Tag: Kedarnath

  • ಕೇದಾರನಾಥ| ಏರ್‌ಲಿಫ್ಟ್ ವೇಳೆ ಹೆಲಿಕಾಪ್ಟರ್ ಪತನ – ಅಧಿಕಾರಿಗಳು ಹೇಳಿದ್ದೇನು?

    ಕೇದಾರನಾಥ| ಏರ್‌ಲಿಫ್ಟ್ ವೇಳೆ ಹೆಲಿಕಾಪ್ಟರ್ ಪತನ – ಅಧಿಕಾರಿಗಳು ಹೇಳಿದ್ದೇನು?

    ಡೆಹ್ರಾಡೂನ್: ಕೇದಾರನಾಥದಲ್ಲಿ (Kedarnath) ಏರ್‌‌ಲಿಫ್ಟ್ ವೇಳೆ ಸೇನೆಯ ಎಮ್‍ಐ-17 ಹೆಲಿಕಾಪ್ಟರ್‌ (MI-17 Helicopter) ನಿಯಂತ್ರಣ ಕಳೆದುಕೊಳ್ಳಲು ಆರಂಭಿಸಿದ ಕಾರಣ ಪೈಲಟ್ ಖಾಸಗಿ ಹೆಲಿಕಾಪ್ಟರ್ ಅನ್ನು ಬೀಳಿಸಬೇಕಾಯಿತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಕೇದಾರನಾಥನಲ್ಲಿ ಭಾರತೀಯ ವಾಯುಪಡೆಯ ಹೆಲಿಕಾಪ್ಟರ್ ಮೂಲಕ ತಾಂತ್ರಿಕ ದೋಷ ಹೊಂದಿದ್ದ ಹೆಲಿಕಾಪ್ಟರ್ ಏರ್‌ಲಿಫ್ಟ್ ಮಾಡುವ ವೇಳೆ ಪತನಗೊಂಡಿದ್ದಕ್ಕೆ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.

    ತಾಂತ್ರಿಕ ದೋಷದಿಂದ ಮೇ.24 ರಂದು ಕೇದಾರನಾಥದಲ್ಲಿ ತುರ್ತು ಭೂಸ್ಪರ್ಶ ಮಾಡಿದ್ದ ಖಾಸಗಿ ಹೆಲಿಕಾಪ್ಟರ್ ಬಳಕೆಯಾಗದೇ ಉಳಿದಿತ್ತು. ದುರಸ್ತಿಗಾಗಿ ಸೇನೆಯ ಎಮ್‍ಐ-17 ಹೆಲಿಕಾಪ್ಟರ್ ಸಹಾಯದಿಂದ ಅದನ್ನು ಗೌಚಾರ್‌ಗೆ ಕೊಂಡೊಯ್ಯಲು ತೀರ್ಮಾನಿಸಲಾಗಿತ್ತು.

    ಸೇನೆಯ ಹೆಲಿಕಾಪ್ಟರ್ ಸ್ವಲ್ಪ ದೂರ ಕ್ರಮಿಸಿದ ತಕ್ಷಣ, ಗಾಳಿಯ ಕಾರಣದಿಂದ ಸಮತೋಲನ ಕಳೆದುಕೊಳ್ಳಲು ಪ್ರಾರಂಭಿಸಿತು. ಅಪಾಯವನ್ನು ಗ್ರಹಿಸಿದ ಪೈಲಟ್ ಥಾರು ಕ್ಯಾಂಪ್ ಬಳಿ ಖಾಲಿ ಸ್ಥಳವನ್ನು ನೋಡಿ ಕಣಿವೆಯಲ್ಲಿ ಕೊಂಡೊಯ್ಯುತ್ತಿದ್ದ ಹೆಲಿಕಾಪ್ಟರ್‌ನ್ನು ಬೀಳಿಸಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಮೇ 24 ರಂದು ಖಾಸಗಿ ಹೆಲಿಕಾಪ್ಟರ್ ತುರ್ತು ಲ್ಯಾಂಡಿಂಗ್ ವೇಳೆ ಯಾತ್ರಾರ್ಥಿಗಳು ಸೇರಿದಂತೆ ಎಲ್ಲಾ 7 ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದರು.

  • ಏರ್‌ಲಿಫ್ಟ್‌ ವೇಳೆ  ಕೇದಾರನಾಥದಲ್ಲಿ ಹೆಲಿಕಾಪ್ಟರ್‌ ಪತನ

    ಏರ್‌ಲಿಫ್ಟ್‌ ವೇಳೆ ಕೇದಾರನಾಥದಲ್ಲಿ ಹೆಲಿಕಾಪ್ಟರ್‌ ಪತನ

    ಡೆಹ್ರಾಡೂನ್‌: ದುರಸ್ತಿಗಾಗಿ ಎತ್ತಿಕೊಂಡು ಸಾಗುತ್ತಿದ್ದಾಗ ಖಾಸಗಿ ಹೆಲಿಕಾಪ್ಟರ್‌ (Private Helicopter) ಪತನಗೊಂಡ ಘಟನೆ ಉತ್ತರಾಖಂಡದ ಕೇದಾರನಾಥದಲ್ಲಿ (Uttarakhand Kedarnath) ನಡೆದಿದೆ.

    ಈ ಹಿಂದೆ ಉತ್ತರಾಖಂಡದ ಕೇದಾರನಾಥ ಧಾಮದಲ್ಲಿ ಲ್ಯಾಂಡಿಂಗ್ ಸಮಯದಲ್ಲಿ ಹಾನಿಗೊಳಗಾದ ಹೆಲಿಕಾಪ್ಟರ್ ಅನ್ನು ವಾಯುಸೇನೆಯ MI-17 ಹೆಲಿಕಾಪ್ಟರ್‌ ಎತ್ತಿಕೊಂಡು ಸಾಗುತ್ತಿತ್ತು. ಈ ವೇಳೆ ಹೆಲಿಕಾಪ್ಟರ್‌ ಜಾರಿ ಬಿದ್ದು ಮಂದಾಕಿನಿ ನದಿಯ (Mandakini River) ಬಳಿ ಪತನಗೊಂಡಿದೆ.

