Tag: Keerthigowda

  • ನಾಗರತ್ನ ಹಲ್ಲೆ ಪ್ರಕರಣ ದುನಿಯಾ ವಿಜಿ ಸ್ಪಷ್ಟನೆ

    ನಾಗರತ್ನ ಹಲ್ಲೆ ಪ್ರಕರಣ ದುನಿಯಾ ವಿಜಿ ಸ್ಪಷ್ಟನೆ

    ಬೆಂಗಳೂರು: ನಾಗರತ್ನ ಅವರು ತಮ್ಮ ಎರಡನೇ ಪತ್ನಿ ಕೀರ್ತಿಗೌಡ ಅವರ ಮೇಲೆ ಹಲ್ಲೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದುನಿಯಾ ವಿಜಯ್ ಅವರು ಸ್ಪಷ್ಟನೆ ಕೊಟ್ಟಿದ್ದಾರೆ.

    ನಟ ದುನಿಯಾ ವಿಜಯ್ ಅವರು ಪಬ್ಲಿಕ್ ಟಿವಿ ಜೊತೆ ಮಾತನಾಡಿ, ಹೆಣ್ಣು ಮಗು ಅಂತ ಹೇಳಿ ಸಿಂಪತಿ ಗಿಟ್ಟಿಸುತ್ತಿದ್ದರು. ನಾವು ಯಾರು ನೆಮ್ಮದಿಯಾಗಿ ಇರಬಾರದು ಎಂದು ಈ ರೀತಿ ಮಾಡುತ್ತಿದ್ದಾರೆ. ಸದ್ಯ ಕೊನೆಗೆ ಸತ್ಯ ಗೊತ್ತಾಗಿದೆ. ಸುಮ್ಮನೆ ಅವಳಂತೆ ನಾನು ನಾಯಿಯಂತೆ ಮಾತನಾಡಲು ಇಷ್ಟ ಇಲ್ಲ. ಏನಾಗಿದೆ ಅದಕ್ಕೆ ನ್ಯಾಯ ಕೊಡಿಸಿ ಅಷ್ಟೆ. ಒಂದು ಫೇಕ್ ಕಂಪ್ಲೇಂಟ್ ಕೊಟ್ಟರೆ ನಮ್ಮ ಮೇಲೆ ಕೇಸ್ ಹಾಕುತ್ತಾರೆ ಎಂದು ಬೇಸರದಿಂದ ವಿಜಿ ಹೇಳಿದ್ದಾರೆ. ಇದನ್ನೂ ಓದಿ: ನಾಗರತ್ನ ದಾದಾಗಿರಿ ಪ್ರಕರಣ- ನಿಜವಾಗಿ ಅಲ್ಲಿ ನಡೆದಿದ್ದೇನು: ಕೀರ್ತಿಗೌಡ ಮಾತು

    ನನಗೂ ತುಂಬಾ ಕೆಲಸ ಇದೆ. ಆದರೆ ಈ ಸಮಸ್ಯೆಯಿಂದ ಏನು ಕೆಲಸ ಮಾಡುವುದಕ್ಕೆ ಆಗುತ್ತಿಲ್ಲ. ನಾನು ನಾಗರತ್ನ ವಿರುದ್ಧ ದೂರು ಕೊಡುತ್ತೇನೆ. ಈ ಬಗ್ಗೆ ಸಂಪೂರ್ಣವಾಗಿ ಸಂಜೆ ಸುದ್ದಿಗೋಷ್ಠಿ ಮಾಡಿ ಮಾತನಾಡುತ್ತೇನೆ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ. ಇದನ್ನೂ ಓದಿ: ಬ್ಲಾಕ್ ಕೋಬ್ರಾ’ ಮನೆಯಲ್ಲಿ ಪತ್ನಿ ನಾಗರತ್ನ ದಾದಾಗಿರಿ!

