Tag: Keke Wyatt

  • 11 ನೇ ಮಗುವಿನ ತಾಯಿಯಾಗುತ್ತಿದ್ದೇನೆಂದ ಅಮೆರಿಕನ್ ಗಾಯಕಿ ಕೇಕೆ ವ್ಯಾಟ್

    11 ನೇ ಮಗುವಿನ ತಾಯಿಯಾಗುತ್ತಿದ್ದೇನೆಂದ ಅಮೆರಿಕನ್ ಗಾಯಕಿ ಕೇಕೆ ವ್ಯಾಟ್

    ವಾಷಿಂಗ್ಟನ್: ಆರತಿಗೊಬ್ಬಳು ಮಗಳು, ಕೀರ್ತಿಗೊಬ್ಬ ಮಗ ಸಾಕು ಎಂದು ಯೋಚಿಸುವ ಪೋಷಕರ ಮಧ್ಯೆ, ಅಮೆರಿಕದ ಗಾಯಕಿಯೊಬ್ಬಳು 11ನೇ ಮಗುವಿಗೆ ಜನ್ಮ ನೀಡಲು ಸಿದ್ಧರಾಗುವ ಮೂಲಕವಾಗಿ ಸುದ್ಧಿಯಾಗಿದ್ದಾರೆ.

    ಅಮೆರಿಕದ ಗಾಯಕಿ ಕೇಕೆ ವ್ಯಾಟ್ (Keke Wyatt) 11 ನೇ ಮಗುವಿನ ತಾಯಿಯಾಗುತ್ತಿದ್ದಾರೆ. ಈ ಕುರಿತು ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ನಾನು, ನನ್ನ ಪತಿ ಮತ್ತು ಮಕ್ಕಳು ನಮ್ಮ ಕುಟುಂಬಕ್ಕೆ ಇನ್ನೊಂದು ಮಗುವನ್ನು ಸ್ವಾಗತಿಸುತ್ತಿದ್ದೇವೆ ಎಂದು ಬರೆದುಕೊಂಡು, ಪತಿ ಜಕಕರಿಯಾ ಡೇವಿಡ್ (Zacakariah David)  ಜೊತೆಗೆ ತಮ್ಮ ಉಳಿದ ಮಕ್ಕಳೊಂದಿಗೆ ನಿಂತಿರುವ ಫೋಟೊವನ್ನು ಹಂಚಿಕೊಂಡು 11 ನೇ ಮಗುವಿನ ನಿರೀಕ್ಷೆಯಲ್ಲಿರುವ ಕುರಿತು ಹೇಳಿಕೊಂಡಿದ್ದಾರೆ. ನೆಟ್ಟಿಗರು ಕಾಮೆಂಟ್ ಮಾಡುವ ಮೂಲಕವಾಗಿ ಶುಭಕೋರಿದ್ದಾರೆ.

     

    View this post on Instagram

     

    A post shared by Keke Wyatt (@keke_wyatt)

    10 ಮಕ್ಕಳಿಗೂ ಅಣ್ಣ, ಆಕ್ಕ ಆಗುತ್ತಿದ್ದೇವೆಂದು ಸೂಚಿಸುವ ಟೀ ಶರ್ಟ್‍ಗಳನ್ನು ಧರಿಸಿದ್ದು, ವ್ಯಾಟ್ ಪತಿ ಜಕಕರಿಯಾ ಡೇವಿಡ್ ಕೂಡ ಕಪ್ಪು ಬಿಳಿ ಬಣ್ಣದ ಟೀ ಶರ್ಟ್ ಧರಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ಫೋಟೋ ಕೂಡ ವೈರಲ್ ಆಗಿವೆ. ವ್ಯಾಟ್ ಬೇಬಿ ಬಂಪ್ ಫೋಟೋಶೂಟ್ ಮಾಡಿಸಿದ್ದು, ಅದರ ಫೋಟೋಗಳನ್ನೂ ಕೂಡ ಹಂಚಿಕೊಂಡಿದ್ದಾರೆ. ಕೆಂಪು ಬಣ್ಣದ ಉಡುಗೆ ಧರಿಸಿದ ಫೋಟೋ ಶೆರ್ ಮಾಡಿದ್ದಾರೆ. ಇದನ್ನೂ ಓದಿ: ಹರ್ಷ ಮನೆಗೆ ಬಿಜೆಪಿ ನಾಯಕರ ಭೇಟಿ, ಸಾಂತ್ವನ

     

    View this post on Instagram

     

    A post shared by Keke Wyatt (@keke_wyatt)

    ಕೇಕೆ ವ್ಯಾಟ್ 2000ನೇ ಇಸವಿಯಲ್ಲಿ ಮೊದಲಬಾರಿ ತಾಯಿಯಾದ್ರು, ನಂತರ 2020ರಲ್ಲಿ ಅವರು 9ನೇ ಮಗುವಿನ ತಾಯಿಯಾಗಿದ್ದರು. ಸದ್ಯ ಅಭಿಮಾನಿಗಳು ಕೇಕೆ ವ್ಯಾಟ್ ಅವರಿಗೆ ಅಭಿನಂದನೆ ಸಲ್ಲಿಸಿದ್ದು, ಅವರ ಕುಟುಂಬದವರನ್ನೇ ಸೇರಿಸಿ ಒಂದು ರಿಯಾಲಿಟಿ ಶೋ ಆರಂಭಿಸುವಂತೆ ಹೇಳುತ್ತಿದ್ದಾರೆ.