Tag: Kemegowda Airport

  • ಸೆಪ್ಟೆಂಬರ್‌ನಲ್ಲಿ ಕೆಂಪೇಗೌಡ ಏರ್‌ಪೋರ್ಟ್‌ನಲ್ಲಿ `ಕಲಾಲೋಕ’ ಮಳಿಗೆ ಉದ್ಘಾಟನೆ: ಎಂ.ಬಿ ಪಾಟೀಲ್

    ಸೆಪ್ಟೆಂಬರ್‌ನಲ್ಲಿ ಕೆಂಪೇಗೌಡ ಏರ್‌ಪೋರ್ಟ್‌ನಲ್ಲಿ `ಕಲಾಲೋಕ’ ಮಳಿಗೆ ಉದ್ಘಾಟನೆ: ಎಂ.ಬಿ ಪಾಟೀಲ್

    – ಕರ್ನಾಟಕದ ಅಸ್ಮಿತೆ ಸಾರುವ 6 ಮತ್ತು 28 ಜಿ.ಐ. ಉತ್ಪನ್ನಗಳ ಪ್ರದರ್ಶನ, ಮಾರಾಟ

    ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್-2ರಲ್ಲಿ ಕರ್ನಾಟಕದ ಅಸ್ಮಿತೆ ಸಾರುವ 6 ಮತ್ತು ಜಿ.ಐ. ಟ್ಯಾಗ್ ಹೊಂದಿರುವ 28 ಉತ್ಪನ್ನಗಳ ಮಾರಾಟ ಮತ್ತು ಪ್ರದರ್ಶನ ವ್ಯವಸ್ಥೆ ಇರುವ ಆಕರ್ಷಕ ಕಲಾಲೋಕ ಮಳಿಗೆ ಸಿದ್ಧವಾಗುತ್ತಿದೆ. ಇದನ್ನು ಸೆಪ್ಟೆಂಬರ್ ತಿಂಗಳಿನಲ್ಲಿ ಸಿಎಂ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ (M B Patil) ತಿಳಿಸಿದ್ದಾರೆ.

    ಸರ್ಕಾರಿ ಸ್ವಾಮ್ಯದ ವಿಶ್ವೇಶ್ವರಯ್ಯ ಟ್ರೇಡ್ ಪ್ರೊಮೋಶನ್ ಸೆಂಟರ್ (ವಿಟಿಪಿಸಿ) ಸೇರಿದಂತೆ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಪ್ರಮುಖ ಅಧಿಕಾರಿಗಳೊಂದಿಗೆ ಈ ಯೋಜನೆಯ ಪ್ರಗತಿಯ ಸಂಬಂಧ ಪರಿಶೀಲನಾ ಸಭೆ ನಡೆಸಿದ್ದಾರೆ. ಇದನ್ನೂ ಓದಿ: ಚಾಣಕ್ಯ ವಿವಿಗೆ ಹಂಚಿಕೆಯಾಗಿದ್ದ ಭೂಮಿಗೆ ಲ್ಯಾಂಡ್ ಆಡಿಟ್ – ಜಮೀನು ವಾಪಸ್ ಪಡೆಯುತ್ತಾ ಸರ್ಕಾರ?

    ಬಳಿಕ ಮಾತನಾಡಿದ ಅವರು, ಕಲಾಲೋಕ ಮಳಿಗೆಯಲ್ಲಿ ರಾಜ್ಯದ ಅಸ್ಮಿತೆ ಸಾರುವ ಕಾಫಿ, ಮೈಸೂರು ಸಿಲ್ಕ್ಸ್, ಕೆಎಸ್‌ಡಿಎಲ್ ಉತ್ಪನ್ನಗಳಾದ ಗಂಧದ ಸಾಬೂನು ಇತ್ಯಾದಿ, ಲಿಡ್ಕರ್ ಉತ್ಪನ್ನಗಳು, ಕರಕುಶಲ ನಿಗಮದ ವಸ್ತುಗಳು ಮತ್ತು ಕೈಮಗ್ಗ ನಿಗಮದ ಉತ್ಪನ್ನಗಳು ಇರಲಿವೆ. ಇವುಗಳ ಜೊತೆಗೆ ಚನ್ನಪಟ್ಟಣದ ಬೊಂಬೆಯಂಥ 28 ಜಿ.ಐ. ಉತ್ಪನ್ನಗಳನ್ನೂ ಇಡಲಾಗುವುದು. ಇವುಗಳನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ಯಾಕಿಂಗ್ ವಿನ್ಯಾಸ ಮತ್ತು ಬ್ರ‍್ಯಾಂಡಿಂಗ್ ಮಾಡಿ, ಪ್ರದರ್ಶನ ಮತ್ತು ಮಾರಾಟ ನಡೆಸಲಾಗುವುದು. ಜಾಗತಿಕ ಮಟ್ಟದ ಗ್ರಾಹಕರನ್ನು ಸೆಳೆಯುವುದು ಇದರ ಉದ್ದೇಶವಾಗಿದೆ ಎಂದಿದ್ದಾರೆ. ಇದನ್ನೂ ಓದಿ: ಹೆಣ್ಣುಮಕ್ಕಳನ್ನ ಅವಹೇಳನ ಮಾಡೋದೇ ಬಿಜೆಪಿ ಸಂಸ್ಕೃತಿ: ಹರಿಪ್ರಸಾದ್ ಕಿಡಿ

