Tag: kd film

  • ಥಿಯೇಟರ್ ಸಮಸ್ಯೆ ಬಗ್ಗೆ ಡೈರೆಕ್ಟರ್ ಪ್ರೇಮ್ ಓಪನ್ ಟಾಕ್

    ಥಿಯೇಟರ್ ಸಮಸ್ಯೆ ಬಗ್ಗೆ ಡೈರೆಕ್ಟರ್ ಪ್ರೇಮ್ ಓಪನ್ ಟಾಕ್

    ಡೈರೆಕ್ಟರ್ ಪ್ರೇಮ್ (Director Prem) ಮತ್ತು ಕಾಂಬಿನೇಷನ್ ‘ಕೆಡಿ’ (KD Film) ಸಿನಿಮಾ ಈ ವರ್ಷ ಡಿಸೆಂಬರ್‌ನಲ್ಲಿ ರಿಲೀಸ್ ಮಾಡುವುದಾಗಿ ಚಿತ್ರತಂಡ ಅಧಿಕೃತ ಅಪ್‌ಡೇಟ್ ನೀಡಿದೆ. ಸಿನಿಮಾದ ಸುದ್ದಿಗೋಷ್ಠಿಯಲ್ಲಿ ಕೆಡಿ ಚಿತ್ರದ ಕಥೆ, ಆಡಿಯೋ ರೈಟ್ಸ್ ವಿಚಾರ ಸೇರಿದಂತೆ ಥಿಯೇಟರ್ ಸಮಸ್ಯೆ ಬಗ್ಗೆ ಕೂಡ ನಿರ್ದೇಶಕ ಪ್ರೇಮ್ ಮಾತನಾಡಿದ್ದಾರೆ.

    ‘ಕೆಡಿ’ ಚಿತ್ರ ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗಲಿದೆ. ಅದ್ಧೂರಿಯಾಗಿ ಈ ಚಿತ್ರವನ್ನು ಕೆವಿಎನ್ ಸಂಸ್ಥೆ ನಿರ್ಮಾಣ ಮಾಡಿದೆ. ಈ ಸಿನಿಮಾ ಬಹುತೇಕ ಚಿತ್ರೀಕರಣ ಮುಗಿಸಿದೆ. `ಕೆಡಿ’ ರೆಟ್ರೋ ಸ್ಟೈಲ್ ಸಿನಿಮಾ. ಹಾಗಾಗಿ ಚಿತ್ರತಂಡ ಕೂಡ ಅದೇ ಲುಕ್‌ನಲ್ಲಿ ಸುದ್ದಿಗೋಷ್ಠಿಗೆ ಆಗಮಿಸಿದ್ದರು. ಈ ವೇಳೆ, ಅಪ್ಪು ಮತ್ತು ಶಿವಣ್ಣನನ್ನು ಧ್ರುವನಲ್ಲಿ (Dhruva Sarja) ನೋಡಿದೆ ಎಂದು ಪ್ರೇಮ್ ಮಾತನಾಡಿದ್ದಾರೆ.

    ಲಾಂಗು ಹಿಡಿದಿರುವ ಸಿನಿಮಾ ಹಿಟ್ ಅಂತಲ್ಲ. ದರ್ಶನ್, ಶಿವಣ್ಣ, ಧ್ರುವ ಲಾಂಗ್ ಹಿಡಿದಿದ್ದಾರೆ ಅವರವರ ಸ್ಟೈಲ್ ಬೇರೆ ಆಗಿರುತ್ತದೆ. ಆನ್ ಟೈಮ್‌ಗೆ ಸೆಟ್‌ನಲ್ಲಿ ಹಾಜರಿ ಹಾಕುತ್ತಿದ್ದರು. ಶೂಟಿಂಗ್ ಇಲ್ಲದೆ ಇದ್ದರು ಅವರು ಭಾಗಿಯಾಗುತ್ತಿದ್ದರು. 108 ಕೆಜಿ ಇದ್ದ ಧ್ರುವ ಕೆಡಿ ಸಿನಿಮಾಗಾಗಿ 80 ಕೆಜಿ ತೂಕ ಇಳಿಸಿಕೊಂಡರು ಎಂದು ಧ್ರುವ ಡೆಡಿಕೇಷನ್ ಬಗ್ಗೆ ಪ್ರೇಮ್ ಹಾಡಿ ಹೊಗಳಿದ್ದಾರೆ.

    ಸಿನಿಮಾಗಳು ಇಲ್ಲದೇ ಥಿಯೇಟರ್ ಬಂದ್ ಬಗ್ಗೆ ಮತ್ತು ಯಾಕೆ ನಮ್ಮ ಸಿನಿಮಾಗಳು ತಡ ಆಗುತ್ತಿದೆ ಎಂದು ಮುಕ್ತವಾಗಿ ಡೈರೆಕ್ಟರ್ ಪ್ರೇಮ್ ಮಾತನಾಡಿದ್ದಾರೆ. ಸಿನಿಮಾಗಳಿಲ್ಲದೇ ಥಿಯೇಟರ್ ಮುಚ್ಚಬೇಕಿದೆ. ಆದರೆ ಇಂದಿನ ದಿನಗಳಲ್ಲಿ ಕ್ವಾಲಿಟಿ ಸಿನಿಮಾ ಮಾಡಬೇಕಾಗಿದೆ. ಚಿತ್ರದ ಗ್ರಾಫಿಕ್ಸ್ ವರ್ಕ್, ಸಿಜಿ ವರ್ಕ್ ಕೆಲಸ ತುಂಬಾ ಇದೆ ಆದ್ರಿಂದ ಸಿನಿಮಾ ಟೈಂ ತೆಗೆದುಕೊಳ್ಳುತ್ತಿದೆ ಎಂದಿದ್ದಾರೆ.

