Tag: keerthi suresh

  • ಹಸೆಮಣೆ ಏರಲು ಸಜ್ಜಾದ ಮಹಾನಟಿ ಕೀರ್ತಿ ಸುರೇಶ್: ಹುಡುಗ ಯಾರು ಗೊತ್ತಾ?

    ಹಸೆಮಣೆ ಏರಲು ಸಜ್ಜಾದ ಮಹಾನಟಿ ಕೀರ್ತಿ ಸುರೇಶ್: ಹುಡುಗ ಯಾರು ಗೊತ್ತಾ?

    ಸೌತ್ ಅಂಗಳದಲ್ಲಿ ಸದ್ಯ ಸೌಂಡ್ ಮಾಡುತ್ತಿರುವ ಸುದ್ದಿ ಅಂದ್ರೆ ಮಹಾನಟಿ ಕೀರ್ತಿ ಸುರೇಶ್ ಮದುವೆ ವಿಚಾರ. ಉದ್ಯಮಿ ಜೊತೆ ಹಸೆಮಣೆ ಏರೋದಕ್ಕೆ ನಟಿ ಕೀರ್ತಿ ರೆಡಿಯಾಗಿದ್ದಾರೆ.

    ಮಹಾನಟಿ ಕೀರ್ತಿ ಸುರೇಶ್ ಸದ್ಯದಲ್ಲೇ ಮದುವೆಯಾಗಲಿದ್ದಾರಂತೆ. ನಟಿಯ ಮದುವೆಯ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಎಂದಿನಂತೆ ಸೋಷಿಯಲ್ ಮೀಡಿಯಾದಲ್ಲಿ ನಾಯಕಿಯರ ಮದುವೆ ಬಗ್ಗೆ ಆಗಾಗ ಸುದ್ದಿಗಳು ಹರಿದಾಡುತ್ತಿವೆ. ಸೌತ್ ಅಂಗಳದ ಚೆಲುವೆ ಕೀರ್ತಿ ಸುರೇಶ್ ವಿವಾಹವಾಗಲಿದ್ದಾರೆ ಎಂಬ ಸುದ್ದಿಯೊಂದು ಹರಿದಾಡುತ್ತಿದೆ. ಇದನ್ನೂ ಓದಿ:ತಮಿಳುನಾಡು ರಾಜ್ಯಪಾಲರನ್ನು ಭೇಟಿಯಾದ ತಲೈವಾ: ರಾಜಕೀಯ ಎಂಟ್ರಿಯ ಬಗ್ಗೆ ಚರ್ಚೆ

    ಗುರು ಹಿರಿಯರು ನಿಶ್ಚಯಿಸಿದ ವರನೊಂದಿಗೆ ಏಳು ಹೆಜ್ಜೆ ಇಡಲು ಕೀರ್ತಿ ಸುರೇಶ್ ಒಪ್ಪಿಗೆ ನೀಡಿದ್ದಾರಂತೆ. ಸದ್ಯದಲ್ಲೇ ಅಧಿಕೃತ ಘೋಷಣೆ ಹೊರ ಬೀಳಲಿದೆ ಎನ್ನಲಾಗಿದೆ. ಇನ್ನು ಕೀರ್ತಿ ಸುರೇಶ್ ಮದುವೆ ಆಗುತ್ತಿರುವುದು ಉದ್ಯಮಿಯೋರ್ವನಾಗಿದ್ದು, ಸದ್ಯದಲ್ಲೇ ಹಸೆಮಣೆ ಏರೋದು ಪಕ್ಕಾ ಎನ್ನಲಾಗುತ್ತಿದೆ.

    ಸಾಮಾನ್ಯವಾಗಿ ನಟಿಮಣಿಯರು ಲವ್ ಮ್ಯಾರೇಜ್ ಆಗೋದೆ ಹೆಚ್ಚು. ಆದರೆ, ಕೀರ್ತಿ ಸುರೇಶ್ ಮಾತ್ರ ಅರೇಂಜ್ ಮ್ಯಾರೇಜ್‌ಗೆ ಒಪ್ಪಿಗೆ ನೀಡಿದ್ದಾರೆ. ಅವರ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಈ ವಿಚಾರವನ್ನು ಶೇರ್ ಮಾಡುತ್ತಿದ್ದಾರೆ. ಜತೆಗೆ ಈ ಸುದ್ದಿ ಕೇಳಿ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಸೋನು ಗೌಡ ತನ್ನ ಬೆಸ್ಟ್ ಫ್ರೆಂಡ್ ಕೀರ್ತಿ ಸುರೇಶ್‌ಗೆ ಏನಂತ ಕರೀತಾರೆ ಗೊತ್ತಾ?

    ಸೋನು ಗೌಡ ತನ್ನ ಬೆಸ್ಟ್ ಫ್ರೆಂಡ್ ಕೀರ್ತಿ ಸುರೇಶ್‌ಗೆ ಏನಂತ ಕರೀತಾರೆ ಗೊತ್ತಾ?

    ಸ್ಯಾಂಡಲ್‌ವುಡ್ ಬ್ಯೂಟಿ ಸೋನು ಗೌಡ ಗುಳ್ಟು, ಐ ಲವ್ ಯೂ, ಯುವರತ್ನ ಚಿತ್ರದ ಯಶಸ್ಸಿನ ನಂತರ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇದರ ಮಧ್ಯೆ ಸೋನು ಗೌಡ ಕುರಿತು ಇಂಟರೆಸ್ಟಿಂಗ್ ಮಾಹಿತಿಯೊಂದು ಹೊರ ಬಿದ್ದಿದೆ. ನಟಿ ಸೋನುಗೆ ಸೌತ್‌ನ ಮಹಾನಟಿ ಕೀರ್ತಿ ಬೆಸ್ಟ್ ಫ್ರೆಂಡ್ ಆಗಿದ್ದು, ಇದೀಗ ಇಬ್ಬರು ಒಟ್ಟಿಗೆ ಇರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇವರಿಬ್ಬರ ಫ್ರೇಂಡ್‌ಶಿಪ್ ನೋಡಿ ನೆಟ್ಟಿಗರು ಅಚ್ಚರಿ ಪಟ್ಟಿದ್ದಾರೆ.

    ದಕ್ಷಿಣ ಭಾರತದ ಖ್ಯಾತ ನಟಿ ಕೀರ್ತಿ ಸುರೇಶ್ ಇವರೆಗೂ ಒಂದೇ ಒಂದು ಕನ್ನಡದ ಚಿತ್ರದಲ್ಲಿ ನಟಿಸಿಲ್ಲ. ಆದರೆ ಕನ್ನಡದ ನಟಿ ಜತೆ ಒಳ್ಳೆಯ ನಂಟಿದೆ. ನಟಿ ಸೋನು ಜೊತೆ ಒಳ್ಳೆಯ ಬಾಂಧವ್ಯವಿದೆ. ಇವರಿಬ್ಬರು ಸಾಕಷ್ಟು ವರ್ಷಗಳಿಂದ ಪರಿಚಯವಿದ್ದು, ಇದೀಗ ಒಟ್ಟಿಗೆ ಕ್ಯಾಮೆರಾ ಕಣ್ಣಿಗೆ ಪೋಸ್ ಮಾಡಿರುವ ಫೋಟೋ ವೈರಲ್ ಆಗಿದೆ. ಇದನ್ನೂ ಓದಿ: ಅಭಿಮಾನಿ ಜೊತೆ ಬಾಡಿಗಾರ್ಡ್ ರೇಗಾಡಿದಕ್ಕೆ ಗರಂ ಆದ ರಶ್ಮಿಕಾ ಮಂದಣ್ಣ

    ಕೀರ್ತಿ ಸುರೇಶ್ ಮತ್ತು ಸೋನು ಗೌಡ ಒಂದೇ ಗ್ಯಾಂಗ್‌ನ ಸ್ನೇಹಿತರು. ಕೀರ್ತಿ ಮತ್ತು ಸೋನುಗೆ ಪರಿಚಯವಿರುವ ಸ್ನೇಹಿತರಿಂದ ಪರಿಚಯವಾಗಿದ್ದು, ಸಾಕಷ್ಟು ವರ್ಷಗಳಿಂದ ಈ ಸ್ನೇಹ ಸಂಬಂಧ ಸಾಗುತ್ತಿದೆ. ಇದೀಗ ಸ್ನೇಹಿತರ ಮದುವೆ ಪಾರ್ಟಿಯಲ್ಲಿ ಇಬ್ಬರು ಭಾಗಿಯಾಗಿದ್ದು, ಕೀರ್ತಿ ಸುರೇಶ್ ಫೋಟೋಗಳನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಇನ್ನು ಕೀರ್ತಿಯ ಫೋಟೋಗೆ ಕಿಟ್ಟಿ ಎಂದು ಸೋನು ಕಮೆಂಟ್ ಮಾಡಿದ್ದಾರೆ. ನಟಿ ಕೀರ್ತಿ ಅನ್ನು ಸೋನು `ಕಿಟ್ಟಿ’ ಎಂದು ಕರೆಯುತ್ತಾರೆ. ಇನ್ನು ಇವರಿಬ್ಬರ ಫ್ರೆಂಡ್‌ಶಿಪ್ ನೋಡಿ ಫ್ಯಾನ್ಸ್ ದಿಲ್ ಖುಷ್ ಆಗಿದ್ದಾರೆ.

  • ಕನ್ನಡ ಸಿನಿಮಾಗಾಗಿ ಬಣ್ಣ ಹಚ್ಚಲಿದ್ದಾರೆ `ಮಹಾನಟಿ’ ಕೀರ್ತಿ ಸುರೇಶ್

    ಕನ್ನಡ ಸಿನಿಮಾಗಾಗಿ ಬಣ್ಣ ಹಚ್ಚಲಿದ್ದಾರೆ `ಮಹಾನಟಿ’ ಕೀರ್ತಿ ಸುರೇಶ್

    ಟಾಲಿವುಡ್ ಸ್ಟಾರ್ ನಟಿ ಕೀರ್ತಿ ಸುರೇಶ್ ಸ್ಯಾಂಡಲ್‌ವುಡ್‌ಗೆ ಬರುತ್ತಿದ್ದಾರೆ. ಕನ್ನಡ ಸಿನಿಮಾಗಾಗಿ ಹಚ್ಚಲು ಮಹಾನಟಿ ರೆಡಿಯಾಗಿದ್ದಾರೆ. ಯಂಗ್ ರೆಬೆಲ್‌ಗೆ ಜೋಡಿಯಾಗಿ ಮಿಂಚಲು ಕೀರ್ತಿ ಸುರೇಶ್ ಸಜ್ಜಾಗಿದ್ದಾರೆ ಎಂಬ ಮಾತುಗಳು ಗಾಂಧಿನಗರದಿಂದ ಟಾಲಿವುಡ್ ಅಂಗಳದವೆರೆಗೂ ಸುದ್ದಿಯಾಗುತ್ತಿದೆ.

    ಬ್ಯೂಟಿ ಜತೆ ಪ್ರತಿಭೆಯಿರೋ ನಟಿ ಕೀರ್ತಿ ಸುರೇಶ್, ಮಹಾನಟಿ ಸಕ್ಸಸ್ ನಂತರ ಯಶಸ್ಸು ಕಾಣದೇ ಕಂಗಲಾಗಿದ್ದಾರೆ. ಇದೀಗ ವಿಭಿನ್ನ ಪ್ರಯತ್ನದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಡಲು ಕೀರ್ತಿ ಸುರೇಶ್ ಮನಸ್ಸು ಮಾಡಿದ್ದಾರಂತೆ.‌ ಇದನ್ನೂ ಓದಿ: ಮತ್ತೆ ಬೇಬಿ ಬಂಪ್ ಫೋಟೋ ಹಂಚಿಕೊಂಡ ಪ್ರಣಿತಾ ಸುಭಾಷ್

    `ಮದಗಜ’ ಮಹೇಶ್ ನಿರ್ದೇಶನದಲ್ಲಿ ಮೂಡಿ ಬರಲಿರುವ ಅಭಿಷೇಕ್ ಅಂಬರೀಶ್ ನಾಲ್ಕನೇ ಚಿತ್ರಕ್ಕೆ ಕೀರ್ತಿ ಸುರೇಶ್ ಅವರನ್ನು ಕರೆ ತರಲು ತೆರೆಮರೆಯಲ್ಲಿ ಭರ್ಜರಿ ತಯಾರಿ ನಡೆಯುತ್ತಿದೆಯಂತೆ. ಯಂಗ್ ರೆಬೆಲ್‌ಗೆ ಮಹಾನಟಿ ಜೋಡಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಹಾಗಂತ ಸುದ್ದಿ ಚಿತ್ರರಂಗದಲ್ಲಿ ಸದ್ದು ಮಾಡುತ್ತಿದೆ.

     

    View this post on Instagram

     

    A post shared by S Mahesh Kumar (@mahesh_director)

    ಸದ್ಯ ಜ್ಯೂ.ರೆಬೆಲ್ ಅಭಿಷೇಕ್ ಬ್ಯಾಡ್ ಮ್ಯಾನರ್ಸ್ ಮತ್ತು ಕಾಳಿ ಚಿತ್ರದಲ್ಲಿ ಬ್ಯುಸಿಯಿದ್ದು, ಈ ಎರಡು ಪ್ರಾಜೆಕ್ಟ್ ನಂತರವೇ ಮಹೇಶ್ ಕುಮಾರ್ ನಿರ್ದೇಶನದ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹೀಗಿರುವಾಗ ಕೀರ್ತಿ ಸುರೇಶ್ ಕನ್ನಡ ಸಿನಿಮಾದಲ್ಲಿ ಕಾಣಿಸಿಕೊಳ್ಳತ್ತಾರಾ ಎಂದು ಕಾದುನೋಡಬೇಕಿದೆ. ಮಹಾನಟಿಯ ಈ ಗಾಸಿಪ್ ಸುದ್ದಿ ನಿಜವಾಗಲಿ ಅಂತಾ ಅಭಿಮಾನಿಗಳು ಕಾಯ್ತಿದ್ದಾರೆ.

