Tag: kempegowda

  • ಬೆಂಗಳೂರನ್ನು ಶಕ್ತಿ ಕೇಂದ್ರವನ್ನಾಗಿಸುವುದು ನಮ್ಮ ಉದ್ದೇಶ: ಅಶ್ವಥ್ ನಾರಾಯಣ

    ಬೆಂಗಳೂರನ್ನು ಶಕ್ತಿ ಕೇಂದ್ರವನ್ನಾಗಿಸುವುದು ನಮ್ಮ ಉದ್ದೇಶ: ಅಶ್ವಥ್ ನಾರಾಯಣ

    ಕೋಲಾರ: ಬೆಂಗಳೂರನ್ನು (Bengaluru) ಶಕ್ತಿ ಕೇಂದ್ರವನ್ನಾಗಿ ಮಾಡುವುದು ನಮ್ಮ ಉದ್ದೇಶ ಕೆಂಪೇಗೌಡರು (Kempe Gowda) ನಮ್ಮ ಇಡೀ ನಾಡಿಗೆ ಪ್ರೇರಣಾ ಶಕ್ತಿ. ಇಡೀ ವಿಶ್ವದ ಗಮನ ಸೆಳೆಯುವ ನಿಟ್ಟಿನಲ್ಲಿ ಬೆಂಗಳೂರು ಅಭಿವೃದ್ಧಿಯಾಗುತ್ತಿದೆ ಹಾಗಾಗಿ ಕೆಂಪೇಗೌಡರು ನಮಗೆಲ್ಲಾ ಪ್ರೇರಣೆ, ಸ್ಪೂರ್ತಿಯಾಗಬೇಕು ಎಂದು ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ (Ashwathnarayan)  ಹೇಳಿದರು.

    ಕೋಲಾರದಲ್ಲಿ (Kolara) ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಬೆಂಗಳೂರು ನಿರ್ಮಾತೃ ಕೆಂಪೇಗೌಡರವರನ್ನು ವಿಶ್ವಕ್ಕೆ ಪರಿಚಯಿಸುವ ಉದ್ದೇಶದಿಂದ ನಮ್ಮ ಸರ್ಕಾರ ಕೆಂಪೇಗೌಡರ ಪ್ರತಿಮೆ ನಿರ್ಮಿಸಿದೆ. ಈ ಪ್ರತಿಮೆಯನ್ನು ಪ್ರಧಾನಿ ನರೇಂದ್ರ ಮೋದಿ (Narendra Modi) ಉದ್ಘಾಟನೆ ಮಾಡಲಿದ್ದಾರೆ. ಇದನ್ನೂ ಓದಿ: ಉಭಯ ದೇಶಗಳ ಪಾಲುದಾರಿಕೆಗೆ ಉತ್ಸುಕನಾಗಿದ್ದೇನೆ – ಮೋದಿ ಜೊತೆ ಸುನಾಕ್ ಮಾತು

    ಇದೇ ವೇಳೆ ಸಚಿವ ಸಂಪುಟ ವಿಸ್ತರಣೆ ವಿಚಾರವಾಗಿ ಪ್ರತಿಕ್ರಿಯಿಸಿದ ಸಚಿವರು ಅದು ಮುಖ್ಯಮಂತ್ರಿಗಳ ವಿವೇಚನೆಗೆ ಬಿಟ್ಟ ವಿಚಾರ ಅದನ್ನು ಹೈಕಮಾಂಡ್ ತೀರ್ಮಾನ ಮಾಡುತ್ತದೆ ಎಂದು ಸ್ಪಷ್ಟನೆ ನೀಡಿದರು. ಇದನ್ನೂ ಓದಿ: ಕೇಂದ್ರೀಕೃತ ಕೈಗಾರಿಕಾ ತಪಾಸಣಾ ವ್ಯವಸ್ಥೆ: ಕರ್ನಾಟಕಕ್ಕೆ ‘ಚಿನ್ನ’

    Live Tv
    [brid partner=56869869 player=32851 video=960834 autoplay=true]

  • ತುಪ್ಪದ ಬೆಡಗಿ ರಾಗಿಣಿಯ ನ್ಯೂ ಫೋಟೋಶೂಟ್

    ತುಪ್ಪದ ಬೆಡಗಿ ರಾಗಿಣಿಯ ನ್ಯೂ ಫೋಟೋಶೂಟ್

    ಸೌಂದರ್ಯದ ಜೊತೆ ಪ್ರತಿಭೆಯಿರೋ ಸ್ಯಾಂಡಲ್‌ವುಡ್ ಮುದ್ದು ನಟಿ ರಾಗಿಣಿ ದ್ವಿವೇದಿ, ಕಿಚ್ಚ ಸುದೀಪ್‌ಗೆ ನಾಯಕಿಯಾಗುವ ಮೂಲಕ ಬಣ್ಣದ ಲೋಕಕ್ಕೆ ಪಾದರ್ಪಣೆ ಮಾಡಿದ್ರು. ಈಗ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಜೊತೆಗೆ ಕಲರ್‌ಫುಲ್ ಫೋಟೋಶೂಟ್‌ನಿಂದ ಗಮನ ಸೆಳೆಯುತ್ತಿದ್ದಾರೆ. ಸದ್ಯ ರಾಗಿಣಿ ನಯಾ ಫೋಟೋಸ್ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗ್ತಿದೆ.

    `ತುಪ್ಪ ಬೇಕಾ ತುಪ್ಪ’ ಅಂತಾ ಗಂಡ್ ಹೈಕ್ಳ ಹಾರ್ಟಿಗೆ ಲಗ್ಗೆಯಿಟ್ಟ ಸುಂದರಿ ರಾಗಿಣಿ ಮತ್ತೆ ಸಿನಿಮಾಗಳತ್ತ ಆಕ್ಟೀವ್ ಆಗಿದ್ದಾರೆ. ರಾಗಿಣಿ ಲಿಸ್ಟ್ನಲ್ಲಿ ಕೈತುಂಬಾ ಚಿತ್ರಗಳಿವೆ. ಶೂಟಿಂಗ್ ಮಧ್ಯೆ ಸ್ವಲ್ಪ ಫ್ರೀ ಮಾಡಿಕೊಂಡು, ಇದೀಗ ನಟಿ ಬೋಲ್ಡ್ ಲುಕ್ಕಿನಲ್ಲಿ ಕಣ್ಣು ಕುಕ್ಕುವಂತೆ ಫೋಟೋಶೂಟ್ ಮಾಡಿಸಿದ್ದಾರೆ.

