Tag: Keertigowda

  • ವಿಜಿ ಮೊದಲ ಪತ್ನಿ ನಾಗರತ್ನಗೆ ಮಧ್ಯಂತರ ನಿರೀಕ್ಷಣಾ ಜಾಮೀನು

    ವಿಜಿ ಮೊದಲ ಪತ್ನಿ ನಾಗರತ್ನಗೆ ಮಧ್ಯಂತರ ನಿರೀಕ್ಷಣಾ ಜಾಮೀನು

    ಬೆಂಗಳೂರು: ನಟ ದುನಿಯಾ ವಿಜಯ್ 2ನೇ ಪತ್ನಿ ಕೀರ್ತಿ ಗೌಡ ಮೇಲೆ ಹಲ್ಲೆ ಹಾಗೂ ದರೋಡೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಗರತ್ನಗೆ ನ್ಯಾಯಾಲಯ ಮಧ್ಯಂತರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.

    ನಗರದ ಸಿಟಿ ಸಿವಿಲ್ ಕೋರ್ಟ್ 50 ಸಾವಿರ ರೂ. ಬಾಂಡ್ ಷರತ್ತು ವಿಧಿಸಿ ಮಧ್ಯಂತರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿ ಪ್ರಕರಣವನ್ನು ನ.12ಕ್ಕೆ ಮುಂದೂಡಿದೆ.

    ಜಾಮೀನು ಅರ್ಜಿ ವಿಚಾರಣೆಯ ಸಂದರ್ಭದಲ್ಲಿ ನಾಗರತ್ನ ಅವರ ಪರ ವಕೀಲರು ಇನ್ನು 2 ದಿನದಲ್ಲಿ ದೀಪಾವಳಿ ಹಬ್ಬ ಇರುವುದರಿಂದ ಮಕ್ಕಳೊಂದಿಗೆ ತಾಯಿ ಇರಲು ಅವಕಾಶ ಮಾಡಿಕೊಡುವಂತೆ ಮನವಿ ಮಾಡಿದ್ದರು. ಇದರ ಹಿನ್ನೆಲೆಯಲ್ಲಿ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರು ನೀಡಿದೆ.

    ನ್ಯಾಯಾಲಯಕ್ಕೆ 2 ದಿನ ರಜೆ ಇದ್ದು ಕೋರ್ಟ್ ಆದೇಶ ಪೊಲೀಸರಿಗೆ ತಲುಪವರೆಗೂ ನಾಗರತ್ನ ಬಂಧನ ಮಾಡಬಹುದಾಗಿದೆ.

    ನಾಗರತ್ನ ನಾಪತ್ತೆ: ಕೀರ್ತಿ ಗೌಡ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ದಾಖಲಾದ ಬಳಿಕ ನಾಗರತ್ನ ಪೊಲೀಸರ ಕೈಗೆ ಸಿಗದೇ ನಾಪತ್ತೆಯಾಗಿದ್ದಾರೆ. ಗಿರಿನಗರ ಪೊಲೀಸರು ನಾಗರತ್ನಗಾಗಿ ತೀವ್ರ ಹುಡುಕಾಟ ನಡೆಸಿದ್ದರೂ ಬಂಧಿಸುವಲ್ಲಿ ವಿಫಲವಾಗಿದ್ದರು.

    ಕೀರ್ತಿಗೌಡ ಅವರು ತಮ್ಮ ಮೇಲೆ ನಡೆದ ಹಲ್ಲೆ ಸಂಬಂಧಿಸಿದಂತೆ ಗಿರಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಹಲ್ಲೆ ಮತ್ತು ಅಂಗಾಂಗ ಊನಗೊಳಿಸಿದ ಆರೋಪದಡಿ ಐಪಿಸಿ ಸೆಕ್ಷನ್ 326ರ ಅಡಿಯಲ್ಲಿ ಎಫ್‍ಐಆರ್ ದಾಖಲು ಮಾಡಲಾಗಿತ್ತು. ಹಲ್ಲೆ ವಿಡಿಯೋ ಲಭ್ಯವಾಗುವುದಕ್ಕೂ ಮೊದಲು ಕೀರ್ತಿ ಅವರು ದೂರು ದಾಖಲಿಸಿದ್ದರು. ಆ ವೇಳೆ ನಾಗರತ್ನ ವಿರುದ್ಧ ಐಪಿಸಿ ಸೆಕ್ಷನ್ 306 ಮತ್ತು 309 ಅಡಿ ಮಾತ್ರ ಪ್ರಕರಣ ದಾಖಲಾಗಿತ್ತು. ಸಿಸಿಟಿವಿ ದೃಶ್ಯಗಳ ಆಧಾರದ ಮೇಲೆ 326 ಸೆಕ್ಷನ್ ಹೆಚ್ಚುವರಿಯಾಗಿ ಹಾಕಲು ಪೊಲೀಸರು ನಿರ್ಧಾರ ಮಾಡಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಇನ್ನೂ ಪತ್ತೆಯಾಗದ ನಾಗರತ್ನ- ಪೊಲೀಸರಿಂದ ತೀವ್ರ ಹುಡುಕಾಟ

    ಇನ್ನೂ ಪತ್ತೆಯಾಗದ ನಾಗರತ್ನ- ಪೊಲೀಸರಿಂದ ತೀವ್ರ ಹುಡುಕಾಟ

    ಬೆಂಗಳೂರು: ದುನಿಯಾ ವಿಜಯ್ ಎರಡನೇ ಪತ್ನಿ ಕೀರ್ತಿ ಗೌಡ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಪತ್ತೆಯಾಗಿದ್ದ ಮೊದಲ ಪತ್ನಿ ನಾಗರತ್ನ ಇನ್ನೂ ಪೊಲೀಸರ ಕೈಗೆ ಸಿಕ್ಕಿಲ್ಲ. ಹೀಗಾಗಿ ಪೊಲೀಸರು ನಾಗರತ್ನಗಾಗಿ ತೀವ್ರ ಹುಡುಕಾಟ ನಡೆಸುತ್ತಿದ್ದಾರೆ.

