Tag: Keerti

  • ತಮಿಳು ನಟ ಕಾರ್ತಿ ಜೊತೆ ನಟನೆ – ರಶ್ಮಿಕಾ ಸ್ಪಷ್ಟನೆ

    ತಮಿಳು ನಟ ಕಾರ್ತಿ ಜೊತೆ ನಟನೆ – ರಶ್ಮಿಕಾ ಸ್ಪಷ್ಟನೆ

    ಬೆಂಗಳೂರು: ಕೆಲವು ದಿನಗಳಿಂದ ನಟಿ ರಶ್ಮಿಕಾ ಮಂದಣ್ಣ ಅವರು ಕಾಲಿವುಡ್‍ಗೆ ಎಂಟ್ರಿ ಕೊಡುತ್ತಾರೆ ಎಂಬ ಸುದ್ದಿ ಗಾಂಧಿನಗರದಲ್ಲಿ ಹರಿದಾಡುತ್ತಿತ್ತು. ಈಗ ಸ್ವತಃ ರಶ್ಮಿಕಾ ಅವರೇ ಈ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದಾರೆ.

    ಬುಧವಾರ ತಮಿಳು ಸಿನಿಮಾದ ಮುಹೂರ್ತ ಕಾರ್ಯಕ್ರಮ ಮಾಡುವ ಮೂಲಕ ತಮಿಳಿನ ಎಂಟ್ರಿ ಬಗ್ಗೆ ರಶ್ಮಿಕಾ ಖಚಿತಪಡಿಸಿದ್ದಾರೆ. ಈ ಬಗ್ಗೆ ರಶ್ಮಿಕಾ ತಮಿಳು ನಟ ಕಾರ್ತಿ ಅವರ ಜೊತೆ ಸಿನಿಮಾ ಮಾಡುತ್ತಿರುವುದಾಗಿ ಟ್ವೀಟ್ ಮಾಡುವ ಮೂಲಕ ಅಭಿಮಾನಿಗಳಿಗೆ ತಿಳಿಸಿದ್ದಾರೆ. ಜೊತೆಗೆ ಸಿನಿಮಾದ ಮುಹೂರ್ತದ ಫೋಟೊಗಳನ್ನು ರಶ್ಮಿಕಾ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ.

    ರಶ್ಮಿಕಾ “ನನಗೆ ಕನ್ನಡ ಮತ್ತು ತೆಲುಗು ಜನರು ತುಮಬಾ ಬೆಂಬಲ ನೀಡಿದ್ದಾರೆ. ನಂತರ ನೀವು ತಮಿಳಿಗೆ ಯಾವಾಗ ಬರುತ್ತೀರಿ ಎಂದು ಕೇಳುತ್ತಿದ್ದರು. ಈಗ 2019ರಲ್ಲಿ ಕೊನೆಗೂ ನಾನು ಕಾಲಿವುಡ್‍ಗೆ ಎಂಟ್ರಿ ಕೊಡುತ್ತಿದ್ದೇನೆ. ತಮಿಳು ಸಿನಿಮಾ ತಂಡದ ಜೊತೆಗೆ ಸಿನಿಮಾ ಮಾಡುತ್ತಿರುವುದರಿಂದ ನನಗೆ ತುಂಬಾ ಸಂತೋಷವಾಗುತ್ತಿದೆ” ಎಂದು ಟ್ವೀಟ್ ಮಾಡಿದ್ದಾರೆ.

    ಈ ಹಿಂದೆ ರಶ್ಮಿಕಾ ತಮಿಳು ನಟ ವಿಜಯ್ ಜೊತೆ ಅಭಿನಯಿಸುತ್ತಾರೆ ಎಂದು ಹೇಳಲಾಗುತ್ತಿತ್ತು. ಈಗ ಇದಕ್ಕೆ ತೆರೆ ಬಿದ್ದಿದೆ. ರಶ್ಮಿಕಾ ಅವರ ತಮಿಳಿನ ಮೊದಲ ಸಿನಿಮಾಗೆ ಭ್ಯಾಗ್ಯರಾಜ್ ಕಣ್ಣನ್ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಈಗಾಗಲೇ ರಶ್ಮಿಕಾ ತೆಲುಗಿನಲ್ಲಿ ‘ಚಲೋ’ ಮತ್ತು ‘ಗೀತಾ ಗೋವಿಂದಂ’ ಸಿನಿಮಾದ ಮೂಲಕ ಅಭಿಮಾನಗಳ ಮೆಚ್ಚುಗೆಯನ್ನು ಗಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv