Tag: Kedarnath Temple

  • ಕೇದಾರನಾಥಲ್ಲಿ ʻಹಿಂದೂಯೇತರರʼ ಪ್ರವೇಶ ನಿಷೇಧಿಸಿ – ಬಿಜೆಪಿ ಶಾಸಕಿ ವಿವಾದಿತ ಹೇಳಿಕೆ

    ಕೇದಾರನಾಥಲ್ಲಿ ʻಹಿಂದೂಯೇತರರʼ ಪ್ರವೇಶ ನಿಷೇಧಿಸಿ – ಬಿಜೆಪಿ ಶಾಸಕಿ ವಿವಾದಿತ ಹೇಳಿಕೆ

    ಡೆಹ್ರಾಡೂನ್: ಹಿಂದೂಯೇತರರು ಕೇದಾರನಾಥ (Kedarnath) ಧಾಮದ ಪ್ರತಿಷ್ಠೆಗೆ ಧಕ್ಕೆ ತರುತ್ತಿದ್ದಾರೆ. ಆದ್ದಿರಿಂದ ಇಲ್ಲಿಗೆ ಹಿಂದೂ ಅಲ್ಲದವರ ಪ್ರವೇಶ ನಿಷೇಧಿಸಬೇಕು ಎಂದು ಬಿಜೆಪಿ ಶಾಸಕಿ ಆಶಾ ನೌಟಿಯಾಲ್ (Asha Nautiyal) ವಿವಾದಿತ ಹೇಳಿಕೆ ನೀಡಿದ್ದಾರೆ.

    ಕೇದಾರನಾಥ ವಿಧಾನಸಭಾ ಕ್ಷೇತ್ರದ ಶಾಸಕಿಯಾಗಿರುವ ಆಶಾ ನೌಟಿಯಾಲ್ ಅವರು ಕೇದಾರನಾಥದಲ್ಲಿ ಚಾರ್ ಧಾಮ್ ‘ಯಾತ್ರೆ’ (Chardham Yatra) ನಿರ್ವಹಣೆ ಕುರಿತು ಸಭೆ ನಡೆಸಿದರು. ಇದೇ ವೇಳೆ ಮಾತನಾಡಿದ ಅವರು, ಜನರು ಎತ್ತಿರುವ ಸಮಸ್ಯೆಗಳಿಗೆ ನಾನು ಸ್ಪಂದಿಸುತ್ತೇನೆ ಮತ್ತು ಕೇದಾರನಾಥ ಧಾಮದ ಪ್ರತಿಷ್ಠೆಗೆ ಕಳಂಕ ತರುವ ಕೆಲವು ಜನರು ಇದ್ದಾರೆ. ಅಂತಹವರು ದೇವಾಲಯದ ಆವರಣ ಪ್ರವೇಶಿಸದಂತೆ ನಿಷೇಧಿಸಬೇಕೆಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಕಾಡಾನೆ ಸೆರೆ ಮೊದಲ ದಿನದ ಕಾರ್ಯಾಚರಣೆ ಯಶಸ್ವಿ – ಸತತ 4 ಗಂಟೆಗಳ ನಂತರ ಒಂಟಿಸಲಗ ಸೆರೆ

    ಮುಂದುವರಿದು… ಹಿಂದೂಯೇತರರು ದೇವಾಲಯದ ಪ್ರತಿಷ್ಠೆಗೆ ಧಕ್ಕೆ ತರುತ್ತಿದ್ದಾರೆ. ಧಕ್ಕೆ ತರುವಂತಹ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾರೆ. ಹೀಗಾಗಿ ಅವರಿಗೆ ಪ್ರವೇಶ ನಿರಾಕರಿಸಬೇಕು ಎಂದು ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಸರ್ಕಾರದ ನಿರ್ಲಕ್ಷ್ಯಕ್ಕೆ ಸರ್ಕಾರಿ ಶಾಲೆಗಳಿಗೆ ಆಪತ್ತು – ಜಿಲ್ಲೆಯಲ್ಲಿ 579 ಶಾಲೆಗಳಲ್ಲಿ 10ಕ್ಕಿಂತ ಕಡಿಮೆ ದಾಖಲಾತಿ

  • ಕೇದಾರನಾಥ್‌ ರೋಪ್‌ವೇಗೆ ಕೇಂದ್ರ ಅಸ್ತು – ಈ ರೋಪ್‌ವೇಯ ವಿಶೇಷತೆಯೇನು?

    ಕೇದಾರನಾಥ್‌ ರೋಪ್‌ವೇಗೆ ಕೇಂದ್ರ ಅಸ್ತು – ಈ ರೋಪ್‌ವೇಯ ವಿಶೇಷತೆಯೇನು?

