತ್ರಿಯಾಗಿದ್ದರು. ಮೂಲತಃ ರಾಮನಗರ ತಾಲೂಕಿನ ಲಕ್ಕಪ್ಪನಹಳ್ಳಿಯಲ್ಲಿ ಜನಿಸಿದ್ದ ಕೆಂಗಲ್ ಹನುಮಂತಯ್ಯ ಸ್ವಾತಂತ್ರ‍್ಯ ಹೋರಾಟದಲ್ಲಿಯೂ ಭಾಗಿಯಾಗಿದ್ದರು. 1952ರಲ್ಲಿ ರಾಜ್ಯದ ಮುಖ್ಯಮಂತ್ರಿಯಾಗಿ ದಕ್ಷ ಆಡಳಿತವನ್ನು ನೀಡಿದ್ದರು. ಇದನ್ನೂ ಓದಿ: ಜಾತಿ ಬಲ ಇಲ್ಲದಿದ್ದರೂ, ಅಭಿವೃದ್ಧಿ ನಂಬಿ ಗೆದ್ದು ಸಚಿವರಾದ ಬಿ.ಸಿ. ನಾಗೇಶ್ 

    1983ರಲ್ಲಿ ರಾಮಕೃಷ್ಣ ಹೆಗಡೆ (Ramakrishna Hegde) ಅವರು ಮುಖ್ಯಮಂತ್ರಿಯಾಗಿದ್ದರು. ಆದರೆ ಅವರು ಶಾಸಕರಾಗಿರಲಿಲ್ಲ. ಹೀಗಾಗಿ ಕನಕಪುರ (Kanakapura) ಕ್ಷೇತ್ರದ ಉಪಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದಿದ್ದರು. ಇದನ್ನೂ ಓದಿ: ಬಿಜೆಪಿ ಮಾಜಿ ಸಂಸದ ಮಂಜುನಾಥ್ ಕುನ್ನೂರು, ಪುತ್ರ ಶೀಘ್ರವೇ ಕಾಂಗ್ರೆಸ್‌ಗೆ ಸೇರ್ಪಡೆ 

    1994ರಲ್ಲಿ ರಾಮನಗರ ಕ್ಷೇತ್ರದಿಂದ ಆಯ್ಕೆಯಾಗಿದ್ದ ಹೆಚ್.ಡಿ ದೇವೇಗೌಡರು (H.D.Deve Gowda) ಸಿಎಂ ಸ್ಥಾನ ಅಲಂಕರಿಸಿದ್ದರು. ಬಳಿಕ 1996ರಲ್ಲಿ ವಿಧಾನಸಭೆಗೆ ರಾಜಿನಾಮೆ ನೀಡಿ ಪ್ರಧಾನಿ ಹುದ್ದೆಗೇರಿದರು. ಆಗ ಅವರ ರಾಜೀನಾಮೆಯಿಂದ ತೆರವಾಗಿದ್ದ ರಾಮನಗರ ವಿಧಾನಸಭೆ ಚುನಾವಣೆಗೆ ಅಂಬರೀಶ್ (Ambareesh) ಸ್ಪರ್ಧಿಸಿದ್ದರು. ಆದರೆ ಕಾಂಗ್ರೆಸ್‌ನ (Congress) ಸಿ.ಎಂ.ಲಿಂಗಪ್ಪ ಅವರ ಎದುರು ಅಂಬರೀಶ್ ಸೋಲುಂಡಿದ್ದರು. ಇದನ್ನೂ ಓದಿ: ದೇವರು ಮಗಳ ರೂಪದಲ್ಲಿ ಉಡುಗೊರೆ ಕಳುಹಿಸಿದ್ದಾರೆ – ಮೊದಲ ಮಗುವನ್ನು ಸ್ವಾಗತಿಸಿದ ತೇಜಸ್ವಿ ಯಾದವ್ 