    ಇಷ್ಟು ವರ್ಷ ದುನಿಯಾ ವಿಜಿ ಸರಿಯಿಲ್ಲ ಎಂದು ಹೇಳಿಕೊಂಡು ಸಾರ್ವಜನಿಕರಿಂದ ಸಿಂಪತಿ ಪಡೆದುಕೊಂಡಿದ್ದರು. ಜನರ ನಂಬಿಕೆಯಿಂದ ಈ ರೀತಿ ಮಾಡಿದ್ದಾರೆ ಎಂದು ಇದೇ ವೇಳೆ ಕೀರ್ತಿಗೌಡ ಅವರು ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.youtube.com/watch?v=alaw833_NkQ

  • ಜೈಲಿನಿಂದ ಹೊರಬರ್ತಿದ್ದಂತೆ ಅಪ್ಪಿಕೊಂಡು ಸ್ವೀಟ್ಸ್ ತಿಂದ ಜಂಗ್ಲಿ ದಂಪತಿ

    ಜೈಲಿನಿಂದ ಹೊರಬರ್ತಿದ್ದಂತೆ ಅಪ್ಪಿಕೊಂಡು ಸ್ವೀಟ್ಸ್ ತಿಂದ ಜಂಗ್ಲಿ ದಂಪತಿ

    ಬೆಂಗಳೂರು: ಜಿಮ್ ಟ್ರೈನರ್ ಮಾರುತಿ ಗೌಡ ಮೇಲಿನ ಹಲ್ಲೆ ಪ್ರಕರಣದಲ್ಲಿ ಜೈಲಿಗೆ ಹೋಗಿದ್ದ ನಟ ದುನಿಯಾ ವಿಜಿ ರಿಲೀಸ್ ಆಗಿದ್ದಾರೆ. ಪರಪ್ಪನ ಅಗ್ರಹಾರ ಜೈಲಿಂದ ಹೊರಗೆ ಕಾಲಿಟ್ಟ ಕೂಡಲೇ ತನ್ನನ್ನು ಕರೆದುಕೊಂಡು ಹೋಗಲು ಬಂದಿದ್ದ ಎರಡನೇ ಪತ್ನಿ ಕೀರ್ತಿಗೌಡರನ್ನು ಜಂಗ್ಲಿ ಅಪ್ಪಿಕೊಂಡರು.

    ಇದೇ ವೇಳೆ ಜೈಲಿನ ಬಳಿ ನೆರೆದಿದ್ದ ಅಭಿಮಾನಿಗಳು ಜೈಕಾರ ಕೂಗಿದರು. ನಂತರ ಗಾಳಿ ಆಂಜನೇಯ ದೇವಸ್ಥಾನ ಮತ್ತು ದರ್ಗಾಕ್ಕೆ ಪತ್ನಿ ಸಮೇತ ಭೇಟಿ ನೀಡಿದರು. ಬಳಿಕ ಪರಸ್ಪರ ಸ್ವೀಟ್ಸ್ ತಿನ್ನಿಸಿಕೊಂಡು ದಂಪತಿ ಸಂಭ್ರಮಿಸಿದರು.

    ನಂತರ ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಅವರು, ಎಲ್ಲೂ ಕೇಸಿನ ಬಗ್ಗೆ ಮಾತನಾಡಬಾರದು ಎಂದು ನಿಬಂಧನೆಯಿದೆ. ಹೀಗಾಗಿ ನಾನು ಮಾತನಾಡುವುದಿಲ್ಲ. ನನಗೆ ಹಾಗೂ ನನ್ನ ಸ್ನೇಹಿತರಿಗೆ ಜಾಮೀನು ನೀಡಿದಂತಹ ಮ್ಯಾಜಿಸ್ಟ್ರೇಟರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಏಕೆಂದರೆ ಎಷ್ಟೋ ಹಿತಶತ್ರುಗಳು ಜಾಮೀನು ಸಿಗಬಾರದು ಎಂದು ಕಾದುಕುಳಿತಿದ್ದರು. ಆದ್ರೆ ಮ್ಯಾಜಿಸ್ಟ್ರೇಟರ್ ನ್ಯಾಯವನ್ನು ಪರಿಶೀಲಿಸಿ ದೇವರ ಸಮಾನರಾಗಿದ್ದಾರೆ ಎಂದರು.

    ಅಧಿಕಾರಿಗಳ ಕೈವಾಡದ ಬಗ್ಗೆ ಕುರಿತು ನಾನು ಮುಖಾಮುಖಿ ಮಾತನಾಡಲು ರೆಡಿಯಾಗಿದ್ದೇನೆ. ಮಾಧ್ಯಮಗಳು ಅವಕಾಶ ಮಾಡಿಕೊಟ್ಟರೆ ನಾನು ಮಾತನಾಡುತ್ತೇನೆ ಎಂದು ಹೇಳಿದರು.

    ಪತ್ನಿ ವಿರುದ್ಧದ ಹಲವು ಆರೋಪದ ವಿಚಾರದ ಕುರಿತು ಮಾತನಾಡಿದ ಅವರು, ನಾಗರತ್ನ ನಾಲ್ಕು ವರ್ಷದ ಹಿಂದೆ ನನ್ನ ಮರ್ಯಾದೆ ತೆಗೆದರು. ಅವರು ನನ್ನ ತಂದೆ-ತಾಯಿನ ಚೆನ್ನಾಗಿ ನೋಡಿಕೊಂಡಿಲ್ಲ. ನಾಗರತ್ನಗೆ ದೊಡ್ಡ ಮನೆಯನ್ನು ಕೊಟ್ಟು ನಾನು ಬಾಡಿಗೆ ಮನೆಯಲ್ಲಿದ್ದೇನೆ. ಮಗ ಮತ್ತು ಮಗಳಂದಿರ ಹೆಸರಿಗೆ ಆಸ್ತಿ ಬರೆದಿದ್ದೇನೆ. ನಾನು, ನನ್ನ ತಂದೆ-ತಾಯಿ ಸತ್ತರೆ ಮಣ್ಣಾಕೋಕೆ ಬರಬೇಡ ಅಂತ ವಿಲ್ ಮಾಡಿಟ್ಟಿದ್ದೇವೆ. ಆದರೆ ನಾಗರತ್ನ ಬಾಯಿಬಿಟ್ಟರೆ ಸುಳ್ಳೇ ಹೇಳೋದು ಎಂದರು.

    ಜಂಗ್ಲಿ ಜೈಲು ಮುಕ್ತನಾಗುತ್ತಿದ್ದಂತೆಯೇ ರಾತ್ರಿ 11 ಗಂಟೆಗೆ ಎರಡನೇ ಪತ್ನಿ ಕೀರ್ತಿ ಜೊತೆ ಸುದ್ದಿಗೋಷ್ಠಿ ನಡೆಸಿದರು. ನನ್ನ ಮಗನಿಗೆ ಹೊಡೆದರು. ಇದಾದ ಬಳಿಕ ಗಲಾಟೆ ಆಯಿತು. ಆದರೆ ನಾನು ಮಾರುತಿ ಗೌಡಗೆ ಹೊಡೆದೇ ಇಲ್ಲ. ಅಲ್ಲದೇ ಮಾರುತಿ ಗೌಡನನ್ನು ನಾನು ಕಿಡ್ನಾಪ್ ಕೂಡ ಮಾಡಿಲ್ಲ. ನಾನು ಸ್ಟೇಷನ್‍ಗೆ ಹೋದ ಮೇಲೆ ಅವರ ಕಡೆಯ ಹುಡುಗರೇ ನನ್ನ ಮೇಲೆ ಮುಗಿಬಿದ್ದರು ಅಂತ ದುನಿಯಾ ವಿಜಿ ಹೇಳಿದ್ದಾರೆ. ಇದರಲ್ಲಿ ಕಾಣದ ಕೈಗಳ ಕೈವಾಡ ಇದೆ ಅಂತ ನೇರವಾಗಿ ಮಾಧ್ಯಮಗಳ ಮುಂದೆ ಅವರು ಆರೋಪಿಸಿದ್ರು. ಒಂದು ವೇಳೆ ಮಾರುತಿ ಗೌಡ, ಕಿಟ್ಟಿ ಬಂದರೆ ಮಾತನಾಡುತ್ತೇನೆ ಎಂದು ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ದುನಿಯಾ ವಿಜಿ ಎರಡನೇ ಪತ್ನಿ ಕೀರ್ತಿಗೌಡ ನಾಪತ್ತೆ!

    ದುನಿಯಾ ವಿಜಿ ಎರಡನೇ ಪತ್ನಿ ಕೀರ್ತಿಗೌಡ ನಾಪತ್ತೆ!

    ಬೆಂಗಳೂರು: ಜಿಮ್ ಟ್ರೈನರ್ ಮಾರುತಿ ಗೌಡ ಮೇಲೆ ದುನಿಯಾ ವಿಜಿ ಅವರ ಹಲ್ಲೆ ಪ್ರಕರಣ ಸಂಬಂಧಪಟ್ಟಂತೆ ಇದೀಗ ಮತ್ತೊಂದು ಸ್ಫೋಟಕ ಮಾಹಿತಿ ಹೊರಬಿದ್ದಿದೆ.

