Tag: kempegowda

  • ನೀಲಿ ಬಣ್ಣದ ಉಡುಗೆಯಲ್ಲಿ ರಾಗಿಣಿ ದ್ವಿವೇದಿ ಮಿಂಚಿಂಗ್

    ನೀಲಿ ಬಣ್ಣದ ಉಡುಗೆಯಲ್ಲಿ ರಾಗಿಣಿ ದ್ವಿವೇದಿ ಮಿಂಚಿಂಗ್

    ಸ್ಯಾಂಡಲ್‌ವುಡ್‌ನ (Sandalwood) ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ (Ragini Dwivedi) ಸಿನಿಮಾಗಳ ಜೊತೆ ಆಗಾಗ ಫೋಟೋಶೂಟ್‌ನಿಂದ (Photoshoot) ಸೋಷಿಯಲ್ ಮೀಡಿಯಾದಲ್ಲಿ ಗಮನ ಸೆಳೆಯುತ್ತಿರುತ್ತಾರೆ. ಇದೀಗ ಮತ್ತೆ ಹೊಸ ಲುಕ್‌ನಲ್ಲಿ ನಟಿ ಕಂಗೊಳಿಸಿದ್ದಾರೆ.

    ಕಿಚ್ಚ ಸುದೀಪ್, ದುನಿಯಾ ವಿಜಯ್, ಶರಣ್, ಶ್ರೀನಗರ ಕಿಟ್ಟಿ ಸೇರಿದಂತೆ ಹಲವರಿಗೆ ನಾಯಕಿಯಾಗಿ ಚಂದನವನದಲ್ಲಿ ಗುರುತಿಸಿಕೊಂಡಿದ್ದಾರೆ. ಮಹಿಳಾ ಪ್ರಧಾನ ಚಿತ್ರಗಳಲ್ಲೂ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಇದನ್ನೂ ಓದಿ: ʻಪೊನ್ನಿಯಿನ್ ಸೆಲ್ವನ್-2ʼ ಟ್ರೈಲರ್ ರಿಲೀಸ್: ಚೋಳಾ ಸಾಮ್ರಾಜ್ಯಕ್ಕಾಗಿ ಮುಂದುವರೆದ ಹೋರಾಟ

    ತುಪ್ಪದ ಬೆಡಗಿ ರಾಗಿಣಿ ಇದೀಗ ಹಾಟ್ ಫೋಟೋಶೂಟ್‌ವೊಂದನ್ನ ಮಾಡಿಸಿದ್ದಾರೆ. ನೀಲಿ ಬಣ್ಣ ಉಡುಗೆಯಲ್ಲಿ ನಟಿ ಮಿಂಚಿದ್ದಾರೆ. ನಟಿಯ ಮಾದಕ ಲುಕ್‌ಗೆ ಪಡ್ಡೆಹುಡುಗರು ಫಿದಾ ಆಗಿದ್ದಾರೆ.

    ನಟಿ ರಾಗಿಣಿ, ಬಾಲಿವುಡ್, ಕನ್ನಡ ಸೇರಿದಂತೆ 7ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಈ ವರ್ಷ ಒಂದೊAದೇ ಚಿತ್ರಗಳು ತೆರೆಗೆ ಬರಲಿದೆ.

  • ಹಳದಿ ಬಣ್ಣದ ಸೀರೆಯಲ್ಲಿ ಹಾಟ್ ಆಗಿ ಮಿಂಚಿದ ರಾಗಿಣಿ ದ್ವಿವೇದಿ

    ಹಳದಿ ಬಣ್ಣದ ಸೀರೆಯಲ್ಲಿ ಹಾಟ್ ಆಗಿ ಮಿಂಚಿದ ರಾಗಿಣಿ ದ್ವಿವೇದಿ

    ಸ್ಯಾಂಡಲ್‌ವುಡ್ (Sandalwood) ಬ್ಯೂಟಿ ರಾಗಿಣಿ ದ್ವಿವೇದಿ (Ragini Dwivedi) ಅವರು ಇದೀಗ ಬ್ಯಾಕ್ ಟು ಬ್ಯಾಕ್ ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚಿಗೆ ಸಿನಿಮಾಗಿಂತ ಫೋಟೋಶೂಟ್‌ನಲ್ಲಿ ನಟಿ ಮಿಂಚ್ತಿದ್ದಾರೆ.

    ತುಪ್ಪದ ಬೆಡಗಿ ರಾಗಿಣಿ ಕನ್ನಡ, ಹಿಂದಿ, ಸೌತ್ ಸಿನಿಮಾಗಳು ಅಂತಾ ಬ್ಯುಸಿಯಾಗಿದ್ದಾರೆ. ಇತ್ತೀಚಿಗೆ ಆಲ್ಬಂ ಸಾಂಗ್‌ವೊಂದರಲ್ಲಿ ಹೆಜ್ಜೆ ಹಾಕಿ ಅಭಿಮಾನಿಗಳ ಗಮನ ಸೆಳೆದಿದ್ದರು. ಇದೀಗ ರಾಗಿಣಿ ಬದಲಾಗಿದ್ದಾರೆ. ವರ್ಕೌಟ್ ಮತ್ತು ಬ್ಯೂಟಿಗೆ ನಟಿ ಆದ್ಯತೆ ಕೊಡುತ್ತಾರೆ.

     

    View this post on Instagram

     

    A post shared by Ragini dwivedi (@rraginidwivedi)

    ಸದ್ಯ ಹಳದಿ ಬಣ್ಣದ ಸೀರೆಯುಟ್ಟು ರಾಗಿಣಿ ಮಿಂಚಿದ್ದಾರೆ. ಸದಾ ಮಾಡರ್ನ್ ಲುಕ್‌ನಲ್ಲಿ ಹಾಟ್ ಹಾಟ್ ಆಗಿ ಪೋಸ್ ನೀಡುತ್ತಿದ್ದ ನಟಿ ಈಗ ಸಂಪ್ರದಾಯಿಕ ಉಡುಗೆಯಲ್ಲಿ ಕಂಗೊಳಿಸಿದ್ದಾರೆ. ಈ ಹೊಸ ಫೋಟೋಶೂಟ್ ನೆಟ್ಟಿಗರ ಗಮನ ಸೆಳೆದಿದೆ. ಶಿವರಾತ್ರಿ ಹಬ್ಬದ ವೇಳೆ ತೆಗೆದ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ.

     

    View this post on Instagram

     

    A post shared by Ragini dwivedi (@rraginidwivedi)

    ಇನ್ನೂ ರಾಗಿಣಿ ದ್ವಿವೇದಿ ಅವರ ಕೈಯಲ್ಲಿ 7ಕ್ಕೂ ಹೆಚ್ಚು ಸಿನಿಮಾಗಳು ಕೈಯಲ್ಲಿದೆ. ಈ ವರ್ಷ ಒಂದೊಂದೇ ಸಿನಿಮಾಗಳು ತೆರೆಗೆ ಬರಲಿದೆ.

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ರನ್ನನಿಗೆ ವಿಶೇಷ ಉಡುಗೊರೆ ನೀಡಿದ ಅರ್ಜುನ್ ಜನ್ಯ

    ರನ್ನನಿಗೆ ವಿಶೇಷ ಉಡುಗೊರೆ ನೀಡಿದ ಅರ್ಜುನ್ ಜನ್ಯ

    ರ್ಜುನ್ ಜನ್ಯ (Arjun Janya) ಸ್ಟಾರ್ ಮ್ಯೂಸಿಕ್ ಡೈರೆಕ್ಟರ್ ಆಗಿ ಗುರುತಿಸಿಕೊಂಡಿದ್ದಾರೆ. ಇದೀಗ ಒಂದು ಹೆಜ್ಜೆ ಮುಂದೆ ಹೋಗಿ ನಿರ್ದೇಶನಕ್ಕೂ ಕೈ ಹಾಕ್ತಿದ್ದಾರೆ. ಇದರ ನಡುವೆ ಕಿಚ್ಚ ಸುದೀಪ್ (Kiccha Sudeep) ಅವರನ್ನ ಅರ್ಜುನ್ ಜನ್ಯ ಭೇಟಿಯಾಗಿ ಸಂಕ್ರಾಂತಿ ಹಬ್ಬಕ್ಕೆ ವಿಶೇಷ ಉಡುಗೊರೆ ನೀಡಿದ್ದಾರೆ. ಇದನ್ನೂ ಓದಿ:ಸತತ ಸೋಲಿನಿಂದ ಬೇಸತ್ತ ಪೂಜಾಗೆ ನಿರ್ದೇಶಕ ತ್ರಿವಿಕ್ರಮ್ ಸಲಹೆ

    `ಕೆಂಪೇಗೌಡ’ (Kempegowda) ಸಿನಿಮಾಗೆ ಮ್ಯೂಸಿಕ್ ಕಂಪೋಸ್ ಮಾಡಿದ ಮೇಲೆ ಅರ್ಜುನ್ ಜನ್ಯ ಅವರ ಲಕ್ ಚೇಂಜ್ ಆಯ್ತು. ಈ ಸಿನಿಮಾಗೆ ಮ್ಯೂಸಿಕ್ ಕಂಪೋಸ್ ಮಾಡಲು ಅವಕಾಶ ಕೊಟ್ಟಿದ್ದೆ ಸುದೀಪ್, ಹಾಗಾಗಿ ತನ್ನ ಪಾಲಿನ ಗಾಡ್ ಫಾದರ್ ಎಂದು ಜನ್ಯ ಸಾಕಷ್ಟು ಬಾರಿ ಹೇಳಿದ್ದಾರೆ.

    ಇದೀಗ ಸಂಕ್ರಾಂತಿ ಹಬ್ಬದ (Sankranthi Festival) ಪ್ರಯುಕ್ತ ಕಿಚ್ಚನಿಗೆ ಅರ್ಜುನ್ ಜನ್ಯ ವಿಶೇಷ ಉಡುಗೊರೆ ನೀಡಿದ್ದಾರೆ. ಬಾಸ್ ಹೆಸರಿನ ಜರ್ಸಿಯೊಂದನ್ನ (Jersy) ಉಡುಗೊರೆಯಾಗಿ ನೀಡಿದ್ದಾರೆ.

    ಇನ್ನೂ ರಿಯಾಲಿಟಿ ಶೋ ಜಡ್ಜ್ ಆಗಿರೋದರ ಜೊತೆ ಸಿನಿಮಾ ಸಂಗೀತ ನಿರ್ದೇಶನದ ಕೆಲಸಗಳಲ್ಲಿ ಅರ್ಜುನ್ ಜನ್ಯ ಬ್ಯುಸಿಯಾಗಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ವಿಧಾನಸೌಧ ಮುಂಭಾಗ ಬಸವಣ್ಣ, ಕೆಂಪೇಗೌಡ ಪ್ರತಿಮೆಗಳಿಗೆ ಗುದ್ದಲಿ ಪೂಜೆ – 2 ತಿಂಗಳಲ್ಲಿ ಪ್ರತಿಷ್ಠಾಪನೆ: ಬೊಮ್ಮಾಯಿ

    ವಿಧಾನಸೌಧ ಮುಂಭಾಗ ಬಸವಣ್ಣ, ಕೆಂಪೇಗೌಡ ಪ್ರತಿಮೆಗಳಿಗೆ ಗುದ್ದಲಿ ಪೂಜೆ – 2 ತಿಂಗಳಲ್ಲಿ ಪ್ರತಿಷ್ಠಾಪನೆ: ಬೊಮ್ಮಾಯಿ

    ಬೆಂಗಳೂರು: ವಿಧಾನಸೌಧದ (Vidhana Soudha) ಮುಂಭಾಗದಲ್ಲಿ ಜಗಜ್ಯೋತಿ ಬಸವೇಶ್ವರ ಮತ್ತು ನಾಡಪ್ರಭು ಕೆಂಪೇಗೌಡರ ಪುತ್ಥಳಿ (Statue) ನಿರ್ಮಾಣ ಕಾಮಗಾರಿಯ ಭೂಮಿ ಪೂಜಾ ಕಾರ್ಯ ಶುಕ್ರವಾರ ನೆರವೇರಿದೆ. ಗುದ್ದಲಿ ಪೂಜೆ ನೆರವೇರಿಸಿದ ಬಳಿಕ ಮಾತನಾಡಿದ ಸಿಎಂ ಬೊಮ್ಮಾಯಿ (Basavaraj Bommai),  ಜಗಜ್ಯೋತಿ ಬಸವಣ್ಣ (Basavanna) ಹಾಗೂ ನಾಡಪ್ರಭು ಕೆಂಪೇಗೌಡರ (Kempegowda) ಚಿಂತನೆ ನಾಡಿನಲ್ಲಿ ಹರಿಯಬೇಕು ಎಂದು ನುಡಿದಿದ್ದಾರೆ.

    ಈ ಇಬ್ಬರೂ ಮಹಾನ್ ಪುರುಷರ ಆಡಳಿತ ಮತ್ತು ಆಧ್ಯಾತ್ಮಿಕ ಚಿಂತನೆ ನಮ್ಮ ನಾಡಿನಲ್ಲಿ ಬರಬೇಕು. ಈ ಶಕ್ತಿ ಸೌಧದಿಂದ ಅದು ಹರಿಯಬೇಕು. ಆ ವಿಚಾರಗಳು ಹರಿದು ಕರ್ನಾಟಕ ಸಮಗ್ರವಾಗಿ ಅಭಿವೃದ್ಧಿಯಾಗಿರುವ, ಸಾಮರಸ್ಯವಿರುವ, ಭಾರತದಲ್ಲಿಯೇ ಅತ್ಯಂತ ಶ್ರೇಷ್ಠ ರಾಜ್ಯವಾಗಬೇಕು. ಈ ಇಬ್ಬರೂ ಮಹಾತ್ಮರ ಪ್ರೇರಣೆ ವಿಧಾನಸೌಧದಲ್ಲಿ ನಿಲ್ಲಬೇಕು ಎಂಬ ಕಾರಣಕ್ಕೆ ಪ್ರತಿಮೆಗಳನ್ನು ಸ್ಥಾಪಿಸಲಾಗಿದೆ ಎಂದು ತಿಳಿಸಿದರು.

    ನವ ಕರ್ನಾಟಕ ನಿರ್ಮಾಣಕ್ಕೆ ಭದ್ರ ಬುನಾದಿ:
    ಬರುವ ದಿನಗಳಲ್ಲಿ ನಾಡಿನ ಜನತೆಗೆ ಒಳ್ಳೆಯದಾಗಿ ನವ ಕರ್ನಾಟಕ ನಿರ್ಮಾಣಕ್ಕೆ ಭದ್ರ ಬುನಾದಿ ಹಾಕಲಾಗಿದೆ. ಇಂದಿನಿಂದ ಈ ಕೆಲಸ ಪ್ರಾರಂಭವಾಗಿದೆ. ಇನ್ನೆರಡು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಂಡು ಎಲ್ಲರೂ ಸೇರಿ ಉದ್ಘಾಟನೆ ಮಾಡೋಣ. ಕನ್ನಡ ನಾಡಿಗೆ ಇದೊಂದು ಶುಭದಿನ ಎಂದು ಮುಖ್ಯಮಂತ್ರಿಗಳು ಅಭಿಪ್ರಾಯಪಟ್ಟರು.