    2004ರಲ್ಲಿ ರಾಮನಗರದಿಂದ ಪ್ರಪ್ರಥಮ ಬಾರಿಗೆ ಶಾಸಕರಾಗಿ ಆಯ್ಕೆಯಾಗಿ ಹೆಚ್.ಡಿ ಕುಮಾರಸ್ವಾಮಿ (H.D.Kumaraswamy) ಮುಖ್ಯಮಂತ್ರಿಯಾಗಿ 20 ತಿಂಗಳ ಅಧಿಕಾರ ನಡೆಸಿ ಮನೆಮಾತಾಗಿದ್ದರು. ನಂತರ 2018ರ ವಿಧಾನಸಭೆ ಚುನಾವಣೆಯಲ್ಲಿ ರಾಮನಗರ, ಚನ್ನಪಟ್ಟಣ ಕ್ಷೇತ್ರಗಳಿಂದ ಸ್ಪರ್ಧಿಸಿದ್ದ ಹೆಚ್.ಡಿ ಕುಮಾರಸ್ವಾಮಿ ಮತ್ತೊಮ್ಮೆ ರಾಜ್ಯದ ಚುಕ್ಕಾಣಿ ಹಿಡಿದರು. ಅವರು ರಾಮನಗರ ಕ್ಷೇತ್ರ ತೊರೆದು, ಚನ್ನಪಟ್ಟಣ (Channapatna) ಕ್ಷೇತ್ರವನ್ನು ಉಳಿಸಿಕೊಂಡರು. ಇದನ್ನೂ ಓದಿ: ಶಾಸಕ ಸ್ಥಾನಕ್ಕೆ ಗುಬ್ಬಿ ಶ್ರೀನಿವಾಸ್ ಇಂದು ರಾಜೀನಾಮೆ

    ಜಿಲ್ಲೆಯ ನಾಲ್ಕು ತಾಲೂಕುಗಳ ಪೈಕಿ ಮೂರು (ರಾಮನಗರ, ಕನಕಪುರ, ಚನ್ನಪಟ್ಟಣ) ತಾಲೂಕುಗಳಿಗೆ ಮುಖ್ಯಮಂತ್ರಿ ಸ್ಥಾನ ಒಲಿದಿದೆ. ಅದರಲ್ಲೂ ರಾಮನಗರ ಕ್ಷೇತ್ರಕ್ಕೆ ಮೂರು ಬಾರಿ ಸಿಎಂ ಹುದ್ದೆ ದೊರೆತಿದೆ. ಆದರೆ, ಜಿಲ್ಲೆಯಿಂದ ಆಯ್ಕೆಯಾಗಿ ಮುಖ್ಯಮಂತ್ರಿಯಾದ ಯಾವೊಬ್ಬ ನಾಯಕರೂ ತಮ್ಮ ಅಧಿಕಾರವಧಿಯನ್ನು ಪೂರ್ಣಗೊಳಿಸಿಲ್ಲ ಎಂಬುದು ವಿಶೇಷ. ಇದನ್ನೂ ಓದಿ: ಯುಪಿ ಪೊಲೀಸರಿಂದ ಹತ್ಯೆಯಾಗುವ ಭಯವಿದೆ – ಬಂಧನದಲ್ಲಿರುವ ಮಾಜಿ ಸಂಸದ ಅತಿಕ್ ಅಹಮ್ಮದ್

  • ರಾಮನಗರ ಜಿಲ್ಲೆಯಿಂದ ಗೆದ್ದು ಮುಖ್ಯಮಂತ್ರಿಯಾದವರಿಗೆ ಪೂರ್ಣಾವಧಿ ಭಾಗ್ಯವೇ ಇಲ್ಲ

    ರಾಮನಗರ ಜಿಲ್ಲೆಯಿಂದ ಗೆದ್ದು ಮುಖ್ಯಮಂತ್ರಿಯಾದವರಿಗೆ ಪೂರ್ಣಾವಧಿ ಭಾಗ್ಯವೇ ಇಲ್ಲ

    ರಾಮನಗರ: ಜಿಲ್ಲೆಯಿಂದ ಗೆದ್ದು ಮುಖ್ಯಮಂತ್ರಿ ಜವಾಬ್ದಾರಿ ಹೊತ್ತ ಯಾರೊಬ್ಬರಿಗೂ ಪೂರ್ಣಾವಧಿ ಭಾಗ್ಯ ಸಿಕ್ಕಿಲ್ಲ.

