Tag: kd film

  • ಧ್ರುವ ಸರ್ಜಾಗೆ ‘ಭೈರತಿ ರಣಗಲ್’ ಡೈರೆಕ್ಟರ್ ಆ್ಯಕ್ಷನ್ ಕಟ್

    ಧ್ರುವ ಸರ್ಜಾಗೆ ‘ಭೈರತಿ ರಣಗಲ್’ ಡೈರೆಕ್ಟರ್ ಆ್ಯಕ್ಷನ್ ಕಟ್

    ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ‘ಕೆಡಿ’ ಚಿತ್ರದ (KD Film) ಶೂಟಿಂಗ್‌ಗಾಗಿ ವಿದೇಶಕ್ಕೆ ತೆರಳಿದ್ದಾರೆ. ಈ ನಡುವೆ ಅವರ ಮುಂಬರುವ ಚಿತ್ರದ ಬಗ್ಗೆ ಹೊಸ ಅಪ್‌ಡೇಟ್‌ವೊಂದು ಸಿಕ್ಕಿದೆ. ‘ಭೈರತಿ ರಣಗಲ್’ (Bhairathi Rangal) ನಿರ್ದೇಶಕ ನರ್ತನ್ ಜೊತೆ ಧ್ರುವ ಹೊಸ ಚಿತ್ರಕ್ಕಾಗಿ ಕೈಜೋಡಿಸಿದ್ದಾರೆ ಎನ್ನಲಾದ ಸುದ್ದಿಯೊಂದು ಹರಿದಾಡುತ್ತಿದೆ. ಇದನ್ನೂ ಓದಿ: ಹಣ, ಅಧಿಕಾರದ ಸುತ್ತ ‘ಕುಬೇರ’- ಟೀಸರ್‌ನಲ್ಲಿ ಮಿಂಚಿದ ಧನುಷ್, ರಶ್ಮಿಕಾ

    ಕೆವಿಎನ್ ಪ್ರೊಡಕ್ಷನ್ ಸಾರಥ್ಯದಲ್ಲಿ ಧ್ರುವ ಮತ್ತು ನರ್ತನ್ ಕಾಂಬಿನೇಷನ್‌ನಲ್ಲಿ ಸಿನಿಮಾ ಮೂಡಿ ಬರಲಿದೆ ಎಂಬುದು ಸದ್ಯದ ಟಾಕ್. ಮಫ್ತಿ, ಭೈರತಿ ರಣಗಲ್ ಚಿತ್ರ ನಿರ್ದೇಶನ ಮಾಡಿ ಗೆದ್ದಿರುವ ನರ್ತನ್ ಈಗ ಧ್ರುವಗೆ ನಿರ್ದೇಶನ ಮಾಡಲು ತಯಾರಿ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ:‘ಅನಿಮಲ್’ ನಟಿಗೆ ಬಂಪರ್ ಆಫರ್- ಪ್ರಭಾಸ್‌ಗೆ ನಾಯಕಿಯಾದ ತೃಪ್ತಿ ದಿಮ್ರಿ

    ಮೂಲಗಳ ಪ್ರಕಾರ, ನರ್ತನ್ (Narthan) ಚಿತ್ರದ ಕಥೆ ಬರೆಯುತ್ತಿದ್ದು, ಪ್ರಾರಂಭಿಕ ಹಂತದಲ್ಲಿದೆ. ವಿದೇಶದಲ್ಲಿರುವ ಧ್ರುವ ವಾಪಸ್ ಬಂದ್ಮೇಲೆ ಹೊಸ ಸಿನಿಮಾದ ಬಗ್ಗೆ ಮಾತುಕತೆ ನಡೆಯಲಿದೆ. ಆ ನಂತರ ಚಿತ್ರದ ಬಗ್ಗೆ ಹೆಚ್ಚಿನ ಅಪ್‌ಡೇಟ್ ಸಿಗಲಿದೆ ಎಂಬುದು ಸದ್ಯದ ಅಪ್‌ಡೇಟ್.

    ಸೂಪರ್ ಹಿಟ್ ಚಿತ್ರಗಳನ್ನು ಕೊಟ್ಟಿರುವ ನಿರ್ದೇಶಕ ಮತ್ತು ಧ್ರುವ ಜೊತೆಯಾದ್ರೆ ಸಿನಿಮಾ ಸಖತ್ ಆಗಿರುತ್ತದೆ ಎಂಬುದು ಅಭಿಮಾನಿಗಳ ಲೆಕ್ಕಚಾರ. ಹೀಗಾಗಿ ಇಬ್ಬರೂ ಒಟ್ಟಿಗೆ ಚಿತ್ರ ಮಾಡಲಿ, ಬೇಗ ಚಿತ್ರದ ಬಗ್ಗೆ ಗುಡ್ ನ್ಯೂಸ್ ಕೊಡಲಿ ಎಂದು ಫ್ಯಾನ್ಸ್ ಕಾಯ್ತಿದ್ದಾರೆ.

  • KD ಚಿತ್ರದ ಸ್ಪೆಷಲ್‌ ವಿಡಿಯೋ ಔಟ್- ಮಸ್ತ್ ಆಗಿದೆ ಮಚ್ಚಲಕ್ಷ್ಮಿಯ ಅವತಾರ

    KD ಚಿತ್ರದ ಸ್ಪೆಷಲ್‌ ವಿಡಿಯೋ ಔಟ್- ಮಸ್ತ್ ಆಗಿದೆ ಮಚ್ಚಲಕ್ಷ್ಮಿಯ ಅವತಾರ

    ಕೊಡಗಿನ ಬೆಡಗಿ ರೀಷ್ಮಾ ನಾಣಯ್ಯಗೆ (Reeshma Nanaiah) ಇಂದು (ಏ.28) 23ನೇ ವರ್ಷದ ಜನ್ಮದಿನದ (Birthday) ಸಂಭ್ರಮ. ಈ ಹಿನ್ನೆಲೆ ‘ಕೆಡಿ’ ಚಿತ್ರದ ವಿಶೇಷ ವಿಡಿಯೋವೊಂದನ್ನು ಶೇರ್ ಮಾಡಿ ನಾಯಕಿ ರೀಷ್ಮಾಗೆ ಡೈರೆಕ್ಟರ್ ಪ್ರೇಮ್ (Prem) ಶುಭಕೋರಿದ್ದಾರೆ. ಇದನ್ನೂ ಓದಿ:ಭಾರತ ಹಿಂದೂಗಳಂತೆ ಮುಸ್ಲಿಮರಿಗೂ ಸೇರಿದೆ – ಪಹಲ್ಗಾಮ್ ದಾಳಿ ಬಗ್ಗೆ ರಾಖಿ ಸಾವಂತ್ ಮಾತು