    ಪ್ರವಾಸೋದ್ಯಮವನ್ನು ಉತ್ತೇಜಿಸುವ ಸಲುವಾಗಿ ಉತ್ತರಾಖಂಡದಲ್ಲಿ 6,811 ಕೋಟಿ ರೂ. ವೆಚ್ಚದಲ್ಲಿ 2 ಹೊಸ ರೋಪ್‌ವೇ ಯೋಜನೆಗಳಿಗೆ ಕೇಂದ್ರ ಸರ್ಕಾರ ಗ್ರೀನ್ ಸಿಗ್ನಲ್ ಕೊಟ್ಟಿದೆ. ಸೋನ್‌ಪ್ರಯಾಗ್‌- ಕೇದಾರನಾಥ್‌ ಮತ್ತು ಹೇಮಕುಂಡ್‌ ಸಾಹಿಬ್‌- ಗೋವಿಂದಘಾಟ್‌ ನಡುವಿನ ರೋಪ್ವೇಗಳು ಮುಂದಿನ 4ರಿಂದ 6 ವರ್ಷಗಳೊಳಗೆ ಪೂರ್ಣಗೊಳಲಿದೆ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಅಶ್ವಿನಿ ವೈಷ್ಣವ್‌ ತಿಳಿಸಿದ್ದಾರೆ.

    ಸೋನ್‌ಪ್ರಯಾಗ್-ಕೇದಾರನಾಥ್ 12.9 ಕಿ.ಮೀ.ವರೆಗಿನ ಮತ್ತು ಹೇಮಕುಂಡ್ ಸಾಹಿಬ್-ಗೋವಿಂದಘಾಟ್ 12.4 ಕಿ.ಮೀ. ನಡುವೆ ರೋಪ್‌ವೇ ನಿರ್ಮಿಸಲಾಗುತ್ತದೆ. ಇದರಿಂದಾಗಿ 8 ಗಂಟೆ ಬೇಕಾಗಿದ್ದ ಪ್ರಯಾಣದ ಅವಧಿ ಕೇವಲ 40 ನಿಮಿಷಕ್ಕೆ ಇಳಿಯಲಿದೆ. ಈ ರೋಪ್‌ವೇಯು ಭಾರತದ ಉದ್ದ ರೋಪ್ ವೇ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.

    ಕೇದಾರನಾಥ್‌ನಿಂದ ಸೋನ್‌ಪ್ರಯಾಗ್‌ ನಡುವಿನ ರೋಪ್‌ವೇ ಅನ್ನು 4,081 ಕೋಟಿ ರೂ. ವೆಚ್ಚದಲ್ಲಿ, ಖಾಸಗಿ ಮತ್ತು ಸರ್ಕಾರದ ಸಹಭಾಗಿತ್ವದಲ್ಲಿ ನಿರ್ಮಿಸಲಾಗುತ್ತದೆ. ಅತ್ಯಾಧುನಿಕ ಟ್ರೈಕೇಬಲ್‌ ಡಿಟ್ಯಾಚೇಬಲ್‌ ಗೊಂಡೋಲ (3ಎಸ್‌) ತಂತ್ರಜ್ಞಾನ ಬಳಸಿ ಇದರ ನಿರ್ಮಾಣವಾಗುತ್ತದೆ. ಪ್ರತಿ ಗಂಟೆಗೆ 1800 ಪ್ರಯಾಣಿಕರು, ಪ್ರತಿ ದಿನ ಸುಮಾರು 18,000 ಪ್ರಯಾಣಿಕರನ್ನು ಈ ಕೇಬಲ್‌ ಕಾರ್ ಹೊತ್ತೊಯ್ಯಲಿದೆ. ಹೇಮಕುಂಡ್‌ ಸಾಹಿಬ್‌ ಜಿ ಮತ್ತು ಗೋವಿಂದಘಾಟ್‌ ನಡುವಿನ ರೋಪ್‌ವೇ 2,730 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ.

    ರೋಪ್‌ವೇನ ವಿಶೇಷತೆ ಏನು?

    ಈ ರೋಪ್‌ವೇ 10 ಆಸನಗಳ ಕ್ಯಾಬಿನ್‌ಗಳನ್ನು ಒಳಗೊಂಡಿರುತ್ತದೆ. ಎಲ್ಲಾ ಕ್ಯಾಬಿನ್‌ಗಳನ್ನು ಮುಚ್ಚಿರುತ್ತದೆ. ಸ್ವಯಂಚಾಲಿತ ತೆರೆಯುವ ಮತ್ತು ಮುಚ್ಚುವ ಬಾಗಿಲುಗಳನ್ನು ಹೊಂದಿರುತ್ತದೆ. ಇವು ಒಂದು ಗಂಟೆಯಲ್ಲಿ 1,800 ಪ್ರಯಾಣಿಕರನ್ನು ಕೊಂಡೊಯ್ಯುವ ಸಾಮರ್ಥ್ಯವನ್ನು ಹೊಂದಿದೆ. ಈ ರೋಪ್‌ವೇ ವರ್ಷವಿಡೀ ಕಾರ್ಯನಿರ್ವಹಿಸುತ್ತದೆ. ಮಳೆಗಾಲ, ಬೇಸಿಗೆ ಕಾಲದ ಸಮಯದಲ್ಲೂ ಕಾರ್ಯನಿರ್ವಹಿಸುತ್ತದೆ.

    ರೋಪ್‌ವೇ ನಿರ್ಮಾಣದ ಲಾಭವೇನು?
    ಹೇಮಕುಂಡ್‌ ಹಾಗೂ ಕೇದಾರನಾಥ ದೇವಸ್ಥಾನಕ್ಕೆ ತೆರಳುವ ದಾರಿ ಕಲ್ಲು ಬಂಡೆಗಳಿಂದ ಕೂಡಿದ್ದು, ಜನ ಕಾಲ್ನಡಿಗೆಯಲ್ಲಿ ಹೋಗುತ್ತಿದ್ದರು. ವೃದ್ಧರನ್ನು ಕುದುರೆಗಳ ಮೇಲೆ ಕೂರಿಸಿಕೊಂಡು ಅಥವಾ ಹೊತ್ತುಕೊಂಡು ಹೋಗಲಾಗುತ್ತಿತ್ತು. ಭೂಕುಸಿತ ಸಂಭವಿಸಿದಾಗ ಪರಿಸ್ಥಿತಿ ಇನ್ನೂ ಹದಗೆಟ್ಟಿತ್ತು. ಈ ರೋಪ್ ವೇಯು ಯಾತ್ರಾರ್ಥಿಗಳ ಪ್ರಯಾಣವನ್ನು ಸುಖಕರಗೊಳಿಸಲು ಹಾಗೂ ಎಲ್ಲಾ ಹವಾಮಾನದಲ್ಲೂ ಓಡಾಡಲು ಅನುಕೂಲವಾಗುತ್ತದೆ. ಇದು ಪರಿಸರ ಸ್ನೇಹಿ ಸಾರಿಗೆ ವ್ಯವಸ್ಥೆಯಾಗಿದ್ದರಿಂದ ಪ್ರಯಾಣದ ಸಮಯವೂ ಕಡಿಮೆಯಾಗಲಿದೆ.

    ವಿಶ್ವ ಪ್ರಸಿದ್ಧ ತೀರ್ಥ ಕ್ಷೇತ್ರಗಳಲ್ಲಿ ಒಂದಾದ ಕೇದಾರನಾಥ ದೇವಾಲಯಕ್ಕೆ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. 12 ಜ್ಯೋತಿರ್ಲಿಂಗಗಳಲ್ಲಿ ಒಂದಾದ ಕೇದಾರನಾಥಕ್ಕೆ 20 ಲಕ್ಷ ಯಾತ್ರಾಧಿಗಳು ಭೇಟಿ ನೀಡುತ್ತಾರೆ. ಇದೀಗ ಈ ದೇವಾಲಯಕ್ಕೆ ತೆರಳಲು ರೋಪ್ ವೇ ನಿರ್ಮಾಣ ಮಾಡುತ್ತಿರುವುದರಿಂದ ಭಕ್ತಾಧಿಗಳು ದುರ್ಗಮ ಹಾದಿಯಲ್ಲಿ ತೆರಳುವುದನ್ನು ತಪ್ಪಿಸುತ್ತದೆ.

    ಭಾರತದ ಮೊದಲ ರೋಪ್‌ವೇ

    1960ರಲ್ಲಿ ಭಾರತದ ಮೊದಲ ಆಧುನಿಕ ರೋಪ್‌ವೇ ಅನ್ನು ರಾಜ್‌ಗೀರ್‌ನಲ್ಲಿ ನಿರ್ಮಿಸಲಾಗಿತ್ತು. ಇದನ್ನು ಪ್ರಸಿದ್ಧ ಜಪಾನಿನ ಬೌದ್ಧ ಸನ್ಯಾಸಿ ಫ್ಯೂಜಿ ಅವರು ರಾಜ್‌ಗೀರ್‌ನ ವಿಶ್ವ ಶಾಂತಿ ಸ್ತೂಪಕ್ಕೆ ಉಡುಗೊರೆಯಾಗಿ ನೀಡಿದ್ದರು ಎಂದು ಕೆಲವು ಮೂಲಗಳು ತಿಳಿಸಿವೆ.

    ಅರುಣಾಚಲದ ತವಾಂಗ್ ಬೌದ್ಧ ಧಾರ್ಮಿಕ ಸ್ಥಳದ ರೋಪ್‌ವೇಯನ್ನು ಸಮುದ್ರ ಮಟ್ಟದಿಂದ 11,000 ಅಡಿ ಎತ್ತರದಲ್ಲಿ 2010ರಲ್ಲಿ ನಿರ್ಮಿಸಲಾಗಿದೆ. ಇದು ವಿಶ್ವದ ಅತಿ ಎತ್ತರದ ರೋಪ್‌ವೇಗಳಲ್ಲಿ ಒಂದಾಗಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿರುವ ಗುಲ್ಮಾರ್ಗ್‌ ರೋಪ್‌ವೇಯು ವಿಶ್ವದ 2 ನೇ ಅತಿ ಎತ್ತರದ ಕೇಬಲ್ ಕಾರನ್ನು ಹೊಂದಿದೆ. ಏಷ್ಯಾದ ಅತಿ ಎತ್ತರದ ಮತ್ತು ಉದ್ದವಾದ ಕೇಬಲ್ ಕಾರನ್ನು ಹೊಂದಿದೆ.

    ಕೇಬಲ್ ಲಿಫ್ಟ್ ಅನ್ನು ವಿಶ್ವದಲ್ಲೇ ಮೊದಲ ಬಾರಿಗೆ ಕ್ರೊಯೇಷಿಯಾದ ಪಾಲಿಮ್ಯಾತ್ ಫೌಸ್ಟೊ ವೆರಾಂಜಿಯೊ ನಿರ್ಮಾಣ ಮಾಡಿದ್ದರು. ಮೊದಲ ಕಾರ್ಯಾಚರಣಾ ವೈಮಾನಿಕ ಲಿಪ್ಟ್ ಅನ್ನು 1644 ರಲ್ಲಿ ಪೋಲೆಂಡ್‌ನ ಗ್ಡಾನ್ಸ್ಕ್ ನಲ್ಲಿ ಆಡಮ್ ವೈಬೆ ನಿರ್ಮಿಸಿದ್ದರು. ಇದನ್ನು ಯುರೋಪಿಯನ್ ಇತಿಹಾಸದಲ್ಲಿ ಮೊದಲ ಕೇಬಲ್ ಲಿಫ್ಟ್ ಎಂದು ಕರೆಯಲಾಗಿತ್ತು.

  • ಕೇದಾರನಾಥ ದೇವಾಲಯಕ್ಕೆ ಯೋಗಿ ಆದಿತ್ಯನಾಥ್ ಭೇಟಿ

    ಕೇದಾರನಾಥ ದೇವಾಲಯಕ್ಕೆ ಯೋಗಿ ಆದಿತ್ಯನಾಥ್ ಭೇಟಿ

    ಡೆಹ್ರಾಡೂನ್: ಉತ್ತರಪ್ರದೇಶ (Uttar Pradesh) ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath) ಅವರು ಮೂರು ದಿನಗಳ ಕಾಲ ಉತ್ತರಾಖಂಡ (Uttarakhand) ಪ್ರವಾಸ ಕೈಗೊಂಡಿದ್ದು, ಕೊನೆಯ ದಿನವಾದ ಭಾನುವಾರದಂದು ಕೇದಾರನಾಥ ದೇವಾಲಯಕ್ಕೆ (Kedarnath Temple)  ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು.

    ಈ ವೇಳೆ ನೆರೆದಿದ್ದ ಜನರು ಜೈ ಶ್ರೀರಾಮ್ ಎಂದು ಘೋಷಣೆ ಕೂಗಿದರು ಮತ್ತು ಮುಖ್ಯಮಂತ್ರಿಗಳಿಗೆ ಶುಭಾಶಯ ಕೋರಿದರು. ಬದರಿ ಕೇದಾರ ದೇವಸ್ಥಾನ ಸಮಿತಿ ಅಧ್ಯಕ್ಷ ಅಜಯ್ ಅಜಯೇಂದ್ರ ಹಾಗೂ ಇತರ ಗಣ್ಯರು ಕೇದಾರನಾಥ ಹೆಲಿಪ್ಯಾಡ್‌ಗೆ ಆಗಮಿಸಿ ಪುಷ್ಪಗುಚ್ಛ ನೀಡಿ ಯೋಗಿ ಆದಿತ್ಯನಾಥ್ ಅವರನ್ನು ಬರಮಾಡಿಕೊಂಡರು. ಇದನ್ನೂ ಓದಿ: ನನ್ನನ್ನು ಸಾಯಿಸ್ಬೇಡಿ- ಬೇಡಿಕೊಂಡ್ರೂ ಬಿಡದೆ ಯುವತಿ ಅಪಹರಿಸಿದ ಹಮಾಸ್ ಉಗ್ರರು

    ಅರ್ಚಕ ಸಮುದಾಯದವರು ಯೋಗಿ ಆದಿತ್ಯನಾಥ್ ಅವರನ್ನು ಸಾಂಪ್ರದಾಯಿಕ ಮಂತ್ರ ಪಠಣದೊಂದಿಗೆ ಅಭಿನಂದಿಸಿದರು. ಕೇದಾರನಾಥ ದೇಗುಲಕ್ಕೆ ಭೇಟಿ ನೀಡಿದ ಯೋಗಿ ಆದಿತ್ಯನಾಥ್ ದೇಶ ಮತ್ತು ರಾಜ್ಯದ ಜನತೆಯ ಒಳಿತಿಗಾಗಿ ಪ್ರಾರ್ಥಿಸಿದರು. ಇದನ್ನೂ ಓದಿ: ಪ್ರತಿನಿತ್ಯ ನೂರು ಸೈಬರ್ ದಾಳಿಗಳ ವಿರುದ್ಧ ಇಸ್ರೋ ಹೋರಾಟ: ಎಸ್.ಸೋಮನಾಥ್

