Tag: kedar jadhav

  • ಮೂರು ಮಾದರಿಯ ಕ್ರಿಕೆಟ್‌ನಿಂದ ಕೇದಾರ್ ಜಾಧವ್ ನಿವೃತ್ತಿ

    ಮೂರು ಮಾದರಿಯ ಕ್ರಿಕೆಟ್‌ನಿಂದ ಕೇದಾರ್ ಜಾಧವ್ ನಿವೃತ್ತಿ

    ನವದೆಹಲಿ: ಟಿ20 ವಿಶ್ವಕಪ್ 2024 ಆರಂಭವಾಗಿದ್ದು, ಜೂನ್ 5 ರಿಂದ ಐರ್ಲೆಂಡ್ ವಿರುದ್ಧದ ಪಂದ್ಯವನ್ನು ಆಡುವ ಮೂಲಕ ಭಾರತ ತಂಡ ಫೀಲ್ಡ್‌ಗಿಳಿಯಲಿದೆ. ಈ ನಡುವೆ ಭಾರತ ತಂಡದ ಸ್ಟಾರ್ ಬ್ಯಾಟ್ಸ್‌ಮನ್ ಕೇದಾರ್ ಜಾಧವ್ (Kedar Jadhav) ನಿವೃತ್ತಿ ಘೋಷಿಸಿದ್ದಾರೆ.

    ಎಂಎಸ್‌ ಧೋನಿ ರೀತಿಯಲ್ಲಿಯೇ ಕೇದಾರ್ ಜಾಧವ್ ಅವರು ಸೋಶಿಯಲ್‌ ಮೀಡಿಯಾದಲ್ಲಿ ತಮ್ಮ ನಿವೃತ್ತಿಯ ಕುರಿತು ಬಹಿರಂಗಪಡಿಸಿದ್ದಾರೆ. ಇಂದು ತಮ್ಮ ತಮ್ಮಎಕ್ಸ್‌ ಖಾತೆಯಲ್ಲಿ ನಿವೃತ್ತಿ ಘೋಷಿಸಿರುವ ಅವರು, ನನ್ನನ್ನು ಬೆಂಬಲಿಸಿದ ಮತ್ತು ಪ್ರೀತಿಸಿದ್ದಕ್ಕಾಗಿ ಎಲ್ಲರಿಗೂ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ಕೇದಾರ್ ಜಾಧವ್ ಅವರು ಎಲ್ಲಾ ಮೂರು ಮಾದರಿಯ ಕ್ರಿಕೆಟ್‌ನಿಂದ ನಿವೃತ್ತಿಯಾಗಿದ್ದಾರೆ.

    2014 ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಕೇದಾರ್ ಜಾಧವ್ ಪಾದಾರ್ಪಣೆ ಮಾಡಿದರು. 2014 ರ ನವೆಂಬರ್ 16‌ ರಂದು ರಾಂಚಿಯಲ್ಲಿ ಶ್ರೀಲಂಕಾ ವಿರುದ್ಧ ತಮ್ಮ ಮೊದಲ ODI ಆಡಿದರು. ಬಳಿಕ 2020ರ ಫೆಬ್ರವರಿ 8 ರಂದು ನ್ಯೂಜಿಲೆಂಡ್ ವಿರುದ್ಧ ತಮ್ಮ ಕೊನೆಯ ODI ಪಂದ್ಯವನ್ನು ಆಡಿದರು. ಕೇದಾರ್ ಒಟ್ಟು 73 ಪಂದ್ಯಗಳನ್ನು ಆಡಿದ್ದಾರೆ. ಏಕದಿನದಲ್ಲಿ 1389 ರನ್ ಗಳಿಸಿರುವ ಅವರು, ಒಟ್ಟು 2 ಶತಕಗಳನ್ನು ಗಳಿಸಿದ್ದಾರೆ. ಅಲ್ಲದೇ 6 ಅರ್ಧ ಶತಕಗಳನ್ನು ಸಿಡಿಸಿದ್ದಾರೆ. ಟಿ20ಯಲ್ಲಿ ಕೇದಾರ್ 9 ಪಂದ್ಯಗಳಲ್ಲಿ 122 ರನ್ ಗಳಿಸಿದ್ದರು.

  • ಭಾರತೀಯ ಸ್ಟಾರ್‌ ಕ್ರಿಕೆಟಿಗನ ತಂದೆ ನಾಪತ್ತೆ – ಪುಣೆ ಪೊಲೀಸರಿಂದ ಶೋಧ

    ಭಾರತೀಯ ಸ್ಟಾರ್‌ ಕ್ರಿಕೆಟಿಗನ ತಂದೆ ನಾಪತ್ತೆ – ಪುಣೆ ಪೊಲೀಸರಿಂದ ಶೋಧ

    ಮುಂಬೈ: ಭಾರತೀಯ ಕ್ರಿಕೆಟಿಗ (Indian Cricketer) ಕೇದಾರ್‌ ಜಾಧವ್‌ (Kedar Jadhav) ಅವರ ತಂದೆ ನಾಪತ್ತೆಯಾಗಿದ್ದಾರೆ ಎಂದು ಜಾಧವ್‌ ಸೋಮವಾರ ಪುಣೆಯ (Pune) ಅಲಂಕಾರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. 75 ವರ್ಷದ ಮಹದೇವ್ ಸೋಪಾನ್ ಜಾಧವ್‌ಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.

    ಮೂಲಗಳ ಪ್ರಕಾರ, ಕೇದಾರ್ ಜಾಧವ್‌ ಮತ್ತು ಮಹದೇವ್ ಜಾಧವ್ ಪುಣೆ ನಗರದ ಕೊತ್ರುಡ್ ಪ್ರದೇಶದ ನಿವಾಸಿಗಳು. ಮಹದೇವ್‌ ಸೋಮವಾರ ಮನೆಯವರಿಗೆ ತಿಳಿಸದೇ ಹೊರಗಡೆ ಹೋಗಿದ್ದಾರೆ. ಬಹಳ ಹೊತ್ತಾದರೂ ಮನೆಗೆ ಹಿಂದಿರುಗಿಲ್ಲ. ಇದರಿಂದ ಆತಂಕಗೊಂಡ ಕುಟುಂಬಸ್ಥರು ಸಂಜೆವರೆಗೂ ಹುಡುಕಾಡಿದರೂ ಸಿಗದಿದ್ದಾಗ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ಇದನ್ನೂ ಓದಿ: ರೋಚಕ ಫೈನಲ್‌ – ಮುಂಬೈ ಇಂಡಿಯನ್ಸ್‌ ಚೊಚ್ಚಲ WPL ಚಾಂಪಿಯನ್‌

    ನಾಪತ್ತೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಶೋಧ ಆರಂಭಿಸಿದ್ದು, ಇತರ ಪೊಲೀಸ್‌ ಠಾಣೆಗೂ ಜಾಧವ್‌ ಅವರ ತಂದೆ ಫೋಟೋವನ್ನು ಕಳುಹಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: WPLನಲ್ಲಿ ನೋಬಾಲ್‌ ವಿವಾದ – ಚಾಂಪಿಯನ್‌ ಪಟ್ಟ ಕೈತಪ್ಪಿಸಿದ ಆ ಒಂದು ಔಟ್‌

  • ‘ಪೋಸ್ ಕೊಡೋದು ಬಿಟ್ಟು, ಬ್ಯಾಟಿಂಗ್ ಕಡೆ ಗಮನ ಕೊಡು’: ರೋಹಿತ್ ಶರ್ಮಾ

    ‘ಪೋಸ್ ಕೊಡೋದು ಬಿಟ್ಟು, ಬ್ಯಾಟಿಂಗ್ ಕಡೆ ಗಮನ ಕೊಡು’: ರೋಹಿತ್ ಶರ್ಮಾ

    ಮುಂಬೈ: ಟೀಂ ಇಂಡಿಯಾ ಕ್ರಿಕೆಟ್ ತಂಡದಲ್ಲಿ ಆಡಲು ಅವಕಾಶ ಪಡೆದರೂ, ಶಾಶ್ವತ ಸ್ಥಾನ ಪಡೆಯಲು ಕೇದಾರ್ ಜಾಧವ್ ವಿಫಲರಾಗಿದ್ದು, 2019ರ ವಿಶ್ವಕಪ್ ನಲ್ಲೂ ಕೇದಾರ್ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಿರಲಿಲ್ಲ. ಈ ನಡುವೆ ಕೇದಾರ್ ಜಾಧವ್‍ರ ಇನ್‍ಸ್ಟಾ ಪೋಸ್ಟ್ ಗೆ ರೋಹಿತ್ ಶರ್ಮಾ ಆಸಕ್ತಿದಾಯಕ ಕಾಮೆಂಟ್ ಮಾಡಿ ಗಮನ ಸೆಳೆದಿದ್ದಾರೆ.

    ಕೇದಾರ್ ಜಾಧವ್ ತಮ್ಮ ಇನ್‍ಸ್ಟಾದಲ್ಲಿ ಬ್ಯಾಟಿಂಗ್ ಅಭ್ಯಾಸ ನಡೆಸುವ ವೇಳೆ ತೆಗೆದಿರುವ ಫೋಟೋವನ್ನು ಪೋಸ್ಟ್ ಮಾಡಿದ್ದು, ಈ ಪೋಸ್ಟ್ ಗೆ ಪ್ರತಿಕ್ರಿಯೆ ನೀಡಿರುವ ರೋಹಿತ್ ಶರ್ಮಾ, ‘ಪೋಸ್ ಕೊಡೋದು ಬಿಟ್ಟು, ಬ್ಯಾಟಿಂಗ್ ಕಡೆ ಗಮನ ಕೊಡು’ ಎಂದಿದ್ದಾರೆ. ರೋಹಿತ್ ಶರ್ಮಾ, ಕೇದಾರ್ ಜಾಧವ್ ಅವರೊಂದಿಗೆ ಇರುವ ಸ್ನೇಹದ ಕಾರಣ ಈ ರೀತಿ ಕಾಮೆಂಟ್ ಮಾಡಿದ್ದಾರೆ. ಜಾಧವ್ ಪೋಸ್ಟ್ ಗೆ ರೋಹಿತ್ ನೀಡಿರುವ ಪ್ರತಿಕ್ರಿಯೆ ಇನ್‍ಸ್ಟಾದಲ್ಲಿ ಹೆಚ್ಚು ಪಾಪ್ಯುಲರ್ ಆಗಿದೆ.

    https://www.instagram.com/p/B5o_AZ_F0iz/

    ಇತ್ತೀಚೆಗೆ ನಡೆದ ಸೈಯ್ಯದ್ ಅಲಿ ಮುಷ್ತಾಕ್ ಟಿ-20 ಟ್ರೋಫಿಯಲ್ಲೂ ಜಾಧವ್ ಕಳಪೆ ಪ್ರದರ್ಶನ ತೋರಿದ್ದರು. ಏಕದಿನ ಕ್ರಿಕೆಟ್‍ನಲ್ಲಿ 2 ಶತಕ, 6 ಅರ್ಧ ಶತಕ ಗಳಿಸಿರುವ ಜಾಧವ್‍, ಟಿ-20 ಮಾದರಿಯಲ್ಲಿ 9 ಪಂದ್ಯಗಳಿಂದ 122 ರನ್ ಗಳಿಸಿದ್ದಾರೆ.

    ವೆಸ್ಟ್ ಇಂಡೀಸ್ ವಿರುದ್ಧ ಡಿ.15 ರಿಂದ ಆರಂಭವಾಗುವ 3 ಪಂದ್ಯಗಳ ಏಕದಿನ ಕೇದಾರ್ ಜಾಧವ್ ಹಾಗೂ ರೋಹಿತ್ ಶರ್ಮಾ ಇಬ್ಬರೂ ಸ್ಥಾನ ಪಡೆದಿದ್ದು, ಏಕದಿನ ಸರಣಿಗೂ ಮುನ್ನ ಡಿ.06 ಶುಕ್ರವಾರ ಟೀಂ ಇಂಡಿಯಾ, ವೆಸ್ಟ್ ಇಂಡೀಸ್ ವಿರುದ್ಧ ಮೊದಲ ಟಿ-20 ಪಂದ್ಯವನ್ನು ಆಡಲಿದೆ.

  • ದಿನೇಶ್ ಕಾರ್ತಿಕ್ ಇನ್, ಜಾಧವ್ ಔಟ್ – ಭುವಿ ಕಮ್ ಬ್ಯಾಕ್

    ದಿನೇಶ್ ಕಾರ್ತಿಕ್ ಇನ್, ಜಾಧವ್ ಔಟ್ – ಭುವಿ ಕಮ್ ಬ್ಯಾಕ್

    ಬರ್ಮಿಂಗ್‌ಹ್ಯಾಮ್‌: 2019ರ ವಿಶ್ವಕಪ್ ಟೂರ್ನಿಯಲ್ಲಿ ಮೊದಲ ಸೋಲುಂಡ ಟೀಂ ಇಂಡಿಯಾ ಬಾಂಗ್ಲಾದೇಶದ ವಿರುದ್ಧದ ಪಂದ್ಯದಲ್ಲಿ 2 ಪ್ರಮುಖ ಬದಲಾವಣೆಗಳೊಂದಿಗೆ ಕಣಕ್ಕಿಳಿದಿದೆ.

    ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಕೊಹ್ಲಿ ಪಡೆಯಲ್ಲಿ ದಿನೇಶ್ ಕಾರ್ತಿಕ್ ಕೊನೆಗೂ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇತ್ತ ಗಾಯದ ಸಮಸ್ಯೆಯಿಂದ ತಂಡದಿಂದ ಹೊರಗುಳಿದಿದ್ದ ಭುವನೇಶ್ವರ್ ಕುಮಾರ್ ಕೂಡ ಮತ್ತೆ ತಂಡಕ್ಕೆ ಮರಳಿದ್ದಾರೆ. ಪರಿಣಾಮ ಕುಲ್ದೀಪ್ ಯಾದವ್ ತಂಡದಿಂದ ಹೊರಗುಳಿದಿದ್ದಾರೆ.

    ವಿಜಯ್ ಶಂಕರ್ ಗಾಯದ ಸಮಸ್ಯೆ ಹಿನ್ನೆಲೆಯಲ್ಲಿ ರಿಷಬ್ ಪಂತ್ ತಂಡದಲ್ಲಿ ಸ್ಥಾನ ಪಡೆದಿದ್ದರು. ಆದರೆ ಈ ಹಂತದಲ್ಲಿ ದಿನೇಶ್ ಕಾರ್ತಿಕ್ ಅವರಿಗೆ ಅವಕಾಶ ನೀಡಬೇಕಾಗಿತ್ತು ಎಂದು ವಿಶ್ಲೇಷಕರು ಅಭಿಪ್ರಾಯ ಹಂಚಿಕೊಂಡಿದ್ದರು. ಆದರೆ ಸಿಕ್ಕ ಅವಕಾಶಗಳಲ್ಲಿ ಮಿಂಚಲು ವಿಫಲವಾದ ಹಿನ್ನೆಲೆಯಲ್ಲಿ ಕೇದಾರ್ ಜಾಧವ್ ಸ್ಥಾನ ಕಳೆದುಕೊಂಡಿದ್ದಾರೆ.

    ಜಾಧವ್ ಅವರು ಪಂದ್ಯದ ಕೆಲ ಓವರ್ ಗಳನ್ನು ಎಸೆಯುವ ಸಾಮರ್ಥ್ಯವನ್ನು ಹೊಂದಿದ್ದ ಕಾರಣವಾಗಿ ಅವರಿಗೆ ಮೊದಲು ಮಣೆ ಹಾಕಲಾಗಿತ್ತು. ಆದರೆ ಇದುವರೆಗೂ ಟೂರ್ನಿಯಲ್ಲಿ ಜಾಧವ್ 6 ಓವರ್ ಗಳನ್ನಷ್ಟೇ ಎಸೆದಿದ್ದು, ಯಾವುದೇ ವಿಕೆಟ್ ಪಡೆದಿಲ್ಲ. ಅದರಲ್ಲೂ ಜಾಧವ್‍ಗೆ 3 ಪಂದ್ಯಗಳಲ್ಲಿ ಮಾತ್ರ ಬೌಲ್ ಮಾಡಲು ಅವಕಾಶ ನೀಡಲಾಗಿತ್ತು. ಅಲ್ಲದೇ ಅಫ್ಘಾನಿಸ್ತಾನ ವಿರುದ್ಧ ಹೊರತು ಪಡಿಸಿ ಬ್ಯಾಟಿಂಗ್‍ನಲ್ಲೂ ಜಾಧವ್ ನೀರಸ ಪ್ರದರ್ಶನ ತೋರಿದ್ದರು. ಈ ಹಿನ್ನೆಲೆಯಲ್ಲಿ ಜಾಧವ್‍ರನ್ನ ಕೈಬಿಟ್ಟು ಅನುಭವಿ ದಿನೇಶ್ ಕಾರ್ತಿಕ್‍ಗೆ ಅವಕಾಶ ನೀಡಲಾಗಿದೆ.

     

    ಅಂದಹಾಗೇ 2017 ಚಾಂಪಿಯನ್ ಟ್ರೋಫಿಯಿಂದ ಕಾರ್ತಿಕ್ 20 ಪಂದ್ಯಗಳನ್ನು ಆಡಿದ್ದು, 47ರ ಸರಾಸರಿ 425 ರನ್ ಸಿಡಿಸಿದ್ದಾರೆ. ಬಹುಮುಖ್ಯವಾಗಿ ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ಟೂರ್ನಿಗಳಲ್ಲಿ ಮ್ಯಾಚ್ ಫಿನಿಷರ್ ಆಗಿ ಮಿಂಚಿದ್ದರು. ಅಲ್ಲದೇ ಇಂಗ್ಲೆಂಡ್ ನೆಲದಲ್ಲಿ ಆಡಿರುವ ಅನುಭವವನ್ನು ಕಾರ್ತಿಕ್ ಹೊಂದಿದ್ದು, ಈ ಬಾಂಗ್ಲಾ ವಿರುದ್ಧದ ಪಂದ್ಯದಲ್ಲಿ ಯಾವ ರೀತಿ ಆಡಲಿದ್ದಾರೆ ಎಂಬುವುದನ್ನು ಕಾದು ನೋಡಬೇಕಿದೆ.

