ಬೆಂಗಳೂರು: ಡಿಸೆಂಬರ್ ತಿಂಗಳಿನಲ್ಲಿ ವಿದೇಶದಿಂದ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (KIAL) ಆಗಮಿಸಿದ 12 ಮಂದಿಗೆ ಕೊರೊನಾ ಸೋಂಕು (Corona Virus) ದೃಢಪಟ್ಟಿದೆ.
ಹಾಂಕಾಂಗ್, ಅಮೇರಿಕ, ಥಾಯ್ಲೆಂಡ್, ಆಸ್ಟ್ರೇಲಿಯಾ, ಸಿಂಗಾಪುರದಿಂದ ಬಂದ ಪ್ರಯಾಣಿಕರಲ್ಲಿ ಸೋಂಕು ಕಾಣಿಸಿದೆ. ಇವರಿಗೆ ಬಂದಿರುವ ತಳಿ ಯಾವುದು ಎಂದು ತಿಳಿಯಲು ಗಂಟಲ ದ್ರವದ ಮಾದರಿಯನ್ನು ಜೀನೋಮ್ ಸೀಕ್ವೆನ್ಸ್ ಲ್ಯಾಬ್‌ಗೆ ಕಳುಹಿಸಲಾಗಿದೆ.
ಪ್ರಸ್ತುತ ಈಗ ಪ್ರತಿ ದಿನ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ರ್‍ಯಾಂಡಮ್ ಆಗಿ 100-150 ಮಂದಿಗೆ ಕೊರೊನಾ ಟೆಸ್ಟ್ ಮಾಡಲಾಗುತ್ತಿದೆ.
Live Tv
[brid partner=56869869 player=32851 video=960834 autoplay=true]
ಬೆಂಗಳೂರು: ಪ್ರಧಾನ ಮಂತ್ರಿ ನರೇಂದ್ರ ಮೋದಿ(Narendra Modi) ಅವರು ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ (Kempegowda International Airport) ನಿರ್ಮಾಣವಾಗಿರು ಏಷ್ಯಾದ ಮೊದಲ ಗಾರ್ಡನ್ ಟರ್ಮಿನಲ್ ಲೋಕಾರ್ಪಣೆ ಮಾಡಿದ್ದಾರೆ.
ಜಾಗತಿಕ ಮಟ್ಟದಲ್ಲಿ ಪ್ರಸಿದ್ಧಿ ಹೊಂದಿರುವ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವರ್ಷಕ್ಕೆ ಲಕ್ಷಾಂತರ ಜನ ಪ್ರಯಾಣಿಸುತ್ತಾರೆ. ಹಾಗಾಗಿ ವಿಮಾನ ನಿಲ್ದಾಣ ತನ್ನ ಸಾಮರ್ಥ್ಯ ಹೆಚ್ಚಿಸಲು ಮುಂದಾಗಿ ಇದೀಗ ಟರ್ಮಿನಲ್-2(Terminal 2) ಸಿದ್ಧಗೊಂಡಿದೆ.
ಟರ್ಮಿನಲ್ 2 ವನ್ನು ಗಾರ್ಡನ್ ಟರ್ಮಿನಲ್(Garden Terminal) ಎಂದು ಕರೆಯಲಾಗುತ್ತದೆ. ಏಕೆಂದರೆ ಇದು ದೊಡ್ಡ ಕೃತಕ ಒಳಾಂಗಣ ಉದ್ಯಾನವನ್ನು ಹೊಂದಿದೆ. ಬೆಂಗಳೂರನ್ನು ಭಾರತದ ʼಗಾರ್ಡನ್ ಸಿಟಿʼಎಂದು ಕರೆಯಲಾದ ಬಿರುದನ್ನು ಎತ್ತಿಹಿಡಿಯಲಿದೆ ಎಂದೇ ವ್ಯಾಖ್ಯಾನಿಸಲಾಗಿದೆ. ಪ್ರಯಾಣಿಕರಿಗೆ ಉದ್ಯಾನವನದ ಅನುಭವ ನೀಡಲು ಕೃತಕ ಮರಗಿಡಗಳು, ಹಕ್ಕಿಗಳ ಕಲರವ-ಚಿಲಿಪಿಲಿ ನಾದವನ್ನು ಇಲ್ಲಿ ಕೇಳಬಹುದು.
