Tag: kd film

  • ಗಣೇಶ ಹಬ್ಬದಂದು ಮಗ ಮನೆಗೆ ಬಂದಿದ್ದಾನೆ- ಧ್ರುವ ಸರ್ಜಾ

    ಗಣೇಶ ಹಬ್ಬದಂದು ಮಗ ಮನೆಗೆ ಬಂದಿದ್ದಾನೆ- ಧ್ರುವ ಸರ್ಜಾ

    ಸ್ಯಾಂಡಲ್‌ವುಡ್ ನಟ ಧ್ರುವ ಸರ್ಜಾ (Dhruva Sarja) ಅವರು ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ಗಣೇಶ ಹಬ್ಬದಂದು (Ganesha Festival) ಧ್ರುವ ಪತ್ನಿ ಪ್ರೇರಣಾ(Prerana) ಗಂಡು ಮಗುವಿಗೆ(Baby Boy)  ಜನ್ಮ ನೀಡಿದ್ದಾರೆ. ಇದೇ ಖುಷಿಯಲ್ಲಿ ಮಾಧ್ಯಮಕ್ಕೆ ನಟ ಪ್ರತಿಕ್ರಿಯೆ ನೀಡಿದ್ದಾರೆ.

    ಮಗನ ಆಗಮನದ ಸಂತಸದ ಬಗ್ಗೆ ಧ್ರುವ ಮಾತನಾಡಿ, ಗಣೇಶ ಹಬ್ಬದ ದಿನ ಮನೆಗೆ ಮಗ ಬಂದಿದ್ದಾನೆ. ಮನೆಯಲ್ಲಿ ಎಲ್ಲರೂ ಖುಷಿಯಾಗಿದ್ದಾರೆ. ಮಗ ಹುಟ್ಟಿದ ತಕ್ಷಣ ಫೋನ್ ತೆಗೆದು ಚಿರು ನಂಬರ್‌ಗೆ ಡಯಲ್ ಮಾಡಲು ಹೋಗಿದ್ದೆ, 2 ನಿಮಿಷ ಬೇಕಾಯ್ತು ಸುಧಾರಿಸಿಕೊಳ್ಳಲು ಎಂದು ನಟ ಭಾವುಕರಾಗಿದ್ದಾರೆ. ಇದನ್ನೂ ಓದಿ:‘ಯಂಗ್ ಮ್ಯಾನ್’ ಇದು ಸಿಂಗಲ್ ಟೇಕ್ ಸಿನಿಮಾ

    ಇವತ್ತು 11 ಕಡೆ ಗಣೇಶನ ದರ್ಶನ ಮಾಡಲು ಹೋಗಬೇಕಿತ್ತು. ಆದರೆ ಮುಂದೆ ಮಾಡ್ತಿನಿ, ಮಗನ ಆಗಮನ ಖುಷಿ ಕೊಟ್ಟಿದೆ. ತಾಯಿ ಮತ್ತು ಮಗ ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ಧ್ರುವ ಮಾತನಾಡಿದ್ದಾರೆ.

    ಧ್ರುವ ಸರ್ಜಾ ಪತ್ನಿ ಪ್ರೇರಣಾ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಬೆಂಗಳೂರಿನ ಬಸವನಗುಡಿಯ ಖಾಸಗಿ ಆಸ್ಪತ್ರೆಯಲ್ಲಿ ಮಗುವಿನ ಜನನವಾಗಿದೆ. ಮೊನ್ನೆಯಷ್ಟೇ ಪ್ರೇರಣಾ ಅವರ ಸೀಮಂತ ಕಾರ್ಯಕ್ರಮವನ್ನು ಅದ್ಧೂರಿಯಾಗಿ ನೆರವೇರಿಸಿದ್ದರು. ಈ ದಂಪತಿಗೆ ಈಗಾಗಲೇ ಒಂದು ಹೆಣ್ಣು ಮಗುವಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • 2ನೇ ಮಗುವಿನ ಆಗಮನ ಬಗ್ಗೆ ಸಿಹಿಸುದ್ದಿ ಕೊಟ್ರು ಧ್ರುವ ಸರ್ಜಾ ದಂಪತಿ

    2ನೇ ಮಗುವಿನ ಆಗಮನ ಬಗ್ಗೆ ಸಿಹಿಸುದ್ದಿ ಕೊಟ್ರು ಧ್ರುವ ಸರ್ಜಾ ದಂಪತಿ

    ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ (Dhruva Sarja) ತಮ್ಮ ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದ್ದಾರೆ. ಎರಡನೇ ಮಗುವಿನ ಆಗಮನದ ನಿರೀಕ್ಷೆಯಲ್ಲಿರುವ ಬಗ್ಗೆ ಧ್ರುವ ಸರ್ಜಾ ಗುಡ್ ನ್ಯೂಸ್ ಹೇಳಿದ್ದಾರೆ. ಸ್ಪೆಷಲ್ ವಿಡಿಯೋ ಮೂಲಕ ಹೊಸ ಅತಿಥಿಯ (Second Baby) ಆಗಮನದ ಬಗ್ಗೆ ಅಪ್‌ಡೇಟ್ ಹಂಚಿಕೊಂಡಿದ್ದಾರೆ.

    ಕಳೆದ ವರ್ಷ ಅಕ್ಟೋಬರ್‌ನಲ್ಲಿ ಚೊಚ್ಚಲ ಮಗುವಿನ ಆಗಮನವಾಗಿದೆ. ಹೆಣ್ಣು ಮಗುವಿಗೆ ಪ್ರೇರಣಾ (Prerana) ಅವರು ಜನ್ಮ ನೀಡಿದ್ದರು. ಈಗ ಮತ್ತೆ ತಾಯ್ತನದ ಸಂಭ್ರಮದಲ್ಲಿದ್ದಾರೆ. ಎರಡನೇ ಮಗುವಿನ ಆಗಮನದ ನಿರೀಕ್ಷೆಯಲ್ಲಿರುವ ಬಗ್ಗೆ ವಿಡಿಯೋ ಮೂಲಕ ಸಿಹಿಸುದ್ದಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:2023: ಅತ್ಯುತ್ತಮ ಸಿನಿಮಾ, ರಾಕೆಟ್ರಿ ದಿ ನಂಬಿ ಎಫೆಕ್ಟ್

    2019ರಲ್ಲಿ ಧ್ರುವ ಸರ್ಜಾ-ಪ್ರೇರಣಾ ಅವರು ಗುರುಹಿರಿಯರ ಸಮ್ಮುಖದಲ್ಲಿ ಮದುವೆಯಾದರು. ಹಲವು ವರ್ಷಗಳ ಪ್ರೀತಿಗೆ ಮದುವೆ ಮುದ್ರೆ ಒತ್ತಿದ್ದರು.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • 48ರ ವಯಸ್ಸಿನಲ್ಲೂ ಬಳುಕುವ ಬಳ್ಳಿಯಂತೆ ಕಂಗೊಳಿಸಿದ ಶಿಲ್ಪಾ ಶೆಟ್ಟಿ