    ಹಲ್ಲೆ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ ನಾಗರತ್ನ ಪೊಲೀಸರ ಕಣ್ಣು ತಪ್ಪಿಸಿದ್ದು, ಇದೂವರೆಗೂ ಪತ್ತೆಯಾಗಿಲ್ಲ. ಹೀಗಾಗಿ ಗಿರಿನಗರ ಪೊಲೀಸರು ನಾಗರತ್ನಗಾಗಿ ತೀವ್ರ ಹುಡುಕಾಟ ನಡೆಸುತ್ತಿದ್ದಾರೆ. ಹೊಸೂರು ಸುತ್ತಮುತ್ತ ಕಳೆದ ರಾತ್ರಿಯೂ ನಾಗರತ್ನಗಾಗಿ ಗಿರಿನಗರ ಪೊಲೀಸರ ಹುಡುಕಾಡಿದ್ದಾರೆ.

    ಇಂದು ನಾಗರತ್ನ ಪರ ವಕೀಲರು ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸೋ ಸಾಧ್ಯತೆಗಳಿವೆ. ಜಾಮೀನು ರಹಿತ ಕೇಸ್ ಹಾಕಿದ್ದ ಕಾರಣಕ್ಕೆ ಯಾರ ಕೈಗೂ ಸಿಗದೆ ನಾಗರತ್ನ ಎಸ್ಕೇಪ್ ಆಗಿದ್ದಾರೆ. ಕೆಲವು ಮೂಲಗಳ ಪ್ರಕಾರ ನ್ಯಾಯಾಧೀಶರ ಮುಂದೆ ನಾಗರತ್ನ ಸರೆಂಡರ್ ಆಗೋ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ. ಆದ್ರೆ ಸರೆಂಡರ್ ಆಗೋಕು ಮುಂಚೆಯೇ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಲು ಸಿದ್ಧತೆ ನಡೆಸಲಾಗುತ್ತಿದ್ದು, ಜಾಮೀನು ನಿರಾಕರಣೆ ಆದ ಪಕ್ಷದಲ್ಲಿ ನ್ಯಾಯಾಧೀಶರ ಮುಂದೆ ಸರೆಂಡರ್ ಆಗಲು ನಾಗರತ್ನ ಚಿಂತನೆ ನಡೆಸಿದ್ದಾರೆ ಎಂಬುದಾಗಿ ಮೂಲಗಳಿಂದ ಪಬ್ಲಿಕ್ ಟಿವಿಗೆ ಮಾಹಿತಿ ಲಭಿಸಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.youtube.com/watch?v=5y-xIKjMyBI

    https://www.youtube.com/watch?v=lxI7qMTcO28

  • ಇದೂವರೆಗೂ ಪತ್ತೆಯಾಗದ ದುನಿಯಾ ವಿಜಿ ಮೊದಲ ಪತ್ನಿ ನಾಗರತ್ನ

    ಇದೂವರೆಗೂ ಪತ್ತೆಯಾಗದ ದುನಿಯಾ ವಿಜಿ ಮೊದಲ ಪತ್ನಿ ನಾಗರತ್ನ

    ಬೆಂಗಳೂರು: ದುನಿಯಾ ವಿಜಯ್ ಎರಡನೇ ಪತ್ನಿ ಕೀರ್ತಿಗೌಡ ಮೇಲೆ ಹಲ್ಲೆ ಪ್ರಕರಣ ಸಂಬಂಧ ಮೊದಲ ಪತ್ನಿ ನಾಗರತ್ನ ಇಲ್ಲಿವರೆಗೂ ಪತ್ತೆಯಾಗಿಲ್ಲ. ಇವತ್ತಿಗೆ ಎರಡು ದಿನವಾದರೂ ನಾಗರತ್ನ ಪತ್ತೆಯಾಗದೇ ಇರೋದು ಗಿರಿನಗರ ಪೊಲೀಸರಿಗೆ ತಲೆನೋವಾಗಿದೆ.

    ನಾಗರತ್ನ ಎಲ್ಲಿದ್ದಾರೆ ಅಂತಾ ಪತ್ತೆಯಾದರೆ ಯಾವುದೇ ಕ್ಷಣದಲ್ಲೀ ಬಂಧಿಸುವ ಸಾಧ್ಯತೆಗಳಿವೆ. ನಾಗರತ್ನ ಪರ ವಕೀಲರು ಇಂದು ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸುವ ಸಾಧ್ಯತೆಯಿದ್ದು, ಬಳಿಕ ನಾಗರತ್ನ ಪತ್ತೆಯಾಗುವ ಮುನ್ಸೂಚನೆಗಳು ಹೆಚ್ಚಿವೆ.

