Tag: Kebab

  • ಕಬಾಬ್ ಪೀಸ್ ಕಡಿಮೆ ಕೊಟ್ಟಿದ್ದಕ್ಕೆ ಹೋಟೆಲ್ ಮಾಲೀಕನಿಗೆ ಹಿಗ್ಗಾಮುಗ್ಗಾ ಥಳಿಸಿದ ಪುಂಡರು

    ಕಬಾಬ್ ಪೀಸ್ ಕಡಿಮೆ ಕೊಟ್ಟಿದ್ದಕ್ಕೆ ಹೋಟೆಲ್ ಮಾಲೀಕನಿಗೆ ಹಿಗ್ಗಾಮುಗ್ಗಾ ಥಳಿಸಿದ ಪುಂಡರು

    ಬೆಂಗಳೂರು: ನಗರದಲ್ಲಿ ದಿನೇ ದಿನೇ ಪುಡಿರೌಡಿಗಳ ಅಟ್ಟಹಾಸ ಹೆಚ್ಚಾಗುತ್ತಿದ್ದು, ಬಡಪಾಯಿಗಳ ಮೇಲೆ ದುರ್ವರ್ತನೆ ತೋರುತ್ತಿದ್ದಾರೆ. ಕಳೆದ ತಿಂಗಳಷ್ಟೇ ಬೇಕರಿಯಲ್ಲಿ ಯುವಕರ ಮೇಲಿನ ಹಲ್ಲೆ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಘಟನೆ ನಡೆದಿದೆ.

    ಕೋಣನಕುಂಟೆಯ ಮಾಲ್ಗುಡಿ ನಾಟಿ ಸ್ಟೈಲ್ ಹೋಟೆಲಿಗೆ ನುಗ್ಗಿದ ಪುಂಡರು ಮಾಲೀಕನಿಗೆ (Hotel Manager) ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಮಾಲೀಕ ಬಾಬಣ್ಣ, ಬುಧವಾರ ರಾತ್ರಿ 11 ಗಂಟೆ ವೇಳೆಗೆ 4 ಜನ ಪುಂಡರು ಕಬಾಬ್ (Kebab) ಬೇಕು ಎಂದು ಬಂದಿದ್ರು. ನಮ್ಮ ಹುಡುಗರು ಕಬಾಬ್ ಪಾರ್ಸೆಲ್ ಕೊಟ್ಟಿದ್ದರು. ಬಿಲ್ 120 ರೂ. ಆಗಿದ್ದು, ಆದರೆ ಅವರು 90 ರೂ. ಮಾತ್ರ ಕೊಟ್ಟು ಹಣ ಕಡಿಮೆಯಿದೆ ಮೊತ್ತೊಮ್ಮೆ ಬಂದು ಕೊಡುತ್ತೇವೆ ಎಂದು ಹೇಳಿ ಹೋಗಿದ್ದರು.

    ಆದರೆ ವಾಪಸ್ ಬಂದ ಪುಂಡರು ಕಬಾಬ್ ಪೀಸ್ ಕಡಿಮೆ ಕೊಟ್ಟಿದ್ದೀರಾ ಎಂದು ನಮ್ಮ ಹುಡುಗರ ಮೇಲೆ ಹಲ್ಲೆ ಮಾಡೋಕೆ ಮುಂದಾಗಿದ್ದರು. ನಾನು ಮಧ್ಯೆ ಪ್ರವೇಶಿಸಿದೆ. ಈ ವೇಳೆ ಅವರು ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ. ನನ್ನ ತುಟಿ ಹಾಗೂ ತಲೆಯಲ್ಲಿ ರಕ್ತ ಬರುವ ರೀತಿಯಲ್ಲಿ ಹೊಡೆದಿದ್ದಾರೆ ಎಂದು ಬಾಬಣ್ಣ ತಿಳಿಸಿದ್ದಾರೆ. ಇದನ್ನೂ ಓದಿ: ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ- ಮತ್ತಿಬ್ಬರ ಪತ್ತೆಗೆ 10 ಲಕ್ಷ ಬಹುಮಾನ ಘೋಷಣೆ

    ಆರೋಪಿಗಳು ನಮ್ಮ ಹೋಟೆಲ್ ಮುಂದಿನ ರಸ್ತೆಯಲ್ಲೇ ವಾಸವಿದ್ದಾರೆ. ಯಾವಾಗಲೂ ಗಾಂಜಾ ಹೊಡೆದುಕೊಂಡು ಓಡಾಡುತ್ತಾರೆ. ಅಂದು ಅವರು ಗಾಂಜಾ ಮತ್ತಿನಲ್ಲೇ ನನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

    ಘಟನೆ ಕುರಿತು ಕೋಣನಕುಂಟೆ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಪುಂಡರು ಹೋಟೆಲ್ ಮಾಲೀಕನ ಮೇಲೆ ಹಲ್ಲೆ ನಡೆಸಿರುವ ವೀಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದನ್ನೂ ಓದಿ: ಉಗ್ರರ ಜೊತೆ ಸಂಪರ್ಕ, ಭಾರತದಲ್ಲಿ ಶಾಂತಿ ಕದಡಲು ಸಂಚು- ಬೆಂಗಳೂರಿನ ಇಬ್ಬರ ವಿರುದ್ಧ NIA ಚಾರ್ಜ್‌ಶೀಟ್‌ ಸಲ್ಲಿಕೆ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಹಬೆಯಲ್ಲಿ ಬೇಯಿಸಿ ಕಬಾಬ್ ಮಾಡಿ ನೋಡಿ – ಸಖತ್ ಟೇಸ್ಟಿ ಆಗಿರುತ್ತೆ

    ಹಬೆಯಲ್ಲಿ ಬೇಯಿಸಿ ಕಬಾಬ್ ಮಾಡಿ ನೋಡಿ – ಸಖತ್ ಟೇಸ್ಟಿ ಆಗಿರುತ್ತೆ

    ಬಾಬ್ ಎಂದರೆ ಚಿಕನ್ ಪ್ರೇಮಿಗಳ ಬಾಯಲ್ಲಿ ನೀರು ತರದೇ ಇರಲಾರದು. ಕಬಾಬ್ ಅನ್ನು ಎಂದಿನಂತೆ ಎಣ್ಣೆಯಲ್ಲಿ ಕಾಯಿಸಿ ಮಾಡುವುದಕ್ಕಿಂತ ಒಂದು ಬಾರಿ ಹಬೆಯಲ್ಲಿ ಬೇಯಿಸಿಯೂ ನೋಡಿ. ಒಂದು ಹೊರ ರುಚಿಕರವಾದ ರೆಸಿಪಿ ಕಲಿತಂತೆಯೂ ಆಗುತ್ತದೆ. ಹಬೆಯಲ್ಲಿ ಬೇಯಿಸಿ ಕಬಾಬ್ (Steamed Chicken Kebab) ಮಾಡುವುದು ಹೇಗೆ ಎಂದು ನಾವು ಇಂದು ತಿಳಿಸಿಕೊಡುತ್ತೇವೆ. ನೀವೂ ಟ್ರೈ ಮಾಡಿ.

    ಬೇಕಾಗುವ ಪದಾರ್ಥಗಳು:
    ಚಿಕನ್ ಖೀಮಾ – ಅರ್ಧ ಕೆಜಿ
    ಶುಂಠಿ ಪೇಸ್ಟ್ – 2 ಟೀಸ್ಪೂನ್
    ಬೆಳ್ಳುಳ್ಳಿ ಪೇಸ್ಟ್ – 2 ಟೀಸ್ಪೂನ್
    ಈರುಳ್ಳಿ ಪೇಸ್ಟ್ – 5 ಟೀಸ್ಪೂನ್
    ಹಸಿಮೆಣಸಿನ ಪೇಸ್ಟ್ – 1 ಟೀಸ್ಪೂನ್
    ಮೊಸರು – 1 ಟೀಸ್ಪೂನ್
    ಕತ್ತರಿಸಿದ ಕೊತ್ತಂಬರಿ ಸೊಪ್ಪು – 1 ಟೀಸ್ಪೂನ್
    ಜೀರಿಗೆ ಪುಡಿ – ಅರ್ಧ ಟೀಸ್ಪೂನ್
    ಕೆಂಪು ಮೆಣಸಿನ ಪುಡಿ – 1 ಟೀಸ್ಪೂನ್
    ಕರಿಮೆಣಸಿನ ಪುಡಿ – 2 ಟೀಸ್ಪೂನ್
    ಸಣ್ಣಗೆ ಹೆಚ್ಚಿದ ಸ್ಪ್ರಿಂಗ್ ಆನಿಯನ್ – ಅರ್ಧ ಕಪ್
    ಉಪ್ಪು – ರುಚಿಗೆ ತಕ್ಕಷ್ಟು
    ಸಣ್ಣಗೆ ಹೆಚ್ಚಿದ ಪಾಲಕ್ ಸೊಪ್ಪು – ಅರ್ಧ ಕಪ್
    ಎಣ್ಣೆ – ಅಗತ್ಯಕ್ಕೆ ಅನುಸಾರ ಇದನ್ನೂ ಓದಿ: ಬಾಯಲ್ಲಿ ನೀರೂರಿಸುವ ಬೊಂಡಾಸ್ ಸುಕ್ಕ ಸುಲಭವಾಗಿ ಹೀಗೆ ಮಾಡಿ

    ಮಾಡುವ ವಿಧಾನ:
    * ಮೊದಲಿಗೆ ಚಿಕನ್ ಖೀಮಾ, ಶುಂಠಿ ಪೇಸ್ಟ್, ಈರುಳ್ಳಿ ಪೇಸ್ಟ್, ಬೆಳ್ಳುಳ್ಳಿ ಪೇಸ್ಟ್, ಹಸಿ ಮೆಣಸಿನ ಪೇಸ್ಟ್, ಸ್ಪ್ರಿಂಗ್ ಆನಿಯನ್, ಮೊಸರು, ಕೊತ್ತಂಬರಿ ಸೊಪ್ಪು, ಪಾಲಕ್ ಸೊಪ್ಪು ಹಾಗೂ ಬ್ರೆಡ್ ಅನ್ನು ಮಿಕ್ಸರ್ ಜಾರ್‌ಗೆ ಹಾಕಿ, ತರಿತರಿಯಾಗಿ ರುಬ್ಬಿಕೊಳ್ಳಿ.
    * ಈ ಮಿಶ್ರಣವನ್ನು ಒಂದು ದೊಡ್ಡ ಪಾತ್ರೆಗೆ ವರ್ಗಾಯಿಸಿ, ಗಂಟಿಲ್ಲದಂತೆ ಕಲಸಿಕೊಳ್ಳಿ.
    * ಈಗ ಮಿಶ್ರಣಕ್ಕೆ ಜೀರಿಗೆ ಪುಡಿ, ಕೆಂಪು ಮೆಣಸಿನ ಪುಡಿ, ಕರಿಮೆಣಸಿನಪುಡಿ, ಹಾಗೂ ಉಪ್ಪು ಸೇರಿಸಿ, ಚೆನ್ನಾಗಿ ಮಿಶ್ರಣ ಮಾಡಿ.
    * ನಿಮ್ಮ ಕೈಗಳಿಗೆ ಎಣ್ಣೆ ಸವರಿ, 2 ಟೀಸ್ಪೂನ್‌ನಷ್ಟು ಮಿಶ್ರಣವನ್ನು ಕೈಯಲ್ಲಿ ತೆಗೆದುಕೊಂಡು, ನಯವಾಗಿ ಉಂಡೆ ಕಟ್ಟಿ, ಸ್ವಲ್ಪ ತಟ್ಟಿ. ಸಂಪೂರ್ಣ ಮಿಶ್ರಣವನ್ನು ಹೀಗೆಯೇ ಮಾಡಿ.
    * ಒಂದು ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ, ಕಬಾಬ್‌ಗಳನ್ನು ಚಿಕ್ಕ ಉರಿಯಲ್ಲಿ ಹುರಿಯಿರಿ.
    * ಕಬಾಬ್‌ಗಳು ಚೆನ್ನಾಗಿ ಹುರಿದ ಬಳಿಕ ಸ್ಟೀಮರ್‌ನಲ್ಲಿ ಅವುಗಳನ್ನಿಟ್ಟು, ಮುಚ್ಚಳ ಹಾಕಿ, ಹಬೆಯಲ್ಲಿ ಸುಮಾರು 15 ನಿಮಿಷಗಳ ಕಾಲ ಬೇಯಿಸಿ.
    * ಇದೀಗ ಹಬೆಯಲ್ಲಿ ಬೇಯಿಸಿದ ಕಬಾಬ್ ತಯಾರಾಗಿದ್ದು, ಯಾವುದೇ ಸಾಸ್‌ನೊಂದಿಗೆ ಸವಿಯಿರಿ. ಇದನ್ನೂ ಓದಿ: ಫಟಾಫಟ್ ಅಂತ ಮಾಡಬಹುದಾದ ಚಿಕನ್ ನೂಡಲ್ ಸೂಪ್ ರೆಸಿಪಿ