    48ರ ವಯಸ್ಸಿನಲ್ಲೂ ಬಳುಕುವ ಬಳ್ಳಿಯಂತೆ ಕಂಗೊಳಿಸಿದ ಶಿಲ್ಪಾ ಶೆಟ್ಟಿ

    ಬಾಲಿವುಡ್ (Bollywood) ಬ್ಯೂಟಿ ಶಿಲ್ಪಾ ಶೆಟ್ಟಿ (Shilpa Shetty) ಅವರು ಸಾಲು ಸಾಲು ಸಿನಿಮಾಗಳ ಜೊತೆ ರಿಯಾಲಿಟಿ ಶೋ ತೀರ್ಪುಗಾರ್ತಿಯಾಗಿ ಹೈಲೆಟ್ ಆಗ್ತಿದ್ದಾರೆ. ಸದ್ಯ ನಯಾ ಫೋಟೋಶೂಟ್‌ನಿಂದ ಕರಾವಳಿ ಬ್ಯೂಟಿ ಮಿಂಚ್ತಿದ್ದಾರೆ. 48ರ ವಯಸ್ಸಿನಲ್ಲೂ ಶಿಲ್ಪಾ ಶೆಟ್ಟಿ ಬಳುಕುವ ಬಳ್ಳಿಯಂತೆ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ.

    ಕನ್ನಡದ ಆಟೋ ಶಂಕರ್, ಪ್ರೀತ್ಸೋದ್ ತಪ್ಪಾ?, ಒಂದಾಗೋಣ ಬಾ (Ondagona Baa) ಚಿತ್ರಗಳಲ್ಲಿ ನಟಿಸಿದ ಮಂಗಳೂರಿನ ಬೆಡಗಿ ಶಿಲ್ಪಾ ಶೆಟ್ಟಿ ಅವರು ಬಾಲಿವುಡ್ ರಂಗದಲ್ಲಿ ಅಗ್ರ ಸ್ಥಾನದಲ್ಲಿ ಮಿಂಚಿದ್ರು. ಸ್ಟಾರ್ ನಟರಿಗೆ ನಾಯಕಿಯಾಗುವ ಮೂಲಕ ಸಾಕಷ್ಟು ಸೂಪರ್ ಹಿಟ್‌ಗಳನ್ನ ಕೊಟ್ಟಿದ್ದಾರೆ. ಡಿಮ್ಯಾಂಡ್ ಇರೋವಾಗಲೇ ಉದ್ಯಮಿ ರಾಜ್ ಕುಂದ್ರಾ (Raj Kundra) ಜೊತೆ ಹಸೆಮಣೆ ಏರಿದ್ದರು.

    ಇದೀಗ 18 ವರ್ಷಗಳ ನಂತರ ಕನ್ನಡದ ‘ಕೆಡಿ’ (Kd Film) ಸಿನಿಮಾದ ಮೂಲಕ ಸ್ಯಾಂಡಲ್‌ವುಡ್‌ಗೆ ಕಂಬ್ಯಾಕ್ ಆಗಿದ್ದಾರೆ. ಧ್ರುವ ಸರ್ಜಾ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಸಿಕ್ಕಾಪಟ್ಟೆ ನಿರೀಕ್ಷೆ ಹುಟ್ಟು ಹಾಕಿರೋ ‘ಕೆಡಿ’ ಸಿನಿಮಾದಲ್ಲಿ ಕರಾವಳಿ ನಟಿ ಇರೋದು ಫ್ಯಾನ್ಸ್‌ಗೆ ಖುಷಿ ಕೊಟ್ಟಿದೆ. ಚಿತ್ರದ ಫಸ್ಟ್ ಲುಕ್‌ನಲ್ಲಿ ಶಿಲ್ಪಾ ಶೆಟ್ಟಿ ರೆಟ್ರೋ ಸ್ಟೈಲಿನಲ್ಲಿ ಮಿಂಚಿದ್ದರು. ಇದನ್ನೂ ಓದಿ:‘ಕೆಡಿ’ ಸಿನಿಮಾದಲ್ಲಿ ಧ್ರುವ ಸರ್ಜಾ: ರೆಟ್ರೋ ಲುಕ್ ಫೋಟೋ ಲೀಕ್

    48ನೇ ವಯಸ್ಸಿನಲ್ಲಿ ಶಿಲ್ಪಾ ಶೆಟ್ಟಿಗೆ ಡಿಮ್ಯಾಂಡ್ ಕಮ್ಮಿಯಾಗಿಲ್ಲ. ಬಾಲಿವುಡ್‌ನಿಂದ ಬಂಪರ್ ಆರ‍್ಸ್ ಅರಸಿ ಬರುತ್ತಿದೆ. ನಟಿ ಕೂಡ ಯೋಗ, ವರ್ಕೌಟ್ ಅಂತಾ ತಮ್ಮ ಫಿಟ್‌ನೆಸ್ ಕಡೆ ಗಮನ ಕೊಡುತ್ತಿದ್ದಾರೆ. ಯೋಗ ಮಾಡೋದಿಂದಲೇ ಶಿಲ್ಪಾ ಶೆಟ್ಟಿ ಇಷ್ಟು ಮುದ್ದಾಗಿ ಕಾಣಿಸುತ್ತಾರೆ. ಇದೇ ಅವರ ಬ್ಯೂಟಿ ಸೀಕ್ರೆಟ್ ಎಂದೇ ಹೇಳಬಹುದು.

    ಈಗ ಕೆಂಪು ಬಣ್ಣದ ಉಡುಗೆಯಲ್ಲಿ ಶಿಲ್ಪಾ ಶೆಟ್ಟಿ ಹಾಟ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಕ್ಯಾಮೆರಾ ಕಣ್ಣಿಗೆ ಮಾದಕವಾಗಿ ಕಾಣಿಸುತ್ತಿದ್ದಾರೆ. ನಟಿಯ ಬೋಲ್ಡ್ ಲುಕ್ ನೋಡಿ, ಇವರನ್ನ ನೋಡಿದ್ರೆ 48 ವರ್ಷ ಅಂತಾ ಅನಿಸೋದೇ ಇಲ್ಲ ಎಂದು ಹೇಳ್ತಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸ್ನೇಹಿತನ ಹುಟ್ಟುಹಬ್ಬಕ್ಕೆ 52 ಲಕ್ಷ ಮೌಲ್ಯದ ದುಬಾರಿ ಕಾರು ಗಿಫ್ಟ್‌ ನೀಡಿದ ‘ಮಾರ್ಟಿನ್‌’ ಹೀರೋ ಧ್ರುವ ಸರ್ಜಾ

    ಸ್ನೇಹಿತನ ಹುಟ್ಟುಹಬ್ಬಕ್ಕೆ 52 ಲಕ್ಷ ಮೌಲ್ಯದ ದುಬಾರಿ ಕಾರು ಗಿಫ್ಟ್‌ ನೀಡಿದ ‘ಮಾರ್ಟಿನ್‌’ ಹೀರೋ ಧ್ರುವ ಸರ್ಜಾ

    ಸ್ಯಾಂಡಲ್‌ವುಡ್ (Sandalwood) ನಟ ಧ್ರುವ ಸರ್ಜಾ ಅವರು ಆಪ್ತ ಸ್ನೇಹಿತನಿಗೆ ದುಬಾರಿ ಗಿಫ್ಟ್‌ವೊಂದನ್ನ ಕೊಟ್ಟಿದ್ದಾರೆ. ಧ್ರುವ ಸರ್ಜಾ (Dhruva Sarja)  ನಡೆಗೆ ಸ್ನೇಹಿತ್ ಅಚ್ಚರಿ ಪಟ್ಟಿದ್ದಾರೆ. ಅದಷ್ಟೇ ಅಲ್ಲ, ಭಾವುಕರಾಗಿ ಕಣ್ಣೀರಿಟ್ಟಿದ್ದಾರೆ. ಇದನ್ನೂ ಓದಿ:ಯಶ್ ಸಿನಿಮಾಗಾಗಿ ಬೆಂಗಳೂರಿನಲ್ಲಿ ಬೀಡು ಬಿಟ್ಟ ಡೈರೆಕ್ಟರ್- ಇಲ್ಲಿದೆ ಗುಡ್ ನ್ಯೂಸ್

    ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರು ‘ಮಾರ್ಟಿನ್’, ‘ಕೆಡಿ’ (Kd Film) ಸಿನಿಮಾದ ಶೂಟಿಂಗ್ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ಸಿನಿಮಾ ಬಿಟ್ಟು ತಮ್ಮ ವೈಯಕ್ತಿಕ ವಿಚಾರವಾಗಿ ಸುದ್ದಿಯಲ್ಲಿದ್ದಾರೆ. ಸ್ನೇಹಿತ ಅಶ್ವಿನ್, ಧ್ರುವ ಸರ್ಜಾ (Dhruva Sarja)  ಸಿನಿಮಾಗಳಿಗೆ ಸಂಬಂಧಿಸಿದ ಕೆಲಸಗಳನ್ನು ನೋಡಿಕೊಳ್ಳುತ್ತಾರೆ. ಇತ್ತೀಚೆಗೆ ಅಶ್ವಿನ್ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಆ ದಿನದಂದು ಧ್ರುವ ಸರ್ಜಾ ದಿಢೀರನೇ ಕೊಟ್ಟ ಸರ್ಪ್ರೈಸ್ ಗಿಫ್ಟ್‌ಗೆ (Gift)  ಅವರ ಕಣ್ಣುಗಳು ಒದ್ದೆಯಾಗಿವೆ.

    ಸ್ಯಾಂಡಲ್‌ವುಡ್‌ನ ಸಕ್ಸಸ್‌ಫುಲ್ ನಟ ಧ್ರುವ ಸರ್ಜಾ, ನಟಿಸಿದ ಸಿನಿಮಾಗಳೆಲ್ಲವೂ ಯಶಸ್ಸು ಕಂಡಿವೆ. ಶೀಘ್ರದಲ್ಲೇ ಮೊದಲ ಪ್ಯಾನ್ ಇಂಡಿಯಾ ಸಿನಿಮಾ ರಿಲೀಸ್ ಕೂಡ ಆಗುತ್ತೆ. ಹೀಗೆ ಸಿನಿಮಾಗಳಲ್ಲಿ ಬ್ಯುಸಿಯಾಗಿರೋ ನಟ ತನ್ನ ಆತ್ಮೀಯರ ಸುಖ-ಸಂತೋಷದಲ್ಲೂ ಭಾಗಿಯಾಗಿದ್ದಾರೆ. ತನ್ನ ಆತ್ಮೀಯ ಗೆಳೆಯ ಅಶ್ವಿನ್‌ಗೆ ದುಬಾರಿ ಮೊತ್ತ ಕಾರನ್ನು ಗಿಫ್ಟ್ ಮಾಡಿದ್ದಾರೆ. ಅಶ್ವಿನ್ ಹುಟ್ಟುಹಬ್ಬದಂದು, 52 ಲಕ್ಷ ರೂ. ದುಬಾರಿ ಬೆಲೆ ಬಾಳುವ ಕಾರನ್ನು ಧ್ರುವ ಸರ್ಜಾ ಉಡುಗೊರೆಯಾಗಿ ನೀಡಿದ್ದಾರೆ. ದುಬಾರಿ ಟೊಯೊಟಾ ಫಾರ್ಚುನರ್ (Toyota Fortuner) ಕಾರನ್ನು ನೀಡಿದ್ದಷ್ಟೇ ಅಲ್ಲ, ಬಾಲ್ಯದಲ್ಲೇ ನಿಧನರಾಗಿರೋ ಅಶ್ವಿನ್ ತಂದೆ-ತಾಯಿಯ ಫೋಟೋವನ್ನೂ ಹುಡುಕಿ ಕಾರಿನಲ್ಲಿಟ್ಟು ಗಿಫ್ಟ್ ಮಾಡಿದ್ದಾರೆ.

    ಧ್ರುವ ಸರ್ಜಾ ಖುದ್ದಾಗಿ ಅಶ್ವಿನ್ ಜೊತೆ ಶೋ ರೂಮ್‌ಗೆ ಬಂದಿದ್ದರು. ದುಬಾರಿ ಕಾರನ್ನು ಸರ್ಪ್ರೈಸ್ ಗಿಫ್ಟ್ ಮಾಡಿದ್ದರು. ಆ ಸಂದರ್ಭದಲ್ಲಿ ಅಶ್ವಿನ್ ಕಣ್ಣುಗಳು ಖುಷಿಗೆ ಒದ್ದೆಯಾಗಿದ್ದವು. ಇದೇ ವೇಳೆ ಶೋ ರೂಮ್‌ನಲ್ಲಿ ಕೇಕ್ ಕತ್ತರಿಸಿ ಸಂಭ್ರಮಿಸಲಾಗಿದೆ. ಸಂಕಷ್ಟದಲ್ಲಿ ಅಶ್ವಿನ್‌ರನ್ನು ಕರೆತಂದು ತನ್ನ ಜೊತೆಯಲ್ಲೇ ಇಟ್ಟುಕೊಂಡಿದ್ದಾರೆ ಧ್ರುವ ಸರ್ಜಾ. ಅಲ್ಲದೆ ಅವರ ಜೀವನಕ್ಕೆ ದಾರಿಯನ್ನೂ ಮಾಡಿಕೊಟ್ಟಿದ್ದಾರೆ.

  • ಮುದ್ದು ಮಗಳ ಜೊತೆಗಿನ ಚೆಂದದ ವೀಡಿಯೋ ಹಂಚಿಕೊಂಡ ಧ್ರುವ ಸರ್ಜಾ

    ಮುದ್ದು ಮಗಳ ಜೊತೆಗಿನ ಚೆಂದದ ವೀಡಿಯೋ ಹಂಚಿಕೊಂಡ ಧ್ರುವ ಸರ್ಜಾ

    ಸ್ಯಾಂಡಲ್‌ವುಡ್ ನಟ ಧ್ರುವ ಸರ್ಜಾ (Dhruva Sarja) ಅವರು ‘ಮಾರ್ಟಿನ್’ (Martin) ಮತ್ತು ‘ಕೆಡಿ’ (KD) ಎರಡು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವೆ ಮಗಳ ಜೊತೆಗಿನ ಫೋಟೋವನ್ನ ನಟ ಮೊದಲ ಬಾರಿಗೆ ಹಂಚಿಕೊಂಡಿದ್ದರು. ಈಗ ಮಗಳ ಜೊತೆಗಿನ ಚೆಂದದ ವೀಡಿಯೋವೊಂದನ್ನ ಧ್ರುವ ಶೇರ್ ಮಾಡಿದ್ದಾರೆ.

    ಧ್ರುವ ಸರ್ಜಾ- ಪ್ರೇರಣಾ (Prerana) ಬದುಕಲ್ಲಿ ಪುಟ್ಟ ಲಕ್ಷ್ಮಿಯ ಆಗಮನವಾದ ಮೇಲೆ ಬದುಕು ಬದಲಾಗಿದೆ. ಮನೆಯಲ್ಲಿ ಸಂತಸ ಮನೆ ಮಾಡಿದೆ. ಕಳೆದ ವರ್ಷ ಅಕ್ಟೋಬರ್ 5ರಂದು ಪ್ರೇರಣಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಆದರೆ ಮಗಳ ಮುಖ ತೋರಿಸಿರಲಿಲ್ಲ. ಇತ್ತೀಚಿಗೆ ಮಗಳ ಮುದ್ದಾದ ಫೋಟೋವನ್ನ ಧ್ರುವ ಸರ್ಜಾ ರಿವೀಲ್ ಮಾಡಿದ್ದಾರೆ.

    ಈಗ ಧ್ರುವ ಶೇರ್ ಮಾಡಿರುವ ಮುದ್ದು ಮಗಳ ವೀಡಿಯೋಗೆ ಅಭಿಮಾನಿಗಳಿಂದ ಮೆಚ್ಚಿಗೆ ವ್ಯಕ್ತವಾಗಿದೆ. ಪರಿಸರ ನಡುವೆ ಚೆಂದದ ಫೋಟೋಶೂಟ್ ಮಾಡಿಸಿ, ಬಳಿಕ ಆಂಜನೇಯ ದೇವರಿಗೆ ವಿಶೇಷ ಪೂಜೆ ಸಲ್ಲಿಸಿರುವ ದೃಶ್ಯಗಳು ಈ ವೀಡಿಯೋದಲ್ಲಿದೆ. ಮಗಳ 7 ತಿಂಗಳ ಸುಂದರ ಜರ್ನಿಯನ್ನು ವೀಡಿಯೋ ಮೂಲಕ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ಕನ್ನಡದ ‘ಅಮೃತವರ್ಷಿಣಿ’ ಖ್ಯಾತಿಯ ನಟ ಶರತ್ ಬಾಬು ನಿಧನ

     

    View this post on Instagram

     

    A post shared by Dhruva Sarja (@dhruva_sarjaa)

    ಧ್ರುವ ಸರ್ಜಾ – ಪ್ರೇರಣಾ ಮುಗುವಿಗೆ ಇನ್ನೂ ನಾಮಕರಣ ಮಾಡಿಲ್ಲ. 7 ತಿಂಗಳ ನಂತರ ಫೋಟೋ ರಿವೀಲ್ ಮಾಡಿರೋ ನಟ ಮುಂದೆ ಮಗಳಿಗೆ ಏನು ಹೆಸರಿಡಬಹುದು ಎಂದು ಎದುರುನೋಡ್ತಿದ್ದಾರೆ. ಪಕ್ಕಾ ಫ್ಯಾಮಿಲಿ ಮೆನ್ ಆಗಿರೋ ಧ್ರುವ- ಪುಟ್ಟ ಮಗಳ ವೀಡಿಯೋ ಫ್ಯಾನ್ಸ್ ಖುಷಿಪಡ್ತಿದ್ದಾರೆ.

  • ಧ್ರುವ ಸರ್ಜಾಗೆ ನಾಯಕಿಯಾಗೋ ಆ KD ಲೇಡಿ ಯಾರು?

    ಧ್ರುವ ಸರ್ಜಾಗೆ ನಾಯಕಿಯಾಗೋ ಆ KD ಲೇಡಿ ಯಾರು?

    ಜೋಗಿ ಪ್ರೇಮ್ (Jogi Prem) ನಿರ್ದೇಶನದ ಬಹುನಿರೀಕ್ಷಿತ ಸಿನಿಮಾ ‘ಕೆಡಿ’ (KD) ಒಂದಲ್ಲಾ ಒಂದು ವಿಚಾರವಾಗಿ ಸೌಂಡ್ ಮಾಡುತ್ತಲೇ ಇದೆ. ದಿನದಿಂದ ದಿನಕ್ಕೆ ಚಿತ್ರತಂಡದ ತಾರಾಗಣ ಹಿರಿದಾಗುತ್ತಲೇ ಇದೆ. ಹೀಗಿರುವಾಗ ಧ್ರುವ ಸರ್ಜಾಗೆ (Dhruva Sarja) ನಾಯಕಿಯಾಗಿ ಯಾರು ಸಾಥ್ ಕೊಡುತ್ತಾರೆ ಎಂಬುದನ್ನ ರಿವೀಲ್ ಮಾಡುವುದಕ್ಕೆ ಕೌಂಟ್‌ಡೌನ್ ಶುರುವಾಗಿದೆ. ನಾಯಕಿ ಮಚ್ಚ್‌ಲಕ್ಷ್ಮಿ ಪರಿಚಯಿಸೋದಾಗಿ ಚಿತ್ರತಂಡ ಅನೌನ್ಸ್ ಮಾಡಿದೆ.

    ಸೂಪರ್ ಸ್ಟಾರ್‌ಗಳಿರುವ ತಾರಾಗಣ ಅಂದ್ರೆ ಅದು ಕೆಡಿ ಸಿನಿಮಾ. ಧ್ರುವ ಸರ್ಜಾ, ರವಿಚಂದ್ರನ್‌, ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ (Shilpa Shetty) , ಸಂಜಯ್ ದತ್ (Sanjay Dutt), ಹೀಗೆ ಸ್ಟಾರ್‌ಗಳನ್ನ ಸ್ಟಾರ್ ಡೈರೆಕ್ಟರ್ ನಿರ್ದೇಶಕ ಪ್ರೇಮ್ ನಿರ್ದೇಶನ ಮಾಡ್ತಿದ್ದಾರೆ. ವಿಭಿನ್ನ ಕಥೆ ಹೊತ್ತು, ಪ್ಯಾನ್ ಇಂಡಿಯಾ ಸಿನಿಮಾ ಹೊತ್ತು ತರುತ್ತಿದ್ದಾರೆ. ‘ಕೆಡಿ’ ನಾಯಕಿ ಮಚ್ಚ್‌ಲಕ್ಷ್ಮಿ ಬಗ್ಗೆ ಅನೌನ್ಸ್ ಮಾಡ್ತಿವಿ ಎನ್ನುತ್ತಿದ್ದಂತೆ ಯಾರಿರಬಹುದು ಎಂಬ ಗುಸು ಗುಸು ಈಗಾಗಲೇ ಶುರುವಾಗಿದೆ.

     

    View this post on Instagram

     

    A post shared by Prem❣️s (@directorprems)

    KDಗೆ ಪರಭಾಷಾ ನಟಿ ಅಲ್ಲ, ಹೊಸ ಮುಖ ಕೂಡ ಅಲ್ಲ, ರೀಷ್ಮಾ ನಾಣಯ್ಯ (Reeshma Nanaiah) ನಾಯಕಿಯಾಗಿ ಆಯ್ಕೆ ಆಗಿದ್ದಾರೆ ಎನ್ನಲಾಗ್ತಿದೆ. ಈಗಾಗಲೇ ಸಿನಿಮಾ ಚಿತ್ರೀಕರಣದಲ್ಲೂ ಅವರು ಭಾಗಿ ಆಗಿದ್ಧಾರೆ. ಏ.28ಕ್ಕೆ ಶುಕ್ರವಾರ 10:05ಕ್ಕೆ ಫಸ್ಟ್ ಲುಕ್ ಸಮೇತ ಮಚ್ಚ್‌ಲಕ್ಷ್ಮಿ ದರ್ಶನ ಮಾಡಿಸಲಿದೆಯಂತೆ ಚಿತ್ರತಂಡ. ಜೋಗಿ ಪ್ರೇಮ್ ನಿರ್ದೇಶನದ ‘ಏಕ್‌ ಲವ್ ಯಾ’ ಚಿತ್ರದಲ್ಲಿ ರೀಷ್ಮಾ ನಟಿಸಿದ್ದರು. ಮಡಿಕೇರಿ ಮೂಲದ ರೀಷ್ಮಾ ಬೆಂಗಳೂರಿನಲ್ಲಿ ಪದವಿ ಮುಗಿಸಿದ್ದಾರೆ. ಮೊದಲ ಚಿತ್ರದಲ್ಲೇ ಆಕೆಯ ನಟನೆ ಗಮನ ಸೆಳೆದಿತ್ತು. ಹಾಗಾಗಿ ‘KD’ ಚಿತ್ರಕ್ಕೂ ಆಕೆನೇ ನಾಯಕಿ ಎನ್ನಲಾಗ್ತಿದೆ. ಎಲ್ಲದಕ್ಕೂ ಅಧಿಕೃತ ಅಪ್‌ಡೇಟ್‌ಗೆ ಕಾದುನೋಡಬೇಕಿದೆ. ಇದನ್ನೂ ಓದಿ:38 ಕೋಟಿ ರೂಪಾಯಿ ಕೊಟ್ಟು ಎರಡು ಐಷರಾಮಿ ಮನೆ ಖರೀದಿಸಿದ ಆಲಿಯಾ ಭಟ್

    1968ರಿಂದ 1978ರ ನಡುವೆ ನಡೆದ ಒಂದಷ್ಟು ನೈಜ ಘಟನೆಗಳನ್ನು ಆಧರಿಸಿ ಈ ರೆಟ್ರೋ ಸಿನಿಮಾ ಕಟ್ಟಿಕೊಡಲಾಗ್ತಿದೆ. ಪ್ಯಾನ್ ಇಂಡಿಯಾ ಸಿನಿಮಾ ಆಗಿರುವುದರಿಂದ ಅದಕ್ಕೆ ತಕ್ಕಂತೆ ಸ್ಟಾರ್‌ಕಾಸ್ಟ್, ಮೇಕಿಂಗ್, ಪ್ರಮೋಷನ್ ಎಲ್ಲವೂ ಇರಲಿದೆ. ಈ ಚಿತ್ರಕ್ಕಾಗಿ ಕೇವಲ 23 ದಿನಗಳಲ್ಲಿ 18 ಕೆಜಿ ತೂಕ ಇಳಿಸಿ ಧ್ರುವ ಸರ್ಜಾ ನಟಿಸ್ತಿದ್ದಾರೆ. ಧ್ರುವ ನಟನೆಯ ‘ಮಾರ್ಟಿನ್’ ಸಿನಿಮಾ ದೊಡ್ಡ ಮಟ್ಟದಲ್ಲಿ ತೆರೆಗಪ್ಪಳಿಸಲು ಸಿದ್ಧವಾಗ್ತಿದೆ. ಅದರ ಬೆನ್ನಲ್ಲೇ ತೆರೆಮೇಲೆ KD ಸಿನಿಮಾದ  ಕರಾಮತ್ತು ಶುರುವಾಗಲಿದೆ.

  • KD Film: ಧ್ರುವ ಸರ್ಜಾ ಸಿನಿಮಾಗಾಗಿ ಬೆಂಗಳೂರಿಗೆ ಬಂದಿಳಿದ ಶಿಲ್ಪಾ ಶೆಟ್ಟಿ

    KD Film: ಧ್ರುವ ಸರ್ಜಾ ಸಿನಿಮಾಗಾಗಿ ಬೆಂಗಳೂರಿಗೆ ಬಂದಿಳಿದ ಶಿಲ್ಪಾ ಶೆಟ್ಟಿ

    ಬಾಲಿವುಡ್ (Bollywood) ಬ್ಯೂಟಿ ಶಿಲ್ಪಾ ಶೆಟ್ಟಿ (Shilpa Shetty) 17 ವರ್ಷಗಳ ನಂತರ ಕನ್ನಡ ಚಿತ್ರಗಳಲ್ಲಿ ನಟಿಸುವ ಮೂಲಕ ಫ್ಯಾನ್ಸ್‌ಗೆ ಗುಡ್ ನ್ಯೂಸ್ ನೀಡಿದ್ದರು. KD ಸಿನಿಮಾದ ಸತ್ಯವತಿ ಲುಕ್‌ನಿಂದ ಹೈಪ್ ಕ್ರಿಯೆಟ್ ಮಾಡಿದ್ದರು. ಇದೀಗ ಮತ್ತೆ ಚಿತ್ರದ ಶೂಟಿಂಗ್‌ನಲ್ಲಿ ಭಾಗಿಯಾಗಲು ಸಿಲಿಕಾನ್ ಸಿಟಿಗೆ ಶಿಲ್ಪಾ ಎಂಟ್ರಿ ಕೊಟ್ಟಿದ್ದಾರೆ.

    ಕರಾವಳಿ ಕುವರಿ ಶಿಲ್ಪಾ ಶೆಟ್ಟಿ ಅವರು ಈ ಹಿಂದೆಯೇ ರವಿಚಂದ್ರನ್, ಉಪೇಂದ್ರ ಅವರಿಗೆ ನಾಯಕಿಯಾಗುವ ಮೂಲಕ ಪಡ್ಡೆಹುಡುಗರ ನಿದ್ದೆ ಕದ್ದಿದ್ದರು. ಕನ್ನಡದ ಚಿತ್ರಗಳ ಮೇಲೆ ವಿಶೇಷ ಒಲವಿರುವ ನಟಿ ಮತ್ತೆ ಸ್ಯಾಂಡಲ್‌ವುಡ್‌ನಲ್ಲಿ ಆಕ್ಟೀವ್ ಆಗ್ತಿದ್ದಾರೆ. ಇದನ್ನೂ ಓದಿ: ‘ದಸರಾ’ ಸಿನಿಮಾ ಕೊಂಡಾಡಿದ ರಾಜಮೌಳಿ-ಪ್ರಭಾಸ್-ಪ್ರಿನ್ಸ್

    ಧ್ರುವ ಸರ್ಜಾ (Dhruva Sarja) ನಟನೆಯ KD ಸಿನಿಮಾದಲ್ಲಿ ಶಿಲ್ಪಾ ಶೆಟ್ಟಿ ಪವರ್‌ಫುಲ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಯಾವ ಪಾತ್ರ, ಏನು ಎಂಬ ಮಾಹಿತಿ ಸಿಗದೇ ಇದ್ದರು ಕೂಡ ಅವರ ಫಸ್ಟ್ ಲುಕ್‌ಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಮೊದಲ ಹಂತದ ಚಿತ್ರೀಕರಣ ಮುಗಿಸಿ ಕೊಟ್ಟಿದ್ದ ಶಿಲ್ಪಾ ಶೆಟ್ಟಿ, ಇದೀಗ ಮತ್ತೆ ಬೆಂಗಳೂರಿಗೆ ನಟಿ ಎಂಟ್ರಿ ಕೊಟ್ಟಿದ್ದಾರೆ. ಕೆಡಿ ಸಿನಿಮಾ ಶೂಟಿಂಗ್‌ಗೆ ಭಾಗಿಯಾಗಿದ್ದಾರೆ.

     

    View this post on Instagram

     

    A post shared by Viral Bhayani (@viralbhayani)

    ನಿರ್ದೇಶಕ ಪ್ರೇಮ್ (Director Prem) ಕಥೆ ಹೇಳಿದಾಗಲೇ ಖುಷಿಯಾಗಿ ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದರು.ಸ್ಯಾಂಡಲ್‌ವುಡ್‌ಗೆ ಬರಲು ತಮ್ಮ ಕಂಬ್ಯಾಕ್ ಇದು ಸೂಕ್ತ ಕಥೆ ಎಂದೆನಿಸಿ ಧ್ರುವ ಸರ್ಜಾ- ಸಂಜಯ್ ದತ್ (Sanjay Dutt) ನಟನೆಯ ಸಿನಿಮಾದಲ್ಲಿ ಕರಾವಳಿ ನಟಿ ಕಾಣಿಸಿಕೊಳ್ತಿದ್ದಾರೆ.

  • KD Film: ಧ್ರುವ ಸರ್ಜಾಗೆ ರೀಷ್ಮಾ ನಾಣಯ್ಯ ನಾಯಕಿ

    KD Film: ಧ್ರುವ ಸರ್ಜಾಗೆ ರೀಷ್ಮಾ ನಾಣಯ್ಯ ನಾಯಕಿ

    ಧ್ರುವ ಸರ್ಜಾ- ಡೈರೆಕ್ಟರ್ ಪ್ರೇಮ್ ಕಾಂಬಿನೇಷನ್ `ಕೆಡಿ’ (KD Film) ಸಿನಿಮಾ ಶುರುವಾದ ದಿನದಿಂದಲೂ ಸಾಕಷ್ಟು ನಿರೀಕ್ಷೆ ಹುಟ್ಟು ಹಾಕುತ್ತಲೇಯಿದೆ. ಇತ್ತೀಚಿಗೆ ಶಿಲ್ಪಾ ಶೆಟ್ಟಿ (Shilpa Shetty) ಪಾತ್ರದ ಫಸ್ಟ್ ಲುಕ್ ರಿವೀಲ್ ಮಾಡುವ ಮೂಲಕ `ಕೆಡಿ’ ಟೀಮ್ ಸೌಂಡ್ ಮಾಡಿತ್ತು. ಇದೀಗ `ಕೆಡಿ’ಗೆ ನಾಯಕಿ ಯಾರು ಎಂದು ರಿವೀಲ್ ಆಗಿದೆ.

    `ಕೆಡಿ’ (KD) ಸಿನಿಮಾದಲ್ಲಿ ಧ್ರುವ ಸರ್ಜಾಗೆ ನಾಯಕಿ ಯಾರು ಎಂಬ ಪ್ರಶ್ನೆಗೆ ಇದೀಗ ಉತ್ತರ ಸಿಕ್ಕಿದೆ. ಧ್ರುವ ಸರ್ಜಾ (Dhruva Sarja) ನಾಯಕಿಯಾಗಿ `ಏಕ್ ಲವ್ ಯಾ’ ನಾಯಕಿ ರೀಷ್ಮಾ ಫೈನಲ್ ಆಗಿದ್ದಾರೆ. ಈ ಮೊದಲು ಶ್ರೀಲೀಲಾ ನಾಯಕಿ ಎಂದು ಸುದ್ದಿಯಾಗಿತ್ತು. ಆದರೆ ಈಗ ಕೊಡಗಿನ ಕುವರಿ ರೀಷ್ಮಾ ನಾಯಕಿ ಎಂದು ಹೇಳಲಾಗುತ್ತಿದೆ.

    ಕನ್ನಡದ ನಟಿನೇ ಧ್ರುವಗೆ ನಾಯಕಿಯಾಗಬೇಕು ಎಂದು ಚಿತ್ರತಂಡ ಮೊದಲೇ ಯೋಚಿಸಿತ್ತು. ಅದರಂತೆಯೇ ಕನ್ನಡದ ನಟಿ ರೀಷ್ಮಾನೇ ಈ ಪಾತ್ರಕ್ಕೆ ಸೂಕ್ತ ಎಂದೆನಿಸಿ ಆಯ್ಕೆ ಮಾಡಲಾಗಿದೆ. ʻಕೆಡಿʼ ಸಿನಿಮಾದಲ್ಲಿ ರೆಟ್ರೋ ಕಥೆಯಿದ್ದು, ರೆಟ್ರೋ ಲುಕ್‌ನಲ್ಲಿ ರೀಷ್ಮಾ ನಾಣಯ್ಯ (Reeshma Naniah) ಮಿಂಚಿದ್ದಾರೆ. ಧ್ರುವ, ಸಂಜಯ್ ದತ್, ಶಿಲ್ಪಾ ಶೆಟ್ಟಿ ಹೀಗೆ ದೊಡ್ಡ ದೊಡ್ಡ ಕಲಾವಿದರು ಬಣ್ಣ ಹಚ್ಚಿರುವ ಚಿತ್ರದಲ್ಲಿ ರೀಷ್ಮಾ ನಾಯಕಿಯಾಗಿದ್ದಾರೆ. ಇದನ್ನೂ ಓದಿ:ಶ್ರೀನಿಧಿ ಬ್ಯೂಟಿಗೆ ರಕ್ಷಿತ್ ಫಿದಾ, ಶೆಟ್ರೆ ಏನ್ ವಿಷ್ಯ ಎಂದು ಕಾಲೆಳೆದ ಫ್ಯಾನ್ಸ್

    ರೀಷ್ಮಾ ಸದ್ಯ ಗೋಲ್ಡನ್ ಸ್ಟಾರ್ ಗಣೇಶ್ ಜೊತೆ `ಬಾನ ದಾರಿಯಲಿ’, ಉಪೇಂದ್ರ ಜೊತೆ UI ಚಿತ್ರದಲ್ಲಿ ನಟಿಸಿದ್ದಾರೆ. ಈ ಬೆನ್ನಲ್ಲೇ ಮತ್ತೊಂದು ಪ್ಯಾನ್ ಇಂಡಿಯಾ `ಕೆಡಿ’ ಚಿತ್ರಕ್ಕೆ ರೀಷ್ಮಾ ಸಾಥ್ ನೀಡಿದ್ದಾರೆ.

  • ಶಿಲ್ಪಾ ಶೆಟ್ಟಿಗೆ ಕನ್ನಡ-ತೆಲುಗು ವ್ಯತ್ಯಾಸ ಗೊತ್ತಿಲ್ವಾ? ಕಿಡಿಕಾರಿದ ಕನ್ನಡಿಗರು

    ಶಿಲ್ಪಾ ಶೆಟ್ಟಿಗೆ ಕನ್ನಡ-ತೆಲುಗು ವ್ಯತ್ಯಾಸ ಗೊತ್ತಿಲ್ವಾ? ಕಿಡಿಕಾರಿದ ಕನ್ನಡಿಗರು

    ರಾವಳಿ ಬ್ಯೂಟಿ ಶಿಲ್ಪಾ ಶೆಟ್ಟಿ (Shilpa Shetty)  17 ವರ್ಷಗಳ ನಂತರ ಕನ್ನಡ ಸಿನಿಮಾಗೆ ಕಂಬ್ಯಾಕ್ ಮಾಡಿದ್ದಾರೆ. `ಕೆಡಿ’ (KD Film) ಧ್ರುವ ಸರ್ಜಾ (Dhruva Sarja) ಸಿನಿಮಾಗೆ ನಟಿ ಸಾಥ್ ನೀಡಿದ್ದಾರೆ. ನಟಿಯ ಲುಕ್‌ಗೆ ಮೆಚ್ಚುಗೆ ವ್ಯಕ್ತವಾದ ಬೆನ್ನಲ್ಲೇ ಕನ್ನಡ (Kannada) ಚಿತ್ರವನ್ನ ತೆಲುಗಿನಲ್ಲಿ (Telagu) ಶುಭಾಶಯ ಹೇಳುವ ಮೂಲಕ ಕನ್ನಡಿಗರ ಕೆಂಗಣ್ಣಿಗೆ ಶಿಲ್ಪಾ ಶೆಟ್ಟಿ ಗುರಿಯಾಗಿದ್ದಾರೆ.

    ಯುಗಾದಿ ಹಬ್ಬದಂದು `ಕೆಡಿ’ ಚಿತ್ರದ ಶಿಲ್ಪಾ ಶೆಟ್ಟಿ ಪಾತ್ರದ ಸತ್ಯವತಿ ಲುಕ್‌ನ ರಿವೀಲ್ ಮಾಡಿದ್ದರು. ತೊಂಬತ್ತರ ದಶಕದ ಸೀರೆ, ಹೇರ್‌ಸ್ಟೈಲ್, ಕನ್ನಡಕ ಹಾಗೂ ಕೈಯಲ್ಲೊಂದು ಬ್ಯಾಗ್ ಹಿಡಿದು ನಡೆದು ವಿಂಟೇಜ್ ಕಾರೊಂದರ ಮುಂದೆ ಶಿಲ್ಪಾ ಶೆಟ್ಟಿ ನಡೆದು ಬರುತ್ತಿರುವ ಪೋಸ್ಟರ್ ಇದಾಗಿದ್ದು, ಈ ಪೋಸ್ಟರ್ ಅನ್ನು ಶಿಲ್ಪಾ ಶೆಟ್ಟಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.

    ಆದರೆ ಪೋಸ್ಟರ್ ಹಂಚಿಕೊಳ್ಳುವಾಗ ಶಿಲ್ಪಾ ಶೆಟ್ಟಿ ಬರೆದಿರುವ ಸಾಲುಗಳು ಇದೀಗ ಕನ್ನಡಿಗರ ಕೋಪಕ್ಕೆ ಕಾರಣವಾಗಿವೆ. ಶಿಲ್ಪಾ ಶೆಟ್ಟಿ ತೆಲುಗಿನಲ್ಲಿ `ಯುಗಾದಿ ಶುಭಾಕಾಂಕ್ಷಲು’ ಎಂದು ತೆಲುಗಿನಲ್ಲಿ ಶುಭ ಕೋರಿದ್ದಾರೆ. ಈ ಪೋಸ್ಟ್‌ನಲ್ಲಿ ಎಲ್ಲಿಯೂ ಸಹ ಕನ್ನಡವಿಲ್ಲ. ಕನ್ನಡ ಚಿತ್ರದ ಪೋಸ್ಟರ್ ಹಂಚಿಕೊಳ್ಳುವಾಗ, ಕನ್ನಡ ಚಿತ್ರರಂಗಕ್ಕೆ ಹಲವು ವರ್ಷಗಳ ಬಳಿಕ ಮರಳಿ ಬರುತ್ತಿರುವ ವಿಷಯವನ್ನು ಯುಗಾದಿ ಹಬ್ಬದ ವಿಶೇಷ ದಿನದಂದು ತಿಳಿಸುವಾಗ ಕನ್ನಡದ ಬದಲು ತೆಲುಗು ಬಂದದ್ದಾದರೂ ಯಾಕೆ ಎಂಬ ಪ್ರಶ್ನೆ ಕನ್ನಡಿಗರಲ್ಲಿ ಮನೆ ಮಾಡಿದೆ.

    ಶಿಲ್ಪಾ ಶೆಟ್ಟಿ ಮಾಡಿರುವ ಪೋಸ್ಟ್ ಕಂಡ ಕೂಡಲೇ ಪ್ರತಿಕ್ರಿಯಿಸಿರುವ ಹಲವಾರು ನೆಟ್ಟಿಗರು ಕನ್ನಡ ಚಿತ್ರದ ಪೋಸ್ಟರ್‌ಗೂ ತೆಲುಗು ಭಾಷೆಗೂ ಎನು ಸಂಬಂಧ, ಅನುಭವಿ ನಟಿಯಾಗಿ ಈ ರೀತಿ ಮಾಡೋದು ಸರಿನಾ, ಮೂಲತಃ ಕರ್ನಾಟಕದವರೇ ಆಗಿ ಕನ್ನಡ ಕಡೆಗಣನೆ ಎಷ್ಟು ಸರಿ ಎಂದು ಕಿಡಿಕಾರಿದ್ದಾರೆ.  ಇಷ್ಟೆಲ್ಲಾ ಸೋಷಿಯಲ್ ಮೀಡಿಯಾದಲ್ಲಿ ನಟಿಯನ್ನ ಟ್ರೋಲ್ ಮಾಡ್ತಾ ಇದ್ದರೂ ಕೂಡ ಶಿಲ್ಪಾ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

  • KD Film: ಮತ್ತೆ ಕನ್ನಡಕ್ಕೆ ರಾಯಲ್ ಆಗಿ ಎಂಟ್ರಿ ಕೊಟ್ಟ ಶಿಲ್ಪಾ ಶೆಟ್ಟಿ

    KD Film: ಮತ್ತೆ ಕನ್ನಡಕ್ಕೆ ರಾಯಲ್ ಆಗಿ ಎಂಟ್ರಿ ಕೊಟ್ಟ ಶಿಲ್ಪಾ ಶೆಟ್ಟಿ

    ಬಾಲಿವುಡ್ (Bollywood) ಬ್ಯೂಟಿ ಕನ್ನಡತಿ ಶಿಲ್ಪಾ ಶೆಟ್ಟಿ (Shilpa Shetty) ಸತ್ಯವತಿಯಾಗಿ ಮತ್ತೆ ಕನ್ನಡಕ್ಕೆ ಬಂದಿದ್ದಾರೆ. `ಕೆಡಿ’ (KD Film) ಧ್ರುವ ಜೊತೆ ಶಿಲ್ಪಾ ಶೆಟ್ಟಿ ಭಿನ್ನ ಪಾತ್ರದ ಮೂಲಕ ಕಮ್‌ಬ್ಯಾಕ್ ಮಾಡಿದ್ದಾರೆ. ರಾಯಲ್‌ ಲುಕ್‌ನಲ್ಲಿ ಮಿಂಚಿದ್ದಾರೆ.

    ಡೈರೆಕ್ಟರ್ ಪ್ರೇಮ್ (Prem) ತಮ್ಮ ಪ್ರತಿ ಸಿನಿಮಾದಲ್ಲಿಯೂ ಹೊಸ ಕಾನ್ಸೆಪ್ಟ್ ಮೂಲಕ ಬರುತ್ತಾರೆ. ಈಗ ಧ್ರುವಗೆ ಆ್ಯಕ್ಷನ್ ಕಟ್ ಹೇಳುವ ಮೂಲಕ ಸೌಂಡ್ ಮಾಡ್ತಿದ್ದಾರೆ. ಈಗಾಗಲೇ `ಕೆಜಿಎಫ್ 2′ ಅಧೀರ ಸಂಜಯ್ ದತ್ (Sanjay Dutt)ಎಂಟ್ರಿ ಕೊಟ್ಟ ಬೆನ್ನಲ್ಲೇ ಶಿಲ್ಪಾ ಶೆಟ್ಟಿ ಕೂಡ ಸದ್ದಿಲ್ಲದೇ ತಮ್ಮ ಭಾಗದ ಚಿತ್ರೀಕರಣ ಮಾಡಿ ಮುಗಿಸಿ ಕೊಟ್ಟಿದ್ದರು. ಇದನ್ನೂ ಓದಿ:`ಸಾಮಿ ಸಾಮಿ’ ಹಾಡಿಗೆ ಸ್ಟೆಪ್ ಹಾಕಿ ಎಂದ ಅಭಿಮಾನಿಗೆ ನೋ ಎಂದ ರಶ್ಮಿಕಾ ಮಂದಣ್ಣ

    ಇದೀಗ ಯುಗಾದಿ ಹಬ್ಬದ ಪ್ರಯುಕ್ತ ಚಿತ್ರದ ಪವರ್‌ಫುಲ್ ಸತ್ಯವತಿ ಪಾತ್ರದ (Sathyavathi) ಲುಕ್‌ನ ಚಿತ್ರತಂಡ ರಿವೀಲ್ ಮಾಡಿದ್ದಾರೆ. ಸತ್ಯವತಿಯಾಗಿ ಕರಾವಳಿ ನಟಿ ಶಿಲ್ಪಾ ಶೆಟ್ಟಿ ನಟಿಸಿದ್ದಾರೆ. ಚೆಂದದ ಸೀರೆಯುಟ್ಟು ಉದ್ದದ ಜಡೆ ಮುಂದಕ್ಕೆ ಬಿಟ್ಟು, ಕೂಲಿಂಗ್ ಗ್ಲ್ಯಾಸ್ ಧರಿಸಿ ರಾಯಲ್ ಆಗಿ ಶಿಲ್ಪಾ ಶೆಟ್ಟಿ ಎಂಟ್ರಿ ಕೊಟ್ಟಿದ್ದಾರೆ. ನಟಿಯ ಲುಕ್ ರಿವೀಲ್ ಆಗ್ತಿದ್ದಂತೆ ಅಭಿಮಾನಿಗಳ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಶಿಲ್ಪಾ ಶೆಟ್ಟಿ 17 ವರ್ಷಗಳ ನಂತರ ಇದೀಗ `ಕೆಡಿ’ ಸಿನಿಮಾದ ಮೂಲಕ ಕನ್ನಡ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಪ್ರೀತ್ಸೋದ್ ತಪ್ಪಾ? ಆಟೋ ಶಂಕರ್, `ಒಂದಾಗೋಣ ಬಾ’ ಸಿನಿಮಾಗಳಲ್ಲಿ ನಟಿ ಅಭಿನಯಿಸಿದ್ದಾರೆ.