  • ಕಾಲಲ್ಲಿ ಕೀರ್ತಿ ಸುರೇಶ್ ಮೈ ಮುಟ್ಟಿದ ಮಹೇಶ್ ಬಾಬು: ನೆಟ್ಟಿಗರು ಫುಲ್ ಗರಂ

    ಕಾಲಲ್ಲಿ ಕೀರ್ತಿ ಸುರೇಶ್ ಮೈ ಮುಟ್ಟಿದ ಮಹೇಶ್ ಬಾಬು: ನೆಟ್ಟಿಗರು ಫುಲ್ ಗರಂ

    ಬಾಕ್ಸಾಫೀಸ್‌ನಲ್ಲಿ `ಸರ್ಕಾರು ವಾರಿ ಪಾಟ’ ಸಿನಿಮಾ ಉತ್ತಮ ಕಲೆಕ್ಷನ್ ಮಾಡುತ್ತಿದೆ. ಮಹೇಶ್ ಬಾಬು ಮತ್ತು ಕೀರ್ತಿ ಸುರೇಶ್ ಮೋಡಿಗೆ ಸಿನಿಮಾ 200 ಕೋಟಿ ಕಲೆಕ್ಷನ್ ಮಾಡಿದೆ. ಹೀಗಿರುವಾಗ ಚಿತ್ರದ ಕುರಿತು ಹೊಸ ವಿವಾದ ಹುಟ್ಟಿಕೊಂಡಿದೆ. ಈ ಚಿತ್ರತಂಡದ ಮೇಲೆ ನೆಟ್ಟಿಗರು ಫುಲ್ ಗರಂ ಆಗಿದ್ದಾರೆ.

    `ಸರ್ಕಾರು ವಾರಿ ಪಾಟ’ ಉತ್ತಮ ಕಲೆಕ್ಷನ್ ಮಾಡುತ್ತಿರುವ ಬೆನ್ನಲ್ಲೇ ವಿವಾದವೊಂದು ಚಿತ್ರತಂಡದ ಬೆನ್ನು ಹತ್ತಿದೆ. ಚಿತ್ರದ ದೃಶ್ಯವೊಂದರಲ್ಲಿ ಮಹೇಶ್ ಬಾಬು ನಾಯಕಿ ಕೀರ್ತಿ ಸುರೇಶ್ ಅವರನ್ನು ಮುಟ್ಟಿರುವುದಕ್ಕೆ ವಿವಾದ ಸೃಷ್ಟಿಯಾಗಿದೆ. ಚಿತ್ರದ ಸೀನ್‌ವೊಂದರಲ್ಲಿ ನಟ ಮಹೇಶ್ ಬಾಬು ಬಲವಂತದಿಂದ ಕೀರ್ತಿ ಸುರೇಶ್ ತನ್ನ ಪಕ್ಕ ಮಲಗುವಂತೆ ಮಾಡುತ್ತಾನೆ. ನಂತರ ತನ್ನ ಕಾಲು ಆಕೆಯ ಮೇಲೆ ಹಾಕುತ್ತಾನೆ. ಈ ದೃಶ್ಯ ಇದೀಗ ಚರ್ಚೆಗೆ ಕಾರಣವಾಗಿದೆ.

    ಈ ದೃಶ್ಯದ ಕುರಿತು ನಿರ್ದೇಶಕ ಪರಶುರಾಮ್ ಪ್ರತಿಕ್ರಿಯಿಸಿದ್ದಾರೆ, ಆ ದೃಶ್ಯದಲ್ಲಿ ಏನು ತಪ್ಪಿದೆ.ಮಗುವೊಂದು ತನ್ನ ತಾಯಿಯ ಪಕ್ಕ ಮಲಗಲು ಆಸೆಪಟ್ಟಂತೆ ಇಲ್ಲಿ ನಾಯಕ, ನಾಯಕಿಯ ಪಕ್ಕ ಮಲಗಿದ್ದಾರೆ ಎಂದು ಉತ್ತರಿಸಿದ್ದಾರೆ. ನಿರ್ದೇಶಕನ ಉತ್ತರಕ್ಕೆ ನೆಟ್ಟಿಗರು ಇದೀಗ ಕಿಡಿಕಾರಿದ್ದಾರೆ. ಇದನ್ನೂ ಓದಿ: ಬಾಡಿ ಶೇಮಿಂಗ್ ವಿರುದ್ಧ ನಟಿ ಮಯೂರಿ ಮಾತು

    ತಾಯಿಗೂ ನಾಯಕಿಗೂ ಕಂಪೇರ್ ಮಾಡಬೇಡಿ. ಕೆಟ್ಟ ದೃಶ್ಯವನ್ನು ಚಿತ್ರೀಕರಿಸಿರುವುದಲ್ಲದೇ ಅದಕ್ಕೆ ಹೀಗೆ ಪ್ರತಿಕ್ರಿಯಿಸುತ್ತೀರಾ ನಾಯಕಿಯನ್ನು ಬೋಗದ ವಸ್ತಗಳಂತೆ ತೋರಿಸುವುದು ನಿಲ್ಲಿಸಿ ಎಂದು ನಿರ್ದೇಶಕ ಪರಶುರಾಮ್ ಮೇಲೆ ಕಿಡಿಕಾರಿದ್ದಾರೆ. ಈ ದೃಶ್ಯದ ಬಗ್ಗೆ ಅಭಿಮಾನಿಗಳು ಖಂಡಿಸಿದ್ದಾರೆ. ಈ ಎಲ್ಲಾ ವಿದಾದಗಳನ್ನು ಮೀರಿ ಮಹೇಶ್ ಬಾಬು ಇನ್ನಷ್ಟು ಉತ್ತಮ ಕಲೆಕ್ಷನ್ ಮಾಡುತ್ತಾ ಅಂತಾ ಕಾದು ನೋಡಬೇಕಿದೆ.

  • ತಲೈವಾನ 169ನೇ ಚಿತ್ರಕ್ಕೆ ನೆಲ್ಸನ್ ದಿಲೀಪ್ ಕುಮಾರ್ ಆಕ್ಷನ್ ಕಟ್

    ತಲೈವಾನ 169ನೇ ಚಿತ್ರಕ್ಕೆ ನೆಲ್ಸನ್ ದಿಲೀಪ್ ಕುಮಾರ್ ಆಕ್ಷನ್ ಕಟ್

    ಚೆನ್ನೈ: ದಕ್ಷಿಣ ಭಾರತದ ಸೂಪರ್ ಸ್ಟಾರ್ ತಲೈವಾ ರಜನೀಕಾಂತ್ ಅವರ 169ನೇ ಚಿತ್ರಕ್ಕೆ ಯುವ ನಿರ್ದೇಶಕ ನೆಲ್ಸನ್ ದಿಲೀಪ್ ಕುಮಾರ್ ಆಕ್ಷನ್ ಕಟ್ ಹೇಳುತ್ತಿದ್ದಾರೆ.

    ರಜನೀಕಾಂತ್ ಅವರು ಭಾರತೀಯ ಚಿತ್ರರಂಗದ ಅತಿದೊಡ್ಡ ನಟ. ರಜನಿ ಸಿನಿಮಾ ನೋಡಲು ಹಲವು ಜನರು ತಮ್ಮ ಕೆಲಸಗಳಿಗೆ ರಜೆ ಹಾಕುವುದು, ಅವರ ಸಿನಿಮಾಗಾಗಿ ವರ್ಷಗಟ್ಟಲೇ ಕಾಯುವುದು ಸಾಮಾನ್ಯ. ಇವರ ಚಿತ್ರಗಳು ಬಾಕ್ಸಾಫೀಸ್‍ನಲ್ಲಿ ಧೂಳ್ ಎಬ್ಬಿಸುತ್ತೆ. ರಜನಿ ಸಿನಿಮಾ ನಿರ್ದೇಶಿಸಬೇಕು ಎಂಬುದು ಪ್ರತಿಯೊಬ್ಬ ನಿರ್ದೇಶಕರ ಕನಸು. ಈಗ ಆ ಚಾನ್ಸ್ ಯುವ ನಿರ್ದೇಶಕ ನೆಲ್ಸನ್ ದಿಲೀಪ್‍ಕುಮಾರ್ ಅವರಿಗೆ ಸಿಕ್ಕಿದೆ. ಇದನ್ನೂ ಓದಿ: ಉತ್ತರಾಖಂಡದ ಬ್ರಾಂಡ್ ಅಂಬಾಸಿಡರ್ ಆಗಿ ಅಕ್ಷಯ್ ಕುಮಾರ್ ನೇಮಕ

    ಮೂಲಗಳ ಪ್ರಕಾರ, ‘ಅಣ್ಣಾತ್ತೆ’ ಸಿನಿಮಾ ನಂತರ ರಜನಿ ಇನ್ನೊಂದು ಸಿನಿಮಾದಲ್ಲಿ ನಟಿಸುತ್ತಿದ್ದು, ಈ ಸಿನಿಮಾಗೆ ನೆಲ್ಸನ್ ಅವರು ಜೊತೆಯಾಗುತ್ತಿದ್ದಾರೆ. ಚಿತ್ರಕಥೆಯನ್ನು ನೆಲ್ಸನ್ ತುಂಬಾ ಸೊಗಸಾಗಿ ಬರೆದಿದ್ದು, ಕುತೂಹಲ ಮೂಡಿಸುವಂತಿದೆ ಎಂದು ಹೇಳಲಾಗುತ್ತಿದೆ. ಈ ಸಿನಿಮಾದ ಚಿತ್ರೀಕರಣವನ್ನು ಏಪ್ರಿಲ್ ಅಂತ್ಯ ಅಥವಾ ಮೇ ಆರಂಭದಲ್ಲಿ ಪ್ರಾರಂಭಿಸಲು ನಿರ್ಧರಿಸಲಾಗಿದೆ. ಅಲ್ಲದೆ ಈ ಸಿನಿಮಾವನ್ನು ಡಿಸೆಂಬರ್ 2022 ರಿಂದ ಫೆಬ್ರವರಿ 2023 ಬಳಗೆ ರಿಲೀಸ್ ಮಾಡುವ ಯೋಚನೆ ಇದೆ ಎಂಬುದು ಸಹ ತಿಳಿದುಬಂದಿದೆ.

    ಸಿನಿಮಾವನ್ನು ಸನ್ ಪಿಕ್ಚರ್ಸ್ ನಿರ್ಮಿಸುತ್ತಿದ್ದು, ಅನಿರುದ್ಧ್ ಅವರು ಸಂಗೀತ ಮತ್ತು ಹಿನ್ನೆಲೆ ಸಂಗೀತವನ್ನು ಮಾಡುತ್ತಾರೆ ಎನ್ನಲಾಗುತ್ತಿದೆ. ಈ ಸಿನಿಮಾಗೆ ಇನ್ನು ಯಾವುದೇ ಹೆಸರನ್ನು ಇಟ್ಟಿಲ್ಲ. ಅಲ್ಲದೆ ಇದು ರಜನಿಯ 169ನೇ ಸಿನಿಮಾವಾಗಿದ್ದು, ಚಿತ್ರರಂಡಕ್ಕೆ ಹೆಚ್ಚು ಜವಾಬ್ದಾರಿ ಇದೆ. ಈ ಸಿನಿಮಾದ ಚಿತ್ರೀಕರಣವು ಬೇಸಿಗೆಯಲ್ಲಿ ಆರಂಭವಾಗಲಿದೆ ಎಂದು ಮೂಲಗಳಿಂದ ತಿಳಿದುಬರುತ್ತಿದೆ. ಆದರೆ ಈ ಕುರಿತು ಚಿತ್ರತಂಡ ಅಧಿಕೃತವಾಗಿ ಮಾಹಿತಿ ನೀಡಬೇಕು. ಇದನ್ನೂ ಓದಿ: ಪ್ರೀತಂ ಜೊತೆ ಇಷ್ಟು ವರ್ಷ ಏಕೆ ಕೆಲಸ ಮಾಡಿಲ್ಲ – ಮೌನಮುರಿದ ಸೋನು ನಿಗಮ್

    ಈ ವರ್ಷ ರಜನಿ ನಟನೆಯ ‘ಅಣ್ಣಾತ್ತೆ’ ಸಿನಿಮಾ ರಿಲೀಸ್ ಆಗಿದ್ದು, ಅಭಿಮಾನಿಗಳನ್ನು ರಂಜಿಸಿತ್ತು. ಈ ಸಿನಿಮಾವನ್ನು ಶಿವ ನಿರ್ದೇಶನ ಮಾಡಿದ್ದು, ಕೌಟುಂಬಿಕ ಸಿನಿಮಾವಾಗಿತ್ತು. ಸಿನಿಮಾದಲ್ಲಿ ತಂಗಿ ಸೆಂಟಿಮೆಂಟ್ ಇದ್ದು, ರಜನಿ ತಂಗಿ ಪಾತ್ರದಲ್ಲಿ ರಾಷ್ಟ್ರ ಪ್ರಶಸ್ತಿ ವಿಜೇತೆ ಕೀರ್ತಿ ಸುರೇಶ್ ನಟಿಸಿ ಸೈ ಎನಿಸಿಕೊಂಡಿದ್ದರು.

  • ರಾಷ್ಟ್ರಪ್ರಶಸ್ತಿ ವಿಜೇತೆ ಕೀರ್ತಿ ಸುರೇಶ್‍ಗೆ ಕೋವಿಡ್ ಪಾಸಿಟಿವ್

    ರಾಷ್ಟ್ರಪ್ರಶಸ್ತಿ ವಿಜೇತೆ ಕೀರ್ತಿ ಸುರೇಶ್‍ಗೆ ಕೋವಿಡ್ ಪಾಸಿಟಿವ್

    ಚೆನ್ನೈ: ದಕ್ಷಿಣ ಭಾರತದ ಮಹಾನಟಿ, ರಾಷ್ಟ್ರಪ್ರಶಸ್ತಿ ವಿಜೇತೆ ಕೀರ್ತಿ ಸುರೇಶ್ ಅವರಿಗೆ ಕೋವಿಡ್-19 ಪಾಸಿಟಿವ್ ದೃಢಪಟ್ಟಿದೆ.

    ಕೀರ್ತಿ ಅವರು ಈ ಕುರಿತು ಸೋಶಿಯಲ್ ಮೀಡಿಯಾದಲ್ಲಿ ತಿಳಿಸಿದ್ದು, ಎಲ್ಲರಿಗೂ ನಮಸ್ಕಾರ. ನಾನು ಕೋವಿಡ್-19 ಪಾಸಿಟಿವ್ ದೃಢವಾಗಿದೆ. ನಾನು ಎಲ್ಲ ರೀತಿಯ ಅಗತ್ಯ ಮುನ್ನೆಚ್ಚರಿಕೆಗಳು ಮತ್ತು ಸುರಕ್ಷತಾ ಕ್ರಮಗಳನ್ನು ತೆಗೆದುಕೊಂಡರೂ ಸೋಂಕಿನ ಸೌಮ್ಯ ರೋಗಲಕ್ಷಣಗಳು ನನಗೆ ಕಾಣಿಸಿಕೊಂಡಿತು. ಇತ್ತೀಚೆಗೆ ಈ ವೈರಸ್ ಹರಡುತ್ತಿರುವುದನ್ನು ನೋಡಿದರೆ ಆತಂಕವಾಗುತ್ತಿದೆ. ದಯವಿಟ್ಟು ಎಲ್ಲರೂ ಕೋವಿಡ್ ನ ಎಲ್ಲ ಸುರಕ್ಷತಾ ನಿಯಮಗಳನ್ನು ಅನುಸರಿಸಿ ಮತ್ತು ಸುರಕ್ಷಿತವಾಗಿರಿ ಎಂದು ಮನವಿ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಪ್ರಿನ್ಸ್ ಮಹೇಶ್ ಬಾಬುಗೆ ಕೊರೊನಾ ಪಾಸಿಟಿವ್

    ಇತ್ತೀಚೆಗೆ ನನ್ನೊಂದಿಗೆ ಸಂಪರ್ಕಕ್ಕೆ ಬಂದವರು ದಯವಿಟ್ಟು ಪರೀಕ್ಷಿಸಿಕೊಳ್ಳಿ. ನೀವು ಇನ್ನೂ ಲಸಿಕೆ ಹಾಕಿಸಿಕೊಳ್ಳದಿದ್ದರೆ, ಎಲ್ಲರೂ ಲಸಿಕೆಯನ್ನು ಹಾಕಿಸಿಕೊಳ್ಳಿ. ಲಸಿಕೆಯಿಂದ ಸೋಂಕಿನ ತೀವ್ರತೆ ಕಮ್ಮಿ ಇರುತ್ತೆ. ಬೇಗ ಗುಣಮುಖರಾಗಬಹುದು. ನಿಮ್ಮ ಆರೋಗ್ಯಕ್ಕಾಗಿ ದಯವಿಟ್ಟು ಲಸಿಕೆಗಳನ್ನು ಬೇಗ ತೆಗೆದುಕೊಳ್ಳಿ. ನೀವು ಮತ್ತು ನಿಮ್ಮ ಪ್ರೀತಿಪಾತ್ರರು. ನಾನು ಶೀಘ್ರವಾಗಿ ಚೇತರಿಸಿಕೊಂಡು ಮತ್ತೆ ಕೆಲಸಕ್ಕೆ ಮರಳುತ್ತೇನೆ ಎಂದು ಬರೆದು ಪೋಸ್ಟ್ ಮಾಡಿದ್ದಾರೆ.

    ಕೀರ್ತಿ ತೆಲುಗು ಚಿತ್ರ ‘ಮಹಾನಟಿ’ ಅಭಿನಯಕ್ಕೆ ರಾಷ್ಟ್ರೀಯ ಪ್ರಶಸ್ತಿಯನ್ನು ಗೆದ್ದಿದ್ದು, ಇತ್ತೀಚೆಗೆ ಓಟಿಟಿಯಲ್ಲಿ ಬಿಡುಗಡೆಯಾದ ಥ್ರಿಲ್ಲರ್ ಮೂವೀ ‘ಪೆಂಗ್ವಿನ್’ ಸಿನಿಮಾದ ನಟನೆಗೆ ಎಲ್ಲರಿಂದ ಮೆಚ್ಚುಗೆ ವ್ಯಕ್ತವಾಗಿತ್ತು.

    ಕೀರ್ತಿ ಬೆಳ್ಳಿತೆರೆ ಮೇಲೆ ಕೊನೆಯಾದಾಗಿ ರಜನಿಕಾಂತ್ ನಟಿಸಿದ ‘ಅಣ್ಣಾತ್ತೆ’ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಮೋಹನ್ ಲಾಲ್ ಅಭಿನಯದ ಮಲಯಾಳಂ ಚಿತ್ರ ‘ಮರಕ್ಕರ್ ಚಿತ್ರದಲ್ಲಿಯೂ ಈ ನಟಿ ಅಭಿನಯಿಸಿ ಸೈ ಎನಿಸಿಕೊಂಡಿದ್ದರು. ಇದನ್ನೂ ಓದಿ: ಬಿಹಾರ ಸಿಎಂ ನಿತೀಶ್ ಕುಮಾರ್‌ಗೆ ಕೊರೊನಾ ಪಾಸಿಟಿವ್

    ನಿರ್ಮಾಪಕ ಜಿ.ಸುರೇಶ್ ಕುಮಾರ್ ಮತ್ತು ನಟಿ ಮೇನಕಾ ಅವರ ಪುತ್ರಿ ಕೀರ್ತಿ ಹಲವಾರು ಚಿತ್ರಗಳಲ್ಲಿ ಬಾಲ ಕಲಾವಿದೆಯಾಗಿ ಕಾಣಿಸಿಕೊಂಡಿದ್ದಾರೆ. 2013 ರ ಮಲಯಾಳಂ ‘ಗೀತಾಂಜಲಿ’ ಸಿನಿಮಾದ ಮೂಲಕ ಸಿನಿ ಲೋಕಕ್ಕೆ ಪೂರ್ಣಪ್ರಮಾಣದ ನಟಿಯಾಗಿ ಪಾದರ್ಪಣೆ ಮಾಡಿದರು. ನಂತರ ರಿಂಗ್ ಮಾಸ್ಟರ್, ಮನ್ಮಧುಡು 2, ಸಂದಕೋಜಿ 2, ರಜಿನಿ ಮುರುಗನ್, ರೆಮೋ ಮತ್ತು ನೇನು ಸೈಲಜಾ ಮುಂತಾದ ಚಿತ್ರಗಳಲ್ಲಿ ನಟಿಸಿದರು.

  • ಪ್ರಿನ್ಸ್ ಮಹೇಶ್ ಬಾಬುಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ ರಾಜಮೌಳಿ

    ಪ್ರಿನ್ಸ್ ಮಹೇಶ್ ಬಾಬುಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ ರಾಜಮೌಳಿ

    ಚೆನ್ನೈ: ಎಸ್.ಎಸ್ ರಾಜಮೌಳಿ ಆಕ್ಷನ್ ಕಟ್ ಹೇಳುತ್ತಿರುವ ಸಿನಿಮಾದಲ್ಲಿ ಪ್ರಿನ್ಸ್ ಮಹೇಶ್ ಬಾಬು ಅಭಿನಯಿಸುತ್ತಿದ್ದಾರೆ ಎಂಬ ಸುದ್ದಿ ಟಾಲಿವುಡ್ ಅಂಗಳದಲ್ಲಿ ಕೇಳಿಬರುತ್ತಿದೆ.

    ಸ್ಟಾರ್ ನಿರ್ದೇಶಕ ಎಂದೇ ಖ್ಯಾತಿ ಪಡೆದಿರುವ ರಾಜಮೌಳಿ ಅವರು ಈಗ ಟಾಲಿವುಡ್ ಪ್ರಿನ್ಸ್ ಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಕುರಿತು ಖುದ್ದು ಮಹೇಶ್ ಬಾಬು ಅವರೇ ಮಾಧ್ಯಮಗಳೊಂದಿಗೆ ಮಾತನಾಡಿದ್ದು, ತಮ್ಮ ಮುಂಬರುವ ಸಿನಿಮಾವನ್ನು ರಾಜಮೌಳಿ ಅವರು ನಿರ್ದೇಶನ ಮಾಡುತ್ತಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ಈ ವೇಳೆ ತಮ್ಮ ಸಿನಿಮಾದ ಜರ್ನಿ ಕುರಿತು ಮಾತನಾಡಿದ ಅವರು, ನೀವು ನಿಮಗೆ ಎಲ್ಲ ಗೊತ್ತು ಎಂದು ಯಾವಾಗ ತಿಳಿದುಕೊಳ್ಳುತ್ತೀರೋ, ಆವಾಗ ನೀವು ಹೊಸ ವಿಷಯ ಕಲಿಯುವುದನ್ನು ನಿಲ್ಲಿಸುತ್ತಿರಾ ಎಂದು ಹೇಳಿದರು. ಇದನ್ನೂ ಓದಿ: ಬಿಡುಗಡೆಯಾದ ನಾಲ್ಕೇ ದಿನದಲ್ಲಿ ಕೋಟಿಗೊಬ್ಬ3 ಭರ್ಜರಿ ಕಲೆಕ್ಷನ್‌

    ನಾನು ದಕ್ಷಣ ಭಾರತದ ನಟನಾಗಿ ಎಲ್ಲ ಭಾಷೆಯಲ್ಲಿಯೂ ನಟಿಸಲು ಇಷ್ಟ ಪಡುತ್ತೇನೆ. ಅದನ್ನು ನಾನು ಎಂದು ಬದಲಾಯಿಸಿಲ್ಲ ಎಂದು ಉತ್ತರಿಸಿದರು. ಸಿನಿಮಾ ಸೂಕ್ಷ್ಮತೆ, ಸ್ಥಳೀಯರು ಹೇಗೆ ಕೇಳುತ್ತಾರೆ ಅದೇ ರೀತಿ ಸಿನಿಮಾವನ್ನು ನಿರೂಪಿಸಲಾಗುತ್ತೆ. ಇಲ್ಲಿ ತುಂಬಾ ಮುಖ್ಯವಾದ ವಿಷಯವೆಂದರೆ ನಾವು ಸಿನಿಮಾದ ಮೂಲಕ ವಿವಿಧ ಸಂಸ್ಕøತಿಗಳನ್ನು ನೀಡಬೇಕು ಎಂದು ತಿಳಿಸಿದರು.

    ಬಾಲಿವುಡ್ ಎಂಟ್ರಿ ಕುರಿತು ಮಾತನಾಡಿದ ಅವರು, ನಾನು ಬಾಲಿವುಡ್ ಎಂಟ್ರಿ ಬಗ್ಗೆ ಸಮಯಕ್ಕಾಗಿ ಕಾಯುತ್ತಿದ್ದೆ. ಈಗ ಕಾಲ ಬಂದಿದೆ. ಅದಕ್ಕೆ ನನ್ನ ಮುಂಬರುವ ಸಿನಿಮಾವನ್ನು ಬಾಹುಬಾಲಿ ಖ್ಯಾತಿಯ ರಾಜಮೌಳಿ ಅವರು ನಿರ್ದೇಶನ ಮಾಡುತ್ತಿದ್ದು, ಈ ಸಿನಿಮಾ ಎಲ್ಲ ಭಾಷೆಗಳಲ್ಲಿಯೂ ಬಿಡುಗಡೆಯಾಗಲಿದೆ ಎಂದು ತಿಳಿಸಿದರು. ಈ ವಿಷಯ ತಿಳಿದ ಇವರ ಅಭಿಮಾನಿಗಳು ಫುಲ್ ಖುಷಿಯಾಗಿದ್ದು, ಈ ಬೃಹತ್ ಸಿನಿಮಾಗಾಗಿ ಕುತೂಹಲವನ್ನು ವ್ಯಕ್ತಪಡಿಸಿದ್ದಾರೆ.

    ಈ ಸಿನಿಮಾ ಕುರಿತು ಇನ್ನೂ ಮಹೇಶ್ ಬಾಬು ಏನೂ ಹೇಳಿಲ್ಲ. ಅದು ಅಲ್ಲದೇ ಈ ಕುರಿತು ಯಾವ ರೀತಿಯ ಮಾಹಿತಿಯನ್ನು ಅಧಿಕೃತವಾಗಿ ಚಿತ್ರತಂಡ ತಿಳಿಸಿಲ್ಲದ ಕಾರಣ ಮುಂದೆ ಈ ಸ್ಟಾರ್ ಜೋಡಿಗಳ ಸಿನಿಮಾ ಹೇಗೆ ಇರಬಹುದೆಂದು ಎಲ್ಲರೂ ಕುತೂಹಲದಿಂದ ಕಾಯುತ್ತಿದ್ದಾರೆ. ಇದನ್ನೂ ಓದಿ: ನಟ ವಿಕ್ಕಿ ಕೌಶಲ್ ಬೆನ್ನಿನಲ್ಲಿ ಗಾಯ- ನಿಜವಾಗಿ ಆಗಿದ್ದೇನು?

    ಪ್ರಸ್ತುತ ಮಹೇಶ್ ಬಾಬು ಮತ್ತು ಕೀರ್ತಿ ಸುರೇಶ್ ಅಭಿನಯದ ‘ಸರ್ಕರು ವಾರಿ ಪಾಠ’ ಸಿನಿಮಾ ರಿಲೀಸ್ ಗೆ ಸಿದ್ಧವಾಗಿದ್ದು, 2022ರ ಸಂಕ್ರಾಂತಿ ಸಮಯದಲ್ಲಿ ರಿಲೀಸ್ ಮಾಡುವ ಸಾಧ್ಯತೆ ಇದೆ ಎಂದು ಚಿತ್ರತಂಡ ತಿಳಿಸಿದೆ.

  • ಉದ್ಯಮಿ ಜೊತೆ ಮದ್ವೆ – ಸ್ಪಷ್ಟನೆ ಕೊಟ್ಟ ಕೀರ್ತಿ ಸುರೇಶ್

    ಉದ್ಯಮಿ ಜೊತೆ ಮದ್ವೆ – ಸ್ಪಷ್ಟನೆ ಕೊಟ್ಟ ಕೀರ್ತಿ ಸುರೇಶ್

    ಹೈದರಾಬಾದ್: ತೆಲುಗು, ತಮಿಳು ಚಿತ್ರರಂಗದ ಖ್ಯಾತ ನಟಿ ಕೀರ್ತಿ ಸುರೇಶ್ ಸದ್ಯದಲ್ಲೇ ಖ್ಯಾತ ಉದ್ಯಮಿಯೊಬ್ಬರನ್ನು ವರಿಸಲಿದ್ದಾರೆ ಎಂಬ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿತ್ತು. ಇದೀಗ ತಮ್ಮ ಮದುವೆ ಸುದ್ದಿಯ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದಾರೆ.

    ನಟಿ ಕೀರ್ತಿ ಸುರೇಶ್ ಅವರು ತಮ್ಮ ಮದುವೆ ವದಂತಿಯ ಬಗ್ಗೆ ತಿಳಿದು ಗರಂ ಆಗಿದ್ದು, ಸಂದರ್ಶನವೊಂದರಲ್ಲಿ ತಮ್ಮ ಮದುವೆ ಬಗ್ಗೆ ಹರಿದಾಡುತ್ತಿರುವ ಸುದ್ದಿಯನ್ನು ತಳ್ಳಿ ಹಾಕಿದ್ದಾರೆ. “ನನ್ನ ಮದುವೆ ಸುದ್ದಿ ಕೇಳಿ ನನಗೆ ಅಚ್ಚರಿಯಾಗಿದೆ. ಸದ್ಯಕ್ಕೆ ನನಗೆ ವಿವಾಹವಾಗುವ ಯೋಚನೆಯೇ ಇಲ್ಲ. ಅಲ್ಲದೇ ಶೀಫ್ರದಲ್ಲಿ ನಾನು ಮದುವೆಯಾಗುವುದಿಲ್ಲ. ಆದರೂ ಮದುವೆ ಸುದ್ದಿ ಹರಿದಾಡಲು ಹೇಗೆ ಪ್ರಾರಂಭವಾಯಿತು ಎಂಬುದು ನನಗೆ ಗೊತ್ತಿಲ್ಲ” ಎಂದು ಹೇಳಿದ್ದಾರೆ.

    “ದೇಶದಲ್ಲಿ ಚರ್ಚಿಸಲು ಅನೇಕ ವಿಚಾರಗಳಿವೆ. ಸುಮ್ಮನೆ ಇಂತಹ ಆಧಾರ ರಹಿತ ವದಂತಿಗಳನ್ನು ಹರಡುವುದಕ್ಕಿಂತ ದೇಶದಲ್ಲಿ ಹರಡುತ್ತಿರುವ ಕೊರೊನಾ ರೋಗದ ಬಗ್ಗೆ ಹೋರಾಡಿ” ಎಂದು ಗರಂ ಆಗಿ ಉತ್ತರಿಸಿದ್ದಾರೆ.

    ಕೀರ್ತಿ ಅವರು ಅರೆಂಜ್ ಮ್ಯಾರೇಜ್ ಆಗಲು ನಿರ್ಧರಿಸಿದ್ದಾರೆ. ಅಲ್ಲದೇ ತಮ್ಮ ಪೋಷಕರು ಹುಡುಕುವ ಹುಡುಗನನ್ನೇ ಮದುವೆ ಆಗಲು ಕೀರ್ತಿ ಒಪ್ಪಿದ್ದರು. ಹೀಗಾಗಿ ಅವರ ತಂದೆ ಸುರೇಶ್ ಕುಮಾರ್ ಮಗಳಿಗೆ ಹುಡುಗನನ್ನು ಹುಡುಕಿದ್ದಾರೆ ಎನ್ನಲಾಗಿತ್ತು. ಸುರೇಶ್ ಕುಮಾರ್ ಅವರು ರಾಜಕೀಯ ವ್ಯಕ್ತಿಗಳ ಜೊತೆ ಉತ್ತಮ ಭಾಂದವ್ಯ ಹೊಂದಿದ್ದಾರೆ. ಆದ್ದರಿಂದ ರಾಜಕೀಯ ಹಿನ್ನೆಲೆ ಇರುವ ಪ್ರಭಾವಿ ಉದ್ಯಮಿಯ ಜೊತೆ ಮಗಳ ಮದುವೆ ಮಾಡಲು ತೀರ್ಮಾನಿಸಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿತ್ತು.

    ತೆಲುಗು, ತಮಿಳು ಚಿತ್ರರಂಗದಲ್ಲಿ ಬಹುಬೇಡಿಕೆಯ ನಟಿಯಾಗಿರುವ ಕೀರ್ತಿ ಸುರೇಶ್ ಸಾಕಷ್ಟು ಸೂಪರ್ ಹಿಟ್ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಅವರ ‘ಮಹಾನಟಿ’ ಸಿನಿಮಾಗೆ ರಾಷ್ಟ್ರಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳು ಲಭಿಸಿದೆ. ಈ ಚಿತ್ರದಲ್ಲಿ ಖ್ಯಾತ ಮಲಯಾಳಂ ನಟ ದುಲ್ಕರ್ ಸಲ್ಮಾನ್ ಅವರು ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಸದ್ಯ ಕೀರ್ತಿ ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ‘ಅನ್ನಾತೆ’ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

  • ಹಸೆಮಣೆ ಏರಲು ಸಜ್ಜಾದ ‘ಮಹಾನಟಿ’ ಚೆಲುವೆ ಕೀರ್ತಿ ಸುರೇಶ್

    ಹಸೆಮಣೆ ಏರಲು ಸಜ್ಜಾದ ‘ಮಹಾನಟಿ’ ಚೆಲುವೆ ಕೀರ್ತಿ ಸುರೇಶ್

    ಹೈದರಾಬಾದ್: ತೆಲುಗು, ತಮಿಳು ಚಿತ್ರರಂಗದ ಖ್ಯಾತ ನಟಿ ಕೀರ್ತಿ ಸುರೇಶ್ ಅದ್ಭುತ ಅಭಿನಯ, ತಮ್ಮ ಸೌಂದರ್ಯದ ಮೂಲಕವೇ ಅಭಿಮಾನಿಗಳ ಮನ ಕದ್ದವರು. ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿ ಇರುವ ನಟಿ ಸದ್ಯದಲ್ಲೇ ಮದುವೆ ಆಗಲು ಸಿದ್ಧರಾಗಿದ್ದಾರೆ.

    ಸೂಪರ್ ಹಿಟ್ ಸಿನಿಮಾಗಳ ಯಶಸ್ಸು, ಸಾಲು ಸಾಲು ಸಿನಿಮಾಗಳ ಆಫರ್ ಗಳು ಕೀರ್ತಿ ಅವರ ಕೈಯಲ್ಲಿದೆ. ಸಿನಿಮಾ ಬ್ಯುಸಿ ಶೆಡ್ಯೂಲ್ ನಡುವೆ ಇಷ್ಟು ಬೇಗ ಮದುವೆ ಆಗಲು ಕೀರ್ತಿ ನಿರ್ಧರಿಸಿದರಾ ಎಂದು ಅಭಿಮಾನಿಗಳಲ್ಲಿ ಪ್ರಶ್ನೆ ಹುಟ್ಟಿರೋದು ನಿಜ. ಆದರೆ ಪೋಷಕರು ಮದುವೆ ಮಾಡಿಸಲು ನಿರ್ಧರಿಸಿರುವುದರಿಂದ ಕೀರ್ತಿ ವಿವಾಹ ಆಗಲು ಒಪ್ಪಿದ್ದಾರೆ ಎನ್ನಲಾಗಿದೆ.

    ‘ಮಹಾನಟಿ’ ಸುಂದರಿಯ ಮದುವೆ ವಿಚಾರ ತಿಳಿಯುತ್ತಿದ್ದಂತೆ ಅಭಿಮಾನಿಗಳಲ್ಲಿ ಹಲವು ಪ್ರಶ್ನೆಗಳು ಹುಟ್ಟುಕೊಂಡಿದೆ. ಕೀರ್ತಿ ಅವರು ಮದುವೆ ಆಗುತ್ತಿರೋದು ಯಾರು ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಮನೆಮಾಡಿದೆ. ಸದ್ಯ ಲಭ್ಯವಿರುವ ಮಾಹಿತಿ ಪ್ರಕಾರ ಕೀರ್ತಿ ಖ್ಯಾತ ಉದ್ಯಮಿಯೊಬ್ಬರನ್ನು ವರಿಸಲಿದ್ದಾರೆ. ಆದರೆ ಉದ್ಯಮಿ ಯಾರು ಎನ್ನುವುದು ಮಾತ್ರ ಇನ್ನೂ ರಿವೀಲ್ ಆಗಿಲ್ಲ.

    ಸಿನಿಮಾರಂಗದಲ್ಲಿ ಇರುವ ಮಂದಿ ಹೆಚ್ಚಾಗಿ ಲವ್ ಮ್ಯಾರೇಜ್ ಆಗುತ್ತಾರೆ. ಆದರೆ ಕೀರ್ತಿ ಅವರು ಅರೆಂಜ್ ಮ್ಯಾರೇಜ್ ಆಗಲು ನಿರ್ಧರಿಸಿದ್ದಾರೆ. ತಮ್ಮ ಪೋಷಕರು ಹುಡುಕುವ ಹುಡುಗನನ್ನೇ ಮದುವೆ ಆಗಲು ಕೀರ್ತಿ ಒಪ್ಪಿದ್ದಾರೆ. ಹೀಗಾಗಿ ಅವರ ತಂದೆ ಸುರೇಶ್ ಕುಮಾರ್ ಅವರು ಮುದ್ದು ಮಗಳಿಗೆ ಹುಡುಗನನ್ನು ಹುಡುಕಿದ್ದಾರೆ ಎನ್ನಲಾಗಿದೆ.

    ಸುರೇಶ್ ಕುಮಾರ್ ಅವರು ರಾಜಕೀಯ ವ್ಯಕ್ತಿಗಳ ಜೊತೆ ಉತ್ತಮ ಭಾಂದವ್ಯ ಹೊಂದಿದ್ದಾರೆ. ಆದ್ದರಿಂದ ರಾಜಕೀಯ ಹಿನ್ನೆಲೆ ಇರುವ ಪ್ರಭಾವಿ ಉದ್ಯಮಿಯ ಜೊತೆ ಮಗಳ ಮದುವೆ ಮಾಡಲು ತೀರ್ಮಾನಿಸಿದ್ದಾರೆ ಎಂದು ಹೇಳಲಾಗುತ್ತಿದೆ.

    ಕೀರ್ತಿ ಅವರು ಮದುವೆ ಆಗುತ್ತಿರುವ ಬಗ್ಗೆ ಅಧಿಕೃತ ಮಾಹಿತಿ ಇನ್ನು ಬಹಿರಂಗವಾಗಿಲ್ಲ. ಕೀತಿ ಆಗಲಿ, ಅವರ ಕುಟುಂಬಸ್ಥರಾಗಲಿ ಈ ಬಗ್ಗೆ ಬಹಿರಂಗವಾಗಿ ಮಾತನಾಡಿಲ್ಲ. ಆದರೆ ಮೂಲಗಳ ಪ್ರಕಾರ ಕೀರ್ತಿ ಮದುವೆ ಖ್ಯಾತ ಉದ್ಯಮಿ ಜೊತೆ ಮದುವೆ ಆಗಲು ಸಜ್ಜಾಗಿದ್ದಾರೆ ಎನ್ನಲಾಗಿದೆ.

    ತೆಲುಗು, ತಮಿಳು ಚಿತ್ರರಂಗದಲ್ಲಿ ಬಹುಬೇಡಿಕೆಯ ನಟಿಯಾಗಿರುವ ಕೀರ್ತಿ ಸುರೇಶ್ ಸಾಕಷ್ಟು ಸೂಪರ್ ಹಿಟ್ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಅವರ ‘ಮಹಾನಟಿ’ ಸಿನಿಮಾಗೆ ರಾಷ್ಟ್ರಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳು ಲಭಿಸಿದೆ. ಈ ಚಿತ್ರದಲ್ಲಿ ಖ್ಯಾತ ಮಲಯಾಳಂ ನಟ ದುಲ್ಕರ್ ಸಲ್ಮಾನ್ ಅವರು ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಸದ್ಯ ಕೀರ್ತಿ ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ‘ಅನ್ನಾತೆ’ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

  • ವಿಡಿಯೋ: ಶೂಟಿಂಗ್ ವೇಳೆ ಬಂಡೆಕಲ್ಲಿನ ಮೇಲೆ ಕಾಲುಜಾರಿ ಬಿದ್ದು ನಟಿಗೆ ಗಾಯ

    ವಿಡಿಯೋ: ಶೂಟಿಂಗ್ ವೇಳೆ ಬಂಡೆಕಲ್ಲಿನ ಮೇಲೆ ಕಾಲುಜಾರಿ ಬಿದ್ದು ನಟಿಗೆ ಗಾಯ

    ತಿರುವನಂತಪುರ: ಇಲ್ಲಿನ ಕೊಝಿಕೋಡ್ ನಲ್ಲಿ ಚಿತ್ರವೊಂದರ ಶೂಟಿಂಗ್ ವೇಳೆ ಬಂಡೆ ಕಲ್ಲಿನ ಮೇಲೆ ಬಿದ್ದು ನಟಿಯೊಬ್ಬರು ಗಾಯಗೊಂಡ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಸಿದ್ದಿಕ್ ಚೆಂಡಮಂಗಲ್ಲೂರ್ ಎಂಬವರ ನಿರ್ದೇಶನದ ಕುಂಜೀರಾಮಂತ ಕುಪ್ಪಯಂ ಚಿತ್ರದ ಡ್ಯಾನ್ಸ್ ವೇಳೆ ಈ ಅವಘಡ ಸಂಭವಿಸಿದೆ. ನಟಿ ಲಿಂಡಾ ಕುಮಾರ್ ಬಂಡೆ ಕಲ್ಲಿನ ಮೇಲೆ ಬಿದ್ದು ಕೈ ಹಾಗೂ ಕಾಲುಗಳಿಗೆ ಗಾಯಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

    ಡ್ಯಾನ್ಸ್ ಮಾಡುತ್ತಿದ್ದಂತೆಯೇ ನಟಿ ಏಕಾಏಕಿ ಬಂಡೆಕ್ಲಲಿನ ಮೇಲೆ ಬಿದ್ದಿದ್ದು, ಕೂಡಲೇ ಚಿತ್ರತಂಡ ಆಕೆಯನ್ನು ರಕ್ಷಿಸಿದ್ದಾರೆ. ಘಟನೆಯಿಂದ ನಟಿ ಕೈ ಹಾಗೂ ಕಾಲುಗಳಿಗೆ ಗಾಯಗಳಾಗಿವೆ. ಹೀಗಾಗಿ 10 ದಿನಗಳ ಕಾಲ ವಿಶ್ರಾಂತಿ ತೆಗೆದುಕೊಳ್ಳುವಂತೆ ನಟಿಗೆ ವೈದ್ಯರು ಸೂಚಿಸಿರುವುದಾಗಿ ವರದಿಯಾಗಿದೆ.

    ಮೊದಲು ತೆಲುಗು ನಟಿ ಕೀರ್ತಿ ಸುರೇಶ್ `ಸಾವಿತ್ರಿ’ ಚಿತ್ರದ ಶೂಟಿಂಗ್ ವೇಳೆ ಬಿದ್ದಿರುವುದಾಗಿ ಹೇಳಿ ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ವಿಚಾರ ತಿಳಿಯುತ್ತಿದ್ದಂತೆಯೇ ನಟಿ ಕೀರ್ತಿ ಸುರೇಶ್, ತನಗೇನೂ ಆಗಿಲ್ಲ. ನಾನು ಚೆನ್ನಾಗಿಯೇ ಇದ್ದೇನೆ. ಈ ವಿಡಿಯೋ ಹಾಗೂ ನನಗೆ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಹೀಗಾಗಿ ಈ ವಿಡಿಯೋದಲ್ಲಿರುವುದು ಕೀರ್ತಿ ಅಲ್ಲ. ಅವರು ತೆಲುಗು ಚಿತ್ರವೊಂದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.