Tag: Kendasampige

  • ಗ್ಲ್ಯಾಮರ್‌ ಗೊಂಬೆಯಂತೆ ಮಿಂಚಿದ ‘ಟಗರು’ ಬ್ಯೂಟಿ ಮಾನ್ವಿತಾ

    ಗ್ಲ್ಯಾಮರ್‌ ಗೊಂಬೆಯಂತೆ ಮಿಂಚಿದ ‘ಟಗರು’ ಬ್ಯೂಟಿ ಮಾನ್ವಿತಾ

    ಗರು (Tagaru) ಬ್ಯೂಟಿ ಮಾನ್ವಿತಾ ಕಾಮತ್ (Manvitha) ಹೊಸ ಫೋಟೋಶೂಟ್‌ನಿಂದ ಗಮನ ಸೆಳೆಯುತ್ತಿದ್ದಾರೆ. ಸಖತ್ ಹಾಟ್ & ಬೋಲ್ಡ್ ಆಗಿ ಕಾಣಿಸಿಕೊಳ್ಳುವ ಮೂಲಕ ಪಡ್ಡೆಹುಡುಗರ ನಿದ್ದೆ ಕದ್ದಿದ್ದಾರೆ. ಸದ್ಯ ಕರಾವಳಿ ನಟಿಯ ಫೋಟೋಸ್ ಸೋಶಿಯಲ್‌ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

    ಕಲರ್‌ಫುಲ್ ಮಾಡ್ರನ್ ಡ್ರೆಸ್‌ನಲ್ಲಿ ಮಸ್ತ್ ಆಗಿ ನಟಿ ಕಾಣಿಸಿಕೊಂಡಿದ್ದಾರೆ. ಕ್ಯಾಮೆರಾ ಕಣ್ಣಿಗೆ ವಿವಿಧ ಭಂಗಿಯಲ್ಲಿ ಪೋಸ್ ಕೊಟ್ಟಿದ್ದಾರೆ. ಮಾನ್ವಿತಾ ಗ್ಲ್ಯಾಮರಸ್ ಲುಕ್‌ಗೆ ಪಡ್ಡೆಹುಡುಗರು ಫಿದಾ ಆಗಿದ್ದಾರೆ. ನಟಿಯ ನಯಾ ಲುಕ್‌ಗೆ ಬಗೆ ಬಗೆಯ ಕಾಮೆಂಟ್ಸ್‌ ಹರಿದು ಬರುತ್ತಿವೆ. ಇದನ್ನೂ ಓದಿ:‘ಲಿಯೋ’ ಬಿಡುಗಡೆಗೂ ಮುನ್ನ ಮತ್ತೊಂದು ಸಿನಿಮಾ ಘೋಷಿಸಿದ ವಿಜಯ್

    ದುನಿಯಾ ಸೂರಿ ನಿರ್ದೇಶನದ ಕೆಂಡಸಂಪಿಗೆ ಸಿನಿಮಾ ಮೂಲಕ ಚಿತ್ರರಂಗಕ್ಕೆ ಮಾನ್ವಿತಾ ಪಾದಾರ್ಪಣೆ ಮಾಡಿದರು. ಟಗರು, ಶಿವ 143, ಕನಕ, ರಿಲಾಕ್ಸ್ ಸತ್ಯ, ಚೌಕ, ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇದನ್ನೂ ಓದಿ:‘ಲಿಯೋ’ ಬಿಡುಗಡೆಗೂ ಮುನ್ನ ಮತ್ತೊಂದು ಸಿನಿಮಾ ಘೋಷಿಸಿದ ವಿಜಯ್

    ಶಿವರಾಜ್‌ಕುಮಾರ್ (Shivarajkumar) ನಟನೆಯ ‘ಟಗರು’ ಸಿನಿಮಾದಲ್ಲಿ ಮಾನ್ವಿತಾ ಅದ್ಭುತವಾಗಿ ನಟಿಸಿ ಸೈ ಎನಿಸಿಕೊಂಡಿದ್ದರು. ಕೆಂಡಸಂಪಿಗೆ ಮತ್ತು ಟಗರು ಈ ಎರಡು ಸಿನಿಮಾ, ಮಾನ್ವಿತಾ ವೃತ್ತಿಬದುಕಿನಲ್ಲಿ ಹೈಲೆಟ್ ಆಗಿರುವ ಚಿತ್ರಗಳು.

    2022ರಲ್ಲಿ ಧೀರೆನ್ ರಾಮ್‌ಕುಮಾರ್‌ಗೆ ನಾಯಕಿಯಾಗಿ ‘ಶಿವ 143’ ಚಿತ್ರದಲ್ಲಿ ನಟಿಸಿದ್ದರು. ರಾಜಸ್ಥಾನ ಡೈರೀಸ್, ಹ್ಯಾಪಿ ಮ್ಯಾರೀಡ್ ಇವು ಮುಂಬರುವ ಸಿನಿಮಾಗಳಾಗಿವೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ರಾಜಕೀಯ ಅಖಾಡಕ್ಕಿಳಿದ ಪ್ರಶಾಂತ್ ಸಂಬರ್ಗಿ

    ರಾಜಕೀಯ ಅಖಾಡಕ್ಕಿಳಿದ ಪ್ರಶಾಂತ್ ಸಂಬರ್ಗಿ

    ಬಿಗ್ ಬಾಸ್ (Bigg Boss Kannada) ಶೋ ಮೂಲಕ ಮನೆ ಮಾತಾದ ಪ್ರಶಾಂತ್ ಸಂಬರ್ಗಿ (Prashanth Sambargi) ಇದೀಗ ರಾಜಕೀಯ (Politics) ಅಖಾಡಕ್ಕೆ ಕಾಲಿಟ್ಟಿದ್ದಾರೆ. ಕಿರುತೆರೆಯಲ್ಲಿ ರಾಜಕಾರಣಿಯಾಗಿ ಮಿಂಚಲು ರೆಡಿಯಾಗಿದ್ದಾರೆ. ಇದನ್ನೂ ಓದಿ: ಅಭಿಷೇಕ್ ಅಂಬರೀಶ್ ಮದುವೆ ಬಗ್ಗೆ ಮಾತಾಡಿದ ಸುಮಲತಾ

    ದೊಡ್ಮನೆಯಲ್ಲಿ ತಮ್ಮ ಖಡಕ್ ಮಾತುಗಳಿಂದ ಗಮನ ಸೆಳೆದ ಸ್ಪರ್ಧಿ ಪ್ರಶಾಂತ್ ಸಂಬರ್ಗಿ ಕಿರುತೆರೆಯತ್ತ ಮುಖ ಮಾಡಿದ್ದಾರೆ. `ಕೆಂಡಸಂಪಿಗೆ’ (Kendasampige Serial) ಧಾರಾವಾಹಿಯಲ್ಲಿ ನಾಯಕ ತೀರ್ಥಂಕರ್ ಪ್ರಸಾದ್ ಮುಂದೆ ಸೆಡ್ಡು ಹೊಡೆಯಲು ಸಂಬರ್ಗಿ ಎಂಟ್ರಿ ಕೊಟ್ಟಿದ್ದಾರೆ.

    ಮೊದಲ ಬಾರಿಗೆ ರಾಜಕಾರಣಿ ಪಾತ್ರದ ಮೂಲಕ ಸಂಬರ್ಗಿ ನಟಿಸಿದ್ದಾರೆ. ಭೈರತಿ ಕುಣಿಗಲ್ ಎಂಬ ಪಾತ್ರಕ್ಕೆ ಜೀವ ತುಂಬಿದ್ದಾರೆ. ಈ ಪಾತ್ರದ ಅವಕಾಶ ಮೊದಲು ಹೆಸರಾಂತ ನಟ ಅವಿನಾಶ್‌ಗೆ ಸಿಕ್ಕಿತ್ತು. ಡೇಟ್ ಕ್ಲಾಶ್ ಆದ ಕಾರಣ, ಪ್ರಶಾಂತ್ ಸಂಬರ್ಗಿ ಅವರಿಗೆ ಅವಕಾಶ ಒಲಿದು ಬಂತು.

    ಅತಿಥಿ ಪಾತ್ರದ ಮೂಲಕ ಕಿರುತೆರೆ ಸಿನಿ ಪ್ರೇಕ್ಷಕರಿಗೆ ರಂಜಿಸಲು ಸಂಬರ್ಗಿ ರೆಡಿಯಾಗಿದ್ದಾರೆ. ದೊಡ್ಮನೆಯಲ್ಲಿ ಗಮನ ಸೆಳೆದ ಸಂಬರ್ಗಿ ಈಗ ರಾಜಕಾರಣಿಯಾಗಿ ಟಿವಿ ಪರದೆಯಲ್ಲಿ ಪ್ರೇಕ್ಷಕರ ಮನ ಗೆಲ್ಲುತ್ತಾರಾ ಕಾದುನೋಡಬೇಕಿದೆ.

  • ಕುತ್ತಿಗೆಗೆ ಕಾಜಲ್ ಟ್ಯಾಟೂ ಹಾಕಿಸಿಕೊಂಡ ಮಾನ್ವಿತಾ ಕಾಮತ್

    ಕುತ್ತಿಗೆಗೆ ಕಾಜಲ್ ಟ್ಯಾಟೂ ಹಾಕಿಸಿಕೊಂಡ ಮಾನ್ವಿತಾ ಕಾಮತ್

    ಸ್ಯಾಂಡಲ್‌ವುಡ್ (Sandalwoo) `ಟಗರು’ ಬ್ಯೂಟಿ ಮಾನ್ವಿತಾ ಕಾಮತ್ (Manvitha Kamath),  ಸಿನಿಮಾ ನ್ಯೂಸ್‌ ಜೊತೆ ಒಂದಲ್ಲಾ ಒಂದು ವಿಷ್ಯವಾಗಿ ಸುದ್ದಿಯಲ್ಲಿರುತ್ತಾರೆ. ಇದೀಗ ಕುತ್ತಿಗೆಗೆ ಕಾಜಲ್ ಟ್ಯಾಟೂ ಹಾಕಿಸಿಕೊಳ್ಳುವ ಮೂಲಕ ಸುದ್ದಿಯಲ್ಲಿದ್ದಾರೆ.

    ಕೆಂಡಸಂಪಿಗೆ, ಟಗರು (Tagaru) ಜೊತೆ ಸಾಕಷ್ಟು ಸಿನಿಮಾಗಳಲ್ಲಿ ನಾಯಕಿಯಾಗಿ ಮಿಂಚಿರುವ ಮಾನ್ವಿತಾ ಭಿನ್ನವಾಗಿ ಟ್ಯಾಟೂ ಹಾಕಿಸಿಕೊಳ್ಳುವ ಮೂಲಕ ನೆಟ್ಟಿಗರ ಗಮನ ಸೆಳೆದಿದ್ದಾರೆ. ಸದಾ ಹೊಸ ಬಗೆಯ ಫೋಟೋಶೂಟ್ ಮಾಡಿಸಿಕೊಳ್ಳುವ ಮೂಲಕ ಹೈಲೈಟ್ ಆಗುವ ನಟಿ, ಈಗ ನಾರ್ಮಲ್ ಟ್ಯಾಟೂ ಬದಲು ಕಾಜಲ್ ಟ್ಯಾಟೂ ಹಾಕಿಸಿಕೊಂಡು ಫೋಟೋಶೂಟ್‌ನಲ್ಲಿ ಮಿಂಚಿದ್ದಾರೆ.

    ನಟಿ ಮಾನ್ವಿತಾ ಅವರ ಕುತ್ತಿಗೆಯ ಮೇಲೆ ಅ, ಆ, ಇ, ಈ ಅಂತಾ ಕಾಜಲ್‌ನಲ್ಲಿ ಬರೆಯಲಾಗಿದೆ. ಐಲೈನರ್ ಬ್ರಶ್‌ನಿಂದ ಅಕ್ಷರಮಾಲೆಯನ್ನ ಬರೆಸಿರುವುದು ಇದೀಗ ಅನೇಕರ ಮನಗೆದ್ದಿದೆ. ಸದ್ಯ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ. ಇದನ್ನೂ ಓದಿ: ದಿವ್ಯಾ- ಅರವಿಂದ್ ಮದುವೆ ಆದರೆ ಡಿವೋರ್ಸ್ ಗ್ಯಾರಂಟಿ: ಆರ್ಯವರ್ಧನ್

    ಇನ್ನೂ ಮಾನ್ವಿತಾ ಅವರಿಗೆ ಸವಾಲಿನ ಪಾತ್ರಗಳಲ್ಲಿ ಕಾಣಿಸಿಕೊಳ್ಳುವುದು ಇಷ್ಟ. `ಶಿವ 143′ ನಂತರ ಮತ್ತೆ ಹೊಸ ಬಗೆಯ ಕಥೆಗಳನ್ನ ಕೇಳುತ್ತಿದ್ದಾರೆ. ಸೂಕ್ತ ಕಥೆಯ ಮೂಲಕ ತೆರೆಯ ಮೇಲೆ ಕಾಣಿಸಿಕೊಳ್ಳಲಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • Bigg Boss 9- ‘ಕೆಂಡಸಂಪಿಗೆ’ ಧಾರಾವಾಹಿಯಲ್ಲಿ ದಿಢೀರ್ ಅಂತ ರಾಜೇಶ್ ಸಾವು: ಬಿಗ್ ಬಾಸ್ ಮನೆಗೆ ಬರ್ತಾರಾ ನಟ ಸುನೀಲ್?

    Bigg Boss 9- ‘ಕೆಂಡಸಂಪಿಗೆ’ ಧಾರಾವಾಹಿಯಲ್ಲಿ ದಿಢೀರ್ ಅಂತ ರಾಜೇಶ್ ಸಾವು: ಬಿಗ್ ಬಾಸ್ ಮನೆಗೆ ಬರ್ತಾರಾ ನಟ ಸುನೀಲ್?

    ನ್ನಡದ ಫೇಮಸ್ ಧಾರಾವಾಹಿಯ (Serial) ಬಹುಮುಖ್ಯ ಪಾತ್ರವನ್ನು ದಿಢೀರ್ ಅಂತ ಸಾಯಿಸಲಾಗಿದೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಕೆಂಡಸಂಪಿಗೆ (Kendasampige) ಧಾರಾವಾಹಿ ನೋಡಿದವರಿಗೆ ರಾಜೇಶ್ ಪಾತ್ರವನ್ನು ಮರೆಯುವುದಕ್ಕೆ ಸಾಧ್ಯವೇ ಇಲ್ಲ. ಕಥಾ ನಾಯಕಿಯ ತಮ್ಮನಾಗಿ ರಾಜೇಶ್ (Rajesh) ಫೇಮಸ್. ಈ ಪಾತ್ರದ ಮೂಲಕ ಸಾಕಷ್ಟು ಕುತೂಹಲ ಮೂಡಿಸಿದ್ದ ಧಾರಾವಾಹಿ ದಿಢೀರ್ ಅಂತ ರಾಜೇಶ್ ನನ್ನು ಬೀಳ್ಕೊಟ್ಟಿದೆ.

    ಕೆಂಡಸಂಪಿಗೆ ಕಥಾ ನಾಯಕಿಯ ಜೊತೆ ಸದಾ ಇರುತ್ತಿದ್ದ ರಾಜೇಶ್ ಪಾತ್ರವನ್ನು ಅಚ್ಚರಿ ಎನ್ನುವಂತೆ ಸಾಯಿಸಲಾಗಿದ್ದು, ಇದಕ್ಕೆ ಕಾರಣ ಆ ಹುಡುಗನನ್ನು ಬಿಗ್ ಬಾಸ್ (Bigg Boss Season 9) ಮನೆಗೆ ಕಳುಹಿಸುವ ಪ್ಲ್ಯಾನ್ ಮಾಡಲಾಗಿದೆಯಂತೆ. ಹಾಗಾಗಿ ಬೇಗನೆ ಪಾತ್ರವನ್ನು ಸಾಯಿಸಿ, ತರಾತುರಿಯಲ್ಲಿ ಈ ಪಾತ್ರವನ್ನು ಮಾಡುತ್ತಿದ್ದ ಸುನೀಲ್ (Sunil) ನನ್ನು ಬಿಗ್ ಬಾಸ್ ಸೀಸನ್ 9 ಕ್ಕೆ ಕಳುಹಿಸಿ ಕೊಡಲಾಗಿದೆ ಎನ್ನುವ ಮಾಹಿತಿ ಇದೆ. ಅದು ನಾಳೆ ಅಧಿಕೃತಗೊಳ್ಳಲಿದೆ. ಇದನ್ನೂ ಓದಿ:‘ಬಿಗ್ ಬಾಸ್’ ಮನೆಗೆ ಬ್ರಹ್ಮಾಂಡ ಗುರೂಜಿ ಹೋದರೆ ಮಜವಾಗಿರತ್ತೆ ಅಂತಿದ್ದಾರೆ ನೆಟ್ಟಿಗರು

    ಶನಿ (Shani) ಧಾರಾವಾಹಿಯ ಮೂಲಕ ಫೇಮಸ್ ಆದವರು ಸುನೀಲ್. ಈ ಧಾರಾವಾಹಿಯ ಮೂಲಕ ಸಾಕಷ್ಟು ಅಭಿಮಾನಿ ಬಳಗ ಹೊಂದಿರುವ ಸುನೀಲ್, ಈ ಬಾರಿ ಬಿಗ್ ಬಾಸ್ ಮನೆಗೆ ಹೋಗಲಿದ್ದಾರೆ ಎನ್ನುವ ಸುದ್ದಿ ಹಲವು ದಿನಗಳಿಂದ ಚಾಲ್ತಿಯಲ್ಲಿತ್ತು. ಇದೀಗ ಅವರು ನಿರ್ವಹಿಸುತ್ತಿದ್ದ ರಾಜೇಶ್ ಪಾತ್ರವನ್ನು ಸಾಯಿಸಿದ್ದಕ್ಕಾಗಿ ಸುದ್ದಿ ಮಹತ್ವ ಪಡೆದುಕೊಂಡಿದೆ. ನಾಳೆಯಿಂದ ಬಿಗ್ ಬಾಸ್ ಸೀಸನ್ 9 ಶುರುವಾಗಲಿದ್ದು, ಆ ಮನೆಯಲ್ಲಿ ಸುನೀಲ್ ಇರುತ್ತಾರಾ ಕಾದು ನೋಡಬೇಕು.

    ಬಿಗ್ ಬಾಸ್ ಸೀಸನ್ 9 ನಾಳೆಯಿಂದ ಶುರುವಾಗುತ್ತಿದ್ದು, ಈಗಾಗಲೇ ಹಲವು ಅಚ್ಚರಿಯ ಹೆಸರುಗಳು ಕೇಳಿ ಬಂದಿವೆ. ನಟಿ ಪ್ರೇಮಾ (Prema), ನವೀನ್ ಕೃಷ್ಣ ಸೇರಿದಂತೆ ಹಲವಾರು ನಟ ನಟಿಯರ ಹೆಸರು ಈ ಪಟ್ಟಿಯಲ್ಲಿವೆ. ಅಲ್ಲದೇ, ಬಿಗ್ ಬಾಸ್ ಓಟಿಟಿಯ ನಾಲ್ಕು ಸ್ಪರ್ಧಿಗಳು ಕೂಡ ಹೊಸ ಬಿಗ್ ಬಾಸ್ ಮನೆಯನ್ನು ಸೇರಿಕೊಳ್ಳುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]