Tag: Kedarnath

  • ಕೇದಾರನಾಥದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಮೋದಿ

    ಕೇದಾರನಾಥದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಮೋದಿ

    ಡೆಹ್ರಾಡೂನ್: ಉತ್ತರಾಖಂಡ (Uttarakhand) ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ (Narendra Modi) ಇಂದು ಕೇದಾರನಾಥಕ್ಕೆ (Kedarnath) ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.

    ಕೇದಾರನಾಥಕ್ಕೆ ಭೇಟಿ ನೀಡಿದ ಮೋದಿ ಕೆಲಕಾಲ ಪೂಜೆ ಸಲ್ಲಿಸಿದರು. ಬಳಿಕ ಬದರಿನಾಥಕ್ಕೆ (Badrinath) ತೆರಳಿದರು. ಮೋದಿ ಭೇಟಿ ಹಿನ್ನೆಲೆ ಕೇದಾರನಾಥ ಮತ್ತು ಬದರಿನಾಥ ದೇವಾಲಯಗಳನ್ನು ಹೂವಿನಿಂದ ಅಲಂಕರಿಸಲಾಗಿದೆ. ದೇವಸ್ಥಾನಗಳ ಭೇಟಿ ಬಳಿಕ ಹೇಮಕುಂಡ್ ಸಾಹಿಬ್ ರೋಪ್‍ವೇ (Ropeway) ಮತ್ತು ಕೆಲವೊಂದು ರಸ್ತೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಮೋದಿ ಭೇಟಿ ಹಿನ್ನೆಲೆಯಲ್ಲಿ ಪೊಲೀಸ್ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಇದನ್ನೂ ಓದಿ: ‘ಕಾಂತಾರ’ ನೋಡಿ ಕಣ್ಣೀರಿಟ್ಟ ಕಂಗನಾ ರಣಾವತ್: ನಾನಿನ್ನೂ ಶೇಕ್ ಆಗುತ್ತಿದ್ದೇನೆ

    ಕೇದಾರನಾಥ ರೋಪ್‍ವೇ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿದ ಬಳಿಕ ಆದಿಗುರು ಶಂಕರಾಚಾರ್ಯ ಸಮಾಧಿಗೆ ಭೇಟಿ ನೀಡಲಿದ್ದಾರೆ. ಇದಾದ ಬಳಿಕ ಮಂದಾಕಿನಿ ಅಷ್ಟಪಥ ಮತ್ತು ಸರಸ್ವತಿ ಅಷ್ಟಪಥ ಉದ್ದಕ್ಕೂ ಅಭಿವೃದ್ಧಿ ಕಾಮಗಾರಿಗಳ ಪ್ರಗತಿಯನ್ನು ಪರಿಶೀಲಿಸಲಿದ್ದಾರೆ. ಮಾಣ ಗ್ರಾಮದಲ್ಲಿ ರಸ್ತೆ ಮತ್ತು ರೋಪ್‍ವೇ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದು, ಕೇದಾರನಾಥಕ್ಕೆ ಸಂಪರ್ಕಿಸುವ 9.7 ಕಿಮೀ ಉದ್ದದ ಗೌರಿಕುಂಡ್ ರೋಪ್‍ವೇಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಈ ಮೂಲಕ ಕೇದಾರನಾಥ ಮತ್ತು ಗೌರಿಕುಂಡ್‍ನಡುವಿನ ಪ್ರಯಾಣದ ಸಮಯ ಪ್ರಸ್ತುತ 6-7 ಗಂಟೆಗಳ ಸಮಯ ಹಿಡಿಯುತ್ತಿದೆ. ಈ ರೋಪ್‍ವೇ ಆದ ಬಳಿಕ ಪ್ರಯಾಣ ಸಮಯ 45 ನಿಮಿಷವಾಗಲಿದೆ. ಇದನ್ನೂ ಓದಿ: ಬೌದ್ಧ ಸನ್ಯಾಸಿಯ ವೇಷ ಧರಿಸಿ ದೇಶ ವಿರೋಧಿ ಚಟುವಟಿಕೆಯ ಶಂಕೆ – ಚೀನೀ ಮಹಿಳೆ ಬಂಧನ

    ಹೇಮಕುಂಡ್ ರೋಪ್‍ವೇ ಗೋವಿಂದಘಾಟ್‍ನಿಂದ ಹೇಮಕುಂಡ್ ಸಾಹಿಬ್‍ಗೆ ಸಂಪರ್ಕ ಕಲ್ಪಿಸುತ್ತದೆ. ಇದು ಸುಮಾರು 12.4 ಕಿಮೀ ಉದ್ದವಿರಲಿದ್ದು, ಈ ರೋಪ್‍ವೇ ಘಂಗಾರಿಯಾವನ್ನು ಸಹ ಸಂಪರ್ಕಿಸುತ್ತದೆ. ಇದು ವ್ಯಾಲಿ ಆಫ್ ಫ್ಲವರ್ಸ್ ನ್ಯಾಷನಲ್ ಪಾರ್ಕ್‍ಗೆ ಗೇಟ್‍ವೇ ಆಗಿದೆ.

    Live Tv
    [brid partner=56869869 player=32851 video=960834 autoplay=true]

  • ಬದರಿನಾಥ್, ಕೇದಾರನಾಥಕ್ಕೆ ಮುಖೇಶ್ ಅಂಬಾನಿ ಭೇಟಿ – ದೇಗುಲದ ಟ್ರಸ್ಟ್‌ಗೆ 5 ಕೋಟಿ ದೇಣಿಗೆ

    ಬದರಿನಾಥ್, ಕೇದಾರನಾಥಕ್ಕೆ ಮುಖೇಶ್ ಅಂಬಾನಿ ಭೇಟಿ – ದೇಗುಲದ ಟ್ರಸ್ಟ್‌ಗೆ 5 ಕೋಟಿ ದೇಣಿಗೆ

    ಡೆಹ್ರಾಡೂನ್: ಖ್ಯಾತ ಉದ್ಯಮಿ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ (Reliance Industries) ಅಧ್ಯಕ್ಷ ಮುಖೇಶ್ ಅಂಬಾನಿ (Mukesh Ambani) ಅವರು ಗುರುವಾರ ಬದರಿನಾಥ್ (Badrinath) ಮತ್ತು ಕೇದಾರನಾಥ (Kedarnath) ಧಾಮಕ್ಕೆ ಭೇಟಿ ನೀಡಿದರು. ಈ ವೇಳೆ  ಬದರಿನಾಥ್-ಕೇದಾರನಾಥ ದೇವಾಲಯ ಸಮಿತಿಗೆ 5 ಕೋಟಿ ದೇಣಿಗೆ ನೀಡಿದ್ದಾರೆ.

    ದೇವಾಲಯಕ್ಕೆ ಭೇಟಿ ನೀಡಿದ ಅಂಬಾನಿ ಅವರ ಜೊತೆಗೆ ಪುತ್ರ ಅನಂತ್ ಅವರು ನಿಶ್ಚಿತಾರ್ಥ ಮಾಡಿಕೊಂಡಿರುವ ರಾಧಿಕಾ ಮರ್ಚೆಂಟ್ ಅವರು ಆಗಮಿಸಿದ್ದರು. ಅಂಬಾನಿ ಅವರನ್ನು ದೇವಾಲಯದ ಅಧಿಕಾರಿಗಳು ಬರಮಾಡಿಕೊಂಡ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಇದನ್ನೂ ಓದಿ: ಹಿಜಬ್ ಭರವಸೆ ಬಲವಾಗಿದೆ – ನ್ಯಾ. ದುಲಿಯಾ ತೀರ್ಪಿಗೆ ಆಲಿಯಾ ಅಸ್ಸಾದಿ ಮೆಚ್ಚುಗೆ

    ಕಳೆದ ಕೆಲವು ವಾರಗಳಿಂದ ಹಲವಾರು ದೇವಸ್ಥಾನಗಳಿಗೆ ಅಂಬಾನಿ ಅವರು ಭೇಟಿ ನೀಡಿದ್ದಾರೆ. ಕಳೆದ ತಿಂಗಳು ಮೂರು ಪ್ರಸಿದ್ಧ ದೇವಾಲಯಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದರು ಮತ್ತು ದೇವಾಲಯದ ಟ್ರಸ್ಟ್‌ಗಳಿಗೆ ಇಷ್ಟೇ ಮೊತ್ತವನ್ನು ದೇಣಿಗೆ ನೀಡಿದರು. ಇದನ್ನೂ ಓದಿ: ಕೇರಳದಲ್ಲಿ ನರಬಲಿ ಕೇಸ್‌ – ಮಾಟ ಮಂತ್ರ ತಡೆಗೆ ಕಠಿಣ ಕಾನೂನು: ಕೇರಳ ಸರ್ಕಾರ ನಿರ್ಧಾರ

    Live Tv
    [brid partner=56869869 player=32851 video=960834 autoplay=true]

  • ಕೇದಾರನಾಥನ ಗರ್ಭಗುಡಿಗೆ ಚಿನ್ನದ ಲೇಪ ಬೇಡ- ಅರ್ಚಕರ ವಿರೋಧ

    ಕೇದಾರನಾಥನ ಗರ್ಭಗುಡಿಗೆ ಚಿನ್ನದ ಲೇಪ ಬೇಡ- ಅರ್ಚಕರ ವಿರೋಧ

    ಡೆಹ್ರಾಡೂನ್: ಉತ್ತರಾಖಂಡದ(Uttarakhand) ಜಗತ್ಪ್ರಸಿದ್ಧ ಕೇದಾರನಾಥ ದೇವಾಲಯದ(Kedarnath Temple) ಗರ್ಭಗುಡಿಯೊಳಗಿನ ಗೋಡೆಗೆ ಚಿನ್ನದ ಲೇಪನ(Gold Plating) ಮಾಡುವುದಕ್ಕೆ ಕೆಲ ಅರ್ಚಕರು(Priests) ವಿರೋಧ ವ್ಯಕ್ತಪಡಿಸಿದ್ದಾರೆ. ಇದು ಶತಮಾನಗಳಷ್ಟು ಹಳೆಯ ಸಂಪ್ರದಾಯವನ್ನು ಹಾಳು ಮಾಡುತ್ತಿದೆ ಎಂದು ಅರ್ಚಕರು ವಿರೋಧ ವ್ಯಕ್ತಪಡಿಸಿದ್ದಾರೆ.

    ಕೇದಾರನಾಥ ದೇವಾಲಯದ ಗರ್ಭಗುಡಿಯಲ್ಲಿ ಗೋಡೆಯ ನಾಲ್ಕೂ ಬದಿಗಳಲ್ಲಿ ಬೆಳ್ಳಿಯ ತಟ್ಟೆಗಳಿಂದ ಮುಚ್ಚಲಾಗಿದೆ. ಇದೀಗ ಚಿನ್ನದ ಲೇಪವನ್ನು ಅಳವಡಿಸಲು ಈ ಬೆಳ್ಳಿಯ ತಟ್ಟೆಗಳನ್ನು ತೆಗೆಯಬೇಕಾಗುತ್ತದೆ. ಚಿನ್ನದ ಲೇಪವನ್ನು ಹಾಕುವ ಪ್ರಕ್ರಿಯೆಯಲ್ಲಿ ದೊಡ್ಡ ಕೊರೆಯುವ ಯಂತ್ರಗಳನ್ನು ಬಳಸಲಾಗುತ್ತದೆ. ಇವುಗಳಿಂದ ದೇವಾಲಯದ ಗೋಡೆಗೆ ಹಾನಿಯಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಮಹಾರಾಷ್ಟ್ರದ ಶಿವಭಕ್ತರೊಬ್ಬರು ದೇವಾಲಯದ ಗರ್ಭಗುಡಿಯ ಗೋಡೆಗೆ ಚಿನ್ನದ ಲೇಪಕ್ಕೆ ಚಿನ್ನವನ್ನು ಅರ್ಪಣೆ ಮಾಡಿದ್ದಾರೆ. ಈ ಪ್ರಸ್ತಾಪವನ್ನು ಬದರಿನಾಥ್-ಕೇದಾರನಾಥ ದೇವಾಲಯ ಸಮಿತಿ ರಾಜ್ಯ ಸರ್ಕಾರದ ಅನುಮತಿಯೊಂದಿಗೆ ಅಂಗೀಕರಿಸಿದ್ದು, ದೇವಾಲಯದ ಗೋಡೆಗೆ ಚಿನ್ನದ ಲೇಪ ಮಾಡಲಾಗುತ್ತಿದೆ. ಇದನ್ನೂ ಓದಿ: ಬ್ಯಾಂಕುಗಳಿಗೆ ಸ್ಥಳೀಯ ಭಾಷಿಕರನ್ನೇ ನೇಮಿಸಿ- ನಿರ್ಮಲಾ ಸೀತಾರಾಮನ್ ಸಲಹೆ

    ಆದರೆ ಈ ಚಿನ್ನದ ಲೇಪದಿಂದ ದೇವಾಲಯದ ಗೋಡೆಗೆ ಹಾನಿಯಾಗುತ್ತಿದೆ. ಈ ಉದ್ದೇಶಕ್ಕಾಗಿ ದೊಡ್ಡ ಡ್ರಿಲ್ಲಿಂಗ್ ಯಂತ್ರಗಳನ್ನು ಬಳಸಲಾಗುತ್ತಿದೆ. ದೇವಾಲಯದ ಶತಮಾನಗಳ ಹಳೆಯ ಸಂಪ್ರದಾಯವನ್ನು ಈ ರೀತಿಯಾಗಿ ಹಾಳು ಮಾಡುವುದನ್ನು ನಾವು ಸಹಿಸುವುದಿಲ್ಲ ಎಂದು ಯಾತ್ರಾರ್ಥಿ ಸಂತೋಷ್ ತ್ರಿವೇದಿ ಕೇದಾರನಾಥದಲ್ಲಿ ಹೇಳಿದ್ದಾರೆ.

    ಗರ್ಭಗುಡಿಯ ಜೀರ್ಣೋದ್ಧಾರ ಕಾರ್ಯಕ್ಕೆ ಕೆಲ ಅರ್ಚಕರು ಮಾತ್ರವೇ ವಿರೋಧ ವ್ಯಕ್ತಪಡಿಸಿದ್ದು, ಕೆಲ ಹಿರಿಯ ಅರ್ಚಕರು ಈ ನಿರ್ಧಾರಕ್ಕೆ ಒಲವು ತೋರಿದ್ದಾರೆ. ಇದರಿಂದಾಗಿ ಕೇದಾರನಾಥದ ಅರ್ಚಕರಲ್ಲಿ ಭಿನ್ನಾಭಿಪ್ರಾಯ ಮೂಡಿದೆ ಎನ್ನಲಾಗದೆ. ಇದನ್ನೂ ಓದಿ: ಪ್ರಧಾನಿ ಮೋದಿ ಹುಟ್ಟುಹಬ್ಬಕ್ಕೆ ದೇಹದಾನ ಮಾಡಿ ಸಾರ್ಥಕತೆ ಮೆರೆದ ಅಭಿಮಾನಿ ಶಿಲ್ಪಾ

    ಈ ಬಗ್ಗೆ ಮಾತನಾಡಿದ ಹಿರಿಯ ಅರ್ಚಕ ಶ್ರೀನಿವಾಸ್ ಪೋಸ್ತಿ ಹಾಗೂ ಕೇದಾರಸಭಾ ಮಾಜಿ ಅಧ್ಯಕ್ಷ ಮಹೇಶ್ ಬಗ್ವಾಡಿ, ದೇವಾಲಯವು ಸನಾತನ ನಂಬಿಕೆಯ ಪ್ರಮುಖ ಕೇಂದ್ರವಾಗಿದೆ. ಅದರ ಗೋಡೆಗಳಿಗೆ ಚಿನ್ನದ ಲೇಪವನ್ನು ಅಳವಡಿಸುತ್ತಿರುವುದು ಹಿಂದೂ ನಂಬಿಕೆ ಹಾಗೂ ಸಂಪ್ರದಾಯಗಳಿಗೆ ಅನುಗುಣವಾಗಿದೆ ಎಂದು ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಕೇದಾರದಿಂದ ಬೆಳಗಾವಿಗೆ ಲಕ್ಷ್ಮೀ ಹೆಬ್ಬಾಳ್ಕರ್‌ಗೆ ಆಶೀರ್ವಾದ ಮಾಡಲು ಬಂದಿದ್ದೇನೆ: ಕೇದಾರ ಪೀಠದ ಜಗದ್ಗುರು

    ಕೇದಾರದಿಂದ ಬೆಳಗಾವಿಗೆ ಲಕ್ಷ್ಮೀ ಹೆಬ್ಬಾಳ್ಕರ್‌ಗೆ ಆಶೀರ್ವಾದ ಮಾಡಲು ಬಂದಿದ್ದೇನೆ: ಕೇದಾರ ಪೀಠದ ಜಗದ್ಗುರು

    ಬೆಳಗಾವಿ: ಕೇದಾರದಿಂದ ಕರ್ನಾಟಕದ ಬೆಳಗಾವಿವರೆಗೂ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಆಶೀರ್ವಾದ ಮಾಡಲು ಬಂದಿದ್ದೇನೆ ಎಂದು ಕೇದಾರ ಪೀಠದ ಜಗದ್ಗುರು ಭೀಮಾಶಂಕರಲಿಂಗ ಶಿವಾಚಾರ್ಯ ಸ್ವಾಮೀಜಿ ಹೇಳಿಕೆ ಕೊಟ್ಟಿದ್ದಾರೆ.

    ಕೇದಾರ ಪೀಠದ ಜಗದ್ಗುರು ಭೀಮಾಶಂಕರಲಿಂಗ ಶಿವಾಚಾರ್ಯ ಸ್ವಾಮೀಜಿ ಅವರು ಮಾಧ್ಯಮಗಳೊಂದಿಗೆ ಮಾತನಾಡಿದ್ದು, ಕೇದಾರದಿಂದ ಕರ್ನಾಟಕದ ಬೆಳಗಾವಿಗೆ ಲಕ್ಷ್ಮೀ ಹೆಬ್ಬಾಳ್ಕರ್ ಮನೆಗೆ ಬಂದಿದ್ದೇವೆ. ಕೇದಾರನಾಥ ಕಳಿಸಿಕೊಟ್ಟಿದ್ದಕ್ಕೆ ನಾವು ಬಂದಿದ್ದೇವೆ. ನಾಲ್ಕು ತಿಂಗಳ ಕಾಲ ನಾವು ಕೇದಾರನಾಥದಲ್ಲೇ ಇರಬೇಕಾಗುತ್ತದೆ. ಆನಂತರ ಆರು ತಿಂಗಳು ನಿಯೋಜಿತ ಕಾರ್ಯಕ್ರಮಗಳಾಗುತ್ತವೆ ಎಂದು ತಿಳಿಸಿದ್ದಾರೆ.

    ಕೇದಾರನಾಥ ನಮಗೆ ಇಲ್ಲಿ ಕಳಿಸಿದ್ದಾನೆ ಇದೇ ಮುಖ್ಯ ಉದ್ದೇಶ. ರಾಜಕೀಯ ಭವಿಷ್ಯ ಹೇಳುವವರು ರಾಜಗುರುಗಳು. ಧರ್ಮದ ಭವಿಷ್ಯ ಹೇಳುವವರು ನಾವು ಧರ್ಮಗುರುಗಳು. ರಾಜ್ಯದಲ್ಲಿ ಮಾತನಾಡೋದು ಆ ರಾಜ್ಯಗಳಿಗೆ ಬಿಟ್ಟಿದೆ. ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಅಂತ್ಯದವರೆಗೆ ಒಳ್ಳೆಯದಾಗಲಿ ಎಂದು ಆಶೀರ್ವಾದ ಮಾಡ್ತೇವೆ ಎಂದು ವಿವರಿಸಿದ್ದಾರೆ. ಇದನ್ನೂ ಓದಿ: ಲಕ್ಕಿಡಿಪ್‍ನಲ್ಲಿ ಗೆದ್ದರೂ, ಸೋತರೂ ಅಳುತ್ತೇನೆ ನಾನ್ಯಾರು ಬಲ್ಲಿರಾ!? – ನಾನೇ ಲಕ್ಕಿಡಿಪ್ ಸಿಎಂ ಹೆಚ್‍ಡಿಕೆ: ಬಿಜೆಪಿ

    ರಾಯಚೂರು ಜಿಲ್ಲೆಯಲ್ಲಿ ಮಹಾಪೂಜೆ ಮುಗಿಸಿ, ತುಮಕೂರು, ಚಿತ್ರದುರ್ಗದಲ್ಲಿ ಕಾರ್ಯಕ್ರಮವಿದೆ. ಬೆಳಗಾವಿ ಜಿಲ್ಲೆಯ ಮುತ್ನಾಳ ಮಠಕ್ಕೆ ಬರಬೇಕು ಎಂದು ಹಠ ಹಿಡಿದಿದ್ರು. ಭಕ್ತರ ಮನೆಗೆ ಕರೆದುಕೊಂಡು ಹೋಗಬೇಕು ಎಂದು ಹಠ ಹಿಡಿದಿದ್ರು. ಲಕ್ಷ್ಮೀ ಹೆಬ್ಬಾಳ್ಕರ್ ಭಕ್ತಿಯಿಂದ ತಮ್ಮನ್ನು ತಾವು ಅರ್ಪಣೆ ಮಾಡಿಕೊಂಡಿದ್ದಾರೆ ಎಂದು ತಿಳಿಸಿದರು.

