Tag: Kedarnath Yatra

  • ಒಂದೇ ದಿನ 30,000ಕ್ಕೂ ಹೆಚ್ಚು ಜನರಿಂದ ಕೇದಾರನಾಥನ ದರ್ಶನ

    ಒಂದೇ ದಿನ 30,000ಕ್ಕೂ ಹೆಚ್ಚು ಜನರಿಂದ ಕೇದಾರನಾಥನ ದರ್ಶನ

    ಡೆಹ್ರಾಡೂನ್: ಕೇದಾರನಾಥ (Kedarnath) ಧಾಮದ ಬಾಗಿಲು ತೆರೆದ ಮೊದಲ ದಿನವೇ ದೇವಸ್ಥಾನಕ್ಕೆ 30,000ಕ್ಕೂ ಹೆಚ್ಚು ಭಕ್ತರು ಆಗಮಿಸಿ ದರ್ಶನ ಪಡೆದಿದ್ದಾರೆ. ಮೇ 2ರಂದು ಸಂಜೆ 7 ಗಂಟೆಯ ವೇಳೆಗೆ 19,196 ಪುರುಷರು, 10,597 ಮಹಿಳೆಯರು ಮತ್ತು 361 ತೃತಿಯ ಲಿಂಗಿಗಳು ಕೇದಾರನಾಥಕ್ಕೆ ಭೇಟಿ ನೀಡಿ ದರ್ಶನ ಪಡೆದಿದ್ದಾರೆ.

    ಶುಕ್ರವಾರ ಕೇದಾರನಾಥ ದೇವಾಲಯದ ಬಾಗಿಲು ತೆರೆಯಲಾಯಿತು. ಭಾರತೀಯ ಸೇನೆಯ ಗರ್ವಾಲ್ ರೈಫಲ್ಸ್‌ನ ಬ್ಯಾಂಡ್ ಈ ಸಂದರ್ಭದಲ್ಲಿ ಭಕ್ತಿಗೀತೆಗಳನ್ನು ನುಡಿಸಿತು. ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಧಾಮ್ ಪೋರ್ಟಲ್ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಕೇದಾರನಾಥ ಆವರಣದಲ್ಲಿ ನಡೆದ ಮುಖ್ಯ ಸೇವಕ ಭಂಡಾರದಲ್ಲಿ ಭಕ್ತರಿಗೆ ವೈಯಕ್ತಿಕವಾಗಿ ಪ್ರಸಾದ ವಿತರಿಸಿದರು. ಇದೇ ವೇಳೆ ಮೇ 4ರಂದು ಬದರಿನಾಥ ಧಾಮದ ಬಾಗಿಲು ತೆರೆಯಲಿದೆ ಎಂದು ಘೋಷಿಸಿದರು. ಇದನ್ನೂ ಓದಿ: ಜೂ.10ರ ಒಳಗೆ ಸಿದ್ದರಾಮಯ್ಯ ಒಳಮೀಸಲಾತಿ ಘೋಷಣೆ ಮಾಡಬೇಕು: ಗೋವಿಂದ ಕಾರಜೋಳ

     

    ಕೇದಾರನಾಥದ ಪುನರ್‌ನಿರ್ಮಾಣಕ್ಕಾಗಿ 2,000 ಕೋಟಿ ರೂ.ಗಳನ್ನು ನಿಗದಿಪಡಿಸಲಾಗಿದೆ ಎಂದು ಸಿಎಂ ಧಾಮಿ ಬಹಿರಂಗಪಡಿಸಿದರು. ಹೆಚ್ಚುವರಿಯಾಗಿ ಪ್ರವೇಶವನ್ನು ಸುಧಾರಿಸಲು ಗೌರಿಕುಂಡ್‌ನಿಂದ ಕೇದಾರನಾಥಕ್ಕೆ ರೋಪ್‌ವೇ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ ಎಂದು ತಿಳಿಸಿದರು. ಇದನ್ನೂ ಓದಿ: ಲವ್ವರ್‌ ಜೊತೆ ಪೋಷಕರಿಗೆ ಸಿಕ್ಕಿಬಿದ್ದ ಯುವಕ – ಪಬ್ಲಿಕ್‌ನಲ್ಲೇ ಜೋಡಿಗೆ ಬಿತ್ತು ಗೂಸಾ