    ಇತ್ತ ಸೋಮವಾರ ದುನಿಯಾ ವಿಜಯ್ ತಮ್ಮ ಮೊದಲ ಪತ್ನಿ ನಾಗರತ್ನ ಅವರಿಂದ ವಿಚ್ಛೇದನ ಕೋರಿ ಬೆಂಗಳೂರಿನ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಈ ಹಿಂದೆಯೂ ಗಲಾಟೆ ನಡೆದ ವೇಳೆ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ್ದ ವಿಜಯ್, ಬಳಿಕ ಸಂಧಾನ ನಡೆದ ಪರಿಣಾಮ ಪತ್ನಿ ನಾಗರತ್ನ ಅವರಿಗೆ ನೀಡಬೇಕಾದ ಆಸ್ತಿಯನ್ನು ನೀಡಿದ್ದರು. ಅಲ್ಲದೇ ತಮ್ಮ ಮಕ್ಕಳ ಹೆಸರಿನಲ್ಲೂ ಆಸ್ತಿಯನ್ನು ನೀಡಿದ್ದರು.

    ಕಳೆದ ಕೆಲ ದಿನಗಳಿಂದ ನಡೆಯುತ್ತಿದ್ದ ಘಟನೆಗಳಿಂದ ಬೇಸತ್ತಿರುವ ವಿಜಯ್ ಅವರು ಸದ್ಯ ಕಾನೂನಿನ ಮೂಲಕ ಅಧಿಕೃತವಾಗಿ ವಿಚ್ಛೇದನ ಪಡೆಯಲು ಅರ್ಜಿ ಸಲ್ಲಿಸಿದ್ದಾರೆ. ನ್ಯಾಯಾಲಯದಲ್ಲಿ ಪತ್ನಿಯಿಂದ ವಿಚ್ಛೇದನ ಪಡೆಯಲು ಕಾರಣವನ್ನು ನೀಡಬೇಕಾಗುತ್ತದೆ. ಇದಕ್ಕೆ ಪತ್ನಿ ನಾಗರತ್ನ ಅವರ ಕೌರ್ಯ ಕಾರಣ ನೀಡಿದ್ದಾರೆ.

    ಕೀರ್ತಿ ಗೌಡ ಅವರ ಮೇಲಿನ ಹಲ್ಲೆ ವಿಡಿಯೋ ಬಿಡುಗಡೆಯಾಗುತ್ತಿದಂತೆ ನಾಗರತ್ನ ಅವರು ನಾಪತ್ತೆಯಾಗಿದ್ದಾರೆ. ಕೀರ್ತಿ ಅವರ ಹಲ್ಲೆ ವಿರುದ್ಧ ಸದ್ಯ ನಾಗರತ್ನ ಅವರ ಮೇಲೆ ದೂರು ದಾಖಲಾಗಿದ್ದು, ಪೊಲೀಸರು ಹುಡುಕಾಟ ನಡೆಸಿದ್ದಾರೆ. ಇದರ ನಡುವೆ ಕೀರ್ತಿ ತಮ್ಮ ದೂರಿನಲ್ಲಿ ವಿಜಯ್ ಅವರ ಪುತ್ರಿಯರ ಮೇಲಿನ ಹೆಸರನ್ನು ಹಿಂಪಡೆದ ಹಿನ್ನೆಲೆಯಲ್ಲಿ ಪೊಲೀಸರು ಮಕ್ಕಳನ್ನು ಮನೆಗೆ ವಾಪಸ್ ಕಳುಹಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕೀರ್ತಿ ಗೌಡ ಮೇಲೆ ಹಲ್ಲೆ ಪ್ರಕರಣ: ಇನ್ನೂ ಪತ್ತೆಯಾಗಿಲ್ಲ ನಾಗರತ್ನ, ಇಂದು ಶರಣಾಗೋದು ಅನಿವಾರ್ಯ

    ಕೀರ್ತಿ ಗೌಡ ಮೇಲೆ ಹಲ್ಲೆ ಪ್ರಕರಣ: ಇನ್ನೂ ಪತ್ತೆಯಾಗಿಲ್ಲ ನಾಗರತ್ನ, ಇಂದು ಶರಣಾಗೋದು ಅನಿವಾರ್ಯ

    ಬೆಂಗಳೂರು: ಸ್ಯಾಂಡಲ್ ವುಡ್ ನಟ ದುನಿಯಾ ವಿಜಯ್ ಅವರ ಎರಡನೇ ಪತ್ನಿ ಕೀರ್ತಿಗೌಡ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊದಲ ಪತ್ನಿ ನಾಗರತ್ನ ಇಲ್ಲಿವರೆಗೂ ಪತ್ತೆಯಾಗಿಲ್ಲ.

    ಗಿರಿನಗರ ಪೊಲೀಸರು, ನಾಗರತ್ನ ಪತ್ತೆಗಾಗಿ ತೀವ್ರ ಹುಡುಕಾಟ ನಡೆಸಿದ್ದಾರೆ. ಇನ್ನೊಂದು ಮಾಹಿತಿ ಪ್ರಕಾರ ರಾತ್ರಿಯೇ ನಾಗರತ್ನ ಎಲ್ಲಿದ್ದಾರೆ ಅನ್ನೋ ಖಚಿತ ಮಾಹಿತಿ ಇದ್ದು, ಯಾವುದೇ ಕ್ಷಣದಲ್ಲೀ ವಶಕ್ಕೆ ಪಡೆಯುವ ಸಾಧ್ಯತೆ ಕೂಡ ಇದೆ. ಇತ್ತ ನಾಗರತ್ನ ಪರ ವಕೀಲರು ಇಂದು ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಲಿದ್ದು, ಅಲ್ಲಿವರೆಗೆ ನಾಗರತ್ನರನ್ನು ಪೊಲೀಸರಿಗೆ ಸಿಗದಂತೆ ಎಚ್ಚರಿಕೆ ವಹಿಸಿದ್ದಾರೆ ಅನ್ನೋದು ಮತ್ತೊಂದು ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ನಾಪತ್ತೆಯಾಗಿದ್ದು ಯಾಕೆ?:
    ನಾಗರತ್ನ ಅವರು ತನ್ನ ಮೇಲೆ ಕೀರ್ತಿ ಗೌಡ ಹಲ್ಲೆ ಮಾಡಿದ್ದಾಳೆ ಅಂತ ಗಿರಿನಗರ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾನುವಾರ ವಿಜಿಯ ಮನೆಯ ಸಿಸಿಟಿವಿ ದೊರೆತಿದ್ದು, ಮೇಜರ್ ಟ್ವಿಸ್ಟ್ ಸಿಕ್ಕಿತ್ತು.

    ವಿಡಿಯೋದಲ್ಲಿ ದುನಿಯಾ ವಿಜಿ ಅವರು ಜೈಲಿಗೆ ಸೇರಿದ ದಿನದಂದು ಮನೆಯವರೆಲ್ಲರೂ ಸೇರಿ ಕುಳಿತು ಮಾತನಾಡುತ್ತಿದ್ದ ಸಂದರ್ಭದಲ್ಲಿ ನಾಗರತ್ನ ಅವರು ತನ್ನ ಚಪ್ಪಲಿಯೊಂದಿಗೆ ಏಕಾಏಕಿ ಮನೆಗೆ ನುಗ್ಗಿ ಕೀರ್ತಿ ಮೇಲೆ ಹಲ್ಲೆ ನಡೆಸಿದ್ದರು. ಈ ಸಂಬಂಧ ಕೀರ್ತಿ ಗೌಡ ಅವರು ಪೊಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

    ಸಿಸಿಟಿವಿ ಆಧರಿಸಿದ ಪೊಲೀಸರು ನಾಗರತ್ನ ಹಾಗೂ ಅವರ ಮಕ್ಕಳನ್ನು ಬಂಧಿಸಲು ಮನೆಗೆ ತೆರಳಿದ್ದರು. ಆದ್ರೆ ಅದಾಗಲೇ ನಾಗರತ್ನ ಅವರು ಬಾಗಿಲು ಹಾಕಿಕೊಂಡು ಮನೆಯೊಳಗಿದ್ದು, ಪೊಲೀಸರು ಅವರನ್ನು ಹೊರಗೆ ಬರುವಂತೆ ಮಾಡಲು ಹರಸಾಹಸ ಪಟ್ಟರು ವಿಫಲವಾಯಿತು. ಕೊನೆಗೆ ವಕೀಲರ ಮುಖಾಂತರ ಇಬ್ಬರು ಮಕ್ಕಳು ಪೊಲೀಸ್ ಠಾಣೆಗೆ ಹಾಜರಾಗಿದ್ದರು, ಆದ್ರೆ ಮಕ್ಕಳ ಭವಿಷ್ಯ ದೃಷ್ಟಿಯಿಂದ ವಿಜಿ ಅವರ ಮೇಲಿನ ಕೇಸನ್ನು ಹಿಂಪಡೆದಿದ್ದಾರೆ.

    ಸದ್ಯ ನಾಗರತ್ನ ಮೇಲೆ ಹೆಚ್ಚುವರಿಯಾಗಿ ಐಪಿಸಿ ಸೆಕ್ಷನ್ 326 ಸೇರಿಸಲಾಗಿದೆ. 326 ಸೆಕ್ಷನ್ ರಕ್ತಗಾಯವಾಗುವಂತೆ ಹಲ್ಲೆ ನಡೆಸುವುದಾಗಿದೆ. ಇದು ನಾನ್ ಬೇಲಬಲ್ ಸೆಕ್ಷನ್ ಆಗಿದ್ದು, ಅಷ್ಟು ಸುಲಭವಾಗಿ ಬೇಲ್ ಸಿಗೋದಿಲ್ಲ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.youtube.com/watch?v=5y-xIKjMyBI

    https://www.youtube.com/watch?v=_3zrCvoaIR4

  • ನಾಗರತ್ನ ವಿರುದ್ಧ ಕೀರ್ತಿ ಗೌಡ ದೂರು

    ನಾಗರತ್ನ ವಿರುದ್ಧ ಕೀರ್ತಿ ಗೌಡ ದೂರು

    ಬೆಂಗಳೂರು: ತನ್ನ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದುನಿಯಾ ವಿಜಯ್ ಅವರ ಮೊದಲ ಪತ್ನಿ ನಾಗರತ್ನ ವಿರುದ್ಧ ಎರಡನೇ ಪತ್ನಿ ಕೀರ್ತಿ ಗೌಡ ಅವರು ದೂರು ದಾಖಲಿಸಿದ್ದಾರೆ.

    ಸೆ. 23 ರಂದು ತನಗೆ ಹಾಗೂ ತನ್ನ ಮಾವನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ನಾಗರತ್ನ ಹಲ್ಲೆ ಮಾಡಿದ್ದಾರೆ ಅಂತ ಗಿರಿನಗರ ಪೊಲೀಸ್ ಠಾಣೆಯಲ್ಲಿ ಕೀರ್ತಿಗೌಡ ಅವರು 4 ಪುಟಗಳ ದೂರು ಸಲ್ಲಿಸಿದ್ದಾರೆ.

    ದೂರುನಲ್ಲೇನಿದೆ?:
    ಸೆ.23ರಂದು ದುನಿಯಾ ವಿಜಿಯವರು ಹೈಗ್ರೌಂಡ್ ಪೊಲೀಸ್ ಠಾಣೆಯ್ಲಲಿ ಅರೆಸ್ಟ್ ಆಗಿದ್ದರು. ಈ ಹಿನ್ನೆಲೆಯಲ್ಲಿ ಅತ್ತೆ-ಮಾವನನ್ನು ಸಂತೈಸಲೆಂದು ವಿಜಿ ಸ್ನೇಹಿತರಿಬ್ಬರು ಮನೆಗೆ ಬಂದಿದ್ದರು. ಹೀಗಾಗಿ ನಾವೆಲ್ಲ ಮನೆಯಲ್ಲಿ ಕುಳಿತು ಮಾತುಕತೆ ನಡೆಸುತ್ತಿದ್ದೆವು. ಇದೇ ವೇಳೆ ನಾಗರತ್ನ ಅವರು ಕೈಯಲ್ಲಿ ಚಪ್ಪಲಿ ಹಿಡಿದುಕೊಂಡು ಮನೆಗೆ ನುಗ್ಗಿ ಏಕಾಏಕಿ ನನ್ನ ಮೇಲೆ ಹಲ್ಲೆ ಮಾಡಿದ್ದಾರೆ. ಅಲ್ಲದೇ ಬಾಯಿಗೆ ಬಂದಂತೆ ನನಗೆ ಅವಾಚ್ಯ ಶಬ್ದಗಳಿಂದ ಬೈದಿದ್ದಾರೆ.

    ಇಷ್ಟು ಮಾತ್ರವಲ್ಲದೇ ನನ್ನ ತಲೆಕೂದಲನ್ನು ಎಳೆದಾಡಿ, ಮನಬಂದಂತೆ ಹಲ್ಲೆಗೈದು ನಿನ್ನನ್ನು ಈಗಲೇ ಮುಗಿಸಿಬಿಡುತ್ತೇನೆ ಕಿರುಚಿತ್ತಾ ಕೊಲೆ ಮಾಡುವ ಉದ್ದೇಶದಿಂದ ಕರಿಮಣಿಯನ್ನು ಕುತ್ತಿಗೆಗೆ ಬಿಗಿಹಿಡಿದುಕೊಂಡರು. ಇದರಿಂದಾಗಿ ನನಗೆ ಉಸಿರುಗಟ್ಟಿ ಪ್ರಜ್ಞೆ ತಪ್ಪಿದಂತಾಯಿತು. ಕುತ್ತಿಗೆ ಹಾಗೂ ತಲೆಗೆ ಗಾಯಗಳಾಯಿತು. ಈ ವೇಳೆ ನಮ್ಮ ಮನೆಯವರು ಹಾಗೂ ನಾಗರತ್ನ ಮಧ್ಯೆ ಜಟಾಪಟಿಯೇ ನಡೆದು ಹೋಯಿತು. ವಯಸ್ಸಾಗಿರುವ ನನ್ನ ಅತ್ತೆ-ಮಾವನ ಮೇಲೂ ಕೈ ಮಾಡಿದ್ದಾರೆ. ಹೀಗಾಗಿ ಮಾವನಿಗೂ ಸಣ್ಣ-ಪುಟ್ಟ ಗಾಯಗಳಾಗಿವೆ.

    ನಾಗರತ್ನ ಅವರ ಜೊತೆ ತಮ್ಮ ಸಂಪತ್ ಕೂಡ ಬಂದಿದ್ದು, ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಬಳಿಕ ಡ್ರೈವರನ್ನು ಹೆದರಿಸಿ, ಹಲ್ಲೆಗೈದು, ಅವಾಚ್ಯವಾಗಿ ಬೈದು ಬಲವಂತವಾಗಿ ಕಾರ್ ಕಿತ್ತುಕೊಂಡು ಹೋಗಿದ್ದಾರೆ. ಆದ್ರೆ ನನ್ನ ಪತಿ ಜೈಲಿನಲ್ಲಿದ್ದ ಕಾರಣ ಆ ಚಿಂತೆಯಲ್ಲಿದ್ದ ನನಗೆ ಏನು ಮಾಡಬೇಕೆಂದು ತೋಚಲಿಲ್ಲ. ಒಟ್ಟಿನಲ್ಲಿ ನಾಗರತ್ನ ಅವರ ಕೃತ್ಯದಿಂದ ನನಗೂ- ನನ್ನ ಮಾವನಿಗೂ ಗಾಯಗಳಾಗಿದ್ದು, ವೈದ್ಯರ ಬಳಿ ತೋರಿಸಿ, ಸದ್ಯ ವಿಶ್ರಾಂತಿ ಪಡೆಯುತ್ತಿದ್ದೇವೆ. ಘಟನೆಯಿಂದ ಅತ್ತೆಗೂ ದಿಗ್ಭ್ರಮೆಯಾಗಿದ್ದು, ಅವರೂ ಚಿಕಿತ್ಸೆ ಪಡೆದಿರುತ್ತಾರೆ.

    ಈ ಮೊದಲು ಅಂದರೆ ಸೆ.22ರಂದು ನನ್ನ ಗಂಡ ಹಾಗೂ ಸ್ನೇಹತರ ಜೊತೆ ಮಾತನಾಡುತ್ತಿದ್ದ ವೇಳೆ ಮೋನಿಕಾ ಮನೆ ಕಂಪೌಂಡ್ ಗೇಟನ್ನು ಒದ್ದು ಒಳಗೆ ಬಂದು ನನ್ನನ್ನು ಅವಾಚ್ಯವಾಗಿ ನಿಂದಿಸಿದ್ದಾಳೆ. ಅಲ್ಲದೇ ಕಲ್ಲು ತೆಗೆದುಕೊಂಡು ಮನೆ ಬಾಗಿಲಿಗೆ ಹಾನಿ ಮಾಡಿದ್ದಾಳೆ. ಈ ವೇಳೆ ಬಾಗಿಲು ತೆಗೆಯದ ಕಾರಣ ನಿಮಗೆ ತಕ್ಕ ಪಾಠ ಕಲಿಸುತ್ತೇನೆ ಅಂತ ಎಚ್ಚರಿಕೆ ನೀಡಿ ಗಿರಿನಗರ ಪೊಲೀಸ್ ಠಾಣೆಗೆ ತೆರಳಿ ಸುಳ್ಳು ದೂರು ನೀಡಿದ್ದಾಳೆ. ಅಲ್ಲದೇ ನಾಗರತ್ನ ಹಾಗೂ ಮಕ್ಕಳು ಸೇರಿ ವಿಜಯ್ ವಿರುದ್ಧ ಸುಖಾಸುಮ್ಮನೆ ದೂರುಗಳನ್ನು ದಾಖಲಿಸುವ ಮೂಲಕ ಮಾನಸಿಕವಾಗಿ ಹಿಂಸೆ ನೀಡುತ್ತಿದ್ದಾರೆ.

    ಒಟ್ಟಿನಲ್ಲಿ ಘಟನೆಗೆ ಸಂಬಂಧಿಸಿದಂತೆ ನಾಗರತ್ನ ಹಾಗೂ ಆಕೆಯ ತಮ್ಮ ಸಂಪತ್ ವಿರುದ್ಧ ಕ್ರಮ ಕೈಗೊಳ್ಳಬೇಕಾಗಿ ಕೀರ್ತಿ ಗೌಡ ತಮ್ಮ ದೂರಿನಲ್ಲಿ ಮನವಿ ಮಾಡಿಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.youtube.com/watch?v=5y-xIKjMyBI

  • ನಾಗರತ್ನ ದಾದಾಗಿರಿ ಪ್ರಕರಣ- ಕೀರ್ತಿ ಗೌಡ ಪ್ರತಿಕ್ರಿಯೆ

    ನಾಗರತ್ನ ದಾದಾಗಿರಿ ಪ್ರಕರಣ- ಕೀರ್ತಿ ಗೌಡ ಪ್ರತಿಕ್ರಿಯೆ

    ಬೆಂಗಳೂರು: ನಟ ದುನಿಯಾ ವಿಜಯ್ ಮೊದಲ ಪತ್ನಿ ನಾಗರತ್ನ ಅವರು ಎರಡನೇ ಪತ್ನಿ ಕೀರ್ತಿ ಗೌಡ ಅವರ ಮೇಲೆ ಹಲ್ಲೆ ನಡೆಸಿದ್ದು, ಈ ವಿಡಿಯೋ ಇದೀಗ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.  ಘಟನೆ ಸೆ. 23ರಂದು ಭಾನುವಾರ ನಡೆದಿತ್ತು. ಈ ಸಂಬಂಧ ಕೀರ್ತಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ್ದಾರೆ.

    ನಾಗರತ್ನ ಅವಳಿಗೆ ಮನುಷತ್ವ ಇಲ್ಲ. ದುನಿಯಾ ವಿಜಿ ಹಾಗೂ ಅವರ ತಂದೆ-ತಾಯಿಯ ಮಧ್ಯೆ ಹೋಗುವುದಿಲ್ಲ ಎಂದು ನಾಗರತ್ನ ಮ್ಯೂಚಲ್ ಅಗ್ರಿಮೆಂಟ್ ಮಾಡಿಕೊಂಡಿದ್ದಳು. ಆಗ ನಾಗರತ್ನ ತನ್ನ ಪತಿ ದುನಿಯಾ ವಿಜಿ ದೂರ ಹೋಗುತ್ತಾರೆಂದು ನೋಡಿ ಅವರ ಬಳಿಯಿದ್ದ ಹಣವನ್ನೆಲ್ಲಾ ಪಡೆದಳು. ಅವರು ಕಷ್ಟಪಟ್ಟು ದುಡಿದ ಹಣವೆಲ್ಲ ನಾಗರತ್ನ ತೆಗೆದುಕೊಂಡು ಹೋಗಿದ್ದಳು. ವಿಜಿ ಕೂಡ ತಮ್ಮ ಪ್ರೀತಿಗಾಗಿ ಹಣವನ್ನು ಎಲ್ಲ ಬಿಟ್ಟು ಬಂದರು ಎಂದು ಕೀರ್ತಿಗೌಡ ಹೇಳಿದರು.

    ನಾಗರತ್ನ ಓದಿರುವುದು 3ನೇ ತರಗತಿ. ವಿಜಿ ರಿಜಿಸ್ಟ್ರೇಷನ್ ಆಫೀಸ್‍ಗೆ ಹೋಗಿ ಎಲ್ಲವನ್ನೂ ಚೆಕ್ ಮಾಡಿಸಿ, ಸಂಪಾದನೆ ಮಾಡಿದ ಎಲ್ಲವನ್ನೂ ಕೊಟ್ಟಿದ್ದಾರೆ. ಆಕೆ ರಿಜಿಷ್ಟ್ರೇಶನ್ ಆಫೀಸ್‍ಗೆ ಹೋಗಿ ವಿಜಿ ಹಣ ನೀಡಿರುವುದು ಸುಳ್ಳು ಎಂದು ಹೇಳಿದ್ದಾಳೆ. ನಾಗರತ್ನ ಎಂದರೆ ವಿಜಿಗೆ ಆಗುವುದ್ದಿಲ್ಲ. ದುನಿಯಾ ವಿಜಿಗೆ ನಿನ್ನ ಮೇಲೆ ಪ್ರೀತಿ ಇದರೆ ಕರೆಸಿಕೋ. ಯಾಕೆ ಹೀಗೆ ಸಾಯ್ತೀಯಾ? ಕೀರ್ತಿ ಗೌಡ ನನ್ನ ಸಂಸಾರ ಹಾಳು ಮಾಡಿದ್ದಾಳೆ ಎಂದು ಹೇಳಿದ್ದಳು. ಆದರೆ ಆಕೆಯ ಸಂಸಾರನೇ ಚೆನ್ನಾಗಿರಲಿಲ್ಲ. ಅವರ ಮಧ್ಯೆ ಸಾಕಷ್ಟು ವರ್ಷಗಳಿಂದ ಸಮಸ್ಯೆಯಿತ್ತು. ನಾನು ವಿಜಿ ಅವರನ್ನು ಮದುವೆಯಾಗಿ ಮೂರು ತಿಂಗಳಲ್ಲೇ ನಾಗರತ್ನ ತನ್ನ ಅಸಲಿ ಬುದ್ಧಿಯನ್ನು ತೋರಿಸಿದ್ದಳು ಎಂದರು.

    ಯಾರೂ ಏನೇ ಹೇಳಿದ್ದರು ನಾನು ವಿಜಿ ಜೊತೆನೇ ಸಾಯೋವರೆಗೂ ಇರುತ್ತೇನೆ. ದುನಿಯಾ ವಿಜಿ ಅವರ ತಂದೆ-ತಾಯಿ ನನಗೆ ಸಪೋರ್ಟ್ ಮಾಡುತ್ತಾರೆ. ನಾಗರತ್ನ ನನ್ನ ಮೇಲೆ ಹಲ್ಲೆ ನಡೆಸಿದ್ದಾಗ ಅವರು ನನ್ನನ್ನು ಸಹಾಯ ಮಾಡಿದ್ದರು. ವಿಜಿ ಅವರು ತಂದೆ-ತಾಯಿ ಇಷ್ಟು ವರ್ಷ ಸಾಕಷ್ಟು ಹಿಂಸೆ ಅನುಭವಿಸುತ್ತಿದ್ದರು. ನಾಗರತ್ನ ಹಲ್ಲೆ ನಡೆಸಿದ ನಂತರ ನನ್ನ ಕುತ್ತಿಗೆ ಭಾಗಕ್ಕೆ ಗಾಯಗೊಂಡಿತ್ತು. ಅಲ್ಲದೇ ನನ್ನ ಕುತ್ತಿಗೆಯಲ್ಲದ್ದ ಮಾಂಗಲ್ಯ ಸರ ಅರ್ಧ ಮುರಿಯಿತು. ನಾಗರತ್ನ ನನ್ನ ಮೇಲೆ ಹಲ್ಲೆ ನಡೆಸಿದ ನಂತರ ಡ್ರೈವರ್ ಮೇಲೆ ಹಲ್ಲೆ ಮಾಡಿ ಮನೆಯಲ್ಲಿದ್ದ ಕಾರು ತೆಗೆದುಕೊಂಡು ಹೋದಳು. ನಾಗರತ್ನ ನನ್ನ ಮೇಲೆ ಹಲ್ಲೆ ನಡೆಸುವ ಮೊದಲು ಆಕೆಯ ಮಕ್ಕಳು ಮನೆಯಲ್ಲಿದ್ದ ಸಿಸಿಟಿವಿಯನ್ನು ಒಡೆದು ಹಾಕಿದ್ದಾರೆ ಎಂದು ಕೀರ್ತಿಗೌಡ ಪಬ್ಲಿಕ್ ಟಿವಿ ಜೊತೆ ಮಾತನಾಡಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.youtube.com/watch?v=5y-xIKjMyBI

  • ದುನಿಯಾ ವಿಜಿ 2ನೇ ಪತ್ನಿಗೆ ಜೀವ ಬೆದರಿಕೆ!