ಹೊಸದಾಗಿ ಟರ್ಮಿನಲ್ 2 (Bengaluru Terminal 2) ಎರಡನೇ ರನ್ ವೇ, ಮಲ್ಟಿಮೋಡಲ್ ಸಾರಿಗೆ ಕೇಂದ್ರ, ಪ್ರವೇಶ ರಸ್ತೆಗಳ ವಿಸ್ತರಣೆ ಮತ್ತು ಆಂತರಿಕ ರಸ್ತೆ ಮೂಲಸೌಕರ್ಯಗಳು ಪ್ರಯಾಣಿಕರಿಗೆ ಲಭ್ಯವಾಗಲಿವೆ. ಏರ್‌ಪೋರ್ಟ್ ಒಳಾಂಗಣವು ಸಂಪೂರ್ಣ ವುಡ್ ಡಿಸೈನ್, ಹಸಿರಿನೊಂದಿಗೆ ವಿನ್ಯಾಸಗೊಂಡಿದೆ. ಗ್ರೌಂಡ್ ಎಸಿ ಆಟೋ ಮೆಟಿಕ್ ಪಾಸ್‍ಪೋರ್ಟ್ ವೆರಿಫಿಕೇಷನ್, ಆಕರ್ಷಕ ಫ್ಲೋರಿಂಗ್ ಹಾಗೂ ಅತ್ಯಾಧುನಿಕ ಟೆಕ್ನಾಲಜಿಯನ್ನು ಹೊಂದಿದೆ.
ವಿಮಾನ ಪ್ರಯಾಣಿಕರು ಬೋರ್ಡಿಂಗ್ ಮತ್ತು ಡಿಬೋರ್ಡಿಂಗ್ ಸಂದರ್ಭದಲ್ಲಿ ವ್ಯಕ್ತಿಯನ್ನು ಗುರುತಿಸಲು ಫೇಸ್ ರೆಕಗ್ನಿಷನ್, ಫಿಂಗರ್ ಪ್ರಿಂಟ್ ಸೆನ್ಸಾರ್ ಸೌಲಭ್ಯ. ಕೆಐಎಎಲ್ ನೂತನ ಟರ್ಮಿನಲ್‍ನಲ್ಲಿ ವಿಮಾನ ನಿಲ್ದಾಣದಲ್ಲಿನ ಸೌಲಭ್ಯಗಳ ಬಗ್ಗೆ ಪ್ಯಾಸೆಂಜರ್‌ಗಳಿಗೆ ಮಾಹಿತಿ ಪಡೆಯಲು ಇನ್ ಬಿಲ್ಟ್ ಸ್ಮಾರ್ಟ್ ಫೋನ್ ಅಪ್ಲಿಕೇಷನ್ ತಂತ್ರಜ್ಞಾನ ರೂಪಿಸಲಾಗಿದೆ.
ಬೆಂಗಳೂರು ವಿಮಾನ ನಿಲ್ದಾಣದ ಟರ್ಮಿನಲ್ 2 ಸುಮಾರು 5-6 ಕೋಟಿ ಪ್ರಯಾಣಿಕರನ್ನು ನಿಭಾಯಿಸುವ ಸಾಮರ್ಥ್ಯವನ್ನು ಹೊಂದಿದೆ. ಬೆಂಗಳೂರು ವಿಮಾನ ನಿಲ್ದಾಣವನ್ನು ಕ್ಯಾಂಪಸ್‌ನಾದ್ಯಂತ ನವೀಕರಿಸಬಹುದಾದ ಶಕ್ತಿಯನ್ನು ಬಳಸಿಕೊಂಡು 100% ಸುಸ್ಥಿರತೆಯೊಂದಿಗೆ ರಚಿಸಲಾಗಿದೆ. ಇದನ್ನೂ ಓದಿ: ಮೋದಿಯಿಂದ ವಂದೇ ಭಾರತ್, ಕಾಶಿ ದರ್ಶನ್ ರೈಲಿಗೆ ಚಾಲನೆ
ಅಮೆರಿಕದ ವಾಸ್ತುಶಿಲ್ಪ ಸಂಸ್ಥೆ ಸ್ಕಿಡ್‌ಮೋರ್, ಓವಿಂಗ್ಸ್ & ಮೆರಿಲ್ (SOM) ಕಂಪನಿ ಟರ್ಮಿನಲ್ ವಿನ್ಯಾಸ ಮಾಡಿದೆ. ಏಕಕಾಲದಲ್ಲಿ 6 ಸಾವಿರ ಮಂದಿಗೆ ಕುಳಿತುಕೊಳ್ಳುವ ವ್ಯವಸ್ಥೆ ಇರವುದು ವಿಶೇಷ. ಹೊಸ ಟರ್ಮಿನಲ್‌ನ ಮೊದಲ ಹಂತವು ಒಂದು ವರ್ಷದಲ್ಲಿ 2.5 ಕೋಟಿ ಪ್ರಯಾಣಿಕರಿಗೆ ಸೇವೆ ಸಲ್ಲಿಸುವ ನಿರೀಕ್ಷೆಯಿದೆ. ವರದಿಗಳ ಪ್ರಕಾರ ಎರಡನೇ ಟರ್ಮಿನಲ್‌ನ ಮೊದಲ ಹಂತದ ನಿರ್ಮಾಣದ ಅಂದಾಜು ವೆಚ್ಚ 13,000 ಕೋಟಿ ರೂ. ಆಗಿದ್ದು ಈ ಟರ್ಮಿನಲ್ ಸರಿಸುಮಾರು 2.5 ಲಕ್ಷ ಚದರ ಮೀಟರ್‌ನ ಬಿಲ್ಟ್-ಅಪ್ ಪ್ರದೇಶವನ್ನು ಹೊಂದಿದೆ. ಎರಡನೇ ಹಂತದಲ್ಲಿ ಈ ಟರ್ಮಿನಲ್‌ಗೆ ಇನ್ನೂ 4.41 ಲಕ್ಷ ಚ.ಮೀ ಹೊಸದಾಗಿ ಸೇರ್ಪಡೆಗೊಳ್ಳಲಿದೆ.