    ಜಿಲ್ಲೆಯಿಂದ ಆಯ್ಕೆಯಾದ ಶಾಸಕರ ಪೈಕಿ ಒಟ್ಟು ನಾಲ್ವರು ಮುಖ್ಯಮಂತ್ರಿ ಸ್ಥಾನವನ್ನು ಅಲಂಕರಿಸಿದ್ದರು. ಅವರಲ್ಲಿ ಯಾರೊಬ್ಬರೂ 5 ವರ್ಷಗಳ ಕಾಲ ಸಿಎಂ ಆಗಿ ಅಧಿಕಾರ ಪೂರ್ಣಗೊಳಿಸಲೇ ಇಲ್ಲ. ಅಷ್ಟೇ ಅಲ್ಲದೆ ಎರಡು ಬಾರಿ ಆಯ್ಕೆಯಾದರೂ ಎಚ್.ಡಿ.ಕುಮಾರಸ್ವಾಮಿ ಅವರ ನೇತೃತ್ವದ ಸಮ್ಮಿಶ್ರ ಸರ್ಕಾರ 5 ವರ್ಷ ಪೂರ್ಣಗೊಳ್ಳುವ ಮುನ್ನವೇ ಪತನಗೊಂಡಿದೆ.

    ಮಾಜಿ ಮುಖ್ಯಮಂತ್ರಿಗಳಾದ ಕೆಂಗಲ್ ಹನುಮಂತಯ್ಯ, ರಾಮಕೃಷ್ಣ ಹೆಗಡೆ, ಎಚ್.ಡಿ.ದೇವೇಗೌಡ ಹಾಗೂ ಎಚ್.ಡಿ.ಕುಮಾರಸ್ವಾಮಿ ಅವರು ರಾಮನಗರ ಜಿಲ್ಲೆಯಿಂದ ಆಯ್ಕೆಯಾಗಿ ಸಿಎಂ ಆಗಿದ್ದರು. ಆದರೆ ನಾಲ್ವರಲ್ಲಿ ಒಬ್ಬರೇ ಒಬ್ಬರೂ ಅಧಿಕಾರ ಪೂರ್ಣಗೊಳಿಸಿಲ್ಲ. ಕುಮಾರಸ್ವಾಮಿ ಅವರು ಮೊದಲ ಬಾರಿ 20 ತಿಂಗಳು ಸಿಎಂ ಆಗಿ ಅಧಿಕಾರ ನಡೆಸಿದ್ದರು. 2018ರ ವಿಧಾನಸಭಾ ಚುನಾವಣೆ ಬಳಿಕ ಕಾಂಗ್ರೆಸ್ ಜೊತೆಗೆ ಕೈಜೋಡಿಸಿದ್ದ ಸಿಎಂ 14 ತಿಂಗಳಲ್ಲಿ ಅಧಿಕಾರವನ್ನು ಕಳೆದುಕೊಂಡಿದ್ದಾರೆ.

    ಕೆಂಗಲ್ ಹನುಮಂತಯ್ಯ ಅವರು 4 ವರ್ಷ 5 ತಿಂಗಳು ಅಧಿಕಾರ ನಡೆಸಿದ್ದರೆ, ರಾಮಕೃಷ್ಣ ಹೆಗಡೆ 12 ತಿಂಗಳು ಅಧಿಕಾರದಲ್ಲಿದ್ದರು. ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು 17 ತಿಂಗಳ ಬಳಿಕ ಸಿಎಂ ಸ್ಥಾನದಿಂದ ಕೆಳಗೆ ಇಳಿದಿದ್ದರು.

  • ಮಾಜಿ ಸಿಎಂ ಕೆಂಗಲ್ ಹನುಮಂತಯ್ಯ ಪುತ್ರಿಯಿಂದ ದೌರ್ಜನ್ಯ!

    ಮಾಜಿ ಸಿಎಂ ಕೆಂಗಲ್ ಹನುಮಂತಯ್ಯ ಪುತ್ರಿಯಿಂದ ದೌರ್ಜನ್ಯ!

    ರಾಮನಗರ: ದೇವಾಲಯದಲ್ಲಿ ಪ್ರದಕ್ಷಿಣೆ ಹಾಕುವ ವೇಳೆ ಎದುರಿಗೆ ಬಂದ ಯುವತಿಗೆ ಮಾಜಿ ಸಿಎಂ ಕೆಂಗಲ್ ಹನುಮಂತಯ್ಯನವರ ಪುತ್ರಿ ವಿಜಯಲಕ್ಷ್ಮಿ ಮನಬಂದಂತೆ ಥಳಿಸಿದ ಘಟನೆ ಚನ್ನಪಟ್ಟಣ ತಾಲೂಕಿನ ಕೆಂಗಲ್ ಬಳಿ ನಡೆದಿದೆ.

    ಕೆಂಗಲ್ ಆಂಜನೇಯ ದೇವಾಲಯದಲ್ಲಿ ಹನುಮಂತಯ್ಯನವರ ಪುತ್ರಿ ವಿಜಯಲಕ್ಷ್ಮಿ ಪ್ರದಕ್ಷಿಣೆ ಹಾಕಲು ದೇವಾಲಯಕ್ಕೆ ಆಗಮಿಸಿದ್ದರು. ಇದೇ ವೇಳೆ ಚನ್ನಪಟ್ಟಣದ ವಂದಾರಗುಪ್ಪೆಯ ನಿವಾಸಿ ವರ್ಷಾ ಕೂಡಾ ದೇವಾಲಯದ ಒಳಗೆ ಪ್ರದಕ್ಷಿಣೆ ಹಾಕುತ್ತಿದ್ದರು.

    ವಿಜಯಲಕ್ಷ್ಮಿಯವರು ದೇವಾಲಯದ ಒಳಗೆ ಬಂದಾಗ ಇಬ್ಬರು ಪ್ರದಕ್ಷಿಣೆ ಹಾಕುವ ವೇಳೆ ಕೆಂಗಲ್ ಹನುಮಂತಯ್ಯನವರ ಪುತ್ರಿ ವಿಜಯಲಕ್ಷ್ಮಿಯವರ ಎದುರಿಗೆ ವರ್ಷಾ ಬಂದಿದ್ದಾಳೆ. ನಂತರ ದೇವಾಲಯದಿಂದ ಹೊರಬಂದಿದ್ದ ವರ್ಷಾಳನ್ನು ಹೋಮ್ ಗಾರ್ಡ್ ಗಳ ಮೂಲಕ ಕರೆಸಿಕೊಂಡ ವಿಜಯಲಕ್ಷ್ಮಿಯವರು ಮನಬಂದಂತೆ ಥಳಿಸಿದ್ದಾರೆ. ನಂತರ ಕಾರನ್ನು ಹತ್ತಿ ಹೋಗಲು ಮುಂದಾದ ವೇಳೆ ಸ್ಥಳದಲ್ಲಿದ್ದ ಸಾರ್ವಜನಿಕರು ಕಾರ್ ತಡೆದು ಪ್ರಶ್ನಿಸಿದಾಗ ಮಾತಿಗೆ ಮಾತು ಬೆಳೆದು ಕಾರಿನ ಗ್ಲಾಸ್ ಪುಡಿಪುಡಿ ಮಾಡಿದ್ದಾರೆ.

    ಈ ಘಟನೆ ಸಂಬಂಧ ಚನ್ನಪಟ್ಟಣ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಎರಡು ಕಡೆಯವರು ಚನ್ನಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ವಿಧಾನಸೌಧ ಉದ್ಘಾಟನೆಯಾಗಿದ್ದು ಯಾವಾಗ?- ಸರ್ಕಾರಕ್ಕೇ ಗೊತ್ತಿಲ್ಲ ಮಾಹಿತಿ

    ವಿಧಾನಸೌಧ ಉದ್ಘಾಟನೆಯಾಗಿದ್ದು ಯಾವಾಗ?- ಸರ್ಕಾರಕ್ಕೇ ಗೊತ್ತಿಲ್ಲ ಮಾಹಿತಿ

    ಬೆಂಗಳೂರು: ರಾಜ್ಯದ ಶಕ್ತಿಸೌಧ ಉದ್ಘಾಟನೆಯಾಗಿದ್ದು ಯಾವಾಗ ನಿಮಗೆ ಗೊತ್ತಾ? ನಿಮಗೆ ಅಲ್ಲ, ಘನ ಸರ್ಕಾರಕ್ಕೂ ಈ ಬಗ್ಗೆ ಗೊತ್ತಿಲ್ಲ. ಹೀಗಂತ ನಾವ್ ಹೇಳ್ತಿಲ್ಲ. ಸ್ವತಃ ಸರ್ಕಾರವೇ ನಮ್ಮ ಬಳಿ ಮಾಹಿತಿ ಇಲ್ಲ ಅಂತಿದೆ.