    ಧ್ರುವ ಸರ್ಜಾ ನಟನೆಯ ‘ಕೆಡಿ’ (KD) ಚಿತ್ರಕ್ಕೆ ರೀಷ್ಮಾ ನಾಣಯ್ಯ ನಾಯಕಿಯಾಗಿದ್ದು, ಈ ಚಿತ್ರದ ಶೂಟಿಂಗ್ ಸಮಯದಲ್ಲಿ ತೆಗೆದಿರುವ ವಿಡಿಯೋ ಕ್ಲೀಪ್‌ಗಳನ್ನು ಡೈರೆಕ್ಟರ್ ಶೇರ್ ಮಾಡಿ, ನಟಿಗೆ ವಿಶೇಷವಾಗಿ ನಿರ್ದೇಶಕ ಪ್ರೇಮ್ ಶುಭಕೋರಿದ್ದಾರೆ. ಹ್ಯಾಪಿ ಬರ್ತ್ಡೇ ಮಗನೇ ಎಂದು ರೀಷ್ಮಾಗೆ ಹಾರೈಸಿದ್ದಾರೆ. ಇದನ್ನೂ ಓದಿ:ಪಹಲ್ಗಾಮ್‌ನಲ್ಲಿ ತುಂಬಾ ಕ್ರೂರವಾಗಿ ಸಾಯಿಸಿದ್ದಾರೆ: ಉಗ್ರರ ದಾಳಿ ಬಗ್ಗೆ ರಾಗಿಣಿ ಕಿಡಿ

     

    View this post on Instagram

     

    A post shared by Prem❣️s (@directorprems)

    ರೀಷ್ಮಾ ನಾಣಯ್ಯ ಅವರು ಧ್ರುವಗೆ (Dhruva Sarja) ಜೋಡಿಯಾಗಿ ನಟಿಸಿದ್ದಾರೆ. ಮಚ್ಚಲಕ್ಷ್ಮಿ ಎಂಬ ರಗಡ್ ಆಗಿರೋ ಪಾತ್ರದಲ್ಲಿ ಅವರು ಜೀವ ತುಂಬಿದ್ದಾರೆ. ಸದ್ಯ ಸೆಟ್‌ನಲ್ಲಿ ತೆಗೆದಿರುವ ನಟಿಯ ವಿಡಿಯೋ ತುಣುಕುಗಳು ಕ್ಯೂಟ್ ಆಗಿ ಮೂಡಿ ಬಂದಿದೆ.

    ಈ ಚಿತ್ರದಲ್ಲಿ ಧ್ರುವ, ರೀಷ್ಮಾ ಜೊತೆ ಶಿಲ್ಪಾ ಶೆಟ್ಟಿ, ರವಿಚಂದ್ರನ್, ಸಂಜಯ್ ದತ್, ರಮೇಶ್ ಅರವಿಂದ್ ಸೇರಿದಂತೆ ಅನೇಕರು ನಟಿಸಿದ್ದಾರೆ. ಪ್ರೇಮ್ ಅವರು ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳ್ತಿದ್ದಾರೆ. ಸದ್ಯದಲ್ಲೇ ಸಿನಿಮಾದ ರಿಲೀಸ್ ಬಗ್ಗೆ ಅಪ್‌ಡೇಟ್ ಸಿಗಲಿದೆ.

    ಅಂದಹಾಗೆ, ‘ಕೆಡಿ’ ಸಿನಿಮಾದ ಜೊತೆ ಡಾಲಿಗೆ ನಾಯಕಿಯಾಗಿ ‘ಅಣ್ಣ ಇನ್ ಮೆಕ್ಸಿಕೋ’ ಚಿತ್ರದಲ್ಲಿ ನಟಿಸುತ್ತಿದ್ದಾರೆ.

  • ಕಣ್ಣಿನಲ್ಲಿ ಪೊರೆ ಬೆಳೆದ ಮಗುವಿನ ಶಸ್ತ್ರಚಿಕಿತ್ಸೆಗೆ ಸಹಾಯ ಮಾಡಿದ ಧ್ರುವ ಸರ್ಜಾ

    ಕಣ್ಣಿನಲ್ಲಿ ಪೊರೆ ಬೆಳೆದ ಮಗುವಿನ ಶಸ್ತ್ರಚಿಕಿತ್ಸೆಗೆ ಸಹಾಯ ಮಾಡಿದ ಧ್ರುವ ಸರ್ಜಾ

    ಟ ಧ್ರುವ ಸರ್ಜಾ (Dhruva Sarja) ಸಿನಿಮಾದಲ್ಲಿ ಮಾತ್ರ ಹೀರೋ ಅಲ್ಲ, ನಿಜ ಜೀವನದಲ್ಲೂ ಹೀರೋ ಎಂಬುದನ್ನು ಪ್ರೂವ್ ಮಾಡಿದ್ದಾರೆ. ಇದೀಗ ಪುಟ್ಟ ಮಗುವಿನ ಸಂಕಷ್ಟಕ್ಕೆ ಧ್ರುವ ಸಾಥ್‌ ನೀಡಿದ್ದಾರೆ. ಕಣ್ಣಿನಲ್ಲಿ ಪೊರೆ ಬೆಳೆದ ಪುಟ್ಟ ಕಂದಮ್ಮನ ಟ್ರೀಟ್‌ಮೆಂಟ್‌ಗೆ ನಟ ಸಹಾಯ ಮಾಡಿ ಮಾನವೀಯತೆ ಮೆರೆದಿದ್ದಾರೆ. ಇದನ್ನೂ ಓದಿ:ಮತ್ತೆ ಪ್ರಭಾಸ್‌ಗೆ ಜೊತೆಯಾದ ಬಾಲಿವುಡ್ ಬ್ಯೂಟಿ ದಿಶಾ ಪಟಾನಿ

