ಬೆಂಗಳೂರು: ‘ಡೆವಿಲ್’ ಸಿನಿಮಾ (Devil Cinema) ಶೂಟಿಂಗ್ ಸಲುವಾಗಿ ಥೈಲ್ಯಾಂಡ್‌ಗೆ (Thailand) ತೆರಳಿದ್ದ ನಟ ದರ್ಶನ್ (Darshan) ಶುಕ್ರವಾರ ರಾತ್ರಿ ಬೆಂಗಳೂರಿಗೆ ವಾಪಸ್ ಆಗಿದ್ದಾರೆ.
ರಾತ್ರಿ 11:45ರ ವಿಮಾನದಲ್ಲಿ ದೇವನಹಳ್ಳಿಯ ಬಳಿಯ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ನಟ ದರ್ಶನ್, ಪತ್ನಿ ವಿಜಯಲಕ್ಷ್ಮಿ ಆಗಮಿಸಿದ್ದಾರೆ. ಕಳೆದ 10 ದಿನಗಳ ಹಿಂದೆ ‘ಡೆವಿಲ್’ ಸಿನಿಮಾ ಶೂಟಿಂಗ್‌ಗೆಂದು ನಟ ದರ್ಶನ್, ಪತ್ನಿ ಹಾಗೂ ಮಗನೊಂದಿಗೆ ಥೈಲ್ಯಾಂಡ್‌ಗೆ ತೆರಳಿದ್ದರು.
ಇನ್ನು ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್‌ಗೆ ರಾಜ್ಯ ಹೈಕೋರ್ಟ್ ನೀಡಿದ್ದ ಜಾಮೀನು ಆದೇಶ ಪ್ರಶ್ನಿಸಿ ಬೆಂಗಳೂರು ನಗರ ಪೊಲೀಸರು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಿದ್ದು, ಒಂದು ವಾರದಲ್ಲಿ ಆದೇಶ ಹೊರಡಿಸಲಿದೆ.
ಬೆಂಗಳೂರು: ದುಬೈ (Dubai) ಪ್ಯಾಸೆಂಜರ್ ಬ್ಯಾಗ್‌ಗೆ 3.5 ಕೆಜಿ ಚಿನ್ನದ ಬಿಸ್ಕೆಟ್ ಅಂಟಿಸಿ, ಗೋಲ್ಡ್ ಸ್ಮಗ್ಲರ್ ಪರಾರಿಯಾಗಿರುವ ಘಟನೆ ಇಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (Bengaluru Airport) ನಡೆದಿದೆ.
ಬ್ಯಾಗ್ ಮಾಲೀಕ ತನ್ನ ಟ್ರ್ಯಾಲಿಯನ್ನು ಎಳೆದುಕೊಂಡು ಹೋಗುವಾಗ ಚಿನ್ನ ಬ್ಯಾಗ್ ಕೆಳಗೆ ಬಿದ್ದಿದೆ. ಇದನ್ನು ಗಮನಿಸಿದ ಮಾಲೀಕ ಚಿನ್ನದ ಬ್ಯಾಗ್‌ನ್ನು ಡಿಆರ್‌ಐ ಅಧಿಕಾರಿಗಳ ಬಳಿ ತೆಗೆದುಕೊಂಡು ಹೋಗಿದ್ದಾನೆ. ಅಧಿಕಾರಿಗಳು ಬ್ಯಾಗ್ ಪರಿಶೀಲನೆ ಮಾಡಿದಾಗ 3.5 ಕೆಜಿ ಚಿನ್ನದ ಬಿಸ್ಕೆಟ್ ಇರುವುದು ಪತ್ತೆಯಾಗಿದೆ.ಇದನ್ನೂ ಓದಿ: ಬಿಹಾರ ಮಾತ್ರವಲ್ಲ ದೇಶಾದ್ಯಂತ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಗೆ ಮುಂದಾದ ಚುನಾವಣಾ ಆಯೋಗ
ಅಧಿಕಾರಿಗಳು ಮಾಲೀಕನ ವಿಚಾರಣೆ ನಡೆಸಿದಾಗ ಚಿನ್ನಕ್ಕೂ ಆತನಿಗೂ ಯಾವುದೇ ಸಂಬಂಧ ಇಲ್ಲ ಎನ್ನುವುದು ಬಹಿರಂಗ ಆಗಿದೆ. ಬಳಿಕ ಸ್ಮಗ್ಲರ್, ಪ್ರಯಾಣಿಕನ ಬ್ಯಾಗ್‌ಗೆ ಚಿನ್ನ ಅಂಟಿಸಿ ಪರಾರಿಯಾಗಿರುವುದು ತಿಳಿದುಬಂದಿದೆ.
– ವಿದೇಶದಿಂದ ಬೆಂಗಳೂರಿಗೆ ಸರಬರಾಜು ಮಾಡುತ್ತಿದ್ದ ಪ್ರಯಾಣಿಕ ಅರೆಸ್ಟ್
ಬೆಂಗಳೂರು: ವಿದೇಶದಿಂದ ಬೆಂಗಳೂರಿಗೆ (Bengaluru) ಸರಬರಾಜು ಮಾಡುತ್ತಿದ್ದ 40 ಕೋಟಿ ಮೌಲ್ಯದ ಕೊಕೇನ್ ಡ್ರಗ್ಸ್ (Cocaine Drugs) ಅನ್ನು ಕೆಂಪೇಗೌಡ ಏರ್‌ಪೋರ್ಟ್‌ನಲ್ಲಿ (Kempegowda Airport) ಸೀಜ್ ಮಾಡಲಾಗಿದೆ.
40 ಕೋಟಿ ಮೌಲ್ಯದ 4 ಕೆಜಿ ಕೊಕೇನ್ ಅನ್ನು ಡಿಆರ್‌ಐ ಅಧಿಕಾರಿಗಳು (DRI Officials) ಸೀಜ್ ಮಾಡಿದ್ದಾರೆ. ಭಾರತ ಮೂಲದ ಪ್ರಯಾಣಿಕನೋರ್ವ ದೋಹಾದಿಂದ ಬೆಂಗಳೂರಿಗೆ ಬಂದಿದ್ದ. ಪ್ರಯಾಣಿಕನ ಬ್ಯಾಗೇಜ್ ಅನ್ನು ಡಿಆರ್‌ಐ ಅಧಿಕಾರಿಗಳು ತಪಾಸಣೆ ನಡೆಸಿದ ವೇಳೆ ಬಳಕೆ ಮಾಡದ ಎರಡು ಸೂಪರ್ ಹೀರೋ ಕಾಮಿಕ್ಸ್/ಮ್ಯಾಗಜೀನ್ಸ್ ಪತ್ತೆಯಾಗಿದೆ. ಇದನ್ನೂ ಓದಿ: ಪ್ರಾಧ್ಯಾಪಕರ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿ
ಮ್ಯಾಗಜೀನ್ ಕವರ್ ಮೇಲೆ ಸೀಲ್ ಮಾಡಿದ ರೀತಿಯಲ್ಲಿದ್ದ ಕೊಕೇನ್ ಪೌಡರ್ ಪತ್ತೆಯಾಗಿದೆ. ಈ ಹಿನ್ನೆಲೆ ಡಿಆರ್‌ಐ ಅಧಿಕಾರಿಗಳು ಬಿಳಿ ಬಣ್ಣದ ಪೌಡರ್ ಅನ್ನು ಪರೀಕ್ಷೆಗೆ ಒಳಪಡಿಸಿದ್ದಾರೆ. ಪರೀಕ್ಷೆ ವೇಳೆ ಕೊಕೇನ್ ಎಂದು ಪಾಸಿಟಿವ್ ರಿಪೋರ್ಟ್ ಬಂದಿದೆ. ಬಳಿಕ ಡಿಆರ್‌ಐ ಅಧಿಕಾರಿಗಳು ಮ್ಯಾಗಜೀನ್ ಕವರ್ ಮೇಲಿದ್ದ ಕೊಕೇನ್ ಸಂಗ್ರಹಿಸಿ ಸುಮಾರು 4 ಕೆಜಿಯಷ್ಟು ಕೊಕೇನ್ ಜಪ್ತಿ ಮಾಡಿದ್ದಾರೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ 40 ಕೋಟಿ ಮೌಲ್ಯದ ಕೊಕೇನ್ ಅನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದು, ಕೊಕೇನ್ ಸಾಗಾಟ ಮಾಡಿದ್ದ ಪ್ರಯಾಣಿಕನನ್ನು ಬಂಧಿಸಿದ್ದಾರೆ. ಎನ್‌ಡಿಪಿಎಸ್ ಆಕ್ಟ್ ಅಡಿಯಲ್ಲಿ ಪ್ರಯಾಣಿಕನನ್ನು ಡಿಆರ್‌ಐ ಅಧಿಕಾರಿಗಳು ಬಂಧಿಸಿದ್ದಾರೆ. ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ನೀಡಿದೆ. ಇದನ್ನೂ ಓದಿ: ಜು.23-26ರವರೆಗೆ ಪ್ರಧಾನಿ ಮೋದಿ ಬ್ರಿಟನ್, ಮಾಲ್ಡೀವ್ಸ್‌ಗೆ ಭೇಟಿ
ನಟ ದರ್ಶನ್ ಥೈಲ್ಯಾಂಡ್‌ಗೆ ತೆರಳಿದ್ದಾರೆ. ಪುತ್ರ ವಿನೀಶ್ ಕೂಡ ದರ್ಶನ್‌ಗೆ ಜೊತೆಯಾಗಿ ಪ್ರಯಾಣಿಸಿದ್ದಾರೆ. ಡೆವಿಲ್ ಚಿತ್ರದ ನಿರ್ದೇಶಕ ಪ್ರಕಾಶ್ ಜಯರಾಂ ಸೇರಿ ಚಿತ್ರತಂಡ ದರ್ಶನ್ ಜೊತೆಯೇ ಪ್ರಯಾಣ ಬೆಳೆಸಿದ್ದಾರೆ.