    ಎರಡನೇ ಪತ್ನಿ ಕೀರ್ತಿ ಗೌಡ ನಾಲ್ಕು ದಿನಗಳಿಂದ ಮನೆಯಲ್ಲಿ ಇಲ್ಲ. ಮನೆಯಲ್ಲಿದ್ದ ಹಣ, 1 ಲಕ್ಷ ಬೆಲೆ ಬಾಳುವ ಒಡವೆ ದೋಚಿ ಪರಾರಿಯಾಗಿದ್ದಾರೆ ಎಂದು ದುನಿಯಾ ವಿಜಯ್ ಕುಟುಂಬದ ಆಪ್ತ ಮೂಲಗಳಿಂದ ಪಬ್ಲಿಕ್ ಟಿವಿಗೆ ಮಾಹಿತಿ ಲಭ್ಯವಾಗಿದೆ.

    ಕೀರ್ತಿ ಕತ್ರಿಗುಪ್ಪಿಯಲ್ಲಿರುವ ಮನೆಗೆ ಬರುತ್ತಿಲ್ಲ. ಅಷ್ಟೇ ಅಲ್ಲದೇ ನಾಗರತ್ನ ಅವರು ಕೂಡ ನನಗೆ ನನ್ನ ಮಕ್ಕಳಿಗೆ ಜೀವ ಬೆದರಿಕೆ ಇದೆ ಎಂದು ಹೇಳುತ್ತಿದ್ದಾರೆ. ವಿಜಯ್ ಅವರ ಮಕ್ಕಳಾದ ಮೋನಿಕ ಹಾಗೂ ಇನ್ನಿಬ್ಬರು, ಕೀರ್ತಿ ಅವರು ನಮಗೆ ಧಮ್ಕಿ ಹಾಕುತ್ತಿದ್ದಾರೆ ಎಂದು ಹೇಳಿದ್ದಾರೆ.

    ಈ ಬಗ್ಗೆ ದುನಿಯಾ ವಿಜಿ ಮಗಳು ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿ, ಕೀರ್ತಿಗೌಡ ಅವರು 4-5 ದಿನಗಳಿಂದ ಮನೆಯಲ್ಲಿ ಇಲ್ಲ. ಅವರು ಯಾವಾಗ ಹೋದರೋ ಗೊತ್ತಿಲ್ಲ. ನಾವು ಕಾಲೇಜಿಗೆ ಹೋಗಿದ್ದೇವು. ಮನೆಗೆ ಬಂದಾಗ ಮನೆಯಲ್ಲಿ ಅವರು ಮತ್ತು ಹಣ. ಒಡವೆ ಏನೂ ಇರಲಿಲ್ಲ. ನಿಮಗೆ ಎಷ್ಟು ವಿಷಯ ಗೊತ್ತಿದೆಯೋ ನನಗೂ ಅಷ್ಟೇ ಗೊತ್ತಿರುವುದು ಎಂದು ಸ್ಪಷ್ಟಪಡಿಸಿದ್ದಾರೆ.

    ಕೀರ್ತಿಗೌಡ ಸೋಮವಾರ ವಿಜಯ್ ಅವರನ್ನು ನೋಡಲು ಹೋಗಿದ್ದರು. ಈ ವೇಳೆ ಮಕ್ಕಳು ಶಾಲೆ-ಕಾಲೇಜಿಗೆ ಹೋಗಿರುತ್ತಾರೆ. ಶಾಲೆ, ಕಾಲೇಜು ಮುಗಿಸಿಕೊಂಡು ಬರುವಷ್ಟರಲ್ಲಿ ಕೀರ್ತೀಗೌಡ ಮನೆಯಲ್ಲಿ ಇರಲಿಲ್ಲ. ಜೀವ ಬೆದರಿಕೆಯಿಂದ ಇರುವುದಕ್ಕೆ ಭಯದಿಂದ ಎಲ್ಲಾದರೂ ಹೋಗಿರಬಹುದು ಅಥವಾ ವಿಜಿ ಅವರು ಇಲ್ಲದ ಕಾರಣ ಇವರ ಬಳಿ ಇರುವುದು ಬೇಡ ಎಂದು ಹೋಗಿರಬಹುದು, ವಿಜಯ್ ಅವರು ಬಂದ ಬಳಿಕ ಬರಬಹುದು ಎಂಬ ಮಾತುಗಳು ಕೇಳಿಬರುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv