Tag: Kempegowda International Airport Bengaluru

  • ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ದಸರಾ ಉತ್ಸವ ಆಚರಣೆ

    ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ದಸರಾ ಉತ್ಸವ ಆಚರಣೆ

    ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (Kempegowda International Airport Bengaluru) ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ಸಾಂಸ್ಕೃತಿಕ ದಸರಾ ಹಬ್ಬವನ್ನು ಟರ್ಮಿನಲ್ 1 ಮತ್ತು 2 ನಲ್ಲಿ ಅಕ್ಟೋಬರ್ 11ರವರೆಗೆ ಅದ್ಧೂರಿಯಿಂದ ಆಚರಿಸಲಾಗುತ್ತಿದೆ.

    ವಿಮಾನ ನಿಲ್ದಾಣಕ್ಕೆ ಆಗಮಿಸುವ ಪ್ರಯಾಣಿಕರಿಗೆ ನಮ್ಮ ಹೆಮ್ಮೆಯ ಸಂಸ್ಕೃತಿಯನ್ನು ಕಣ್ತುಂಬಿಸಿಕೊಳ್ಳಲು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ನಮ್ಮ ಸಾಂಸ್ಕೃತಿಕ ಕಲೆಗಳಾದ ಯಕ್ಷಗಾನ, ಕೂಚಿಪುಡಿ, ಡೊಳ್ಳು ಕುಣಿತ, ತಮಟೆ ವಾದ್ಯ, ನಾಟ್ಯ, ಸಂಗೀತ ಕಚೇರಿ ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ಟರ್ಮಿನಲ್ 1 ಮತ್ತು 2ನಲ್ಲಿ ನಡೆಸಲಾಗುತ್ತಿದೆ. ಈ ಎಲ್ಲಾ ಸಂಭ್ರಮಾಚರಣೆಯ ಭಾಗವಾಗಿ ಬೆಂಗಳೂರು (Bengaluru) ವಿಮಾನ ನಿಲ್ದಾಣ ಮದುವಣಗಿತ್ತಿಯಂತೆ ಸಿಂಗಾರಗೊಂಡಿದೆ. ಇದನ್ನೂ ಓದಿ: ಯಾವತ್ತಿದ್ದರೂ ಸಿದ್ದರಾಮಯ್ಯ ರಾಜೀನಾಮೆ ನೀಡೇ ನೀಡುತ್ತಾರೆ – ಈಶ್ವರಪ್ಪ

    ಅ.8ರಂದು ಯಕ್ಷಗಾನ, ತಮಟೆವಾದ್ಯ ಜರುಗಿತು. ಜೊತೆಗೆ ಜಾನಪದ ಗಾಯನ ಮತ್ತು ನೃತ್ಯರೂಪಕ ವಿದ್ವಾನ್ ರೂಪಶ್ರೀ ಮಧುಸೂದನ್ ಅವರಿಂದ ನೃತ್ಯ ಮತ್ತು ಸಂಗೀತ ಕಲಾ ಪ್ರದರ್ಶನ ಜರುಗಿತು. ಇದನ್ನೂ ಓದಿ: 70th National Film Awards: ಅತ್ಯುತ್ತಮ ನಟ ಪ್ರಶಸ್ತಿ ಸ್ವೀಕರಿಸಿದ ರಿಷಬ್ ಶೆಟ್ಟಿ

    ಅ.9ರಂದು ಕರ್ನಾಟಕ ಸಂಗೀತ ಹಾಗೂ ನೃತ್ಯ ರೂಪಕ, ಅ.10ರಂದು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಮತ್ತು ಕೂಚಿಪುಡಿ ನೃತ್ಯ ಪ್ರದರ್ಶನ, ಅ.11 ರಂದು ಬೊಂಬೆ ಪ್ರದರ್ಶನ ನಡೆಯಲಿದೆ. ಈ ಎಲ್ಲಾ ಸಾಂಪ್ರದಾಯಕ ಮನರಂಜನೆಯೊಂದಿಗೆ ದಸರಾ ಹಬ್ಬವನ್ನು ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಕಣ್ತುಂಬಿಕೊಳ್ಳಬಹುದು. ಇದನ್ನೂ ಓದಿ: ಜಾತಿಗಣತಿ ವರದಿ ಅನುಷ್ಠಾನ ಮಾಡ್ತೀವಿ- ಎಕ್ಸ್‌ನಲ್ಲಿ ಸಿಎಂ ಪುನರುಚ್ಚಾರ

  • ಪೆರಿಷಬಲ್‌ ಸರಕುಗಳ ರಫ್ತು – 4ನೇ ವರ್ಷವೂ ದೇಶದಲ್ಲೇ ಅಗ್ರಸ್ಥಾನ ಪಡೆದ ಕೆಂಪೇಗೌಡ ವಿಮಾನ ನಿಲ್ದಾಣ

    ಪೆರಿಷಬಲ್‌ ಸರಕುಗಳ ರಫ್ತು – 4ನೇ ವರ್ಷವೂ ದೇಶದಲ್ಲೇ ಅಗ್ರಸ್ಥಾನ ಪಡೆದ ಕೆಂಪೇಗೌಡ ವಿಮಾನ ನಿಲ್ದಾಣ

    ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರು (KIAB/BLR ವಿಮಾನ ನಿಲ್ದಾಣ) FY 2023-24 ಸಾಲಿನ ಸತತ ನಾಲ್ಕನೇ ವರ್ಷವೂ ಪೆರಿಷಬಲ್‌ ಸರಕುಗಳ ರಫ್ತಿನಲ್ಲಿ ಭಾರತದಲ್ಲೇ ನಂಬರ್‌ 1 ಸ್ಥಾನ ಮುಂದುವರೆಸಿಕೊಂಡು ಬಂದಿದೆ.

    ಈ ಆರ್ಥಿಕ ವರ್ಷದಲ್ಲಿ, BLR ವಿಮಾನ ನಿಲ್ದಾಣವು 63,188 ಮೆಟ್ರಿಕ್ ಟನ್‌ಗಳ (MT) ಪೆರಿಷಬಲ್‌ ಸರಕು ಸಾಗಣೆ ಮಾಡುವ ಮೂಲಕ ದಾಖಲೆ ನಿರ್ಮಿಸಿದೆ. ಹಿಂದಿನ ಆರ್ಥಿಕ ವರ್ಷಕ್ಕೆ ಹೋಲಿಸಿದರೆ ಶೇ.18ರಷ್ಟು ಏರಿಕೆ ಕಂಡಿದೆ. ಈ ಮೂಲಕ BLR ವಿಮಾನ ನಿಲ್ದಾಣವು ಪೆರಿಷಬಲ್‌ ಸರಕುಗಳ ಸಾಗಣೆಯಲ್ಲಿ ಭಾರತದಲ್ಲಿ ತನ್ನ ಸಾಧನೆಯನ್ನು ಎತ್ತಿ ತೋರಿಸುತ್ತದೆ. ದೇಶದ ಒಟ್ಟು ಪೆರಿಷಬಲ್‌ ಸರಕುಗಳ ಶೇ.28ರಷ್ಟು ಹಾಗೂ ದಕ್ಷಿಣ ಭಾರತದ ಪೆರಿಷಬಲ್‌ ಸರಕುಗಳ ಒಟ್ಟು ಶೇ.44 ಅನ್ನು BLR ವಿಮಾನ ನಿಲ್ದಾಣದ ಮೂಲಕವೇ ನಿರ್ವಹಿಸಲಾಗಿದೆ. FY 2023-24 ಸಾಲಿನಲ್ಲಿ ಪೆರಿಷಬಲ್‌ ಸರಕು ಸಾಗಣೆಯಲ್ಲಿ ಶೇ.28ರಷ್ಟು ರಾಷ್ಟ್ರೀಯ ಪಾಲನ್ನು ಹೊಂದಿದೆ. ಇದನ್ನೂ ಓದಿ: ಇನ್ಮುಂದೆ ಎಲ್ಲೆಂದರಲ್ಲಿ ಕಸ ಬಿಸಾಡಿದ್ರೆ 500ರೂ. ದಂಡ- ಬಿಬಿಎಂಪಿ ಆಯುಕ್ತ ಎಚ್ಚರಿಕೆ

    BLR ವಿಮಾನ ನಿಲ್ದಾಣವು ವರ್ಷವಿಡೀ ವಿವಿಧ ಪೆರಿಷಬಲ್‌ ಸರಕುಗಳನ್ನು ರಫ್ತು ಮಾಡುವಲ್ಲಿ ಉತ್ಕೃಷ್ಟವಾಗಿದೆ. FY 2023-24 ಸಾಲಿನಲ್ಲಿ ಕೋಳಿ ಉತ್ಪನ್ನ ರಫ್ತಿನಲ್ಲಿ ಮೊದಲ ಸ್ಥಾನವನ್ನು ಪಡೆದುಕೊಂಡಿದ್ದು, 47,041 ಮೆಟ್ರಿಕ್ ಟನ್‌ಗಳನ್ನು ಸಾಗಿಸಿದೆ. ಇದಲ್ಲದೆ, 2,050 ಮೆಟ್ರಿಕ್ ಟನ್ ಹೂವುಗಳನ್ನು ರಫ್ತು ಮಾಡಿದೆ. ಒಟ್ಟಾರೆಯಾಗಿ ಕೋಳಿ, ತಾಜಾ ತರಕಾರಿಗಳು, ತಾಜಾ ಹಣ್ಣುಗಳು ಮತ್ತು ಹೂವುಗಳು ಸೇರಿದಂತೆ ಪ್ರಮುಖ ಪೆರಿಷಬಲ್‌ ಸರಕುಗಳು ಒಳಗೊಂಡಿದೆ.

    ಬೆಂಗಳೂರು ಇಂಟರ್‌ನ್ಯಾಶನಲ್ ಏರ್‌ಪೋರ್ಟ್ (Bengaluru Airport) ಲಿಮಿಟೆಡ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸತ್ಯಕಿ ರಘುನಾಥ್ ಮಾತನಾಡಿ, FY 2023-24 ರಲ್ಲಿ ಪೆರಿಷಬಲ್‌ ಸರಕುಗಳ ರಫ್ತಿನಲ್ಲಿ BLR ವಿಮಾನ ನಿಲ್ದಾಣದ ಬೆಳವಣಿಗೆ ಹಾಗೂ ನಾಯಕತ್ವದ ಬಗ್ಗೆ ಅಪಾರ ಹೆಮ್ಮೆ ಎನಿಸುತ್ತದೆ. ಈ ಮೈಲಿಗಲ್ಲು ಸಾಧಿಸಲು ನಮ್ಮ ಬಳಿ ಇರುವ ಕೋಲ್ಡ್‌ಚೇನ್‌ ಶ್ರೇಷ್ಠತೆ ಹಾಗೂ ನಮ್ಮ ಪಾಲುದಾರರು ಮತ್ತು ಗ್ರಾಹಕರು ನಮ್ಮ ಮೇಲಿರಿಸಿರುವ ನಂಬಿಕೆಯನ್ನು ಪ್ರತಿಬಿಂಬಿಸುತ್ತದೆ ಎಂದರು. ಇದನ್ನೂ ಓದಿ: ವಿಶ್ವನಾಥ್‌, ಪುತ್ರ ನನ್ನ ಮನೆಗೆ ಸೈಟ್ ಕೇಳೋಕೆ ಬಂದಿದ್ದ ಫೋಟೋ ಇದೆ: ಬೈರತಿ ಸುರೇಶ್‌ ಬಾಂಬ್‌!

    ದಕ್ಷಿಣ ಭಾರತದಲ್ಲಿಯೇ ಶೇ.44 ರಷ್ಟನ್ನು ಒಟ್ಟು ಪೆರಿಷಬಲ್‌ ಸರಕು ರಫ್ತು ಪಾಲನ್ನು ನಾವು ಹೊಂದಿದ್ದೇವೆ. BLR ವಿಮಾನ ನಿಲ್ದಾಣವನ್ನು ದಕ್ಷಿಣ ಮತ್ತು ಮಧ್ಯ ಭಾರತಕ್ಕೆ ಪ್ರಧಾನ ಗೇಟ್‌ವೇ ಆಗಿ ಪರಿವರ್ತಿಸಿದ್ದೇವೆ. ಪೆರಿಷಬಲ್‌ ಸರಕುಗಳಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಬೆಂಬಲಿಸಲು ಮತ್ತು ಜಾಗತಿಕ ವ್ಯಾಪಾರದಲ್ಲಿ ಪ್ರಮುಖ ರಫ್ತುದಾರರಾಗಿ ನಮ್ಮ ಸ್ಥಾನವನ್ನು ಇನ್ನಷ್ಟು ಗಟ್ಟಿಗೊಳಿಸಲು ಮೂಲಸೌಕರ್ಯ ಮತ್ತು ಸೇವೆಗಳನ್ನು ಹೆಚ್ಚಿಸುವುದರ ಮೇಲೆ ಗಮನ ಹರಿಸಿದ್ದೇವೆ ಎಂದು ತಿಳಿಸಿದರು.

    ಸಂಪರ್ಕ ಸಾಧನೆಯಲ್ಲಿ BLR ವಿಮಾನ ನಿಲ್ದಾಣವು ಗೇಟ್‌ವೇಯಾಗಿದ್ದು, ಪ್ರಮುಖ ಅಂತಾರಾಷ್ಟ್ರೀಯ ಮಾರುಕಟ್ಟೆಗಳೊಂದಿಗೆ ಭಾರತೀಯ ಉತ್ಪಾದಕರನ್ನು ಸಂಪರ್ಕಿಸುತ್ತದೆ. ವಿಮಾನ ನಿಲ್ದಾಣದ ವಿಸ್ತಾರವಾದ ಜಾಲವಾದ ಓಮನ್, ಸಿಂಗಾಪುರ, ಕತಾರ್, ಯುಎಇ, ಮಾಲ್ಡೀವ್ಸ್, ಯುಕೆ ಮತ್ತು ಕುವೈತ್‌ನಂತಹ ಉನ್ನತ ಮಾರುಕಟ್ಟೆಗಳನ್ನು ಒಳಗೊಂಡಂತೆ 100ಕ್ಕೂ ಹೆಚ್ಚು ಜಾಗತಿಕ ಸ್ಥಳಗಳಿಗೆ ಪೆರಿಷಬಲ್‌ ಸರಕುಗಳ ತಡೆರಹಿತ ಸಾಗಣೆಯನ್ನು ಸುಗಮಗೊಳಿಸುತ್ತದೆ. ಈ ಸಂಪರ್ಕವು ದಕ್ಷಿಣ ಭಾರತದ ರಫ್ತು ಸಾಮರ್ಥ್ಯವನ್ನು ಹೆಚ್ಚಿಸುವುದಲ್ಲದೆ, ತಾಜಾ ಉತ್ಪನ್ನವು ಅಂತಾರಾಷ್ಟ್ರೀಯ ಖರೀದಿದಾರರನ್ನು ತ್ವರಿತವಾಗಿ ಮತ್ತು ಪರಿಣಾಮಕಾರಿಯಾಗಿ ತಲುಪಿಸುತ್ತದೆ. ಇದನ್ನೂ ಓದಿ: MUDA Scam| ಭೈರತಿ ಸುರೇಶ್ ಒಬ್ಬ ರಿಯಲ್ ಎಸ್ಟೇಟ್ ಗಿರಾಕಿ, ಬರೀ ಬೊಗಳೆ ಬಿಡ್ತಾನೆ: ಹೆಚ್‌ವಿಶ್ವನಾಥ್‌

    BLR ವಿಮಾನ ನಿಲ್ದಾಣವು WFS BLR ಕೂಲ್‌ಪೋರ್ಟ್ ಅನ್ನು ಸಹ ಹೊಂದಿದ್ದು, ಇದು 40,000 ಮೆಟ್ರಿಕ್ ಟನ್‌ಗಳ ಟರ್ಮಿನಲ್ ಸಾಮರ್ಥ್ಯದೊಂದಿಗೆ ಭಾರತದ ಮೊದಲ ಏಕೀಕೃತ ಆನ್-ಏರ್‌ಪೋರ್ಟ್ ಪೆರಿಷಬಲ್‌ ಸರಕುಗಳ ನಿರ್ವಹಣಾ ಕೇಂದ್ರವಾಗಿದೆ. ಈ ಅತ್ಯಾಧುನಿಕ ಸೌಲಭ್ಯವು ಪೆರಿಷಬಲ್‌ ಕೋಲ್ಡ್‌ ಸ್ಟೋರೇಜ್‌ ಸರಕುಗಳಿಗಾಗಿ ಪ್ರತ್ಯೇಕವಾಗಿ ವಿನ್ಯಾಸಗೊಳಿಸಲಾಗಿದೆ. ಸಸ್ಯ ಮತ್ತು ಪ್ರಾಣಿಗಳ ಕ್ವಾರಂಟೈನ್ ತಪಾಸಣೆ, ಡ್ರಗ್ ಕಂಟ್ರೋಲರ್ ಲ್ಯಾಬ್ ಮತ್ತು ಭಾರತೀಯ ಕಸ್ಟಮ್ಸ್ ಸೇರಿದಂತೆ ಆನ್-ಸೈಟ್ ನಿಯಂತ್ರಕ ಸೇವೆಗಳನ್ನು ಒಳಗೊಂಡಿದೆ. ತನ್ನ ಮೂಲಸೌಕರ್ಯ ಮತ್ತು ಸೇವೆಗಳನ್ನು ನಿರಂತರವಾಗಿ ಸುಧಾರಿಸುವ ಮೂಲಕ, BLR ವಿಮಾನ ನಿಲ್ದಾಣವು ಪೆರಿಷಬಲ್‌ ಸರಕುಗಳಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಬೆಂಬಲಿಸುವ ಜೊತೆಗೆ, ಭಾರತದಲ್ಲಿ ಕೃಷಿ ಮತ್ತು ತೋಟಗಾರಿಕಾ ರಫ್ತಿಗೆ ಸಹಕಾರ ನೀಡುತ್ತದೆ. ಈ ಮೂಲಕ ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸಿ, ಅಂತಾರಾಷ್ಟ್ರೀಯ ವ್ಯಾಪಾರ ಸಂಬಂಧಗಳನ್ನು ಇನ್ನಷ್ಟು ಗಟ್ಟಿಗೊಳಿಸುತ್ತದೆ.

  • ದಕ್ಷಿಣ ಭಾರತದ ಏವಿಯೇಷನ್‌ ಹಬ್‌ ಆಗುತ್ತಾ ಬೆಂಗ್ಳೂರು ಏರ್‌ಪೋರ್ಟ್‌?- ಏನಿದು ಏವಿಯೇಷನ್‌ ಹಬ್‌?

    ದಕ್ಷಿಣ ಭಾರತದ ಏವಿಯೇಷನ್‌ ಹಬ್‌ ಆಗುತ್ತಾ ಬೆಂಗ್ಳೂರು ಏರ್‌ಪೋರ್ಟ್‌?- ಏನಿದು ಏವಿಯೇಷನ್‌ ಹಬ್‌?

    – ಬೆಂಗಳೂರು ವಿಮಾನ ನಿಲ್ದಾಣವನ್ನು ಏರ್‌ ಇಂಡಿಯಾ ಹೇಗೆ ಪರಿವರ್ತಿಸುತ್ತೆ?

    ಬೆಂಗಳೂರು ವಿಮಾನ ನಿಲ್ದಾಣವನ್ನು ದಕ್ಷಿಣ ಭಾರತದ ಪ್ರಮುಖ ಏವಿಯೇಷನ್ ಹಬ್ (ವಾಯುಯಾನ ಕೇಂದ್ರ) ಆಗಿ ಅಭಿವೃದ್ಧಿಪಡಿಸುವುದಾಗಿ ಏರ್ ಇಂಡಿಯಾ ಘೋಷಿಸಿದೆ. ಈ ಸಂಬಂಧ ಏರ್ ಇಂಡಿಯಾ ಜೊತೆ ಬೆಂಗಳೂರು ವಿಮಾನ ನಿಲ್ದಾಣ ಪ್ರಾಧಿಕಾರ ಒಪ್ಪಂದಕ್ಕೆ ಸಹಿ ಹಾಕಿದೆ. ಪ್ರಸ್ತುತ, ನವದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಇಂಡಿಗೋ ಮತ್ತು ಏರ್ ಇಂಡಿಯಾದಂತಹ ಪ್ರಮುಖ ಭಾರತೀಯ ವಿಮಾನಯಾನ ಸಂಸ್ಥೆಗಳಿಗೆ ದೇಶದ ಅತಿದೊಡ್ಡ ಅಂತಾರಾಷ್ಟ್ರೀಯ ಕೇಂದ್ರವಾಗಿದೆ. ಆ ಸಾಲಿಗೆ ಬೆಂಗಳೂರು ಏರ್‌ಪೋರ್ಟ್ ಸೇರಿಸುವ ಪ್ರಯತ್ನ ನಡೆದಿದೆ.

    ಅಷ್ಟಕ್ಕೂ ಏನಿದು ಏವಿಯೇಷನ್ ಹಬ್? ಭಾರತದಲ್ಲಿ ಈಗ ಎಷ್ಟು ವಾಯುಯಾನ ಕೇಂದ್ರಗಳಿವೆ? ಏವಿಯೇಷನ್ ಹಬ್‌ನಿಂದ ಪ್ರಯೋಜನವೇನು ಎಂಬ ಪ್ರಶ್ನೆಗಳಿಗೆ ವಿವರ ಇಲ್ಲಿದೆ.

    ಏವಿಯೇಷನ್ ಹಬ್
    ಪ್ರಯಾಣಿಕರ ದಟ್ಟಣೆ ಮತ್ತು ವಿಮಾನ ಕಾರ್ಯಾಚರಣೆಗಳನ್ನು ಕೇಂದ್ರೀಕರಿಸಲು ಒಂದು ಅಥವಾ ಹೆಚ್ಚಿನ ವಿಮಾನಯಾನ ಸಂಸ್ಥೆಗಳು ಬಳಸುವ ವಿಮಾನ ನಿಲ್ದಾಣವೇ ಏವಿಯೇಷನ್ ಹಬ್. ಇದನ್ನ ಏರ್‌ಲೈನ್ ಹಬ್ ಅಥವಾ ಹಬ್ ವಿಮಾನ ನಿಲ್ದಾಣ ಅಂತಲೂ ಕರೆಯಲಾಗುತ್ತದೆ. ಪ್ರಯಾಣಿಕರು ತಾವು ಹೋಗಬಯಸುವ ವಿಶ್ವದ ವಿವಿಧ ನಗರಗಳಿಗೆ ನೇರ ಸಂಪರ್ಕ ಕಲ್ಪಿಸುವ ಕೇಂದ್ರಗಳಾಗಿ ಕಾರ್ಯನಿರ್ವಹಿಸುತ್ತವೆ. ಇದು ಹಬ್ ಮತ್ತು ಸ್ಪೋಕ್ ವ್ಯವಸ್ಥೆಯ ಭಾಗವಾಗಿದೆ. ಪ್ರಮುಖ ಅಂತಾರಾಷ್ಟ್ರೀಯ ನಗರಗಳ ನಡುವೆ ನೇರ ಸಂಪರ್ಕವನ್ನು ಒದಗಿಸುವ ಒಂದು ಅಥವಾ ಎರಡು ಪ್ರಮುಖ ವಿಮಾನಯಾನ ಸಂಸ್ಥೆಗಳೊಂದಿಗೆ ಈ ಹಬ್‌ಗಳನ್ನು ಗುರುತಿಸಲಾಗಿದೆ.

    ವಿಮಾನ ನಿಲ್ದಾಣದಲ್ಲಿ ದಕ್ಷ ಹಾಗೂ ಸುರಕ್ಷಿತ ಕಾರ್ಯಾಚರಣೆ ನಡೆಸುವುದು ಇದರ ಮುಖ್ಯ ಉದ್ದೇಶ. ಆಗ ಗ್ರಾಹಕರಿಗೆ ಉತ್ತಮ ಅನುಭವ ಸಿಗುತ್ತದೆ. ಈ ಉದ್ದೇಶದಿಂದ ಭಾರತದಲ್ಲಿ ವಾಯು ಸಂಪರ್ಕ ವಿಸ್ತರಿಸಲು ಏರ್ ಇಂಡಿಯಾ ಮುಂದಾಗಿದೆ.

    ವಿಮಾನಯಾನ ಸಂಶೋಧನಾ ಸಂಸ್ಥೆಯಾದ ಒಎಜಿ, ಲಂಡನ್ ಹೀಥ್ರೂವನ್ನು (2023 ಕ್ಕೆ) ವಿಶ್ವದ ಅತ್ಯಂತ ಹೆಚ್ಚು ಸಂಪರ್ಕಿತ ವಿಮಾನ ನಿಲ್ದಾಣವೆಂದು ಗುರುತಿಸಿದೆ. ಇದರ ಜೊತೆಗೆ ನ್ಯೂಯಾರ್ಕ್‌ನ ಜೆಎಫ್‌ಕೆ ವಿಮಾನ ನಿಲ್ದಾಣ, ನೆದರ್‌ಲ್ಯಾಂಡ್‌ನ ಆಮ್‌ಸ್ಟರ್‌ಡ್ಯಾಮ್ ವಿಮಾನ ನಿಲ್ದಾಣ, ಮಲೇಷ್ಯಾದ ಕೌಲಾಲಂಪುರ್ ವಿಮಾನ ನಿಲ್ದಾಣ ಮತ್ತು ಟೋಕಿಯೊದ ಹನೇಡಾ ವಿಮಾನ ನಿಲ್ದಾಣವನ್ನೂ ಗುರುತಿಸಲಾಗಿದೆ.

    ಹಬ್ ಅನ್ನು ಸ್ಥಾಪಿಸುವ ಪ್ರಮುಖ ಅಂಶವೆಂದರೆ, ಕನಿಷ್ಠ ಒಂದು ಏರ್‌ಲೈನ್‌ನ ಪ್ರಾಬಲ್ಯವನ್ನು ಹೊಂದಿರುವುದು. ಉದಾಹರಣೆಗೆ: ಹೀಥ್ರೂ ವಿಮಾನ ನಿಲ್ದಾಣದಲ್ಲಿ ಲಂಡನ್ ಹೀಥ್ರೂನಿಂದ ಕಾರ್ಯನಿರ್ವಹಿಸುವ ಒಟ್ಟು ವಿಮಾನಗಳ ಸಂಖ್ಯೆಯಲ್ಲಿ ಬ್ರಿಟಿಷ್ ಏರ್ವೇಸ್ 50% ಪಾಲನ್ನು ಹೊಂದಿದೆ. ಜೆಕೆಎಫ್ ವಿಮಾನ ನಿಲ್ದಾಣದಲ್ಲಿ ಡೆಲ್ಟಾ ಏರ್‌ಲೈನ್ 34% ಪಾಲನ್ನು ಹೊಂದಿದೆ. ಕೆಎಲ್‌ಎಂ-ರಾಯಲ್ ಏರ್‌ಲೈನ್, ಆಮ್‌ಸ್ಟರ್‌ಡ್ಯಾಮ್ ಶಿಪೋಲ್ ವಿಮಾನ ನಿಲ್ದಾಣದಲ್ಲಿ 53% ಪಾಲನ್ನು ಹೊಂದಿದೆ. ಕೌಲಾಲಂಪುರದಿಂದ ವಿಮಾನಗಳಲ್ಲಿ ಏರ್ ಏಷ್ಯಾ 34% ಪಾಲನ್ನು ಹೊಂದಿದೆ.

    ವಿಮಾನ ನಿಲ್ದಾಣ ಕೇಂದ್ರವು ಅಂತಾರಾಷ್ಟ್ರೀಯ-ಅಂತಾರಾಷ್ಟ್ರೀಯ ಅಥವಾ ಅಂತಾರಾಷ್ಟ್ರೀಯ-ದೇಶೀಯ ಸಂಪರ್ಕಕ್ಕೆ (2 ಮಾರ್ಗಗಳ ನಡುವೆ) ಕನಿಷ್ಠ ಸಾರಿಗೆ ಸಮಯ ಒದಗಿಸಬೇಕು. ಪ್ರತಿ ವರ್ಷ 90% ಪ್ರಯಾಣಿಕರ ಸಾಮರ್ಥ್ಯವನ್ನು ಹೊಂದಿರುವ ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು 50 ಗೇಟ್‌ಗಳನ್ನು ಹೊಂದಿರುವ ಮೂರು ಪ್ರಮುಖ ಟರ್ಮಿನಲ್‌ಗಳನ್ನು ಹೊಂದಿದೆ. ಪ್ರತಿಯೊಂದು ಟರ್ಮಿನಲ್‌ಗಳ ನಡುವೆ 30 ನಿಮಿಷಗಳ ವರೆಗೆ ಟ್ರಾನ್ಸ್‌ಫರ್‌ ಸಮಯವನ್ನು ಸುಗಮಗೊಳಿಸುತ್ತದೆ.

    ದಕ್ಷಿಣ ಭಾರತದಲ್ಲಿ ಏವಿಯೇಷನ್ ಹಬ್ ಯಾಕೆ?
    ದಕ್ಷಿಣ ಭಾರತದಿಂದ ನೇರ ದೀರ್ಘ ಪ್ರಯಾಣದ ಮಾರ್ಗಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಮುಂದಿನ ದಿನಗಳಲ್ಲಿ ಇದನ್ನು ಪೂರೈಸಲು ಏರ್ ಇಂಡಿಯಾ ಉದ್ದೇಶಿಸಿದೆ. ಈ ಪಾಲುದಾರಿಕೆಯು ಎಂಆರ್‌ಓ ಪರಿಸರ ವ್ಯವಸ್ಥೆಯನ್ನು ಉತ್ತೇಜಿಸಲಿದೆ. ಜೊತೆಗೆ ಹೊಸ ಉದ್ಯೋಗಾವಕಾಶಗಳನ್ನೂ ಸೃಷ್ಟಿಸುತ್ತದೆ.

    ಬೆಂಗಳೂರು ಏರ್‌ಪೋರ್ಟ್‌ಗೆ ಒಲಿದ ಅವಕಾಶ!
    ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ದಕ್ಷಿಣ ಭಾರತದಲ್ಲಿಯೇ ಅತಿ ಹೆಚ್ಚು ಪ್ರಯಾಣಿಕರು ಪ್ರಯಾಣಿಸುವ ವಿಮಾನ ನಿಲ್ದಾಣ ಎಂಬ ಹೆಗ್ಗಳಿಕೆ ಹೊಂದಿದೆ. ಈ ಒಪ್ಪಂದದೊಂದಿಗೆ ವಿಶ್ವದ ದೊಡ್ಡ ದೊಡ್ಡ ನಗರಗಳಿಗೆ ನೇರ ವಿಮಾನ ಸಂಪರ್ಕ ಸಾಧ್ಯವಾಗುತ್ತದೆ. ಅಷ್ಟೇ ಅಲ್ಲದೇ, ಪ್ರಯಾಣಿಕರಿಗೆ ಉತ್ತಮ ಪ್ರಯಾಣದ ಅನುಭವ ಕೂಡ ದೊರೆಯಲಿದೆ.

    1,200 ಹೊಸ ಉದ್ಯೋಗ ಸೃಷ್ಟಿ
    ಈ ಕಾರಣದಿಂದಾಗಿ ಏರ್ ಇಂಡಿಯಾವು ಕರ್ನಾಟಕ ಸರ್ಕಾರದೊಂದಿಗೆ ಸಹಿ ಹಾಕಿದೆ. ವಿಮಾನ ನಿಲ್ದಾಣದಲ್ಲಿ ನಿರ್ವಹಣೆ, ದುರಸ್ತಿ ಮತ್ತು ಉತ್ತಮ ಸೌಲಭ್ಯ ಒದಗಿಸುವ ಕೆಲಸ ಮಾಡಲಿದೆ. ಈ ಒಪ್ಪಂದದಿಂದಾಗಿ ರಾಜ್ಯದಲ್ಲಿ ಹೆಚ್ಚು ನುರಿತ ವ್ಯಕ್ತಿಗಳಿಗೆ 1,200 ಹೊಸ ಉದ್ಯೋಗಾವಕಾಶಗಳನ್ನೂ ಒದಗಿಸಲು ಸಾಧ್ಯವಾಗಲಿದೆ. 2023 ರಲ್ಲಿ ಬೆಂಗಳೂರು ವಿಮಾನ ನಿಲ್ದಾಣವು 3.72 ಕೋಟಿ ಪ್ರಯಾಣಿಕರನ್ನು ಹೊಂದಿತ್ತು.

    ಭಾರತದಲ್ಲಿ ಹಬ್‌
    ಭಾರತದ ಮೂಲಕ ವಿದೇಶಗಳ ವಿವಿಧ ಪ್ರಮುಖ ನಗರಗಳಿಗೆ ನೇರ ಸಂಪರ್ಕ ಸಾಧಿಸಲು ಕೇಂದ್ರ ಸರ್ಕಾರವು ದೇಶದಲ್ಲಿ ಏವಿಯೇಷನ್ ಹಬ್‌ಗಳನ್ನು ಅಭಿವೃದ್ಧಿಪಡಿಸಲು ಕ್ರಮಕೈಗೊಂಡಿದೆ. ಭಾರತದ ಅತಿ ದೊಡ್ಡ ಮತ್ತು ಅತ್ಯಂತ ಜನನಿಬಿಡ ವಿಮಾನ ನಿಲ್ದಾಣವಾಗಿರುವ ದೆಹಲಿಯಲ್ಲಿ ಈ ಯೋಜನೆ ಜಾರಿಯಲ್ಲಿದೆ. 2022-23 (ಏಪ್ರಿಲ್-ಮಾರ್ಚ್) 4,29,964 ವಿಮಾನಗಳ ಕಾರ್ಯಾಚರಣೆ ಮತ್ತು 6.52 ಕೋಟಿ ಪ್ರಯಾಣಿಕರ ದಟ್ಟಣೆಯನ್ನು ನಿರ್ವಹಿಸಿದೆ.

    ಕೇಂದ್ರದ ರಾಷ್ಟ್ರೀಯ ವಿಮಾನಯಾನ ಹಬ್ ನೀತಿಯ ಪ್ರಕಾರ, ದುಬೈ ಮತ್ತು ದೋಹಾ ವಿಮಾನ ನಿಲ್ದಾಣಗಳಿಗೆ ಅನುಗುಣವಾಗಿ ದೆಹಲಿ ವಿಮಾನ ನಿಲ್ದಾಣವನ್ನು ಅಂತಾರಾಷ್ಟ್ರೀಯ ಕೇಂದ್ರವಾಗಿಸಲು ಸರ್ಕಾರವು ಸಮಿತಿಯನ್ನು ರಚಿಸಿದೆ. ದೇಶೀಯ ಮತ್ತು ಅಂತಾರಾಷ್ಟ್ರೀಯ ವಿಮಾನಗಳ ನಡುವೆ ತಡೆರಹಿತ ಸಂಪರ್ಕ ಸಾಧಿಸಲು, ಭದ್ರತಾ ತಪಾಸಣೆ ಹಾಗೂ ವಲಸೆಯ ಅಡಚಣೆಯಂತಹ ಸವಾಲುಗಳಿಗೆ ಈ ನೀತಿಯು ಪರಿಹಾರವಾಗಿದೆ.

  • ಬೆಂಗಳೂರು ಉತ್ಸಾಹಭರಿತ ವಾಸ್ತುಶಿಲ್ಪ ನಗರಿ: ಪ್ರಧಾನಿ ಮೋದಿ ಬಣ್ಣನೆ

    ಬೆಂಗಳೂರು ಉತ್ಸಾಹಭರಿತ ವಾಸ್ತುಶಿಲ್ಪ ನಗರಿ: ಪ್ರಧಾನಿ ಮೋದಿ ಬಣ್ಣನೆ

    – ಬೆಂಗಳೂರು ವಿಮಾನ ನಿಲ್ದಾಣದ ಟರ್ಮಿನಲ್‌ 2ಗೆ ಯುನೆಸ್ಕೋ ವಿಶ್ವ ಮನ್ನಣೆಗೆ ಪ್ರಧಾನಿ ಶ್ಲಾಘನೆ

    ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2ಗೆ ಯುನೆಸ್ಕೋದ ವಿಶೇಷ ವಿಶ್ವ ಮನ್ನಣೆ ಸಿಕ್ಕಿದೆ. ಇದಕ್ಕೆ ತಮ್ಮ ಎಕ್ಸ್ ಖಾತೆಯಲ್ಲಿ ಪ್ರಧಾನಿ ‌ನರೇಂದ್ರ ಮೋದಿ ಶ್ಲಾಘಿಸಿದ್ದಾರೆ.

    ಜಗತ್ತಿನ ಅತ್ಯಂತ ಸುಂದರ ವಿಮಾನ ನಿಲ್ದಾಣಗಳ ಪೈಕಿ ಇದೂ ಒಂದು ಎಂಬ ಕೀರ್ತಿಗೆ ನಮ್ಮ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಭಾಜನವಾಗಿದೆ ಎಂದು ಕಳೆದ ವರ್ಷ ಟರ್ಮಿನಲ್ ಕಟ್ಟಡ ಉದ್ಘಾಟನೆಯ ಫೋಟೋಗಳನ್ನ ಶೇರ್‌ ಮಾಡಿ ಮೋದಿ ಹರ್ಷವನ್ನ ವ್ಯಕ್ತಪಡಿಸಿದ್ದಾರೆ. ಉತ್ಸಾಹಭರಿತ ನಗರದ ಜೊತೆಗೆ ವಾಸ್ತುಶಿಲ್ಪದಲ್ಲಿ ತನ್ನ ಜಾಣ್ಮೆಯನ್ನ ಇಲ್ಲಿ ತೋರಿಸಲಾಗಿದೆ. ಇದು ಭಾರತಕ್ಕೆ ಹೆಮ್ಮೆ ಎಂದು ಪ್ರಧಾನಿಗಳು ಶ್ಲಾಘಿಸಿದ್ದಾರೆ.

    ‘ಶ್ಲಾಘನೀಯ ಸಾಧನೆ! ಬೆಂಗಳೂರಿನ ಜನತೆಗೆ ಅಭಿನಂದನೆಗಳು. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2 ಕೇವಲ ರೋಮಾಂಚಕ ನಗರವಾದ ಬೆಂಗಳೂರಿನ ಹೆಬ್ಬಾಗಿಲು ಮಾತ್ರವಲ್ಲದೆ, ವಾಸ್ತುಶಿಲ್ಪದ ವೈಭವದ ಪ್ರದರ್ಶನವಾಗಿದೆ. ಈ ಸಾಧನೆಯು ವಿಶ್ವ ದರ್ಜೆಯ ಮೂಲಸೌಕರ್ಯವನ್ನು ಕಲಾತ್ಮಕ ಸೌಂದರ್ಯದೊಂದಿಗೆ ಸಂಯೋಜಿಸುವಲ್ಲಿ ದೇಶದ ಸಾಮರ್ಥ್ಯವನ್ನು ಪ್ರತಿಬಿಂಬಿಸುತ್ತದೆ. ಕಳೆದ ವರ್ಷ ಟರ್ಮಿನಲ್ ಕಟ್ಟಡದ ಉದ್ಘಾಟನೆಯ ಝಲಕ್ ಇಲ್ಲಿದೆ’ ಎಂದು ಪ್ರಧಾನಿ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.

    ನಿಜಕ್ಕೂ ವರ್ಷಾಂತ್ಯದಲ್ಲಿ ಬೆಂಗಳೂರಿಗೆ ಇದು ಒಂದು ಶುಭ ಸುದ್ದಿ. ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಯುನೆಸ್ಕೋದ 2023ರ ಪ್ರಿಕ್ಸ್‌ ವರ್ಸೈಲ್ಸ್‌ನಲ್ಲಿ ಪ್ರತಿಷ್ಠಿತ ಪ್ರಶಸ್ತಿಗೆ ಭಾಜನವಾಗಿದೆ.

    ಹೌದು, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2 ಅನ್ನು ವಿಶ್ವದ ಅತ್ಯಂತ ಸುಂದರ ವಿಮಾನ ನಿಲ್ದಾಣಗಳ ಪೈಕಿ ಒಂದು ಎಂದು ಯುನೆಸ್ಕೋ ಗುರುತಿಸಿದೆ. ಟರ್ಮಿನಲ್ 2ರ ಒಳಾಂಗಣ ವಿನ್ಯಾಸಕ್ಕಾಗಿ ವರ್ಲ್ಡ್‌ ಸ್ಪೆಷಲ್ ಪ್ರೈಝ್ ಫಾರ್ ಆನ್ ಇಂಟೀರಿಯರ್‌-2023 ಎಂಬ ಪ್ರಶಸ್ತಿಗೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಭಾಜನವಾಗಿದೆ.

  • ಬೆಂಗಳೂರು ಬಂದ್ – ವಿಮಾನ ನಿಲ್ದಾಣದಲ್ಲಿ ಮುಂಜಾನೆಯಿಂದಲೂ ಸಹಜ ಸ್ಥಿತಿ

    ಬೆಂಗಳೂರು ಬಂದ್ – ವಿಮಾನ ನಿಲ್ದಾಣದಲ್ಲಿ ಮುಂಜಾನೆಯಿಂದಲೂ ಸಹಜ ಸ್ಥಿತಿ

    ಬೆಂಗಳೂರು: ಕಾವೇರಿ (Cauvery) ವಿಚಾರವಾಗಿ ಕರೆ ನೀಡಲಾಗಿರುವ ಬೆಂಗಳೂರು ಬಂದ್ (Bengaluru Bandh) ಹಿನ್ನೆಲೆಯಲ್ಲಿ ಬೆಂಗಳೂರಿನ ದೇವನಹಳ್ಳಿ ಬಳಿಯ ಕೇಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (Kempegowda International Airport Bengaluru) ಮುಂಜಾನೆಯಿಂದಲೂ ಸಹಜ ಸ್ಥಿತಿಯಿದೆ.

    ಏರ್‌ಪೋರ್ಟ್‌ನಲ್ಲಿ ಯಾವುದೇ ಬಂದ್‌ನ ಪರಿಸ್ಥಿತಿ ಇಲ್ಲ. ನಿಲ್ದಾಣದಲ್ಲಿ ಎಂದಿನಂತೆ ಕ್ಯಾಬ್‌ಗಳು ಸಂಚಾರ ಮಾಡುತ್ತಿದ್ದು, ಪ್ರಯಾಣಿಕರಿಗೆ ಯಾವುದೇ ಸಮಸ್ಯೆ ಆಗಿಲ್ಲ. ಇದನ್ನೂ ಓದಿ: ಬೆಂಗಳೂರು ಬಂದ್‌- ಎಂದಿನಂತೆ ಸಂಚರಿಸುತ್ತಿವೆ ಬಿಎಂಟಿಸಿ

    ಓಲಾ, ಊಬರ್, ಕೆಎಸ್‌ಟಿಡಿಸಿ ಪ್ರಯಾಣಿಕರಿಗೆ ಸೌಲಭ್ಯ ಸಿಗುತ್ತಿದೆ. ಎಂದಿನಂತೆ ಪ್ರಯಾಣಿಕರು ಯಾವುದೇ ಪರದಾಟವಿಲ್ಲದೇ ಪ್ರಯಾಣ ಮಾಡುತ್ತಿದ್ದು, ಏರ್‌ಪೋರ್ಟ್‌ನಲ್ಲಿ ಸಹಜ ಸ್ಥಿತಿಯಿದೆ. ಬಿಎಂಟಿಸಿ ವಾಯುವಜ್ರ ವಾಹನಗಳು ಸಹ ರಸ್ತೆಗಿಳಿದಿದ್ದು ಪ್ರಯಾಣಿಕರಿಗೂ ಯಾವುದೇ ಸಮಸ್ಯೆ ಆಗಿಲ್ಲ. ಇದನ್ನೂ ಓದಿ: ಮಧ್ಯಪ್ರದೇಶದಲ್ಲಿ ಮೂವರು ಕೇಂದ್ರ ಸಚಿವರಿಗೆ ಬಿಜೆಪಿ ಟಿಕೆಟ್‌

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಏರ್‌ಪೋರ್ಟ್‌ ಸಿಟಿಯಲ್ಲಿ ರೀಟೇಲ್ ಡೈನಿಂಗ್, ಎಂಟರ್​ಟೈನ್​ಮೆಂಟ್ ಗ್ರಾಮ ನಿರ್ಮಾಣ ಆರಂಭ

    ಏರ್‌ಪೋರ್ಟ್‌ ಸಿಟಿಯಲ್ಲಿ ರೀಟೇಲ್ ಡೈನಿಂಗ್, ಎಂಟರ್​ಟೈನ್​ಮೆಂಟ್ ಗ್ರಾಮ ನಿರ್ಮಾಣ ಆರಂಭ

    ಬೆಂಗಳೂರು: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಸಮೀಪದಲ್ಲಿ ತಲೆ ಎತ್ತುತ್ತಿರುವ ಏರ್‌ಪೋರ್ಟ್‌ ಸಿಟಿ ಭಾಗವಾಗಿ ರೀಟೇಲ್ ಡೈನಿಂಗ್ ಎಂಟರ್​ಟೈನ್​ಮೆಂಟ್ (ಆರ್ ಡಿಇ) ಗ್ರಾಮ (ಮನರಂಜನಾ ಗ್ರಾಮ) ನಿರ್ಮಿಸಲು ಡಿಪಿ ಆರ್ಕಿಟೆಕ್ಟ್ ಸಿಂಗಾಪುರ ಆ್ಯಂಡ್ ಪೋರ್ಟ್‍ಲ್ಯಾಂಡ್ ಡಿಸೈನ್ ಯುಕೆ ಸಂಸ್ಥೆ ಆರ್ಕಿಟೆಕ್ಟ್ ವಿನ್ಯಾಸಕ್ಕಾಗಿ ನೇಮಕ ಮಾಡಲಾಗಿದೆ.

    ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್‍ನ ಅಧೀನ ಸಂಸ್ಥೆಯಾದ ಬೆಂಗಳೂರು ಏರ್‌ಪೋರ್ಟ್‌ ಸಿಟಿ ಲಿಮಿಟೆಡ್ (ಬಿಎಸಿಎಲ್) ಈಗಾಗಲೇ ಏರ್‌ಪೋರ್ಟ್‌ ಸಿಟಿ ನಿರ್ಮಾಣದ ಕೆಲಸ ಪ್ರಾರಂಭಿಸಿದೆ. ಇದರ ಭಾಗವಾಗಿ ಮನರಂಜನಾ ಗ್ರಾಮವನ್ನು 23 ಎಕರೆ ಪ್ರದೇಶದಲ್ಲಿ ನಿರ್ಮಿಸಲಾಗುತ್ತಿದೆ. ಈ ಜವಾಬ್ದಾರಿಯನ್ನು ಪೋರ್ಟ್‍ಲ್ಯಾಂಡ್ ಡಿಸೈನ್ ಯುಕೆ ಸಂಸ್ಥೆಗೆ ನೀಡಲಾಗಿದೆ. ಈ ಭಾಗದಲ್ಲಿ ಶಾಪಿಂಗ್ ಸೆಂಟರ್, ಮಾಲ್, ಹೈಟೆಕ್ ಸಿನಿಮಾ ಥಿಯೇಟರ್ ಸೇರಿದಂತೆ ಇತರೆ ಮನರಂಜನಾ ಸ್ಥಳಗಳನ್ನು ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ನಿರ್ಮಾಣ ಮಾಡಲಾಗುತ್ತಿದೆ. ಇದನ್ನೂ ಓದಿ: ಸಿಕ್ಸರ್‌, ಬೌಂಡರಿಗಳ ಸುರಿಮಳೆಗೈದ ರಾಹುಲ್‌ – ಪಂಜಾಬ್‌ಗೆ 6 ವಿಕೆಟ್‌ಗಳ ಜಯ

    ಈ ಬಗ್ಗೆ ಮಾತನಾಡಿದ ಬಿಎಸಿಎಲ್ ಸಿಇಒ ಶ್ರೀ ರಾಮ್ ಮುನುಕುಟ್ಲಾ, ಸಿಂಗಾಪುರ ಮಾದರಿಯ ಸಿಟಿ ನಿರ್ಮಾಣದ ಕನಸಿನಂತೆ ಈ ಭಾಗದಲ್ಲಿ ಏರ್‌ಪೋರ್ಟ್‌ ಸಿಟಿ ನಿರ್ಮಿಸಲಾಗುತ್ತಿದೆ. ಮನರಂಜನಾ ಗ್ರಾಮವನ್ನು ನಿರ್ಮಿಸಲು ಈಗಾಗಲೇ ಟೆಂಡರ್ ನೀಡಲಾಗಿದೆ. ಕೆಲವೇ ವರ್ಷಗಳಲ್ಲಿ ಈ ತಾಣ ತಲೆ ಎತ್ತಲಿದೆ. ಈ ಮನರಂಜನಾ ಗ್ರಾಮಕ್ಕೆ ಬಿಎಂಟಿಸಿ, ಮೆಟ್ರೋ ಸೇರಿದಂತೆ ಎಲ್ಲ ರೀತಿಯ ಸಾರಿಗೆ ಸಂಪರ್ಕ ಸಹ ಇರಲಿದೆ. ಈ ಹೈಟೆಕ್ ಸಿಟಿಯಲ್ಲಿ ಬ್ಯುಸಿನೆಸ್ ಪಾರ್ಕ್, ಐಟಿ ಪಾರ್ಕ್, ಹಾಸ್ಪೆಟಲ್ ಸೆಂಟರ್, ಶಾಲಾ ಕಾಲೇಜುಗಳು, ಪ್ರದರ್ಶನ ಕೇಂದ್ರ ಹೀಗೆ ಹತ್ತಾರು ವಿಷಯಗಳು ಈ ಸಿಟಿಯಲ್ಲಿ ಇರಲಿದೆ. ದೇಶದಲ್ಲೇ ಇದೊಂದು ಮಾದರಿ ಹೈಟೆಕ್ ಸಿಟಿಯಾಗಿ ಹೊರಬರುವುದರಲ್ಲಿ ಅನುಮಾನವಿಲ್ಲ ಎಂದಿದ್ದಾರೆ.

  • ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮತ್ತೊಂದು ಪ್ರಶಸ್ತಿಯ ಗರಿ

    ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮತ್ತೊಂದು ಪ್ರಶಸ್ತಿಯ ಗರಿ

    – ಏಷ್ಯಾ ವಿಮಾನ ನಿಲ್ದಾಣಗಳಲ್ಲೇ ಅತ್ಯುತ್ತಮ ಸಿಬ್ಬಂದಿ ಸೇವೆ

    ಬೆಂಗಳೂರು: ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮತ್ತೊಂದು ಪ್ರಶಸ್ತಿ ಗರಿ ಲಭಿಸಿದೆ. ಸ್ಕೈಟ್ರಾಕ್ಸ್ ವರ್ಲ್ಡ್ ಏರ್‌ಪೋರ್ಟ್ ಅವಾರ್ಡ್ಸ್ ಕೊಡುವ ಬೆಸ್ಟ್ ಏರ್‌ಪೋರ್ಟ್ ಸ್ಟಾಫ್ ಇನ್ ಇಂಡಿಯಾ ಆ್ಯಂಡ್ ಸೆಂಟ್ರಲ್ ಏಷ್ಯಾ (ಭಾರತ ಮತ್ತು ಮಧ್ಯ ಏಷ್ಯಾದಲಿಯ್ಲೇ ಅತುತ್ತಮ ವಿಮಾನ ನಿಲ್ದಾಣ ಸಿಬ್ಬಂದಿ) ಪ್ರಶಸ್ತಿಗೆ ಭಾಜನವಾಗಿದೆ.

    ಸ್ಕೈಟ್ರಾಕ್ಸ್ ವರ್ಲ್ಡ್ ಏರ್‌ಪೋರ್ಟ್ ಅವಾರ್ಡ್‌ ವತಿಯಿಂದ ನಡೆಸಲಾದ ಸಮೀಕ್ಷೆಯಲ್ಲಿ ಗ್ರಾಹಕರು ಇತರೆ ವಿಮಾನ‌ ನಿಲ್ದಾಣಗಳಲ್ಲಿ‌ನ ಸಿಬ್ಬಂದಿ ನೀಡುವ ಸೇವೆಗಿಂತ ಕೆಐಎ ವಿಮಾನ ನಿಲ್ದಾಣದ ಸೇವೆಗೆ ಅತ್ಯತ್ತಮವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಬೆಂಗಳೂರು ವಿಮಾನ ನಿಲ್ದಾಣಕ್ಕೆ ಸೇವಾ ಗುಣಮಟ್ಟದ ಪ್ರಶಸ್ತಿ

    ಬೆಂಗಳೂರು ಇಂಟರ್‌ನ್ಯಾಷನಲ್ ಏರ್‌ಪೋರ್ಟ್ ಲಿಮಿಟೆಡ್ (ಬಿಐಎಎಲ್) ಸಿಇಓ ಹರಿ ಮರಾರ್ ಮಾತನಾಡಿ, ಈ ಪ್ರಶಸ್ತಿ ಲಭಿಸಿದ್ದು ವಿಮಾನ ನಿಲ್ದಾಣದಲ್ಲಿ ಕೆಲಸ ಮಾಡುವ ನಮ್ಮೆಲ್ಲರಿಗೂ ಸಂತಸ ತಂದಿದೆ. ಇಲ್ಲಿನ ಸಿಬ್ಬಂದಿ ಕಾರ್ಯಕ್ಷಮತೆಯಿಂದ ಈ ಪ್ರಶಸ್ತಿ ಲಭಿಸಿದೆ. ಈ ಪ್ರಶಸ್ತಿಗೆ ಮತಹಾಕಿದ ಎಲ್ಲಾ ಪ್ರಯಾಣಿಕರಿಗೂ ಅಭಿನಂದನೆ ತಿಳಿಸಿದ್ದಾರೆ.


    ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಒಂದೇ ವರ್ಷದಲ್ಲಿ ಮೂರು ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ. ಏರ್‌ಪೋರ್ಟ್ಸ್ ಕೌನ್ಸಿಲ್ ಇಂಟರ್‌ನ್ಯಾಷನಲ್ (ಎಸಿಐ)ನಿಂದ ವಿಶ್ವದ ವಾಯ್ಸ್ ಆಫ್ ದಿ ಕಸ್ಟಮರ್  ಮಾನ್ಯತೆ ಮತ್ತು ಎಸಿಐ ಏರ್‌ಪೋರ್ಟ್ ಸರ್ವಿಸ್ ಕ್ವಾಲಿಟಿ ಅವಾರ್ಡ್ ಲಭಿಸಿತ್ತು. ಅಲ್ಲದೆ ರೋಲ್ ಆಫ್ ಎಕ್ಸಲೆನ್ಸ್ ಫಾರ್ ದಿ ಇಯರ್ ಪ್ರಶಸ್ತಿಯನ್ನೂ ಪಡೆದುಕೊಂಡಿದೆ.