ಮಂಗಳವಾರ ರಾತ್ರಿ ದರ್ಶನ್ ಥೈಲ್ಯಾಂಡ್‌ಗೆ ತೆರಳಿದ್ದು ,ಬ್ಯಾಂಕಾಕ್ ತಲುಪಿದ್ದಾರೆ. ಗುರುವಾರದಿಂದ ಹಾಡಿನ ಚಿತ್ರೀಕರಣ ಪ್ರಾರಂಭವಾಗಿ ಐದು ದಿನ ನಡೆಯುತ್ತೆ. ಕೊಲೆ ಆರೋಪಿಯಾದ್ಮೇಲೆ ಪ್ರಥಮ ಬಾರಿಗೆ ದರ್ಶನ್ ವಿದೇಶ ಪ್ರಯಾಣ ಮಾಡುತ್ತಿದ್ದು , ಹತ್ತು ದಿನ ಥೈಲ್ಯಾಂಡ್‌ನಲ್ಲಿರುವ ಸಾಧ್ಯತೆ ಇದೆ.ಇದನ್ನೂ ಓದಿ: ಏರ್‌ಪೋರ್ಟ್‌ನಲ್ಲಿ ದರ್ಶನ್ ಫೋಟೋ ರಿವೀಲ್
ಮಂಗಳವಾರ ರಾತ್ರಿ ಬೆಂಗಳೂರು ಇಂಟರ್‌ನ್ಯಾಶನಲ್ ವಿಮಾನ ನಿಲ್ದಾಣದಲ್ಲಿ ದರ್ಶನ್ ಪುತ್ರ ವಿನೀಶ್ ಹಾಗೂ ಡೈರೆಕ್ಟರ್ ಪ್ರಕಾಶ್ ಜೊತೆ ಕುಳಿತಿರುವ ಫೋಟೋ ಲಭ್ಯವಾಗಿದೆ. ಕೊಲೆ ಆರೋಪದಲ್ಲಿ ಬಂಧಿತರಾಗಿದ್ದ ದರ್ಶನ್ ಪಾಸ್‌ಪೋರ್ಟ್‌ನ್ನು ಕೋರ್ಟ್ ವಶಪಡಿಸಿಕೊಂಡಿತ್ತು. ಇದೀಗ ಜಾಮೀನು ಪಡೆದುಕೊಂಡಿರುವ ದರ್ಶನ್ ಕೋರ್ಟ್‌ನಿಂದ ಅನುಮತಿ ಪಡದೇ ವಿದೇಶಕ್ಕೆ ತೆರಳುತ್ತಿದ್ದಾರೆ. ಡೆವಿಲ್ ಚಿತ್ರದ ಹಾಡೊಂದರ ಚಿತ್ರೀಕರಣಕ್ಕಾಗಿ ದರ್ಶನ್ ಥೈಲ್ಯಾಂಡ್‌ಗೆ ಹೋಗಿದ್ದು, ಈ ಮೂಲಕ ಡೆವಿಲ್ ಚಿತ್ರದ ಚಿತ್ರೀಕರಣ ಸಂಪೂರ್ಣವಾಗಿ ಮುಕ್ತಾಯವಾಗುತ್ತಿದೆ.
ಇದೇ ತಿಂಗಳ 13 ಹಾಗೂ 16ರಂದು ವಿಮಾನ ನಿಲ್ದಾಣದ ಭದ್ರತಾ ಪಡೆಯ ಮೇಲ್‌ಗೆ ಎರಡು ಬಾಂಬ್ ಬೆದರಿಕೆ (Bomb Threat) ಇಮೇಲ್‌ಗಳು ಬಂದಿವೆ. ಇಮೇಲ್‌ನಲ್ಲಿ ಏರ್‌ಪೋರ್ಟ್‌ನ ಶೌಚಾಲಯದ ಪೈಪ್‌ಲೈನ್‌ನಲ್ಲಿ ಬಾಂಬ್ ಇಟ್ಟಿರುವುದಾಗಿ ತಿಳಿಸಿದ್ದಾರೆ. ಜೊತೆಗೆ ಉಗ್ರ ಅಜ್ಮಲ್ ಕಸಬ್‌ಗೆ ಗಲ್ಲಿಗೇರಿಸಿದ್ದು ಸರಿಯಲ್ಲ. ಹೀಗಾಗಿ ಒಂದು ಪ್ಲ್ಯಾನ್ ಫೇಲ್ ಆದರೂ ಕೂಡ ಪ್ಲ್ಯಾನ್ `ಬಿ’ ಸಿದ್ಧವಾಗಿದೆ ಎಂದು ಉಗ್ರನ ಹೆಸರಲ್ಲಿ ಮೇಲ್ ಕಳುಹಿಸಿದ್ದಾರೆ.