    ಆಶ್ಚರ್ಯ ಎನ್ನಿಸಿದ್ರೂ ನೀವು ನಂಬಲೇಬೇಕು. ಕೆಂಗಲ್ ಹನುಮಂತ್ಯನವರು ಕಟ್ಟಿಸಿದ್ದ ವಿಧಾನಸೌಧ ಯಾವಾಗ ಉದ್ಘಾಟನೆ ಆಗಿದ್ದು? ಉದ್ಘಾಟನೆ ಮಾಡಿದ್ದು ಯಾರು ಅನ್ನೋ ಮಹತ್ವದ ಮಾಹಿತಿನೇ ಸರ್ಕಾರದ ಬಳಿ ಇಲ್ಲ. ಮೊನ್ನೆಯಷ್ಟೆ ಮುಗಿದ ಅಧಿವೇಶನದಲ್ಲಿ ವಿಧಾನಸೌಧದ ಶಂಕುಸ್ಥಾಪನೆಯಾಗಿದ್ದು ಯಾವಾಗ? ಉದ್ಘಾಟನೆಯಾದದ್ದು ಯಾವಾಗ? ಯಾರು ಉದ್ಘಾಟನೆ ಮಾಡಿದ್ದು ಎಂಬ ಬಗ್ಗೆ ಮಾಹಿತಿ ನೀಡುವಂತೆ ವಿಧಾನ ಪರಿಷತ್ ಸದಸ್ಯ ಉಗ್ರಪ್ಪ ಸರ್ಕಾರಕ್ಕೆ ಪ್ರಶ್ನೆ ಕೇಳಿದ್ರು.

    ಇದಕ್ಕೆ ಉತ್ತರ ನೀಡಿರುವ ಲೋಕೋಪಯೋಗಿ ಇಲಾಖೆ, 1951 ಜುಲೈ 13 ರಂದು ಅಂದಿನ ಪ್ರಧಾನಿಗಳಾದ ಪಂಡಿತ್ ಜವಹಾರ್ ಲಾಲ್ ನೆಹರು ವಿಧಾನಸೌಧಕ್ಕೆ ಶಂಕುಸ್ಥಾಪನೆ ಮಾಡಿದ್ರು. ಅಂದು ಕೆಸಿ ರೆಡ್ಡಿ ಮುಖ್ಯಮಂತ್ರಿಯಾಗಿದ್ರು. ಇದನ್ನ ಬಿಟ್ಟು ಬೇರೆ ಮಾಹಿತಿ ಇಲ್ಲ ಎಂದಿದೆ. ಇನ್ನು ಉದ್ಘಾಟನೆ ಆಗಿದ್ದು ಯಾವಾಗ? ಯಾರು ಮಾಡಿದ್ದು ಅಂತಾ ಕೇಳಿದ್ರೆ ಯಾವುದೇ ಮಾಹಿತಿ ಇಲ್ಲ ಅಂತ ಇಲಾಖೆ ಹೇಳಿದೆ.

    ನಿಗದಿಗಿಂತ 3 ಪಟ್ಟು ಹಣ ಖರ್ಚು!: ಇನ್ನೊಂದು ಇಂಟರೆಸ್ಟಿಂಗ್ ವಿಷಯ ಅಂದ್ರೆ ವಿಧಾನಸೌಧ ಕಟ್ಟಲು ಅಂದಾಜು ಮಾಡಲಾದ ವೆಚ್ಚ 50 ಲಕ್ಷ ರೂಪಾಯಿ. ಆದ್ರೆ ಕಟ್ಟಡ ಪೂರ್ಣ ಆಗುವ ವೇಳೆಗೆ ಖರ್ಚಾಗಿದ್ದು 184 ಲಕ್ಷ, ಅಂದ್ರೆ 1 ಕೋಟಿ, 84 ಲಕ್ಷ ರೂಪಾಯಿ. ಅಂದ್ರೆ ಬಹುತೇಕ ನಿಗದಿಪಡಿಸಿದಕ್ಕಿಂತ ಮೂರು ಪಟ್ಟು ಹೆಚ್ಚು ಹಣ ಖZರ್ಚಾಗಿದೆ. 1951 ರಲ್ಲಿ ಪ್ರಾರಂಭವಾದ ಕಟ್ಟಡ 5 ವರ್ಷದ ಬಳಿಕ ಅಂದ್ರೆ 1956 ರಲ್ಲಿ ಪೂರ್ಣಗೊಂಡಿದೆ.