    ದರ್ಶನ್, ಯಶ್, ಸುದೀಪ್, ದರ್ಶನ್, ಶಿವಣ್ಣ, ಉಪ್ಪಿ ಸರ್ ಎಲ್ಲರೂ ಇದ್ದಾರೆ. ವರ್ಷಕ್ಕೆ ಒಂದೊಂದು ಸಿನಿಮಾ ಮಾಡಿದ್ದರೆ ಆಗುತ್ತದೆ. ಸಿಂಗಲ್ ಸ್ಕ್ರೀನ್ ಮುಚ್ಚುತ್ತಿದೆ ಅಂತ ಹೇಳ್ತಿದ್ದಿರಲ್ವಾ? ಕಪಾಲಿ ಥಿಯೇಟರ್ ಕ್ಲೋಸ್ ಆಯ್ತು ಅಲ್ಲಿ ಎಷ್ಟು ಸ್ಕ್ರೀನ್ ಬರುತ್ತೆ ಗೊತ್ತಾ? ಎಂದು ಪ್ರಶ್ನಿಸಿದ್ದಾರೆ ಪ್ರೇಮ್. ಹಲವು ವರ್ಷಗಳ ಹಿಂದೆ ಬರುತ್ತಿದ್ದ ಸಿನಿಮಾಗಳಿಗೂ ಇವತ್ತಿನ ಸಿನಿಮಾಗಳಿಗೂ ತುಂಬಾ ಡಿಫರೆನ್ಸ್ ಇದೆ. ಇವತ್ತಿನ ಜನರೇಷನ್ ಪ್ರೇಕ್ಷಕರಿಗೆ ಕ್ವಾಲಿಟಿ ಕೊಡಬೇಕಾಗುತ್ತಿದೆ. ಜೊತೆಗೆ ಬೇರೇ ಭಾಷೆಗಳ ಸಿನಿಮಾಗೂ ನಾವು ಪೈಪೋಟಿ ಕೊಡಬೇಕಾದರೆ ಕ್ಲಾಲಿಟಿಯಲ್ಲಿ ಕಾಂಪ್ರಮೈಸ್ ಆಗಬಾರದು. ಕಾಲಕ್ಕೆ ತಕ್ಕಂತೆ ಸಿನಿಮಾ ಕೊಡಬೇಕಿದೆ ಹಾಗಾಗಿ ತಡವಾಗುತ್ತಿದೆ ಎಂದು ಪ್ರೇಮ್ ಮಾತನಾಡಿದ್ದಾರೆ.

    ಈ ಸಿನಿಮಾದಲ್ಲಿ ಧ್ರುವ ಸರ್ಜಾಗೆ ನಾಯಕಿಯಾಗಿ ಕೊಡಗಿನ ಬೆಡಗಿ ರೀಷ್ಮಾ ನಾಣಯ್ಯ ನಟಿಸಿದ್ದಾರೆ. ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ, ಸಂಜಯ್ ದತ್, ರಮೇಶ್ ಅರವಿಂದ್, ರವಿಚಂದ್ರನ್ ಸೇರಿದಂತೆ ಹಲವು ನಟಿಸಿದ್ದಾರೆ. ಇದೇ ಡಿಸೆಂಬರ್‌ನಲ್ಲಿ ‘ಕೆಡಿ’ ಸಿನಿಮಾ ರಿಲೀಸ್ ಆಗಲಿದೆ.

  • ದುಬಾರಿ ಮೊತ್ತಕ್ಕೆ ‘ಕೆಡಿ’ ಚಿತ್ರದ ಆಡಿಯೋ ರೈಟ್ಸ್ ಸೇಲ್

    ದುಬಾರಿ ಮೊತ್ತಕ್ಕೆ ‘ಕೆಡಿ’ ಚಿತ್ರದ ಆಡಿಯೋ ರೈಟ್ಸ್ ಸೇಲ್

    ಧ್ರುವ ಸರ್ಜಾ (Dhruva Sarja) ನಟನೆಯ ‘ಕೆಡಿ’ (KD Film) ಸಿನಿಮಾ ಇದೇ ಡಿಸೆಂಬರ್‌ಗೆ ತೆರೆಗೆ ಅಪ್ಪಳಿಸಲಿದೆ. ಇದರ ನಡುವೆ ಸಿನಿಮಾದ ಬಗ್ಗೆ ಬಿಗ್ ಅಪ್‌ಡೇಟ್‌ವೊಂದು ಚಿತ್ರತಂಡ ಹಂಚಿಕೊಂಡಿದೆ. ಸಿನಿಮಾ ರಿಲೀಸ್ ಮುನ್ನವೇ ದುಬಾರಿ ಮೊತ್ತಕ್ಕೆ ‘ಕೆಡಿ’ ಚಿತ್ರದ ಆಡಿಯೋ ರೈಟ್ಸ್ ರಿಲೀಸ್ ಆಗಿದೆ. ಇದನ್ನೂ ಓದಿ:ರೇವ್‌ ಪಾರ್ಟಿ ಪ್ರಕರಣ: ತೆಲುಗು ನಟಿ ಹೇಮಾ ಪರ ನಿಂತ ವಿಷ್ಣು ಮಂಚು

    ‘ಕೆಡಿ’ ಚಿತ್ರವು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ರಿಲೀಸ್ ಆಗಲಿದೆ. ಅದ್ಧೂರಿಯಾಗಿ ಈ ಚಿತ್ರವನ್ನು ಕೆವಿಎನ್ ಸಂಸ್ಥೆ ನಿರ್ಮಾಣ ಮಾಡಿದೆ. ಈ ಸಿನಿಮಾ ಬಹುತೇಕ ಚಿತ್ರೀಕರಣ ಮುಗಿಸಿದೆ. ‘ಕೆಡಿ’ ರೆಟ್ರೋ ಸ್ಟೈಲ್ ಸಿನಿಮಾ. ಹಾಗಾಗಿ ಚಿತ್ರತಂಡ ಕೂಡ ಅದೇ ಲುಕ್‌ನಲ್ಲಿ ಸುದ್ದಿಗೋಷ್ಠಿಗೆ ಆಗಮಿಸಿದ್ದರು. ಕನ್ನಡ ಚಿತ್ರರಂಗದಲ್ಲೇ ದಾಖಲೆ ಮೊತ್ತಕ್ಕೆ ‘ಕೆಡಿ’ ಆಡಿಯೋ ರೈಟ್ಸ್ ಮಾರಾಟವಾಗಿದೆ ಎಂದು ಚಿತ್ರತಂಡ ಹೇಳಿದೆ. ಆನಂದ್ ಆಡಿಯೋ ಸಂಸ್ಥೆ ರೈಟ್ಸ್ ಕೊಂಡುಕೊಂಡಿದೆ. 17.70 ಕೋಟಿ ರೂ.ಗೆ ಆಡಿಯೋ ರೈಟ್ಸ್ ಸೇಲ್ ಆಗಿದೆ ಎಂದು ತಿಳಿಸಿದ್ದಾರೆ.

    ಈ ವೇಳೆ ನಟ ಧ್ರುವ ಸರ್ಜಾ ಮಾತನಾಡಿ, ‘ಕೆಡಿ’ ಅಂದ್ರೆ ಕಾಳಿದಾಸ. ಈ ಸಿನಿಮಾದಲ್ಲಿ ಕಾಳಿದಾಸ ನಾನೇ. ನಿರ್ದೇಶಕ ಪ್ರೇಮ್ ಜೊತೆಗೆ ಸಿನಿಮಾ ಮಾಡಬೇಕು ಅಂತ ನಿರ್ಧಾರ ಮಾಡಿದ್ದೆ. ಅದು ಕೆವಿಎನ್ ಸಂಸ್ಥೆಯಿಂದ ಆರಂಭ ಆಯ್ತು. ಚಿತ್ರದ ಆಡಿಯೋ ಹಕ್ಕು ದೊಡ್ಡ ಮೊತ್ತಕ್ಕೆ ಮಾರಾಟ ಆಗಿದ್ದು, ತುಂಬಾ ಖುಷಿ ಆಗಿದೆ. ನನ್ನ ‘ಅದ್ಧೂರಿ’ ಸಿನಿಮಾ 4 ಕೋಟಿ ರೂ. ಖರ್ಚಿನಲ್ಲಿ ನಿರ್ಮಾಣವಾಗಿತ್ತು. ಆದರೆ ಈಗ ಕೆಡಿ ಸಿನಿಮಾದ ಆಡಿಯೋ ಹಕ್ಕು ಮಾತ್ರ 17.70 ಕೋಟಿ ರೂ. ಸೇಲ್ ಆಗಿದೆ. ಸಿನಿಮಾ ಕೂಡ ತುಂಬಾ ರಿಚ್ ಆಗಿ ಮೂಡಿ ಬಂದಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

    ಅಂದಹಾಗೆ, ಶಾರುಖ್ ನಟನೆಯ ‘ಪಠಾಣ್’ ಚಿತ್ರಕ್ಕೆ 180 ಜನರನ್ನು ಬಳಸಿ, ಆರ್ಕೆಸ್ಟ್ರಾ ಮಾಡಿಸಲಾಗಿತ್ತು. ಆದರೆ ‘ಕೆಡಿ’ ಸಿನಿಮಾ ಅದನ್ನು ಮೀರಿಸಿದೆ. ಆ ಮೂಲಕ ಮೇಕಿಂಗ್ ಹಂತದಲ್ಲೇ ಸಿನಿಮಾ ಹೊಸ ದಾಖಲೆ ಬರೆದಿದೆ ಎಂದು ಮಾಹಿತಿ ನೀಡಿದ್ದಾರೆ.

  • ‘ಮಾರ್ಟಿನ್’ ಬೆನ್ನಲ್ಲೇ ‘ಕೆಡಿ’ ಚಿತ್ರದ ಬಗ್ಗೆ ಸಿಹಿಸುದ್ದಿ ಕೊಟ್ಟ ಧ್ರುವ ಸರ್ಜಾ

    ‘ಮಾರ್ಟಿನ್’ ಬೆನ್ನಲ್ಲೇ ‘ಕೆಡಿ’ ಚಿತ್ರದ ಬಗ್ಗೆ ಸಿಹಿಸುದ್ದಿ ಕೊಟ್ಟ ಧ್ರುವ ಸರ್ಜಾ

    ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ (Dhruva Sarja) ‘ಮಾರ್ಟಿನ್’ ಸಿನಿಮಾ ರಿಲೀಸ್ ಬಗ್ಗೆ ಗುಡ್ ನ್ಯೂಸ್ ಕೊಟ್ಟ ಬೆನ್ನಲ್ಲೇ ಇದೀಗ ‘ಕೆಡಿ’ (KD Film) ಸಿನಿಮಾದ ಬಗ್ಗೆ ಬಿಗ್ ಅಪ್‌ಡೇಟ್ ಹಂಚಿಕೊಂಡಿದ್ದಾರೆ. ಧ್ರುವ ಸಿನಿಮಾಗಳಿಗಾಗಿ ಕಾದು ಕುಳಿತವರಿಗೆ ಖುಷಿ ಸುದ್ದಿ ಸಿಕ್ಕಿದೆ. ಇದನ್ನೂ ಓದಿ:‘ಪುಷ್ಪ 2’ ಪೋಸ್ಟರ್ ಔಟ್ -ಖಡಕ್ ಲುಕ್‌ನಲ್ಲಿ ರಾವ್ ರಮೇಶ್

    ತೆಲಂಗಾಣದಲ್ಲಿ ಚಿತ್ರರಂಗದ ಚಿತ್ರಮಂದಿರ ಬಂದ್ ಆದ್ಮೇಲೆ ಕರ್ನಾಟಕದಲ್ಲಿ ಚಿತ್ರಮಂದಿರ ಬಂದ್ ಮಾಡುವ ಬಗ್ಗೆ ಅಪಸ್ವರ ಎದ್ದಿತ್ತು. ಯಾವುದೇ ಕಾರಣಕ್ಕೂ ಥಿಯೇಟರ್ ಬಂದ್ ಮಾಡಲ್ಲ ಎಂದು ಅಧಿಕೃತ ಘೋಷಣೆ ಮಾಡಲಾಯ್ತು. ಸ್ಟಾರ್ ನಟರ ಸಿನಿಮಾಗಳು ತಡ ಆಗ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಬೆನ್ನಲ್ಲೇ ಧ್ರುವ ನಟನೆಯ 2 ಬಿಗ್ ಬಜೆಟ್ ಸಿನಿಮಾಗಳ ರಿಲೀಸ್ ಡೇಟ್ ಅನೌನ್ಸ್‌ ಮಾಡುವ ಮೂಲಕ ಅಭಿಮಾನಿಗಳಿಗೆ ಗುಡ್‌ ನ್ಯೂಸ್‌ ನೀಡಿದ್ದಾರೆ.

    ಧ್ರುವ ನಟನೆಯ ‘ಮಾರ್ಟಿನ್’ (Martin Film) ಚಿತ್ರ ಅಕ್ಟೋಬರ್ 11ಕ್ಕೆ ರಿಲೀಸ್ ಆಗಲಿದೆ ಎಂದು ಘೋಷಣೆ ಮಾಡಿದ ಬೆನ್ನಲ್ಲೇ ಡೈರೆಕ್ಟರ್ ಪ್ರೇಮ್ ಮತ್ತು ಧ್ರುವ ಕಾಂಬಿನೇಷನ್ ಸಿನಿಮಾ ಕೆಡಿ ಸಿನಿಮಾಗೂ ರಿಲೀಸ್ ಡೇಟ್ ಫಿಕ್ಸ್ ಆಗಿದೆ. ಕೆಡಿ ಸಿನಿಮಾ ಇದೇ ಡಿಸೆಂಬರ್‌ನಲ್ಲಿ ಬಹುಭಾಷೆಗಳಲ್ಲಿ ಸಿನಿಮಾ ರಿಲೀಸ್ ಆಗುತ್ತಿದೆ.

    ಈ ಚಿತ್ರದಲ್ಲಿ ಧ್ರುವಗೆ ನಾಯಕಿಯಾಗಿ ರೀಷ್ಮಾ ನಾಣಯ್ಯ (Reeshma Nanaiah), ಶಿಲ್ಪಾ ಶೆಟ್ಟಿ (Shilpa Shetty), ಸಂಜಯ್ ದತ್, ರಮೇಶ್ ಅರವಿಂದ್, ರವಿಚಂದ್ರನ್ ಸೇರಿದಂತೆ ಸ್ಟಾರ್ ಕಲಾವಿದರ ದಂಡೇ ಇದೆ. ಈ ಚಿತ್ರವನ್ನು ಕೆವಿಎನ್‌ ಸಂಸ್ಥೆ ಅದ್ಧೂರಿಯಾಗಿ ನಿರ್ಮಾಣ ಮಾಡಿದೆ.

  • ಸಿಹಿಸುದ್ದಿ ಕೊಟ್ಟ ಧ್ರುವ ಸರ್ಜಾ- ಮೇ 24ರಂದು ಸಿಗಲಿದೆ ‘ಕೆಡಿ’ ಚಿತ್ರದ ಅಪ್‌ಡೇಟ್

    ಸಿಹಿಸುದ್ದಿ ಕೊಟ್ಟ ಧ್ರುವ ಸರ್ಜಾ- ಮೇ 24ರಂದು ಸಿಗಲಿದೆ ‘ಕೆಡಿ’ ಚಿತ್ರದ ಅಪ್‌ಡೇಟ್

    ಸ್ಯಾಂಡಲ್‌ವುಡ್ ನಟ ಧ್ರುವ ಸರ್ಜಾ ಸಿನಿಮಾಗಳಿಗಾಗಿ ಕಾಯುತ್ತಿದ್ದ ಅಭಿಮಾನಿಗಳಿಗೆ ಸಿಹಿಸುದ್ದಿ ಸಿಕ್ಕಿದೆ. ಇದೇ ಮೇ 24ರಂದು ‘ಕೆಡಿ’ (KD Film) ಸಿನಿಮಾದ ಬಗ್ಗೆ ಇಂಟ್ರಸ್ಟಿಂಗ್ ಮಾಹಿತಿಯನ್ನು ಧ್ರುವ ಸರ್ಜಾ ಹಂಚಿಕೊಳ್ಳಲಿದ್ದಾರೆ. ಹಾಗಂತ ಸುದ್ದಿಯೊಂದು ಹರಿದಾಡುತ್ತಿದೆ.

    ಧ್ರುವ ಸರ್ಜಾ ಅವರು ‘ಮಾರ್ಟಿನ್’ ಮತ್ತು ‘ಕೆಡಿ’ ಸಿನಿಮಾವನ್ನು ಮುಗಿಸಿಕೊಟ್ಟಿದ್ದಾರೆ. ಸಿನಿಮಾ ಬಿಡುಗಡೆಗೂ ಮುನ್ನ ಬಾಕಿಯುಳಿದಿರುವ ಕೆಲಸಗಳು ನಡೆಯುತ್ತಿದೆ. ಎಲ್ಲಾ ಕೆಲಸ ಪಕ್ಕಾ ಆದ್ಮೇಲೆ ಚಿತ್ರಮಂದಿರದಲ್ಲಿ ಸಿನಿಮಾ ಅಬ್ಬರಿಸಲಿದೆ. ಇದನ್ನೂ ಓದಿ:ಮತ್ತೆ ಕಿರುತೆರೆಗೆ ಎಂಟ್ರಿ ಕೊಟ್ಟ ‘ಬಿಗ್ ಬಾಸ್’ ಖ್ಯಾತಿಯ ಸಿರಿ

    ಸದ್ಯ ಧ್ರುವ ಸರ್ಜಾ (Dhruva Sarja) ನಟನೆಯ ಕೆಡಿ ಚಿತ್ರದ ಬಗ್ಗೆ ಸಮಾಚಾರವೊಂದು ಹರಿದಾಡುತ್ತಿದೆ. ಇದೇ ಮೇ 24ರಂದು ಸಿನಿಮಾಗೆ ಸಂಬಂಧಿಸಿದ ಘೋಷಣೆಯೊಂದು ನಡೆಯಲಿದೆ ಎಂದು ಹೇಳಲಗುತ್ತಿದೆ. ಯಾವ ಎಂಬುದನ್ನು ಮೇ 24ರವರೆಗೂ ಕಾದುನೋಡಬೇಕಿದೆ.

    ‘ಕೆಡಿ’ ಚಿತ್ರವನ್ನು ಡೈರೆಕ್ಟರ್ ಪ್ರೇಮ್ ನಿರ್ದೇಶನ ಮಾಡಿದ್ದಾರೆ. ಈ ಚಿತ್ರದಲ್ಲಿ ಮಲ್ಟಿಸ್ಟಾರ್ಸ್ ನಟಿಸಿದ್ದಾರೆ. ಧ್ರುವ ಸರ್ಜಾ ಜೊತೆ ಸಂಜಯ್ ದತ್, ಶಿಲ್ಪಾ ಶೆಟ್ಟಿ, ರೀಷ್ಮಾ ನಾಣಯ್ಯ, ರಮೇಶ್ ಅರವಿಂದ್, ರವಿಚಂದ್ರನ್ ಸೇರಿದಂತೆ ಅನೇಕರು ನಟಿಸಿದ್ದಾರೆ.

  • ಕಾಮಾಕ್ಯ ದೇವಸ್ಥಾನಕ್ಕೆ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಭೇಟಿ

    ಕಾಮಾಕ್ಯ ದೇವಸ್ಥಾನಕ್ಕೆ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಭೇಟಿ

    ಬಾಲಿವುಡ್ ಬೆಡಗಿ ಶಿಲ್ಪಾ ಶೆಟ್ಟಿ (Shilpa Shetty) ಅವರು ಮಂಗಳೂರಿಗೆ ಬಂದು ದೈವ ಕೋಲದಲ್ಲಿ ಭಾಗಿಯಾದ ಬೆನ್ನಲ್ಲೇ ಇದೀಗ ಕಾಮಾಕ್ಯ ದೇವಸ್ಥಾನಕ್ಕೆ (Kamakhya Temple) ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಈ ಕುರಿತ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿವೆ.

    ಅಸ್ಸಾಂನ ಗೌವಾಹಟಿಯಲ್ಲಿರುವ ಕಾಮಾಕ್ಯ ದೇವಸ್ಥಾನಕ್ಕೆ ತಾಯಿ ಸುನಂದಾ ಶೆಟ್ಟಿ ಜೊತೆ ಶಿಲ್ಪಾ ಭೇಟಿ ನೀಡಿ ಕೆಲ ಕಾಲ ಸಮಯ ಕಳೆದಿದ್ದಾರೆ. ದೇವರ ಸನ್ನಿಧಿಯಲ್ಲಿ ನಟಿ ಕುಳಿತು ಪೂಜೆ ಮಾಡುತ್ತಿರುವ ಫೋಟೋ ಈಗ ವೈರಲ್‌ ಆಗಿದೆ. ಇದನ್ನೂ ಓದಿ:ಮತ್ತಷ್ಟು ಎತ್ತರಕ್ಕೆ ಏರುತ್ತೀಯ- ‘ಕೆಜಿಎಫ್’ ನಟಿಗೆ ದೈವದ ಅಭಯ

    ಅಂದಹಾಗೆ, ಹಲವು ವರ್ಷಗಳ ನಂತರ ಶಿಲ್ಪಾ ಶೆಟ್ಟಿ ‘ಕೆಡಿ’ ಸಿನಿಮಾದ ಮೂಲಕ ಕನ್ನಡ ಚಿತ್ರಕ್ಕೆ ಕಮ್‌ ಬ್ಯಾಕ್ ಆಗಿದ್ದಾರೆ. ಈ ಹಿಂದೆ ಆಟೋ ಶಂಕರ್, ಒಂದಾಗೋಣ ಬಾ, ಪ್ರೀತ್ಸೋದ್ ತಪ್ಪಾ? ಸಿನಿಮಾಗಳಲ್ಲಿ ಶಿಲ್ಪಾ ನಟಿಸಿದ್ದರು.

  • ತಮಟೆ ಹಿಡಿದು ಹಳ್ಳಿ ಹುಡುಗಿಯಾಗಿ ಮಿಂಚಿದ ರೀಷ್ಮಾ ನಾಣಯ್ಯ

    ತಮಟೆ ಹಿಡಿದು ಹಳ್ಳಿ ಹುಡುಗಿಯಾಗಿ ಮಿಂಚಿದ ರೀಷ್ಮಾ ನಾಣಯ್ಯ

    ಕೊಡಗಿನ ಬೆಡಗಿ ರೀಷ್ಮಾ ನಾಣಯ್ಯಗೆ (Reeshma Nanaiah) ಇಂದು (ಏ.28) ಹುಟ್ಟುಹಬ್ಬದ ಸಂಭ್ರಮವಾಗಿದ್ದು, ಚಿತ್ರತಂಡದಿಂದ ಫ್ಯಾನ್ಸ್‌ಗೆ ಸರ್ಪ್ರೈಸ್ ಸಿಕ್ಕಿದೆ. ತಮಟೆ ಹಿಡಿದು ಹಳ್ಳಿ ಹುಡುಗಿಯ ಗೆಟಪ್‌ನಲ್ಲಿರುವ ರೀಷ್ಮಾ ಪೋಸ್ಟರ್ ಅನ್ನು ಚಿತ್ರತಂಡ ರಿವೀಲ್ ಮಾಡಿದ್ದಾರೆ.‌ ಈ ಮೂಲಕ ಚಿತ್ರದ ರೀಷ್ಮಾ ಪಾತ್ರದ ಲುಕ್‌ ಅನ್ನು ಪರಿಚಯಿಸಿದ್ದಾರೆ. ಇದನ್ನೂ ಓದಿ:‘ರಾಮಾಯಣ’ದ ಶೂಟಿಂಗ್ ನಂತರ ‘ಟಾಕ್ಸಿಕ್’ನಲ್ಲಿ ಯಶ್ ಭಾಗಿ

    ಕೆಂಪು ಬಣ್ಣದ ಲಂಗ ದಾವಣಿಯಲ್ಲಿ ನಟಿ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ತಮಟೆ ಹಿಡಿದು ಹೊಡೆಯುತ್ತಿರುವ ಪೋಸ್‌ನಲ್ಲಿ ನಟಿ ರಗಡ್ ಆಗಿ ಕಾಣಿಸಿಕೊಂಡಿದ್ದಾರೆ. ಉದ್ದನೆಯ ಜಡೆ ಪೋಸ್ಟರ್‌ನಲ್ಲಿ ಎದ್ದು ಕಾಣುತ್ತಿದೆ. ನಟಿಯ ಹಳ್ಳಿ ಅವತಾರ ಪ್ರೇಕ್ಷಕರ ಗಮನ ಸೆಳೆದಿದೆ.

     

    View this post on Instagram

     

    A post shared by Prem❣️s (@directorprems)

    ‘ಕೆಡಿ’ (KD) ಸಿನಿಮಾದಲ್ಲಿ ಧ್ರುವ ಸರ್ಜಾಗೆ ನಾಯಕಿಯಾಗಿ ರೀಷ್ಮಾ ನಟಿಸಿದ್ದಾರೆ. ನಿರ್ದೇಶಕ ಪ್ರೇಮ್ ಈ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಚಿತ್ರದಲ್ಲಿ ಶಿಲ್ಪಾ ಶೆಟ್ಟಿ, ರವಿಚಂದ್ರನ್, ರಮೇಶ್ ಅರವಿಂದ್, ಸಂಜಯ್ ದತ್ ಸೇರಿದಂತೆ ಹಲವರು ನಟಿಸಿದ್ದಾರೆ.

    ಸದ್ಯ ‘ಕೆಡಿ’ ಮತ್ತು ಉಪೇಂದ್ರ (Upendra) ನಟನೆಯ ‘ಯುಐ’ ಚಿತ್ರದ ರಿಲೀಸ್‌ಗಾಗಿ ನಟಿ ಎದುರು ನೋಡ್ತಿದ್ದಾರೆ. ಈ ಎರಡು ಸಿನಿಮಾಗಳ ಮೇಲೆ ಫ್ಯಾನ್ಸ್‌ಗೆ ಭಾರೀ ನಿರೀಕ್ಷೆಯಿದೆ.

  • ‘ಕೆಡಿ’ ಚಿತ್ರತಂಡದ ಜೊತೆ ಗೋಲ್ಡನ್ ಟೆಂಪಲ್‌ಗೆ ಡೈರೆಕ್ಟರ್ ಪ್ರೇಮ್ ಭೇಟಿ

    ‘ಕೆಡಿ’ ಚಿತ್ರತಂಡದ ಜೊತೆ ಗೋಲ್ಡನ್ ಟೆಂಪಲ್‌ಗೆ ಡೈರೆಕ್ಟರ್ ಪ್ರೇಮ್ ಭೇಟಿ

    ಸ್ಯಾಂಡಲ್‌ವುಡ್‌ನ ಹೆಸರಾಂತ ನಿರ್ದೇಶಕ ಪ್ರೇಮ್ (Director Prem) ಇದೀಗ ಅಮೃತಸರ ಗೋಲ್ಡನ್ ಟೆಂಪಲ್‌ಗೆ ಭೇಟಿ ನೀಡಿದ್ದಾರೆ. ‘ಕೆಡಿ’ (Kd Film) ಚಿತ್ರತಂಡದ ಜೊತೆ ಭೇಟಿ ನೀಡಿರುವ ಫೋಟೋಗಳನ್ನು ಪ್ರೇಮ್ ಹಂಚಿಕೊಂಡಿದ್ದಾರೆ.

    ‘ಕೆಡಿ’ ಟೀಮ್ ಜೊತೆ ಪಂಜಾಬ್‌ನ ಅಮೃತಸರ ಗೋಲ್ಡನ್ ಟೆಂಪಲ್‌ಗೆ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿ ದೇವರ ದರ್ಶನ ಪಡೆದಿದ್ದಾರೆ ಜೋಗಿ ಪ್ರೇಮ್. ಸಿನಿಮಾ ಶೂಟಿಂಗ್‌ಗೆ ಬ್ರೇಕ್ ಸಿಕ್ಕ ಬೆನ್ನಲ್ಲೇ ದೇವರ ಸನ್ನಿಧಿಗೆ ಹೋಗಿದ್ದಾರೆ. ಇದನ್ನೂ ಓದಿ:ದಿ ಸಾಬರಮತಿ ರಿಪೋರ್ಟ್ ಟ್ರೈಲರ್ ರಿಲೀಸ್: ಚರ್ಚೆಗೆ ಕಾರಣವಾಯಿತು ಮತ್ತೊಂದು ಚಿತ್ರ

    ಧ್ರುವ ಸರ್ಜಾ (Dhruva Sarja) ನಟನೆಯ ‘ಕೆಡಿ’ ಸಿನಿಮಾಗೆ ಪ್ರೇಮ್ ಆ್ಯಕ್ಷನ್ ಕಟ್ ಹೇಳಿದ್ದಾರೆ. ಚಿತ್ರದಲ್ಲಿ ಬಾಲಿವುಡ್ ನಟ ಸಂಜಯ್ ದತ್, ಶಿಲ್ಪಾ ಶೆಟ್ಟಿ, ರಮೇಶ್ ಅರವಿಂದ್ ಸೇರಿದಂತೆ ಅನೇಕರು ನಟಿಸಿದ್ದಾರೆ. ಸದ್ಯದಲ್ಲೇ ಕೆಡಿ ಸಿನಿಮಾದ ರಿಲೀಸ್ ಕುರಿತು ಹೆಚ್ಚಿನ ಮಾಹಿತಿ ಸಿಗಲಿದೆ.

    ಕೆವಿಎನ್ ನಿರ್ಮಾಣ ಸಂಸ್ಥೆ ಜೊತೆ ಪ್ರೇಮ್ ಕೈಜೋಡಿಸಿದ್ದಾರೆ. ದರ್ಶನ್‌ಗೆ (Darshan) ಹಲವು ವರ್ಷಗಳ ನಂತರ ಪ್ರೇಮ್ ಆ್ಯಕ್ಷನ್ ಕಟ್ ಹೇಳ್ತಿದ್ದಾರೆ. ಜೈ ಶ್ರೀರಾಮ್ ಎಂದು ಗದೆ ಎತ್ತಿ ದರ್ಶನ್ ಹೊಸ ಸಿನಿಮಾದ ಟೀಸರ್ ಕೂಡ ರಿವೀಲ್ ಮಾಡಲಾಗಿತ್ತು. ಸದ್ಯದಲ್ಲೇ ಚಿತ್ರದ ಶೂಟಿಂಗ್ ಅಪ್‌ಡೇಟ್ ಕೂಡ ಸಿಗಲಿದೆ. ಒಟ್ನಲ್ಲಿ ಪ್ರೇಮ್‌ ಬತ್ತಳಿಕೆಯಿಂದ ಬರುವ ಸಿನಿಮಾಗಳ ಬಗ್ಗೆ ಫ್ಯಾನ್ಸ್‌ಗೆ ಸಿಕ್ಕಾಪಟ್ಟೆ ನಿರೀಕ್ಷೆಯಿದೆ.

  • ಸಂಜಯ್ ದತ್‌ರನ್ನು ಭೇಟಿಯಾದ ದರ್ಶನ್‌

    ಸಂಜಯ್ ದತ್‌ರನ್ನು ಭೇಟಿಯಾದ ದರ್ಶನ್‌

    ‘ಕಾಟೇರ’ (Katera Film) ಸಿನಿಮಾದ ಸಕ್ಸಸ್ ಸಂಭ್ರಮ ನಡುವೆ ಇದೀಗ ಬಾಲಿವುಡ್ ಸ್ಟಾರ್ ನಟ ಸಂಜಯ್ ದತ್‌ರನ್ನು (Sanjay Dutt) ದರ್ಶನ್ ಭೇಟಿಯಾಗಿದ್ದಾರೆ. ಡಿಬಾಸ್ ಮತ್ತು ಅಧೀರನ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇದನ್ನೂ ಓದಿ:Vedaa: ವಿಲನ್ ಬಳಿಕ ಹೀರೋ ಆದ ಜಾನ್ ಅಬ್ರಹಾಂ

    ‘ಕೆಜಿಎಫ್ 2’ (KGF 2) ಸಿನಿಮಾದ ಸಕ್ಸಸ್ ನಂತರ ಸಂಜಯ್ ದತ್ ಅವರು ಸೌತ್‌ನತ್ತ ಮುಖ ಮಾಡಿದ್ದಾರೆ. ಕನ್ನಡ ಸಿನಿಮಾ ‘ಕೆಡಿ’ಯಲ್ಲಿ ಪವರ್‌ಫುಲ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರವನ್ನು ಡೈರೆಕ್ಟರ್ ಪ್ರೇಮ್ ನಿರ್ದೇಶಿಸಿದ್ದಾರೆ. ಇನ್ನೂ ಚಿತ್ರತಂಡ ಆಯೋಜಿಸಿದ್ದ ಪಾರ್ಟಿಯಲ್ಲಿ ಸಂಜಯ್ ದತ್ ಭಾಗಿಯಾಗಿದ್ದರು. ಈ ವೇಳೆ, ದರ್ಶನ್ (Darshan) ಅವರು ಸಂಜಯ್ ದತ್‌ರನ್ನು ಭೇಟಿಯಾಗಿ ಕೆಲ ಸಮಯ ಕಳೆದಿದ್ದಾರೆ.

    ‘ಕೆಡಿ’ ಸಿನಿಮಾ ತಂಡದ ಜೊತೆ ಮತ್ತು ದರ್ಶನ್, ಪ್ರೇಮ್, ರಕ್ಷಿತಾ ಪ್ರೇಮ್ (Rakshitha Prem) ಜೊತೆ ಕ್ಲಿಕ್ಕಿಸಿರುವ ಸಂಜಯ್ ದತ್ ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.

    ಧ್ರುವ ಸರ್ಜಾ-ಡೈರೆಕ್ಟರ್ ಪ್ರೇಮ್ ಕಾಂಬೋ ‘ಕೆಡಿ’ (KD) ಸಿನಿಮಾವನ್ನು ‘ಕೆವಿಎನ್’ ಸಂಸ್ಥೆ ನಿರ್ಮಾಣ ಮಾಡಿದ್ದಾರೆ. ಅಂದಹಾಗೆ, ದರ್ಶನ್ ಅವರ ಮುಂದಿನ ಸಿನಿಮಾಗೂ ಕೆವಿಎನ್ ಸಂಸ್ಥೆ ನಿರ್ಮಾಣ ಮಾಡಲಿದ್ದಾರೆ ಎನ್ನಲಾಗುತ್ತಿದೆ.

    ಕೆಲದಿನಗಳ ಹಿಂದೆ ಧ್ರುವ ಸರ್ಜಾರ ಮಕ್ಕಳ ನಾಮಕರಣದ ಸಂಭ್ರಮದಲ್ಲಿ ಸಂಜಯ್ ದತ್ ಭಾಗಿಯಾಗಿ ಶುಭಕೋರಿದ್ದರು.

  • ಧ್ರುವ ಸರ್ಜಾ ‘ಕೆಡಿ’ ಸಿನಿಮಾದಲ್ಲಿ ನೋರಾ ಫತೇಹಿ

    ಧ್ರುವ ಸರ್ಜಾ ‘ಕೆಡಿ’ ಸಿನಿಮಾದಲ್ಲಿ ನೋರಾ ಫತೇಹಿ

    ಡ್ಯಾನ್ಸಿಂಗ್ ಬ್ಯೂಟಿ ನೋರಾ ಫತೇಹಿ (Nora Fatehi) ಅವರು ಕನ್ನಡದ ಪ್ರೇಕ್ಷಕರಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಧ್ರುವ ಸರ್ಜಾ ನಟನೆಯ- ಡೈರೆಕ್ಟರ್ ಪ್ರೇಮ್ ನಿರ್ದೇಶನದ ‘ಕೆಡಿ’ (Kd Film) ಸಿನಿಮಾದಲ್ಲಿ ನಟಿ ನೋರಾ ಕಾಣಿಸಿಕೊಳ್ತಿದ್ದಾರೆ. ಈ ಬಗ್ಗೆ ಚಿತ್ರತಂಡವೇ ಬಿಗ್ ಅಪ್‌ಡೇಟ್ ನೀಡಿದ್ದಾರೆ. ಇದನ್ನೂ ಓದಿ:1.39 ಲಕ್ಷ ಮೊತ್ತದ ಲಂಗ-ದಾವಣಿಯಲ್ಲಿ ಮಿಂಚಿದ ಪೂಜಾ ಹೆಗ್ಡೆ

    ಬಾಲಿವುಡ್ ನಟಿ ನೋರಾ ಫತೇಹಿ ಇದೇ ಮೊದಲ ಬಾರಿಗೆ ಸ್ಯಾಂಡಲ್‌ವುಡ್‌ಗೆ ಪಾದಾರ್ಪಣೆ ಮಾಡ್ತಿದ್ದಾರೆ. ಅದು ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ (Dhruva Sarja) ಚಿತ್ರದ ಮೂಲಕ ಎಂಟ್ರಿ ಕೊಡ್ತಿದ್ದಾರೆ. ಡೈರೆಕ್ಟರ್ ಪ್ರೇಮ್ (Director  Prem) ಕಾಂಬೋದಲ್ಲಿ ಮೂಡಿ ಬರುತ್ತಿರುವ ಈ ಚಿತ್ರದಲ್ಲಿ ನೋರಾ ಸೊಂಟ ಬಳುಕಿಸಿದ್ದಾರೆ.

     

    View this post on Instagram

     

    A post shared by Prem❣️s (@directorprems)

    ‘ಕೆಡಿ’ (Kd Film) ಚಿತ್ರದಲ್ಲಿ ನೋರಾ ಸ್ಪೆಷಲ್ ಹಾಡೊಂದಕ್ಕೆ ಹೆಜ್ಜೆ ಹಾಕಿದ್ದಾರೆ. ಈ ಬಗ್ಗೆ ಚಿತ್ರತಂಡ ಅಧಿಕೃತ ಅಪ್‌ಡೇಟ್ ಹಂಚಿಕೊಂಡಿದೆ. ಡ್ಯಾನ್ಸ್ ಜೊತೆ ನಟನೆ ಕೂಡ ಮಾಡಿದ್ದಾರಾ? ಎಂಬುದರ ಬಗ್ಗೆ ಸುಳಿವು ಬಿಟ್ಟು ಕೊಟ್ಟಿಲ್ಲ.

    ‘ಕೆಡಿ’ ಸಿನಿಮಾದಲ್ಲಿ ಸ್ಟಾರ್ ಕಲಾವಿದರ ದಂಡೇ ಇದೆ. ಶಿಲ್ಪಾ ಶೆಟ್ಟಿ(Shilpa Shetty), ಸಂಜಯ್ ದತ್, ರಮೇಶ್ ಅರವಿಂದ್, ಕ್ರೇಜಿ ಸ್ಟಾರ್ ರವಿಚಂದ್ರನ್ ಸೇರಿದಂತೆ ಹಲವರು ನಟಿಸಿದ್ದಾರೆ. ಸದ್ಯ ನೋರಾ ಫತೇಹಿ ಈ ಚಿತ್ರದ ಭಾಗವಾಗಿರೋದಕ್ಕೆ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ.

  • KD: ಲಾಂಗ್‌ ಹಿಡಿದು ಮಾಸ್‌ ಆಗಿ ಎಂಟ್ರಿ ಕೊಟ್ಟ ರಮೇಶ್‌ ಅರವಿಂದ್

    KD: ಲಾಂಗ್‌ ಹಿಡಿದು ಮಾಸ್‌ ಆಗಿ ಎಂಟ್ರಿ ಕೊಟ್ಟ ರಮೇಶ್‌ ಅರವಿಂದ್

    ಸ್ಯಾಂಡಲ್‌ವುಡ್ ನಟ ರಮೇಶ್ ಅರವಿಂದ್  ‘ಕೆಡಿ’ (KD) ತಂಡಕ್ಕೆ ಸೇರಿಕೊಂಡಿದ್ದಾರೆ. ಸಿನಿಮಾದಲ್ಲಿನ ಅವರ ಪಾತ್ರದ ಲುಕ್ ರಿವೀಲ್ ಆಗಿದೆ. ಡಿಫರೆಂಟ್ ಆಗಿ ರಮೇಶ್ ಅರವಿಂದ್ (Ramesh Aravind) ಕಾಣಿಸಿಕೊಂಡಿದ್ದಾರೆ.‌ ರಮೇಶ್‌ ನಟಿಸಿರುವ ಧರ್ಮ ಪಾತ್ರದ ಲುಕ್‌ ಈಗ ರಿವೀಲ್‌ ಆಗಿದೆ.

    ಎವರ್‌ಗ್ರೀನ್ ನಟ ರಮೇಶ್ ಅರವಿಂದ್ ಸಖತ್ ಮಾಸ್ ಆಗಿ ಕಾಣಿಸಿಕೊಂಡಿದ್ದಾರೆ. ಕೈಯಲ್ಲಿ ಲಾಂಗ್ ಹಿಡಿದು ಎಂಟ್ರಿ ಕೊಟ್ಟಿದ್ದಾರೆ. ಈ ಹಿಂದೆ ಎಂದೂ ಅವರು ಲಾಂಗ್ ಹಿಡಿದಿಲ್ಲ. ಆದರೆ ಜೋಗಿ ಪ್ರೇಮ್, ಮೊದಲ ಬಾರಿಗೆ ರಮೇಶ್ ಕೈಯಲ್ಲಿ ಲಾಂಗ್ ಹಿಡಿಸಿದ್ದಾರೆ.

    ಧ್ರುವ ಸರ್ಜಾ ನಾಯಕನಾಗಿ ನಟಿಸುತ್ತಿರುವ ‘ಕೆಡಿ’ ಸಿನಿಮಾದಲ್ಲಿ ಧ್ರುವ ಸರ್ಜಾ ಅವರ ಅಣ್ಣನಾಗಿ ರಮೇಶ್ ಅರವಿಂದ್ ಬಣ್ಣ ಹಚ್ಚಿದ್ದಾರೆ. ತಾರಾಗಣದ ಕಾರಣದಿಂದಾಗಿಯೇ ಈ ಸಿನಿಮಾ ಕುತೂಹಲ ಮೂಡಿಸಿದ್ದು, ರವಿಚಂದ್ರನ್, ಸಂಜಯ್ ದತ್, ಶಿಲ್ಪಾ ಶೆಟ್ಟಿ ಹೀಗೆ ಹೆಸರಾಂತ ಕಲಾವಿದರೇ ತಾರಾಗಣದಲ್ಲಿದ್ದಾರೆ. ಇದನ್ನೂ ಓದಿ:ಅರಿಶಿನ ಶಾಸ್ತ್ರದಲ್ಲಿ ಮಿಂದೆದ್ದ ವರುಣ್ ತೇಜ್-ಲಾವಣ್ಯ ಜೋಡಿ

    ಈ ಹಿಂದೆ ತಮ್ಮದೇ ಸಿನಿಮಾದಲ್ಲಿ ನಟಿಸಿದ್ದ ರೀಷ್ಮಾ ನಾಣಯ್ಯ ಅವರಿಗೆ ಮತ್ತೊಂದು ಅವಕಾಶ ನೀಡಿದ್ದಾರೆ ಪ್ರೇಮ್. ಕೆಡಿ ಸಿನಿಮಾದಲ್ಲಿ ರೀಷ್ಮಾ ಅವರು ಮಚ್‌ಲಕ್ಷ್ಮೀ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಸೂಪರ್ ಸ್ಟಾರ್‌ಗಳಿರುವ ತಾರಾಗಣ ಅಂದ್ರೆ ಅದು ಕೆಡಿ ಸಿನಿಮಾ. ಧ್ರುವ ಸರ್ಜಾ, ರವಿಚಂದ್ರನ್, ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ , ಸಂಜಯ್ ದತ್, ಹೀಗೆ ಸ್ಟಾರ್‌ಗಳನ್ನ ಸ್ಟಾರ್ ಡೈರೆಕ್ಟರ್ ನಿರ್ದೇಶಕ ಪ್ರೇಮ್ ನಿರ್ದೇಶನ ಮಾಡ್ತಿದ್ದಾರೆ. ವಿಭಿನ್ನ ಕಥೆ ಹೊತ್ತು, ಪ್ಯಾನ್ ಇಂಡಿಯಾ ಸಿನಿಮಾ ಹೊತ್ತು ತರುತ್ತಿದ್ದಾರೆ.

    1968ರಿಂದ 1978ರ ನಡುವೆ ನಡೆದ ಒಂದಷ್ಟು ನೈಜ ಘಟನೆಗಳನ್ನು ಆಧರಿಸಿ ಈ ರೆಟ್ರೋ ಸಿನಿಮಾ ಕಟ್ಟಿಕೊಡಲಾಗ್ತಿದೆ. ಪ್ಯಾನ್ ಇಂಡಿಯಾ ಸಿನಿಮಾ ಆಗಿರುವುದರಿಂದ ಅದಕ್ಕೆ ತಕ್ಕಂತೆ ಸ್ಟಾರ್‌ಕಾಸ್ಟ್, ಮೇಕಿಂಗ್, ಪ್ರಮೋಷನ್ ಎಲ್ಲವೂ ಇರಲಿದೆ. ಈ ಚಿತ್ರಕ್ಕಾಗಿ ಕೇವಲ 23 ದಿನಗಳಲ್ಲಿ 18 ಕೆಜಿ ತೂಕ ಇಳಿಸಿ ಧ್ರುವ ಸರ್ಜಾ ನಟಿಸ್ತಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]