    ನಾಡು ಕಟ್ಟಿರುವ ಅಪ್ರತಿಮ ನಾಯಕರು:
    ಇವರು ಕನ್ನಡನಾಡಿನಲ್ಲಿ ಹುಟ್ಟಿ, ಕ್ರಾಂತಿಯನ್ನು ಮಾಡಿದ ಇಬ್ಬರು ಮಹಾನ್ ಪುರುಷರು. ಒಂದು ವಿಶ್ವಬಂಧು, ಸಾಮಾಜಿಕ, ಆರ್ಥಿಕ ಹಾಗೂ ವೈಚಾರಿಕ ಕ್ರಾಂತಿಯನ್ನು ಕರ್ನಾಟಕದಲ್ಲಿ 12 ನೇ ಶತಮಾನದಲ್ಲಿ ಮಾಡಿ ಜಗತ್ತಿಗೆ ದರ್ಶನವನ್ನು ನೀಡಿರುವವರ ಪುತ್ಥಳಿ. ಮತ್ತೊಂದು ನಾಡು ಕಟ್ಟಿರುವ ಅಪ್ರತಿಮ ನಾಯಕರು, ಜನಹಿತಕ್ಕಾಗಿ ಕೆರೆಕಟ್ಟೆಗಳು, ಊರು ಕೇರಿಗಳನ್ನು, ಮಾರುಕಟ್ಟೆಗಳನ್ನು ಕಟ್ಟಿ ಮಾದರಿ ಆಡಳಿತ ಮಾಡಿರುವ ನಾಡಪ್ರಭು ಕೆಂಪೇಗೌಡರ ಪುತ್ಥಳಿ ಎಂದು ಹೇಳಿದರು. ಇದನ್ನೂ ಓದಿ: ಜ.31 ರಿಂದ 66 ದಿನ ಸಂಸತ್ ಬಜೆಟ್ ಅಧಿವೇಶನ – ಪ್ರಹ್ಲಾದ್ ಜೋಶಿ

    ಇವುಗಳನ್ನು ವಿಧಾನಸೌಧದ ಮುಂಭಾಗದಲ್ಲಿ ನಿರ್ಮಿಸಲು ಸಚಿವ ಸಂಪುಟದಲ್ಲಿ ತೀರ್ಮಾನಿಸಲಾಗಿತ್ತು. ವಿಧಾನಸಭಾಧ್ಯಕ್ಷರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿಯವರು ಎಲ್ಲಾ ನಾಯಕರ ಅನುಮತಿ ಪಡೆದಿದ್ದರು. ಸಚಿವ ಆರ್. ಅಶೋಕ್ ಅವರಿಗೆ ಇದರ ಜವಾಬ್ದಾರಿ ನೀಡಲಾಗಿತ್ತು. ಅಶೋಕ್ ಅವರು ಅತ್ಯಂತ ಅಚ್ಚುಕಟ್ಟಾಗಿ ಇದರ ಜವಾಬ್ದಾರಿಯನ್ನು ನಿರ್ವಹಿಸಿ, ಕೇವಲ 2 ತಿಂಗಳೊಳಗೆ ಕಾರ್ಯನಿರ್ವಹಿಸಿ ಕ್ರಮ ಕೈಗೊಂಡಿದ್ದಾರೆ. ನಾಡಿನ ಎಲ್ಲಾ ಪರಮಪೂಜ್ಯರ ಸಾನಿಧ್ಯದಲ್ಲಿ ಅವರ ಆಶೀರ್ವಾದದೊಂದಿಗೆ ಒಂದು ಶಂಕುಸ್ಥಾಪನೆ ನೆರವೇರಿದೆ ಎಂದು ನುಡಿದರು. ಇದನ್ನೂ ಓದಿ: 15 ಸಿಮ್‌ ಕಾರ್ಡ್‌ ಬದಲಾಯಿಸಿ, ತಲೆ ಬೋಳಿಸಿದ್ದ ಸ್ಯಾಟ್ರೋ ರವಿ ಕೊನೆಗೂ ಸಿಕ್ಕಿಬಿದ್ದ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ನಿರ್ಮಲಾನಂದ ಸ್ವಾಮೀಜಿ ಹೆಗಲ ಮೇಲೆ ಕೈಹಾಕಿ ಅಶೋಕ್ ಅಪಮಾನ : ಸಿಎಂ ಇಬ್ರಾಹಿಂ ಕಿಡಿ

    ನಿರ್ಮಲಾನಂದ ಸ್ವಾಮೀಜಿ ಹೆಗಲ ಮೇಲೆ ಕೈಹಾಕಿ ಅಶೋಕ್ ಅಪಮಾನ : ಸಿಎಂ ಇಬ್ರಾಹಿಂ ಕಿಡಿ

    -ದೇಶದಲ್ಲಿ ಅಷ್ಟಲಕ್ಷ್ಮೀಯರು ಹೋಗಿ ಇದೀಗ ದರಿದ್ರ ಲಕ್ಷ್ಮಿ ಉಳಿದಿದ್ದಾಳೆ
    -ಕಾಂಗ್ರೆಸ್/ಬಿಜೆಪಿ ಇಬ್ಬರು ಒಂದೇ ಬೀದಿಯಲ್ಲಿರುವ ಪತಿವ್ರತೆಯರು

    ಕಲಬುರಗಿ: ನಿರ್ಮಲಾನಂದ ಸ್ವಾಮೀಜಿಗೆ (Nirmalananda Swamiji)ಗೌರವ ಕೊಡದೇ ಇರುವುದು ಅಕ್ಷಮ್ಯ ಅಪರಾಧ. ನಿರ್ಮಲಾನಂದ ಸ್ವಾಮೀಜಿ ಹೆಗಲ ಮೇಲೆ ಕೈಹಾಕಿ ಅಶೋಕ್ ಘೋರ ಅಪಮಾನ ಮಾಡಿದ್ದಾರೆ ಎಂದು ಜೆಡಿಎಸ್‌ (JDS) ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ (CM Ibrahim) ಕಿಡಿಕಾರಿದ್ದಾರೆ.

    ಕಲಬುರಗಿಯಲ್ಲಿ (Kalburgi) ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೆಂಪೇಗೌಡರ ಮೂರ್ತಿ ಅನಾವರಣ ಕಾರ್ಯಕ್ರಮದಲ್ಲಿ ನಿರ್ಮಲಾನಂದ ಸ್ವಾಮೀಜಿಗೆ ಅಪಮಾನ ಮಾಡಿರುವ ವಿಚಾರವಾಗಿ ಮಾತನಾಡಿದ ಅವರು, ಬಿಜೆಪಿಯವರಿಗೆ (BJP) ಅಧಿಕಾರದ ಮದ ನೆತ್ತಿಗೆ ಹತ್ತಿದೆ. ಈ ಹಿಂದೆ ಅಮಿತ್ ಶಾ (Amit Shah) ಸ್ವಾಮೀಜಿ ಮುಂದೆ ಕಾಲು ಮೇಲೆ ಕಾಲು ಹಾಕಿ ಕುಳಿತ್ತಿದ್ದರು. ನಿರ್ಮಲಾನಂದ ಸ್ವಾಮೀಜಿಗೆ ಗೌರವ ಕೊಡದೇ ಇರುವುದು ಅಕ್ಷಮ್ಯ ಅಪರಾಧ. ನಿರ್ಮಲಾನಂದ ಸ್ವಾಮೀಜಿ ಹೆಗಲ ಮೇಲೆ ಕೈಹಾಕಿ ಅಶೋಕ್ ಘೋರ ಅಪಮಾನ ಮಾಡಿದ್ದಾರೆ. ಯಾರಿಗೆ ಯಾವ ರೀತಿ ಗೌರವ ಕೊಡಬೇಕು ಎನ್ನುವುದನ್ನು ಬಿಜೆಪಿಯವರು ಮರೆತ್ತಿದ್ದಾರೆ. ಬಿಜೆಪಿಯಲ್ಲಿ ಬುದ್ದಿವಾದ ಹೇಳುವ ಹಿರಿಯರು ಯಾರು ಇಲ್ಲ. ಬೊಮ್ಮಾಯಿ (Basavaraj Bommai) ಬಸವಕೃಪ ಮರೆತು, ಕೇಶವ ಕೃಪಾಕ್ಕೆ ಶರಣಾಗಿದ್ದಾರೆ ಎಂದಿದ್ದಾರೆ.