  • ಈ ಪ್ರಶ್ನೆಗೆ ನಾನು ವಿವರಣೆ ನೀಡಲ್ಲ – ಧೋನಿ ವಿರುದ್ಧ ಗಂಗೂಲಿ ಅಸಮಾಧಾನ

    ಈ ಪ್ರಶ್ನೆಗೆ ನಾನು ವಿವರಣೆ ನೀಡಲ್ಲ – ಧೋನಿ ವಿರುದ್ಧ ಗಂಗೂಲಿ ಅಸಮಾಧಾನ

    ಬೆಂಗಳೂರು: ಭಾನುವಾರ ನಡೆದ ಪಂದ್ಯದಲ್ಲಿ ಮಂದಗತಿಯ ಬ್ಯಾಟಿಂಗ್ ಮಾಡಿದ ಧೋನಿ ವಿರುದ್ಧ ಮಾಜಿ ನಾಯಕ ಸೌರವ್ ಗಂಗೂಲಿ ಪರೋಕ್ಷವಾಗಿ ಅಸಮಾಧಾನವನ್ನು ಹೊರ ಹಾಕಿದ್ದಾರೆ.

    ನಾಸೀರ್ ಹುಸೇನ್ ಮತ್ತು ಸೌರವ್ ಗಂಗೂಲಿ ಅವರು ವೀಕ್ಷಕ ವಿವರಣೆಗಾರರಾಗಿ ಕಾರ್ಯನಿರ್ವಹಿಸುತ್ತಿದ್ದರು. ಸ್ಲಾಗ್ ಓವರ್ ನಲ್ಲಿ ಧೋನಿ ಒಂಟಿ ರನ್ ತೆಗೆಯುತ್ತಿರುವುದನ್ನು ಕಂಡು ನಾಸೀರ್ ಹುಸೇನ್, ಭಾರತ ಯಾವುದೇ ಪ್ರತಿರೋಧ ತೋರದೇ ಸೋಲನ್ನು ಒಪ್ಪಿಕೊಳ್ಳುತ್ತಿದೆಯಾ ಎನ್ನುವ ಪ್ರಶ್ನೆಗೆ ಗಂಗೂಲಿ, ಈ ಪ್ರಶ್ನೆಗೆ ನಾನು ವಿವರಣೆ ನೀಡಲ್ಲ ಎಂದು ಹೇಳಿದರು.

    ಧೋನಿ ಏನು ಮಾಡುತ್ತಿದ್ದಾರೆ ಎನ್ನುವುದು ಗೊತ್ತಿಲ್ಲ. ಕನಿಷ್ಟ ಈ ಸಮಯದಲ್ಲಿ ಬ್ಯಾಟ್ ಬೀಸಬೇಕು. ಭಾರತದ ಅಭಿಮಾನಿಗಳು ಸ್ಟೇಡಿಯಂ ತೊರೆಯುತ್ತಿದ್ದಾರೆ ಎಂದು ನಾಸೀರ್ ಹುಸೇನ್ ಹೇಳಿದ್ದಕ್ಕೆ ಗಂಗೂಲಿ, ನನಗೆ ಈ ಇಬ್ಬರು ಆಟಗಾರರು ಏನು ಮಾಡುತ್ತಿದ್ದಾರೆ ಎನ್ನುವುದೇ ಅರ್ಥವಾಗುತ್ತಿಲ್ಲ. ಈ ಪ್ರಶ್ನೆಗೆ ನನ್ನ ಬಳಿ ಯಾವುದೇ ಉತ್ತರವಿಲ್ಲ. 5 ವಿಕೆಟ್ ಉಳಿಸಿಕೊಂಡು 20-30 ರನ್ ಚೇಸ್ ಮಾಡದೇ ಆಟವನ್ನು ಅಂತ್ಯಗೊಳಿಸುವುದು ಸರಿಯಲ್ಲ ಎಂದು ಈ ವೇಳೆ ತನ್ನ ಅಭಿಪ್ರಾಯವನ್ನು ತಿಳಿಸಿದರು.

    ಇಂಗ್ಲೆಂಡ್‍ನ ಬರ್ಮಿಗ್ಹ್ಯಾಮ್‍ನಲ್ಲಿ ನಡೆದ ಭಾರತ ಮತ್ತು ಇಂಗ್ಲೆಂಡ್ ನಡುವಿನ ಪಂದ್ಯದಲ್ಲಿ ಇಂಗ್ಲೆಂಡ್ 31 ರನ್‍ಗಳ ಗೆಲುವು ಸಾಧಿಸಿತ್ತು. ಆದರೆ ಇದನ್ನು ಬೆನ್ನಟ್ಟಿದ ಭಾರತ ಕೊನೆಯ 5 ಓವರ್‍ ಗಳಲ್ಲಿ ಮಂದಗತಿ ಬ್ಯಾಟಿಂಗ್ ಮಾಡಿದ್ದಕ್ಕೆ ಧೋನಿ ಹಾಗೂ ಕೇದಾರ್ ಜಾಧವ್ ವಿರುದ್ಧ ಕ್ರಿಕೆಟ್ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ಹೊರ ಹಾಕುತ್ತಿದ್ದಾರೆ.

    ಇಂಗ್ಲೆಂಡ್ ನೀಡಿದ 338 ರನ್‍ಗಳ ಬೃಹತ್ ಮೊತ್ತವನ್ನು ಬೆನ್ನಟ್ಟಿದ್ದ ಭಾರತಕ್ಕೆ ಕೊನೆಯ 30 ಎಸೆತಗಳಲ್ಲಿ ಗೆಲ್ಲಲು 71 ರನ್‍ಗಳ ಅವಶ್ಯಕತೆ ಇತ್ತು. ಈ ವೇಳೆ ಬ್ಯಾಟಿಂಗ್ ಮಾಡುತ್ತಿದ್ದ ಧೋನಿ ಮತ್ತು ಜಾಧವ್ ಅವರು ಓವರ್ ಒಂದಕ್ಕೆ 14 ರನ್‍ಗಳ ಅವಶ್ಯಕತೆ ಇದ್ದರೂ ನಿಧಾನವಾಗಿ ಬ್ಯಾಟ್ ಬೀಸಿದ ಈ ಜೋಡಿ ಕೊನೆಯ 30 ಎಸೆತಗಳಲ್ಲಿ ಕೇವಲ 40 ರನ್ ಪೇರಿಸಿತು.

    ಪಂದ್ಯಕ್ಕೆ ಅಗತ್ಯವಿರುವ ಸ್ಟ್ರೈಕ್ ರೇಟ್‍ನಲ್ಲಿ ಬ್ಯಾಟ್ ಬೀಸದ ಈ ಜೋಡಿ ಕೊನೆಯ ಐದು ಓವರ್‍ ಗಳಲ್ಲಿ 3 ಬೌಂಡರಿ ಮತ್ತು ಕೇವಲ ಒಂದು ಸಿಕ್ಸರ್ ಸಿಡಿಸಿ 41 ರನ್‍ಗಳನ್ನು ಹೊಡೆಯಿತು. ಇದರಲ್ಲಿ ಧೋನಿ 31 ಎಸೆತಗಳಲ್ಲಿ 42 ರನ್ (4, ಬೌಂಡರಿ, 1 ಸಿಕ್ಸರ್) ಸಿಡಿಸಿದರು. ಕೇದಾರ್ ಜಾಧವ್ ಅವರು 13 ಎಸೆತದಲ್ಲಿ ಒಂದು ಬೌಂಡರಿಯೊಂದಗೆ ಕೇವಲ 12 ರನ್ ಹೊಡೆದಿದ್ದಾರೆ. ಇದರಲ್ಲಿ ಕೊನೆಯ ಓವರ್‍ ನಲ್ಲಿ ಮೊದಲ ಎಸೆತದಲ್ಲಿ ಧೋನಿ ಒಂದು ಸಿಕ್ಸರ್ ಸಿಡಿಸಿದರೆ ಅದೇ ಓವರ್‍ ನ 4 ಎಸೆತದಲ್ಲಿ ಜಾಧವ್ ಒಂದು ಬೌಂಡರಿ ಸಿಡಿಸಿದರು.

    ಉತ್ತಮ ಫಿನಿಶರ್ ಎಂದೇ ಹೆಸರುವಾಸಿಯಾದ ಧೋನಿ ಅವರು ಕಳೆದ ಕೆಲ ಪಂದ್ಯಗಳಿಂದ ಅವರು ಆಟದ ಕ್ಷಮತೆ ಕಡಿಮೆ ಆಗಿದೆ ಅವರು ಕೊನೆಯ ಓವರ್‍ನಲ್ಲಿ ಬೌಂಡರಿ ಮತ್ತು ಸಿಕ್ಸರ್ ಸಿಡಿಸಲು ಕಷ್ಟ ಪಡುತ್ತಿದ್ದಾರೆ ಎಂದು ಆರೋಪ ಕೇಳಿಬರುತ್ತಿದೆ. ವಿಶ್ವಕಪ್‍ನಲ್ಲಿ ಸೋಲನ್ನೇ ಕಾಣದ ಭಾರತ ತಂಡ ಈ ಪಂದ್ಯದಲ್ಲಿ ಸೋತಿದ್ದು ಇದಕ್ಕೆ ಕಾರಣ ಧೋನಿ ಮತ್ತು ಕೇದಾರ್ ಜಾಧವ್ ಅವರು ಮಂದಗತಿಯ ಆಟವೇ ಕಾರಣ ಎನ್ನಲಾಗಿದೆ. ಪಂದ್ಯದಲ್ಲಿ ಬಿರುಸಿನ ಬ್ಯಾಟಿಂಗ್ ಮಾಡಿ ಔಟ್ ಆದ ಹಾರ್ದಿಕ್ ಪಾಂಡ್ಯ ರೀತಿಯಲ್ಲೇ ಈ ಜೋಡಿಯು ಬ್ಯಾಟ್ ಬೀಸಿದ್ದರೆ ಪಂದ್ಯವನ್ನು ಗೆಲ್ಲಬಹುದಿತ್ತು ಎಂದು ಅಭಿಮಾನಿಗಳು ಮತ್ತು ಕೆಲ ಕ್ರಿಕೆಟ್ ಪಂಡಿತರು ಬೇಸರ ವ್ಯಕ್ತಪಡಿಸಿದ್ದಾರೆ.

    ಇನ್ನೂ ಕೆಲ ಧೋನಿ ಅಭಿಮಾನಿಗಳು ಈ ಪಂದ್ಯದಲ್ಲಿ ಧೋನಿ 135.48 ರ ಉತ್ತಮ ಸ್ಟ್ರೈಕ್ ರೇಟ್‍ನಲ್ಲೇ ಬ್ಯಾಟ್ ಮಾಡಿದ್ದಾರೆ ಎಂದು ಧೋನಿ ಪರವಾಗಿಯೂ ಬ್ಯಾಟ್ ಬೀಸಿದ್ದಾರೆ.

  • ವಿಶ್ವಕಪ್ 2019: ಟೀಂ ಇಂಡಿಯಾ ಜೊತೆ ಕೇದಾರ್ ಜಾಧವ್ ಪ್ರಯಾಣ ಫಿಕ್ಸ್

    ವಿಶ್ವಕಪ್ 2019: ಟೀಂ ಇಂಡಿಯಾ ಜೊತೆ ಕೇದಾರ್ ಜಾಧವ್ ಪ್ರಯಾಣ ಫಿಕ್ಸ್

    ಮುಂಬೈ: ಟೀಂ ಇಂಡಿಯಾ ಆಟಗಾರ ಕೇದಾರ್ ಜಾಧವ್ ಗಾಯದ ಸಮಸ್ಯೆಯಿಂದ ಹೊರ ಬಂದಿದ್ದು, ವಿಶ್ವಕಪ್ ಟೂರ್ನಿಗೆ ಫಿಟ್ ಆಗಿದ್ದಾರೆ ಎಂಬ ಮಾಹಿತಿ ಲಭಿಸಿದೆ. ಈ ಕುರಿತು ಚೆನ್ನೈ ಸೂಪರ್ ಕಿಂಗ್ಸ್ ತಂಡ ತನ್ನ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿದ್ದು, ಜಾಧವ್‍ಗೆ ಶುಭಕೋರಿದೆ.

    ಚೆನ್ನೈ ತಂಡದ ಪರ ಐಪಿಎಲ್‍ನಲ್ಲಿ ಭಾಗವಹಿಸಿದ್ದ ಕೇದಾರ್ ಜಾಧವ್ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ವಿರುದ್ಧದ ಪಂದ್ಯದ ಫೀಲ್ಡಿಂಗ್ ವೇಳೆ ಗಾಯಗೊಂಡಿದ್ದರು. ಈ ಗಾಯದ ಸಮಸ್ಯೆಯಿಂದ ಅವರು ವಿಶ್ವಕಪ್ ಟೂರ್ನಿ ವೇಳೆಗೆ ಫಿಟ್ ಆಗುತ್ತರಾ ಎಂಬ ಅನುಮಾನ ಮೂಡಿತ್ತು. ಆದರೆ ಬಿಸಿಸಿಐ ಆಯ್ಕೆ ಸಮಿತಿ ಈ ಕುರಿತು ಖಚಿತ ಪಡಿಸಿ ಜಾಧವ್ ಮೇ 22 ರಂದು ಟೀಂ ಇಂಡಿಯಾದೊಂದಿಗೆ ಇಂಗ್ಲೆಂಡ್ ನತ್ತ ತೆರಳಲಿದ್ದಾರೆ ಎಂಬುದನ್ನು ಖಚಿತಪಡಿಸಿದೆ.

    ಜಾಧವ್ ಗಾಯದ ಸಮಸ್ಯೆಯಿಂದ ಚೇತರಿಸಿಕೊಂಡಿರುದು ಟೀಂ ಇಂಡಿಯಾಗೆ ಮತ್ತಷ್ಟು ಬಲ ತುಂಬಲಿದೆ. ತಂಡದ ಮಧ್ಯಮ ಕ್ರಮಾಂಕದ ಬ್ಯಾಟಿಂಗ್‍ನಲ್ಲಿ ಜಾಧವ್ ಮುಖ್ಯ ಪಾತ್ರವಹಿಸಲಿದ್ದಾರೆ. ಅಲ್ಲದೇ ಬೌಲಿಂಗ್‍ನಲ್ಲೂ ಪ್ರಭಾವ ಬೀರಲಿದ್ದಾರೆ. ಮುಂಬೈನಲ್ಲಿ ನಡೆದ ಫಿಟ್ನೆಸ್ ಪರೀಕ್ಷೆಯಲ್ಲಿ ಜಾಧವ್ ಭಾಗವಹಿಸಿದ್ದರು. ಟೀಂ ಇಂಡಿಯಾ ತಂಡದ ಫಿಸಿಯೊ ಪ್ಯಾಟ್ರಿಕ್ ಫರ್ಹಾರ್ತ್, ಜಾಧವ್‍ರ ಫಿಟ್ನೆಸ್ ವರದಿಯನ್ನು ಬಿಸಿಸಿಐಗೆ ಸಲ್ಲಿಸಿತ್ತು.

    ವಿಶ್ವಕಪ್ ಟೂರ್ನಿಯ ಭಾಗವಾಗಿ ಮೇ 25 ನ್ಯೂಜಿಲೆಂಡ್ ವಿರುದ್ಧದ ನಡೆಯಲಿರುವ ಅಭ್ಯಾಸ ಪಂದ್ಯದಲ್ಲಿ ಟೀಂ ಇಂಡಿಯಾ ಆಡಲಿದ್ದು, ಈ ಹಿನ್ನೆಲೆಯಲ್ಲಿ ಮೇ 22 ರಂದೇ ತಂಡ ಇಂಗ್ಲೆಂಡ್‍ಗೆ ಪ್ರಯಾಣ ಬೆಳೆಸಲಿದೆ ಎಂಬ ಮಾಹಿತಿ ಇದೆ. ಮೇ 28 ರಂದು ಬಾಂಗ್ಲಾದೇಶದ ವಿರುದ್ಧ ಭಾರತ ಅಭ್ಯಾಸ ಪಂದ್ಯದಲ್ಲಿ ಭಾಗವಹಿಸಲಿದೆ.

  • ಕೇದಾರ್ ಜಾಧವ್ ಗಾಯದ ಸಮಸ್ಯೆ – ಮೇ 23ರೊಳಗೆ ಬಿಸಿಸಿಐ ಅಂತಿಮ ನಿರ್ಧಾರ

    ಕೇದಾರ್ ಜಾಧವ್ ಗಾಯದ ಸಮಸ್ಯೆ – ಮೇ 23ರೊಳಗೆ ಬಿಸಿಸಿಐ ಅಂತಿಮ ನಿರ್ಧಾರ

    ಮುಂಬೈ: ಟೀಂ ಇಂಡಿಯಾ ಆಟಗಾರ ಕೇದಾರ್ ಜಾಧವ್ ಗಾಯದ ಸಮಸ್ಯೆ ಬಗ್ಗೆ ಮೇ 23ರ ಒಳಗೆ ಅಂತಿಮ ತೀರ್ಮಾನ ಕೈಗೊಳ್ಳಲು ಬಿಸಿಸಿಐ ಆಯ್ಕೆ ಸಮಿತಿ ನಿರ್ಧರಿಸಿದೆ.

    ವಿಶ್ವಕಪ್‍ಗೆ ಈಗಾಗಲೇ ಆಯ್ಕೆ ಮಾಡಿರುವ 15 ಆಟಗಾರರ ಪಟ್ಟಿಯಲ್ಲಿ ಬದಲಾವಣೆ ಮಾಡಲು ಮೇ 23ರ ವರೆಗೂ ಅವಕಾಶ ಇದ್ದು, ಪರಿಣಾಮ ಅಲ್ಲಿಯವರೆಗೂ ಜಾಧವ್ ಅವರ ಗಾಯದ ಸಮಸ್ಯೆ ಬಗ್ಗೆ ಹೆಚ್ಚಿನ ನಿಗಾ ವಹಿಸಲಾಗುತ್ತದೆ ಎಂಬ ಮಾಹಿತಿ ಲಭಿಸಿದೆ. ಜಾಧವ್ ಅವರ ಗಾಯದ ಸಮಸ್ಯೆ ಬಗ್ಗೆ ಬಿಸಿಸಿಐ ಆಯ್ಕೆ ಸಮಿತಿ ಅಧ್ಯಕ್ಷ ಎಂಎಸ್‍ಕೆ ಪ್ರಸಾದ್ ಅವರು ಈಗಾಗಲೇ ಮಾಹಿತಿ ಪಡೆದಿದ್ದು, ಗಂಭೀರ ಗಾಯವಾಗಿಲ್ಲ ಎಂದು ತಿಳಿದು ಬಂದಿದೆ.

    ಕಳೆದ ಭಾನುವಾರ ನಡೆದ ಕಿಂಗ್ಸ್ ಇಲೆವೆನ್ ತಂಡದ ವಿರುದ್ಧದ ಪಂದ್ಯದ ಫೀಲ್ಡಿಂಗ್ ವೇಳೆ ಜಾಧವ್ ಅವರ ಎಡ ಭುಜಕ್ಕೆ ಗಾಯವಾಗಿತ್ತು. ಪರಿಣಾಮ ಅವರನ್ನು ಟೂರ್ನಿಯ ಮುಂದಿನ ಪಂದ್ಯಗಳಿಂದ ಕೈಬಿಡಲಾಗಿತ್ತು. ಈ ವೇಳೆ ಜಾಧವ್ ಅವರ ವಿಶ್ವಕಪ್ ಜರ್ನಿ ಅಂತ್ಯವಾಗಿದೆ ಎಂದೇ ಅಭಿಮಾನಿಗಳು ಆತಂಕ ವ್ಯಕ್ತಪಡಿಸಿದ್ದರು. ಆದರೆ ಆ ಬಳಿಕ ಚೆನ್ನೈ ತಂಡ ಈ ಬಗ್ಗೆ ಸ್ಪಷ್ಟನೆ ನೀಡಿ ಗಂಭೀರ ಗಾಯವಾಗಿಲ್ಲ ಎಂದು ತಿಳಿಸಿತ್ತು.

    ಒಂದೊಮ್ಮೆ ಮೇ 23ರ ವೇಳೆಗೆ ಜಾಧವ್ ಫಿಟ್ ಆಗದಿದ್ದರೆ ಆಯ್ಕೆ ಸಮಿತಿ ಪರ್ಯಾಯ ಆಟಗಾರರನ್ನು ಆಯ್ಕೆ ಮಾಡುತ್ತದೆ. ಸದ್ಯ ಸ್ಟಂಡ್ ಬೈ ಆಟಗಾರರ ಪಟ್ಟಿಯಲ್ಲಿ ರಿಷಬ್ ಪಂತ್, ಅಂಬಾಟಿ ರಾಯುಡು, ಅಕ್ಷರ್ ಪಟೇಲ್, ನವದೀಪ್ ಸೈನಿ, ಇಶಾಂತ್ ಶರ್ಮಾ ಅವರ ಹೆಸರಿದೆ. ಉಳಿದಂತೆ ನೆಟ್ ಬೌಲರ್ ಗಳ ಹೆಸರಿನಲ್ಲಿ ಸೈನಿ ಹೆಸರು ಇರುವುದರಿಂದ ವಿಶ್ವಕಪ್ 15 ಆಟಗಾರರರೊಂದಿಗೆ ಅವರು ಇಂಗ್ಲೆಂಡ್‍ಗೆ ಪ್ರಯಾಣಿಸಲಿದ್ದಾರೆ. ಇವರೊಂದಿಗೆ ದೀಪಕ್ ಚಹರ್, ಖಲೀಲ್ ಅಹ್ಮದ್, ಅವೇಶ್ ಖಾನ್ ಅವರು ವಿಶ್ವಕಪ್ ತಂಡದೊಂದಿಗೆ ತೆರಳಲಿದ್ದಾರೆ. ಟೀಂ ಇಂಡಿಯಾ ಮೇ 22ರಂದು ಇಂಗ್ಲೆಂಡ್ ಗೆ ಪ್ರಯಾಣ ಬೆಳೆಸುವ ಸಾಧ್ಯತೆ ಇದ್ದು, ಜೂನ್ 5 ರಂದು ದಕ್ಷಿಣ ಆಫ್ರಿಕಾ ತಂಡವನ್ನು ಎದುರಿಸಲಿದೆ.

  • ವಿಶ್ವಕಪ್‍ಗೂ ಮುನ್ನ ಟೀಂ ಇಂಡಿಯಾಗೆ ಅಘಾತ

    ವಿಶ್ವಕಪ್‍ಗೂ ಮುನ್ನ ಟೀಂ ಇಂಡಿಯಾಗೆ ಅಘಾತ

    -ಕೇದಾರ್ ಜಾಧವ್ ಐಪಿಎಲ್ ನಿಂದ ಔಟ್

    ನವದೆಹಲಿ: ವಿಶ್ವಕಪ್ ಟೂರ್ನಿಗೆ ಕೆಲವೇ ದಿನಗಳು ಬಾಕಿ ಇರುವಾಗಲೇ ಭಾರತ ಕ್ರಿಕೆಟ್ ತಂಡಕ್ಕೆ ಸಂಕಷ್ಟವೊಂದು ಎದುರಾಗಿದ್ದು, ಟೂರ್ನಿಗೆ ಆಯ್ಕೆಯಾಗಿದ್ದ ಆಲ್‍ರೌಂಡರ್ ಕೇದಾರ್ ಜಾಧವ್ ಅವರು ಗಾಯದ ಸಮಸ್ಯೆಯಿಂದಾಗಿ ಐಪಿಎಲ್ ನಿಂದ ನಿರ್ಗಮಿಸಿದ್ದಾರೆ.

    ಪ್ರಸ್ತುತ ಐಪಿಎಲ್ 12 ಅವೃತ್ತಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡುತ್ತಿರುವ ಕೇದಾರ್ ಜಾಧವ್, ಭಾನುವಾರ ನಡೆದ ಚೆನ್ನೈ ಮತ್ತು ಕಿಂಗ್ಸ್ ಇಲೆವನ್ ಪಂಜಾಬ್ ನಡುವಿನ ಪಂದ್ಯದಲ್ಲಿ ಗಾಯದ ಸಮಸ್ಯೆಗೆ ತುತ್ತಾಗಿದ್ದರು. ಪರಿಣಾಮ ಐಪಿಎಲ್ ನ ಉಳಿದ ಪಂದ್ಯಗಳಿಗೆ ಅವರು ಅಲಭ್ಯರಾಗಿದ್ದಾರೆ.

    ವಿಶ್ವಕಪ್‍ಗೆ ಆಯ್ಕೆ ಮಾಡಲಾದ ಭಾರತ ತಂಡದಲ್ಲಿ ಕೇದರ್ ಜಾಧವ್ ಅವರನ್ನು ಪ್ರಮುಖ ಆಲ್‍ರೌಂಡರ್ ಎಂದು ಆಯ್ಕೆ ಮಾಡಲಾಗಿತ್ತು. ಭಾನುವಾರ ನಡೆದ ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಓವರ್ ಥ್ರೋ ತಡೆಯಲು ಹೋಗಿ ಜಾಧವ್ ಅವರು ಗಾಯಗೊಂಡಿದ್ದರು. ಈ ವಿಷಯದ ಬಗ್ಗೆ ಪ್ರತಿಕ್ರಿಯಿಸಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಕೋಚ್ ಸ್ಟೀಫನ್ ಫ್ಲೆಮಿಂಗ್ ಅವರು ಗಾಯದ ಸಮಸ್ಯೆಗೆ ಒಳಗಾಗಿದ್ದಾರೆ ಎಂದು ಖಚಿತ ಪಡಿಸಿದ್ದರು.

    ಮೇ 25ರಂದು ಟೀಂ ಇಂಡಿಯಾ, ನ್ಯೂಜಿಲೆಂಡ್ ತಂಡದ ವಿರುದ್ಧ ಆಭ್ಯಾಸ ಪಂದ್ಯ ಆಡುವ ಮೂಲಕ ವಿಶ್ವಕಪ್ ಪಯಣ ಆರಂಭ ಮಾಡಲಿದೆ. ಜೂನ್ 05 ರಂದು ನಡೆಯುವ ಪಂದ್ಯದಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ತಂಡ ದಕ್ಷಿಣ ಆಫ್ರಿಕಾವನ್ನು ಎದುರಿಸಲಿದೆ.

  • 1 ವರ್ಷದ ನಂತ್ರ 10 ಓವರ್ ಬೌಲಿಂಗ್ ಮಾಡಿ 1 ವಿಕೆಟ್ ಕಿತ್ತ ಜಾದವ್

    1 ವರ್ಷದ ನಂತ್ರ 10 ಓವರ್ ಬೌಲಿಂಗ್ ಮಾಡಿ 1 ವಿಕೆಟ್ ಕಿತ್ತ ಜಾದವ್

    ನಾಗ್ಪುರ: ಕೇದಾರ್ ಜಾದವ್ 1 ವರ್ಷದ ಬಳಿಕ ಪೂರ್ಣ 10 ಓವರ್ ಬೌಲಿಂಗ್ ನಡೆಸಿ ಒಂದು ವಿಕೆಟ್ ಪಡೆದಿದ್ದಾರೆ.

    ಈ ಹಿಂದೆ ನ್ಯೂಜಿಲೆಂಡ್ ವಿರುದ್ಧ 2016ರ ಅಕ್ಟೋಬರ್ ನಲ್ಲಿ ರಾಂಚಿಯಲ್ಲಿ ನಡೆದ ಪಂದ್ಯದಲ್ಲಿ ಬೌಲಿಂಗ್ ನಡೆಸಿದ್ದರು. ಈ ಪಂದ್ಯದಲ್ಲಿ 8 ಓವರ್ ಎಸೆದು 27 ರನ್ ನೀಡಿದ್ದರು.

    ನಾಗ್ಪುರದಲ್ಲಿ ನಡೆಯುತ್ತಿರುವ ಇಂದಿನ ಪಂದ್ಯದಲ್ಲಿ ಕೇದಾರ್ ಜಾದವ್ ಒಂದು ವಿಕೆಟ್ ಪಡೆದಿದ್ದಾರೆ. 16 ರನ್ ಗಳಿಸಿದ್ದ ನಾಯಕ ಸ್ವೀವ್ ಸ್ಮಿತ್ ಅವರನ್ನು ಕೇದಾರ್ ಜಾದವ್ ಎಲ್‍ಬಿಗೆ ಕೆಡವುವಲ್ಲಿ ಯಶಸ್ವಿಯಾಗಿದ್ದಾರೆ.

    ಇಂದಿನ ಪಂದ್ಯದಲ್ಲಿ ಐದನೇಯವರಾಗಿ ಬೌಲಿಂಗ್ ಮಾಡಿದ ಜಾದವ್ 10 ಓವರ್ ಗಳ ಕೋಟಾದಲ್ಲಿ 48 ರನ್ ನೀಡಿ ಒಂದು ವಿಕೆಟ್ ಪಡೆದಿದ್ದಾರೆ.