    ಕಲರ್‌ಫುಲ್ ಲುಕ್ಕಿನಲ್ಲಿ ಬೋಲ್ಡ್ ಅವತಾರದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ರಾಗಿಣಿ ನ್ಯೂ ಲುಕ್ ನೋಡಿ ಫ್ಯಾನ್ಸ್ ದಿಲ್ ಖುಷ್ ಆಗಿದ್ದಾರೆ. ಇದನ್ನೂ ಓದಿ:‘BOSS’ ಪಟ್ಟ ಅಲಂಕರಿಸಿದ ಯಶ್ : ಟ್ವಿಟರ್ ಟ್ರೆಂಡಿಂಗ್ ನಲ್ಲಿ #YASHBOSS

    View this post on Instagram

     

    A post shared by Ragini dwivedi (@rraginidwivedi)

    ಸದ್ಯ ರಾಗಿಣಿ ಕೈಯಲ್ಲಿ `ಸಾರಿ ಕರ್ಮ ರಿಟನ್ಸ್’, `ಒನ್ ಟು ಒನ್’,`ಜಾನಿವಾಕರ್’, ಮತ್ತು `ಕರ್ವ 3′ ಚಿತ್ರಗಳಿವೆ. ಕನ್ನಡ ಮಾತ್ರವಲ್ಲದೇ ಪರಭಾಷಾ ಚಿತ್ರಗಳಲ್ಲೂ ಬ್ಯುಸಿಯಾಗಿದ್ದಾರೆ. ರಾಗಿಣಿ ನಟನೆಯ ಚಿತ್ರಗಳಿಗಾಗಿ ಫ್ಯಾನ್ಸ್ ಕಾಯ್ತಿದ್ದಾರೆ.

  • ಅವಮಾನಿಸಿದ್ದ ರೈತನ ಮನೆಗೆ ಹೊಸ ಗೂಡ್ಸ್ ಜೀಪ್ ಕಳುಹಿಸಿ ಶುಭಕೋರಿದ ಮಹೀಂದ್ರಾ

    ಅವಮಾನಿಸಿದ್ದ ರೈತನ ಮನೆಗೆ ಹೊಸ ಗೂಡ್ಸ್ ಜೀಪ್ ಕಳುಹಿಸಿ ಶುಭಕೋರಿದ ಮಹೀಂದ್ರಾ

    ತುಮಕೂರು: ವಾಹನ ಖರೀದಿಗೆ ಮಹೀಂದ್ರಾ ಶೋ ರೂಂಗೆ ಬಂದು ಅವಮಾನಕ್ಕೊಳಗಾದ ರೈತನ ಮನೆಗೆ ಇದೀಗ ಮಹೀಂದ್ರ ಗೂಡ್ಸ್ ವಾಹನ ಬಂದಿದೆ. ಮಹೀಂದ್ರಾ ಕಂಪನಿಯ ಮುಖ್ಯಸ್ಥ ಆನಂದ್ ಮಹಿಂದ್ರಾ ಅವರು ಟ್ವೀಟ್ ಮಾಡಿ ರೈತನಿಗೆ ಶುಭ ಕೋರಿದ್ದಾರೆ.

    ರೈತ ಕೆಂಪೇಗೌಡಗೆ ಕಂಪನಿ ವಾಹನ ಡೆಲಿವರಿ ಮಾಡಿದೆ. ಈ ಕುರಿತು ಸ್ವತಃ ಆನಂದ್ ಮಹೀಂದ್ರಾ ಟ್ವೀಟ್ ಮಾಡಿದ್ದಾರೆ. ರೈತ ಕೆಂಪೇಗೌಡರು ಮಹಿಂದ್ರಾ ಗೂಡ್ಸ್ ವಾಹನ ಖರೀದಿ ಮಾಡಿದ್ದಾರೆ. ಇಂದು ಮಹೀಂದ್ರಾ ಆಟೋಮೋಟಿವ್, ಕೆಂಪೇಗೌಡರಿಗೆ ವಾಹನ ಡೆಲಿವರಿ ನೀಡಿದೆ. ಈ ಬಗ್ಗೆ ರೈತ ಕೆಂಪೇಗೌಡರ ಕೂಡಾ ಸಂತಸ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: 165 ಕೋಟಿ ಡೋಸ್ ವ್ಯಾಕ್ಸಿನ್ ನೀಡಿದ ಭಾರತ

    ಟ್ವೀಟ್‍ನಲ್ಲಿ ಏನಿದೆ?: ಜನವರಿ 21ರಂದು ನಮ್ಮ ಡೀಲರ್ ಬಳಿ ಕೆಂಪೇಗೌಡ ಮತ್ತು ಆತನ ಸ್ನೇಹಿತರು ಬಂದಾಗ ನಡೆದ ಘಟನೆಗೆ ನಾವು ವಿಷಾದ ವ್ಯಕ್ತಪಡಿಸುತ್ತೇವೆ. ನಾವು ಭರವಸೆ ನೀಡಿದಂತೆ ಘಟನೆ ಬಗ್ಗೆ ಕ್ರಮ ಕೈಗೊಳ್ಳುತ್ತೇವೆ. ಮಹೀಂದ್ರಾ ಆಯ್ಕೆ ಮಾಡಿದ್ದಕ್ಕಾಗಿ ನಾವು ಕೆಂಪೇಗೌಡರಿಗೆ ಧನ್ಯವಾದ ಅರ್ಪಿಸುತ್ತೇವೆ. ನಾವು ಅವರನ್ನು ಮಹೀಂದ್ರಾ ಕುಟುಂಬಕ್ಕೆ ಸ್ವಾಗತಿಸುತ್ತೇವೆ ಎಂದು ಟ್ವೀಟ್ ಮಾಡಲಾಗಿದೆ.

    ನಡೆದಿದ್ದೇನು?: ಹೆಬ್ಬೂರು ಹೋಬಳಿಯ ರಾಮನಪಾಳ್ಯ ನಿವಾಸಿ ಯುವರೈತ ಕೆಂಪೇಗೌಡ, ತುಮಕೂರಿನ ರಾಮನಪಾಳ್ಯದಲ್ಲಿ ಮಹೀಂದ್ರಾ ಶೋ ರೂಂಗೆ ವಾಹನ ಖರೀದಿಗೆ ಹೋಗಿದ್ದರು. ಯುವಕನ ವೇಷಭೂಷಣ ನೋಡಿ ಶೋರೂಂನಲ್ಲಿ ಅವಮಾನ ಮಾಡಿದ್ದರು. ಬೊಲೆರೋ ಗೂಡ್ಸ್ ವಾಹನ ಖರೀದಿಸಲು ಶೋರೂಂಗೆ ಬಂದಿದ್ದ ರೈತನಿಗೆ ಅವಮಾನ ಮಾಡಲಾಗಿತ್ತು.

    ಹತ್ತು ರೂಪಾಯಿ ದುಡ್ಡು ಕೊಡುವ ಯೋಗ್ಯತೆ ಇಲ್ಲ ಎಂದು ಸೇಲ್ಸ್ ಏಜೆಂಟ್, ಕೆಂಪೇಗೌಡರನ್ನು ಅವಮಾನಿಸಿದ್ದರು. ಅವಮಾನಿಸಿದ್ದನ್ನೇ ಸವಾಲಾಗಿ ಸ್ವೀಕರಿಸಿದ ಕೆಂಪೇಗೌಡ ಒಂದು ಗಂಟೆಯಲ್ಲಿ ಹತ್ತು ಲಕ್ಷ ರೂಪಾಯಿ ದುಡ್ಡು ತಂದು ವಾಹನ ನೀಡುವಂತೆ ಪಟ್ಟು ಹಿಡಿದಿದ್ದರು. ಆದರೆ ಶೋರೂಂ ಸೇಲ್ಸ್ ಏಜೆಂಟ್ ಮಾತ್ರ ವಾಹನ ನೀಡದೇ, ಎರಡು ಮೂರು ದಿನದಲ್ಲಿ ವಾಹನ ನೀಡುತ್ತೇವೆ ಎಂದು ಹೇಳಿದ್ದರು. ಇದೀಗ ಆನಂದ್ ಮಹೀಂದ್ರಾ ಅವರು ಗೋಡ್ಸ್ ಗಾಡಿಯನ್ನು ರೈತನ ಮನೆಗೆ ತಲುಪಿಸಿದ್ದಾರೆ.

  • ಬಿಬಿಎಂಪಿ ಶಾಲೆಗಳಿಗೆ ಕೆಂಪೇಗೌಡ ಹೆಸರು ನಾಮಕರಣ

    ಬಿಬಿಎಂಪಿ ಶಾಲೆಗಳಿಗೆ ಕೆಂಪೇಗೌಡ ಹೆಸರು ನಾಮಕರಣ

    ಬೆಂಗಳೂರು: ಬಿಬಿಎಂಪಿ ಶಾಲೆಗಳಿಗೆ ಕೆಂಪೇಗೌಡರ ಹೆಸರು ಇಡಲು ನಿರ್ಧರಿಸಲಾಗಿದೆ ಎಂದು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಮಂಜುಳಾ ನಾರಾಯಣ್ ಸ್ವಾಮಿ ಹೇಳಿದ್ದಾರೆ.

    ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಶಿಕ್ಷಣ ಸ್ಥಾಯಿ ಸಮಿತಿ ಹಾಗೂ ನಗರ ಜಿಲ್ಲಾ ಪಂಚಾಯತ್ ಶಿಕ್ಷಣ ಅಧ್ಯಕ್ಷ ನರಸಿಂಹಮೂರ್ತಿ ಗುರುವಾರ ನಡೆಸಿದ ಜಂಟಿ ಸುದ್ದಿಗೋಷ್ಟಿಯಲ್ಲಿ ಈ ಮಾಹಿತಿ ತಿಳಿಸಿದರು. ಈ ಬಗ್ಗೆ ಮಾತನಾಡಿದ ನರಸಿಂಹಮೂರ್ತಿ ಅವರು, ಬೆಂಗಳೂರಿನಲ್ಲಿರುವ ಸರ್ಕಾರಿ ಶಾಲೆ, ಪಾಲಿಕೆ ಶಾಲೆಗಳಿಗೆ ಸಂಬಂಧಿಸಿದ ಅಭಿವೃದ್ಧಿ ಮಾಡಲು ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ಹಣಕಾಸಿನ ವ್ಯವಸ್ಥೆ ಇಲ್ಲ. ಇದಕ್ಕೆ ಪಾಲಿಕೆ ಶಿಕ್ಷಣ ಸಮಿತಿಯಲ್ಲಿ ಮನವಿ ಮಾಡಿದ್ದೆವು. ಇದಕ್ಕೆ ಸ್ಪಂದಿಸಿದ ಪಾಲಿಕೆ ಶಿಕ್ಷಣ ಸಮಿತಿ ಈ ಬಜೆಟ್‍ನಲ್ಲಿ ಮೂಲಭೂತ ಸೌಕರ್ಯ ಕೊಡುವ ಭರವಸೆ ನೀಡಿದೆ ಎಂದರು.

    ಜೊತೆಗೆ ಪಾಲಿಕೆ ವ್ಯಾಪ್ತಿಯಲ್ಲಿ 529 ಸರ್ಕಾರಿ ಶಾಲೆಗಳಿವೆ. ನೀರು ಮತ್ತು ವಿದ್ಯುತ್ ಉಚಿತ ಹಾಗೂ ಮೂಲಸೌಕರ್ಯವೂ ಬಿಬಿಎಂಪಿ ಒದಗಿಸಲಿದೆ. 30 ಕೋಟಿ ರೂ. ವೆಚ್ಚದಲ್ಲಿ ಈ ಬಗ್ಗೆ ಬಜೆಟ್‍ನಲ್ಲಿ ಪ್ರಸ್ತಾವನೆ ಇಡಲಾಗಿದೆ. 529 ಸರ್ಕಾರಿ ಶಾಲೆಗಳ ನಿರ್ವಹಣೆಗೆ ಬಿಬಿಎಂಪಿ ಹಾಗೂ ಜಿಲ್ಲಾ ಪಂಚಾಯತ್‍ಗೆ ಕೇವಲ 75 ಲಕ್ಷ ರೂ. ಅನುದಾನ ಇದೆ. 1,300 ಕ್ಕೂ ಹೆಚ್ಚು ಶಾಲೆಗಳಿವೆ. ಬರೀ ಸಂಬಳ ಕೊಡೋಕೆ ಹಣ ಸಾಕಾಗ್ತಿದೆ. ನಮಗೆ ಸಣ್ಣ ವಾಹನದ ವ್ಯವಸ್ಥೆಯೂ ಇಲ್ಲ. ಇಲಾಖೆ ಖರ್ಚು ವೆಚ್ಚಕ್ಕೆ 75 ಲಕ್ಷ ಸಾಲುತ್ತಿಲ್ಲ ಎಂದು ಮಂಜುಳಾ ನಾರಾಯಣಸ್ವಾಮಿ ಹೇಳಿದರು.

    ಕೆಂಪೇಗೌಡರು ಕಟ್ಟಿರುವ ನಾಡು ಇದು. ಹೀಗಾಗಿ ಪಾಲಿಕೆ ಶಾಲೆಗಳಿಗೂ ಕೆಂಪೇಗೌಡ ಹೆಸರಿಡಲು ತೀರ್ಮಾನ ಮಾಡಲಾಗಿದೆ. ಈ ಬಗ್ಗೆ ಕೌನ್ಸಿಲ್‍ನಲ್ಲಿ ಪ್ರಸ್ತಾವನೆ ಇಡಲಾಗುವುದು ಎಂದರು. ಪಾಲಿಕೆ ಶಾಲೆಗಳ ಗುಣಮಟ್ಟವನ್ನೂ ಹೆಚ್ಚಳ ಮಾಡ್ತೇವೆ. ಮೂಲಭೂತ ಸೌಕರ್ಯಗಳಾದ ನೀರು, ಶೌಚಾಲಯ, ವಿದ್ಯುತ್ ನೀಡದಿದ್ದರೆ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.

  • ಕೋಟೆನಾಡಿನಲ್ಲಿ ಅಂಬಿ ಪುತ್ರ- ದುರ್ಗದ ಜನರಿಗೆ ಮಾತು ಕೊಟ್ಟ ಅಭಿಷೇಕ್

    ಕೋಟೆನಾಡಿನಲ್ಲಿ ಅಂಬಿ ಪುತ್ರ- ದುರ್ಗದ ಜನರಿಗೆ ಮಾತು ಕೊಟ್ಟ ಅಭಿಷೇಕ್

    ಚಿತ್ರದುರ್ಗ: ಜಿಲ್ಲೆಯ ಜುಂಜರಗುಂಟೆ ಗ್ರಾಮದ ಕಾರ್ಯಕ್ರಮದಲ್ಲಿ ನಟ ಅಂಬರೀಶ್ ಪುತ್ರ ನಟ ಅಭಿಷೇಕ್ ಭಾಗಿಯಾಗಿದ್ದರು.

    ಮಂಡ್ಯದ ಗಂಡು, ನಟ ಅಂಬರೀಶ್ ಗೂ ಕೋಟೆನಾಡು ಚಿತ್ರದುರ್ಗಕ್ಕೂ ಅವಿನಾಭಾವ ಸಂಬಂಧವಿದೆ. ನಾಗರಹಾವು ಚಿತ್ರದ ಜಲೀಲನಾಗಿ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿದ ದಿವಂಗತ ನಟ ಅಂಬರೀಶ್ ಚಿತ್ರದುರ್ಗದಲ್ಲಿ ತಮ್ಮದೇ ಅಭಿಮಾನಿ ಬಳಗವನ್ನು ಗಳಿಸಿದ್ದಾರೆ.

    ಹೀಗಾಗಿ ತಮ್ಮ ತಂದೆಯ ಸಂಬಂಧವನ್ನು ಹಾಗೆಯೇ ಉಳಿಸಿಕೊಳ್ಳಲು ಅಂಬರೀಶ್ ಕುಟುಂಬದ ಕುಡಿ ಸಹ ಮುಂದಾಗಿದೆ. ಇಂದು ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಜುಂಜರಗುಂಟೆ ಗ್ರಾಮದಲ್ಲಿ ಗ್ರಾಮಸ್ಥರೇ ನಿರ್ಮಾಣ ಮಾಡಿದ್ದ, ಕೆಂಪೇಗೌಡ ಪುತ್ಥಳಿಯನ್ನು ನಟ ಅಭಿಷೇಕ್ ಅಂಬರೀಶ್ ಅನಾವರಣಗೊಳಿಸಿದರು. ಗ್ರಾಮಸ್ಥರ ಆಶಯದಂತೆ ಕೆಂಪೇಗೌಡ ಜಯಂತಿಗೂ ಚಾಲನೆ ನೀಡಿದರು.

    ಕಾರ್ಯಕ್ರಮ ಉದ್ಘಾಟನೆ ಹಾಗೂ ಪುತ್ಥಳಿ ಅನಾವರಣ ಬಳಿಕ ಅವರ ತಂದೆಯ ದಾಟಿಯಲ್ಲೇ ಮಾತನ್ನಾರಂಭಿಸಿದ ಅಭಿಷೇಕ್ ಅವರಿಗೆ ಅಭಿಮಾನಿಗಳು ನೀವು ಅಂಬಿಯಂತೆ ಉತ್ತಮ ನಟರಾಗಬೇಕು. ಚಿತ್ರರಂಗದ ಮೇರು ನಟರಾಗಬೇಕು ಅಂತ ಕೂಗಿದರು. ಮಾತು ಆರಂಭಿಸುತಿದಂತೆ ಕೇಕೆ ಹಾಕಿ ಹೃದಯ ಸ್ಪರ್ಶಿ ಸ್ವಾಗತ ಕೋರಿದರು. ಆಗ ಅಭಿಮಾನಿಗಳ ಘೋಷಣೆಗೆ ಫಿದಾ ಆದ ಅಭಿಷೇಕ್ ನಾನು ಚಿತ್ರರಂಗದಲ್ಲಿ ನಟನಾಗಿಯೇ ಮುಂದುವರಿಯುತ್ತೇನೆ. ಬೇರೆ ಯಾವ ಕ್ಷೇತ್ರದತ್ತವೂ ತಿರುಗಿ ನೋಡಲ್ಲ ಎಂದು ನೆರೆದಿದ್ದ ಅಭಿಮಾನಿಗಳೊಂದಿಗೆ ಮನದಾಳದ ಮಾತನ್ನು ಹಂಚಿಕೊಂಡರು.

    ಅಭಿಮಾನಿಗಳ ಒತ್ತಾಯಕ್ಕೆ ಮಣಿದು ಅವರ ತಂದೆ ಅಂಬರೀಶ್ ಅಭಿನಯದ ಮಂಡ್ಯದ ಗಂಡು ಡೈಲಾಗ್ ಹೇಳುವ ಮೂಲಕ ಕೋಟೆನಾಡಿನ ಜನರ ಮನಗೆದ್ದರು. ಈ ವೇಳೆ ಕುಂಚಿಟಿಗ ಗುರುಪೀಠದ ಶಾಂತವೀರ ಶ್ರೀ ಹಾಗೂ ಚಳ್ಳಕೆರೆ ಶಾಸಕ ರಘುಮೂರ್ತಿ ಕಾರ್ಯಕ್ರಮದಲ್ಲಿ ಭಾಗಿಯಾಗಿ ಅಭಿಷೇಕ್‍ಗೆ ಸಾಥ್ ನೀಡಿದರು.

  • ಕಸದ ರಾಶಿಯಲ್ಲಿ ಕೆಂಪೇಗೌಡ, ಕುವೆಂಪು, ವಿವೇಕಾನಂದರ ಭಾವಚಿತ್ರಗಳು

    ಕಸದ ರಾಶಿಯಲ್ಲಿ ಕೆಂಪೇಗೌಡ, ಕುವೆಂಪು, ವಿವೇಕಾನಂದರ ಭಾವಚಿತ್ರಗಳು

    -ಪುರಭವನ ಸಿಬ್ಬಂದಿಯಿಂದ ಎಡವಟ್ಟು

    ಬೆಂಗಳೂರು: ನಗರದ ಸರ್ ಪುಟ್ಟಣ್ಣಚೆಟ್ಟಿ ಪುರಭವನದಲ್ಲಿ ಮಹನೀಯ ವ್ಯಕ್ತಿಗಳಿಗೆ ಅಪಮಾನವಾಗಿದೆ. ಕಸದ ರಾಶಿಯಲ್ಲಿ ನಾಡಪ್ರಭು ಕೆಂಪೇಗೌಡ, ರಾಷ್ಟ್ರಕವಿ ಕುವೆಂಪು ಹಾಗೂ ಸ್ವಾಮಿ ವಿವೇಕಾನಂದರ ಭಾವಚಿತ್ರಗಳು ಕಂಡು ಬಂದಿದೆ.

    ಇತ್ತೀಚೆಗೆ ಪುರಭವನದಲ್ಲಿ ನಡೆದ ಕಾರ್ಯಕ್ರಮವೊಂದಕ್ಕೆ ಕುವೆಂಪು, ವಿವೇಕಾನಂದ ಹಾಗೂ ಕೆಂಪೇಗೌಡರ ಭಾವಚಿತ್ರ ಫಲಕಗಳನ್ನು ತರಲಾಗಿತ್ತು. ಈ ಕಾರ್ಯಕ್ರಮ ಮುಗಿದ ಬಳಿಕ ಸಿಬ್ಬಂದಿ ಪುರಭವನ ಸ್ವಚ್ಛಗೊಳಿಸಿದ್ದರು. ಈ ವೇಳೆ ಸಿಬ್ಬಂದಿ ಮಹನೀಯರ ಭಾವಚಿತ್ರಗಳನ್ನು ಕಸದ ಜೊತೆ ಹಾಕಿದ್ದಾರೆ.

    ಕಾರ್ಯಕ್ರಮದ ಬಳಿಕ ಈ ಫಲಕಗಳನ್ನು ತೆಗೆದುಕೊಂಡು ಹೋಗದೇ ಆಯೋಜಕರು ಪುರಭವನದಲ್ಲೇ ಬಿಟ್ಟು ಹೋಗಿದ್ದರು. ಆಯೋಜಕರ ಎಡವಟ್ಟು ಹಾಗೂ ಪುರಭವನ ಸಿಬ್ಬಂದಿಯ ನಿರ್ಲಕ್ಷ್ಯದಿಂದ ನಾಡು ನುಡಿಗೆ ಶ್ರವಿಸಿದವರಿಗೆ ಅಗೌರವವಾಗಿದೆ.

    ಇತ್ತೀಚೆಗಷ್ಟೇ ಸರ್ಕಾರದಿಂದ ಕೆಂಪೇಗೌಡ ಜಯಂತಿಯ ಅದ್ಧೂರಿ ಆಚರಣೆ ನಡೆದಿತ್ತು. ಬಿಬಿಎಂಪಿಯ ಕೂಗಳತೆ ದೂರದಲ್ಲಿಯೇ ನಾಡಪ್ರಭುಗೆ ಅವಮಾನ ನಡೆದಿದೆ. ಡಿಸೆಂಬರ್ 29ರಂದು ಕುವೆಂಪು ಜನ್ಮದಿನದ ಆಚರಣೆ ನಡೆಸಲಾಯಿತು. ಇದೇ ತಿಂಗಳ 12ರಂದು ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆ ನಡೆಯಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪೊಲೀಸ್ ಠಾಣೆ ಮೆಟ್ಟಿಲೇರಿದ ಶಿಲ್ಪಾ ಗಣೇಶ್ !

    ಪೊಲೀಸ್ ಠಾಣೆ ಮೆಟ್ಟಿಲೇರಿದ ಶಿಲ್ಪಾ ಗಣೇಶ್ !

    ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ ನಾಡಪ್ರಭು ಕೆಂಪೇಗೌಡರಿಗೆ ಶಿಲ್ಪಾ ಗಣೇಶ್‍ರಿಂದ ಅವಮಾನವಾಗಿದೆ ಎನ್ನುವ ವಿಚಾರಕ್ಕೆ ಸಂಬಂಧಿಪಟ್ಟಂತೆ ಕಿಡಿಗೇಡಿಗಳ ವಿರುದ್ಧ ಗೋಲ್ಡನ್ ಸ್ಟಾರ್ ಪತ್ನಿ ಶಿಲ್ಪಾ ಗರಂ ಆಗಿದ್ದಾರೆ.

    ಶಿಲ್ಪಾ ಗಣೇಶ್ ಹೆಸರಲ್ಲಿ ಸಾಮಾಜಿಕ ಜಾಲತಾಣದಲ್ಲಿ ನಾಡಪ್ರಭುವಿಗೆ ಅವಮಾನವಾಗಿದ್ದು, ಕೆಂಪೇಗೌಡರಿಗಿಂತ ಸಾಧನೆ ಮಾಡಿದವರು ಅನೇಕರಿದ್ದಾರೆ. ಸಿಲ್ಕ್ ಯುನಿವರ್ಸಿಟಿಗೆ ಕೆಂಪೇಗೌಡರ ಹೆಸರಿಡುವ ಅವಶ್ಯಕತೆ ಇರಲಿಲ್ಲ. ಹೀಗೆಂದು ಫೋಟೋ ಸಮೇತೆ ಶಿಲ್ಪಾ ಗಣೇಶ್ ಹೆಸರಿನ ಫೇಸ್ ಬುಕ್ ನಲ್ಲಿ ಅಪ್ಲೋಡ್ ಮಾಡಲಾಗಿತ್ತು. ಈ ವಿಚಾರಕ್ಕೆ ಶಿಲ್ಪಾರಿಗೆ ಸಾಕಷ್ಟು ಟೀಕೆಗಳು ವ್ಯಕ್ತವಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ಶಿಲ್ಪಾ ಗಣೇಶ್ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

    ಯಾರೋ ಕಿಡಿಗೇಡಿಗಳು ಈ ಕೃತ್ಯ ನಡೆಸಿದ್ದಾರೆ. ನನಗೆ ಕೆಂಪೇಗೌಡರ ಬಗ್ಗೆ ಅಪಾರ ಗೌರವವಿದೆ. ಈ ವಿಚಾರವಾಗಿ ಫೇಸ್ ಬುಕ್ ನಲ್ಲಿ ಹೇಳಿಕೆ ನೀಡಿದ್ದೇನೆ. ಆದರೆ ಇದನ್ನು ಸೃಷ್ಠಿಸಿದ ಕಿಡಿಗೇಡಿಗಳನ್ನು ಪತ್ತೆ ಮಾಡಿ ಎಂದು ಆರ್ ಆರ್ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

    ದೂರಿನಲ್ಲಿ ಏನಿದೆ?
    ಯಾರೋ ಅಪರಿಚಿತರು ಸಾಮಾಜಿಕ ಜಾಲತಾಣದಲ್ಲಿ ನನ್ನ ಭಾವಚಿತ್ರವನ್ನು ಬಳಸಿಕೊಂಡು ನಾಡಪ್ರಭು ಕಂಪೇಗೌಡರ ವಿರುದ್ಧ ನಕಲಿ ಹೇಳಿಕೆ ಸೃಷ್ಟಿ ಮಾಡಿಕೊಂಡಿದ್ದಾರೆ.

    ಜುಲೈ 6ರಂದು ನಾನು ಎಂದಿನಂತೆ ನನ್ನ ವಾಟ್ಸಾಪ್ ತೆಗೆದು ನೋಡಿದಾಗ ಗಿರಿಗೌಡ ಎಂಬವರ ನಂಬರ್ ನಿಂದ ನಾನು ಬರೆಯದೆ ಮತ್ತು ಹೇಳದೆ ಇರುವಂತಹ ಹೇಳಿಕೆಯನ್ನು ಭಾವಚಿತ್ರ ಸಮೇತ ಸೃಷ್ಟಿ ಮಾಡಲಾಗಿತ್ತು. ಅದರಲ್ಲಿ ನಾಡಪ್ರಭು ಕೆಂಪೇಗೌಡರ ಬಗ್ಗೆ “ಕೆಂಪೇಗೌಡರಿಗಿಂತ ಸಾಧನೆ ಮಾಡಿದವರು ಅನೇಕರಿದ್ದಾರೆ. ಸ್ಕಿಲ್ ಯುನಿವರ್ಸಿಟಿಗೆ ಕೆಂಪೇಗೌಡರ ಹೆಸರಿಡುವ ಅವಶ್ಯಕತೆ ಇರಲಿಲ್ಲ” ಎಂದು ಬರೆದು ಅದರ ಕೆಳಗೆ ಶಿಲ್ಪಾ ಗಣೇಶ್ ಎಂದು ನನ್ನ ಹೆಸರನ್ನು ಬರೆದಿದ್ದಾರೆ.

    ಇದನ್ನು ನೋಡಿದ ನನಗೆ ಆಶ್ಚರ್ಯವಾಯಿತ್ತು. ಕೂಡಲೇ ನಾನು ನನ್ನ ನಿಜವಾದ ಫೇಸ್‍ಬುಕ್ ಹಾಗೂ ಟ್ವಿಟ್ಟರ್ ಖಾತೆಯಿಂದ ನಕಲಿ ಹೇಳಿಕೆಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಸ್ಪಷ್ಟನೆ ನೀಡಿದ್ದೇನೆ. ನಾಡಪ್ರಭು ಕೆಂಪೇಗೌಡರ ಬಗ್ಗೆ ಅಪಾರವಾದ ಗೌರವವಿದೆ. ಅವರನ್ನು ಅವಮಾನ ಮಾಡುವಂತಹ ಯಾವುದೇ ಹೇಳಿಕೆಗಳನ್ನು ನಾನು ನೀಡಿಲ್ಲ ಎಂದು ಸ್ಪಷ್ಟೀಕರಣ ನೀಡಿದ್ದೇನೆ. ನನ್ನ ಹೆಸರನ್ನು ಬಳಸಿಕೊಂಡು ವಿನಾಕಾರಣ ಹೆಸರಿಗೆ ಚ್ಯುತಿ ತರುವ ಕೆಲಸವನ್ನು ಮಾಡಿರುವವರನ್ನು ಪತ್ತೆ ಮಾಡಿ ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಎಂದು ದೂರಿದ್ದಾರೆ.

    ಸದ್ಯ ಪ್ರಕರಣ ದಾಖಲಿಸಿಕೊಂಡಿರೋ ಆರ್ ಆರ್ ನಗರ ಪೊಲೀಸರು ಕಿಡಿಗೆಡಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

  • ಅನೈತಿಕ ಚಟುವಟಿಕೆ ತಾಣದಲ್ಲೇ ಕೆಂಪೇಗೌಡರ ಪುತ್ಥಳಿ ಸ್ಥಾಪನೆ- ಸರ್ಕಾರದ ವಿರುದ್ಧ ಸಿಡಿದೆದ್ದ ಒಕ್ಕಲಿಗರು

    ಅನೈತಿಕ ಚಟುವಟಿಕೆ ತಾಣದಲ್ಲೇ ಕೆಂಪೇಗೌಡರ ಪುತ್ಥಳಿ ಸ್ಥಾಪನೆ- ಸರ್ಕಾರದ ವಿರುದ್ಧ ಸಿಡಿದೆದ್ದ ಒಕ್ಕಲಿಗರು

    ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಸಾಹೇಬರ ಸರ್ಕಾರ ಒಂದೊಂದು ಜಾತಿಯ ಸಮುದಾಯಕ್ಕೆ ಒಂದೊಂದು ಭಾಗ್ಯವನ್ನು ಕೊಟ್ಟಿದೆ. ಲಿಂಗಾಯತರಿಗೆ ಪ್ರತ್ಯೇಕ ಧರ್ಮ ಭಾಗ್ಯ, ಅಲ್ಪ ಸಂಖ್ಯಾತರಿಗೆ ಶಾದಿ ಭಾಗ್ಯ, ಹಿಂದುಳಿದವರಿಗೆ ಲ್ಯಾಪ್ ಟಾಪ್ ಭಾಗ್ಯ ನೀಡಿದೆ. ಆದರೆ ಇದೀಗ ರಾಜ್ಯದ ದೊಡ್ಡ ಸಮುದಾಯವಾದ ಒಕ್ಕಲಿಗರಿಗೆ ಕಾಂಡೊಮ್ ಭಾಗ್ಯ ದಯಾಪಾಲಿಸಿದೆ.

    ಹೌದು. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಸೇರಿದ ಹೆಬ್ಬಾಳ ಜಂಕ್ಷನ್ ನಲ್ಲಿರೋ ಕಗ್ಗತ್ತಲ ಕಾಡಿನಲ್ಲಿ ನಾಡಪ್ರಭು ಕೆಂಪೇಗೌಡರ ಪುತ್ಥಳಿಯನ್ನು ಅನಾವರಣಗೊಳಿಸಿದೆ. ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗಾಗಿ ಗಿಮಿಕ್ ಮಾಡಲು ಹೋದ ಕೃಷಿ ಸಚಿವ ಕೃಷ್ಣೆಭೈರೇಗೌಡ, ಬಿಡಿಎ ಕೆಂಪೇಗೌಡರಿಗೆ ಅಪಮಾನ ಮಾಡಿದೆ. ಹೀಗಾಗಿ ರಾಜ್ಯ ಒಕ್ಕಲಿಗರ ಸಂಘ ಸಿಎಂ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ತೊಡೆ ತಟ್ಟಿ ನಿಂತಿದೆ.