    ಈ ಸಂದರ್ಭ ಉತ್ತರಪ್ರದೇಶ ಮುಖ್ಯ ಕಾರ್ಯದರ್ಶಿ ದುರ್ಗಾ ಶಂಕರ್ ಮಿಶ್ರಾ, ಪ್ರಧಾನ ಕಾರ್ಯದರ್ಶಿ ಸಂಜಯ್ ಪ್ರಸಾದ್ ಮತ್ತು ಪ್ರವಾಸೋದ್ಯಮ ಪ್ರಧಾನ ಕಾರ್ಯದರ್ಶಿ ಮುಖೇಶ್ ಮೆಶ್ರಾಮ್ ಉಪಸ್ಥಿತರಿದ್ದರು. ಇದನ್ನೂ ಓದಿ: ಕಷ್ಟದ ಸಮಯದಲ್ಲಿ ಇಸ್ರೇಲ್ ಪರ ಒಗ್ಗಟ್ಟಿನಿಂದ ನಿಲ್ಲುತ್ತೇವೆ: ನರೇಂದ್ರ ಮೋದಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಗುಡ್ಡ ಕುಸಿತ – ಕೇದಾರನಾಥ, ಭದ್ರಿನಾಥ ದೇವಸ್ಥಾನಕ್ಕೆ ಹೋದ 15 ಜನ ಕನ್ನಡಿಗರಿಗೆ ಸಂಕಷ್ಟ

    ಗುಡ್ಡ ಕುಸಿತ – ಕೇದಾರನಾಥ, ಭದ್ರಿನಾಥ ದೇವಸ್ಥಾನಕ್ಕೆ ಹೋದ 15 ಜನ ಕನ್ನಡಿಗರಿಗೆ ಸಂಕಷ್ಟ

    ಬೀದರ್‌: ಕೇದಾರನಾಥ (Kedarnath Temple) ಹಾಗೂ ಭದ್ರಿನಾಥ ದೇವಸ್ಥಾನಕ್ಕೆ (Badrinath Temple) ಹೋದ 15 ಜನ ಕನ್ನಡಿಗರು (Kannadigas) ಭಾರೀ ಗುಡ್ಡ ಕುಸಿತವಾದ ಪರಿಣಾಮ ಉತ್ತರದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದಾರೆ.

    ಉತ್ತರ ಭಾರತಕ್ಕೆ ದೇವರ ದರ್ಶನಕ್ಕೆ ಹೋಗಿದ್ದ ಬೀದರ್ ಜಿಲ್ಲೆಯ 5, ಕಲಬುರಗಿ ಜಿಲ್ಲೆಯ 10 ಜನ ಯಾತ್ರಿಗಳು ಸೇರಿದಂತೆ ಒಟ್ಟು 15 ಮಂದಿ ಕನ್ನಡಿಗರು ತೊಂದರೆಗೆ ಸಿಲುಕಿದ್ದಾರೆ. ಭದ್ರಿನಾಥ ದೇವಸ್ಥಾನಕ್ಕೆ ಹೋಗಿ ವಾಪಸ್ ಹರಿದ್ವಾರಕ್ಕೆ ಬರುವ ಮಾರ್ಗದಲ್ಲಿ ಭಾರಿ ಗುಡ್ಡ ಕುಸಿತವಾದ ಪರಿಣಾಮ ರಸ್ತೆ ಸಂಪರ್ಕ ಕಡಿತಗೊಂಡಿದೆ.

    ಭದ್ರಿನಾಥ ದೇವಸ್ಥಾನಕ್ಕೆ ಸದ್ಯ ಯಾರೂ ಬರಬೇಡಿ. ಇಲ್ಲಿ ಭಾರೀ ಮಳೆಯಾಗುತ್ತಿದೆ. ಜೋತೆಗೆ ಗುಡ್ಡಗಾಡು ಪ್ರದೇಶವಿದ್ದ ದೊಡ್ಡ ದೊಡ್ಡ ಗುಡ್ಡಗಳು ಕುಸಿಯುತ್ತಿವೆ. ಹೀಗಾಗಿ ರಸ್ತೆ ಸಂಪರ್ಕ ಕಡಿತಗೊಳುತ್ತಿವೆ ಎಂದು ಬೀದರ್ ಮೂಲದ ಮಹೇಶ ʼಪಬ್ಲಿಕ್ ಟಿವಿʼ ಮೂಲಕ ಭಕ್ತರಲ್ಲಿ ಮನವಿ ಮಾಡಿಕೊಂಡಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಧಾರ್ಮಿಕ ಕೇಂದ್ರಗಳ ನಿರ್ಲಕ್ಷ್ಯಕ್ಕೆ ಗುಲಾಮಗಿರಿ ಮನಸ್ಥಿತಿಯೇ ಕಾರಣ – ಮೋದಿ