    Live Tv
    [brid partner=56869869 player=32851 video=960834 autoplay=true]

  • ಚಿಕನ್ ಕಬಾಬ್, ಲೆಗ್ ಪೀಸ್‌ನಲ್ಲಿ ಹುಳ! – ಮಹಿಳೆ ಆಸ್ಪತ್ರೆಗೆ, ಹೋಟೆಲ್‌ಗೆ ಬೀಗ

    ಚಿಕನ್ ಕಬಾಬ್, ಲೆಗ್ ಪೀಸ್‌ನಲ್ಲಿ ಹುಳ! – ಮಹಿಳೆ ಆಸ್ಪತ್ರೆಗೆ, ಹೋಟೆಲ್‌ಗೆ ಬೀಗ

    ಕೋಲಾರ: ಚಿಕನ್ ಎಂದರೆ ಸಾಕಷ್ಟು ಜನರಿಗೆ ಅಚ್ಚು ಮೆಚ್ಚು. ಅದರಲ್ಲೂ ಚಿಕನ್ ಲೆಗ್ ಪೀಸ್ ಎಂದರೆ ಬಾಯಿ ಚಪ್ಪರಿಸಿಕೊಂಡು ತಿನ್ನುತ್ತಾರೆ. ಆದರೆ ಚಿಕನ್ ಪ್ರಿಯರೇ ಇನ್ಮುಂದೆ ರೆಸ್ಟೋರೆಂಟ್ ಅಥವಾ ಹೋಟೆಲ್‌ನಿಂದ ತಮ್ಮ ಅಚ್ಚುಮೆಚ್ಚಿನ ಚಿಕನ್ ಖರೀದಿ ಮಾಡಿದ್ರೆ ತಿನ್ನುವ ಮುನ್ನ ಹುಷಾರ್ ಆಗಿರಿ.

    ಒಂದೆಡೆ ರೆಸ್ಟೋರೆಂಟ್ ಮಾಲೀಕರನ್ನು ಸಾರ್ವಜನಿಕರು ತರಾಟೆಗೆ ತೆಗೆದುಕೊಂಡಿದ್ದು, ಮತ್ತೊಂದೆಡೆ ಹೋಟೆಲ್‌ಗೆ ಬೀಗ ಮುದ್ರೆ ಹಾಕುತ್ತಿರುವ ಆಹಾರ ನಿರೀಕ್ಷಕ ಅಧಿಕಾರಿಗಳು. ಇನ್ನೂ ಒಂದೆಡೆ ಚಿಕನ್ ಸೇವಿಸಿ ಆಸ್ಪತ್ರೆ ಪಾಲಾಗಿರುವ ಮಹಿಳೆ. ಇದೆಲ್ಲಾ ನಡೆದಿರುವುದು ಕೋಲಾರದ ಕೆಜಿಎಫ್ ನಗರದ ಪಿಚರ್ಡ್ ರಸ್ತೆಯಲ್ಲಿ. ಹೌದು, ಚಿಕನ್ ಲೆಗ್ ಪೀಸ್‌ನಲ್ಲಿ ಹುಳ ಪತ್ತೆಯಾದ ಘಟನೆ ಕೋಲಾರದಲ್ಲಿ ನಡೆದಿದೆ. ಅದೇ ಲೆಗ್ ಪೀಸ್ ಸೇವಿಸಿದ ಮಹಿಳೆ ಅಸ್ವಸ್ಥರಾಗಿ, ಆಸ್ಪತ್ರೆಗೆ ದಾಖಲಾಗಿದ್ದಾರೆ.

    ಕೋಲಾರ ಜಿಲ್ಲೆಯ ಕೆಜಿಎಫ್ ನಗರದ ಪಿಚರ್ಡ್ ರಸ್ತೆಯಲ್ಲಿರುವ ಇಖ್ರಾ ಹೋಟೆಲ್‌ನಲ್ಲಿ ಗುರುವಾರ ಕೆಜಿಎಫ್ ನಗರದ ವಿನೋದ್, ಮನೆಗೆ ಚಿಕನ್ ಲೆಗ್ ಪೀಸ್ ಪಾರ್ಸೆಲ್ ತೆಗೆದುಕೊಂಡು ಹೋಗಿದ್ದರು. ಮನೆಯಲ್ಲಿ ಮಕ್ಕಳ ಜೊತೆ ಚಿಕನ್ ತಿನ್ನುತ್ತಿದ್ದಾಗ ಲೆಗ್ ಪೀಸ್‌ನಲ್ಲಿ ಹುಳ ಇರುವುದು ಪತ್ತೆಯಾಗಿದೆ. ಇದನ್ನು ತಿಂದ ವಿನೋದ್ ತಾಯಿ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ರಾತ್ರಿಯಿಂದ ವಾಂತಿ, ಭೇದಿ ಶುರುವಾಗಿದ್ದು, ಕೂಡಲೆ ಕೆಜಿಎಫ್ ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಇದನ್ನೂ ಓದಿ: ಸರ್ಕಾರಿ ಶಾಲಾ ಮಕ್ಕಳಿಗೆ ಸರ್ಕಾರ ನೀಡುತ್ತಿದ್ದ ಶೂ & ಸಾಕ್ಸ್ ಈ ವರ್ಷ ಸಿಗೋದು ಡೌಟ್ 

    ಹಾಳಾದ ಹಾಗೂ ಸುರಕ್ಷಿತವಲ್ಲದ ಚಿಕನ್ ಲೆಗ್ ಪೀಸ್ ನೀಡಿದ ಹಿನ್ನೆಲೆ ಇಖ್ರಾ ಹೋಟೆಲ್ ಸಿಬ್ಬಂದಿಗೆ ಸ್ಥಳೀಯರು ಗ್ರಹಚಾರ ಬಿಡಿಸಿದ್ದಾರೆ. ಕೂಡಲೆ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಲಾಗಿತ್ತು. ಅಧಿಕಾರಿಗಳು ಹೊಟೆಲ್‌ಗೆ ತೆರಳಿ ಪರಿಶೀಲನೆ ನಡೆಸಿದಾಗ ಹೋಟೆಲ್‌ನಲ್ಲಿದ್ದ ಎಲ್ಲಾ ಚಿಕನ್‌ನಲ್ಲಿಯೂ ಹುಳ ಪತ್ತೆಯಾಗಿದೆ. ಬಳಿಕ ಗ್ರಾಹಕ ವಿನೋದ್ ಹೋಟೆಲ್ ಮಾಲೀಕರನ್ನು ಹಿಗ್ಗಾಮುಗ್ಗಾ ತರಾಟೆ ತೆಗೆದುಕೊಂಡಿದ್ದು, ಹೋಟೆಲ್‌ನಲ್ಲಿದ್ದ ಮತ್ತಷ್ಟು ಚಿಕನ್ ಪೀಸ್‌ನಲ್ಲೂ ಹುಳ ಪತ್ತೆಯಾಗಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

    ಮೊದಲಿಗೆ ಸಂಬಂಧಪಟ್ಟ ಆಹಾರ ಇಲಾಖೆ ಅಧಿಕಾರಿಗಳಿಗೆ ತಿಳಿಸಿದ್ದು, ಪ್ರಯೋಜನವಾಗಿರಲಿಲ್ಲ. ಬಳಿಕ ಕೆಲ ಯುವಕರು ನಗರಸಭೆ ಅಧಿಕಾರಿಗಳಿಗೆ ದೂರವಾಣಿ ಮೂಲಕ ದೂರು ಸಲ್ಲಿಸಿದ್ದರು. ಆದರೂ ಪ್ರಯೋಜನವಾಗಿರಲಿಲ್ಲ. ಬಳಿಕ ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಿದ ಹಿನ್ನೆಲೆ, ಸ್ಥಳಕ್ಕೆ ಆಗಮಿಸಿದ ನಗರಸಭೆ ಆಹಾರ ನಿರೀಕ್ಷಕರು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಕಳಪೆ ಗುಣಮಟ್ಟದ ಆಹಾರ ಹಾಗೂ ಹುಳ ಇರುವುದು ಕಂಡು ಬಂದ ಹಿನ್ನೆಲೆ ಹೋಟೆಲ್‌ಗೆ ಬೀಗ ಮುದ್ರೆಯನ್ನು ಹಾಕಿದ್ದಾರೆ. ಅಲ್ಲದೇ ನಗರಲ್ಲಿರುವ ಎಲ್ಲಾ ಹೋಟೆಲ್ ಹಾಗೂ ರೆಸ್ಟೋರೆಂಟ್‌ಗಳ ಮೇಲೆ ಹೆಚ್ಚಿನ ನಿಗಾ ಇಡುವುದಾಗಿ ನಗರಸಭೆ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಬೆಂಗ್ಳೂರಲ್ಲಿ ಸಾವಿರಕ್ಕೂ ಅಧಿಕ ಕೇಸ್ – ಆರು ಸಾವಿರ ಗಡಿದಾಟಿದ ರಾಜ್ಯದ ಸಕ್ರಿಯ ಪ್ರಕರಣ

    ಒಟ್ಟಿನಲ್ಲಿ ತಮಗಿಷ್ಟ ಎಂದು ಚಿಕನ್ ತಿನ್ನಬೇಕಾದರೆ ಇನ್ನುಮುಂದೆ ಗುಣಮಟ್ಟ ಪರಿಶೀಲನೆ ಮಾಡಲೇಬೇಕು. ಯಾಮಾರಿ ಎಲ್ಲೆಂದರಲ್ಲಿ ಆಹಾರ ಸೇವನೆ ಮಾಡಿದರೆ, ಅನಾರೋಗ್ಯದ ಜೊತೆಗೆ ಹುಳಗಳು ಫ್ರೀಯಾಗಿ ಸಿಗುವುದರಲ್ಲಿ ಯಾವುದೇ ಅನುಮಾನವಿಲ್ಲ.

    Live Tv