    ಬೆಂಗಳೂರು ವಿಶ್ವ ಮಟ್ಟದಲ್ಲಿ ಗುರುತಿಸಿಕೊಳ್ಳಲು ಕಾರಣಿಕರ್ತರಾದ ನಾಡುಪ್ರಭು ಕೆಂಪೇಗೌಡರ ಅಶ್ವರೂಢನ ಪುತ್ಥಳಿಯನ್ನು, ಬಿಡಿಎ ಅಭಿವೃದ್ಧಿಯನ್ನೇ ಕಾಣದ, ಅನೈತಿಕ ಚಟುವಟಿಕೆಗಳ ಗೂಡಾಗಿರೋ ಪಾರ್ಕ್‍ನಲ್ಲಿ ಅನಾವರಣಗೊಳಿಸಿದೆ. ಜೊತೆಗೆ ಈ ಜಾಗ ಅನೈತಿಕ ಹಾಗೂ ಅಸಭ್ಯ ವರ್ತನೆಗಳ ತಾಣವಾಗಿದೆ. ಬಿಡಿಎ ಈ ಜಾಗದಲ್ಲಿ ಪುತ್ಥಳಿ ಅನಾವರಣಕ್ಕೂ ಮುನ್ನ ಸ್ವಚ್ಛತೆ ಮಾಡದೇ, ಇಲ್ಲಿನ ಚಟುವಟಿಕೆಗಳಿಗೆ ಬ್ರೇಕ್ ಹಾಕದೇ ಕಾಂಡೊಮ್ ಗಳ ರಾಶಿ ಮಧ್ಯಯೇ ಪುತ್ಥಳಿಯನ್ನಟ್ಟಿದೆ. ಚುನಾವಣೆಯ ತರಾತುರಿಗೆ ಬಿದ್ದ ಬಿಡಿಎ, ಕಾಮಗಾರಿ ಪೂರ್ಣಗೊಳ್ಳುವ ಮುನ್ನವೇ ಕೆಂಪೇಗೌಡರ ಪ್ರತಿಮೆಯನ್ನು ಉದ್ಘಾಟನೆ ಮಾಡಿದ್ದಾರೆ. ಯಾರ ಬೇಡಿಕೆಯೂ ಇಲ್ಲದೇ ಬೆಂಗಳೂರಿಗರನ್ನು ಸೆಳೆಯಲು ಹೋಗಿ ಮಹಾ ಎಡವಟ್ಟು ಮಾಡಿದೆ. ಹೀಗಾಗಿ ರಾಜ್ಯ ಒಕ್ಕಲಿಗರ ಸಂಘ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದೆ ಎಂದು ಒಕ್ಕಲಿಗರ ಸಂಘದ ಪ್ರಧಾನ ಕಾರ್ಯದರ್ಶಿ ಪ್ರೋ.ಎಂ.ನಾಗರಾಜ್ ಹೇಳಿದ್ದಾರೆ.

    ಹೆಬ್ಬಾಳ ಜಂಕ್ಷನಲ್ಲಿ ನಿರ್ಮಾಣವಾಗಿರೋ ನಾಡಪ್ರಭುವಿನ ಪುತ್ಥಳಿ ಜಾಗವನ್ನು, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಪಾರ್ಕ್ ಅಂತಾ ಕರೆಯುತ್ತಿದೆ. ಅಸಲಿಗೆ ಇದು ಪಾರ್ಕ್ ಅಲ್ಲ, ಕಸದ ಡಂಪಿಂಗ್ ಯಾರ್ಡ್ ಆಗಿದೆ. ಈ ಜಾಗದಲ್ಲಿ ಯಾವುದೇ ಸೆಕ್ಯುರಿಟಿ ಇಲ್ಲ. ಸ್ವಚ್ಫತೆಯಂತೂ ಮೊದಲೇ ಇಲ್ಲ. ಸುಮಾರು 3 ಕೋಟಿಗೂ ಹೆಚ್ಚು ವೆಚ್ಚದಲ್ಲಿ ನಿರ್ಮಾಣವಾಗಿರೋ ಕೆಂಪೇಗೌಡರ ಅಶ್ವರೂಢನ ಪುತ್ಥಳಿಗೆ ಒಂದೇ ಒಂದು ವಿದ್ಯುತ್ ದೀಪವನ್ನು ಹಾಕಿಲ್ಲ. ಕಲ್ಲಿನಿಂದ ಕೋಟೆ ಆಕಾರದಲ್ಲಿ 30 ಅಡಿ ಎತ್ತರ ಕಟ್ಟಲಾಗಿದೆ. ಅದರ ಮೇಲೆ ಕೆಂಪೇಗೌಡರ ಪುತ್ಥಳಿಯನ್ನು ಪ್ರತಿಷ್ಠಾಪನೆ ಮಾಡಲಾಗಿದೆ. ಇದು ಬಿಟ್ಟರೆ ಪುತ್ಥಳಿ ಸುತ್ತಲೂ ಪಾರ್ಕ್ ನಿರ್ಮಾಣ ಮಾಡಲು ಯಾವುದೇ ಕ್ರಮ ಕೈಗೊಂಡಿಲ್ಲ. ಅದು ಹೋಗಲಿ ಅಲ್ಲಿ ಬಿದ್ದಿರೋ ಕಾಂಡೊಮ್ ತೆರವು ಮಾಡೋದು, ಅಲ್ಲಿರೋ ಮಂಗಳಮುಖಿಯರ ಉಪಟಳಕ್ಕೆ ಬ್ರೇಕ್ ಕೂಡ ಹಾಕುತ್ತಿಲ್ಲ ಎಂದು ಪ್ರೋ.ಎಂ.ನಾಗರಾಜ್ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

    ಅಸಲಿಗೆ ಬೆಂಗಳೂರಿನ್ನು ಕಟ್ಟಿದ ನಾಡದೊರೆ ಕೆಂಪೇಗೌಡರಿಗೆ ನಗರದಲ್ಲಿ ಜಾಗವೇ ಇಲ್ಲದೇ ಇದ್ರೆ ಇಂಥ ಕಸದ ತೊಟ್ಟಿಯಲ್ಲಿ, ಮಹಾನ್ ವ್ಯಕ್ತಿಯ ಪುತ್ಥಳಿಯನ್ನು ಇಡೋದೆ ಬೇಡ, ಪುತ್ಥಳಿಯನ್ನು ತೆರವುಗೊಳಿಸಲಿ. ಇಂಥಹ ಜಾಗದಲ್ಲಿ ಧೀಮಂತ ನಾಯಕನ ಪುತ್ಥಳಿಯನ್ನು ಇಡೋ ದರ್ದು ಸಿಎಂ ಸಿದ್ದರಾಮಯ್ಯರಿಗೆ ಏನಿತ್ತು ಅಂತ ರಾಜ್ಯ ಒಕ್ಕಲಿಗರ ಸಂಘ ಆಕ್ರೋಶ ವ್ಯಕ್ತಪಡಿಸಿದೆ.