    ಮುಂದಿನ ದಿನಗಳಲ್ಲಿ ಇಂಟರ್‌ನ್ಯಾಷನಲ್ ಲಾಂಜ್‌ನಲ್ಲಿ ಕೂಡ ಕಲಾಲೋಕ ಮಳಿಗೆ ತೆರೆಯಲಾಗುವುದು. ಇದಕ್ಕಾಗಿ ಟೆಂಡರ್ ಆಹ್ವಾನಿಸಲಾಗುವುದು. ಈಗ ಸಿದ್ಧವಾಗುತ್ತಿರುವ ಮೊದಲ ಮಳಿಗೆಯು 130 ಚದರ ಮೀಟರ್ ವಿಸ್ತೀರ್ಣ ಹೊಂದಿದ್ದು, ಆಗಸ್ಟ್ ಕೊನೆಯ ಹೊತ್ತಿಗೆ ಸಂಪೂರ್ಣವಾಗಿ ಇದರ ಕೆಲಸಗಳು ಮುಗಿಯಲಿವೆ. ಕೆಂಪೇಗೌಡ ವಿಮಾನ ನಿಲ್ದಾಣವು ಇದಕ್ಕೆ ನಿಗದಿತ ಬಾಡಿಗೆಯಲ್ಲಿ 50%ರಷ್ಟು ರಿಯಾಯಿತಿ ಕೊಟ್ಟಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ರಾಜಮೌಳಿ ಸಿನಿಮಾ ರಿಜೆಕ್ಟ್ ಮಾಡಿದ ನಟ ವಿಕ್ರಂ – ಕಾರಣ ಏನ್ ಗೊತ್ತಾ?

    ಸಭೆಯಲ್ಲಿ ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಆಯುಕ್ತೆ ಗುಂಜನ್ ಕೃಷ್ಣ, ವಿಶ್ವೇಶ್ವರಯ್ಯ ಟ್ರೇಡ್ ಪ್ರೊಮೋಶನ್ ಸೆಂಟರ್‌ನ ವ್ಯವಸ್ಥಾಪಕ ನಿರ್ದೇಶಕ ಶಿವಕುಮಾರ್ ಸೇರಿ ಎಲ್ಲಾ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

  • ಏರೋ ಇಂಡಿಯಾ 2025 – ನಾಳೆಯಿಂದ ಬೆಂಗಳೂರು ವಿಮಾನಯಾನದಲ್ಲಿ ವ್ಯತ್ಯಯ

    ಏರೋ ಇಂಡಿಯಾ 2025 – ನಾಳೆಯಿಂದ ಬೆಂಗಳೂರು ವಿಮಾನಯಾನದಲ್ಲಿ ವ್ಯತ್ಯಯ

    ಬೆಂಗಳೂರು: ಯಲಹಂಕದ ವಾಯುನೆಲೆಯಲ್ಲಿ ನಡೆಯಲಿರುವ ಏರೋ ಇಂಡಿಯಾ 2025ರ (Aero India 2025) ಹಿನ್ನೆಲೆ ಫೆ.5ರಿಂದ ಫೆ.14ರವರೆಗೆ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಪ್ರತಿದಿನ ಕೆಲವು ಗಂಟೆಗಳ ಕಾಲ ವಿಮಾನ ಹಾರಾಟ ಬಂದ್ ಆಗಲಿದೆ.

    ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ವಾಯುಯಾನ ಪ್ರದೇಶ ಮುಚ್ಚಲ್ಪಡಲಿದ್ದು, ಪ್ರಯಾಣಿಕರು ವಿಮಾನ ವೇಳಾಪಟ್ಟಿಗಳ ಪರಿಷ್ಕೃತ ಅಥವಾ ನವೀಕರಿಸಿದ ವಿವರಗಳಿಗಾಗಿ ಆಯಾ ವಿಮಾನಯಾನ ಸಂಸ್ಥೆಗಳನ್ನು ಸಂಪರ್ಕಿಸಲು ಸೂಚಿಸಲಾಗಿದೆ. ಇದನ್ನೂ ಓದಿ: ಮೈಸೂರು ಮಹಾರಾಜರು ಕಟ್ಟಿಸಿದ್ದ ಶಿವನ ದೇವಾಲಯವಾಯ್ತು ಬಾರ್ & ರೆಸ್ಟೋರೆಂಟ್!

    ವಿಮಾನ ವೇಳಾಪಟ್ಟಿಯ ನವೀಕೃತ ಮಾಹಿತಿಗೆ ಅನುಸಾರವಾಗಿ ತಮ್ಮ ಆಗಮನ ಮತ್ತು ನಿರ್ಗಮನವನ್ನು ಯೋಜಿಸಲು ನಾವು ವಿನಂತಿ ಮಾಡುತ್ತೇವೆ. ನಿಮ್ಮ ತಾಳ್ಮೆ ಮತ್ತು ಸಹಕಾರಕ್ಕಾಗಿ ಧನ್ಯವಾದಗಳು ಎಂದು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರು ಪ್ರಕಟಣೆ ಹೊರಡಿಸಿದೆ. ಇದನ್ನೂ ಓದಿ: 3 ದಶಕಗಳ ಬಳಿಕ ಮಂಗಳೂರು ಕಡಲ ಕಿನಾರೆಗೆ ಬಂದ ಕಡಲಾಮೆಗಳು

    ಬೆಂಗಳೂರು ಏರ್‌ಪೋರ್ಟ್ ಕಾರ್ಯಾಚರಣೆಯು ಫೆ.5ರಿಂದ ಫೆ.15ರವರೆಗೆ 10 ದಿನಗಳಲ್ಲಿ ಬೇರೆಬೇರೆ ಸಮಯದಲ್ಲಿ ಬಂದ್ ಆಗಿರಲಿದೆ. ಆ ವೇಳಾಪಟ್ಟಿ ವಿವರ ಈ ಕೆಳಗೆ ನೀಡಲಾಗಿದೆ. ಇದನ್ನೂ ಓದಿ: ಸ್ನೇಹಿತರ ಹೆಸರಲ್ಲಿ ನಕಲಿ ಚಿನ್ನ ಅಡವಿಟ್ಟು 49 ಲಕ್ಷ ವಂಚನೆ – ಫೈನಾನ್ಸ್ ಮ್ಯಾನೇಜರ್ ಅರೆಸ್ಟ್‌

    ಫೆಬ್ರವರಿ 5: ಬೆಳಗ್ಗೆ 9ರಿಂದ ಮಧ್ಯಾಹ್ನ 12ರವರೆಗೆ, ಅಪರಾಹ್ನ 3 ರಿಂದ ಸಂಜೆ 4:30ರವರೆಗೆ ಕಾರ್ಯಾಚರಣೆ ಸ್ಥಗಿತವಾಗಿರಲಿದೆ.
    ಫೆಬ್ರವರಿ 6: ಬೆಳಗ್ಗೆ 9 ರಿಂದ ಮಧ್ಯಾಹ್ನ 12 ರವರೆಗೆ ಮತ್ತು ಅಪರಾಹ್ನ 3 ರಿಂದ ಸಂಜೆ 4:39ರವರೆಗೆ ಕಾರ್ಯಾಚರಣೆ ಸ್ಥಗಿತವಾಗಿರಲಿದೆ.
    ಫೆಬ್ರವರಿ 7: ಬೆಳಗ್ಗೆ 09ರಿಂದ 11 ರವರೆಗೆ ಮತ್ತು ಅಪರಾಹ್ನ 3 ರಿಂದ ಸಂಜೆ 4:30ರವರೆಗೆ ಕಾರ್ಯಾಚರಣೆ ಸ್ಥಗಿತವಾಗಿರಲಿದೆ.
    ಫೆಬ್ರವರಿ 8:  ಬೆಳಗ್ಗೆ 9ರಿಂದ ಮಧ್ಯಾಹ್ನ 12ರವರೆಗೆ ಮತ್ತು ಅಪರಾಹ್ನ 3 ರಿಂದ ಸಂಜೆ 4:30ರವರೆಗೆ ಕಾರ್ಯಾಚರಣೆ ಸ್ಥಗಿತವಾಗಿರಲಿದೆ.
    ಫೆಬ್ರವರಿ 9: ಬೆಳಿಗ್ಗೆ 9 ರಿಂದ 11 ರವರೆಗೆ ಕಾರ್ಯಾಚರಣೆ ಸ್ಥಗಿತವಾಗಿರಲಿದೆ.
    ಫೆಬ್ರವರಿ 10: ಬೆಳಿಗ್ಗೆ 9 ರಿಂದ 11:30 ರವರೆಗೆ ಮತ್ತು ಅಪರಾಹ್ನ 2:30 ರಿಂದ 3:30 ರವರೆಗೆ ಕಾರ್ಯಾಚರಣೆ ಸ್ಥಗಿತವಾಗಿರಲಿದೆ.
    ಫೆಬ್ರವರಿ 11-12: ಮಧ್ಯಾಹ್ನ 12:00 ರಿಂದ ಅಪರಾಹ್ನ 2:30 ರವರೆಗೆ ಕಾರ್ಯಾಚರಣೆ ಸ್ಥಗಿತವಾಗಿರಲಿದೆ.
    ಫೆಬ್ರವರಿ 13-14: ಬೆಳಿಗ್ಗೆ 9:30 ರಿಂದ ಮಧ್ಯಾಹ್ನ 12 ರವರೆಗೆ ಮತ್ತು ಅಪರಾಹ್ನ 2:30 ರಿಂದ ಸಂಜೆ 5:00 ರವರೆಗೆ ಕಾರ್ಯಾಚರಣೆ ಸ್ಥಗಿತವಾಗಿರಲಿದೆ.