    ದುನಿಯಾ ವಿಜಿ 2ನೇ ಪತ್ನಿಗೆ ಜೀವ ಬೆದರಿಕೆ!

    -ಪಬ್ಲಿಕ್ ಟಿವಿಗೆ ಕೀರ್ತಿಗೌಡ ಹೇಳಿದ್ದೇನು..?

    ಬೆಂಗಳೂರು: ಕನ್ನಡದ ನಟ ದುನಿಯಾ ವಿಜಯ್ ಜೈಲು ಸೇರಿದಂತೆ 2ನೇ ಪತ್ನಿ ಕೀರ್ತಿಗೌಡ ಮನೆ ಖಾಲಿ ಮಾಡಿದ್ದರು. ಮೊದಲ ಪತ್ನಿ ನಾಗರತ್ನ ಮತ್ತು ಕೀರ್ತಿಗೌಡ ಇಬ್ಬರ ನಡುವಿನ ಜಡೆಜಗಳ ಬಳಿಕ ಒಬ್ಬರ ಮೇಲೊಬ್ಬರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪೊಲೀಸ್ ವಿಚಾರಣೆ ಬಳಿಕ ಕೀರ್ತಿಗೌಡ ತವರು ಮನೆ ಸೇರಿಕೊಂಡಿದ್ದರು. ದಿಢೀರ್ ಅಂತಾ ತಾಯಿ ಮನೆ ಸೇರಿದ್ದು ಯಾಕೆ ಅಂತಾ ಕೀರ್ತಿಗೌಡ ಪಬ್ಲಿಕ್ ಟಿವಿಗೆ ಸ್ಪಷ್ಟನೆ ನೀಡಿದ್ದಾರೆ.

    ಕೀರ್ತಿಗೌಡ ಹೇಳಿದ್ದೇನು..?
    ನಾನು ಎಲ್ಲಿಯೂ ಹೋಗಿಲ್ಲ. ನಾನು ಜೈಲಿನಿಂದ ಹಿಂದಿರುಗಿ ಬರೋವರೆಗೂ ತಾಯಿ ಮನೆಯಲ್ಲಿ ಇರಲು ಹೇಳಿದ್ದಾರೆ. ನನಗೆ ಕತ್ರಿಗುಪ್ಪೆಯ ಮನೆಯಲ್ಲಿರಲು ಸೇಫ್ಟಿ ಇಲ್ಲ. ಪತಿ ದುನಿಯಾ ವಿಜಯ್ ಬಂದ ಮೇಲೆ ನನ್ನ ಮೇಲಿರುವ ಆರೋಪಗಳಿಗೆ ಸ್ಪಷ್ಟನೆಯನ್ನು ಇಬ್ಬರು ನೀಡುತ್ತೇವೆ. ಗಿರಿನಗರ ಪೊಲೀಸ್ ಠಾಣೆಯಲ್ಲಿ ವಿಚಾರಿಸಿದ್ರೆ ಎಲ್ಲ ಮಾಹಿತಿಗಳು ಲಭ್ಯವಾಗುತ್ತವೆ ಎಂದು ಕೀರ್ತಿಗೌಡ ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.


    ಕೀರ್ತಿ ಅವರ ಮಾತು ಕೇಳಿದ ಮೇಲೆ ಜೀವ ಬೆದರಿಕೆ ಏನಾದರೂ ಇದೆಯಾ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ. ಜೈಲಿನಲ್ಲಿರುವ ವಿಜಯ್ ಅವರ ಜಾಮೀನು ಅರ್ಜಿಯನ್ನು ಈ ಹಿಂದೆ ಮ್ಯಾಜಿಸ್ಟ್ರೇಟ್ ಕೋರ್ಟ್ ವಜಾಗೊಳಿಸಿತ್ತು. ಹೀಗಾಗಿ ಜಾಮೀನಿಗಾಗಿ ವಿಜಿ ಸೆಷನ್ಸ್ ಕೋರ್ಟ್‍ಗೆ ಮೇಲ್ಮನವಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಇಂದು ಸೆಷನ್ಸ್ ಕೋರ್ಟ್ ನಲ್ಲಿ ಅರ್ಜಿ ವಿಚಾರಣೆ ನಡೆದಿದ್ದು, ಅಕ್ಟೋಬರ್ 1ಕ್ಕೆ ಕೋರ್ಟ್ ಆದೇಶವನ್ನು ಕಾಯ್ದಿರಿಸಿದೆ.

    ಕೀರ್ತಿ ಗೌಡ ಅವರು ಕಳೆದು ನಾಲ್ಕು ದಿನಗಳಿಂದ ಮನೆಯಲ್ಲಿ ಇಲ್ಲ. ನಾವು ಕಾಲೇಜಿನಿಂದ ಬಂದ ಮೇಲೆ ಕೀರ್ತಿ ಅವರು ಮನೆಯಲ್ಲಿ ಇರಲಿಲ್ಲ. ಮನೆಯಲ್ಲಿ ಚಿನ್ನಾಭರಣ ಏನೂ ಇಲ್ಲ ಎಂದು ದುನಿಯಾ ವಿಜಯ್ ಮಗಳು ಪಬ್ಲಿಕ್ ಟಿವಿಗೆ ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.youtube.com/watch?v=YjxBslBdbNU&t=0s&index=2&list=PL96D6827AB409C8A9