    ಅಪಘಾತದಲ್ಲಿ ಯಾರಾದರೂ ಗಾಯಗೊಂಡಿದ್ದಾರೆಯೇ ಎಂಬುದು ತಕ್ಷಣ ತಿಳಿದು ಬಂದಿಲ್ಲ. ಹೆಲಿಕಾಪ್ಟರ್‌ ಪತನಗೊಳ್ಳುತ್ತಿರುವ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ.

    ಭಾರೀ ಮಳೆಯಿಂದಾಗಿ ಖಾಸಗಿ ಕಂಪನಿ ನಿರ್ವಹಿಸುತ್ತಿದ್ದ ಹೆಲಿಕಾಪ್ಟರ್‌ ಹಾಳಾಗಿತ್ತು. ಈ ಹೆಲಿಕಾಪ್ಟರ್‌ ಅನ್ನು ದುರಸ್ತಿಗಾಗಿ ವಾಯುಸೇನೆಯ ಹೆಲಿಕಾಪ್ಟರ್‌ ಮೂಲಕ ಏರ್‌ ಲಿಫ್ಟ್‌ ಮಾಡಿ ತೆಗೆದುಕೊಂಡು ಹೋಗಲಾಗುತ್ತಿತ್ತು.

    ಆಗಸ್ಟ್‌ನಲ್ಲಿ ಚಾರಣ ಮಾರ್ಗವನ್ನು ಹೆಚ್ಚಾಗಿ ಸ್ಥಗಿತಗೊಳಿಸಲಾಗಿದ್ದರೂ, ಯಾತ್ರಾರ್ಥಿಗಳು ಹೆಲಿಕಾಪ್ಟರ್‌ಗಳಲ್ಲಿ ಹಿಮಾಲಯ ದೇವಸ್ಥಾನಕ್ಕೆ ಆಗಮಿಸುತ್ತಿದ್ದಾರೆ.

  • ಕೇದಾರನಾಥದ ಬಿಜೆಪಿ ಶಾಸಕಿ ಶೈಲಾ ರಾಣಿ ರಾವತ್ ನಿಧನ!

    ಕೇದಾರನಾಥದ ಬಿಜೆಪಿ ಶಾಸಕಿ ಶೈಲಾ ರಾಣಿ ರಾವತ್ ನಿಧನ!

    ಡೆಹ್ರಾಡೂನ್: ಕೇದಾರನಾಥದ ಬಿಜೆಪಿ ಶಾಸಕಿ ಶೈಲಾ ರಾಣಿ ರಾವತ್ (68) (Shaila Rani Rawat) ಮಂಗಳವಾರ ತಡರಾತ್ರಿ ನಿಧನರಾಗಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

    ಡೆಹ್ರಾಡೂನ್‌ನ ಮ್ಯಾಕ್ಸ್‌ ಆಸ್ಪತ್ರೆಯಲ್ಲಿ (Dehradun Max Hospital) ಅವರು ನಿಧನರಾಗಿರುವುದಾಗಿ ಕುಟುಂಬದ ಮೂಲಗಳು ದೃಢಪಡಿಸಿವೆ. ಇದನ್ನೂ ಓದಿ: ಮತ್ತೆ ಮುನ್ನೆಲೆಗೆ ಶ್ರೀರಂಗಪಟ್ಟಣ ಜಾಮಿಯಾ ಮಸೀದಿ ವಿವಾದ – ನಾಳೆ ಹೈಕೋರ್ಟ್‌ನಲ್ಲಿ ವಿಚಾರಣೆ

    ಬೆನ್ನುಮೂಳೆ ಗಾಯಕ್ಕೆ ತುತ್ತಾಗಿ ಚಿಕಿತ್ಸೆ ಪಡೆಯುತ್ತಿದ್ದ ರಾವತ್‌ ಕಳೆದ ಕೆಲ ದಿನಗಳಿಂದ ಆಸ್ಪತ್ರೆಯಲ್ಲಿ ವೆಂಟಿಲೇಟರ್‌ನಲ್ಲಿದ್ದರು ಎಂದು ವೈದ್ಯರು ತಿಳಿಸಿದ್ದಾರೆ. ಇದನ್ನೂ ಓದಿ: ವಾಲ್ಮೀಕಿ ನಿಗಮದ ಬಹುಕೋಟಿ ಹಗರಣ ಕೇಸ್; ಕಾಂಗ್ರೆಸ್‌ ಮಾಜಿ ಸಚಿವ ನಾಗೇಂದ್ರ ಇಡಿ ವಶಕ್ಕೆ!

    2012ರಲ್ಲಿ ಕಾಂಗ್ರೆಸ್‌ ಪಕ್ಷದಿಂದ ಟಿಕೆಟ್‌ ಪಡೆದಿದ್ದ ರಾವತ್‌ ಕೇದಾರನಾಥ ಕ್ಷೇತ್ರದಲ್ಲಿ ಮೊದಲಬಾರಿಗೆ ಗೆದ್ದು ವಿಧಾನಸಭೆ ಪ್ರವೇಶಿಸಿದ್ದರು. 2016ರಲ್ಲಿ ಮಾಜಿ ಮುಖ್ಯಮಂತ್ರಿ ಹರೀಶ್ ರಾವತ್ ವಿರುದ್ಧ ಬಂಡಾಯವೆದ್ದು ಬಿಜೆಪಿ ಸೇರಿದ್ದರು. ಇವರೊಂದಿಗೆ ಇನ್ನೂ ಅನೇಕ ಕಾಂಗ್ರೆಸ್‌ ಘಟಾನುಘಟಿ ನಾಯಕರು ಬಿಜೆಪಿ ಸೇರ್ಪಡೆಯಾಗಿದ್ದರು.

    2017ರ ಉಪಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ ಸೋತಿದ್ದ ರಾವತ್‌, 2022ರಲ್ಲಿ ಮತ್ತೆ ಬಿಜೆಪಿಯಿಂದಲೇ ಕೇದಾರನಾಥದಲ್ಲಿ ಸ್ಪರ್ಧೆ ಮಾಡಿ ಗೆಲುವು ಸಾಧಿಸಿದ್ದರು. ಇದನ್ನೂ ಓದಿ: ನಟ ದರ್ಶನ್‌ ವಿಚಾರಣಾಧೀನ ಕೈದಿ ನಂಬರ್‌ ಹಾಕಿಕೊಂಡು ಆಟೋ ವ್ಹೀಲಿಂಗ್‌ ಮಾಡ್ತಿದ್ದ ಚಾಲಕ ಬಂಧನ

  • ಕೇದಾರನಾಥ ಯಾತ್ರೆಗೆ ತೆರಳಿದ್ದ ಕೊಪ್ಪಳ ಮೂಲದ ಅರ್ಚಕ ಹೃದಯಾಘಾತದಿಂದ ಸಾವು

    ಕೇದಾರನಾಥ ಯಾತ್ರೆಗೆ ತೆರಳಿದ್ದ ಕೊಪ್ಪಳ ಮೂಲದ ಅರ್ಚಕ ಹೃದಯಾಘಾತದಿಂದ ಸಾವು

    ಕೊಪ್ಪಳ: ಕೇದಾರನಾಥ (Kedarnath) ಯಾತ್ರೆಗೆ ತೆರಳಿದ್ದ ಕೊಪ್ಪಳದ (Koppal) ಅರ್ಚಕರೊಬ್ಬರು ಹೃದಯಾಘಾತದಿಂದ (Heart Attack) ಸಾವಿಗೀಡಾದ ಘಟನೆ ಋಷಿಕೇಶ್‍ನಲ್ಲಿ ನಡೆದಿದೆ.

    ಮೃತರನ್ನು ಸಿದ್ದಯ್ಯ ಹಿರೇಮಠ (32) ಎಂದು ಗುರುತಿಸಲಾಗಿದೆ. ಜೂ.10 ರಂದು ಅವರು ಕೇದಾರನಾಥ ಯಾತ್ರೆಗೆ ತೆರಳಿದ್ದರು. ಕಳೆದ ಹತ್ತು ದಿನಗಳಿಂದ ವಿವಿಧ ಧಾರ್ಮಿಕ ಕ್ಷೇತ್ರಗಳ ದರ್ಶನ ಪಡೆಯುತ್ತಿದ್ದರು. ಇಂದು (ಗುರುವಾರ) ಕೇದಾರನಾಥ್ ದರ್ಶನ ಮುಗಿಸಿಕೊಂಡು ಋಷಿಕೇಶ್‍ಗೆ ಬಂದಿದ್ದ ವೇಳೆ ಹೃದಯಾಘಾತದಿಂದ ಅವರು ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ವಿಧಾನಸೌಧ ಆವರಣದಲ್ಲಿ 25 ಅಡಿ ಎತ್ತರದ ಭುವನೇಶ್ವರಿ ಪ್ರತಿಮೆ ನಿರ್ಮಾಣಕ್ಕೆ ಶಂಕುಸ್ಥಾಪನೆ

    ಸಿದ್ದಯ್ಯ ಅವರು ಮೊದಲು ಗವಿಸಿದ್ದೇಶ್ವರ ಮಠದಲ್ಲಿ ಅರ್ಚಕರಾಗಿ ಕೆಲಸ ಮಾಡುತ್ತಿದ್ದರು. ಸದ್ಯ ಶಿವರಾತ್ರೇಶ್ವರ ದೇವಸ್ಥಾನದಲ್ಲಿ ಅರ್ಚಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಇದನ್ನೂ ಓದಿ: ಹಾಸನದಲ್ಲಿ ಹಾಡಹಗಲೇ ಶೂಟೌಟ್‌- ಇಬ್ಬರು ಬಲಿ

  • ಕೇದಾರನಾಥದಲ್ಲಿ ಗಿರಗಿರನೆ ತಿರುಗಿ ಹೆಲಿಕಾಪ್ಟರ್‌ ತುರ್ತು ಭೂಸ್ಪರ್ಶ

    ಕೇದಾರನಾಥದಲ್ಲಿ ಗಿರಗಿರನೆ ತಿರುಗಿ ಹೆಲಿಕಾಪ್ಟರ್‌ ತುರ್ತು ಭೂಸ್ಪರ್ಶ

    ಡೆಹ್ರಾಡೂನ್: ಕೇದಾರನಾಥ (Kedarnath) ಹೆಲಿಪ್ಯಾಡ್‌ನಿಂದ ಸುಮಾರು 100 ಮೀಟರ್ ದೂರದಲ್ಲೇ ತಾಂತ್ರಿಕ ದೋಷದಿಂದಾಗಿ 7 ಮಂದಿಯನ್ನು ಹೊತ್ತ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ ಮಾಡಿದೆ. ಎಲ್ಲಾ 6 ಪ್ರಯಾಣಿಕರು ಮತ್ತು ಪೈಲಟ್ ಸುರಕ್ಷಿತವಾಗಿದ್ದಾರೆ.