Live Tv
[brid partner=56869869 player=32851 video=960834 autoplay=true]
ಬೆಂಗಳೂರು: ಕೆಂಪೇಗೌಡ ಏರ್‌ಪೋರ್ಟ್‍ನಲ್ಲಿ ಬಾಂಬ್ ಇಟ್ಟಿರೋದಾಗಿ ಅಪರಿಚಿತನಿಂದ ಬೆದರಿಕೆ ಕರೆ ಬಂದಿದೆ. ಪರಿಣಾಮ ವಿಮಾನ ನಿಲ್ದಾಣದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ.
ಬೆಳಗಿನ ಜಾವ 3.30 ಸಮಯದಲ್ಲಿ ಅಪರಿಚಿತನೊಬ್ಬ ಪೊಲೀಸ್ ಕಂಟ್ರೋಲ್ ರೂಂಗೆ ಕರೆ ಮಾಡಿದ್ದು, ಕೆಂಪೇಗೌಡ ಏರ್‌ಪೋರ್ಟ್‍ನಲ್ಲಿ ಬಾಂಬ್ ಇಟ್ಟಿರುವುದಾಗಿ ಹೇಳಿದ್ದಾನೆ. ಈ ಹಿನ್ನೆಲೆ ಏರ್‌ಲೈನ್ಸ್ ಗೇಟ್, ಟರ್ಮಿನಲ್ ಮತ್ತು ವಿಮಾನ ನಿಲ್ದಾಣದಲ್ಲಿ ತೀವ್ರ ತಪಾಸಣೆ ನಡೆಯುತ್ತಿದೆ. ಇದನ್ನೂ ಓದಿ: ಭಾರತದ ಮೊದಲ 5ಜಿ ಕರೆ ಯಶಸ್ವೀ ಪರೀಕ್ಷೆ
ಈಶಾನ್ಯ ವಿಭಾಗ ಡಿಸಿಪಿ ಅನೂಪ್ ಶೆಟ್ಟಿ ಅವರು, ಬಾಂಬ್ ನಿಷ್ಟ್ರಿಯ ದಳ, ಶ್ವಾನ ದಳ ಸ್ಥಳಕ್ಕೆ ಆಗಮಿಸಿದೆ. ವಿಮಾನ ನಿಲ್ದಾಣದಲ್ಲಿ ತೀವ್ರ ತಪಾಸಣೆ ಮಾಡಲಾಗ್ತಿದೆ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ.
ಶ್ವಾನ ದಳ ಹಾಗೂ ಬಾಂಬ್ ನಿಷ್ಕ್ರಿಯ ದಳದ ಅಧಿಕಾರಿಗಳು ಏರ್‌ಪೋರ್ಟ್ ಇಂಚಿಂಚೂ ತಪಾಸಣೆ ನಡೆಸಿದ್ದಾರೆ. ಆದ್ರೆ ಯಾವುದೇ ಅನುಮಾನಸ್ಫದವಾದ ವಸ್ತು ಕಂಡುಬಂದಿಲ್ಲ. ಈ ಹಿನ್ನೆಲೆ ಇದೊಂದು ಹುಸಿಬಾಂಬ್ ಕರೆ ಅಂತ ತೀರ್ಮಾನಕ್ಕೆ ಬಂದಿದ್ದಾರೆ. ಸದ್ಯ ಕರೆ ಮಾಡಿದವನ ಜಾಡು ಬೆನ್ನತ್ತಿರೋ ಪೊಲೀಸರು ಅಪರಿಚಿತನ ಹುಡುಕಾಟದಲ್ಲಿ ತೊಡಗಿದ್ದು, ಹುಸಿಬಾಂಬ್ ಕರೆಯ ಉದ್ದೇಶ ತಿಳಿಯಬೇಕಿದೆ.