    ನಾವು ಪ್ರತಿ ಹಂತದಲ್ಲೂ ತೀರ್ಥಯಾತ್ರೆಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿದ್ದೇವೆ ಮತ್ತು ಯಾತ್ರೆಯ ಮಾರ್ಗಗಳಲ್ಲಿ ಹಲವಾರು ಮೂಲಭೂತ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಿದ್ದೇವೆ. ಚಾರ್‌ಧಾಮ್ ಯಾತ್ರೆ ಉತ್ತರಾಖಂಡದ ಜೀವನಾಡಿಯಾಗಿದ್ದು, ಲಕ್ಷಾಂತರ ಜನರಿಗೆ ಜೀವನೋಪಾಯವನ್ನು ಒದಗಿಸುತ್ತದೆ ಎಂದು ಧಾಮಿ ಹೇಳಿದರು. ಇದನ್ನೂ ಓದಿ: ಎಲ್ಲಾ ಹಿಂದೂಗಳನ್ನು ಸಾಲಾಗಿ ನಿಲ್ಲುವಂತೆ ಹೇಳಿದ್ರು: ಪಹಲ್ಗಾಮ್‌ ಭೀಕರತೆ ಬಿಚ್ಚಿಟ್ಟ ಸುಬೋಧ್‌

  • ಕೇದಾರ ಬಳಿ ಅಪಾಯಕ್ಕೆ ಸಿಲುಕಿದ ಚಿತ್ರದುರ್ಗದ BJP ಮಹಿಳಾ ಮುಖಂಡರು

    ಕೇದಾರ ಬಳಿ ಅಪಾಯಕ್ಕೆ ಸಿಲುಕಿದ ಚಿತ್ರದುರ್ಗದ BJP ಮಹಿಳಾ ಮುಖಂಡರು

    ಚಿತ್ರದುರ್ಗ: ಕಳೆದ ಒಂದು ವಾರದ ಹಿಂದೆ ಕೇದಾರನಾಥಕ್ಕೆ (Kedarnath) ಪ್ರವಾಸಕ್ಕೆ ತೆರಳಿದ್ದ ಚಿತ್ರದುರ್ಗದ (Chitradurga) ಮೂವರು ಮಹಿಳೆಯರು ಅಪಾಯದಲ್ಲಿ ಸಿಲುಕಿದ್ದಾರೆ.

    ಚಿತ್ರದುರ್ಗದ ಬಿಜೆಪಿ ಮುಖಂಡರಾದ (BJP Leader) ರತ್ನಮ್ಮ, ಅಂಬಿಕಾ, ಗೀತಾ ಮತ್ತು ಇನ್ನಿತರರು ಅಪಾಯಕ್ಕೆ ಸಿಲುಕಿದ್ದಾರೆ. ಕೇದಾರದ ಬಳಿ ವಿಪರೀತ ಮಳೆ, ಗುಡ್ಡಕುಸಿತ ಹಿನ್ನೆಲೆಯಲ್ಲಿ 40 ಜನರ ತಂಡದೊಂದಿಗೆ ಪ್ರವಾಸಕ್ಕೆ ತೆರಳಿದ್ದ ಮಹಿಳೆಯರು ಕೇದಾರದಿಂದ 30 ಕಿ.ಮೀ ದೂರದಲ್ಲಿ ಅಪಾಯಕ್ಕೆ ಸಿಲುಕಿಕೊಂಡಿದ್ದಾರೆ. ಇದನ್ನೂ ಓದಿ: ಮುಂದಿನ ವರ್ಷ ಸಿಗೋಣ; ಸ್ವಾತಂತ್ರ‍್ಯ ದಿನದ ಭಾಷಣದಲ್ಲಿ ಲೋಕಸಭೆ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ ಮೋದಿ

    ಚಿತ್ರದುರ್ಗ, ಬೆಂಗಳೂರು (Bengaluru), ಭದ್ರಾವತಿ ಮೂಲದ 40 ಜನ ಪ್ರವಾಸಿಗರ ತಂಡ ಕೇದಾರನಾಥಕ್ಕೆ ಪ್ರವಾಸ ಹೊರಟಿತ್ತು. ಆದ್ರೆ ಕೇದಾರದ ಗುಪ್ತಕಾಶಿಯಿಂದ ಸೀತಾಪುರದವರೆಗಿನ ರಸ್ತೆ ಸಂಪೂರ್ಣ ಕುಸಿತವಾಗಿದ್ದು, ಜನರು ನಡುಗಡ್ಡೆಯಲ್ಲಿ ಸಿಲುಕಿದ್ದಾರೆ. ಕ್ಷಣ ಕ್ಷಣಕ್ಕೂ ಎದುರಾಗುತ್ತಿರುವ ಭೂ ಕುಸಿತದಿಂದಾಗಿ ಆತಂಕ ಹೆಚ್ಚಾಗಿದೆ. ಇದನ್ನೂ ಓದಿ: ಮಕ್ಕಳಾಗಿಲ್ಲ ಅಂತ ದೇವರ ಮೊರೆ ಹೋಗಿದ್ದ 24ರ ವಿವಾಹಿತೆ 54ರ ಪೂಜಾರಿ ಜೊತೆಯೇ ಜೂಟ್!

    ಎರಡೂ ಕಡೆಯ ರಸ್ತೆಗಳಲ್ಲೂ ರೆಡ್ ಜೋನ್‌ನಿಂದಾಗಿ ಪ್ರವಾಸಿಗರಿಗೆ (Tourists) ದಿಕ್ಕು ತೋಚದಂತಾಗಿದೆ. ಅತ್ತ ಕೇದಾರನಾಥಕ್ಕೂ ತಲುಪಲಾಗದೇ ಇತ್ತ ವಾಪಸ್ ಕೂಡ ಬರಲಾಗದ ಸ್ಥಿತಿಯಲ್ಲಿದ್ದಾರೆ. ಶೀಘ್ರದಲ್ಲೇ ಮಹಿಳೆಯರನ್ನ ವಾಪಸ್ ಕರೆತರುವಂತೆ ಮನವಿ ಮಾಡಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕೇದಾರನಾಥ ಯಾತ್ರೆಗೆ ತೆರಳಿದ್ದ ಚಿಕ್ಕಮಗಳೂರು ಮೂಲದ ಯುವಕ ಸಾವು

    ಕೇದಾರನಾಥ ಯಾತ್ರೆಗೆ ತೆರಳಿದ್ದ ಚಿಕ್ಕಮಗಳೂರು ಮೂಲದ ಯುವಕ ಸಾವು

    ಚಿಕ್ಕಮಗಳೂರು: ಕೇದಾರನಾಥ ಯಾತ್ರೆಗೆ (Kedarnath Yatra) ತೆರಳಿದ್ದ ಚಿಕ್ಕಮಗಳೂರು (Chikkamagaluru) ಮೂಲದ ಯುವಕನೊಬ್ಬ ತೀವ್ರ ಅಸ್ವಸ್ಥಗೊಂಡು ಸಾವನ್ನಪ್ಪಿರುವ ಘಟನೆ ನಡೆದಿದೆ.

    ಮೂಡಿಗೆರೆ (Mudigere) ತಾಲೂಕು ಜನ್ನಾಪುರ ಗ್ರಾಮದ ಗಿರೀಶ್ (25) ಮೃತಪಟ್ಟ ಯುವಕ. ಕಳೆದ ವಾರ ಮೂಡಿಗೆರೆಯಿಂದ ಗಿರೀಶ್ ಕೇದಾರನಾಥ ಯಾತ್ರೆಗೆ ತೆರಳಿದ್ದ. ದುರಾದೃಷ್ಟವಶಾತ್ ಆತ ಕೇದಾರನಾಥದಲ್ಲಿ ಅಸ್ವಸ್ಥಗೊಂಡು ಸಾವನ್ನಪ್ಪಿದ್ದಾನೆ. ಘಟನೆ ಬಗ್ಗೆ ಗಿರೀಶ್ ಕುಟುಂಬಸ್ಥರಿಗೆ ಕೇದಾರನಾಥ ಪೊಲೀಸರು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಚುನಾವಣಾ ಭರವಸೆ ಈಡೇರಿಸಲು ಸಾಧ್ಯವಾಗ್ಲಿಲ್ಲ ಅಂತ ತನಗೆ ತಾನೇ ಚಪ್ಪಲಿಯಿಂದ ಹೊಡೆದುಕೊಂಡ ಕೌನ್ಸಿಲರ್

    ಗಿರೀಶ್ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆಯಲ್ಲಿ ಅಡುಗೆ ವೃತ್ತಿ ಮಾಡುತ್ತಿದ್ದ. ಪ್ರಸ್ತುತ ಗಿರೀಶ್ ಮೃತದೇಹ ರಿಷಿಕೇಶ್ ನಗರದ ಸರ್ಕಾರಿ ಆಸ್ಪತ್ರೆಯಲ್ಲಿದೆ. ಇದನ್ನೂ ಓದಿ: ಎಕ್ಸ್‌ಪ್ರೆಸ್ ವೇ ನಿರ್ಮಾಣದ ವೇಳೆ ಕ್ರೇನ್ ಕುಸಿದು 16 ಮಂದಿ ಕಾರ್ಮಿಕರು ದುರ್ಮರಣ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಭಾರೀ ಮಳೆಯಿಂದಾಗಿ ಕೇದಾರನಾಥ ಯಾತ್ರೆ ಸ್ಥಗಿತ