    ಪುಟ್ಟ ಮಗು ಚಿರಂಜೀವಿಗೆ ಎರಡು ಕಣ್ಣಿನಲ್ಲೂ ಪೊರೆ ಬೆಳೆದ ಹಿನ್ನೆಲೆ ಟ್ರೀಟ್‌ಮೆಂಟ್‌ಗಾಗಿ ಧ್ರುವ ಸಹಕರಿಸಿದ್ದಾರೆ. ಮಂಜುನಾಥ ನೇತ್ರಾಲಯದ ವೈದ್ಯರ ಬಳಿ ಮಾತನಾಡಿ ಚಿಕಿತ್ಸೆ ಕೊಡಿಸಿದ್ದಾರೆ. ಹಾಗಾಗಿ ಪುಟ್ಟ ಮಗುವಿಗೆ ಯಶಸ್ವಿಗಾಗಿ ಕಣ್ಣಿನ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಈ ಮೂಲಕ ಗಾರೆ ಕೆಲಸ ಮಾಡುವ ತಂದೆಯ ಬೆನ್ನಿಗೆ ನಿಂತಿದ್ದಾರೆ. ಇದನ್ನೂ ಓದಿ:ದುನಿಯಾ ವಿಜಯ್ ನಿರ್ದೇಶನದ ಸಿನಿಮಾದಲ್ಲಿ ಉಮಾಶ್ರೀ

    ಅಂದಹಾಗೆ, ನಿನ್ನೆ (ಮಾ.31) ಸುದೀಪ್ (Sudeep) ಸ್ಪೈನ್ ಮ್ಯಾಸ್ಕ್ಯೂಲಾರ್ ಅಟ್ರೋಫಿ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಪುಟ್ಟ ಕಂದಮ್ಮ ಕೀರ್ತನಾ ಚಿಕಿತ್ಸೆಗೆ ಸಹಾಯ ಮಾಡಿದ್ದರು. ಇದರ ಚಿಕಿತ್ಸೆಗೆ 16 ಕೋಟಿ ರೂ. ಬೇಕಿರೋದ್ರಿಂದ ಸುದೀಪ್, ನಾನು ನನ್ನ ಕೈಲಾದ ಸಹಾಯ ಮಾಡಿದ್ದೀನಿ, ನೀವೆಲ್ಲರೂ ಕೈಜೋಡಿಸಿ ಎಂದು‌ ವಿಡಿಯೋ ಮೂಲಕ ಅಭಿಮಾನಿಗಳಿಗೆ ಮನವಿ ಮಾಡಿದ್ದರು. ಈ ಬೆನ್ನಲ್ಲೇ ಧ್ರುವ ಸರ್ಜಾ ಕೂಡ ಮತ್ತೊಂದು ಪುಟ್ಟ ಮಗುವಿನ ಬಾಳಿಗೆ ಬೆಳಕಾಗಿರೋದನ್ನು ನೋಡಿ ಫ್ಯಾನ್ಸ್‌ ಶ್ಲಾಘಿಸಿದ್ದಾರೆ.

  • ಮಹಿಳೆಯ ಚಪ್ಪಲಿ ಎತ್ತಿ ಕೊಟ್ಟ ಧ್ರುವ ಸರ್ಜಾ- ಆ್ಯಕ್ಷನ್ ಪ್ರಿನ್ಸ್ ಸರಳತೆಗೆ ಫ್ಯಾನ್ಸ್ ಫಿದಾ

    ಮಹಿಳೆಯ ಚಪ್ಪಲಿ ಎತ್ತಿ ಕೊಟ್ಟ ಧ್ರುವ ಸರ್ಜಾ- ಆ್ಯಕ್ಷನ್ ಪ್ರಿನ್ಸ್ ಸರಳತೆಗೆ ಫ್ಯಾನ್ಸ್ ಫಿದಾ

    ಟ ಧ್ರುವ ಸರ್ಜಾ (Dhruva Sarja) ಅವರು ಸರಳ ವ್ಯಕ್ತಿ ಎಂಬುದಕ್ಕೆ ಜಯಮಾಲಾ ಮಗಳ ಆರತಕ್ಷತೆಯಲ್ಲಿ ನಡೆದ ಘಟನೆಯೊಂದು ಸಾಕ್ಷಿಯಾಗಿದೆ. ಸೌಂದರ್ಯ ದಂಪತಿಗೆ ಶುಭ ಕೋರಲು ವೇದಿಕೆಗೆ ಆಗಮಿಸುವಾಗ ಧ್ರುವ ಸರ್ಜಾ ತಲೆ ಭಾಗಿ ಮಹಿಳೆಯ ಚಪ್ಪಲಿ ಎತ್ತಿ ಕೊಟ್ಟಿದ್ದಾರೆ. ನಟನ ಸಿಂಪ್ಲಿಸಿಟಿ ಕಂಡು ಅಭಿಮಾನಿಗಳು ಹಾಡಿ ಹೊಗಳಿದ್ದಾರೆ.

    ಸೌಂದರ್ಯ ಆರತಕ್ಷತೆ ಸಂಭ್ರಮದಲ್ಲಿ ಪತ್ನಿ ಪ್ರೇರಣಾ ಜೊತೆ ಆಗಮಿಸಿದ ಧ್ರುವ ಸರ್ಜಾ ವೇದಿಕೆಯ ಬಳಿ ಮಹಿಳೆಯ ಚಪ್ಪಲಿ ಎತ್ತಿ ಕೊಟ್ಟಿದ್ದಾರೆ. ಸ್ಟಾರ್ ನಟ ಆಗಿದ್ರೂ ಸರಳತೆ ಮೆರೆದಿರುವ ಧ್ರುವ ಸರ್ಜಾ ನಡೆಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಸದ್ಯ ಧ್ರುವ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ. ಇದನ್ನೂ ಓದಿ:ಕ್ರೇಜಿ ಕ್ವೀನ್‌ ರಕ್ಷಿತಾ ಸಹೋದರನ ಆರತಕ್ಷತೆ ಸಂಭ್ರಮದಲ್ಲಿ ದರ್ಶನ್

    ನಿನ್ನೆ (ಫೆ.8) ಬೆಂಗಳೂರಿನಲ್ಲಿ ಅದ್ಧೂರಿಯಾಗಿ ಆರತಕ್ಷತೆ ಕಾರ್ಯಕ್ರಮ ಜರುಗಿದೆ. ಈ ಕಾರ್ಯಕ್ರಮದಲ್ಲಿ ಅಂಬಿಕಾ, ಶುಭ ಪೂಂಜಾ, ರಾಧಿಕಾ ಕುಮಾರಸ್ವಾಮಿ, ಗಿರಿಜಾ ಲೋಕೇಶ್‌, ಸುಧಾರಾಣಿ ಸೇರಿದಂತೆ ಅನೇಕರು ಭಾಗಿಯಾಗಿ ಶುಭಕೋರಿದ್ದಾರೆ.

    ಇನ್ನೂ ‘ಕೆಡಿ’ ಸಿನಿಮಾದಲ್ಲಿ ಧ್ರುವ ಸರ್ಜಾ, ರೀಷ್ಮಾ ನಾಣಯ್ಯ, ಬಾಲಿವುಡ್ ಬೆಡಗಿ ಶಿಲ್ಪಾ ಶೆಟ್ಟಿ ಸೇರಿದಂತೆ ಅನೇಕರು ನಟಿಸಿದ್ದಾರೆ.

  • ದರ್ಶನ್‌ಗೆ ಸಿನಿಮಾ ಮಾಡೇ ಮಾಡ್ತೀನಿ: ಡೈರೆಕ್ಟರ್‌ ಪ್ರೇಮ್‌

    ದರ್ಶನ್‌ಗೆ ಸಿನಿಮಾ ಮಾಡೇ ಮಾಡ್ತೀನಿ: ಡೈರೆಕ್ಟರ್‌ ಪ್ರೇಮ್‌

    ಧ್ರುವ ಸರ್ಜಾ (Dhruva Sarja) ನಟಿಸಿರುವ ‘ಕೆಡಿ’ (KD) ಸಿನಿಮಾಗೆ ಆ್ಯಕ್ಷನ್ ಕಟ್ ಹೇಳಿರುವ ಡೈರೆಕ್ಟರ್ ಪ್ರೇಮ್ (Director Prem) ಅವರು ಮುಂದಿನ ದಿನಗಳಲ್ಲಿ ದರ್ಶನ್ ಜೊತೆ ಸಿನಿಮಾ ಮಾಡೇ ಮಾಡ್ತೀನಿ ಎಂದಿದ್ದಾರೆ. ದರ್ಶನ್‌ ಜೊತೆ ಸಿನಿಮಾ ಮಾಡೋದು ಗ್ಯಾರಂಟಿ ಎಂದಿದ್ದಾರೆ. ಇದನ್ನೂ ಓದಿ:BBK 11: ರಜತ್‌ಗೆ ಟಾರ್ಗೆಟ್‌- ಮೋಕ್ಷಿತಾ ಜೊತೆ ಭವ್ಯಾ ಮ್ಯಾಚ್‌ ಫಿಕ್ಸಿಂಗ್‌

    ದರ್ಶನ್ ನನ್ನ ಬದ್ರರ್, ನನ್ನ ಕುಟುಂಬವಿದ್ದಂತೆ. ಹೋದ ವರ್ಷ ಅವರ ಹುಟ್ಟುಹಬ್ಬಕ್ಕೆ ಸಿನಿಮಾ ಮಾಡುವ ಕುರಿತು ಪ್ಲ್ಯಾನ್ ಮಾಡಿದ್ದೇವು. ಕೆಡಿ ಸಿನಿಮಾದ ಕೆಲಸ ಮುಗಿದ್ಮೇಲೆ ದರ್ಶನ್ (Darshan) ಜೊತೆ ಸಿನಿಮಾ ಮಾಡೇ ಮಾಡುತ್ತೇನೆ. ಇನ್ನೂ ರೆಗ್ಯೂಲರ್ ಬೇಲ್ ಸಿಕ್ಮೇಲೆ ದರ್ಶನ್ ಅವರನ್ನು ಭೇಟಿ ಮಾಡಿದ್ದೇನೆ. ಯಾವಾಗಲೂ ಮಾತನಾಡುತ್ತಿರುತ್ತೇವೆ. ಸಿನಿಮಾ ಬಿಟ್ಟು ನಾವು ಎಮೋಷನಲಿ ಕನೆಕ್ಟ್ ಆಗಿದ್ದೇವೆ ಎಂದಿದ್ದಾರೆ.

    ಆಗ ನಾವು ‘ಕರಿಯ’ ಸಿನಿಮಾ ಮಾಡಬೇಕಾದರೆ ಮೀನಾ ತೂಗುದೀಪ ಅವರು ಅಡುಗೆ ಮಾಡಿ ಹಾಕೋರು. ಕೈ ತುತ್ತು ಕೊಡುತ್ತಿದ್ದರು. ಅವರ ಮನೆಯಲ್ಲಿ ಅನ್ನ ತಿಂದಿದ್ದೇವೆ. ಒಂದು ಕುಟುಂಬದ ಹಾಗೇಯೇ ಇರುತ್ತೇವೆ. ಮೊನ್ನೆಯಷ್ಟೇ ಭೇಟಿಯಾದೆ, ಈಗ ಅವರು ಚೇತರಿಸಿಕೊಳ್ತಿದ್ದಾರೆ ಎಂದಿದ್ದಾರೆ. ಇನ್ನೂ ದರ್ಶನ್‌ಗೆ ಬೆನ್ನು ನೋವಿದೆ. ಸ್ವಲ್ಪ ಹುಷಾರ್ ಆದ್ಮೇಲೆ ‘ಡೆವಿಲ್’ (Devil) ಶೂಟಿಂಗ್ ಮಾಡುತ್ತಾರೆ. 100% ‘ಡೆವಿಲ್’ ಸಿನಿಮಾ ಬಂದೇ ಬರುತ್ತದೆ. ಈ ವರ್ಷ ಸಿನಿಮಾ ಮಾಡುತ್ತಾರೆ. ಈ ಸಿನಿಮಾಗೆ ಒಳ್ಳೆಯದಾಗಲಿ.

    ಮನುಷ್ಯ ಅಂದ್ಮೇಲೆ ಎಡವುತ್ತೇವೆ. ಅವರಿಗೆ ಅವರೇ ಎದ್ದು ನಿಂತಿದ್ದಾರೆ. ಫೈಟ್ ಮಾಡುತ್ತಿದ್ದಾರೆ. ಇದರ ಹಿಂದಿನ ಘಟನೆ ಬಗ್ಗೆ ಏನೂ ಗೊತ್ತಿಲ್ಲ. ಕೇಸ್ ಕೋರ್ಟ್‌ನಲ್ಲಿದೆ. 100% ನ್ಯಾಯ ಸಿಗುತ್ತದೆ ಎಂದು ನಂಬಿಕೆ ಇದೆ. ಒಳ್ಳೆಯವರಿಗೆ ಯಾವತ್ತಿಗೂ ಒಳ್ಳೆಯದಾಗುತ್ತದೆ ಎಂದು ಮಾತನಾಡಿದ್ದಾರೆ. ಈ ವರ್ಷ ದರ್ಶನ್ ಬರ್ತ್‌ಡೇಗೆ ಹೋಗುತ್ತೇನೆ. ಆಚರಣೆ ಮಾಡುತ್ತೇವೆ ಎಂದಿದ್ದಾರೆ ನಿರ್ದೇಶಕ ಪ್ರೇಮ್.

  • ಅರ್ಜುನ ಅವಧೂತ ಗುರೂಜಿಯನ್ನು ಭೇಟಿಯಾದ ಧ್ರುವ ಸರ್ಜಾ

    ಅರ್ಜುನ ಅವಧೂತ ಗುರೂಜಿಯನ್ನು ಭೇಟಿಯಾದ ಧ್ರುವ ಸರ್ಜಾ

    ಸ್ಯಾಂಡಲ್‌ವುಡ್ ನಟ ಧ್ರುವ ಸರ್ಜಾ (Actor Dhruva Sarja) ಮೈಸೂರಿನ  ಅರ್ಜುನ ಅವಧೂತ ಗುರೂಜಿ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದಿದ್ದಾರೆ. ಇದನ್ನೂ ಓದಿ:ಪಂಜಾಬಿ ಸಂಪ್ರದಾಯದಂತೆ ನೆರವೇರಿದ ಮಲೈಕಾ ಅರೋರಾ ತಂದೆ ಅಂತ್ಯಕ್ರಿಯೆ

    ಸಿನಿಮಾ ಕೆಲಸ ನಡುವೆ ಇಂದು (ಸೆ.12) ಅರ್ಜುನ ಅವಧೂತ ಗುರೂಜಿ ಅವರ ನಿವಾಸಕ್ಕೆ ಧ್ರುವ ಕೊಟ್ಟಿದ್ದಾರೆ. ನಟ ಗುರೂಜಿಯ ಆಶೀರ್ವಾದ ಪಡೆದಿದ್ದಾರೆ. ಧ್ರುವಗೆ ಗುರೂಜಿ ಸನ್ಮಾನ ಮಾಡಿ ಗೌರವಿಸಿದ್ದಾರೆ.

    ಇನ್ನೂ ಧ್ರುವ ನಟನೆಯ ‘ಮಾರ್ಟಿನ್’ (Martin) ಮತ್ತು ‘ಕೆಡಿ’ (KD Film) ಸಿನಿಮಾಗಳು ರಿಲೀಸ್‌ಗೆ ಸಿದ್ಧವಾಗಿದೆ. ಎಪಿ ಅರ್ಜುನ್ ಜೊತೆಗಿನ ‘ಮಾರ್ಟಿನ್’ ಮತ್ತು ಜೋಗಿ ಪ್ರೇಮ್ ಜೊತೆಗಿನ ‘ಕೆಡಿ’ ಸಿನಿಮಾಗಳ ಮೇಲೆ ಫ್ಯಾನ್ಸ್‌ಗೆ ಭಾರೀ ನಿರೀಕ್ಷೆಯಿದೆ.

  • ಸಂಜಯ್ ದತ್ ಜೊತೆಗಿನ ಫೋಟೋ ಹಂಚಿಕೊಂಡ ಉಪ್ಪಿಯ ಟ್ರೋಲ್ ಹುಡುಗಿ ರೀಷ್ಮಾ

    ಸಂಜಯ್ ದತ್ ಜೊತೆಗಿನ ಫೋಟೋ ಹಂಚಿಕೊಂಡ ಉಪ್ಪಿಯ ಟ್ರೋಲ್ ಹುಡುಗಿ ರೀಷ್ಮಾ

    ಕೊಡಗಿನ ಬೆಡಗಿ ರೀಷ್ಮಾ ನಾಣಯ್ಯ (Reeshma Nanaiah) ಇದೀಗ ‘ಕೆಡಿ’ (KD Film) ಚಿತ್ರದ ಸೆಟ್‌ನಲ್ಲಿ ಬಾಲಿವುಡ್ ನಟ ಸಂಜಯ್ ದತ್ ಜೊತೆ ತೆಗೆದ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ನೀವು ನನಗೆ ಸ್ಪೂರ್ತಿ ಎಂದು ನಟಿ ಬಣ್ಣಿಸಿದ್ದಾರೆ. ಇದನ್ನೂ ಓದಿ:ಶಾರುಖ್ ಖಾನ್ ಕಣ್ಣಿಗೆ ಗಾಯ- ಸರ್ಜರಿಗಾಗಿ ವಿದೇಶಕ್ಕೆ ಹೊರಟ ‘ಜವಾನ್’ ನಟ

    ಧ್ರುವ ಸರ್ಜಾ ನಟನೆಯ ‘ಕೆಡಿ’ ಸಿನಿಮಾದಲ್ಲಿ ರೀಷ್ಮಾ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಇದೇ ಸಿನಿಮಾದಲ್ಲಿ ‘ಕೆಜಿಎಫ್ 2’ (KGF 2) ಖ್ಯಾತಿಯ ಸಂಜಯ್ ದತ್ (Sanjay Dutt) ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ‘ಕೆಡಿ’ ಸೆಟ್‌ನಲ್ಲಿ ತೆಗೆದ ವಿಶೇಷ ಫೋಟೋವೊಂದನ್ನು ಶೇರ್ ಮಾಡಿ, ಹುಟ್ಟುಹಬ್ಬದ ಶುಭಾಶಯಗಳು ‘ಢಾಕ್ ದೇವ’ ಎಂದು ನಟಿ ವಿಶ್ ಮಾಡಿದ್ದಾರೆ. ನಿಮ್ಮ ನಮ್ರತೆ ಮತ್ತು ದಯೆ ನಿಜವಾಗಿಯೂ ಸ್ಫೂರ್ತಿದಾಯಕವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಅಂದಹಾಗೆ, ಜು.29ರಂದು ಸಂಜಯ್ ದತ್ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಹಾಗೆಯೇ ಅವರ ‘ಕೆಡಿ’ ಸಿನಿಮಾದ ಖಡಕ್ ಪೋಸ್ಟ್ ಕೂಡ ರಿವೀಲ್ ಆಗಿದೆ. ‘ಢಾಕ್ ದೇವ’ನಾಗಿ ಸಂಜಯ್ ದತ್ ಮಾಸ್ ಎಂಟ್ರಿ ಕೊಟ್ಟಿದ್ದಾರೆ. ಈ ಸಿನಿಮಾವನ್ನು ಜೋಗಿ ಪ್ರೇಮ್ ನಿರ್ದೇಶನ ಮಾಡಿದ್ದು, ಈ ವರ್ಷದ ಅಂತ್ಯದಲ್ಲಿ ‘ಕೆಡಿ’ ಚಿತ್ರ ರಿಲೀಸ್ ಆಗಲಿದೆ.

  • ಧ್ರುವ ಸರ್ಜಾ ಮುಂದೆ ‘ಢಾಕ್ ದೇವ’ನಾಗಿ ಬಂದ ಸಂಜಯ್ ದತ್- ರಿವೀಲ್ ಆಯ್ತು ‘ಕೆಡಿ’ ಲುಕ್

    ಧ್ರುವ ಸರ್ಜಾ ಮುಂದೆ ‘ಢಾಕ್ ದೇವ’ನಾಗಿ ಬಂದ ಸಂಜಯ್ ದತ್- ರಿವೀಲ್ ಆಯ್ತು ‘ಕೆಡಿ’ ಲುಕ್

    ಬಾಲಿವುಡ್ ನಟ ಸಂಜಯ್ ದತ್ (Sanjay Dutt) ‘ಕೆಜಿಎಫ್ 2’ (KGF 2) ಚಿತ್ರದ ಸಕ್ಸಸ್ ನಂತರ ಕನ್ನಡದ ಸಿನಿಮಾಗಳಿಗೆ ಹೆಚ್ಚು ಪ್ರಾಮುಖ್ಯತೆ ಕೊಡ್ತಿದ್ದಾರೆ. ಹೀಗಿರುವಾಗ ಅವರ ಹುಟ್ಟುಹಬ್ಬದ ಪ್ರಯುಕ್ತ ‘ಕೆಡಿ’ ಸಿನಿಮಾದ ಲುಕ್ ರಿವೀಲ್ ಆಗಿದೆ. ‘ಢಾಕ್ ದೇವ’ನಾಗಿ ಅಧೀರ ಖಡಕ್ ಆಗಿ ಕಾಣಿಸಿಕೊಂಡಿದ್ದಾರೆ.

    ಧ್ರುವ ಸರ್ಜಾ ನಟನೆಯ ಪ್ಯಾನ್ ಇಂಡಿಯಾ ‘ಕೆಡಿ’ ಸಿನಿಮಾದಲ್ಲಿ (KD Film) ಸಂಜಯ್ ದತ್ ಕೂಡ ಪ್ರಮುಖ ಪಾತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ತಲೆಗೆ ಪೊಲೀಸ್ ಹ್ಯಾಟ್ ಧರಿಸಿ ವಿಭಿನ್ನ ಲುಕ್‌ನಲ್ಲಿ ನಟ ಢಾಕ್‌ ದೇವನಾಗಿ ಮಿಂಚಿದ್ದಾರೆ. ನಟನ ಲುಕ್‌ಗೆ ಅಭಿಮಾನಿಗಳಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

     

    View this post on Instagram

     

    A post shared by KVN Productions (@kvn.productions)

    ಅಂದಹಾಗೆ, 70ರ ದಶಕದ ಗ್ಯಾಂಗ್‌ಸ್ಟರ್ ಕುರಿತ ನೈಜ ಕಥೆಯನ್ನೇ ಸಿನಿಮಾ ರೂಪದಲ್ಲಿ ತಂದಿದ್ದಾರೆ ನಿರ್ದೇಶಕ ಜೋಗಿ ಪ್ರೇಮ್. ರೆಟ್ರೋ ಲುಕ್‌ನಲ್ಲಿ ಈ ‘ಕೆಡಿ’ ಚಿತ್ರ ಮೂಡಿ ಬಂದಿದೆ.ಮಲ್ಟಿ ಸ್ಟಾರ್‌ಗಳು ಇರುವ ಈ ಸಿನಿಮಾ ಭಿನ್ನವಾಗಿ ಮೂಡಿ ಬಂದಿದೆ.

    ಧ್ರುವ ಸರ್ಜಾ, ಸಂಜಯ್ ದತ್ ಜೊತೆ ರೀಷ್ಮಾ ನಾಣಯ್ಯ, ರವಿಚಂದ್ರನ್, ಶಿಲ್ಪಾ ಶೆಟ್ಟಿ, ನೋರಾ ಫತೇಹಿ ಸೇರಿದಂತೆ ಅನೇಕರು ನಟಿಸಿದ್ದಾರೆ. ಬಹುಭಾಷೆಗಳಲ್ಲಿ ಚಿತ್ರ ಮೂಡಿ ಬಂದಿದ್ದು, ಡಿಸೆಂಬರ್‌ನಲ್ಲಿ ರಿಲೀಸ್ ಆಗಲಿದೆ.

  • ಧ್ರುವ ಸರ್ಜಾ ಫ್ಯಾನ್ಸ್‌ಗೆ ಗುಡ್ ನ್ಯೂಸ್- ಜು.29ರಂದು ಹೊರಬೀಳಲಿದೆ ‘ಕೆಡಿ’ ಚಿತ್ರದ ಅಪ್‌ಡೇಟ್

    ಧ್ರುವ ಸರ್ಜಾ ಫ್ಯಾನ್ಸ್‌ಗೆ ಗುಡ್ ನ್ಯೂಸ್- ಜು.29ರಂದು ಹೊರಬೀಳಲಿದೆ ‘ಕೆಡಿ’ ಚಿತ್ರದ ಅಪ್‌ಡೇಟ್

    ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ (Dhruva Sarja) ನಟನೆಯ ‘ಮಾರ್ಟಿನ್’ ಮತ್ತು ‘ಕೆಡಿ’ ಸಿನಿಮಾ ರಿಲೀಸ್‌ಗೆ ಸಜ್ಜಾಗಿದೆ. ಇದರ ನಡುವೆ ಧ್ರುವ ಅಭಿಮಾನಿಗಳು ಖುಷಿಪಡುವ ಸುದ್ದಿಯೊಂದು ಸಿಕ್ಕಿದೆ. ಬಹುನಿರೀಕ್ಷಿತ ‘ಕೆಡಿ’ (KD Film) ಸಿನಿಮಾದ ಬಗ್ಗೆ ಜು.29ರಂದು ಅಪ್‌ಡೇಟ್ ಹೊರಬೀಳಲಿದೆ. ಇದನ್ನೂ ಓದಿ:ದರ್ಶನ್ ಬಿಡುಗಡೆಗಾಗಿ ಚಂಡಿಕಾ ಯಾಗ ಮಾಡಿಸಿದ ಪತ್ನಿ ವಿಜಯಲಕ್ಷ್ಮಿ

    ಕೆವಿಎನ್ ಸಂಸ್ಥೆ ನಿರ್ಮಾಣದ, ಜೋಗಿ ಪ್ರೇಮ್ ನಿರ್ದೇಶನ ‘ಕೆಡಿ’ ಸಿನಿಮಾದಲ್ಲಿ ಧ್ರುವ ಸರ್ಜಾ ರೆಟ್ರೋ ಸ್ಟೈಲಿನಲ್ಲಿ ಮಿಂಚಿದ್ದಾರೆ. ವಿಭಿನ್ನ ಪಾತ್ರಕ್ಕೆ ಜೀವತುಂಬಿದ್ದಾರೆ. ಕೆಡಿ ಸಿನಿಮಾ ಬಗ್ಗೆ ಮಾಹಿತಿ ನೀಡೋದಾಗಿ ಚಿತ್ರತಂಡ ಅನೌನ್ಸ್ ಮಾಡಿದೆ. ಇದೇ ಜು.29ರಂದು ಬೆಳಗ್ಗೆ 10:05ಕ್ಕೆ ಚಿತ್ರದ ಬಗ್ಗೆ ಮೇಜರ್ ಅಪ್‌ಡೇಟ್ ಸಿಗಲಿದೆ. ಸದ್ಯ ಈ ಸುದ್ದಿ ಕೇಳಿ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ.

    ‘ಕೆಡಿ’ ಸಿನಿಮಾ ಮಲ್ಟಿ ಸ್ಟಾರ್‌ಗಳು ನಟಿಸಿರುವ ಸಿನಿಮಾ ಇದಾಗಿದೆ. ಅವರ ಪಾತ್ರದ ಬಗ್ಗೆ ಮೇಜರ್‌ ಅಪ್‌ಡೇಟ್‌ ಅಥವಾ ಟ್ರೈಲರ್‌ ರಿಲೀಸ್‌ ಆಗಲಿದೆಯಾ ಎಂದು ಸೋಷಿಯಲ್ ಮೀಡಿಯಾದಲ್ಲಿ ಚಿತ್ರದ ಬಗ್ಗೆ ಅಭಿಮಾನಿಗಳ ಚರ್ಚೆ ಶುರುವಾಗಿದೆ. ಈ ಎಲ್ಲದಕ್ಕೂ ಉತ್ತರ ಜು.29ರಂದು ಸಿಗಲಿದೆ. ಅಲ್ಲಿಯವರೆಗೂ ಕಾದುನೋಡಬೇಕಿದೆ.

    ಅಂದಹಾಗೆ, ಧ್ರುವಗೆ ನಾಯಕಿಯಾಗಿ ಕೊಡಗಿನ ಬೆಡಗಿ ರೀಷ್ಮಾ ನಾಣಯ್ಯ (Reeshma Nanaiah) ನಟಿಸಿದ್ದಾರೆ. ಚಿತ್ರದಲ್ಲಿ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ (Shilpa Shetty), ರವಿಚಂದ್ರನ್, ಸಂಜಯ್ ದತ್, ರಮೇಶ್ ಅರವಿಂದ್ ಸೇರಿದಂತೆ ಹಲವರು ನಟಿಸಿದ್ದಾರೆ. ಕೆಡಿ ಸಿನಿಮಾ ಡಿಸೆಂಬರ್‌ನಲ್ಲಿ ರಿಲೀಸ್ ಆಗಲಿದೆ.

  • ಸಾಮಾನ್ಯರಂತೆ ರೋಡ್ ಸೈಡ್‌ನಲ್ಲಿ ಸ್ನೇಹಿತರ ಜೊತೆ ಚಾಟ್ಸ್ ಸವಿದ ಧ್ರುವ ಸರ್ಜಾ

    ಸಾಮಾನ್ಯರಂತೆ ರೋಡ್ ಸೈಡ್‌ನಲ್ಲಿ ಸ್ನೇಹಿತರ ಜೊತೆ ಚಾಟ್ಸ್ ಸವಿದ ಧ್ರುವ ಸರ್ಜಾ

    ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ (Dhruva Sarja) ತೀರ ಸಿಂಪಲ್ ವ್ಯಕ್ತಿ. ಸ್ಟಾರ್ ಆಗಿದ್ರೂ ಅಹಂಕಾರ ತೋರಿಸದೇ ಪ್ರತಿಯೊಬ್ಬರ ಜೊತೆ ಧ್ರುವ ಬೆರೆಯುತ್ತಾರೆ. ಎಂದಿಗೂ ಅವರು ಸ್ಟಾರ್ ಡಮ್ ತಲೆಗೆ ಏರಿಸಿಕೊಂಡಿಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಇದೀಗ ಸಾಮಾನ್ಯರಂತೆ ರೋಡ್ ಸೈಡ್‌ನಲ್ಲಿ ಸ್ನೇಹಿತರ ಜೊತೆ ನಿಂತು ಧ್ರುವ ತಿಂಡಿ ತಿಂದಿದ್ದಾರೆ.

    ಧ್ರುವ ಸರ್ಜಾ ಮೈಸೂರಿಗೆ (Mysore) ಭೇಟಿ ನೀಡಿದ್ದಾರೆ. ಈ ವೇಳೆ, ರೋಡ್ ಸೈಡ್ ಗಾಡಿ ಅಂಗಡಿಗೆ ಭೇಟಿ ನೀಡಿ ಸಾಮಾನ್ಯರಂತೆ ಸ್ನೇಹಿತರ ಜೊತೆ ತಟ್ಟೆ ಇಡ್ಲಿ, ಮತ್ತು ಚಾಟ್ಸ್ ಸವಿದಿದ್ದಾರೆ. ಬಳಿಕ ಅಭಿಮಾನಿಗಳ ಜೊತೆ ನಟ ಫೋಟೋಗೆ ಪೋಸ್ ನೀಡಿದ್ದಾರೆ. ಇದನ್ನೂ ಓದಿ:ಪ್ರಶಾಂತ್ ನೀಲ್, ಜ್ಯೂ.ಎನ್‌ಟಿಆರ್ ಚಿತ್ರಕ್ಕೆ ವಿಶ್ವಕ್ ಸೇನ್ ಎಂಟ್ರಿ

    ಇತ್ತೀಚೆಗೆ ಬ್ಯಾಕ್ ಟು ಬ್ಯಾಕ್ ಎರಡು ಸಿನಿಮಾಗಳ ರಿಲೀಸ್ ಡೇಟ್ ಅನೌನ್ಸ್ ಮಾಡುವ ಮೂಲಕ ಫ್ಯಾನ್ಸ್‌ಗೆ ಧ್ರುವ ಗುಡ್ ನ್ಯೂಸ್ ನೀಡಿದ್ದರು. ‘ಮಾರ್ಟಿನ್’ (Martin) ಸಿನಿಮಾ ಇದೇ ಅಕ್ಟೋಬರ್ 11ಕ್ಕೆ ರಿಲೀಸ್ ಆಗಲಿದೆ. ‘ಕೆಡಿ’ (KD) ಸಿನಿಮಾ ಡಿಸೆಂಬರ್‌ನಲ್ಲಿ ಬಿಡುಗಡೆ ಆಗಲಿದೆ.

    ಇನ್ನೂ ‘ಪೊಗರು’ (Pogaru Film) ಚಿತ್ರ 3 ವರ್ಷಗಳ ಹಿಂದೆ ರಿಲೀಸ್ ಆಗಿತ್ತು. ಇದಾದ ಬಳಿಕ ಈಗ ‘ಮಾರ್ಟಿನ್’ ಮತ್ತು ‘ಕೆಡಿ’ ಚಿತ್ರದ ಮೂಲಕ ನಟ ಬರುತ್ತಿದ್ದಾರೆ. ಹಾಗಾಗಿ 2 ಚಿತ್ರಗಳ ಮೇಲೆ ಫ್ಯಾನ್ಸ್‌ಗೆ ಭಾರೀ ನಿರೀಕ್ಷೆಯಿದೆ.