    ಧಾರ್ಮಿಕ ಕೇಂದ್ರಗಳ ನಿರ್ಲಕ್ಷ್ಯಕ್ಕೆ ಗುಲಾಮಗಿರಿ ಮನಸ್ಥಿತಿಯೇ ಕಾರಣ – ಮೋದಿ

    ಡೆಹ್ರಾಡೂನ್: ದೇಶದಾದ್ಯಂತ ಇರುವ ಧಾರ್ಮಿಕ ಕೇಂದ್ರಗಳನ್ನು (Religious Center) ಹಿಂದಿನ ಸರ್ಕಾರಗಳು ನಿರ್ಲಕ್ಷಿಸಿದ್ದವು. ಗುಲಾಮಗಿರಿ ಮನಸ್ಥಿತಿಯೇ ಇದಕ್ಕೆ ಕಾರಣ. ಈಗ ಅವುಗಳ ವೈಭವ ಮರುಸ್ಥಾಪಿಸಲಾಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಹೇಳಿದರು.

    ಉತ್ತರಾಖಂಡದ ಭಾರತ-ಚೀನಾ ಗಡಿಯಲ್ಲಿರುವ ಮನ ಗ್ರಾಮದಲ್ಲಿ ಕೇದಾರನಾಥ (Kedarnath Temple) ಮತ್ತು ಹೇಮಕುಂಡ್ ಸಾಹಿಬ್ ರೋಪ್ ವೇ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು. ಈ ವೇಳೆ ಕಾಶಿ ವಿಶ್ವನಾಥ ದೇವಾಲಯ (Kashi Vishwanath Temple), ಉಜ್ಜಯಿನಿ ಮತ್ತು ಅಯೋಧ್ಯೆಯಲ್ಲಿ ಈಚೆಗೆ ಪುನರ್‌ನಿರ್ಮಾಣ ಕಾರ್ಯಗಳು ನಡೆದಿರುವುದನ್ನು ಉದಾಹರಣೆ ನೀಡಿ ಅವರು ಮಾತನಾಡಿದರು. ಇದನ್ನೂ ಓದಿ: 4ರ ಬಾಲಕಿ ಮೇಲೆ ಪ್ರಾಂಶುಪಾಲರ ಚಾಲಕನಿಂದ ಅತ್ಯಾಚಾರ – ಶಾಲೆಯನ್ನೇ ಮುಚ್ಚಿಸಿದ ಸರ್ಕಾರ

    ನಮ್ಮ ಧಾರ್ಮಿಕ ಕೇಂದ್ರಗಳು ಕೇವಲ ಕಟ್ಟಡಗಳಲ್ಲ. ಅವು ನಮ್ಮ ಸಾವಿರಾರು ವರ್ಷಗಳ ಸಾಂಸ್ಕೃತಿಕ ಪರಂಪರೆಯ ಸಂಕೇತಗಳು. ಆದರೆ ಹಿಂದಿನ ಸರ್ಕಾರಗಳು (Government) ಧಾರ್ಮಿಕ ಕೇಂದ್ರಗಳನ್ನು ನಿರ್ಲಕ್ಷಿಸಿದ್ದವು. ಗುಲಾಮಗಿರಿ ಮನಸ್ಥಿತಿಯೇ ಇದಕ್ಕೆ ಕಾರಣ ಎಂದು ಕುಟುಕಿದರು. ಇದನ್ನೂ ಓದಿ: ಅಭಿಮಾನಿಗಳ ಮೂಲಕ ಅಪ್ಪು ಇನ್ನೂ ಜೀವಂತವಾಗಿದ್ದಾರೆ: ನಟಿ ರಮ್ಯಾ

    ಹಿಮಾಲಯದ ತಪ್ಪಲಿನ ಧಾರ್ಮಿಕ ಕೇಂದ್ರಗಳ ಅಭಿವೃದ್ಧಿಯು ಯಾತ್ರಿಕರಿಗೆ ಅನುಕೂಲ ಉಂಟುಮಾಡುವುದರ ಜೊತೆಗೆ ಸ್ಥಳೀಯರಿಗೆ ಉದ್ಯೋಗಾವಕಾಶ ಸೃಷ್ಟಿಸಿದೆ. ಸ್ಥಳೀಯ ಆರ್ಥಿಕತೆಗೆ ಉತ್ತೇಜನ ನೀಡಿದೆ. ಹೇಮಕುಂಡ್ ಸಾಹಿಬ್ ಗುರುದ್ವಾರಕ್ಕೆ ರೋಪ್‌ವೇ ನಿರ್ಮಿಸುವ ಯೋಜನೆಗೆ ಚಾಲನೆ ನೀಡಿರುವುದು ದೇಶದಲ್ಲಿ ಮಾತ್ರವಲ್ಲದೆ ಬ್ರಿಟನ್, ಜರ್ಮನಿ ಕೆನಡಾದಲ್ಲಿ ನೆಲೆಸಿರುವ ಸಿಖ್ ಸಮುದಾಯದವರಲ್ಲಿ ಹರ್ಷ ಉಂಟುಮಾಡಿದೆ ಎಂದು ಶ್ಲಾಘಿಸಿದರು.

    ಇದಕ್ಕೂ ಮೊದಲು ಮೋದಿ ಅವರು ಕೇದಾರನಾಥ ಮತ್ತು ಬದರೀನಾಥ ದೇವಾಲಯಗಳಿಗೆ ಭೇಟಿ ನೀಡಿದ್ದರು.

    Live Tv
    [brid partner=56869869 player=32851 video=960834 autoplay=true]

  • ಮೋದಿಗಾಗಿ 30 ಗಂಟೆಯಲ್ಲಿ ಬಂಗಾರದ ಕೇದಾರನಾಥ ದೇವಾಲಯ ನಿರ್ಮಾಣ

    ಮೋದಿಗಾಗಿ 30 ಗಂಟೆಯಲ್ಲಿ ಬಂಗಾರದ ಕೇದಾರನಾಥ ದೇವಾಲಯ ನಿರ್ಮಾಣ

    ಕಾರವಾರ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಮೇಲಿನ ಅಭಿಮಾನದಿಂದ ಅಭಿಮಾನಿಯೊಬ್ಬ ಬರೋಬ್ಬರಿ 30 ಗಂಟೆಯಲ್ಲಿ ಬಂಗಾರದ ಕೇದಾರನಾಥ ದೇವಾಲಯವನ್ನು ನಿರ್ಮಿಸಿ ಉಡುಗೊರೆ ನೀಡಲು ತಯಾರಿ ನಡೆಸಿದ್ದಾರೆ.

    ಉತ್ತರ ಕನ್ನಡ ಜಿಲ್ಲೆಯ ಕಾರವಾರ ಕಡವಾಡದ ನಿವಾಸಿ ಮಿಲಿಂದ ಉದಯಕಾಂತ ಅಣ್ವೇಕರ್ ಕೇದಾರನಾಥ ದೇವಸ್ಥಾನದ ಪ್ರತಿಕೃತಿಯನ್ನು ತಯಾರಿಸಿದ್ದಾರೆ. ಇವರು ಬೆಳ್ಳಿ, ಬಂಗಾರ ಹಾಗೂ ತಾಮ್ರ ಮಿಶ್ರಣ ಮಾಡಿದ 54 ಗ್ರಾಂ ತೂಕದ ಮೂರು ಇಂಚು ಅಗಲ, ಮೂರು ಇಂಚು ಉದ್ದದ ಕೇದಾರನಾಥ ಮಂದಿರ ನಿರ್ಮಾಣ ಮಾಡಿದ್ದು, ಮೋದಿ ಅವರಿಗೆ ಉಡುಗೊರೆ ನೀಡಲು ಮುಂದಾಗಿದ್ದಾರೆ.

    ಅಣ್ವೇಕರ್ 30 ಗಂಟೆಯಲ್ಲಿ ಇದರ ನಿರ್ಮಾಣ ಮಾಡಿದ್ದು, ದೇವಸ್ಥಾನದ ಗರ್ಭ ಗುಡಿಯಲ್ಲಿ 4mm ನ ಅತಿಚಿಕ್ಕ ಬಂಗಾರದ ಶಿವಲಿಂಗ ಸಹ ನಿರ್ಮಿಸಲಾಗಿದೆ. ಮೂಲತಃ ಅಕ್ಕಸಾಲಿಗರಾಗಿರುವ ಇವರು 2013ರಲ್ಲಿ 19.975 ಇಂಚಿನ ಚೈನ್ ತಯಾರಿಸಿ ಲಿಮ್ಕಾ ದಾಖಲೆ ನಿರ್ಮಿಸಿದ್ದರು. ಈ ಬಾರಿ ಮೋದಿಯವರ ಇಷ್ಟ ದೈವ ಕೇದಾರನಾಥ ಮಂದಿರ ನಿರ್ಮಿಸಿ ಉಡುಗೊರೆ ಯಾಗಿ ನೀಡಲು ಬಯಸಿದ್ದಾರೆ. ಹೀಗಾಗಿ ಇದನ್ನು ನಿರ್ಮಿಸಿರುವುದಾಗಿ ಪಬ್ಲಿಕ್ ಟಿ.ವಿ ಗೆ ಮಾಹಿತಿ ನೀಡಿದ್ದಾರೆ.

  • ಕೇದಾರನಾಥ ಸನ್ನಿಧಿಯಲ್ಲಿ ಬಾಹುಬಲಿ ಚೆಲುವೆ ಅನುಷ್ಕಾ ಶೆಟ್ಟಿ – ಅಭಿಮಾನಿಗಳು ಗರಂ

    ಕೇದಾರನಾಥ ಸನ್ನಿಧಿಯಲ್ಲಿ ಬಾಹುಬಲಿ ಚೆಲುವೆ ಅನುಷ್ಕಾ ಶೆಟ್ಟಿ – ಅಭಿಮಾನಿಗಳು ಗರಂ

    ಡೆಹ್ರಾಡೂನ್: ಬಾಹುಬಲಿಯ ಚೆಲುವೆ, ಭಾಗಮತಿ ನಟಿ ಅನುಷ್ಕಾ ಶೆಟ್ಟಿ ಅವರು ಉತ್ತರಾಖಂಡದ ಕೇದಾರನಾಥ ಸನ್ನಿಧಿಗೆ ಭೇಟಿ ನೀಡಿ ಶಿವನ ದರ್ಶನ ಪಡೆದಿದ್ದಾರೆ.

    ಬಾಹುಬಲಿ ಸಿನಿಮಾದಲ್ಲಿ ದೇವಾಸೇನ ಪಾತ್ರದಲ್ಲಿ ಅದ್ಭುತವಾಗಿ ಅಭಿನಯಿಸಿ ಅಭಿಮಾನಿಗಳ ಮೆಚ್ಚುಗೆ ಪಾತ್ರರಾಗಿರುವ ಅನುಷ್ಕಾ ಶೆಟ್ಟಿ ಕೇದಾರನಾಥ ಶಿವನ ಸನ್ನಿಧಿಗೆ ಭೇಟಿ ನೀಡಿದ್ದಾರೆ. ಅನುಷ್ಕಾ ಅವರು ತಾವು ಉಳಿದುಕೊಂಡಿದ್ದ ಸ್ಥಳದಿಂದ ಸುಮಾರು 17 ಕಿ.ಮೀ. ದೂರ ಕಾಲ್ನಡಿಗೆಯಲ್ಲಿಯೇ ದೇವಾಸ್ಥಾನಕ್ಕೆ ಹೋಗಿದ್ದಾರೆ.

    ಮುಂಜಾನೆ ಸುಮಾರು 4 ಗಂಟೆಗೆ ನಡೆಯಲು ಆರಂಭಿಸಿದ್ದು, 8 ಗಂಟೆಗೆ ದೇವಾಸ್ಥಾನಕ್ಕೆ ತಲುಪಿದ್ದಾರೆ. ಅಲ್ಲಿ ಶಿವನ ದರ್ಶನ ಪಡೆದಿದ್ದು, ವಿಶೇಷ ಪೂಜೆ ಮಾಡಿಸಿದ್ದಾರೆ.

    ಪೂಜೆ ಮುಗಿಸಿ ಹಿಂದಿರುಗುವಾಗ ಅಭಿಮಾನಿಗಳು ತಮ್ಮ ನೆಚ್ಚಿನ ನಟಿಯೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಂದಾಗಿದ್ದಾರೆ. ಮೊದಮೊದಲು ಅಭಿಮಾನಿಗಳ ಜೊತೆ ಸೆಲ್ಫಿಗೆ ಪೋಸ್ ಕೊಟ್ಟಿದ್ದಾರೆ. ನಂತರ ಅಭಿಮಾನಿಗಳ ಜೊತೆ ಫೋಟೋ ತೆಗೆಸಿಕೊಳ್ಳುವುದನ್ನು ನಿರಾಕರಿಸಿ ಹೊರಟು ಹೋಗಿದ್ದಾರೆ. ಇದರಿಂದ ಅಭಿಮಾನಿಗಳು ಅನುಷ್ಕಾ ಮೇಲೆ ಗರಂ ಆಗಿದ್ದಾರೆ.

    ಕೇದಾರನಾಥ ಸನ್ನಿಧಿಯಲ್ಲಿ ಭದ್ರತೆ ಸಮಸ್ಯೆ ಇದ್ದುದ್ದರಿಂದ ಅನುಷ್ಕಾ ಸೆಲ್ಫಿಗೆ ನಿಕಾರಿಸಿದ್ದಾರೆ. ನಂತರ ಅವರ ಅಲ್ಲಿಂದ ಅರ್ಧದಾರಿಯವರೆಗೆ ನಡೆದುಕೊಂಡು ಹೋಗಿದ್ದಾರೆ. ಇನ್ನು ಅರ್ಧದಾರಿಯಲ್ಲಿ ಕುದುರೆಯನೇರಿ ಹೋಗಿದ್ದಾರೆ.

    ಬಾಹುಬಲಿ ಸಿರೀಸ್ ಚಿತ್ರದ ಬಳಿಕ ಅನುಷ್ಕಾ ಅವರು, ಜಿ. ಅಶೋಕ್ ನಿರ್ದೇಶನದಲ್ಲಿ ಚಿತ್ರ ಮೂಡಿಬಂದಿರುವ ಭಾಗಮತಿ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಈ ಸಿನಿಮಾ ಒಂದು ಮಹಿಳಾ ಪ್ರಧಾನ ಕಥೆಯ ಚಿತ್ರವಾಗಿದ್ದು, ಥ್ರಿಲ್ಲರ್ ಹಾರರ್ ಹೂರಣವಿದೆ. ವಂಶಿ ಕೃಷ್ಣರೆಡ್ಡಿ ನಿರ್ಮಿಸಿರುವ ಈ ಚಿತ್ರದಲ್ಲಿ ಅನುಷ್ಕಾ ವಿಭಿನ್ನ ಶೇಡ್‍ಗಳಲ್ಲಿ ಕಂಗೊಳಿಸಿದ್ದಾರೆ.