Tag: Kendada Seragu

  • Kendada Seragu: ‘ಈ ಹುಡುಗಿ ಎಷ್ಟು ಚೆಂದ’ ಎಂದು ಹೆಜ್ಜೆ ಹಾಕಿದ ಹರೀಶ್ ಅರಸು-ಪೂರ್ಣಿಮಾ

    Kendada Seragu: ‘ಈ ಹುಡುಗಿ ಎಷ್ಟು ಚೆಂದ’ ಎಂದು ಹೆಜ್ಜೆ ಹಾಕಿದ ಹರೀಶ್ ಅರಸು-ಪೂರ್ಣಿಮಾ

    ಸ್ಯಾಂಡಲ್‌ವುಡ್ ಕನಸಿನ ರಾಣಿ ಮಾಲಾಶ್ರೀ (Malashree) ನಟನೆಯ ಕೆಂಡದ ಸೆರಗು (Kendada Seragu) ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. ಕಾದಂಬರಿ ಆಧಾರಿತ ಈ ಚಿತ್ರ ಶೂಟಿಂಗ್ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದೆ. ಇದೀಗ ಈ ಕೆಂಡದ ಸೆರಗು ಸಿನಿಮಾದ ಎರಡನೇ ಹಾಡು ಅನಾವರಣಗೊಂಡಿದೆ. ಮಸ್ತ್ ಆಗಿರುವ ಚೆಂದದ ಹುಡುಗಿ ಜೊತೆ ಯುವ ನಟ ಹರೀಶ್ ಅರಸು (Harish Arasu) ಹೆಜ್ಜೆ ಹಾಕಿದ್ದಾರೆ.

    ‘ಕೆಂಡದ ಸೆರಗು’ ಚಿತ್ರವನ್ನು ನಿರ್ದೇಶಿಸಿರುವ ರಾಕಿ ಸೋಮ್ಲಿ ‘ಈ ಹುಡುಗಿ ಎಷ್ಟು ಚೆಂದ’ ಹಾಡಿಗೆ ಸಾಹಿತ್ಯ ಬರೆದಿದ್ದು, ಅನಿರುದ್ಧ್ ಶಾಸ್ತ್ರೀ ಕಂಠ ಕುಣಿಸಿದ್ದು, ವೀರೇಶ್ ಕಬ್ಲಿ ಟ್ಯೂನ್ ಹಾಕಿದ್ದಾರೆ. ಪಿಆರ್‌ಒ ಕಂ ಯುವ ನಟ ಹರೀಶ್ ಅರಸು ಹಾಗೂ ಪೂರ್ಣಿಮಾ ಹಾಡಿಗೆ ಭರ್ಜರಿ ಹೆಜ್ಜೆ ಹಾಕಿದ್ದಾರೆ. ಇದನ್ನೂ ಓದಿ:ವೈರಲ್ ಆಯಿತು ಭಟ್ಟರ ‘ಕರಟಕ ದಮನಕ’ ಸಿನಿಮಾ ಪೋಸ್ಟರ್

    ಕುಸ್ತಿ ಸುತ್ತ ಹೆಣೆಯಲಾದ ಚಿತ್ರದಲ್ಲಿ ಕನಸಿನ ರಾಣಿ ಮಾಲಾಶ್ರೀ ಪೊಲೀಸ್ ಕಮಿಷನರ್ ಪಾತ್ರದಲ್ಲಿ ನಟಿಸಿದ್ದು, ‘ಬಿಗ್‌ ಬಾಸ್‌’ ಖ್ಯಾತಿಯ ಭೂಮಿ ಶೆಟ್ಟಿ ಕುಸ್ತಿ ಪಟುವಾಗಿ ಬಣ್ಣ ಹಚ್ಚಿದ್ದಾರೆ. ನಿರ್ದೇಶಕ ರಾಕಿ ಸೋಮ್ಲಿ ಬರೆದ ‘ಕೆಂಡದ ಸೆರಗು’ ಕಾದಂಬರಿ ಆಧಾರಿತ ಚಿತ್ರ ಇದಾಗಿದೆ.

    ಶ್ರೀ ಮುತ್ತು ಟಾಕೀಸ್ ಮತ್ತು ಎಸ್.ಕೆ ಪ್ರೊಡಕ್ಷನ್ಸ್ ಬ್ಯಾನರ್ ಅಡಿ ಕೆ. ಕೊಟ್ರೇಶ್ ಗೌಡ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಯಶ್ ಶೆಟ್ಟಿ, ವರ್ಧನ್ ತೀರ್ಥಹಳ್ಳಿ, ಪ್ರತಿಮಾ, ಹರೀಶ್ ಅರಸು, ಬಸು ಹಿರೇಮಠ್, ಶೋಭಿತ, ಸಿಂಧು ಲೋಕನಾಥ್ ಚಿತ್ರದ ತಾರಾಬಳಗದಲ್ಲಿದ್ದಾರೆ. ವಿಪಿನ್ ವಿ ರಾಜ್ ಛಾಯಾಗ್ರಹಣ, ವೀರೇಶ್ ಕಂಬ್ಲಿ ಸಂಗೀತ ನಿರ್ದೇಶನ, ಶ್ರೀಕಾಂತ್ ಸಂಕಲನ ಚಿತ್ರಕ್ಕಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ‘ಕೆಂಡದ ಸೆರಗು’ ಚಿತ್ರಕ್ಕೆ ಡಬ್ಬಿಂಗ್ ಮುಗಿಸಿದ ಕನಸಿನರಾಣಿ ಮಾಲಾಶ್ರೀ

    ‘ಕೆಂಡದ ಸೆರಗು’ ಚಿತ್ರಕ್ಕೆ ಡಬ್ಬಿಂಗ್ ಮುಗಿಸಿದ ಕನಸಿನರಾಣಿ ಮಾಲಾಶ್ರೀ

    ಕೆಂಡದ ಸೆರಗು (Kendada Seragu) ಎನ್ನುವ ಕುಸ್ತಿ ಆಧಾರಿತ ಕಾದಂಬರಿ ಸಿನಿಮಾದಲ್ಲಿ ಬಹುಮುಖ್ಯ ಪಾತ್ರದಲ್ಲಿ ನಟಿಸಿರುವ ಮಾಲಾಶ್ರೀ (Malashree) ಅವರು ತಾವೇ ಸ್ವತಃ ಡಬ್ಬಿಂಗ್ (Dubbing) ಮಾಡಿ ಮುಗಿಸಿದ್ದಾರೆ. ಮಾಲಾಶ್ರೀ ಅವರು ನಟಿಸಿರುವ ಸಿನಿಮಾಗಳಲ್ಲಿ ಕೆಲವೇ ಕೆಲವು ಸಿನಿಮಾಗಳಿಗೆ  ಮಾತ್ರ ತಮ್ಮ ಧ್ವನಿ ಕೊಡುತ್ತಾರೆ. ತುಂಬ ವರ್ಷಗಳ ನಂತರ ಕೆಂಡದ ಸೆರಗು ಸಿನಿಮಾಗೆ ಮಾಲಾಶ್ರೀ ಅವರು ಧ್ವನಿ ಕೊಟ್ಟಿದ್ದು ಚಿತ್ರತಂಡಕ್ಕೆ ಮತ್ತೊಂದು ಶಕ್ತಿ ಇದ್ದಂತೆ ಎಂದು ತಿಳಿಸಿದ್ದಾರೆ ನಿರ್ದೇಶಕ ರಾಕಿ‌ ಸೋಮ್ಲಿ (Rocky Somli) ಅವರು.