ಕಳೆದ ಕೆಲ ದಿನಗಳಿಂದ ಸೈಲೆಂಟ್ ಆಗಿದ್ದ ಹುಸಿ ಬಾಂಬ್ ಮೇಲ್‌ಗಳು ಇದೀಗ ಮತ್ತೆ ಆಕ್ಟೀವ್ ಆಗಿದ್ದು, ಪೊಲೀಸರಿಗೆ ತಲೆ ನೋವಾಗಿದೆ. ಬೆದರಿಕೆ ಮೇಲ್ ಹಿನ್ನೆಲೆ ಏರ್‌ಪೋರ್ಟ್ ಪೊಲೀಸರು ಹಾಗೂ ಅಧಿಕಾರಿಗಳು ಎಲ್ಲೆಡೆ ಪರಿಶೀಲನೆ ನಡೆಸಿದ್ದಾರೆ. ಬಾಂಬ್ ಬೆದರಿಕೆ ಬಂದ ಮೇಲ್ ಐಡಿಗಳ ಮೇಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.ಇದನ್ನೂ ಓದಿ: ಬಹುಕೋಟಿ ವಂಚನೆ ಕೇಸ್ – ಐಶ್ವರ್ಯಗೌಡ ಆಸ್ತಿ ಮುಟ್ಟುಗೋಲು ಪ್ರಕ್ರಿಯೆ ಶುರು
ಚಿಕ್ಕಬಳ್ಳಾಪುರ: 2025ರ ಐಪಿಎಲ್ (IPL) ಟೂರ್ನಿಯಲ್ಲಿ ಆಡಿರುವ ಎರಡು ಪಂದ್ಯಗಳನ್ನ ಗೆದ್ದು ಬೀಗಿರುವ ಆರ್‌ಸಿಬಿ (RCB) ತಂಡ ಶುಕ್ರವಾರ ಚೆನ್ನೈನಲ್ಲೇ ಸಿಎಸ್‌ಕೆ (CSK) ತಂಡವನ್ನ ಮಣಿಸಿದೆ. ಇನ್ನೂ ಮುಂದಿನ ಪಂದ್ಯಕ್ಕಾಗಿ ಆರ್‌ಸಿಬಿ ತಂಡ ಇಂದು ಬೆಂಗಳೂರಿಗೆ ಆಗಮಿಸಿದೆ.
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಆರ್‌ಸಿಬಿ ತಂಡದ ಆಗಮನದ ಹಿನ್ನೆಲೆಯಲ್ಲಿ ಆಟಗಾರರಿಗೆ ಭಾರೀ ಭದ್ರತೆ ಕಲ್ಪಿಸಲಾಗಿತ್ತು. ಭಾರೀ ಭದ್ರತೆಯೊಂದಿಗೆ ವಿಮಾನ ನಿಲ್ದಾಣದಿಂದ ಹೊರಬಂದ ಆಟಗಾರರನ್ನ ಕಂಡ ಕೂಡಲೇ ಅಭಿಮಾನಿಗಳು ಆರ್‌ಸಿಬಿ.. ಆರ್‌ಸಿಬಿ.. ಎಂದು ಜಯಘೋಷ ಕೂಗುವ ಮೂಲಕ ಆಟಗಾರರನ್ನ ಸ್ವಾಗತಿಸಿಕೊಂಡರು. ಇದನ್ನೂ ಓದಿ: 17 ವರ್ಷಗಳ ಬಳಿಕ ಚೆನ್ನೈ ಕೋಟೆಗೆ ಆರ್‌ಸಿಬಿ ‘ರಾಯಲ್’ ಎಂಟ್ರಿ
ವಿರಾಟ್ ಕೊಹ್ಲಿ (Virat Kohli) ಸೇರಿದಂತೆ ಎಲ್ಲಾ ಆಟಗಾರರು ಆಗಮನವಾಗಿದ್ದು, ಆಟಗಾರರನ್ನ ಕಂಡು ಫ್ಯಾನ್ಸ್ ಸಖತ್ ಖುಷಿಪಟ್ಟರು. ಇನ್ನೂ ಬುಧವಾರ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಗುಜರಾತ್ ವಿರುದ್ಧ ಆರ್‌ಸಿಬಿ ಪಂದ್ಯ ಆಡಲಿದೆ. ಇದನ್ನೂ ಓದಿ: ಚೆನ್ನೈ ವಿರುದ್ಧ ಗೆದ್ದ ಆರ್‌ಸಿಬಿಗೆ ವಿಜಯ್ ಮಲ್ಯಾ ವಿಶ್
ನಿನ್ನೆ ಚೆಪಾಕ್‌ನಲ್ಲಿ ನಡೆದ ಹೈವೋಲ್ಟೇಜ್ ಪಂದ್ಯದಲ್ಲಿ ಬರೋಬ್ಬರಿ 17 ವರ್ಷಗಳ ಬಳಿಕ ಸಿಎಸ್‌ಕೆ ವಿರುದ್ಧ ಆರ್‌ಸಿಬಿ ಗೆದ್ದು ಬೀಗಿತು. ಆ ಮೂಲಕ ಐಪಿಎಲ್‌ನಲ್ಲಿ ಸತತ ಎರಡನೇ ಗೆಲುವು ದಾಖಲಿಸಿತು.
ಚಿಕ್ಕಬಳ್ಳಾಪುರ: ಇಂಡಿಗೋ ಏರ್‌ಲೈನ್ಸ್‌ನ (IndiGo Airlines) ಸಿಸ್ಟಂನಲ್ಲಿನ ತಾಂತ್ರಿಕ ದೋಷದಿಂದಾಗಿ ಶನಿವಾರ ದೇಶಾದ್ಯಂತ ಕಾರ್ಯಾಚರಣೆಗಳ ಮೇಲೆ ಪರಿಣಾಮ ಬೀರಿದೆ. ಸರ್ವರ್ ಸಮಸ್ಯೆಯಿಂದಾಗಿ ಚೆಕ್-ಇನ್ ಮತ್ತು ಚೆಕ್-ಔಟ್ ಆಗಲು ಪ್ರಯಾಣಿಕರು ಪರದಾಡಿದರು.
ಬೆಳಗ್ಗೆ 11 ಗಂಟೆಯಿಂದ ಸರ್ವರ್ ಸಮಸ್ಯೆ ಮುಂದುವರಿದಿದೆ. ಚೆಕ್-ಇನ್ ಸಮಸ್ಯೆ ಹಿನ್ನೆಲೆ ವಿಮಾನಗಳ ಟೇಕ್ ಆಫ್‌ನಲ್ಲೂ ವಿಳಂಬವಾಗಿದೆ. ಸಮಯಕ್ಕೆ ಸರಿಯಾಗಿ ಪ್ರಯಾಣ ಮಾಡಲಾಗದೇ ಪ್ರಯಾಣಿಕರು ಪರದಾಡಿದರು.
ಇಂಡಿಗೋದ ಟಿಕೆಟ್ ಬುಕಿಂಗ್ ಸರ್ವರ್ ಮಧ್ಯಾಹ್ನದಿಂದ ಪರಿಣಾಮ ಬೀರಿದೆ. ಮಧ್ಯಾಹ್ನ 1:05ಕ್ಕೆ ಕಾರ್ಯಾಚರಣೆಗಳು ಸಂಕ್ಷಿಪ್ತವಾಗಿ ಪುನರಾರಂಭಗೊಂಡಿವೆ. ಆದಾಗ್ಯೂ, ಸಿಸ್ಟಮ್‌ನಲ್ಲಿ ತೊಡಕಾಗುತ್ತಿದೆ. ಇದನ್ನೂ ಓದಿ: ಮುನಿರತ್ನಗೆ 14 ದಿನ ನ್ಯಾಯಾಂಗ ಬಂಧನ
ಸಮಸ್ಯೆ ಪರಿಹರಿಸಲು, ಎಲ್ಲರಿಗೂ ಸಹಾಯ ಮಾಡಲು ಮತ್ತು ಸುಗಮ ಪ್ರಯಾಣ ಖಚಿತಪಡಿಸಿಕೊಳ್ಳಲು ನಮ್ಮ ತಂಡ ಕಾರ್ಯನಿರ್ವಹಿಸುತ್ತಿದೆ ಎಂದು ಏರ್ಲೈನ್ಸ್ ಹೇಳಿದೆ.
ವಿಮಾನ ನಿಲ್ದಾಣಗಳ ಚೆಕ್-ಇನ್‌ನಲ್ಲಿ ಪ್ರಯಾಣಿಕರು ಸರತಿ ಸಾಲುಗಳಲ್ಲಿ ನಿಂತಿರುವ ದೃಶ್ಯದ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಟಿಕೆಟ್ ಕಾಯ್ದಿರಿಸಲು ಅಥವಾ ಇತರ ಸೇವೆಗಳು ಸಾಧ್ಯವಾಗುತ್ತಿಲ್ಲ ಎಂದು ದೂರಿದ್ದಾರೆ.
ಬೆಂಗಳೂರು/ಚಿಕ್ಕಬಳ್ಳಾಪುರ: ಇಂದು ಚಿಕ್ಕಬಳ್ಳಾಪುರ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ (Chikkaballapur Municipal Council Election) ನಡೆಯುವ ಹಿನ್ನೆಲೆ ಪ್ರವಾಸಕ್ಕೆಂದು ಕಳುಹಿಸಿದ್ದ 15 ಮಂದಿ ಬೆಂಬಲಿತ ಸದಸ್ಯರನ್ನು ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ (Kempegowda International Airport) ಸಂಸದ ಕೆ.ಸುಧಾಕರ್ (K Sudhakar) ಖುದ್ದು ಭೇಟಿ ಮಾಡಿ ಭಾರೀ ಭದ್ರತೆಯಲ್ಲಿ ಬರಮಾಡಿಕೊಂಡಿದ್ದಾರೆ.
ಚಿಕ್ಕಬಳ್ಳಾಪುರ ನಗರಸಭೆ ಚುನಾವಣೆ ನಡೆಯಲಿದ್ದು, ಶಾಸಕ ಪ್ರದೀಪ್ ಈಶ್ವರ್ (Pradeep Eshwar) ಹಾಗೂ ಸಂಸದ ಸುಧಾಕರ್ ನಡುವೆ ಭಾರೀ ಫೈಪೋಟಿ ಏರ್ಪಟ್ಟಿದೆ. ಹೀಗಾಗಿ ಪರಸ್ಪರ ಕ್ಲೈಮಾಕ್ಸ್ ಕಾರ್ಯತಂತ್ರಗಳನ್ನು ರೂಪಿಸಿ ನಾನಾ ನೀನಾ ಅಂತ ಫೈಟ್‌ಗೆ ಬಿದ್ದಿದ್ದಾರೆ. ಸಂಸದ ಸುಧಾಕರ್ ತಮ್ಮ 15 ಮಂದಿ ಬೆಂಬಲಿತ ಸದಸ್ಯರನ್ನು ಕಳೆದ ಒಂದು ವಾರದ ಹಿಂದೆ ಪ್ರವಾಸ ಕಳುಹಿಸಿದ್ದರು. ಚುನಾವಣೆ ಹಿನ್ನೆಲೆಯಲ್ಲಿ ಕೆಂಪೇಗೌಡ ಏರ್ಪೋರ್ಟ್‌ಗೆ ಆಗಮಿಸಿದ ನಗರಸಭಾ ಸದಸ್ಯರನ್ನು ಖುದ್ದು ಸುಧಾಕರ್ ಭೇಟಿ ಮಾಡಿ ಬರಮಾಡಿಕೊಂಡರು. ಕಾಂಗ್ರೆಸ್‌ನವರು ತಮ್ಮ ಬೆಂಬಲಿತ ಸದಸ್ಯರನ್ನ ಏರ್ಪೋರ್ಟ್ನಿಂದ ಹೈಜಾಕ್ ಮಾಡುತ್ತಾರೆ ಎಂದು ಸ್ವತಃ ಖುದ್ದು ಸುಧಾಕರ್ ನೂರಾರು ಬೆಂಬಲಿಗರೊಂದಿಗೆ ಆಗಮಿಸಿ ನಗರಸಭಾ ಸದಸ್ಯರನ್ನು ಸ್ವಾಗತಿಸಿ ಬಳಿಕ ಬಸ್ ಮೂಲಕ ಅಜ್ಞಾತ ಸ್ಥಳಕ್ಕೆ ಕರೆದೊಯ್ದಿದ್ದಾರೆ. ಇದನ್ನೂ ಓದಿ: ನಾಗಮಂಗಲದಲ್ಲಿ 144 ಸೆಕ್ಷನ್ ಜಾರಿ – ಇಂದು ಪಟ್ಟಣದ ಶಾಲಾ, ಕಾಲೇಜುಗಳಿಗೆ ರಜೆ
ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಸುಧಾಕರ್, ಕಾನೂನು ಬಾಹಿರವಾಗಿ ವಿಧಾನಪರಿಷತ್ ಸದಸ್ಯರನ್ನು ಮತದಾರರ ಪಟ್ಟಿಯಲ್ಲಿ ಸೇರಿಸಿದ್ದಾರೆ. ಜೆಡಿಎಸ್ ಸದಸ್ಯರನ್ನು ಬಲವಂತಾಗಿ ಕರೆದುಕೊಂಡು ಹೋಗಿದ್ದಾರೆ. ನಮ್ಮ ಸದಸ್ಯರನ್ನು ಏರ್ಪೋರ್ಟ್‌ನಿಂದ ಒತ್ತಾಯಪೂರ್ವಕವಾಗಿ ಕರೆದುಕೊಂಡು ಹೋಗುವ ಪ್ಲಾನ್ ಮಾಡಿದ್ದರು. ಹಾಗಾಗಿ ನಾನೇ ದೇವಸ್ಥಾನಕ್ಕೆ ಹೋಗಿ ಬಂದ ನಮ್ಮ ಸದಸ್ಯರನ್ನು ಕರೆದೊಯ್ಯಲು ಬಂದಿದ್ದೇನೆ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಆಕ್ರೋಶ ಹೊರಹಾಕಿದರು. ಇದನ್ನೂ ಓದಿ: ತಪ್ಪಿತಸ್ಥರ ವಿರುದ್ಧ ಕ್ರಮ, ಬಂಧನ ಆಗುತ್ತೆ: ಗಣೇಶ ವಿಸರ್ಜನೆ ಗಲಾಟೆ ಬಗ್ಗೆ ಚಲುವರಾಯಸ್ವಾಮಿ ಪ್ರತಿಕ್ರಿಯೆ
ಬೆಂಗಳೂರು: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (Kempegowda International Airport, Bengaluru) ಕ್ಯಾಬ್ ಮತ್ತು ಟ್ಯಾಕ್ಸಿಗಳಿಗೆ ಪ್ರವೇಶ ದರ ನಿಗದಿ ಮಾಡಿದೆ. ಏರ್‌ಪೋರ್ಟ್ ಆಡಳಿತ ಮಂಡಳಿಯ ಈ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿ ಚಾಲಕರು ಪ್ರತಿಭಟನೆ ನಡೆಸಿದ್ದಾರೆ.
ಹೌದು. ಪ್ರಯಾಣಿಕರನ್ನ ಪಿಕಪ್ ಮಾಡಲು ಪ್ರವೇಶ ದರ 07 ನಿಮಿಷಕ್ಕೆ 150 ರೂ. ಪಾವತಿಸಬೇಕು. ಇನ್ನು 07 ನಿಮಿಷಕ್ಕಿಂತ ಹೆಚ್ಚು ಕಾಲ ನಿಂತರೆ 300 ರೂ. ಪಾವತಿ ಮಾಡಬೇಕು. ಬೆಂಗಳೂರು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಆಡಳಿತ ಮಂಡಳಿ ಕಳೆದ ಭಾನುವಾರ ಈ ಹೊಸ ನಿಯಮವನ್ನ ಜಾರಿ ಮಾಡಿತ್ತು. ಇದನ್ನೂ ಓದಿ: ಜಾಮೀನು ಸಿಕ್ಕರೂ ರೇವಣ್ಣಗೆ ತಪ್ಪಿಲ್ಲ ಸಂಕಷ್ಟ- ಹೈಕೋರ್ಟ್ ಮೆಟ್ಟಿಲೇರಿದ ಎಸ್‍ಐಟಿ
ಆಡಳಿತ ಮಂಡಳಿಯ ದರ ನಿಗದಿ ಕ್ರಮಕ್ಕೆ ಯಲ್ಲೋ ಹಾಗೂ ವೈಟ್ ಬೋರ್ಡ್ ಚಾಲಕರು ಕಂಗಾಲಾಗಿದ್ದರು. ಅಲ್ಲದೇ ದರ ನಿಗದಿ ವಿರೋಧಿಸಿ ಕ್ಯಾಬ್ ಮತ್ತು ಟ್ಯಾಕ್ಸಿ ಚಾಲಕರು ಸೋಮವಾರ ಪ್ರತಿಭಟನೆ ಮಾಡುವ ಮೂಲಕ ಭಾರೀ ವಿರೋಧ ವ್ಯಕ್ತಪಡಿಸಿದ್ದರು. ಇದೀಗ ಟ್ತಾಕ್ಸಿ ಮತ್ತು ಕ್ಯಾಬ್ ಚಾಲಕರು (Taxi anf Cab Drivers) ನಿನ್ನೆ ಪ್ರತಿಭಟನೆ ಮಾಡಿದ್ದ ಪರಿಣಾಮ ದರ ನಿಗದಿ ಸಂಗ್ರಹಣೆಗೆ ತಾತ್ಕಾಲಿಕವಾಗಿ ಬ್ರೇಕ್ ಹಾಕಲಾಗಿದೆ.
ಇತ್ತ ಸದ್ಯಕ್ಕೆ ಬ್ರೇಕ್ ಹಾಕಿರುವ ಆಡಳಿತ ಮಂಡಳಿಯವರು ಮತ್ತೆ ಶುರು ಮಾಡುತ್ತಾರೆ ಎಂದು ಏರ್‌ಪೋರ್ಟ್ ಟ್ಯಾಕ್ಸಿ ಚಾಲಕರು ಇಂದು ಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವರನ್ನ ಭೇಟಿ ಮಾಡಲು ಮುಂದಾಗಿದ್ದಾರೆ.
ಬೆಂಗಳೂರು: ಮಂಗಳವಾರದಿಂದ ಎಲ್ಲಾ ಅಂತಾರಾಷ್ಟ್ರೀಯ ವಿಮಾನಗಳು (International Flight) ಬೆಂಗಳೂರು ಕೆಂಪೇಗೌಡ ವಿಮಾನ ನಿಲ್ದಾಣದ (Kempegowda Airport) ಟರ್ಮಿನಲ್ 2ನಿಂದ (Terminal-2) ಟೇಕಾಫ್ ಮತ್ತು ಲ್ಯಾಂಡಿಂಗ್ ಆಗಲಿದೆ. ಅಂತಾರಾಷ್ಟ್ರೀಯ ವಿಮಾನಗಳ ಜೊತೆ ದೇಶೀಯ ವಿಮಾನಗಳು ಸಹ ಈ ಟರ್ಮಿನಲ್‌ನಿಂದಲೇ ಕಾರ್ಯಾಚರಣೆ ನಡೆಸಲಿವೆ.
ಈ ಸಂಬಂಧ ಬಿಎಲ್‌ಆರ್ ಏರ್‌ಪೋರ್ಟ್ ಟ್ವೀಟ್ ಮಾಡಿದ್ದು, ಸೆ.12ರ ಬೆಳಗ್ಗೆ 10:45 ರಿಂದ ಎಲ್ಲಾ ಅಂತಾರಾಷ್ಟ್ರೀಯ ವಿಮಾನಗಳ ಜೊತೆ ದೇಶೀಯ ಸೇವೆ ನೀಡುವ ಏರ್ ಏಷ್ಯಾ, ಏರ್ ಇಂಡಿಯಾ, ಸ್ಟಾರ್ ಏರ್, ವಿಸ್ತಾರಾ ಕಂಪನಿಗಳ ವಿಮಾನ ಕಾರ್ಯಾಚರಣೆ ಟರ್ಮಿನಲ್ 2 ನಿಂದ ಆಗಲಿದೆ. ಆಕಾಸಾ ಏರ್, ಅಲೈಯನ್ಸ್ ಏರ್, ಇಂಡಿಗೋ, ಸ್ಪೈಸ್ ಜೆಟ್ ವಿಮಾನಗಳು ಟರ್ಮಿನಲ್ 1 ರಲ್ಲಿ ಟೇಕಾಫ್, ಲ್ಯಾಂಡಿಂಗ್ ಆಗಲಿದೆ ಎಂದು ತಿಳಿಸಿದೆ.
ನಿಗದಿ ಪ್ರಕಾರ ಆಗಸ್ಟ್ 31 ರಿಂದಲೇ ಟರ್ಮಿನಲ್ 2 ರಿಂದ ಅಂತರರಾಷ್ಟ್ರೀಯ ವಿಮಾನಗಳ ಕಾರ್ಯಾಚರಣೆ ಆರಂಭವಾಗಬೇಕಿತ್ತು. ಆದರೆ ತಾಂತ್ರಿಕ ಕಾರಣ ಮತ್ತು ಪ್ರಯಾಣಿಕರ ಸುರಕ್ಷತಾ ದೃಷ್ಟಿಯಿಂದ ಕೊನೆ ಕ್ಷಣದಲ್ಲಿ ವಿಮಾನ ನಿಲ್ದಾಣದ ನಿರ್ವಹಣಾ ಮಂಡಳಿ ಕಾರ್ಯಾಚರಣಾ ದಿನಾಂಕವನ್ನು ಮುಂದೂಡಿತ್ತು. ಇದನ್ನೂ ಓದಿ: ಇಂಡಿಯಾ ಪಾಕ್ ಪಂದ್ಯಕ್ಕೆ ಮಳೆ ಕಾಟ – ಅಲ್ಲಾ ನಮ್ಮನ್ನು ಕಾಪಾಡಿದ ಎಂದ ಅಖ್ತರ್
ಕಳೆದ ವರ್ಷದ ನವೆಂಬರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಸುಮಾರು 5,000 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಬೆಂಗಳೂರು ವಿಮಾನ ನಿಲ್ದಾಣದ ಟರ್ಮಿನಲ್-2 ಉದ್ಘಾಟಿಸಿದ್ದರು. ಈ ವರ್ಷದ ಜನವರಿ 15 ದಿಂದ ದೇಶೀಯ ಕಾರ್ಯಾಚರಣೆಯನ್ನು ಪ್ರಾರಂಭಿಸಿತ್ತು.
ಟರ್ಮಿನಲ್-2 ಅನ್ನು ಗಾರ್ಡನ್ ಟರ್ಮಿನಲ್(Garden Terminal) ಎಂದು ಕರೆಯಲಾಗುತ್ತದೆ. ಏಕೆಂದರೆ ಇದು ದೊಡ್ಡ ಕೃತಕ ಒಳಾಂಗಣ ಉದ್ಯಾನವನ್ನು ಹೊಂದಿದೆ. ಬೆಂಗಳೂರನ್ನು ಭಾರತದ ʼಗಾರ್ಡನ್ ಸಿಟಿʼಎಂದು ಕರೆಯಲಾದ ಬಿರುದನ್ನು ಎತ್ತಿಹಿಡಿಯಲಿದೆ ಎಂದೇ ವ್ಯಾಖ್ಯಾನಿಸಲಾಗಿದೆ. ಪ್ರಯಾಣಿಕರಿಗೆ ಉದ್ಯಾನವನದ ಅನುಭವ ನೀಡಲು ಕೃತಕ ಮರಗಿಡಗಳು, ಹಕ್ಕಿಗಳ ಕಲರವ-ಚಿಲಿಪಿಲಿ ನಾದವನ್ನು ಇಲ್ಲಿ ಕೇಳಬಹುದು.