ಚಿಕ್ಕಬಳ್ಳಾಪುರ: ವ್ಯಾಲೆಂಟೈನ್ಸ್ ಡೇ ಅಂಗವಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಬಳಿಯ ಕೇಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ 5.15 ಲಕ್ಷ ಕೆಜಿ ಗುಲಾಬಿಗಳನ್ನ ರಫ್ತು ಮಾಡಲಾಗಿದೆ. ದೇಶದಲ್ಲಿಯೇ ಈ ಬಾರಿ ಅತಿ ಹೆಚ್ಚು ಗುಲಾಬಿ ಹೂ ರಫ್ತು ಮಾಡಿದ ಕೀರ್ತಿಗೆ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಭಾಜನವಾಗಿದೆ.
ಒಟ್ಟು 18 ಏರ್ ಲೈನ್ಸ್ ಗಳ ಮೂಲಕ 5.15 ಲಕ್ಷ ಕೆ.ಜಿ ಹೂಗಳನ್ನ ಪ್ರಪಂಚದ 25 ಸ್ಥಳಗಳಿಗೆ ರಫ್ತು ಮಾಡಲಾಗಿದೆ. ನಮ್ಮ ರಾಜ್ಯದಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ಹೂಗಳನ್ನ ರೈತರು ಬೆಳೆಯುವ ಕಾರಣ ವಿದೇಶಗಳು ಸೇರಿದಂತೆ ದೇಶದ ಹಲವು ಭಾಗಗಳಲ್ಲಿ ರಾಜ್ಯದ ಗುಲಾಬಿ ಹೂವಿಗೆ ಭಾರೀ ಬೇಡಿಕೆ ಇದೆ.
ಬೇಡಿಕೆಗೆ ಅನುಗುಣವಾಗಿ ರಫ್ತು ಮಾಡಲು ಸೌಲಭ್ಯ ಕೆಐಎಲ್ ಸಹಕಾರಿಯಾಗಿದ್ದು, ಸಿಂಗಾಪುರ್, ಕೌಲಾಲಂಪುರ್, ಲಂಡನ್, ಆಸ್ಟರ್ ಡ್ಯಾಂ, ಕುವೈತ್, ಆಕ್ಲೆಂಡ್, ಬೈರುತ್, ಮನಿಲಾ, ಮಸ್ಕತ್, ದುಬೈ ರಾಷ್ಟ್ರಗಳಿಗೆ ಗುಲಾಬಿ ರಫ್ತು ಮಾಡಲಾಗಿದೆ. ವಿದೇಶಿ ಮಾರುಕಟ್ಟೆಗಳಿಗೆ 2 ಲಕ್ಷ ಕೆಜಿಯ 7.3 ಮಿಲಿಯನ್ ಗುಲಾಬಿ ಹೂಗಳನ್ನ ರಫ್ತು ಮಾಡಲಾಗಿದೆ. ಇದನ್ನೂ ಓದಿ: ಹಿಜಬ್ ಧರಿಸಿ ಬರಲು ಬಿಡಲ್ಲ: ಸಚಿವ ಅಶ್ವತ್ಥ ನಾರಾಯಣ
ಬೆಂಗಳೂರು: ಬೆಂಬಿಡದೆ ಸುರಿದ ಭಾರೀ ಮಳೆಯಿಂದಾಗಿ ಬೆಂಗಳೂರು ಏರ್‌ಪೋರ್ಟ್ ರಸ್ತೆಯಲ್ಲಿ ಭಾರೀ ಅವಾಂತರವೇ ಸೃಷ್ಟಿಯಾಗಿತ್ತು. ಏರ್‌ಪೋರ್ಟ್ ರಸ್ತೆಯಲ್ಲಿ ನೀರು ನಿಂತು ಮಿನಿ ಕೆರೆಯಂತಾಗಿತ್ತು. ರಸ್ತೆಯ ಎರಡೂ ಬದಿಯಲ್ಲೂ ನೀರು ರಭಸವಾಗಿ ಹರಿಯುತ್ತಿತ್ತು.
ಏರ್‌ಪೋರ್ಟ್ ಟರ್ಮಿನಲ್‍ಗೆ ನೀರು ನುಗ್ಗಿದ ಪರಿಣಾಮ ಪ್ರಯಾಣಿಕರು ಪರದಾಡುವಂತಾಯ್ತ. ಏರ್‌ಪೋರ್ಟ್ ರಸ್ತೆಯಲ್ಲಿ ಮೊಣಕಾಲಿನವರೆಗೂ ನೀರು ನಿಂತಿತ್ತು. ಪರಿಣಾಮ ವಾಹನ ಸಂಚಾರಕ್ಕೆ ಅಡ್ಡಿ ಉಂಟಾಯ್ತು. ಒಂದ್ಕಡೆ ಮಳೆಯಾದರೆ, ಮತ್ತೊಂದ್ಕಡೆ ಕ್ಯಾಬ್, ಆಟೋಗಳು ಸರಿಯಾದ ಸಮಯಕ್ಕೆ ಸಿಗದೆ ಪ್ರಯಾಣಿಕರು ಪರದಾಡಿದ್ರು. ಕೆಲ ಪ್ರಯಾಣಿಕರು ಮನೆ ಸೇರಿದ್ರೆ ಸಾಕಪ್ಪ ಅಂತ ಟ್ರ್ಯಾಕ್ಟರ್‍ನಲ್ಲೇ ಲಗೇಜು ಹಾಕಿಕೊಂಡು ಪ್ರಯಾಣ ಮಾಡಿದ್ರು. ಇದನ್ನೂ ಓದಿ: ಜಮ್ಮು-ಕಾಶ್ಮೀರದಲ್ಲಿ ನಿಲ್ಲದ ಉಗ್ರರ ಅಟ್ಟಹಾಸ- ಸೇನಾಧಿಕಾರಿ ಸೇರಿ ನಾಲ್ವರು ಯೋಧರು ಹುತಾತ್ಮ
ನಿನ್ನೆ ಸಂಜೆಯಿಂದ ನಿರಂತರವಾಗಿ ಮಳೆ ಸುರಿದ ಪರಿಣಾಮ ನಗರದಲ್ಲಿ ಟ್ರಾಫಿಕ್ ಜಾಮ್ ಸಮಸ್ಯೆ ಉಂಟಾಯ್ತು. ಏರ್‌ಪೋರ್ಟ್ ರಸ್ತೆಯಲ್ಲಿ ಜನರು ಗಂಟೆ ಗಟ್ಟಲೇ ಮಳೆಯಲ್ಲಿಯೇ ಕಾಯುತ್ತಿದ್ದ ದೃಶ್ಯ ಕಂಡು ಬಂತು. ದೇವನಹಳ್ಳಿ ಪಟ್ಡಣದಲ್ಲೂ ಭಾರೀ ಮಳೆಯಾಗಿದೆ. ಕೇಂಪೇಗೌಡ ವೃತ್ತ ಜಲಾವೃತವಾಗಿ ಕೆರೆಯಂತಾಗಿತ್ತು. ರಾಷ್ಟ್ರೀಯ ಹೆದ್ದಾರಿಯಿಂದ ದೇವನಹಳ್ಳಿ ನಗರದೊಳಗೆ ಸಂಪರ್ಕಿಸುವ ವೃತ್ತದಲ್ಲಿ ನೀರು ನಿಂತು ಬೈಕ್, ಕಾರು ಎಲ್ಲಾ ಮುಳುಗಿದ್ರೆ, ಮಳೆ ನೀರಿನಲ್ಲಿ ತರಕಾರಿಗಳು ಕೊಚ್ಚಿ ಹೋದವು. ಇದನ್ನೂ ಓದಿ: ರಾಜ್ಯದ ಜನರ ದುಡ್ಡು ದೋಚ್ತಿವೆ ಚೀನಿ ಆ್ಯಪ್‍ಗಳು – ಶೇರ್, ಲೈಕ್ ಕೊಡ್ತಿದ್ರೆ ಹುಷಾರಾಗಿರಿ
ಬೆಂಗಳೂರು: ದೆಹಲಿಗೆ ಹೊರಡಬೇಕಿದ್ದ ಏರ್ ಇಂಡಿಯಾ ವಿಮಾನ ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ತಾಂತ್ರಿಕ ದೋಷದಿಂದ ಹಾರಾಟ ಮಾಡಲಾಗದೇ 3 ಗಂಟೆಗಳ ಕಾಲ ರನ್‍ವೇನಲ್ಲೇ ಲಾಕ್ ಆದ ಘಟನೆ ಇಂದು ನಡೆದಿದೆ.
ಬೆಂಗಳೂರಿನಿಂದ ಪ್ರಯಾಣಿಕರನ್ನು ಹೊತ್ತು ದೆಹಲಿಗೆ ಹೊರಡಬೇಕಿದ್ದ ಏರ್ ಇಂಡಿಯಾ ವಿಮಾನ ಬೆಳಗ್ಗೆ 10.35 ಗಂಟೆಯಿಂದ 1.30 ಗಂಟೆವರೆಗೆ ರನ್‍ವೇನಲ್ಲೇ ನಿಂತಿದೆ. ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಕಾರಣ ಹಾರಾಟ ಮಾಡಲಾಗದೆ. ವಿಮಾನ ರನ್‍ವೇನಲ್ಲೆ ಲಾಕ್ ಆಗಿ ವಿಮಾನದಲ್ಲಿದ್ದ ಪ್ರಯಾಣಿಕರು ಆತಂಕಕ್ಕೆ ಒಳಗಾಗಿದ್ದರು. ಇದನ್ನೂ ಓದಿ: ರಾತ್ರೋರಾತ್ರಿ ವ್ಹೀಲಿಂಗ್ ಮಾಡುತ್ತಾ ಯುವಕರ ಪುಂಡಾಟ-ನೆಲಮಂಗಲ ಫ್ಲೈಓವರ್‌ನಲ್ಲಿ ಮೋಜು ಮಸ್ತಿ
ಪ್ರಯಾಣಿಕರು ವಿಮಾನದಲ್ಲಿನ ತಾಂತ್ರೀಕ ದೋಷದ ಬಗ್ಗೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ನಂತರ ಡಿಜಿಸಿಐ ಪ್ರಯಾಣಿಕರನ್ನು ವಿಮಾನದಿಂದ ಇಳಿಸಲು ಅನುಮತಿ ಸಿಕ್ಕ ಬಳಿಕ ಬಸ್ ಮೂಲಕ ರನ್‍ವೇಯಿಂದ ಪ್ರಯಾಣಿಕರನ್ನು ವಾಪಸ್ ಕರೆತರಲಾಯಿತು. ಈ ಸಮಸ್ಯೆ 3 ಗಂಟೆ ಬಳಿಕ ಪರಿಹಾರ ಕಂಡಿತು. ಬಳಿಕ ದೆಹಲಿಗೆ ತೆರಳಲು ಸಂಜೆ 5.15ಕ್ಕೆ ಪರ್ಯಾಯ ವಿಮಾನ ವ್ಯವಸ್ಥೆ ಮಾಡಿಕೊಡಲಾಗಿದೆ. ಇದನ್ನೂ ಓದಿ: ದಳ ತೊರೆದು ಕೈ ಹಿಡಿಯಲು ನಿರ್ಧರಿಸಿದ ಕೋಲಾರ ಶಾಸಕ ಶ್ರೀನಿವಾಸಗೌಡ
ಚಿಕ್ಕಬಳ್ಳಾಪುರ: ಪಕ್ಷದ ಅಧ್ಯಕ್ಷರ ಸೂಚನೆ ಮೇರೆಗೆ ನಾನು ರಾಜೀನಾಮೆ ನೀಡಿದ್ದೇನೆ. ಪಕ್ಷ ನನಗೆ ಎಲ್ಲವನ್ನೂ ನೀಡಿದೆ. ನಾನು ಸಂತೋಷದಿಂದಲೇ ಇದ್ದೇನೆ. ಅಧಿಕಾರ ಸಿಕ್ಕಾಗ ಮಾತ್ರವಲ್ಲ, ಅಧಿಕಾರ ಕಳೆದುಕೊಂಡಾಗಲೂ ಜನ ನನ್ನೊಂದಿಗೆ ಇದ್ದಾರೆ. ಜನರ ಈ ಪ್ರೀತಿಗೆ ನಾನು ಚಿರರುಣಿ ಎಂದು ನಿರ್ಗಮಿತ ಕೇಂದ್ರ ಸಚಿವ ಡಿ.ವಿ ಸದಾನಂದ ಗೌಡ ಹೇಳಿದ್ದಾರೆ.
ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಇಂದು ದೆಹಲಿಯಿಂದ ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಆಗಮಿಸಿದರು. ಈ ವೇಳೆ ಮಾತನಾಡಿದ ಡಿವಿಎಸ್, ಜನರು ನನ್ನ ಮೇಲೆ ಇಟ್ಟಿರುವ ಅಪಾರ ಪ್ರೀತಿಗೆ ನಾನು ಯಾವತ್ತು ಚಿರರುಣಿ. ರಾಜ್ಯ ರಾಜಕಾರಣದ ಬಗ್ಗೆ ಈಗಲೇ ನಾನು ಏನು ಹೇಳಲಾಗುವುದಿಲ್ಲ. ಪಕ್ಷ ನೀಡುವ ಜವಾಬ್ದಾರಿ ಮತ್ತು ಸೂಚನೆ ಮೆರೆಗೆ ಕೆಲಸ ಮಾಡುತ್ತೇನೆ ಎಂದು ಹೇಳುವ ಮೂಲಕ ಬೇರೆ ಹುದ್ದೆಯ ಬಗ್ಗೆ ಮಾತನಾಡಲು ನಿರಾಕರಿಸಿದರು. ಇದನ್ನೂ ಓದಿ: ಸಿಎಂ ಆಗಿ ಕಟೀಲಿಗೆ ಬಂದಿದ್ದ ಡಿವಿಎಸ್ – 9 ವರ್ಷಗಳ ಬಳಿಕ ಅದೇ ದಿನ ರಾಜೀನಾಮೆ
ಸದಾನಂದಗೌಡರ ಆಗಮನದ ಹಿನ್ನೆಲೆ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಬೆಂಗಳೂರು ಉತ್ತರ ತಾಲೂಕಿನ ಡಿವಿಎಸ್ ಬೆಂಬಲಿಗರು ಸೇರಿದಂತೆ ಅನೇಕ ಬಿಜೆಪಿ ಮುಖಂಡರು ಆಗಮಿಸಿ ಡಿವಿಎಸ್‍ಗೆ ಆತ್ಮಸ್ಥರ್ಯ ತುಂಬುವ ಕೆಲಸ ಮಾಡಿದರು. ವಿಮಾನ ನಿಲ್ದಾಣದಲ್ಲಿ ಕ್ಕಿಕ್ಕಿರಿದು ತುಂಬಿದ್ದ ಡಿವಿಎಸ್ ಬೆಂಬಲಿಗರು ಮುಂದಿನ ಸಿಎಂ ಸದಾನಂದಗೌಡ, ಜೈ ಎನ್ನುವ ಮೂಲಕ ಡಿವಿಎಸ್ ಅವರಿಗೆ ಜೈಕಾರ ಹಾಕಿದರು.
