Tag: Kelara

  • ತಲಾಖ್ ತೀರ್ಪಿಗೆ ಸ್ವಾಗತ, ಶಬರಿಮಲೆ ತೀರ್ಪಿಗೆ ವಿರೋಧ ಯಾಕೆ: ಸುಬ್ರಮಣಿಯನ್ ಸ್ವಾಮಿ ಪ್ರಶ್ನೆ

    ತಲಾಖ್ ತೀರ್ಪಿಗೆ ಸ್ವಾಗತ, ಶಬರಿಮಲೆ ತೀರ್ಪಿಗೆ ವಿರೋಧ ಯಾಕೆ: ಸುಬ್ರಮಣಿಯನ್ ಸ್ವಾಮಿ ಪ್ರಶ್ನೆ

    ನವದೆಹಲಿ: ಸುಪ್ರಿಂ ಕೋರ್ಟ್ ನ ತ್ರಿವಳಿ ತಲಾಖ್ ತೀರ್ಪಿಗೆ ಸ್ವಾಗತ ಕೋರಿದ್ದವರು ಇಂದು ಶಬರಿಮಲೆಯ ತೀರ್ಪಿನ ವಿರುದ್ಧ ಯಾಕೆ ಬೀದಿಗಿಳಿದಿದ್ದಾರೆ ಎಂದು ಬಿಜೆಪಿ ಮುಖಂಡ, ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಪ್ರಶ್ನಿಸಿದ್ದಾರೆ.

    ಶಬರಿಮಲೆಯಲ್ಲಿ ಮಹಿಳೆಯರ ಪ್ರವೇಶ ವಿರೋಧಿಸಿ ನಡೆಯುತ್ತಿರುವ ಹೋರಾಟಕ್ಕೆ ಪ್ರತಿಕ್ರಿಯಿಸಿದ ಅವರು, ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪನ್ನು ನಾವು ಪಾಲಿಸಬೇಕು. ಈ ಹಿಂದೆ ಇದೇ ಸುಪ್ರೀಂ ಕೋರ್ಟ್ ತ್ರಿವಳಿ ತಲಾಖ್ ಬಗ್ಗೆ ತೀರ್ಪು ನೀಡಿದ್ದಾಗ ಎಲ್ಲರೂ ಸಂತಸ ವ್ಯಕ್ತಪಡಿಸಿದ್ದರು. ಆದರೆ ಶಬರಿಮಲೆಗೆ ಮಹಿಳೆಯರ ಪ್ರವೇಶದ ವಿಚಾರದಲ್ಲಿ, ಸುಪ್ರೀಂ ಕೋರ್ಟ್ ತೀರ್ಪು ನಮ್ಮ ಸಂಸ್ಕೃತಿಗೆ ವಿರುದ್ಧವಾದದ್ದು ಎಂದು ಹೇಳುತ್ತಿದ್ದೀರಿ. ಶಬರಿಮಲೆ ವಿವಾದ ನಿಮ್ಮ ಸಂಸ್ಕೃತಿಯಾದರೆ, ತ್ರಿವಳಿ ತಲಾಖ್ ಅವರ ಸಂಸ್ಕೃತಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

    ಈ ವಿವಾದ ಹಿಂದೂ ನವೋದಯ ಮತ್ತು ಗೊಡ್ಡು ಸಂಪ್ರದಾಯದ ನಡುವಿನ ಹೋರಾಟ. ಎಲ್ಲಾ ಹಿಂದುಗಳು ಒಂದೇ. ಎಲ್ಲಾ ಜಾತಿ ಮತ್ತು ಪಂಗಡಗಳೂ ಸಮಾನವಾದದ್ದು. ಜಾತಿ ವ್ಯವಸ್ಥೆ ತೊಲಗಬೇಕು. ಯಾಕೆಂದರೆ ಇಂದು ಬ್ರಾಹ್ಮಣರು ಬೌದ್ಧಿಕರಾಗಿ ಉಳಿದಿಲ್ಲ. ಅವರು ಸಿನಿಮಾ, ವಾಣಿಜ್ಯ ಸೇರಿದಂತೆ ಸಮಾಜದ ಎಲ್ಲ ಕ್ಷೇತ್ರಗಳಲ್ಲೂ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಜಾತಿ ಎಂಬುದು ಹುಟ್ಟಿನಿಂದ ನಿರ್ಧಾರವಾಗುತ್ತದೆ ಎಂಬುದನ್ನು ಎಲ್ಲಿಯೂ ಬರೆದಿಲ್ಲ. ಶಾಸ್ತ್ರಗಳನ್ನೂ ನಾವು ತಿದ್ದುಪಡಿ ಮಾಡಬಹುದು ಎಂದು ಸುಬ್ರಮಣಿಯನ್ ಸ್ವಾಮಿ ತಿಳಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv