Tag: Kedaranatha

  • ಪ್ರಧಾನಿ ಮೋದಿ ಧ್ಯಾನದ ಗುಹೆಯ ವಿಶೇಷತೆ ಏನು?

    ಪ್ರಧಾನಿ ಮೋದಿ ಧ್ಯಾನದ ಗುಹೆಯ ವಿಶೇಷತೆ ಏನು?

    – ಗುಹೆಯಲ್ಲಿ ಸಿಸಿಟಿವಿ, ಶೌಚಾಲಯ, ವಿದ್ಯುತ್

    ನವದೆಹಲಿ: ಲೋಕಸಮರದ ಬಹಿರಂಗ ಪ್ರಚಾರಕ್ಕೆ ತೆರೆ ಬೀಳುತ್ತಲೇ ಶನಿವಾರ ಪಹರಿ ಉಡುಗೆಯಲ್ಲಿ ಕೇದಾರನಾಥದಲ್ಲಿ ಪ್ರಧಾನಿ ಮೋದಿ ಪೂಜೆ ಸಲ್ಲಿಸಿದರು. ಅಲ್ಲಿಂದ ಮಳೆಯಲ್ಲೇ ನಡೆದು ಸುಮಾರು ಎರಡು ಕಿ.ಮೀ ದೂರವಿರುವ ಗುಹಾಲಯಕ್ಕೆ ತೆರಳಿ ಗವಿಯೊಳಗೆ ಧ್ಯಾನ ಮಾಡಿದರು. ಪ್ರಧಾನಿಗಳು ಧ್ಯಾನ ಕೈಗೊಂಡ ಗುಹಾಲಯದಲ್ಲಿ ಸಿಸಿಟಿವಿ, ಶೌಚಾಲಯ ಮತ್ತು ವಿದ್ಯುತ್ ವ್ಯವಸ್ಥೆಯನ್ನು ಒಳಗೊಂಡಿತ್ತು ಎಂದು ಮಾಧ್ಯಮವೊಂದು ವರದಿ ಮಾಡಿದೆ.

    ಪ್ರಧಾನಿಗಳು ಧ್ಯಾನಕ್ಕೆ ಕುಳಿತ ಗುಹೆ ಮೂಲಭೂತ ಸೌಲಭ್ಯಗಳನ್ನು ಒಳಗೊಂಡಿತ್ತು. ಗುಹೆಯಲ್ಲಿ ಸುಸಜ್ಜಿತ ಕೋಣೆ, ಶೌಚಾಲಯ ಒಳಗೊಂಡಿತ್ತು. ಇಲ್ಲಿಯೇ ಪ್ರಧಾನಿಗಳು ಬರೋಬ್ಬರಿ 17 ಗಂಟೆಗಳ ಕಾಲ ಧ್ಯಾನ ಮಾಡಿದ್ದಾರೆ. ಸಮುದ್ರ ಮಟ್ಟದಿಂದ 12 ಸಾವಿರ ಕಿ.ಮೀ.ಎತ್ತರದಲ್ಲಿರುವ ಈ ಗುಹೆಯಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿತ್ತು. ಗುಹೆ ಕಿಟಿಕಿಯನ್ನು ಹೊಂದಿದ್ದು, ಇಲ್ಲಿಂದಲೇ ನೇರವಾಗಿ ಕೇದಾರನಾಥ ಧಾಮದ ದರ್ಶನ ಮಾಡಬಹುದು. ಗುಹೆ 10 ಅಡಿ ಎತ್ತರವನ್ನು ಹೊಂದಿದ್ದು, ಸಾಮಾನ್ಯ ವ್ಯಕ್ತಿ ಸರಳವಾಗಿ ನಡೆದಾಡಬಹುದು.

    ಪ್ರಧಾನಿಗಳು ಕೇದಾರನಾಥ ಧಾಮಕ್ಕೆ ಬರುವ ಮೊದಲೇ ಗುಹೆಯಲ್ಲಿ ನೀರು, ವಿದ್ಯುತ ಸೇರಿದಂತೆ ಎಲ್ಲ ಸೌಲಭ್ಯವನ್ನು ಅಳವಡಿಸಲಾಗಿತ್ತು ಎಂದು ನೆಹರು ಇನ್ಸಿಟ್ಯೂಟ್ ಆಫ್ ಮೌಂಟೇನಿಯರಿಂಗ್ ಸಿಬ್ಬಂದಿ ಹೇಳಿದ್ದಾರೆ.

    ದೊಡ್ಡ ಕಲ್ಲಿನಲ್ಲಿ ಕೊರೆದು ಈ ಗುಹೆಯನ್ನು ನಿರ್ಮಿಸಲಾಗಿತ್ತು. ಬಹುದಿನಗಳವರೆಗೆ ಬಂದ್ ಆಗಿದ್ದ ಗುಹೆಯನ್ನು ಸುರಕ್ಷೆಯ ದೃಷ್ಟಿಯಿಂದ ಸಂಪೂರ್ಣವಾಗಿ ಪರಿಶೀಲಿಸಿ ಪ್ರಧಾನಿಗಳ ಧ್ಯಾನಕ್ಕೆ ವ್ಯವಸ್ಥೆ ಕಲ್ಪಿಸಲಾಗಿತ್ತು. ಗುಹೆಯ ಹೊರಗಡೆ ಎಸ್‍ಪಿಜಿ ಸಿಬ್ಬಂದಿಯನ್ನು ಕಾವಲು ಇರಿಸಲಾಗಿತ್ತು.