    ಇದೇ ವೇಳೆ ಕೆಂಪೇಗೌಡ ಪ್ರತಿಮೆ (Kempegowda Statue) ಉದ್ಘಾಟನೆ ಸಮಾರಂಭಕ್ಕೆ ದೇವೇಗೌಡರನ್ನು (H.D.Devegowda) ಆಹ್ವಾನಿಸದೇ ಇರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ದೇವೆಗೌಡರು ಪ್ರಧಾನಿಯಾದ ಮೊದಲ ಕನ್ನಡಿಗ. ದೇವೇಗೌಡರಿಗೆ ಕರೆಯದೆ ಇರೋದು ಕನ್ನಡಿಗರಿಗೆ ಮಾಡಿದ ಅವಮಾನ. ಸಿದ್ದರಾಮಯ್ಯರನ್ನು (Siddaramaiah) ಸಹ ಕಾರ್ಯಕ್ರಮಕ್ಕೆ ಕರೆಯಬೇಕಿತ್ತು. ಪ್ರಧಾನಿ ನಾಡು ಕಟ್ಟಲು ರಾಜ್ಯಕ್ಕೆ ಬಂದಿಲ್ಲ, ಬಿಜೆಪಿ ಕಟ್ಟಲು ಬಂದಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಸಿಎಂ ಪತ್ರ ಬರೆದಿದ್ದು ಯಾವಾಗ? ದೇವೇಗೌಡರ ನಿವಾಸಕ್ಕೆ ತಲುಪಿಸಿದ್ದು ಯಾವಾಗ? – ಬಿಜೆಪಿಗೆ ಜೆಡಿಎಸ್ ಪ್ರಶ್ನೆ

    ನಂತರ, ಮೋದಿ ರಾಜ್ಯಕ್ಕೆ ಬಂದಿದ್ದು, ಜೆಡಿಎಸ್‍ಗೆ ಲಾಭವಾಗಿದೆ. ಇದೇ ರೀತಿ ಇನ್ನೂ ಎರಡು ಸಲ ರಾಜ್ಯಕ್ಕೆ ಬಂದು ಹೋದರೆ ಜೆಡಿಎಸ್‍ಗೆ ಒಳ್ಳೆಯದು. ಪೆಟ್ರೋಲ್ ಲೀಟರ್‌ಗೆ ನೂರು ರೂಪಾಯಿ ಆಗಿದೆ. ದೇಶದಲ್ಲಿ ಅಷ್ಟಲಕ್ಷ್ಮೀಯರು ಹೋಗಿ ಇದೀಗ ದರಿದ್ರ ಲಕ್ಷ್ಮಿ ಉಳಿದಿದ್ದಾಳೆ. ಕೆಂಪೆಗೌಡರ ಮೂರ್ತಿ ಅನಾವರ ಸಂತೋಷ. ಆದರೆ ಅದು ಬಿಜೆಪಿ ಮಯವಾಗಿದ್ದು ಸರಿಯಲ್ಲ. ಜನಕ್ಕೆ ಮೂರ್ತಿಕ್ಕಿಂತ ರಾಜ್ಯಕ್ಕೆ ಮೋದಿ ಆರ್ಥಿಕ ಶಕ್ತಿ ಏನು ಕೊಟ್ಟಿದ್ದಾರೆ? ರಾಜ್ಯದ ಜಿಎಸ್‍ಟಿ ಸೇರಿದಂತೆ ಯಾವ ವಿಚಾರಗಳನ್ನು ಪ್ರಸ್ತಾಪಿಸಿದರು ಎಂದು ಪ್ರಶ್ನಿಸಿದ್ದಾರೆ.

    ನಂತರ ಕಾಂಗ್ರೆಸ್/ಬಿಜೆಪಿ  (Congress/BJP) ಇಬ್ಬರು ಒಂದೇ ಬೀದಿಯಲ್ಲಿರುವ ಪತಿವ್ರತೆಯರು, ಅವರು 40%, ಇವರು 20%. ಎರಡು ಪಕ್ಷಗಳು ಸಾಕಷ್ಟು ಭ್ರಷ್ಟಾಚಾರ ಮಾಡಿವೆ. ಮುಂಬರುವ ಚುನಾವಣೆಯಲ್ಲಿ ಜೆಡಿಎಸ್ ಅಧಿಕಾರಕ್ಕೆ ಬರುವುದು ಶತಸಿದ್ಧ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿ ಮೋದಿ ಎಲೆಕ್ಷನ್ ಗೇಮ್- ಪ್ರಬಲ ಸಮುದಾಯದ ಮೇಲೂ ಹೈಕಮಾಂಡ್ ಕಣ್ಣು

    Live Tv
    [brid partner=56869869 player=32851 video=960834 autoplay=true]

  • ದೇವೇಗೌಡರಿಗೆ ಆಹ್ವಾನ ನೀಡದ್ದು ಸಮಸ್ತ ಕನ್ನಡಿಗರಿಗೆ ಮಾಡಿದ ಅಪಮಾನ : ಬಿಜೆಪಿ ವಿರುದ್ಧ ಜೆಡಿಎಸ್‌ ಆಕ್ರೋಶ

    ದೇವೇಗೌಡರಿಗೆ ಆಹ್ವಾನ ನೀಡದ್ದು ಸಮಸ್ತ ಕನ್ನಡಿಗರಿಗೆ ಮಾಡಿದ ಅಪಮಾನ : ಬಿಜೆಪಿ ವಿರುದ್ಧ ಜೆಡಿಎಸ್‌ ಆಕ್ರೋಶ

    ಬೆಂಗಳೂರು: ಬಿಜೆಪಿ, ನರೇಂದ್ರ ಮೋದಿ(Narendra Modi) ಒಕ್ಕಲಿಗರ ಕಾರ್ಡ್ ಪ್ಲೇಗೆ ಜೆಡಿಎಸ್(JDS) ಈಗ ದೇವೇಗೌಡರ(Devegowda) ಎಮೋಷನಲ್ ಕಾರ್ಡ್ ಪ್ಲೇ ಮಾಡಿದೆ.

    ಕೆಂಪೇಗೌಡರ ಪ್ರತಿಮೆ(Kempegowda Statue) ಅನಾವರಣಕ್ಕೆ ದೇವೇಗೌಡರ ಆಹ್ವಾನ ಮಾಡಿಲ್ಲ ಎಂಬುದನ್ನು ಮುಂದಿಟ್ಟುಕೊಂಡು ಹೋರಾಟಕ್ಕೆ ನಿರ್ಧಾರ ಮಾಡಿದೆ. ಪ್ರತಿಮೆ ಶಂಕು ಸ್ಥಾಪನೆಗೆ ಕರೆದು ಪ್ರತಿಮೆ ಅನಾವರಣಕ್ಕೆ ಆಹ್ವಾನಿಸದ್ದಕ್ಕೆ ಬಿಜೆಪಿ ವಿರುದ್ಧ ಸರಣಿ ಟ್ವೀಟ್‌ ಮಾಡಿ ಆಕ್ರೋಶ ಹೊರಹಾಕಿದೆ. ಇದನ್ನೂ ಓದಿ: 2014ಕ್ಕೂ ಮೊದಲು 70, ಈಗ 140 ವಿಮಾನ ನಿಲ್ದಾಣ: ಬೆಂಗಳೂರನ್ನು ಹಾಡಿ ಹೊಗಳಿದ ಮೋದಿ

    ಟ್ವೀಟ್‌ನಲ್ಲಿ ಏನಿದೆ?
    ನಾಡಪ್ರಭು ಕೆಂಪೇಗೌಡರ ನಂತರ ಬೆಂಗಳೂರು ಅಭಿವೃದ್ಧಿಗೆ ಮಹತ್ತರ ಕೊಡುಗೆ ನೀಡಿದ, ಕನ್ನಡ ನೆಲದಿಂದ ಪ್ರಧಾನಿ ಆಗಿದ್ದ ಏಕೈಕ ಕನ್ನಡಿಗರಾದ ದೇವೇಗೌಡ ಅವರನ್ನು ಕೆಂಪೇಗೌಡರ ಪ್ರತಿಮೆ ಲೋಕಾರ್ಪಣೆ ಕಾರ್ಯಕ್ರಮಕ್ಕೆ ರಾಜ್ಯ ಸರ್ಕಾರ ಆಹ್ವಾನ ಮಾಡದಿರುವುದು ಸಮಸ್ತ ಕನ್ನಡಿಗರಿಗೆ ಮಾಡಿದ ಅಪಮಾನ. ಇದನ್ನೂ ಓದಿ: ನಾಡಪ್ರಭು ಕೆಂಪೇಗೌಡರ 108 ಅಡಿ ಎತ್ತರದ ಕಂಚಿನ ಪ್ರತಿಮೆ ಲೋಕಾರ್ಪಣೆ

    ನಾಡಪ್ರಭುಗಳ ಪ್ರತಿಮೆ ಸ್ಥಾಪನೆಯ ಕಾಮಗಾರಿಗೆ ಅಡಿಗಲ್ಲು ಹಾಕುವ ಕಾರ್ಯಕ್ರಮಕ್ಕೆ ಮಾಜಿ ಪ್ರಧಾನಿಗಳನ್ನು ಆಹ್ವಾನಿಸಿದ ಬಿಜೆಪಿ ಸರ್ಕಾರ ಅದೇ ಪ್ರಧಾನಿಗಳಿಂದ ಪ್ರತಿಮೆ ಲೋಕಾರ್ಪಣೆ ಮಾಡಿಸುವ ಸಮಾರಂಭಕ್ಕೆ ಅವರನ್ನು ಆಹ್ವಾನ ಮಾಡಲಿಲ್ಲ ಯಾಕೆ?

    ಯಾವುದೋ ಸ್ಥಳೀಯ ಮಟ್ಟದ ಕಾರ್ಯಕ್ರಮ ಆಗಿದ್ದಿದ್ದರೆ ಯಾರೂ ಪ್ರಶ್ನೆ ಮಾಡುತ್ತಿರಲಿಲ್ಲ. ಆದರೆ, ನಾಡಪ್ರಭುಗಳ ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ಪ್ರಧಾನಿಗಳೇ ಬರುತ್ತಾರೆ ಎಂದರೆ ನಮ್ಮ ಹೆಮ್ಮೆಯ ಮಾಜಿ ಪ್ರಧಾನಿಗಳನ್ನು ಅಧಿಕೃತವಾಗಿ ಕರೆಯಲೇಬೇಕಿತ್ತು. ಅವರ ಬಗ್ಗೆ ಅನಾದರ ತೋರಿದ್ದು ಕನ್ನಡಿಗರಿಗೆ ಅಪಾರ ನೋವುಂಟು ಮಾಡಿದೆ. ದನ್ನೂ ಓದಿ: ಮೋದಿಯಿಂದ ಏಷ್ಯಾದ ಮೊದಲ ಗಾರ್ಡನ್‌ ಟರ್ಮಿನಲ್‌ ಉದ್ಘಾಟನೆ –ವಿಶೇಷತೆ ಏನು?

    ರಾಜ್ಯ ಬಿಜೆಪಿ ಸರ್ಕಾರ ಬಿಜೆಪಿ ನಾಯಕರು ರಾಜಕೀಯ ಕಾರಣಕ್ಕಾಗಿ ಮಾಜಿ ಪ್ರಧಾನಿಗಳನ್ನು ಕಡೆಗಣಿಸಿದ್ದಾರೆ ಎನ್ನುವುದು ಎಲ್ಲರ ಭಾವನೆ. ಇದನ್ನು ಬಿಜೆಪಿ ಪಕ್ಷದ ಕಾರ್ಯಕ್ರಮದಂತೆ ನಡೆಸಿದ್ದು ಮಾಜಿ ಪ್ರಧಾನಿಗಳಿಗೆ ಮಾತ್ರವಲ್ಲ, ಸಮಸ್ತ ಕನ್ನಡಿಗರು ಹಾಗೂ ಸ್ವತಃ ನಾಡಪ್ರಭುಗಳಿಗೇ ಮಾಡಿದ ಅಪಮಾನ. ಇದು ಅಕ್ಷಮ್ಯದ ಪರಮಾವಧಿ

    ಸರ್ವ ಜನರನ್ನು ಸಮಾನವಾಗಿ ಕಂಡು ಆದರ್ಶ ಪ್ರಭುವಾಗಿದ್ದ ನಾಡಪ್ರಭು ಕೆಂಪೇಗೌಡರನ್ನು ರಾಜಕೀಯಕ್ಕೆ ಎಳೆಯುವ ಕೆಲಸವನ್ನು ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರೇ ಮಾಡಿರುವುದು ಸ್ಪಷ್ಟ. ಇದು ಅತ್ಯಂತ ದುರದೃಷ್ಟಕರ. ರಾಜ್ಯ ವಿಧಾನಸಭೆ ಚುನಾವಣೆಯನ್ನು ದೃಷ್ಟಿಯಲ್ಲಿ ಇಟ್ಟುಕೊಂಡೇ ಪ್ರತಿಮೆ ಅನಾವರಣ ಮಾಡಲಾಗಿದೆ ಎನ್ನುವುದು ಸತ್ಯ.

    ಪ್ರಧಾನಿ ನರೇಂದ್ರ ಮೋದಿ ಅವರನ್ನು ರಾಜ್ಯ ಸರಕಾರ ಹಾಗೂ ಬಿಜೆಪಿ ನಾಯಕರು ದಾರಿ ತಪ್ಪಿಸಿದ್ದಾರೆ ಎನ್ನುವುದರಲ್ಲಿ ಸಂಶಯ ಇಲ್ಲ. ಮಾನ್ಯ ದೇವೇಗೌಡರ ಬಗ್ಗೆ ಅತೀವ ಗೌರವ ಇಟ್ಟುಕೊಂಡಿರುವ ಪ್ರಧಾನಿಗಳ ಬಗ್ಗೆಯೇ ಕನ್ನಡಿಗರಲ್ಲಿ ತಪ್ಪು ಅಭಿಪ್ರಾಯ ಮೂಡುವಂತೆ ರಾಜ್ಯ ಬಿಜೆಪಿ ಸರಕಾರ ಮತ್ತು ಬಿಜೆಪಿ ನಾಯಕರು ವರ್ತಿಸಿದ್ದಾರೆ.

    ಕೆಂಪೇಗೌಡರು ಬಿಜೆಪಿ ಕರ್ನಾಟಕದ ಆಸ್ತಿಯಲ್ಲ, ಕೆಲ ಸಚಿವರ ಜಹಗೀರಲ್ಲ, ರಾಜಕೀಯಕ್ಕೆ ಬಳಕೆ ಮಾಡಿಕೊಳ್ಳುವ ವಿಷಯವೂ ಅಲ್ಲ. ನಾಡಪ್ರಭುಗಳು ಸಮಸ್ತ ಕನ್ನಡಿಗರ ಹೆಮ್ಮೆ. ನಮ್ಮೆಲ್ಲರ ಅರಾಧ್ಯದೈವ. ಇನ್ನು, ಬೆಂಗಳೂರು ನಗರ ನಮ್ಮೆಲ್ಲರದ್ದು. ಸಮಸ್ತ ಕನ್ನಡಿಗರ ಜೀವನಾಡಿ. ಈ ಸೂಕ್ಷ್ಮವನ್ನು ರಾಜ್ಯ ಬಿಜೆಪಿ ಸರಕಾರ ಮರೆತು ಕನ್ನಡಿಗರನ್ನು ಅಪಮಾನಿಸಿದೆ.