    [brid partner=56869869 player=32851 video=960834 autoplay=true]

  • ಇನ್ಮುಂದೆ ಕೇದಾರನಾಥ ರಸ್ತೆ ಮಾರ್ಗದಲ್ಲೂ ಮೊಬೈಲ್, ಇಂಟರ್‌ನೆಟ್ ಸೇವೆ ಲಭ್ಯ

    ಇನ್ಮುಂದೆ ಕೇದಾರನಾಥ ರಸ್ತೆ ಮಾರ್ಗದಲ್ಲೂ ಮೊಬೈಲ್, ಇಂಟರ್‌ನೆಟ್ ಸೇವೆ ಲಭ್ಯ

    ಡೆಹ್ರಾಡೂನ್: ಕೇದಾರನಾಥ ಯಾತ್ರಾರ್ಥಿಗಳಿಗೆ ರಿಲಯನ್ಸ್ ಜಿಯೋ ಗುಡ್ ನ್ಯೂಸ್ ನೀಡಿದೆ. ಗೌರಿಕುಂಡ ಮತ್ತು ಕೇದಾರನಾಥ ನಡುವಿನ ಮಾರ್ಗದಲ್ಲಿ ಮೊಬೈಲ್ ಹಾಗೂ ಡೇಟಾ ಸೇವೆಗಳನ್ನು ಒದಗಿಸಲು ರಿಲಯನ್ಸ್ ಜಿಯೋ ಮುಂದಾಗಿದೆ.

    ರಿಲಯನ್ಸ್ ಜಿಯೋ ಗೌರಿಕುಂಡ ಮತ್ತು ಕೇದಾರನಾಥ ನಡುವಿನ ಮಾರ್ಗದಲ್ಲಿ ಮೊಬೈಲ್ ಮತ್ತು ಡೇಟಾ ಸೇವೆಗಳನ್ನು ಒದಗಿಸುತ್ತಿರುವ ಮೊದಲ ಟೆಲಿಕಾಂ ಆಪರೇಟರ್ ಆಗಿದೆ ಎಂದು ಕಂಪನಿಯು ತಿಳಿಸಿದೆ. ಇದನ್ನೂ ಓದಿ: ವೇದಿಕೆ ಮೇಲೆ ಹಾಡು ಹೇಳುತ್ತಾ ಪ್ರಾಣಬಿಟ್ಟ ಮಲಯಾಳಂ ಗಾಯಕ

    ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿ ಸ್ಥಗಿತಗೊಂಡಿದ್ದ ಚಾರ್ ಧಾಮ್ ಯಾತ್ರೆ ಎರಡು ವರ್ಷಗಳ ಬಳಿಕ ಪುನರಾರಂಭಗೊಂಡಿದೆ. ಈ ವರ್ಷ ಹಿಮಾಲಯದ ಪುಣ್ಯಕ್ಷೇತ್ರಗಳಿಗೆ ಯಾತ್ರಾರ್ಥಿಗಳು ಭಾರೀ ಸಂಖ್ಯೆಯಲ್ಲಿ ಭೇಟಿ ನೀಡುತ್ತಿದ್ದಾರೆ ಎನ್ನಲಾಗಿದೆ.

    ಗೌರಿಕುಂಡ ಮತ್ತು ಕೇದಾರನಾಥ ನಡುವೆ ಐದು ಟವರ್‌ಗಳನ್ನು ಸ್ಥಾಪಿಸುವ ಯೋಜನೆಗೆ ಅನುಗುಣವಾಗಿ ಸೋನ್‍ಪ್ರಯಾಗದಲ್ಲಿ ದೊಡ್ಡ ಟವರ್ ಸ್ಥಾಪಿಸಲಾಗಿದೆ ಎಂದು ರಿಲಯನ್ಸ್ ಜಿಯೋ ಸಂಸ್ಥೆ ಹೇಳಿದೆ. ಇದನ್ನೂ ಓದಿ: ನಾವು ಬೇರೆ ಭಾಷೆಯನ್ನು ಇಂಪ್ರೆಸ್ ಮಾಡೋದು ಬೇಕಿಲ್ಲ: ಸುದೀಪ್

    ಛೋಟಿ ಲಿಂಚೋಲಿ, ಲಿಂಚೋಲಿ ಮತ್ತು ರುದ್ರಪಾಯಿಂಟ್‍ನಲ್ಲಿ ಮೂರು ಟವರ್‌ಗಳನ್ನು ಈಗಾಗಲೇ ಸ್ಥಾಪಿಸಲಾಗಿದೆ ಮತ್ತು ಉಳಿದ ಎರಡನ್ನು ಶೀಘ್ರದಲ್ಲೇ ನಿರ್ಮಿಸಲಾಗುತ್ತದೆ. ಮುನ್ನೆಚ್ಚರಿಕೆ ಕ್ರಮವಾಗಿ ಮಾರ್ಗದಲ್ಲಿ ಯಾತ್ರಾರ್ಥಿಗಳಿಗೆ ತಡೆರಹಿತ ಸಂಪರ್ಕಕ್ಕಾಗಿ ಮೊಬೈಲ್ ನೆಟ್‍ವರ್ಕ್‍ಗೆ ಫೈಬರ್ ಲಿಂಕ್ ನೀಡಲಾಗಿದೆ ಎಂದು ತಿಳಿಸಿದೆ.

  • ಭಾರೀ ಮಳೆಯಿಂದಾಗಿ ಕೇದಾರನಾಥ ಯಾತ್ರೆ ಸ್ಥಗಿತ

    ಭಾರೀ ಮಳೆಯಿಂದಾಗಿ ಕೇದಾರನಾಥ ಯಾತ್ರೆ ಸ್ಥಗಿತ

    ಡೆಹರಾಡೂನ್: ಭಾರೀ ಮಳೆಯಿಂದಾಗಿ ಕೇದಾರನಾಥ ಯಾತ್ರೆ ಸ್ಥಗಿತಗೊಳಿಸಲಾಗಿದ್ದು, ದೇಗುಲಕ್ಕೆ ತೆರಳುವ ಭಕ್ತರು ಗೌರಿಕುಂಡ್ ಮತ್ತು ಕೇದಾರನಾಥ ನಡುವೆ ವಿವಿಧ ಸ್ಥಳಗಳಲ್ಲಿ ಸ್ಥಗಿತಗೊಂಡಿರುವ ಘಟನೆ ನಡೆದಿದೆ.

    ಕೇದಾರನಾಥದಲ್ಲಿ ಮಳೆ ಹಾಗೂ ಹಿಮಪಾತ ಅಧಿಕವಾಗುತ್ತಿದೆ. ಇದರಿಂದಾಗಿ ಯಾತ್ರೆಯ ಜೊತೆಗೆ ಫಾಟಾ ಮತ್ತು ಗೌರಿಕುಂಡ್‍ನಿಂದ ಹೆಲಿಕಾಪ್ಟರ್ ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

    2013ರ ಕೇದಾರನಾಥ ಪ್ರಳಯದ ದುರಂತದ ಹಿನ್ನೆಲೆಯಲ್ಲಿ ಜಾಗೃತರಾಗಿರುವ ರುದ್ರಪ್ರಯಾಗ ಜಿಲ್ಲಾಡಳಿತವು ಯಾತ್ರಾರ್ಥಿಗಳಿಗೆ ಹವಾಮಾನ ಸುಧಾರಿಸುವವರೆಗೆ ಆಯಾ ನಿಲ್ದಾಣಗಳಲ್ಲಿ ಇರುವಂತೆ ಮನವಿ ಮಾಡಿದ್ದಾರೆ. ಕೇದಾರನಾಥದಲ್ಲಿರುವ ಶಿವನ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ಜನರನ್ನು ಹಿಂದಿರುಗುವ ಪ್ರಯಾಣವನ್ನು ನಿಲ್ಲಿಸಲಾಗಿದೆ ಎಂದು ರುದ್ರಪ್ರಯಾಗ ಜಿಲ್ಲಾಧಿಕಾರಿ ಮಾಹಿತಿ ನೀಡಿದರು. ಇದನ್ನೂ ಓದಿ: ವಂದೇ ಮಾತರಂಗೂ ರಾಷ್ಟ್ರಗೀತೆಯಷ್ಟೇ ಗೌರವ ಕೋಡಿ – ದೆಹಲಿ ಹೈಕೋರ್ಟ್‌ಗೆ ಪಿಐಎಲ್

    ಗೌರಿಕುಂಡ್‍ನ ಮೂಲ ಶಿಬಿರದಿಂದ ಕೇದಾರನಾಥಕ್ಕೆ ತೆರಳಲು ಸಿದ್ಧರಾಗಿರುವ ಜನರನ್ನು ದೇಗುಲಕ್ಕೆ ಮುಂದಿನ ಪ್ರಯಾಣವನ್ನು ಕೈಗೊಳ್ಳುವುದನ್ನು ತಡೆಯಲಾಯಿತು. ಯಾವುದೇ ಅಹಿತಕರ ಘಟನೆ ನಡೆಯದಂತೆ ಜಿಲ್ಲಾಡಳಿತ ಎಲ್ಲ ರೀತಿಯ ಮುನ್ನೆಚ್ಚರಿಕೆ ವಹಿಸುತ್ತಿದೆ ಎಂದರು. ಇದನ್ನೂ ಓದಿ: ಕುತುಬ್ ಮಿನಾರ್ ಬಳಿ ಪೂಜೆ ಮಾಡುವ ಹಕ್ಕು ಯಾರಿಗೂ ಇಲ್ಲ – ASI ಖಡಕ್ ಉತ್ತರ

  • ಸಾಕು ನಾಯಿಯನ್ನು ಕೇದಾರನಾಥಕ್ಕೆ ಕರೆದೊಯ್ದಿದ್ದ ವ್ಯಕ್ತಿಯ ವಿರುದ್ಧ ಎಫ್‍ಐಆರ್

    ಸಾಕು ನಾಯಿಯನ್ನು ಕೇದಾರನಾಥಕ್ಕೆ ಕರೆದೊಯ್ದಿದ್ದ ವ್ಯಕ್ತಿಯ ವಿರುದ್ಧ ಎಫ್‍ಐಆರ್

    ಡೆಹ್ರಾಡೂನ್: ಕೇದಾರನಾಥ ದೇಗುಲದಲ್ಲಿರುವ ವಿಗ್ರಹವನ್ನು ನಾಯಿಯಿಂದ ಸ್ಪರ್ಶಿಸುವ ಮೂಲಕ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದ ಮೇಲೆ ನೋಯ್ಡಾದ ವ್ಯಕ್ತಿಯ ವಿರುದ್ಧ ದೇಗುಲ ಸಮಿತಿ ಎಫ್‍ಐಆರ್ ದಾಖಲಿಸಿದೆ.

    ನೋಯ್ಡಾದ ವಿಕಾಶ್ ತ್ಯಾಗಿ ಅವರು ಸಾಕಿದ ಹಸ್ಕಿ ಎನ್ನುವ ನಾಯಿಯು ದೇವಾಲಯವನ್ನು ಪ್ರವೇಶಿಸಿತ್ತು. ವಿಕಾಶ್ ತ್ಯಾಗಿ ಅವರು ಚಾರ್‍ಧಾಮ್ ಯಾತ್ರೆಯ ಸಮಯದಲ್ಲಿ ತಮ್ಮ ಮುದ್ದಿನ ನಾಯಿ ಹಸ್ಕಿಯನ್ನು ಕಳೆದ 4 ವರ್ಷಗಳಿಂದ ಪವಿತ್ರ ದೇವಸ್ಥಾನಗಳಿಗೆ ಕರೆದುಕೊಂಡು ಹೋಗುತ್ತಿದ್ದರು.

    ಅಷ್ಟೇ ಅಲ್ಲದೇ ದೇವಸ್ಥಾನದ ಹೊರಗಿರುವ ನಂದಿ ವಿಗ್ರಹವನ್ನು ಅದರ ಕಾಲುಗಳಿಂದ ಸ್ಪರ್ಶಿಸಿದ್ದಾರೆ. ಈ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿಕೊಂಡಿದ್ದರು. ಆದರೆ ಘಟನೆಯ ಬಗ್ಗೆ ಬದರಿನಾಥ-ಕೇದಾರನಾಥ ದೇವಾಲಯ ಸಮಿತಿ ಆಕ್ರೋಶ ವ್ಯಕ್ತಪಡಿಸಿದೆ. ಇದನ್ನೂ ಓದಿ: ಮದ್ವೆಯಾಗಲೆಂದು ಹುಡುಗಿ ನೋಡ್ಕೊಂಡು ಬರಲು ಹೋದ ಯುವಕ ನೀರುಪಾಲು

    ಇದು ವಿವಾದವಾಗುತ್ತಿದ್ದಂತೆ ತ್ಯಾಗಿ ಹಸ್ಕಿ ಎಂಬ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಬದರಿನಾಥ್ ಮತ್ತು ತುಂಗನಾಥದಲ್ಲಿ ತಮ್ಮ ನಾಯಿಯ ಹಳೆಯ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಆ ವೀಡಿಯೋದಲ್ಲಿ ಹಸ್ಕಿಗೆ ಕೇದಾರನಾಥ ದೇಗುಲದಲ್ಲಿ ಅಲ್ಲಿನ ಅರ್ಚಕರೊಬ್ಬರು ತಿಲಕವನ್ನು ಇಟ್ಟಿದ್ದಾರೆ. ಅಷ್ಟೇ ಅಲ್ಲದೇ ದೇವಾಲಯ ಕಮಿಟಿ ವಿರುದ್ಧ ಕಿಡಿಕಾರಿದ್ದಾರೆ.

    ಇನ್‍ಸ್ಟಾಗ್ರಾಮ್‍ನಲ್ಲಿ ಏನಿದೆ?:
    ನಾನು ಹಸ್ಕಿ ಮತ್ತು ನನಗೆ ಈಗ 4.5 ವರ್ಷ ಎಂಬ ಶೀರ್ಷಿಕೆಯೊಂದಿಗೆ ವೀಡಿಯೋವನ್ನು ಅಪ್‍ಲೋಡ್ ಮಾಡಲಾಗಿದೆ. ನಾನು 4 ವರ್ಷಗಳಲ್ಲಿ ಪ್ರಯಾಣಿಸಿದಷ್ಟು, 70 ವರ್ಷ ವಯಸ್ಸಿನ ವ್ಯಕ್ತಿಗೆ ಪ್ರಯಾಣಿಸಲು ಸಾಧ್ಯವಾಗುವುದಿಲ್ಲ ಎಂದು ನಾನು ಹೆಮ್ಮೆಯಿಂದ ಹೇಳಬಲ್ಲೆ. ಏಕೆಂದರೆ ನನ್ನ ಪೋಷಕರು ನನ್ನನ್ನು ಎಲ್ಲೆಡೆ ಕರೆದುಕೊಂಡು ಹೋಗುತ್ತಾರೆ.

    ನನ್ನ ತಂದೆ ತಾಯಿಯರು ನನ್ನನ್ನು ತಮ್ಮೊಂದಿಗೆ ಕರೆದುಕೊಂಡು ಹೋಗಿ ಸಮಸ್ಯೆಗಳನ್ನು ಎದುರಿಸುವುದಿಲ್ಲ ಎಂದಲ್ಲ. ಆದರೆ ನನ್ನ ಹೆತ್ತವರು ಆ ಸಮಸ್ಯೆಯೊಂದಿಗೆ ಹೋರಾಡುತ್ತಾರೆ. ಆದರೆ ಯಾವಾಗಲೂ ನನ್ನನ್ನು ಕರೆದುಕೊಂಡು ಹೋಗುತ್ತಾರೆ ಎಂದು ಹಸ್ಕಿಯೇ ಹೇಳಿರುವ ರೀತಿಯಲ್ಲಿ ಶೀರ್ಷಿಕೆಯನ್ನು ಹಾಕಿದ್ದಾರೆ. ಇದನ್ನೂ ಓದಿ: ಚಾರ್ ಧಾಮ್ ಯಾತ್ರೆ – ಇಲ್ಲಿ ವರೆಗೆ 46 ಯಾತ್ರಿಕರು ಹೃದಯಾಘಾತದಿಂದ ಸಾವು

    ಈ ಬಗ್ಗೆ ಮಾತನಾಡಿದ ಬದರಿನಾಥ್ ಕೆದರನಾಥ್ ಸಮಿತಿಯ ಅಧ್ಯಕ್ಷ ಅಜೇಂದ್ರ ಅಜಯ್ ಮಾತನಾಡಿ, ಕೋಟಿಗಟ್ಟಲೆ ಜನರು ಬಾಬಾ ಕೇದಾರನಾಥದಲ್ಲಿ ನಂಬಿಕೆ ಹೊಂದಿದ್ದಾರೆ. ಯೂಟ್ಯೂಬರ್ ವಿಕಾಶ್ ತ್ಯಾಗಿಯ ಇಂತಹ ಚಟುವಟಿಕೆಗಳಿಂದ ಅನೇಕರ ಭಾವನೆಗಳಿಗೆ ಘಾಸಿಯಾಗಿದೆ. ಈ ಜನರಿಗೆ ಯಾವುದೇ ಭಕ್ತಿ ಇಲ್ಲ, ಅವರು ಹಿನ್ನೆಲೆಯಲ್ಲಿ ಬಾಲಿವುಡ್ ಹಾಡುಗಳನ್ನು ಪ್ಲೇ ಮಾಡುವ ರೀಲ್‍ಗಳು ಮತ್ತು ವೀಡಿಯೋಗಳನ್ನು ಚಿತ್ರೀಕರಿಸಲು ಮಾತ್ರ ಇಲ್ಲಿಗೆ ಬರುತ್ತಾರೆ. ಬಾಬಾ ಕೇದಾರನಾಥನ ಆಶೀರ್ವಾದ ಪಡೆಯಲು ಬರುವ ಯಾತ್ರಾರ್ಥಿಗಳಿಗೆ ಇದು ಅಡ್ಡಿಯಾಗುತ್ತದೆ ಎಂದು ವಾಗ್ದಾಳಿ ನಡೆಸಿದರು.

  • ಪತ್ನಿ ಜೊತೆ ಕೇದಾರನಾಥ ದೇವಾಲಯಕ್ಕೆ ಭೇಟಿ ನೀಡಿದ ಡಿಕೆಶಿ

    ಪತ್ನಿ ಜೊತೆ ಕೇದಾರನಾಥ ದೇವಾಲಯಕ್ಕೆ ಭೇಟಿ ನೀಡಿದ ಡಿಕೆಶಿ

    ಬೆಂಗಳೂರು: ಉತ್ತರಾಖಂಡದ ಜಗತ್ಪ್ರಸಿದ್ಧ ಕೇದಾರನಾಥ ದೇಗುಲಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಪತ್ನಿ ಉಷಾ ಅವರ ಜತೆ ಸೋಮವಾರ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ.

    ರಾಜ್ಯದಲ್ಲಿ ಪಕ್ಷ ಸಂಘಟನೆ ಮಾಡುತ್ತಿರುವ ಡಿಕೆ ಶಿವಕುಮಾರ್ ಈ ತಿಂಗಳಿನಲ್ಲಿ ತೀರ್ಥಯಾತ್ರೆ ಕೈಗೊಂಡಿದ್ದಾರೆ. ಮೇ 13, 14, 15 ರಾಜಸ್ಥಾನದ ಉದಯಪುರದಲ್ಲಿ ನಡೆದ ಕಾಂಗ್ರೆಸ್ ಚಿಂತಕರ ಸಭೆಯಲ್ಲಿ ಡಿಕೆಶಿ ಪಾಲ್ಗೊಂಡಿದ್ದರು. ಇದನ್ನೂ ಓದಿ: ಜ್ಞಾನವಾಪಿ ಮಸೀದಿಯಲ್ಲಿ ಶಿವಲಿಂಗ, ನಂದಿ ವಿಗ್ರಹ ಪತ್ತೆ

    ಪಕ್ಷದ ಕಾರ್ಯಕ್ರಮ ಮುಗಿದ ಬಳಿಕ ಡಿಕೆಶಿ ಉತ್ತರಾಖಂಡದಲ್ಲಿರುವ ಪವಿತ್ರ ದೇವಸ್ಥಾನಗಳಿಗೆ ಭೇಟಿ ನೀಡಲಿದ್ದಾರೆ. ಬದರೀನಾಥ, ಹರಿದ್ವಾರಕ್ಕೆ ಡಿಕೆ ಶಿವಕುಮಾರ್ ತೆರಳಲಿದ್ದು, ಎರಡು ದಿನ ಪ್ರವಾಸ ಕೈಗೊಂಡ ಬಳಿಕ ಅವರು ಕರ್ನಾಟಕಕ್ಕೆ ಮರಳಲಿದ್ದಾರೆ. ಇದನ್ನೂ ಓದಿ: ಬೆಳಗಾವಿಯಲ್ಲಿ ಐಟಿ ಪಾರ್ಕ್ ಸ್ಥಾಪನೆಗೆ ಪರಿಸರವಾದಿಗಳ ತೀವ್ರ ವಿರೋಧ

  • ತೀರ್ಥಯಾತ್ರೆ ಕೈಗೊಳ್ಳಲಿದ್ದಾರೆ ಡಿಕೆಶಿ

    ತೀರ್ಥಯಾತ್ರೆ ಕೈಗೊಳ್ಳಲಿದ್ದಾರೆ ಡಿಕೆಶಿ

    ಬೆಂಗಳೂರು: ರಾಜ್ಯದಲ್ಲಿ ಪಕ್ಷ ಸಂಘಟನೆ ಮಾಡುತ್ತಿರುವ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ ಈ ತಿಂಗಳಿನಲ್ಲಿ ತೀರ್ಥಯಾತ್ರೆ ಕೈಗೊಳ್ಳಲಿದ್ದಾರೆ.

    ಮೇ 13,14, 15 ರಾಜಸ್ಥಾನದ ಉದಯಪುರದಲ್ಲಿ ಕಾಂಗ್ರೆಸ್‌ ಚಿಂತಕರ ಸಭೆಯನ್ನು ಆಯೋಜಿಸಲಾಗಿದೆ. ಈ ಸಭೆಯಲ್ಲಿ ಭಾಗಿಯಾಗಲಿರುವ ಡಿಕೆಶಿ ಕಾರ್ಯಕ್ರಮ ಮುಗಿದ ಬಳಿಕ ತೀರ್ಥಯಾತ್ರೆ ಕೈಗೊಳ್ಳಲಿದ್ದಾರೆ. ಇದನ್ನೂ ಓದಿ: ನನ್ನನ್ನು ತಿಹಾರ್ ಜೈಲಿಗಾದ್ರೂ ಹಾಕಲಿ, ಪರಪ್ಪನ ಅಗ್ರಹಾರ ಜೈಲಿಗಾದ್ರೂ ಹಾಕಲಿ ಹೆದರಲ್ಲ: ಡಿಕೆಶಿ

    ಉತ್ತರಾಖಂಡದಲ್ಲಿರುವ ಪವಿತ್ರ ದೇವಸ್ಥಾನಗಳಾದ ಕೇದರಾನಾಥ, ಬದರೀನಾಥ, ಹರಿದ್ವಾರಕ್ಕೆ ಡಿಕೆ ಶಿವಕುಮಾರ್‌ ತೆರಳಲಿದ್ದಾರೆ. ಎರಡು ದಿನ ಪ್ರವಾಸ ಕೈಗೊಂಡ ಬಳಿಕ ಡಿಕೆಶಿ ಕರ್ನಾಟಕಕ್ಕೆ ಮರಳಲಿದ್ದಾರೆ.

  • ‘ಸುಶಾಂತ್ ಸ್ಟಾರ್ ಅಲ್ಲ’ ಎಂದು ಸಿನಿಮಾ ಮಾಡಲು ನಿರ್ಮಾಪಕರು ಮುಂದೆ ಬಂದಿರಲಿಲ್ಲ: ಅಭಿಷೇಕ್ ಕಪೂರ್

    ‘ಸುಶಾಂತ್ ಸ್ಟಾರ್ ಅಲ್ಲ’ ಎಂದು ಸಿನಿಮಾ ಮಾಡಲು ನಿರ್ಮಾಪಕರು ಮುಂದೆ ಬಂದಿರಲಿಲ್ಲ: ಅಭಿಷೇಕ್ ಕಪೂರ್

    ಮುಂಬೈ: ‘ಸುಶಾಂತ್ ಸ್ಟಾರ್ ಅಲ್ಲ’ ಎಂದು ಸಿನಿಮಾ ಮಾಡಲು ನಿರ್ಮಾಪಕರು ಮುಂದೆ ಬಂದಿರಲಿಲ್ಲ ಎಂದು ನಿರ್ದೇಶಕ ಅಭಿಷೇಕ್ ಕಪೂರ್ ಸಂದರ್ಶನದಲ್ಲಿ ತಿಳಿಸಿದ್ದಾರೆ.

    ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಮತ್ತು ಸಾರಾ ಅಲಿ ಖಾನ್ ನಟಿಸಿದ್ದ ‘ಕೇದಾರನಾಥ್’ ಸಿನಿಮಾ ತೆರೆ ಮೇಲೆ ಬಂದು ಇತ್ತೀಚೆಗೆ ಮೂರು ವರ್ಷಗಳನ್ನು ಪೂರೈಸಿದೆ. ಈ ಹಿನ್ನೆಲೆ ಸಾರಾ ತನ್ನ ಕೋ-ಸ್ಟಾರ್ ಅನ್ನು ನೆನೆದು ಇನ್‍ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದರು. ಈ ಹಿನ್ನೆಲೆ ಸುಶಾಂತ್ ಬಗ್ಗೆ ‘ಕೇದಾರನಾಥ್’ ಸಿನಿಮಾದ ನಿರ್ದೇಶಕ ಅಭಿಷೇಕ್ ಕಪೂರ್ ಅವರು ಮಾಧ್ಯಮಗಳೊಂದಿಗೆ ಮಾತನಾಡಿದ್ದು, ಸುಶಾಂತ್ ಅವರನ್ನು ಇಂಡಸ್ಟ್ರಿಯಲ್ಲಿ ಹೇಗೆ ನೋಡುತ್ತಿದ್ದರು ಎಂಬುದನ್ನು ವಿವರಿಸಿದ್ದಾರೆ. ಇದನ್ನೂ ಓದಿ: ಕರೀನಾ, ಅಮೃತಾ ಅರೋರಾಗೆ ಕೊರೊನಾ ಪಾಸಿಟಿವ್

    ನಾನು ‘ಕೇದಾರನಾಥ್’ ಸಿನಿಮಾವನ್ನು ನಿರ್ದೇಶನ ಮಾಡುತ್ತಿರಬೇಕಾದರೆ ಯಾರು ಈ ಸಿನಿಮಾಗೆ ಹೂಡಿಕೆ ಮಾಡಲು ಬರುತ್ತಿರಲಿಲ್ಲ. ಎಲ್ಲರೂ ಸುಶಾಂತ್ ಸ್ಟಾರ್ ಅಲ್ಲ ಎಂದು ಎಷ್ಟೋ ಹೂಡಿಕೆದಾರರು ಸಿನಿಮಾಗೆ ದುಡ್ಡನ್ನು ಹಾಕಲು ಮುಂದೆ ಬಂದಿರಲಿಲ್ಲ. ಅದಕ್ಕೆ ಸುಶಾಂತ್ ಅವರೇ ತಮ್ಮ ಸ್ವಂತ ಹಣದಿಂದ ಈ ಚಿತ್ರವನ್ನು ಮಾಡಿದರು ಎಂದು ನೆನೆದರು.

    ಜೂನ್ 14 ರಂದು ಸುಶಾಂತ್ ಆತ್ಮಹತ್ಯೆ ಮಾಡಿಕೊಂಡ ನಂತರ ಅವರ ಬಗ್ಗೆ ತಿಳಿದುಕೊಂಡ ಜನರು, ಇಂದು ಅವರನ್ನು ಪ್ರತಿಭಾವಂತ ನಟ ಎಂದು ನೆನೆಪಿಸಿಕೊಳ್ಳುತ್ತಾರೆ. ಆದರೆ ಇದೇ ಪ್ರೀತಿ ಅವರು ಜೀವಂತವಾಗಿರುವಾಗ ಅಗತ್ಯವಿತ್ತು. ಆಗ ಯಾರು ಅವರ ಜೊತೆ ನಿಂತಿರಲಿಲ್ಲ. ಈಗ ಅವರ ಬಗ್ಗೆ ಮಾತನಾಡುವುದನ್ನು ಕೇಳಿದರೆ ವಿಚಿತ್ರವೆನಿಸುತ್ತೆ ಎಂದರು.

    ಸುಶಾಂತ್ ಸ್ಟಾರ್ ಅಲ್ಲ ಎಂದು ನಿರ್ಮಾಪಕರು ‘ಕೇದಾರನಾಥ’ ಸಿನಿಮಾಗೆ ಬಂಡವಾಳ ಹಾಕಲು ಯಾರು ಬಂದಿರಲಿಲ್ಲ. ಆಗ ಅವರೇ ಈ ಸಿನಿಮಾವನ್ನು ಮುಗಿಸಲೇ ಬೇಕು ಎಂದು ಛಲ ತೊಟ್ಟಿದ್ದರು. ಅದಕ್ಕೆ ಅವರ ಸ್ವಂತ ಜೇಬಿನಿಂದ ಹಣವನ್ನು ಹಾಕಿದ್ದರು. ನಾನು ಸಹ ಈ ಸಿನಿಮಾ ಮಾಡುವಾಗ ತುಂಬಾ ಒತ್ತಡದಲ್ಲಿದ್ದೆ. ಆದ್ದರಿಂದ ನಾನು ಚಿತ್ರ ಮಾಡಬೇಕಾಯಿತು. ಆದರೆ, ‘ಕೇದಾರನಾಥ’ ಸಿನಿಮಾ ಮಾಡುವಾಗ ಸುಶಾಂತ್ ನೋವು ಅನುಭವಿಸಿದ್ದು ನನಗೆ ಗೊತ್ತಿತ್ತು ಎಂದು ತಿಳಿಸಿದರು.

    ಸುಶಾಂತ್ ಸಾವನ್ನಪ್ಪಿದ ಸುದ್ದಿ ತಿಳಿದ ತಕ್ಷಣ ಇಡೀ ಜಗತ್ತೇ ಅವರ ಅಭಿಮಾನಿಯಾಗಿದೆ. ಅವರು ಬದುಕಿದ್ದಾಗ ಅವರನ್ನು ಯಾರು ಪ್ರೀತಿಸುತ್ತಾರೆ ಎಂದು ತಿಳಿಯಲು ಯಾರು ಬಿಡಲಿಲ್ಲ. ಆದರೆ ಅವರು ನಮ್ಮನ್ನು ಅಗಲಿದ ಮೇಲೆ ಎಲ್ಲರಿಗೂ ಗೊತ್ತಾಗಿದೆ. ಇದು ದುರಂತ ಎಂದು ಹೇಳಿದರು.

    ಸುಶಾಂತ್ ಅದ್ಭುತ ನಟ. ಅವರು ಎಂಜಿನಿಯರ್ ಆಗಿದ್ದು, ಖಗೋಳ ಭೌತಶಾಸ್ತ್ರ ಮತ್ತು ಕ್ವಾಂಟಮ್ ಭೌತಶಾಸ್ತ್ರದಲ್ಲಿ ಹೆಚ್ಚು ಆಸಕ್ತಿಯನ್ನು ಹೊಂದಿದ್ದರು. ತುಂಬಾ ಪ್ರತಿಭಾವಂತ ನಟ ಮಾತ್ರವಲ್ಲ, ವಿಜ್ಞಾನದ ಬಗ್ಗೆಯೂ ಹೆಚ್ಚು ಜ್ಞಾನವನ್ನು ಹೊಂದಿದ್ದರು. ಅದಕ್ಕೆ ಎಷ್ಟೂ ಜನರು ಸುಶಾಂತ್ ಅವರ ಕ್ರಾಫ್ಟ್ ಮತ್ತು ಸಿನಿಮಾದ ಮೇಲಿನ ಪ್ರೀತಿಯನ್ನು ನೋಡಿ ಅವರ ಅಭಿಮಾನಿಗಳಾಗಿದ್ದಾರೆ ಎಂದು ತಿಳಿಸಿದರು. ಇದನ್ನೂ ಓದಿ: ‘ಕಭಿ ಖುಷಿ ಕಭಿ ಗಮ್’ ಸೀನ್ ರೀ ಕ್ರಿಯೇಟ್ ಮಾಡಿದ ಆಲಿಯಾ-ರಣವೀರ್

    ಈ ಹಿಂದೆಯೂ ಮಾಧ್ಯಮಗಳಲ್ಲಿ ಮಾತನಾಡುತ್ತಾ, ನಿರ್ದೇಶಕರು ‘ಕೇದಾರನಾಥ್’ ಚಿತ್ರೀಕರಣದ ವೇಳೆ ಸುಶಾಂತ್ ತೊಂದರೆಯಾಗಿದ್ದ ಬಗ್ಗೆ ಬಹಿರಂಗಪಡಿಸಿದ್ದರು.