    ಈ ಹಿಂದೆ ಕೆಂಡದ ಸೆರಗು ಸಿನಿಮಾದ ಪ್ರೆಸ್ ಮಿಟ್ ನಲ್ಲಿ ಮಾತಾನಾಡಿದ್ದ ಮಾಲಾಶ್ರೀ ಅವರು, ಕೆಂಡದ ಸೆರಗು ದೇಶಿಯ ಕುಸ್ತಿ ಕಥೆಯ ಜೊತೆಗೆ ಹೃದಯ ಅಂಟುವ ಭಾವನಾತ್ಮಕ ಸಮಾಜಕ್ಕೆ ಒಳ್ಳೆಯ ಸಂದೇಶ ಕೊಡುವ ಸಿನಿಮಾ, ಒಂದೊಂದು ಪಾತ್ರವೂ ಸಹ ತುಂಬ ವಿಶೇಷವಾದ ಪಾತ್ರಗಳು. ತಂಡದ ಪ್ರತಿ ಒಬ್ಬರು ಸಹ ಸಿನಿಮಾವನ್ನು ಆರಾಧಿಸುವ ತಂತ್ರಜ್ಞಾನದ ತಂಡ. ನಾನು ತುಂಬ ಖುಷಿಯಿಂದ ಸೆಟ್ ನಲ್ಲಿ ಪ್ರೀತಿಯಿಂದ ಕೆಲಸ ಮಾಡಿದ್ದೇನೆ. ತಂಡದ ಪ್ರತಿ ಒಬ್ಬರು ಸಹ ತುಂಬಾನೇ ಶ್ರಮವಹಿಸಿ ಈ ಸಿನಿಮಾದ ಕೆಲಸ ಮಾಡುತ್ತಿದ್ದಾರೆ. ಖಂಡಿತವಾಗಿ ಇದು ಗೆಲ್ಲುವ ಸಿನಿಮಾ. ಈ ವರ್ಷದ ಸಾಲಿನಲ್ಲಿ ನಿಲ್ಲುವ ಸಿನಿಮಾ. ಈ ತಂಡದ ಜೊತೆಗೆ ನಾ ಸದಾ ಇರುತ್ತೇನೆ ಎಂದಿದ್ದರು. ಇದನ್ನೂ ಓದಿ:ಕೆಂಪು ಬಣ್ಣದ ಸೀರೆಯಲ್ಲಿ ಗ್ಲ್ಯಾಮರಸ್ ಆಗಿ ಮಿಂಚಿದ ಮಾನ್ವಿತಾ

    ಚಿತ್ರಿಕರಣ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿರುವ ಕೆಂಡದ ಸೆರಗು ಇನ್ನೆರಡು ತಿಂಗಳಲ್ಲಿ ಬಿಡುಗಡೆಗೆ ನೀರಿಕ್ಷೆಯಲ್ಲಿದೆ. ಸಿನಿಮಾದಲ್ಲಿ ಒಟ್ಟು ನಾಲ್ಕು ಫೈಟ್, ಆರು ಹಾಡುಗಳಿದ್ದು ಈಗಾಗಲೇ ಒಂದು ಹಾಡು ಮತ್ತು ಸಿನಿಮಾದ ಟೀಸರ್ ಬಿಡುಗಡೆ ಆಗಿದೆ. ಇನ್ನೂ ಉಳಿದ ತಾರಾಗಣದಲ್ಲಿ ಯಶ್ ಶೆಟ್ಟಿ, ವರ್ಧನ್, ಬಾಲುರಾಜ್ ವಾಡಿ, ಶೋಭಿತ, ಹರೀಶ್ ಅರಸು, ಪ್ರತಿಮಾ, ಮೋಹನ್, ಸಿಂಧನೂರು ಉಮೇಶ್, ಸಿಂಧೂ ಲೋಕನಾಥ್ ಅಭಿನಯಿಸಿದ್ದಾರೆ.

    ಈ ಚಿತ್ರಕ್ಕೆ ವಿಪಿನ್ ರಾಜ್ ಅವರ ಛಾಯಾಗ್ರಹಣ, ವೀರೇಶ್ ಕಬ್ಳಿ ಅವರ ಸಂಗೀತ, ಶ್ರೀಕಾಂತ್ ಅವರ ಸಂಕಲನ, ಶ್ರೀಮುತ್ತು ಟಾಕೀಸ್ ಅಡಿಯಲ್ಲಿ, ಕೊಟ್ರೇಶ್ ಗೌಡ ಅವರು ಬಂಡವಾಳ ಹೂಡಿದ್ದು  ಗೆಲ್ಲುವ ಎಲ್ಲಾ ಸಿದ್ದತೆ ಮಾಡಿಕೊಂಡಿದೆ ಚಿತ್ರತಂಡ.