     

  • ನಾಡಪ್ರಭು ಕೆಂಪೇಗೌಡರ 108 ಅಡಿ  ಎತ್ತರದ ಕಂಚಿನ ಪ್ರತಿಮೆ ಲೋಕಾರ್ಪಣೆ

    ನಾಡಪ್ರಭು ಕೆಂಪೇಗೌಡರ 108 ಅಡಿ ಎತ್ತರದ ಕಂಚಿನ ಪ್ರತಿಮೆ ಲೋಕಾರ್ಪಣೆ

    ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿನಲ್ಲಿ(Bengaluru) ನಾಡಪ್ರಭು ಕೆಂಪೇಗೌಡರ (Statue of Kempegowda) 108 ಅಡಿಯ ಕಂಚಿನ ಪ್ರತಿಮೆ ಲೋಕಾರ್ಪಣೆ ಮಾಡಿದ್ದಾರೆ.

    ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ(Kempegowda International Airport) ಸಮೀಪ ಅನಾವರಣಗೊಂಡಿರುವ 108 ಅಡಿ ಎತ್ತರದ ಪ್ರತಿಮೆ ಕನ್ನಡಿಗರ ಸ್ವಾಭಿಮಾನದ ಸಂಕೇತವಾಗಿದ್ದು ಇದಕ್ಕೆ ಪ್ರಗತಿಯ ಪ್ರತಿಮೆ(Statue of Prosperity) ಎಂದು ಕರ್ನಾಟಕ ಸರ್ಕಾರ ನಾಮಕರಣ ಮಾಡಿದೆ. ಇದನ್ನೂ ಓದಿ: ಮೋದಿಯಿಂದ ಏಷ್ಯಾದ ಮೊದಲ ಗಾರ್ಡನ್‌ ಟರ್ಮಿನಲ್‌ ಉದ್ಘಾಟನೆ –ವಿಶೇಷತೆ ಏನು?

     

    ನಾಡಪ್ರಭು ಕೆಂಪೇಗೌಡರ ಪ್ರತಿಮೆ ನಗರ ನಿರ್ಮಾತೃ ಒಬ್ಬರ ವಿಶ್ವದ ಅತಿ ಎತ್ತರದ ಪ್ರತಿಮೆ ಇದು ಎಂಬ ಹೆಗ್ಗಳಿಕೆಗೆ ಪಡೆದಿರುವುದು ವಿಶೇಷ. ಗುಜರಾತ್‌ನಲ್ಲಿ ಏಕತಾ ಪ್ರತಿಮೆ ನಿರ್ಮಾಣ ಮಾಡಿದ ರಾಮ್ ಸುತಾರ್(Ram V Sutar) ಕ್ರಿಯೇಷನ್ಸ್ ಅವರೇ ಈ ಕೆಂಪೇಗೌಡ ಪ್ರತಿಮೆಯ ವಿನ್ಯಾಸ ಹಾಗೂ ನಿರ್ಮಾಣ ಮಾಡಿದ್ದಾರೆ.

    ಈ ಪ್ರತಿಮೆ ನಿರ್ಮಾಣಕ್ಕೆ 84 ಕೋಟಿ ರೂ. ಖರ್ಚು ಮಾಡಲಾಗಿದ್ದು, ಪ್ರತಿಮೆಯ ಖಡ್ಗವೇ 4 ಸಾವಿರ ಕೆಜಿ ತೂಕ ಹೊಂದಿದೆ. 120 ಟನ್ ಉಕ್ಕನ್ನು ಪ್ರತಿಮೆ ನಿರ್ಮಾಣಕ್ಕೆ ಬಳಕೆ ಮಾಡಲಾಗಿದೆ. 98 ಟನ್‌ ಕಂಚನ್ನು ಬಳಕೆ ಮಾಡಲಾಗಿದೆ.

    ಈ ಪ್ರತಿಮೆ ಬೆಂಗಳೂರು ನಗರದಲ್ಲಿಯೇ ಅತಿ ಎತ್ತರದ ಪ್ರತಿಮೆಯಾಗಿದ್ದು, ಪ್ರತಿಮೆ ಜಾಗದಲ್ಲಿಯೇ 23 ಎಕರೆ ಪ್ರದೇಶದಲ್ಲಿ ಕೆಂಪೇಗೌಡ ಥೀಮ್ ಪಾರ್ಕ್ ನಿರ್ಮಾಣವಾಗಲಿದೆ.

    Live Tv
    [brid partner=56869869 player=32851 video=960834 autoplay=true]

  • ಮೋದಿ ಬೆಂಗಳೂರು ಡೈರಿ: ಎಷ್ಟು ಗಂಟೆಗೆ ಏನು ಕಾರ್ಯಕ್ರಮ? ಯಾವೆಲ್ಲ ರಸ್ತೆಗಳು ಬಂದ್‌?

    ಮೋದಿ ಬೆಂಗಳೂರು ಡೈರಿ: ಎಷ್ಟು ಗಂಟೆಗೆ ಏನು ಕಾರ್ಯಕ್ರಮ? ಯಾವೆಲ್ಲ ರಸ್ತೆಗಳು ಬಂದ್‌?

    ಬೆಂಗಳೂರು: ಎಲೆಕ್ಷನ್ ಸನಿಹದಲ್ಲಿ ಪ್ರಧಾನಿ ನರೇಂದ್ರ ಮೋದಿ(Narendra Modi) ಸ್ವಾಗತಿಸಲು ಬೆಂಗಳೂರು(Bengaluru) ಸಜ್ಜಾಗುತ್ತಿದೆ. ಮೋದಿ ಶುಕ್ರವಾರ ಸಂಚರಿಸುವ ಮಾರ್ಗಗಳೆಲ್ಲಾ ಸರ್ವಾಂಗ ಸುಂದರವಾಗಿ ಬದಲಾಗಿವೆ. ಎಲ್ಲೆಡೆ ಕೇಸರಿ ಪತಾಕೆಗಳು ರಾರಾಜಿಸುತ್ತಿವೆ.

    ಹೆಚ್‍ಎಎಲ್‍ನಿಂದ ಮೆಜೆಸ್ಟಿಕ್‍ ತನಕ ಒಂದೇ ಒಂದು ರಸ್ತೆಯಲ್ಲಿ, ಎಲ್ಲಿಯೂ ಒಂದೇ ಒಂದು ಗುಂಡಿಯೂ ಕಾಣುವುದಿಲ್ಲ. ಮೋದಿ ಕಾರಲ್ಲಿ ಬರುವಾಗ ಅಕ್ಕ ಪಕ್ಕ ಇಣುಕಿದ್ರೂ ಗುಂಡಿ ಕಾಣಬಾರದು. ಆ ರೀತಿಯಾಗಿ ಎಲ್ಲಾ ತಯಾರಿಗಳನ್ನು ಸರ್ಕಾರ ಮಾಡಿಕೊಂಡಿದೆ.

    ಎಲ್ಲಾ ಕಡೆ ಭದ್ರತೆಯೂ ಡಬಲ್ ಆಗಿದೆ. ಮೋದಿ ಕಾರ್ಯಕ್ರಮ ಸಲುವಾಗಿ ಹಲವು ಮಾರ್ಗಗಳಲ್ಲಿ ವಾಹನ ಸಂಚಾರ ಬಂದ್ ಮಾಡಲಾಗಿದೆ. ಸವಾರರಿಗೆ ತೊಂದರೆ ಆಗದಿರಲಿ ಎಂದು ಪರ್ಯಾಯ ಮಾರ್ಗಗಳನ್ನು ಸೂಚಿಸಲಾಗಿದೆ. ಈಗಾಗಲೇ ಸೆಂಟ್ರಲ್ ರೈಲು ನಿಲ್ದಾಣ ಕೂಡ ಮದುವಣಗಿತ್ತಿಯಂತೆ ಸಿಂಗಾರಗೊಂಡಿದೆ.