ಬೆಂಗಳೂರು: ಇಲ್ಲಿನ ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ(Kempegowda International Airport)ದಲ್ಲಿ ಸಿಲಿಂಡರ್ ಸ್ಫೋಟ ಸಂಭವಿಸಿ 06 ಮಂದಿ ಕಾರ್ಮಿಕರು ಗಾಯಗೊಂಡು ಆಸ್ಪತ್ರೆಗೆ ದಾಖಲಿಸಲಾಗಿದೆ.
ಕೆಐಎಎಲ್ ನ ಎರಡನೇ ಟರ್ಮಿನಲ್ ಗಾಗಿ ರಸ್ತೆ ನಿರ್ಮಾಣ ಕಾರ್ಯ ಬಲು ಜೋರಾಗಿ ಸಾಗಿದ್ದು, ಈ ವೇಳೆ ಕಾರ್ಗೋ ಕಾಂಪ್ಲೆಕ್ಸ್ ಮುಂಭಾಗದ ರಸ್ತೆಯಲ್ಲಿ ನ ಅಂಡರ್ ಪಾಸ್ ಓಳಗೆ ರಸ್ತೆಗೆ ಕಪ್ಪು ಬಿಳಿ ಸೂಚಕ ಸಂಕೇತಗಳ ಪಟ್ಟಿಯನ್ನ ಬಳಿಯಕಾಗುತ್ತಿತ್ತು. ಇದಕ್ಕಾಗಿ ಕ್ಯಾಂಟರ್ ಒಂದರಲ್ಲಿ ಕಪ್ಪು ಬಳಿ ಬಣ್ಣವನ್ನ ಬಿಸಿ ಮಾಡುವ ಸಿಲಿಂಡರ್ ಇಟ್ಟಿದ್ದು ಆಕಸ್ಮಿಕವಾಗಿ ಸಿಲಿಂಡರ್ ಬ್ಲಾಸ್ಟ್ ಆಗಿದೆ.
ರಭಸಕ್ಕೆ ಕ್ಯಾಂಟರ್ ಗೂ ಸಹ ಬೆಂಕಿ ತಗುಲಿದ್ದು ಘಟನೆಯಲ್ಲಿ 06 ಮಂದಿ ಕಾರ್ಮಿಕರು ಗಾಯಗೊಂಡಿದ್ದಾರೆ. ಅವಿನಾಶ್, ಸಿರಾಜ್, ಅಜಯ್, ನಾಗೇಶ್ ರಾವ್, ಪ್ರಶಾಂತ್, ಗೌತಮ್ ಗಾಯಗೊಂಡವರು. ಗಾಯಾಳುಗಳಲ್ಲಿ ಇಬ್ಬರ ಸ್ಥಿತಿ ಗಂಭೀರ ಎನ್ನಲಾಗುತ್ತಿದ್ದು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಸಂಬಂಧ ಕೇಂಪೇಗೌಡ ವಿಮಾನ ನಿಲ್ದಾಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರು: ಗಗನಸಖಿಯೊಬ್ಬರಿಗೆ ಪ್ರಯಾಣಿಕನೋರ್ವ ವಿಮಾನದಲ್ಲೇ ಲೈಂಗಿಕ ಕಿರುಕುಳ ನೀಡಿದ್ದು, ಇದೀಗ ಆರೋಪಿ ಪೊಲೀಸರ ಅತಿಥಿಯಾಗಿದ್ದಾನೆ.