  • ಬೆಂಗಳೂರನ್ನ ಕಟ್ಟಿದ್ದು ಕೆಂಪೇಗೌಡರಲ್ವಾ?- ಇತಿಹಾಸವನ್ನೇ ಬದಲಿಸೋ ಶಿಲಾಶಾಸನದ ಬೆನ್ನು ಬಿದ್ದಿದ್ದಾರೆ ಪುರಾತತ್ವ ತಜ್ಞರು

    ಬೆಂಗಳೂರನ್ನ ಕಟ್ಟಿದ್ದು ಕೆಂಪೇಗೌಡರಲ್ವಾ?- ಇತಿಹಾಸವನ್ನೇ ಬದಲಿಸೋ ಶಿಲಾಶಾಸನದ ಬೆನ್ನು ಬಿದ್ದಿದ್ದಾರೆ ಪುರಾತತ್ವ ತಜ್ಞರು

    ಬೆಂಗಳೂರು: ಸಿಲಿಕಾನ್ ಸಿಟಿ ಎಂದು ಕರೆಸಿಕೊಳ್ಳೋ ಬೆಂಗಳೂರು ನಗರಿಯನ್ನು ಕಟ್ಟಿದ್ದು, ಹೆಸರು ಕೊಟ್ಟಿದ್ದು ನಿಜವಾಗಲೂ ಕೆಂಪೇಗೌಡರಲ್ವಾ? ಹಾಗಿದ್ರೆ ಬೆಂಗಳೂರನ್ನ ನಿಜವಾಗ್ಲೂ ನಿರ್ಮಿಸಿದ್ದು ಯಾರು? ಯಾವಾಗ? ಈ ಎಲ್ಲಾ ಪ್ರಶ್ನೆಗಳನ್ನಿಟ್ಟುಕೊಂಡು ಹೊಸ ಇತಿಹಾಸ ಬರೆಯಲು ಸಜ್ಜಾಗಿದೆ ಬೆಂಗಳೂರಲ್ಲಿ ಸಿಕ್ಕ ಮೊದಲ ಶಿಲಾಶಾಸನ.

    900ನೇ ಇಸವಿಯಲ್ಲೇ ಬೆಂಗಳೂರು ಪ್ರಾಂತ್ಯ ಇತ್ತು ಅನ್ನೋದಕ್ಕೆ ಸಾಕ್ಷಿ ಸಿಕ್ಕಿದೆಯಂತೆ. ಹೌದು. ಇಂತಹದ್ದೊಂದು ಇತಿಹಾಸವನ್ನೇ ಬದಲಾಯಿಸುವಂತ, ಕೆಂಪೇಗೌಡರನ್ನೇ ಪ್ರಶ್ನೆ ಮಾಡುವಂತಹ ಶಿಲಾಸನ ಬೆಂಗಳೂರಿನ ಬೇಗೂರು ರಸ್ತೆಯಲ್ಲಿರೋ ನಗರೇಶ್ವರ ದೇಗುಲದಲ್ಲಿ ಈಗ ಇತಿಹಾಸ ತಜ್ಞರ ಕಣ್ಣಿಗೆ ಬಿದ್ದಿದೆ. ಇದರ ಜೊತೆಗೆ ಗಂಗರ ಕಾಲದ ಹಲವು ಕಲ್ಲಿನ ಕೆತ್ತನೆಗಳ ತುಂಡುಗಳು ಈ ದೇಗುಲದಲ್ಲಿದೆ.

    900 ಇಸವಿಯಲ್ಲಿ ಬೆಂಗಳೂರು ಪ್ರಾಂತ್ಯ ಇತ್ತು. ನಗಾತಾರ ರಾಜನ ಮಗ ಬೆಂಗಳೂರು ಕಾಳಗದಲ್ಲಿ ಸತ್ತ ಎನ್ನುವ ಪ್ರಸ್ತಾಪ ಈ ಕಲ್ಲಿನ ಶಾಸನದಲ್ಲಿ ಅಡಕವಾಗಿದೆ. ನಗಾತಾರ ರಾಜ ಇದ್ದಿದ್ದು ಗಂಗರ ಕಾಲದಲ್ಲಿ ಅಂದರೆ ಸುಮಾರು 900 ನೇ ಇಸವಿಯಲ್ಲಿ. ಆಗಲೇ ಬೆಂಗಳೂರು ಹೆಸರು ಪ್ರಚಲಿತದಲ್ಲಿತ್ತು ಎನ್ನುವುದಕ್ಕೆ ಹಳೆಗನ್ನಡದ ಈ ಶಿಲಾಶಾಸನದಲ್ಲಿ ಪುರಾವೆಗಳಿವೆ. ಆದರೆ ಈ ಶಿಲಾ ಶಾಸನವನ್ನು ಇದುವರೆಗೂ ಇಲ್ಲಿನ ಜನ ಪುರಾತತ್ವ ಇಲಾಖೆಗೆ ನೀಡಿರಲಿಲ್ಲ.

    ಈಗ ದೇಗುಲದ ಅಂಗಳದಲ್ಲಿರುವ ಅಪರೂಪದ ಶಾಸನದ ಬೆನ್ನುಬಿದ್ದಿರುವ ಪುರಾತತ್ವ ತಜ್ಞರ ತಂಡ 900ನೇ ವರ್ಷದಲ್ಲೇ ಬೆಂಗಳೂರು ಹೆಸರು ಕೆತ್ತಿರುವ ಕೆತ್ತನೆಯನ್ನು ಪತ್ತೆ ಹಚ್ಚಿದೆ. ಆದರೆ ಇದು ನಿಜನಾ? ಕೆಂಪೇಗೌಡರು ಬೆಂಗಳೂರನ್ನು ಕಟ್ಟಲಿಲ್ವಾ ಎಂಬುದರ ಬಗ್ಗೆ ಆಳವಾದ ಅಧ್ಯಯನವೂ ಸದ್ದಿಲ್ಲದೇ ಶುರುವಾಗಿದೆ.