    ತುರ್ತು ಲ್ಯಾಂಡಿಂಗ್ ಮಾಡುವ ಮೊದಲು ಹೆಲಿಕಾಪ್ಟರ್ (Kedarnath Helicopter) ಗಿರಗಿರನೆ ತಿರುಗಿತು. ಈ ವೇಳೆ ಹೆಲಿಪ್ಯಾಡ್‌ನಲ್ಲಿ ನಿಂತಿದ್ದ ಸಿಬ್ಬಂದಿ ಹೆದರಿ ಹಿಂದಕ್ಕೆ ಓಡುತ್ತಿರುವ ದೃಶ್ಯ ವೀಡಿಯೋದಲ್ಲಿ ಸೆರೆಯಾಗಿದೆ. ಇದನ್ನೂ ಓದಿ: ಬುರ್ಖಾಧಾರಿ ಮಹಿಳಾ ಮತದಾರರ ವಿಶೇಷ ತಪಾಸಣೆಗೆ ಒತ್ತಾಯ – ಬಿಜೆಪಿ ಮನವಿಗೆ ಓವೈಸಿ ಕೆಂಡಾಮಂಡಲ

    ಸಿರ್ಸಿಯ ಹೆಲಿಪ್ಯಾಡ್‌ನಿಂದ ಪೈಲಟ್‌ ಸೇರಿ 7 ಮಂದಿಯನ್ನು ಹೊತ್ತು ಕೇದಾರನಾಥ ಧಾಮಕ್ಕೆ ಬರುತ್ತಿದ್ದ ಕೆಸ್ಟ್ರೆಲ್‌ ಏವಿಯೇಷನ್‌ ಕಂಪನಿಯ ಹೆಲಿಕಾಪ್ಟರ್‌ ತಾಂತ್ರಿಕ ಸಮಸ್ಯೆಯಿಂದಾಗಿ 7:05 ಗಂಟೆ ತುರ್ತು ಭೂಸ್ಪರ್ಶ ಮಾಡಿತು.

    ಚಾರ್ ಧಾಮ್ ಯಾತ್ರೆಯು ಮೇ 10 ರಂದು ಆರಂಭವಾಗಿದೆ. ಗಂಗೋತ್ರಿ, ಯಮುನೋತ್ರಿ ಮತ್ತು ಕೇದಾರನಾಥ ಸೇರಿದಂತೆ ಮೂರ್ನಾಲ್ಕು ದೇವಾಲಯಗಳನ್ನು ತೆರೆಯಲಾಯಿತು. ಮೇ 12 ರಂದು ಬದರಿನಾಥದ ಬಾಗಿಲು ತೆರೆಯಲಾಗಿದೆ. ಇದನ್ನೂ ಓದಿ: ಕತ್ತು ಹಿಸುಕಿ, ಚರ್ಮ ಸುಲಿದು ಬಾಂಗ್ಲಾ ಸಂಸದನ ದೇಹವನ್ನು ಕತ್ತರಿಸಿ ಹಾಕಿದ್ರು!

    ಚಾರ್ ಧಾಮ್ ಯಾತ್ರೆಯು ಹಿಂದೂ ಧರ್ಮದಲ್ಲಿ ಆಧ್ಯಾತ್ಮಿಕ ಮಹತ್ವವನ್ನು ಹೊಂದಿದೆ. ಯಾತ್ರೆಯು ಸಾಮಾನ್ಯವಾಗಿ ಏಪ್ರಿಲ್-ಮೇ ನಿಂದ ಅಕ್ಟೋಬರ್-ನವೆಂಬರ್ ವರೆಗೆ ನಡೆಯುತ್ತದೆ. ಯಾತ್ರೆಯು ಯಮುನೋತ್ರಿಯಿಂದ ಪ್ರಾರಂಭವಾಗಿ, ಗಂಗೋತ್ರಿ, ಕೇದಾರನಾಥ ಮೂಲಕ ಸಾಗಿ ಅಂತಿಮವಾಗಿ ಬದರಿನಾಥದಲ್ಲಿ ಕೊನೆಗೊಳ್ಳುತ್ತದೆ.

    ಯಾತ್ರಿಕರ ನೂಕುನುಗ್ಗಲು ಕಾರಣ, ಉತ್ತರಾಖಂಡ ಸರ್ಕಾರವು ಚಾರ್‌ ಧಾಮ್‌ ಯಾತ್ರೆಗೆ ಬರುವ ಎಲ್ಲಾ ಯಾತ್ರಾರ್ಥಿಗಳಿಗೆ ನೋಂದಣಿಯನ್ನು ಕಡ್ಡಾಯಗೊಳಿಸಿದೆ. ಹರಿದ್ವಾರ ಮತ್ತು ಋಷಿಕೇಶದಲ್ಲಿ ಆಫ್‌ಲೈನ್ ನೋಂದಣಿಯನ್ನು ನಿಲ್ಲಿಸಲಾಗಿದ್ದು, ಈಗ ಭಕ್ತರು ಆನ್‌ಲೈನ್ ನೋಂದಣಿ ನಂತರವೇ ಚಾರ್‌ ಧಾಮ್‌ ಯಾತ್ರೆಗೆ ಬರಬಹುದು.

  • ಕೇದಾರ ಬಳಿ ಅಪಾಯಕ್ಕೆ ಸಿಲುಕಿದ ಚಿತ್ರದುರ್ಗದ BJP ಮಹಿಳಾ ಮುಖಂಡರು

    ಕೇದಾರ ಬಳಿ ಅಪಾಯಕ್ಕೆ ಸಿಲುಕಿದ ಚಿತ್ರದುರ್ಗದ BJP ಮಹಿಳಾ ಮುಖಂಡರು

    ಚಿತ್ರದುರ್ಗ: ಕಳೆದ ಒಂದು ವಾರದ ಹಿಂದೆ ಕೇದಾರನಾಥಕ್ಕೆ (Kedarnath) ಪ್ರವಾಸಕ್ಕೆ ತೆರಳಿದ್ದ ಚಿತ್ರದುರ್ಗದ (Chitradurga) ಮೂವರು ಮಹಿಳೆಯರು ಅಪಾಯದಲ್ಲಿ ಸಿಲುಕಿದ್ದಾರೆ.

    ಚಿತ್ರದುರ್ಗದ ಬಿಜೆಪಿ ಮುಖಂಡರಾದ (BJP Leader) ರತ್ನಮ್ಮ, ಅಂಬಿಕಾ, ಗೀತಾ ಮತ್ತು ಇನ್ನಿತರರು ಅಪಾಯಕ್ಕೆ ಸಿಲುಕಿದ್ದಾರೆ. ಕೇದಾರದ ಬಳಿ ವಿಪರೀತ ಮಳೆ, ಗುಡ್ಡಕುಸಿತ ಹಿನ್ನೆಲೆಯಲ್ಲಿ 40 ಜನರ ತಂಡದೊಂದಿಗೆ ಪ್ರವಾಸಕ್ಕೆ ತೆರಳಿದ್ದ ಮಹಿಳೆಯರು ಕೇದಾರದಿಂದ 30 ಕಿ.ಮೀ ದೂರದಲ್ಲಿ ಅಪಾಯಕ್ಕೆ ಸಿಲುಕಿಕೊಂಡಿದ್ದಾರೆ. ಇದನ್ನೂ ಓದಿ: ಮುಂದಿನ ವರ್ಷ ಸಿಗೋಣ; ಸ್ವಾತಂತ್ರ‍್ಯ ದಿನದ ಭಾಷಣದಲ್ಲಿ ಲೋಕಸಭೆ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ ಮೋದಿ

    ಚಿತ್ರದುರ್ಗ, ಬೆಂಗಳೂರು (Bengaluru), ಭದ್ರಾವತಿ ಮೂಲದ 40 ಜನ ಪ್ರವಾಸಿಗರ ತಂಡ ಕೇದಾರನಾಥಕ್ಕೆ ಪ್ರವಾಸ ಹೊರಟಿತ್ತು. ಆದ್ರೆ ಕೇದಾರದ ಗುಪ್ತಕಾಶಿಯಿಂದ ಸೀತಾಪುರದವರೆಗಿನ ರಸ್ತೆ ಸಂಪೂರ್ಣ ಕುಸಿತವಾಗಿದ್ದು, ಜನರು ನಡುಗಡ್ಡೆಯಲ್ಲಿ ಸಿಲುಕಿದ್ದಾರೆ. ಕ್ಷಣ ಕ್ಷಣಕ್ಕೂ ಎದುರಾಗುತ್ತಿರುವ ಭೂ ಕುಸಿತದಿಂದಾಗಿ ಆತಂಕ ಹೆಚ್ಚಾಗಿದೆ. ಇದನ್ನೂ ಓದಿ: ಮಕ್ಕಳಾಗಿಲ್ಲ ಅಂತ ದೇವರ ಮೊರೆ ಹೋಗಿದ್ದ 24ರ ವಿವಾಹಿತೆ 54ರ ಪೂಜಾರಿ ಜೊತೆಯೇ ಜೂಟ್!

    ಎರಡೂ ಕಡೆಯ ರಸ್ತೆಗಳಲ್ಲೂ ರೆಡ್ ಜೋನ್‌ನಿಂದಾಗಿ ಪ್ರವಾಸಿಗರಿಗೆ (Tourists) ದಿಕ್ಕು ತೋಚದಂತಾಗಿದೆ. ಅತ್ತ ಕೇದಾರನಾಥಕ್ಕೂ ತಲುಪಲಾಗದೇ ಇತ್ತ ವಾಪಸ್ ಕೂಡ ಬರಲಾಗದ ಸ್ಥಿತಿಯಲ್ಲಿದ್ದಾರೆ. ಶೀಘ್ರದಲ್ಲೇ ಮಹಿಳೆಯರನ್ನ ವಾಪಸ್ ಕರೆತರುವಂತೆ ಮನವಿ ಮಾಡಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕೇದಾರನಾಥ ಮಾರ್ಗದಲ್ಲಿ ಭಾರಿ ಭೂಕುಸಿತ – ಹಲವರ ಸಮಾಧಿ ಶಂಕೆ