    ತರಾತುರಿಯ ಕಾಮಗಾರಿಗಳ ವಿಚಾರವಾಗಿ ಸರ್ಕಾರವನ್ನು ಕೈನಾಯಕರು ತರಾಟೆಗೆ ತೆಗೆದುಕೊಂಡಿದ್ದಾರೆ. ಇದೇ ವೇಳೆ, ಡಾಂಬರೀಕರಣದ ವೆಚ್ಚ ಹೇಳಲು ಬಿಬಿಎಂಪಿ ಹಿಂದೇಟು ಹಾಕಿದೆ. ಇದನ್ನೂ ಓದಿ: ಬೆಂಗಳೂರು, ಹೈದರಾಬಾದ್‌ನಲ್ಲೂ ಇಂದಿನಿಂದ ಜಿಯೋ ಟ್ರೂ 5G ಲಭ್ಯ

    ಮೋದಿ ಬೆಂಗಳೂರು ಡೈರಿ
    * ಬೆಳಗ್ಗೆ 9:00 – ಎಚ್‍ಎಎಲ್‍ ವಿಮಾನ ನಿಲ್ದಾಣಕ್ಕೆ ಆಗಮನ
    * ಬೆಳಗ್ಗೆ 9:30 – ಮೇಖ್ರಿ ವೃತ್ತದ ಬಳಿಯ ಹೆಲಿಪ್ಯಾಡ್‍ಗೆ
    * ಬೆಳಗ್ಗೆ 9:45 – ಕನಕದಾಸ, ವಾಲ್ಮೀಕಿ ಪ್ರತಿಮೆಗೆ ಪುಷ್ಪಾರ್ಚನೆ
    * ಬೆಳಗ್ಗೆ 10:20 – ಮೆಜೆಸ್ಟಿಕ್‍ನ ಸೆಂಟ್ರಲ್ ರೈಲ್ವೆ ನಿಲ್ದಾಣಕ್ಕೆ ಆಗಮನ
    * ಬೆಳಗ್ಗೆ 10:40 – ವಂದೇಭಾರತ್ ರೈಲಿಗೆ ಹಸಿರು ನಿಶಾನೆ
    * ಬೆಳಗ್ಗೆ 10:45 – ಕಾಶಿ ದರ್ಶನ ರೈಲಿಗೆ ಹಸಿರು ನಿಶಾನೆ
    * ಬೆಳಗ್ಗೆ 11:20 – ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಆಗಮನ
    * ಬೆಳಗ್ಗೆ 11:30 – ವಿಮಾನ ನಿಲ್ದಾಣದಲ್ಲಿರುವ ಟರ್ಮಿನಲ್-2 ಉದ್ಘಾಟನೆ
    * ಮಧ್ಯಾಹ್ನ 12:00 – ಕೆಂಪೇಗೌಡ ಪ್ರತಿಮೆ ಲೋಕಾರ್ಪಣೆ
    * ಮಧ್ಯಾಹ್ನ 12:30 – ಸಾರ್ವಜನಿಕ ಸಭೆ

    ಯಾವ ರಸ್ತೆಗಳು ಬಂದ್‌?
    * ಬೆಳಿಗ್ಗೆ 8 ರಿಂದ ಮಧ್ಯಾಹ್ನ 2ರವರೆಗೆ ನಗರದ ಹಲವು ರಸ್ತೆ ಬಂದ್
    * ಸಿಟಿಓ ಜಂಕ್ಷನ್, ಪೊಲೀಸ್ ತಿಮ್ಮಯ್ಯ ಜಂಕ್ಷನ್, ರಾಜಭವನ ರಸ್ತೆ, ಬಸವೇಶ್ವರ ಸರ್ಕಲ್
    * ಪ್ಯಾಲೇಸ್ ರಸ್ತೆ, ರೇಸ್ ಕೋರ್ಸ್ ರಸ್ತೆ, ಸ್ಯಾಂಕಿ ರಸ್ತೆ, ಕ್ವೀನ್ಸ್ ರಸ್ತೆ, ಬಳ್ಳಾರಿ ರಸ್ತೆ,
    * ಶೇಷಾದ್ರಿ ರಸ್ತೆಯಲ್ಲಿ ಮಹಾರಾಣಿ ಸೇತುವೆಯಿಂದ – ರೈಲ್ವೆ ಸ್ಟೇಷನ್‍ವರೆಗೆ
    * ಕೆ.ಜಿ ರಸ್ತೆಯಲ್ಲಿ ಶಾಂತಲಾ ಜಂಕ್ಷನ್‍ನಿಂದ ಮೈಸೂರು ಬ್ಯಾಂಕ್ ವೃತ್ತದವರೆಗೂ ಬಂದ್
    * ವಾಟಾಳ್ ನಾಗರಾಜ್ ರಸ್ತೆಯಲ್ಲಿ ಖೋಡೆ ಅಂಡರ್‌ಪಾಸ್‌ನಿಂದ ಪಿ.ಎಫ್ ವರೆಗೆ

    Live Tv
    [brid partner=56869869 player=32851 video=960834 autoplay=true]

  • ಕೆಂಪೇಗೌಡರ ಪ್ರತಿಮೆ ಸ್ಥಾಪಿಸಿದ ಕೂಡಲೇ ಒಕ್ಕಲಿಗರು ಬಿಜೆಪಿ ಹಿಂದೆ ಹೋಗೋದಿಲ್ಲ: ಕುಮಾರಸ್ವಾಮಿ

    ಕೆಂಪೇಗೌಡರ ಪ್ರತಿಮೆ ಸ್ಥಾಪಿಸಿದ ಕೂಡಲೇ ಒಕ್ಕಲಿಗರು ಬಿಜೆಪಿ ಹಿಂದೆ ಹೋಗೋದಿಲ್ಲ: ಕುಮಾರಸ್ವಾಮಿ

    ಬೆಂಗಳೂರು: ಕೆಂಪೇಗೌಡರ ಪ್ರತಿಮೆ (KempegowdaStatue) ಸ್ಥಾಪನೆ ಮಾಡಿದ ಕೂಡಲೇ ಒಕ್ಕಲಿಗರ (Okkaligas) ಮತ ಬಿಜೆಪಿಗೆ (BJP) ಹೋಗುವುದಿಲ್ಲ. ಅಂತಹ ಭ್ರಮೆಯಿಂದ ಬಿಜೆಪಿ ಹೊರಗೆ ಬರಬೇಕು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ (H.D. Kumaraswamy) ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    ಕೆಂಪೇಗೌಡರ ಪ್ರತಿಮೆ, ಪ್ರಧಾನಿ ನರೇಂದ್ರ ಮೋದಿ (Narendra Modi) ಕಾರ್ಯಕ್ರಮದ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮೋದಿ ಬರುತ್ತಾರೆ ಹೋಗುತ್ತಾರೆ ಅಷ್ಟೆ. ಕೆಂಪೇಗೌಡ ಪ್ರತಿಮೆ ಅನಾವರಣ ಒಂದು ಭಾಗ. ಈಗಾಗಲೇ ರಾಜ್ಯದ ಹಲವಾರು ಭಾಗದಲ್ಲಿ ಕೆಂಪೇಗೌಡ ಪ್ರತಿಮೆಗಳು ನಿತ್ಯ ಒಂದಲ್ಲ ಒಂದು ಭಾಗದಲ್ಲಿ ಅನಾವರಣ ಆಗುತ್ತಿವೆ. ಇದು ಬಿಜೆಪಿಯ ನಿಯೋಜಿತ ಕಾರ್ಯಕ್ರಮ ಅಷ್ಟೆ. ಅದಕ್ಕೆ ನಾನು ಹೆಚ್ಚಿನ ಮಹತ್ವ ಕೊಡುವುದಿಲ್ಲ ಎಂದಿದ್ದಾರೆ. ಇದನ್ನೂ ಓದಿ: ದೆಹಲಿಯ ರಹಸ್ಯ ಸ್ಥಳದಲ್ಲಿ ಅಮಿತ್ ಶಾ ನೇತೃತ್ವದಲ್ಲಿ ಹೈವೋಲ್ಟೇಜ್ ಮೀಟಿಂಗ್

    ಕೆಂಪೇಗೌಡರ ಕನಸು ನನಸಾದಾಗ ನಾವು ಕೆಂಪೇಗೌಡರಿಗೆ ಗೌರವ ಕೊಟ್ಟ ಹಾಗೆ. ಬೆಂಗಳೂರು ನಗರ ಇಷ್ಟು ದೊಡ್ಡದಾಗಿ ಬೆಳೆದಿದೆ. ಬೆಂಗಳೂರಿನಲ್ಲಿ ನಿರುದ್ಯೋಗ ಹೆಚ್ಚಾಗಿದೆ. ಎರಡು ರಾಷ್ಟ್ರೀಯ ಪಕ್ಷಗಳು ಬೆಂಗಳೂರಿನಲ್ಲಿ ದೊಡ್ಡ ಅನಾಹುತ ಮಾಡಿವೆ. ಅದನ್ನು ಸರಿಪಡಿಸುವ ಕೆಲಸ ಮಾಡಿ ಕೆಂಪೇಗೌಡರಿಗೆ ಗೌರವ ಸಲ್ಲಿಸಬೇಕು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: 5,000 ಕೋಟಿ ವೆಚ್ಚದ ಬೆಂಗಳೂರು ವಿಮಾನ ನಿಲ್ದಾಣದ ಹೊಸ ಟರ್ಮಿನಲ್ ಫೋಟೋ ಬಿಡುಗಡೆ

    ಕೆಂಪೇಗೌಡ ಪ್ರತಿಮೆಯಿಂದ ಬಿಜೆಪಿಗೆ ಒಕ್ಕಲಿಗರ ಮತ ಹೋಗುತ್ತದೆ ಎಂಬ ಭ್ರಮೆ ಬೇಡ. ಕೆಂಪೇಗೌಡ ಪ್ರತಿಮೆ ಮಾಡಿ, ಮೋದಿ ಕೈಯಲ್ಲಿ ಉದ್ಘಾಟನೆ ಮಾಡಿಸಿದರೆ ಒಕ್ಕಲಿಗರು ಮತ್ತು ಕನ್ನಡಿಗರು ಬಿಜೆಪಿ ಹಿಂದೆ ಹೋಗುವುದಿಲ್ಲ. ಅಂತಹ ಭ್ರಮೆಯಲ್ಲಿ ಬಿಜೆಪಿ ಅವರು ಇದ್ದರೆ, ಆ ಭ್ರಮೆಯಿಂದ ಜನರೇ ಅವರನ್ನು ಹೊರಗೆ ತರುತ್ತಾರೆ ಎಂದು ಟಾಂಗ್ ನೀಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಚಿಕ್ಕಬಳ್ಳಾಪುರ ಜಿಲ್ಲಾಡಳಿತದಿಂದ ನಾಡಪ್ರಭು ಕೆಂಪೇಗೌಡರ ರಥಕ್ಕೆ ಬೀಳ್ಕೊಡುಗೆ

    ಚಿಕ್ಕಬಳ್ಳಾಪುರ ಜಿಲ್ಲಾಡಳಿತದಿಂದ ನಾಡಪ್ರಭು ಕೆಂಪೇಗೌಡರ ರಥಕ್ಕೆ ಬೀಳ್ಕೊಡುಗೆ

    ಚಿಕ್ಕಬಳ್ಳಾಪುರ: ದೇವನಹಳ್ಳಿ (Devanahalli) ಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅನಾವರಣಗೊಳ್ಳಲಿರುವ ನಾಡಪ್ರಭು ಕೆಂಪೇಗೌಡ (Kempegowda) ರ 108 ಅಡಿಯ ಕಂಚಿನ ಪ್ರತಿಮೆ ಉದ್ಘಾಟನೆ ಅಂಗವಾಗಿ ಚಿಕ್ಕಬಳ್ಳಾಪುರ ಜಿಲ್ಲಾದ್ಯಂತ “ಪವಿತ್ರ ಮಣ್ಣು (ಮೃತ್ತಿಕೆ) ಮತ್ತು ನೀರು ಸಂಗ್ರಹ ಮಾಡಿರುವ ಕೆಂಪೇಗೌಡ ರಥದ ವಾಹನಕ್ಕೆ ಜಿಲ್ಲಾಧಿಕಾರಿ ಎನ್.ಎಂ. ನಾಗರಾಜ್ ಅವರು ಇಂದು ಜಿಲ್ಲಾಡಳಿತ ಭವನದ ಮುಂಭಾಗದಿಂದ ಭಕ್ತಿಪೂರ್ವಕವಾಗಿ ಬೀಳ್ಕೊಡುಗೆ ನೀಡಿ ಪುತ್ಥಳಿ ಅನಾವರಣ ಸ್ಥಳಕ್ಕೆ ಕಳುಹಿಸಿ ಕೊಟ್ಟರು.

    ಈ ವೇಳೆ ಶುಭ ಕೋರಿ ಮಾತನಾಡುತ್ತಾ, ನಾಡಪ್ರಭು ಕೆಂಪೇಗೌಡ ರಥ ವಾಹನವು ಜಿಲ್ಲಾ ಉಸ್ತುವಾರಿ ಸಚಿವರಿಂದ ಚಾಲನೆಗೊಂಡು ಅಕ್ಟೋಬರ್ 25 ರಿಂದ ಈವರೆಗೆ ಜಿಲ್ಲೆಯಾದ್ಯಂತ ಸಂಚರಿಸಿ 157 ಗ್ರಾಮ ಪಂಚಾಯಿತಿಗಳಲ್ಲಿ ಹಾಗೂ ಜಿಲ್ಲೆಯ ಪ್ರಸಿದ್ಧ ಪಾರಂಪರಿಕ ಸ್ಥಳಗಳು ಮತ್ತು ಪುಣ್ಯ ಕ್ಷೇತ್ರಗಳಲ್ಲಿ ಪವಿತ್ರ ಮೃತ್ತಿಕೆ ಮತ್ತು ನೀರನ್ನು ಸಂಗ್ರಹಿಸಿದೆ. ಇದನ್ನೂ ಓದಿ: ಒಬ್ಬ ಹಿಂದೂವಾಗಿ ಸತೀಶ್ ಜಾರಕಿಹೊಳಿ ಹೇಳಿಕೆಯನ್ನು ನಾನೂ ಒಪ್ಪಲ್ಲ: ಡಿಕೆಶಿ

    ಇಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಈ ವಾಹನವನ್ನು ಕಳುಹಿಸಿಕೊಡಲಾಗುತ್ತಿದೆ. ಪ್ರಮುಖವಾಗಿ ಜಿಲ್ಲೆಯ ಪ್ರಸಿದ್ಧ ಸ್ಥಳಗಳಾದ ವಿದುರಾಶ್ವತ್ಥ, ಕೈವಾರ, ರಂಗಸ್ಥಳ, ನಂದಿ, ಆಲಂಗಿರಿ, ಮುದ್ದೇನಹಳ್ಳಿ ಇನ್ನೂ ಮುಂತಾದ ಪುಣ್ಯ ಕ್ಷೇತ್ರಗಳಲ್ಲಿ ಮಣ್ಣು ಮತ್ತು ನೀರನ್ನು ಸಂಗ್ರಹಿಸಲಾಗಿದೆ. ಈ ಮೃತ್ತಿಕೆ ಮತ್ತು ನೀರನ್ನು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅನಾವರಣಗೊಳ್ಳಲಿರುವ ನಾಡಪ್ರಭು ಕೆಂಪೇಗೌಡರ 108 ಅಡಿಯ ಕಂಚಿನ ಪ್ರತಿಮೆಯ ಬಳಿ ನೂತನವಾಗಿ ನಿರ್ಮಾಣವಾಗುತ್ತಿರುವ ಉದ್ಯಾನವನ (ಥೀಮ್ ಪಾರ್ಕ್)ಕ್ಕೆ ಉಪಯೋಗಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.

    Live Tv
    [brid partner=56869869 player=32851 video=960834 autoplay=true]