    ಭಾರೀ ಮಳೆಯಿಂದಾಗಿ ಕೇದಾರನಾಥ ಯಾತ್ರೆ ಸ್ಥಗಿತ

    ಡೆಹ್ರಾಡೂನ್: ಭಾರೀ ಮಳೆಯಿಂದಾಗಿ ಕೇದಾರನಾಥ ಯಾತ್ರೆಯನ್ನು ನಿಲ್ಲಿಸಲಾಗಿದೆ ಎಂದು ರುದ್ರಪ್ರಯಾಗ ಜಿಲ್ಲಾಡಳಿತ ಮಾಹಿತಿ ನೀಡಿದೆ.

    ಅಮರನಾಥದಲ್ಲಿ ನಡೆದ ಘಟನೆ ಬೆನ್ನಲ್ಲೆ ಎಚ್ಚೆತ್ತುಕೊಂಡ ಜಿಲ್ಲಾಡಳಿತವು ಯಾತ್ರಾರ್ಥಿಗಳ ಸುರಕ್ಷತೆಯ ದೃಷ್ಟಿಯಿಂದ ಹಾಗೂ ಯಾವುದೇ ಅಹಿತಕರ ಘಟನೆಗಳು ನಡೆಯದಿರಲಿ ಎಂದು ಕೇದಾರನಾಥ ಯಾತ್ರೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ತಿಳಿಸಿದೆ.

    ಜಮ್ಮು ಮತ್ತು ಕಾಶ್ಮೀರದ ಹಿಮಾಲಯ ಭಾಗದಲ್ಲಿ ಮೇಘಸ್ಫೋಟಗೊಂಡಿದ್ದು, ನಿನ್ನೆ ಸಂಜೆ ಅಮರನಾಥದಲ್ಲಿ ಏಕಾಏಕಿ ಸೃಷ್ಟಿಯಾದ ಪ್ರವಾಹದಿಂದ ನದಿ ತಟದಲ್ಲಿ ಹಾಕಲಾಗಿದ್ದ ಶಿಬಿರಗಳು ಕೊಚ್ಚಿ ಹೋಗಿವೆ. ಘಟನೆಯಲ್ಲಿ ಸಾವಿನ ಸಂಖ್ಯೆ ಏರಿಕೆ ಕಾಣುತ್ತಿದೆ. ಇದುವರೆಗೆ 16 ಜನರು ಮೃತಪಟ್ಟಿದ್ದಾರೆ. ಇದನ್ನೂ ಓದಿ: ಆಪರೇಷನ್ ಅಮರನಾಥ ಚಾಲೆಂಜ್ ಆಗಿದೆ: ಕರ್ನಲ್ ವಿ.ಎಂ. ನಾಯಕ್

    ದೇಶಾದ್ಯಂತ ಭಾರಿ ಮಳೆಯಾಗುತ್ತಿದ್ದು ಹಲವೆಡೆ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ನಿನ್ನೆ ಜಮ್ಮು ಮತ್ತು ಕಾಶ್ಮೀರದ ಹಿಮಾಲಯ ಭಾಗದಲ್ಲಿ ಮೇಘಸ್ಫೋಟಗೊಂಡು ಭೀಕರ ಪ್ರವಾಹ ಸೃಷ್ಟಿಯಾಗಿದೆ. ಕಣಿವೆ ತಟದಲ್ಲಿ ಹರಿಯುತ್ತಿದ್ದ ನದಿ ಒಂದೇ ಸಮನೆ ಉಕ್ಕಿ ಹರಿದಿದ್ದು ಅಮರನಾಥ ಯಾತ್ರಾರ್ಥಿಗಳು ಸಂಕಷ್ಟದಲ್ಲಿ ಸಿಲುಕಿದ್ದಾರೆ. ಈಗಾಗಲೇ ಘಟನೆಯಲ್ಲಿ 45ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಗಾಯಗೊಂಡ ಹಲವರನ್ನು ಏರ್‌ಲಿಫ್ಟ್ ಮಾಡಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇದನ್ನೂ ಓದಿ: ಊರಿಗೆ ವಾಪಾಸಾಗಲು ಅನುಮತಿಗಾಗಿ ಕಾಯುತ್ತಿದ್ದೇವೆ – ಯಾತ್ರೆಯಿಂದಲೇ ಪಬ್ಲಿಕ್ ಟಿವಿಗೆ ಲೈವ್ ಕೊಟ್ಟ ಕನ್ನಡಿಗರು

    Live Tv
    [brid partner=56869869 player=32851 video=960834 autoplay=true]