Tag: Kedarnath

  • ಕೇದಾರನಾಥದ ಶಂಕರಾಚಾರ್ಯರ ಪ್ರತಿಮೆ ಕುರಿತು ಮೋದಿಗೆ ಪತ್ರ ಬರೆದ ದೇವೇಗೌಡರು

    ಕೇದಾರನಾಥದ ಶಂಕರಾಚಾರ್ಯರ ಪ್ರತಿಮೆ ಕುರಿತು ಮೋದಿಗೆ ಪತ್ರ ಬರೆದ ದೇವೇಗೌಡರು

    ಬೆಂಗಳೂರು: ಕೇದಾರನಾಥದಲ್ಲಿ ಆದಿ ಶಂಕರಾಚಾರ್ಯರ ಪ್ರತಿಮೆಯನ್ನು ಅನಾವರಣಗೊಳಿಸಿರುವುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿಗೆ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ಪತ್ರ ಬರೆದು ಸಂತಸ ಹಂಚಿಕೊಂಡಿದ್ದಾರೆ.

    ಪತ್ರದಲ್ಲಿ ಏನಿದೆ?
    ಕೇದಾರನಾಥದಲ್ಲಿ ನವೆಂಬರ್ 5 ರಂದು ನೀವು ಅನಾವರಣಗೊಳಿಸಿದ ಆದಿ ಶಂಕರಾಚಾರ್ಯರ ಪ್ರತಿಮೆಯನ್ನು ಕಂಡು ತುಂಬಾ ಸಂತೋಷವಾಗಿದೆ. ನಿಮಗೆ ಇದಕ್ಕಾಗಿ ಧನ್ಯವಾದ ತಿಳಿಸುತ್ತೇನೆ. ಕರ್ನಾಟಕದ ಚಿಕ್ಕಮಗಳೂರಿನ ಸೃಂಗೇರಿಯ ಶಾರದಾ ಪೀಠದ ಅನುಯಾಯಿ ನಾನು. ನಿಮಗೆ ತಿಳಿದಿರುವಂತೆ ಮಹಾನ್ ಸಂತ ಶಂಕರಾಚಾರ್ಯರಿಂದ ಸ್ಥಾಪಿಸಲ್ಪಟ್ಟ ನಾಲ್ಕು ಶಕ್ತಿಕೇಂದ್ರಗಳಲ್ಲಿ ಇದೂ ಕೂಡ ಒಂದು. ಶೃಂಗೇರಿ ಮಠವು ಸರ್ವಧರ್ಮ ಸಮನ್ವಯದ ಸಂಕೇತವಾಗಿದೆ. ಇದನ್ನೂ ಓದಿ: ನಾಲ್ವರು ಮಹಿಳಾ ಹೋರಾಟಗಾರ್ತಿಯರ ಹತ್ಯೆಯಾಗಿದೆ ಎಂದ ತಾಲಿಬಾನ್

    ಶೃಂಗೇರಿ ಮಠ ನನ್ನನ್ನು ಆಕರ್ಷಿಸಿದ್ದು, ಅವರ ಸಾಮರಸ್ಯದಿಂದ. ಇಲ್ಲಿ ಅನೇಕ ಶತಮಾನಗಳಿಂದ ರಾಜರು, ಆಡಳಿತಗಾರರಿಗೆ ಆಧ್ಯಾತ್ಮಿಕದ ಅರಿವನ್ನು ಮೂಡಿಸಿದ್ದಾರೆ. ಒಡೆಯರು, ಪೇಶ್ವೆಗಳು, ಕೆಳದಿ ಹಾಗೂ ತಿರೂವಾಂಕೂರು ದೊರೆಗಳು ಮಠದಿಂದ ಪ್ರಯೋಜನ ಪಡೆದಿದ್ದಾರೆ. ಮೈಸೂರಿನಲ್ಲಿ ಆಡಳಿತ ನಡೆಸಿದ ರಾಜರುಗಳಾದ ಹೈದರಿ ಅಲಿ, ಟಿಪ್ಪು ಸುಲ್ತಾನ್ ಮತ್ತು ಹೈದರಾಬಾದ್‍ನ ನಿಜಾಮರು ಮಠಕ್ಕೆ ಆಗಮಿಸಿ ಭಕ್ತಿಯನ್ನು ಸಲ್ಲಿಸುತ್ತಿದ್ದರು ಜೊತೆಗೆ ಇಲ್ಲಿಂದ ಮಾರ್ಗದರ್ಶನವನ್ನು ಪಡೆದಿದ್ದಾರೆ. ಇದನ್ನೂ ಓದಿ: ಕೇದಾರನಾಥದಲ್ಲಿ ಶಂಕರಾಚಾರ್ಯ ಪ್ರತಿಮೆ ಅನಾವರಣಗೊಳಿಸಿದ ಮೋದಿ

    ಇಲ್ಲಿರುವ ಮಠದ ಮಾರ್ಗದರ್ಶನ ಶ್ರೀಮಂತ ಪರಂಪರೆ ಇಂದಿಗೂ ನಡೆದುಕೊಂಡು ಬರುತ್ತಿದೆ. ಶೃಂಗೇರಿ ಮಠವು ಸರ್ವಧರ್ಮ ಸಮನ್ವಯದ ಸಂಕೇತವಾಗಿರುವುದರಿಂದ ನನಗೆ ವೈಯಕ್ತಿಕವಾಗಿ ಹೆಚ್ಚು ಭಕ್ತಿ ಇದೆ. ನಾನು ಪವಿತ್ರವಾದ ಪೀಠದಿಂದ ಪಡೆದಂತಹ ಆಶೀರ್ವಾದಗಳಿಗೆ ಸದಾ ಚಿರಋಣಿಯಾಗಿದ್ದೇನೆ.

    ಶಂಕರಾಚಾರ್ಯರ ಪ್ರತಿಮೆಯನ್ನು ನೋಡಲು ನಾನು ಶೀಘ್ರದಲ್ಲಿ ಕೇದಾರನಾಥಕ್ಕೆ ತೆರಲುತ್ತೇನೆ. ಈ ಪ್ರತಿಮೆಯನ್ನು ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ರೂಪಿಸಿರುವುದು ತುಂಬಾ ಸಂತೋಷದ ವಿಷಯವಾಗಿದೆ. ಇದರೊಂದಿಗೆ ಕರ್ನಾಟಕದ ಮೈಸೂರು ಜಿಲ್ಲೆಯ ಹೆಚ್.ಡಿ ಕೋಟೆಯಿಂದ ಕಪ್ಪುಶಿಲೆಯನ್ನು ಪ್ರತಿಮೆಗಾಗಿ ಬಳಸಲಾಗಿದೆ ಎಂಬುದು ಗೊತ್ತಾಗಿದೆ. ಶಂಕರಾಚಾರ್ಯರ ಪ್ರತಿಮೆ ರೂಪುಗೊಳ್ಳಲು ಕರ್ನಾಟಕದ ಪಾತ್ರ ದೊಡ್ಡದಿದೆ. ಎಲ್ಲವೂ ದೇವರ ಕೃಪೆ. ಪರಮಾತ್ಮನ ಕೃಪೆ ನಿಮ್ಮ ಮೇಲಿರಲಿ. ಇದನ್ನೂ ಓದಿ: ರಾಹುಲ್ ಗಾಂಧಿ ಎಲ್ಲಿ ಹೋಗಿದ್ದಾರೆ ಕಾಣಿಸ್ತಿಲ್ಲ: ಸುಧಾಕರ್ ಪ್ರಶ್ನೆ

  • ಕೇದಾರನಾಥದಲ್ಲಿ ಶಂಕರಾಚಾರ್ಯ ಪ್ರತಿಮೆ ಅನಾವರಣಗೊಳಿಸಿದ ಮೋದಿ

    ಕೇದಾರನಾಥದಲ್ಲಿ ಶಂಕರಾಚಾರ್ಯ ಪ್ರತಿಮೆ ಅನಾವರಣಗೊಳಿಸಿದ ಮೋದಿ

    ಡೆಹ್ರಾಡೂನ್: ಉತ್ತರಾಖಂಡದ ಕೇದಾರನಾಥದಲ್ಲಿ ಇಂದು ಪ್ರಧಾನಿ ನರೇಂದ್ರ ಮೋದಿಯವರು ಶಂಕರಾಚಾರ್ಯ ಪ್ರತಿಮೆಯನ್ನು ಅನಾವರಣಗೊಳಿಸಿದರು.

    MODI

    ಮೊದಲಿಗೆ ಶಿವನಿಗೆ ಪ್ರಾರ್ಥನೆ ಸಲ್ಲಿಸಿದ ಮೋದಿ ಬಳಿಕ, ದೇಗುಲದ ಹಿಂದೆ ಶಂಕರಾಚಾರ್ಯರ ಸಮಾಧಿ ಸ್ಥಳದಲ್ಲಿ ಪ್ರತಿಷ್ಠಾಪಿಸಿರುವ ಆದಿಗುರು ಶಂಕರಾಚಾರ್ಯ ಅವರ ಪುತ್ಥಳಿ ಅನಾವರಣಗೊಳಿಸಿದರು. ಇದನ್ನೂ ಓದಿ: ಅಭಿವೃದ್ಧಿಯಾಯ್ತು ಕೋವಿಡ್-19 ಮಾತ್ರೆ; ಮೊದಲ ರಾಷ್ಟ್ರವಾಗಿ ಯುಕೆ ಅನುಮೋದನೆ

    MODI

    2013ರ ಜಲಪ್ರಳಯದಲ್ಲಿ ಹಾನಿಗೀಡಾದ ಶಂಕರಾಚಾರ್ಯ ಸಮಾಧಿಯನ್ನು ಇದೀಗ ಪುನರ್ ನಿರ್ಮಾಣ ಮಾಡಲಾಗಿದೆ. ಪ್ರಧಾನಿ ಕಾರ್ಯಾಲಯದ ಸೂಚನೆಯ ಮೇರೆಗೆ ಮೈಸೂರಿನ ಖ್ಯಾತ ಶಿಲ್ಪ ಕಲಾವಿದ ಅರುಣ್ ಯೋಗಿರಾಜ್ ಈ ಪ್ರತಿಮೆಯನ್ನು ನಿರ್ಮಿಸಿದ್ದು, ಶಂಕರಾಚಾರ್ಯರ ಪುತ್ಥಳಿ 12 ಅಡಿ ಎತ್ತರವಿದ್ದು, ಕುಳಿತ ಭಂಗಿಯಲ್ಲಿದೆ. 35 ಟನ್ ತೂಕದ ಪುತ್ಥಳಿ ಕೆತ್ತಲು ಹೆಗ್ಗಡದೇವನಕೋಟೆಯಿಂದ ತರಲಾದ 120 ಟನ್‍ನ ಕೃಷ್ಣಶಿಲೆ ಬಳಸಲಾಗಿದೆ. ಇದನ್ನೂ ಓದಿ: ಬಿಹಾರ್‌: ನಕಲಿ ಮದ್ಯ ಸೇವಿಸಿ 24 ಮಂದಿ ಸಾವು!

    ಜೊತೆಗೆ ರೂ.400 ಕೋಟಿ ಮೌಲ್ಯದ ಕೇದಾರಪುರಿ ಮರು ನಿರ್ಮಾಣ ಯೋಜನಗಳು ಸೇರಿ ಇನ್ನಿತರ ಅಭಿವೃದ್ಧಿ ಯೋಜನೆಗಳಿಗೆ ಮೋದಿ ಅವರು ಚಾಲನೆ ನೀಡಲಿದ್ದಾರೆ. ಪುತ್ಥಳಿ ಅನಾವರಣದ ಕಾರ್ಯಕ್ರಮ 12 ಜ್ಯೋತಿರ್ಲಿಂಗಗಳು, 4 ಶಂಕರಾಚಾರ್ಯರ ಮಠಗಳು, ದೇಶದ ಇತರ ದೇವಾಲಯಗಳಲ್ಲಿ ನೇರ ಪ್ರಸಾರವಾಗಲಿದೆ. ಇದನ್ನೂ ಓದಿ: ಪುನೀತ್ ಸಾವಿನ ಬೆನ್ನಲ್ಲೇ ಹೆಚ್ಚಾಯ್ತು ಇಸಿಜಿ, ಹೃದಯಸಂಬಂಧಿ ಟೆಸ್ಟ್‌ಗಳು

    ಕೇದಾರನಾಥದಲ್ಲಿಯೇ ಶಂಕರಾಚಾರ್ಯರು ದೇಹತ್ಯಾಗ ಮಾಡಿದರು ಎಂಬ ನಂಬಿಕೆ ಇದೆ. ಹೀಗಾಗಿ ಪ್ರಧಾನಿ ಮೋದಿ ಶಂಕರಾಚಾರ್ಯರ ಸಮಾಧಿ ಸ್ಥಳವನ್ನು ಭಕ್ತರ ದರ್ಶನಕ್ಕೆ ಅನಾವರಣಗೊಳಿಸಲಿದ್ದಾರೆ. ಈ ವೇಳೆ ಕೇಂದ್ರ ಸಚಿವರು, ಸಂಸದರು ಮತ್ತು ಬಿಜೆಪಿಯ ಹಿರಿಯ ನಾಯಕರು ದೇಶದ 100ಕ್ಕೂ ಹೆಚ್ಚು ಪವಿತ್ರ ಕ್ಷೇತ್ರಗಳಿಗೆ ಭೇಟಿ ನೀಡಲಿದ್ದಾರೆ.

  • ಕೇದಾರನಾಥದಲ್ಲಿ ಧ್ಯಾನ ಮಾಡಿದ್ದು ರಾಜಕೀಯ ಲಾಭಕ್ಕಲ್ಲ- ಮೋದಿ

    ಕೇದಾರನಾಥದಲ್ಲಿ ಧ್ಯಾನ ಮಾಡಿದ್ದು ರಾಜಕೀಯ ಲಾಭಕ್ಕಲ್ಲ- ಮೋದಿ

    – ಮನ್ ಕೀ ಬಾತ್‍ನಲ್ಲಿ ಪ್ರಧಾನಿ ಸ್ಪಷ್ಟನೆ

    ನವದೆಹಲಿ: ಲೋಕಸಭಾ ಚುನಾವಣೆಯ ನಂತರ ಪ್ರಧಾನಿ ಮೋದಿ ದಿಢೀರನೇ ಕೇದಾರನಾಥಕ್ಕೆ ತೆರಳಿ ಒಂದು ದಿನ ಧ್ಯಾನಕ್ಕೆ ಕುಳಿತರು. ಈ ವೇಳೆ ವಿರೋಧ ಪಕ್ಷಗಳು ಹಾಗೂ ಇತರರು ರಾಜಕೀಯ ಲಾಭಕ್ಕಾಗಿ ಧ್ಯಾನ ಮಾಡುತ್ತಿದ್ದು, ಇದೆಲ್ಲ ಡೋಂಗಿ ಎಂದೆಲ್ಲ ಟೀಕಿಸಿದ್ದರು. ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ಹೊಸ ಸರ್ಕಾರದ ರಚನೆಯಾದ ನಂತರ ಇಂದು ತಮ್ಮ ಮೊದಲ ‘ಮನ್ ಕೀ ಬಾತ್’ನಲ್ಲಿ ಉತ್ತರಿಸಿದ್ದಾರೆ.

    ಲೋಕಸಭಾ ಚುನಾವಣೆಯ ನಂತರ ಕೇದಾರನಾಥಕ್ಕೆ ಪ್ರವಾಸ ಮಾಡಿ ಧ್ಯಾನಕ್ಕೆ ಕುಳಿತಿದ್ದು, ರಾಜಕೀಯ ಲಾಭಕ್ಕಾಗಿ ಅಲ್ಲ. ಬದಲಿಗೆ ಅದು ನನ್ನ ಅಂತರಂಗವನ್ನು ಅರಿಯಲು ದೊರೆತ ಒಂದು ಅವಕಾಶ ಎಂದು ವಿವಾದದ ಕುರಿತು ಸ್ಪಷ್ಟಪಡಿಸಿದ್ದಾರೆ.

    ಹಲವರು ಇದನ್ನು ರಾಜಕೀಯದ ದೃಷ್ಟಿಯಿಂದ ನೋಡಿದ್ದಾರೆ. ಆದರೆ ನನಗಿದು ನನ್ನ ಅಂತರಂಗವನ್ನರಿಯಲು ದೊರೆತ ಅವಕಾಶ. ಅಲ್ಲದೆ, ಕೊನೆಯ ಬಾರಿ ಮನ್ ಕೀ ಬಾತ್ ಕಾರ್ಯಕ್ರಮವನ್ನು ಮಾಡಿದ್ದರ ಬೇಸರವನ್ನು ಹಾಗೂ ಆ ಸ್ಥಾನವನ್ನು ಕೇದಾರನಾಥ ಪ್ರವಾಸ ತುಂಬಿತು ಎಂದು ಮೋದಿ ವ್ಯಾಖ್ಯಾನಿಸಿದ್ದಾರೆ.

    ಪ್ರಜಾಪ್ರಭುತ್ವವನ್ನು ಎತ್ತಿಹಿಡಿಯುವುದು ಹಾಗೂ ಪುಸ್ತಕ ಓದುವುದರ ಕುರಿತು ಕೇಳುಗರಿಗೆ ನೆನಪಿದ್ದಾರೆ. ಇದೇ ವೇಳೆ ತಮ್ಮ ‘ಕೇದಾರನಾಥ ಪ್ರವಾಸ’ ಮತ್ತು ಲೋಕಸಭಾ ಚುನಾವಣೆಗೂ ಮುನ್ನ ಹಿಂದಿನ ಸರ್ಕಾರದ ಅವಧಿಯಲ್ಲಿ(ಫೆಬ್ರವರಿ) ನಡೆದ ಕೊನೆಯ ‘ಮನ್ ಕೀ ಬಾತ್’ನ್ನು ಚುನಾವಣೆಗೆ ಬಳಸಿಕೊಂಡಿದ್ದಾರೆ ಎಂಬ ಆರೋಪವನ್ನು ಅಲ್ಲಗಳೆದಿದ್ದಾರೆ.

    ಮತದಾನದ ನಂತರ ‘ಮನ್ ಕೀ ಬಾತ್’ಗೆ ಹಿಂದಿರುಗುವುದಾಗಿ ನೀಡಿದ್ದ ನನ್ನ ಭರವಸೆಗೆ ರಾಜಕೀಯದ ಅರ್ಥ ನೀಡಿ ಟೀಕಿಸಿದ್ದರು. ಅಲ್ಲದೆ, ‘ಅತಿಯಾದ ಆತ್ಮ ವಿಶ್ವಾಸ’ ಎಂದು ಅಲ್ಲಗಳೆದಿದ್ದರು. ಆದರೆ, ನಿಮ್ಮ ವಿಶ್ವಾಸದಿಂದ ನಾನು ಮರಳಿ ಬರಲು ನೆರವಾಯಿತು. ನೀವು ಆಹ್ವಾನಿಸದ ಹೊರತು ನನ್ನೊಬ್ಬನಿಂದಲೇ ಮರಳಿ ಬರಲು ಸಾಧ್ಯವಾಗುತ್ತಿರಲಿಲ್ಲ ಎಂದು ಭಾವನಾತ್ಮಕವಾಗಿ ನುಡಿದಿದ್ದಾರೆ.

    ಪ್ರಜಾಪ್ರಭುತ್ವವನ್ನು ಎತ್ತಿಹಿಡಿಯುವಲ್ಲಿ ಮತದಾನದ ಮಹತ್ವವನ್ನು ವಿವರಿಸುವಾಗ ತುರ್ತು ಪರಿಸ್ಥಿತಿಯ ಉದಾಹರಣೆ ನೀಡಿದ್ದು, 1977ರಲ್ಲಿ ಹೇರಿದ ತುರ್ತು ಪರಿಸ್ಥಿತಿ ವೇಳೆ ಮೂಲಭೂತ ಹಕ್ಕುಗಳನ್ನು ಹೇಗೆ ಕಸಿದುಕೊಂಡಿದ್ದರು ಎಂದು ವಿವರಿಸಿದರು. ಅಲ್ಲದೆ, ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಎಲ್ಲ ನಾಗರಿಕರಿಗೂ ಏನೋ ಕಳೆದುಕೊಂಡಂತೆ ಭಾಸವಾಗುತ್ತಿತ್ತು ಎಂದು ಮೋದಿ ವಿವರಿಸಿದ್ದಾರೆ.

    ಪ್ರಜಾಪ್ರಭುತ್ವವೆಂದರೆ ಪ್ರತಿಯೊಬ್ಬ ಮತದಾರನಿಗೂ ಗೌರವ ಸಲ್ಲಿಸುವುದು. ಲೋಕಸಭಾ ಚುನಾವಣೆ ಮುಗಿಯುವ ಹೊತ್ತಿನಲ್ಲಿ ದೂರದ ಹಿಮಾಚಲ ಪ್ರದೇಶದಲ್ಲಿ ವಾಸಿಸುವ ಒಂಟಿ ಮಹಿಳೆಗೆ ಮತಗಟ್ಟೆ ಸ್ಥಾಪಿಸಲು ಚುನಾವಣಾಧಿಕಾರಿಗಳು ಎರಡು ದಿನಗಳ ಕಾಲ ಪ್ರಯಾಣಿಸಿ, ಹೇಗೆ ಕಷ್ಟಪಟ್ಟರು ಎಂಬುದನ್ನು ಇದೇ ವೇಳೆ ವಿವರಿಸಿದರು.

    ಹಿಂದಿನ ಸರ್ಕಾರದ ಅವಧಿಯಲ್ಲಿ ಮಾಡಿದ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಕ್ಕೆ ಸಂತಸವಾಗಿದೆ. ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಿ ಎಂದು ಇದೇ ವೇಳೆ ಯುವಕರಿಗೆ ಹಾಗೂ ಕೇಳುಗರಿಗೆ ಕರೆ ನೀಡಿದರು. ಇತ್ತೀಚೆಗೆ ಪ್ರೇಮ್‍ಚಂದ್ ಅವರ ಜನಪ್ರಿಯ ಕಥೆಗಳ ಪುಸ್ತಕವನ್ನು ಉಡುಗೊರೆಯಾಗಿ ನೀಡಿದ್ದರು. ಈ ಪುಸ್ತಕ ಓದುತ್ತಿದ್ದಾಗ ಯುವಕನಾಗಿದ್ದಾಗ ನಾನು ಅನುಭವಿಸಿದ ಸಾಮಾಜಿಕ ಸವಾಲುಗಳು ನೆನಪಾದವು ಎಂದು ತಿಳಿಸಿದರು.

    ತಿಂಗಳುಗಳ ನಂತರ ಪ್ರಧಾನಿ ಮೋದಿ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು, ಹೊಸ ಸರ್ಕಾರ ರಚನೆಯಾದ ಮೇಲೆ ಪ್ರಧಾನಿ ನರೇಂದ್ರ ಮೋದಿ ಅವರ ಮೊದಲ ‘ಮನ್ ಕೀ ಬಾತ್’ ಇದಾಗಿದೆ.

  • ಕೇದಾರನಾಥಕ್ಕೆ ತೆರಳಿ ಮೋದಿಯಿಂದ ನೀತಿ ಸಂಹಿತೆ ಉಲ್ಲಂಘನೆ – ಆಯೋಗಕ್ಕೆ ಮಮತಾ ದೂರು

    ಕೇದಾರನಾಥಕ್ಕೆ ತೆರಳಿ ಮೋದಿಯಿಂದ ನೀತಿ ಸಂಹಿತೆ ಉಲ್ಲಂಘನೆ – ಆಯೋಗಕ್ಕೆ ಮಮತಾ ದೂರು

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಕೇದಾರನಾಥಕ್ಕೆ ತೆರಳಿ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ.

    ಕೊನೆಯ ಹಂತದ ಚುನಾವಣೆ ಪ್ರಚಾರಕ್ಕೆ ಮೇ 17 ಸಂಜೆ 6 ಗಂಟೆಗೆ ತೆರೆ ಬಿದ್ದಿದೆ.  ಮೇ 18ರ ದಿನವಿಡಿ ಮೋದಿ ಅವರ ಕೇದಾರನಾಥ ಯಾತ್ರೆಯನ್ನು ವಾಹಿನಿಗಳು ಪ್ರಸಾರ ಮಾಡಿವೆ. ಇದು ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆಯಾಗಿದೆ ಎಂದು ಟಿಎಂಸಿ ತನ್ನ ದೂರಿನಲ್ಲಿ ಉಲ್ಲೇಖಿಸಿದೆ.

    ಪ್ರಧಾನಿ ಮೋದಿ ಅವರು ಕೇದಾರನಾಥ ದೇವಾಲಯದ ಅಭಿವೃದ್ಧಿಗೆ ಸಂಬಂಧಿಸಿದ ಮಾಸ್ಟರ್ ಪ್ಲಾನ್ ಘೋಷಣೆ ಮಾಡಿದ್ದಾರೆ. ಈ ವೇಳೇ ಸಾರ್ವಜನಿಕರು ಮತ್ತು ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ. ಇದು ನೀತಿ ಸಂಹಿತೆಯ ಸ್ಪಷ್ಟ ಉಲ್ಲಂಘನೆ ಎಂದು ಆರೋಪಿಸಿದೆ. ಇದನ್ನು ಓದಿ: ಪ್ರಧಾನಿ ಮೋದಿ ಧ್ಯಾನದ ಗುಹೆಯ ವಿಶೇಷತೆ ಏನು?

    ಪ್ರಧಾನಿ ಮೋದಿ ಅವರ ಪ್ರತಿಯೊಂದು ಕ್ರಿಯೆಗೆ ವ್ಯಾಪಕ ಪ್ರಚಾರ ನೀಡಲಾಗಿದೆ. ಇದು ಮತದಾರರ ಮೇಲೆ ನೇರವಾಗಿ ಅಥವಾ ಪರೋಕ್ಷವಾಗಿ ಪ್ರಭಾವ ಬೀರುವ ಸಾಧ್ಯತೆಯಿದೆ. ಹಿಂದುಗಡೆ “ಮೋದಿ ಮೋದಿ” ಘೋಷಣೆ ಸಹ ಪ್ರಸಾರವಾಗಿತ್ತು. ಇಷ್ಟೆಲ್ಲ ನಡೆಯುತ್ತಿದ್ದರೂ ಚುನಾವಣಾ ಆಯೋಗ ಕಣ್ಣಿದ್ದರೂ ಕುರುಡಾದಂತೆ ವರ್ತಿಸಿದೆ ಎಂದು ಟಿಎಂಸಿ ತನ್ನ ದೂರಿನಲ್ಲಿ ಆಕ್ಷೇಪ ವ್ಯಕ್ತಪಡಿಸಿದೆ.

    ಪ್ರಧಾನಿಯಾದ ಮೇಲೆ ನಾಲ್ಕನೇ ಬಾರಿ ಕೇದಾರನಾಥಕ್ಕೆ ಭೇಟಿ ನೀಡಿರುವ ಮೋದಿ, ದೇಗುಲದಿಂದ ಒಂದೂವರೆ ಕಿಲೋಮೀಟರ್ ದೂರದಲ್ಲಿರುವ ರುದ್ರಗುಹೆಯಲ್ಲಿ ಧ್ಯಾನ ಮಾಡಿದ್ದಾರೆ. ಮಳೆ ನಡುವೆಯೂ ಗುಹೆಗೆ ಕಾಲ್ನಡಿಗೆ ಮೂಲಕ ತೆರಳಿದ ಪ್ರಧಾನಿ ಮೋದಿ ಧ್ಯಾನಕ್ಕೆ ಕುಳಿತರು. ಇಲ್ಲಿ ಸುಮಾರು 17 ಗಂಟೆಗಳ ಕಾಲ ಮೋದಿ ಧ್ಯಾನ ಮಾಡಿದ್ದರು. ಇದನ್ನು ಓದಿ:ಪ್ರತಿಷ್ಠೆಯ ಯುದ್ಧ ಗೆಲ್ಲೋಕೆ ಮೋದಿ ದೇವರ ಮೊರೆ – ರಾತ್ರಿಯಿಡೀ ಕೇದಾರನಾಥ ಗುಹೆಯಲ್ಲಿ ನಮೋ ಧ್ಯಾನ

    ಧ್ಯಾನಕ್ಕೆ ಕುಳಿತುಕೊಳ್ಳುವ ಮುನ್ನ ಕೇದಾರನಾಥ ದೇವಾಲಯಕ್ಕೆ ಭೇಟಿ ನೀಡಿದ ಮೋದಿ ರುದ್ರಾಭಿಷೇಕ ಮಾಡಿದ್ದಾರೆ. ಬಳಿಕ ಅಲ್ಲಿನ ಅಭಿವೃದ್ಧಿ ಕಾಮಗಾರಿಗಳನ್ನು ವೀಕ್ಷಿಸಿ, ಅಧಿಕಾರಿಗಳಿಗೆ ಸಲಹೆ, ಸೂಚನೆ ಕೊಟ್ಟಿದ್ದಾರೆ.

    ಈ ಹಿಂದೆ 2017ರ ಮೇ 3, ಅಕ್ಟೋಬರ್ 20 ಮತ್ತು 2018ರ ನವೆಂಬರ್ 7ರಂದು ಪ್ರಧಾನಿ ಮೋದಿ ಕೇದಾರನಾಥನ ಸನ್ನಿಧಿಗೆ ಭೇಟಿ ನೀಡಿದ್ದರು.

  • ಬದರಿನಾಥ, ಕೇದಾರನಾಥ ದೇಗುಲ ಸಮಿತಿಗೆ ಅನಂತ್ ಅಂಬಾನಿ ನೇಮಕ

    ಬದರಿನಾಥ, ಕೇದಾರನಾಥ ದೇಗುಲ ಸಮಿತಿಗೆ ಅನಂತ್ ಅಂಬಾನಿ ನೇಮಕ

    ಡೆಹ್ರಾಡೂನ್: ಉದ್ಯಮಿ ಮುಖೇಶ್ ಅಂಬಾನಿ ಪುತ್ರ ಅನಂತ್ ಅಂಬಾನಿ ಅವರನ್ನು ಪ್ರಸಿದ್ಧ ತೀರ್ಥ ಕ್ಷೇತ್ರಗಳಾದ ಬದರಿನಾಥ, ಕೇದಾರನಾಥ ದೇಗುಲ ಸಮಿತಿಗೆ ಸದಸ್ಯರನ್ನಾಗಿ ಉತ್ತರಾಖಂಡ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ಅವರು ಶುಕ್ರವಾರ ನೇಮಿಸಿದ್ದಾರೆ.

    ಮನೆಯಲ್ಲಿ ಶುಭಕಾರ್ಯ ನಡೆಯುವಾಗ ಮುಖೇಶ್ ಅಂಬಾನಿ ಕುಟುಂಬಸ್ಥರು ಕೇದಾರನಾಥ ಹಾಗೂ ಬದರಿನಾಥ ದೇಗುಲಕ್ಕೆ ಭೇಟಿ ನೀಡಿ, ದೇವರ ದರ್ಶನ ಪಡೆಯುತ್ತಾರೆ. ಕಳೆದ ವರ್ಷ ನಡೆದ ಪುತ್ರಿ ಇಶಾ ಅಂಬಾನಿ ವಿವಾಹದ ನಿಮಿತ್ತ ಮುಖೇಶ್ ಅಂಬಾನಿ ಅವರು, ಕೇದಾರನಾಥ ಮತ್ತು ಬದರಿನಾಥ ದೇಗುಲಗಳಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದರು.

    ಕೇದಾರನಾಥ ದೇವಸ್ಥಾನವು ಹಿಂದೂಗಳ ಪ್ರಸಿದ್ಧ ದೇವಾಲಯವಾಗಿದೆ. ಈ ದೇವಾಲಯವು ಉತ್ತರಾಖಂಡದ ಗರ್ವಾಲ್ ಹಿಮಾಲಯ ಶ್ರೇಣಿಯ ಸಮೀಪ ಮಂದಾಕಿನಿ ನದಿ ಪಾತ್ರದಲ್ಲಿ ನಿರ್ಮಾಣವಾಗಿದೆ.

    ಕೇದಾರನಾಥ ದೇವಾಲಯದ ಪ್ರದೇಶದಲ್ಲಿ ಹಿಮ ಹೆಚ್ಚಾಗಿ ಬೀಳುತ್ತದೆ. ಹೀಗಾಗಿ ಭಕ್ತರಿಗೆ ಏಪ್ರಿಲ್‍ನಿಂದ ನವೆಂಬರ್ ತಿಂಗಳಲ್ಲಿ ಮಾತ್ರ ದೇವಸ್ಥಾನಕ್ಕೆ ಭೇಟಿ ನೀಡಲು ಅವಕಾಶ ಮಾಡಿಕೊಡಲಾಗುತ್ತದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ವಿಶ್ವವಿಖ್ಯಾತ ಕೇದಾರನಾಥ ದೇವಾಲಯ ಹಿಮಾವೃತ

    ವಿಶ್ವವಿಖ್ಯಾತ ಕೇದಾರನಾಥ ದೇವಾಲಯ ಹಿಮಾವೃತ

    ಡೆಹ್ರಾಡೂನ್: ಉತ್ತರಾಖಂಡದಲ್ಲಿ ಹಿಮಪಾತ ಮುಂದುವರಿದಿದ್ದು, ವಿಶ್ವವಿಖ್ಯಾತ ಕೇದಾರನಾಥ ದೇವಾಲಯವು ಹಿಮದಿಂದ ಆವೃತವಾಗಿದೆ.

    ಕೇದಾರನಾಥ ದೇವಾಲಯವು ಹಿಮ ಆವೃತವಾಗಿರುವ ದೃಶ್ಯವನ್ನು ಎತ್ತರದಿಂದ ಕ್ಲಿಕ್ಕಿಸಲಾಗಿದೆ. ಈ ಫೋಟೋ ವೈರಲ್ ಆಗಿದ್ದು, ದೃಶ್ಯದಲ್ಲಿ ಗೋಪುರ, ಕೆಲವು ಕಟ್ಟಡಗಳ ಮಳಿಗೆಗಳು ಮಾತ್ರ ಕಾಣಿಸುತ್ತಿವೆ. ಸದ್ಯ ದೇವಾಲಯಕ್ಕೆ ಭಕ್ತರ ಭೇಟಿಯನ್ನು ತಡೆಹಿಡಿಯಲಾಗಿದೆ.

    ಎಲ್ಲಿದೆ ಈ ದೇವಾಲಯ?:
    ಕೇದಾರನಾಥವು ಹಿಂದುಗಳ ಪವಿತ್ರ ಹಾಗೂ ಪ್ರಸಿದ್ಧ ದೇವಾಲಯ. ಉತ್ತರಾಖಂಡ ರಾಜ್ಯದ ಚಮೋಲಿ (ಉತ್ತರಕಾಶಿ) ಜಿಲ್ಲೆಯ ಹಿಮಾಲಯ ಪರ್ವತ ಶ್ರೇಣಿಯಲ್ಲಿ ಕೇದಾರನಾಥ ದೇವಾಲಯವಿದೆ. ಶಿವನ ಹನ್ನೆರಡು ಜ್ಯೋತಿರ್ಲಿಂಗಗಳಲ್ಲಿ ಒಂದಾಗಿರುವ ಕೇದಾರನಾಥ ಚಾರ್ ಧಾಮ್ ಯಾತ್ರೆಯಲ್ಲಿ ಇದೊಂದು ಮುಖ್ಯ ಯಾತ್ರಾ ಸ್ಥಳ. ಕೇದಾರನಾಥ ಯಾತ್ರೆಯು `ಭಾರತ-ಚೀನಾ’ ಗಡಿಗೆ ಅಂಟಿಕೊಂಡಂತಿರುವ `ಗೌರಿಕುಂಡ’ವೆಂಬ ಪ್ರದೇಶದಿಂದ ಪ್ರಾರಂಭವಾಗುತ್ತದೆ. ಸಮತಟ್ಟಾದ ಪ್ರದೇಶವಾದ ಇಲ್ಲಿಂದ ಸುಮಾರು 14 ಕಿ.ಮೀ. ಕಾಲ್ನಡಿಗೆ, ಕುದುರೆಸವಾರಿ ಅಥವಾ ಡೋಲಿಯಲ್ಲಿ ಪಯಣಿಸಬೇಕಾಗುತ್ತದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಶೂ ಬಿಚ್ಚಲು ಬಂದ ಸಹಾಯಕನನ್ನು ತಡೆದ ಪ್ರಧಾನಿ ಮೋದಿ

    ಶೂ ಬಿಚ್ಚಲು ಬಂದ ಸಹಾಯಕನನ್ನು ತಡೆದ ಪ್ರಧಾನಿ ಮೋದಿ

    ಕೇದಾರನಾಥ್: ವಿಐಪಿ ಸಂಸ್ಕೃತಿಗೆ ತಿಲಾಂಜಲಿ ಹಾಡಲು ಮುಂದಾಗಿರುವ ಪ್ರಧಾನಿ ನರೇಂದ್ರ ಮೋದಿ ಇಂದು ಕೇದಾರನಾಥ್ ದೇವಾಲಯಕ್ಕೆ ಭೇಟಿ ನೀಡಿದ್ದರು. ಈ ವೇಳೆ ದೇವಸ್ಥಾನ ಪ್ರವೇಶಿಸುವ ಮುನ್ನ ಮೋದಿಯವರ ಶೂ ಬಿಚ್ಚಲು ಬಂದ ಸಹಾಯಕನನ್ನು ತಡೆದು, ತಮ್ಮ ಸರಳತೆಯ ವ್ಯಕ್ತಿತ್ವವನ್ನು ತೋರಿದ್ದಾರೆ.

    ಆದೇಶಗಳನ್ನು ಹೊರಡಿಸುವ ವ್ಯಕ್ತಿ ಅವುಗಳನ್ನು ಪಾಲನೆ ಮಾಡಬೇಕು ಎಂಬವುದನ್ನು ಮೋದಿ ತೋರಿಸಿಕೊಟ್ಟಿದ್ದಾರೆ. ರುದ್ರಾಭಿಷೇಕ ಮಾಡಲು ದೇವಾಲಯ ಪ್ರವೇಶಿಸುವುದಕ್ಕೂ ಮುನ್ನ ತಮ್ಮ ಶೂ ತೆಗೆಯುತ್ತಿದ್ದ ಪ್ರಧಾನಿಗೆ ಸಹಾಯ ಮಾಡಲು ವ್ಯಕ್ತಿಯೊಬ್ಬರು ಮುಂದಾಗಿದ್ದರು. ಆದರೆ ಪ್ರಧಾನಿ ನರೇಂದ್ರ ಮೋದಿ ಆ ವ್ಯಕ್ತಿಯನ್ನು ತಮಗೆ ಸಹಾಯ ಮಾಡುವುದರಿಂದ ತಡೆದಿದ್ದಾರೆ. ಮೋದಿ ಅವರು ದೇವಸ್ಥಾನದೊಳಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದರು. 28 ವರ್ಷಗಳ ನಂತರ ಪ್ರಧಾನಿಯೊಬ್ಬರು ಕೇದಾರನಾಥ್ ದೇವರಿಗೆ ರುದ್ರಾಭಿಷೇಕ ಮಾಡಿಸಿರುವುದು.

    ಗಣ್ಯ ವ್ಯಕ್ತಿಗಳ ಕಾರಿನಿಂದ ಕೆಂಪು ಗೂಟವನ್ನು ರದ್ದುಗೊಳಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿ ವಿವಿಐಪಿ ಸಂಸ್ಕೃತಿ ಅಂತ್ಯಗೊಳ್ಳಬೇಕು ಎಂದು ಪ್ರಧಾನಿ ಆದೇಶ ಜಾರಿ ತಂದಿದ್ದಾರೆ. ಬೇರೆಯವರಿಗೆ ಹೇಳುವ ಮಾತುಗಳನ್ನು ನಾನು ಪಾಲನೆ ಮಾಡುತ್ತೇನೆ ಎಂದು ಮೋದಿ ತೋರಿಸಿದ್ದಾರೆ. ದೇಶದಲ್ಲಿ ವಿಪಿಐ ಬದಲು ಇಪಿಐ (Every Person Important) ನ್ನು ಮೋದಿ ರವಿವಾರ `ಮನ್ ಕೀ ಬಾತ್’ನಲ್ಲಿ ಪರಿಚಯಿಸಿದ್ದರು.

     

    https://youtu.be/Eolf5i8Kxkw