  • ‘ಕೆಂಡದ ಸೆರಗು’ ಚಿತ್ರಕ್ಕಾಗಿ ಒಂದಾದ ಮಾಲಾಶ್ರೀ ಮತ್ತು ಭೂಮಿ ಶೆಟ್ಟಿ : ಟೀಸರ್ ರಿಲೀಸ್

    ‘ಕೆಂಡದ ಸೆರಗು’ ಚಿತ್ರಕ್ಕಾಗಿ ಒಂದಾದ ಮಾಲಾಶ್ರೀ ಮತ್ತು ಭೂಮಿ ಶೆಟ್ಟಿ : ಟೀಸರ್ ರಿಲೀಸ್

    ರಾಕಿ ಸೋಮ್ಲಿ ಚೊಚ್ಚಲ ನಿರ್ದೇಶನದಲ್ಲಿ ಭೂಮಿ ಶೆಟ್ಟಿ ಮುಖ್ಯ ಭೂಮಿಕೆಯ ಹಾಗೂ ಕನಸಿನ ರಾಣಿ ಮಾಲಾಶ್ರೀ ನಟಿಸಿರುವ ‘ಕೆಂಡದ ಸೆರಗು’ ಸಿನಿಮಾದ ಟೀಸರ್ ಬಿಡುಗಡೆಯಾಗಿದೆ. ಈ ಚಿತ್ರ ನಿರ್ದೇಶಕ ರಾಕಿ ಸೋಮ್ಲಿ ಬರೆದ ‘ಕೆಂಡದ ಸೆರಗು’ ಕಾದಂಬರಿ ಆಧಾರಿತ ಸಿನಿಮಾ. ಕುಸ್ತಿ ಸುತ್ತ ಹೆಣೆಯಲಾದ ಚಿತ್ರದಲ್ಲಿ ಕನಸಿನ ರಾಣಿ ಮಾಲಾಶ್ರೀ ಪೊಲೀಸ್ ಕಮಿಷನರ್ ಪಾತ್ರದಲ್ಲಿ ನಟಿಸಿದ್ದು, ಭೂಮಿ ಶೆಟ್ಟಿ ಕುಸ್ತಿ ಪಟುವಾಗಿ ಬಣ್ಣಹಚ್ಚಿದ್ದಾರೆ. ಟೀಸರ್ ಬಿಡುಗಡೆ ಮಾಡುವ ಮೂಲಕ ಚಿತ್ರತಂಡ ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಂಡಿದೆ.

    ನಟಿ ಮಾಲಾಶ್ರೀ ಮಾತನಾಡಿ ಒಂದೊಳ್ಳೆ ಸಬ್ಜೆಕ್ಟ್ ಚಿತ್ರದಲ್ಲಿದೆ. ಸಿನಿಮಾ ಕೆಲಸ ಆದ ಮೇಲೆ ಒಮ್ಮೆ ನನಗೆ ತೋರಿಸಿ ಎಂದು ಹೇಳಿದ್ದೆ ರಫ್ ಸ್ಕೆಚ್ ನೋಡಿದ್ದೀನಿ ತುಂಬಾ ಚೆನ್ನಾಗಿ ಬಂದಿದೆ ಸಿನಿಮಾ. ನಾನು ಪೋಲೀಸ್ ಪಾತ್ರ ತುಂಬಾ ಮಾಡಿದ್ದೀನಿ ಆದ್ರೆ ಇಲ್ಲಿವರೆಗೆ ಮಾಡಿರುವ ಪಾತ್ರಕ್ಕಿಂತ ಡಿಫ್ರೆಂಟ್ ಫೀಲ್ ಈ ಪಾತ್ರ ನೀಡಿದೆ. ಈ ಚಿತ್ರ ಕೇವಲ ಕುಸ್ತಿ ಬಗ್ಗೆ ಅಂತಲ್ಲ ಹೆಣ್ಣುಮಗಳೊಬ್ಬಳ ನೋವಿನ ಕಥೆ ಚಿತ್ರದಲ್ಲಿದೆ. ಒಂದೊಳ್ಳೆ ಮೆಸೇಜ್ ಚಿತ್ರದಲ್ಲಿದೆ. ಈ ಸಿನಿಮಾದ ಭಾಗವಾಗಿದ್ದಕ್ಕೆ ತುಂಬಾ ಖುಷಿ ಇದೆ. ನಾನೇ ಈ ಚಿತ್ರಕ್ಕೆ ಡಬ್ ಮಾಡುತ್ತಿದ್ದೇನೆ ಎಂದು ಸಿನಿಮಾ ಬಗ್ಗೆ ಸಂತಸ ಹಂಚಿಕೊಂಡ್ರು. ಇದನ್ನೂ ಓದಿ: ಸಾನ್ಯ ಅಯ್ಯರ್‌ ಬೆರಳಲ್ಲಿ ಶೆಟ್ಟಿ ವಧು ಧರಿಸುವ ರಿಂಗ್ ನೋಡಿ ಶಾಕ್‌ ಆದ ನೆಟ್ಟಿಗರು

    ನಿರ್ದೇಶಕ ರಾಕಿ ಸೋಮ್ಲಿ ಮಾತನಾಡಿ ‘ಕೆಂಡದ ಸೆರಗು’ ನಾನೇ ಬರೆದ ಕಾದಂಬರಿ ಆಧಾರಿತ ಸಿನಿಮಾ. ನಿರ್ಮಾಪಕ ಕೊಟ್ರೇಶ್ ಹಾಗೂ ನಾನು ಇಬ್ಬರು ಸ್ನೇಹಿತರು. ಅವರಿಗೆ ನಾನು ಈ ಕಾದಂಬರಿ ಬಗ್ಗೆ ಹೇಳಿದಾಗ. ಸಿನಿಮಾ ಮಾಡೋಣ ಎಂದು ಹೇಳಿದ್ರು. ಭೂಮಿ ಶೆಟ್ಟಿ ತಮ್ಮ ಪಾತ್ರವನ್ನು ಅದ್ಭುತವಾಗಿ ನಿಭಾಯಿಸಿದ್ದಾರೆ. ಸಿನಿಮಾ ಮಾಡುವಾಗ ಮಾಲಾಶ್ರೀ ಮೇಡಂ ಕೈನಲ್ಲಿ ಒಂದು ಪಾತ್ರ ಮಾಡಿಸಬೇಕು ಎಂದು ಒಂದು ಆಲೋಚನೆ ಬಂತು. ಕಥೆ ಕೇಳಿದ ಮೇಲೆ ಒಪ್ಪಿಕೊಂಡ್ರು. ಸಿನಿಮಾ ಚಿತ್ರೀಕರಣದಲ್ಲೂ ಸಪೋರ್ಟ್ ಮಾಡಿದ್ರು. ಕಮರ್ಶಿಯಲ್ ಆಗಿ ಮೂಡಿ ಬಂದಿದೆ. ಕುಸ್ತಿಗೆ ಹೆಚ್ಚು ಫೋಕಸ್ ನೀಡಲಾಗಿದೆ. ಡಬ್ಬಿಂಗ್ ಕೆಲಸ ನಡೆಯುತ್ತಿದೆ ಚಿತ್ರದಲ್ಲಿ ಆರು ಹಾಡುಗಳಿವೆ ಎಂದು ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಂಡ್ರು.

    ನಾಯಕಿ ಭೂಮಿ ಶೆಟ್ಟಿ ಮಾತನಾಡಿ ಮಹಿಳೆ ಎಲ್ಲಿ ಪ್ರಧಾನವಾಗಿರುತ್ತಾಳೆ ಆ ರೀತಿಯ ಪಾತ್ರ ಮಾಡಲು ನಾನು ಕಾತುರದಿಂದ ಕಾಯುತ್ತಿದ್ದೆ. ಅದೇ ಸಮಯದಲ್ಲಿ ಕೆಂಡದ ಸೆರಗು ಸಿನಿಮಾ ಸಿಕ್ತು. ಕಥೆ, ಅದರ ಸುತ್ತಮುತ್ತ ಇರುವ ಪಾತ್ರಗಳು, ಸಿನಿಮಾದಲ್ಲಿನ ಶೇಡ್ ಎಲ್ಲವನ್ನು ಕೇಳಿ ಇಷ್ಟವಾಯ್ತು. ಚಾಲೆಂಜಿಂಗ್ ಪಾತ್ರ ನಾನು ಮಾಡಲೇಬೇಕು ಎಂದು ಒಪ್ಪಿಕೊಂಡೆ. ಕುಸ್ತಿಗೆ ಹಂಡ್ರೆಡ್ ಪರ್ಸೆಂಟ್ ಗಿಂತ ಜಾಸ್ತಿ ಎಫರ್ಟ್ ಹಾಕಿದ್ದೇನೆ. ನನ್ನ ಪಾತ್ರಕ್ಕಿರುವ ಶೇಡ್ಸ್ ತುಂಬಾ ಚೆನ್ನಾಗಿದೆ. ಸಮಾಜದಲ್ಲಿ ವೇಶ್ಯೆ ಹಾಗೂ ಆಕೆಯ ಮಗಳನ್ನು ಬೇರೆಯದ್ದೇ ರೀತಿ ನೋಡುತ್ತಾರೆ ಆದ್ರೆ ಆಕೆಗೂ ಅವಕಾಶ ನೀಡಿದ್ರೆ ಏನ್ ಬೇಕಿದ್ರು ಸಾಧಿಸುತ್ತಾಳೆ ಎನ್ನುವ ಎಳೆ ಚಿತ್ರದ್ದು. ತುಂಬಾ ಚೆನ್ನಾಗಿ ಮೂಡಿ ಬಂದಿದೆ ಎಲ್ಲರೂ ಸಪೋರ್ಟ್ ಮಾಡಿ ಎಂದು ಪಾತ್ರದ ಬಗ್ಗೆ ಮಾಹಿತಿ ಹಂಚಿಕೊಂಡ್ರು.

    ನಿರ್ಮಾಪಕ ಕೆ. ಕೊಟ್ರೇಶ್  ಗೌಡ ಮಾತನಾಡಿ ದಾವಣಗೆರೆಯಲ್ಲಿ ನನ್ನದೊಂದು ಬೀಡ ಅಂಗಡಿ ಇದೆ. ಸಿನಿಮಾ ಮಾಡಬೇಕು ಎಂದು ನಾನು ರಾಕಿ ಸೋಮ್ಲಿ ಮಾತನಾಡುತ್ತಿದ್ವಿ. ಪ್ರೊಡ್ಯೂಸರ್ ಗಾಗಿ ಒಂದು ವರ್ಷ ಹುಡುಕಾಟ ನಡೆಸಿದ್ವಿ ನಂತರ ನಂದೇ ಒಂದು ಸೈಟ್ ಇತ್ತು, ಬಂಗಾರ ಇತ್ತು ಅದನ್ನು ಮಾರಿ ಸಿನಿಮಾ ಮಾಡಿದ್ದೀನಿ. ರಾಕಿ ನನ್ನ ಸ್ನೇಹಿತ ಅತನಿಗೆ ಸಪೋರ್ಟ್ ಮಾಡಬೇಕು, ಜೊತೆಗೆ ಕೆಂಡದ ಸೆರಗು ಪುಸ್ತಕದಲ್ಲಿ ಕುಸ್ತಿ ಬಗ್ಗೆ ತುಂಬಾ ಡಿಟೈಲ್ ಆಗಿ ಬರೆದಿದ್ದಾರೆ. ಸಿನಿಮಾ ಮಾಡಿದ್ರೆ ಕ್ಲಿಕ್ ಆಗುತ್ತೆ ಎಂದು ಬಂಡವಾಳ ಹಾಕಿದ್ದೀನಿ ಸಿನಿಮಾ ತುಂಬಾ ಚೆನ್ನಾಗಿ ಮೂಡಿ ಬಂದಿದೆ ಎಂದು ತಿಳಿಸಿದ್ರು.  ಶ್ರೀ ಮುತ್ತು ಟಾಕೀಸ್ ಮತ್ತು ಎಸ್ ಕೆ ಪ್ರೊಡಕ್ಷನ್ಸ್ ಬ್ಯಾನರ್ ನಡಿ ಕೆ.ಕೊಟ್ರೇಶ್ ಗೌಡ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಯಶ್ ಶೆಟ್ಟಿ, ವರ್ಧನ್ ತೀರ್ಥಹಳ್ಳಿ, ಪ್ರತಿಮಾ. ಹರೀಶ್ ಅರಸು, ಬಸು ಹಿರೇಮಠ್, ಶೋಭಿತ, ಸಿಂಧು ಲೋಕನಾಥ್ ಚಿತ್ರದ ತಾರಾಬಳಗದಲ್ಲಿದ್ದಾರೆ. ವಿಪಿನ್ ವಿ ರಾಜ್ ಛಾಯಾಗ್ರಹಣ, ವೀರೇಶ್ ಕಂಬ್ಲಿ ಸಂಗೀತ ನಿರ್ದೇಶನ, ಶ್ರೀಕಾಂತ್ ಸಂಕಲನ ಚಿತ್ರಕ್ಕಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k