    ಕೇದಾರನಾಥ ಮಾರ್ಗದಲ್ಲಿ ಭಾರಿ ಭೂಕುಸಿತ – ಹಲವರ ಸಮಾಧಿ ಶಂಕೆ

    ಡೆಹ್ರಾಡೂನ್: ಉತ್ತರಾಖಂಡದ (Uttarakhand) ಗೌರಿಕುಂಡ್‌ನ ಕೇದಾರನಾಥ (Kedarnath) ಮಾರ್ಗದಲ್ಲಿ ಭೂಕುಸಿತ ಸಂಭವಿಸಿ ಹಲವು ಜನ ಸಮಾಧಿಯಾಗಿರುವ ಶಂಕೆ ವ್ಯಕ್ತವಾಗಿದೆ. ಭೂಕುಸಿತದಲ್ಲಿ (Landslide) ಸಿಲುಕಿದ್ದವರನ್ನು ರಕ್ಷಿಸಲು ಕಾರ್ಯಾಚರಣೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಗೌರಿಕುಂಡ್ ಪೋಸ್ಟ್ ಸೇತುವೆ ಬಳಿ ಗುರುವಾರ ರಾತ್ರಿ ಸುರಿದ ಧಾರಾಕಾರ ಮಳೆಗೆ ಈ ಅವಘಡ ಸಂಭವಿಸಿದೆ. ದೊಡ್ಡ ಭೂಕುಸಿತದಿಂದಾಗಿ ಅವಶೇಷಗಳಲ್ಲಿ 10-12 ಮಂದಿ ಹೂತುಹೋಗಿದ್ದಾರೆ ಎನ್ನಲಾಗಿದೆ. ರಾಜ್ಯ ವಿಪತ್ತು ಪ್ರತಿಕ್ರಿಯೆ ಪಡೆಯ ತಂಡ ರಕ್ಷಣಾ ಕಾರ್ಯಾಚರಣೆಯನ್ನು ಆರಂಭಿಸಿದೆ. ಇದನ್ನೂ ಓದಿ: ಟೈಟ್‌ ಸೆಕ್ಯುರಿಟಿಯೊಂದಿಗೆ ಜ್ಞಾನವಾಪಿ ಮಸೀದಿ ಸಂಕೀರ್ಣದಲ್ಲಿ ಸಮೀಕ್ಷೆ ಆರಂಭ

    ಭೂಕುಸಿತ ಸಂಭವಿಸಿದ ತಕ್ಷಣ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಯಿತು. ಸುಮಾರು 10-12 ಜನರು ಅಲ್ಲಿದ್ದರು ಎಂದು ಹೇಳಲಾಗಿದೆ. ಆದರೆ ಇಲ್ಲಿಯವರೆಗೆ ಒಬ್ಬರು ಪತ್ತೆಯಾಗಿಲ್ಲ ಎಂದು ವಿಪತ್ತು ನಿರ್ವಹಣಾ ಅಧಿಕಾರಿ ದಲೀಪ್ ಸಿಂಗ್ ರಾಜ್ವರ್ ತಿಳಿಸಿದ್ದಾರೆ.

    ನಾಪತ್ತೆಯಾದವರನ್ನು ವಿನೋದ್ (26), ಮುಲಾಯಂ (25), ಆಶು (23), ಪ್ರಿಯಾಂಶು ಚಮೋಲಾ (18), ರಣಬೀರ್ ಸಿಂಗ್ (28), ಅಮರ್ ಬೋಹ್ರಾ, ಅನಿತಾ ಬೊಹ್ರಾ, ರಾಧಿಕಾ ಬೋಹ್ರಾ ಮತ್ತು ಪಿಂಕಿ ಬೊಹ್ರಾ, ಪೃಥ್ವಿ ಬೋಹ್ರಾ (7), ಜತಿಲ್ (6) ಮತ್ತು ವಕೀಲ್ (3) ಎಂದು ಗುರುತಿಸಲಾಗಿದೆ. ಇದನ್ನೂ ಓದಿ: ಕವಾಡಿಗರಹಟ್ಟಿ ಕಲುಷಿತ ನೀರು ಪ್ರಕರಣ – ಸಾವಿನ ಸಂಖ್ಯೆ 5ಕ್ಕೆ ಏರಿಕೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕೇದಾರನಾಥ ಯಾತ್ರೆಗೆ ತೆರಳಿದ್ದ ಚಿಕ್ಕಮಗಳೂರು ಮೂಲದ ಯುವಕ ಸಾವು

    ಕೇದಾರನಾಥ ಯಾತ್ರೆಗೆ ತೆರಳಿದ್ದ ಚಿಕ್ಕಮಗಳೂರು ಮೂಲದ ಯುವಕ ಸಾವು

    ಚಿಕ್ಕಮಗಳೂರು: ಕೇದಾರನಾಥ ಯಾತ್ರೆಗೆ (Kedarnath Yatra) ತೆರಳಿದ್ದ ಚಿಕ್ಕಮಗಳೂರು (Chikkamagaluru) ಮೂಲದ ಯುವಕನೊಬ್ಬ ತೀವ್ರ ಅಸ್ವಸ್ಥಗೊಂಡು ಸಾವನ್ನಪ್ಪಿರುವ ಘಟನೆ ನಡೆದಿದೆ.

    ಮೂಡಿಗೆರೆ (Mudigere) ತಾಲೂಕು ಜನ್ನಾಪುರ ಗ್ರಾಮದ ಗಿರೀಶ್ (25) ಮೃತಪಟ್ಟ ಯುವಕ. ಕಳೆದ ವಾರ ಮೂಡಿಗೆರೆಯಿಂದ ಗಿರೀಶ್ ಕೇದಾರನಾಥ ಯಾತ್ರೆಗೆ ತೆರಳಿದ್ದ. ದುರಾದೃಷ್ಟವಶಾತ್ ಆತ ಕೇದಾರನಾಥದಲ್ಲಿ ಅಸ್ವಸ್ಥಗೊಂಡು ಸಾವನ್ನಪ್ಪಿದ್ದಾನೆ. ಘಟನೆ ಬಗ್ಗೆ ಗಿರೀಶ್ ಕುಟುಂಬಸ್ಥರಿಗೆ ಕೇದಾರನಾಥ ಪೊಲೀಸರು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಚುನಾವಣಾ ಭರವಸೆ ಈಡೇರಿಸಲು ಸಾಧ್ಯವಾಗ್ಲಿಲ್ಲ ಅಂತ ತನಗೆ ತಾನೇ ಚಪ್ಪಲಿಯಿಂದ ಹೊಡೆದುಕೊಂಡ ಕೌನ್ಸಿಲರ್

    ಗಿರೀಶ್ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆಯಲ್ಲಿ ಅಡುಗೆ ವೃತ್ತಿ ಮಾಡುತ್ತಿದ್ದ. ಪ್ರಸ್ತುತ ಗಿರೀಶ್ ಮೃತದೇಹ ರಿಷಿಕೇಶ್ ನಗರದ ಸರ್ಕಾರಿ ಆಸ್ಪತ್ರೆಯಲ್ಲಿದೆ. ಇದನ್ನೂ ಓದಿ: ಎಕ್ಸ್‌ಪ್ರೆಸ್ ವೇ ನಿರ್ಮಾಣದ ವೇಳೆ ಕ್ರೇನ್ ಕುಸಿದು 16 ಮಂದಿ ಕಾರ್ಮಿಕರು ದುರ್ಮರಣ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮಳೆ, ಹಿಮಪಾತ – ತಂಗಿರುವ ಸ್ಥಳದಲ್ಲಿಯೇ ಇರಿ: ಕೇದಾರನಾಥ ಯಾತ್ರಾರ್ಥಿಗಳಿಗೆ ಎಚ್ಚರಿಕೆ

    ಮಳೆ, ಹಿಮಪಾತ – ತಂಗಿರುವ ಸ್ಥಳದಲ್ಲಿಯೇ ಇರಿ: ಕೇದಾರನಾಥ ಯಾತ್ರಾರ್ಥಿಗಳಿಗೆ ಎಚ್ಚರಿಕೆ

    ಡೆಹ್ರಾಡೂನ್: ಹಿಮಾಲಯದ ಎತ್ತರದ ಪ್ರದೇಶಗಳಲ್ಲಿ ಭಾರೀ ಮಳೆ (Rain) ಮತ್ತು ಹಿಮಪಾತವಾಗುವ (Snowfall) ಸಾಧ್ಯತೆಯ ಹಿನ್ನೆಲೆಯಲ್ಲಿ, ಹವಾಮಾನ ಇಲಾಖೆಯು ಮುಂದಿನ 2-3 ದಿನಗಳವರೆಗೆ ಎಚ್ಚರಿಕೆಯನ್ನು ನೀಡಿದೆ. ಹವಾಮಾನ ಉತ್ತಮವಾಗುವವರೆಗೆ ತಂಗಿರುವ ಸ್ಥಳದಲ್ಲಿಯೇ ಇರುವಂತೆ ಕೇದಾರನಾಥ (Kedarnath) ಯಾತ್ರಾರ್ಥಿಗಳಿಗೆ (Pilgrims) ತಿಳಿಸಲಾಗಿದೆ.

    ಕೇದಾರನಾಥಕ್ಕೆ ಭೇಟಿ ನಿಡಲು ಬರುವ ಯಾತ್ರಾರ್ಥಿಗಳ ಸುರಕ್ಷತೆಗಾಗಿ ಮನವಿ ಮಾಡಲಾಗುತ್ತಿದೆ. ಹವಾಮಾನ ಉತ್ತಮವಾಗುವವರೆಗೆ ಪ್ರಯಾಣಿಕರು ಅದೇ ಸ್ಥಳದಲ್ಲಿ ಇರಿ. ಮುಂಜಾಗೃತ ಕ್ರಮಗಳನ್ನು ಅನುಸರಿಸಿಯೇ ಯಾತ್ರೆಯನ್ನು ಮುಂದುವರಿಸಿ ಎಂದು ರುದ್ರಪ್ರಯಾಗದ ಜಿಲ್ಲಾಧಿಕಾರಿ ಮಯೂರ್ ದೀಕ್ಷಿತ್ ಹೇಳಿದರು.

    ಕೇದಾರನಾಥ ಧಾಮದಲ್ಲಿ ನಿರಂತರವಾಗಿ ಹಿಮಪಾತವಾಗುತ್ತಿದ್ದು, ಯಾತ್ರೆಯನ್ನು ನಿಯಂತ್ರಿಸಲಾಗುತ್ತಿದೆ. ಸೋನ್‌ಪ್ರಯಾಗದಿಂದ ಬೆಳಗ್ಗೆ 10:30ರ ಬಳಿಕ ಕೇದಾರನಾಥಕ್ಕೆ ಹೋಗಲು ಅನುಮತಿ ನೀಡಲಾಗುತ್ತಿಲ್ಲ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಕೇರಳದಲ್ಲಿ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲಿನ ಮೇಲೆ ಕಲ್ಲು ತೂರಾಟ

    ಎಲ್ಲ ಪ್ರಯಾಣಿಕರು ತಮ್ಮ ಸುರಕ್ಷತೆಯ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ರಾಜ್ಯ ಸರ್ಕಾರ ಮತ್ತು ಜಿಲ್ಲಾಡಳಿತ ಹೊರಡಿಸಿರುವ ಮಾರ್ಗಸೂಚಿಗಳನ್ನು ಅನುಸರಿಸಿ ಜಿಲ್ಲಾಡಳಿತದೊಂದಿಗೆ ಸಹಕರಿಸಬೇಕು. ಹವಾಮಾನ ಉತ್ತಮವಾದ ಬಳಿಕ ಮಾತ್ರ ಎಲ್ಲಾ ಯಾತ್ರಾರ್ಥಿಗಳು ಕೇದಾರನಾಥಕ್ಕೆ ತಮ್ಮ ಪ್ರಯಾಣವನ್ನು ಬೆಳೆಸಬಹುದು ಎಂದು ದೀಕ್ಷಿತ್ ಹೇಳಿದ್ದಾರೆ.

    ಏಪ್ರಿಲ್ 25 ರಂದು ಯಾತ್ರಾರ್ಥಿಗಳಿಗೆ ಕೇದಾರನಾಥದ ಬಾಗಿಲನ್ನು ತೆರೆಯಲಾಯಿತು. ಆದರೆ ಯಾತ್ರೆಯ ಮಾರ್ಗದಲ್ಲಿ ಹಿಮಪಾತ ಹಾಗೂ ಹವಾಮಾನ ಪ್ರತಿಕೂಲತೆಯ ಹಿನ್ನೆಲೆ ಉತ್ತರಾಖಂಡ (Uttarakhand) ಸರ್ಕಾರ ಕೇದಾರನಾಥ ಯಾತ್ರೆಗೆ ಯಾತ್ರಿಕರಿಂದ ನೋಂದಣಿ ಅರ್ಜಿಗಳನ್ನು ಸ್ವೀಕರಿಸುವುದನ್ನು ನಿಲ್ಲಿಸಿತು. ಇದನ್ನೂ ಓದಿ: ಬೊಂಬಾಟ್‌ ಬೌಲಿಂಗ್‌, ಮ್ಯಾಜಿಕ್‌ ಫೀಲ್ಡಿಂಗ್‌ – RCBಗೆ 18 ರನ್‌ಗಳ ಭರ್ಜರಿ ಜಯ

  • ಉತ್ತರಾಖಂಡದಲ್ಲಿ ಹೆಲಿಕಾಪ್ಟರ್‌ನ ರೆಕ್ಕೆ ಬಡಿದು ಅಧಿಕಾರಿ ಸಾವು

    ಉತ್ತರಾಖಂಡದಲ್ಲಿ ಹೆಲಿಕಾಪ್ಟರ್‌ನ ರೆಕ್ಕೆ ಬಡಿದು ಅಧಿಕಾರಿ ಸಾವು

    ಡೆಹ್ರಾಡೂನ್: ಉತ್ತರಾಖಂಡದ (Uttarakhand) ಕೇದಾರನಾಥ ದೇವಾಲಯವನ್ನು (Kedarnath Temple) ಯಾತ್ರಾರ್ಥಿಗಳಿಗೆ ತೆರೆಯಲು ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಆದರೆ ಯಾತ್ರೆ ಆರಂಭವಾಗುವುದಕ್ಕೂ ಮುನ್ನವೇ ಅವಘಡವೊಂದು ಸಂಭವಿಸಿದೆ. ದೇವಾಲಯದ ಸಿದ್ಧತೆ ಪರಿಶೀಲನೆಗೆ ತೆರಳಿದ್ದ ಉತ್ತರಾಖಂಡದ ಸರ್ಕಾರಿ ಅಧಿಕಾರಿಯೊಬ್ಬರಿಗೆ ಹೆಲಿಕಾಪ್ಟರ್‌ನ (Helicopter) ರೆಕ್ಕೆ ಬಡಿದು ಭಾನುವಾರ ಮೃತಪಟ್ಟಿದ್ದಾರೆ.

    ಗಡ್ವಾಲ್ ಮಂಡಲ್ ವಿಕಾಸ್ ನಿಗಮ್ ಲಿಮಿಟೆಡ್ (JMVN) ಹೆಲಿಪ್ಯಾನ್‌ನಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ. ಮೃತ ಅಧಿಕಾರಿಯನ್ನು ಉತ್ತರಾಖಂಡದ ನಗರಿಕ ವಿಮಾನಯಾನ ಅಭಿವೃದ್ಧಿ ಪ್ರಾಧಿಕಾರದ (UCADA) ಹಣಕಾಸು ನಿಯಂತ್ರಕ ಅಮಿತ್ ಸೈನಿ ಎಂದು ಗುರುತಿಸಲಾಗಿದೆ. ಇದನ್ನೂ ಓದಿ: ಪಕ್ಷಿ ಬಡಿದು ಎಂಜಿನ್‌ಗೆ ಬೆಂಕಿ – ತುರ್ತು ಭೂಸ್ಪರ್ಶ ಮಾಡಿದ ವಿಮಾನ

    ಮೂಲಗಳ ಪ್ರಕಾರ ಹೆಲಿಕಾಪ್ಟರ್‌ನ ಹಿಂದಿನ ಭಾಗದ ರೆಕ್ಕೆ ಅಮಿತ್ ಸೈನಿ ಅವರ ಕತ್ತನ್ನು ಸೀಳಿದೆ. ಇದರಿಂದ ಅವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎನ್ನಲಾಗಿದೆ.

    ಆದರೆ ಘಟನೆಯ ಹಿಂದಿನ ಕಾರಣ ಇನ್ನೂ ದೃಢಪಟ್ಟಿಲ್ಲ. ಸೇನಿ ಅವರು ಹೆಲಿಕಾಪ್ಟರ್‌ನ ಹಿಂಬದಿಯ ರೆಕ್ಕೆಯ ಬಳಿಗೆ ಏಕೆ ಹೋದರು ಎಂಬುದು ತಿಳಿದುಬಂದಿಲ್ಲ. ಅವರು ಸೆಲ್ಫಿ ತೆಗೆಯಲು ಮುಂದಾಗಿದ್ದಾಗ ದುರ್ಘಟನೆ ನಡೆದಿದೆ ಎಂಬುದು ವದಂತಿಯಾಗಿದೆ ಎಂದು ಎಸ್‌ಪಿ ವಿಶಾಖ್ ಅಶೋಕ್ ಭದನೆ ತಿಳಿಸಿದ್ದಾರೆ. ಇದನ್ನೂ ಓದಿ: ಕರ್ನಾಟಕ ಚುನಾವಣೆ – ಏ.26 ಕ್ಕೆ ರಾಜ್ಯಕ್ಕೆ ಯುಪಿ ಸಿಎಂ ಯೋಗಿ ಆದಿತ್ಯನಾಥ್ ಎಂಟ್ರಿ