ಕೊಲ್ಕತ್ತಾದ ಕ್ಷಿತಿಜ್ ಗುರುಂಗ್ ಎಂಬಾತ ಗಗನಸಖಿ ಫೌಜಿಯಾ ಎಂಬಾಕೆಗೆ ವಿಮಾನದಲ್ಲಿ ಲೈಂಗಿಕ ಕಿರುಕುಳ ನೀಡಿದ್ದಾನೆ. ಆರೋಪಿ ಕ್ಷಿತಿಜ್ ನಗರದ ಖಾಸಗಿ ಕಾಲೇಜಿನಲ್ಲಿ ಎಂ.ಟೆಕ್ ವಿದ್ಯಾರ್ಥಿಯಾಗಿದ್ದಾನೆ.
ಇಂಡಿಗೋ ವಿಮಾನದಲ್ಲಿ ಕೋಲ್ಕತ್ತಾದಿಂದ ಬೆಂಗಳೂರಿಗೆ ಬರುತ್ತಿದ್ದಾಗ ಆರೋಪಿ ಗಗನಸಖಿ ಮೈ ಮೇಲೆ ಕೈ ಹಾಕಿದ್ದಾನೆ. ಇದನ್ನು ಮತ್ತೊರ್ವ ಗಗನಸಖಿ ಪ್ರಶ್ನಿಸಿದ್ದು, ಇದರಿಂದ ಸಿಟ್ಟುಗೊಂಡ ಕ್ಷಿತಿಜ್ ಗಗನಸಖಿಗೆ ಕಪಾಳಮೋಕ್ಷ ಮಾಡಿದ್ದಾನೆ. ಈ ವೇಳೆ ವಿಮಾನದ ಸಹಪ್ರಯಾಣಿಕರು ಗಲಾಟೆ ಬಿಡಿಸಿದ್ದಾರೆ.
ಬಳಿಕ ಇಬ್ಬರು ಗಗನಸಖಿಯರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ. ಗಗನಸಖಿಯರ ದೂರಿನಂತೆ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.
ಬೆಂಗಳೂರು: ಅಕ್ರಮವಾಗಿ ಚಿನ್ನ ಸಾಗಾಟ ಮಾಡುತ್ತಿದ್ದ ಮಹಿಳೆಯೊಬ್ಬರನ್ನು ಇಲ್ಲಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ.
ಚೆನ್ನೈ ಮೂಲದ ಮಹಿಳೆಯೊಬ್ಬರು ಬ್ಯಾಂಕಾಂಕ್‍ನಿಂದ ಬೆಂಗಳೂರಿಗೆ ಬಂದಿಳಿದ್ದಳು. ಈ ವೇಳೆ ಕಸ್ಟಮ್ಸ್ ಹಾಗೂ ಏರ್ ಇಂಟಲಿಜೆನ್ಸ್ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿದ್ದು, ಮಹಿಳೆ 12.48 ಮೌಲ್ಯದ ಚಿನ್ನ ಸಾಗಾಟ ಮಾಡುವ ಪ್ರಕರಣ ಬೆಳಕಿಗೆ ಬಂದಿದೆ. ಈಕೆ ತನ್ನ ಗುದದ್ವಾರದ ಮೂಲಕ ಚಿನ್ನ ಸಾಗಾಟ ಮಾಡುತ್ತಿದ್ದಳು ಎನ್ನಲಾಗಿದೆ. ಸದ್ಯ ಅಧಿಕಾರಿಗಳು ಮಹಿಳೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಮತ್ತೊಂದು ಪ್ರಕರಣದಲ್ಲಿ ಕಾರ್ ಸ್ವಚ್ಛಗೊಳಿಸುವ ಉಪಕರಣದಲ್ಲಿ ಚಿನ್ನ ತಂದಿದ್ದವನನ್ನು ಕೂಡ ಅಧಿಕಾರಿಗಳು ಬಂಧಿಸಿದ್ದಾರೆ. ಎಮಿರೇಟ್ಸ್ ಪ್ಲೈಟ್‍ನಲ್ಲಿ ದುಬೈ ನಿಂದ ಬೆಂಗಳೂರಿಗೆ ಬಂದಿದ್ದ ಅಸಾಮಿ ಕಬ್ಬಿಣದ ಉಪಕರಣದಲ್ಲಿ 14 ಲಕ್ಷದ ಚಿನ್ನದ ಬಿಸ್ಕೆಟ್ಸ್ ಇಟ್ಟು ತಂದಿದ್ದ. ಒಟ್ಟು ನಾಲ್ಕು ಪ್ರಕರಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಸುಮಾರು 37.21 ಲಕ್ಷ ಮೌಲ್ಯದ ಚಿನ್ನವನ್ನ ಜಪ್ತಿ ಮಾಡಿದ್ದಾರೆ.